Dina Bhavishya: ಈ ರಾಶಿಯವರು ಅತ್ಯುತ್ಸಾಹದಲ್ಲಿ ಅತಿರೇಕದ ಮಾತುಗಳನ್ನು ಆಡುವುದು ಬೇಡ! - Vistara News

ಪ್ರಮುಖ ಸುದ್ದಿ

Dina Bhavishya: ಈ ರಾಶಿಯವರು ಅತ್ಯುತ್ಸಾಹದಲ್ಲಿ ಅತಿರೇಕದ ಮಾತುಗಳನ್ನು ಆಡುವುದು ಬೇಡ!

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷದ ಪಂಚಮಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

Dina Bhavishya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಂದ್ರನು ಮೇಷ ರಾಶಿಯನ್ನು ಗುರುವಾರ ಬೆಳಗ್ಗೆ 10:52ಕ್ಕೆ ಪ್ರವೇಶಿಸುತ್ತಾನೆ. ಇದರಿಂದ ವೃಷಭ, ಮಿಥುನ, ಕನ್ಯಾ, ತುಲಾ, ಮಕರ, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ಕುಂಭ ರಾಶಿಯವರಿಗೆ ಅತಿಯಾದ ಉತ್ಸಾಹದ ಭರದಲ್ಲಿ ಆಡುವ ಅತಿರೇಕದ ಮಾತುಗಳು ಅಪಾಯ ತರಲಿದೆ. ಇನ್ನು ಧನಸ್ಸು ರಾಶಿಯವರಿಗೆ ಕುಟುಂಬದ ಸದಸ್ಯರ ವರ್ತನೆ ಮುಜುಗರ ಉಂಟು ಮಾಡುವ ಸಾಧ್ಯತೆ ಇದ್ದು, ಆರೋಗ್ಯದ ವ್ಯತ್ಯಾಸದಿಂದ ದಿನದ ಮಟ್ಟಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (25-07-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ.
ತಿಥಿ: ಪಂಚಮಿ 25:57 ವಾರ: ಗುರುವಾರ
ನಕ್ಷತ್ರ: ಪೂರ್ವ ಭಾದ್ರಪದ 16:15 ಯೋಗ: ಶೋಭನ 07:47
ಕರಣ: ಕೌಲವ 15:16 ಅಮೃತಕಾಲ: ಬೆಳಗ್ಗೆ 08:55 ರಿಂದ 10:24ರವರೆಗೆ
ದಿನದ ವಿಶೇಷ: ಪಂಚಮಿ, ಟೀಕಾಚಾರ್ಯರ ಆರಾಧನೆ

ಸೂರ್ಯೋದಯ : 05:54   ಸೂರ್ಯಾಸ್ತ : 07:12

ರಾಹುಕಾಲ: ಮಧ್ಯಾಹ್ನ 1.30 ರಿಂದ 3.00
ಗುಳಿಕಕಾಲ: ಬೆಳಗ್ಗೆ 9.00 ರಿಂದ 10.30
ಯಮಗಂಡಕಾಲ: ಬೆಳಗ್ಗೆ 6.00 ರಿಂದ 7.00

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಮಕ್ಕಳ ಆರೋಗ್ಯದ ಬಗೆಗೆ ಕಾಳಜಿ ವಹಿಸಿ. ದಿನದ ಮಟ್ಟಿಗೆ ಖರ್ಚು. ಪ್ರಯಾಣದ ಸಾಧ್ಯತೆ. ಬಹಳ ದಿನಗಳ ಕನಸು ನನಸಾಗುವ ಕಾಲ ಕೂಡಿ ಬರಲಿದೆ. ಉದ್ಯೋಗಿಗಳಿಗೆ ಶುಭ ಫಲ ಸಿಗಲಿದೆ.
ಅದೃಷ್ಟ ಸಂಖ್ಯೆ: 2

Horoscope Today

ವೃಷಭ: ಹಾಸ್ಯದ ಮನೋವೃತ್ತಿ ಇತರರನ್ನು ಆಕರ್ಷಿಸುತ್ತದೆ. ಸ್ನೇಹಿತರೊಂದಿಗೆ ಸಮಯ ಕಳೆಯುವ ಸಾಧ್ಯತೆ. ಆರೋಗ್ಯ ಪರಿಪೂರ್ಣವಾಗಿರಲಿದ್ದು, ಕೌಟುಂಬಿಕವಾಗಿ ಶುಭ ಫಲ ದೊರೆಯಲಿದೆ.
ಅದೃಷ್ಟ ಸಂಖ್ಯೆ: 1

Horoscope Today

ಮಿಥುನ: ಆರೋಗ್ಯದ ಕುರಿತಾಗಿ ಕಾಳಜಿ ವಹಿಸಿ. ಆರ್ಥಿಕ ಪ್ರಗತಿ ಸಾಧಾರಣ. ಸ್ನೇಹಿತರು, ಆಪ್ತ ಸಂಬಂಧಿಕರಿಂದ ಮಾರ್ಗದರ್ಶನ, ಉಡುಗೊರೆ ಸಿಗುವ ಸಾಧ್ಯತೆ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಸೌಜನ್ಯದಿಂದ ವರ್ತಿಸಿ. ಯಾವುದೇ ಆತುರದ ಮಾತುಗಳನ್ನು ಆಡುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8

Horoscope Today

ಕಟಕ: ನ್ಯಾಯಾಲಯದಲ್ಲಿರುವ ವ್ಯಾಜ್ಯ ಪ್ರಕರಣಗಳು ನಿಮಗೆ ವಿಜಯವನ್ನು ತಂದುಕೊಡಲಿದೆ. ಒತ್ತಡದ ಹೊರತಾಗಿಯೂ ಆರೋಗ್ಯ ಪರಿಪೂರ್ಣ. ಸಂಗಾತಿಯ ಮನಸ್ಸಿನ ಭಾವನೆಗಳನ್ನು ಅರ್ಥ ಮಾಡಿಕೊಳ್ಳವಿರಿ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

Horoscope Today

ಸಿಂಹ: ಮಾನಸಿಕ ಒತ್ತಡದಿಂದ ಹೊರಬರಲು ವ್ಯಸನಗಳ ಮೊರೆ ಹೋಗುವುದು ಬೇಡ, ಬದಲಾಗಿ ಕ್ಷೇತ್ರ ದರ್ಶನ, ಆಧ್ಯಾತ್ಮಿಕ ವ್ಯಕ್ತಿಗಳ ಮಾರ್ಗದರ್ಶನ ಪಡೆಯುವುದು ಸೂಕ್ತ. ಆರೋಗ್ಯ ಮಧ್ಯಮ. ವ್ಯಾಪಾರ ವ್ಯವಹಾರ ಹಾಗೂ ಹಣಕಾಸು ವ್ಯವಹಾರದಲ್ಲಿ ಪ್ರಗತಿ. ಉದ್ಯೋಗಿಗಳಿಗೆ ಬಿಡುವಿಲ್ಲದ ಕಾರ್ಯ ಚಟುವಟಿಕೆಯ ಮಧ್ಯೆಯೂ ಯಶಸ್ಸು ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಕನ್ಯಾ: ಭೂ ಸಂಬಂಧಿ, ಹಣಕಾಸು ಹೂಡಿಕೆ ವ್ಯವಹಾರದಲ್ಲಿ ಲಾಭವಾಗಲಿದೆ. ಸಂಗಾತಿಯೊಂದಿಗೆ ಮುಖ್ಯ ವಿಷಯಗಳ ಕುರಿತು ಚರ್ಚೆ. ಉದ್ಯೋಗಿಗಳಿಗೆ ಶುಭ ಫಲ. ಆರೋಗ್ಯ ಪರಿಪೂರ್ಣ. ಪ್ರಯಾಣ ಮಾಡುವ ಸಾಧ್ಯತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 8

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಹಿರಿಯರ ಮಾರ್ಗದರ್ಶನ ಸಿಗಲಿದೆ, ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಕುಟುಂಬದಲ್ಲಿ ಅನೇಕ ಬದಲಾವಣೆಗಳನ್ನು ಕಾಣುವ ಸಾಧ್ಯತೆ. ಕುಟುಂಬದ ಆಪ್ತರೊಂದಿಗೆ ಗೌಪ್ಯ ವಿಷಯಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರಿಕೆ ಇರಲಿ. ನಿಮಗಲ್ಲದವರ ಕುರಿತು ಅನಗತ್ಯವಾಗಿ ಚರ್ಚೆ ಮಾಡಿ, ಕುಟುಂಬದ ಸ್ವಾಸ್ಥ್ಯ ಕೆಡಿಸಿಕೊಳ್ಳುವುದು ಬೇಡ. ಆರೋಗ್ಯ ಮಧ್ಯಮ.ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 2

Horoscope Today

ವೃಶ್ಚಿಕ: ನಕಾರಾತ್ಮಕ ಆಲೋಚನೆಗಳು ನಿಮ್ಮನ್ನು ಘಾಸಿ ಮಾಡುವ ಸಾಧ್ಯತೆ. ಆಲಸ್ಯತನದಿಂದ ಕಾರ್ಯ ಮುಂದುಡುವುದು ಬೇಡ. ಅಮೂಲ್ಯ ವಸ್ತುಗಳ ಕುರಿತಾಗಿ ಜಾಗ್ರತೆ ಇರಲಿ. ಸ್ನೇಹಿತರೊಂದಿಗೆ ಕಾಲ ಕಳೆಯುವ ಸಾಧ್ಯತೆ. ಆರೋಗ್ಯದ ಕುರಿತು ಕಾಳಜಿ ವಹಿಸುವುದು ಅಗತ್ಯ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 4

Horoscope Today

ಧನಸ್ಸು: ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವ ನಿರೀಕ್ಷೆ. ಅತಿಯಾದ ಒತ್ತಡ ಉಂಟುಮಾಡುವ ವಿಚಾರಗಳಿಂದ ದೂರ ಇರಿ. ಕುಟುಂಬದ ಆಪ್ತರಿಂದ ಶುಭ ಸುದ್ದಿ ಸಿಗುವ ಸಾಧ್ಯತೆ. ಕುಟುಂಬದ ಸದಸ್ಯರ ವರ್ತನೆ ಮುಜುಗರ ಉಂಟು ಮಾಡುವ ಸಾಧ್ಯತೆ. ಆರೋಗ್ಯದ ವ್ಯತ್ಯಾಸದಿಂದ ದಿನದ ಮಟ್ಟಿಗೆ ಖರ್ಚು ಮಾಡುವ ಸಾಧ್ಯತೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಮಕರ: ಹಾಸ್ಯ ಪ್ರವೃತ್ತಿಯಿಂದ ಬರುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಹಣಕಾಸು ವ್ಯವಹಾರದಲ್ಲಿ ಪ್ರಗತಿ. ಕುಟುಂಬದವರು ನಿಮ್ಮ ಬಗೆಗೆ ಹೆಚ್ಚು ಕಾಳಜಿ ವಹಹಿಸುವರು. ಆರೋಗ್ಯ‌ ಪರಿಪೂರ್ಣ.ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಕುಂಭ: ಶೀಘ್ರ ಕೋಪದಿಂದ ಅಪಾಯ ತಂದುಕೊಳ್ಳುವುದು ಬೇಡ. ಅತಿಯಾದ ಉತ್ಸಾಹದ ಭರದಲ್ಲಿ ಅತಿರೇಕದ ಮಾತುಗಳನ್ನು ಆಡುವುದು ಸರಿಯಲ್ಲ, ಅಪಾಯ ತಂದಿತು ಎಚ್ಚರಿಕೆ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ ಉಂಟು ಮಾಡುವ ಸಾಧ್ಯತೆ. ಸಂಗಾತಿಯ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಆಗುವ ಸಾಧ್ಯತೆ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 7

Horoscope Today

ಮೀನ: ಆಹಾರ ಕ್ರಮದ ವ್ಯತ್ಯಾಸದಿಂದ ಆರೋಗ್ಯ ಹದಗೆಡುವ ಸಾಧ್ಯತೆ. ಸಂಗಾತಿಯ ಮಾತುಗಳು ಹಿತವೇನಿಸಿದರೂ ಅವರ ಮಾತುಗಳಿಗೆ ಮನ್ನಣೆ ಸಿಗುವುದಿಲ್ಲ. ಆರೋಗ್ಯ ಹಾಗೂ ಹಣಕಾಸಿನ ವಿಷಯದಲ್ಲಿ ಸಾಮಾನ್ಯ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Kargil Vijay Diwas 2024: ಕಾರ್ಗಿಲ್ ವೀರರ ಶೌರ್ಯ, ತ್ಯಾಗದ ಕಥೆ ಹೇಳುವ ಈ 5 ಸಿನಿಮಾಗಳನ್ನು ಇನ್ನೊಮ್ಮೆ ನೋಡಿ

ಕಾರ್ಗಿಲ್ ಯುದ್ಧದಲ್ಲಿ(Kargil Vijay Diwas 2024) ಸುಮಾರು 30,000 ಭಾರತೀಯ ಸೈನಿಕರು ಪಾಕಿಸ್ತಾನದ ಸೈನಿಕರ ವಿರುದ್ಧ ಹೋರಾಡಿದ್ದು, 527 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಆದರೆ ಈ ಯುದ್ಧದಲ್ಲಿ ಭಾರತೀಯ ವೀರ ಸೈನಿಕರು ಪಾಕಿಸ್ತಾನಕ್ಕೆ ಮರೆಯಲಾಗದ ಪಾಠ ಕಲಿಸಿದ್ದರು. ಅವರ ತ್ಯಾಗ ಮತ್ತು ಸ್ಫೂರ್ತಿದಾಯಕ ಕತೆಗಳನ್ನು ವಿವರವಾಗಿ ಸೆರೆ ಹಿಡಿದಿರುವ ಐದು ಹಿಂದಿ ಭಾಷೆಯ ಚಲನಚಿತ್ರಗಳ ಮಾಹಿತಿ ಇಲ್ಲಿದೆ.

VISTARANEWS.COM


on

By

Kargil Vijay Diwas 2024
Koo

ದೇಶಾದ್ಯಂತ ಜುಲೈ 26ರಂದು ಕಾರ್ಗಿಲ್ ವಿಜಯ್ ದಿವಸ್ (Kargil Vijay Diwas 2024) ಆಚರಿಸಲಾಗುತ್ತದೆ. 1999ರ ಮೇ ತಿಂಗಳಿನಿಂದ ಜುಲೈವರೆಗೆ ನಡೆದ ಕಾರ್ಗಿಲ್ ಯುದ್ಧದಲ್ಲಿ (kargil war) ಪಾಕಿಸ್ತಾನದ ವಿರುದ್ಧ ಭಾರತದ (India and pakistan war) ವಿಜಯದ ಸ್ಮರಣಾರ್ಥವಾಗಿ ಈ ದಿನವನ್ನು ದೇಶಾದ್ಯಂತ ಆಚರಿಸಲಾಗುತ್ತದೆ. ದೇಶದ ಗಡಿ ಭಾಗದಲ್ಲಿ ಭಾರತದ ಒಳನುಗ್ಗಿದ ಪಾಕಿಸ್ತಾನದ ನುಸುಳುಕೋರರನ್ನು ಈ ದಿನ ಭಾರತೀಯ ಸೇನೆಯು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿತ್ತು.

ಸುಮಾರು ಎರಡು ತಿಂಗಳ ಕಾಲ ನಡೆದ ಯುದ್ಧವನ್ನು ಹಲವಾರು ಬಾಲಿವುಡ್ ಚಲನಚಿತ್ರಗಳಲ್ಲಿ ಚಿತ್ರಿಸಲಾಗಿದೆ. ವಿಶಿಷ್ಟ ಕಥೆಗಳ ಮೂಲಕ ಭಾರತೀಯ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಧೈರ್ಯವನ್ನು ಚಿತ್ರದ ಮೂಲಕ ಶ್ಲಾಘಿಸಲಾಗಿದೆ. ಸುಮಾರು 30,000 ಭಾರತೀಯ ಸೈನಿಕರು ಪಾಕಿಸ್ತಾನದ ಸೈನಿಕರ ವಿರುದ್ಧ ಹೋರಾಡಿದ್ದು, ಈ ಯುದ್ಧದಲ್ಲಿ 527 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಅವರ ತ್ಯಾಗ ಮತ್ತು ಸ್ಫೂರ್ತಿದಾಯಕ ಖಾತೆಗಳನ್ನು ವಿವರವಾಗಿ ಸೆರೆಹಿಡಿದಿರುವ ಐದು ಹಿಂದಿ ಭಾಷೆಯ ಚಲನಚಿತ್ರಗಳ ಮಾಹಿತಿ ಇಲ್ಲಿದೆ.

ಎಲ್ ಒ ಸಿ ಕಾರ್ಗಿಲ್ (2003)

ಖ್ಯಾತ ಚಲನಚಿತ್ರ ನಿರ್ಮಾಪಕ ಜೆ.ಪಿ. ದತ್ತಾ ಅವರು ನಿರ್ದೇಶಿಸಿರುವ ಈ ಚಲನಚಿತ್ರವು ಭಾರತೀಯ ಸೇನೆಯ ಯಶಸ್ವಿ ‘ಆಪರೇಷನ್ ವಿಜಯ್’ ಅನ್ನು ವಿವರಿಸಿದೆ. ಸಂಜಯ್ ದತ್, ಸೈಫ್ ಅಲಿ ಖಾನ್, ಅಜಯ್ ದೇವಗನ್, ಅಭಿಷೇಕ್ ಬಚ್ಚನ್, ನಾಗಾರ್ಜುನ, ಕರೀನಾ ಕಪೂರ್, ರಾಣಿ ಮುಖರ್ಜಿ, ರವೀನಾ ಟಂಡನ್, ಇಶಾ ದೇವ್ ಅವರನ್ನು ಒಳಗೊಂಡ ಈ ಚಿತ್ರ ಕಾರ್ಗಿಲ್ ಸೈನಿಕರ ಕಥೆ ಮತ್ತು ಪಾಕಿಸ್ತಾನವನ್ನು ಸೋಲಿಸಲು ಅವರ ಹೋರಾಟದ ಚಿತ್ರಣವನ್ನು ಹೇಳಿದೆ. ಈ ಚಿತ್ರವು ಸುಮಾರು 4 ಗಂಟೆಗಳ ಅವಧಿಯದಾಗಿದ್ದು, ವಿಶ್ವದ ಅತಿ ಉದ್ದದ ಚಲನಚಿತ್ರ ಎಂಬ ಅಪರೂಪದ ಹೆಗ್ಗಳಿಕೆಗೆ ಪಾತ್ರವಾಗಿದೆ.


ಮೌಸಮ್ (2011)

ಹಿರಿಯ ನಟ ಪಂಕಜ್ ಕಪೂರ್ ನಿರ್ದೇಶಿಸಿರುವ ರೊಮ್ಯಾಂಟಿಕ್ ಚಿತ್ರ ಇದಾಗಿದೆ. ಶಾಹಿದ್ ಕಪೂರ್ ಮತ್ತು ಸೋನಮ್ ಕಪೂರ್ ನಟಿಸಿರುವ ಈ ಚಿತ್ರ ಕೇವಲ ಕಾರ್ಗಿಲ್ ಯುದ್ಧವನ್ನು ಆಧರಿಸಿಲ್ಲವಾದರೂ ಇದು ಘಟನೆಗಳ ಪ್ರಮುಖ ತಿರುವುಗಳಲ್ಲಿ ಯುದ್ಧವನ್ನು ಉಲ್ಲೇಖಿಸುತ್ತದೆ. ಚಿತ್ರವು ವಿಮರ್ಶಾತ್ಮಕವಾಗಿ ಮೆಚ್ಚುಗೆ ಗಳಿಸಿತು. ಆದರೆ ಇದು ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಸಾಧಿಸಿಲ್ಲವಾದರೂ ಈ ಚಿತ್ರದಲ್ಲಿ ಕಾರ್ಗಿಲ್ ಯುದ್ಧದ ಹೊರತಾಗಿ, 1993ರ ಬಾಂಬೆ ಸ್ಫೋಟಗಳು, 9/11 ದಾಳಿಗಳು ಮತ್ತು ಬಾಂಬೆ ಗಲಭೆಗಳ ಉಲ್ಲೇಖಗಳನ್ನು ಹೊಂದಿದೆ.


ಶೇರ್‌ಷಾ (2021)

ಜನಪ್ರಿಯ ತಮಿಳು ಚಲನಚಿತ್ರ ನಿರ್ಮಾಪಕ ವಿಷ್ಣುವರ್ಧನ್ ನಿರ್ದೇಶನದ 2021ರ ಬ್ಲಾಕ್‌ಬಸ್ಟರ್ ಚಿತ್ರ ಇದು. ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಜೀವನವನ್ನು ಇದು ಆಧರಿಸಿದೆ. ಧರ್ಮ ಪ್ರೊಡಕ್ಷನ್ಸ್ ನಿರ್ಮಿಸಿದ ಈ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಕ್ಯಾಪ್ಟನ್ ಬಾತ್ರಾ ಪಾತ್ರದಲ್ಲಿ ಮತ್ತು ಕಿಯಾರಾ ಅಡ್ವಾಣಿ ಬಾತ್ರಾ ಗೆಳತಿಯಾಗಿ ಡಿಂಪಲ್ ಚೀಮಾ ಪಾತ್ರವನ್ನು ನಿರ್ವಹಿಸಿದ್ದರು. ಚಲನಚಿತ್ರವು ಸಕಾರಾತ್ಮಕ ವಿಮರ್ಶೆ ಗಳಿಸಿತ್ತು. 2021ರಲ್ಲಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಅತಿ ಹೆಚ್ಚು ವೀಕ್ಷಿಸಿದ ಹಿಂದಿ ಚಲನಚಿತ್ರಗಳಲ್ಲಿ ಇದು ಒಂದಾಗಿದೆ.


ಲಕ್ಷ್ಯ್ (2004)

ಹೃತಿಕ್ ರೋಷನ್ ಅಭಿನಯದ ಈ ಚಿತ್ರವನ್ನು ಫರ್ಹಾನ್ ಅಖ್ತರ್ ನಿರ್ದೇಶಿಸಿದ್ದಾರೆ. ಕಾರ್ಗಿಲ್ ಯುದ್ಧಕ್ಕೆ ನೇರವಾಗಿ ಸಂಬಂಧಿಸದಿದ್ದರೂ ಕಾರ್ಗಿಲ್ ಯುದ್ಧದ ಘಟನೆಗಳ ಉಲ್ಲೇಖವನ್ನು ಚಿತ್ರದಲ್ಲಿ ಕಾಣಬಹುದು. ಭಾರತೀಯ ಸೇನೆಗೆ ಸೇರುವ ಮತ್ತು ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯದಲ್ಲಿ ಸಹಾಯ ಮಾಡುವ ಉದ್ದೇಶವಿಲ್ಲದ ಯುವಕ ಕರಣ್ ಶೆರ್ಗಿಲ್ ಪಾತ್ರದಲ್ಲಿ ರೋಸನ್ ನಟಿಸಿದ್ದಾರೆ.‌ ಈ ಚಿತ್ರದ ಪಾತ್ರಗಳಲ್ಲಿ ಕಾರ್ಗಿಲ್‌ ಯುದ್ಧ ವೀರರ ಬದುಕಿನ ಛಾಯೆ ಇದೆ.

ಇದನ್ನೂ ಓದಿ: Actor Dhanush: ಸಿನಿಮಾ ಬಿಡುಗಡೆಗೂ ಮುನ್ನ ದೇವರ ಮೊರೆ ಹೋದ ನಟ ಧನುಷ್

ಧೂಪ್ (2003)

ಅಶ್ವಿನಿ ಚೌಧರಿ ನಿರ್ದೇಶನದ ಈ ಚಿತ್ರವು ಟೈಗರ್ ಹಿಲ್ ಅನ್ನು ಪಾಕಿಸ್ತಾನಿ ಪಡೆಗಳಿಂದ ರಕ್ಷಿಸಲು ಮಡಿದ ಭಾರತೀಯ ಸೇನಾ ಅಧಿಕಾರಿ ಕ್ಯಾಪ್ಟನ್ ಅನುಜ್ ನಯ್ಯರ್ ಅವರ ಸಾವಿನ ಅನಂತರದ ಪರಿಣಾಮಗಳನ್ನು ವಿವರಿಸುತ್ತದೆ. ಕ್ಯಾಪ್ಟನ್ ಅನುಜ್ ಅವರ ತ್ಯಾಗದ ಸ್ಮರಣಾರ್ಥ ಸ್ಮಾರಕವನ್ನು ನಿರ್ಮಿಸುವ ಪ್ರಯತ್ನದಲ್ಲಿ ನಯ್ಯರ್ ಕುಟುಂಬ ಎದುರಿಸಿದ ಭ್ರಷ್ಟಾಚಾರ ಮತ್ತು ಭಾರತೀಯ ಅಧಿಕಾರಶಾಹಿಯ ಅನುಭವಗಳನ್ನು ಚಿತ್ರದಲ್ಲಿ ವಿವರಿಸಲಾಗಿದೆ.

Continue Reading

ಕರ್ನಾಟಕ

Parashuram D : ವಿಸ್ತಾರ ಮೀಡಿಯಾದ ನೂತನ ಜಿ.ಎಮ್ ಆಗಿ ಪರಶುರಾಮ ಡಿ

Parashuram D: ವಿಸ್ತಾರ ಮೀಡಿಯಾದಲ್ಲಿ ಸಿಒಒ (ಚೀಫ್‌ ಆಪರೇಷನಲ್‌ ಆಫೀಸರ್‌) ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪರಶುರಾಮ್‌ ಡಿ ಅವರಿಗೆ ಜಿ.ಎಮ್‌ ಆಗಿ ಪದೋನ್ನತಿ ನೀಡಲಾಗಿದೆ. ಮಾಧ್ಯಮ ಕ್ಷೇತ್ರದಲ್ಲಿ ಸುಮಾರು ಎರಡು ದಶಕಗಳ ಅನುಭವ ಹೊಂದಿರುವ ಪರಶುರಾಮ್ ಡಿ ಅವರು ನುರಿತ ತಂತ್ರಜ್ಞರ ತಂಡದ ಮುಖ್ಯಸ್ಥರಾಗಿ ಅನೇಕ ಸಂಸ್ಥೆಗಳನ್ನು ಕಟ್ಟಿ ಬೆಳೆಸುವಲ್ಲಿ ಅಮೂಲ್ಯ ಕೊಡುಗೆ ನೀಡಿದ್ದಾರೆ. ಈ ಮೂಲಕ ಮಾಧ್ಯಮ ರಂಗದಲ್ಲಿ ಹೆಸರುವಾಸಿಯಾಗಿದ್ದಾರೆ. ನಾಡಿನಾದ್ಯಂತ ಪ್ರಸಿದ್ಧಿ ಪಡೆಯುತ್ತಿರುವ ʼವಿಸ್ತಾರ ನ್ಯೂಸ್‌ʼ ಚಾನೆಲ್ ಆರಂಭಿಕ ಕಾರ್ಯದಿಂದ ಹಿಡಿದು ಇಲ್ಲಿಯವರೆಗೆ ಪ್ರತಿ ಹೆಜ್ಜೆಯಲ್ಲಿಯೂ ಪರಿಶ್ರಮ ವಹಿಸಿದ್ದಾರೆ.

VISTARANEWS.COM


on

Parashuram D
Koo


ಬೆಂಗಳೂರು: ವಿಸ್ತಾರ ಮೀಡಿಯಾದ ನೂತನ ಜಿ ಎಮ್‌ (ಆಪರೇಷನ್‌) ಆಗಿ ಪರಶುರಾಮ್ ಡಿ (Parashuram D) ಅವರನ್ನು ನೇಮಕ ಮಾಡಲಾಗಿದೆ. ಪರಶುರಾಮ್‌ ಅವರು ಈಗ ವಿಸ್ತಾರ ಮೀಡಿಯಾದಲ್ಲಿ ಸಿಒಒ (ಚೀಫ್‌ ಆಪರೇಷನಲ್‌ ಆಫೀಸರ್‌) ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಮಾಧ್ಯಮ ಕ್ಷೇತ್ರದಲ್ಲಿ ಸುಮಾರು ಎರಡು ದಶಕಗಳ ಅನುಭವ ಹೊಂದಿರುವ ಪರಶುರಾಮ್ ಡಿ ಅವರು ನುರಿತ ತಂತ್ರಜ್ಞರ ತಂಡದ ಮುಖ್ಯಸ್ಥರಾಗಿ ಅನೇಕ ಸಂಸ್ಥೆಗಳನ್ನು ಕಟ್ಟಿ ಬೆಳೆಸುವಲ್ಲಿ ಅಮೂಲ್ಯ ಕೊಡುಗೆ ನೀಡಿದ್ದಾರೆ. ಈ ಮೂಲಕ ಮಾಧ್ಯಮ ರಂಗದಲ್ಲಿ ಹೆಸರುವಾಸಿಯಾಗಿದ್ದಾರೆ.

ಟೆಲಿವಿಷನ್ ಲೋಕದಲ್ಲಿನ ಎಲ್ಲಾ ಬಗೆಯ ವಿಡಿಯೊ – ಆಡಿಯೊ ಪ್ರೊಡಕ್ಷನ್ ಮತ್ತು ಬ್ರಾಡ್ಕಾಸ್ಟ್ ವಿಭಾಗದಲ್ಲಿ ಭಾರತದಲ್ಲಿಯೇ ಅತ್ಯುತ್ತಮ ತಂತ್ರಜ್ಞರೆಂದು ಗುರುತಿಸಲ್ಪಡುವ ಕೆಲವೇ ಕೆಲವು ಮಂದಿಯಲ್ಲಿ ಪರಶುರಾಮ್ ಅವರೂ ಒಬ್ಬರು ಎಂಬುದು ಹೆಮ್ಮೆಯ ಸಂಗತಿ. ಅವರ ಕಾರ್ಯವ್ಯಾಪ್ತಿ ಅಷ್ಟಕ್ಕೇ ನಿಲ್ಲದೇ ಇನ್ನೂ ಮುಂದಕ್ಕೆ ಹೋಗಿ, ಟಿವಿ ಮಾಧ್ಯಮ ಸಂಸ್ಥೆಗಳನ್ನು ಕಟ್ಟುವಲ್ಲಿಯೂ ಮುಂದುವರಿದಿದೆ. ಆರಂಭದ ಕಾರ್ಯಯೋಜನೆ ರೂಪಿಸುವ ಹಂತದಿಂದ ಹಿಡಿದು, ನಿರ್ಮಾಣ ಕಾರ್ಯ, ಲೋಕಾರ್ಪಣೆವರೆಗಿನ ಎಲ್ಲಾ ಹಂತದಲ್ಲೂ ದಕ್ಷತೆಯಿಂದ ಕಾರ್ಯನಿರ್ವಹಿಸಿ ಅದಕ್ಕೆ ಬೇಕಾಗಿರುವ ನುರಿತ ತಂತ್ರಜ್ಞರ ತಂಡವನ್ನು ಕಟ್ಟಿ ಮುನ್ನಡೆಸುವ ಅದಮ್ಯ ಸಾಮರ್ಥ್ಯವನ್ನು ಇವರು ಬೆಳೆಸಿಕೊಂಡಿದ್ದಾರೆ. ಇದಕ್ಕೆ ಸಾಕ್ಷಿ ʼವಿಸ್ತಾರ ನ್ಯೂಸ್‌ʼ ಕನ್ನಡ ವಾಹಿನಿ.

ಈ ಟಿವಿಯಿಂದ ಬಿಗ್‌ ಬಾಸ್‌ವರೆಗೆ

ಪರಶುರಾಮ್‌ ಅವರು ಕನ್ನಡದ ಹೆಸರಾಂತ ಚಾನೆಲ್ ಎನಿಸಿಕೊಂಡ ʼಈ ಟಿವಿʼ ಕನ್ನಡ ವಾಹಿನಿಯ ತಾಂತ್ರಿಕ ವಿಭಾಗದಲ್ಲಿ ಕೆಲಸವನ್ನು ಪ್ರಾರಂಭಿಸಿದ್ದರು. ಕಿರುತೆರೆಯ ಮಾಧ್ಯಮ ಲೋಕದಲ್ಲಿ ಹೊಸ ಹೊಸ ಜವಾಬ್ದಾರಿಯನ್ನು, ಸಾಹಸವನ್ನು ಕೈಗೊಳ್ಳುತ್ತಾ ಟೆಕ್ನಿಕಲ್ ವಿಚಾರದಲ್ಲಿ ಹೆಚ್ಚು ಆಳವಾಗಿ ತಮ್ಮನ್ನು ತಾವು ತೊಡಗಿಸಿಕೊಂಡರು. ಮುಂದೆ ʼಸಮಯʼ ಮತ್ತು ʼಜನಶ್ರೀʼ ನ್ಯೂಸ್ ಚಾನೆಲ್‌ನಲ್ಲಿ ತಮ್ಮ ಕ್ರಿಯೇಟಿವಿಟಿಯಿಂದ ಮಾಧ್ಯಮ ಲೋಕದಲ್ಲಿ ಸಾಕಷ್ಟು ಹೆಸರನ್ನು ಸಂಪಾದಿಸಿದರು. ಇಂದು ನಾಡಿನಾದ್ಯಂತ ಮನೆ ಮಾತಾಗಿರುವ ರಿಯಾಲಿಟಿ ಶೋ ʼಬಿಗ್ ಬಾಸ್ʼ ಕನ್ನಡದ ಆನ್ ಲೈನ್ ತಾಂತ್ರಿಕ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿ ‘ಎಂಡಮೋಲ್’ ಕಂಪನಿಯಿಂದ ವಿಶೇಷ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಲೇಟೆಸ್ಟ್​ ಸುದ್ದಿಗಳಿಗಾಗಿ ವಿಸ್ತಾರ ನ್ಯೂಸ್​ ಓದಿ

ಈಗಿನ ʼರಿಪಬ್ಲಿಕ್ ಕನ್ನಡʼ ಚಾನೆಲ್ ಆಗಿ ಪರಿವರ್ತನೆಯಾಗಿರುವ ಅಂದಿನ ʼದಿಗ್ವಿಜಯ ನ್ಯೂಸ್ʼ ಚಾನೆಲ್‌ನಲ್ಲಿ “ಪ್ರೊಡಕ್ಷನ್ ಹೆಡ್” ಆಗಿ ತಮ್ಮದೇ ಆದ ಕ್ರಿಯಾಶೀಲ ತಂಡವನ್ನು ರಚಿಸಿಕೊಂಡು ದಿಗ್ವಿಜಯ ಚಾನೆಲ್ ಅನ್ನು ಕ್ರಿಯೇಟಿವ್ ಆಗಿ ಮುನ್ನಡೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಅಡ್ವರ್ಟೈಸಿಂಗ್ ಮತ್ತು ಬ್ರಾಂಡಿಂಗ್ ಛಾಪು

ತಮ್ಮದೇ ಆದ “ಅಧಿತಿ ಲಿಂಕ್ ಮೀಡಿಯಾ” ಎಂಬ ಸಂಸ್ಥೆಯ ಮೂಲಕ ಅಡ್ವರ್ಟೈಸಿಂಗ್ ಮತ್ತು ಬ್ರಾಂಡಿಂಗ್ ಲೋಕದಲ್ಲಿ ಹೊಸ ಛಾಪನ್ನೇ ಇವರು ಮೂಡಿಸಿ ಅಮೆಜಾನ್ ಪ್ರೈಮ್ ಮತ್ತು ಸ್ಪೈಸ್ ಕಂಪನಿಯೊಂದಿಗೆ ಚಲನಚಿತ್ರಗಳ ಪ್ರಮೋಷನ್ ವಿಭಾಗದಲ್ಲಿ ಹಾಗೂ ಮೈತ್ರಿ ಮೂವೀಸ್, ಗೀತಾ ಪಿಕ್ಚರ್ಸ್‌ನಂತಹ ತೆಲುಗಿನ ದೊಡ್ಡ, ದೊಡ್ಡ ಸಂಸ್ಥೆಯೊಂದಿಗೆ ಪ್ರಚಾರ ವಿಭಾಗದಲ್ಲಿ ಪಾಲುದಾರರಾಗಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಟೈಮ್ಸ್ ಗ್ರೂಪ್‌ನ ಇವೆಂಟ್ಸ್‌ಗಳನ್ನು ಸಮರ್ಥವಾಗಿ ತಮ್ಮ ಅಧಿತಿ ಲಿಂಕ್ ಮೀಡಿಯಾದ ಮೂಲಕ ನಿಭಾಯಿಸಿದ್ದಾರೆ. ತಮ್ಮದೇ ಆದ ಸಂಸ್ಥೆಯೊಂದನ್ನು ಕಟ್ಟಿ ಬೆಳೆಸಿ ಆಡಳಿತಾತ್ಮಕ ವಿಚಾರದಲ್ಲಿ ಹೆಚ್ಚಿನ ಅನುಭವವನ್ನು ಹೊಂದಿದ್ದಾರೆ.

ʼವಿಸ್ತಾರ ನ್ಯೂಸ್‌ʼ ಹಿಂದಿನ ಶಕ್ತಿ:

ನಾಡಿನಾದ್ಯಂತ ಪ್ರಸಿದ್ಧಿ ಪಡೆಯುತ್ತಿರುವ ʼವಿಸ್ತಾರ ನ್ಯೂಸ್‌ʼ ಚಾನೆಲ್ ಆರಂಭದ ಮೊದಲ ಸದಸ್ಯರಾಗಿ, ಚಾನೆಲ್ ಪ್ರಾರಂಭಿಸಬೇಕೆಂಬ ಮೊದಲ ಹೆಜ್ಜೆಯಿಂದ ಹಿಡಿದು ಇಲ್ಲಿಯವರೆಗೆ ಪ್ರತಿ ಹೆಜ್ಜೆಯಲ್ಲಿಯೂ ಪರಿಶ್ರಮ ವಹಿಸಿದ್ದಾರೆ. ಪೂರ್ವ ತಯಾರಿಯಿಂದ ಹಿಡಿದು ಚಾನೆಲ್ ಲೋಕಾರ್ಪಣೆಯವರೆಗೆ ಆಡಳಿತ ಮಂಡಳಿ ಹಾಗೂ ಸಹೋದ್ಯೋಗಿಗಳ ಜೊತೆಗಿದ್ದು ಅವರು ಪಟ್ಟ ಕಠಿಣ ಪರಿಶ್ರಮ ಹಾಗೂ ಅವರ ನಿಷ್ಠೆ, ಪ್ರಾಮಾಣಿಕತೆ, ಬದ್ಧತೆಯ ಫಲವಾಗಿ ಈಗ ಸಂಸ್ಥೆಯ ಉನ್ನತವಾದ ಜವಾಬ್ದಾರಿಯನ್ನು ನಿರ್ವಹಿಸುವ ಹಂತಕ್ಕೆ ತಲುಪಿದ್ದಾರೆ.

ಶುಭ ಹಾರೈಕೆ:

ಮಾಧ್ಯಮ ಲೋಕದಲ್ಲಿನ ಎಲ್ಲಾ ಹಂತದ ಅವರ ಒಟ್ಟೂ ಅನುಭವಕ್ಕೆ ವಿಸ್ತಾರ ಮೀಡಿಯಾ ಸಂಸ್ಥೆಯನ್ನು ಬಹಳ ಎತ್ತರಕ್ಕೆ ಕೊಂಡೊಯ್ಯುವ ಶಕ್ತಿ ಇದೆ. ಅವರ ಹಾಗೂ ಇಡೀ ವಿಸ್ತಾರ ತಂಡದ ಪರಿಶ್ರಮ ಜೊತೆಗೂಡಿ ವಿಸ್ತಾರ ಮೀಡಿಯಾ ಸಂಸ್ಥೆ ದೇಶದಲ್ಲಿಯೇ ಗುರುತಿಸಿಕೊಳ್ಳುವಂತಹ ಹೆಮ್ಮೆಯ ಸಂಸ್ಥೆಯಾಗಿ ರೂಪುಗೊಳ್ಳಲಿದೆ ಎಂಬ ವಿಶ್ವಾಸ ನಮಗಿದೆ. ಪರಶುರಾಮ್‌ ಡಿ ಅವರಿಗೆ ಶುಭ ಹಾರೈಸುತ್ತೇವೆ ಎಂದು ವಿಸ್ತಾರ ಮೀಡಿಯಾ ಪ್ರೈ. ಲಿ.ನ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

Continue Reading

Latest

Train Tragedy: ರೈಲ್ವೆ ಹಳಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ಪ್ರಾಣ ತ್ಯಾಗ ಮಾಡಿದ ತಂದೆ!

Train Tragedy: ಅಪ್ಪನ ಪ್ರೀತಿ ಅಗಾಧವಾದದ್ದು. ತನ್ನ ಮಕ್ಕಳಿಗೆ ತುಸುವೇ ನೋವಾದರೂ ಅಪ್ಪನಿಗೆ ಸಹಿಸುವುದಕ್ಕೆ ಆಗುವುದಿಲ್ಲ. ಅದರಲ್ಲೂ ತನ್ನ ಕಣ್ಣೆದುರೇ ಕಂದಮ್ಮಗಳು ಸಾವಿನ ದವಡೆಯಲ್ಲಿದ್ದಾರೆ ಯಾವ ತಂದೆ ಕೈ ಕಟ್ಟಿ ಕುಳಿತುಕೊಳ್ಳುತ್ತಾನೆ? ಸಿಡ್ನಿಯಲ್ಲಿ ಕೆಲಸ ಮಾಡುತ್ತಿದ್ದ ಆನಂದ್ ರನ್ವಾಲ್ ಎಂಬುವವರು ಪತ್ನಿ ಮತ್ತು ಅವಳಿ ಹೆಣ್ಣುಮಕ್ಕಳೊಂದಿಗೆ ರೈಲು ನಿಲ್ದಾಣದಲ್ಲಿದ್ದಾಗ ಅವರ ಫ್ಯಾಮಿಲಿ ಲಿಫ್ಟ್‌ನಿಂದ ಇಳಿದು ಬರುವಾಗ ಅವರ ಅವಳಿ ಹೆಣ್ಣು ಮಕ್ಕಳಿದ್ದ ಪ್ರ್ಯಾಮ್ ಆಕಸ್ಮಿಕವಾಗಿ ರೈಲ್ವೆ ಹಳಿಗೆ ಬಿದ್ದಿದೆ. ಆಗ ಮಕ್ಕಳನ್ನು ರಕ್ಷಿಸಲು ಹೋದ ಆನಂದ್‌ ಜೀವ ಕಳೆದುಕೊಂಡಿದ್ದಾರೆ.

VISTARANEWS.COM


on

Train Tragedy
Koo


ತಂದೆ ತನ್ನ ಮಕ್ಕಳಿಗಾಗಿ ಏನು ಬೇಕಾದರೂ ಮಾಡುತ್ತಾರೆ. ಮಕ್ಕಳಿಗಾಗಿ ತಮ್ಮ ಜೀವವನ್ನೂ ಲೆಕ್ಕಿಸುವುದಿಲ್ಲ ಎಂಬುದಕ್ಕೆ ಆಸ್ಟ್ರೇಲಿಯಾದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಆಸ್ಟ್ರೇಲಿಯಾದಲ್ಲಿ ಇನ್ಫೋಸಿಸ್ ಟೆಕ್ಕಿಯೊಬ್ಬರು ರೈಲ್ವೆ ಹಳಿಯ (Train Tragedy) ಮೇಲೆ ಬಿದ್ದ ತನ್ನ ಅವಳಿ ಹೆಣ್ಣುಮಕ್ಕಳನ್ನು ರಕ್ಷಿಸಲು ಪ್ರಯತ್ನಿಸುವಾಗ ದುರಂತಮಯವಾಗಿ ಸಾವನ್ನಪ್ಪಿದ್ದಾರೆ.

Train Tragedy

40 ವರ್ಷದ ಆನಂದ್ ರನ್ವಾಲ್ ಸಾವನಪ್ಪಿದವರು. ಇವರು ಇನ್ಫೋಸಿಸ್ ಐಟಿ ಉದ್ಯೋಗಿಯಾಗಿದ್ದು, ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಕೆಲಸ ಮಾಡುತ್ತಿದ್ದರು. ಆನಂದ್ ತಮ್ಮ ಪತ್ನಿ ಮತ್ತು ಅವಳಿ ಹೆಣ್ಣುಮಕ್ಕಳೊಂದಿಗೆ ಕಾರ್ಲ್ಟನ್ ನಿಲ್ದಾಣದಲ್ಲಿ ಲಿಫ್ಟ್ ನಿಂದ ಇಳಿದು ಬರುವಾಗ ಅವರ ಅವಳಿ ಹೆಣ್ಣು ಮಕ್ಕಳಿದ್ದ ಪ್ರ್ಯಾಮ್ ಆಕಸ್ಮಿಕವಾಗಿ ರೈಲ್ವೆ ಹಳಿಗೆ ಬಿದ್ದಿದೆ. ಆಗ ಆನಂದ್ ಹೆಣ್ಣುಮಕ್ಕಳನ್ನು ಉಳಿಸಲು ಪ್ಲಾಟ್ ಫಾರ್ಮ್‌ನಿಂದ ರೈಲ್ವೆ ಹಳಿಯ ಮೇಲೆ ಹಾರಿದ್ದಾರೆ.

ಆ ವೇಳೆ ರೈಲು ಹಾದುಹೋಗುತ್ತಿದ್ದ ಆನಂದ್ ಮತ್ತು ಅವರ ಒಬ್ಬ ಮಗಳು ರೈಲಿಗೆ ಸಿಲುಕಿ ಸಾವನಪ್ಪಿದ್ದಾರೆ. ಆದರೆ ಅವರು ಈ ಹೋರಾಟದಲ್ಲಿ ತಮ್ಮ ಒಬ್ಬ ಮಗಳ ಜೀವ ರಕ್ಷಿಸಿದ್ದಾರೆ. ಆನಂದ್ ಅವರ ಪತ್ನಿ ಮತ್ತು ಮಗಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರಿಗೆ ಚಿಕಿತ್ಸೆ ನೀಡಿ ಡಿಸ್ಚಾರ್ಜ್ ಮಾಡಲಾಗಿದೆ ಎಂಬುದಾಗಿ ತಿಳಿದುಬಂದಿದೆ.

Train Tragedy

ಈ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದರಲ್ಲಿ ಕುಟುಂಬವು ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸುತ್ತದೆ, ಅವರು ಲಿಫ್ಟ್ ಮೂಲಕ ಪ್ಲಾಟ್‌ಫಾರ್ಮ್‌ಗೆ ಬಂದಿದ್ದರು ಮತ್ತು ಕ್ಷಣಾರ್ಧದಲ್ಲಿ ಅವರು ಪ್ರ್ಯಾಮ್ ಅನ್ನು ಬಿಟ್ಟುಬಿಟ್ಟರು. ಇದರಿಂದ ಅದು ಉರುಳುತ್ತಾ ಹೋಗಿ ಹಳಿಗಳ ಮೇಲೆ ಬಿದ್ದಿದೆ. ಆಗ ಆನಂದ್ ಅವರ ಪತ್ನಿ ಕಿರುಚಿದಾಗ ಆನಂದ್ ರೈಲು ಹಳಿಗಳ ಮೇಲೆ ಮಕ್ಕಳನ್ನು ರಕ್ಷಿಸಲು ಹಾರಿದ್ದಾರೆ. ಆ ವೇಳೆ ಈ ದುರ್ಘಟನೆ ಸಂಭವಿಸಿದೆ.

ಇದನ್ನೂ ಓದಿ: ರಿಮಾಂಡ್‌ ಹೋಮ್‌ನಿಂದಲೇ ಮಧ್ಯರಾತ್ರಿ 17 ವರ್ಷದ ಬಾಲಕಿಯ ಅಪಹರಣ! ವಿಡಿಯೊದಲ್ಲಿ ಕೃತ್ಯ ಸೆರೆ

ಆನಂದ್ ಮತ್ತು ಅವರ ಕುಟುಂಬವು 2023ರ ಕೊನೆಯಲ್ಲಿ ಸಿಡ್ನಿಗೆ ಸ್ಥಳಾಂತರಗೊಂಡಿತ್ತು. ಅವರು ಸಿಡ್ನಿಯ ಕೊಗರಾ ಉಪನಗರದಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ, ಆನಂದ್ ಅವರ ಪೋಷಕರು (ವಿಸ್ತಾರ ನ್ಯೂಸ್‌) ಸಿಡ್ನಿಯಲ್ಲಿದ್ದ ಅವರ ಮನೆಗೆ ಭೇಟಿ ನೀಡಿದ್ದರು ಎನ್ನಲಾಗಿದೆ. ವರದಿಗಳ ಪ್ರಕಾರ, ತನ್ನ ತಾಯಿ ಮತ್ತು ತಂದೆಯನ್ನು ತಮ್ಮ ಜೊತೆ ಆಸ್ಟ್ರೇಲಿಯಾದಲ್ಲಿ ಇಟ್ಟುಕೊಳ್ಳುವ ಹಂಬಲ ಆನಂದವರಿಗಿತ್ತು ಎಂದು ಅವರ ಸ್ನೇಹಿತರೊಬ್ಬರು ತಿಳಿಸಿದ್ದಾರೆ.

ಆದರೆ ವಿಧಿ ಅದಕ್ಕೂ ಅವಕಾಶ ಮಾಡಿಕೊಡಲಿಲ್ಲ. ಅವರ ಹಠಾತ್ ನಿಧನದಿಂದ ಅವರ ಸ್ನೇಹಿತರು ಆಘಾತಕ್ಕೊಳಗಾಗಿದ್ದಾರೆ. ಅವರು ಇನ್ನಿಲ್ಲ ಎಂಬ ವಿಚಾರ ಅವರ ಕುಟುಂಬಕ್ಕೆ ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತಿದೆ ಎಂದವರು ಪ್ರತಿಕ್ರಿಯಿಸಿದ್ದಾರೆ.

Continue Reading

Latest

Viral Video: ಮೃಗಾಲಯದ ಸಿಬ್ಬಂದಿ ಮೇಲೆ ಸಿಂಹದ ದಾಳಿ; ತಡೆದು ನಿಲ್ಲಿಸಿದ ಸಿಂಹಿಣಿ!

Viral Video: ಈ ವಿಡಿಯೊದಲ್ಲಿ ಸಿಂಹದೊಂದಿಗೆ ಆಟವಾಡುತ್ತಿದ್ದಾಗ ಮೃಗಾಲಯ ಸಿಬ್ಬಂದಿಯೊಬ್ಬರ ಮೇಲೆ ಸಿಂಹವು ಆಕ್ರಮಣಕಾರಿಯಾಗಿ ದಾಳಿ ಮಾಡಲು ಮುಂದಾಗಿದೆ. ಇದರಿಂದ ಆತ ಅಪಾಯಕಾರಿ ಪರಿಸ್ಥಿತಿಯಲ್ಲಿರುವುದನ್ನು ಕಂಡು ಮತ್ತೊಬ್ಬ ಸಿಬ್ಬಂದಿ ಸಿಂಹವನ್ನು ತಡೆಯಲು ಮುಂದಾಗುತ್ತಾನೆ. ಆದರೆ ಅವನಿಗೆ ಅದನ್ನು ತಡೆಯಲು ಸಾಧ್ಯವಾಗಲಿಲ್ಲ, ಆಗ ಸ್ವಲ್ಪ ದೂರದಲ್ಲಿದ್ದ ಸಿಂಹಿಣಿಯು ನಿಂತು ತನ್ನ ಸಂಗಾತಿಯನ್ನು ನೋಡುತ್ತಿರುತ್ತದೆ. ನಂತರ ಘಟನೆ ಕೈಮೀರಿ ಹೋಗಬಹುದು ಎಂದು ತೋರಿದಾಗ, ಸಿಂಹಿಣಿ ಈ ತುರ್ತುಸ್ಥಿತಿಯನ್ನು ನಿಯಂತ್ರಿಸಲು ಹೋರಾಟಕ್ಕೆ ಇಳಿಯುತ್ತದೆ. ಇದು ಕುತೂಹಲ ಮೂಡಿಸಿದೆ.

VISTARANEWS.COM


on

Viral Video
Koo


ಬೆಂಗಳೂರು: ನೀವು ಸಾಮಾನ್ಯವಾಗಿ ಯಾರಾದರೂ ದಂಪತಿಯನ್ನು ನೋಡಿದಾಗ ಅಲ್ಲಿ ಪತಿ ಕೋಪಗೊಂಡು ಆಕ್ರಮಣಕಾರಿಯಾಗಿ ವರ್ತಿಸಿದರೆ ಆಗ ಆತನ ಪತ್ನಿ ಆತನನ್ನು ತಡೆದು ಸಮಾಧಾನಪಡಿಸುತ್ತಾಳೆ! ಈ ಗುಣ ಮನುಷ್ಯರಲ್ಲಿ ಮಾತ್ರವಲ್ಲ ಪ್ರಾಣಿಗಳಲ್ಲೂ ಕಾಣಸಿಗುತ್ತದೆ. ಇದಕ್ಕೆ ವಿದೇಶದಲ್ಲಿ ನಡೆದ ಈ ಘಟನೆಯೇ ಸಾಕ್ಷಿ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದ್ದು, ನೋಡುಗರಲ್ಲಿ ಆಶ್ವರ್ಯವನ್ನುಂಟುಮಾಡಿದೆ.

ಸಿಂಹವು ಮೃಗಾಲಯದ ಸಿಬ್ಬಂದಿಯ ಮೇಲೆ ದಾಳಿ ಮಾಡಿದಾಗ ಒಂದು ಸಿಂಹಿಣಿಯು ಮಧ್ಯ ಪ್ರವೇಶ ಮಾಡಿ ಸಿಂಹವನ್ನು ತಡೆದಿದೆ. ಇತ್ತೀಚೆಗೆ ಸಿಂಹ – ಸಿಂಹಿಣಿಯ ಈ ವಿಡಿಯೊವನ್ನು “ನೇಚರ್ ಈಸ್ ಅಮೇಜಿಂಗ್” ಎಂಬ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೊ ವೈರಲ್ ಆಗಿದೆ. ಈ ವಿಡಿಯೊದಲ್ಲಿ, ಸಿಂಹದೊಂದಿಗೆ ಆಟವಾಡುತ್ತಿದ್ದಾಗ ಮೃಗಾಲಯ ಸಿಬ್ಬಂದಿಯೊಬ್ಬರ ಮೇಲೆ ಸಿಂಹವು ಆಕ್ರಮಣಕಾರಿಯಾಗಿ ದಾಳಿ ಮಾಡಲು ಮುಂದಾಗಿದೆ. ಇದರಿಂದ ಆತ ಅಪಾಯಕಾರಿ ಪರಿಸ್ಥಿತಿಯಲ್ಲಿರುವುದನ್ನು ಕಂಡು ಮತ್ತೊಬ್ಬ ಸಿಬ್ಬಂದಿ ಸಿಂಹವನ್ನು ತಡೆಯಲು ಮುಂದಾಗುತ್ತಾನೆ. ಆದರೆ ಅವನಿಗೆ ಅದನ್ನು ತಡೆಯಲು ಸಾಧ್ಯವಾಗಲಿಲ್ಲ, ಆಗ ಸ್ವಲ್ಪ ದೂರದಲ್ಲಿದ್ದ ಸಿಂಹಿಣಿಯು ನಿಂತು ತನ್ನ ಸಂಗಾತಿಯನ್ನು ನೋಡುತ್ತಿರುತ್ತದೆ. ನಂತರ ಘಟನೆ ಕೈಮೀರಿ ಹೋಗಬಹುದು ಎಂದು ತೋರಿದಾಗ, ಸಿಂಹಿಣಿ ಈ ತುರ್ತುಸ್ಥಿತಿಯನ್ನು ನಿಯಂತ್ರಿಸಲು ಹೋರಾಟಕ್ಕೆ ಇಳಿಯುತ್ತದೆ. ಅದು ಆಕ್ರಮಣಕಾರಿ ಸಿಂಹದ ಬಳಿಗೆ ಬಂದು ಅದನ್ನು ತಡೆಯುತ್ತದೆ. ಇದರಿಂದ ಮೃಗಾಲಯದಲ್ಲಿ ನಡೆಯಲಿದ್ದ ಅಪಾಯಕಾರಿ ಘಟನೆಯನ್ನು ಸಿಂಹಿಣಿ ತಡೆದು ತನ್ನ ಪಾಲಕನನ್ನು ರಕ್ಷಿಸಿದೆ.

ಈ ವಿಡಿಯೊ ಸಿಂಹಿಣಿಯ ಅದ್ಭುತ ಪ್ರವೃತ್ತಿಯನ್ನು ತೋರಿಸುತ್ತದೆ. ಸಿಂಹಿಣಿಯ ಈ ಪ್ರವೃತ್ತಿ ಅನೇಕರಲ್ಲಿ ಆಶ್ಚರ್ಯವನ್ನುಂಟುಮಾಡಿದೆ. ಅಲ್ಲದೇ ಇದು ಅಪಾಯಕಾರಿ ಪರಿಸ್ಥಿತಿಯಲ್ಲೂ ತನ್ನ ಪಾಲಕನನ್ನು ಮತ್ತೊಂದು ಪ್ರಾಣಿಯಿಂದ ರಕ್ಷಿಸಿದ್ದನ್ನು ಕಂಡು ಪ್ರಕೃತಿ ಪ್ರಿಯರು ಮತ್ತು ಪ್ರಾಣಿ ಪ್ರೇಮಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಹಾಗೂ ಈ ಸಿಂಹಿಣಿಯ ವೀರೋಚಿತ ಕಾರ್ಯವನ್ನು ಹೊಗಳಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಿಂಹಿಣಿ ಪ್ರದರ್ಶಿಸಿದ ಧೈರ್ಯ ಮತ್ತು ಈ ಘಟನೆಯ ಬಗ್ಗೆ ವೀಕ್ಷಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 10,000 ಶೂ, ಚಪ್ಪಲಿ ಕದ್ದ ಖತರ್‌ನಾಕ್‌ ಕಳ್ಳರ ಬಂಧನ!

ಈ ಘಟನೆಯು ಮೃಗಾಲಯದ ಸುರಕ್ಷತಾ ವ್ಯವಸ್ಥೆಗಳು ಮತ್ತು ಇಂತಹ ಕ್ರೂರ ಪ್ರಾಣಿಗಳನ್ನು ನಿರ್ವಹಿಸುವಲ್ಲಿ ಮೃಗಾಲಯಪಾಲಕರಿಗೆ ನೀಡಲಾಗುವ ತರಬೇತಿಯ ಬಗ್ಗೆ ಅನೇಕರು ಪ್ರಶ್ನೆ ಮಾಡಿದ್ದಾರೆ.

Continue Reading
Advertisement
Kargil Vijay Diwas 2024
ದೇಶ3 mins ago

Kargil Vijay Diwas 2024: ಕಾರ್ಗಿಲ್ ವೀರರ ಶೌರ್ಯ, ತ್ಯಾಗದ ಕಥೆ ಹೇಳುವ ಈ 5 ಸಿನಿಮಾಗಳನ್ನು ಇನ್ನೊಮ್ಮೆ ನೋಡಿ

Ankola landslide
ಮಳೆ8 mins ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ: 10ನೇ ದಿನಕ್ಕೆ ಕಾಲಿಟ್ಟ ಕಾರ್ಯಾಚರಣೆ

Amazing Tourist Places
ಪ್ರವಾಸ33 mins ago

Amazing Tourist Places: ಹಿಮಾಚಲ ಪ್ರದೇಶದ ಕುಫ್ರಿ; ಧರೆಯ ಮೇಲಿನ ಸ್ವರ್ಗದ ತುಣುಕು!

Shawarma Recipe
ಆಹಾರ/ಅಡುಗೆ48 mins ago

Shawarma Recipe: ಬೀದಿಬದಿಯ ಶವರ್ಮಾ ಏಕೆ? ಮನೆಯಲ್ಲೇ ರುಚಿಯಾದ ಶವರ್ಮಾವನ್ನು ಹೀಗೆ ಮಾಡಿ!

Karnataka Weather
ಕರ್ನಾಟಕ1 hour ago

Karnataka Weather: ಇಂದು ಕರಾವಳಿ, ಬೆಳಗಾವಿ, ವಿಜಯಪುರ ಸೇರಿ ರಾಜ್ಯದ ವಿವಿಧೆಡೆ ಬಿರುಗಾಳಿ ಸಹಿತ ಭಾರಿ ಮಳೆ!

Tips For Teenager Parents
ಆರೋಗ್ಯ2 hours ago

Tips For Teenager Parents: ಉತ್ತಮ ಪೋಷಕರಾಗಿ; ಹರೆಯದ ಮಕ್ಕಳನ್ನು ಅರ್ಥ ಮಾಡಿಕೊಳ್ಳಿ!

Contact Lens
ಆರೋಗ್ಯ2 hours ago

Contact Lens: ಕಾಂಟ್ಯಾಕ್ಟ್‌ ಲೆನ್ಸ್‌ ಬಳಸುತ್ತೀರಾ? ಈ ವಿಷಯಗಳು ತಿಳಿದಿರಲಿ!

Dina Bhavishya
ಪ್ರಮುಖ ಸುದ್ದಿ3 hours ago

Dina Bhavishya: ಈ ರಾಶಿಯವರು ಅತ್ಯುತ್ಸಾಹದಲ್ಲಿ ಅತಿರೇಕದ ಮಾತುಗಳನ್ನು ಆಡುವುದು ಬೇಡ!

BJP Protest
ಕರ್ನಾಟಕ8 hours ago

BJP Protest: ಸದನದಲ್ಲಿ ಬಿಜೆಪಿ, ಜೆಡಿಎಸ್ ಅಹೋರಾತ್ರಿ ಧರಣಿ: ಅಲ್ಲೇ ಭಜನೆ, ಊಟ, ನಿದ್ದೆ; ಫೋಟೊ, ವಿಡಿಯೊ ಇಲ್ಲಿವೆ

Nitish Kumar
ದೇಶ8 hours ago

Nitish Kumar: ನೀನೂ ಹೆಣ್ಣು; ವಿಧಾನಸಭೆಯಲ್ಲೇ ಆರ್‌ಜೆಡಿ ಶಾಸಕಿಗೆ ನಿತೀಶ್‌ ಕುಮಾರ್‌ ಗದರಿದ್ದೇಕೆ?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ1 day ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ2 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ2 days ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ2 days ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ5 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

karnataka Rain
ಮಳೆ6 days ago

Karnataka Rain : ಬೀದಿಗೆ ತಂದ ರಣಮಳೆ; ಮನೆ ಕುಸಿದು ಬಿದ್ದು 9 ತಿಂಗಳ ಗರ್ಭಿಣಿ ನರಳಾಟ

Karnataka Rain
ಮಳೆ6 days ago

Karnataka Rain : ರಾಜ್ಯದಲ್ಲಿ ಮಳೆಯ ಆರ್ಭಟ; ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಂದಕ ನಿರ್ಮಾಣ

Karnataka Rain
ಮಳೆ7 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ರಾಸು

Uttara Kannada Landslide
ಮಳೆ7 days ago

Uttara Kannada Landslide: ಶಿರೂರು ಗುಡ್ಡ ಕುಸಿತ; ಅಖಾಡಕ್ಕಿಳಿದ ಜಿಯೊಲಾಜಿಕಲ್ ಸರ್ವೆ ಆಫ್ ಇಂಡಿಯಾ ಟೀಂ

ಟ್ರೆಂಡಿಂಗ್‌