ST Somashekhar: ಕಾಂಗ್ರೆಸ್‌ ಆಫರ್‌ ಇರುವುದು ನಿಜ; ಬಿಜೆಪಿಯಲ್ಲಿ ಕಡೆಗಣಿಸಿದರೆ ಹೋಗುವೆ: ಎಸ್‌.ಟಿ ಸೋಮಶೇಖರ್‌ ಸ್ಪಷ್ಟ ಹೇಳಿಕೆ - Vistara News

ಪ್ರಮುಖ ಸುದ್ದಿ

ST Somashekhar: ಕಾಂಗ್ರೆಸ್‌ ಆಫರ್‌ ಇರುವುದು ನಿಜ; ಬಿಜೆಪಿಯಲ್ಲಿ ಕಡೆಗಣಿಸಿದರೆ ಹೋಗುವೆ: ಎಸ್‌.ಟಿ ಸೋಮಶೇಖರ್‌ ಸ್ಪಷ್ಟ ಹೇಳಿಕೆ

ST somashekar: ಬಿಜೆಪಿ ನಾಯಕ ಎಸ್‌ಟಿ ಸೋಮಶೇಖರ್‌ ಅವರು ಕಾಂಗ್ರೆಸ್‌ ಕಡೆ ಒಲವು ಹೊಂದಿರುವುದನ್ನು ಒಪ್ಪಿಕೊಂಡಿದ್ದಾರೆ.

VISTARANEWS.COM


on

ST somashekar
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ತಮಗೆ ಕಾಂಗ್ರೆಸ್‌ನಿಂದ (Congress) ಆಫರ್‌ ಇರುವುದು ನಿಜ. ಭಾರತೀಯ ಜನತಾ ಪಕ್ಷದಲ್ಲಿ (BJP) ತಮ್ಮ ಕಡೆಗಣನೆ ಮುಂದುವರಿದರೆ ತಾವು ಅತ್ತ ತೆರಳುವುದಾಗಿ ಬಿಜೆಪಿ ಮುಖಂಡ, ಯಶವಂತಪುರ ಶಾಸಕ ಎಸ್.ಟಿ ಸೋಮಶೇಖರ್ (ST Somashekhar) ಸ್ಪಷ್ಟವಾಗಿ ಹೇಳಿದ್ದಾರೆ.

ವಿಸ್ತಾರ ನ್ಯೂಸ್ (Vistara News) ಜೊತೆಗೆ ಮಾತನಾಡುತ್ತ ಮಾಜಿ ಸಚಿವ ಈ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ಅವರು ಡಿ.ಕೆ ಶಿವಕುಮಾರ್‌ (DK Shivakumar) ಮುಂತಾದ ಕಾಂಗ್ರೆಸ್‌ ನಾಯಕರ ಜೊತೆಗೆ ಹೆಚ್ಚು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಹಾಗೂ ಬಿಜೆಪಿಯ ಕಾರ್ಯಕ್ರಮಗಳಿಗೆ ಗೈರುಹಾಜರಾಗುತ್ತಿರುವ ಹಿನ್ನೆಲೆಯಲ್ಲಿ ಸೋಮಶೇಖರ್‌ ಕಾಂಗ್ರೆಸ್‌ ಸೇರ್ಪಡೆಯ ಬಗ್ಗೆ ಚರ್ಚೆಯಾಗುತ್ತಿದೆ.

“ನನಗೆ ಕಾಂಗ್ರೆಸ್‌ನಿಂದ ಆಫರ್ ಇರುವುದು ನಿಜ. ಬೆಳಗಾವಿ ಅಧಿವೇಶನ ನಡೆಯುವಾಗ ನನ್ನನ್ನೂ ಸೇರಿದಂತೆ ಐದು ಜನರನ್ನು ಕರೆದಿದ್ದರು. ನೀವು ಐದು ಜನರು ಕಾಂಗ್ರೆಸ್‌ಗೆ ಬಂದರೆ ಒಳ್ಳೆಯ ಭವಿಷ್ಯ ಇದೆ ಎಂದು ಹೇಳಿದ್ದರು. ನಾನು ಕಾಂಗ್ರೆಸ್‌ನಲ್ಲಿ ಹಲವು ವರ್ಷಗಳ ಕಾಲ ದುಡಿದಿದ್ದೇನೆ. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಪರಮೇಶ್ವರ್ ಅವರು ಹೇಳಿದ ಪಕ್ಷದ ಕೆಲಸ ಮಾಡಿದ್ದೇನೆ. ಹೀಗಾಗಿ ಪಕ್ಷಕ್ಕೆ ಬನ್ನಿ ಎಂದು ಕರೆದರು. ಆದರೆ ನನಗೆ ಬಿಜೆಪಿ ಬಿಡುವ ಮನಸ್ಸು ಇಲ್ಲ” ಎಂದು ಸೋಮಶೇಖರ್‌ ಹೇಳಿದ್ದಾರೆ.

“ಆದರೆ ನನ್ನ ಕ್ಷೇತ್ರದಲ್ಲಿ ಕೆಲವು ಬಿಜೆಪಿ ಮುಖಂಡರು ನನ್ನ ವಿರುದ್ಧ ಇದ್ದಾರೆ. ನನ್ನನ್ನು ಸೋಲಿಸಬೇಕು ಎಂದು ಮಾತನಾಡ್ತಾರೆ. ಅಂತಹವರ ಬಗ್ಗೆ ಪಕ್ಷದ ರಾಜ್ಯಾಧ್ಯಕ್ಷ ವಿಜೇಯೇಂದ್ರ ಮತ್ತು ವಿಪಕ್ಷ ನಾಯಕ ಅಶೋಕ್ ಅವರಿಗೆ ಮಾಹಿತಿ ನೀಡಿದ್ದೇನೆ. ಪಕ್ಷದಲ್ಲಿ ನಮ್ಮನ್ನು ಪರಿಗಣಿಸದಿದ್ದರೆ ನಮ್ಮ ದಾರಿ ನಾವು ನೋಡಿಕೊಳ್ಳುತ್ತೇವೆ. ಸಮಸ್ಯೆ ಬಗೆಹರಿಸದಿದ್ದರೆ ಪಕ್ಷ ಬಿಡುವ ನಿರ್ಧಾರ ಮಾಡುತ್ತೇನೆ” ಎಂದಿದ್ದಾರೆ.

“ವಿಜಯೇಂದ್ರ ಅವರ ತಂದೆ ಸಿಎಂ ಆಗಿದ್ದಾಗಲೂ ನಮ್ಮನ್ನು ಸರಿಯಾಗಿ ನಡೆಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಇರುವ ಕೆಲ ಕಾರ್ಯಕರ್ತರು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಲೋಕಸಭಾ ಟಿಕೆಟ್ ಆಕಾಂಕ್ಷಿ ಅಲ್ಲ. ನನ್ನ ಮಗ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದಾನೆ. ಮಗನಿಗಾಗಿ ಲೋಕಸಭಾ ಟಿಕೆಟ್ ಆಕಾಂಕ್ಷಿ ಅನ್ನೋದು ತಪ್ಪು. ನನ್ನ ಸಮಸ್ಯೆ ಬಗೆಹರಿಸದಿದ್ದರೆ ನನ್ನ ತೀರ್ಮಾನ ನಾನು ತೆಗೆದುಕೊಳ್ಳಬೇಕಾಗುತ್ತೆʼʼ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Power Point with HPK : ಎಸ್‌ಟಿ ಸೋಮಶೇಖರ್‌, ಭೈರತಿ ಬಸವರಾಜ್‌ಗೆ ಕಾಂಗ್ರೆಸ್‌ನಿಂದ ಬ್ಲ್ಯಾಕ್‌ಮೇಲ್‌!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IPL 2024 : ವಿನೂತನ ದಾಖಲೆಯ ಹೊಸ್ತಿಲಲ್ಲಿ ವಿರಾಟ್​ ಕೊಹ್ಲಿ; ಇಲ್ಲಿದೆ ಅದರ ವಿವರ

IPL 2024: ಸತತ ಆರು ಸೋಲುಗಳ ನಂತರ ಬೆಂಗಳೂರು ಮೂಲದ ತಂಡದ ಚೇತರಿಕೆಯಲ್ಲಿ 35 ವರ್ಷದ ಬ್ಯಾಟ್ಸ್ಮನ್ ನಿರ್ಣಾಯಕ ಪಾತ್ರ ವಹಿಸಿದ್ದರು. ಫಾಫ್ ಡು ಪ್ಲೆಸಿಸ್ ನೇತೃತ್ವದ ತಂಡವು ಸತತ ಆರು ಗೆಲುವುಗಳನ್ನು ಗಳಿಸಿ ಐಪಿಎಲ್ 2024 ರ ಪ್ಲೇಆಫ್ ಹಂತವನ್ನು ತಲುಪಿದೆ. ಬೆಂಗಳೂರು 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಮತ್ತು +0.459 ನೆಟ್ ರನ್ ರೇಟ್ (ಎನ್ಆರ್ಆರ್) ಹೊಂದಿದೆ.

VISTARANEWS.COM


on

Virat Kohli
Koo

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ (IPL 2024) ರಾಜಸ್ಥಾನ್ ರಾಯಲ್ಸ್ (Rajasthan Royals ) ವಿರುದ್ಧದ ‘ಎಲಿಮಿನೇಟರ್’ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಇತಿಹಾಸ ನಿರ್ಮಿಸುವ ಹೊಸ್ತಿಲಲ್ಲಿದ್ದಾರೆ. ಐಪಿಎಲ್ 2024 ರ ಎಲಿಮಿನೇಟರ್​ ಪಂದ್ಯದಲ್ಲಿ ವಿರಾಟ್ ಕೊಹ್ಲಿಗೆ ಬೃಹತ್ ಬ್ಯಾಟಿಂಗ್ ಮೈಲಿಗಲ್ಲನ್ನು ಸಾಧಿಸುವ ಅವಕಾಶವಿದೆ.

ವಿರಾಟ್ ಕೊಹ್ಲಿ ಆಟದ ಕಿರು ಸ್ವರೂಪದಲ್ಲಿ ತಮ್ಮ ಸ್ಟ್ರೈಕ್ ರೇಟ್ ಪ್ರಶ್ನಿಸಿದ ಟೀಕಾಕಾರರನ್ನು ಈಗಾಗಲೇ ಮೌನಗೊಳಿಸಿದ್ದಾರೆ. ಬಲಗೈ ಬ್ಯಾಟರ್​ ಪ್ರಸ್ತುತ ನಡೆಯುತ್ತಿರುವ ಐಪಿಎಲ್ ಋತುವಿನಲ್ಲಿ ‘ಆರೆಂಜ್ ಕ್ಯಾಪ್’ ಹೊಂದಿದ್ದಾರೆ. ಅವರು 14 ಇನ್ನಿಂಗ್ಸ್​​ಗಳಲ್ಲಿ 64.36 ಸರಾಸರಿ ಮತ್ತು 155.60 ಸ್ಟ್ರೈಕ್ ರೇಟ್​​ನಲ್ಲಿ 708 ರನ್ ಗಳಿಸಿದ್ದಾರೆ. ಅವರು ಒಂದು ಶತಕ ಮತ್ತು ಐದು ಅರ್ಧಶತಕಗಳನ್ನು ಬಾರಿಸಿದ್ದಾರೆ.

ಸತತ ಆರು ಸೋಲುಗಳ ನಂತರ ಬೆಂಗಳೂರು ಮೂಲದ ತಂಡದ ಚೇತರಿಕೆಯಲ್ಲಿ 35 ವರ್ಷದ ಬ್ಯಾಟ್ಸ್ಮನ್ ನಿರ್ಣಾಯಕ ಪಾತ್ರ ವಹಿಸಿದ್ದರು. ಫಾಫ್ ಡು ಪ್ಲೆಸಿಸ್ ನೇತೃತ್ವದ ತಂಡವು ಸತತ ಆರು ಗೆಲುವುಗಳನ್ನು ಗಳಿಸಿ ಐಪಿಎಲ್ 2024 ರ ಪ್ಲೇಆಫ್ ಹಂತವನ್ನು ತಲುಪಿದೆ. ಬೆಂಗಳೂರು 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಮತ್ತು +0.459 ನೆಟ್ ರನ್ ರೇಟ್ (ಎನ್ಆರ್ಆರ್) ಹೊಂದಿದೆ.

ಅಹ್ಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರ್​ಸಿಬಿ ತಂಡ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಆರ್​ಸಿಬಿ ತನ್ನ ಗೆಲುವಿನ ಹಾದಿಯನ್ನು ವಿಸ್ತರಿಸಲು ಮತ್ತು ಕ್ವಾಲಿಫೈಯರ್ 2 ಅನ್ನು ತಲುಪಲು ಯೋಜನೆ ರೂಪಿಸಿದೆ. ಸ್ಯಾಮ್ಸನ್ ನೇತೃತ್ವದ ತಂಡವು ಕಳೆದ ಐದು ಪಂದ್ಯಗಳಲ್ಲಿ ನಾಲ್ಕು ಸೋಲುಗಳನ್ನು ಅನುಭವಿಸಿದೆ ಮತ್ತು ಒಂದು ಮಳೆಯಿಂದಾಗಿ ರದ್ದಾಗಿದೆ.

ವಿಶ್ವ ದಾಖಲೆ ಬರೆಯಲು ವಿರಾಟ್ ಕೊಹ್ಲಿಗೆ 29 ರನ್​ಗಳ ಅಗತ್ಯ


ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ 8,000 ರನ್ ಗಳಿಸಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಲು ವಿರಾಟ್ ಕೊಹ್ಲಿಗೆ ಕೇವಲ 29 ರನ್ ಅಗತ್ಯವಿದೆ. ಅನುಭವಿ ಬ್ಯಾಟರ್​​ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಅವರು 38.69 ರ ಪ್ರಭಾವಶಾಲಿ ಸರಾಸರಿ ಮತ್ತು 131.94 ಸ್ಟ್ರೈಕ್ ರೇಟ್​​ನಲ್ಲಿ 7971 ರನ್ ಗಳಿಸಿದ್ದಾರೆ ಇದರಲ್ಲಿ 8 ಶತಕಗಳು ಮತ್ತು 55 ಅರ್ಧಶತಕಗಳು ಸೇರಿವೆ.

ಇದನ್ನೂ ಓದಿ: IPL 2024 : ರಮೇಶ್​ ಪವಾರ್​​ ಸೃಷ್ಟಿಸಿದ್ದ 16 ವರ್ಷಗಳ ಹಿಂದಿ ದಾಖಲೆ ಮುರಿದ ಎಸ್​ಆರ್​​ಎಚ್​​ ನಾಯಕ

222 ಪಂದ್ಯಗಳಲ್ಲಿ 35.25ರ ಸರಾಸರಿಯಲ್ಲಿ 6769 ರನ್ ಗಳಿಸಿರುವ ಶಿಖರ್ ಧವನ್ ಎರಡನೇ ಸ್ಥಾನದಲ್ಲಿದ್ದರೆ, ರೋಹಿತ್ ಶರ್ಮಾ, ಡೇವಿಡ್ ವಾರ್ನರ್ ಮತ್ತು ಸುರೇಶ್ ರೈನಾ ನಂತರದ ಸ್ಥಾನದಲ್ಲಿದ್ದಾರೆ. ಈ ಬ್ಯಾಟ್ಸ್ಮನ್ಗಳು ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ದಾಖಲೆ ಮುರಿಯುವ ಸಾಧ್ಯತೆಯಿಲ್ಲ.

ವಿರಾಟ್ ಕೊಹ್ಲಿ ಮೂರು ಬಾರಿ (2009, 2011 ಮತ್ತು 2016 ರಲ್ಲಿ) ಐಪಿಎಲ್ ಫೈನಲ್ ತಲುಪಿದ್ದಾರೆ. 2016ರಲ್ಲಿ ಕೊಹ್ಲಿ 16 ಪಂದ್ಯಗಳಲ್ಲಿ 81ರ ಸರಾಸರಿಯಲ್ಲಿ 973 ರನ್ ಗಳಿಸಿದ್ದರು. 113 ಅವರ ಅತ್ಯುತ್ತಮ ಸ್ಕೋರ್ ನೊಂದಿಗೆ ನಾಲ್ಕು ಶತಕಗಳು ಮತ್ತು ಏಳು ಅರ್ಧಶತಕಗಳನ್ನು ಬಾರಿಸಿದ್ದರು.

ಐಪಿಎಲ್​​ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ತಮ್ಮದೇ ದಾಖಲೆಯನ್ನು ಮುರಿಯಲು ಏಸ್ ಬ್ಯಾಟರ್​ಗೆ ಇನ್ನೂ 266 ರನ್​ಗಳ ಅಗತ್ಯಿವಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಫೈನಲ್​ ತಲುಪಿದರೆ ಒಟ್ಟು ಮೂರು ಪಂದ್ಯಗಳು ಬಾಕಿ ಉಳಿದಿದ್ದು, ಫೈನಲ್ ತಲುಪಿದರೆ ಈ ಮೈಲಿಗಲ್ಲನ್ನು ತಲುಪುವ ಅವಕಾಶವಿದೆ.

Continue Reading

ಕರ್ನಾಟಕ

Prajwal Revanna Case: ನಿಖಿಲ್ ಎಲ್ಲಿದ್ದೀಯಪ್ಪಾ ಎಂದಿದ್ದಾಯ್ತು, ಈಗ ಪ್ರಜ್ವಲ್ ಎಲ್ಲಿದ್ದೀಯಪ್ಪಾ ಎನ್ನುತ್ತಿದ್ದಾರೆ ಬ್ರದರ್ ಸ್ವಾಮಿಗಳು!

Prajwal Revanna Case: ಈ ಬಗ್ಗೆ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌, ಪ್ರಜ್ವಲ್‌ ಇರುವಿಕೆ ಬಗ್ಗೆ ಎಚ್‌ಡಿಕೆಗೆ ಪ್ರಶ್ನೆ ಮಾಡಿದೆ. ಈ ಹಿಂದೆ ಸಿನಿಮಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು “ನಿಖಿಲ್ ಎಲ್ಲಿದ್ದೀಯಪ್ಪಾ“ ಎಂದು ಕೇಳಿದ್ದ ಮಾತು ಚುನಾವಣೆ ವೇಳೆ ಸಾಕಷ್ಟು ಟ್ರೋಲ್‌ಗೊಳಗಾಗಿತ್ತು. ಈಗ ಆ ಮಾತನ್ನೇ ಬದಲಿಸಿ ”ಪ್ರಜ್ವಲ್ ಎಲ್ಲಿದ್ದೀಯಪ್ಪಾ” ಎನ್ನುತ್ತಿದ್ದಾರೆ ಬ್ರದರ್ ಸ್ವಾಮಿಗಳು!” ಎಂದು ಕಾಂಗ್ರೆಸ್‌ ಕುಟುಕಿದೆ.

VISTARANEWS.COM


on

Koo

ಬೆಂಗಳೂರು: ಲೈಂಗಿಕ ದೌರ್ಜನ್ಯ ಕೇಸ್‌ನಡಿ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna Case) ವಿಚಾರವಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರನ್ನು ರಾಜ್ಯ ಕಾಂಗ್ರೆಸ್‌ ಕುಟುಕಿದೆ. “ನಿಖಿಲ್ ಎಲ್ಲಿದ್ದೀಯಪ್ಪಾ“ ಎಂದಿದ್ದಾಯ್ತು, ಈಗ ”ಪ್ರಜ್ವಲ್ ಎಲ್ಲಿದ್ದೀಯಪ್ಪಾ” ಎನ್ನುತ್ತಿದ್ದಾರೆ ಬ್ರದರ್ ಸ್ವಾಮಿಗಳು!” ಎಂದು ಕಾಂಗ್ರೆಸ್‌ ವ್ಯಂಗ್ಯವಾಡಿದೆ.

ಈ ಬಗ್ಗೆ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌, ಪ್ರಜ್ವಲ್‌ ಇರುವಿಕೆ ಬಗ್ಗೆ ಎಚ್‌ಡಿಕೆಗೆ ಪ್ರಶ್ನೆ ಮಾಡಿದೆ. ಈ ಹಿಂದೆ ಸಿನಿಮಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು “ನಿಖಿಲ್ ಎಲ್ಲಿದ್ದೀಯಪ್ಪಾ“ ಎಂದು ಕೇಳಿದ್ದ ಮಾತು ಚುನಾವಣೆ ವೇಳೆ ಸಾಕಷ್ಟು ಟ್ರೋಲ್‌ಗೊಳಗಾಗಿತ್ತು. ಈಗ ಆ ಮಾತನ್ನೇ ಬದಲಿಸಿ ”ಪ್ರಜ್ವಲ್ ಎಲ್ಲಿದ್ದೀಯಪ್ಪಾ” ಎನ್ನುತ್ತಿದ್ದಾರೆ ಬ್ರದರ್ ಸ್ವಾಮಿಗಳು!” ಎಂದು ಕಾಂಗ್ರೆಸ್‌ ಕುಟುಕಿದೆ.

ಕಾಂಗ್ರೆಸ್‌ ಪೋಸ್ಟ್‌ನಲ್ಲೇನಿದೆ?

“ನಿಖಿಲ್ ಎಲ್ಲಿದ್ದೀಯಪ್ಪಾ “ ಎಂದಿದ್ದಾಯ್ತು, ಈಗ ”ಪ್ರಜ್ವಲ್ ಎಲ್ಲಿದ್ದೀಯಪ್ಪಾ” ಎನ್ನುತ್ತಿದ್ದಾರೆ ಬ್ರದರ್ ಸ್ವಾಮಿಗಳು!” ಮಾಧ್ಯಮಗಳ ಮುಂದೆ ನಾಟಕ ಆಡುವ ಬ್ರದರ್ ಸ್ವಾಮಿಗಳಿಗೆ ಪ್ರಜ್ವಲ್ ಎಲ್ಲಿದ್ದಾನೆ? ಯಾರ ಸಖ್ಯದಲ್ಲಿದ್ದಾನೆ ಎಂಬ ಮಾಹಿತಿ ತಿಳಿದಿಲ್ಲವೇ? ತಿಳಿದಿಲ್ಲ ಎನ್ನುವುದು ಶತಮಾನದ ಜೋಕ್! ಬ್ರದರ್ ಸ್ವಾಮಿಗಳಿಗೆ ನಿಜಕ್ಕೂ ಕಳಕಳಿ ಇದ್ದರೆ ಎಸ್ಐಟಿಗೆ ಮಾಹಿತಿ ನೀಡಲಿ. ಇಂತಹ ನಾಟಕ ಮಾಡುವುದನ್ನು ಬಿಡಲಿ” ಎಂದು ಕಾಂಗ್ರೆಸ್ ಕಿಡಿಕಾರಿದೆ.

400 ಮಹಿಳೆಯರ ಮೇಲೆ ಪ್ರಜ್ವಲ್‌ ಮಾಸ್‌ ರೇಪ್‌ ಆರೋಪ; ರಾಹುಲ್ ಗಾಂಧಿ ವಿರುದ್ಧ ಡಿಜಿಗೆ ಜೆಡಿಎಸ್‌ ದೂರು

ನಾನೂರು ಮಹಿಳೆಯರ ಮೇಲೆ ಪ್ರಜ್ವಲ್ ರೇವಣ್ಣ (Prajwal Revanna Case) ಮಾಸ್ ರೇಪ್ ಮಾಡಿದ್ದಾರೆ ಎಂದು ಬಹಿರಂಗ ಸಭೆಗಳ ಭಾಷಣದಲ್ಲಿ ಹೇಳಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಜೆಡಿಎಸ್ (JDS Karnataka) ದೂರು ನೀಡಿದೆ. ಈ ಸಂಬಂಧ ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಪಕ್ಷ ಒತ್ತಾಯ ಮಾಡಿದೆ.

ಜವಾಬ್ದಾರಿಯುತ ಸ್ಥಾನದಲ್ಲಿರುವ ರಾಹುಲ್ ಗಾಂಧಿ ಅವರು ಶಿವಮೊಗ್ಗ ಹಾಗೂ ರಾಯಚೂರಿನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಬಹಿರಂಗ ಸಭೆಗಳಲ್ಲಿ ಮಾಸ್ ರೇಪ್ ಬಗ್ಗೆ ಹೇಳಿದ್ದರು. ಇದೇ ಮಾಹಿತಿಯನ್ನು ಮಾಧ್ಯಮಗಳ ಮುಂದೆಯೂ ನೀಡಿದ್ದಾರೆ. ಹೀಗಾಗಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ರಾಹುಲ್‌ ಗಾಂಧಿಗೆ ಎಸ್‌ಐಟಿ ಸಮನ್ಸ್ ಜಾರಿ ಮಾಡಬೇಕು ಎಂದು ಜೆಡಿಎಸ್ ಒತ್ತಾಯ ಮಾಡಿದೆ.

ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಚ್.ಎಂ. ರಮೇಶ್ ಗೌಡ, ವಿಧಾನ ಪರಿಷತ್ ಸದಸ್ಯ ಕೆ.ಎ. ತಿಪ್ಪೇಸ್ವಾಮಿ, ಮಂಜೇಗೌಡ, ಪರಿಷತ್ ಮಾಜಿ ಸದಸ್ಯ ಚೌಡರೆಡ್ಡಿ ತೂಪಲ್ಲಿ, ಜೆಡಿಎಸ್ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ.ಪಿ. ರಂಗನಾಥ್, ಬೆಂಗಳೂರು ನಗರದ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಎಸ್.ರಮೇಶ್ ಅವರಿದ್ದ ನಿಯೋಗ ಬುಧವಾರ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದರು.

ದೂರಿನಲ್ಲಿ ಇನ್ನೇನು ಇದೆ?

ಎಚ್.ಎಂ. ರಮೇಶ್ ಗೌಡ ಸಹಿ ಹಾಕಿರುವ ದೂರಿನಲ್ಲಿ ರಾಹುಲ್ ಗಾಂಧಿ ವಿರುದ್ಧ ಅನೇಕ ಗಂಭೀರ, ಗುರುತರ ಆರೋಪಗಳನ್ನು ಮಾಡಲಾಗಿದೆ.

ಕಾಂಗ್ರೆಸ್ ನಾಯಕ, ವಯನಾಡು ಲೋಕಸಭಾ ಕ್ಷೇತ್ರದ ಸಂಸದ ರಾಹುಲ್ ಗಾಂಧಿ ಅವರು, ಪ್ರಜ್ವಲ್ ರೇವಣ್ಣ 400 ಮಹಿಳೆಯರ ಮೇಲೆ ಮಾಸ್ ರೇಪ್ ಮಾಡಿ ಅದನ್ನು ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಇದು ಕೇವಲ ಅತ್ಯಾಚಾರ ಅಷ್ಟೇ ಅಲ್ಲ, ಇದೊಂದು ಸಾಮೂಹಿಕ ಅತ್ಯಾಚಾರ. ಒಬ್ಬ ಮಾಸ್ ರೇಪಿಸ್ಟ್ ಪರ ಪ್ರಧಾನಿ ನರೇಂದ್ರ ಮೋದಿ ಅವರು ಮತ ಯಾಚಿಸಿರುವುದು ಇಡೀ ಜಗತ್ತಿಗೆ ಗೊತ್ತಾಗಿದೆ ಎಂದು ಇದೇ ಮೇ 2ರಂದು ಹೇಳಿಕೆ ನೀಡಿದ್ದರು.

ರಾಹುಲ್ ಗಾಂಧಿ ಅವರ ಹೇಳಿಕೆ, ಭಾಷಣ ಎಲ್ಲವೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಮುದ್ರಣ ಮಾಧ್ಯಮದಲ್ಲಿಯೂ ವರದಿಯಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶಕರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದ್ದು, ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಲ್ಲಿಸಿದೆ.

400 ಮಹಿಳೆಯರ ಮಾಹಿತಿ ರಾಹುಲ್‌ ಗಾಂಧಿಗೆ ಇದೆ!

ನೊಂದ ಮಹಿಳೆಯರ ನ್ಯಾಯ ಕೊಡಿಸುವುದನ್ನು ಕಡೆಗಣಿಸಿ ಒಬ್ಬ ಜನಪ್ರತಿನಿಧಿಯಾಗಿ ರಾಹುಲ್ ಗಾಂಧಿ ಅವರು ಇಂಥ ಹೇಳಿಕೆ ನೀಡಿರುವುದು ಕಾನೂನು ಉಲ್ಲಂಘನೆ ಆಗಿರುತ್ತದೆ. ನಾನೂರು ಮಹಿಳೆಯರ ಮೇಲೆ ಮಾಸ್ ರೇಪ್ ಆಗಿರುವ ಬಗ್ಗೆ ರಾಹುಲ್ ಗಾಂಧಿ ಅವರಿಗೆ ಎಲ್ಲ ಮಾಹಿತಿ ಇದೆ. ಜತೆಗೆ ಅತ್ಯಾಚಾರಕ್ಕೆ ತುತ್ತಾದ ಅಷ್ಟೂ ಮಹಿಳೆಯರ ಮಾಹಿತಿ ಅವರಲ್ಲಿ ಇದೆ ಎನ್ನುವುದು ಅವರದೇ ಹೇಳಿಕೆಯಿಂದ ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 1860ರ ಅಡಿಯಲ್ಲಿ ಕೇಸ್ ದಾಖಲಿಸಬೇಕು ಎಂದು ಪೊಲೀಸ್ ಮಹಾ ನಿರ್ದೇಶಕರಲ್ಲಿ ಜೆಡಿಎಸ್ ಪಕ್ಷ ಒತ್ತಾಯ ಮಾಡಿದೆ.

ರಾಜ್ಯ ಸರ್ಕಾರವೂ ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (SIT) ರಚನೆ ಮಾಡಿದ್ದು, ಕೂಡಲೇ ಈ ತಂಡವು ರಾಹುಲ್ ಗಾಂಧಿ ಅವರಿಗೆ ಸಮನ್ಸ್ ಜಾರಿ ಮಾಡಿ ಇಲ್ಲಿಗೆ ಕರೆಸಬೇಕು. ನಾನೂರು ಮಹಿಳೆಯರು ಎಂದು ತಪ್ಪು ಮಾಹಿತಿ ನೀಡಿ, ಸಮಾಜಕ್ಕೆ ಕೆಟ್ಟ ಸಂದೇಶ ಹೋಗುವಂತೆ ಮಾಡಿದ ಅವರ ವಿರುದ್ಧ ಕೂಡಲೇ ಸೆಕ್ಷನ್ 202, 1860ರ ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಜೆಡಿಎಸ್ ಆಗ್ರಹಪಡಿಸಿದೆ.

ಇದನ್ನೂ ಓದಿ: Nandini Milk: ಹಾಲು ಉತ್ಪಾದಿಸಿದ ರೈತರಿಗಿಲ್ಲ ಹಣ; ವಿದೇಶಿ ಕ್ರಿಕೆಟ್‌ ಟೀಂಗೆ ಪ್ರಾಯೋಜಕತ್ವ: ಸರ್ಕಾರದ ವಿರುದ್ಧ ಅಶೋಕ್‌ ಗರಂ

ಅಲ್ಲದೆ, ಪೆನ್ ಡ್ರೈವ್ ಹಂಚಿಕೆಯ ಬಗ್ಗೆಯೂ ಜೆಡಿಎಸ್ ಡಿಜಿ ಅವರ ಜತೆ ಮಾತುಕತೆ ನಡೆಸಿತು. ಎಸ್‌ಐಟಿ ಏಕಪಕ್ಷೀಯವಾಗಿ ತನಿಖೆ ನಡೆಸುತ್ತಿದೆ. ಪ್ರಜ್ವಲ್ ಪ್ರಕರಣಕ್ಕೆ ಸಂಬಂಧಿಸಿ ನಮ್ಮ ಪಕ್ಷದ ಕಾರ್ಯಕರ್ತರಿಗೆ ವಿನಾಕಾರಣ ಕಿರುಕುಳ ನೀಡುತ್ತಿದೆ. ಆದರೆ, ಪೆನ್ ಡ್ರೈವ್ ಹಂಚಿಕೆ ಆರೋಪಿಗಳ ಬಗ್ಗೆ ಮೌನ ವಹಿಸಿದೆ. ನ್ಯಾಯಾಲಯ ಜಾಮೀನು ನಿರಾಕರಿಸಿದ್ದರೂ ಈವರೆಗೆ ಅವರನ್ನು ಎಸ್ ಐಟಿ ಬಂಧನ ಮಾಡಿಲ್ಲ ಎಂದು ನಿಯೋಗ ದೂರಿತು.

Continue Reading

ಕ್ರೀಡೆ

IPL 2024 : ರಮೇಶ್​ ಪವಾರ್​​ ಸೃಷ್ಟಿಸಿದ್ದ 16 ವರ್ಷಗಳ ಹಿಂದಿ ದಾಖಲೆ ಮುರಿದ ಎಸ್​ಆರ್​​ಎಚ್​​ ನಾಯಕ

IPL 2024:ರಾತ್ರಿ ನಡೆದ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಪ್ಯಾಟ್ ಕಮಿನ್ಸ್ ರಮೇಶ್ ಪವಾರ್ ಅವರ 16 ವರ್ಷಗಳ ಹಳೆಯ ಇಂಡಿಯನ್ ಪ್ರೀಮಿಯರ್ ಲೀಗ್ ದಾಖಲೆಯನ್ನು ಮುರಿದರು. ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಕೊಚ್ಚಿ ಟಸ್ಕರ್ಸ್ ಕೇರಳವನ್ನು ಪ್ರತಿನಿಧಿಸಿದ್ದ ಮಾಜಿ ಬಲಗೈ ಆಫ್-ಸ್ಪಿನ್ನರ್, ಕೆಳ ಕ್ರಮಾಂಕದ ಬ್ಯಾಟ್ಸ್ಮನ್ ಆಗಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿದ್ದರು. ಅದನ್ನು ಕಮಿನ್ಸ್​ ಮುರಿದಿದ್ದಾರೆ.

VISTARANEWS.COM


on

IPL 2024
Koo

ಅಹಮದದಾಬಾದ್: ಸನ್​ರೈಸರ್ಸ್​ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಭಾರತದ ಮಾಜಿ ಆಫ್ ಸ್ಪಿನ್ನರ್ ರಮೇಶ್ ಪವಾರ್ (Ramesh Pawar) ಅವರ ದೀರ್ಘಕಾಲದ ಐಪಿಎಲ್ ದಾಖಲೆಯೊಂದನ್ನು ಭೇದಿಸಿದ್ದಾರೆ ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ 2024ರ (IPL 2024 ) ಮೊದಲ ಕ್ವಾಲಿಫೈಯರ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ 16 ವರ್ಷಗಳ ಹಿಂದೆ ಸೃಷ್ಟಿಯಾಗಿದ್ದ ದಾಖಲೆಯನ್ನು ಮುರಿದಿದ್ದಾರೆ. ಐಪಿಎಲ್ 2024 ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಈ ಹಣಾಹಣಿಯಲ್ಲಿ ಸೋಲಿಸಿದೆ.

ರಾತ್ರಿ ನಡೆದ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಪ್ಯಾಟ್ ಕಮಿನ್ಸ್ ರಮೇಶ್ ಪವಾರ್ ಅವರ 16 ವರ್ಷಗಳ ಹಳೆಯ ಇಂಡಿಯನ್ ಪ್ರೀಮಿಯರ್ ಲೀಗ್ ದಾಖಲೆಯನ್ನು ಮುರಿದರು. ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಪಂಜಾಬ್ ಕಿಂಗ್ಸ್ ಮತ್ತು ಕೊಚ್ಚಿ ಟಸ್ಕರ್ಸ್ ಕೇರಳವನ್ನು ಪ್ರತಿನಿಧಿಸಿದ್ದ ಮಾಜಿ ಬಲಗೈ ಆಫ್-ಸ್ಪಿನ್ನರ್, ಕೆಳ ಕ್ರಮಾಂಕದ ಬ್ಯಾಟ್ಸ್ಮನ್ ಆಗಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿದ್ದರು. ಅದನ್ನು ಕಮಿನ್ಸ್​ ಮುರಿದಿದ್ದಾರೆ.

ಐಪಿಎಲ್​ ನಾಕೌಟ್ ಸುತ್ತುಗಳಲ್ಲಿ ರಮೇಶ್ ಪವಾರ್ 9 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಗಳಿಸಿದ್ದರು. ಉದ್ಘಾಟನಾ ಐಪಿಎಲ್ 2008 ಆವೃತ್ತಿಯ 2 ನೇ ಸೆಮಿಫೈನಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಪರ ಆಡುವಾಗ, ಪವಾರ್ 9 ನೇ ಕ್ರಮಾಂಕದಲ್ಲಿ 28* ರನ್ ಗಳಿಸಿದ್ದರು.

ಆ ಕ್ರಮಾಂಕದಲ್ಲಿ ಭಾರತದ ಮಾಜಿ ಆಟಗಾರ ಗಳಿಸಿದ ರನ್​ ಕಳೆದ ರಾತ್ರಿಯವರೆಗೆ ಯಾವುದೇ ಆಟಗಾರನ ಅತ್ಯಧಿಕ ರನ್ ಆಗಿದೆ. ಎಸ್ಆರ್​ ಎಚ್ ಬ್ಯಾಟರ್​​ಗಳ ಕಳಪೆ ಆರಂಭದ ನಂತರ ಕೊನೇ ಕ್ರಮಾಂಕದಲ್ಲಿ ಪ್ಯಾಟ್ ಕಮಿನ್ಸ್ ಕೆಕೆಆರ್ ವಿರುದ್ಧ 30 ಪ್ರಮುಖ ರನ್ ಗಳಿಸಿದರು.

ಪ್ಯಾಟ್​ ಹೊರಾಟ ವ್ಯರ್ಥ

ಪ್ಯಾಟ್ ಕಮಿನ್ಸ್ ಅವರ ಬ್ಯಾಟ್​ನಿಂದ ಮೂಡಿ ಬಂದ ಆ 30 ರನ್​ಗಳು ಅವರ ತಂಡಕ್ಕೆ ಪ್ರಯೋಜನಕಾರಿಯಾಗಲಿಲ್ಲ. ಇದು ಐಪಿಎಲ್ ದಾಖಲೆಯನ್ನು ಮುರಿಯಲು ಸಹಾಯ ಮಾಡಿತು. ಇಂಪ್ಯಾಕ್ಟ್ ಆಟಗಾರ ಸನ್ವೀರ್ ಸಿಂಗ್ ಗೋಲ್ಡನ್ ಡಕ್​ ಆಗಿ ನಿರ್ಗಮಿಸಿದ ನಂತರ ಕ್ರೀಸ್​ಗೆ ಆಗಮಿಸಿದ ಪ್ಯಾಟ್ ಕಮಿನ್ಸ್ 24 ಎಸೆತಗಳಲ್ಲಿ 125 ಸ್ಟ್ರೈಕ್​ರೇಟ್​ನಲ್ಲಿ 30 ರನ್ ಗಳಿಸಿದರು. ಇದು ಎಸ್ಆರ್​ಎಚ್​ ತಂಡಕ್ಕೆ ಇನ್ನಿಂಗ್ಸ್ ಅನ್ನು 159 ರನ್​​ ಗೆ ಮುಕ್ತಾಯಗೊಳಿಸಲು ನೆರವು ನೀಡಿತು.

14ನೇ ಓವರ್​​ನಲ್ಲಿಯೇ ಗುರಿ ಬೆನ್ನಟ್ಟಿದ ಕೋಲ್ಕತಾ ನೈಟ್ ರೈಡರ್ಸ್​ 8 ವಿಕೆಟ್​ ವಿಜಯ ಸಾಧಿಸಿತು. ಸುನಿಲ್ ನರೈನ್ ಮತ್ತು ರಹಮಾನುಲ್ಲಾ ಗುರ್ಬಾಜ್ ಕೆಕೆಆರ್​ಗೆ ಉತ್ತಮ ಆರಂಭ ನೀಡಿದರು ಮತ್ತು ಅದನ್ನು ವೆಂಕಟೇಶ್ ಅಯ್ಯರ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಮುನ್ನಡೆಸಿದರು.

ಇದನ್ನೂ ಓದಿ: Virat kohli : ವಿಶ್ವ ಕಪ್​ನಲ್ಲಿಯೂ ಕೊಹ್ಲಿಯೇ ಸ್ಟಾರ್​​; ಭವಿಷ್ಯ ನುಡಿದ ರಿಕಿ ಪಾಂಟಿಂಗ್​

ಶ್ರೇಯಸ್ ಬಂದಾಗ ಕೆಕೆಆರ್ 2 ವಿಕೆಟ್ ನಷ್ಟಕ್ಕೆ 67 ರನ್ ಗಳಿಸಿತ್ತು ಮತ್ತು ಮುಂದಿನ 7 ಓವರ್​ಗಳಲ್ಲಿ ವೆಂಕಟೇಶ್ ಅವರೊಂದಿಗೆ 97 ರನ್​​ಗಳ ಜೊತೆಯಾಟ ನೀಡಿದರು. ಪ್ಯಾಟ್ ಕಮಿನ್ಸ್ ನೇತೃತ್ವದ ಬಳಗ ಈಗ 2 ನೇ ಕ್ವಾಲಿಫೈಯರ್ ಪಂದ್ಯಕ್ಕಾಗಿ ಚೆನ್ನೈಗೆ ತೆರಳಲಿದೆ.

9ನೇ ಕ್ರಮಾಂಕ ಅಥವಾ ಕೆಳಗಿನ ಸ್ಥಾನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು

  • 30- ಪ್ಯಾಟ್ ಕಮಿನ್ಸ್ ವಿರುದ್ಧ ಕೆಕೆಆರ್: 2024
  • 28* ರಮೇಶ್ ಪೊವಾರ್ ವಿರುದ್ಧ ಸಿಎಸ್ಕೆ: 2008
  • 23- ರವಿಚಂದ್ರನ್ ಅಶ್ವಿನ್ ವಿರುದ್ಧ ಮುಂಬೈ ಇಂಡಿಯನ್ಸ್: 2015
  • 21* – ಮೋಹಿತ್ ಶರ್ಮಾ ವಿರುದ್ಧ ಎಂಐ: 2015
  • 21- ಜಹೀರ್ ಖಾನ್ ವಿರುದ್ಧ ಸಿಎಸ್ಕೆ: 2011
Continue Reading

ಕ್ರೀಡೆ

Virat kohli : ವಿಶ್ವ ಕಪ್​ನಲ್ಲಿಯೂ ಕೊಹ್ಲಿಯೇ ಸ್ಟಾರ್​​; ಭವಿಷ್ಯ ನುಡಿದ ರಿಕಿ ಪಾಂಟಿಂಗ್​

Virat kohli: ಭಾರತದ ಬ್ಯಾಟಿಂಗ್ ಸೂಪರ್​ಸ್ಟಾರ್​ ಟಿ 20 ವಿಶ್ವಕಪ್​ನಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಏಕೆಂದರೆ ಅವರು ಐದು ಆವೃತ್ತಿಗಳಲ್ಲಿ 1141 ರನ್​​ಗಳೊಂದಿಗೆ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರು. ಅವರು 2014 ರ ಟಿ 20 ವಿಶ್ವಕಪ್​​ನಲ್ಲಿ ಆರು ಪಂದ್ಯಗಳಲ್ಲಿ 319 ರನ್​ಗಳೊಂದಿಗೆ ಅತಿ ಹೆಚ್ಚು ರನ್ ಗಳಿಸಿದವರಾಗಿದ್ದರು. ಇದು ಪುರುಷರ ಐಸಿಸಿ ಈವೆಂಟ್​​ನ ಒಂದೇ ಆವೃತ್ತಿಯಲ್ಲಿ ಯಾವುದೇ ಬ್ಯಾಟರ್​​ ಗಳಿಸಿದ ಅತ್ಯಧಿಕ ರನ್ ಆಗಿದೆ.

VISTARANEWS.COM


on

Virat kohli
Koo

ನವದೆಹಲಿ: ಮುಂಬರುವ ಐಸಿಸಿ ಟಿ 20 ವಿಶ್ವಕಪ್ 2024 ರಲ್ಲಿ (T20 World Cup 2024) ಭಾರತಕ ಪರವಾಗಿ ರನ್​ ಮಾಂತ್ರಿಕ ವಿರಾಟ್ ಕೊಹ್ಲಿ (Virat kohli) ಮಿಂಚಲಿದ್ದಾರೆ ಎಂಬುದಾಗಿ, ಆಸ್ಟ್ರೇಲಿಯಾದ ಮೂರು ಬಾರಿ ವಿಶ್ವಕಪ್ ವಿಜೇತ ಮತ್ತು ಲೆಜೆಂಡರಿ ಬ್ಯಾಟ್ಸ್ಮನ್ ರಿಕಿ ಪಾಂಟಿಂಗ್ ಹೇಳಿದ್ದಾರೆ. ಅವರು ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕೋಚ್ ಆಗಿದ್ದು ಕೊಹ್ಲಿಯ ಬ್ಯಾಟಿಂಗ್ ಅಬ್ಬರ ಗಮನಿಸಿದ್ದಾರೆ. ಐಪಿಎಲ್ 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಬ್ಯಾಟ್​ನೊಂದಿಗೆ ಭರ್ಜಿ ಫಾರ್ಮ್​ನಲ್ಲಿದ್ದಾರೆ ಕೊಹ್ಲಿ. ಡ್ಯಾಶಿಂಗ್ ಬಲಗೈ ಬ್ಯಾಟ್ಸ್ಮನ್ ಈಗಾಗಲೇ ಆರಂಭಿಕನಾಗಿ 700+ ರನ್ ಗಳಿಸಿದ್ದಾರೆ ಮತ್ತು ಆರ್​ಸಿಬಿಯನ್ನು ಪ್ಲೇಆಫ್​ಗೆ ಕರೆದೊಯ್ಯುವಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ.

ಭಾರತದ ಮಾಜಿ ಮತ್ತು ಆರ್​ಸಿಬಿಯ ಮಾಜಿ ನಾಯಕ ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2024 ರಲ್ಲಿ ಅತಿ ಹೆಚ್ಚು ರನ್ ಗಳಿಸಿದವರಾಗಿದ್ದಾರೆ. ಮುಂಬರುವ ಟಿ 20 ವಿಶ್ವಕಪ್ 2024 ರಲ್ಲಿ ತಮ್ಮ ಅದ್ಭುತ ಫಾರ್ಮ್ ಅನ್ನು ಮುಂದುವರಿಸಲು ಅವರು ಬಯಸುತ್ತಾರೆ. ಇದು ಸ್ವರೂಪದಲ್ಲಿ ಅಪೇಕ್ಷಿತ ಪ್ರಶಸ್ತಿ ಗೆಲ್ಲಲು ಅವರಿಗೆ ಕೊನೆಯ ಅವಕಾಶವಾಗಿದೆ. ಈ ಮೆಗಾ ಈವೆಂಟ್ ಜೂನ್ 1 ರಂದು ಯುಎಸ್ಎ ಮತ್ತು ಕೆರಿಬಿಯನ್ನಲ್ಲಿ ಪ್ರಾರಂಭವಾಗಲಿದೆ.

ಟಿ 20 ವಿಶ್ವಕಪ್​​ನಲ್ಲಿ ವಿರಾಟ್ ಕೊಹ್ಲಿ ಉತ್ತಮ ದಾಖಲೆ

ಭಾರತದ ಬ್ಯಾಟಿಂಗ್ ಸೂಪರ್​ಸ್ಟಾರ್​ ಟಿ 20 ವಿಶ್ವಕಪ್​ನಲ್ಲಿ ಉತ್ತಮ ದಾಖಲೆ ಹೊಂದಿದ್ದಾರೆ. ಏಕೆಂದರೆ ಅವರು ಐದು ಆವೃತ್ತಿಗಳಲ್ಲಿ 1141 ರನ್​​ಗಳೊಂದಿಗೆ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರು. ಅವರು 2014 ರ ಟಿ 20 ವಿಶ್ವಕಪ್​​ನಲ್ಲಿ ಆರು ಪಂದ್ಯಗಳಲ್ಲಿ 319 ರನ್​ಗಳೊಂದಿಗೆ ಅತಿ ಹೆಚ್ಚು ರನ್ ಗಳಿಸಿದವರಾಗಿದ್ದರು. ಇದು ಪುರುಷರ ಐಸಿಸಿ ಈವೆಂಟ್​​ನ ಒಂದೇ ಆವೃತ್ತಿಯಲ್ಲಿ ಯಾವುದೇ ಬ್ಯಾಟರ್​​ ಗಳಿಸಿದ ಅತ್ಯಧಿಕ ರನ್ ಆಗಿದೆ.

ಇದನ್ನೂ ಓದಿ: Virat kohli : ವಿರಾಟ್​ ಕೊಹ್ಲಿಗೆ ಪ್ರಾಣ ಬೆದರಿಕೆ; ಅಭ್ಯಾಸ ಬಂದ್​, ಪಂದ್ಯದ ಗತಿ ಏನು?

ಮುಂಬರುವ ಟಿ 20 ವಿಶ್ವಕಪ್ 2024 ಗಾಗಿ ಭಾರತದ ತಂಡದಲ್ಲಿ ಕೊಹ್ಲಿಯ ಆಯ್ಕೆಯನ್ನು ಆಸ್ಟ್ರೇಲಿಯಾದ ಮಾಜಿ ನಾಯಕ ಬೆಂಬಲಿಸಿದ್ದಾರೆ. ಅಲ್ಲಿ ಮೆನ್ ಇನ್ ಬ್ಲೂ ಜೂನ್ 5 ರಂದು ನ್ಯೂಯಾರ್ಕ್​ನಲ್ಲಿ ಐರ್ಲೆಂಡ್ ವಿರುದ್ಧ ತನ್ನ ಅಭಿಯಾನ ಪ್ರಾರಂಭಿಸಲಿದೆ. ಟಿ 20 ಸ್ವರೂಪದಲ್ಲಿ ಕೊಹ್ಲಿ ಆಗಾಗ್ಗೆ ಅನಗತ್ಯ ಅನುಮಾನಗಳಿಗೆ ಒಳಗಾಗುತ್ತಾರೆ ಎಂದು ಪಾಂಟಿಂಗ್ ಎತ್ತಿ ತೋರಿಸಿದರು ಮತ್ತು ಅವರು ಯಾವಾಗಲೂ ಟೀಮ್ ಇಂಡಿಯಾಕ್ಕೆ ತಮ್ಮ ಮೊದಲ ಆಯ್ಕೆಯಾಗುತ್ತಾರೆ ಎಂದು ಒತ್ತಿ ಹೇಳಿದರು.

ಜಾಗತಿಕ ಪಂದ್ಯಾವಳಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಕೊಹ್ಲಿಯ ಸಾಮರ್ಥ್ಯವನ್ನು ಆಸೀಸ್ ದಂತಕಥೆ ಬೊಟ್ಟು ಮಾಡಿದರು. ಸೂರ್ಯಕುಮಾರ್ ಯಾದವ್ ಮತ್ತು ರೋಹಿತ್ ಶರ್ಮಾ ಅವರಂತಹ ಭಾರತೀಯ ತಾರೆಯರು ಹೆಚ್ಚಿನ ಸ್ಟ್ರೈಕ್ ರೇಟ್ ಅನ್ನು ಕಾಪಾಡಿಕೊಳ್ಳಬಹುದು. ಆದರೆ ಕೊಹ್ಲಿ ಇದು 2024 ರ ಟಿ 20 ವಿಶ್ವಕಪ್​​ನಲ್ಲಿ ಭಾರತಕ್ಕಾಗಿ ಇನ್ನಿಂಗ್ಸ್ ಅನ್ನು ಪರಿಣಾಮಕಾರಿಯಾಗಿ ನಿರೂಪಿಸಲು ಅವರು ನೆರವಾಗಲಿದೆ ಎಂದು ಹೇಳಿದರು.

ವಿರಾಟ್ ಕೊಹ್ಲಿಗೆ ರಿಕಿ ಪಾಂಟಿಂಗ್ ಬೆಂಬಲ

ಕೊಹ್ಲಿ ಭಾರತದ ಟಿ 20 ಸೆಟ್​ಅಪ್​ಗೆ ಮೌಲ್ಯ ಸೇರಿಸುತ್ತಾರೆ ಎಂದು ಅವರು ಹೇಳಿದರು. ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಮುಖ್ಯ ತರಬೇತುದಾರ ಕೊಹ್ಲಿಯಂತೆ ಆಡಲು ಬೇರೆ ಯಾವುದೇ ಆಟಗಾರ ಇಲ್ಲ ಎಂದು ಹೇಳಿದರು. ಅವರ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಐಸಿಸಿ ರಿವ್ಯೂ ಜೊತೆ ಮಾತನಾಡಿದ ರಿಕಿ ಪಾಂಟಿಂಗ್, “ಭಾರತದ ಜನರು ಯಾವಾಗಲೂ ಕೊಹ್ಲಿಯನ್ನು ಆಯ್ಕೆ ಮಾಡದಿರಲು ಒಂದು ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಾರೆ. ಟಿ20 ಆಟದಲ್ಲಿ ಈ ಇತರ ಕೆಲವು ಆಟಗಾರರಂತೆ ಅವರು ಉತ್ತಮವಾಗಿಲ್ಲ ಎಂಬುದಕ್ಕೆ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಕೊಹ್ಲಿ ಭಾರತಕ್ಕೆ ನನ್ನ ಮೊದಲ ಆಯ್ಕೆ ಎಂದು ಹೇಳಿದರು.

ಕಳೆದ ವರ್ಷವಷ್ಟೇ ವಿರಾಟ್ ತಮ್ಮ ತಂಡದಲ್ಲಿರದಿರುವ ಬಗ್ಗೆ ಕೆಲವು ಮಾತುಕತೆಗಳು ನಡೆದಿವೆ. ಆದರೆ ದೊಡ್ಡ ಪಂದ್ಯಗಳು ಬಂದಾಗ ಏನಾಯಿತು, ಅವರು ಕೆಲಸವನ್ನು ಮಾಡಿದ ವ್ಯಕ್ತಿಗಳಲ್ಲಿ ಒಬ್ಬರು. ಆದ್ದರಿಂದ, ಅಂತಹ ವರ್ಗ ಮತ್ತು ಅನುಭವವನ್ನು ನೀವು ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದರು.

Continue Reading
Advertisement
Jackfruit Seed: ಹಲಸಿನ ಹಣ್ಣು ತಿಂದು ಬೀಜ ಎಸೆಯದಿರಿ; ಬೀಜದಿಂದಾಗುವ ಆರೋಗ್ಯ ಲಾಭಗಳು ಹಲವು!
ಆರೋಗ್ಯ3 mins ago

Jackfruit Seed: ಹಲಸಿನ ಹಣ್ಣು ತಿಂದು ಬೀಜ ಎಸೆಯದಿರಿ; ಬೀಜದಿಂದಾಗುವ ಆರೋಗ್ಯ ಲಾಭಗಳು ಹಲವು!

Blink Movie in half centuru with good in OTT
ಸ್ಯಾಂಡಲ್ ವುಡ್6 mins ago

Blink Movie: ಹಾಫ್ ಸೆಂಚುರಿ ಬಾರಿಸಿದ ʻಬ್ಲಿಂಕ್ ʼ ಸಿನಿಮಾ; ಒಟಿಟಿಯಲ್ಲಿಯೂ ʻಬಹುಪರಾಕ್ʼ!

Money Guide
ಮನಿ-ಗೈಡ್7 mins ago

Money Guide: ಜನಪ್ರಿಯವಾಗುತ್ತಿದೆ ʼಈಗ ಖರೀದಿಸಿ, ನಂತರ ಪಾವತಿಸಿʼ ಆಯ್ಕೆ: ಏನಿದು ಬಿಎನ್‌ಪಿಎಲ್‌? ಬಳಕೆ ಹೇಗೆ? ಇಲ್ಲಿದೆ ವಿವರ

Virat Kohli
ಕ್ರೀಡೆ15 mins ago

IPL 2024 : ವಿನೂತನ ದಾಖಲೆಯ ಹೊಸ್ತಿಲಲ್ಲಿ ವಿರಾಟ್​ ಕೊಹ್ಲಿ; ಇಲ್ಲಿದೆ ಅದರ ವಿವರ

ಕರ್ನಾಟಕ21 mins ago

Prajwal Revanna Case: ನಿಖಿಲ್ ಎಲ್ಲಿದ್ದೀಯಪ್ಪಾ ಎಂದಿದ್ದಾಯ್ತು, ಈಗ ಪ್ರಜ್ವಲ್ ಎಲ್ಲಿದ್ದೀಯಪ್ಪಾ ಎನ್ನುತ್ತಿದ್ದಾರೆ ಬ್ರದರ್ ಸ್ವಾಮಿಗಳು!

daredevil mustafa book release
ಸ್ಯಾಂಡಲ್ ವುಡ್22 mins ago

Daredevil Mustafa: ಪುಸ್ತಕ ರೂಪ ಪಡೆದ ʻಡೇರ್ ಡೆವಿಲ್‌ ಮುಸ್ತಾಫಾʼ ಸಿನಿಮಾ!

Prajwal Revanna Case
ಕರ್ನಾಟಕ22 mins ago

Prajwal Revanna Case: ಯಾರೂ ಆತಂಕಪಡಬೇಕಾಗಿಲ್ಲ, ಕಾಲವೇ ಉತ್ತರ ಕೊಡುತ್ತೆ ಎಂದ ರೇವಣ್ಣ

IPL 2024
ಕ್ರೀಡೆ33 mins ago

IPL 2024 : ರಮೇಶ್​ ಪವಾರ್​​ ಸೃಷ್ಟಿಸಿದ್ದ 16 ವರ್ಷಗಳ ಹಿಂದಿ ದಾಖಲೆ ಮುರಿದ ಎಸ್​ಆರ್​​ಎಚ್​​ ನಾಯಕ

Virat kohli
ಕ್ರೀಡೆ58 mins ago

Virat kohli : ವಿಶ್ವ ಕಪ್​ನಲ್ಲಿಯೂ ಕೊಹ್ಲಿಯೇ ಸ್ಟಾರ್​​; ಭವಿಷ್ಯ ನುಡಿದ ರಿಕಿ ಪಾಂಟಿಂಗ್​

Election campaign meeting for Congress party candidate d t Srinivas in Holalkere
ರಾಜಕೀಯ1 hour ago

MLC Election: ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್‌ಗೆ ಬೆಂಬಲಿಸಲು ಮಾಜಿ ಸಚಿವ ಎಚ್. ಆಂಜನೇಯ ಮನವಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ11 hours ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ23 hours ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 day ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು1 day ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ2 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ3 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ3 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ3 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ5 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ5 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

ಟ್ರೆಂಡಿಂಗ್‌