ಧವಳ ಧಾರಿಣಿ ಅಂಕಣ: ರಘುವಂಶದ ಘನತೆಯ ಚಕ್ರವರ್ತಿ ದಶರಥ - Vistara News

ಪ್ರಮುಖ ಸುದ್ದಿ

ಧವಳ ಧಾರಿಣಿ ಅಂಕಣ: ರಘುವಂಶದ ಘನತೆಯ ಚಕ್ರವರ್ತಿ ದಶರಥ

ಧವಳ ಧಾರಿಣಿ ಅಂಕಣ: ಮಹಾಪುರುಷನಾದ ಶ್ರೀರಾಮನಿಗೆ ಜನ್ಮವನ್ನು ಕೊಟ್ಟ ದಶರಥನೂ ಸಹ ಸಾಕಷ್ಟು ಘನತೆವೆತ್ತ ವ್ಯಕ್ತಿತ್ವದವನೇ ಆಗಿದ್ದ. ಇದನ್ನು ರಾಮಾಯಣದ ಪ್ರಾರಂಭದಲ್ಲಿಯೇ ವಾಲ್ಮೀಕಿ ವಿವರಿಸುತ್ತಾರೆ.

VISTARANEWS.COM


on

king dasharatha
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಹಾಕಾವ್ಯದ ಮರೆಯಲ್ಲಿರುವ ಬಹುರೂಪಿ

dhavala dharini by Narayana yaji

ತಸ್ಯಾಂ ಪುರ್ಯಾಮಯೋಧ್ಯಾಯಾಂ ವೇದವಿತ್ಸರ್ವಸಙ್ಗ್ರಹಃ
ದೀರ್ಘದರ್ಶೀ ಮಹಾತೇಜಾಃ ಪೌರಜಾನಪದಪ್ರಿಯಃ ৷৷ಬಾ.ಕಾಂ.1৷৷

ಸಮಸ್ತ ವೇದವನ್ನು ಸಾಂಗವಾಗಿ ತಿಳಿದ ಧಶರಥನು (King Dasharatha) ಆ ಅಯೋಧ್ಯಾಪುರವನ್ನು (Ayodhya) ಆಳುತ್ತಿದ್ದನು. ಆತನು ಸರ್ವಜ್ಞನು. ಮುಂದೇನಾಗಬಹುದೆನ್ನುವುದನ್ನು ಇಂದೇ ಗ್ರಹಿಸಬಲ್ಲ ದೀರ್ಘದರ್ಶಿಯಾಗಿದ್ದನು. ಮಹಾತೇಜಸ್ವಿಯೂ ಪ್ರತಾಪಿಯೂ ಆಗಿದ್ದನು. ನಗರ ಮತ್ತು ಗ್ರಾಮಗಳ ಜನಪದರಿಗೆ ಅತಿಪ್ರಿಯನಾದ ರಾಜನಾಗಿದ್ದನು.

ಅಯೋಧ್ಯೆಯನ್ನು ಅರವತ್ತು ಸಾವಿರ ವರ್ಷಗಳ ಕಾಲ ಆಳಿದ ದಶರಥ ಮಹಾರಾಜನ ಕುರಿತು “ಓರ್ವ ತಿಕ್ಕಲು ದೊರೆಯಾಗಿದ್ದ, ತನ್ನ ಹೆಂಡತಿಯರಿಗೆ ಹೆದರಿದ್ದ, ಶತ್ರುಗಳಿಗೆ ಹೆದರುವ ಪುಕ್ಕಲನಾಗಿದ್ದ, ವಿಪರೀತ ಪುತ್ರಮೋಹಕ್ಕೊಳಗಾಗಿದ್ದ” ಎನ್ನುವ ಭಾವವೇ ಜನಜನಿತವಾಗಿವೆ. ರಾಮಾಯಣವೆಂದರೆ ಕೇವಲ ರಾಮನ ಕಥೆಯೆಂದು ಗ್ರಹಿಸಿದಾಗ ಇಂತಹ ವಿಪರೀತ ಅಭಿಪ್ರಾಯಕ್ಕೆ ಬರುವುದು ಸಹಜವೂ ಹೌದು. ಸ್ವಂತ ಅಸ್ತಿತ್ವವೇ ಇಲ್ಲದವನಂತೆ ಮತ್ತು ದುಃಖದಿಂದ ಕೊರಗಿ ಅಸುನೀಗುವ ದಶರಥನ ಮೇಲೆ ಅನುಕಂಪಕ್ಕಿಂತ ಇಂಥವನ ಕಾರಣದಿಂದಲೇ ರಾಮ ವನವಾಸಕ್ಕೆ ಹೋಗುವಂತಾಯಿತು ಎಂದು ತಿರಸ್ಕಾರಗೊಳ್ಳುವ ರೀತಿಯಲ್ಲಿ ಆತನ ಪಾತ್ರ ಚಿತ್ರಿತವಾಗಿದೆ. ಆತನ ಪಾತ್ರವೂ ಸಹ ಬಾಲಕಾಂಡ ಮತ್ತು ಅಯೋಧ್ಯಾ ಕಾಂಡಗಳಲ್ಲಿ ಮುಗಿದು ಹೋಗಿಬಿಡುತ್ತದೆ.

ಮುಂದೆ ಯುದ್ಧಕಾಂಡದಲ್ಲಿ ದೇವತೆಗಳ ಮತ್ತು ಬ್ರಹ್ಮನ ಸಂಗಡ ಆತ ಸಶರೀರನಾಗಿ ಬರುವಾಗ ಆತ ಇಂದ್ರನಿಗೆ ಸಮನಾದ ಪದವಿ ಮತ್ತು ಗೌರವದೊಂದಿಗೆ ದೇವರಥದಲ್ಲಿ ಗಮನಿಸಬಹುದು. ಅದು ಆತ ಕೇವಲ ರಾಮನ ತಂದೆಯಾಗಿರುವುದಕ್ಕೆ ಮಾತ್ರವೋ ಹೇಗೆ ಎನ್ನುವ ಸಂಶಯವೂ ಕಾಡಿದರೆ ಅದು ಸಹಜ. ಸುಮಾರು ಇಪ್ಪತ್ನಾಲ್ಕು ಸಾವಿರ ಶ್ಲೋಕಗಳ ಏಳು ಕಾಂಡಗಳ ಮಹಾಕಾವ್ಯವು ಇಡಿಯಾಗಿ ಜನಸಾಮಾನ್ಯರಿಗೆ ಸಿಗುವುದು ಅಷ್ಟು ಸುಲಭವಲ್ಲ. ಹೆಚ್ಚಿನವರಿಗೆ ಅದನ್ನು ಕೇಳುವ ವ್ಯವಧಾನ ಮತ್ತು ಸಮಯವೂ ಇಲ್ಲ. ಮಹಾಕಾವ್ಯದ ವಸ್ತುಗಳನ್ನು ನಾಟಕವನ್ನಾಗಿಸಿ ಅದರಲ್ಲಿ ಬರುವ ವಿಷಯವನ್ನು ಖಂಡ ಖಂಡವನ್ನಾಗಿಸಿ (ವಿಭಾಗಿಸಿ) ಮೊದಲು ಕೊಟ್ಟಿರುವುದು ಪ್ರಾಚೀನ ಸಂಸ್ಕೃತ ನಾಟಕಗಳು ಹಾಗೂ ಯಕ್ಷಗಾನ, ಕೂಚಿಪುಡಿ ಮತ್ತು ಚಾರಣರು ಆಡಿ ತೋರಿಸಿದ ಪ್ರದರ್ಶನಕಲೆಗಳು. ಯಕ್ಷಗಾನದಲ್ಲಿ ಒಂದೊಂದು ಸನ್ನಿವೇಶವನಾಗಿ ಕೊಟ್ಟಿರುವ ಕಥಾಭಾಗವನ್ನು ಪ್ರಸಂಗವೆಂದು ನಿರೂಪಿಸಲ್ಪಟ್ಟಿದೆ.

ಮಹಾಕಾವ್ಯವೊಂದು ರೂಪುಗೊಳ್ಳಬೇಕಾದರೆ ಅದರಲ್ಲಿ ಅನೇಕ ಲಕ್ಷಣಗಳಿರಬೇಕಾಗುತ್ತದೆ. ಕಾವ್ಯಗಳೆಲ್ಲವೂ ರೂಪುಗೊಂಡಿರುವುದರ ಹಿಂದೆ ಶಾಸ್ತ್ರ ಅಂದರೆ ವಿಧಿ, ನಿಷೇಧದ ರಿವಾಜಿದೆ. ಶಾಸ್ತ್ರವೆಂದರೆ ಧರ್ಮ, ಅರ್ಥ ಕಾಮ ಮೋಕ್ಷಗಳೆನ್ನುವ ಪುರುಷಾರ್ಥವನ್ನು ಮುಖ್ಯವಾಗಿ ಬೋಧಿಸುವ ಗ್ರಂಥ. ಇದು ಉಪದೇಶ ರೂಪದಲ್ಲಿ ಇರುತ್ತದೆ. ʼವಿಷ್ಣು ಧರ್ಮೋತ್ತರ ಪುರಾಣʼ ಶಾಸ್ತ್ರ ಮತ್ತು ಕಾವ್ಯದ ಕುರಿತು ವಿವರಿಸುವುದು ಹೀಗೆ –

ಮೋಕ್ಷಸ್ಯ ಯತ್ರೋಪನ್ಯಾಸಃ ಇತಿಹಾಸ ಸ ಉಚ್ಯತೇ
ತದೇವ ಕಾವ್ಯಮಿತ್ಯುಕ್ತಂ ಚೋಪದೇಶಂ ವಿನಾ ಕೃತಂ

ಮೋಕ್ಷವೆಂಬ ಪುರುಷಾರ್ಥವನ್ನೇ ಮುಖ್ಯವಾಗಿ ಬೋಧಿಸುವ ಗ್ರಂಥಕ್ಕೆ ಇತಿಹಾಸವೆಂದು ಹೆಸರು. ಅಂತಹ ಗ್ರಂಥವೇ ಉಪದೇಶರೂಪದಲ್ಲಿರದೇ ಒಬ್ಬಾನೊಬ್ಬ ಮಹಾಪುರುಷನ ಚರಿತ್ರೆಯಾಗಿದ್ದಲ್ಲಿ ಅದು ಕಾವ್ಯವೆಂದು ಹೇಳಲ್ಪಡುತ್ತಾರೆ.

ಮಹಾಕಾವ್ಯವಾಗಬೇಕಾದರೆ ಅಲ್ಲಿ ನಾಯಕ ಮತ್ತು ಪ್ರತಿನಾಯಕನ ಗುಣಗಳ ವಿಸ್ತ್ರತ ವಿವರಗಳಿರಬೇಕು. ಪ್ರಯಾಣ ಸನ್ನದ್ಧನಾದ ಪುರುಷನ ಮತ್ತು ದೂತಪ್ರೇಷಣಾದಿಗಳ ಹಾಗೂ ಯುದ್ಧವೃತ್ತಾಂತದ ವರ್ಣನೆಗಳೆಲ್ಲವನ್ನು ಒಳಗೊಂಡಿರಬೇಕು. ನಾಯಕನ ಅಭ್ಯುದಯದಿಂದ ಕೂಡಿರಬೇಕು. ನಾಯಕ ಸನ್ಮಾರ್ಗಗಾಮಿಯಾಗಿಯೂ ಧರ್ಮವಿಜಯಿಯಾಗಿಯೂ ಇರಬೇಕು. ಹಾಗೇ ಪ್ರತಿನಾಯಕನೂ ಸಹ ಜಗದ್ವಿಜಯಿಯೇ ಆಗಿರಬೇಕು. ದೇಶ, ಪಟ್ಟಣ, ರಾಜರು, ಋತುಗಳು, ಅಗ್ನಿ, ನದಿಗಳು, ಸ್ತ್ರೀಯರು ಇವೆಲ್ಲವೂ ವಿವರಿಸಲ್ಪಟ್ಟಿರಬೇಕು. ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭೀಭತ್ಸ, ಅದ್ಭುತ ಮತ್ತು ಶಾಂತವೆನ್ನುವ ನವರಸಗಳಿಂದ ಶೋಭಿಸಬೇಕು. ಭರತನ ನಾಟ್ಯ ಶಾಸ್ತ್ರಕ್ಕಿಂತಲೂ ಮೊದಲೇ ರಚಿತವಾಗಿದೆಯೆಂದು ನಂಬಲಾಗಿರುವ “ವಿಷ್ಣು ಧರ್ಮೋತ್ತರ ಪುರಾಣದಲ್ಲಿ” ಶಾಸ್ತ್ರ, ಮಹಾಕಾವ್ಯ ಮತ್ತು ನಾಟಕಗಳ ಲಕ್ಷಣಗಳನ್ನು ಹೀಗೆ ಸ್ಪಷ್ಟವಾಗಿ ವಿಭಾಗಿಸಿ ಹೇಳಿದೆ.

ಮಹಾಕಾವ್ಯ ಲಕ್ಷಣಕ್ಕೆ ಅನುಗುಣವಾಗಿ ವಾಲ್ಮೀಕಿ ರಾಮಾಯಣವನ್ನು ರಚಿಸಿರುವುದನ್ನು ಗಮನಿಸಿದರೆ ಆತನ ಕಾಲದಲ್ಲಿಯೇ ಕಾವ್ಯಲಕ್ಷಣಗಳು ಪ್ರಚಲಿತದಲ್ಲಿ ಇತ್ತು ಎನ್ನಬಹುದಾಗಿದೆ. ಅಥವಾ ಅದನ್ನು ಆಧಾರವನ್ನಾಗಿರಿಸಿಕೊಂಡು ನಾಟ್ಯಶಾಸ್ತ್ರವನ್ನು ರಚಿಸಿದ್ದಾರೆನ್ನುವ ದುರ್ಬಲವಾದ ವಾದವನ್ನೂ ಕೆಲ ವಿಮರ್ಶಕರು ಅಭಿಪ್ರಾಯ ಪಡುತ್ತಾರೆ. ಅದೇನೆ ಇರಲಿ, ನಾಯಕನ ಚರಿತ್ರೆಯನ್ನು ಹೇಳುವ ಮಹಾಕಾವ್ಯದಲ್ಲಿ ಎಲ್ಲಾ ಪಾತ್ರಗಳೂ ನಾಯಕನ ಗುಣಗಳ ನೆರಳಿನಲ್ಲಿ ಬೆಳೆಯುತ್ತವೆ. ಪೋಷಕ ಪಾತ್ರಗಳ ಗುಣಗಳು ನಾಯಕನನ್ನು ಮೀರಿ ಹೋಗದಂತೆ ಎಚ್ಚರದಿಂದ ಪಾತ್ರವನ್ನು ಹೆಣೆಯಲಾಗುತ್ತದೆ. ಇದಕ್ಕೆ ರಾಜಾ ದಶರಥನ ಪಾತ್ರವೂ ಹೊರತಲ್ಲ. ಮಹಾವಿಷ್ಣು ಸಹಿತವಾಗಿ ದೇವತೆಗಳು ತಮ್ಮ ಅವತಾರಕ್ಕೆ ಕೇಂದ್ರವನ್ನಾಗಿ ಅಯೋಧ್ಯೆಯನ್ನು ಆರಿಸಿಕೊಂಡಾಗ ಅಲ್ಲಿನ ಚಕ್ರವರ್ತಿಯೂ ಘನತೆಯಿಂದಲೇ ಕೂಡಿರಬೇಕಾಗುತ್ತದೆ. ಕೇವಲ ಅಶ್ವಮೇಧ ಯಾಗ ಮತ್ತು ಪುತ್ರಕಾಮೇಷ್ಟಿ ಯಾಗದ ಮೂಲಕ ಅವತಾರಿ ಪುರುಷನಿಗೆ ಕ್ಷೇತ್ರವಾಗಲು ಸಾಧ್ಯವಿಲ್ಲ.

ayodhya
king dasharatha

ರಾಮಾಯಣದ ಮೂಲತಃ ಮಾನವ ಸಂಬಂಧಗಳ ಗುಣಗಳನ್ನು ಮೈಗೂಡಿಸಿಕೊಂಡ ಕಾವ್ಯ. ಪ್ರತೀ ಪಾತ್ರದಲ್ಲಿಯೂ ಗುಣ, ದೋಷ ಎರಡೂ ಇವೆ. ರಾಮ ಆದರ್ಶ ಪುರುಷ ಹೇಗೋ ಅದೇ ರೀತಿ ತನ್ನ ನಿಷ್ಠುರ ನಡವಳಿಕೆಯ ಮೂಲಕ ತನ್ನನ್ನು ನೆಚ್ಚಿಕೊಂಡ ಪಾತ್ರಗಳಿಗೆ ನೋವನ್ನು ಅದೇ ಪ್ರಮಾಣದಲ್ಲಿ ಕೊಟ್ಟಂತವನೂ ಹೌದು. ಇದನ್ನು ದಶರಥನಿಂದ ಪ್ರಾರಂಭಿಸಿ ಕೊನೆಗೆ ಲಕ್ಷ್ಮಣನಿಗೆ ದೇಹಾಂತ ಶಿಕ್ಷೆಯನ್ನು ವಿಧಿಸುವವವರೆಗೆ ನಿರಂತರವಾಗಿ ಗಮನಿಸಬಹುದಾಗಿದೆ. ಅದಕ್ಕೆ ಕಾರಣಗಳನ್ನು ಹುಡುಕಿ ರಾಮನ ಆದರ್ಶವನ್ನು ಲೋಕಕ್ಕೆ ವಿಮರ್ಶಕರು ಕೊಟ್ಟಿದ್ದಾರೆ ಎನ್ನುವುದೂ ಸಹ ಅಷ್ಟೇ ಗಮನಾರ್ಹ. ಮನುಷ್ಯರಲ್ಲಿ ಪರಿಪೂರ್ಣನಾದ ವ್ಯಕ್ತಿಗಳು ಇದ್ದಾರೆಯೋ ಎನ್ನುವ ವಾಲ್ಮೀಕಿಯ ಸಂಶಯಕ್ಕೆ (ಕೋ ನ್ವಸ್ಮಿನ್ಸಾಂಪ್ರತಂ ಲೋಕೇ ಗುಣವಾನ್ಕಶ್ಚ ವೀರ್ಯವಾನ್) ನಾರದರು ಆತನ ಹದಿನಾರು ಗುಣಗಳನ್ನು ವರ್ಣಿಸಿ ರಾಮಾಯಣ ಕಥೆಯನ್ನು ಹೇಳಿರುವ ವಿಷಯವನ್ನು ಈ ಹಿಂದೆಯೇ ಪ್ರಸ್ತಾಪಿಸಿಯಾಗಿದೆ. ಇಂತಹ ಮಹಾಪುರುಷನಿಗೆ ಜನ್ಮವನ್ನು ಕೊಟ್ಟ ದಶರಥನೂ ಸಹ ಸಾಮಾನ್ಯರ ತಿಳುವಳಿಕೆಯಂತೆ ಅಳುಮುಂಜಿಯಾಗಿರದೇ, ಸಾಕಷ್ಟು ಘನವೆತ್ತ ವ್ಯಕ್ತಿತ್ವದವನೇ ಆಗಿದ್ದ ಎನ್ನುವುದನ್ನು ರಾಮಾಯಣದ ಪ್ರಾರಂಭದಲ್ಲಿಯೇ ವಾಲ್ಮೀಕಿ ವಿವರಿಸುತ್ತಾರೆ.

ದಶರಥನಲ್ಲಿರುವ ಮೊದಲ ಗುಣವೇ ಆತ ವೇದವಿತ್ ಎನ್ನುವುದರ ಮೂಲಕವಾಗಿ. ವೇದ್ ಎನ್ನುವುದು ಜ್ಞಾನಿ ಎನ್ನುವ ಅರ್ಥದಲ್ಲಿಯೂ ಬಳಸಲಾಗುತ್ತಿದೆ. 2. ಸರ್ವಜ್ಞನಾಗಿದ್ದನು, 3. ಮುಂದೆ ಬರಬಹುದಾದ ವಿಪ್ಪತ್ತನ್ನು ಗ್ರಹಿಸಿ ಅದಕ್ಕೆ ತಕ್ಕ ಪರಿಹಾರವನ್ನು ಮೊದಲೇ ಕೈಗೊಳ್ಳುತ್ತಿದ್ದನು. (Pro Active), 4, ಮಹಾತೇಜಸ್ವಿಯು, 5, ಪೌರಜಾನಪದಪ್ರಿಯ – ಆತ ನಗರವಾಸಿ ಮತ್ತು ಗ್ರಾಮವಾಸಿಗಳಿಗೂ ಪ್ರೀತಿಪಾತ್ರ ದೊರೆಯಾಗಿದ್ದನು. ಆತನ ಮಿತ್ರರಲ್ಲಿ ಕೇವಲ ಕ್ಷತ್ರಿಯರು ಮಾತ್ರ ಇರದೇ ಗುಹನಂತಹ ಬೇಡರು, ಜಟಾಯು, ಸಂಪಾತಿಯಂತಹ ಪಕ್ಷಿಗಳೂ ಸಹ ಸೇರಿದ್ದರು. ಎಲ್ಲರನ್ನೂ ಸಮಭಾವ ಸಮಚಿತ್ತದಿಂದ ಆದರಿಸುವ ದೊರೆ ಆತ ಆಗಿದ್ದನು. 6. ಇಕ್ಷ್ವಾಕುವಂಶವೆಂದರೆ ಆ ಕಾಲದ ಶ್ರೇಷ್ಠ ವಂಶವಾಗಿತ್ತು. ಮನುವಿನಿಂದ ದಶರಥನ ವರೆಗೆ ಸುಮಾರು ಎಪ್ಪತ್ತು ರಾಜರುಗಳು ಈ ವಂಶವನ್ನು ಆಳಿಹೋಗಿದ್ದರು. ಈ ಸಂಖ್ಯೆ ನಿಖರವಲ್ಲ, ವಿವಿಧ ರಾಮಾಯಣದಲ್ಲಿ ಅನೇಕ ವಿಧಗಳಲ್ಲಿ ವಿವರಿಸಲಾಗಿದೆ. ಆದರೂ ಬಲು ದೀರ್ಘವಾದ ಶೂರರ ಪರಂಪರೆಯನ್ನು ಈ ವಂಶ ಹೊಂದಿತ್ತು. ಅಂತಹ ಇಕ್ಷಾಕುಗಳಲ್ಲಿಯೇ ಅತಿರಥನೆನ್ನುವ ಖ್ಯಾತಿಯನ್ನು ಧಶರಥ ಹೊಂದಿದ್ದನು. ಹತ್ತುಸಾವಿರ ಮಹಾರಥಿಗಳನ್ನು ಏಕಾಂಗಿಯಾಗಿ ಎದುರಿಸುವ ಸಾಮರ್ಥ್ಯ ಆತನಿಗಿತ್ತು. 7. ಲೋಕದಲ್ಲಿ ಶ್ರೇಷ್ಠವೆನಿಸಿದ ಯಾಗಗಳನ್ನೆಲ್ಲವನ್ನೂ ದಶರಥ ನೆರವೇರಿಸಿದ್ದನು. ರಾಜಸೂಯ ಯಾಗವನ್ನೂ ಮಾಡಿದ್ದ ಎನ್ನುವುದನ್ನು ಸೀತೆ ಚಿತ್ರಕೂಟದಲ್ಲಿ ದಶರಥನ ಗುಣಗಳನ್ನು ನೆನೆದು ದುಃಖಿಸುವಾಗ ಹೇಳುತ್ತಾಳೆ. 8. ಆತ ಧರ್ಮರಥ ಅಂದರೆ ಸದಾ ಕಾಲ ಧರ್ಮದಲ್ಲಿ ತನ್ನ ಬುದ್ಧಿಯನ್ನು ಸ್ಥಿರವಾಗಿ ಇಟ್ಟವನಾಗಿದ್ದನು, 9. ದಕ್ಷ ಆಡಳಿತದ ಮೂಲಕ ಪ್ರಜೆಗಳನ್ನು ತನ್ನ ವಶದಲ್ಲಿ ಇಟ್ಟುಕೊಂಡಿದ್ದನು. ಪ್ರಜೆಗಳಿಗೆ ಅನುಕೂಲವಾಗುವಂತೆ ಕೆರೆ, ಬಾವಿಗಳನ್ನು ತೋಡಿಸಿದ ಪ್ರಜಾನುರಾಗಿ ದೊರೆಯಾಗಿದ್ದನು. 10. ಕ್ಷತ್ರಿಯ ಧರ್ಮಗಳನ್ನು ನುರಿತವನಾದರೂ ಧರ್ಮದ ವಿಷಯದಲ್ಲಿ ಮಹರ್ಷಿಗಳಿಗೆ ಸಮನಾಗಿದ್ದನು. ಮಹರ್ಷಿಕಲ್ಪನೆನ್ನುವ ಗೌರವಕ್ಕೆ ಪಾತ್ರನಾಗಿದ್ದನು. 11. ಆತ್ಮಬಲ, ತೇಜೋ ಬಲ ಮತ್ತು ಜ್ಞಾನಬಲವುಳ್ಳವನಾಗಿದ್ದನು. ಈ ಕಾರಣಕ್ಕೆ ಮೂರು ಲೋಕದಲ್ಲಿಯೂ ಕೀರ್ತಿಯನ್ನು ಗಳಿಸಿಕೊಂಡಿದ್ದನು. ಶತ್ರುಗಳನ್ನು ನಿಗ್ರಹಮಾಡುವ ಆತನ ಸಾಮರ್ಥ್ಯದ ಕಾರಣದಿಂದ ಆತನನ್ನು ನಿಹತಾಮಿತ್ರನೆಂದು ಕರೆಯುತ್ತಾರೆ. ಸದ್ವಂಶದಲ್ಲಿ ಜನಿಸಿದವರನ್ನು ಮತ್ತು ಸುಗುಣ ಸಂಪನ್ನರನ್ನು ತನ್ನ ಸ್ನೇಹಿತರನಾಗಿಸಿಕೊಳ್ಳುವುದರಲ್ಲಿ ಹಿಂದೆ ಮುಂದೆ ನೋಡುತ್ತಿರಲಿಲ್ಲ. 12. ಮನುಷ್ಯರು ಪಾಲಿಸಬೇಕಾದ ದೇವಋಣ, ಪಿತೃ ಋಣ, ಋಷಿ ಋಣಗಳೆನ್ನುವ ಮೂರು ಋಣಗಳ ಜೊತೆಗೆ ಕ್ಷತ್ರಿಯರು ಪಾಲಿಸಬೇಕಾದ ವಿಪ್ರಋಣ ಮತ್ತು (ಬ್ರಾಹ್ಮಣರಿಗೆ ದಾನಧರ್ಮಮಾಡುವ ಮೂಲಕ) ಅತ್ಮಋಣ – ವಿಹತವಾದ ಸುಖಭೋಗಗಳನ್ನು ಅನುಭವಿಸುವುದು ಇವುಗಳನ್ನು ಆತ ಸದಾಕಾಲದಲ್ಲಿಯೂ ಪಾಲಿಸುತ್ತಿದ್ದನು. 13. ಧನ ಮತ್ತು ಅನರ್ಘ್ಯವಾದ ವಸ್ತುಗಳ ಸಂಗ್ರಹಣೆಯಲ್ಲಿ ಆತ ಕುಬೇರ ಮತ್ತು ಇಂದ್ರನಿಗೆ ಸಮನಾದ ದೊರೆಯೆನಿಸಿದ್ದನು. 14. ಹಿಂದೆ ವೈವಸ್ವತ ಮನುವು ಮಹಾ ತೇಜಸ್ಸಿನಿಂದ ಕೂಡಿದವನಾಗಿ ಲೋಕವನ್ನು ಹೇಗೆ ರಕ್ಷಣೆಯನ್ನು ಮಾಡುತ್ತಿದ್ದನೋ ಅದೇ ರೀತಿಯಲ್ಲಿ ಮಾನವಕುಲಾವತಂಸನಾದ ದಶರಥನೂ ಅಯೋಧ್ಯೆಯಲ್ಲಿ ಸತ್ಯವ್ರತನಾಗಿ ಧರ್ಮಾರ್ಥಕಾಮಗಳೆಂಬ ಪುರುಷಾರ್ಥವನ್ನು ಅನುಸರಿಸುತ್ತಾ ಅಮರಾವತಿಯನ್ನು ಪಾಲನೆ ಮಾಡುತ್ತಿದ್ದ ಇಂದ್ರನಂತೆಯೆ ಶೋಭಿಸುತ್ತಿದ್ದನು.

ಭಗವಂತ ತನ್ನ ಅವತಾರಕ್ಕಾಗಿ ಒಂದು ಕ್ಷೇತ್ರವನ್ನು ಆಯ್ದುಕೊಳ್ಳುವಾಗ ದುರ್ಬಲರಾದವರನ್ನು ಆಯ್ಕೆ ಮಾಡಿಕೊಂಡರೆ ಕಾವ್ಯ ವೈಕಲತೆಯಿಂದ ಸೊರಗುತ್ತದೆ. ವಾಲ್ಮೀಕಿಯಲ್ಲಿ ಈ ಪ್ರಜ್ಞೆ ಸದಾ ಜಾಗ್ರತವಾಗಿದೆ. ರಾಮಾಯಣ ಮಹಾ ಕಾವ್ಯವಾಗುವ ಜೊತೆಗೆ ಸನಾತನ ಪರಂಪರೆಯ ಇತಿಹಾಸವೂ ಆಗಿದೆ. ಶಾಸ್ತ್ರಗಳಲ್ಲಿ ಧರ್ಮವನ್ನು ಮಂತ್ರಗಳ ಮೂಲಕ ಹೇಳುತ್ತಾರೆ. ಈ ಮಂತ್ರಗಳ ಅರ್ಥವನ್ನು, ಸೃಷ್ಟಿ, ಸಂಹಾರ, ಅವುಗಳನ್ನು ವಿನಿಯೋಗಿಸುವ ವಿಧಾನವನ್ನು ವಿವರಿಸುವುದೇ ಬ್ರಾಹ್ಮಣಗಳು. ಇದು ಕಾವ್ಯಕ್ಕೆ ಬಂದಾಗ ಪ್ರಕ್ರಿಯಾ, ಉಪೋದ್ಘಾತ, ಅನುಸಂಗ ಮತ್ತು ಉಪಸಂಹಾರ ಹೀಗೆ ನಾಲ್ಕು ಬಗೆಗಳಿವೆ. ಈ ಎಲ್ಲ ಸಂಗತಿಗಳನ್ನು ಅರ್ಥ ಮಾಡಿಕೊಂಡಾಗ ದಶರಥನ ಶ್ರೇಷ್ಠತೆಯನ್ನು ಮನಗಾಣ ಬಹುದಾಗಿದೆ.

ದಶರಥನ ರಾಜ್ಯಭಾರ –

ಆಡಳಿತದ ವಿಷಯದಲ್ಲಿ ದಶರಥ ಸಮರ್ಥ ಆಡಳಿತಗಾರನಾಗಿದ್ದ. ಆತನ ಕಾಲದಲ್ಲಿ ಪ್ರಜೆಗಳು ನಿತ್ಯಸಂತುಷ್ಟರಾಗಿದ್ದರು. ಎಲ್ಲರೂ ಎಲ್ಲಾ ಶಾಸ್ತ್ರಗಳಲ್ಲಿ ಪಾರಂಗತರಾಗಿದ್ದರು. ತಮಗೆ ಸಿಕ್ಕಿದುದರಲ್ಲಿಯೇ ನಿತ್ಯತೃಪ್ತಿಯನ್ನು ಹೊಂದಿದ್ದರು. ಅಯೋಧ್ಯೆಯಲ್ಲಿ ವಿಶೇಷ ಕಾಮಾಸಕ್ತರಾಗಲಿ, ಕ್ರೂರಕರ್ಮಿಗಳಾಗಲಿ, ಅಜ್ಞರಾಗಲಿ, ನಾಸ್ತಿಕರಾಗಲಿ, ದರಿದ್ರರಾಗಲಿ ಇರಲಿಲ್ಲ. ಅಯೋಧ್ಯೆಯ ವರ್ಣನೆಯನ್ನು ಮಾಡುವಾಗ ದಶರಥನ ಸೇನೆ ಮತ್ತು ಅಯೋಧ್ಯೆಯ ಜನರ ಗುಣಸ್ವಭಾವವನ್ನು ವಿವರಿಸಿದ್ದೇನೆ. ಯಾವುದೇ ರಾಜನ ಆಡಳಿತ ಬಿಗಿಯಾಗಬೇಕಾದರೆ ಅದಕ್ಕೆ ಸಂಬಂಧಿಸಿದ ಅಧಿಕಾರ ವರ್ಗ ದಕ್ಷತೆಯಿಂದ ಕೂಡಿರಬೇಕು, ಯೋಗ್ಯರಾದ ಸಚಿವರು ಮತ್ತು ಧರ್ಮಮಾರ್ಗದಲ್ಲಿ ರಾಜ ಸದಾ ಇರುವಂತೆ ನೋಡಿಕೊಳ್ಳುವ ಪುರೋಹಿತರು ಬಹು ಮುಖ್ಯ. ರಾಜನಿಗೆ ಕೆಟ್ಟ ಹೆಸರಾಗಲಿ, ಒಳ್ಳೆಯ ಹೆಸರಾಗಲಿ ಬರುವುದರಲ್ಲಿ ಅಮಾತ್ಯ ಮತ್ತು ಪುರೋಹಿತರ ಪಾತ್ರ ದೊಡ್ಡದು. ದಶರಥನಿಗೆ ಸಹಾಯಮಾಡಲು ಮಂತ್ರಾಲೋಚನೆಯಲ್ಲಿ ಸಮರ್ಥರಾದ, ಸದಾ ಕಾರ್ಯತತ್ಪರರಾದ ಮತ್ತು ಪರರ ಮನಸ್ಸಿನಲ್ಲಿರುವ ವಿಷಯಗಳನ್ನು ಅವರ ಮುಖಭಾವದಿಂದಲೇ ತಿಳಿಯಬಲ್ಲ ಇಂಗಿತಜ್ಞರಾದ ಧೃಷ್ಟಿ, ಜಯಂತ, ವಿಜಯ, ಸಿದ್ಧಾರ್ಥ, ಅರ್ಥಸಾಧಕ, ಅಶೋಕ, ಮಂತ್ರಪಾಲ ಮತ್ತು ಸುಮಂತ್ರ ಎನ್ನುವ ಎಂಟು ಮಂತ್ರಿಗಳು ಆತನ ಆಸ್ಥಾನದಲ್ಲಿ ಇದ್ದರು. ಅವರು ವಂಶಪರಂಪರೆಯಿಂದ ಬಂದವರು ಎನ್ನುವ ಕಾರಣಕ್ಕಾಗಿ ತಮ್ಮ ಹುದ್ದೆಯಲ್ಲಿ ಇದ್ದವರಲ್ಲ. ಹಾಗಂತ ರಾಜಕಾರಣಕ್ಕೆ ಹೊಸಬರೂ ಆಗಿರಲಿಲ್ಲ.

king dasharatha
king dasharatha

ಯಾರನ್ನಾದರೂ ಹುದ್ದೆಗೆ ನಿಯಕ್ತಿಗೊಳಿಸುವ ಮುನ್ನ ಅವರನ್ನು ಚನ್ನಾಗಿ ಪರೀಕ್ಷಿಸಲಾಗುತ್ತಿತ್ತು. ಅರ್ಥಶಾಸ್ತ್ರದಲ್ಲಿ ರಾಜನ ಆಸ್ಥಾನದಲ್ಲಿರುವವರನ್ನು ಪರೀಕ್ಷಿಸುವ ವಿಧಾನವನ್ನು ಹೇಳುವಾಗ ಧರ್ಮಾದಿ ಉಪಧಾ, ಅರ್ಥೋಪಧಾ, ಕಾಮೋಪಧಾ, ಭಯೋಪಧಾಗಳ ಮೂಲಕ ಪರೀಕ್ಷಿಸಬೇಕು ಎಂದು ಹೇಳುತ್ತದೆ. ಅಂದರೆ ರಾಜನಲ್ಲಿ ಅಧರ್ಮವನ್ನು ಕಲ್ಪಿಸಿ ಅವನನ್ನು ಪಟ್ಟದಿಂದ ಇಳಿಸೋಣವೇ ಎನ್ನುವ ಆಮಿಷಕ್ಕೆ ಒಡ್ಡಿದಾಗಲೂ ಅದನ್ನು ಯಾವಾತ ತಿರಸ್ಕರಿಸುತ್ತಾನೋ, ಹಣದ ಆಮಿಷದ ಮೂಲಕ ರಾಜನಿಂದ ಬೇರ್ಪಡಿಸಲು ಸಾಧ್ಯವೋ ಎನ್ನುವುದನ್ನು ಪರೀಕ್ಷಿಸುವುದು, ರಾಣಿ ನಿನ್ನನ್ನು ಬಯಸಿದ್ದಾಳೆ, ಅವಳನ್ನು ಸೇರಿದರೆ ನಿನಗೆ ಕೈತುಂಬಾ ಹಣ ಸಿಗುವುದು ಎನ್ನುವ ಆಮಿಷವನ್ನು ಒಡ್ಡಿದಾಗಲೂ ಅದನ್ನು ತಿರಸ್ಕರಿಸುವಂಥವರು, ರಾಜನಿಂದ ಅವಮಾನಿತರಾದ (ಹಾಗೇ ನಟಿಸಿ) ಅಮಾತ್ಯನಾದವ ಇತರರನ್ನು ನಾವೆಯಲ್ಲಿ ಕರೆದುಕೊಂಡು ಹೋಗಿ ರಾಜನ ವಿರುದ್ಧ ಅವರನ್ನು ಎತ್ತಿಕಟ್ಟಿದಾಗ ಯಾರು ತಿರಸ್ಕರಿಸಿ ರಾಜನಿಗೆ ನಿಷ್ಠೆಯುಳ್ಳವರಾಗಿರುತ್ತಾರೆಯೋ ಅಂಥವರು ಮಾತ್ರ ಅಮಾತ್ಯರಾಗಲು ಯೋಗ್ಯರು ಎನ್ನುತ್ತದೆ. ದಶರಥನ ಈ ಅಷ್ಟ ಮಂತ್ರಿಗಳು ರಾಜದ್ರೋಹ-ಪ್ರಜಾದ್ರೋಹ-ಸ್ವಾರ್ಥಗಳಿಂದ ಮುಕ್ತರಾಗಿದ್ದರು. ರಾಮನನ್ನು ಅರಣ್ಯಕ್ಕೆ ಕಳಿಸು ಎನ್ನುವ ಸಂದರ್ಭದಲ್ಲಿ ಸುಮಂತ್ರ ರಾಜನ ಎದುರಿಗೇ ಕೈಕೇಯನ್ನು ದೂಷಿಸುವಾಗ ಮತ್ತು ವಶಿಷ್ಠರು ಆಕೆಯನ್ನು ಕಟುವಾಗಿ ನಿಂದಿಸುವಾಗ ಅವರ ರಾಜನಿಷ್ಟೆ, ನಿಸ್ವಾರ್ಥಪರತೆ ಎದ್ದು ಕಾಣುತ್ತದೆ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ಗಂಧವತಿಗೆ ಸಿರಿಗಂಧಲೇಪನನ ಆಗಮನ

ಅವರೆಲ್ಲ ವಿದ್ಯಾವಿನೀತಾ- ಎಲ್ಲ ವಿಷಯಗಳಲ್ಲಿಯೂ ಪಾರಂಗತರಾಗಿದ್ದರು. ಹಿಮನ್ತಃ-ಅಕಾರ್ಯವನ್ನು ಮಾಡಲು ಲಜ್ಜೆಪಡುತ್ತಿದ್ದರು, ಕುಶಲಾ-ನೀತಿಶಾಸ್ತ್ರ ಕೋವಿದರು, ನಿಯತೇಂದ್ರಿಯಾ-ಇಂದ್ರಿಯ ನಿಗ್ರಹವನ್ನು ಸ್ಥಾಪಿಸಿದವರು, ಶ್ರೀಮನ್ತಃ – ಭಾಗ್ಯಸಂಪನ್ನರು, ನೀತಿ ಶಾಸ್ತ್ರ ಬಲ್ಲವರು, ದೃಢವಿಕ್ರಮಿಗಳು, ಕೀರ್ತಿವಂತರು, ಪ್ರಣಿಹೀತಾ-ಕೊಟ್ಟಮಾತಿನಂತೆ ನಡೆಯುವವರು, ಎಲ್ಲಕ್ಕಿಂತ ಮುಖ್ಯವಾಗಿ ತಾಳ್ಮೆಯುಳ್ಳವರು, ಸದಾ ನಗುಮುಖದಿಂದಲೇ ಮಾತನಾಡುತ್ತಾ ಎದುರಿನಲ್ಲಿರುವವರ ಅಂತರಂಗವನ್ನು ಶೋಧಿಸುವಂತವರು, ಆಡಿದ ಮಾತಿನಂತೆ ನಡೆಯುವವರು-ಯಥಾವಚನಕಾರಿಣಃ ಹೀಗೆ ರಾಜಕಾರಣದ ಸಮಗ್ರವನ್ನು ಅರ್ಥಮಾಡಿಕೊಂಡವರಾಗಿದ್ದರು. ತಮ್ಮ ಮಕ್ಕಳೇ ತಪ್ಪು ಮಾಡಿದರೂ ಅವರನ್ನು ಶಿಕ್ಷಿಸುವಂತಹ ದಂಡಕೋವಿದರಾಗಿದ್ದರು.. ಹಾಗಂತ ಇವರನ್ನು ನೇಮಿಸಿಕೊಳ್ಳುವಾಗ ಸುಖಾಸುಮ್ಮನೆ ನೇಮಿಸಿಕೂಳ್ಳಲಿಲ್ಲ. ಅವರ ರಾಜನಿಷ್ಠೆಯನ್ನು ಚನ್ನಾಗಿ ಪರೀಕ್ಷಿಸಿದ–ಸೌಹ್ಯದೇಷು ಪರೀಕ್ಷಿತಾಃ, ನಂತರವೇ ಅವರನ್ನು ಆಯಾ ಹುದ್ಧೆಗಳಿಗೆ ನಿಯುಕ್ತಿಗೊಳಿಸಲಾಗುತ್ತಿತ್ತು. ದಶರಥ ನಿಧನನಾದಾಗ ಭರತನನ್ನು ಕರೆತರಲು ಹೋದವರಲ್ಲಿ ಅಶೋಕ ಮತ್ತು ವಿಜಯ ಪ್ರಮುಖರಾದವರು. ಆಗ ಅವರು ಭರತ ಎಷ್ಟೇ ಒತ್ತಾಯಿಸಿದರೂ ಅಯೋಧ್ಯೆಯಲ್ಲಿ ಏನಾಗಿದೆ ಎನ್ನುವುದನ್ನು ಹೇಳದೇ ಆತನನ್ನು ಅಯೋಧ್ಯೆಗೆ ಕರೆತರುವಲ್ಲಿ ನಡೆಸಿದ ಕಾರ್ಯವನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಪ್ರಾಚೀನ ಕಾಲದಲ್ಲಿ ಧಾರ್ಮಿಕ ವಿಚಾರದಲ್ಲಿಯೂ ರಾಜನ ಆಸ್ಥಾನದಲ್ಲಿ ತುಂಬಾ ಮಹತ್ವವಿತ್ತು. ಈ ಪುರೋಹಿತ ವರ್ಗ ತಮಗಾಗಿ ಏನನ್ನೂ ಬಯಸುತ್ತಿರಲಿಲ್ಲ. ರಾಜ ತಪ್ಪಿ ನಡೆದಾಗ ಆತನನ್ನು ಎಚ್ಚರಿಸಿ ಅಗತ್ಯಬಿದ್ದರೆ ಆತನನ್ನು ಅಧಿಕಾರದಿಂದ ಇಳಿಸುವ “ಧರ್ಮದಂಡ್ಯೋಸಿ” ಧರ್ಮದಂಡವನ್ನು ಹೊಂದಿದ್ದರು. ವಶಿಷ್ಠ ಮತ್ತು ವಾಮದೇವರೆನ್ನುವ ಇಬ್ಬರು ಪುರೋಹಿತರಾಗಿ ಅಯೋಧ್ಯೆಯ ಹಿತವನ್ನು ಸದಾಕಾಲವೂ ಬಯಸಿದ್ದರು. ವಸಿಷ್ಠರೂ ಸಹ ನಿಷ್ಟುರವಾದಿಗಳು. ತ್ರಿಶಂಕು ತನಗಾಗಿ ಇಂದ್ರಪದವಿಯ ಯಜ್ಞವನ್ನು ಮಾಡಿ ಎಂದಾಗ ನಿಷ್ಟುರವಾಗಿ ತಿರಸ್ಕರಿಸಿದ್ದರು. ಶಶಾದನೆನ್ನುವವ ಇಕ್ಷ್ವಾಕುವಿನ ಮಗ. ಆತ ನಡತೆ ತಪ್ಪಿದಾಗ ಆತನಿಗೆ ಶಿಕ್ಷೆ ವಿಧಸಲೇಬೇಕು ಎಂದು ಇಕ್ಷ್ವಾಕುವಿಗೆ ಹೇಳಿದವರು. ಇಲ್ಲಿ ನೆನಪಿಡಬೇಕಾದದ್ದು ವಸಿಷ್ಠನೆನ್ನುವುದು ಒಂದು ಪರಂಪರೆ. ವಂಶವಾಹಿನಿ. ಶಂಕರಪೀಠವನ್ನೇರುವ ಎಲ್ಲರೂ ಶಂಕರಾಚಾರ್ಯರು ಎಂದು ಕರೆಯಿಸಿಕೊಳ್ಳುವ ಹಾಗೆ, ಆಗಿನ ಕಾಲದಲ್ಲಿ ಬ್ರಹ್ಮರ್ಷಿಗಳನ್ನು ಅದೇ ಹೆಸರಿನಿಂದ ಕರೆಯಲಾಗುತ್ತಿತ್ತು ಎನ್ನಬಹುದು. ನಂತರ ಇದೇ ಗೋತ್ರವಾಗಿ ಬದಲಾಗಿರಬೇಕು. ಹೀಗೆ ಒಂದು ಪ್ರಬಲ ರಾಜ್ಯವೊಂದರ ಅಧಿಕಾರಿಯಾಗಿ ದಶರಥ ಆಳುತ್ತಿದ್ದ. ರಾಮನಂತವ ಅವತರಿಸಬೇಕಾದ ಕ್ಷೇತ್ರಕ್ಕೆ ಆ ಕಾಲದಲ್ಲಿ ಭೂಮಂಡಲದಲ್ಲಿ ಇದಕ್ಕಿಂತ ಮತ್ತೊಂದು ಯುಕ್ತವಾದ ಮನೆತನವಿರಲಿಲ್ಲವೆನ್ನುವುದನ್ನು ವಾಲ್ಮೀಕಿ ಇಲ್ಲಿ ತಿಳಿಸುತ್ತಾನೆ.

ಮುಂದಿನ ಸಂಚಿಕೆಯಲ್ಲಿ ಆತನ ವ್ಯಕ್ತಿತ್ವದ ವಿಶೇಷಗಳ ಕುರಿತು ನೋಡೋಣ.

ಇದನ್ನೂ ಓದಿ: ಧವಳ ಧಾರಿಣಿ ಅಂಕಣ: ರಾಮಾವತಾರಕ್ಕೊಂದು ಪೀಠಿಕಾ ಪ್ರಕರಣ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಧಾರ್ಮಿಕ

Shravan 2024: ಶ್ರಾವಣ ಮಾಸದಲ್ಲಿ ಯಾವ ಆಹಾರ ತಿನ್ನಬೇಕು, ಯಾವುದನ್ನು ತಿನ್ನಬಾರದು?

Shravan 2024: ಶ್ರಾವಣ ಮಾಸದಲ್ಲಿ (Shravan Month 2024) ಹೆಚ್ಚಾಗಿ ದೇವರ ಭಕ್ತಿ, ಪ್ರಾರ್ಥನೆಯಲ್ಲಿ ತೊಡಗುವುದರಿಂದ ಆಹಾರ ನಿಯಮಗಳನ್ನು ಕಠಿಣವಾಗಿ ಅನುಸರಿಸಲಾಗುತ್ತದೆ. ಉಪವಾಸ ಇರುವವರು ಈ ಸಂದರ್ಭದಲ್ಲಿ ಆಹಾರದ ಮಾರ್ಗಸೂಚಿಗಳನ್ನು ಅನುಸರಿಸಿ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆಧ್ಯಾತ್ಮಿಕ ಗಮನವನ್ನು ಕೇಂದ್ರೀಕರಿಸಬಹುದು.

VISTARANEWS.COM


on

By

Shravan Month 2024
Koo

ಶ್ರಾವಣಾ ಬಂತು ಕಾಡಿಗೆ.. ಬಂತು ನಾಡಿಗೆ.. ಬಂತು ಬೀಡಿಗೆ.. ಕವಿ ದ. ರಾ. ಬೇಂದ್ರೆಯವರ (da.ra. bendre) ಕವನದ ಸಾಲುಗಳು ಶ್ರಾವಣ ಮಾಸದ (Shravan 2024) ಸಂಭ್ರಮವನ್ನು ವರ್ಣಿಸುವಂತೆ ಶ್ರಾವಣ ಮಾಸವು (Shravan Month) ಹಬ್ಬ ಹರಿದಿನಗಳನ್ನು ಹೊತ್ತುಕೊಂಡು ಬರುತ್ತದೆ. ಈ ಮಾಸವು ಶಿವನಿಗೆ ಸಮರ್ಪಿತವಾಗಿದ್ದು, ಈ ಸಂದರ್ಭದಲ್ಲಿ ಹಿಂದೂಗಳು ಉಪವಾಸ, ಪ್ರಾರ್ಥನೆಯಲ್ಲಿ ಕಳೆಯುತ್ತಾರೆ.

ಈ ಬಾರಿ ಆಗಸ್ಟ್ 4ರಿಂದ ಶ್ರಾವಣ ಮಾಸ ಆರಂಭಗೊಳ್ಳಲಿದ್ದು, ಈ ಮಂಗಳಕರ ಅವಧಿಯಲ್ಲಿ ವಿಶೇಷ ಪ್ರಾರ್ಥನೆ, ಆಚರಣೆ ಮತ್ತು ಆಹಾರದ ನಿರ್ಬಂಧ ಇರುತ್ತದೆ. ಶ್ರಾವಣ ಮಾಸದಲ್ಲಿ ಭಕ್ತರು ತಮ್ಮ ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸಲು ನಿರ್ದಿಷ್ಟ ಆಹಾರ ಮಾರ್ಗಸೂಚಿಗಳನ್ನು ಅನುಸರಿಸುತ್ತಾರೆ. ಈ ಪವಿತ್ರ ಮಾಸದಲ್ಲಿ ಯಾವ ಆಹಾರಗಳನ್ನು ಸೇವಿಸಬೇಕು ಮತ್ತು ತಪ್ಪಿಸಬೇಕು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಶ್ರಾವಣ ಮಾಸದಲ್ಲಿ ತಿನ್ನಬಹುದಾದ ಆಹಾರಗಳು

Shravan Month 2024
Shravan Month 2024


ತಾಜಾ ಹಣ್ಣುಗಳು: ಶ್ರಾವಣ ಮಾಸದಲ್ಲಿ ತಾಜಾ ಹಣ್ಣುಗಳು ಆಹಾರದ ಅತ್ಯಗತ್ಯ ಭಾಗವಾಗಿದೆ. ಅವುಗಳನ್ನು ಶುದ್ಧ ಮತ್ತು ಜೀರ್ಣಿಸಿಕೊಳ್ಳಲು ಸುಲಭವೆಂದು ಪರಿಗಣಿಸಲಾಗುತ್ತದೆ. ಅಗತ್ಯವಾದ ಪೋಷಕಾಂಶಗಳು ಮತ್ತು ಜಲಸಂಚಯನವನ್ನು ಒದಗಿಸುತ್ತದೆ.ಇದರಲ್ಲಿ ಬಾಳೆಹಣ್ಣು, ಸೇಬು, ದಾಳಿಂಬೆ ಮತ್ತು ಕಲ್ಲಂಗಡಿಗಳು ಸೇರಿವೆ.

ಡೇರಿ ಉತ್ಪನ್ನಗಳು: ಹಾಲು, ಮೊಸರು, ಪನೀರ್ ಮತ್ತು ತುಪ್ಪವನ್ನು ಶ್ರಾವಣ ಮಾಸದಲ್ಲಿ ಸೇವಿಸಬಹುದು. ಈ ಡೇರಿ ಉತ್ಪನ್ನಗಳು ಪೌಷ್ಟಿಕಾಂಶ ಮಾತ್ರವಲ್ಲದೇ ದೇಹವನ್ನು ತಂಪಾಗಿಸುತ್ತದೆ.

ಸಾಬುದಾನ: ಉಪವಾಸದ ಸಮಯದಲ್ಲಿ ಸಾಬುದಾನ ಖಿಚಡಿ ಅಥವಾ ವಡಾ ಶ್ರಾವಣ ಮಾಸದ ಮುಖ್ಯವಾದ ಆಹಾರವಾಗಿದೆ. ಸಾಬುದಾನವು ಕಾರ್ಬೋಹೈಡ್ರೇಟ್‌ಗಳು ಸಮೃದ್ಧವಾಗಿದ್ದು ದಿನವಿಡೀ ಶಕ್ತಿಯನ್ನು ನೀಡುತ್ತದೆ.

ಹುರುಳಿಕಾಳಿನ ಹಿಟ್ಟು: ಪೂರಿ, ಚಪಾತಿ ಅಥವಾ ಪ್ಯಾನ್ ಕೇಕ್‌ಗಳನ್ನು ತಯಾರಿಸಲು ಹುರುಳಿಕಾಳಿನ ಹಿಟ್ಟನ್ನು ಬಳಸಲಾಗುತ್ತದೆ. ಇದು ಜೀರ್ಣಿಸಿಕೊಳ್ಳಲು ಸುಲಭವಾಗಿದೆ ಮತ್ತು ಉಪವಾಸಕ್ಕೆ ಸೂಕ್ತವಾಗಿದೆ.

ಚೆಸ್ ನೆಟ್ ಹಿಟ್ಟು: ಹುರುಳಿ ಹಿಟ್ಟಿನಂತೆಯೇ ಇದು ಪೂರಿ ಮತ್ತು ಹಲ್ವಾದಂತಹ ವಿವಿಧ ಭಕ್ಷ್ಯಗಳನ್ನು ತಯಾರಿಸಲು ಬಳಸುವ ಮತ್ತೊಂದು ಉಪವಾಸ ಸ್ನೇಹಿ ಹಿಟ್ಟಾಗಿದೆ.

ಆಲೂಗಡ್ಡೆಗಳು ಮತ್ತು ಸಿಹಿ ಆಲೂಗಡ್ಡೆಗಳು: ಇದನ್ನು ವಿವಿಧ ಪಾಕವಿಧಾನಗಳಲ್ಲಿ ಬಳಸಬಹುದು. ಇದರಿಂದ ಉಪವಾಸದಲ್ಲಿರುವವರು ಅಗತ್ಯ ಶಕ್ತಿಯನ್ನು ತುಂಬುತ್ತಾರೆ ಮತ್ತು ಒದಗಿಸುತ್ತಾರೆ.

ಬೀಜಗಳು ಮತ್ತು ಒಣ ಹಣ್ಣುಗಳು: ಬಾದಾಮಿ, ವಾಲ್ ನಾಟ್, ಒಣದ್ರಾಕ್ಷಿ ಮತ್ತು ಇತರ ಒಣ ಹಣ್ಣುಗಳು ಲಘು ಆಹಾರಕ್ಕಾಗಿ ಮತ್ತು ಹೆಚ್ಚುವರಿ ಪೌಷ್ಟಿಕಾಂಶ ಮತ್ತು ಶಕ್ತಿಗಾಗಿ ಭಕ್ಷ್ಯಗಳಿಗೆ ಸೇರಿಸಲು ಉತ್ತಮವಾಗಿದೆ.

ತೆಂಗಿನಕಾಯಿ: ಶ್ರಾವಣ ಮಾಸದಲ್ಲಿ ತಾಜಾ ತೆಂಗಿನಕಾಯಿ, ತೆಂಗಿನ ನೀರು ಮತ್ತು ತೆಂಗಿನ ಹಾಲು ಸಾಮಾನ್ಯವಾಗಿ ಸೇವಿಸಲಾಗುತ್ತದೆ.

Shravan Month 2024
Shravan Month 2024


ಶ್ರಾವಣ ಮಾಸದಲ್ಲಿ ತಪ್ಪಿಸಬೇಕಾದ ಆಹಾರಗಳು

ಮಾಂಸಾಹಾರ: ಮಾಂಸ, ಮೀನು ಮತ್ತು ಮೊಟ್ಟೆಗಳನ್ನು ಶ್ರಾವಣ ಮಾಸದಲ್ಲಿ ಕಟ್ಟುನಿಟ್ಟಾಗಿ ತಪ್ಪಿಸಲಾಗುತ್ತದೆ. ಶುದ್ಧತೆ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಉತ್ತೇಜಿಸಲು ಸಸ್ಯಾಹಾರಿ ಆಹಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ.

ಈರುಳ್ಳಿ ಮತ್ತು ಬೆಳ್ಳುಳ್ಳಿ: ಇವುಗಳು ದೇಹದಲ್ಲಿ ಶಾಖವನ್ನು ಉಂಟುಮಾಡುತ್ತವೆ ಎಂದು ನಂಬಲಾಗಿದೆ. ಆದ್ದರಿಂದ ಶ್ರಾವಣ ಮಾಸದಲ್ಲಿ ಅವುಗಳನ್ನು ತಪ್ಪಿಸಲಾಗುತ್ತದೆ. ಇದು ನಕಾರಾತ್ಮಕ ಶಕ್ತಿಯನ್ನು ಉತ್ತೇಜಿಸುತ್ತದೆ.

ಧಾನ್ಯಗಳು ಮತ್ತು ಬೇಳೆಕಾಳುಗಳು: ಗೋಧಿ, ಅಕ್ಕಿ, ಧಾನ್ಯ ಮತ್ತು ಬೇಳೆಕಾಳುಗಳನ್ನು ಸಾಮಾನ್ಯವಾಗಿ ಶ್ರಾವಣ ಮಾಸದಲ್ಲಿ ಬಳಸಲಾಗುವುದಿಲ್ಲ. ಇದರ ಬದಲು ಹುರುಳಿ ಕಾಳು, ಚೆಸ್ಟ್ ಹಿಟ್ಟನ್ನು ಬಳಸಲಾಗುತ್ತದೆ.

ಮದ್ಯ ಮತ್ತು ತಂಬಾಕು: ಶ್ರಾವಣ ಮಾಸ ಪವಿತ್ರ ತಿಂಗಳಾಗಿರುವುದರಿಂದ ಮದ್ಯ ಮತ್ತು ತಂಬಾಕು ಸೇವನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಇದನ್ನೂ ಓದಿ: Home Remedies for Dengue: ಡೆಂಗ್ಯು ಜ್ವರ ಬಂದರೂ ಪ್ಲೇಟ್‌ಲೆಟ್‌ ಸಂಖ್ಯೆ ಕುಸಿಯದಿರಲು ಯಾವ ಆಹಾರ ಸೇವಿಸಬೇಕು?

ಸಂಸ್ಕರಿಸಿದ ಮತ್ತು ಜಂಕ್ ಆಹಾರಗಳು: ಆರೋಗ್ಯಕರ ಮತ್ತು ನೈಸರ್ಗಿಕ ಆಹಾರಕ್ಕೆ ಹೆಚ್ಚಿನ ಒತ್ತು ನೀಡುವುದರಿಂದ ಚಿಪ್ಸ್, ಪ್ಯಾಕೆಟ್ ತಿಂಡಿಗಳು ಮತ್ತು ಇತರ ಸಂಸ್ಕರಿಸಿದ ಆಹಾರಗಳನ್ನು ಸೇವಿಸಲಾಗುವುದಿಲ್ಲ.

ಮಸಾಲೆಯುಕ್ತ ಮತ್ತು ಎಣ್ಣೆಯುಕ್ತ ಆಹಾರಗಳು: ಮಸಾಲೆಯುಕ್ತ ಮತ್ತು ಎಣ್ಣೆಯುಕ್ತ ಆಹಾರವನ್ನು ಸಾಮಾನ್ಯವಾಗಿ ತಪ್ಪಿಸಲಾಗುತ್ತದೆ ಏಕೆಂದರೆ ಅವು ಜೀರ್ಣಕ್ರಿಯೆಗೆ ಅಡ್ಡಿಪಡಿಸಬಹುದು ಮತ್ತು ಉಪವಾಸಕ್ಕೆ ತೊಂದರೆ ಉಂಟು ಮಾಡುವುದು.

Continue Reading

ಭವಿಷ್ಯ

Dina Bhavishya : ಈ ರಾಶಿಯವರಿಗೆ ಮಾತೇ ಮೃತ್ಯು, ಮೌನಕ್ಕೆ ಶರಣಾಗಿ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷದ ಸಪ್ತಮಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

dina bhavishya
Koo

ಚಂದ್ರನು ಮೇಷ ರಾಶಿಯಿಂದ ಶನಿವಾರ ಮಧ್ಯಾಹ್ನ 01:22 ಕ್ಕೆ ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ಮೇಷ, ಮಿಥುನ, ಕಟಕ, ತುಲಾ, ವೃಶ್ಚಿಕ, ಕುಂಭ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ಮೇಷ ರಾಶಿಯವರು ಆರೋಗ್ಯದಲ್ಲಿ ವ್ಯತ್ಯಾಸ ಆಗಲಿದೆ. ಅಗತ್ಯ ವಸ್ತುಗಳ ಖರೀದಿಯಿಂದ ಖರ್ಚು ಇರಲಿದೆ. ನಿಮ್ಮ ಆಪ್ತರು ಸಮಸ್ಯೆಯನ್ನು ಉಂಟು ಮಾಡುವ ಸಾಧ್ಯತೆ ಇದೆ. ಅನಗತ್ಯ ಒತ್ತಡ ನಿಮ್ಮ ಮನಸ್ಸಿಗೆ ಘಾಸಿ ಮಾಡಲಿದೆ. ಸಂಗಾತಿಯ ಮಧುರ ಮಾತುಗಳು ಹಿತವೆನಿಸುಬಹುದು. ವೃಷಭ ರಾಶಿಯವರು ದೀರ್ಘಕಾಲದ ಪ್ರಯತ್ನ ನಿಮಗೆ ಯಶಸ್ಸು ತಂದು ಕೊಡಲಿದೆ. ಈ ಹಿಂದೆ ನೀವು ಮಾಡಿದ ಸಹಾಯ ಇಂದು ಫಲ ನೀಡಲಿದೆ. ಹಿರಿಯರಿಂದ ಪ್ರಶಂಸೆ ವ್ಯಕ್ತವಾಗಲಿದೆ. ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ವ್ಯಾಪಾರದಲ್ಲಿ ಅಭಿವೃದ್ಧಿ ಕಾಣುವಿರಿ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (27-07-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ.
ತಿಥಿ: ಸಪ್ತಮಿ 21:18 ವಾರ: ಶನಿವಾರ
ನಕ್ಷತ್ರ:ರೇವತಿ 12:58 ಯೋಗ: ಧೃತಿ 22:42
ಕರಣ: ವಿಷ್ಟಿ (ಭದ್ರ) 10:22 ಅಮೃತಕಾಲ: ಬೆಳಗ್ಗೆ 10:45 ರಿಂದ 12:15ರವರೆಗೆ
ದಿನದ ವಿಶೇಷ: ಚಾಮುಂಡೇಶ್ವರಿ ವರ್ಧಂತಿ ಉತ್ಸವ

ಸೂರ್ಯೋದಯ : 06:04   ಸೂರ್ಯಾಸ್ತ : 06:48

ರಾಹುಕಾಲ: ಬೆಳಗ್ಗೆ 9.00 ರಿಂದ 10.30
ಗುಳಿಕಕಾಲ: ಬೆಳಗ್ಗೆ 6.00 ರಿಂದ 7.30
ಯಮಗಂಡಕಾಲ: ಮಧ್ಯಾಹ್ನ 1.30 ರಿಂದ 3.00

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಆರೋಗ್ಯದಲ್ಲಿ ವ್ಯತ್ಯಾಸ ಆಗಲಿದೆ. ಅಗತ್ಯ ವಸ್ತುಗಳ ಖರೀದಿಯಿಂದ ಖರ್ಚು ಇರಲಿದೆ. ನಿಮ್ಮ ಆಪ್ತರು ಸಮಸ್ಯೆಯನ್ನು ಉಂಟು ಮಾಡುವ ಸಾಧ್ಯತೆ ಇದೆ. ಅನಗತ್ಯ ಒತ್ತಡ ನಿಮ್ಮ ಮನಸ್ಸಿಗೆ ಘಾಸಿ ಮಾಡಲಿದೆ. ಸಂಗಾತಿಯ ಮಧುರ ಮಾತುಗಳು ಹಿತವೆನಿಸುಬಹುದು. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 7

Horoscope Today

ವೃಷಭ: ದೀರ್ಘಕಾಲದ ಪ್ರಯತ್ನ ನಿಮಗೆ ಯಶಸ್ಸು ತಂದು ಕೊಡಲಿದೆ. ಈ ಹಿಂದೆ ನೀವು ಮಾಡಿದ ಸಹಾಯ ಇಂದು ಫಲ ನೀಡಲಿದೆ. ಹಿರಿಯರಿಂದ ಪ್ರಶಂಸೆ ವ್ಯಕ್ತವಾಗಲಿದೆ. ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ವ್ಯಾಪಾರದಲ್ಲಿ ಅಭಿವೃದ್ಧಿ ಕಾಣುವಿರಿ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 6

Horoscope Today

ಮಿಥುನ: ಆಹಾರ ಹಿತ ಮಿತವಾಗಿರಲಿ, ಇಲ್ಲವಾದಲ್ಲಿ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡುದಂತೆ ಎಚ್ಚರಿಕೆ ವಹಿಸಿ, ಆತುರದಲ್ಲಿ ಅತಿರೇಕದ ಮಾತುಗಳನ್ನಾಡಿ ಅಪಾಯ ತಂದುಕೊಳ್ಳುವುದು ಬೇಡ. ದಿನದ ಮಟ್ಟಿಗೆ ಖರ್ಚು ಇರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 4

Horoscope Today

ಕಟಕ: ಉದ್ಯೋಗಿಗಳಿಗೆ ಉತ್ತಮ ಯಶಸ್ಸು ಸಿಗಲಿದೆ. ಅವಶ್ಯಕ ಖರೀದಿಯ ಕಾರಣಗಳಿಂದ ಖರ್ಚು ಅಷ್ಟೇ ಹಣಕಾಸಿನ ಹರಿವು ಹೆಚ್ಚಾಗಲಿದೆ. ಕುಟುಂಬದಲ್ಲಿ ಚರ್ಚಿಸುವ ವಿಷಯಗಳು ನಿಮ್ಮನ್ನು ಭಾವುಕರನ್ನಾಗಿ ಮಾಡುವುದು. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 7

Horoscope Today

ಸಿಂಹ: ಸೃಜನಾತ್ಮಕ ಕೆಲಸ ಕಾರ್ಯಗಳಿಂದ ಯಶಸ್ಸು ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಆರ್ಥಿಕವಾಗಿ ಸದೃಢವಾಗಲಿದ್ದಿರಿ. ಅತಿಥಿಗಳ ಆಗಮನ ಸಂತಸ ತರಲಿದೆ. ಉದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚಾಗಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 6

Horoscope Today

ಕನ್ಯಾ: ಹೂಡಿಕೆ ವ್ಯವಹಾರದಲ್ಲಿ ಹೆಚ್ಚು ಲಾಭ ಸಿಗಲಿದೆ. ನಿಮ್ಮ ನಡವಳಿಕೆ ಕುಟುಂಬದ ಸದಸ್ಯರಿಗೆ ಕೋಪ ತರಿಸಬಹುದು. ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಹೆಚ್ಚು ಲಾಭ ತರುವುದು. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 4

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಅನಿರೀಕ್ಷಿತ ಘಟನೆಗಳು ಕೆಲವು ಸಮಸ್ಯೆಗಳನ್ನು ಉಂಟುಮಾಡಬಹುದು. ಒತ್ತಡಕ್ಕೆ ಒಳಗಾಗದೆ, ತಾಳ್ಮೆಯಿಂದ ಇರಿ. ಹಿರಿಯರ ಮಾರ್ಗದರ್ಶನ, ಆಧ್ಯಾತ್ಮಿಕ ವ್ಯಕ್ತಿಗಳ ಭೇಟಿ ಮನಸ್ಸಿಗೆ ಸಮಾಧಾನ ತರುವುದು. ಆರೋಗ್ಯದ ಬಗೆಗೆ ಕಾಳಜಿ ವಹಿಸಿ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 7

Horoscope Today

ವೃಶ್ಚಿಕ: ಪೋಷಕರ ಆರೋಗ್ಯದಲ್ಲಿ ವ್ಯತ್ಯಾಸ ಆಗುವ ಸಾಧ್ಯತೆ ಇದೆ. ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ಕೆಲಸ ಕಾರ್ಯಗಳು ಆಲಸ್ಯದಿಂದ ಸಾಗಲಿದ್ದು, ಮುಂಜಾಗ್ರತೆ ವಹಿಸಿ. ವ್ಯಾಪಾರ ವ್ಯವಹಾರದಲ್ಲಿ ಸಾಮಾನ್ಯವಾಗಿರಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 8

Horoscope Today

ಧನಸ್ಸು: ಅಧಿಕ ಉತ್ಸಾಹದಿಂದ ಇರುವಿರಿ. ಆದರೂ ಕೆಲಸದ ಒತ್ತಡ ತಪ್ಪದು. ವ್ಯಾಪಾರ ಹಾಗೂ ಹಣಕಾಸು ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಬರುವ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಪ್ರದರ್ಶನ ಮಾಡಲಿದ್ದೀರಿ. ಉದ್ಯೋಗಿಗಳಿಗೆ ಯಶಸ್ಸು ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕ ಮಿಶ್ರ ಫಲ. ಅದೃಷ್ಟ ಸಂಖ್ಯೆ: 5

Horoscope Today

ಮಕರ: ಮುಂಗೋಪಿ ಮಾತುಗಳನ್ನಾಡಿ ತೊಂದರೆಯಲ್ಲಿ ಸಿಕ್ಕು, ಅಪಾಯ ತಂದುಕೊಳ್ಳುವುದು ಬೇಡ. ಭೂ ಸಂಬಂಧಿ ವ್ಯವಹಾರ, ಹಣಕಾಸು ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಜತೆಗೆ ಇರುವುರೊಂದಿಗೆ ಅನಾವಶ್ಯಕ ಜಗಳಗಳು ನಡೆಯುವ ಸಾಧ್ಯತೆ ಇದೆ. ಮಾತಿನಲ್ಲಿ ನಿಗಾ ಇರಲಿ. ಉದ್ಯೋಗಿಗಳಿಗೆ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 5

Horoscope Today

ಕುಂಭ:ಅನಾವಶ್ಯಕ ವಿಚಾರಗಳು ನಿಮ್ಮ ಮಾನಸಿಕ ನೆಮ್ಮದಿ ಹಾಳುಮಾಡುವ ಸಾಧ್ಯತೆ ಇದೆ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಸಹನೆ ಕಳೆದುಕೊಳ್ಳುವುದು ಬೇಡ. ನೆರೆಹೊರೆಯವರ ಜತೆಗೆ ವಾದಕ್ಕೆ ಇಳಿಯುವುದು ಬೇಡ. ಆರೋಗ್ಯ ಮಧ್ಯಮವಾಗಿರಲಿದೆ. ಕೌಟುಂಬಿಕ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 3

Horoscope Today

ಮೀನ: ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ನಿಮ್ಮ ಅಭಿಪ್ರಾಯಗಳನ್ನು ಇತರರು ಓಪ್ಪಿಕೊಳ್ಳದಿರಬಹುದು. ಮನೆಯಲ್ಲಿ ಹಿರಿಯರೊಂದಿಗೆ ಮಾತಿಗೆ ಇಳಿಯುವುದು ಬೇಡ.ವ್ಯಾಪಾರ ವ್ಯವಹಾರ ಮಧ್ಯಮವಾಗಿರಲಿದೆ. ಉದ್ಯೋಗಿಗಳಿಗೆ ಯಶಸ್ಸು ಸಿಗಲಿದೆ.ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 1

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ಪ್ರಮುಖ ಸುದ್ದಿ

Paris Olympics 2024 : ಪ್ರಣಯ ನಗರಿ ಪ್ಯಾರಿಸ್​ನಲ್ಲಿ ಒಲಿಂಪಿಕ್ಸ್​ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ

Paris Olympics 2024 : ಆರು ಕಿಲೋಮೀಟರ್ ಮೆರವಣಿಗೆ ಆಸ್ಟರ್ಲಿಟ್ಜ್ ಸೇತುವೆಯಿಂದ ಪ್ರಾರಂಭವಾಯಿತು ಮತ್ತು 85 ದೋಣಿಗಳು 205 ರಾಷ್ಟ್ರಗಳ 6800 ಕ್ಕೂ ಹೆಚ್ಚು ಕ್ರೀಡಾಪಟುಗಳು ಮತ್ತು ಒಂದು ನಿರಾಶ್ರಿತರ ಒಲಿಂಪಿಕ್ ತಂಡವನ್ನು ಸಾಗಿಸಿದವು. ಮಳೆಯ ಬೆದರಿಕೆ ಹೊರತಾಗಿಯೂ ಫ್ರೆಂಚ್ ರಾಜಧಾನಿಯ ಐತಿಹಾಸಿಕ ಸ್ಮಾರಕಗಳನ್ನು ದಾಟಿ ಸೀನ್ ನದಿಯಲ್ಲಿ ಮಹತ್ವಾಕಾಂಕ್ಷೆಯ ಪ್ರದರ್ಶನ ನಡೆಯಿತು.

VISTARANEWS.COM


on

Paris Olympics 2024
Koo

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್​ 2024ರ (Paris Olympics 2024) ಉದ್ಘಾಟನಾ ಸಮಾರಂಭ ಅದ್ಧೂರಿಯಾಗಿ ನಡೆಯಿತು. 7500 ಅಥ್ಲೀಟ್​ಗಳು ದೊಡ್ಡ ಸಂಖ್ಯೆಯ ಪ್ರೇಕ್ಷಕರ ಮುಂದೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಹಾಡು, ನೃತ್ಯ ಹಾಗೂ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ಬಾರಿ ವಿಶೇಷ ಎನಿಸುವಂಥ ಅಥ್ಲೀಟ್​ಗಳ ಪರೇಡ್​ ನಡೆಯಿತು. ಪ್ಯಾರಿಸ್ ನದಿಯ ಸೀನ್​ ನದಿಯಲ್ಲಿ ಅಥ್ಲೀಟ್​ಗಳನ್ನು ದೋಣಿಯಲ್ಲಿ ಕರೆದುಕೊಂಡು ಹೋಗಲಾಯಿತು. ಟೆನಿಸ್ ತಾರೆ ಶರತ್ ಕಮಾಲ್​ ಹಾಗೂ ಷಟ್ಲರ್ ಪಿ. ವಿ ಸಿಂಧೂ ಭಾರತದ 117 ಅಥ್ಲೀಟ್​ಗಳ ನಿಯೋಗದ ನೇತೃತ್ವ ವಹಿಸಿದ್ದರು. ಅವರು ತ್ರಿವರ್ಣ ಧ್ವಜ ಹಿಡಿದು ದೋಣಿಯಲ್ಲಿ ಸಾಗಿದರು.

ಆರು ಕಿಲೋಮೀಟರ್ ಮೆರವಣಿಗೆ ಆಸ್ಟರ್ಲಿಟ್ಜ್ ಸೇತುವೆಯಿಂದ ಪ್ರಾರಂಭವಾಯಿತು ಮತ್ತು 85 ದೋಣಿಗಳು 205 ರಾಷ್ಟ್ರಗಳ 6800 ಕ್ಕೂ ಹೆಚ್ಚು ಕ್ರೀಡಾಪಟುಗಳು ಮತ್ತು ಒಂದು ನಿರಾಶ್ರಿತರ ಒಲಿಂಪಿಕ್ ತಂಡವನ್ನು ಸಾಗಿಸಿದವು. ಮಳೆಯ ಬೆದರಿಕೆ ಹೊರತಾಗಿಯೂ ಫ್ರೆಂಚ್ ರಾಜಧಾನಿಯ ಐತಿಹಾಸಿಕ ಸ್ಮಾರಕಗಳನ್ನು ದಾಟಿ ಸೀನ್ ನದಿಯಲ್ಲಿ ಮಹತ್ವಾಕಾಂಕ್ಷೆಯ ಪ್ರದರ್ಶನ ನಡೆಯಿತು. ಒಲಿಂಪಿಕ್ ಇತಿಹಾಸದಲ್ಲಿ ಮೊದಲ ಬಾರಿಗೆ, ಉದ್ಘಾಟನಾ ಸಮಾರಂಭವು ಮುಖ್ಯ ಕ್ರೀಡಾಂಗಣದ ಹೊರಗೆ ನಡೆಯುತ್ತಿದೆ. ಸುಮಾರು 300,000 ಜನರು ನದಿಯ ದಡದಲ್ಲಿ ವಿಶೇಷವಾಗಿ ನಿರ್ಮಿಸಲಾದ ಸ್ಟ್ಯಾಂಡ್​ಗಳಲ್ಲ ಕುಳಿತು ವೀಕ್ಷಿಸಿದರು. ಇನ್ನೂ 200,000 ಜನರು ಬಾಲ್ಕನಿಗಳು ಮತ್ತು ಅಪಾರ್ಟ್ಮೆಂಟ್​ಗಳಲ್ಲಿ ಕುಳಿತು ವೀಕ್ಷಿಸಿದರು.

ಒಲಿಂಪಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭವು ‘ಪೆರೇಡ್ ಆಫ್ ದಿ ನೇಷನ್ಸ್’ ನೊಂದಿಗೆ ಪ್ರಾರಂಭವಾಯಿತು, ಮಳೆ ಅಡ್ಡಿಪಡಿಸಿದ ಹೊರತಾಗಿಯೂ ಕಾರ್ಯಕ್ರಮ ವರ್ಣರಂಜಿತವಾಗಿ ಆರಂಭಗೊಂಡಿತು. ಫ್ರೆಂಚ್ ಫುಟ್ಬಾಲ್ ದಂತಕಥೆ ಜಿನೆಡಿನ್ ಜಿಡಾನೆ ಪ್ಯಾರಿಸ್​​ನ ಬೀದಿಗಳಲ್ಲಿ ಒಲಿಂಪಿಕ್ ಜ್ಯೋತಿ ಜತೆ ಓಡಿದರು.

ಕ್ರೀಡಾಪಟುಗಳು ಮಾತ್ರವಲ್ಲ, ವಿಶ್ವ ನಾಯಕರು ಶುಕ್ರವಾರ ಮಧ್ಯಾಹ್ನ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರ ಎಲಿಸೀ ಪ್ಯಾಲೇಸ್ ಕಚೇರಿಗೆ ಆಗಮಿಸಿದ್ದರು/ ಮ್ಯಾಕ್ರನ್ ಮತ್ತು ಅವರ ಪತ್ನಿ ಬ್ರಿಗಿಟ್ಟೆ ಅತಿಥಿಗಳನ್ನು ಎಲಿಸಿಯ ಅಂಗಳದಲ್ಲಿ ರೆಡ್​ ಕಾರ್ಪೆಟ್ ಸ್ವಾಗತ ನೀಡಿರು. ಸೀನ್ ನದಿಯಲ್ಲಿ ಸಮಾರಂಭಕ್ಕೆ ಮೊದಲು ಸುಮಾರು 85 ರಾಷ್ಟ್ರ ಅಥವಾ ಸರ್ಕಾರದ ಮುಖ್ಯಸ್ಥರಿಗೆ ಸ್ವಾಗತ ನೀಡಲಾಯಿತು.

ಅಮೆರಿಕದ ಗಾಯಕಿ ಲೇಡಿ ಗಾಗಾ ಸಂಜೆಯ ವೇಳೆ ತಮ್ಮ ಪ್ರದರ್ಶನ ನೀಡಿದರು. ಉದ್ಘಾಟನಾ ಸಮಾರಂಭದಲ್ಲಿ ಪ್ಯಾರಿಸ್​ನಾದ್ಯಂತ ಅನೇಕ ಐತಿಹಾಸಿಕ ಸ್ಥಳಗಳ ಕಲಾವಿದರಿಂದ ಸಿಂಕ್ರೊನೈಸ್ಡ್ ನೃತ್ಯ ಪ್ರದರ್ಶನಗಳು ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿದವು.

ಮೊದಲ ದಿನದಂದು ಭಾರತಕ್ಕೆ 16 ಸ್ಪರ್ಧೆಗಳು

ಸ್ಪರ್ಧೆಗಳು ಜುಲೈ 27 ರಿಂದ ಪ್ರಾರಂಭವಾಗಲಿದ್ದು, ಆರಂಭಿಕ ದಿನದಂದು ಭಾರತವು 16 ಸ್ಪರ್ಧೆಗಳಲ್ಲಿ 6ರಲ್ಲಿ ಭಾಗವಹಿಸಲಿದೆ. ಅವುಗಳೆಂದರೆ, ರೋಯಿಂಗ್, ಬ್ಯಾಡ್ಮಿಂಟನ್, ಶೂಟಿಂಗ್, ಟೇಬಲ್ ಟೆನಿಸ್, ಟೆನಿಸ್ ಮತ್ತು ಹಾಕಿ.

ಇದನ್ನೂ ಓದಿ: Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾಗಿಯಾಗಿರುವ ಭಾರತದ ಅಥ್ಲೀಟ್​ಗಳಿಗೆ ಶುಭ ಕೋರಿದ ಪ್ರಧಾನಿ ಮೋದಿ

ಬಹುನಿರೀಕ್ಷಿತ ಕ್ರೀಡಾಕೂಟದ ಪ್ರಾರಂಭಕ್ಕೆ ಮುಂಚಿತವಾಗಿ, ಭಾರತದ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರವನ್ನು ಪ್ರತಿನಿಧಿಸುವ 117 ಅಥ್ಲೀಟ್​ಗಳ ಭಾರತದ ನಿಯೋಗಕ್ಕೆ ಶುಭಾಶಯಗಳನ್ನು ಕಳುಹಿಸಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್​ ಆರಂಭವಾಗುತ್ತಿದ್ದು ಭಾರತೀಯ ತಂಡಕ್ಕೆ ನನ್ನ ಶುಭ ಹಾರೈಕೆಗಳು. ಪ್ರತಿಯೊಬ್ಬ ಕ್ರೀಡಾಪಟುವೂ ಭಾರತದ ಹೆಮ್ಮೆ.. ಅವರೆಲ್ಲರೂ ತಮ್ಮ ಅಸಾಧಾರಣ ಪ್ರದರ್ಶನಗಳು ನಮಗೆ ಸ್ಫೂರ್ತಿ ನೀಡುವ ಮೂಲಕ ನಿಜವಾದ ಕ್ರೀಡಾ ಮನೋಭಾವವನ್ನು ಬೆಳಗಿಸಲಿ ಮತ್ತು ಸಾಕಾರಗೊಳಿಸಲಿ ಎಂದು ಪ್ರಧಾನಿ ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

Continue Reading

ಪ್ರಮುಖ ಸುದ್ದಿ

ಕೊಲೆಯಾದ ರೌಡಿಯ ಮೈಮೇಲಿದ್ದ ಟ್ಯಾಟೂ ನೆರವಿನಿಂದ ಆರೋಪಿಗಳ ಬಂಧನ; ಹೇಗಂತೀರಾ? ಇಲ್ಲಿದೆ ರೋಚಕ ಕತೆ

ಮಹಾರಾಷ್ಟ್ರದಲ್ಲಿ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಾ ಮಾಲೀಕ ಸಂತೋಷ್‌ ಶೆರೆಕರ್‌ ಸೇರಿ ಮೂವರು ಆರೋಪಿಗಳನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ತನಿಖೆ ನಡೆಸಿ ಬಂಧಿಸಿದ್ದಾರೆ. ಇನ್ನಿಬ್ಬರನ್ನು ವಶಪಡಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಬುಧವಾರ ಬೆಳಗಿನ ಜಾವ ಮುಂಬೈನ ವೊರ್ಲಿಯಲ್ಲಿರುವ ಸಾಫ್ಟ್‌ ಟಚ್‌ ಸ್ಪಾದಲ್ಲಿ 48 ವರ್ಷದ ಗುರು ವಾಘ್ಮರೆಯನ್ನು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

VISTARANEWS.COM


on

Mumbai Spa
Koo

ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿರುವ (Mumbai) ವೊರ್ಲಿ ಪ್ರದೇಶದ ಸ್ಪಾ (Spa) ಒಂದರಲ್ಲಿ ಕೊಲೆಯಾದ ವ್ಯಕ್ತಿಯ ಮೈಮೇಲೆ ಇದ್ದ ಟ್ಯಾಟೂ, ಟ್ಯಾಟೂ ಹಾಕಿಸಿಕೊಂಡ ಹೆಸರುಗಳು ಕೊಲೆ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿದೆ. ಟ್ಯಾಟೂ (Tattoo) ಹೆಸರುಗಳೇ ಹಿಸ್ಟರಿ ಶೀಟರ್‌ ಗುರು ವಾಘ್ಮರೆಯ ಕೊಲೆ ಆರೋಪಿಗಳನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ತನಿಖೆ ನಡೆಸಿ, ಇದುವರೆಗೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣವೀಗ ದೇಶಾದ್ಯಂತ ಸುದ್ದಿಯಾಗಿದೆ.

ಗುರು ವಾಘ್ಮರೆಯನ್ನು ಜುಲೈ 24ರಂದು ಸ್ಪಾನಲ್ಲಿ ಕೊಲೆ ಮಾಡಲಾಗಿದೆ. ಸ್ಪಾ ಮಾಲೀಕ ಸಂತೋಷ್‌ ಶೆರೆಕರ್‌ ಸೇರಿ ಮೂವರು ಆರೋಪಿಗಳನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ತನಿಖೆ ನಡೆಸಿ ಬಂಧಿಸಿದ್ದಾರೆ. ಇನ್ನಿಬ್ಬರನ್ನು ವಶಪಡಿಸಿಕೊಂಡು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಬುಧವಾರ ಬೆಳಗಿನ ಜಾವ ಮುಂಬೈನ ವೊರ್ಲಿಯಲ್ಲಿರುವ ಸಾಫ್ಟ್‌ ಟಚ್‌ ಸ್ಪಾದಲ್ಲಿ 48 ವರ್ಷದ ಗುರು ವಾಘ್ಮರೆಯನ್ನು ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

Mumbai Spa
Mumbai Spa

ಟ್ಯಾಟೂ ಹೆಸರುಗಳೇ ಕೇಸ್‌ ಭೇದಿಸಲು ಕಾರಣ

ಗುರು ವಾಘ್ಮರೆಯು ಆರ್‌ಟಿಇ ಕಾರ್ಯಕರ್ತನೂ ಆಗಿದ್ದು, ಆತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಈತನು ಹಿಸ್ಟರಿ ಶೀಟರ್‌ ಕೂಡ ಆಗಿದ್ದಾನೆ. ಆದರೆ, ಹತ್ಯೆಗೀಡಾಗುವ ಮುನ್ನ ಅಪಾಯದ ಮುನ್ಸೂಚನೆ ಅರಿತಿದ್ದ ಗುರು ವಾಘ್ಮರೆಯು ತನಗಿದ್ದ 22 ವೈರಿಗಳ ಹೆಸರುಗಳನ್ನು ತೊಡೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದ. ಪೋಸ್ಟ್‌ ಮಾರ್ಟಮ್‌ ಮಾಡುವ ವೇಳೆ ತೊಡೆಯ ಮೇಲೆ ಕಾಣಿಸಿದ ಹೆಸರುಗಳ ಜಾಡು ಹಿಡಿದು ಹೊರಟ ಪೊಲೀಸರಿಗೆ ಕೊಲೆ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಗುರು ವಾಘ್ಮರೆಯು ಸ್ಪಾ ಮಾಲೀಕ ಸಂತೋಷ್‌ ಶೆರೆಕರ್‌ಗೆ ಹಣಕ್ಕಾಗಿ ಪೀಡಿಸುವುದು, ಬೆದರಿಕೆ ಹಾಕುವುದು ಸೇರಿ ಹಲವು ರೀತಿಯಲ್ಲಿ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತಿದ್ದ ಸಂತೋಷ್‌, ಗುರು ವಾಘ್ಮರೆಯ ಹತ್ಯೆಗೆ ಸುಪಾರಿ ನೀಡಿದ್ದ ಎಂದು ತಿಳಿದುಬಂದಿದೆ. ಗುರು ವಾಘ್ಮರೆಯನ್ನು ಕೊಲ್ಲಲು ಮೊಹಮ್ಮದ್‌ ಫಿರೋಜ್‌ ಅನ್ಸಾರಿಗೆ ಸಂತೋಷ್‌ 6 ಲಕ್ಷ ರೂ. ನೀಡಿದ್ದ ಎನ್ನಲಾಗಿದೆ.

ಮೊಹಮ್ಮದ್‌ ಫಿರೋಜ್‌ ಅನ್ಸಾರಿಗೂ ಗುರು ಮೇಲೆ ಸೇಡಿತ್ತು. ಕಳೆದ ವರ್ಷ ಮುಂಬೈನ ನಲ್ಲಾಸೋಪರ ಬಳಿಯಲ್ಲಿದ್ದ ಮೊಹಮ್ಮದ್‌ ಫಿರೋಜ್‌ ಅನ್ಸಾರಿ ಒಡೆತನದ ಸ್ಪಾ ಮೇಲೆ ಪೊಲೀಸರು ದಾಳಿ ನಡೆಸಿ, ಅದನ್ನು ಸ್ಥಗಿತಗೊಳಿಸಿದ್ದರು. ಗುರು ವಾಘ್ಮರೆ ನೀಡಿದ ದೂರಿನಿಂದಾಗಿಯೇ ಸ್ಪಾ ಸ್ಥಗಿತಗೊಂಡಿತ್ತು. ಹಾಗಾಗಿ, ಅನ್ಸಾರಿಯು ಕೆಲವರೊಂದಿಗೆ ಸೇರಿ ಗುರು ವಾಘ್ಮರೆಯನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Murder in PG: ಗೆಳತಿಗಾಗಿ ಕೊಲೆಯಾಗಿ ಹೋದ ಕೃತಿ ಕುಮಾರಿ; ಪ್ರೇಯಸಿಯನ್ನು ಬಂಧನದಲ್ಲಿಟ್ಟು ಕ್ರೌರ್ಯ ಮೆರೆದ ಪಾತಕಿ

Continue Reading
Advertisement
Health Tips Kannada
ಆರೋಗ್ಯ11 mins ago

Health Tips Kannada: ಚಹಾ, ಕಾಫಿಯನ್ನು ಯಾವ ಸಮಯದಲ್ಲಿ ಕುಡಿಯಬಾರದು ಗೊತ್ತೇ?

Vastu Tips
ಧಾರ್ಮಿಕ56 mins ago

Vastu Tips: ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸಬೇಕೆಂದರೆ ಅಡುಗೆ ಮನೆ ಹೀಗಿರಬೇಕು!

Remedies For Fatty Liver
ಆರೋಗ್ಯ1 hour ago

Remedies For Fatty Liver: ಲಿವರ್‌ನ ಕೊಬ್ಬನ್ನು ನೈಸರ್ಗಿಕವಾಗಿ ಹೀಗೆ ಕರಗಿಸಲು ಸಾಧ್ಯ!

Shravan Month 2024
ಧಾರ್ಮಿಕ1 hour ago

Shravan 2024: ಶ್ರಾವಣ ಮಾಸದಲ್ಲಿ ಯಾವ ಆಹಾರ ತಿನ್ನಬೇಕು, ಯಾವುದನ್ನು ತಿನ್ನಬಾರದು?

karnataka Weather Forecast
ಮಳೆ1 hour ago

Karnataka Weather : ಕರಾವಳಿ-ಮಲೆನಾಡಿನಲ್ಲಿ ಮುಂದುವರಿಯಲಿದೆ ಮಳೆ ಅಬ್ಬರ- ಇರಲಿ ಎಚ್ಚರ

dina bhavishya
ಭವಿಷ್ಯ2 hours ago

Dina Bhavishya : ಈ ರಾಶಿಯವರಿಗೆ ಮಾತೇ ಮೃತ್ಯು, ಮೌನಕ್ಕೆ ಶರಣಾಗಿ

Paris Olympics 2024
ಪ್ರಮುಖ ಸುದ್ದಿ6 hours ago

Paris Olympics 2024 : ಪ್ರಣಯ ನಗರಿ ಪ್ಯಾರಿಸ್​ನಲ್ಲಿ ಒಲಿಂಪಿಕ್ಸ್​ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ

Mumbai Spa
ಪ್ರಮುಖ ಸುದ್ದಿ7 hours ago

ಕೊಲೆಯಾದ ರೌಡಿಯ ಮೈಮೇಲಿದ್ದ ಟ್ಯಾಟೂ ನೆರವಿನಿಂದ ಆರೋಪಿಗಳ ಬಂಧನ; ಹೇಗಂತೀರಾ? ಇಲ್ಲಿದೆ ರೋಚಕ ಕತೆ

Paris Olympics 2024
ಪ್ರಮುಖ ಸುದ್ದಿ7 hours ago

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾಗಿಯಾಗಿರುವ ಭಾರತದ ಅಥ್ಲೀಟ್​ಗಳಿಗೆ ಶುಭ ಕೋರಿದ ಪ್ರಧಾನಿ ಮೋದಿ

Vijay Mallya
ದೇಶ7 hours ago

Vijay Mallya: ವಿಜಯ್‌ ಮಲ್ಯಗೆ ಸೆಬಿ ಶಾಕ್;‌ 3 ವರ್ಷ ಸೆಕ್ಯುರಿಟೀಸ್‌ ಟ್ರೇಡಿಂಗ್‌ನಿಂದ ನಿಷೇಧ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Ankola landslide
ಉತ್ತರ ಕನ್ನಡ12 hours ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ13 hours ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ14 hours ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

Karnataka rain
ಮಳೆ15 hours ago

Karnataka Rain : ಹಾಸನದಲ್ಲಿ ಹೇಮಾವತಿ, ಚಿಕ್ಕಮಗಳೂರಲ್ಲಿ ಭದ್ರೆಯ ಅಬ್ಬರಕ್ಕೆ ಜನರು ತತ್ತರ

karnataka Rain
ಮಳೆ2 days ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್2 days ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ2 days ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ2 days ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ3 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ4 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

ಟ್ರೆಂಡಿಂಗ್‌