Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಇಂದು ಭಾರತಕ್ಕೆ ಯಾವ್ಯಾವ ಸ್ಪರ್ಧೆಗಳಿವೆ? ಇಲ್ಲಿದೆ ಎಲ್ಲ ವಿವರ - Vistara News

ಪ್ರಮುಖ ಸುದ್ದಿ

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಇಂದು ಭಾರತಕ್ಕೆ ಯಾವ್ಯಾವ ಸ್ಪರ್ಧೆಗಳಿವೆ? ಇಲ್ಲಿದೆ ಎಲ್ಲ ವಿವರ

Paris Olympics 2024 : ಶುಕ್ರವಾರ ಪುರುಷರ ಕುಸ್ತಿಯ 57 ಕೆ.ಜಿ ವಿಭಾಗದಲ್ಲಿ ಅಮನ್ ಗೆದ್ದ ಕಂಚಿನ ಪದಕದೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ 6ಕ್ಕೆ ಏರಿದೆ. ಅದರಲ್ಲಿ 5 ಕಂಚಿನ ಪದಕವಾದರೆ ಒಂದು ಬೆಳ್ಳಿಯ ಪದಕವಾಗಿದೆ. ಬೆಳ್ಳಿಯನ್ನು ನೀರಜ್​ ಗೆದ್ದಿದ್ದರೆ, ಶೂಟರ್​​ ಮನು ಭಾಕರ್ ಎರಡು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು. ಅದರಲ್ಲೊಂದು ಮಿಶ್ರ ತಂಡದಲ್ಲಿ ಸರಬ್​ಜೋತ್ ಸಿಂಗ್​ ಜತೆಗೆ. ಪುರುಷರ ಶೂಟಿಂಗ್​ನಲ್ಲಿ ಸ್ವಪ್ನಿಲ್ ಕುಸಾಳೆ ಮತ್ತೊಂದು ಪದಕ ಗೆದ್ದಿದ್ದರು. ಮತ್ತೊಂದು ಕಂಚಿನ ಪದಕ ಹಾಕಿ ತಂಡದ ಮೂಲಕ ದೊರಕಿದೆ. ಇದೀಗ ಅಮನ್​ ಒಂದು ಪದಕ ಗೆದ್ದಿದ್ದಾರೆ.

VISTARANEWS.COM


on

Paris Olympics 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಗಳೂರು: ಪ್ಯಾರಿಸ್ ಒಲಿಂಪಿಕ್ಸ್​ (Paris Olympics 2024) ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಶನಿವಾರ 10ನೇ ದಿನ ಸ್ಪರ್ಧೆಗಳು ನಡೆಯಲಿವೆ. ಆ ದಿನ ಭಾರತಕ್ಕೆ ಹೆಚ್ಚಿನ ಸ್ಪರ್ಧೆಗಳು ಇಲ್ಲ. ಗಾಲ್ಫ್​ ಹಾಗೂ ಫ್ರೀಸ್ಟೈಲ್​ ಕುಸ್ತಿ ಬಿಟ್ಟರೆ ಬೇರೆ ಯಾವುದೇ ಸ್ಪರ್ಧೆಯಲ್ಲಿ ಭಾರತೀಯರು ಇಲ್ಲ. 14ನೇ ದಿನವಾದ ಶುಕ್ರವಾರ ಸಂಜೆಯ ತನಕವೂ ಭಾರತಕ್ಕೆ ಹೆಚ್ಚಿನ ಲಾಭವೇನೂ ಆಗಿಲ್ಲ. ಆದರೆ, ಜಾವೆಲಿನ್ ಎಸೆತದಲ್ಲಿ ಬೆಳ್ಳಿಯ ಪದಕ ಗೆದ್ದಿರುವ ನೀರಜ್ ಚೋಪ್ರಾ ಅವರ ಬಗ್ಗೆಯೇ ದಿನವಿಡೀ ಚರ್ಚೆಗಳು ನಡೆದಿವೆ.

ಶುಕ್ರವಾರ ಪುರುಷರ ಕುಸ್ತಿಯ 57 ಕೆ.ಜಿ ವಿಭಾಗದಲ್ಲಿ ಅಮನ್ ಗೆದ್ದ ಕಂಚಿನ ಪದಕದೊಂದಿಗೆ ಭಾರತದ ಒಟ್ಟು ಪದಕಗಳ ಸಂಖ್ಯೆ 6ಕ್ಕೆ ಏರಿದೆ. ಅದರಲ್ಲಿ 5 ಕಂಚಿನ ಪದಕವಾದರೆ ಒಂದು ಬೆಳ್ಳಿಯ ಪದಕವಾಗಿದೆ. ಬೆಳ್ಳಿಯನ್ನು ನೀರಜ್​ ಗೆದ್ದಿದ್ದರೆ, ಶೂಟರ್​​ ಮನು ಭಾಕರ್ ಎರಡು ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು. ಅದರಲ್ಲೊಂದು ಮಿಶ್ರ ತಂಡದಲ್ಲಿ ಸರಬ್​ಜೋತ್ ಸಿಂಗ್​ ಜತೆಗೆ. ಪುರುಷರ ಶೂಟಿಂಗ್​ನಲ್ಲಿ ಸ್ವಪ್ನಿಲ್ ಕುಸಾಳೆ ಮತ್ತೊಂದು ಪದಕ ಗೆದ್ದಿದ್ದರು. ಮತ್ತೊಂದು ಕಂಚಿನ ಪದಕ ಹಾಕಿ ತಂಡದ ಮೂಲಕ ದೊರಕಿದೆ. ಇದೀಗ ಅಮನ್​ ಒಂದು ಪದಕ ಗೆದ್ದಿದ್ದಾರೆ.

ಇನ್ನು ಶುಕ್ರವಾರ ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ ಭಾರತದ ಪುರುಷರ ಮತ್ತು ಮಹಿಳಾ ತಂಡಗಳು 4×400 ಮೀಟರ್ ರಿಲೇಯ ಫೈನಲ್​​ಗೆ ಅರ್ಹತೆ ಪಡೆಯಲು ವಿಫಲವಾಗಿವೆ. ಜ್ಯೋತಿಕಾ ಶ್ರೀ ದಂಡಿ, ಶುಭಾ ವೆಂಕಟೇಶನ್, ವಿಥ್ಯಾ ರಾಮರಾಜ್, ಎಂ.ಆರ್.ಪೂವಮ್ಮ ಮತ್ತು ಪ್ರಾಚಿ ಅವರನ್ನೊಳಗೊಂಡ ಮಹಿಳಾ ತಂಡ 16 ತಂಡಗಳ ಪೈಕಿ 3:32:51 ಸಮಯದೊಂದಿಗೆ 15ನೇ ಸ್ಥಾನ ಪಡೆಯಿತು.

ಕ್ಯೂಬಾ ಮಾತ್ರ 3:33:99 ಸಮಯದೊಂದಿಗೆ ಅವರಿಗಿಂತ ಕೆಳಗಿತ್ತು. ಭಾರತವು ಆರಂಭದಿಂದಲೂ ಹಿಂದೆ ಬಿದ್ದಿತು, ನಂತರ ಅವರು ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಯುನೈಟೆಡ್ ಸ್ಟೇಟ್ಸ್ 3: 21:44 ಸಮಯದೊಂದಿಗೆ ಅಗ್ರಸ್ಥಾನವನ್ನು ಗಳಿಸಿತು, ಇದು ಅವರ ಋತುವಿನ ಅತ್ಯುತ್ತಮ ಸಮಯವಾಗಿದೆ. ಗ್ರೇಟ್ ಬ್ರಿಟನ್ ಕೂಡ 3:24:72 ಸಮಯದೊಂದಿಗೆ ತಮ್ಮ ಋತುವಿನ ಅತ್ಯುತ್ತಮ ಪ್ರದರ್ಶನವನ್ನು ನೀಡಿತು.

ಫ್ರಾನ್ಸ್ (3:24:73), ಜಮೈಕಾ (3:24:92), ಬೆಲ್ಜಿಯಂ (3:24:92), ನೆದರ್ಲ್ಯಾಂಡ್ಸ್ (3:25:03), ಐರ್ಲೆಂಡ್ (3:25:05) ಮತ್ತು ಕೆನಡಾ (3:25:77) ಮಹಿಳಾ ರಿಲೇ ಸ್ಪರ್ಧೆಯ ಫೈನಲ್​ಗೆ ಪ್ರವೇಶಿಸಿದ ಇತರ ತಂಡಗಳು.

ಇದನ್ನೂ ಓದಿ: Neeraj Chopra : ವಿನೇಶ್ ಪೋಗಟ್​​ಗೆ ಅನರ್ಹತೆ ಬಗ್ಗೆ ಮಾತನಾಡಿದ ನೀರಜ್ ಚೋಪ್ರಾ; ಏನಂದ್ರು ಅವರು?

ಭಾರತದ ಪುರುಷರಿಗೂ ಹಿನ್ನಡೆ

ಅಮೋಲ್ ಜಾಕೋಬ್, ರಾಜೇಶ್ ರಮೇಶ್, ಸಂತೋಷ್ ಕುಮಾರ್, ಮುಹಮ್ಮದ್ ಅಜ್ಮಲ್ ಮತ್ತು ಮುಹಮ್ಮದ್ ಅನಾಸ್ ಅವರನ್ನೊಳಗೊಂಡ ಪುರುಷರ ತಂಡವು ಕಠಿಣ ಹೋರಾಟ ನಡೆಸಿತು. ಆದರೆ 3: 00.58 ಸಮಯದೊಂದಿಗೆ 10 ನೇ ಸ್ಥಾನ ಪಡೆದ ನಂತರ ಸ್ಪರ್ಧೆಯಿಂದ ಹೊರಬಿದ್ದಿತು. ಅರ್ಹತಾ ಸುತ್ತಿನಲ್ಲಿ ಬೋಟ್ಸಾನಾ 2:57:76 ಸೆಕೆಂಡುಗಳಲ್ಲಿ ಗುರಿ ತಲುಪಿ ಅಗ್ರಸ್ಥಾನ ಪಡೆಯಿತು.

ಪುರುಷರ 4*400 ಮೀಟರ್ ರಿಲೇ ಫೈನಲ್ನಲ್ಲಿ ಗ್ರೇಟ್ ಬ್ರಿಟನ್ (2:58:88), ಯುನೈಟೆಡ್ ಸ್ಟೇಟ್ಸ್ (2:59:15), ಜಪಾನ್ (2:59:48), ಫ್ರಾನ್ಸ್ (2:59:53), ಬೆಲ್ಜಿಯಂ (2:59:84), ಜಾಂಬಿಯಾ (3:00:08) ಮತ್ತು ಇಟಲಿ (3:00:26) ತಂಡಗಳು ಫೈನಲ್​ಗೇರಿವೆ.

ಆಗಸ್ಟ್​​ 10ರಂದು ಭಾರತದ ಸ್ಪರ್ಧೆಗಳು ಈ ರೀತಿ ಇವೆ

ಗಾಲ್ಫ್ 12:30ಕ್ಕೆ: ಮಹಿಳಾ ರೌಂಡ್ 4 (ಪದಕದ ಸ್ಪರ್ಧೆ)

ಕುಸ್ತಿ 03:00: ಮಹಿಳಾ ಫ್ರೀಸ್ಟೈಲ್ 76 ಕೆಜಿ 1/8 ಫೈನಲ್. ರೀತಿಕಾ ಹೂಡಾ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Bangladesh Unrest: ಶೇಖ್‌ ಹಸೀನಾ ಓಡಿ ಬಂದ ಬಳಿಕ ಬಾಂಗ್ಲಾದೇಶದಲ್ಲಿ 232 ಜನರ ಕಗ್ಗೊಲೆ, ಹಿಂದೂಗಳೇ ಟಾರ್ಗೆಟ್

Bangladesh Unrest: ಈ ವಾರದ ಆರಂಭದಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ನಿರ್ಗಮನದ ನಂತರ ದೇಶದ ಹಿಂದೂ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಹಿಂಸಾಚಾರಕ್ಕೆ ಪ್ರತಿಕ್ರಿಯೆಯಾಗಿ ಶುಕ್ರವಾರ, ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ನೂರಾರು ಜನ ಹಿಂದೂಗಳ ಪ್ರತಿಭಟನೆ ನಡೆಸಿದರು.

VISTARANEWS.COM


on

Bangladesh Unrest hindus protest
Koo

ಢಾಕಾ: ಕಳೆದ ಮೂರು ದಿನಗಳಲ್ಲಿ ಬಾಂಗ್ಲಾದೇಶದಾದ್ಯಂತ (Bangladesh Unrest) ನಡೆದ ವಿವಿಧ ದಾಳಿಗಳು ಮತ್ತು ಘರ್ಷಣೆಗಳಲ್ಲಿ (Bangladesh violence) ಕನಿಷ್ಠ 232 ಜನರು ಸಾವನ್ನಪ್ಪಿದ್ದಾರೆ. ಹೆಚ್ಚಾಗಿ ಅಲ್ಲಿನ ಅಲ್ಪಸಂಖ್ಯಾತ ಹಿಂದೂ (Hindus) ಸಮುದಾಯವನ್ನೇ ಗುರಿಯಾಗಿಸಿ ದಾಳಿಗಳು ನಡೆಯುತ್ತಿವೆ. ಅಮಾಯಕ ಹಿಂದೂಗಳ ಮೇಲೆ ಹಲ್ಲೆ, ಅತ್ಯಾಚಾರಗಳು (hindus protest) ನಿರಂತರವಾಗಿವೆ.

ಅಲ್ಲಿನ ಪ್ರಧಾನಿ ಶೇಖ್ ಹಸೀನಾ (Sheikh Hasina) ಅವರು ಆಗಸ್ಟ್ 5ರಂದು ರಾಜೀನಾಮೆ ನೀಡಿ ಭಾರತಕ್ಕೆ (India) ಪಲಾಯನ ಮಾಡಿದ್ದರು. ಅವರ ಪದಚ್ಯುತಿಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆಗಳು ನಡೆದಿದ್ದವು. ಕಳೆದ ಮೂರು ವಾರಗಳಿಂದ ಬಾಂಗ್ಲಾದೇಶದಲ್ಲಿ ನಡೆದ ತೀವ್ರ ಮತ್ತು ರಕ್ತಸಿಕ್ತ ಸರ್ಕಾರಿ ವಿರೋಧಿ ಪ್ರತಿಭಟನೆಗಳು ಶೇಖ್ ಹಸೀನಾ ಸರ್ಕಾರದ ಪತನಕ್ಕೆ ಕಾರಣವಾಯಿತು.

ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ (Muhammad Yunus) ನೇತೃತ್ವದ ಮಧ್ಯಂತರ ಸರ್ಕಾರ ದೇಶದ ಆಡಳಿತವನ್ನು ವಹಿಸಿಕೊಂಡಿದೆ. ವರದಿಗಳು ತಿಳಿಸುವಂತೆ ಇದುವರೆಗೆ 469 ಜನ ಗಲಭೆಗಳಲ್ಲಿ ಸತ್ತಿದ್ದಾರೆ. ಸ್ಥಳೀಯ ಮಾಧ್ಯಮಗಳು ಹೇಳುವಂತೆ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳಿಗೆ ತೀವ್ರ ಕಿರುಕುಳ ಸೃಷ್ಟಿಸಲಾಗುತ್ತಿದೆ. ಹಿಂಸಾಚಾರದ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ಭಯಭೀತರಾದ ಬಾಂಗ್ಲಾದೇಶಿಗಳು ಅಕ್ರಮವಾಗಿ ಭಾರತಕ್ಕೆ ದಾಟಲು ಹಲವಾರು ಪ್ರಯತ್ನಗಳನ್ನು ನಡೆಸಿದರು. ಆದರೆ ಅವರನ್ನು ಬಿಎಸ್‌ಎಫ್‌ ಹಿಮ್ಮೆಟ್ಟಿಸಿದೆ.

ಬಾಂಗ್ಲಾದೇಶದ ಪ್ರಮುಖ ವಿರೋಧ ಪಕ್ಷವಾದ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ, ಶೇಖ್ ಹಸೀನಾ ಅವರು ದೇಶದಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದೆ. ಶೇಖ್‌ ಹಸೀನಾಗೆ ಆಶ್ರಯ ನೀಡಿರುವ ಹಿನ್ನೆಲೆಯಲ್ಲಿ, ಭಾರತವು ತನ್ನ ನೆರೆಹೊರೆಯವರೊಂದಿಗೆ ಸಂಬಂಧವನ್ನು ಹಾಳುಮಾಡುವ ಅಪಾಯದಲ್ಲಿದೆ ಎಂದು ಎಚ್ಚರಿಸಿದೆ.

ಜುಲೈ 16 ಮತ್ತು ಆಗಸ್ಟ್ 4ರ ನಡುವಿನ ಮೀಸಲಾತಿ ವಿರೋಧಿ ವಿದ್ಯಾರ್ಥಿ ಚಳುವಳಿಗಳ ವೇಳೆ ಒಟ್ಟು 328 ಸಾವುಗಳು ವರದಿಯಾಗಿವೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ. ಹೀಗಾಗಿ, ಕಳೆದ 23 ದಿನಗಳಲ್ಲಿ ಒಟ್ಟು ಸಾವಿನ ಸಂಖ್ಯೆ 560 ಕ್ಕೆ ತಲುಪಿದೆ.

ಈ ವಾರದ ಆರಂಭದಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ನಿರ್ಗಮನದ ನಂತರ ದೇಶದ ಹಿಂದೂ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಹಿಂಸಾಚಾರಕ್ಕೆ ಪ್ರತಿಕ್ರಿಯೆಯಾಗಿ ಶುಕ್ರವಾರ, ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ನೂರಾರು ಜನ ಹಿಂದೂಗಳ ಪ್ರತಿಭಟನೆ ನಡೆಸಿದರು. ಮುಸ್ಲಿಂ ಬಹುಸಂಖ್ಯಾತ ಬಾಂಗ್ಲಾದೇಶದಲ್ಲಿ ಹಿಂದೂ ಮನೆಗಳು, ವ್ಯಾಪಾರಗಳು ಮತ್ತು ದೇವಾಲಯಗಳ ಮೇಲೆ ದಾಳಿ ನಡೆದಿದೆ. ಇವುಗಳಲ್ಲಿ ಶಾಲಾ ಶಿಕ್ಷಕಿಯೊಬ್ಬರು ಸಾವನ್ನಪ್ಪಿ ಕನಿಷ್ಠ 45 ಮಂದಿ ಗಾಯಗೊಂಡರು.

ಬಾಂಗ್ಲಾದೇಶದ 17 ಕೋಟಿ ಜನಸಂಖ್ಯೆಯ ಸುಮಾರು 8 ಪ್ರತಿಶತ ಹಿಂದೂಗಳಿದ್ದಾರೆ. ಇವರು ಸಾಂಪ್ರದಾಯಿಕವಾಗಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಬೆಂಬಲಿಗರು. ಇದು ಕಳೆದ ತಿಂಗಳು ಕೋಟಾ ವಿರೋಧಿ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆಗಳ ನಡುವಿನ ಹಿಂಸಾತ್ಮಕ ಘರ್ಷಣೆಯ ನಂತರ ಮುಸ್ಲಿಮರ ಕೋಪದ ಕೇಂದ್ರಬಿಂದುವಾಗಿದೆ.

ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಮುಹಮ್ಮದ್ ಯೂನಸ್ ನೇತೃತ್ವದಲ್ಲಿ ಗುರುವಾರ ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರವನ್ನು ನೇಮಿಸಲಾಯಿತು. ಸಂವಿಧಾನದ ಅಡಿಯಲ್ಲಿ, 90 ದಿನಗಳಲ್ಲಿ ಚುನಾವಣೆಯನ್ನು ನಡೆಸಬೇಕಾಗಿದೆ. ಆದರೆ ಯೂನಸ್ ಹಾಗೂ ಮಿಲಿಟರಿ ಮತ್ತು ಅಧ್ಯಕ್ಷರು, ಚುನಾವಣೆಗಳು ಯಾವಾಗ ನಡೆಯುತ್ತವೆ ಎಂಬುದರ ಕುರಿತು ಪ್ರತಿಕ್ರಿಯಿಸಿಲ್ಲ.

ಇದನ್ನೂ ಓದಿ: Muhammad Yunus: ಹಿಂದುಗಳನ್ನು ಮೊದಲು ರಕ್ಷಿಸಿ; ಬಾಂಗ್ಲಾದೇಶದ ಮೊಹಮ್ಮದ್‌ ಯೂನಸ್‌ಗೆ ಮೋದಿ ಆಗ್ರಹ

Continue Reading

ಪ್ರಮುಖ ಸುದ್ದಿ

BJP-JDS Padayatra: ಇಂದು ಬಿಜೆಪಿ-ಜೆಡಿಎಸ್‌ ಪಾದಯಾತ್ರೆಗೆ ತೆರೆ, ಮೈಸೂರಿನಲ್ಲಿ ಬೃಹತ್‌ ಸಮಾವೇಶ

bjp-jds padayatra: ಮೈಸೂರಿನ ಮುಡಾ ಹಗರಣ, ವಾಲ್ಮೀಕಿ ನಿಗಮ ಹಗರಣಗಳಲ್ಲಿ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ʼಮೈಸೂರು ಚಲೋʼ ಪಾದಯಾತ್ರೆಯನ್ನು ಒಂದು ವಾರದಿಂದ ನಡೆಸುತ್ತಿರುವ ಬಿಜೆಪಿ- ಜೆಡಿಎಸ್, ಅಂತಿಮ ಘಟ್ಟ ತಲುಪಿವೆ.

VISTARANEWS.COM


on

bjp-jds padayatra
Koo

ಮೈಸೂರು: ನಿನ್ನೆ ಸಿಎಂ ಸಿದ್ದರಾಮಯ್ಯ (CM Siddaramaiah) ಬೃಹತ್‌ ಜನಾಂದೋಲನ ಸಮಾವೇಶ (Janandolana) ನಡೆಸಿದ ಮೈಸೂರಿನಲ್ಲಿ (Mysore) ಇಂದು ದೋಸ್ತಿ ಪಕ್ಷಗಳ ಶಕ್ತಿ ಪ್ರದರ್ಶನ ನಡೆಯಲಿದೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬಿಜೆಪಿ-ಜೆಡಿಎಸ್‌ ಪಾದಯಾತ್ರೆ (BJP-JDS Padayatra) ಸಮಾರೋಪ ಸಮಾವೇಶ ನಡೆಯಲಿದೆ.

ಮೈಸೂರಿನ ಮುಡಾ ಹಗರಣ, ವಾಲ್ಮೀಕಿ ನಿಗಮ ಹಗರಣಗಳಲ್ಲಿ ಹೊಣೆ ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ʼಮೈಸೂರು ಚಲೋʼ ಪಾದಯಾತ್ರೆಯನ್ನು ಒಂದು ವಾರದಿಂದ ನಡೆಸುತ್ತಿರುವ ಬಿಜೆಪಿ- ಜೆಡಿಎಸ್, ಅಂತಿಮ ಘಟ್ಟ ತಲುಪಿವೆ. ಪಾದಯಾತ್ರೆ ಮೈಸೂರು ತಲುಪುವ ಮುನ್ನ ಸಿಎಂ ರಾಜೀನಾಮೆ ನೀಡಬೇಕು. ಇಲ್ಲವಾದರೆ ಇನ್ನಷ್ಟು ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಆಗ್ರಹಿಸಿದ್ದರು.

ಇಂದು ಮೈಸೂರು ನಗರದಲ್ಲಿ ದೋಸ್ತಿ ಪಕ್ಷಗಳ ಪಾದಯಾತ್ರೆ ನಡೆಯಲಿದೆ. ಕೊಲಂಬಿಯಾ ಏಷಿಯಾ ಜಂಕ್ಷನ್‌‌ನಿಂದ ಪಾದಯಾತ್ರೆ ಬೆಳಗ್ಗೆ 9.30ಕ್ಕೆ ಪ್ರಾರಂಭವಾಗಲಿದ್ದು, ಬೆಳಗ್ಗೆ 11.30ಕ್ಕೆ ಮಹಾರಾಜ ಕಾಲೇಜು ಮೈದಾನದಲ್ಲಿ ಜಮಾವಣೆಯಾಗಲಿದೆ. ಬೃಹತ್ ಸಮಾವೇಶದ ಮೂಲಕ ಪಾದಯಾತ್ರೆಗೆ ತೆರೆ ಬೀಳಲಿದೆ. ಅಂದಾಜು 1 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ.

ಸಮಾವೇಶದಲ್ಲಿ ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಸೇರಿದಂತೆ ಪ್ರಮುಖರು ಭಾಗಿಯಾಗಲಿದ್ದಾರೆ.

ದಲಿತರ ಹಣವೇ ಬೇಕಿತ್ತೆ: ಅಶೋಕ್

ವಾಲ್ಮೀಕಿ ಹಗರಣ ಮಾಡಿ ದಲಿತರ ಹಣ ಹೊಡೆದು ಗ್ಯಾರಂಟಿಗೆ ಹಣ ಹೊಂದಿಸಬೇಕಿತ್ತಾ? ಬೇರೆ ಜಾತಿಯ ಹಣ ಬೇಕಿಲ್ಲ ಇವರಿಗೆ ಎಂದು ಟೀಕಿಸಿರುವ ವಿಪಕ್ಷ ನಾಯಕ ಆರ್.‌ ಅಶೋಕ್‌, ನಿಮಗೆ ಧೈರ್ಯ ಇದ್ದಿದ್ರೆ ವಿರೋಧ ಪಕ್ಷದಲ್ಲಿದಾಗ ನಮ್ಮ ದಾಖಲೆ ಬಿಡುಗಡೆ ಮಾಡಬೇಕಿತ್ತು ಎಂದಿದ್ದಾರೆ.

ಕಾಂಗ್ರೆಸ್ 14 ತಿಂಗಳ ಕಾಲ ಮಾಡಿದ ಭ್ರಷ್ಟಾಚಾರದ ಪುಸ್ತಕ ನಾವು ಬಿಡುಗಡೆ ಮಾಡುತ್ತೇವೆ. 14 ಅವತಾರಗಳಿವೆ. ಬ್ರಾಂಡ್ ಬೆಂಗಳೂರು ಬ್ಯಾಡ್ ಬೆಂಗಳೂರು ಮಾಡಿದ್ರಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ ಎಂದು ಟೀಕಿಸಿದರು. ಸದನದಲ್ಲಿ ಮಾತಾಡಲು ನಮಗೆ ಅವಕಾಶ ಕೊಡಬೇಕಿತ್ತು. ಅದಕ್ಕೆ ನಮ್ಮ ಹೋರಾಟ ಎಂದರು.

ಸಿದ್ದರಾಮಯ್ಯ 5 ಗ್ಯಾರಂಟಿ ಜೊತೆಗೆ 50 ಗ್ಯಾರಂಟಿ ತನ್ನಿ. ಎಲ್ಲರಿಗೂ ಕೊಡಿ ನಮ್ಮ ವಿರೋಧ ಇಲ್ಲ. ಸಿದ್ದರಾಮಯ್ಯ ಬಹಳ ಭಯಬೀತರಾಗಿದ್ದಾರೆ. ಪಾಪ ಎರಡೂ ದಿನ ಮನೆಯಲ್ಲೆ ಕುಳಿತಿದ್ರು. ದುಡ್ಡು ಲೂಟಿ ಹೊಡೆಯುತ್ತಿದ್ದಾರೆ. ಸರ್ಕಾರ ದಾರಿ ತಪ್ಪಿದೆ. ವಾಲ್ಮೀಕಿ ಹಗರಣದ ಇಡಿ, ಸಿಬಿಐ, ತನಿಖೆ ನಡೆಯುತ್ತಿದೆ. ಹಣ ಸೀಜ್ ಮಾಡಿ ಜೈಲಿಗೆ ಹಾಕಿದ್ದಾರೆ. ಮುಡಾ ಹಗರಣದಲ್ಲಿ ಇನ್ನೂ ಯಾರು ಜೈಲಿಗೆ ಹೋಗಿಲ್ಲ ಎಂದರು.‌

ಭ್ರಷ್ಟಾಚಾರದ ಬಗ್ಗೆ ತಿಳಿಸುವ ಕೆಲಸ ವಿರೋಧ ಪಕ್ಷದ ಹಕ್ಕು.. ಆದರೆ ಕಾಂಗ್ರೆಸ್ ಪಕ್ಷ ಬೀದಿಗಳಿದು ಹೋರಾಟ ಮಾಡ್ತಿದೆ. ಅವರು ವಿಧಾನ ಸಭೆ ಒಳಗೆ ಹೇಳುವುದು ಕರ್ತವ್ಯ. ಸರ್ಕಾರ ಬೀದಿಗಿಳಿದು ನಾನು ಕಳ್ಳ ಅಲ್ಲ ಕಳ್ಳ ಅಲ್ಲ ಅಂತ ಸಾರುತ್ತಿದೆ. ನಮ್ಮದು ಹೋರಾಟ, ಕಾಂಗ್ರೆಸ್ ಅವರದು ಹಾರಾಟ. ಮಂತ್ರಿಗೆ ಇನ್ ಚಾರ್ಜ್ ಕೊಟ್ಟು ಸಭೆ ಮಾಡ್ತಾರೆ. ಕಾಂಗ್ರೆಸ್ ನಾಟಕ ಆಡುತ್ತಿದೆ ಎಂದು ಟೀಕಿಸಿದರು.

ಇದನ್ನೂ ಓದಿ: Congress Meeting: ನನ್ನದು ಹೋರಾಟದ ಬದುಕು, ಬಿಜೆಪಿ-ಜೆಡಿಎಸ್‌ ಎಷ್ಟೇ ಪಾದಯಾತ್ರೆ ಮಾಡಿದ್ರೂ ಜಗ್ಗಲ್ಲ ಎಂದ ಸಿಎಂ

Continue Reading

ಅಂಕಣ

ರಾಜಮಾರ್ಗ ಅಂಕಣ: ದೃಷ್ಟಿ ವಿಕಲತೆಯನ್ನು ಮೆಟ್ಟಿ ನಿಂತು ಐಎಎಸ್ ಅಧಿಕಾರಿ ಆದ ಪ್ರಾಂಜಲ್ ಪಾಟೀಲ್!

ರಾಜಮಾರ್ಗ ಅಂಕಣ: ಅತ್ಯಂತ ಪ್ರಬಲ ಇಚ್ಛಾಶಕ್ತಿ, ನಿರಂತರ ಪ್ರಯತ್ನ, ಎಂದಿಗೂ ಬತ್ತಿ ಹೋಗದ ಸ್ಫೂರ್ತಿ, ಬೆಟ್ಟದಷ್ಟು ಆತ್ಮವಿಶ್ವಾಸ ಇವುಗಳ ಜೊತೆಗೆ 2016ರಲ್ಲಿ ಅವರು ಮೊದಲ ಬಾರಿಗೆ ಐಎಎಸ್ ಪರೀಕ್ಷೆಯನ್ನು ಬರೆದು ಮೊದಲನೆಯ ಪ್ರಯತ್ನದಲ್ಲಿಯೇ ತೇರ್ಗಡೆಯಾದರು!

VISTARANEWS.COM


on

pranjal patil ರಾಜಮಾರ್ಗ ಅಂಕಣ
Koo

ಆಕೆಯ ಯಾವ ಕನಸಿಗೂ ಕುರುಡುತನ ಅಡ್ಡಿ ಆಗಲೇ ಇಲ್ಲ!

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಭಾರತದ ಅತ್ಯಂತ ಕ್ಲಿಷ್ಟವಾದ ಪರೀಕ್ಷೆ ಅಂದರೆ ಐಎಎಸ್. ಕೇಂದ್ರ ಸರಕಾರದ ಅಧೀನ ಸಂಸ್ಥೆಯಾದ UPSC ನಡೆಸುವ ಈ ಪರೀಕ್ಷೆಯಲ್ಲಿ ಪ್ರತೀ ವರ್ಷವೂ 7ರಿಂದ 8 ಲಕ್ಷದಷ್ಟು ಯುವಕ – ಯುವತಿಯರು ತಮ್ಮ ಪ್ರತಿಭೆಯನ್ನು ನಿಕಷಕ್ಕೆ ಒಡ್ಡುತ್ತಿದ್ದು ತೇರ್ಗಡೆ ಆಗುವವರ ಪ್ರಮಾಣ 2-3% ಮಾತ್ರ! ಅಂತಹ ಕ್ಲಿಷ್ಟವಾದ ಪರೀಕ್ಷೆಯಲ್ಲಿ ಸಂಪೂರ್ಣ ಕುರುಡುತನ (Visually impaired) ಇರುವ ಹುಡುಗಿಯೊಬ್ಬಳು ಎರಡೆರಡು ಬಾರಿ ತೇರ್ಗಡೆ ಆದರು (Pranjal Patil IAS) ಅಂದರೆ ನಂಬೋದು ಹೇಗೆ?

ಆಕೆ ಪ್ರಾಂಜಲ್ ಪಾಟೀಲ್, ಮಹಾರಾಷ್ಟ್ರದವರು

ಆಕೆ ಮಹಾರಾಷ್ಟ್ರದ ಉಲ್ಲಾಸ ನಗರದವರು. ಹುಟ್ಟುವಾಗ ಆಕೆಗೆ ಮಸುಕು ಮಸುಕಾಗಿ ಕಾಣುತ್ತಿತ್ತು. ಆರು ವರ್ಷ ಪ್ರಾಯ ಆದಾಗ ಪೂರ್ತಿಯಾಗಿ ಕುರುಡುತನ ಆವರಿಸಿತ್ತು. ಸಣ್ಣ ಪ್ರಾಯದಲ್ಲಿಯೇ ಆಕೆಯ ದೊಡ್ಡ ಕನಸುಗಳಿಗೆ ಕೊಳ್ಳಿ ಇಟ್ಟ ಅನುಭವ ಆಗಿತ್ತು. ಆದರೆ ಮನೆಯವರು ಮತ್ತು ಹೆತ್ತವರು ಆಕೆಯ ಮನೋಸ್ಥೈರ್ಯವನ್ನು ಕುಸಿಯಲು ಬಿಡಲಿಲ್ಲ.

ಆಕೆ ಮಹಾನ್ ಪ್ರತಿಭಾವಂತೆ. ದಾದರ್ ನಗರದ ಕಮಲ ಮೆಹ್ತಾ ಕುರುಡು ಮಕ್ಕಳ ಶಾಲೆಗೆ ಸೇರಿ ಪ್ರಾಥಮಿಕ ಶಿಕ್ಷಣ ಪೂರ್ತಿ ಮಾಡುತ್ತಾರೆ. ಬ್ರೈಲ್ ಲಿಪಿಯಲ್ಲಿ ಓದಲು ಮತ್ತು ಬರೆಯಲು ಕಲಿಯುತ್ತಾರೆ. ಮುಂದೆ ಸೈಂಟ್ ಕ್ಸೇವಿಯರ್ ಕಾಲೇಜಿನಲ್ಲಿ ರಾಜನೀತಿ ಶಾಸ್ತ್ರದಲ್ಲಿ ಪದವಿ ಪಡೆಯುತ್ತಾರೆ.

ಆಗ ಏನೂ ಕಾಣದಿದ್ದರೂ ಉಲ್ಲಾಸ ನಗರದ ಮನೆಯಿಂದ ಹೊರಟು ಒಬ್ಬಳೇ ಛತ್ರಪತಿ ಶಿವಾಜಿ ಟರ್ಮಿನಲನವರೆಗೆ ಹೋಗಿ ಹಿಂದೆ ಬರುತ್ತಿದ್ದರು. ಮುಂಬೈ ನಗರದ ಜನರು ತನ್ನ ಬಗ್ಗೆ ತುಂಬಾ ಅನುಕಂಪವನ್ನು ಹೊಂದಿದ್ದರು ಅನ್ನುತ್ತಾರೆ ಆಕೆ.

ಆಕೆಯ ಕನಸುಗಳಿಗೆ ಆಕಾಶವೂ ಮಿತಿ ಅಲ್ಲ!

ಮುಂದೆ ಪ್ರಾಂಜಲ್ ಪಾಟೀಲ್ ಹೊರಟದ್ದು ರಾಜಧಾನಿ ದೆಹಲಿಗೆ. ಅಲ್ಲಿನ ಜವಾಹರಲಾಲ್ ನೆಹರು ವಿವಿಯ ಮೂಲಕ ಆಕೆಯು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್ ಪದವಿಯನ್ನು ಪಡೆಯುತ್ತಾರೆ.

ಅದೇ ಹೊತ್ತಿಗೆ ವಿದುಷಿ ಎಂಬ ತನ್ನ ಗೆಳತಿಯ ಮಾತಿನಿಂದ ಆಕೆಯು ಪ್ರಭಾವಿತರಾಗುತ್ತಾರೆ. ಐಎಎಸ್ ಪರೀಕ್ಷೆಗೆ ಗಂಭೀರವಾದ ಸಿದ್ಧತೆ ನಡೆಸುವಂತೆ ವಿದುಷಿ ಆಕೆಗೆ ಸಲಹೆ ಕೊಡುತ್ತಾರೆ. ಪ್ರಾಂಜಲ್ ಎಷ್ಟು ವೇಗವಾಗಿ ಹೇಳುತ್ತಿದ್ದಳೋ ಅಷ್ಟೇ ವೇಗವಾಗಿ ವಿದುಷಿ ಪ್ರಾಜೆಕ್ಟ ನೋಟ್ಸ್ ಬರೆದು ಕೊಡುತ್ತಿದ್ದಳು.

ಆಗ ಆಕೆಗೆ JAWS ( Job Access With Speech) ಎಂಬ ಸಾಫ್ಟವೇರ್ ನೆರವಿಗೆ ಬರುತ್ತದೆ. ಅದು ಯಾವುದೇ ಪುಸ್ತಕವನ್ನು ಗಟ್ಟಿಯಾಗಿ ಓದಿ ಹೇಳುವ ಸಾಫ್ಟವೇರ್. ತನ್ನ ಆಲಿಸುವ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಆಕೆಯು ಆ ಸಾಫ್ಟವೇರ್ ಬಳಸಿಕೊಂಡು ದಿನಕ್ಕೆ 10-12 ಘಂಟೆಯಷ್ಟು ಪುಸ್ತಕಗಳನ್ನು ಓದುತ್ತಾರೆ. ತುಂಬಾ ವಿಡಿಯೋ ಪಾಠಗಳನ್ನು ಕೇಳುತ್ತಾರೆ. ತನ್ನ ಗೆಳತಿಯ ನೆರವನ್ನು ಪಡೆಯುತ್ತಾರೆ.

ರೈಲ್ವೇಸ್ ಅವರಿಗೆ ಉದ್ಯೋಗವನ್ನು ನಿರಾಕರಿಸಿತು

2016ರಲ್ಲೀ ಅವರು ಭಾರತೀಯ ರೈಲ್ವೇ ಸೇವೆಗೆ ಅರ್ಜಿ ಹಾಕುತ್ತಾರೆ. ಆದರೆ ಆಕೆ ಕುರುಡಿ ಎಂಬ ಕಾರಣಕ್ಕೆ ರೈಲ್ವೇಸ್ ಅವರಿಗೆ ಉದ್ಯೋಗವನ್ನು ನಿರಾಕರಣೆ ಮಾಡುತ್ತದೆ. ಆಗ ಸಿಟ್ಟಿಗೆದ್ದ ಆಕೆ ಪ್ರಧಾನಿ ನರೇಂದ್ರ ಮೋದಿಗೆ ಮತ್ತು ಆಗಿನ ರೈಲ್ವೇ ಮಂತ್ರಿ ಸುರೇಶ್ ಪ್ರಭು ಅವರಿಗೆ ನೇರವಾಗಿ ಪತ್ರವನ್ನು ಬರೆಯುತ್ತಾರೆ. ಆಗ ಸುರೇಶ್ ಪ್ರಭು ಅವರು ಆಕೆಯನ್ನು ಸಂಪರ್ಕ ಮಾಡಿ ನಿಮ್ಮ ವಿದ್ಯೆಗೆ ತಕ್ಕದಾದ ಉದ್ಯೋಗ ಕೊಡುವ ಭರವಸೆ ನೀಡಿದ್ದರು. ಆದರೆ ಆಗಲೇ ಐಎಎಸ್ ಪರೀಕ್ಷೆಯ ತಯಾರಿಯಲ್ಲಿ ಮುಳುಗಿದ್ದ ಪ್ರಾಂಜಲ್ ಆ ಪ್ರಸ್ತಾಪವನ್ನು ಸ್ವೀಕಾರ ಮಾಡುವುದಿಲ್ಲ.

ಆಕೆ ಎರಡು ಬಾರಿ ಐಎಎಸ್ ಪರೀಕ್ಷೆ ತೇರ್ಗಡೆ ಆದರು!

ಅತ್ಯಂತ ಪ್ರಬಲ ಇಚ್ಛಾಶಕ್ತಿ, ನಿರಂತರ ಪ್ರಯತ್ನ, ಎಂದಿಗೂ ಬತ್ತಿ ಹೋಗದ ಸ್ಫೂರ್ತಿ, ಬೆಟ್ಟದಷ್ಟು ಆತ್ಮವಿಶ್ವಾಸ ಇವುಗಳ ಜೊತೆಗೆ 2016ರಲ್ಲಿ ಅವರು ಮೊದಲ ಬಾರಿಗೆ ಐಎಎಸ್ ಪರೀಕ್ಷೆಯನ್ನು ಬರೆದು ಮೊದಲನೆಯ ಪ್ರಯತ್ನದಲ್ಲಿಯೇ ತೇರ್ಗಡೆಯಾದರು! ಅದೂ ಯಾವ ಕೋಚಿಂಗ್ ಇಲ್ಲದೆ! ಆದರೆ ಆಲ್ ಇಂಡಿಯಾ ರಾಂಕಿಂಗ್ 744 ಬಂದಿತ್ತು. ಅದು ಅವರಿಗೆ ತೃಪ್ತಿ ತರಲಿಲ್ಲ. ಯಾವುದೋ ಒಂದು ಅಜ್ಞಾತ ಇಲಾಖೆಯಲ್ಲಿ ಒಬ್ಬ ಸಾಮಾನ್ಯ ಅಧಿಕಾರಿಯಾಗಿ ಕೆಲಸ ಮಾಡಲು ಆಕೆ ರೆಡಿ ಇರಲಿಲ್ಲ. ಅದಕ್ಕೋಸ್ಕರ ಎರಡನೇ ಬಾರಿಗೆ ಅಷ್ಟೇ ಪ್ರಯತ್ನ ಮಾಡಿ 2017ರಲ್ಲಿ ಮತ್ತೆ ಐಎಎಸ್ ಪರೀಕ್ಷೆ ಬರೆದರು. ಈ ಬಾರಿ ಕೂಡ ತೇರ್ಗಡೆ ಆದರು. ಈ ಬಾರಿ ರಾಂಕಿಂಗ್ 124 ಬಂದಿತ್ತು!

ಅವರ ಕನಸಿನ ರೆಕ್ಕೆಗೆ ಸಾವಿರ ಗರಿಗಳು!

ಪ್ರಾಂಜಲ್ ಭಾರತದ ಮೊಟ್ಟ ಮೊದಲ ದೃಷ್ಟಿ ವಿಕಲತೆಯ ಸಾಧಕಿಯಾಗಿ ಐಎಎಸ್ ಪರೀಕ್ಷೆ ತೇರ್ಗಡೆ ಆಗಿದ್ದರು! ಲಿಖಿತ ಪರೀಕ್ಷೆಯಲ್ಲಿ ಆಕೆಯು ಪಡೆದ ಅಂಕಗಳು 854! ಹಾಗೂ ಸಂದರ್ಶನದಲ್ಲಿ ಪಡೆದ ಅಂಕಗಳು 179! ಒಟ್ಟು 1033 ಅನ್ನುವುದು ಕೂಡ ಆಕೆಯ ನಿಜವಾದ ಕ್ರೆಡಿಟ್.

ನಂತರ ತರಬೇತಿಯನ್ನು ಮುಗಿಸಿ ಮೇ 28, 2018ರಂದು ಅವರು ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ಅಸಿಸ್ಟಂಟ್ ಕಲೆಕ್ಟರ್ ಆಗಿ ನೇಮಕ ಪಡೆಯುತ್ತಾರೆ. ಅದರ ನಂತರ ಅಕ್ಟೋಬರ್ 14, 2019ರಂದು ಸಬ್ ಕಲೆಕ್ಟರ್ ಆಗಿ ತಿರುವನಂತಪುರಂ ಜಿಲ್ಲೆಗೆ ನೇಮಕ ಪಡೆಯುತ್ತಾರೆ!

ಯಾರ ಸಹಾಯ ಇಲ್ಲದೆ ತನ್ನ ಎಲ್ಲ ಕೆಲಸಗಳನ್ನು ತಾನೇ ಮಾಡುವ, ಅದ್ಭುತವಾದ ಮೆಮೊರಿ ಪವರ್ ಹೊಂದಿರುವ, ಸಮಾಜ ಸೇವೆಯ ತೀವ್ರವಾದ ತುಡಿತವನ್ನು ಹೊಂದಿರುವ, ಬೆಟ್ಟವನ್ನು ಕರಗಿಸುವ ಧೈರ್ಯ ಮತ್ತು ಆತ್ಮವಿಶ್ವಾಸಗಳನ್ನು ಹೊಂದಿರುವ ಪ್ರಾಂಜಲ್ ಪಾಟೀಲ್ ಮತ್ತು ಆಕೆಯ ಗಂಡ ಕೋಮಲ್ ಸಿಂಗ್ ಪಾಟೀಲ್ ಅವರು ಇತ್ತೀಚೆಗೆ ತಮ್ಮ ಅಂಗದಾನಕ್ಕೆ ಜೊತೆಯಾಗಿ ಸಹಿ ಹಾಕಿ ಸುದ್ದಿ ಆಗಿದ್ದಾರೆ.

ಆಕೆಯ ಒಂದು ಮಾತು ನನಗೆ ಭಾರೀ ಕನೆಕ್ಟ್ ಆಗಿದ್ದು ಅದನ್ನು ಇಲ್ಲಿ ಉಲ್ಲೇಖ ಮಾಡುತ್ತೇನೆ.

SUCCESS doesn’t give us INSPIRATION. But the STRUGGLE behind the SUCCESS gives us the INSPIRATION.

ಹೌದು ತಾನೇ?

ಇದನ್ನೂ ಓದಿ: ರಾಜಮಾರ್ಗ ಅಂಕಣ: ನಾಗಾರಾಧನೆ- ಪ್ರಕೃತಿಯ ಆರಾಧನೆ ಆಗಲಿ

Continue Reading

ಭವಿಷ್ಯ

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಫುಲ್‌ ಟೆನ್ಷನ್‌; ದಿನದ ಮಟ್ಟಿಗೆ ಖರ್ಚು ಹೆಚ್ಚು

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷದ ಷಷ್ಠಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ತುಲಾ ರಾಶಿಯಿಂದ ಶನಿವಾರ ಸಂಜೆ 06:33ಕ್ಕೆ ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ಮೇಷ, ವೃಷಭ, ಸಿಂಹ, ತುಲಾ, ಧನಸ್ಸು, ಮಕರ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ಮೇಷ ರಾಶಿಯವರು ಹೂಡಿಕೆ ವ್ಯವಹಾರಗಳಲ್ಲಿ ಅಧಿಕ ಲಾಭ ಇರಲಿದೆ. ವಿವಾಹ ಅಪೇಕ್ಷಿತರಿಗೆ ಅನುಕೂಲಕರ ವಾತಾವರಣ ಇರಲಿದೆ. ಶುಭ ಸುದ್ದಿ ಸಿಗಲಿದೆ. ಆರ್ಥಿಕವಾಗಿ ಲಾಭ ಸಿಗಲಿದೆ. ವೃಷಭ ರಾಶಿಯವರು ಆತ್ಮವಿಶ್ವಾಸ ಹೆಚ್ಚಾಗಲಿದೆ. ಆರ್ಥಿಕವಾಗಿ ಸದೃಢವಾಗಿ ಇರುವಿರಿ. ಅತಿರೇಕದ ಮಾತುಗಳನ್ನಾಡಿ ಅಪಾಯ ತಂದುಕೊಳ್ಳುವುದು ಬೇಡ. ಆರೋಗ್ಯ ದಿನದ ಕೊನೆಯಲ್ಲಿ ಹದಗೆಡುವ ಸಾಧ್ಯತೆ ಇದೆ, ಎಚ್ಚರಿಕೆ ಇರಲಿ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (10-08-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ.
ತಿಥಿ: ಷಷ್ಠಿ 29:44 ವಾರ: ಶನಿವಾರ
ನಕ್ಷತ್ರ: ಚಿತ್ತಾ 29:47 ಯೋಗ: ಸಾಧ್ಯ 14:50
ಕರಣ: ಕೌಲವ 16:30 ಅಮೃತಕಾಲ: ರಾತ್ರಿ 10:35ರಿಂದ 12:24
ದಿನದ ವಿಶೇಷ: ಕಲ್ಕಿ ಜಯಂತಿ, ಶ್ರಾವಣ ಶನಿವಾರ, ಷಷ್ಠಿ

ಸೂರ್ಯೋದಯ : 06:07   ಸೂರ್ಯಾಸ್ತ : 06:43

ರಾಹುಕಾಲ: ಬೆಳಗ್ಗೆ 9.00 ರಿಂದ 10.30
ಗುಳಿಕಕಾಲ: ಬೆಳಗ್ಗೆ 6.00 ರಿಂದ 7.30
ಯಮಗಂಡಕಾಲ: ಮಧ್ಯಾಹ್ನ 1.30 ರಿಂದ 3.00

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಹೂಡಿಕೆ ವ್ಯವಹಾರಗಳಲ್ಲಿ ಅಧಿಕ ಲಾಭ ಇರಲಿದೆ. ವಿವಾಹ ಅಪೇಕ್ಷಿತರಿಗೆ ಅನುಕೂಲಕರ ವಾತಾವರಣ ಇರಲಿದೆ. ಶುಭ ಸುದ್ದಿ ಸಿಗಲಿದೆ. ಆರ್ಥಿಕವಾಗಿ ಲಾಭ ಸಿಗಲಿದೆ. ಉದ್ಯೋಗಿಗಳಿಗೆ ಶುಭ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ:6

Horoscope Today

ವೃಷಭ: ಆತ್ಮವಿಶ್ವಾಸ ಹೆಚ್ಚಾಗಲಿದೆ. ಆರ್ಥಿಕವಾಗಿ ಸದೃಢವಾಗಿ ಇರುವಿರಿ. ಅತಿರೇಕದ ಮಾತುಗಳನ್ನಾಡಿ ಅಪಾಯ ತಂದುಕೊಳ್ಳುವುದು ಬೇಡ. ಆರೋಗ್ಯ ದಿನದ ಕೊನೆಯಲ್ಲಿ ಹದಗೆಡುವ ಸಾಧ್ಯತೆ ಇದೆ, ಎಚ್ಚರಿಕೆ ಇರಲಿ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಮಿಶ್ರಫಲ. ಅದೃಷ್ಟ ಸಂಖ್ಯೆ:5

Horoscope Today

ಮಿಥುನ: ಕೆಲಸ ಕಾರ್ಯಗಳಲ್ಲಿ ನಿಧಾನಗತಿ. ಆರೋಗ್ಯ ಮಧ್ಯಮವಾಗಿರಲಿದೆ. ಅನೇಕ ವಿಚಾರಗಳು ಮಾನಸಿಕ ನೆಮ್ಮದಿಯನ್ನು ಹಾಳು ಮಾಡುವ ಸಾಧ್ಯತೆ ಇದೆ. ಆರ್ಥಿಕ ಲಾಭ ಸಾಧಾರಣವಾಗಿರಲಿದೆ. ವ್ಯಾಪಾರ-ವ್ಯವಹಾರದಲ್ಲಿ ಮಿಶ್ರಫಲ. ಉದ್ಯೋಗಿಗಳಿಗೆ ಒತ್ತಡ ಹೆಚ್ಚಲಿದೆ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 3

Horoscope Today

ಕಟಕ: ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಕೀರ್ತಿ ಸಿಗಲಿದೆ. ಆರ್ಥಿಕವಾಗಿ ಲಾಭ ಇರಲಿದೆ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಹಳೆಯ ಸ್ನೇಹಿತರು, ಕುಟುಂಬದ ಆಪ್ತರೊಂದಿಗೆ ಸಮಯ ಕಳೆಯುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಶುಭಫಲ.ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 7

Horoscope Today

ಸಿಂಹ: ಆರೋಗ್ಯ ಕಾಳಜಿ ಇರಲಿ . ಒತ್ತಡದಿಂದ ಹೊರಬರಲು ವ್ಯಸನಗಳಿಗೆ ಬಲಿಯಾಗುವುದು ಬೇಡ. ಆರ್ಥಿಕವಾಗಿ ಕೊಂಚ ಲಾಭ ಇರಲಿದೆ. ದಿನದ ಮಟ್ಟಿಗೆ ಖರ್ಚು ಹೆಚ್ಚಾಗಲಿದೆ. ಉದ್ಯೋಗಿಗಳಿಗೆ ಹೊಸ ಭರವಸೆ ಇರಲಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 5

Horoscope Today

ಕನ್ಯಾ: ಶುಭ ಕಾರ್ಯಗಳಿಗಾಗಿ ಖರ್ಚು ಇರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಕಾರಣಾಂತರಗಳಿಂದ ಒತ್ತಡ ಇರಲಿದೆ. ಜವಾಬ್ದಾರಿಗಳು ಹೆಚ್ಚಾಗಲಿದೆ, ಕೋಪದಿಂದ ವರ್ತಿಸುವ ಸಾಧ್ಯತೆ ಇದೆ. ಆತುರದಲ್ಲಿ ಮಾತುಗಳು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 3

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಆರೋಗ್ಯ ಪರಿಪೂರ್ಣವಾಗಿರಲಿದೆ. ಕುಟುಂಬದ ಹಿರಿಯರಿಂದ ಒತ್ತಡ ಇರಲಿದೆ. ಹಣಕಾಸು,ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ ಇರಲಿದೆ. ಆರ್ಥಿಕ ಲಾಭ.ಹಿಂದೆ ನೀಡಿದ ಸಾಲ ಮರಳುವ ಸಾಧ್ಯತೆ ಇದೆ. ಆಪ್ತರಿಂದ ಸಲಹೆ ಸಹಕಾರ ಸಿಗಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 6

Horoscope Today

ವೃಶ್ಚಿಕ: ಸಂಗಾತಿಯ ಆರೋಗ್ಯದ ಸಲವಾಗಿ ಖರ್ಚು ಮಾಡುವಿರಿ. ವೃತಾ ಕಾಲಹರಣ ಮಾಡುವ ಆಲೋಚನೆಗಳಿಂದ ದೂರವಿರಿ. ಸಹೋದ್ಯೋಗಿಗಳಿಂದ ಕಿರಿಕಿರಿಯಾಗಲಿದೆ. ವ್ಯಾಪಾರ ವ್ಯವಹಾರ ಸಾಧಾರಣವಾಗಿರಲಿದೆ. ಹೂಡಿಕೆಯ ವ್ಯವಹಾರಗಳಲ್ಲಿ ಪ್ರಗತಿ ಇರಲಿದೆ. ಕೌಟುಂಬಿಕವಾಗಿ ಮಿಶ್ರಫಲ . ಅದೃಷ್ಟ ಸಂಖ್ಯೆ: 7

Horoscope Today

ಧನಸ್ಸು:ಆಪ್ತರಿಂದ ಬೆಂಬಲ ಸಿಗಲಿದೆ. ಕೆಲಸಕಾರ್ಯಗಳಲ್ಲಿ ಪ್ರಗತಿ ಇರಲಿದೆ. ಆಪ್ತರಿಂದ ಹಣದ ಸಹಾಯದ ಕೋರಿಕೆ. ವಿವಾಹ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗಲಿದೆ. ಆರೋಗ್ಯ ಪರಿಪೂರ್ಣ.ಉದ್ಯೋಗಿಗಳಿಗೆ ಶುಭಫಲ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 4

Horoscope Today

ಮಕರ: ಉತ್ಸಾಹಭರಿತ ಜೀವನ. ಆರ್ಥಿಕವಾಗಿ ಲಾಭ. ಹೂಡಿಕೆ ವ್ಯವಹಾರಗಳಲ್ಲಿ ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಯಾವುದಾದರೂ ಸಭೆ-ಸಮಾರಂಭಗಳಿಗೆ ಭಾಗವಹಿಸುವ ಆಮಂತ್ರಣ. ನಿರೀಕ್ಷೆಯ ಹೊಸ ಭರವಸೆಗಳು ಮೂಡಲಿವೆ.ಆಪ್ತರೊಂದಿಗೆ ಮಾತುಕತೆ. ಕುಟುಂಬದ ಸದಸ್ಯರಿಗೆ ಸಲಹೆ ಸಹಕಾರ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 4

Horoscope Today

ಕುಂಭ: ಇತರರನ್ನು ಟೀಕಿಸುತ್ತ ಸಮಯ ವ್ಯರ್ಥ ಮಾಡುವುದು ಬೇಡ. ಭೂಮಿಗೆ ಸಂಬಂಧಿಸಿದಂತೆ ವ್ಯಾಪಾರ ವ್ಯವಹಾರದಲ್ಲಿ ಲಾಭ ಇರಲಿದೆ. ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 2

Horoscope Today

ಮೀನ: ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಖರ್ಚು ಇರಲಿದೆ. ಹೊಸ ವ್ಯಕ್ತಿಗಳ ಪರಿಚಯವಾಗಲಿದೆ. ನಿಮ್ಮ ನಿರೀಕ್ಷೆಗೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಕುಟುಂಬದ ಸದಸ್ಯರಿಂದ ಒತ್ತಡ ಇರಲಿದೆ. ಸಂಗಾತಿಯ ವರ್ತನೆ ನಿಮ್ಮ ಖ್ಯಾತಿಯ ಮೇಲೆ ಪರಿಣಾಮ ಬೀರಬಹುದು. ಆರೋಗ್ಯ ಪರಿಪೂರ್ಣ. ದಿಢೀರ್ ಧನಲಾಭ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ. ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 9

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading
Advertisement
Bangladesh Unrest hindus protest
ವಿದೇಶ5 mins ago

Bangladesh Unrest: ಶೇಖ್‌ ಹಸೀನಾ ಓಡಿ ಬಂದ ಬಳಿಕ ಬಾಂಗ್ಲಾದೇಶದಲ್ಲಿ 232 ಜನರ ಕಗ್ಗೊಲೆ, ಹಿಂದೂಗಳೇ ಟಾರ್ಗೆಟ್

Tharun Sudhir And Sonal Montero Haldi Shastra Photos
ಸ್ಯಾಂಡಲ್ ವುಡ್29 mins ago

Tharun Sudhir: ತರುಣ್ ಸುಧೀರ್-ಸೋನಲ್ ಮದುವೆ ಸಂಭ್ರಮ; ಅದ್ಧೂರಿಯಾಗಿ ನಡೆದ ಅರಿಶಿಣ ಶಾಸ್ತ್ರ!

bjp-jds padayatra
ಪ್ರಮುಖ ಸುದ್ದಿ56 mins ago

BJP-JDS Padayatra: ಇಂದು ಬಿಜೆಪಿ-ಜೆಡಿಎಸ್‌ ಪಾದಯಾತ್ರೆಗೆ ತೆರೆ, ಮೈಸೂರಿನಲ್ಲಿ ಬೃಹತ್‌ ಸಮಾವೇಶ

Sharara Fashion
ಫ್ಯಾಷನ್58 mins ago

Sharara Fashion: ಲಾಂಗ್‌ ಸ್ಕರ್ಟ್‌‌ನಂತೆ ರೂಪ ಬದಲಿಸಿದ ಶರಾರ!

cat bite shimogga news
ಶಿವಮೊಗ್ಗ2 hours ago

Cat Bite: ಸಾಕಿದ ಬೆಕ್ಕು ಕಚ್ಚಿ ಮಹಿಳೆ ಸಾವು; ಬೆಕ್ಕು ಪರಚಿದರೆ ಹುಷಾರ್

pranjal patil ರಾಜಮಾರ್ಗ ಅಂಕಣ
ಅಂಕಣ2 hours ago

ರಾಜಮಾರ್ಗ ಅಂಕಣ: ದೃಷ್ಟಿ ವಿಕಲತೆಯನ್ನು ಮೆಟ್ಟಿ ನಿಂತು ಐಎಎಸ್ ಅಧಿಕಾರಿ ಆದ ಪ್ರಾಂಜಲ್ ಪಾಟೀಲ್!

knuckle cracking
ಆರೋಗ್ಯ3 hours ago

Knuckle Cracking: ನೆಟಿಕೆ ಮುರಿಯುವುದು ಒಳ್ಳೆಯದೇ ಕೆಟ್ಟದ್ದೇ? ಇದರಿಂದ ಸಂಧಿವಾತ ಬರುತ್ತದೆಯೇ?

Paris Olympics 2024
ಪ್ರಮುಖ ಸುದ್ದಿ3 hours ago

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಇಂದು ಭಾರತಕ್ಕೆ ಯಾವ್ಯಾವ ಸ್ಪರ್ಧೆಗಳಿವೆ? ಇಲ್ಲಿದೆ ಎಲ್ಲ ವಿವರ

karnataka weather Forecast
ಮಳೆ3 hours ago

Karnataka Weather : ಭಾರಿ ಮಳೆ ಸೂಚನೆ; ಕರಾವಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ

Dina Bhavishya
ಭವಿಷ್ಯ4 hours ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಫುಲ್‌ ಟೆನ್ಷನ್‌; ದಿನದ ಮಟ್ಟಿಗೆ ಖರ್ಚು ಹೆಚ್ಚು

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 days ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 days ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 days ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು4 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ4 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ6 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ7 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌