Pre Wedding Shoot: ಯುನಿಫಾರ್ಮ್‌ನಲ್ಲೇ ಪೊಲೀಸ್‌ ಅಧಿಕಾರಿಗಳ ಪ್ರಿ ವೆಡ್ಡಿಂಗ್‌ ಶೂಟ್‌; ಸಿನಿಮಾ ಸ್ಟೈಲ್‌ ವಿಡಿಯೊ ಇಲ್ಲಿದೆ - Vistara News

ದೇಶ

Pre Wedding Shoot: ಯುನಿಫಾರ್ಮ್‌ನಲ್ಲೇ ಪೊಲೀಸ್‌ ಅಧಿಕಾರಿಗಳ ಪ್ರಿ ವೆಡ್ಡಿಂಗ್‌ ಶೂಟ್‌; ಸಿನಿಮಾ ಸ್ಟೈಲ್‌ ವಿಡಿಯೊ ಇಲ್ಲಿದೆ

Pre Wedding Shoot: ಪೊಲೀಸ್‌ ಅಧಿಕಾರಿಗಳಿಬ್ಬರ ಪ್ರಿವೆಡ್ಡಿಂಗ್‌ ಶೂಟ್‌ ಸದ್ಯ ಭಾರಿ ಸದ್ದು ಮಾಡುತ್ತಿದೆ. ಸಮವಸ್ತ್ರ ತೊಟ್ಟು ಹೈದರಾಬಾದ್‌ ಮೂಲದ ಈ ಜೋಡಿ ಸಿನಿಮಾ ಹಾಡಿನ ಶೈಲಿಯಲ್ಲಿ ಚಿತ್ರೀಕರಣ ನಡೆಸಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೈದರಾಬಾದ್‌: ಕಾಲ ಬದಲಾದಂತೆ ನಮ್ಮ ಜೀವನ ಶೈಲಿಯೂ ಬದಲಾಗಿದೆ. ಇದೀಗ ಪ್ರಿ ವೆಡ್ಡಿಂಗ್‌ ಶೂಟ್‌(pre wedding shoot) ಎನ್ನುವುದು ಜೀವನದ ಭಾಗವೇ ಆಗಿದೆ. ಪ್ರತಿ ಮದುವೆಯ ಮುನ್ನ ಇದು ಅತ್ಯಗತ್ಯ ಎನ್ನುವಷ್ಟರ ಮಟ್ಟಿಗೆ ಇದು ಆವರಿಸಿಕೊಂಡಿದೆ. ಇದೀಗ ಹೈದರಾಬಾದ್‌ ಮೂಲದ ಪೊಲೀಸ್‌ (police) ಜೋಡಿಯೊಂದು ತಮ್ಮ ಪ್ರಿ ವೆಡ್ಡಿಂಗ್‌ ಶೂಟ್‌ ಅನ್ನು ವಿಭಿನ್ನವಾಗಿ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ (social media) ಜನಪ್ರಿಯವಾಗಿದೆ.

ಸದ್ಯ ಈ ಪೊಲೀಸ್‌ ಜೋಡಿಯ ಈ ಪ್ರಿ ವೆಡ್ಡಿಂಗ್‌ ಶೂಟ್‌ ವೈರಲ್‌ ಆಗಿದ್ದು, ನೆಟ್ಟಿಗರು ಈ ಕುರಿತು ಚರ್ಚೆ ನಡೆಸುತ್ತಿದ್ದಾರೆ. 2 ನಿಮಿಷದ ಈ ವಿಡಿಯೊವನ್ನು ಸಿನಿಮಾದ ಹಾಡಿನ ರೀತಿಯಲ್ಲೇ ಚಿತ್ರೀಕರಿಸಿದ್ದು ವಿಶೇಷ. ಅದರಲ್ಲೂ ವಿಡಿಯೊದ ಆರಂಭದಲ್ಲಿ ಇಬ್ಬರೂ ಪೊಲೀಸ್‌ ಸಮವಸ್ತ್ರದಲ್ಲಿ ಕಾಣಿಸಿಕೊಂಡಿದ್ದು ವಿವಾದಕ್ಕೆ ಕಾರಣವಾಗಿದೆ.

ವಿಡಿಯೊದಲ್ಲೇನಿದೆ?

ಮೊದಲು ಲೇಡಿ ಪೊಲೀಸ್‌ ಯುನಿಫಾರ್ಮ್‌ನಲ್ಲಿ ಪೊಲೀಸ್‌ ಸ್ಟೇಷನ್‌ನಿಂದ ಹೊರ ಬರುತ್ತಾರೆ. ವ್ಯಕ್ತಿಯೊಬ್ಬನ ಜೊತೆ ಅವರು ಸಂಭಾಷಣೆಯಲ್ಲಿ ನಿರತರಾಗಿರುವಾಗ ಆಗಮಿಸುವ ಇನ್ನೊಬ್ಬ ಪೊಲೀಸ್‌ ಅಧಿಕಾರಿ (ಆಕೆ ಮದುವೆಯಾಗಲಿರುವ ವ್ಯಕ್ತಿ) ಆಕೆಯನ್ನು ನೋಡಿ ಕನಸಿಗೆ ಜಾರುತ್ತಾರೆ. ಬಳಿಕ ಸಿನಿಮಾಗಳಲ್ಲಿ ಕಾಣುವಂತೆ ಅವರು ಚಾರ್ ಮಿನಾರ್‌, ಲಾಡ್‌ ಬಜಾರ್‌ ಮತ್ತಿತರೆಡೆಗಳಲ್ಲಿ ಹೆಜ್ಜೆ ಹಾಕುತ್ತಾರೆ. ಹಿನ್ನೆಲೆಯಲ್ಲಿ ಸಂಗೀತ ಕೇಳಿ ಬರುತ್ತದೆ.

ನೆಟ್ಟಿಗರು ಏನಂತಾರೆ?

ಸದ್ಯ ಈ ವಿಡಿಯೊಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಈ ಜೋಡಿಯ ನಡೆಯನ್ನು ಟೀಕಿಸಿದರೆ ಇನು ಕೆಲವರು ಬೆಂಬಲ ಸೂಚಿಸಿದ್ದಾರೆ. ವೈಯಕ್ತಿಕ ಕಾರಣಕ್ಕೆ ಅವರು ಸಾರ್ವಜನಿಕ ಹಣ, ಸಾರ್ವಜನಿಕ ಸೊತ್ತು, ಪೊಲೀಸ್‌ ಸಮವಸ್ತ್ರ ಬಳಸಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಬ್ಬರು ಕಮೆಂಟ್‌ ಮಾಡಿ, ʼʼಈ ಜೋಡಿ ತಮ್ಮ ವೈಯಕ್ತಿಕ ಕಾರಣಕ್ಕೆ ಸಾರ್ವಜನಿಕ ವಸ್ತುಗಳನ್ನು ಉಪಯೋಗಿಸಿದ್ದು ಸರಿಯಲ್ಲʼʼ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು, ʼʼಇದು ಉತ್ತಮ ನಡೆಯಲ್ಲ. ಸರ್ಕಾರಿ ನೌಕರರ ಇಂತಹ ನಡೆಯನ್ನು ಖಂಡಿಸಬೇಕುʼʼ ಎಂದು ಬರೆದಿದ್ದಾರೆ.

ಈ ಜೋಡಿಗೆ ಬೆಂಬಲ ವ್ಯಕ್ತಪಡಿಸಿದವರೂ ಇದ್ದಾರೆ. ʼʼನನಗೆ ಇದರಲ್ಲಿ ತಪ್ಪೇನು ಕಾಣಿಸುತ್ತಿಲ್ಲ. ಅವರ ಸೃಜನಶೀಲತೆಯನ್ನು ನಾವು ಗುರುತಿಸಬೇಕು. ತಮ್ಮ ದೈನಂದಿನ ಕೆಲಸದ ಪ್ರಕ್ರಿಯನ್ನು ತಿಳಿಸಿದ್ದಾರೆ. ಇದನ್ನೇ ಚಲನಚಿತ್ರಗಳಲ್ಲಿ ತೋರಿಸುತ್ತಾರೆʼʼ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹುತಾತ್ಮ ತಂದೆಗೆ ಸೇನೆ ಬಟ್ಟೆ ಧರಿಸಿ ಸೆಲ್ಯೂಟ್‌ ಹೊಡೆದ 6 ವರ್ಷದ ಮಗ; ಕರುಳು ಕಿವುಚುವ ವಿಡಿಯೊ ವೈರಲ್‌

ಹಿರಿಯ ಅಧಿಕಾರಿ ಹೇಳಿದ್ದೇನು?

ಈ ವಿಡಿಯೊ ವೀಕ್ಷಿಸಿದ ಹಿರಿಯ ಐಪಿಎಸ್‌ ಅಧಿಕಾರಿ ಸಿ.ವಿ.ಆನಂದ್‌ ಈ ಬಗ್ಗೆ ಎಕ್ಸ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ʼʼಈ ವಿಡಿಯೊಗೆ ಲಭಿಸಿರುವ ಮಿಶ್ರ ಪ್ರತಿಕ್ರಿಯೆಯನ್ನು ಗಮನಿಸಿದ್ದೇನೆ. ನಿಜವಾಗಿಯೂ ಅವರು ತುಂಬಾ ಎಕ್ಸೈಟ್‌ ಆಗಿದ್ದರು. ಪೊಲೀಸ್‌ ಎನ್ನುವುದು ಬಹಳ ಕಠಿಣವಾದ ಕೆಲಸ. ಅದರಲ್ಲೂ ಮಹಿಳೆಯರಿಗೆ ಇದು ಬಹು ದೊಡ್ಡ ಸವಾಲು. ಇಬ್ಬರು ಪೊಲೀಸ್‌ ಅಧಿಕಾರಿಗಳು ತಮ್ಮ ಸಮವಸ್ತ್ರ ಉಪಯೋಗಿಸಿರುವುದರಲ್ಲಿ ಯಾವುದೇ ತಪ್ಪಿಲ್ಲ. ಅವರು ಮೊದಲೇ ತಿಳಿಸಿದ್ದರೆ ನಾವೇ ಖುದ್ದಾಗಿ ಎಲ್ಲ ವ್ಯವಸ್ಥೆ ಮಾಡುತ್ತಿದ್ದೆವುʼʼ ಎಂದು ಬರೆದುಕೊಂಡಿದ್ದಾರೆ. ಇನ್ನು ಮುಂದೆ ಯಾರೂ ಅನುಮತಿ ಪಡೆಯದೇ ಹೀಗೆ ಮಾಡಬೇಡಿ ಎಂದೂ ಮನವಿ ಮಾಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Passport Seva Portal: ಐದು ದಿನಗಳ ಕಾಲ ಪಾಸ್ ಪೋರ್ಟಲ್ ಸೇವಾ ಕಾರ್ಯ ಸ್ಥಗಿತ

ಪಾಸ್‌ಪೋರ್ಟ್ ಸೇವಾ ಪೋರ್ಟಲ್ (Passport Seva Portal) ತಾಂತ್ರಿಕ ನಿರ್ವಹಣೆ ಕಾರಣಕ್ಕಾಗಿ ಸ್ಥಗಿತಗೊಳ್ಳಲಿದ್ದು, ಈಗಾಗಲೇ ನಿಗದಿಯಾಗಿರುವ ಅಪಾಯಿಂಟ್‌ಮೆಂಟ್‌ಗಳು ಮರುನಿಗದಿ ಪಡಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2ರ ವರೆಗೆ ಯಾವುದೇ ಹೊಸ ಅಪಾಯಿಂಟ್‌ಮೆಂಟ್‌ಗಳನ್ನು ನಿಗದಿಪಡಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.

VISTARANEWS.COM


on

By

Passport Seva Portal
Koo

ಪಾಸ್ ಪೋರ್ಟ್ ಪೋರ್ಟಲ್ ನ (Passport Seva Portal) ನಿರ್ವಹಣೆ ಕಾರ್ಯದ ಹಿನ್ನೆಲೆಯಲ್ಲಿ ಇನ್ನು ಐದು ದಿನಗಳ ಕಾಲ ಪಾಸ್ ಪೋರ್ಟಲ್ ಸೇವೆ ಸ್ಥಗಿತಗೊಳ್ಳಲಿದೆ. ಆಗಸ್ಟ್ 29ರ ಗುರುವಾರ 8 ಗಂಟೆಯಿಂದ ಸೆಪ್ಟೆಂಬರ್ 2ರ ಸೋಮವಾರ ಬೆಳಗ್ಗೆ 6 ಗಂಟೆಯವರೆಗೂ ಪೋರ್ಟಲ್ ಸೇವೆ ಸ್ಥಗಿತಗೊಳ್ಳುವುದಾಗಿ ಪ್ರಕಟಣೆ ತಿಳಿಸಿದೆ.

ಪಾಸ್‌ಪೋರ್ಟ್ ಸೇವಾ ಪೋರ್ಟಲ್ ತಾಂತ್ರಿಕ ನಿರ್ವಹಣೆ ಕಾರಣಕ್ಕಾಗಿ ಸ್ಥಗಿತಗೊಳ್ಳಲಿದ್ದು, ಈಗಾಗಲೇ ನಿಗದಿಯಾಗಿರುವ ಅಪಾಯಿಂಟ್‌ಮೆಂಟ್‌ಗಳು ಮರುನಿಗದಿ ಪಡಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2ರ ವರೆಗೆ ಯಾವುದೇ ಹೊಸ ಅಪಾಯಿಂಟ್‌ಮೆಂಟ್‌ಗಳನ್ನು ನಿಗದಿಪಡಿಸಲಾಗುವುದಿಲ್ಲ ಎಂದು ತಿಳಿಸಲಾಗಿದೆ.

ಪಾಸ್‌ಪೋರ್ಟ್ ಸೇವಾ ಪೋರ್ಟಲ್ ಅನ್ನು ಹೊಸ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಲು ಅಥವಾ ಪಾಸ್‌ಪೋರ್ಟ್ ನವೀಕರಿಸಲು ದೇಶಾದ್ಯಂತ ಕೇಂದ್ರಗಳಲ್ಲಿ ನೇಮಕಾತಿಗಳನ್ನು ಕಾಯ್ದಿರಿಸಲು ಬಳಸಲಾಗುತ್ತದೆ.

ನೇಮಕಾತಿಯ ದಿನದಂದು ಅರ್ಜಿದಾರರು ಪಾಸ್‌ಪೋರ್ಟ್ ಕೇಂದ್ರಗಳನ್ನು ತಲುಪಬೇಕು ಮತ್ತು ಪರಿಶೀಲನೆಗಾಗಿ ತಮ್ಮ ದಾಖಲೆಗಳನ್ನು ಒದಗಿಸಬೇಕು. ಇದರ ಅನಂತರ ಪೊಲೀಸ್ ಪರಿಶೀಲನೆ ನಡೆಯುತ್ತದೆ. ಬಳಿಕ ಪಾಸ್ ಪೋರ್ಟ್ ಅರ್ಜಿದಾರರ ವಿಳಾಸವನ್ನು ತಲುಪುತ್ತದೆ. ಅರ್ಜಿದಾರರು ನಿಯಮಿತ ಮೋಡ್ ಅನ್ನು ಆರಿಸಿಕೊಳ್ಳಬಹುದು. ಬಳಿಕ ಪಾಸ್‌ಪೋರ್ಟ್ ಅರ್ಜಿದಾರರನ್ನು 30- 45 ಕೆಲಸದ ದಿನಗಳಲ್ಲಿ ತಲುಪುತ್ತದೆ.


ಪೋರ್ಟಲ್ ಸೇವೆ ಸ್ಥಗಿತಗೊಂಡಿರುವುದರಿಂದ ಸೆಪ್ಟೆಂಬರ್ 2ರ ಬಳಿಕ ಪಾಸ್‌ಪೋರ್ಟ್ ಸೇವಾ ಪೋರ್ಟಲ್ ಹಿಂದಿನಂತೆ ಕಾರ್ಯ ನಿರ್ವಹಿಸಲಿದ್ದು, ಅರ್ಜಿದಾರರು ಅಲ್ಲಿಯವರೆಗೂ ಕಾಯಬೇಕಾಗುತ್ತದೆ.

ಇದನ್ನೂ ಓದಿ: Reliance Jio: ರಿಲಯನ್ಸ್ ಜಿಯೋನಿಂದ ಹೊಸ ಆಫರ್‌; 100 ಜಿಬಿ ಕ್ಲೌಡ್ ಸಂಗ್ರಹ ಉಚಿತ

ಪ್ರತಿಯೊಬ್ಬ ನಾಗರಿಕನ ಮೇಲೆ ಪರಿಣಾಮ ಬೀರಲಿದೆ ಈ ಬದಲಾವಣೆ

ಸೆಪ್ಟೆಂಬರ್ 1ರಿಂದ ಎಲ್‌ಪಿಜಿ (LPG) ಮತ್ತು ಆಧಾರ್ ಕಾರ್ಡ್‌ಗೆ (Aaadhar card) ಸಂಬಂಧಿಸಿ ಆರು ದೊಡ್ಡ ಬದಲಾವಣೆಗಳು (Rule Change) ಆಗಲಿವೆ. ಇದು ಪ್ರತಿಯೊಬ್ಬರ ಜೇಬಿನ ಮೇಲೂ ಪರಿಣಾಮ ಬೀರಲಿದೆ. ಈ ಬದಲಾವಣೆಗಳು ಎಲ್ ಪಿ ಜಿ ಗ್ಯಾಸ್ ಸಿಲಿಂಡರ್‌ಗಳ (LPG cylinder) ಬೆಲೆ ಮತ್ತು ಕ್ರೆಡಿಟ್ ಕಾರ್ಡ್‌ಗಳ (Credit card) ನಿಯಮಗಳನ್ನು ಒಳಗೊಂಡಿವೆ. ಅಲ್ಲದೇ ತುಟ್ಟಿಭತ್ಯೆ ಕುರಿತು ಸರ್ಕಾರಿ ನೌಕರರಿಗೆ ವಿಶೇಷ ಪ್ರಕಟಣೆಗಳು ಸೇರಿವೆ.

ಎಲ್ ಪಿ ಜಿ ಸಿಲಿಂಡರ್ ಬೆಲೆ

ಪ್ರತಿ ತಿಂಗಳ ಮೊದಲ ದಿನಾಂಕದಂದು ಸರ್ಕಾರವು ಎಲ್‌ಪಿಜಿ ಬೆಲೆಯನ್ನು ಬದಲಾಯಿಸುತ್ತದೆ. ಅಂತೆಯೇ ಅಡುಗೆ ಅನಿಲ, ವಾಣಿಜ್ಯ ಅನಿಲ ಸಿಲಿಂಡರ್‌ಗಳ ಬೆಲೆಗಳಲ್ಲಿ ಬದಲಾವಣೆ ಸೆಪ್ಟೆಂಬರ್ ಮೊದಲ ದಿನವೇ ಕಾಣಬಹುದು.

ಎಟಿಎಫ್, ಸಿಎನ್‌‌ಜಿ, ಪಿಎನ್‌‌ಜಿ ದರಗಳು

ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳೊಂದಿಗೆ ತೈಲ ಮಾರುಕಟ್ಟೆ ಕಂಪೆನಿಗಳು ಏರ್ ಟರ್ಬೈನ್ ಇಂಧನ (ಎಟಿಎಫ್) ಮತ್ತು ಸಿಎನ್‌ಜಿ-ಪಿಎನ್‌ಜಿ ಬೆಲೆಗಳನ್ನು ಸಹ ಪರಿಷ್ಕರಿಸುತ್ತವೆ. ಈ ಕಾರಣದಿಂದಾಗಿ ಸೆಪ್ಟೆಂಬರ್ ಮೊದಲ ದಿನಾಂಕದಂದು ಅವುಗಳ ಬೆಲೆಯಲ್ಲಿ ಬದಲಾವಣೆಗಳನ್ನು ಕಾಣಬಹುದು.

ನಕಲಿ ಕರೆಗಳಿಗೆ ಕಡಿವಾಣ

ಸೆಪ್ಟೆಂಬರ್ 1ರಿಂದ ನಕಲಿ ಕರೆ ಮತ್ತು ಸಂದೇಶಗಳಿಗೆ ಕಡಿವಾಣ ಬೀಳಲಿದೆ. ನಕಲಿ ಕರೆಗಳು ಮತ್ತು ನಕಲಿ ಸಂದೇಶಗಳಿಗೆ ಕಡಿವಾಣ ಹಾಕುವಂತೆ ಟಿಆರ್‌‌ಎಐ ಟೆಲಿಕಾಂ ಕಂಪೆನಿಗಳಿಗೆ ಸೂಚನೆ ನೀಡಿದೆ. ಇದಕ್ಕಾಗಿ ಟಿಆರ್‌‌ಎಐ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಹೊರಡಿಸಿದೆ.

ಕ್ರೆಡಿಟ್ ಕಾರ್ಡ್ ನಿಯಮಗಳು

ಸೆಪ್ಟೆಂಬರ್ 1ರಿಂದ ಎಚ್‌ಡಿಎಫ್‌ಸಿ ಬ್ಯಾಂಕ್ ಯುಟಿಲಿಟಿ ವಹಿವಾಟುಗಳ ರಿವಾರ್ಡ್ ಪಾಯಿಂಟ್‌ಗಳ ಮಿತಿಯನ್ನು ನಿಗದಿಪಡಿಸಲಿದೆ. ಇದರ ಅಡಿಯಲ್ಲಿ ಗ್ರಾಹಕರು ಈ ವಹಿವಾಟುಗಳಲ್ಲಿ ತಿಂಗಳಿಗೆ 2,000 ಪಾಯಿಂಟ್‌ಗಳವರೆಗೆ ಮಾತ್ರ ಪಡೆಯಬಹುದು.

ಐಡಿಎಫ್ ಸಿ ಫಸ್ಟ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಲ್ಲಿ ಪಾವತಿಸಬೇಕಾದ ಕನಿಷ್ಠ ಮೊತ್ತ ಮತ್ತು ಪಾವತಿ ದಿನಾಂಕವನ್ನು 18 ರಿಂದ 15 ದಿನಗಳವರೆಗೆ ಕಡಿಮೆ ಮಾಡಲಾಗುತ್ತದೆ.

ಇದರ ಹೊರತಾಗಿಸೆಪ್ಟೆಂಬರ್ 1ರಿಂದ ಯುಪಿಐ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಪಾವತಿಗಳಿಗಾಗಿ ರುಪೇ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವ ಗ್ರಾಹಕರು ಇತರ ಪಾವತಿ ಸೇವಾ ಪೂರೈಕೆದಾರರ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವಂತೆಯೇ ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯುತ್ತಾರೆ.

ತುಟ್ಟಿಭತ್ಯೆ

ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಮಹತ್ವದ ಘೋಷಣೆಯಾಗುವ ಸಾಧ್ಯತೆ ಇದೆ. ಸರ್ಕಾರವು ನೌಕರರಿಗೆ ತುಟ್ಟಿಭತ್ಯೆಯನ್ನು ಶೇಕಡಾ 3ರಷ್ಟು ಹೆಚ್ಚಿಸುವ ನಿರೀಕ್ಷೆಯಿದೆ.

ಆಧಾರ್ ಕಾರ್ಡ್ ಉಚಿತ ನವೀಕರಣ

ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಲು ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 14 ಎಂದು ನಿಗದಿಪಡಿಸಲಾಗಿದೆ. ಸೆಪ್ಟೆಂಬರ್ 14ರ ಅನಂತರ ಆಧಾರ್ ಅನ್ನು ನವೀಕರಿಸಲು ಶುಲ್ಕವನ್ನು ಪಾವತಿಸಬೇಕಾಗುತ್ತದೆ.

Continue Reading

ರಾಜಕೀಯ

Kangana Ranaut: ದೂರದೃಷ್ಟಿಯೇ ಇಲ್ಲದ ರಾಹುಲ್ ಕುರ್ಚಿಯನ್ನು ಬೆನ್ನಟ್ಟುತ್ತಿದ್ದಾರೆ: ಕಂಗನಾ

ರಾಹುಲ್ ಗಾಂಧಿ ಎಂದರೆ ಅವ್ಯವಸ್ಥೆ. ಅವರಿಗೆ ತಮ್ಮ ಭಾಷಣಗಳಲ್ಲಿ, ನಡವಳಿಕೆಯಲ್ಲಿ ಗೊಂದಲಮಯರಾಗಿದ್ದಾರೆ. ಲೋಕಸಭೆಯಲ್ಲಿ ಭಾಷಣ ಮಾಡುವಾಗ ಹಿಂದೂ ದೇವರಾದ ಶಿವನ ಚಿತ್ರಗಳನ್ನು ತೋರಿಸಿದ್ದಕ್ಕಾಗಿ ಸಂಸದ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಕಂಗನಾ ರಣಾವತ್ (Kangana Ranaut), ಅವರನ್ನು ಡ್ರಗ್ಸ್ ಪರೀಕ್ಷೆಗೆ ಒಳಪಡಿಸಬೇಕು ಎಂದು ಹೇಳಿದ್ದಾರೆ.

VISTARANEWS.COM


on

By

Kangana Ranaut
Koo

ಕಾಂಗ್ರೆಸ್ ನಾಯಕ (Congress leader) ರಾಹುಲ್ ಗಾಂಧಿ (Rahul Gandhi) ಕುರ್ಚಿಯನ್ನು ಬೆನ್ನಟ್ಟುತ್ತಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ಸಂಸದೆ (BJP MP), ನಟಿ ಕಂಗನಾ ರಣಾವತ್ (Kangana Ranaut), ರಾಹುಲ್ ಗಾಂಧಿಗೆ ಯಾವುದೇ ದೂರದೃಷ್ಟಿ ಇಲ್ಲ ಮತ್ತು ನಿರಂತರವಾಗಿ ಮಾರ್ಗವನ್ನು ಬದಲಾಯಿಸುತ್ತಾರೆ. ಕಾಂಗ್ರೆಸ್ ಸಂಸದರು ಒಂದು ಕೊಳಕು ಎಂದು ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಕಂಗನಾ, ರಾಹುಲ್ ಗಾಂಧಿ ಎಂದರೆ ಅವ್ಯವಸ್ಥೆ. ಅವರಿಗೆ ತಮ್ಮ ಭಾಷಣಗಳಲ್ಲಿ, ನಡವಳಿಕೆಯಲ್ಲಿ ಗೊಂದಲಮಯರಾಗಿದ್ದಾರೆ ಎಂದು ಹೇಳಿದ್ದಾರೆ.

ಲೋಕಸಭೆಯಲ್ಲಿ ಭಾಷಣ ಮಾಡುವಾಗ ಹಿಂದೂ ದೇವರಾದ ಶಿವನ ಚಿತ್ರಗಳನ್ನು ತೋರಿಸಿದ್ದಕ್ಕಾಗಿ ಸಂಸದ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಕಂಗನಾ, ಅವರನ್ನು ಡ್ರಗ್ಸ್ ಪರೀಕ್ಷೆಗೆ ಒಳಪಡಿಸಬೇಕು ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ ಯಾವುದೇ “ಸಂಘಟಿತ ಕಲ್ಪನೆ” ಕಾಣಲಿಲ್ಲ ಮತ್ತು ಅವರು ನಿರಂತರವಾಗಿ ಮಾರ್ಗಗಳನ್ನು ಬದಲಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.

ಅವರು ನಾಯಕರಾಗಿ ಯಾರು ಎಂಬ ನಿರ್ಣಾಯಕ ಕಲ್ಪನೆಯನ್ನು ಹೊಂದಿಲ್ಲ ಎಂದು ತೋರುತ್ತದೆ. ಕೇವಲ ಕುರ್ಚಿಯನ್ನು ಬೆನ್ನಟ್ಟುತ್ತಿದ್ದಾರೆ ಮತ್ತು ಪ್ರತಿ ಬಾರಿ ಅವರು ತಮ್ಮ ಮಾರ್ಗವನ್ನು ಬದಲಾಯಿಸುತ್ತಿದ್ದಾರೆ ಎಂದು ಹೇಳಿದರು.

ರೈತರ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಕಂಗನಾ, ಕೇಂದ್ರ ಸರ್ಕಾರವು ಬಲವಾದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಪ್ರತಿಭಟನೆಗಳು ಭಾರತದಲ್ಲಿ ಬಾಂಗ್ಲಾದೇಶದಂತಹ ನಾಗರಿಕ ಅಶಾಂತಿಗೆ ಕಾರಣವಾಗಬಹುದು ಎಂದು ತಿಳಿಸಿದ್ದಾರೆ.

ಇತ್ತೀಚಿಗೆ ಸಂಸದೆ ಕಂಗನಾ ರಣಾವತ್‌ ರೈತರ ಪ್ರತಿಭಟನೆ ವಿರುದ್ಧ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು. ಕೇಂದ್ರದಲ್ಲಿದ್ದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಬಲವಾದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ರೈತರ ಪ್ರತಿಭಟನೆ ಭಾರತದಲ್ಲಿ ಬಾಂಗ್ಲಾದೇಶದಂತಹ ಪರಿಸ್ಥಿತಿಗೆ ಕಾರಣವಾಗುತ್ತಿತ್ತು ಎಂದು ಹೇಳಿಕೆ ನೀಡಿ ಮತ್ತೊಮ್ಮೆ ರೈತರ ಕೋಪಕ್ಕೆ ಕಾರಣವಾಗಿದ್ದರು.

ಎಕ್ಸ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ ಕಂಗನಾ ರಣಾವತ್‌‌ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯ ಸಮಯದಲ್ಲಿ, “ಶವಗಳನ್ನು ನೇತುಹಾಕುತ್ತಿರುವುದು ಕಂಡುಬಂದಿದೆ ಮತ್ತು ಅತ್ಯಾಚಾರಗಳು ನಡೆಯುತ್ತಿದ್ದವು,” ಎಂದು ಆರೋಪಿಸಿದ್ದರು. ಕಾನೂನುಗಳನ್ನು ಹಿಂತೆಗೆದುಕೊಂಡ ನಂತರವೂ ಪ್ರತಿಭಟನೆಗಳು ಮುಂದುವರಿಯುತ್ತಿರುವುದಕ್ಕೆ ಪಟ್ಟಭದ್ರ ಹಿತಾಸಕ್ತಿಗಳು ಮತ್ತು “ವಿದೇಶಿ ಶಕ್ತಿಗಳೇ ” ಕಾರಣ ಎಂದು ದೂಷಿಸಿದ್ದರು.

ಇದನ್ನೂ ಓದಿ: Crimes Against Women: ಮಹಿಳೆಯರ ವಿರುದ್ಧದ ಅಪರಾಧ ಆರೋಪ: ಪ.ಬಂಗಾಳದ ಶಾಸಕ, ಸಂಸದರೇ ಹೆಚ್ಚು!

ಕಂಗನಾ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಮೋದಿ ಸರ್ಕಾರದ ಪ್ರಚಾರ ಯಂತ್ರವು “ನಿರಂತರವಾಗಿ ರೈತರನ್ನು ಅವಮಾನಿಸುತ್ತಿದೆ” ಎಂದು ಆರೋಪಿಸಿದರು.


ಈ ಕುರಿತು ಎಕ್ಸ್ ನಲಿ ಪೋಸ್ಟ್ ಮಾಡಿರುವ ಅವರು, 378 ದಿನಗಳ ಮ್ಯಾರಥಾನ್ ಹೋರಾಟದಲ್ಲಿ 700 ಸಹೋದ್ಯೋಗಿಗಳನ್ನು ಬಲಿಕೊಟ್ಟ ರೈತರನ್ನು ಬಿಜೆಪಿ ಸಂಸದರು ಅತ್ಯಾಚಾರಿಗಳು ಮತ್ತು ವಿದೇಶಿ ಶಕ್ತಿಗಳ ಪ್ರತಿನಿಧಿಗಳು ಎಂದು ಕರೆಯುವುದು ಬಿಜೆಪಿಯ ರೈತ ವಿರೋಧಿ ನೀತಿ ಮತ್ತು ಉದ್ದೇಶಗಳಿಗೆ ಮತ್ತೊಂದು ಪುರಾವೆಯಾಗಿದೆ ಎಂದು ತಿಳಿಸಿದ್ದು, ರೈತ ಸಂಸ್ಥೆಗಳು ಮತ್ತು ರಾಜಕಾರಣಿಗಳ ಕುರಿತು ನಟಿಯ ಹೇಳಿಕೆಗಳನ್ನು ಖಂಡಿಸಿದ್ದಾರೆ.

Continue Reading

ಕ್ರೈಂ

Murder Attempt: ಬುಲೆಟ್ ಹಾರಿಸಿ, ಬಾಂಬ್ ಎಸೆದು ಟಿಎಂಸಿ ಕಾರ್ಯಕರ್ತರಿಂದ ಕೊಲೆ ಯತ್ನ: ಬಿಜೆಪಿ ನಾಯಕ ಆರೋಪ

ಬಿಜೆಪಿ ನಾಯಕರ ಮೇಲೆ ಪಶ್ಚಿಮ ಬಂಗಾಳದಲ್ಲಿ ದಾಳಿ (Murder Attempt) ನಡೆಸಲಾಗುತ್ತಿದ್ದು, ಇಂದು ಬೆಳಗ್ಗೆ ತಮ್ಮ ಕಾರಿನ ಮೇಲೆ ದಾಳಿ ನಡೆಸಿದ್ದಾರೆ ಎಂದು ಬಿಜೆಪಿ ನಾಯಕಅರ್ಜುನ್ ಸಿಂಗ್ ಆರೋಪಿಸಿದ್ದಾರೆ. ‘ನಬಣ್ಣ ಅಭಿಜನ್’ ಪ್ರತಿಭಟನಾ ರಾಲಿಯಲ್ಲಿ ಪೊಲೀಸರ ಬಲಪ್ರಯೋಗವನ್ನು ವಿರೋಧಿಸಿ ಬಿಜೆಪಿ 12 ಗಂಟೆಗಳ ಬಂಗಾಳ ಬಂದ್‌ಗೆ ಕರೆ ನೀಡಿದ ಬಳಿಕ ಈ ದಾಳಿ ನಡೆದಿದೆ.

VISTARANEWS.COM


on

By

Murder Attempt
Koo

ಪಶ್ಚಿಮ ಬಂಗಾಳದ (West Bengal) ಉತ್ತರ 24 ಪರಗಣ ಜಿಲ್ಲೆಯ ಭಟ್ಪರಾದಲ್ಲಿ ತೃಣಮೂಲ ಕಾಂಗ್ರೆಸ್ (TMC) ಕಾರ್ಯಕರ್ತರು ತಮ್ಮ ಕಾರಿನ ಮೇಲೆ ದಾಳಿ (Murder Attempt) ನಡೆಸಿರುವುದಾಗಿ ಬಿಜೆಪಿ ನಾಯಕ (BJP Leader) ಅರ್ಜುನ್ ಸಿಂಗ್ ಆರೋಪಿಸಿದ್ದಾರೆ. ಬುಧವಾರ ಬೆಳಗ್ಗೆ ಮನೆಯಿಂದ ಹೊರಟ ಕೇವಲ ಮೂರು ನಿಮಿಷಗಳ ಬಳಿಕ ಬಾಂಬ್ ದಾಳಿಯಾಗಿರುವುದಾಗಿ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮನೆಯಿಂದ ಬೆಳಗ್ಗೆ 8.15ಕ್ಕೆ ಹೊರಟಿದ್ದು, ಕೇವಲ ಮೂರು ನಿಮಿಷಗಳ ದೂರದಲ್ಲಿ ಜೆಟ್ಟಿಂಗ್ ಯಂತ್ರದಿಂದ ರಸ್ತೆಯನ್ನು ನಿರ್ಬಂಧಿಸಲಾಗಿತ್ತು. ಆಗ ಸುಮಾರು 50 -60 ಜನರು ನನ್ನ ವಾಹನವನ್ನು ಗುರಿಯಾಗಿಸಿಕೊಂಡು ಬಾಂಬ್ ಎಸೆದರು. ಅನಂತರ 6- 7 ಸುತ್ತು ಗುಂಡು ಹಾರಿಸಿದರು ಎಂದು ತಿಳಿಸಿದ್ದಾರೆ.

ಕಾರಿನ ಮೇಲೆ ಏಳು ಬುಲೆಟ್‌ಗಳು ಹಾರಿದ್ದು, ಬಂಗಾಳದ ಹಿರಿಯ ಪೊಲೀಸ್ ಅಧಿಕಾರಿಯ ಸಮ್ಮುಖದಲ್ಲಿ ದಾಳಿ ನಡೆದಿದೆ ಎಂದು ಅವರು ಹೇಳಿದ್ದಾರೆ.

‘ನಬಣ್ಣ ಅಭಿಜನ್’ ಪ್ರತಿಭಟನಾ ರಾಲಿಯಲ್ಲಿ ಪೊಲೀಸರ ಬಲಪ್ರಯೋಗವನ್ನು ವಿರೋಧಿಸಿ ಬಿಜೆಪಿ 12 ಗಂಟೆಗಳ ಬಂಗಾಳ ಬಂದ್‌ಗೆ ಕರೆ ನೀಡಿದ ಬಳಿಕ ಈ ದಾಳಿ ನಡೆದಿದೆ.

Murder Attempt
Murder Attempt


ಬಿಜೆಪಿ ನಾಯಕನ ಹತ್ಯೆಯ ಪ್ರಯತ್ನ

ನಮ್ಮ ಪಕ್ಷದ ನಾಯಕ ಪ್ರಿಯಾಂಗು ಪಾಂಡೆ ಅವರ ಹತ್ಯೆ ಪ್ರಯತ್ನ ನಡೆದಿದೆ. ಅವರ ಕಾರಿನ ಮೇಲೆ ಫೈರಿಂಗ್ ಮಾಡಲಾಗಿದೆ. ಚಾಲಕನ ಮೇಲೂ ಗುಂಡು ಹಾರಿಸಲಾಗಿದೆ. ಪ್ರಿಯಾಂಗು ಪಾಂಡೆಯನ್ನು ಕೊಲ್ಲಲು ಯೋಜನೆ ರೂಪಿಸಲಾಗಿದೆ. ಟಿಎಂಸಿಗೆ ಯಾವುದೇ ಸಮಸ್ಯೆ ಇಲ್ಲ. ಆದ್ದರಿಂದ ಅವರು ಈ ರೀತಿಯ ಕೆಲಸಗಳನ್ನು ಮಾಡುತ್ತಿದ್ದಾರೆ. ಇಬ್ಬರು ಗಾಯಗೊಂಡಿದ್ದಾರೆ, ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಅರ್ಜುನ್ ಸಿಂಗ್ ತಿಳಿಸಿದ್ದಾರೆ.

ಈ ದಾಳಿಯ ಹಿಂದೆ ತೃಣಮೂಲ ನಾಯಕರಾದ ತರುಣ್ ಸೌ ಮತ್ತು ಶಾಸಕ ಸೋಮನಾಥ್ ಶ್ಯಾಮ್ ಅವರ ಕೈವಾಡವಿದೆ ಎಂದು ಅರ್ಜುನ್ ಸಿಂಗ್ ಆರೋಪಿಸಿದ್ದು, ದುಷ್ಕರ್ಮಿಗಳನ್ನು ಕಾಕಿನಾರಾದಿಂದ ಕರೆತರಲಾಗಿದೆ ಎಂದು ದೂರಿದ್ದಾರೆ.

ಆಗಸ್ಟ್ 9ರಂದು ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯದಲ್ಲಿ ತೃಣಮೂಲ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ.

ರಾಜ್ಯದಲ್ಲಿ ಹಿಂಸಾಚಾರವನ್ನು ತಡೆಯಲು ಪಶ್ಚಿಮ ಬಂಗಾಳ ಪೊಲೀಸರು ಭಾರೀ ಭದ್ರತೆಯನ್ನು ಕೈಗೊಂಡಿರುವುದಾಗಿ ಉತ್ತರ ದಿನಾಜ್‌ಪುರದ ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಸ್‌ಪಿ) ಡೆಂಡೂಪ್ ಶೆರ್ಪಾ ತಿಳಿಸಿದ್ದಾರೆ.

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಸಿಬ್ಬಂದಿಯನ್ನು ಎಲ್ಲೆಡೆ ನಿಯೋಜಿಸಲಾಗಿದೆ. ಕೋಲ್ಕತ್ತಾದ ಸರ್ಕಾರಿ ಬಸ್‌ ಚಾಲಕರು ಮತ್ತು ಕಂಡಕ್ಟರ್‌ಗಳು ಹೆಲ್ಮೆಟ್ ಧರಿಸುವಂತೆ ರಾಜ್ಯ ಆಡಳಿತ ಸೂಚನೆ ನೀಡಿದೆ ಎಂದು ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಉತ್ತರ ಬಂಗಾಳ ರಾಜ್ಯ ಸಾರಿಗೆ ಸಂಸ್ಥೆಯ (ಎನ್‌ಬಿಎಸ್‌ಟಿಸಿ) ಬಸ್‌ಗಳ ಅನೇಕ ಚಾಲಕರು ರಾಜ್ಯಾದ್ಯಂತ ಹೆಲ್ಮೆಟ್ ಧರಿಸಿದ್ದರು.

ಇದನ್ನೂ ಓದಿ: Crimes Against Women: ಮಹಿಳೆಯರ ವಿರುದ್ಧದ ಅಪರಾಧ ಆರೋಪ: ಪ.ಬಂಗಾಳದ ಶಾಸಕ, ಸಂಸದರೇ ಹೆಚ್ಚು!

ಕೋಲ್ಕತ್ತಾದ ಬೀದಿಗಳಲ್ಲಿ ಮಂಗಳವಾರ ಘರ್ಷಣೆಗಳು ನಡೆದಿದ್ದು, ಭದ್ರತಾ ಸಿಬ್ಬಂದಿ ಅಶ್ರುವಾಯು ಶೆಲ್‌, ನೀರಿನ ಫಿರಂಗಿಗಳನ್ನು ಬಳಸಿದರು ಹೌರಾ ಸೇತುವೆಯ ಮೇಲೆ ಪ್ರತಿಭಟನಾಕಾರರನ್ನು ಚದುರಿಸಲು ಲಾಠಿ ಚಾರ್ಜ್ ಮಾಡಲಾಯಿತು.

ಈ ಅವ್ಯವಸ್ಥೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾರಣ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಆರೋಪಿಸಿದೆ.

Continue Reading

ವೈರಲ್ ನ್ಯೂಸ್

Viral Video: ಕಳ್ಳತನ ಆರೋಪ: ವ್ಯಕ್ತಿಯ ಖಾಸಗಿ ಅಂಗಕ್ಕೆ ಮೆಣಸಿನ ಪುಡಿ ತುರುಕಿದ ದುಷ್ಕರ್ಮಿಗಳು

ಬಿಹಾರದ ಅರಾರಿಯಾದ ಇಸ್ಲಾಂ ನಗರದಲ್ಲಿ ಕಳ್ಳತನ ಮಾಡುತ್ತಿದ್ದಾನೆ ಎಂದು ಆರೋಪಿಸಿ ವ್ಯಕ್ತಿಗಳ ಗುಂಪೊಂದು ವ್ಯಕ್ತಿಯೊಬ್ಬನ ಖಾಸಗಿ ಅಂಗಕ್ಕೆ ಮೆಣಸಿನ ಪುಡಿಯನ್ನು ತುಂಬಿದ್ದಾರೆ. ಇದರ ವಿಡಿಯೋ ಕೆಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

VISTARANEWS.COM


on

By

Viral Video
Koo

ಕಳ್ಳತನ ಮಾಡಿದ್ದಾನೆ (theft Accused) ಎಂದು ಆರೋಪಿಸಿ ವ್ಯಕ್ತಿಯೊಬ್ಬನ ಖಾಸಗಿ ಅಂಗಕ್ಕೆ ಕೆಲವು ವ್ಯಕ್ತಿಗಳು ಸೇರಿ ಮೆಣಸಿನ ಪುಡಿ ತುಂಬಿರುವ ಘಟನೆ ಬಿಹಾರದ ಅರಾರಿಯಾದಲ್ಲಿ (Bihar’s Araria) ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದ್ದು, ಘಟನೆಗೆ ಸಂಬಂಧಿಸಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಬಿಹಾರದ ಅರಾರಿಯಾದ ಇಸ್ಲಾಂ ನಗರದಲ್ಲಿ ಕಳ್ಳತನ ಮಾಡುತ್ತಿದ್ದಾನೆ ಎಂದು ಆರೋಪಿಸಿ ವ್ಯಕ್ತಿಗಳ ಗುಂಪೊಂದು ವ್ಯಕ್ತಿಯೊಬ್ಬನ ಖಾಸಗಿ ಅಂಗಕ್ಕೆ ಮೆಣಸಿನ ಪುಡಿಯನ್ನು ತುಂಬಿದ್ದಾರೆ. ಇದರ ವಿಡಿಯೋ ಕೆಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ವ್ಯಕ್ತಿಯ ಕೈಗಳನ್ನು ಹಿಂದಕ್ಕೆ ಕಟ್ಟಿ, ಅವನ ಪ್ಯಾಂಟ್ ಬಿಚ್ಚಿ ಕೆಲವು ಪುರುಷರು ಆತನನ್ನು ಮೊಣಕಾಲುಗಳ ಮೇಲೆ ಬಾಗಿಸುವಂತೆ ಒತ್ತಾಯಿಸುತ್ತಿರುವುದು ಸೆರೆಯಾಗಿದೆ.

ಆರೋಪಿಗಳಲ್ಲಿ ಒಬ್ಬ ಕಳ್ಳನ ಬೆನ್ನಿನ ಮೇಲೆ ಮೆಣಸಿನ ಪುಡಿ ಸುರಿದು ಪೆನ್ಸಿಲ್ ಬಳಸಿ ಗುದನಾಳದಲ್ಲಿ ತುಂಬಿಸಿರುವುದಾಗಿ ತಿಳಿದು ಬಂದಿದೆ. ಅನೇಕರು ಸೇರಿ ಆತನನ್ನು ಸಂಪೂರ್ಣ ತಪಾಸಣೆ ನಡೆಸುವುದು ಕೂಡ ವಿಡಿಯೋದಲ್ಲಿ ಸೆರೆಯಾಗಿದೆ.

ಮಾಜಿಕ ಮಾಧ್ಯಮದಲ್ಲಿ ಎಲ್ಲರ ಗಮನ ಸೆಳೆದ ಈ ವಿಡಿಯೋದಲ್ಲಿ ಗುರುತಿಸಲಾದ ಮೊಹಮ್ಮದ್ ಸಿಫತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ವೇಳೆ ಅಲ್ಲಿದ್ದ ಅನೇಕರು ಇದರ ಚಿತ್ರೀಕರಣ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಕ್ರಮ ಕೈಗೊಂಡಿದ್ದಾರೆ.


ಘಟನೆ ಕುರಿತು ಪ್ರತಿಕ್ರಿಯಿಸಿರುವ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಘಟನೆಯು ಬಿಹಾರದಲ್ಲಿ “ತಾಲಿಬಾನ್ ರಾಜ್” ಅನ್ನು ತೋರಿಸಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Viral Video: ಮರಾಠಿ ಚಿತ್ರ ನಿರ್ದೇಶಕಿ ಮನೆಗೆ ನುಗ್ಗಿದ ಕಳ್ಳ; ಆರನೇ ಮಹಡಿಯಲ್ಲಿದ್ದ ಮನೆಗೆ ಕಳ್ಳ ಬಂದು, ಹೋಗಿದ್ದು ಹೇಗೆ ವಿಡಿಯೋ ನೋಡಿ

ಈ ಕುರಿತು ಆರ್ ಜೆಡಿ ನಾಯಕ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ, ನಾನು ಮತ್ತು ನನ್ನ ಪಕ್ಷವು ದಲಿತರು, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಹಕ್ಕುಗಳು ಮತ್ತು ಹಂಚಿಕೆಯ ಬಗ್ಗೆ ಮಾತನಾಡುತ್ತೇವೆ. ಆದ್ದರಿಂದ ಜಾತಿವಾದಿಗಳು ಯಾವಾಗಲೂ ನಮ್ಮ ಆಡಳಿತವನ್ನು ಜಂಗಲ್ ರಾಜ್ ಎಂದು ನೋಡುತ್ತಾರೆ ಎಂದು ಹೇಳಿದ್ದಾರೆ.

ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಎಕ್ಸ್‌ ನಲ್ಲಿ ತೇಜಸ್ವಿ ಯಾದವ್ ಅವರ ಹೇಳಿಕೆಗೆ ವ್ಯಂಗ್ಯವಾಡಿದ್ದು, ತಾಲಿಬಾನ್ ಆಡಳಿತದ ಬಗ್ಗೆ ಮಾತನಾಡುವವರು ಮುಸ್ಲಿಮರ ಮತ ಕೇಳುವ ಮೊದಲು ತಾಲಿಬಾನಿ ಎಂದು ಕರೆಯುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.

Continue Reading
Advertisement
Yettinahole project lift work to be inaugurated on September 6 Gowri festival
ಬೆಂಗಳೂರು17 mins ago

Yettinahole Project: ಗೌರಿ ಹಬ್ಬದಂದು ಎತ್ತಿನಹೊಳೆ ಯೋಜನೆ ಏತ ಕಾಮಗಾರಿ ಉದ್ಘಾಟನೆ; ಪಕ್ಷಬೇಧ ಮರೆತು ಎಲ್ಲರಿಗೂ ಆಹ್ವಾನ- ಡಿಸಿಎಂ

Rain News
ಮಳೆ32 mins ago

Rain News : ವಿಜಯವಾಡದಲ್ಲಿ ಭಾರಿ ಮಳೆಗೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಣೆ; ಕಲಬುರಗಿಯಲ್ಲೂ ಅಬ್ಬರ

Bike rider in deadly accident Elderly woman dies of electric shock
ಬೆಂಗಳೂರು1 hour ago

Road Accident : ಡೆಡ್ಲಿ ಆ್ಯಕ್ಸಿಡೆಂಟ್‌ಗೆ ಬೈಕ್‌ ಸವಾರ ಸ್ಪಾಟ್‌ ಡೆತ್‌; ಕರೆಂಟ್‌ ಶಾಕ್‌ನಿಂದ ಒದ್ದಾಡಿ ಪ್ರಾಣಬಿಟ್ಟ ವೃದ್ಧೆ

Girl commits suicide after being fed up with rumours of love
ಮಂಡ್ಯ2 hours ago

Mandya News : ನಾಲ್ವರು ಬಾಲಕರ ಪ್ರೀತಿ-ಪ್ರೇಮದ ಅಪಪ್ರಚಾರ; ಗಾಳಿ ಸುದ್ದಿಗೆ ಬಾಲಕಿ ಆತ್ಮಹತ್ಯೆ

Do you know when Darshan got royalty in Central Jail
ಸಿನಿಮಾ2 hours ago

Actor Darshan : ಸೆಂಟ್ರಲ್‌ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ಸಿಕ್ಕಿದ್ದು ಯಾವಾಗಿನಿಂದ ಗೊತ್ತಾ? ಬಿಸ್ಕತ್‌ ಹಾಕಿಲ್ವಾ ಸುಮ್ಮಿನಿರು ಅಂದ್ರಾ ಕರಿಯಾ!

Actor Darshan shifted back to Bengaluru from Ballari
ಬಳ್ಳಾರಿ2 hours ago

Actor Darshan : ಬಳ್ಳಾರಿಯಿಂದ ನಟ ದರ್ಶನ್‌ ಮತ್ತೆ ಬೆಂಗಳೂರಿಗೆ ಶಿಫ್ಟ್‌! ಪತ್ನಿ ಬಂದು ಹೋದ್ಮೆಲೆ ಫುಲ್ ಆಕ್ಟೀವ್

police Firing
ಕಲಬುರಗಿ4 hours ago

Police Firing: ಪೊಲೀಸರ ಮೇಲೆ ಚಾಕುಯಿಂದ ದಾಳಿ ಮಾಡಿದ ದರೋಡೆಕೋರ; ಆರೋಪಿ ಕಾಲಿಗೆ ಫೈರಿಂಗ್‌ ಮಾಡಿದ ಖಾಕಿ

karnataka weather Forecast
ಮಳೆ9 hours ago

Karnataka Weather : ರಾಜ್ಯಾದ್ಯಂತ ಮುಂದಿನ 24 ಗಂಟೆಯಲ್ಲಿ ವ್ಯಾಪಕ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ10 hours ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

Rishab Shetty And NTR
ಸಿನಿಮಾ17 hours ago

Rishab Shetty And NTR: ತಾಯಿ ಜತೆಗೆ ಉಡುಪಿ ಶ್ರೀಕೃಷ್ಣನಿಗೆ ನಮಿಸಿದ ತೆಲುಗು ನಟ ಜ್ಯೂ.ಎನ್‌ಟಿಆರ್‌; ಜತೆಯಾದ ಡಿವೈನ್‌ ಸ್ಟಾರ್‌ ರಿಷಬ್‌

Kannada Serials
ಕಿರುತೆರೆ11 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ11 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ9 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ12 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್1 day ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್3 days ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 week ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ3 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ3 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ3 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ4 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌