CJI DY Chandrachud: 600 ವಕೀಲರಿಂದ ಮುಖ್ಯ ನ್ಯಾಯಮೂರ್ತಿಗೆ ಪತ್ರ; ನ್ಯಾಯಾಂಗದ ಸಮಗ್ರತೆಗೆ ಧಕ್ಕೆ ಬಗೆಗೆ ಕಳವಳ - Vistara News

ಪ್ರಮುಖ ಸುದ್ದಿ

CJI DY Chandrachud: 600 ವಕೀಲರಿಂದ ಮುಖ್ಯ ನ್ಯಾಯಮೂರ್ತಿಗೆ ಪತ್ರ; ನ್ಯಾಯಾಂಗದ ಸಮಗ್ರತೆಗೆ ಧಕ್ಕೆ ಬಗೆಗೆ ಕಳವಳ

ಹಿರಿಯ ವಕೀಲ ಹರೀಶ್ ಸಾಳ್ವೆ ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಸೇರಿದಂತೆ 600 ಮಂದಿ ವಕೀಲರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.

VISTARANEWS.COM


on

supreme court CJI DY chandrachud
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸದಿಲ್ಲಿ: ದೇಶದ 600ಕ್ಕೂ ಹೆಚ್ಚು ವಕೀಲರು ಭಾರತದ ಮುಖ್ಯ ನ್ಯಾಯಮೂರ್ತಿ (Chief Justice of India) ಡಿ.ವೈ ಚಂದ್ರಚೂಡ್ (CJI DY Chandrachud) ಅವರಿಗೆ ಪತ್ರ ಬರೆದಿದ್ದು, “ನ್ಯಾಯಾಂಗದ (Judiciary) ಸಮಗ್ರತೆಗೆ ಧಕ್ಕೆ ತರುತ್ತಿರುವ ಬೆಳವಣಿಗೆಗಳ” ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. “ಪಟ್ಟಭದ್ರ ಹಿತಾಸಕ್ತ ಗುಂಪು ನ್ಯಾಯಾಲಯದ (Supreme court) ತೀರ್ಪುಗಳ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದೆ” ಎಂದು ದೂರಿದ್ದಾರೆ.

ಹಿರಿಯ ವಕೀಲ ಹರೀಶ್ ಸಾಳ್ವೆ (Harish Salve) ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಸೇರಿದಂತೆ 600 ಮಂದಿ ವಕೀಲರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ. “ಪಟ್ಟಭದ್ರ ಹಿತಾಸಕ್ತಿಯ ಗುಂಪುಗಳು ನ್ಯಾಯಾಂಗ ಪ್ರಕ್ರಿಯೆಗಳನ್ನು ನಾಜೂಕಾಗಿ ನಿರ್ವಹಿಸಲು, ನ್ಯಾಯಾಲಯದ ತೀರ್ಪುಗಳ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿರುವುದು; ಆಧಾರರಹಿತ ಆರೋಪಗಳು ಮತ್ತು ರಾಜಕೀಯ ಅಜೆಂಡಾಗಳನ್ನು ಮುಂದಿಟ್ಟು ನ್ಯಾಯಾಂಗದ ಖ್ಯಾತಿಯನ್ನು ಹಾಳುಮಾಡಲು ಪ್ರಯತ್ನಿಸುತ್ತಿರುವುದನ್ನು” ವಕೀಲರು ಖಂಡಿಸಿದ್ದಾರೆ.

“ಭ್ರಷ್ಟಾಚಾರದ ಆರೋಪ ಹೊತ್ತಿರುವ ರಾಜಕೀಯ ವ್ಯಕ್ತಿಗಳನ್ನು ಒಳಗೊಂಡ ಪ್ರಕರಣಗಳಲ್ಲಿ ಇದು ಸ್ಪಷ್ಟವಾಗಿ ಕಂಡುಬರುತ್ತಿದೆ. ಅಲ್ಲಿ ನ್ಯಾಯಾಲಯದ ನಿರ್ಧಾರಗಳನ್ನು ತಮಗೆ ಬೇಕಾದ ಹಾಗೆ ತಿರುಚುವ, ನ್ಯಾಯಾಂಗಕ್ಕೆ ಕಳಂಕ ಉಂಟುಮಾಡುವ ಪ್ರಯತ್ನಗಳು ಹೆಚ್ಚು ಸ್ಪಷ್ಟವಾಗಿ ಕಂಡುಬರುತ್ತಿವೆ” ಎಂದು ಪತ್ರದಲ್ಲಿದೆ.

“ಒಂದು ಆತಂಕಕಾರಿ ತಂತ್ರವೆಂದರೆ‌, ನ್ಯಾಯಾಲಯಗಳ ಈಗಿನ ಕಾರ್ಯವೈಖರಿಯನ್ನು ಉದ್ದೇಶಪೂರ್ವಕ ʼಕಲ್ಪಿತ ಸುವರ್ಣಯುಗ’ಕ್ಕೆ ಹೋಲಿಸುವುದು, ಸುಳ್ಳು ನಿರೂಪಣೆಯೊಂದಿಗೆ ನ್ಯಾಯಾಂಗದ ಕಾರ್ಯನಿರ್ವಹಣೆಯ ಕುರಿತು ಅಪಕಲ್ಪನೆ ಮೂಡಿಸುವುದು. ಇಂತಹ ಸುಳ್ಳು ನಿರೂಪಣೆಗಳು ನ್ಯಾಯಾಂಗದ ಫಲಿತಾಂಶಗಳ ಮೇಲೆ ದುಷ್ಪ್ರಭಾವ ಬೀರುವ ಮತ್ತು ನ್ಯಾಯಾಂಗದ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಕುಗ್ಗಿಸುವ ಉದ್ದೇಶವನ್ನು ಹೊಂದಿವೆ” ಎಂದು ವಕೀಲರು ಆಪಾದಿಸಿದ್ದಾರೆ.

ಈ ಪತ್ರವು “ಬೆಂಚ್ ಫಿಕ್ಸಿಂಗ್‌” ಬಗ್ಗೆ ಕಳವಳ ವ್ಯಕ್ತಪಡಿಸಿದೆ. “ನ್ಯಾಯಾಂಗ ಪೀಠಗಳ ಸಂಯೋಜನೆಯ ಮೇಲೆ ಪ್ರಭಾವ ಬೀರಲು ಮತ್ತು ನ್ಯಾಯಾಧೀಶರ ಸಮಗ್ರತೆಯ ಮೇಲೆ ಹಾನಿಯೆಸಗಲು ಪ್ರಯತ್ನಗಳನ್ನು ಮಾಡಲಾಗಿದೆ. ಈ ಕ್ರಮಗಳು ನ್ಯಾಯಾಂಗಕ್ಕೆ ಅಗೌರವ ಮಾತ್ರವಲ್ಲದೆ ಕಾನೂನು ಮತ್ತು ನ್ಯಾಯದ ತತ್ವಗಳಿಗೆ ಹಾನಿಯುಂಟುಮಾಡುತ್ತವೆ” ಎಂದಿದೆ. “ಅವರು ನಮ್ಮ ನ್ಯಾಯಾಲಯಗಳನ್ನು ಕಾನೂನಿನ ಆಡಳಿತವಿಲ್ಲದ ದೇಶಗಳಿಗೆ ಹೋಲಿಸುವ ಮಟ್ಟಕ್ಕೆ ಇಳಿದಿದ್ದಾರೆ” ಎಂದು ಆರೋಪಿಸಿದೆ.

“ಅವು ಕೇವಲ ಟೀಕೆಗಳಲ್ಲ. ಅವು ನಮ್ಮ ನ್ಯಾಯಾಂಗದಲ್ಲಿ ಸಾರ್ವಜನಿಕರ ನಂಬಿಕೆಯನ್ನು ಹಾಳುಮಾಡುವ, ನಮ್ಮ ಕಾನೂನುಗಳ ನ್ಯಾಯೋಚಿತ ಅನ್ವಯಕ್ಕೆ ಬೆದರಿಕೆ ಉಂಟುಮಾಡುವ ನೇರ ದಾಳಿಗಳಾಗಿವೆ” ಎಂದಿರುವ ಪತ್ರ, ರಾಜಕಾರಣಿಗಳು ತಮ್ಮ ಹಿತಾಸಕ್ತಿಗಳಿಗೆ ಅನುಗುಣವಾಗಿ ಕಾನೂನು ವಿಷಯಗಳ ಮೇಲೆ ನಿಲುವುಗಳನ್ನು ಬದಲಾಯಿಸುವ, ಆ ಮೂಲಕ ಕಾನೂನು ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಹಾಳು ಮಾಡುವ ವಿದ್ಯಮಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

“ರಾಜಕಾರಣಿಗಳು ಭ್ರಷ್ಟಾಚಾರದ ಆರೋಪ ಮಾಡಿ ನಂತರ ನ್ಯಾಯಾಲಯದಲ್ಲಿ ಅವರನ್ನು ಸಮರ್ಥಿಸಿಕೊಳ್ಳುವುದನ್ನು ವಿಲಕ್ಷಣ ವಿದ್ಯಮಾನ. ನ್ಯಾಯಾಲಯದ ತೀರ್ಮಾನ ಅವರಿಗೆ ಬೇಕಾದಂತೆ ಬರದಿದ್ದರೆ ಅವರು ನ್ಯಾಯಾಲಯದ ಒಳಗೆ ಮತ್ತು ಮಾಧ್ಯಮಗಳಲ್ಲಿ ನ್ಯಾಯಾಲಯಗಳನ್ನು ಟೀಕಿಸುತ್ತಾರೆ. ಈ ಎರಡು ಮುಖದ ನಡವಳಿಕೆಯು ನಮ್ಮ ಕಾನೂನು ವ್ಯವಸ್ಥೆಯ ಬಗ್ಗೆ ಸಾಮಾನ್ಯ ವ್ಯಕ್ತಿಯಲ್ಲಿರುವ ಗೌರವಕ್ಕೆ ಹಾನಿಯೆಸಗುತ್ತದೆ,” ಎಂದು ವಕೀಲರು ಆರೋಪಿಸಿದ್ದಾರೆ.

“ಕೆಲವರು ತಮ್ಮ ಪ್ರಕರಣಗಳಲ್ಲಿ ನ್ಯಾಯಾಧೀಶರು ಯಾರೆಂಬುದರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ. ನಿರ್ದಿಷ್ಟ ರೀತಿಯಲ್ಲಿ ತೀರ್ಪು ನೀಡಲು ನ್ಯಾಯಾಧೀಶರ ಮೇಲೆ ಒತ್ತಡ ಹೇರಲು, ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳುಗಳನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.

“ಅವರ ವಿಧಾನದ ಕಾರ್ಯನಿರ್ವಹಣೆಯ ಸಮಯವು ನಿಕಟ ಪರಿಶೀಲನೆಗೆ ಅರ್ಹವಾಗಿದೆ. ರಾಷ್ಟ್ರವು ಚುನಾವಣೆಗೆ ಹೋಗಲು ಸಿದ್ಧವಾಗಿರುವ ಸಂದರ್ಭದಲ್ಲಿ ಇದು ಕಾಣುತ್ತಿದೆ. 2018-2019ರಲ್ಲಿ ಕೂಡ ಇಂಥ ʼಹಿಟ್ ಅಂಡ್ ರನ್’ ವರ್ತನೆಗಳನ್ನು ನೆನಪಿಸಿಕೊಳ್ಳಬಹುದು. ಮೌನವಾಗಿರುವುದು ಅಥವಾ ಏನನ್ನೂ ಮಾಡದೆ ಇರುವುದು ಹಾನಿ ಮಾಡುವವರಿಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಇಂತಹ ಪ್ರಯತ್ನಗಳು ಕೆಲವು ವರ್ಷಗಳಿಂದ ಮತ್ತು ಪದೇ ಪದೆ ನಡೆಯುತ್ತಿರುವುದರಿಂದ ಮೌನವನ್ನು ಕಾಪಾಡಿಕೊಳ್ಳುವ ಸಮಯ ಇದಲ್ಲ,” ಎಂದಿರುವ ವಕೀಲರು, ಬಾಹ್ಯ ಒತ್ತಡಗಳಿಂದ ನ್ಯಾಯಾಂಗವನ್ನು ರಕ್ಷಿಸಲು ಮತ್ತು ಕಾನೂನು ಸುವ್ಯವಸ್ಥೆಯನ್ನು ಎತ್ತಿಹಿಡಿಯಲು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್‌ಗೆ ಕರೆ ನೀಡಿದ್ದಾರೆ.

ಇದನ್ನೂ ಓದಿ: Fact Check: ಸುಳ್ಳು ಸುದ್ದಿ ತಡೆಯುವ ಕೇಂದ್ರ ಸರ್ಕಾರದ ಫ್ಯಾಕ್ಟ್‌ಚೆಕ್‌ ಘಟಕಕ್ಕೆ ಸುಪ್ರೀಂ ಕೋರ್ಟ್‌ ತಡೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

IPL 2024 : ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳುವುದೇ ಸಿಎಸ್​ಕೆ?

IPL 2024: ಪಾಯಿಂಟ್ಸ್ ಟೇಬಲ್​ನಲ್ಲಿ ಎಸ್​ಆರ್​​ಎಚ್​​ ಮೂರನೇ ಸ್ಥಾನದಲ್ಲಿದ್ದರೆ, ಸಿಎಸ್​ಕೆ ಐದನೇ ಸ್ಥಾನದಲ್ಲಿದೆ. ಆದಾಗ್ಯೂ, 2018 ರ ಆವೃತ್ತಿಯ ಫೈನಲಿಸ್ಟ್​​ಗಳು ಮತ್ತೆ ಮುಖಾಮುಖಿಯಾದಾಗ ಪಾಯಿಂಟ್ಸ್ ಟೇಬಲ್​ನಲ್ಲಿ ಸ್ಥಾನಗಳು ಪಂದ್ಯದ ಫಲಿತಾಂಶದ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ.

VISTARANEWS.COM


on

IPL 2024
Koo

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ 2024ರ (IPL2024) 46ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಭಾನುವಾರದ ಡಬಲ್​ ಹೆಡರ್​ನ ಎರಡನೇ ಪಂದ್ಯ ಇದಾಗಿದೆ. ಈ ಋತುವಿನಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗುತ್ತಿರುವುದು ಇದು ಎರಡನೇ ಬಾರಿ. ಹೈದರಾಬಾದ್​​ನಲ್ಲಿ ನಡೆದ ಹಿಂದಿನ ಪಂದ್ಯದಲ್ಲಿ ಎಸ್ಆರ್​ಎಚ್​​ 11 ಎಸೆತಗಳು ಬಾಕಿ ಇರುವಾಗ ಆರು ವಿಕೆಟ್​ಗಳ ಸುಲಭ ಗೆಲುವು ಸಾಧಿಸಿತು.

ಪಾಯಿಂಟ್ಸ್ ಟೇಬಲ್​ನಲ್ಲಿ ಎಸ್​ಆರ್​​ಎಚ್​​ ಮೂರನೇ ಸ್ಥಾನದಲ್ಲಿದ್ದರೆ, ಸಿಎಸ್​ಕೆ ಐದನೇ ಸ್ಥಾನದಲ್ಲಿದೆ. ಆದಾಗ್ಯೂ, 2018 ರ ಆವೃತ್ತಿಯ ಫೈನಲಿಸ್ಟ್​​ಗಳು ಮತ್ತೆ ಮುಖಾಮುಖಿಯಾದಾಗ ಪಾಯಿಂಟ್ಸ್ ಟೇಬಲ್​ನಲ್ಲಿ ಸ್ಥಾನಗಳು ಪಂದ್ಯದ ಫಲಿತಾಂಶದ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ.

ಚೆನ್ನೈ ಸೂಪರ್ ಕಿಂಗ್ಸ್ ಪರ ಶಿವಂ ದುಬೆ ಅದ್ಭುತ ಫಾರ್ಮ್ನಲ್ಲಿದ್ದಾರೆ ಮತ್ತು ಸ್ಥಿರವಾಗಿ ರನ್ ಗಳಿಸುತ್ತಿದ್ದಾರೆ. ದುಬೆ ಎಂಟು ಪಂದ್ಯಗಳಿಂದ 49 ಸರಾಸರಿಯಲ್ಲಿ 311 ರನ್ ಗಳಿಸಿದ್ದು, 169.94 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಅವರು ಈವರೆಗೆ 23 ಬೌಂಡರಿಗಳು ಮತ್ತು 22 ಸಿಕ್ಸರ್​ಗಳನ್ನು ಬಾರಿಸಿದ್ದಾರೆ. ಏತನ್ಮಧ್ಯೆ, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ ನಾಯಕ ಋತುರಾಜ್ ಗಾಯಕ್ವಾಡ್ ಅದ್ಭುತ ಆಟವನ್ನು ಆಡಿದ್ದು ಅದ್ಭುತ 108* ರನ್ ಗಳಿಸಿದರು. ಎಂಎಸ್ ಧೋನಿ ಕೆಳ ಕ್ರಮಾಂಕದಲ್ಲಿ ಕೆಲವು ಉಪಯುಕ್ತ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ ಆಲ್ರೌಂಡರ್ ರವೀಂದ್ರ ಜಡೇಜಾ 8 ಪಂದ್ಯಗಳಲ್ಲಿ 157 ರನ್ ಹಾಗೂ 4 ವಿಕೆಟ್ ಕಬಳಿಸಿದ್ದಾರೆ.

ಅಪಾಯಕಾರಿ ಬ್ಯಾಟಿಂಗ್​​

ಮತ್ತೊಂದೆಡೆ, ಪ್ಯಾಟ್ ಕಮಿನ್ಸ್ ನೇತೃತ್ವದ ತಂಡವು ಪಂದ್ಯಾವಳಿಯಲ್ಲಿ ಅತ್ಯಂತ ಅಪಾಯಕಾರಿ ಬ್ಯಾಟಿಂಗ್ ಬಲ ಹೊಂದಿರುವ ತಂಡ. ತನ್ನ ಹೆಚ್ಚಿನ ಪಂದ್ಯಗಳಲ್ಲಿ 220 ಕ್ಕೂ ಹೆಚ್ಚು ರನ್ ಗಳಿಸಿದೆ.ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಕೊನೆಯ ಪಂದ್ಯದಲ್ಲಿ ಕಮಿನ್ಸ್ ಬಳಗ ಕೋ 35 ರನ್​ಗಳ ಹಿನ್ನಡೆ ಅನುಭವಿಸಿತ್ತು.

ಇದನ್ನೂ ಓದಿ: IPL 2024 : ಅಭಿಮಾನಿಗಳಿಗೆ ಮತ್ತೊಂದು ಖುಷಿಯ ಸುದ್ದಿ ಕೊಡುವುದೇ ಆರ್​ಸಿಬಿ?

ಆರಂಭಿಕ ಜೋಡಿ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಈ ಋತುವಿನಲ್ಲಿ ಇಲ್ಲಿಯವರೆಗೆ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಇಬ್ಬರೂ ಎಡಗೈ ಬ್ಯಾಟರ್​ಗಳು ತಮ್ಮ ತಂಡಕ್ಕೆ ಉತ್ತಮ ಆರಂಭವನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಹೆಡ್ ಏಳು ಪಂದ್ಯಗಳಲ್ಲಿ 325 ರನ್ ಗಳಿಸಿದ್ದರೆ, ಶರ್ಮಾ ತಮ್ಮ ಬ್ಯಾಟ್ನಿಂದ 288 ರನ್ ಗಳಿಸಿದ್ದಾರೆ. ಶಹಬಾಜ್ ಅಹ್ಮದ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಕೂಡ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ.

ಆರೆಂಜ್ ಆರ್ಮಿ ಪರ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಟಿ ನಟರಾಜನ್ ಅಗ್ರಸ್ಥಾನದಲ್ಲಿದ್ದಾರೆ. ಎಡಗೈ ವೇಗಿ ಆರು ಪಂದ್ಯಗಳಲ್ಲಿ 12 ವಿಕೆಟ್ ಪಡೆದಿದ್ದಾರೆ. ನಾಯಕ ಕಮಿನ್ಸ್ ಕೂಡ ಉತ್ತಮ ಫಾರ್ಮ್ ನಲ್ಲಿದ್ದು, ಎಂಟು ಪಂದ್ಯಗಳಲ್ಲಿ ಹತ್ತು ವಿಕೆಟ್ ಪಡೆದಿದ್ದಾರೆ.

ಎಂಎ ಚಿದಂಬರಂ ಕ್ರೀಡಾಂಗಣ ಪಿಚ್ ವರದಿ

ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದ ಪಿಚ್ ಬ್ಯಾಟರ್​ಗಳಿಗೆ ಅನುಕೂಲಕರವಾಗಿದ್ದು, ಈ ಪಂದ್ಯದಲ್ಲಿ ವಿಕೆಟ್ ಪಡೆಯಲು ವೇಗದ ಬೌಲರ್​ಗಳು ಪ್ರಮುಖ ಬೆದರಿಕೆಯಾಗಿದ್ದಾರೆ. ಇಬ್ಬನಿ ಅಂಶವು ಆಟದ ನಂತರದ ಹಂತಗಳಲ್ಲಿ ಪ್ರಾರಂಭವಾಗುತ್ತದೆ. ಇದು ಚೇಸಿಂಗ್ ತಂಡಕ್ಕೆ ಸಹಾಯ ಮಾಡುತ್ತದೆ. ಟಾಸ್ ಗೆದ್ದ ತಂಡವು ಮೊದಲು ಬೌಲಿಂಗ್ ಮಾಡಲು ನೋಡುತ್ತದೆ.

ಇದನ್ನೂ ಓದಿ:

ಸಂಭಾವ್ಯ ತಂಡಗಳು

ಸನ್​ರೈಸರ್ಸ್​ ಹೈದರಾಬಾದ್​​: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಏಡೆನ್ ಮಾರ್ಕ್ರಮ್, ಹೆನ್ರಿಕ್ ಕ್ಲಾಸೆನ್ (ವಿಕೆಟ್​ಕೀಪರ್​ ), ನಿತೀಶ್ ಕುಮಾರ್ ರೆಡ್ಡಿ, ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್ (ಸಿ), ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಂಡೆ, ಜಯದೇವ್ ಉನಾದ್ಕತ್.

ಚೆನ್ನೈ ಸೂಪರ್ ಕಿಂಗ್ಸ್​: ಅಜಿಂಕ್ಯ ರಹಾನೆ, ಋತುರಾಜ್ ಗಾಯಕ್ವಾಡ್ (ನಾಯಕ), ಡ್ಯಾರಿಲ್ ಮಿಚೆಲ್, ಶಿವಂ ದುಬೆ, ರವೀಂದ್ರ ಜಡೇಜಾ, ಮೊಯೀನ್ ಅಲಿ, ಎಂಎಸ್ ಧೋನಿ (ವಿಕೆಟ್ ಕೀಪರ್), ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮುಸ್ತಾಫಿಜುರ್ ರಹಮಾನ್, ಮಥೀಶಾ ಪತಿರಾನಾ.

ಇತ್ತಂಡಗಳ ಮುಖಾಮುಖಿ

  • ಆಡಿದ ಪಂದ್ಯಗಳು 20
  • ಚೆನ್ನೈ ಸೂಪರ್ ಕಿಂಗ್ಸ್ 14 ಗೆಲುವು
  • ಸನ್ರೈಸರ್ಸ್ ಹೈದರಾಬಾದ್ ಗೆಲುವು 06

ಪಂದ್ಯದ ವಿವರ

ದಿನಾಂಕ ಭಾನುವಾರ, ಏಪ್ರಿಲ್ 28
ಸಮಯ: ಸಂಜೆ 7:30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್, ಜಿಯೋ ಸಿನೆಮಾ ಅಪ್ಲಿಕೇಶನ್ ಮತ್ತು ವೆಬ್​ಸೈಟ್​

Continue Reading

ದೇಶ

Ujjwal Nikam: ಪ್ರಮೋದ್‌ ಮಹಾಜನ್‌ ಪುತ್ರಿಗೆ ಕೊಕ್‌, ಮುಂಬೈ ದಾಳಿ ವಕೀಲನಿಗೆ ಬಿಜೆಪಿ ಟಿಕೆಟ್!

Ujjwal Nikam: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯು 15ನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಅದರಲ್ಲೂ, ಮುಂಬೈ ನಾರ್ತ್‌ ಸೆಂಟ್ರಲ್‌ ಕ್ಷೇತ್ರದಲ್ಲಿ ಹಾಲಿ ಸಂಸದೆ ಪೂನಂ ಮಹಾಜನ್‌ ಬದಲಿಗೆ 26/11ರ ಮುಂಬೈ ದಾಳಿ ಪ್ರಕರಣದಲ್ಲಿ ವಾದ ಮಂಡಿಸಿದ ವಕೀಲ ಉಜ್ವಲ್‌ ನಿಕಾಮ್‌ ಅವರಿಗೆ ಬಿಜೆಪಿ ಟಿಕೆಟ್‌ ನೀಡಿದೆ.

VISTARANEWS.COM


on

Ujjwal Nikam
Koo

ಮುಂಬೈ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಬಿಜೆಪಿಯು ಅಳೆದು-ತೂಗಿ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಿದೆ. ಹೊಸಬರಿಗೆ ಆದ್ಯತೆ, ವಿವಾದ ಹೊಂದಿರುವ ನಾಯಕರಿಗೆ ಕೊಕ್‌, ಯುವಕರಿಗೆ ಮಣೆ ಸೇರಿ ಹಲವು ರೀತಿಯಲ್ಲಿ ಪ್ರಯೋಗ ಮಾಡುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, ಮುಂಬೈ ನಾರ್ತ್‌ ಸೆಂಟ್ರಲ್‌ ಲೋಕಸಭೆ ಕ್ಷೇತ್ರದಲ್ಲಿ ಹಾಲಿ ಸಂಸದೆ, ಬಿಜೆಪಿ ನಾಯಕ ಪ್ರಮೋದ್‌ ಮಹಾಜನ್‌ ಅವರ ಪುತ್ರಿ ಪೂನಂ ಮಹಾಜನ್‌ (Poonam Mahajan) ಅವರ ಬದಲಿಗೆ 26/11ರ ಮುಂಬೈ ಉಗ್ರ ದಾಳಿ (26/11 Mumbai Terror Attack) ವಕೀಲ ಉಜ್ವಲ್‌ ನಿಕಾಮ್‌ (Ujjwal Nikam) ಅವರಿಗೆ ಬಿಜೆಪಿ ಟಿಕೆಟ್‌ ಘೋಷಣೆ ಮಾಡಿದೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯು 15ನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಉಜ್ವಲ್‌ ನಿಕಾಮ್‌ ಅವರಿಗೆ ಟಿಕೆಟ್‌ ನೀಡಿರುವುದು ಪ್ರಮುಖ ಘೋಷಣೆಯಾಗಿದೆ. ಉಜ್ವಲ್‌ ನಿಕಾಮ್‌ ಅವರು ಬಾಂಬೆ ಹೈಕೋರ್ಟ್‌ ವಕೀಲರಾಗಿದ್ದು, ಇವರು ಮುಂಬೈ ಭಯೋತ್ಪಾದಕ ದಾಳಿಯ ಬಳಿಕ ಸರ್ಕಾರದ ಪರವಾಗಿ ನ್ಯಾಯಾಲಯದಲ್ಲಿ ವಾದ (ಪಬ್ಲಿಕ್‌ ಪ್ರಾಸಿಕ್ಯೂಟರ್) ಮಂಡಿಸಿದ್ದರು. ಇವರೀಗ ಮುಂಬೈ ನಾರ್ತ್‌ ಸೆಂಟ್ರಲ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ವರ್ಷಾ ಗಾಯಕ್ವಾಡ್‌ ಅವರನ್ನು ಎದುರಿಸಲಿದ್ದಾರೆ.

ಯಾರಿವರು ಉಜ್ವಲ್‌ ನಿಕಾಮ್?

ಉಜ್ವಲ್‌ ನಿಕಾಮ್‌ ಅವರ ಹೆಸರು ಮುಂಬೈ ದಾಳಿ ಪ್ರಕರಣದಲ್ಲಿ ದೇಶಾದ್ಯಂತ ಪಸರಿಸಿದರೂ, ಅವರು ಪ್ರಮುಖ ಪ್ರಕರಣಗಳಲ್ಲಿ ವಾದ ಮಂಡಿಸಿದ್ದಾರೆ. 1993ರಲ್ಲಿ ಮುಂಬೈನಲ್ಲಿ ನಡೆದ ಉಗ್ರರ ದಾಳಿ, ಗುಲ್ಶನ್‌ ಕುಮಾರ್‌ ಕೊಲೆ ಪ್ರಕರಣ, 2013ರಲ್ಲಿ ಮುಂಬೈನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ ವಾದ ಮಂಡಿಸಿದ್ದಾರೆ. ಅಷ್ಟೇ ಏಕೆ, ಹಾಲಿ ಸಂಸದೆ ಪೂನಂ ಮಹಾಜನ್‌ ಅವರ ತಂದೆ ಪ್ರಮೋದ್‌ ಮಹಾಜನ್‌ ಹತ್ಯೆ ಪ್ರಕರಣದಲ್ಲೂ ಉಜ್ವಲ್‌ ನಿಕಾಮ್‌ ಅವರು ವಾದ ಮಂಡಿಸಿದ್ದರು. ಇವರಿಗೆ 2016ರಲ್ಲಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನೂ ನೀಡಿದೆ.

ಮುಂಬೈ ದಾಳಿ ಕರಾಳ ಅಧ್ಯಾಯ

ಮುಂಬೈನಲ್ಲಿರುವ ತಾಜ್​ ಹೋಟೆಲ್​ಗಳ ಮೇಲೆ 2008ರಲ್ಲಿ ನಡೆದ ಉಗ್ರ ದಾಳಿ ಇಂದಿಗೂ ನಮ್ಮ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ಉಳಿದಿದೆ. ಅದನ್ನೊಂದು ಕರಾಳ ದಿನವೆಂದೇ ಪರಿಗಣಿಸಲಾಗುತ್ತದೆ. ಅಂದು ಲಷ್ಕರೆ ತಯ್ಬಾ ಸಂಘಟನೆಯ 10 ಉಗ್ರರು ಸಮುದ್ರ ಮಾರ್ಗದ ಮೂಲಕ ಮುಂಬಯಿಗೆ ಬಂದು ಗುಂಡಿನ ದಾಳಿ ನಡೆಸಿದ್ದರು. ನವೆಂಬರ್ 26ರಿಂದ 29ರವರೆಗೆ ಭದ್ರತಾ ಪಡೆಗಳು-ಉಗ್ರರ ನಡುವಿನ ಹೋರಾಟ ನಡೆದಿತ್ತು. ಇದರಲ್ಲಿ ಆರು ಮಂದಿ ಅಮೇರಿಕದವರು ಸೇರಿ 166 ಮಂದಿ ಮೃತಪಟ್ಟಿದ್ದರು. ಹಲವು ಯೋಧರು ಕೂಡ ಹುತಾತ್ಮರಾಗಿದ್ದಾರೆ.

ಇದನ್ನೂ ಓದಿ: ಮೊದಲ ಹಂತದ ಮತದಾನ ಬೆನ್ನಲ್ಲೇ ಕಾಂಗ್ರೆಸ್‌, ಬಿಜೆಪಿ ಅಲರ್ಟ್;‌ ‘ಉತ್ತರ’ದತ್ತ ಚಿತ್ತ, 13 ಸಚಿವರಿಗೆ ಟಾಸ್ಕ್!

Continue Reading

ಪ್ರಮುಖ ಸುದ್ದಿ

IPL 2024 : ಅಭಿಮಾನಿಗಳಿಗೆ ಮತ್ತೊಂದು ಖುಷಿಯ ಸುದ್ದಿ ಕೊಡುವುದೇ ಆರ್​ಸಿಬಿ?

IPL 2024: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿಯ ಐಪಿಎಲ್​ನಲ್ಲಿ ಮರೆಯಲಾಗದ ಕೆಟ್ಟ ಅಭಿಯಾನವನ್ನು ಕಂಡಿದೆ. ಆಡಿರುವ 9 ಪಂದ್ಯಗಳಲ್ಲಿ 2ರಲ್ಲಿ ಗೆಲುವು ಸಾಧಿಸಿರುವ ಆರ್​ಸಿಬಿ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಆದಾಗ್ಯೂ, ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧದ ಗೆಲುವಿನ ನಂತರ ಆರ್​ಸಿಬಿ ಜಿಟಿ ವಿರುದ್ಧದ ಪಂದ್ಯವನ್ನು ಆತ್ಮವಿಶ್ವಾಸದಿಂದ ಎದುರಿಸುವ ಗುರಿಯನ್ನು ಹೊಂದಿದೆ.

VISTARANEWS.COM


on

IPL 2024
Koo

ಅಹಮದಾಬಾದ್​​: ಇಂಡಿಯನ್ ಪ್ರೀಮಿಯರ್ ಲೀಗ್​ನ (IPL 2024) 45ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟಾನ್ಸ್​ ತಂಡವನ್ನು ಎದುರಿಸಲಿದೆ. ಅಹಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಈ ಪಂದ್ಯದಲ್ಲಿ ನಡೆಯಲಿದೆ. ಟೂರ್ನಿಯಲ್ಲಿ ಈವರೆಗೆ 9 ಪಂದ್ಯಗಳನ್ನು ಆಡಿರುವ ಗುಜರಾತ್ 4 ಗೆಲುವು ಹಾಗೂ 5 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ತಂಡವು ಋತುವಿನ ಐದನೇ ಗೆಲುವನ್ನು ದಾಖಲಿಸುವ ಮತ್ತು ಪ್ಲೇಆಪ್​ ರೇಸ್​ನಲ್ಲಿ ಉಳಿಯುವ ಗುರಿ ಹೊಂದಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಈ ಬಾರಿಯ ಐಪಿಎಲ್​ನಲ್ಲಿ ಮರೆಯಲಾಗದ ಕೆಟ್ಟ ಅಭಿಯಾನವನ್ನು ಕಂಡಿದೆ. ಆಡಿರುವ 9 ಪಂದ್ಯಗಳಲ್ಲಿ 2ರಲ್ಲಿ ಗೆಲುವು ಸಾಧಿಸಿರುವ ಆರ್​ಸಿಬಿ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಆದಾಗ್ಯೂ, ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧದ ಗೆಲುವಿನ ನಂತರ ಆರ್​ಸಿಬಿ ಜಿಟಿ ವಿರುದ್ಧದ ಪಂದ್ಯವನ್ನು ಆತ್ಮವಿಶ್ವಾಸದಿಂದ ಎದುರಿಸುವ ಗುರಿಯನ್ನು ಹೊಂದಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್​ರೈಸರ್ಸ್​ ಹೈದರಾಬಾದ್ ವಿರುದ್ಧದ ಹಿಂದಿನ ಪಂದ್ಯಕ್ಕಿಂತ ಯಾವುದೇ ಬದಲಾವಣೆಯಿಲ್ಲದ ತಂಡವನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ. ಈ ಸರಣಿಯೊಂದಿಗೆ ತಂಡವು ಆರು ಪಂದ್ಯಗಳ ಸೋಲಿನ ಸರಣಿಯನ್ನು ಮುರಿಯುವಲ್ಲಿ ಯಶಸ್ವಿಯಾಯಿತು. ಜಿಟಿಯನ್ನು ಎದುರಿಸಲು ಅಹಮದಾಬಾದ್​ಗೆ ಪ್ರಯಾಣಿಸುವಾಗ ಮತ್ತೊಮ್ಮೆ ಅದೇ ಫಲಿತಾಂಶವನ್ನು ಎದುರಿಸಬಹುದು.

ಗುಜರಾತ್ ಟೈಟಾನ್ಸ್ ಕಳೆದ ಬಾರಿಯಂತೆಯೇ ಕಣಕ್ಕಿಳಿಯುವ ಸಾಧ್ಯತೆ ಇದೆ. ಸಾಯಿ ಸುದರ್ಶನ್ ಪ್ರಭಾವಶಾಲಿ ಆಟಗಾರನಾಗಿ ಬರುವುದರಿಂದ ಮತ್ತು ವೃದ್ಧಿಮಾನ್ ಸಹಾ, ಶುಭಮನ್ ಗಿಲ್ ಮತ್ತು ಕೇನ್ ವಿಲಿಯಮ್ಸನ್ ಅವರಂತಹ ಆಟಗಾರರು ಅಗ್ರ ಕ್ರಮಾಂಕದಲ್ಲಿ ಇರುವುದರಿಂದ ಮತ್ತೊಂದು ಗೆಲುವಿಗೆ ಶ್ರಮಿಸಬಹುದು.

ಪಿಚ್ ರಿಪೋರ್ಟ್


ಅಹಮದಾಬಾದ್​​ನ ನರೇಂದ್ರ ಮೋದಿ ಕ್ರೀಡಾಂಗಣವು ಬ್ಯಾಟರ್​​ಗಳಿಗೆ ಆದ್ಯತೆ ನೀಡುವ ಕ್ರೀಡಾಂಗಣವಾಗಿದೆ. ಆದಾಗ್ಯೂ, ಬೌನ್ಸ್ ಮತ್ತು ವೇಗದೊಂದಿಗೆ, ಬೌಲರ್ಗಳು ಮೇಲ್ಮೈಯಿಂದ ಸ್ವಲ್ಪ ಸಹಾಯವನ್ನು ಪಡೆಯಬಹುದು. ಅಹ್ಮದಾಬಾದ್ನಲ್ಲಿ ಸಮನಾಗಿ ಹೊಂದಿಕೆಯಾಗುವ ಮುಖಾಮುಖಿ ನಡೆಯಬಹುದು, ಮತ್ತು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡುವುದು ಸೂಕ್ತ ನಿರ್ಧಾರವೆಂದು ಸಾಬೀತುಪಡಿಸಬಹುದು.

ಇದನ್ನೂ ಓದಿ: IPL 2024 : ಕೆಕೆಆರ್​ ತಂಡವನ್ನು ಸೋಲಿಸಿ ವಿಶೇಷ ಭಕ್ಷ್ಯ ಸವಿದ ಪಂಜಾಬ್ ಆಟಗಾರರು, ಇಲ್ಲಿದೆ ವಿಡಿಯೊ

ಸಂಭಾವ್ಯ ಪ್ಲೇಯಿಂಗ್ ಇಲೆವೆನ್
ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಭ್ಮನ್ ಗಿಲ್ (ನಾಯಕಿ), ಕೇನ್ ವಿಲಿಯಮ್ಸನ್, ಅಜ್ಮತುಲ್ಲಾ ಒಮರ್​ಜೈ , ಅಭಿನವ್ ಮನೋಹರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ರವಿ ಶ್ರೀನಿವಾಸನ್ ಸಾಯಿ ಕಿಶೋರ್, ನೂರ್ ಅಹ್ಮದ್, ಸಂದೀಪ್ ವಾರಿಯರ್, ಮೋಹಿತ್ ಶರ್ಮಾ.

ರಾಯಲ್ ಚಾಲೆಂಜರ್ಸ್ ಬೆಂಗಳೂರು
ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ವಿಲ್ ಜಾಕ್ಸ್, ರಜತ್ ಪಾಟಿದಾರ್, ಕ್ಯಾಮೆರಾನ್ ಗ್ರೀನ್, ಮಹಿಪಾಲ್ ಲೊಮ್ರೊರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಕರಣ್ ಶರ್ಮಾ, ಲಾಕಿ ಫರ್ಗುಸನ್, ಯಶ್ ದಯಾಳ್, ಮೊಹಮ್ಮದ್ ಸಿರಾಜ್.

ಇತ್ತಂಡಗಳ ಮುಖಾಮುಖಿ

ಆಡಿದ ಪಂದ್ಯಗಳು- 3
ಗುಜರಾತ್ ಟೈಟಾನ್ಸ್ ಗೆ ಜಯ- 2
ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವು- 1

ಪಂದ್ಯದ ವಿವರ

ಐಪಿಎಲ್ 2024: 45ನೇ ಪಂದ್ಯ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರಾತ್ ಟೈಟಾನ್ಸ್
ದಿನಾಂಕ ಭಾನುವಾರ, ಏಪ್ರಿಲ್ 28, ಪಂದ್ಯ 45
ಸಮಯ: ಮಧ್ಯಾಹ್ನ 3:30
ಪ್ರಸಾರ ಮತ್ತು ಲೈವ್ ಸ್ಟ್ರೀಮಿಂಗ್ ವಿವರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್, ಜಿಯೋ ಸಿನೆಮಾ ಅಪ್ಲಿಕೇಶನ್ ಮತ್ತು ವೆಬ್​ಸೈಟ್​

Continue Reading

ಪ್ರಮುಖ ಸುದ್ದಿ

ಇವಿಎಂ ಧ್ವಂಸ; ಚಾಮರಾಜನಗರದ ಇಂಡಿಗನತ್ತ ಗ್ರಾಮದಲ್ಲಿ ಏಪ್ರಿಲ್‌ 29ರಂದು ಮರು ಮತದಾನ!

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದ ಮತಗಟ್ಟೆಯಲ್ಲಿ ಏಪ್ರಿಲ್‌ 29ರಂದು ಮರು ಮತದಾನ ನಡೆಸಲು ಚುನಾವಣೆ ಆಯೋಗ ಆದೇಶಿಸಿದೆ. ಏಪ್ರಿಲ್‌ 26ರಂದು ಮತಗಟ್ಟೆಯಲ್ಲಿ ಗಲಾಟೆ ನಡೆದು, ಇವಿಎಂ ಧ್ವಂಸಗೊಳಿಸಿದ ಕಾರಣ ಮತದಾನ ನಡೆದಿರಲಿಲ್ಲ. ಹಾಗಾಗಿ, ಮರು ಮತದಾನ ಘೋಷಿಸಲಾಗಿದೆ.

VISTARANEWS.COM


on

Chamarajanagar
Koo

ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದ ಮತಗಟ್ಟೆಯಲ್ಲಿ ಶುಕ್ರವಾರ (ಏಪ್ರಿಲ್‌ 26) ಗಲಾಟೆ ನಡೆದು, ಚುನಾವಣೆ ಮತಯಂತ್ರವನ್ನು (EVM) ಧ್ವಂಸಗೊಳಿಸಿದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು (Election Commission) ಏಪ್ರಿಲ್‌ 29ರಂದು ಮರು ಮತದಾನ ನಡೆಸಲು ತೀರ್ಮಾನಿಸಿದೆ. ಕ್ಷೇತ್ರ ಚುನಾವಣಾಧಿಕಾರಿಗಳ ಬಳಿ ವರದಿ ಪಡೆದ ಚುನಾವಣಾ ಆಯೋಗವು, ಮರು ಮತದಾನ (Re-election) ನಡೆಸಲು ತೀರ್ಮಾನಿಸಿದೆ. ಹಾಗಾಗಿ, ಸೋಮವಾರ ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಇಂಡಿಗನತ್ತ ಗ್ರಾಮದಲ್ಲಿ ಮರು ಮತದಾನ ನಡೆಯಲಿದೆ.

ಮತಯಂತ್ರ ಧ್ವಂಸ ಮಾಡಿದ ಗ್ರಾಮಸ್ಥರು

ಇಂಡಿಗನತ್ತ ಗ್ರಾಮದಲ್ಲಿ ರೊಚ್ಚಿಗೆದ್ದ ಗ್ರಾಮಸ್ಥರು ಮತಗಟ್ಟೆಯನ್ನು ಧ್ವಂಸ ಮಾಡಿದ್ದರು. ಮತದಾನದಿಂದ ದೂರ ಉಳಿದ ಗ್ರಾಮಸ್ಥರಿಂದ ಈ ಕೃತ್ಯ ನಡೆದಿತ್ತು. ಈ ವೇಳೆ ಗ್ರಾಮಸ್ಥರ ಮನವೊಲಿಕೆಗೆ ತೆರಳಿದ್ದ ಅಧಿಕಾರಿಗಳ ಮೇಲೆಯೂ ಹಲ್ಲೆ ನಡೆಸಲಾಗಿತ್ತು. ಆಕ್ರೋಶಗೊಂಡ ಹಲವರು ಇವಿಎಂ, ಮೇಜು ಕುರ್ಚಿ ಮತಗಟ್ಟೆ ಸಾಮಗ್ರಿಗಳನ್ನು ಧ್ವಂಸ ಮಾಡಿದ್ದರು. ಇದರಿಂದಾಗಿ ಚುನಾವಣೆ ನಡೆದಿರಲಿಲ್ಲ.

ಲಾಠಿ ಚಾರ್ಚ್‌; ಹಲವರಿಗೆ ಗಾಯ

ಸ್ಥಳದಲ್ಲಿ ಜನರನ್ನು ಚದುರಿಸಲು ಪೊಲೀಸರಿಂದ ಲಾಠಿ ಚಾರ್ಜ್ ನಡೆಸಲಾಗಿತ್ತು. ಇದೇ ವೇಳೆ ತಿರುಗಿಬಿದ್ದ ಜನರು ಸಹ ಪೊಲೀಸರ ಮೇಲೆ ಕಲ್ಲು ತೂರಿದ್ದರು. ಸ್ಥಳದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿದೆ. ಸಾರ್ವಜನಿಕರು ಸೇರಿ ಅಧಿಕಾರಿಗಳಿಗೂ ಗಾಯಗಳಾಗಿದ್ದವು. ಪುರುಷರು, ಮಹಿಳೆಯರು ಎನ್ನದೆ ಪೊಲೀಸರು ಲಾಠಿ ಚಾರ್ಚ್ ಮಾಡಿದ್ದಾರೆ.

ಇಂಡಿಗನತ್ತ, ತೇಕಣೆ, ಮೆಂದಾರೆ ಹಾಗೂ ತುಳಸಿಕೆರೆ ಗ್ರಾಮಗಳಲ್ಲಿ ಮತದಾನವನ್ನು ಬಹಿಷ್ಕಾರ ಮಾಡಲಾಗಿದೆ. ಪಡಸಲನತ್ತ ಗ್ರಾಮದಲ್ಲಿ 85 ಮತದಾರರ ಪೈಕಿ ಕೇವಲ ಇಬ್ಬರು ಮತದಾನ ಮಾಡಿದ್ದಾರೆ. ಉಳಿದಂತೆ ಮತಗಟ್ಟೆಗಳತ್ತ ಯಾರೊಬ್ಬರೂ ಸುಳಿದಿಲ್ಲ. ಎಷ್ಟೇ ಬಾರಿ ಮನವಿ ಮಾಡಿದರೂ ಈ ಗ್ರಾಮಗಳಲ್ಲಿ ಮೂಲ ಸೌಕರ್ಯವನ್ನು ಕಲ್ಪಿಸಿಲ್ಲ. ಚುನಾವಣೆ ಬಂದಾಗ ಮಾತ್ರ ಈ ರಾಜಕಾರಣಿಗಳಿಗೆ ನಮ್ಮ ನೆನಪಾಗುತ್ತದೆ. ಅದಾದ ಬಳಿಕ ನಮ್ಮನ್ನು ಕೇಳುವವರೇ ಇಲ್ಲ ಎಂದು ಆರೋಪಿಸಿ ಮಹದೇಶ್ವರಬೆಟ್ಟ ವ್ಯಾಪ್ತಿಯ ಐದು ಗ್ರಾಮಗಳ ಗ್ರಾಮಸ್ಥರು ಮತದಾನವನ್ನು ಬಹಿಷ್ಕಾರ ಮಾಡಿದ್ದರು. ಇದೇ ವೇಳೆ ಗಲಾಟೆ ನಡೆದಿತ್ತು.

ಇದನ್ನೂ ಓದಿ: ನೀತಿ ಸಂಹಿತೆ ಉಲ್ಲಂಘನೆ; ಮೋದಿ, ರಾಹುಲ್‌ ಗಾಂಧಿ ಪ್ರತಿಕ್ರಿಯೆ ಕೇಳಿದ ಚುನಾವಣೆ ಆಯೋಗ!

Continue Reading
Advertisement
IPL 2024
ಕ್ರೀಡೆ6 mins ago

IPL 2024 : ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳುವುದೇ ಸಿಎಸ್​ಕೆ?

Ujjwal Nikam
ದೇಶ7 mins ago

Ujjwal Nikam: ಪ್ರಮೋದ್‌ ಮಹಾಜನ್‌ ಪುತ್ರಿಗೆ ಕೊಕ್‌, ಮುಂಬೈ ದಾಳಿ ವಕೀಲನಿಗೆ ಬಿಜೆಪಿ ಟಿಕೆಟ್!

Money Guide
ಮನಿ-ಗೈಡ್14 mins ago

Money Guide: ಕಿಸಾನ್‌ ಸಮ್ಮಾನ್‌ ನಿಧಿಯ 17ನೇ ಕಂತು ಬಿಡುಗಡೆಗೆ ದಿನಗಣನೆ; ನಗದು ಜಮೆ ಯಾವಾಗ?

Murder case in Belgavi
ಬೆಳಗಾವಿ22 mins ago

Murder Case : ದೊಡ್ಡವರ ಹಣಕಾಸು ವಿಷ್ಯಕ್ಕೆ 3 ವರ್ಷದ ಮಗು ಬಲಿ; ಎದೆ ಮೇಲೆ ಕಾಲಿಟ್ಟು ಕೊಂದ ಪಾಪಿ

IPL 2024
ಪ್ರಮುಖ ಸುದ್ದಿ41 mins ago

IPL 2024 : ಅಭಿಮಾನಿಗಳಿಗೆ ಮತ್ತೊಂದು ಖುಷಿಯ ಸುದ್ದಿ ಕೊಡುವುದೇ ಆರ್​ಸಿಬಿ?

Chamarajanagar
ಪ್ರಮುಖ ಸುದ್ದಿ44 mins ago

ಇವಿಎಂ ಧ್ವಂಸ; ಚಾಮರಾಜನಗರದ ಇಂಡಿಗನತ್ತ ಗ್ರಾಮದಲ್ಲಿ ಏಪ್ರಿಲ್‌ 29ರಂದು ಮರು ಮತದಾನ!

Film Festival
ಬೆಂಗಳೂರು47 mins ago

Film festival: ಬೆಂಗಳೂರಿನಲ್ಲಿ ಮೇ 4, 5ರಂದು ಗುರುದತ್‌ ಚಲನ ಚಿತ್ರೋತ್ಸವ ಮತ್ತು ಸಂಗೀತ ರಸ ಸಂಜೆ

Parineeti Chopra talks about initial struggles in the Industry
ಬಾಲಿವುಡ್48 mins ago

Parineeti Chopra: ವೃತ್ತಿ ಜೀವನದ ಆರಂಭಿಕ ದಿನಗಳನ್ನು ನೆನೆದು ಭಾವುಕರಾದ ಪರಿಣಿತಿ ಚೋಪ್ರಾ!

Cotton Saree Fashion Roopa Malali, Chandrayaan - 3 ISRO Deputy Project Director
ಫ್ಯಾಷನ್58 mins ago

Cotton Saree Fashion: ಕಾಟನ್ ಸೀರೆ ಫ್ಯಾಷನ್ ಕುರಿತು ಚಂದ್ರಯಾನ 3 ಖ್ಯಾತಿಯ ಇಸ್ರೋ ರೂಪಾ ವ್ಯಾಖ್ಯಾನ ಹೀಗಿದೆ!

Job Alert
ಉದ್ಯೋಗ1 hour ago

Job Alert: 506 ಹುದ್ದೆಗಳ ಭರ್ತಿಗೆ ಯುಪಿಎಸ್‌ಸಿಯಿಂದ ಅರ್ಜಿ ಆಹ್ವಾನ; ಮೇ 14ರೊಳಗೆ ಆನ್‌ಲೈನ್‌ನಲ್ಲಿ ಅಪ್ಲೈ ಮಾಡಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok sabha election 2024
Lok Sabha Election 20241 hour ago

Lok Sabha Election 2024 : ಮೊಬೈಲ್ ನಿಷೇಧದ ನಡುವೆಯೂ ವೋಟ್‌ ಹಾಕಿದ ವಿಡಿಯೊ ಮಾಡಿದ ಪುಂಡರು

road Accident in kolar evm
ಕೋಲಾರ6 hours ago

Road Accident : ಇವಿಎಂ ಸಾಗಿಸುವಾಗ ವಾಹನದ ಟೈರ್‌ ಸ್ಫೋಟ; ರೋಡ್‌ನಲ್ಲೇ ರಿಪೇರಿ, ಮೊಕ್ಕಾಂ ಹೂಡಿದ ಪೊಲೀಸರು

Dina Bhavishya
ಭವಿಷ್ಯ13 hours ago

Dina Bhavishya : ಈ ದಿನ ನಿಮ್ಮ ಪ್ರೀತಿಯ ಕನಸು ನನಸಾಗುವ ಸುದಿನ

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ1 day ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 20241 day ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 20241 day ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ2 days ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ2 days ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ2 days ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ2 days ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

ಟ್ರೆಂಡಿಂಗ್‌