ವಿಸ್ತಾರ ಸಂಪಾದಕೀಯ: ಡಿಜಿಟಲ್ ಬಳಕೆದಾರರ ಡೇಟಾ ಸುರಕ್ಷಿತವಾಗಿಡುವುದು ಅತಿ ಮುಖ್ಯ - Vistara News

ಪ್ರಮುಖ ಸುದ್ದಿ

ವಿಸ್ತಾರ ಸಂಪಾದಕೀಯ: ಡಿಜಿಟಲ್ ಬಳಕೆದಾರರ ಡೇಟಾ ಸುರಕ್ಷಿತವಾಗಿಡುವುದು ಅತಿ ಮುಖ್ಯ

ಡಿಜಿಟಲ್ ಬಳಕೆ ಈಗ ಅನಿವಾರ್ಯ. ಹಾಗಂತ ಬಳಕೆದಾರರ ವೈಯಕ್ತಿಕ ಮತ್ತು ಖಾಸಗಿ ಮಾಹಿತಿ ಸೋರಿಕೆ, ಕಳವು ಕೃತ್ಯಗಳನ್ನು ಸಹಿಸಿಕೊಳ್ಳಲಾಗದು. ಈ ನಿಟ್ಟಿನಲ್ಲಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲೇಬೇಕು.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

24 ರಾಜ್ಯಗಳು, 8 ಮೆಟ್ರೋ ನಗರಗಳ ಸುಮಾರು 67 ಕೋಟಿ ಜನರು, ಸಂಘ ಸಂಸ್ಥೆಗಳು, ಖಾಸಗಿ ಕಂಪನಿಗಳ ಬಳಕೆದಾರರ ವೈಯಕ್ತಿಕ ಡೇಟಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ತೆಲಂಗಾಣದ ಸೈಬರಾಬಾದ್ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಬೃಹತ್ ಮಟ್ಟದಲ್ಲಿ ಜನರ ಡೇಟಾ ಮಾರಾಟದ ಜಾಲವೊಂದನ್ನು ಪತ್ತೆ ಹಚ್ಚಿದ್ದಾರೆ. ಬಂಧಿತ ವ್ಯಕ್ತಿಗೆ ಡೇಟಾ ಒದಗಿಸುತ್ತಿದ್ದ ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ತೆಲಂಗಾಣ ಪೊಲೀಸರು ಜಾಲ ಬೀಸಿದ್ದಾರೆ. ಈ ಪ್ರಕರಣವು ಡಿಜಿಟಲ್ ಜಗತ್ತನ್ನು ಕಾಡುತ್ತಿರುವ ‘ಸುರಕ್ಷತೆ’ಯ ಲೋಪವನ್ನು ಬಟಾಬಯಲು ಮಾಡಿದೆ. ಈ ರೀತಿಯ ಪ್ರಕರಣಗಳು ಬಯಲಿಗೆ ಬಂದಾಗಲೆಲ್ಲ ಆತಂಕದ ವಾತಾವರಣ ಸೃಷ್ಟಿಯಾಗುತ್ತದೆ. ಈ ದತ್ತಾಂಶಗಳು ಋಣಾತ್ಮಕವಾಗಿ ಬಳಕೆಯಾದರೆ ಏನು ಮಾಡುವುದು ಎಂಬ ಚಿಂತೆ ಜನರನ್ನು ಕಾಡುತ್ತದೆ.

ಸೈಬರಾಬಾದ್ ಪೊಲೀಸರು ಭೇದಿಸಿರುವ ಈ ಪ್ರಕರಣದ ಮಾಹಿತಿ ಬೆಚ್ಚಿಬೀಳಿಸುವಂತಿದೆ. ಎಜು-ಟೆಕ್ ಸಂಸ್ಥೆಗಳ ವಿದ್ಯಾರ್ಥಿಗಳು, ಫಿನ್-ಟೆಕ್ ಮತ್ತು ಇ-ಕಾಮರ್ಸ್ ಕಂಪನಿಗಳ ಗ್ರಾಹಕರು, ವಿವಿಧ ರಾಜ್ಯಗಳ ರಸ್ತೆ ಸಾರಿಗೆ ಸಂಸ್ಥೆಗಳು, ಸೋಷಿಯಲ್ ಮೀಡಿಯಾ ಬಳಕೆದಾರರು, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆದಾರರು, ಜಿಎಸ್‌ಟಿ ಗ್ರಾಹಕರು ಸೇರಿದಂತೆ 104 ಕೆಟಗರಿಯಲ್ಲಿ ದತ್ತಾಂಶಗಳನ್ನು ಬಂಧಿತ ವ್ಯಕ್ತಿ ಹೊಂದಿದ್ದಾನೆ. ಇದೆಲ್ಲ ಮೇಲ್ನೋಟಕ್ಕೆ ಕಂಡ ಬಂದ ಮಾಹಿತಿಯಷ್ಟೇ, ಈ ಪ್ರಕರಣದ ತನಿಖೆ ಇನ್ನಷ್ಟು ಆಳಕ್ಕೆ ಇಳಿದಂತೆ ಶಾಕಿಂಗ್ ಆಗಿರುವ ಮಾಹಿತಿಗಳು ಹೊರ ಬಿದ್ದರೆ ಅಚ್ಚರಿ ಪಡಬೇಕಾಗಿಲ್ಲ.

ಡಿಜಿಟಲ್‌ ಬಳಕೆದಾರರ ಡೇಟಾ ಕಳವು ಇದೇ ಮೊದಲಲ್ಲ. ಆಗಾಗ ಈ ರೀತಿಯ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ. ತಂತ್ರಜ್ಞಾನ ಕಂಪನಿಗಳು, ಡಿಜಿಟಲ್ ಆದ್ಯತೆಯ ಮೂಲಕ ವ್ಯವಹಾರ ಮಾಡುವ ಕಂಪನಿಗಳು ತಮ್ಮ ಬಳಕೆದಾರರು ಮತ್ತು ಗ್ರಾಹಕರ ಮಾಹಿತಿಯ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿರುತ್ತವೆ. ಹೀಗಿದ್ದಾಗ್ಯೂ, ಡೇಟಾ ಸೋರಿಕೆ ಮತ್ತು ಕಳವು ಅವ್ಯಾಹತವಾಗಿ ನಡೆಯುತ್ತಲೇ ಇದೆ. ಬಹುಶಃ ಈ ರೀತಿಯ ಸೈಬರ್ ಅಪರಾಧಗಳಲ್ಲಿ ಭಾಗಿಯಾದವರಿಗೆ ಅಥವಾ ಇಂಥದ್ದಕ್ಕೆ ಅವಕಾಶ ಕಲ್ಪಿಸುವ ಕಂಪನಿಗಳ ವಿರುದ್ಧ ಗರಿಷ್ಠ ಶಿಕ್ಷೆಯನ್ನು ವಿಧಿಸುವ ಅಗತ್ಯ ಕಾನೂನು ಕೊರತೆ ಇರುವುದೇ ಇದಕ್ಕೆಲ್ಲ ಕಾರಣವಾಗಿರಬಹುದು.

ಖಾಸಗಿ ಮಾಹಿತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸ್ಪಷ್ಟ ವ್ಯಾಖ್ಯಾನ ಮಾಡಿದೆ. ಖಾಸಗಿತನವು ಭಾರತೀಯರ ಮೂಲಭೂತ ಹಕ್ಕು ಆಗಿದ್ದು, ಅದು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಪುಟ್ಟಸ್ವಾಮಿ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದೆ. ಬಳಿಕ ಕೇಂದ್ರ ಸರ್ಕಾರವು ‘ಡಿಜಿಟಲ್ ಪರ್ಸನಲ್ ಡೇಟಾ ಪ್ರೊಟೆಕ್ಷನ್’ ವಿಧೇಯಕವನ್ನು ಜಾರಿಗೆ ತರುವ ಪ್ರಯತ್ನವನ್ನು ಮಾಡುತ್ತಿದೆ. ಈ ಉದ್ದೇಶಿತ ಕರಡು ಮೂರ್ನಾಲ್ಕು ಬಾರಿ ಈಗಾಗಲೇ ತಿದ್ದುಪಡಿಗೆ ಒಳಗಾಗಿದೆ. ಸಂಸತ್‌ನಲ್ಲಿ ಮಂಡನೆಯಾಗಿರುವ ವಿಧೇಯಕಕ್ಕೆ ಒಪ್ಪಿಗೆ ದೊರೆಯಬೇಕಿದೆ. ಪರಿಷ್ಕೃತ ಕರಡಿನ ಪ್ರಕಾರ, ವಿಧೇಯಕದ ನಿಬಂಧನೆಗಳನ್ನು ಉಲ್ಲಂಘಿಸಿದರೆ 500 ಕೋಟಿ ರೂ.ವರೆಗೂ ದಂಡ ವಿಧಿಸುವ ಪ್ರಸ್ತಾವನೆ ಇದೆ. ಭಾರತೀಯ ದತ್ತಾಂಶ ಮಂಡಳಿಯನ್ನು ಸ್ಥಾಪಿಸುವ ಪ್ರಸ್ತಾಪ ಕೂಡ ಇದೆ. ಕಂಪನಿಗಳು ಹಾಗೂ ವೈಯಕ್ತಿಕ ಮಟ್ಟದಲ್ಲಿ ನಡೆಯುವ ಕಳ್ಳಾಟಕ್ಕೆ ಬ್ರೇಕ್ ಹಾಕುವ ಎಲ್ಲ ನಿಯಮಗಳನ್ನು ಒಳಗೊಂಡಿದೆ. ಒಂದೊಮ್ಮೆ ಈ ವಿಧೇಯಕವೂ ಕಾನೂನಾಗಿ ಜಾರಿಯಾದರೆ, ಡಿಜಿಟಲ್ ಬಳಕೆದಾರರ ವೈಯಕ್ತಿಕ ಮತ್ತು ಖಾಸಗಿ ಮಾಹಿತಿ ಸಂರಕ್ಷಣೆಯಲ್ಲಿ ಗಮನಾರ್ಹ ಬದಲಾವಣೆಯನ್ನು ನಿರೀಕ್ಷಿಸಬಹುದು.

ಇದನ್ನೂ ಓದಿ: Cyberabad Police: 70 ಕೋಟಿ ಜನರ ವೈಯಕ್ತಿಕ, ಖಾಸಗಿ ಡೇಟಾ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ!

ಬದಲಾದ ಕಾಲದ ಜತೆಗೆ ನಾವು ಹೆಜ್ಜೆ ಹಾಕಲೇಬೇಕು. ಭವಿಷ್ಯದಲ್ಲಿ ಡಿಜಿಟಲ್ ಬಳಕೆ ಈಗಿರುವುದಕ್ಕಿಂತಲೂ ಇನ್ನೂ ಹೆಚ್ಚಾಗಬಹುದು. ಹೊಸ ಹೊಸ ತಂತ್ರಜ್ಞಾನದ ಆವಿಷ್ಕಾರ, ಬಳಕೆಯನ್ನು ತಡೆಯುವುದು ಅಸಾಧ್ಯ. ಹಾಗಂತ ಅದರ ಜತೆಗೆ ಬರುವ ದುಷ್ಪರಿಣಾಮಗಳನ್ನು ಸಹಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಅವುಗಳನ್ನು ನಿವಾರಿಸುವ ಪ್ರಯತ್ನಗಳನ್ನು ಸರ್ಕಾರಗಳು ಮತ್ತು ತಂತ್ರಜ್ಞಾನ ವಲಯವು ಮಾಡಬೇಕಾಗುತ್ತದೆ. ಅಂತಿಮವಾಗಿ ಬಳಕೆದಾರರು ಹಾಗೂ ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡಬೇಕಾದದ್ದು ಸರ್ಕಾರದ ಕರ್ತವ್ಯ. ಹಾಗಾಗಿ, ಕೇಂದ್ರ ಸರ್ಕಾರವು ಕೂಡಲೇ ಈ ನಿಟ್ಟಿನಲ್ಲಿ ವಿಧೇಯಕದ ಜಾರಿಯೂ ಸೇರಿದಂತೆ ಎಲ್ಲ ಕಠಿಣ ಕ್ರಮಗಳನ್ನು ಕೈಗೊಳ್ಳುವತ್ತ ಗಮನ ಹರಿಸಬೇಕು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

ಬ್ರೇಕಪ್‌ ಬಳಿಕ ಹುಡುಗ ಆತ್ಮಹತ್ಯೆ ಮಾಡಿಕೊಂಡರೆ ಪ್ರಿಯತಮೆ ಹೊಣೆ ಅಲ್ಲ; ಕೋರ್ಟ್‌ ಆದೇಶ

ಲವ್‌ ಫೇಲ್ಯೂರ್‌ ಆಯಿತು ಎಂದು ದೆಹಲಿಯಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಮಗನ ಪ್ರಿಯತಮೆಯೇ ಕಾರಣ ಎಂಬುದಾಗಿ ಯುವಕನ ತಂದೆಯು ದೂರು ನೀಡಿದ್ದರು. ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌, ಲವ್‌ ಫೇಲ್ಯೂರ್‌ ಆಯಿತೆಂದು ಆತ್ಮಹತ್ಯೆ ಮಾಡಿಕೊಂಡರೆ, ಅದಕ್ಕೆ ಆತನ ದುರ್ಬಲ ಮನಸ್ಥಿತಿಯೇ ಕಾರಣ. ಹಾಗಾಗಿ, ಲವ್‌ ಫೇಲ್ಯೂರ್‌ ಪ್ರಕರಣಗಳಲ್ಲಿ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಲವ್ವರ್‌ ಹೊಣೆಯಲ್ಲ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

VISTARANEWS.COM


on

Break Up
Koo

ನವದೆಹಲಿ: ಪ್ರೀತಿಸಿದ ಹುಡುಗಿ ಕೈಕೊಟ್ಟಳು ಎಂದೋ, ಮನಸಾರೆ ಇಷ್ಟಪಟ್ಟವಳು ಇನ್ನೊಬ್ಬನ ಪಕ್ಕದಲ್ಲಿ ಹಸೆಮಣೆ ಮೇಲೆ ಕೂತುಕೊಳ್ಳುತ್ತಾಳೆ ಎಂಬುದನ್ನು ಕಲ್ಪನೆ ಮಾಡಿಕೊಳ್ಳಲು ಆಗದೆ ಯುವಕರು ಆತ್ಮಹತ್ಯೆಗೆ (Suicide) ಶರಣಾಗುತ್ತಾರೆ. ಬ್ರೇಕಪ್‌ (Love Break Up) ಬಳಿಕ ಆತ್ಮಹತ್ಯೆ ಮಾಡಿಕೊಳ್ಳುವ ಹೆಣ್ಣುಮಕ್ಕಳೂ ಇದ್ದಾರೆ. ಆದರೆ, ಬ್ರೇಕಪ್‌ ಬಳಿಕ (Love Failure) ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಯುವತಿ ಅಥವಾ ಪ್ರಿಯತಮೆಯು ಹೊಣೆ ಅಲ್ಲ ಎಂದು ದೆಹಲಿ ಹೈಕೋರ್ಟ್‌ (Delhi High Court) ಆದೇಶ ಹೊರಡಿಸಿದೆ.

“ಲವ್‌ ಫೇಲ್ಯೂರ್‌ ಆಯಿತು ಎಂದು ಲವ್ವರ್‌ ಆತ್ಮಹತ್ಯೆ ಮಾಡಿಕೊಂಡರೆ ಮಹಿಳೆ, ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂತು ಎಂದು ವಿದ್ಯಾರ್ಥಿಯು ನೇಣಿಗೆ ಕೊರಳೊಡ್ಡಿದರೆ ಮೌಲ್ಯಮಾಪಕ, ಕೇಸ್‌ ವಜಾ ಆಯಿತು ಎಂದು ಕ್ಲೈಂಟ್‌ ಆತ್ಮಹತ್ಯೆಗೆ ಶರಣಾದರೆ ವಕೀಲ ಹೊಣೆಯಾಗುವುದಿಲ್ಲ. ದುರ್ಬಲ ಮನಸ್ಥಿತಿಯ ವ್ಯಕ್ತಿಯು ಆತ್ಮಹತ್ಯೆಯಂತಹ ತಪ್ಪು ನಿರ್ಧಾರಗಳಿಗೆ ಕೈ ಹಾಕಿದರೆ, ಇನ್ನೊಬ್ಬ ವ್ಯಕ್ತಿಯು ಹೊಣೆಯಾಗಲು ಸಾಧ್ಯವಾಗುವುದಿಲ್ಲ ” ಎಂಬುದಾಗಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಇಬ್ಬರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡುವ ವೇಳೆ ನ್ಯಾಯಮೂರ್ತಿ ಅಮಿತ್‌ ಮಹಾಜನ್‌ ಅವರು ಸ್ಪಷ್ಟಪಡಿಸಿದರು.

Court Order

ಏನಿದು ಪ್ರಕರಣ?

ದೆಹಲಿಯಲ್ಲಿ 2023ರಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಆತನ ಪ್ರೇಯಸಿಯೇ ಕಾರಣವಾಗಿದೆ. ಯುವತಿಯ ಮತ್ತೊಬ್ಬ ಗೆಳೆಯನು ಕೂಡ ನನ್ನ ಮಗನ ಆತ್ಮಹತ್ಯೆಗೆ ಜವಾಬ್ದಾರರು ಎಂಬುದಾಗಿ ಆತ್ಮಹತ್ಯೆ ಮಾಡಿಕೊಂಡ ಯುವಕನ ತಂದೆಯು ಪ್ರಕರಣ ದಾಖಲಿಸಿದ್ದಾರೆ. ಇದರಿಂದಾಗಿ ಯುವತಿ ಹಾಗೂ ಆಕೆಯ ಗೆಳೆಯನು ಬಂಧನದ ಭೀತಿಯಲ್ಲಿದ್ದರು. ಹಾಗಾಗಿ ಅವರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈಗ ನ್ಯಾಯಾಲಯವು ಇಬ್ಬರಿಗೂ ನಿರೀಕ್ಷಣಾ ಮಂಜೂರು ಮಾಡಿದೆ.

“ನನ್ನ ಮಗ ಹಾಗೂ ಯುವತಿಯು ಪ್ರೀತಿಸುತ್ತಿದ್ದರು. ಇಬ್ಬರ ಮಧ್ಯೆ ದೈಹಿಕ ಸಂಬಂಧವೂ ಇತ್ತು. ಆದರೆ, ಬ್ರೇಕಪ್‌ ಬಳಿಕ ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನನ್ನ ಮಗ ಬರೆದ ಡೆತ್‌ನೋಟ್‌ನಲ್ಲಿ ಯುವತಿ ಹಾಗೂ ಆಕೆಯ ಗೆಳೆಯನ ಹೆಸರಿದೆ. ಇವರಿಬ್ಬರಿಂದಾಗಿಯೇ ನನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ” ಎಂಬುದಾಗಿ ಯುವಕನ ತಂದೆಯು ದೂರಿನಲ್ಲಿ ಪ್ರಸ್ತಾಪಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ನ್ಯಾಯಾಲಯವು, “ಡೆತ್‌ನೋಟ್‌ನಲ್ಲಿ ಇಬ್ಬರ ಹೆಸರಿದೆ ನಿಜ. ಆದರೆ, ಅವರಿಬ್ಬರೂ ಪ್ರಚೋದನೆ ನೀಡಿದ, ಬೆದರಿಕೆ ಹಾಕಿದ ಕುರಿತು ಪ್ರಸ್ತಾಪವಿಲ್ಲ. ದುರ್ಬಲ ಮನಸ್ಥಿತಿಯವರು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯ” ಎಂದು ಸ್ಪಷ್ಟಪಡಿಸಿತು.

ಇದನ್ನೂ ಓದಿ: Right To Sleep: ನಿದ್ದೆ ಮನುಷ್ಯನ ಹಕ್ಕು, ಯಾರೂ ಕಸಿಯುವಂತಿಲ್ಲ ಎಂದು ಹೈಕೋರ್ಟ್‌ ಆದೇಶ!

Continue Reading

ಪ್ರಮುಖ ಸುದ್ದಿ

Jai Shree Ram Slogan: ಬಿಜೆಪಿ ಪ್ರತಿಭಟನೆ ಆರಂಭ; ವಿಚಾರಣೆ ವೇಳೆ ಆರೋಪಿಗಳು ಹೇಳಿದ ಸಂಗತಿ ಇಲ್ಲಿದೆ!

Jai Shree Ram Slogan: ಟ್ರಾಫಿಕ್ ಜಾಂ ಆದ ಹಿನ್ನೆಲೆಯಲ್ಲಿ ಟ್ರಾಫಿಕ್ ಸಿಗ್ನಲ್‌ಗಾಗಿ ಆರೋಪಿಗಳು ಕಾಯುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಹಿಂದೂ ಯುವಕರು ಶ್ರೀರಾಮ ನವಮಿ ಹಿನ್ನೆಲೆಯಲ್ಲಿ ʼಜೈ ಶ್ರೀರಾಂʼ ಘೋಷಣೆ ಕೂಗಿದ್ದರು. ಈ ವೇಳೆ ಕ್ಯಾತೆ ತೆಗೆದ ಆರೋಪಿಗಳು, ಜೈಶ್ರೀರಾಂ ಕೂಗಬೇಡಿ, ಅಲ್ಲಾಹು ಅಕ್ಬರ್‌ ಮಾತ್ರ ಎಂದು ಹಲ್ಲೆ ನಡೆಸಿದ್ದರು.

VISTARANEWS.COM


on

bjp protest jai shree ram slogan
Koo

ಬೆಂಗಳೂರು: ರಾಜಧಾನಿಯ ವಿದ್ಯಾರಣ್ಯಪುರದಲ್ಲಿ (Vidyaranyapura) ಜೈ ಶ್ರೀರಾಮ್‌ (Jai Shree Ram Slogan) ಎಂದವರಿಗೆ ಅಡ್ಡಿಪಡಿಸಿ ಹಲ್ಲೆ (Assault Case) ನಡೆಸಿದ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿ ಪ್ರಶ್ನಿಸಲಾಗಿದ್ದು, ಮದ್ಯದ ನಶೆಯಲ್ಲಿ ಇಬ್ಬರು ಅಪ್ರಾಪ್ತರು ಸೇರಿ ನಾಲ್ವರು ಯುವಕರು ಹಲ್ಲೆಗೆ ಇಳಿದದ್ದು ಗೊತ್ತಾಗಿದೆ. ಇಂದು ಪ್ರಕರಣ ವಿರೋಧಿಸಿ ವಿದ್ಯಾರಣ್ಯಪುರ ಪೊಲೀಸ್‌ ಸ್ಟೇಶನ್‌ ಮುಂದೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾಗಿದ್ದು, ಸ್ಥಳದಲ್ಲಿ ಜಮಾಯಿಸುತ್ತಿದ್ದಾರೆ. ಬಿಗಿ ಭದ್ರತೆ ಹಾಕಲಾಗಿದೆ.

ಯುವಕರ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದೆ. ಬಂಧಿತರು ಯಾರೂ ಗಾಂಜಾ ಸೇವನೆ ಮಾಡಿಲ್ಲ, ಆದರೆ ಆಲ್ಕೋಹಾಲ್‌ ಸೇವಿಸಿರುವುದು ದೃಢಪಟ್ಟಿದೆ. ಟ್ರಾಫಿಕ್ ಜಾಂ ಆದ ಹಿನ್ನೆಲೆಯಲ್ಲಿ ಟ್ರಾಫಿಕ್ ಸಿಗ್ನಲ್‌ಗಾಗಿ ಆರೋಪಿಗಳು ಕಾಯುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಹಿಂದೂ ಯುವಕರು ಶ್ರೀರಾಮ ನವಮಿ ಹಿನ್ನೆಲೆಯಲ್ಲಿ ʼಜೈ ಶ್ರೀರಾಂʼ ಘೋಷಣೆ ಕೂಗಿದ್ದರು. ಈ ವೇಳೆ ಕ್ಯಾತೆ ತೆಗೆದ ಆರೋಪಿಗಳು, ಜೈಶ್ರೀರಾಂ ಕೂಗಬೇಡಿ, ಅಲ್ಲಾಹು ಅಕ್ಬರ್‌ ಮಾತ್ರ ಎಂದು ಹಲ್ಲೆ ನಡೆಸಿದ್ದರು.

“ಹಲ್ಲೆ ಮಾಡೋದು ನಮ್ಮ ಉದ್ದೇಶ ಆಗಿರಲಿಲ್ಲ. ಜೊತೆಗೆ ಯಾವುದೇ ಪ್ರೀ ಪ್ಲಾನ್ ಕೂಡ ಇರಲಿಲ್ಲ. ನಿನ್ನೆ ಮಧ್ಯಾಹ್ನ 3 ಗಂಟೆ ಸಮಯದಲ್ಲಿ ನಾಲ್ಕು ಜನರು ಎರಡು ಬೈಕ್‌ಗಳಲ್ಲಿ ಬರುತ್ತಿದ್ದೆವು. ಎಂಎಸ್ ಪಾಳ್ಯ ಮುಖ್ಯರಸ್ತೆಯಲ್ಲಿ ಬರುವಾಗ ಟ್ರಾಫಿಕ್ ಜಾಮ್ ಆಯ್ತು. ಈ ವೇಳೆ ಕಾರಿನಲ್ಲಿ ಮೂರು‌ ನಾಲ್ಕು ಯುವಕರು ಬಂದು ನಮ್ಮ ಬೈಕ್‌ ಪಕ್ಕ ನಿಲ್ಲಿಸಿದ್ರು. ಕಾರಿನ ಗ್ಲಾಸ್ ಓಪನ್ ಮಾಡಿ ನಮ್ಮ ಕಡೆ ತಿರುಗಿ ಜೈ ಶ್ರೀರಾಮ್ ಅಂತ ಜೋರಾಗಿ ಕಿರುಚಿದರು. ಜೊತೆಗೆ ನಮಗೂ ಜೈ ಶ್ರೀರಾಮ್ ಅಂತ ಕೂಗಿ ಅಂದರು. ಅದಕ್ಕೆ ನಾವು, ನೀವೇ ಅಲ್ಲಾ ಹೋ ಅಕ್ಬರ್ ಅಂತ ಕೂಗಿ ಅಂತ ಹೇಳಿದೆವು. ಅದಕ್ಕೆ ನಾವು ಯಾಕೆ ಕೂಗಬೇಕು ಅಂತ ಮಾತಿಗೆ ಮಾತು ಬೆಳೆದು ಸ್ವಲ್ಪ ಹೊಡೆದಾಟ ಆಯ್ತು ಅಷ್ಟೇ. ಯಾವುದೇ ಬೇರೆ ಉದ್ದೇಶ ಇರಲಿಲ್ಲ” ಎಂದು ಆರೋಪಿಗಳು ಪೊಲೀಸ್‌ ವಿಚಾರಣೆ ವೇಳೆ ಹೇಳಿದ್ದಾರೆ.

ಆರೋಪಿಗಳ ಹಿನ್ನೆಲೆಯನ್ನೂ ಪೊಲೀಸರು ಆಮೂಲಾಗ್ರವಾಗಿ ವಿಚಾರಿಸಿದ್ದು, ಯಾವುದೇ ಹಳೇಯ ಕೇಸ್‌ನಲ್ಲಿ ಇರುವುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಮೆಡಿಕಲ್ ಟೆಸ್ಟ್‌ ಮಾಡಿಸಲಾಗಿದ್ದು, ಗಾಂಜಾ ಸೇವನೆ ಬಗ್ಗೆ ಯಾವುದೇ ಮಾಹಿತಿ ದೃಡಪಟ್ಟಿಲ್ಲ. ಬದಲಾಗಿ ಆಲ್ಕೋಹಾಲ್ ಸೇವಿಸಿರುವುದು ಬಯಲಾಗಿದೆ. ಸದ್ಯ ಆರೋಪಿಗಳ ವಿಚಾರಣೆ ಮುಂದುವರಿದಿದೆ.

ಪ್ರತಿಭಟನೆಗೆ ಕಾರ್ಯಕರ್ತರ ಜಮಾವಣೆ

ವಿದ್ಯಾರಣ್ಯಪುರ ಪೊಲೀಸ್ ಠಾಣೆ ಎದುರು ಇಂದು ಬೆಳಗ್ಗಿನಿಂದ ಬಿಜೆಪಿ ಕಾರ್ಯಕರ್ತರು ಹಾಗೂ ಹಿಂದೂ ಕಾರ್ಯಕರ್ತರು ಜಮಾಯಿಸಿದ್ದು, 500ಕ್ಕೂ ಅಧಿಕ ಕಾರ್ಯಕರ್ತರು ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಬಿಜೆಪಿಯ ಕೆಲ‌ ನಾಯಕರು ಭಾಗಿಯಾಗುವ ಸಾಧ್ಯತೆ ಇದೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಒಂದು ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ. ರಾಮ ಧ್ವಜ ಹಿಡಿದು ಪ್ರತಿಭಟನೆ ಕೂಗಿದ ಬಿಜೆಪಿ ಕಾರ್ಯಕರ್ತರು, ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂದು ಕೂಗಿದರು. ಮಾಜಿ ಕಾರ್ಪೋರೇಟರ್ ಮುನೇಂದ್ರ ಕುಮಾರ್ ಹಾಗೂ ಎ. ರವಿ ನೇತೃತ್ವದಲ್ಲಿ ಪ್ರತಿಭಟನೆ ಆರಂಭವಾಗಿದೆ.

ಇದನ್ನೂ ಓದಿ: Jai Shree Ram slogan: ಜೈ ಶ್ರೀರಾಮ್ ಎಂದು ಕೂಗಿದ್ದಕ್ಕೆ ಹಲ್ಲೆ; ಕಾರು ಅಡ್ಡಗಟ್ಟಿ ಮುಸ್ಲಿಂ ಯುವಕರ ಪುಂಡಾಟ!

Continue Reading

Fact Check

Fact Check: 10 ರಾಜ್ಯಗಳಲ್ಲಿ ಇಂಡಿಯಾ ಒಕ್ಕೂಟಕ್ಕೆ 200 ಸ್ಥಾನ ಎಂಬ ವರದಿ ನಿಜವೇ? ಇಲ್ಲಿದೆ ಸತ್ಯ!

Fact Check: ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟವು ಭಾರಿ ಮುನ್ನಡೆ ಸಾಧಿಸುತ್ತದೆ. 10 ರಾಜ್ಯಗಳಲ್ಲಿಯೇ ಇಂಡಿಯಾ ಒಕ್ಕೂಟವು 200ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತದೆ ಎಂಬುದಾಗಿ ದೈನಿಕ್‌ ಭಾಸ್ಕರ್‌ ಪತ್ರಿಕೆಯ ಸಮೀಕ್ಷಾ ವರದಿ ತಿಳಿಸಿದೆ ಎಂಬ ವರದಿಯು ಹರಿದಾಡಿದೆ. ಆದರೆ, ಈ ಕುರಿತು ಫ್ಯಾಕ್ಟ್‌ ಚೆಕ್‌ ಮಾಡಿದಾಗ ಮಹತ್ವದ ಸಂಗತಿ ಬಯಲಾಗಿದೆ.

VISTARANEWS.COM


on

Fact Check
Koo

ನವದೆಹಲಿ: ಸಾಮಾಜಿಕ ಜಾಲತಾಣಗಳು ನಮಗೆ ಎಷ್ಟು ಮಾಹಿತಿ ನೀಡುತ್ತವೆಯೋ, ಅಷ್ಟೇ ಪ್ರಮಾಣದಲ್ಲಿ ನಕಲಿ ಸುದ್ದಿಗಳನ್ನು ಹರಡುವ ತಾಣಗಳಾಗಿಯೂ ಬದಲಾಗಿವೆ. ಅದರಲ್ಲೂ, ಚುನಾವಣೆ ಸಂದರ್ಭದಲ್ಲಂತೂ ನಕಲಿ ಸುದ್ದಿಗಳ ಹಾವಳಿ ಜಾಸ್ತಿಯಾಗುತ್ತದೆ. ಇದಕ್ಕೆ ನಿದರ್ಶನ ಎಂಬಂತೆ, ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಇಂಡಿಯಾ ಒಕ್ಕೂಟಕ್ಕೆ (India Bloc) 10 ರಾಜ್ಯಗಳಲ್ಲಿ ಭಾರಿ ಮುನ್ನಡೆ ಸಿಗಲಿದೆ ಎಂಬುದಾಗಿ ದೈನಿಕ್‌ ಭಾಸ್ಕರ್‌ (Dainik Bhaskar) ಹಿಂದಿ ಪತ್ರಿಕೆಯ ಸಮೀಕ್ಷೆ ತಿಳಿಸಿದೆ ಎಂಬ ವರದಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಹಾಗಾದರೆ, ಏನಿದು ವರದಿ? ಸಮೀಕ್ಷೆಯ ಅಂಕಿ-ಅಂಶಗಳು ನಿಜವೇ (Fact Check) ಎಂಬುದರ ಫ್ಯಾಕ್ಟ್‌ ಚೆಕ್‌ ಇಲ್ಲಿದೆ.

ಏನಿದು ವೈರಲ್‌ ಆದ ವರದಿ?

ಲೋಕಸಭೆ ಚುನಾವಣೆಗೂ ಮುನ್ನ ದೈನಿಕ ಭಾಸ್ಕರ್‌ ಹಿಂದಿ ಪತ್ರಿಕೆಯು ಸಮೀಕ್ಷೆಯೊಂದನ್ನು ನಡೆಸಿದೆ. ಸಮೀಕ್ಷೆಯ ವರದಿ ಪ್ರಕಾರ, ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟವು ಭಾರಿ ಮುನ್ನಡೆ ಪಡೆಯಲಿದೆ. ಅದರಲ್ಲೂ, 10 ರಾಜ್ಯಗಳಲ್ಲಿ ಇಂಡಿಯಾ ಒಕ್ಕೂಟವು 200ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಬಿಹಾರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲಿ ಎನ್‌ಡಿಎ ಮೈತ್ರಿಕೂಟವು ವಾಶ್‌ಔಟ್‌ ಆಗಲಿದೆ. ನರೇಂದ್ರ ಮೋದಿ ಅವರ ವರ್ಚಸ್ಸು ಈ ಬಾರಿ ಬಿಜೆಪಿಗೆ ವೋಟುಗಳನ್ನು ತಂದುಕೊಡಲ್ಲ” ಎಂಬ ವರದಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಕೆಲವು ಕಾಂಗ್ರೆಸ್‌ ನಾಯಕರು ಕೂಡ ಇದನ್ನು ಹಂಚಿಕೊಂಡಿದ್ದಾರೆ.

ವಾಸ್ತವಾಂಶ ಏನು?

ಇಂಡಿಯಾ ಒಕ್ಕೂಟವು ಭಾರಿ ಮುನ್ನಡೆ ಸಾಧಿಸಲಿದೆ ಎಂಬುದಾಗಿ ದೈನಿಕ್‌ ಭಾಸ್ಕರ್‌ ಪತ್ರಿಕೆಯು ಏಪ್ರಿಲ್‌ 13ರಂದು ವರದಿ ಪ್ರಕಟಿಸಿದೆ ಎಂಬುದರ ಕುರಿತು ಪಿಟಿಐ ಸೇರಿ ಹಲವು ಸಂಸ್ಥೆಗಳು ಫ್ಯಾಕ್ಟ್‌ಚೆಕ್‌ ಮಾಡಿವೆ. ಇಂಡಿಯಾ ಒಕ್ಕೂಟಕ್ಕೆ ಭಾರಿ ಮುನ್ನಡೆ ಸಿಗುತ್ತದೆ ಎಂಬುದರ ಕುರಿತು ಏಪ್ರಿಲ್‌ 13ರಂದು ದೈನಿಕ್‌ ಭಾಸ್ಕರ್‌ ಯಾವುದೇ ವರದಿ ಪ್ರಕಟಿಸಿಲ್ಲ. ದೈನಿಕ್‌ ಭಾಸ್ಕರ್‌ ಪತ್ರಿಕೆಯ ಪ್ರತಿಗಳನ್ನು ಗಮನಿಸಿದಾಗ, ಅದರಲ್ಲಿ ಸಮೀಕ್ಷೆಯ ವರದಿಯನ್ನೇ ಪ್ರಕಟಿಸಿಲ್ಲ. ಹಾಗಾಗಿ, ದೈನಿಕ್‌ ಭಾಸ್ಕರ್‌ ಹೆಸರಿನಲ್ಲಿ ವೈರಲ್‌ ಆದ ವರದಿಯು ನಕಲಿ ಎಂಬುದಾಗಿ ಪಿಟಿಐ ಫ್ಯಾಕ್ಟ್‌ಚೆಕ್‌ ತಿಳಿಸಿದೆ.

ಕೆಲ ದಿನಗಳ ಹಿಂದಷ್ಟೇ ಕರ್ನಾಟಕದಲ್ಲೂ ಇಂತಹ ವರದಿಯ ಫೋಟೊವೊಂದು ವೈರಲ್‌ ಆಗಿತ್ತು. “ನಮಗೆ ಹಿಂದುಗಳ ಮತಗಳು ಬೇಡ. ಮುಸ್ಲಿಮರು ಮತ ಹಾಕಿದರೆ ಸಾಕು” ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ ಎಂಬುದಾಗಿ ನಕಲಿ ವರದಿ ಸಿದ್ಧಪಡಿಸಿ ಹರಿಬಿಡಲಾಗಿತ್ತು.

ಇದನ್ನೂ ಓದಿ: Fact Check : ಹಿಂದುಗಳ ಮತ ಕಾಂಗ್ರೆಸ್‌ಗೆ ಬೇಡ; ಮುಸ್ಲಿಂ ಮತ ಮಾತ್ರವೇ ಸಾಕೆಂದರೇ ಸಿಎಂ ಸಿದ್ದರಾಮಯ್ಯ?

Continue Reading

ದೇಶ

ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಕಾಯಂ ಸ್ಥಾನ ನೀಡಿ ಎಂಬ ಮಸ್ಕ್‌ ಆಗ್ರಹಕ್ಕೆ ಅಮೆರಿಕವೂ ಸಾಥ್, ಶೀಘ್ರವೇ ಗುಡ್‌ ನ್ಯೂಸ್?

ವಿಶ್ವಸಂಸ್ಥೆಯು ನಿಯಮಗಳನ್ನು ಬದಲಿಸಬೇಕು. ಜಗತ್ತಿನಲ್ಲೇ ಭಾರತ ಜನಪ್ರಿಯ ದೇಶವಾದರೂ ಇದುವರೆಗೆ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಸಿಗದಿರುವುದು ಅಸಂಬದ್ಧವಾಗಿದೆ. ಭಾರತ ಹಾಗೂ ಆಫ್ರಿಕಾಗೆ ಕಾಯಂ ಸದಸ್ಯತ್ವ ನೀಡಬೇಕು ಎಂದು ಕೆಲ ದಿನಗಳ ಹಿಂದಷ್ಟೇ ಎಲಾನ್‌ ಮಸ್ಕ್‌ ಅವರು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ, ನಾವು ಕೂಡ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸುಧಾರಣೆ ಬಯಸುತ್ತೇವೆ ಎಂದು ಅಮೆರಿಕ ಕೂಡ ಹೇಳಿದೆ. ಆ ಮೂಲಕ ಭಾರತದ ಪರವಾಗಿ ನಿಂತಿದೆ.

VISTARANEWS.COM


on

Modi Biden
Koo

ವಾಷಿಂಗ್ಟನ್:‌ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಮತ್ತೆ ಅಧಿಕಾರಕ್ಕೆ ಬಂದರೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ (UNSC) ಭಾರತಕ್ಕೆ ಕಾಯಂ ಸ್ಥಾನ (UN Permanent Seat) ಸಿಗಲು ಪ್ರಯತ್ನಿಸಲಾಗುವುದು ಎಂಬುದಾಗಿ ಕೆಲ ದಿನಗಳ ಹಿಂದಷ್ಟೇ ಬಿಜೆಪಿಯು ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಇನ್ನು, ಭಾರತಕ್ಕೆ ಕಾಯಂ ಸ್ಥಾನ ನೀಡಬೇಕು ಎಂದು ಟೆಸ್ಲಾ ಕಂಪನಿ ಮುಖ್ಯಸ್ಥ ಎಲಾನ್‌ ಮಸ್ಕ್‌ (Elon Musk) ಅವರೂ ಆಗ್ರಹಿಸಿದ್ದಾರೆ. ಇದರ ಬೆನ್ನಲ್ಲೇ, ಅಮೆರಿಕ ಕೂಡ ಭಾರತಕ್ಕೆ ಬೆಂಬಲ ಘೋಷಿಸಿದೆ. ಇದು ಈಗ ಜಾಗತಿಕ ಮಟ್ಟದಲ್ಲಿ ಮಹತ್ವ ಪಡೆದಿದೆ.

“ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಕಾಯಂ ಸ್ಥಾನ ನೀಡಬೇಕು ಎಂಬುದರ ಕುರಿತು ಅಮೆರಿಕ ಅಧ್ಯಕ್ಷರೇ ಭದ್ರತಾ ಮಂಡಳಿ ಸಭೆಯಲ್ಲಿ ಮಾತನಾಡಿದ್ದಾರೆ. ವಿಶ್ವಸಂಸ್ಥೆ ಕಾರ್ಯದರ್ಶಿಯವರ ಅಭಿಪ್ರಾಯವೂ ಇದೇ ಆಗಿದೆ. ಆದಾಗ್ಯೂ, ಅಮೆರಿಕವು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಸುಧಾರಣೆ ತರಲು ಬಯಸುತ್ತದೆ. ನಾವು 21ನೇ ಶತಮಾನದಲ್ಲಿ ಬದುಕುತ್ತಿದ್ದು, ಸುಧಾರಣೆಯನ್ನು ಬಯಸುತ್ತೇವೆ” ಎಂದು ಅಮೆರಿಕ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮುಖ್ಯ ಉಪ ವಕ್ತಾರ ವೇದಾಂತ್‌ ಪಟೇಲ್‌ ಅವರು ಹೇಳಿದ್ದಾರೆ. ಹಾಗಾಗಿ, ಶೀಘ್ರದಲ್ಲೇ ಭಾರತಕ್ಕೆ ಕಾಯಂ ಸ್ಥಾನ ಸಿಕ್ಕರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ.

ಎಲಾನ್‌ ಮಸ್ಕ್‌ ಹೇಳಿದ್ದೇನು?

“ವಿಶ್ವಸಂಸ್ಥೆಯು ಬದಲಾವಣೆ ತರಲು ಹಿಂಜರಿಯುತ್ತಿದೆ. ವಿಶ್ವಸಂಸ್ಥೆಯ ಕಾಯಂ ಸದಸ್ಯತ್ವ ಪಡೆದಿರುವ ಬಲಿಷ್ಠ ರಾಷ್ಟ್ರಗಳು ತಾವು ಹೊಂದಿರುವ ಹೆಚ್ಚಿನ ಅಧಿಕಾರವನ್ನು ಬಳಸಿಕೊಳ್ಳಲು ಬಯಸುತ್ತಿವೆ. ಇದೇ ಕಾರಣಕ್ಕಾಗಿ ಆಫ್ರಿಕಾ ಹಾಗೂ ಭಾರತಕ್ಕೆ ಇದುವರೆಗೆ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಸಿಕ್ಕಿಲ್ಲ. ಹಾಗಾಗಿ, ವಿಶ್ವಸಂಸ್ಥೆಯು ನಿಯಮಗಳನ್ನು ಬದಲಿಸಬೇಕು. ಜಗತ್ತಿನಲ್ಲೇ ಭಾರತ ಜನಪ್ರಿಯ ದೇಶವಾದರೂ ಇದುವರೆಗೆ ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಸಿಗದಿರುವುದು ಅಸಂಬದ್ಧವಾಗಿದೆ. ಭಾರತ ಹಾಗೂ ಆಫ್ರಿಕಾಗೆ ಕಾಯಂ ಸದಸ್ಯತ್ವ ನೀಡಬೇಕು” ಎಂದು ಎಲಾನ್‌ ಮಸ್ಕ್‌ ಅವರು ಕಳೆದ ಜನವರಿಯಲ್ಲಿ ಆಗ್ರಹಿಸಿದ್ದರು.

ವಿಶ್ವಸಂಸ್ಥೆ ಭದ್ರತಾ ಮಂಡಳಿಯು 5 ಕಾಯಂ ಹಾಗೂ 10 ಕಾಯಂ ಅಲ್ಲದ ಅಥವಾ ತಾತ್ಕಾಲಿಕವಾಗಿ ಸದಸ್ಯತ್ವ ಪಡೆದಿರುವ ರಾಷ್ಟ್ರಗಳನ್ನು ಹೊಂದಿದೆ. ಕಳೆದ 16 ವರ್ಷದಿಂದಲೂ ಭಾರತವು ತಾತ್ಕಾಲಿಕ ಸದಸ್ಯತ್ವ ಪಡೆದಿದೆ. ಅಮೆರಿಕ, ಬ್ರಿಟನ್‌, ರಷ್ಯಾ, ಫ್ರಾನ್ಸ್‌ ಹಾಗೂ ಚೀನಾ ಕಾಯಂ ಸದಸ್ಯತ್ವ ಪಡೆದಿವೆ. ಭಾರತಕ್ಕೆ ಕಾಯಂ ಸ್ಥಾನ ನೀಡಲು ಚೀನಾ ಮಾತ್ರ ವಿರೋಧಿಸುತ್ತಿದ್ದು, ಎಲ್ಲ ದೇಶಗಳು ಬೆಂಬಲಿಸುತ್ತಿವೆ. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.‌ ಜೈಶಂಕರ್‌ ಅವರೊಂದಿಗೆ ನಡೆದ ಸಭೆಯಲ್ಲಿ ರಷ್ಯಾ ವಿದೇಶಾಂಗ ವ್ಯವಹಾರಗಳ ಸಚಿವ ಸೆರ್ಗೆಯ್‌ ಲಾವ್ರೋವ್‌ ಅವರು ಕೂಡ ಭಾರತಕ್ಕೆ ಕಾಯಂ ಸದಸ್ಯತ್ವ ನೀಡಬೇಕು ಎಂದು ಆಗ್ರಹಿಸಿದ್ದರು.

ಇದನ್ನೂ ಓದಿ: PM Modi: ಅಮೆರಿಕ ಪತ್ರಿಕೆಗೆ ಮೋದಿ ಸಂದರ್ಶನ; ಮಂದಿರ, ಚೀನಾ ಸೇರಿ ಹಲವು ವಿಷಯಗಳ ಬಗ್ಗೆ ಹೇಳಿದ್ದಿಷ್ಟು!

Continue Reading
Advertisement
Break Up
ದೇಶ33 mins ago

ಬ್ರೇಕಪ್‌ ಬಳಿಕ ಹುಡುಗ ಆತ್ಮಹತ್ಯೆ ಮಾಡಿಕೊಂಡರೆ ಪ್ರಿಯತಮೆ ಹೊಣೆ ಅಲ್ಲ; ಕೋರ್ಟ್‌ ಆದೇಶ

kl rahul
ಕ್ರಿಕೆಟ್33 mins ago

KL Rahul: 32ನೇ ವಸಂತಕ್ಕೆ ಕಾಲಿಟ್ಟ ಕನ್ನಡಿಗ ಕೆ.ಎಲ್​ ರಾಹುಲ್​; ಬಿಸಿಸಿಐಯಿಂದ ವಿಶೇಷ ಶುಭ ಹಾರೈಕೆ

bjp protest jai shree ram slogan
ಪ್ರಮುಖ ಸುದ್ದಿ42 mins ago

Jai Shree Ram Slogan: ಬಿಜೆಪಿ ಪ್ರತಿಭಟನೆ ಆರಂಭ; ವಿಚಾರಣೆ ವೇಳೆ ಆರೋಪಿಗಳು ಹೇಳಿದ ಸಂಗತಿ ಇಲ್ಲಿದೆ!

Nikhil Siddhartha reveals his son name
ಟಾಲಿವುಡ್1 hour ago

Nikhil Siddhartha: ಮಗನ ಹೆಸರನ್ನು ರಿವೀಲ್‌ ಮಾಡಿದ ʻಕಾರ್ತಿಕೇಯʼ ಸಿನಿಮಾ ಖ್ಯಾತಿಯ ನಟ!

T20 World Cup
ಕ್ರೀಡೆ1 hour ago

T20 World Cup: ಟಿ20 ವಿಶ್ವಕಪ್​ನಲ್ಲಿ ಈ ಆಟಗಾರರಿಗೆ ಅವಕಾಶ ಸಿಗುವುದು ಡೌಟ್​

Fact Check
Fact Check1 hour ago

Fact Check: 10 ರಾಜ್ಯಗಳಲ್ಲಿ ಇಂಡಿಯಾ ಒಕ್ಕೂಟಕ್ಕೆ 200 ಸ್ಥಾನ ಎಂಬ ವರದಿ ನಿಜವೇ? ಇಲ್ಲಿದೆ ಸತ್ಯ!

Kannada New Movie nalkane ayama movie
ಸ್ಯಾಂಡಲ್ ವುಡ್2 hours ago

Kannada New Movie: ʻಮಾಸ್ಟರ್‌ ಆನಂದ್‌ʼ ಮಗಳ ಮೊದಲ ಸಿನಿಮಾ ನಾಳೆ ರಾಜ್ಯಾದ್ಯಂತ ಬಿಡುಗಡೆ!

MS Dhoni
ಕ್ರೀಡೆ2 hours ago

MS Dhoni: ಧೋನಿ ಐಪಿಎಲ್​ ನಿವೃತ್ತಿ ಬಗ್ಗೆ ಮಹತ್ವದ ಮಾಹಿತಿ ನೀಡಿದ ಸುರೇಶ್​ ರೈನಾ

Modi Biden
ದೇಶ2 hours ago

ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಕಾಯಂ ಸ್ಥಾನ ನೀಡಿ ಎಂಬ ಮಸ್ಕ್‌ ಆಗ್ರಹಕ್ಕೆ ಅಮೆರಿಕವೂ ಸಾಥ್, ಶೀಘ್ರವೇ ಗುಡ್‌ ನ್ಯೂಸ್?

Veera Dheera Sooran Title Teaser OUT
ಕಾಲಿವುಡ್2 hours ago

Veera Dheera Sooran: ಚಿಯಾನ್ ವಿಕ್ರಮ್ 62ನೇ ಸಿನಿಮಾದ ಟೈಟಲ್‌ ಟೀಸರ್‌ ಔಟ್‌!

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ1 day ago

Dina Bhavishya : ಈ ಎರಡು ರಾಶಿಯವರು ಇಂದು ಹೂಡಿಕೆ ವ್ಯವಹಾರಕ್ಕೆ ತಲೆ ಹಾಕಲೇಬೇಡಿ

dina bhavishya
ಭವಿಷ್ಯ2 days ago

Dina Bhavishya : ಇವತ್ತು ಒಂದು ದಿನ ಈ ರಾಶಿಯವರು ಹೊಸ ಕೆಲಸಕ್ಕೆ ಕೈ ಹಾಕ್ಬೇಡಿ

HD Kumaraswamy apologised to womens for his statement and slams DK Shivakumar
Lok Sabha Election 20243 days ago

HD Kumaraswamy: ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದಿಸುತ್ತೇನೆ; ಡಿಕೆಶಿ ವಿರುದ್ಧ ಹರಿಹಾಯ್ದ ಎಚ್‌ಡಿಕೆ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಕಾರ್ಯಸ್ಥಳದಲ್ಲಿ ಕಿರಿಕಿರಿ ಸಾಧ್ಯತೆ

Modi in Karnataka Modi roadshow in coastal area Mangalore Watch video
Lok Sabha Election 20244 days ago

Modi in Karnataka: ಕರಾವಳಿಯಲ್ಲಿ ಮೋದಿ ಮೋಡಿ; ಭರ್ಜರಿ ರೋಡ್‌ ಶೋ! ವಿಡಿಯೊ ನೋಡಿ

dina bhavishya
ಭವಿಷ್ಯ4 days ago

Dina Bhavishya: ಸತ್ಯ ಹೇಳಿದ್ರೆ ಈ ರಾಶಿಯವರಿಗೆ ಬಂಧುಗಳಿಂದ ಟೀಕೆಗಳು ಎದುರಾಗುತ್ತವೆ

Dina Bhavishya
ಭವಿಷ್ಯ5 days ago

Dina Bhavishya : ಹಣಕಾಸಿನ ವ್ಯವಹಾರಗಳಲ್ಲಿ ಈ ರಾಶಿಯವರಿಗೆ ಯಶಸ್ಸು ಕಟ್ಟಿಟ್ಟಬುತ್ತಿ

Rameshwaram Cafe Blast Fake IDs created and captured bombers hiding in Kolkata
ಕ್ರೈಂ6 days ago

Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!

Dina Bhavishya
ಭವಿಷ್ಯ6 days ago

Dina Bhavishya : ಹತಾಶೆಯಲ್ಲಿ ಈ ರಾಶಿಯವರು ಆತುರದ ತೀರ್ಮಾನ ಕೈಗೊಳ್ಳಬೇಡಿ..

Lok Sabha Election 2024 Vokkaliga support us says DK Shivakumar
ಕರ್ನಾಟಕ7 days ago

Lok Sabha Election 2024: ಒಕ್ಕಲಿಗರ ಬೆಂಬಲ ನಮಗೇ; ನಿರ್ಮಲಾನಂದನಾಥ ಶ್ರೀ ಹೆಸರನ್ನು ರಾಜಕೀಯಕ್ಕೆ ಎಳೆದಿಲ್ಲ: ಡಿಕೆಶಿ ಸ್ಪಷ್ಟನೆ

ಟ್ರೆಂಡಿಂಗ್‌