Viral video | ಮನಸೆಳೆದ ಈ ಪಿಂಟಾರಾ ಕೇಕ್‌ ಮಾಡಲು ಐದು ದಿನ! - Vistara News

ವೈರಲ್ ನ್ಯೂಸ್

Viral video | ಮನಸೆಳೆದ ಈ ಪಿಂಟಾರಾ ಕೇಕ್‌ ಮಾಡಲು ಐದು ದಿನ!

ಈ ವಿಚಿತ್ರ ನಕ್ಷತ್ರದಾಕೃತಿಯ ಕೇಕ್‌ ಮಾಡಲು ಈತನಿಗೆ ಐದು ದಿನ ತೆಗೆದುಕೊಂಡಿದೆ. ಅಡುಗೆ ಎಂಬುದು ಕಲೆಯೂ ಹೌದು ಎಂದು ನಿರೂಪಿಸುವಂತಿದೆ ಈ ಕೇಕ್‌ ಮೇಕಿಂಗ್.‌

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಯಾಕೆ ಕೇವಲ ಚಿತ್ರಕಾರರು, ಚಿತ್ರನಟರು, ಸಂಗೀತಕಾರರು ಇಂಥವರು ಮಾತ್ರ ಕಲಾವಿದರು? ಅಡುಗೆಯೂ ಒಂದು ಕಲೆಯಾದರೆ, ಅಡುಗೆ ಮಾಡುವವರೂ ಕಲಾವಿದರೇ ಆಗಬೇಕಲ್ಲವೇ ಎಂಬ ಪ್ರಶ್ನೆ ಈ ವಿಡಿಯೋ ನೋಡಿದವರಿಗೆ ಉದ್ಭವಿಸದೇ ಇರದು. ಯಾಕೆಂದರೆ, ಇನ್ನೇನು ಕ್ಷಣಾರ್ಧದಲ್ಲಿ ತಿಂದು ಮುಗಿದು ಹೋಗಬಹುದಾದ ತಿನಿಸಿಗೆ ದಿನಗಟ್ಟಲೆ ಪರಿಶ್ರಮ ಹಾಕಿ ಮಾಡುವುದಿದೆಯಲ್ಲ, ಕ್ಷಣಾರ್ಧದಲ್ಲಿ ಮುಗಿದು ಹೋದರೂ ಅದು ಕೊಡುವ ಸಂತೃಪ್ತ ಭಾವ ಯಾವ ಕಲಾವಿದನಿಗೂ ಸಿಗಲಿಕ್ಕಿಲ್ಲವೇನೋ.

ಈಗಂತೂ ಮಾರುಕಟ್ಟೆಯಲ್ಲಿ ಲಭ್ಯವಿರುವ ನಾನಾ ಬಗೆಯ ಕೇಕ್‌ಗಳನ್ನು ನೋಡಿದರೆ ಕೇಕ್‌ ಕಲಾವಿದರು ಎಂಬ ಬೇರೆಯದೇ ಕಲಾವಿದರು ನಮ್ಮಲ್ಲಿದ್ದಾರೆ ಎಂಬುದು ಅರಿವಾಗುತ್ತದೆ. ಕೇಕ್‌ನ ಡಿಸೈನ್‌ಗಳ ಮೇಲೆ ನಡೆದಷ್ಟು ಕ್ರಿಯಾಶೀಲ ಪ್ರಯೋಗಗಳು ಬಹುಶಃ ಯಾವ ತಿನಿಸಿನ ಮೇಲೂ ನಡೆದಿರಲಿಕ್ಕಿಲ್ಲವೇನೋ. ಅಷ್ಟು ನಮೂನೆಯ, ಥರಹೇವಾರಿ ಡಿಸೈನುಗಳ, ನಾನಾ ರುಚಿಯ, ನವನವೀನ ಐಡಿಯಾಗಳ ಕೇಕುಗಳು ದಿನನಿತ್ಯ ಬಂದು ಹೋಗುತ್ತಲೇ ಇರುತ್ತವೆ. ಅಂತರ್ಜಾಲದಲ್ಲಿ ಸದ್ದು ಮಾಡುತ್ತಲೇ ಇರುತ್ತದೆ. ಸದ್ಯ ಅತ್ಯಂತ ಜನಪ್ರಿಯವಾಗಿರುವ ಪಿಂಟಾರ ಕೇಕ್‌ಗಳ ಪೈಕಿ ಈಗ ಈ ಪಿಂಟಾರಾ ಕೇಕ್‌ ಸಾಮಾಜಿಕ ಜಾಲತಾಣದಲ್ಲಿ ಎಲ್ಲರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಇಲ್ಲೊಬ್ಬ ಕೇಕ್‌ ಕಲಾವಿದ ಮಾಡಿದ ಪಿಂಟಾರ ಕೇಕ್‌ ಸಾಮಾಜಿಕ ಜಾಲತಾಣದಲ್ಲಿ ಮಿಲಿಯಗಟ್ಟಲೆ ವೀಕ್ಷಣೆ ಪಡೆದಿದೆ. ಅಮೌರಿ ಗುಯ್ಚಾನ್‌ ಎಂಬವರು ಹಂಚಿಕೊಂಡ ವಿಡಿಯೋ ಒಂದು ಪಿಂಟಾರಾ ಕೇಕ್‌ ಕೂಡಾ ಎಂಥ ಅದ್ಭುತ ಕಲೆ ಎಂಬುದನ್ನು ತೋರಿಸಿದೆ. ʻಚಾಕೋಲೇಟ್‌ ಪಿಂಟಾರಾ, ಬಹಳ ನೋವಿನಿಂದ ಕತ್ತರಿಸುತ್ತಿದ್ದೇನೆ. ಆದರೆ ಇದರೊಳಗಿನ ಕ್ಯಾಂಡಿಗಳು ಬಹಳ ರುಚಿಯಾಗಿದ್ದವುʼ ಎಂಬ ತಲೆಬರಹದೊಂದಿಗೆ ಈ ವಿಡಿಯೋವನ್ನು ಶೇರ್‌ ಮಾಡಲಾಗಿದೆ.

ಗುಯ್ಚಾನ್‌ ಕೇಕ್‌ ಮಾಡುವ ವಿಡಿಯೋ ಇದರಲ್ಲಿದ್ದು ತೂಗು ಹಾಕಲಾಗಿರುವ ಪಿಂಟಾರಾ ಕೇಕ್‌ನನ್ನು ಒಡೆಯುವ ದೃಶ್ಯವಿದೆ. ಈ ಕೇಕೇ ಒಂದು ಕಲಾಕೃತಿಯ ಹಾಗಿದ್ದು, ಇದನ್ನು ಹೇಗಾದರೂ ಒಡೆದು ತಿಂದು ಮುಗಿಸಿಬಿಡುವುದು ಎಂದು ಯಾರಿಗಾದರೂ ಅನಿಸುವಷ್ಟು ಸುಂದರವಾಗಿದೆ.‌

ಇದನ್ನೂ ಓದಿ | Viral news | ನೀಲಿ, ಪಿಂಕ್‌ ಬಣ್ಣದ ಬ್ಲೂಬೆರಿ, ಸ್ಟ್ರಾಬೆರಿ ಸಮೋಸಾಗಳನ್ನು ನೋಡಿದ್ದೀರಾ?

ಇದರ ಹಿಂದಿನ ಅಷ್ಟೂ ಪರಿಶ್ರಮ ಖ್ಯಾತ ಕೇಕ್‌ ಕಲಾವಿದ ಅಮೌರಿ ಗುಯ್ಚಾನ್‌ಗೆ ಸಲ್ಲುತ್ತದೆ. ಈ ಪಿಂಟಾರಾ ಕೇಕ್‌ ಮಾಡಲು ತೆಗೆದುಕೊಂಡ ಸಮಯ ಐದು ದಿನಗಳಂತೆ. ಸುಮಾರು ೩,೭೦೦ ಲೂಪ್‌ಗಳ ಇದರಲ್ಲಿದ್ದು. ಒಂದೊಂದನ್ನೇ ಮಾಡಿ ಅಂಟಿಸಲಾಗಿದೆ. ಆಕರ್ಷಕವಾಗಿ ಅಲಂಕರಿಸಿರುವ ಈ ಕೇಕ್ ಒಳಗೆ ಸಾಕಷ್ಟು ಕ್ಯಾಂಡಿಗಳನ್ನು ತುಂಬಿಸಲಾಗಿದ್ದು, ಲೂಪ್‌ಗಳಂತೆ ಡಿಸೈನ್‌ ಮಾಡಿ ಅವುಗಳಿರುವ ಕೋನ್‌ ಆಕೃತಿಯ ಚಾಕೋಲೇಟ್‌ಗಳನ್ನು ಮಾಡಲಾಗಿದೆ. ಆಮೇಲೆ ಅದಕ್ಕೆ ಕೆಂಪು ಬಣ್ಣ ಬಳಿಯಲಾಗಿದ್ದು, ಈ ಎಲ್ಲ ಕೋನ್‌ಗಳನ್ನೂ ಒಂದಕ್ಕೊಂದು ಅಂಟಿಸಲಾಗಿದೆ. ಪಕ್ಕನೆ ನೋಡಿದರೆ, ದೀಪಾವಳಿಯ ನಕ್ಷತ್ರಾಕಾರದ ಗೂಡು ದೀಪದಂತೆ ಕಾಣುತ್ತದೆ. ಪ್ರತಿ ಬರ್ತ್‌ಡೇ ಪಾರ್ಟಿಯಲ್ಲೂ ಇದನ್ನು ಒಡೆಯುವ ದೃಶ್ಯ ಸಾರ್ಥಕತೆಯ ಕ್ಷಣ ಎಂದು ವಿವರಿಸಿರುವ ಅವರು, ಈ ಕ್ಷಣವನ್ನು ಸ್ಟಾರ್‌ ಶೋ ಎಂದು ಕರೆದುಕೊಂಡಿದ್ದಾರೆ.

ಈತನ ಥರಹೇವಾರಿ ಕೇಕ್‌ಗಳ ವಿಡಿಯೋಗಳನ್ನು ಇಷ್ಟಪಡುವ ಈತನ ಅಭಿಮಾನಿಗಳು ಈ ಪಿಂಟಾರಾ ಕೇಕ್‌ ಈತನ ಕೈಯಲ್ಲಿ ಮೂಡಿದ ಅತ್ಯದ್ಭುತ ಕಲಾಕೃತಿ ಎಂದು ಬಣ್ಣಿಸಿದ್ದಾರೆ. ಈತನ ಕೈಚಳಕ ನೋಡಿ ನಿಜಕ್ಕೂ ಶಾಕ್‌ ಆಗಿದೆ ಎಂದು ಹಲವರು ಮೂಕವಿಸ್ಮಿತರಾಗಿದ್ದರೆ, ಈನ್ನೂ ಕೆಲವರು ನೀವು ಚಾಕೋಲೇಟ್‌ ಜಗತ್ತಿನ ಬಾಬ್‌ ರೋಸ್‌ ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ | Garba Dance | ಸ್ವಿಮ್ಮಿಂಗ್‌ ಪೂಲ್‌ನಲ್ಲೂ ಗಾರ್ಬಾ ನೃತ್ಯ, ರಾಜಸ್ಥಾನದಲ್ಲಿ ನವರಾತ್ರಿ ರಂಗಿನ ವಿಡಿಯೊ ವೈರಲ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Narendra Modi: ಆಂಧ್ರದಲ್ಲಿ ಮೆಗಾ ಸ್ಟಾರ್‌, ಪವರ್‌ ಸ್ಟಾರ್‌ ಜತೆ ‘ಪೊಲಿಟಿಕಲ್‌ ಸ್ಟಾರ್’‌ ಮೋದಿ; Video ನೋಡಿ

Narendra Modi: ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ಹಾಗೂ ಉಪ ಮುಖ್ಯಮಂತ್ರಿಯಾಗಿ ಜನಸೇನಾ ಪಕ್ಷದ ಮುಖ್ಯಸ್ಥ ಪವನ್‌ ಕಲ್ಯಾಣ್‌ ಅವರು ಪ್ರಮಾಣವಚನ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರಲ್ಲದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಸೇರಿ ಹಲವು ಗಣ್ಯರು ಭಾಗವಹಿಸಿದ್ದರು. ಇದೇ ವೇಳೆ, ಮೋದಿ ಅವರು ಚಿರಂಜೀವಿ ಹಾಗೂ ಪವನ್‌ ಕಲ್ಯಾಣ್‌ ಜತೆಗೂಡಿ ಒಗ್ಗಟ್ಟು ಪ್ರದರ್ಶಿಸಿದರು.

VISTARANEWS.COM


on

Narendra Modi
Koo

ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಟಿಡಿಪಿಯ ಎನ್‌.ಚಂದ್ರಬಾಬು ನಾಯ್ಡು (N Chandrababu Naidu), ಉಪ ಮುಖ್ಯಮಂತ್ರಿಯಾಗಿ ಜನಸೇನಾ ಪಕ್ಷದ ಮುಖ್ಯಸ್ಥ ಪವನ್‌ ಕಲ್ಯಾಣ್‌ (Pawan Kalyan) ಅವರು ಬುಧವಾರ (ಜೂನ್‌ 12) ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೂ ಭಾಗಿಯಾದರು. ಅಷ್ಟೇ ಅಲ್ಲ, ನರೇಂದ್ರ ಮೋದಿ ಅವರು ವೇದಿಕೆ ಮೇಲೆ ಮೆಗಾ ಸ್ಟಾರ್‌ ಚಿರಂಜೀವಿ, ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ಅವರ ಕೈ ಹಿಡಿದು, ಅವರ ಕೈಗಳನ್ನು ಒಮ್ಮೆಲ್ಲೆ ಎತ್ತಿ ಹಿಡಿಯುವ ಮೂಲಕ ಗಮನ ಸೆಳೆದರು. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ವಿಜಯವಾಡದಲ್ಲಿರುವ ಮೇಧಾ ಐಟಿ ಪಾರ್ಕ್‌ ಬಳಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಎನ್‌.ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇದಾದ ಬಳಿಕ ಮೋದಿ ಅವರು ನಾಯ್ಡು ಅವರಿಗೆ ಶುಭ ಕೋರಿದರು. ನಂತರ ಪವನ್‌ ಕಲ್ಯಾಣ್‌ ಅವರು ತಮ್ಮ ಸಹೋದರ ಚಿರಂಜೀವಿ ಕೂಡ ಇಲ್ಲೇ ಇದ್ದಾರೆ ಎಂದು ಮೋದಿ ಅವರಿಗೆ ಹೇಳಿದರು. ಆಗ ಮೋದಿ ಅವರು ಚಿರಂಜೀವಿ ಬಳಿ ಹೋಗಿ, ಅವರ ಹಾಗೂ ಪವನ್‌ ಕಲ್ಯಾಣ್‌ ಕೈ ಹಿಡಿದು ವೇದಿಕೆಗೆ ಕರೆತಂದರು. ಬಳಿಕ ಮೂವರೂ ಕೈ ಎತ್ತಿದರು. ಆ ಮೂಲಕ ಒಗ್ಗಟ್ಟಿನ ಬಲ ಪ್ರದರ್ಶನ ಮಾಡಿದರು.

ಇದರ ಮಧ್ಯೆಯೇ ಚಂದ್ರಬಾಬು ನಾಯ್ಡು ಅವರು ನರೇಂದ್ರ ಮೋದಿ ಅವರ ಕಾಲು ಮುಟ್ಟಿ ನಮಸ್ಕರಿಸಲು ಮುಂದಾದರು. ಚಂದ್ರಬಾಬು ನಾಯ್ಡು ಅವರು ನರೇಂದ್ರ ಮೋದಿ ಅವರಿಗಿಂತ ಒಂದು ವರ್ಷ ದೊಡ್ಡವರು. ಹೀಗಿದ್ದರೂ ಮೋದಿ ಅವರ ಮೇಲಿನ ಗೌರವದಿಂದಾಗಿ ಅವರ ಕಾಲು ಮುಟ್ಟಿ ನಮಸ್ಕರಿಸಲು ಚಂದ್ರಬಾಬು ನಾಯ್ಡು ಮುಂದಾದರು. ಆದರೆ, ಇದಕ್ಕೆ ನರೇಂದ್ರ ಮೋದಿ ಅವರು ಅವಕಾಶ ಕೊಡದೆ, ಚಂದ್ರಬಾಬು ನಾಯ್ಡು ಅವರನ್ನು ತಬ್ಬಿಕೊಂಡು, ನೂತನ ಸರ್ಕಾರಕ್ಕೆ ಶುಭ ಹಾರೈಸಿದರು.

ಪ್ರಮಾಣವಚನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್‌ ಶಾ, ನಿತಿನ್‌ ಗಡ್ಕರಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ, ನಟರಾದ ಚಿರಂಜೀವಿ, ರಜನಿಕಾಂತ್‌, ಮಾಜಿ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು. ನಾಲ್ಕನೇ ಬಾರಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಚಂದ್ರಬಾಬು ನಾಯ್ಡು ಅವರು ದಾಖಲೆ ಬರೆದರು.

ಇದನ್ನೂ ಓದಿ: ಒಡಿಶಾಗೆ ಬಿಜೆಪಿಯ ಮೋಹನ್‌ ಚರಣ್‌ ಮಾಝಿ, ಅರುಣಾಚಲಕ್ಕೆ ಪೆಮಾ ಖಂಡು ಸಿಎಂ; ಖಂಡು ನಾಳೆ ಪದಗ್ರಹಣ

Continue Reading

ವೈರಲ್ ನ್ಯೂಸ್

Viral Video: ಮೆಟ್ರೋ, ವಿಮಾನ ಆಯಿತು ಈಗ ರೈಲಿನಲ್ಲಿ ಮಕ್ಕಳ ಎದುರೇ ಜೋಡಿಯ ಸರಸ!

ಕಳೆದ ಕೆಲವು ದಿನಗಳಿಂದ ಮೆಟ್ರೋದಲ್ಲಿ, ಬೈಕ್ ನಲ್ಲಿ ಅಸಭ್ಯವಾಗಿ ವರ್ತಿಸುತ್ತಿರುವ ಜೋಡಿಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿತ್ತು. ಇದೀಗ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ವಿಡಿಯೋವೊಂದರಲ್ಲಿ ಜೋಡಿಯೊಂದು ಸಣ್ಣ ಮಕ್ಕಳ ಎದುರೇ ರೈಲಿನಲ್ಲಿ ಮುದ್ದಾಡುತ್ತಾ ಸಾಗಿರುವುದು ವೈರಲ್ (Viral Video) ಆಗಿದೆ.

VISTARANEWS.COM


on

By

Viral Video
Koo

ನವದೆಹಲಿ: ದೆಹಲಿ ಮೆಟ್ರೋದಲ್ಲಿ (delhi metro) ಅಶ್ಲೀಲ ವರ್ತನೆಯ ವಿಡಿಯೋಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ (social media) ಆಗಾಗ ವೈರಲ್ (Viral Video) ಆಗುತ್ತಿದೆ. ಇದೀಗ ರೈಲಿನಲ್ಲೂ (train) ಜೋಡಿಯೊಂದು ಅಶ್ಲೀಲವಾಗಿ ವರ್ತಿಸಿ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಕಳೆದ ಕೆಲವು ದಿನಗಳಿಂದ ಮೆಟ್ರೋದಲ್ಲಿ, ಬೈಕ್ ನಲ್ಲಿ ಅಸಭ್ಯವಾಗಿ ವರ್ತಿಸುತ್ತಿರುವ ಜೋಡಿಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿತ್ತು. ಇದೀಗ ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ವಿಡಿಯೋವೊಂದರಲ್ಲಿ ಜೋಡಿಯೊಂದು ಸಣ್ಣ ಮಕ್ಕಳ ಎದುರೇ ರೈಲಿನಲ್ಲಿ ಮುದ್ದಾಡುತ್ತಾ ಸಾಗಿರುವುದು ವೈರಲ್ ಆಗಿದೆ.

ಸ್ಲೀಪರ್ ಕೋಚ್‌ನಲ್ಲಿ ದಂಪತಿ ಮುದ್ದಾಡುತ್ತಿದ್ದಾಗ ರೈಲಿನ ಟಿಕೇಟ್ ಪರೀಕ್ಷಿಸಲು ಪರೀಕ್ಷಕರು ಅಲ್ಲಿಗೆ ಬಂದಿದ್ದಾರೆ. ಅವರೊಂದಿಗೆ ಮಾತನಾಡುತ್ತಿದ್ದರೂ ದಂಪತಿ ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಎಲ್ಲರ ಉಪಸ್ಥಿತಿಯಲ್ಲಿಯೂ ಪರಸ್ಪರ ಮುದ್ದಾಡುತ್ತಿದ್ದರು. ಇದು ಮಕ್ಕಳು ಸೇರಿದಂತೆ ಇತರ ಪ್ರಯಾಣಿಕರಿಗೂ ಮುಜುಗರ ಉಂಟು ಮಾಡುವಂತಿತ್ತು.
ಈ ವಿಡಿಯೋ ಯಾವಾಗ ಮತ್ತು ಎಲ್ಲಿ ತೆಗೆದಿರುವುದೆಂದು ತಿಳಿದು ಬಂದಿಲ್ಲ. ಈ ಕುರಿತು ಸಾಕಷ್ಟು ನೆಟ್ಟಿಗರು ಕಾಮೆಂಟ್ ಕೂಡ ಮಾಡಿದ್ದಾರೆ.


ಎಕ್ಸ್ ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. 2.6 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿರುವ ಈ ವಿಡಿಯೋ ನೋಡಿ ಸಾಕಷ್ಟು ನೆಟ್ಟಿಗರು ಟೀಕಿಸಿದ್ದಾರೆ.

ಒಬ್ಬ ಬಳಕೆದಾರ, ರೈಲಿನಲ್ಲಿ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಇನ್ನೊಬ್ಬರು ಇದು ಜಾಸ್ತಿಯಾಯಿತು, ನಾಚಿಕೆ ಎನ್ನುವುದೇ ಇಲ್ಲ ಎಂದು ತಿಳಿಸಿದ್ದಾರೆ.

ಏಪ್ರಿಲ್‌ನಲ್ಲಿ ವಿಮಾನದಲ್ಲಿ ಜೋಡಿಯೊಂದು ಆಸನದಲ್ಲಿ ಕುಳಿತು ಮುದ್ದಾಡಿದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಮಾನ ಹಾರಾಟದ 4 ಗಂಟೆಗಳ ಕಾಲ ಜೋಡಿಯು ಆಲಿಂಗನದಲ್ಲಿದ್ದು ಸಾಕಷ್ಟು ನೆಟ್ಟಿಗರ ಟೀಕೆಗೆ ಗುರಿಯಾಗಿತ್ತು.

ರೈಲಿನಲ್ಲಿ ಹುಟ್ಟಿದ ಮಗುವಿಗೆ ʼಮಹಾಲಕ್ಷ್ಮಿʼ ಎಂದು ಹೆಸರಿಟ್ಟ ಮುಸ್ಲಿಂ ದಂಪತಿ

ಚಲಿಸುತ್ತಿದ್ದ ರೈಲಿನಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆ ಮಗುವಿಗೆ ʼಮಹಾಲಕ್ಷ್ಮಿ ʼ ಎಂದು ನಾಮಕರಣ ಮಾಡಿದ್ದಾರಂತೆ ಎನ್ನುವ ಕುರಿತು ಸುದ್ದಿಯೊಂದು ವೈರಲ್ ಆಗಿದೆ.

ಜೂನ್ 6ರಂದು ಕೋಲ್ಹಾಪುರ-ಮುಂಬೈ ಮಹಾಲಕ್ಷ್ಮಿ ಎಕ್ಸ್ ಪ್ರೆಸ್ ನಲ್ಲಿ ಮೀರಾ ರೋಡ್ ನ ಫಾತಿಮಾ ಖಾತುನ್ ಎಂಬ 31 ವರ್ಷದ ಗರ್ಭಿಣಿ ಪ್ರಯಾಣಿಸುತ್ತಿದ್ದರು. ಆ ವೇಳೆ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವಿಚಾರ ಮಹಿಳೆ ತನ್ನ ಪತಿಗೆ ತಿಳಿಸಿದ್ದಾಳೆ ಮತ್ತು ನೋವು ಹೆಚ್ಚಾದ ಕಾರಣ ರೈಲಿನಲ್ಲಿರುವ ಶೌಚಾಲಯಕ್ಕೆ ತೆರಳಿದ್ದಾಳೆ. ಬಳಿಕ ರೈಲು ಲೋನಾವಾಲಾ ದಾಟಿದ ನಂತರ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ರೈಲಿನಲ್ಲಿದ್ದ ಇತರ ಮಹಿಳಾ ಪ್ರಯಾಣಿಕರು ಆಕೆಗೆ ಸಹಾಯ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಈ ಬಗ್ಗೆ ಮಹಿಳೆಯ ಪತಿ ತಯ್ಯಬ್ ಕರ್ಜಾತ್ ಸರ್ಕಾರಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ತಾಯಿ ಮಗುವನ್ನು ರೈಲಿನಿಂದ ಕೆಳಗಿಳಿಸಿ ಹತ್ತಿರವಿದ್ದ ಉಪಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿನ ಸಿಬ್ಬಂದಿಗಳು ತಾಯಿ, ಮಗುವಿಗೆ ಅಗತ್ಯವಿರುವ ಚಿಕಿತ್ಸೆ ನೀಡಿ ಮೂರು ದಿನಗಳ ನಂತರ ಡಿಸ್ಚಾರ್ಜ್ ಮಾಡಿದ್ದಾರೆ. ನಂತರ ಆ ಮುಸ್ಲಿಂ ದಂಪತಿ ಮಗುವಿಗೆ ‘ಮಹಾಲಕ್ಷ್ಮಿ’ ಎಂದು ಹಿಂದೂ ದೇವರ ಹೆಸರನ್ನು ಇಟ್ಟು ಕುತೂಹಲ ಮೂಡಿಸಿದ್ದಾರೆ.

ಈ ಬಗ್ಗೆ ಮಗುವಿನ ತಂದೆ ತಯ್ಯಬ್ ಕರ್ಜಾತ್ ಅವರು ಪ್ರತಿಕ್ರಿಯಿಸಿ ತಿರುಪತಿಯಿಂದ ಕೊಲ್ಲಾಪುರದ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಪ್ರಯಾಣಿಸಿದ ಕೆಲವು ಸಹ ಪ್ರಯಾಣಿಕರು ತನ್ನ ಮಗಳು ಈ ರೈಲಿನಲ್ಲಿ ಹುಟ್ಟಿದ್ದು, ದೇವಿಯ ದರ್ಶನ ಪಡೆದಂತೆ ಆಯಿತು ಎಂದು ಹೇಳಿದರಂತೆ. ಹಾಗಾಗಿ ತಾನು ಮಗುವಿಗೆ ಈ ಹೆಸರಿಟ್ಟೆ ಎಂದು ತಿಳಿಸಿದ್ದಾರೆ.

Continue Reading

ದೇಶ

Tamilisai Soundararajan: ವೇದಿಕೆ ಮೇಲೆಯೇ ತಮಿಳ್‌ಸಾಯಿಗೆ ಅಮಿತ್‌ ಶಾ ಭರ್ಜರಿ ಕ್ಲಾಸ್;‌ ವಿಡಿಯೊ ನೋಡಿ

Tamilisai Soundararajan: ತಮಿಳುನಾಡಿನಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು ಒಂದೇ ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸದ ಕಾರಣ ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟವಾಗಿದೆ. ಭಿನ್ನಮತವನ್ನು ಕೊನೆಗಾಣಿಸಬೇಕೆಂದೇ ಅಮಿತ್‌ ಶಾ ಅವರು ತಮಿಳ್‌ಸಾಯಿ ಸೌಂದರರಾಜನ್‌ ಅವರಿಗೆ ವೇದಿಕೆ ಮೇಲೆಯೇ ವಾರ್ನಿಂಗ್‌ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅಮಿತ್‌ ಶಾ ಅವರು ಸಿಟ್ಟಿನಿಂದ ಮಾತನಾಡಿದ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

VISTARANEWS.COM


on

Tamilisai Soundararajan
Koo

ಅಮರಾವತಿ: ತಮಿಳುನಾಡಿನಲ್ಲಿ ಬಿಜೆಪಿಯು ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ. ಅದರಲ್ಲೂ, ತೆಲಂಗಾಣ ಮಾಜಿ ರಾಜ್ಯಪಾಲೆ, ಪಕ್ಷದ ನಾಯಕಿ ತಮಿಳ್‌ಸಾಯಿ ಸೌಂದರರಾಜನ್‌ (Tamilisai Soundararajan) ಹಾಗೂ ಅಣ್ಣಾಮಲೈ ಬೆಂಬಲಿಗರ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ವಾದ-ವಿವಾದಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ, ಕೇಂದ್ರ ಗೃಹ ಸಚಿವ ಅಮಿತ್‌ ಶಾ (Amit Shah) ಅವರು ವೇದಿಕೆ ಮೇಲೆಯೇ ತಮಿಳ್‌ಸಾಯಿ ಸೌಂದರರಾಜನ್‌ ಅವರಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಎನ್‌.ಚಂದ್ರಬಾಬು ನಾಯ್ಡು, ಉಪ ಮುಖ್ಯಮಂತ್ರಿಯಾಗಿ ಜನಸೇನಾ ಪಕ್ಷದ ಪವನ್‌ ಕಲ್ಯಾಣ್‌ ಅವರು ಉಪ ಮುಖ್ಯಮಂತ್ರಿಯಾಗಿ ಬುಧವಾರ ಅಧಿಕಾರ ಸ್ವೀಕರಿಸಿದರು. ವೇದಿಕೆ ಮೇಲೆ ನರೇಂದ್ರ ಮೋದಿ ಅವರ ಜತೆಗೆ ಅಮಿತ್‌ ಶಾ, ನಿತಿನ್‌ ಗಡ್ಕರಿ, ಮಾಜಿ ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು. ಇದೇ ವೇಳೆ ತಮಿಳ್‌ಸಾಯಿ ಸೌಂದರರಾಜನ್‌ ಅವರು ವೇದಿಕೆ ಮೇಲೆ ಬಂದು ಎಲ್ಲ ನಾಯಕರಿಗೂ ನಮಸ್ಕಾರ ಮಾಡಿದರು. ಆಗ ಅಮಿತ್‌ ಶಾ ಅವರು ತಮಿಳ್‌ಸಾಯಿ ಅವರ ಜತೆ ಸಿಟ್ಟಿನಿಂದ ಮಾತನಾಡಿದ್ದಾರೆ.

ವೇದಿಕೆ ಮೇಲಿದ್ದ ನಾಯಕರಿಗೆ ಕೈ ಮುಗಿದು ನಮಸ್ಕಾರ ಮಾಡಿದ ತಮಿಳ್‌ಸಾಯಿ ಅವರು ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಅವರನ್ನು ಅಮಿತ್‌ ಶಾ ಅವರು ಕರೆದರು. ಕರೆದು ಹಾಗೆಲ್ಲ ಮಾಡುವುದು ಸರಿ ಅಲ್ಲ ಎನ್ನುವ ರೀತಿಯಲ್ಲಿ ಸನ್ನೆ ಮಾಡಿದರು. ಇದರಿಂದ ತುಸು ವಿಚಲಿತರಾದಂತಾದ ತಮಿಳ್‌ಸಾಯಿ ಸೌಂದರರಾಜನ್‌ ಅವರು, ಅಮಿತ್‌ ಶಾ ಅವರು ಸೂಚಿಸಿದ್ದಕ್ಕೆಲ್ಲ ಸರಿ ಎಂಬಂತೆ ತಲೆ ಅಲ್ಲಾಡಿಸಿದರು. ಆದರೆ, ಅಮಿತ್‌ ಶಾ ಅವರು ಯಾವ ವಿಷಯಕ್ಕೆ ಕೋಪ ಮಾಡಿಕೊಂಡಿದ್ದರು ಎಂಬುದು ನಿಖರವಾಗಿ ಗೊತ್ತಾಗಿಲ್ಲ.

ಏನಿದು ಭಿನ್ನಮತ?

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಕೆ. ಅಣ್ಣಾಮಲೈ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ನಾಯಕತ್ವದಲ್ಲಿಯೇ ರಾಜ್ಯದಲ್ಲಿ ಲೋಕಸಭೆ ಚುನಾವಣೆ ಎದುರಿಸಲಾಗಿದೆ. ಒಳ್ಳೆಯ ಪ್ರಯತ್ನದ ಫಲವಾಗಿಯೂ ತಮಿಳುನಾಡಿನಲ್ಲಿ ಬಿಜೆಪಿ ಖಾತೆ ತೆರೆಯಲೂ ಆಗದಿರುವುದು ಪಕ್ಷದಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. “ತಮಿಳುನಾಡಿನಲ್ಲಿ ಎಐಎಡಿಎಂಕೆ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ 35 ಕ್ಷೇತ್ರಗಳಲ್ಲಿ ಗೆಲ್ಲಬಹುದಿತ್ತು. ಇದಕ್ಕೂ ಮೊದಲು ತಮಿಳುನಾಡಿನಲ್ಲಿ ಎಲ್‌.ಮುರುಗನ್‌ ಹಾಗೂ ತಮಿಳ್‌ಸಾಯಿ ಸೌಂದರರಾಜನ್‌ ಅವರು ಪಕ್ಷದ ನಾಯಕತ್ವ ವಹಿಸಿಕೊಂಡಿದ್ದಾಗ ಸಮಸ್ಯೆ ಇರಲಿಲ್ಲ. ಅಣ್ಣಾಮಲೈ ಅವರು ರಾಜ್ಯಾಧ್ಯಕ್ಷರಾದ ಬಳಿಕವೇ ಸಮಸ್ಯೆಗಳು ಆರಂಭವಾಗಿವೆ” ಎಂದು ಎಐಎಡಿಎಂಕೆ ನಾಯಕ ಎಸ್‌.ಪಿ. ವೇಲುಮಣಿ ಹೇಳಿದ್ದಾರೆ.

ಅಣ್ಣಾಮಲೈ ಅವರು ಎಸ್‌.ಪಿ.ವೇಲುಮಣ್ಣಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, “ಎಐಎಡಿಎಂಕೆಯು ತಮಿಳುನಾಡಿನಲ್ಲಿ ಸ್ಪರ್ಧಿಸಿ ಒಂದೇ ಒಂದು ಕ್ಷೇತ್ರ ಗೆದ್ದಿಲ್ಲ. ಹಾಗಾಗಿ, ಅವರ ಹೇಳಿಕೆಯನ್ನು ಹೇಗೆ ಒಪ್ಪಿಕೊಳ್ಳಬೇಕು” ಎಂದಿದ್ದಾರೆ. ಆದರೆ, “ಎಸ್‌.ಪಿ. ವೇಲುಮಣಿ ನೀಡಿದ ಹೇಳಿಕೆಯು ವಾಸ್ತವಕ್ಕೆ ಹತ್ತಿರವಾಗಿದೆ” ಎಂದು ತಮಿಳ್‌ಸಾಯಿ ಪ್ರತಿಕ್ರಿಯಿಸಿದ್ದಾರೆ. ಇದು ಈಗ ತಮಿಳುನಾಡು ಬಿಜೆಪಿಯಲ್ಲಿ ಭಿನ್ನಮತದ ಅಲೆ ಸೃಷ್ಟಿಸಿದೆ. ಹಾಗಾಗಿಯೇ, ಅಮಿತ್‌ ಶಾ ಅವರು ತಮಿಳ್‌ಸಾಯಿ ಅವರಿಗೆ ವಾರ್ನಿಂಗ್‌ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Election Results 2024: 7 ಲಕ್ಷ ಮತಗಳಿಂದ ಗೆದ್ದು ಬೀಗಿದ ಅಮಿತ್‌ ಶಾ

Continue Reading

ದೇಶ

Chandrababu Naidu: ವಯಸ್ಸಲ್ಲಿ ಕಿರಿಯರಾದ ಮೋದಿ ಪಾದ ಮುಟ್ಟಲು ಮುಂದಾದ ಚಂದ್ರಬಾಬು ನಾಯ್ಡು; Video ಇದೆ

Chandrababu Naidu: ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ಹಾಗೂ ಉಪ ಮುಖ್ಯಮಂತ್ರಿಯಾಗಿ ಜನಸೇನಾ ಪಕ್ಷದ ಮುಖ್ಯಸ್ಥ ಪವನ್‌ ಕಲ್ಯಾಣ್‌ ಅವರು ಪ್ರಮಾಣವಚನ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರಲ್ಲದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಸೇರಿ ಹಲವು ಗಣ್ಯರು ಭಾಗವಹಿಸಿದ್ದರು.

VISTARANEWS.COM


on

Chandrababu Naidu
Koo

ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಎನ್‌.ಚಂದ್ರಬಾಬು ನಾಯ್ಡು (Chandrababu Naidu) ಅವರು ಬುಧವಾರ (ಜೂನ್‌ 12) ಪ್ರಮಾಣವಚನ ಸ್ವೀಕರಿಸಿದ್ದಾರೆ. ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರು ಕೂಡ ಭಾಗಿಯಾಗಿದ್ದರು. ನರೇಂದ್ರ ಮೋದಿ ಅವರನ್ನು ವೇದಿಕೆಗೆ ಸ್ವಾಗತಿಸಿದ ಚಂದ್ರಬಾಬು ನಾಯ್ಡು ಅವರು, ಪ್ರಧಾನಿಗೆ ಹೂಗುಚ್ಛ ನೀಡಿದರು. ಇದಾದ ಬಳಿಕ ನರೇಂದ್ರ ಮೋದಿ (Narendra Modi) ಅವರ ಕಾಲು ಮುಟ್ಟಿ ನಮಸ್ಕರಿಸಲು ಮುಂದಾದರು. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ಚಂದ್ರಬಾಬು ನಾಯ್ಡು ಅವರು ನರೇಂದ್ರ ಮೋದಿ ಅವರಿಗಿಂತ ಒಂದು ವರ್ಷ ದೊಡ್ಡವರು. ಹೀಗಿದ್ದರೂ ಮೋದಿ ಅವರ ಮೇಲಿನ ಗೌರವದಿಂದಾಗಿ ಅವರ ಕಾಲು ಮುಟ್ಟಿ ನಮಸ್ಕರಿಸಲು ಚಂದ್ರಬಾಬು ನಾಯ್ಡು ಮುಂದಾದರು. ಆದರೆ, ಇದಕ್ಕೆ ನರೇಂದ್ರ ಮೋದಿ ಅವರು ಅವಕಾಶ ಕೊಡದೆ, ಚಂದ್ರಬಾಬು ನಾಯ್ಡು ಅವರನ್ನು ತಬ್ಬಿಕೊಂಡು, ನೂತನ ಸರ್ಕಾರಕ್ಕೆ ಶುಭ ಹಾರೈಸಿದರು. ಕೇಂದ್ರದ ಎನ್‌ಡಿಎ ಸರ್ಕಾರಕ್ಕೆ ಚಂದ್ರಬಾಬು ನಾಯ್ಡು ಅವರ ಟಿಡಿಪಿಯು ಬೆಂಬಲ ಸೂಚಿಸಿದೆ.

ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ಹಾಗೂ ಉಪ ಮುಖ್ಯಮಂತ್ರಿಯಾಗಿ ಜನಸೇನಾ ಪಕ್ಷದ ಮುಖ್ಯಸ್ಥ ಪವನ್‌ ಕಲ್ಯಾಣ್‌ ಅವರು ಪ್ರಮಾಣವಚನ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಅವರಲ್ಲದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ, ನಟ, ಪವನ್‌ ಕಲ್ಯಾಣ್‌ ಸಹೋದರ ಚಿರಂಜೀವಿ, ತಮಿಳು ನಟ ರಜನಿಕಾಂತ್‌, ನಂದಮೂರಿ ಬಾಲಕೃಷ್ಣ ಸೇರಿ ಹಲವು ಗಣ್ಯರು ಭಾಗವಹಿಸಿದ್ದರು.

ನಿತೀಶ್‌ ಕೂಡ ಹೀಗೆಯೇ ಮಾಡಿದ್ದರು

ಕೆಲ ದಿನಗಳ ಹಿಂದೆ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಅವರು ಕೂಡ ಮೋದಿ ಅವರ ಪಾದ ಮುಟ್ಟಿ ನಮಸ್ಕರಿಸಲು ಮುಂದಾಗಿದ್ದರು. ಸಂಸದೀಯ ಪಕ್ಷದ ಸಭೆಯಲ್ಲಿ ರಾಜನಾಥ್‌ ಸಿಂಗ್‌ ಅವರು ನರೇಂದ್ರ ಮೋದಿ ಅವರ ಹೆಸರನ್ನು ಶಾಸಕಾಂಗ ಪಕ್ಷದ ನಾಯಕ ಎಂಬುದಾಗಿ ಪ್ರಸ್ತಾಪಿಸಿದರು. ಇದಕ್ಕೆ, ಎನ್‌ಡಿಎ ಮೈತ್ರಿಕೂಟದ ಸದಸ್ಯರೆಲ್ಲರೂ ಚಪ್ಪಾಳೆ ತಟ್ಟಿ ಬೆಂಬಲ ವ್ಯಕ್ತಪಡಿಸಿದರು. ಇದಾದ ಬಳಿಕ ನಿತೀಶ್‌ ಕುಮಾರ್‌ ಅವರು ನರೇಂದ್ರ ಮೋದಿ ಅವರ ಪಾದ ಮುಟ್ಟಿ ನಮಸ್ಕರಿಸಲು ಮುಂದಾದರು. ಆಗ ಮೋದಿ ಅವರು ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ. ನರೇಂದ್ರ ಮೋದಿ ಅವರಿಗೆ 73 ವರ್ಷ ವಯಸ್ಸಾಗಿದ್ದರೆ, ನಿತೀಶ್‌ ಕುಮಾರ್‌ ಅವರು ವಯಸ್ಸು ಕೂಡ 73 ವರ್ಷವಾಗಿದೆ. ಇಬ್ಬರೂ ಸಮಕಾಲೀನ ನಾಯಕರಾಗಿದ್ದಾರೆ.

ಇದನ್ನೂ ಓದಿ: Shah Rukh Khan: ಶಾರುಖ್​ ಖಾನ್​ ಕಾಲು ಮುಟ್ಟಿ ನಮಸ್ಕರಿಸಿದ ಖ್ಯಾತ ನಿರ್ದೇಶಕ!

Continue Reading
Advertisement
Hassan Ali
ದೇಶ1 hour ago

Hassan Ali: ರಿಯಾಸಿ ಉಗ್ರರ ದಾಳಿ ಖಂಡಿಸಿದ ಪಾಕ್‌ ಕ್ರಿಕೆಟಿಗ ಹಸನ್‌ ಅಲಿ; ಆಲ್‌ ಐಸ್‌ ಆನ್‌ ವೈಷ್ಣೋದೇವಿ ಎಂದಿದ್ದೇಕೆ?

IND vs USA
ಪ್ರಮುಖ ಸುದ್ದಿ1 hour ago

IND vs USA: ಅರ್ಶದೀಪ್​ ಮಾರಕ ದಾಳಿಗೆ ಪತರುಗುಟ್ಟಿದ ಅಮೆರಿಕ; ಟೀಮ್​ ಇಂಡಿಯಾ ಸೂಪರ್​-8 ಪ್ರವೇಶ

disqualification for hanawala Gram Panchayat Vice President and Cancellation of membership ordered
ಕರ್ನಾಟಕ1 hour ago

Koppala News: ಹಣವಾಳ ಗ್ರಾ.ಪಂ ಉಪಾಧ್ಯಕ್ಷೆಗೆ ಅನರ್ಹತೆಯ ಶಿಕ್ಷೆ; ಸದಸ್ಯತ್ವ ರದ್ದುಗೊಳಿಸಿ ಆದೇಶ

Court Order
ದೇಶ2 hours ago

ಬಾಲಕಿಯ ಒಳ ವಸ್ತ್ರ ಕಳಚಿ ಬೆತ್ತಲೆಗೊಳಿಸುವುದು ಅತ್ಯಾಚಾರ ಯತ್ನವಲ್ಲ ಎಂದ ಹೈಕೋರ್ಟ್! ನಿಮ್ಮ ಅಭಿಪ್ರಾಯವೇನು?

Virat Kohli
ಕ್ರೀಡೆ2 hours ago

Virat Kohli: ಟಿ20 ವಿಶ್ವಕಪ್​ನಲ್ಲಿ ಮೊದಲ ಗೋಲ್ಡನ್​ ಡಕ್ ಸಂಕಟಕ್ಕೆ ಸಿಲುಕಿದ ವಿರಾಟ್​ ಕೊಹ್ಲಿ

Mumbai
ಪ್ರಮುಖ ಸುದ್ದಿ3 hours ago

300 ಕೋಟಿ ರೂ. ಆಸ್ತಿಗಾಗಿ 1 ಕೋಟಿ ರೂ. ಸುಪಾರಿ ಕೊಟ್ಟು ಮಾವನನ್ನೇ ಕೊಲ್ಲಿಸಿದ ದುಷ್ಟ ಸೊಸೆ!

ICC T20 Rankings
ಕ್ರೀಡೆ3 hours ago

ICC T20 Rankings: ಅಗ್ರಸ್ಥಾನದಲ್ಲೇ ಮುಂದುವರಿದ ಟೀಮ್​ ಇಂಡಿಯಾ; ಕುಸಿತ ಕಂಡ ಪಾಕ್

Rain News
ಪ್ರಮುಖ ಸುದ್ದಿ4 hours ago

Rain News: ವಿಜಯನಗರ, ಕೊಪ್ಪಳ ಜಿಲ್ಲೆಯಲ್ಲಿ ಮಳೆ ಆರ್ಭಟ; ಕೆರೆಯಂತಾದ ರಸ್ತೆಗಳು!

Chellagurki Shri Yerrithathanavara Maharathotsava in Ballari
ಧಾರ್ಮಿಕ4 hours ago

Ballari News: ಭಕ್ತಿ ಭಾವದಿಂದ ನಡೆದ ಚೇಳ್ಳಗುರ್ಕಿ ಶ್ರೀ ಎರ‍್ರಿತಾತ ಮಹಾರಥೋತ್ಸವ

Narendra Modi
ದೇಶ4 hours ago

Narendra Modi: ಆಂಧ್ರದಲ್ಲಿ ಮೆಗಾ ಸ್ಟಾರ್‌, ಪವರ್‌ ಸ್ಟಾರ್‌ ಜತೆ ‘ಪೊಲಿಟಿಕಲ್‌ ಸ್ಟಾರ್’‌ ಮೋದಿ; Video ನೋಡಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ1 day ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ1 day ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ1 day ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ1 day ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ2 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ5 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ5 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ1 week ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

ಟ್ರೆಂಡಿಂಗ್‌