ಪ್ರೀತಿಸಿದ ಹುಡುಗಿ ಮೋಸ ಮಾಡಿ ಹೋಗುತ್ತಿದ್ದಂತೆ ಯುವಕನ ಕೈಗೆ ಬಂತು 25 ಸಾವಿರ ರೂ.; ನಿಮಗೆ ಗೊತ್ತಾ ಈ ಹಾರ್ಟ್​ಬ್ರೇಕ್​ ಇನ್ಶೂರೆನ್ಸ್​ ಫಂಡ್? - Vistara News

ವೈರಲ್ ನ್ಯೂಸ್

ಪ್ರೀತಿಸಿದ ಹುಡುಗಿ ಮೋಸ ಮಾಡಿ ಹೋಗುತ್ತಿದ್ದಂತೆ ಯುವಕನ ಕೈಗೆ ಬಂತು 25 ಸಾವಿರ ರೂ.; ನಿಮಗೆ ಗೊತ್ತಾ ಈ ಹಾರ್ಟ್​ಬ್ರೇಕ್​ ಇನ್ಶೂರೆನ್ಸ್​ ಫಂಡ್?

ಪ್ರತೀಕ್​ ಅವರ ಈ ಟ್ವೀಟ್ ಭರ್ಜರಿ ವೈರಲ್ ಆಗುತ್ತಿದೆ. ‘ಹಾರ್ಟ್​ಬ್ರೇಕ್​ ಇನ್​ಶೂರೆನ್ಸ್​ ಫಂಡ್​’ ಎನ್ನುವ ಹೆಸರೇ ನೆಟ್ಟಿಗರನ್ನು ಭರ್ಜರಿ ಆಕರ್ಷಿಸುತ್ತಿದೆ. ಹಲವರು ಕಮೆಂಟ್​ ಮಾಡುತ್ತಿದ್ದಾರೆ.

VISTARANEWS.COM


on

heartbreak insurance fund
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಾನು ನನ್ನ ಹುಡುಗಿಗಾಗಿ ಎಷ್ಟೆಲ್ಲ ಖರ್ಚು ಮಾಡಿದೆ, ಏನೆಲ್ಲ ಮಾಡಿದೆ. ಆದರೆ ಕೊನೆಗೂ ಅವಳು ನನ್ನನ್ನು ಬಿಟ್ಟು ಹೋದಳು, ದುಡ್ಡೂ ಹೋಯ್ತು, ಅವಳೂ ಹೋದ್ಳು ಎಂದು ಪರಿತಪಿಸುವ ಅನೇಕ ಯುವಕರನ್ನು ನಾವು ನೋಡಿದ್ದೇವೆ. ಆದರೆ ಅಪರೂಪವೆಂಬಂತೆ ಇಲ್ಲೊಬ್ಬ ಯುವಕ, ‘ನನಗೆ ನನ್ನ ಗರ್ಲ್​ಫ್ರೆಂಡ್ ಮೋಸ ಮಾಡಿ ಹೋದಳು, ಆದರೆ ಆಕೆ ಹೋಗುತ್ತಿದ್ದಂತೆ 25 ಸಾವಿರ ರೂಪಾಯಿ ಹಣ ಬಂತು’. ಇದು ಸಾಧ್ಯವಾಗಿದ್ದು ಹಾರ್ಟ್​ಬ್ರೇಕ್​ ಇನ್ಶೂರೆನ್ಸ್​ ಫಂಡ್ (Heartbreak Insurance Fund) ನಿಂದಾಗಿ ಎಂದು ಹೇಳಿಕೊಂಡಿದ್ದಾನೆ ಮತ್ತು ಅದು ಹೇಗೆ ಎಂದು ಟ್ವಿಟರ್​​ನಲ್ಲಿ ಬರೆದುಕೊಂಡಿದ್ದಾನೆ.

ಆತನ ಹೆಸರು ಪ್ರತೀಕ್ ಆರ್ಯನ್​. ತಾನು 25 ಸಾವಿರ ಪಡೆದ ಬಗ್ಗೆ ಮಾತನಾಡಿದ ಆತ ‘ನಾನು ಮತ್ತು ನನ್ನ ಪ್ರೇಯಸಿ ಸೇರಿ ಜಂಟಿ ಖಾತೆ ತೆರೆದಿದ್ದೆವು. ನಾವು ಅದರಲ್ಲಿ ತಿಂಗಳಿಗೆ 500 ರೂಪಾಯಿ (ತಲಾ) ಠೇವಣಿ ಇಡುತ್ತ ಬಂದೆವು. ಜಂಟಿ ಖಾತೆ ತೆರೆಯುವಾಗ ನಮ್ಮ ಮಧ್ಯೆ ಒಂದು ಒಪ್ಪಂದವೂ ಆಯಿತು. ಇಬ್ಬರಲ್ಲಿ ಯಾರೇ ಮೋಸ ಮಾಡಿದರೂ, ಹೀಗೆ ಡಿಪೋಸಿಟ್​ ಹಣ ಇನ್ನೊಬ್ಬರಿಗೆ ಸಂದಾಯವಾಗುತ್ತದೆ. ಸಂಬಂಧವನ್ನು ಮೊದಲು ಮುರಿದುಕೊಳ್ಳುವವರಿಗೆ ಒಂದು ರೂಪಾಯಿಯೂ ಸಿಗುವುದಿಲ್ಲ ಎಂಬುದು ಒಪ್ಪಂದವಾಗಿತ್ತು. ಅದರಂತೆ ನನ್ನ ಪ್ರೇಯಸಿ ಮೊದಲು ಮೋಸ ಮಾಡಿ ಹೋದಳು. ಹೀಗಾಗಿ ಖಾತೆಯಲ್ಲಿದ್ದ 25 ಸಾವಿರ ರೂಪಾಯಿ ಹಣ ನನಗೇ ಸೇರಿತು’ ಎಂದು ಬರೆದುಕೊಂಡಿದ್ದಾರೆ. ಇನ್ನೊಂದು ಆಸಕ್ತಿದಾಯಕ ವಿಷಯವೆಂದರೆ ಪ್ರತೀಕ್​ ಮತ್ತು ಆತನ ಪ್ರೇಯಸಿ ಜಂಟಿ ಖಾತೆ ತೆರೆಯುವಾಗ ಅದಕ್ಕೆ ‘ಹಾರ್ಟ್​ಬ್ರೇಕ್​ ಇನ್ಶೂರೆನ್ಸ್​ ಫಂಡ್​’ ಎಂದೇ ಹೆಸರಿಟ್ಟುಬಿಟ್ಟಿದ್ದರು. ನಿಜಕ್ಕೂ ಒಂದಾಗಿದ್ದ ಇಬ್ಬರ ಹೃದಯಗಳ ಮಧ್ಯೆ ಬ್ರೇಕ್​ ಆಗಿ, ಈಗ ಹುಡುಗನಿಗೆ ಹಣ ಸಿಕ್ಕಿದೆ.

ಇದನ್ನೂ ಓದಿ: Lovers suicide | ಪ್ರೀತಿಗೆ ಮನೆಯಲ್ಲಿ ವಿರೋಧ: ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು

ಪ್ರತೀಕ್​ ಅವರ ಈ ಟ್ವೀಟ್ ಭರ್ಜರಿ ವೈರಲ್ ಆಗುತ್ತಿದೆ. ‘ಹಾರ್ಟ್​ಬ್ರೇಕ್​ ಇನ್​ಶೂರೆನ್ಸ್​ ಫಂಡ್​’ ಎನ್ನುವ ಹೆಸರೇ ನೆಟ್ಟಿಗರನ್ನು ಭರ್ಜರಿ ಆಕರ್ಷಿಸುತ್ತಿದೆ. ಹಲವರು ಕಮೆಂಟ್​ ಮಾಡುತ್ತಿದ್ದಾರೆ. ‘ನಾನೂ ಕೂಡ ಹೂಡಿಕೆಗೆ ಆಯ್ಕೆಗಳನ್ನು ಹುಡುಕುತ್ತಿದ್ದೇನೆ. ನೀವು ಹೇಳಿದ್ದನ್ನು ಕೇಳಿದ ಮೇಲೆ ಇದು ಅತ್ಯಂತ ಲಾಭದಾಯಕ ಹೂಡಿಕೆ ಎನ್ನಿಸುತ್ತಿದೆ. ಯಾರಾದರೂ ನನ್ನೊಂದಿಗೆ ಜಂಟಿ ಖಾತೆಗೆ ಬರುವವರು ಇದ್ದೀರಾ?’ ಎಂದು ಒಬ್ಬರು ತಮಾಷೆಯುಕ್ತವಾಗಿ ಪ್ರಶ್ನಿಸಿದ್ದಾರೆ. ‘ಈ ಹಾರ್ಟ್​ಬ್ರೇಕ್​ ಇನ್ಶೂರೆನ್ಸ್​ ಎಂಬುದು ಸ್ವಲ್ಪ ರಿಸ್ಕ್​ ಅನ್ನಿಸುತ್ತದೆ, ಈ ಹೂಡಿಕೆ ಮಾಡುವವರು, ಮತ್ತೊಬ್ಬರನ್ನು ಬಿಟ್ಟು ಹೋಗುವ ಮುನ್ನ ಯೋಚಿಸಿ’ ಎಂದಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Girlfriend: ‘ಬಾಡಿಗೆ ಗರ್ಲ್‌ಫ್ರೆಂಡ್‌’ ಆಗಲು ಸಿದ್ಧಳೆಂದ ಯುವತಿ; ಈಕೆಯ ‘ದರಪಟ್ಟಿ’ ನೋಡಿ,‌ ನೀವೂ ಟ್ರೈ ಮಾಡಿ

Girlfriend: ಭಾರತದಲ್ಲಿ ಈಗ ಗರ್ಲ್‌ಫ್ರೆಂಡ್‌ ಕೂಡ ಬಾಡಿಗೆಗೆ ಸಿಗಲಿದ್ದಾಳೆ. ಈ ಕುರಿತು ಯುವತಿಯೊಬ್ಬಳು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾಳೆ. ಯಾರು ಬೇಕಾದರೂ ಕರೆದುಕೊಂಡು ಹೋಗಿ ಎಂದಿದ್ದಾಳೆ. ಆದರೆ, ಒಂದು ದಿನದ ಮಟ್ಟಿಗೆ ಡೇಟ್‌ಗೆ ಕರೆದುಕೊಂಡು ಹೋಗುವುದು ಸೇರಿ ಹಲವು ಚಟುವಟಿಕೆಗಳಿಗೆ ಯುವತಿಯು ರೇಟ್‌ ಫಿಕ್ಸ್‌ ಮಾಡಿದ್ದಾಳೆ. ಆ ದರ ಪಟ್ಟಿ ನೋಡಿದ ಜನ ಬೆಚ್ಚಿಬಿದ್ದಿದ್ದಾರೆ.

VISTARANEWS.COM


on

Girlfriend
Koo

ನವದೆಹಲಿ: ಈಗಿನದ್ದು ಬಾಡಿಗೆ ಜಮಾನ. ಮನೆ, ಕಾರು, ಬೈಕ್‌, ಬಟ್ಟೆ, ಆಭರಣ ಸೇರಿ ಸಾವಿರಾರು ವಸ್ತುಗಳು ಬಾಡಿಗೆಗೆ ಸಿಗುತ್ತವೆ. ಯಾರಾದರೂ ಸತ್ತಾಗ ಅಳಲು ಕೂಡ ‘ಬಾಡಿಗೆ ಜನ’ರಿದ್ದಾರೆ. ಅಷ್ಟರ ಮಟ್ಟಿಗೆ ನಮ್ಮ ‘ಬಾಡಿ’ಗೆ ಅನುಕೂಲವಾಗಲು ‘ಬಾಡಿಗೆಗೆ’ ಸಿಗುತ್ತವೆ. ಆದರೆ, ದೇಶದಲ್ಲಿ ಇದುವರೆಗೆ ಬಾಡಿಗೆಗೆ ಗರ್ಲ್‌ಫ್ರೆಂಡ್‌ ಸಿಗುತ್ತಿರಲಿಲ್ಲ. ಯಾರನ್ನೂ ಪಟಾಯಿಸಲು ಆಗದೆ, ಒಬ್ಬಂಟಿಯಾಗಿ ಇರಲೂ ಆಗದೆ ಯುವಕರು ಪರದಾಡುವಂತಾಗಿದೆ. ಆದರೆ, ಇನ್ನು ಮುಂದೆ ಬಾಡಿಗೆಗೆ ಗರ್ಲ್‌ಫ್ರೆಂಡ್‌ (Girlfriend) ಕೂಡ ಸಿಗಲಿದ್ದಾಳೆ. ಹೌದು, “ನನ್ನನ್ನು ಒಂದು ದಿನದ ಮಟ್ಟಿಗೆ ನಿಮ್ಮ ಗರ್ಲ್‌ಫ್ರೆಂಡ್‌ ಆಗಿ ಬಾಡಿಗೆಗೆ ಪಡೆಯಿರಿ” ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾಳೆ. ಆಕೆಯ ವಿಡಿಯೊ ಈಗ ಭಾರಿ ವೈರಲ್‌ (Viral Video) ಆಗಿದೆ.

ಯುವತಿಯೊಬ್ಬಳು ತನ್ನ ಹಾಗೂ ದರಪಟ್ಟಿಯ ವಿಡಿಯೊ ಹಂಚಿಕೊಂಡಿದ್ದಾಳೆ. “ನಾನು ಒಂದು ದಿನದ ಮಟ್ಟಿಗೆ ನಿಮ್ಮ ಗರ್ಲ್‌ಫ್ರೆಂಡ್‌ ಆಗಿ ಬಾಡಿಗೆಗೆ ಇರಬಲ್ಲೆ. ಯಾರು ಬೇಕಾದರೂ ನನ್ನನ್ನು ಗರ್ಲ್‌ಫ್ರೆಂಡ್‌ ಆಗಿ ಬಾಡಿಗೆಗೆ ಪಡೆಯಬಹುದು. ಆ ಮೂಲಕ ಸ್ಮರಣೀಯ ದಿನವನ್ನು, ಅತ್ಯುತ್ತಮ ನೆನಪುಗಳನ್ನು ಸೃಷ್ಟಿಸಿಕೊಳ್ಳಬಹುದು” ಎಂಬುದಾಗಿ ದಿವ್ಯಾ ಗಿರಿ ಎಂಬ ಇನ್‌ಸ್ಟಾಗ್ರಾಂ ಖಾತೆಯಿಂದ ಪೋಸ್ಟ್‌ ಮಾಡಲಾಗಿದೆ. ನೂರಾರು ಜನ ಪೋಸ್ಟ್‌ಗೆ ಪ್ರತಿಕ್ರಿಯೆ ಕೂಡ ನೀಡಿದ್ದಾರೆ.

ಯುವತಿಯ ‘ದರ’ಪಟ್ಟಿ ಹೀಗಿದೆ…

ಒಂದು ದಿನದ ಮಟ್ಟಿಗೆ ಡೇಟ್‌ಗೆ ಕರೆದುಕೊಂಡು ಹೋಗುವುದು ಸೇರಿ ಹಲವು ಚಟುವಟಿಕೆಗಳಿಗೆ ಯುವತಿಯು ರೇಟ್‌ ಫಿಕ್ಸ್‌ ಮಾಡಿದ್ದಾಳೆ. ಸುಮ್ಮನೆ ಹೋಗಿ ಕಾಫಿ ಕುಡಿದುಕೊಂಡು ಬರಲು 1,500 ರೂ., ಸಿನಿಮಾ ನೋಡಿ, ಊಟ ಮಾಡಿಕೊಂಡು ಬರುವುದಾದರೆ 2 ಸಾವಿರ ರೂ. ಕುಟುಂಬಸ್ಥರನ್ನು ಭೇಟಿ ಮಾಡಿಸಲು 3 ಸಾವಿರ ರೂ., ಬೈಕ್‌ನಲ್ಲಿ ಸುತ್ತಾಡುವುದಾದರೆ 4 ಸಾವಿರ ರೂ., ಡೇಟಿಂಗ್‌ ಬಗ್ಗೆ ಸಾರ್ವಜನಿಕವಾಗಿ ಪೋಸ್ಟ್‌ ಮಾಡುವುದಾದರೆ 6 ಸಾವಿರ ರೂ., ಎರಡು ದಿನ ವೀಕೆಂಡ್‌ನಲ್ಲಿ ಸುತ್ತಾಡಲು 10 ಸಾವಿರ ರೂ. ಸೇರಿ ಹಲವು ಚಟುವಟಿಕೆಗಳಿಗೆ ವಿವಿಧ ಮೊತ್ತ ನಿಗದಿಪಡಿಸಿದ್ದಾಳೆ.

ಪೋಸ್ಟ್‌ ನೋಡಿದ ಜನ ಏನೆಂದರು?

ಯುವತಿಯ ಪೋಸ್ಟ್‌ ನೋಡಿದ ಒಂದಷ್ಟು ಜನ ಕಂಗಾಲಾಗಿದ್ದರೆ, ಇನ್ನೊಂದಿಷ್ಟು ಜನ ತಮಾಷೆಯಾಗಿ ಕಮೆಂಟ್‌ ಮಾಡಿದ್ದಾರೆ. “ನನ್ನ ಕಾಲೇಜಿನ ಅಸೈನ್‌ಮೆಂಟ್‌ ಮುಗಿಸಿಕೊಡಲು ಎಷ್ಟು ಚಾರ್ಜ್‌ ಮಾಡುತ್ತೀರಿ” ಎಂದು ಕಿಡಿಗೇಡಿಯೊಬ್ಬ ಕಮೆಂಟ್‌ ಮಾಡಿದ್ದಾನೆ. “ನನ್ನ ಮನೆಯ ಕಸ ಗುಡಿಸಿ, ಟಾಯ್ಲೆಟ್‌ ಕ್ಲೀನ್‌ ಮಾಡಿ, ಬಟ್ಟೆ ತೊಳೆದುಕೊಡಲು ಎಷ್ಟು ಬೇಕು” ಎಂದು ಇನ್ನೊಬ್ಬ ಟಾಂಗ್‌ ಕೊಟ್ಟಿದ್ದಾನೆ. “ಯುವತಿಯು ಭಾರತದಲ್ಲಿ ಅಲ್ಲ, ಜಪಾನ್‌ನಲ್ಲಿದ್ದೇನೆ” ಎಂದು ಭಾವಿಸಿದ್ದಾಳೆ ಎಂಬುದಾಗಿ ಮಗದೊಬ್ಬ ತಮಾಷೆ ಮಾಡಿದ್ದಾನೆ. “ಇಂಥ ಕೆಲಸ ಮಾಡುವ ಬದಲು ದುಡಿದು ತಿನ್ನು” ಎಂದು ಮತ್ತೊಬ್ಬ ಅಸಮಾಧಾನ ವ್ಯಕ್ತಪಡಿಸಿದ್ದಾನೆ. ಹೀಗೆ, ನೂರಾರು ಜನ ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Viral Video: “ನೀವು ಅಲ್ಲಿಂದ ದಾಳಿ ಮಾಡಿ..ನಾವು ಇಲ್ಲಿಂದ ಅಟ್ಯಾಕ್‌ ಮಾಡ್ತೇವೆ..ಪಾಕ್‌ ಧ್ವಂಸ ಆಗೋದು ಪಕ್ಕಾ”-ಆಫ್ಗನ್‌ ವೃದ್ಧನ ಈ ವಿಡಿಯೋ ಫುಲ್‌ ವೈರಲ್‌

Continue Reading

ವಿಜ್ಞಾನ

Headless Chicken: ತಲೆ ಕತ್ತರಿಸಿದರೂ ಈ ಕೋಳಿ 18 ತಿಂಗಳು ಬದುಕಿತ್ತು! ಸಾಯುವ ಮೊದಲು ಮಾಲೀಕನನ್ನು ಶ್ರೀಮಂತಗೊಳಿಸಿತು!

ಪವಾಡಗಳ ಬಗ್ಗೆ ನಾವು ಸಾಕಷ್ಟು ಬಾರಿ ಕೇಳಿರುತ್ತೇವೆ. ಇಲ್ಲಿ ನಡೆದಿರುವ ಪವಾಡ ಮಾತ್ರ ನಂಬಲು ಅಸಾಧ್ಯವಾಗಿರುವುದು. ಇದನ್ನು ಕೇಳಿ ಎಲ್ಲರೂ ಇದು ಖಂಡಿತಾ ಸಾಧ್ಯವಿಲ್ಲ ಎಂದುಕೊಂಡರೆ ನಿಮ್ಮ ಊಹೆ ತಪ್ಪು. ಯಾಕೆಂದರೆ ಇದು ನಿಜವಾಗಿಯೂ ನಡೆದಿದೆ. ತಲೆಯನ್ನೇ ಕಳೆದುಕೊಂಡ ಕೋಳಿ (Headless Chicken) 18 ತಿಂಗಳ ಕಾಲ ಬದುಕಿದೆ. ಇದು ಈಗ ವಿಜ್ಞಾನಕ್ಕೂ ಸವಾಲಾಗಿ ಕಾಣುತ್ತಿದೆ.

VISTARANEWS.COM


on

By

Headless Chicken
Koo

ಪವಾಡಗಳು (Miracle) ಜೀವನದ (life) ಭಾಗವಾಗಿದೆ. ವಿಜ್ಞಾನದ (science) ಪ್ರಶ್ನೆಗೂ ನಿಲುಕದ ಕೆಲವೊಂದು ಸಂಗತಿಗಳು ಘಟಿಸುತ್ತವೆ. ಯಾರ ಬಳಿಯೂ ಉತ್ತರವಿರುವುದಿಲ್ಲ. ಈ ವಿಷಯಗಳನ್ನು ಅಲೌಕಿಕ (supernatural) ವಿದ್ಯಮಾನದ ಭಾಗವೆಂದೇ ಪರಿಗಣಿಸಲಾಗುತ್ತದೆ. ಇದರಲ್ಲಿ ಈ ಕೋಳಿಯೂ (Headless Chicken) ಒಂದು. ಇದು ಊಹೆಗೂ ನಿಲುಕದಂತಿದೆ. ನಂಬಲು ಕಷ್ಟ ಮತ್ತು ಆಶ್ಚರ್ಯಕರವಾಗಿದೆ.

ಇದೀಗ ಒಂದು ಪವಾಡ ಪ್ರಕರಣವೊಂದು ವರದಿಯಾಗಿದೆ. ಇದರಲ್ಲಿ ‘ಮೈಕ್’ ಎಂಬ ಕೋಳಿ (Miracle Mike) ತನ್ನ ಉಳಿದ 18 ತಿಂಗಳ ಸುದೀರ್ಘ ಜೀವನವನ್ನು ತಲೆಯಿಲ್ಲದೇ ಕಳೆದಿದೆ.

1945 ರ ಸೆಪ್ಟೆಂಬರ್‌ನಲ್ಲಿ ಯುನೈಟೆಡ್ ಸ್ಟೇಟ್ಸ್‌ನ (United States) ಕೊಲೊರಾಡೋದ (Colorado) ಫ್ರೂಟಾದಲ್ಲಿ ವಾಸಿಸುತ್ತಿದ್ದ ಓಲ್ಸೆನ್ ಕುಟುಂಬವು ಸಂಜೆಯ ಊಟಕ್ಕಾಗಿ ಚಿಕನ್ ತಯಾರಿಸಲು ಯೋಚನೆ ಮಾಡುತ್ತಿತ್ತು. ಅದಕ್ಕಾಗಿ ರೈತ ಲಾಯ್ಡ್ ಓಲ್ಸೆನ್ ಮನೆಗೆ ತಾಜಾ ಮಾಂಸವನ್ನು ತರಲು ಹೊಲಕ್ಕೆ ಹೋಗುತ್ತಾನೆ.

ಅಲ್ಲಿ ಆತ ‘ಮೈಕ್’ ಎಂದು ಗುರುತಿಸಲ್ಪಟ್ಟ ಐದೂವರೆ ತಿಂಗಳ ಗಂಡು ವಯಾಂಡೊಟ್ಟೆ ಕೋಳಿಯನ್ನು ಎತ್ತಿಕೊಂಡು ತರುತ್ತಾನೆ. ಅದನ್ನು ಎಷ್ಟೇ ಕೊಲ್ಲಲು ಪ್ರಯತ್ನಿಸಿದರೂ ಆತನಿಗೆ ಅದು ಸಾಧ್ಯವಾಗಲಿಲ್ಲ. ತಲೆಯನ್ನೇ ಕತ್ತರಿಸಿದರೂ ಅದು ಉಸಿರು ಚೆಲ್ಲಲಿಲ್ಲ. ಅದೊಂದು ಅಭೂತಪೂರ್ವ ಘಟನೆಯಾಗಿದ್ದು, ವಿಶ್ವವೇ ಬೆರಗಾಗುವಂತೆ ಮಾಡಿತು.


18 ತಿಂಗಳು ಹೇಗೆ ಬದುಕಿತು?

ಲಾಯ್ಡ್ ಕೋಳಿಯ ಶಿರಚ್ಛೇದ ಮಾಡಿದ. ಕತ್ತಿಯ ಏಟು ಅದರ ತಲೆಯ ಹೆಚ್ಚಿನ ಭಾಗಗಳನ್ನು ಕತ್ತರಿಸಿದರೂ ಅದು ಕುತ್ತಿಗೆ ಮತ್ತು ಗಂಟಲಿಗೆ ಸಂಬಂಧಿಸಿದ ಕಂಠನಾಳವನ್ನು ಸೀಳುವಲ್ಲಿ ವಿಫಲವಾಯಿತು. ಹೀಗಾಗಿ ಅದು ಬದುಕುಳಿಯಿತು. ಒಂದು ಕಿವಿ ಮತ್ತು ಮೆದುಳಿನ ಹೆಚ್ಚಿನ ಕಾಂಡವು ಹಾನಿಗೊಳಗಾದರೂ ಅದು ಸಾಯಲಿಲ್ಲ. ರಕ್ತ ವೇಗವಾಗಿ ಹೆಪ್ಪುಗಟ್ಟಿದ್ದರಿಂದ ಅತಿಯಾದ ರಕ್ತದ ನಷ್ಟವಾಗಲಿಲ್ಲ.

ಬಳಿಕ ಲಾಯ್ಡ್ ಮೈಕ್‌ ಗೆ ಹೊಸ ಜೀವನ ನೀಡಲು ಮುಂದಾದ. ಕೋಳಿಯನ್ನು ಮನೆಗೆ ತಂದು ಸಂಪೂರ್ಣ ಆರೈಕೆ ಮಾಡಲು ನಿರ್ಧರಿಸಿದರು.

ಲಾಯ್ಡ್ ಅದಕ್ಕೆ ಹಾಲು ಮತ್ತು ನೀರಿನ ಮಿಶ್ರಣವನ್ನು ಒಳಗೊಂಡಿರುವ ಆಹಾರವನ್ನು ತಯಾರಿಸಿದ. ಐಡ್ರಾಪರ್ ಮೂಲಕ ಅದಕ್ಕೆ ಆಹಾರವನ್ನು ನೀಡಿದ. ಕೆಲವು ಹುಳು ಮತ್ತು ಜೋಳವನ್ನು ನೀಡಿದನು.

ಮೈಕ್ ಗಳಿಸಿದ ಖ್ಯಾತಿ

ಈ ಘಟನೆಯು ಜಗತ್ತಿಗೇ ಸುದ್ದಿಯಾಗುವಷ್ಟು ವಿಸ್ಮಯಕಾರಿಯಾಗಿತ್ತು. ಮೈಕ್ ಭಾರೀ ಜನಮನಗೆದ್ದಿತು ಮತ್ತು ಸಂಶೋಧನೆಯ ವಿಷಯವಾಯಿತು.

ಹಲವಾರು ನಿಯತಕಾಲಿಕೆಗಳಿಗೆ ಇದನ್ನು ವರದಿ ಮಾಡಿತ್ತು. ಅನೇಕ ಪತ್ರಿಕೆಗಳಿಗೆ ಇದು ಮುಖಪುಟದ ವಿಷಯವಾಯಿತು. ಮೈಕ್ ಅನ್ನು 25 ಸೆಂಟ್ಸ್ ವೆಚ್ಚದಲ್ಲಿ ಸಾರ್ವಜನಿಕರಿಗೆ ಪ್ರದರ್ಶನಕ್ಕೆ ಇಡಲಾಯಿತು.

“ಮೈಕ್ ದಿ ಹೆಡ್‌ಲೆಸ್ ಚಿಕನ್ ಡೇ” ಅನ್ನು 1999 ರಿಂದ ಕೊಲೊರಾಡೋದ ಫ್ರೂಟಾದಲ್ಲಿ ಪ್ರತಿ ಮೇ ತಿಂಗಳ ಮೂರನೇ ವಾರಾಂತ್ಯದಲ್ಲಿ ಆಚರಿಸಲಾಗುತ್ತದೆ.

ಇದನ್ನೂ ಓದಿ: Dream Of Retired Couple: ನಿರಂತರ ಮೂರೂವರೆ ವರ್ಷಗಳ ನೌಕಾಯಾನಕ್ಕಾಗಿ ತಮ್ಮದೆಲ್ಲವನ್ನೂ ಮಾರಿದ ದಂಪತಿ!

ಮೈಕ್ ನಿಂದ ಕೋಳಿ ಮಾಲೀಕ ತಿಂಗಳಿಗೆ ಸುಮಾರು 45,000 ಡಾಲರ್ ಆದಾಯ ಗಳಿಸಿದ. ಈ ಅದ್ಭುತ ಕೋಳಿ ಮೌಲ್ಯ ಆಗ 10,000 ಡಾಲರ್ ಆಗಿತ್ತು.

ಸಾವು ಹೇಗಾಯಿತು?

1947ರ ಮಾರ್ಚ್ ನಲ್ಲಿ ಜೋಳದ ತುಂಡು ಮೈಕ್ ನ ಗಂಟಲಲ್ಲಿ ಸಿಲುಕಿದ ನಂತರ ಅದು ಸಾವನ್ನಪ್ಪಿತು. ಪ್ರವಾಸದಿಂದ ಹಿಂದಿರುಗುವಾಗ ಲಾಯ್ಡ್ ಶುಚಿಗೊಳಿಸುವ ಸಿರಿಂಜ್‌ಗಳನ್ನು ಬಿಟ್ಟು ಬಂದಿದ್ದರಿಂದ ಮೈಕ್ ನನ್ನು ಬದುಕಿಸಲು ವಿಫಲರಾದರು.

Continue Reading

ಕ್ರೀಡೆ

Dinesh Karthik: ಪ್ಯಾರಿಸ್​ನಲ್ಲಿ ನೀರಜ್​ಗೆ ತೀವ್ರ ಪೈಪೋಟಿ ನೀಡಲು ಮುಂದಾದರೇ ದಿನೇಶ್​ ಕಾರ್ತಿಕ್​?; ಜಾವೆಲಿನ್​ ಅಭ್ಯಾಸದ ವಿಡಿಯೊ ವೈರಲ್​

Dinesh Karthik: ಟೋಕಿಯೊ ಒಲಿಂಪಿಕ್ಸ್​​ ಚಿನ್ನದ ವಿಜೇತ ನೀರಜ್​ ಚೋಪ್ರಾ(Neeraj Chopra) ಜತೆ ದಿನೇಶ್​ ಕಾರ್ತಿಕ್(Dinesh Karthik)​ ಅವರು ಜಾವೆಲಿನ್​ ಅಭ್ಯಾಸ ನಡೆಸುತ್ತಿರುವ ವಿಡಿಯೊವೊಂದು ವೈರಲ್​(viral video) ಆಗಿದೆ.

VISTARANEWS.COM


on

Dinesh Karthik
Koo

ಮುಂಬಯಿ: ಇತ್ತೀಚೆಗೆ ಕ್ರಿಕೆಟ್​ಗೆ​ ವಿದಾಯ ಹೇಳಿದ ದಿನೇಶ್​ ಕಾರ್ತಿಕ್(Dinesh Karthik)​ ಅವರು ಇದೀಗ ಪ್ಯಾರಿಸ್​ ಒಲಿಂಪಿಕ್ಸ್(Paris Olympics 2024)​ ಕ್ರಿಡಾಕೂಟಕ್ಕೆ ಸಜ್ಜಾಗುತ್ತಿದ್ದಂತೆ ಕಂಡುಬಂದಿದೆ. ಟೋಕಿಯೊ ಒಲಿಂಪಿಕ್ಸ್​​ ಚಿನ್ನದ ವಿಜೇತ ನೀರಜ್​ ಚೋಪ್ರಾ(Neeraj Chopra) ಜತೆ ಜಾವೆಲಿನ್​ ಅಭ್ಯಾಸ ನಡೆಸುತ್ತಿರುವ ವಿಡಿಯೊವೊಂದು ವೈರಲ್​(viral video) ಆಗಿದೆ.

ಪ್ಯಾರಿಸ್​ ಒಲಿಂಪಿಕ್ಸ್​ಗೆ ಸಿದ್ಧತೆಯಲ್ಲಿರುವ ನೀರಜ್​ ಚೋಪ್ರಾ ಜತೆ ದಿನೇಶ್​​ ಕಾರ್ತಿಕ್​ ಕೂಡ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಬಹು ದೂರ ಜಾವೆಲಿನ್ ಎಸೆದು ಗಮನಸೆಳೆದಿದ್ದಾರೆ. ಇದನ್ನು ಕಂಡ ನೆಟ್ಟಿಗರು ಡಿಕೆ ಅವರು ಈ ಬಾರಿ ಪ್ಯಾರಿಸ್​ನಲ್ಲಿ ನೀರಜ್​ ಚೋಪ್ರಾಗೆ ತೀವ್ರ ಪೈಪೋಟಿ ನೀಡುವ ಸಾಧ್ಯತೆ ಇದೆ ಎಂದು ಕಮೆಂಟ್​ ಮಾಡಿದ್ದಾರೆ. ಅಸಲಿಗೆ ಉಭಯ ಕ್ರೀಡಾಪಟುಗಳು ಜಾಹಿರಾತಿನ ಭಾಗವಾಗಿ ಜತೆಯಾಗಿ ಕಾಣಸಿಕೊಂಡದ್ದು.

ಕಳೆವು ವಾರಗಳ ಹಿಂದೆ ನಡೆದಿದ್ದ ಫೆಡರೇಷನ್ ಕಪ್‌ನಲ್ಲಿ(Federation Cup) ಕಣಕ್ಕಿಳಿದ್ದ ನೀರಜ್ ಚೋಪ್ರಾ(82.27 ಮೀ.), ಕನ್ನಡಿಗ ಡಿಪಿ ಮನು ಅವರಿಂದ ತೀವ್ರ ಪೈಪೋಟಿ ಎದುರಿಸಿ ಚಿನ್ನದ ಪದಕ ಗೆದ್ದಿದ್ದರು. ಈ ಟೂರ್ನಿ ಬಳಿಕ ನೀರಜ್​ ಗಾಯಗೊಂಡಿದ್ದು ಸದ್ಯ ವಿಶ್ರಾಂತಿಯಲ್ಲಿದ್ದಾರೆ.

ನೀರಜ್​ ಚೋಪ್ರಾ ಕಳೆದ ವರ್ಷ ನಡೆದಿದ್ದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಅಲ್ಲದೆ ಡೈಮಂಡ್ ಲೀಗ್​ನಲ್ಲಿ ಬೆಳ್ಳಿ ಗೆದ್ದಿದ್ದರು. ಒಲಿಂಪಿಕ್ಸ್‌ನ ಟ್ರ್ಯಾಕ್‌ ಇವೆಂಟ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ.

ನೀರಜ್​ರ ಇದುವರೆಗಿನ ಶ್ರೇಷ್ಠ ನಿರ್ವಹಣೆ 89.94 ಮೀ. ದೂರ ಎಸೆದಿರುವುದು. ಈ ಎಸೆತವನ್ನು 2022ರ ಸ್ಟಾಕ್​ಹೋಮ್​ ಡೈಮಂಡ್​ ಲೀಗ್​ನಲ್ಲಿ ಎಸೆದಿದ್ದರು. ಅಭ್ಯಾಸದ ವೇಳೆ ಈಗಾಗಲೆ ನೀರಜ್​ ಹಲವು ಬಾರಿ 90 ಮೀ. ಗಡಿ ದಾಟಿದ್ದಾರೆ. ಆದರೆ, ಸ್ಪರ್ಧೆಗಳಲ್ಲಿ ಇದು ಸಾಧ್ಯವಾಗಿರಲಿಲ್ಲ. ಈ ಬಾರಿ ಸ್ಪರ್ಧೆಯಲ್ಲಿಯೂ ಇದನ್ನು ಸಾಧಿಸಲಿದ್ದೇನೆ ಎಂದು ನೀರಜ್​ ಹೇಳಿದ್ದಾರೆ.

ಇದನ್ನೂ ಓದಿ Viral Run Out Video: 11 ಆಟಗಾರರಿಂದ ರನೌಟ್​ ಪ್ರಯತ್ನ; ಕೊನೆಗೂ ನಾಟೌಟ್​ ಆದ ಬ್ಯಾಟರ್​

ದಿನೇಶ್​ ಕಾರ್ತಿಕ್​ ಅವರಿಗೆ ರಾಜಸ್ಥಾನ್​ ರಾಯಲ್ಸ್​ ವಿರುದ್ಧದ ಎಲಿಮಿನೇಟರ್​ ಪಂದ್ಯವೇ ವಿದಾಯ(dinesh karthik retirement) ಪಂದ್ಯ ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಪಂದ್ಯ ಮುಕ್ತಾಯದ ಬಳಿಕ ಸಹ ಆಟಗಾರರು ಭಾವುಕರಾಗಿ ಕಾರ್ತಿಕ್​ಗೆ ಮೈದಾನದಲ್ಲಿಯೇ ತಬ್ಬಿಕೊಂಡು ವಿದಾಯ ಹೇಳಿದಂತಿತ್ತು. ಅದರಲ್ಲೂ ವಿರಾಟ್ ಕೊಹ್ಲಿಯೊಂದಿಗೆ(virat kohli) ಭಾವುಕ ಆಲಿಂಗನವನ್ನು ಹಂಚಿಕೊಂಡಿದ್ದರು.

ಐಪಿಎಲ್​ನಲ್ಲಿ ಧೋನಿ ಬಳಿಕ ಅತೀ ಹೆಚ್ಚು ಪಂದ್ಯವಾಡಿದ ದಾಖಲೆ ಕೂಡ ದಿನೇಶ್ ಕಾರ್ತಿಕ್ ಹೆಸರಿನಲ್ಲಿದೆ. ಆರ್​ಸಿಬಿಗೆ​ ಟ್ರೋಫಿ ಗೆದ್ದು ವಿದಾಯ ಹೇಳುವ ನಿರೀಕ್ಷೆಯಲ್ಲಿದ್ದ ಡಿಕೆ ಕನಸಿಗೆ ರಾಜಸ್ಥಾನ್​ ರಾಯಲ್ಸ್​ ಅಡ್ಡಗಾಲಿಕ್ಕಿತು. ದಿನೇಶ್ ಕಾರ್ತಿಕ್ 257 ಪಂದ್ಯಗಳಲ್ಲಿ 22 ಅರ್ಧಶತಕಗಳನ್ನು ಬಾರಿಸಿ 4,842 ರನ್‌ ಬಾರಿಸಿದ್ದಾರೆ. ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ 15 ಪಂದ್ಯಗಳಲ್ಲಿ 326 ರನ್​ ಬಾರಿಸಿದ್ದಾರೆ.

Continue Reading

ವೈರಲ್ ನ್ಯೂಸ್

Babar Azam: ಫೋಟೋ ತೆಗೆಯಲು ಬಂದ ಅಭಿಮಾನಿಗಳಿಗೆ ಬೈದು ಓಡಿಸಿದ ಬಾಬರ್ ಅಜಂ; ವಿಡಿಯೊ ವೈರಲ್​

Babar Azam: ಪಾಕಿಸ್ತಾನ ತಂಡ ಇಂಗ್ಲೆಂಡ್​ ವಿರುದ್ಧ 4 ಪಂದ್ಯಗಳ ಟಿ20 ಸರಣಿಯನ್ನಾಡಲು ಲಂಡನ್​ನಲ್ಲಿದೆ. ಈಗಾಗಲೇ ಸರಣಿಯಲ್ಲಿ 2 ಪಂದ್ಯಗಳು ಮಳೆಯಿಂದ ರದ್ದುಗೊಂಡರೆ, ಒಂದು ಪಂದ್ಯವನ್ನು ಇಂಗ್ಲೆಂಡ್​ ಗೆದ್ದಿದೆ. ಅಂತಿಮ ಪಂದ್ಯ ನಾಳೆ(ಮೇ 30) ನಡೆಯಲಿದೆ.

VISTARANEWS.COM


on

Babar Azam
Koo

ಲಂಡನ್​: ಪಾಕಿಸ್ತಾನ ತಂಡದ ನಾಯಕ ಬಾಬರ್​ ಅಜಂ(Babar Azam) ಅವರು ಇಂಗ್ಲೆಂಡ್​ ವಿರುದ್ಧದ ನಾಲ್ಕನೇ ಹಾಗೂ ಅಂತಿಮ ಟಿ20 ಪಂದ್ಯವನ್ನಾಡಲು(England vs Pakistan) ಹೋಟೆಲ್​ನಿಂದ ತೆರಳುವ ವೇಳೆ ಅಭಿಮಾನಿಗಳು ಫೋಟೊ ತೆಗೆಸಿಕೊಳ್ಳಲು ಮುಗಿಬಿದ್ದ ವೇಳೆ ತಾಳ್ಮೆ ಕಳೆದುಕೊಂಡು ಭದ್ರತಾ ಸಿಬ್ಬಂದಿಗಳಿಗೆ ಎಲ್ಲರನ್ನೂ ದೂರ ಕಳುಹಿಸುವಂತೆ ಹೇಳಿದ್ದಾರೆ. ಈ ವಿಡಿಯೊ ವೈರಲ್(viral video)​ ಆಗಿದೆ.

ಪಾಕಿಸ್ತಾನ ತಂಡ ಇಂಗ್ಲೆಂಡ್​ ವಿರುದ್ಧ 4 ಪಂದ್ಯಗಳ ಟಿ20 ಸರಣಿಯನ್ನಾಡಲು ಲಂಡನ್​ನಲ್ಲಿದೆ. ಈಗಾಗಲೇ ಸರಣಿಯಲ್ಲಿ 2 ಪಂದ್ಯಗಳು ಮಳೆಯಿಂದ ರದ್ದುಗೊಂಡರೆ, ಒಂದು ಪಂದ್ಯವನ್ನು ಇಂಗ್ಲೆಂಡ್​ ಗೆದ್ದಿದೆ. ಅಂತಿಮ ಪಂದ್ಯ ನಾಳೆ(ಮೇ 30) ನಡೆಯಲಿದೆ. ಸರಣಿಯನ್ನು 1-1 ಸಮಬಲಗೊಳಿಸಬೇಕಿದ್ದರೆ ಪಾಕಿಸ್ತಾನಕ್ಕೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಇದೇ ಪಂದ್ಯವನ್ನಾಡಲು ತೆರಳುವ ವೇಳೆ ಬಾಬರ್​ ಅವರೊಂದಿಗೆ ಅಭಿಮಾನಿಗಳು ಫೋಟೊ ಮತ್ತು ಆಟೋಗ್ರಾಫ್ ಪಡೆಯಲು ಮುಂದಾಗಿದ್ದಾರೆ. ಇದರಿಂದ ಬಾಬರ್​ಗೆ ಕಿರಿಕಿರಿ ಉಂಟಾಗಿದೆ.

ಅಭಿಮಾನಿಗಳ ದಂಡೇ ಹಿಂಬಾಲಿಸಿ ಬಂದಿದ್ದರಿಂದ ಕೋಪಗೊಂಡ ಬಾಬರ್ ಸ್ವಲ್ಪ ಹೊತ್ತು ನನ್ನನ್ನು ಪ್ರಶಾಂತವಾಗಿರಲು ಬಿಡಿ ಎಂದು ಕೋಪದಿಂದ ನಿಂದಿಸಿದ್ದಾರೆ. ಬಳಿಕ ಪಕ್ಕದಲ್ಲಿದ್ದ ಭದ್ರತಾ ಸಿಬ್ಬಂದಿಗಳಿಗೆ ಎಲ್ಲರನ್ನೂ ದೂರ ಕಳುಹಿಸುವಂತೆ ಹೇಳಿದ್ದಾರೆ. ಒಂದು ಕ್ಷಣ ಕೋಪಗೊಂಡರೂ ಕೂಡ ಕೊನೆಗೆ ಅಭಿಮಾನಿಗಳೊಂದಿಗೆ ಫೋಟೊ ಕ್ಲಿಕ್ಕಿಸಿದ್ದಾರೆ.

ಇದನ್ನೂ ಓದಿ Babar Azam : ವಿರಾಟ್ ಕೊಹ್ಲಿಯ ದಾಖಲೆ ಸರಿಗಟ್ಟಿದ ಪಾಕ್​ ನಾಯಕ ಅಜಮ್​

ಕಳೆದ ವರ್ಷ(2023) ಭಾರತದ ಆತಿಥ್ಯದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಬಾಬರ್​ ಸಾರಥ್ಯದಲ್ಲಿ ಪಾಕಿಸ್ತಾನ ತಂಡ ನೀರಸ ಪ್ರದರ್ಶನ ತೋರಿತ್ತು. ಆಡಿದ 9 ಪಂದ್ಯಗಳ ಪೈಕಿ ಕೇವಲ 4 ಪಂದ್ಯಗಳಲ್ಲಿ ಮಾತ್ರ ಗೆಲುವು ಸಾಧಿಸಿ ಲೀಗ್​ ಹಂತದಲ್ಲೇ ಹೊರಬಿದ್ದಿತ್ತು. ಹೀಗಾಗಿ ಬಾಬರ್​ ವಿರುದ್ಧ ಪಾಕ್​ ತಂಡದ ಮಾಜಿ ಆಟಗಾರರು ಸೇರಿ ಅಂದಿನ ಪಿಬಿ ಅಧ್ಯಕ್ಷ ಭಾರೀ ಟೀಕೆ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಬಾಬರ್ ಎಲ್ಲಾ ಮೂರು ಸ್ವರೂಪಗಳ ನಾಯಕತ್ವದಿಂದ ಕೆಳಗಿಳಿದಿದ್ದರು. ಬಾಬರ್ ಕೆಳಗಿಳಿದ ಬಳಿಕ ಶಾನ್ ಮಸೂದ್ ಅವರನ್ನು ಟೆಸ್ಟ್ ನಾಯಕರನ್ನಾಗಿ ನೇಮಿಸಿದರೆ, ಶಾಹೀನ್ ಅಫ್ರಿದಿಗೆ ಟಿ20 ತಂಡವನ್ನು ಮುನ್ನಡೆಸುವ ಜವಾಬ್ದಾರಿಯನ್ನು ನೀಡಲಾಯಿತು. ಆದರೆ ಇವರ ನಾಯಕತ್ವದಲ್ಲಿ ಪಾಕಿಸ್ತಾನ ಹಿಂದೆಂದು ಕಾಣದ ವೈಫಲ್ಯ ಕಂಡಿತ್ತು. ಆಡಿದ ಹಲವು ಸರಣಿಗಳಲ್ಲಿ ಹೀನಾಯ ಸೋಲು ಕಂಡಿತ್ತು. ಹೀಗಾಗಿ ಮತ್ತೆ ಬಾಬರ್​ ಅಜಂ ಅವರನ್ನು ತಂಡದ ನಾಯಕನನ್ನಾಗಿ ಮರು ನೇಮಕ ಮಾಡಲಾಯಿತು.

ಬಾಬರ್​ ನಾಯಕತ್ವದ ಸಾಧನೆ


ಬಾಬರ್ ಅಜಮ್ ಪಾಕಿಸ್ತಾನದ ನಾಯಕನಾಗಿ 133 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 78 ಪಂದ್ಯಗಳು ಗೆದ್ದರೆ, 43 ಪಂದ್ಯಗಳಲ್ಲಿ ಸೋತಿದ್ದಾರೆ. ಒಂದು ಟೈ ಮತ್ತು ನಾಲ್ಕು ಪಂದ್ಯ ಡ್ರಾಗೊಂಡಿದೆ. ಏಕದಿನ ವಿಶ್ವಕಪ್​ ಟೂರ್ನಿ ಹೊರತುಪಡಿಸಿ ಉಳಿದ ಎಲ್ಲ ಸರಣಿಯಲ್ಲೂ ಬಾಬರ್​ ಸಾರಥ್ಯದಲ್ಲಿ ತಂಡ ಉತ್ತಮ ಪ್ರದರ್ಶನ ತೋರಿತ್ತು.

ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ ತನ್ನ ಮೊದಲ ಲೀಗ್​ ಪಂದ್ಯದಲ್ಲಿ ಅಮೆರಿಕ ವಿರುದ್ಧ ಜೂನ್​ 6ರಂದು ಆಡಲಿದೆ. ಸಾಂಪ್ರದಾಯಿಕ ಬದ್ಧ ಎದುರಾಳಿ ಭಾರತ ವಿರುದ್ಧ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ಸೆಣಸಾಡಲಿದೆ. ಈ ಪಂದ್ಯಕ್ಕಾಗಿ ಉಭಯ ದೇಶದ ಕ್ರಿಕೆಟ್​ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ.

Continue Reading
Advertisement
Girlfriend
ದೇಶ2 hours ago

Girlfriend: ‘ಬಾಡಿಗೆ ಗರ್ಲ್‌ಫ್ರೆಂಡ್‌’ ಆಗಲು ಸಿದ್ಧಳೆಂದ ಯುವತಿ; ಈಕೆಯ ‘ದರಪಟ್ಟಿ’ ನೋಡಿ,‌ ನೀವೂ ಟ್ರೈ ಮಾಡಿ

CAA Certificate
ದೇಶ3 hours ago

CAA Certificate: ದೀದಿ ವಿರೋಧದ ಮಧ್ಯೆಯೂ ಬಂಗಾಳದಲ್ಲಿ ಸಿಎಎ ಜಾರಿಗೆ ತಂದ ಕೇಂದ್ರ; ಪೌರತ್ವ ಪ್ರದಾನ!

Modi Meditation
ದೇಶ4 hours ago

Modi Meditation: ಮೋದಿಗೆ ಧ್ಯಾನ ಮಾಡಲು ಬಿಡಬೇಡಿ; ಚುನಾವಣೆ ಆಯೋಗಕ್ಕೆ ಕಾಂಗ್ರೆಸ್ ಮೊರೆ!

T20 World Cup 2024
ಕ್ರೀಡೆ4 hours ago

T20 World Cup 2024: ಟಿ20 ವಿಶ್ವಕಪ್​ನಲ್ಲಿ ಎಷ್ಟು ಬೌಲರ್​ಗಳು ಹ್ಯಾಟ್ರಿಕ್​ ವಿಕೆಟ್​ ಕಿತ್ತ ಸಾಧನೆ ಮಾಡಿದ್ದಾರೆ?

Self Harming
ಕರ್ನಾಟಕ5 hours ago

Self Harming: ಶಾಲೆಗೆ ಹೋಗಲು ಬೇಸತ್ತು 11 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ

Rudram II
ದೇಶ5 hours ago

Rudram II: ಆಗಸದಿಂದಲೇ ವೈರಿಗಳನ್ನು ನಾಶಪಡಿಸುವ ರುದ್ರಂ II ಕ್ಷಿಪಣಿ ಪ್ರಯೋಗ ಯಶಸ್ವಿ; ಶತ್ರುಗಳಿಗೆ ನಡುಕ!

Chahal-Dhanashree
ಕ್ರೀಡೆ5 hours ago

Chahal-Dhanashree: ಶೀಘ್ರದಲ್ಲೇ ಸಿಹಿ ಸುದ್ದಿ ನೀಡಲಿದ್ದಾರಾ ಚಹಲ್?; ಕುತೂಹಲ ಮೂಡಿಸಿದ ಪತ್ನಿಯ ಪೋಸ್ಟ್!

Timing change of 5 trains arriving at Sri Siddharooda Swamiji Railway Station Hubballi
ಹುಬ್ಬಳ್ಳಿ6 hours ago

Hubballi Train: ಪ್ರಯಾಣಿಕರೇ ಗಮನಿಸಿ; ಹುಬ್ಬಳ್ಳಿಗೆ ಆಗಮಿಸುವ 5 ರೈಲುಗಳ ಸಮಯ ಬದಲಾಗಿದೆ

Valmiki corporation Scam
ಕರ್ನಾಟಕ6 hours ago

Valmiki Corporation Scam: ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಪ್ರಕರಣ; ಎಂಡಿ, ಲೆಕ್ಕಾಧಿಕಾರಿ ಅಮಾನತು

PM Kisan Samman
ಕೃಷಿ6 hours ago

PM Kisan Samman: ಪಿಎಂ ಕಿಸಾನ್ ಸಮ್ಮಾನ್ 17ನೇ ಕಂತಿನ ಹಣ ಬಿಡುಗಡೆ ಯಾವಾಗ? ಪರಿಶೀಲಿಸುವುದು ಹೇಗೆ?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ1 day ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು2 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ2 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ3 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು3 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ7 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

ಟ್ರೆಂಡಿಂಗ್‌