Rain in Karnataka: ಬೆಳಗಾವಿಯಲ್ಲಿ ನಗರದೊಳಗೆ ಬಂದ ನದಿಗಳು, ಮನೆ ಖಾಲಿ ಮಾಡಿದ ಜನ - Vistara News

ಪ್ರಮುಖ ಸುದ್ದಿ

Rain in Karnataka: ಬೆಳಗಾವಿಯಲ್ಲಿ ನಗರದೊಳಗೆ ಬಂದ ನದಿಗಳು, ಮನೆ ಖಾಲಿ ಮಾಡಿದ ಜನ

Rain in Karnataka: ಬೆಳಗಾವಿ ಜಿಲ್ಲೆಯಲ್ಲಿ ಸಪ್ತ ನದಿಗಳ ಅಬ್ಬರಕ್ಕೆ ಜನ ಕಂಗಾಲಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 30 ಸಂಪರ್ಕ ಸೇತುವೆಗಳು ಜಲಾವೃತವಾಗಿವೆ. ಜಿಲ್ಲೆಯ ಅರವತ್ತಕ್ಕೂ ಅಧಿಕ ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ.

VISTARANEWS.COM


on

rain in karnataka
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಳಗಾವಿ/ಚಿಕ್ಕೋಡಿ: ಬೆಳಗಾವಿ (belagavi news) ಹಾಗೂ ಚಿಕ್ಕೋಡಿ (Chikkodi news) ಅವಳಿ ಜಿಲ್ಲೆಗಳ ಜನತೆ ಮಳೆ (Rain in Karnataka) ಹಾಗೂ ನದಿಗಳ ಅಬ್ಬರದಿಂದ ತತ್ತರಿಸಿದ್ದಾರೆ. ನದಿಗಳು ತುಂಬಿ ಹರಿಯುತ್ತಿದ್ದು (Flood situation), ಘಟಪ್ರಭಾ ನದಿಯ (Ghataprabha River) ನೀರು ಮನೆಬಾಗಿಲವರೆಗೂ ಬಂದಿರುವುದರಿಂದ ಜನತೆ ಮನೆ ತೊರೆದು ಕಾಳಜಿ ಕೇಂದ್ರಗಳ ಕಡೆ ಸಾಗಿದ್ದಾರೆ.

ಘಟಪ್ರಭಾ ನದಿಯ ನೀರು ಉಕ್ಕಿ ಬಂದು ಮನೆಯ ಬಾಗಿಲವರೆಗೂ ತಲುಪಿರುವುದರಿಂದ, ಹೆಚ್ಚಿನ ಅನಾಹುತ ಆಗದಿರಲೆಂದು ಜನ ಮನೆ ಖಾಲಿ ಮಾಡುತ್ತಿದ್ದಾರೆ. ಗೋಕಾಕದ ದನದ ಪೇಟೆಗೆ ನದಿ ನೀರು ನುಗ್ಗುತ್ತಿದೆ. ನೀರು ಹೆಚ್ಚಾಗುತ್ತಿರುವುದರಿಂದ ಜನ ಕಂಗಾಲಾಗಿದ್ದು, ಈಗಾಗಲೇ ಕೆಲವು ಶೆಡ್‌ಗಳು ನೀರಲ್ಲಿ ಮುಳುಗಿವೆ. ದನದ ಪೇಟೆ ಪಟಗುಂದಿ ಹನುಮ ಗುಡಿಗೂ ಜಲಕಂಟಕ ಎದುರಾಗಿದೆ. ಸದ್ಯ ನೀರಿನಲ್ಲಿಯೇ ಜನ ನಿತ್ಯ ಕೆಲಸಗಳಿಗಾಗಿ ಓಡಾಡುತ್ತಿದ್ದು, ಕ್ಷಣ ಕ್ಷಣಕ್ಕೂ ಘಟಪ್ರಭಾ ನದಿ ಒಳಹರಿವು ಹೆಚ್ಚಾಗುತ್ತಿದೆ. ಸದ್ಯ ನದಿ ಒಳಹರಿವು 55 ಸಾವಿರ ಕ್ಯೂಸೆಕ್ ದಾಟಿದೆ.

ಬೆಳಗಾವಿ ಜಿಲ್ಲೆಯಲ್ಲಿ ಸಪ್ತ ನದಿಗಳ ಅಬ್ಬರಕ್ಕೆ ಜನ ಕಂಗಾಲಾಗಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 30 ಸಂಪರ್ಕ ಸೇತುವೆಗಳು ಜಲಾವೃತವಾಗಿವೆ. ಗೋಕಾಕ್ ತಾಲೂಕಿನಲ್ಲಿ ಐದು ಸೇತುವೆಗಳು, ಮೂಡಲಗಿ ತಾಲೂಕಿನಲ್ಲಿ ಐದು ಸೇತುವೆ, ಹುಕ್ಕೇರಿ ತಾಲೂಕಿನ ಐದು, ಚಿಕ್ಕೋಡಿ ತಾಲೂಕಿನ ನಾಲ್ಕು, ನಿಪ್ಪಾಣಿ ತಾಲೂಕಿನ ನಾಲ್ಕು, ರಾಯಬಾಗ ತಾಲೂಕಿನ ಮೂರು, ಖಾನಾಪುರ ಎರಡು, ಕಾಗವಾಡ ಒಂದು, ಅಥಣಿ ಒಂದು ಸೇತುವೆ ಜಲಾವೃತವಾಗಿವೆ. ಇದರಿಂದ ಜಿಲ್ಲೆಯ ಅರವತ್ತಕ್ಕೂ ಅಧಿಕ ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ.

ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯಲ್ಲಿ 87 ಗ್ರಾಮಗಳಿಗೆ, ಬೆಳಗಾವಿ ವ್ಯಾಪ್ತಿಯಲ್ಲಿ 35 ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ. ಜಿಲ್ಲೆಯಲ್ಲಿ ಬರೋಬ್ಬರಿ 122 ಗ್ರಾಮಗಳಲ್ಲಿ ಪ್ರವಾಹದ ಸ್ಥಿತಿ ಕಂಡುಬಂದಿದೆ. ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ 45 ಬೋಟ್‌ಗಳು ಸಿದ್ಧತೆಯಲ್ಲಿವೆ. ಈಗಾಗಲೇ ಒಂದು ಎನ್‌ಡಿಆರ್‌ಎಫ್ ತಂಡ ಬೀಡುಬಿಟ್ಟಿದೆ.

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಹುಣ್ಣರಗಿ ಗ್ರಾಮದಲ್ಲಿ ದೂಧಗಂಗಾ ನದಿ ಅಬ್ಬರಿಸಿ ಹರಿಯುತ್ತಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ದೂಧಗಂಗಾ ನದಿ ನೀರು ಗ್ರಾಮದ ಕುರುಬರ ಗಲ್ಲಿಗೆ ನುಗ್ಗಿದೆ. ಹೀಗಾಗಿ ಜನ ಊರು ಖಾಲಿ ಮಾಡುತ್ತಿದ್ದು, ಜಾನುವಾರುಗಳ ಸಮೇತ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ. ನಿನ್ನೆ ರಾತ್ರಿಯೆಲ್ಲ‌ ನಿದ್ದೆಯಿಲ್ಲದೆ ಕಂಗೆಟ್ಟ ಗಡಿ ಜಿಲ್ಲೆಯ ಜನ, ಇಂದು ಹುಣ್ಣರಗಿ ಗ್ರಾಮದಿಂದ ಸುರಕ್ಷಿತ ಸ್ಥಳಗಳತ್ತ, ಊರ ಹೊರಗಿನ ಶಾಲೆಯತ್ತ ಸಾಗುತ್ತಿದ್ದಾರೆ.

ಗೋಕಾಕ: ಮಾರ್ಕಂಡೇಯ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನದಿಯ ಅಬ್ಬರಕ್ಕೆ ಸೇತುವೆಯಲ್ಲಿ ಬಿರುಕು ಬಿಟ್ಟಿದೆ. ಬೆಳಗಾವಿ ಜಿಲ್ಲೆಯ ಗೋಕಾಕ ನಗರಕ್ಕೆ ಹೊಂದಿಕೊಂಡಿರುವ ಚಿಕ್ಕೋಳಿ ಸೇತುವೆಯಲ್ಲಿ ಮೂಡಿರುವ ಬಿರುಕಿನಿಂದಾಗಿ ಜನ ಆತಂಕದಲ್ಲಿದ್ದಾರೆ. ಈ ಸೇತುವೆ ಮೇಲೆ ನಿತ್ಯ ಸಾವಿರಾರು ವಾಹನಗಳು, ಜನ ಓಡಾಡುತ್ತಾರೆ. ಇನ್ನೊಂದು ಕಡೆ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಇದನ್ನೂ ಓದಿ: Karnataka Rain News: ಮುಂದುವರಿದ ಮಳೆ ಅವಾಂತರ; ಮನೆ ಮೇಲೆ ತಡೆಗೋಡೆ ಕುಸಿದು ಬಾಲಕ ಸಾವು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Paris Olympics: ಇಂದು ಪ್ಯಾರಿಸ್​ ಒಲಿಂಪಿಕ್ಸ್​ಗೆ ಅಧಿಕೃತ ಚಾಲನೆ: ಉದ್ಘಾಟನಾ ಸಮಾರಂಭ ಎಷ್ಟು ಗಂಟೆಗೆ ಆರಂಭ?

Paris Olympics: ಒಟ್ಟು 12 ವಿಭಾಗಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿಭಾಗಿಸಲಾಗಿದೆ. ಫ್ರೆಂಚ್‌ ಸಂಗೀತ ಸೇರಿದಂತೆ ಭಾರತದ ಶಾಸ್ತ್ರೀಯ ಸಂಗೀತ ಸೇರಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

VISTARANEWS.COM


on

Paris Olympics
Koo

ಪ್ಯಾರಿಸ್​: ಪ್ರತಿಷ್ಠಿತ ಪ್ಯಾರಿಸ್​ ಒಲಿಂಪಿಕ್ಸ್​(Paris Olympics) ಕ್ರೀಡಾಕೂಟದ ಉದ್ಘಾಟನ ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಫ್ರಾನ್ಸ್​ನ ಮಹಾನದಿ ಸೀನ್ ಮೇಲೆ ಉದ್ಘಾಟನ ಸಮಾರಂಭ ನಡೆಯಲಿದೆ. ಭಾರತದ ಧ್ವಜಧಾರಿಯಾಗಿ ಅವಳಿ ಒಲಿಂಪಿಕ್ಸ್​ ಪದಕ ವಿಜೇತೆ ಪಿ.ವಿ ಸಿಂಧು ಅವರು ಟೇಬಲ್ ಟೆನಿಸ್ ಪಟು ಶರತ್ ಕಮಾಲ್ ಜತೆ ಭಾರತದ ಧ್ವಜ ಹಿಡಿದು ಪಥಸಂಚಲನದಲ್ಲಿ ಸಾಗಲಿದ್ದಾರೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತ ತಂಡ 84ನೇ ರಾಷ್ಟ್ರವಾಗಿ ಈ ಬಾರಿ ಕಾಣಿಸಿಕೊಳ್ಳಲಿದೆ.

ನದಿಯ ಮೇಲೆಯೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸುಮಾರು 3,000 ಮಂದಿ ಕಲಾವಿದರು ಕಾರ್ಯಕ್ರಮಗಳನ್ನು ನೀಡಲಿದ್ದಾರೆ. ಒಟ್ಟು 12 ವಿಭಾಗಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿಭಾಗಿಸಲಾಗಿದೆ. ಫ್ರೆಂಚ್‌ ಸಂಗೀತ ಸೇರಿದಂತೆ ಭಾರತದ ಶಾಸ್ತ್ರೀಯ ಸಂಗೀತ ಸೇರಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಉದ್ಘಾಟನ ಕಾರ್ಯಕ್ರಮವನ್ನು ವೀಕ್ಷಣೆ ಮಾಡಲು ಸುಮಾರು 5 ಲಕ್ಷ ಮಂದಿ ಭಾಗಿಯಾಗಲಿದ್ದಾರೆ ಎನ್ನಲಾಗಿದೆ.

ಫ್ರಾನ್ಸ್‌ ಕಾಲಮಾನದಂತೆ ಸಾಯಂಕಾಲ 5.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಭಾರತದಲ್ಲಿ ರಾತ್ರಿ 11 ಗಂಟೆಗೆ ನೇರಪ್ರಸಾರವಾಗಲಿದೆ. ಪ್ಯಾರಿಸ್‌ ಒಲಿಂಪಿಕ್ಸ್‌ನ ಅಧಿಕೃತ ಪ್ರಸಾರ ಮತ್ತು ಡಿಜಿಟಲ್‌ ಪಾಲುದಾರರಾಗಿರುವ ವಯಾಕಾಮ್ 18 ಜಿಯೋ ಸಿನಿಮಾ ಮೂಲಕ ಒಲಿಂಪಿಕ್ಸ್‌ ಸ್ಪರ್ಧೆಯನ್ನು ನೇರಪ್ರಸಾರ ಮಾಡುತ್ತಿದೆ. ಸ್ಪೋಟ್ಸ್‌-18 ಚಾನಲ್‌ನಲ್ಲೂ ಇದು ನೇರಪ್ರಸಾರವಾಗಲಿದೆ.

ಇದನ್ನೂ ಓದಿ Paris Olympics 2024: ಕ್ವಾರ್ಟರ್​ ಫೈನಲ್​ಗೆ ಲಗ್ಗೆಯಿಟ್ಟ ಭಾರತ ಪುರುಷರ ಆರ್ಚರಿ ತಂಡ; 4ನೇ ಸ್ಥಾನ ಪಡೆದ ಧೀರಜ್​ ಬೊಮ್ಮದೇವರ

ಪ್ಯಾರಿಸ್‌ ಆತಿಥ್ಯದಲ್ಲಿ ನಡೆಯಲಿರುವ 3ನೇ ಒಲಿಂಪಿಕ್ಸ್‌ ಕೀಡಾಕೂಟ ಇದಾಗಿದೆ. ಮೊದಲ ಒಲಿಂಪಿಕ್ಸ್‌ ನಡೆದದ್ದು 1900ರಲ್ಲಿ. ಇದಾದ ಬಳಿಕ 1924ರಲ್ಲಿ ಆತಿಥ್ಯ ವಹಿಸಿತ್ತು. ಇದೀಗ ಬರೋಬ್ಬರಿ 100 ವರ್ಷಗಳ ಬಳಿಕ ಇಲ್ಲಿ ಪ್ಯಾರಿಸ್​ನಲ್ಲಿ ಒಲಿಂಪಿಕ್ಸ್​ ನಡೆಯುತ್ತಿದೆ. ಈ ಬಾರಿಯ ಒಲಿಂಪಿಕ್ಸ್​ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಒಲಿಂಪಿಕ್ಸ್​ ಇತಿಹಾಸದಲ್ಲೇ ವಿಶೇಷ ಮಹತ್ವ ಪಡೆದಿದೆ. ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗಡೆ ನಡೆಯುವ ಉದ್ಘಾಟನಾ ಸಮಾರಂಭ ಇದಾಗಿದೆ. 10,500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪ್ಯಾರಿಸ್‌ನಿಂದ ಸುಮಾರು 6 ಕಿಲೋಮೀಟರ್‌ ವರೆಗೆ ಬೋಟ್‌ಗಳಲ್ಲೇ ಪರೇಡ್‌ ನಡೆಸಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಒಲಿಂಪಿಕ್ಸ್‌ ವೇಳೆ ನಡೆಯುವ ಪರೇಡ್‌ನ‌ಲ್ಲಿ ಗ್ರೀಸ್‌ ದೇಶಕ್ಕೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ. ಆಧುನಿಕ ಒಲಿಂಪಿಕ್ಸ್‌ ಕ್ರೀಡೆಗಳು ಮೊದಲು ಗ್ರೀಸ್‌ನಲ್ಲಿ ಆರಂಭವಾದ ಕಾರಣ ಗೌರವಾರ್ಥವಾಗಿ ಗ್ರೀಸ್‌ಗೆ ಆದ್ಯತೆ ನೀಡಲಾಗುತ್ತದೆ. ಉಳಿದಂತೆ ಆಯಾ ದೇಶಗಳ ಭಾಷೆಯ ಅಲ್ಪಾಬೆಟಿಕ್‌ ಅಕ್ಷರಮಾಲೆಯನ್ನು ಅನುಸರಿಸಿ ತಂಡಗಳು ಪಥಸಂಚಲನದಲ್ಲಿ ಪಾಲ್ಗೊಳ್ಳುತ್ತವೆ. ಆತಿಥೇಯ ತಂಡ ಯಾವಾಗಲೂ ಕೊನೆಯ ಸ್ಥಾನದಲ್ಲಿರುತ್ತದೆ.

ಭಾರೀ ಭದ್ರತೆ


ಒಲಿಂಪಿಕ್ಸ್‌ ವೇಳೆಯಲ್ಲಿ ಸಂಭಾವ್ಯ ದಾಳಿಗಳು ನಡೆಯುವ ಸಾಧ್ಯತೆ ಇರುವುದರಿಂದ ಪ್ಯಾರಿಸ್​ನಲ್ಲಿ ಹಿಂದೆಂದೂ ಕಾಣದ ಭಾರೀ ಭದ್ರತೆ ಕೈಗೊಳ್ಳಲಾಗಿದೆ. ಹೆಚ್ಚುವರಿ ಭದ್ರತೆಗಾಗಿ ಫ್ರಾನ್ಸ್​ನೊಂದಿಗೆ ಭಾರತದ ಯೋಧರು ಕೂಡ ಕೈಜೋಡಿಸಿದ್ದಾರೆ. ಹಮಾಸ್(Hamas) ಭಯೋತ್ಪಾದಕರಿಂದ(hamas terrorist) ಭೀಕರ ದಾಳಿಯ ಬೆದರಿಕೆ ಕೂಡ ಬಂದಿದೆ. ಕೆಲ ದಿನಗಳ ಹಿಂದಷ್ಟೇ ಮುಸುಕುಧಾರಿ ವ್ಯಕ್ತಿಯೊಬ್ಬ ಅರೇಬಿಕ್ ಭಾಷೆಯಲ್ಲಿ ಬೆದರಿಕೆ ಹಾಕಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ವಿಡಿಯೊದಲ್ಲಿ ಒಲಿಂಪಿಕ್ಸ್​ ವೇಳೆ ಫ್ರಾನ್ಸ್​ ಅಧ್ಯಕ್ಷರನ್ನು ಹತ್ಯೆ ಮಾಡುವುದಾಗಿ ಮತ್ತು ಫ್ರಾನ್ಸ್​ನಲ್ಲಿ ರಕ್ತದೋಕುಳಿ ಹರಿಸುವುದಾಗಿ ಎಚ್ಚರಿಕೆ ನೀಡಲಾಗಿತ್ತು. ಉದ್ಘಾಟನಾ ಕಾರ್ಯಕ್ರಮವೊಂದಕ್ಕೇ 35000 ಮಂದಿ ಗುಪ್ತಚರರನ್ನು ನೇಮಕ ಮಾಡಲಾಗಿದೆ.

Continue Reading

ಅಂಕಣ

ರಾಜಮಾರ್ಗ ಅಂಕಣ: ಕಾರ್ಗಿಲ್, ಇದು‌ ಕೆಚ್ಚಿನ ಕಲಿಗಳ ಸಮರಗಾಥೆ

ರಾಜಮಾರ್ಗ ಅಂಕಣ: ಪಾಕಿಸ್ತಾನ (Pakistan) ಎಂಬ ದ್ರೋಹಿ ರಾಷ್ಟ್ರವನ್ನು ಇನ್ನು ಮುಂದೆ ಯಾವಾಗಲೂ ನಂಬಲೇ ಬಾರದು ಎಂಬ ಪಾಠವನ್ನು ಭಾರತಕ್ಕೆ ಕಲಿಸಿಹೋದ ಮೃತ್ಯುಂಜಯ ಯುದ್ಧ ಅದು!

VISTARANEWS.COM


on

ರಾಜಮಾರ್ಗ ಅಂಕಣ Kargil Vijay Diwas 2024
Koo

ಇಂದು ಕಾರ್ಗಿಲ್ ವಿಜಯ ದಿವಸದ ರಜತ ಮಹೋತ್ಸವ

Rajendra-Bhat-Raja-Marga-Main-logo

ರಾಜಮಾರ್ಗ ಅಂಕಣ: ಭಾರತವು ಗೆದ್ದ ಅತ್ಯಂತ ಕಠಿಣ ಯುದ್ಧ (Kargil Vijay Diwas) ಅದು! 1999ರಲ್ಲಿ ಭಾರತೀಯ ಸೇನಾ ಮುಖ್ಯಸ್ಥರಾಗಿದ್ದ ಜನರಲ್ ವಿ.ಪಿ ಮಲಿಕ್ ಬರೆದಿರುವ ‘KARGIL – FROM SURPRISE TO VICTORY’ ಓದುತ್ತಾ ಹೋದಂತೆ ನಾನು ಹಲವಾರು ಬಾರಿ ಬೆಚ್ಚಿಬಿದ್ದಿದ್ದೇನೆ! ಯಾಕೆಂದರೆ ಅದು ಭಾರತವು ಎದುರಿಸಿದ ಅತ್ಯಂತ ಕಠಿಣವಾದ ಯುದ್ಧ (India0 Pakistan War) ಮತ್ತು ದೀರ್ಘಕಾಲದ ಯುದ್ಧ. ಪಾಕಿಸ್ತಾನ (Pakistan) ಎಂಬ ದ್ರೋಹಿ ರಾಷ್ಟ್ರವನ್ನು ಇನ್ನು ಮುಂದೆ ಯಾವಾಗಲೂ ನಂಬಲೇ ಬಾರದು ಎಂಬ ಪಾಠವನ್ನು ಭಾರತಕ್ಕೆ ಕಲಿಸಿಹೋದ ಮೃತ್ಯುಂಜಯ ಯುದ್ಧ ಅದು!

ಯುದ್ಧದ ಹಿನ್ನೆಲೆ – ಮುಷರಫ್ ಕುತಂತ್ರ

ಆಗಷ್ಟೇ ಭಾರತವು ಅಣುಪರೀಕ್ಷೆ ಮಾಡಿ ಜಗತ್ತಿನ ಕಣ್ಣು ಕೋರೈಸುವ ಸಾಧನೆಯನ್ನು ಮಾಡಿತ್ತು. ಪಾಕ್ ಕೂಡ ಅಮೇರಿಕಾದ ನೆರವು ಪಡೆದು ತನ್ನ ಬಳಿ ಅಣುಬಾಂಬು ಇದೆ ಎಂದು ಹೇಳಿಕೊಂಡಿತ್ತು. ಆಗ ಭಾರತದ ಪ್ರಧಾನಿ ಆಗಿದ್ದ ವಾಜಪೇಯಿ (Atal Bihari Vajpayee) ಅವರು ತುಂಬಾ ಮೃದು ನಿಲುವಿನ ನಾಯಕ ಎಂದು ಪಾಕ್ ನಂಬಿ ಕುಳಿತಿತ್ತು. ಪಾಕಿಸ್ಥಾನಕ್ಕೆ ಜಗತ್ತಿನ ಅತೀ ಎತ್ತರದ ಯುದ್ಧಭೂಮಿಯಾದ ಸಿಯಾಚಿನ್ (Siachin) ವಶಪಡಿಸಿಕೊಳ್ಳಬೇಕು ಎಂಬ ದುರಾಸೆ. ಅಲ್ಲಿಂದ ಮುಂದೆ ಕಾರ್ಗಿಲ್ ಮತ್ತು ಮುಂದೆ ಇಡೀ ಕಾಶ್ಮೀರವನ್ನು ಕಬಳಿಸಬೇಕು ಎನ್ನುವ ಮಾಸ್ಟರ್ ಪ್ಲಾನ್! ಆಗ ಪಾಕಿಸ್ತಾನದ ಸೇನಾ ನಾಯಕ ಪರ್ವೇಜ್ ಮುಷರಫ್ (Parvez Musharraf) ಹೊಂಚು ಹಾಕಿ ಕುಳಿತ ಕಾಲ ಅದು.

ಅದಕ್ಕೆ ಪೂರಕವಾಗಿ 1998ರ ಜೂನ್ ತಿಂಗಳಿಂದಲೇ ಪಾಕಿಸ್ಥಾನದ 5000ರಷ್ಟು ಸೈನಿಕರು ಲೈನ್ ಆಫ್ ಕಂಟ್ರೋಲ್ ದಾಟಿ ಭಾರತದ 4-10 ಕಿ.ಮೀ. ಒಳಗೆ ಬಂದು ಎತ್ತರದ ಪ್ರದೇಶದಲ್ಲಿ ಜಮಾವಣೆ ಆಗತೊಡಗಿದ್ದರು! ಅವರ ಬಳಿಗೆ ಆಧುನಿಕ ಶಸ್ತ್ರಾಸ್ತ್ರಗಳು ಬಂದು ತಲುಪಿದ್ದವು. ಆದರೆ 1999ರ ಮೇ 18ರವರೆಗೆ ಭಾರತ ಸರಕಾರಕ್ಕೆ ಇದರ ಬಗ್ಗೆ ಮಾಹಿತಿಯೇ ಇರಲಿಲ್ಲ. ಭಾರತೀಯ ಸೇನಾ ಗೂಢಚಾರ ಸಂಸ್ಥೆಯವರು ಇನ್ನೂ ಸ್ವಲ್ಪ ದಿನ ಮೈಮರೆತಿದ್ದರೆ…! ಆ ಕುರಿಗಾಹಿ ಹುಡುಗರು ಆ ನುಸುಳುಕೋರ ಸೈನಿಕರ ಬಗ್ಗೆ ಭಾರತೀಯ ಸೇನೆಗೆ ಮಾಹಿತಿ ಕೊಡದೇ ಹೋಗಿದ್ದರೆ…! ನಾನು ಬೆಚ್ಚಿ ಬಿದ್ದದ್ದು ಆಗ.

ಭಾರತದ ಸೈನಿಕರ ಬಳಿ ಯುದ್ಧದ ಸಿದ್ಧತೆಗೆ ಸಮಯ ಇರಲಿಲ್ಲ

ಗಡಿಯ ಒಳಗೆ ಅಷ್ಟು ದೊಡ್ಡ ಸಂಖ್ಯೆಯ ಸೈನಿಕರು ನುಸುಳಿಬಂದ ವಿಷಯ ಭಾರತಕ್ಕೆ ಗೊತ್ತಾಯಿತು ಅಂದಾಗ ಮುಷರಫ್ ಅಲರ್ಟ್ ಆದರು. ಅವರು ನಮ್ಮ ಸೈನಿಕರೇ ಅಲ್ಲ, ಯಾವುದೋ ಭಯೋತ್ಪಾದಕ ಸಂಘಟನೆಯವರು ಎಂದು ಬಿಟ್ಟರು ಮುಷರಫ್! ಆದರೆ ಈಗ ಭಾರತದ ಪ್ರಧಾನಿ ವಾಜಪೇಯಿ, ರಕ್ಷಣಾ ಮಂತ್ರಿ ಜಾರ್ಜ್ ಫೆರ್ನಾಂಡಿಸ್ ಸೇನಾ ಮುಖ್ಯಸ್ಥರನ್ನು ಕರೆಸಿ ಯುದ್ಧ ಘೋಷಣೆ ಮಾಡಿಬಿಟ್ಟರು. ಆದರೆ ಭಾರತೀಯ ಸೈನ್ಯಕ್ಕೆ ಆ ಯುದ್ಧಕ್ಕೆ ಸಿದ್ಧತೆ ಮಾಡಲು ದೊರೆತದ್ದು 24 ಘಂಟೆ ಮಾತ್ರ! ಆದರೂ 1999ರ ಮೇ 3ರಂದು ಭಾರತ ಯುದ್ಧ ಘೋಷಣೆ ಮಾಡಿ ಆಗಿತ್ತು!

ಆರಂಭದಲ್ಲಿ ಭಾರತಕ್ಕೆ ಹಿನ್ನಡೆ ಆದದ್ದು ನಿಜ. ಆದರೆ ಮೇ 30 ಆಗುವಾಗ ಭಾರತದ 30,000 ಸೈನಿಕರು ಟೈಗರ್ ಹಿಲ್ ಬಳಿ ಬಂದು ಜಮಾವಣೆ ಮಾಡಿ ಆಗಿತ್ತು. ಭಾರತದ ಭೂಸೈನ್ಯ ಮತ್ತು ವಾಯು ಸೈನ್ಯಗಳು ವೀರಾವೇಶದಿಂದ ಹೋರಾಟಕ್ಕೆ ಇಳಿದಿದ್ದವು. ಎರಡೂ ಕಡೆಯ ಸೈನಿಕರು, ಬಾಂಬುಗಳು, ಮದ್ದುಗುಂಡುಗಳು, ಶೆಲ್‌ಗಳು ಸಿಡಿಯುತ್ತ ಕಾರ್ಗಿಲ್ ಯುದ್ಧಭೂಮಿಯು ರಕ್ತದಲ್ಲಿ ಒದ್ದೆಯಾಗುತ್ತಾ ಹೋಯಿತು. ಟೈಗರ್ ಹಿಲ್ ಏರಿ 10 ಪಾಕ್ ಸೈನಿಕರ ಹತ್ಯೆಯನ್ನು ನಮ್ಮ ಸೈನಿಕರು ಮಾಡಿದಾಗ ಭಾರತವು ಯುದ್ಧದಲ್ಲಿ ಸಣ್ಣ ಮೇಲುಗೈ ಸಾಧಿಸಿತು.

ಅಲ್ಲಿಂದ ಮುಂದೆ ಭಾರತದ ರಕ್ಷಣಾ ಮಂತ್ರಿ ಜಾರ್ಜ್ ಫೆರ್ನಾಂಡಿಸ್ ಸ್ವತಃ ಯುದ್ಧಭೂಮಿಗೆ ಬಂದು ಸೈನಿಕರ ಆತ್ಮಸ್ಥೈರ್ಯ ಹೆಚ್ಚಿಸಿದ್ದು, ಪ್ರಧಾನಿ ವಾಜಪೇಯಿ ವಾರ್ ರೂಮಿನಲ್ಲಿ ಕುಳಿತು ಸೈನ್ಯಕ್ಕೆ ನಿರ್ದೇಶನವನ್ನು ಕೊಟ್ಟದ್ದು ಭಾರತವನ್ನು ಗೆಲ್ಲಿಸುತ್ತಾ ಹೋದವು. 75 ದಿನಗಳ ಘನಘೋರ ಯುದ್ಧದ ನಂತರ ಭಾರತ ಜುಲೈ 26ರಂದು ದ್ರಾಸ್ ಪರ್ವತದ ತಪ್ಪಲಲ್ಲಿ ಇದ್ದ ಕೊನೆಯ ಪಾಕ್ ಸೈನಿಕನನ್ನೂ ಹೊಸಕಿ ಹಾಕಿದಾಗ ಭಾರತ ವಿಜಯೋತ್ಸವ ಆಚರಣೆ ಮಾಡಿತು. ಕಾರ್ಗಿಲ್ ಮೈದಾನದಲ್ಲಿ ಸೈನಿಕರ ನಡುವೆ ತ್ರಿವರ್ಣಧ್ವಜ ಹಾರಿಸಿದ ಕ್ಷಣವೇ ಕಾರ್ಗಿಲ್ ವಿಜಯ ದಿನ.

Kargil Vijay Diwas 2024
Kargil Vijay Diwas 2024

ಹುತಾತ್ಮರಾದವರು ಭಾರತದ 527 ಸೈನಿಕರು!

ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಭಾರತೀಯ ಸೈನಿಕರ ಬಲಿದಾನ ಭಾರತಕ್ಕೆ ಒಂದು ದೊಡ್ಡ ವಿಜಯವನ್ನು ತಂದುಕೊಟ್ಟಿತ್ತು. ಅದರಲ್ಲಿ ಕರ್ನಾಟಕದ 21 ಸೈನಿಕರೂ ಇದ್ದರು. ಸಾವಿರಾರು ಯೋಧರು ತೀವ್ರವಾಗಿ ಗಾಯಗೊಂಡರು. ಪಾಕಿಸ್ತಾನವೂ ದೊಡ್ಡ ಸಂಖ್ಯೆಯ ಸೈನಿಕರನ್ನು ಕಳೆದುಕೊಂಡಿತ್ತು.

ನಮ್ಮ ಸೈನಿಕರಾದ ಸಿಯಾಚಿನ್ ಹೀರೋ ನಾಯಬ್ ಸುಬೇದಾರ್ ಬಾಣಾ ಸಿಂಗ್, ಕ್ಯಾಪ್ಟನ್ ವಿಕ್ರಮ್ ಬಾತ್ರಾ, ಮೇಜರ್ ಪದ್ಮಪಾಣಿ ಆಚಾರ್ಯ, ಗ್ರೆನೆಡಿಯರ್ ಯೋಗೇಂದರ್ ಸಿಂಘ್ ಯಾದವ್, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ, ಕ್ಯಾಪ್ಟನ್ ಅನುಜ್ ನಯ್ಯರ್, ಲೆಫ್ಟಿನೆಂಟ್ ಬಲವಾನ್ ಸಿಂಘ್, ರೈಫಲ್ ಮ್ಯಾನ್ ಸಂಜಯ ಕುಮಾರ್, ಕ್ಯಾಪ್ಟನ್ ವಿಜಯವಂತ್ ಥಾಪರ್, ಮೇಜರ್ ಸೋನಂ ವಾಂಗಚುಕ್, ಲೆಫ್ಟಿನೆಂಟ್ ಕರ್ನಲ್ ವೈ.ಕೆ. ಜೋಷಿ ಇವರೆಲ್ಲರೂ ನಿಜವಾದ ಕಾರ್ಗಿಲ್ ಹೀರೋಗಳು. ಅದರಲ್ಲಿ ಹೆಚ್ಚಿನವರು ಹುತಾತ್ಮರಾದವರು. ಅವರಿಗೆಲ್ಲ ವಿವಿಧ ಸೇನಾ ಶೌರ್ಯ ಪ್ರಶಸ್ತಿಗಳನ್ನು ನೀಡಿ ಭಾರತ ಸರಕಾರವು ಗೌರವಿಸಿತು.

ಕಾರ್ಗಿಲ್ ಯುದ್ಧದ ಫಲಶ್ರುತಿ ಏನೆಂದರೆ ಮುಂದೆ ಭಾರತವು ಎಂದಿಗೂ ಪಾಕಿಸ್ತಾನವನ್ನು ನಂಬಲಿಲ್ಲ ಮತ್ತು ಪಾಕಿಸ್ತಾನ ಯಾವತ್ತೂ ಭಾರತದ ಮೇಲೆ ಮತ್ತೆ ದಂಡೆತ್ತಿ ಬರುವ ಸಾಹಸವನ್ನು ಮಾಡಲಿಲ್ಲ!

ಜೈ ಹಿಂದ್.

ಇದನ್ನೂ ಓದಿ: ರಾಜಮಾರ್ಗ ಅಂಕಣ:  ಕನ್ನಡದ ಶ್ರೇಷ್ಠ ಲೇಖಕ ನಿರಂಜನರನ್ನು ನಾಡು ಮರೆತರೆ ಹೇಗೆ?

Continue Reading

ಪ್ರವಾಸ

Travel Tips: ಪ್ರಯಾಣದ ಪ್ರಯಾಸದಿಂದ ಪಾರಾಗುವುದು ಹೇಗೆ?

Travel Tips: ವಾರಾಂತ್ಯದಲ್ಲಿ ಮಳೆಗಾಲಕ್ಕೊಂದು ಮಜವಾದ ಟ್ರಿಪ್‌ ಹಾಕೋಣವೆಂದು ಕುಟುಂಬದವರೆಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಪ್ರಯಾಣವೆಂದರೆ ನಿಮಗೆ ಪ್ರಯಾಸ! ಟ್ರಾವೆಲ್‌ ಸಿಕ್‌ನೆಸ್‌ ಅಥವಾ ಪ್ರಯಾಣದ ಅಸ್ವಸ್ಥತೆ ಎನ್ನುವುದು ಏನಂಥ ದೊಡ್ಡ ವಿಷಯವಲ್ಲದಿದ್ದರೂ, ಮೊಣಕೈಗೆ ಕುಟ್ಟಿದಂತೆ! ಪ್ರಯಾಣ ಸುಖಕರಗೊಳಿಸುವುದು ಹೇಗೆ? ಇಲ್ಲಿದೆ ಪ್ರವಾಸ ಪ್ರಿಯರಿಗೆ ಉಪಯುಕ್ತ ಮಾಹಿತಿ.

VISTARANEWS.COM


on

Travel Tips
Koo

ಮಳೆಗಾಲ (Travel Tips) ಜೋರಾಗಿದೆ. ಎಲ್ಲ ನದಿಗಳೂ ಭೋರ್ಗರೆಯುತ್ತಿವೆ. ಯಾವುದೋ ಬೆಟ್ಟದ ತುದಿಯಿಂದ, ಗುಡ್ಡದ ಅಂಚಿನಿಂದ ಧುಮ್ಮಿಕ್ಕುವ ಜಲಪಾತವನ್ನು ನೋಡುವ ಉತ್ಸಾಹ ನಿಮಗಿದೆ. ವಾರಾಂತ್ಯದಲ್ಲಿ ಮಳೆಗಾಲಕ್ಕೊಂದು ಮಜವಾದ ಟ್ರಿಪ್‌ ಹಾಕೋಣವೆಂದು ಕುಟುಂಬದವರೆಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಪ್ರಯಾಣವೆಂದರೆ ನಿಮಗೆ ಪ್ರಯಾಸ! ಗಾಡಿ ಹತ್ತಿದ ಸ್ವಲ್ಪವೇ ಹೊತ್ತಿನಲ್ಲಿ ತಲೆನೋವು, ತಲೆ ಸುತ್ತು, ಹೊಟ್ಟೆ ತೊಳೆಸುವುದು, ವಾಂತಿ… ದೇವರೇ! ಒಂದೆರಡೇ ಅಲ್ಲ ನಿಮ್ಮ ಅವಸ್ಥೆ. ಮೋಷನ್‌ ಸಿಕ್‌ನೆಸ್‌, ಟ್ರಾವೆಲ್‌ ಸಿಕ್‌ನೆಸ್‌ ಅಥವಾ ಪ್ರಯಾಣದ ಅಸ್ವಸ್ಥತೆ ಎನ್ನುವುದು ಏನಂಥ ದೊಡ್ಡ ವಿಷಯವಲ್ಲದಿದ್ದರೂ, ಮೊಣಕೈಗೆ ಕುಟ್ಟಿದಂತೆ! ಉಳಿದವರಿಗೆ ಅದರ ನೋವು ತಿಳಿಯುವುದಿಲ್ಲ, ನೋವಾದವರಿಗೆ ತಡೆಯಲಾಗುವುದಿಲ್ಲ!
ಪ್ರಯಾಣದ ಅಸ್ವಸ್ಥತೆ ಕೇವಲ ಬಸ್ಸು, ಕಾರಿನ ಪ್ರವಾಸದಲ್ಲೇ ಬರಬೇಕೆಂದಿಲ್ಲ. ಹಡಗು, ರೈಲು, ವಿಮಾನಗಳಿಂದ ಹಿಡಿದು ಯಾವುದೇ ವಾಹನದ ಮೂಲಕ ಪ್ರಯಾಣಿಸಿದರೂ ಹೊಟ್ಟೆಯಲ್ಲಿ ತೌಡು ಕುಟ್ಟುವುದಕ್ಕೆ ಶುರು. ಅದರಲ್ಲೂ ಹೋಗುವ ದಾರಿ ಹಾವಿನಂತೆ ಸಾಗುವುದಾದರೆ, ಅವರ ಅವಸ್ಥೆ ಶತ್ರುಗಳಿಗೂ ಬೇಡ. ಅಲ್ಲಿಯವರೆಗೆ ನಗುನಗುತ್ತ ಇದ್ದವರು ಇದ್ದಕ್ಕಿದ್ದಂತೆ ಹೈರಾಣಾಗಿ ಹೋಗುತ್ತಾರೆ. ಕೆಲವರು ಮಾತ್ರೆಯೊಂದನ್ನು ನುಂಗಿ ಗಪ್ಪಾಗಿ ಕೂತರೆ, ಹಲವರಿಗೆ ಅದನ್ನು ಸೇವಿಸಿದರೂ ಹೊಟ್ಟೆಯೊಳಗೆ ಭೂಮಿ ತಿರುಗುವುದು ತಪ್ಪುವುದಿಲ್ಲ. ಕೆಲವು ಕ್ರಮಗಳನ್ನು ಅನುಸರಿಸುವುದರಿಂದ ಹೆಚ್ಚಿನ ತಾಪತ್ರಯವಿಲ್ಲದೆ ಸುಲಲಿತವಾಗಿ ಪ್ರಯಾಣದ ಸುಖವನ್ನು ಅನುಭವಿಸುವುದಕ್ಕೆ ಸಾಧ್ಯವಿದೆ.

Woman Meditating in the Workplace Sitting in Front of a Laptop Practicing Stress Relief Exercises Ashwagandha Herb Benefits

ಆಸನ ಯಾವುದು?

ಇಲ್ಲಿಂದಲೇ ನಿಮ್ಮ ಸುಖಕರ ಪ್ರಯಾಣದ ಸಿದ್ಧತೆ ಆರಂಭವಾಗುತ್ತದೆ. ಕಾರಿನಲ್ಲಿ ಪ್ರಯಾಣವಾದರೆ ಮುಂದಿನ ಸೀಟ್‌ ಮಾತ್ರವೇ ನಿಮ್ಮದು. ಹಿಂದಿನ ಆಸನಗಳಲ್ಲಿ ಕುಲುಕಾಟ ಹೆಚ್ಚಿರುವುದರಿಂದ ಹೊಟ್ಟೆ ತೊಳೆಸುವ ಸಾಧ್ಯತೆ ಅಧಿಕ. ಬಸ್ಸಿನಲ್ಲಿ ಮಧ್ಯಮ ಆಸನಗಳಿಗಿಂತ ಹಿಂದೆ ಹೋಗಬೇಡಿ. ಅದರಲ್ಲೂ ಗಾಲಿ ಮೇಲಿನ ಆಸನಗಳು ನಿಮಗಲ್ಲವೇ ಅಲ್ಲ. ವಿಮಾನದಲ್ಲಾದರೆ ರೆಕ್ಕೆ ಮೇಲಿನ ಆಸನಗಳನ್ನು ಆಯ್ದುಕೊಳ್ಳಿ.

ದೃಷ್ಟಿ ಕೀಲಿಸಿ

ಕಿಟಕಿಯ ಪಕ್ಕದ ಆಸನಗಳು ಎಲ್ಲರಿಗೂ ಇಷ್ಟ. ಆದರೆ ದಾರಿಯಲ್ಲಿ ನಮ್ಮೊಂದಿಗೇ ಓಡುತ್ತಿರುವ ವಸ್ತುಗಳನ್ನು ದಿಟ್ಟಿಸಿದರೆ, ಹೊಟ್ಟೆಯಲ್ಲೂ ಇಲಿಗಳ ಓಡಾಟ ಆರಂಭವಾಗುತ್ತದೆ. ಹಾಗಾಗಿ ಸಾಧ್ಯವಾದರೆ ಸೂರ್ಯೋದಯ, ಸೂರ್ಯಾಸ್ತ, ಚಂದ್ರ, ದಿಗಂತ… ಹೀಗೆ ಸ್ತಿರವಾಗಿರುವ ಯಾವುದಾದರೂ ವಸ್ತುವಿನತ್ತ ಕಣ್ಣು ಕೀಲಿಸಿ. ಮೊಬೈಲ್‌ ನೋಡುವುದು, ಓದುವುದು ಬೇಡ. ಬದಲಿಗೆ ಕಣ್ಣು ಮುಚ್ಚಿಕೊಂಡು ನಿಮ್ಮಿಷ್ಟ ಹಾಡು ಹೇಳುವುದು ಒಳ್ಳೆಯ ಕ್ರಮ.

Happy Woman at the Beach with Spread Arms

ತಾಜಾ ಗಾಳಿ

ಹವಾನಿಯಂತ್ರಣ ಇದ್ದರೆ, ಕಿಟಕಿ ಮುಚ್ಚಿದ್ದರೆ ಹಲವರಿಗೆ ಹೊಟ್ಟೆಯೆಲ್ಲ ಮೊಗುಚುತ್ತದೆ. ನೀವು ಕುಳಿತಿದ್ದೆಡೆಗೆ ತಾಜಾ ಗಾಳಿ ಇರುವಂತೆ ನೋಡಿಕೊಳ್ಳಿ. ಬಸ್ಸು, ಕಾರುಗಳಲ್ಲಿ ಕಿಟಕಿ ತೆರೆಯುವುದು ಸರಿ. ವಿಮಾನದಲ್ಲೇನು ಮಾಡುವುದು ಎಂದು ಕೇಳಬಹುದು. ವೆಂಟ್‌ಗಳ ತೀವ್ರತೆ ಕಡಿಮೆ ಮಾಡಿ, ಅವುಗಳು ನೇರವಾಗಿ ನಿಮಗೇ ತಾಗುವಂತೆ ಇರಿಸಿಕೊಳ್ಳಿ. ಗಾಳಿಯ ಓಡಾಡ ಹೆಚ್ಚಿದ್ದಷ್ಟೂ ಹೊಟ್ಟೆಯಲ್ಲಿ ತಳಮಳ ಕಡಿಮೆಯಾಗುತ್ತದೆ.

ಆಹಾರ

ಹೊರಡುವ ಮುನ್ನ ಭೂರಿ ಭೋಜನವನ್ನು ಯಾರಾದರು ಬಿಟ್ಟಿ ಕೊಟ್ಟರೂ ಮಾಡಬೇಡಿ! ಆಹಾರ ಲಘುವಾಗಿರಲಿ. ಎಣ್ಣೆ, ಮಸಾಲೆ, ಖಾರದ ತಿನಿಸುಗಳು ಬೇಡ. ಹಣ್ಣುಗಳು, ದೋಸೆ-ಚಪಾತಿಯಂಥ ಲಘುವಾದ ತಿನಿಸುಗಳು ಸಾಕು. ನೀರನ್ನು ಯಥೇಚ್ಛವಾಗಿ ಕುಡಿಯಿರಿ. ಆಲ್ಕೋಹಾಲ್‌ ಮತ್ತು ಕೆಫೇನ್‌ ಸೇವನೆ ಖಂಡಿತ ಬೇಡ.

Stress Reduction Tea Benefits

ವಿರಾಮ ತೆಗೆದುಕೊಳ್ಳಿ

ರಸ್ತೆ ಪ್ರಯಾಣವಾದರೆ, ವಾಹನ ನಿಮ್ಮದೇ ಆದರೆ, ನಡುವಿಗೆ ವಿರಾಮ ತೆಗೆದುಕೊಳ್ಳಿ. ಇದರಿಂದ ತಾಜಾ ಗಾಳಿಗೆ ಬಂದಂತೆಯೂ ಆಗುತ್ತದೆ, ಕೈ-ಕಾಲುಗಳಿಗೆ ಸ್ವಲ್ಪ ಚಲನೆ ದೊರೆತಂತೆಯೂ ಆಗುತ್ತದೆ. ನಡೆಯುವಾಗ ಚೆನ್ನಾಗಿ ಸ್ಟ್ರೆಚ್‌ ಮಾಡಿ. ಗಮ್ಯ ತಲುಪುವುದು ಕೊಂಚ ತಡವಾದರೂ, ನೆಮ್ಮದಿಯ ಪ್ರಯಾಣ ನಿಮ್ಮದಾಗುತ್ತದೆ.

ಇದನ್ನೂ ಓದಿ: Contact Lens: ಕಾಂಟ್ಯಾಕ್ಟ್‌ ಲೆನ್ಸ್‌ ಬಳಸುತ್ತೀರಾ? ಈ ವಿಷಯಗಳು ತಿಳಿದಿರಲಿ!

ಮನೆಮದ್ದುಗಳು

ಭಾವನಾ ಶುಂಠಿ ಅಥವಾ ಪೆಪ್ಪರ್‌ಮಿಂಟ್‌ಗಳು ಈ ನಿಟ್ಟಿನಲ್ಲಿ ಸಹಕಾರಿ. ಶುಂಠಿ ಅಥವಾ ಕ್ಯಾಮೊಮೈಲ್‌ ಚಹಾ, ನಿಂಬೆಹಣ್ಣಿನ ಕ್ಯಾಂಡಿ ಮುಂತಾದವು ಹೊಟ್ಟೆ ತೊಳೆಸುವ ಅನುಭವವನ್ನು ನಿಯಂತ್ರಣಕ್ಕೆ ತರುತ್ತವೆ. ನಿಂಬೆ ಹಣ್ಣನ್ನು ಕೈಯಲ್ಲಿ ಹಿಡಿದು, ಅದರ ಸಿಪ್ಪೆಯನ್ನೊಮ್ಮೆ ಉದುರಿನಲ್ಲಿ ಚುಚ್ಚಿದರೆ, ಸೊನೆಯ ಘಮ ಬರುತ್ತದೆ. ಇದನ್ನೆ ಮೂಸುತ್ತಿದ್ದರೆ ಹೊಟ್ಟೆಯಲ್ಲಿ ತಳಮಳ ಹುಟ್ಟುವುದಿಲ್ಲ. ಯಾವುದೇ ಸಾರಸತ್ವ ತೈಲದ ಒಂದೆರಡು ಹನಿಗಳನ್ನು ಕರ್ಚೀಫಿನಲ್ಲಿ ಹಾಕಿಕೊಂಡು, ಘಮ ತೆಗೆದುಕೊಳ್ಳುತ್ತಾ ಇರುವುದೂ ಪರಿಣಾಮಕಾರಿ.

Continue Reading

ಭವಿಷ್ಯ

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದೀತು ಎಚ್ಚರ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷದ ಷಷ್ಠಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

dina Bhavishya
Koo

ಚಂದ್ರನು ಶುಕ್ರವಾರ ಮೇಷ ರಾಶಿಯಲ್ಲೇ ನೆಲೆಸಲಿದ್ದಾನೆ. ಇದರಿಂದ ವೃಷಭ, ಮಿಥುನ, ಕನ್ಯಾ, ತುಲಾ, ಮಕರ, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ವೃಷಭ ರಾಶಿಯವರು ದೀರ್ಘಕಾಲದ ಹೂಡಿಕೆ ವ್ಯವಹಾರದಲ್ಲಿ ಪ್ರಗತಿಯೊಂದಿಗೆ ಲಾಭ ಪಡೆಯುವಿರಿ. ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಆಹಾರ ಕ್ರಮದಲ್ಲಿ ವ್ಯತ್ಯಾಸದಿಂದಾಗಿ ಸ್ವಲ್ಪ ಆರೋಗ್ಯದ ಕಡೆಗೆ ಗಮನ ಹರಿಸಿ. ತುಲಾ ರಾಶಿಯವರು ಪ್ರಭಾವಿ ಜನರ ಬೆಂಬಲ ಸಿಗಲಿದೆ. ಇದರಿಂದ ನೈತಿಕ ಸ್ಥೈರ್ಯ ಹೆಚ್ಚಾಗಲಿದೆ. ಒಡ ಹುಟ್ಟಿದವರ ಸಹಕಾರ ಸಿಗಲಿದೆ. ಆತುರದಲ್ಲಿ ಯಾರೊಂದಿಗೂ ಅತಿರೇಕದ ಮಾತುಗಳನ್ನು ಆಡಿ, ಅಪಾಯ ತಂದುಕೊಳ್ಳುವುದು ಬೇಡ. ದಿನದ ಮಟ್ಟಿಗೆ ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (26-07-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ.
ತಿಥಿ: ಷಷ್ಠಿ 23:29 ವಾರ: ಶುಕ್ರವಾರ
ನಕ್ಷತ್ರ: ಉತ್ತರ ಭಾದ್ರಪದ 14:29 ಯೋಗ: ಸುಕರ್ಮ 25:30
ಕರಣ: ಗರಜ 12:41 ಅಮೃತಕಾಲ: ಬೆಳಗ್ಗೆ 10:03 ರಿಂದ 11:32 ರವರೆಗೆ
ದಿನದ ವಿಶೇಷ: ಬಾಲಗಂಗಾಧರ ತಿಲಕ್‌ ಜಯಂತಿ, ಆಷಾಢ ಶುಕ್ರವಾರ, ಮೇಲುಕೋಟೆ ಕೃಷ್ಣ ರಾಜಮುಡೀ ಉತ್ಸವ

ಸೂರ್ಯೋದಯ : 06:54   ಸೂರ್ಯಾಸ್ತ : 06:48

ರಾಹುಕಾಲ: ಬೆಳಗ್ಗೆ 10.30 ರಿಂದ 12.00
ಗುಳಿಕಕಾಲ: ಬೆಳಗ್ಗೆ 7.30 ರಿಂದ 9.00
ಯಮಗಂಡಕಾಲ: ಮಧ್ಯಾಹ್ನ 3.00 ರಿಂದ 4.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಆಪ್ತರ ವರ್ತನೆಯಿಂದ ನಿಮ್ಮ ಮನಸ್ಸಿಗೆ ನೋವಾಗುವ ಸಾಧ್ಯತೆಗಳು ಹೆಚ್ಚು, ತಾಳ್ಮೆಯಿಂದ ಇರಿ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ತಲೆದೋರಬಹುದು, ಮಾತಿನಲ್ಲಿ ಹಿಡಿತವಿರಲಿ. ದಿನದ ಮಟ್ಟಿಗೆ ಹಣಕಾಸಿನ ಹೂಡಿಕೆ ವ್ಯವಹಾರ ಮಾಡುವುದು ಬೇಡ. ಆರೋಗ್ಯದ ಬಗೆಗೆ ವಿಶೇಷ ಕಾಳಜಿ ಇರಲಿ. ಉದ್ಯೋಗಿಗಳಿಗೆ ಮಧ್ಯಮ ಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 4

Horoscope Today

ವೃಷಭ: ದೀರ್ಘಕಾಲದ ಹೂಡಿಕೆ ವ್ಯವಹಾರದಲ್ಲಿ ಪ್ರಗತಿಯೊಂದಿಗೆ ಲಾಭ ಪಡೆಯುವಿರಿ. ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಆಹಾರ ಕ್ರಮದಲ್ಲಿ ವ್ಯತ್ಯಾಸದಿಂದಾಗಿ ಸ್ವಲ್ಪ ಆರೋಗ್ಯದ ಕಡೆಗೆ ಗಮನ ಹರಿಸಿ. ಹಿರಿಯರಿಂದ ಮಾರ್ಗದರ್ಶನ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 4

Horoscope Today

ಮಿಥುನ: ಯಾರಾದರೂ ನಿಮ್ಮ ಸಹಾಯ ಬೇಡಿ ಬರುವರು, ವಿಮರ್ಶಿಸಿ ಸಹಾಯ ಮಾಡಿ. ಆರ್ಥಿಕ ಪ್ರಗತಿ ದಿನದ ಮಟ್ಟಿಗೆ ಸಾಧಾರಣವಾಗಿರಲಿದೆ. ಯಾರಾದರೂ ನಿಮ್ಮ ಭಾವನೆಗಳನ್ನು ನಿರಾಸೆ ಮಾಡುವ ಸಾಧ್ಯತೆ ಇದೆ. ಅವರ ಮಾತನ್ನು ಲಕ್ಷಿಸದೆ ಕಾರ್ಯದಲ್ಲಿ ಮುನ್ನುಗ್ಗಿ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಹೊಸ ಭರವಸೆಯ ಆಶಾಭಾವನೆ ಮೂಡಲಿದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 2

Horoscope Today

ಕಟಕ: ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರಿಕೆ ವಹಿಸಿ. ಕೆಲವು ಆಘಾತಗಳನ್ನು ಎದುರಿಸುವುದರಿಂದ ಧೈರ್ಯದಿಂದ ಇರಿ. ನಿಮ್ಮ ಆಸೆ-ಆಕಾಂಕ್ಷೆಗಳು ಯಶಸ್ಸನ್ನು ತಂದುಕೊಡಲಿವೆ. ಪ್ರಯಾಣ ಮಾಡುವ ಮತ್ತು ಹಣ ಖರ್ಚು ಮಾಡುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 5

Horoscope Today

ಸಿಂಹ: ದೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರ ಹುಡುಕಲು ಸಾಧ್ಯವಾಗಬಹುದು. ವ್ಯಾಪಾರ ವ್ಯವಹಾರಗಳಲ್ಲಿ ಆರ್ಥಿಕವಾಗಿ ಲಾಭ ಕಡಿಮೆ ಇರಲಿದೆ. ಹೊಸ ಆಲೋಚನೆಗಳು ನಿಮ್ಮನ್ನು ಸೃಜನಾತ್ಮಕವಾಗಿ ಏನಾದರೂ ಮಾಡಲು ಪ್ರಯತ್ನಿಸುವಂತೆ ಮಾಡುವಂತೆ ಪ್ರೇರೇಪಿಸುತ್ತದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 3

Horoscope Today

ಕನ್ಯಾ: ಕುಟುಂಬದ ಆಪ್ತರೊಂದಿಗೆ ಸಂತಸ ಹಂಚಿಕೊಳ್ಳವಿರಿ. ಹಣಕಾಸು ಪರಿಸ್ಥಿತಿ ಸಾಧಾರಣವಾಗಿರಲಿದೆ. ದಿನದ ಮಟ್ಟಿಗೆ ಖರ್ಚು ಇರಲಿದೆ. ದುಬಾರಿ ವಸ್ತುಗಳನ್ನು ಖರೀದಿಸುವ ಮುನ್ನ ನಿಮ್ಮ ಹಣಕಾಸಿನ ಪರಿಸ್ಥಿತಿ ನೋಡಿಕೊಂಡು ಹಾಸಿಗೆ ಇದ್ದಷ್ಟು ಕಾಲು ಚಾಚಿ. ಆರೋಗ್ಯ ಮಧ್ಯಮವಾಗಿರಲಿದೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಪ್ರಭಾವಿ ಜನರ ಬೆಂಬಲ ಸಿಗಲಿದೆ. ಇದರಿಂದ ನೈತಿಕ ಸ್ಥೈರ್ಯ ಹೆಚ್ಚಾಗಲಿದೆ. ಒಡ ಹುಟ್ಟಿದವರ ಸಹಕಾರ ಸಿಗಲಿದೆ. ಆತುರದಲ್ಲಿ ಯಾರೊಂದಿಗೂ ಅತಿರೇಕದ ಮಾತುಗಳನ್ನು ಆಡಿ, ಅಪಾಯ ತಂದುಕೊಳ್ಳುವುದು ಬೇಡ. ದಿನದ ಮಟ್ಟಿಗೆ ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ ಅದೃಷ್ಟ ಸಂಖ್ಯೆ: 4

Horoscope Today

ವೃಶ್ಚಿಕ: ಸಕಾರಾತ್ಮಕ ಆಲೋಚನೆಗಳು ಪುಷ್ಟಿ ನೀಡಿ, ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಇಂದು ಹಣಕಾಸಿನ ಹೂಡಿಕೆ ವ್ಯವಹಾರ ಮಾಡುವುದು ಬೇಡ. ವ್ಯಾಪಾರದಲ್ಲಿ ಯಶಸ್ಸು ಸಿಗಲಿದೆ. ಪ್ರಯಾಣದಿಂದ ಲಾಭ ಇರಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 6

Horoscope Today

ಧನಸ್ಸು: ಭಾವನಾ ಜೀವಿಗಳಾದ ನೀವು ನಕಾರಾತ್ಮಕ ಆಲೋಚನೆಗಳಿಂದ ದೂರ ಇರಿ. ಆಧ್ಯಾತ್ಮಿಕ ವ್ಯಕ್ತಿಗಳ ಮಾರ್ಗದರ್ಶನ, ಕ್ಷೇತ್ರ ದರ್ಶನ ಪಡೆದು ಮಾನಸಿಕ ನೆಮ್ಮದಿ ತಂದುಕೊಳ್ಳುವುದು ಅವಶ್ಯಕವಿದೆ. ಮಕ್ಕಳ ಆರೋಗ್ಯದ ಕಡೆಗೆ ಗಮನ ಹರಿಸಿ. ಹಣಕಾಸು, ವ್ಯಾಪಾರ ವ್ಯವಹಾರಗಳಲ್ಲಿ ಸಾಧಾರಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 3

Horoscope Today

ಮಕರ: ಭರವಸೆಯ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಸ್ನೇಹಿತರೊಂದಿಗೆ ಸಮಯ ಕಳೆಯುವ ಸಾಧ್ಯತೆ ಇದೆ. ನಿಮ್ಮ ಶಕ್ತಿ ಸಾಮರ್ಥ್ಯವನ್ನು ಕೆಲಸ ಕಾರ್ಯಗಳಲ್ಲಿ ಬಳಸಿಕೊಂಡರೆ ಇನ್ನೂ ಹೆಚ್ಚು ಆಕರ್ಷಕ ವ್ಯಕ್ತಿತ್ವ ವಿಕಸನ ಆಗುತ್ತದೆ. ಆರೋಗ್ಯ ಉತ್ತಮವಾಗಿರಲಿದೆ. ದಿನದ ಮಟ್ಟಿಗೆ ಖರ್ಚು ಇರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 3

Horoscope Today

ಕುಂಭ:ಅತಿಥಿಗಳ ಆಗಮನ ಸಂತಸ ತರುವುದು. ಆತ್ಮವಿಶ್ವಾಸದ ಹೊಸ ಭರವಸೆ ಮೂಡಲಿದೆ. ಹೂಡಿಕೆಯ ಲಾಭ ಇಂದು ಉಪಯೋಗಕ್ಕೆ ಬರುವುದು.ದೀರ್ಘಕಾಲದ ಪ್ರಯತ್ನ ಇಂದು ಯಶಸ್ಸು ತಂದು ಕೊಡಲಿದೆ.ಆರೋಗ್ಯ, ಉದ್ಯೋಗದಲ್ಲಿ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 1

Horoscope Today

ಮೀನ: ಅತಿರೇಕದಲ್ಲಿ ಮಾತನಾಡಿ ಅಪಾಯ ತಂದುಕೊಳ್ಳುವುದು ಬೇಡ.ಕೋಪಗೊಳ್ಳುವಂತೆ ಉದ್ರೇಕವಾಗುವ ವಿಷಯಗಳಿಂದ ದೂರ ಇರಿ.ತಾಳ್ಮೆಯಿಂದ ವರ್ತಿಸಿ.ಉದ್ಯೋಗಿಗಳಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 7

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading
Advertisement
Paris Olympics 2024
ಕ್ರೀಡೆ7 mins ago

Paris Olympics 2024: ನೀರಿನಾಳದಲ್ಲಿ ಅಭ್ಯಾಸ ನಡೆಸಿದ ನೀರಜ್ ಚೋಪ್ರಾ; ವಿಡಿಯೊ ವೈರಲ್​

PM Narendra Modi Live
ದೇಶ12 mins ago

PM Narendra Modi Live: ಕಾರ್ಗಿಲ್‌ ಯುದ್ಧ ಸ್ಮಾರಕಕ್ಕೆ ಪ್ರಧಾನಿ ಮೋದಿ ಭೇಟಿ, ವೀರ ಯೋಧರಿಗೆ ಗೌರವ ನಮನ-ಲೈವ್‌ ಇಲ್ಲಿ ವೀಕ್ಷಿಸಿ

police firing hubli
ಕ್ರೈಂ23 mins ago

Police Firing: ದರೋಡೆ, ಕೊಲೆ ಆರೋಪಿ ಕಾಲಿಗೆ ಗುಂಡು ಹಾರಿಸಿ ಸೆರೆ

Actor Yash Case Against Toxic Movie Producers For Building A Set On Forest Land
ಸ್ಯಾಂಡಲ್ ವುಡ್32 mins ago

Actor Yash: ಯಶ್‌ ನಟನೆಯ ʻಟಾಕ್ಸಿಕ್‌ʼ ಸಿನಿಮಾ ವಿರುದ್ಧ ದೂರು ದಾಖಲು

Women's Asia Cup
ಕ್ರೀಡೆ44 mins ago

Women’s Asia Cup: ಇಂದು ಸೆಮಿಫೈನಲ್‌ ಕಾದಾಟ: ಬಾಂಗ್ಲಾ ಸವಾಲಿಗೆ ಭಾರತ ಸಜ್ಜು

murder in PG koramangala
ಕ್ರೈಂ48 mins ago

Murder In PG: ಕೃತಿ ಕುಮಾರಿಗೆ ಮನಬಂದಂತೆ ಇರಿದ ಪಾತಕಿ, ನೋಡ್ತಾ ಇದ್ರೂ ಸಹಾಯಕ್ಕೆ ಬಾರದ ಯುವತಿಯರು

Actor Darshan wife Vijayalakshmi Darshan Visit Kollur Temple
ಸ್ಯಾಂಡಲ್ ವುಡ್1 hour ago

Actor Darshan: ದರ್ಶನ್‌ಗಾಗಿ ಕೊಲ್ಲೂರು ಮೂಕಾಂಬಿಕೆ ಮೊರೆ ಹೋದ ವಿಜಯಲಕ್ಷ್ಮಿ!

tumkur news temple mall
ತುಮಕೂರು1 hour ago

Tumkur News: ದೇವಸ್ಥಾನ ಕೆಡವಿ ಮಾಲ್‌ ಕಟ್ಟಲು ಮುಂದಾದ ಪಾಲಿಕೆ, ಹಿಂದು ಸಂಘಟನೆಗಳ ವಿರೋಧ

Paris Olympics
ಕ್ರೀಡೆ1 hour ago

Paris Olympics: ಇಂದು ಪ್ಯಾರಿಸ್​ ಒಲಿಂಪಿಕ್ಸ್​ಗೆ ಅಧಿಕೃತ ಚಾಲನೆ: ಉದ್ಘಾಟನಾ ಸಮಾರಂಭ ಎಷ್ಟು ಗಂಟೆಗೆ ಆರಂಭ?

Viral video
ವೈರಲ್ ನ್ಯೂಸ್1 hour ago

Viral Video: ಲಿಫ್ಟ್‌ನಲ್ಲಿ ಯುವಕನ ಕೈಯಲ್ಲಿದ್ದ ಲೀಥಿಯಂ ಬ್ಯಾಟರಿ ಬ್ಲಾಸ್ಟ್‌; ಅಬ್ಬಾ ಎಂಥಾ ಭೀಕರ ದೃಶ್ಯ!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ17 hours ago

Karnataka Rain : ಮನೆಯೊಳಗೆ ನುಗ್ಗಿದ ಮಳೆ ನೀರು; ಕಾಲು ಜಾರಿ ಬಿದ್ದು ವೃದ್ಧೆ ಸಾವು

Actor Darshan
ಸ್ಯಾಂಡಲ್ ವುಡ್21 hours ago

Actor Darshan: ನಟ ದರ್ಶನ್ ಇರುವ ಜೈಲು ಕೋಣೆ ಹೇಗಿದೆ?

Actor Darshan
ಸಿನಿಮಾ21 hours ago

Actor Darshan : ಹೆಂಡ್ತಿ ಮಕ್ಕಳೊಟ್ಟಿಗೆ ಚೆನ್ನಾಗಿರು.. ಸಹಕೈದಿ ಜತೆಗೆ 12 ನಿಮಿಷ ಕಳೆದ ನಟ ದರ್ಶನ್‌

Actor Darshan
ಸಿನಿಮಾ22 hours ago

Actor Darshan: ಆಧ್ಯಾತ್ಮದತ್ತ ವಾಲಿದ ದರ್ಶನ್‌; ಜೈಲಲ್ಲಿ ಹೇಗಿದೆ ಗೊತ್ತಾ ನಟನ ಬದುಕು

karnataka Weather Forecast
ಮಳೆ2 days ago

Karnataka Weather : ರಭಸವಾಗಿ ಸುರಿಯುವ ಮಳೆ; 50 ಕಿ.ಮೀ ವೇಗದಲ್ಲಿ ಬೀಸುತ್ತೆ ಗಾಳಿ

karnataka weather Forecast
ಮಳೆ3 days ago

Karnataka Weather : ರಾಜ್ಯದಲ್ಲಿ ಮುಂದುವರಿದ ಮಳೆ ಅವಾಂತರ; ನಾಳೆಯೂ ಇರಲಿದೆ ಅಬ್ಬರ

Udupi News
ಉಡುಪಿ3 days ago

Udupi News : ಹಳೆ ಲಾರಿ ಚಾಸ್ಸಿಯಲ್ಲೇ ಕಿರು ಸೇತುವೆ ನಿರ್ಮಾಣ! ಬೈಂದೂರು ಶಾಸಕರ ಪರಿಕಲ್ಪನೆಗೆ ಜನರು ಫಿದಾ

murder case
ರಾಮನಗರ3 days ago

Murder Case : ರಾಮನಗರದಲ್ಲೊಂದು ಪೈಶಾಚಿಕ ಕೃತ್ಯ; ಅತ್ಯಾಚಾರವೆಸಗಿ 4 ವರ್ಷದ ಬಾಲಕಿಯನ್ನು ಕೊಂದ ದುಷ್ಟ

karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಮನೆ ಗೋಡೆ ಕುಸಿತ; ಕೊಟ್ಟಿಗೆಯಲ್ಲಿದ್ದ ಜಾನುವಾರುಗಳು ಸಾವು

karnataka Rain
ಮಳೆ6 days ago

Karnataka Rain : ಹಳ್ಳ ದಾಟಲು ಹೋಗಿ ನೀರುಪಾಲಾದ ಜಾನುವಾರು; ಬಿರುಗಾಳಿಗೆ ಕಳಚಿದ ವಿಂಡ್‌ ಫ್ಯಾನ್‌

ಟ್ರೆಂಡಿಂಗ್‌