ವಿಸ್ತಾರ ಅಂಕಣ: ಮಥುರಾದಲ್ಲೂ ಗತವೈಭವ ಮರುಕಳಿಸುವ ದಿನಗಳು ದೂರವಿಲ್ಲ - Vistara News

ಪ್ರಮುಖ ಸುದ್ದಿ

ವಿಸ್ತಾರ ಅಂಕಣ: ಮಥುರಾದಲ್ಲೂ ಗತವೈಭವ ಮರುಕಳಿಸುವ ದಿನಗಳು ದೂರವಿಲ್ಲ

ವಿಸ್ತಾರ ಅಂಕಣ; ಕಾನೂನಿನ ತೊಡಕುಗಳು ಆದಷ್ಟು ಬೇಗ ನಿವಾರಣೆಯಾದಲ್ಲಿ ರಾಮಜನ್ಮಭೂಮಿಯ ಹಾಗೇ ಕೃಷ್ಣಜನ್ಮಭೂಮಿಯಲ್ಲೂ ಫ್ರೆಂಚ್ ವ್ಯಾಪಾರಿ ವರ್ಣಿಸಿದ ಹಳೆ ವೈಭವ ಮತ್ತೊಮ್ಮೆ ತಲೆ ಎತ್ತಲಿದೆ.

VISTARANEWS.COM


on

mathura krishna
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Vistara Column @ Hariprakash Konemane

ಧರ್ಮ ಯಾವುದೇ ಇರಲಿ. ಎಲ್ಲರ ಮನೆಗಳಲ್ಲೂ ಅವರವರ ಧಾರ್ಮಿಕ ನಂಬಿಕೆಗಳಿಗನುಗುಣವಾದ ಸಂಕೇತಗಳಿರುತ್ತವೆ. ಮನೆಯೊಳಗೆ ಒಂದು ಪೂಜಾಕೇಂದ್ರ, ಪೂಜಾಪದ್ಧತಿ ಪರಂಪರಾನುಗತವಾಗಿ ನಡೆದುಕೊಂಡು ಬಂದಿರುತ್ತದೆ. ಇದ್ದಕ್ಕಿದ್ದಂತೆ ಯಾರೋ ಕಳ್ಳ ಮನೆಗೆ ನುಗ್ಗಿ ಎಲ್ಲವನ್ನೂ ದೋಚಿದ್ದಲ್ಲದೇ ಆ ಮನೆಯ ದೇವಮಂದಿರವನ್ನು ಕೆಡವಿ ತನ್ನ ದೇವರನ್ನು ಅಲ್ಲಿ ಸ್ಥಾಪಿಸಿ, ನೀವಿನ್ನು ಈ ಮನೆಯಲ್ಲಿ ವಾಸಿಸಬಹುದು. ಆದರೆ ನಿಮ್ಮ ದೇವರ ಪೂಜಾಸ್ಥಳ ಮಾತ್ರ ನನ್ನದು ಅಂದರೆ ಹೇಗಾಗಬೇಡ? ದೇಶವನ್ನೆ ಒಂದು ಮನೆ ಎಂದು ಭಾವಿಸಿದರೆ ನಮ್ಮ ಧಾರ್ಮಿಕ ಶ್ರದ್ಧಾಕೇಂದ್ರಗಳೇ ನಮ್ಮ ಪೂಜಾಸ್ಥಳಗಳು. ದೇವಾಲಯಗಳನ್ನು ಧ್ವಂಸಮಾಡಿ, ಅದರ ಮೇಲೆ ಮಸೀದಿ ಕಟ್ಟಿದ ಮೊಘಲರ ನಡೆ, ಇತಿಹಾಸದ ನೀಚಾತಿನೀಚ ದುಷ್ಕೃತ್ಯ ಮತ್ತು ಅಕ್ಷಮ್ಯ!

ಹಾಗೆ ದೇಶದುದ್ದಕ್ಕೂ ಅನೇಕಾನೇಕ ದೇವಾಲಯಗಳ ಮೇಲೆ ದಾಳಿಗಳಾಗಿವೆ. ಇಂದಿಗೂ ಅನೇಕ ಕಡೆ, ದಾಳಿಗೆ ತುತ್ತಾದ ಶಿಲ್ಪಗಳು, ಮೂರ್ತಿಗಳು ಭಗ್ನಗೊಂಡು, ಮುಕ್ಕಾಗಿ ಮೂಕವಾಗಿ ನಿಂತಿವೆ. ಒಂದು ಕಡೆ ದೇವಾಲಯಗಳನ್ನು ನಿರಂತರವಾಗಿ ಭಗ್ನಗೊಳಿಸುತ್ತಾ ಹೋದ ಮುಸ್ಲಿಂ ದಾಳಿಕೋರರು, ಮತ್ತೆ ಕೆಲವು ಕಡೆ ಇಡೀ ದೇಗುಲಗಳನ್ನೆ ಕೆಡವಿ ಹಾಕಿ, ಅದೆಲ್ಲವನ್ನೂ ಮುಚ್ಚಿ ಹಾಕಿ, ಅದರ ಮೇಲೆ ಮಸೀದಿ ಕಟ್ಟಿ ನೀಚತನ ಮೆರೆದಿದ್ದಾರೆ. ಅಯೋಧ್ಯೆ, ಗ್ಯಾನವ್ಯಾಪಿ ಮತ್ತು ಮಥುರಾಗಳಂತಹ ಬಹುಮುಖ್ಯ ಹಿಂದೂ ಶ್ರದ್ಧಾಕೇಂದ್ರಗಳನ್ನೆ ಅದಕ್ಕಾಗಿ ಆರಿಸಿಕೊಂಡಿದ್ದಾರೆ. ಇದು ವಿಕೃತಿಯಲ್ಲದೇ ಮತ್ತೇನು ?

gyanvapi majid case

ಜಗತ್ತಿನ ಬೇರೆ ಯಾವ ದೇಶಕ್ಕೂ ಧರ್ಮಕ್ಕೂ ಇರದಷ್ಟು ತಾಳ್ಮೆ ಸಹಿಷ್ಣುತೆ ಹಿಂದೂಗಳಿಗೂ, ಭಾರತೀಯರಿಗೂ ಇದೆ. ಇತಿಹಾಸದಲ್ಲಿ ನಡೆದುಹೋದ ಎಲ್ಲ ಪ್ರಮಾದಗಳು ಗೊತ್ತಿದ್ದರೂ ನೂರಾರು ವರ್ಷಗಳವರೆಗೆ ನೆಲದ ಕಾನೂನನ್ನೆ ನಂಬಿ ಕಾಯುತ್ತಾ ಇರುವುದೇ ಸಾಕ್ಷಿ. ಬಹುಶಃ ನಮ್ಮ ಧರ್ಮ ನಮಗೆ ಕಲಿಸಿರುವುದು ಇಂತಹ ಔದಾರ್ಯವನ್ನೆ. ಆ ಕಾಯುವಿಕೆಗೆ ಕಡೆಗೂ ಫಲ ಸಿಗುವ ಕಾಲ ಇದೀಗ ಬಂದಂತಿದೆ. ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣಪ್ರತಿಷ್ಠೆಯಾದದ್ದೇ ತಡ, ಒಂದೊಂದೇ ಶ್ರದ್ಧಾಕೇಂದ್ರಗಳು, ಹೂತುಹೋಗಿದ್ದ ಗರ್ಭಗುಡಿಗಳು ತಮ್ಮ ನೂರಾರು ವರ್ಷಗಳ ಅಜ್ಞಾತವಾಸದಿಂದ ಬಿಡುಗಡೆಗೊಂಡು ಮೇಲೇಳಲು ಸಜ್ಜಾಗುತ್ತಿವೆ. ಕಳೆದ ಡಿಸೆಂಬರ್‌ನಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ತನ್ನ ವರದಿ ಸಲ್ಲಿಸುವುದರ ಮೂಲಕ, 1991ರಿಂದ ನಡೆಯುತ್ತಿದ್ದ ಕಾಶಿಯ ಗ್ಯಾನವ್ಯಾಪಿ ಮಸೀದಿ ಪ್ರಕರಣ ಹೊಸ ತಿರುವು ಪಡೆದು ದೇಶಾದ್ಯಂತ ಸಂಚಲನ ಮೂಡಿಸಿದೆ.

ಇದರ ಬೆನ್ನಲ್ಲೆ ನಮ್ಮ ಕೃಷ್ಣನ ಊರಾದ ಮಥುರಾದ ಪ್ರಕರಣವೂ ಹೊಸಸ್ವರೂಪ ಪಡೆಯುತ್ತಿದೆ. ಉತ್ತರಪ್ರದೇಶದ ಮೈನ್‍ಪುರಿಯ ಅಜಯ್ ಪ್ರತಾಪ್ ಸಿಂಗ್ ಅವರು ಸಲ್ಲಿಸಿದ್ದ ಆರ್‌ಟಿಐಗೆ ಪ್ರತ್ಯುತ್ತರವಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ ಐ) ಮಾಹಿತಿ ನೀಡಿದ್ದು, 1670 ರಲ್ಲಿ ಮಥುರಾದ ಕೇಶವ ದೇವಾಲಯವಿದ್ದ ಕತ್ರಾ ದಿಬ್ಬದ ಮೇಲೆ ಕೆಲವು ಭಾಗಗಳನ್ನು ಕೆಡವಲಾಯ್ತು ಮತ್ತು ಅದರ ಮೇಲೆ ಶಾಹಿ ಈದ್ಗಾ ಮಸೀದಿ ಕಟ್ಟಲಾಯ್ತು ಎಂಬ ಮಹತ್ವದ ವರದಿ ನೀಡಿದೆ. ಈ ವರದಿಯನ್ನು ಅದು 1920ರ ಗೆಜೆಟ್ ದಾಖಲೆಗಳ ಆಧಾರದಲ್ಲಿ ನೀಡಿದೆ. ಗ್ಯಾನವ್ಯಾಪಿ ಮಾದರಿಯಲ್ಲೆ ಮಸೀದಿ ಪರಿಶೀಲನೆಗೆ ಅಲಹಾಬಾದ್ ಹೈಕೋರ್ಟ್ ಆಯುಕ್ತರನ್ನು ನೇಮಿಸಿದ್ದನ್ನು ಸುಪ್ರೀಂ ಕೋರ್ಟ್ ತಡೆಯಬೇಕೆಂದು ಅರ್ಜಿ ಸಲ್ಲಿಸಲಾಗಿತ್ತು, ಸುಪ್ರೀಂಕೋರ್ಟ್ ಅದನ್ನು ನಿರಾಕರಿಸಿದೆ.

ಕೃಷ್ಣ ಜನ್ಮಭೂಮಿ

ನಮ್ಮ ತಾಳ್ಮೆ ದೊಡ್ಡದು! ಮತ್ತು ನಾವು ನಮ್ಮ ನೆಲದ ಕಾನೂನನ್ನು ಗೌರವಿಸುತ್ತೇನೆ. ತಡವಾದರೂ ಸರಿ ಕಾನೂನಿನ ಮೂಲಕವೇ ನಮ್ಮ ಶ್ರದ್ಧಾಕೇಂದ್ರಗಳ ಬಾಗಿಲುಗಳನ್ನು ಮತ್ತೆ ತೆರೆಯಲಿದ್ದೇವೆ. ಸಮಿತಿ ಹೋರಾಟ ಮುಂದುವರಿಸಿದೆ. ಇಷ್ಟೆಲ್ಲಾ ಸಮಸ್ಯೆ, ತೊಡಕುಗಳಿಗೆ ಕಾರಣವೂ ಒಂದು ಕಾನೂನೇ ಆಗಿದೆ. ಅದು ಆರಾಧನ ಸ್ಥಳಗಳ ಕಾಯ್ದೆ 1991 (places of worship act-1991) ಇದರ ಪ್ರಕಾರ ಅಯೋದ್ಯೆಯನ್ನು ಹೊರತುಪಡಿಸಿ ದೇಶದ ಉಳಿದ ಶ್ರದ್ಧಾಕೇಂದ್ರಗಳು ಆಗಸ್ಟ್ 15, 1947 ರಲ್ಲಿ ಯಾವ ಸ್ಥಿತಿಯಲ್ಲಿದ್ದವೋ ಅದೇ ಯಥಾಸ್ಥಿತಿಯಲ್ಲಿರತಕ್ಕದ್ದು ಬದಲಿಸಕೂಡದು ಎಂಬುದು. ಧಾರ್ಮಿಕ ಹಕ್ಕು ಕೂಡ ಸಂವಿಧಾನ ನಮಗೆ ಕೊಟ್ಟಿರುವ ಮೂಲಭೂತ ಹಕ್ಕು. ಲೂಟಿಕೋರರ ದಾಳಿಗೊಳಗಾದ ನಮ್ಮ ಪರಂಪರಾನುಗತ ಶ್ರಧ್ಧಾಕೇಂದ್ರಗಳನ್ನು ಮರಳಿ ಕೇಳುವುದು ಧಾರ್ಮಿಕ ಹಕ್ಕಿನ ಭಾಗವಲ್ಲವೇ ಎಂಬ ವಾದವೂ ನಡೆದಿದೆ. ಅಯೋದ್ಯಾ ಪ್ರಕರಣ ಮತ್ತು ಗ್ಯಾನವ್ಯಾಪಿ ಪ್ರಕರಣದಲ್ಲಿ ಸಿಕ್ಕ ಪ್ರೈಮಾಫೇಸೀ ದಾಖಲೆಗಳು, ಈಗ ಮಥುರಾದ ಕೇಶವ ದೇವಾಲಯದ ವಿಚಾರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಶತಮಾನಗಳ ಕಾಯುವಿಕೆಯನ್ನು ಅಂತ್ಯಗೊಳಿಸುವ ದಿಕ್ಕಿನತ್ತಲೇ ಸಾಗುತ್ತಿವೆ. ನ್ಯಾಯವಾಗಿ ಸಿಗಬೇಕಾದ್ದನ್ನು ನ್ಯಾಯಾಲಯದ ಮೂಲಕವೇ ಪಡೆಯಲು ಕಾದು, ಅದಕ್ಕಾಗಿ ನೂರಾರು ವರ್ಷಗಳು ನಿರಂತರ ಕಾದ ಭಾರತೀಯರ, ಹಿಂದೂಗಳ ನಡೆ ಜಗತ್ತಿಗೆ ಬಹುದೊಡ್ಡ ಪಾಠವೂ ಆಗಲಿದೆ.

ಇದನ್ನೂ ಓದಿ: ವಿಸ್ತಾರ ಅಂಕಣ: ಐತಿಹಾಸಿಕ ನಿರ್ಧಾರ ಕೈಗೊಳ್ಳುವ ಅವಕಾಶ ಮುಸ್ಲಿಂ ಸಮುದಾಯದ ಎದುರಿದೆ

ಔರಂಗಜೇಬ್ ದೇವಾಲಯ ಕೆಡವಿ ಮಸೀದಿ ಕಟ್ಟಿದ್ದು 1670 ರಲ್ಲಿ ಎಂದು ದಾಖಲೆಗಳು ಹೇಳುತ್ತವೆ. ಅದಕ್ಕೂ ಮುಂಚೆ ಅಂದರೆ 1650ರ ಆಸುಪಾಸಿನಲ್ಲಿ ಮಥುರಾಗೆ ಭೇಟಿ ನೀಡಿದ್ದ ಫ್ರೆಂಚ್ ವ್ಯಾಪಾರಿ ಬ್ಯಾಪ್ಟಿಸ್ಟ್ ಟಾವೆರ್ನಿಯರ್ ತನ್ನ ಪ್ರವಾಸ ಕಥನದಲ್ಲಿ ಕೆಂಪು ಬಣ್ಣದ ಕಲ್ಲುಗಳಿಂದ ಹತ್ತುಕಿಲೋಮೀಟರ್ ದೂರದಿಂದಲೇ ಕಾಣಬಹುದಾಗಿದ್ದ ಮಥುರಾ ದೇವಾಲಯವನ್ನು ವರ್ಣಿಸಿದ್ದಾನೆ. ಪುರಿ, ಬನಾರಸ್ ಬಳಿಕ ಮಥುರಾ ತಾನು ಅತ್ಯಂತ ಶ್ರೀಮಂತ ಮತ್ತು ದೊಡ್ಡ ದೇವಾಲಯವಾಗಿತ್ತು ಎಂದು ಬರೆಯುತ್ತಾ ದೇವಾಲಯದ ಕಂಬಗಳು ಶಿಲ್ಪಗಳನ್ನು ವರ್ಣಿಸಿದ್ದಾನೆ. ಕಾನೂನಿನ ತೊಡಕುಗಳು ಆದಷ್ಟು ಬೇಗ ನಿವಾರಣೆಯಾದಲ್ಲಿ ರಾಮಜನ್ಮಭೂಮಿಯ ಹಾಗೇ ಕೃಷ್ಣಜನ್ಮಭೂಮಿಯಲ್ಲೂ ಫ್ರೆಂಚ್ ವ್ಯಾಪಾರಿ ವರ್ಣಿಸಿದ ಹಳೆ ವೈಭವ ಮತ್ತೊಮ್ಮೆ ತಲೆ ಎತ್ತಲಿದೆ.

ನಮ್ಮ ಪ್ರಧಾನಿಗಳು ಮೇಲಿಂದ ಮೇಲೆ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂದೇ ಹೇಳುತ್ತಾರೆ. ಸಹಿಷ್ಣುಗಳು ನಾವು ಹೌದು. ಆದರೆ ಸ್ವಾಭಿಮಾನಹೀನರಾಗಬೇಕಿಲ್ಲ. ಅದೂ ನಮ್ಮ ಧಾರ್ಮಿಕ, ಸಾಂಸ್ಕೃತಿಕ ಅಸ್ಮಿತೆಯ ವಿಷಯದಲ್ಲಿ ಖಂಡಿತವಾಗಿ ರಾಜಿಯಾಗಬೇಕಿಲ್ಲ. ಬಹುಶಃ ಇದು ಭಾರತೀಯ ಅನಿಸಿಕೊಂಡ ಎಲ್ಲರ ಆಶಯವೂ ಹೌದು. ನಮ್ಮ ದೇಶದ ಮನೆಮನೆಗಳ ಆರಾಧ್ಯ ದೈವ, ದೇವನಾದರೂ ಮಾನವನಂತೆ ಬಾಳಿಬದುಕಿ, ಅನೇಕ ಜೀವನಪಾಠಗಳನ್ನೂ, ತತ್ವಾದರ್ಶಗಳನ್ನೂ ಹೇಳಿಹೋದ ಕೃಷ್ಣ ತನ್ನದೇ ಪುರದಲ್ಲಿ ತಾನೇ ಮರೆಯಾಗಿ ನಿಂತಿದ್ದಾನೆ. ತನ್ನದೇ ನಾಟಕದಲ್ಲಿ ತಾನೇ ಪಾತ್ರಧಾರಿಯಾದವನು ಅವನು. ತನ್ನ ಸ್ವಹಿತಕ್ಕಾಗಿ ಪಾತ್ರ ಬದಲಿಸಿದವನಲ್ಲ. ತಾನೇ ಬರೆದರೂ ಎಲ್ಲರಂತೆ ನಾನೂ ಒಂದು ಪಾತ್ರ ಅಂದುಕೊಂಡವನು. ಇದು ಕೂಡ ಅವನು ಬರೆದದ್ದೇ ನಾಟಕವಿರಬಹುದು. ಅವನ ಅಂಕದ ಪರದೆ ಇನ್ನೇನು ತೆರೆಯಬಹುದು. ಫ್ರೆಂಚ್ ಪ್ರವಾಸಿ ವರ್ಣಿಸಿದ ಹವಳದಂತಾ ಕಣ್ಣುಗಳ ಕೃಷ್ಣನನ್ನು ನಾವೂ ಸದ್ಯದಲ್ಲೆ ಕಾಣಬಹುದು. ಆ ದಿನಗಳು ಬೇಗ ಬರಲಿ.

ಇದನ್ನೂ ಓದಿ:ವಿಸ್ತಾರ ಅಂಕಣ: ಮತ್ತೆ ಮತ್ತೆ ಹಳೆಯ ಸೂತ್ರಕ್ಕೇ ಜೋತುಬೀಳುವ ಕಾಂಗ್ರೆಸ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

R Ashok : ರಾಜ್ಯ ಕಾಂಗ್ರೆಸ್ ಸರ್ಕಾರ ವಜಾಗೊಳಿಸಲು ರಾಜ್ಯಪಾಲರಿಗೆ ಬಿಜೆಪಿ ಮನವಿ

R Ashok : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಯೋತ್ಪಾದನಾ ಚಟುವಟಿಕೆ ಹೆಚ್ಚಿದೆ. ಮುಸ್ಲಿಂ ಮೂಲಭೂತವಾದಿಗಳು ಗಲಾಟೆ ಮಾಡುತ್ತಿದ್ದಾರೆ ಎಂದು ಅಶೋಕ್ ಆರೋಪಿಸಿದ್ದಾರೆ.

VISTARANEWS.COM


on

R Ashok
Koo

ಬೆಂಗಳೂರು: ದೇಶದ್ರೋಹಿಗಳಿಗೆ ರಕ್ಷಣೆ ನೀಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ (Karnataka Government) ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ (R Ashok) ಆರೋಪಿಸಿದ್ದಾರೆ. ಸರ್ಕಾರವನ್ನು ವಜಾಗೊಳಿಸುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರದ ಕಾರ್ಯವೈಖರಿ ವಿರುದ್ಧ ಟೀಕೆಗಳನ್ನು ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಯೋತ್ಪಾದನಾ ಚಟುವಟಿಕೆ ಹೆಚ್ಚಿದೆ. ಮುಸ್ಲಿಂ ಮೂಲಭೂತವಾದಿಗಳು ಗಲಾಟೆ ಮಾಡುತ್ತಿದ್ದಾರೆ. ಪಾಕಿಸ್ತಾನಕ್ಕೆ ಜೈಕಾರ ಹಾಕಿದವರನ್ನು ಬಂಧಿಸಿ ಎಂದು ಆಗ್ರಹಿಸಿದರೆ ಸರ್ಕಾರ ಅವರನ್ನು ಬಿಟ್ಟುಬಿಡಿ ಎಂದು ಪೊಲೀಸರಿಗೆ ಸೂಚಿಸಿದೆ. ಎಫ್ಎಸ್ಎಲ್ ವರದಿ ಪರಿಶೀಲನೆ ಎಂದು ಹೇಳಿ ಯಾವುದೋ ವಾಹಿನಿಯ ವೀಡಿಯೋ ಪಡೆದು ಪರೀಕ್ಷೆ ನಡೆಸಿ ಸುಳ್ಳು ವರದಿ ರೂಪಿಸಲಾಗುತ್ತಿದೆ. ಇದನ್ನು ಮುಚ್ಚಿ ಹಾಕಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ವರದಿಯನ್ನು ತಿರುಚುವುದು ಖಂಡಿತ ಎಂದು ಅಶೋಕ್ ಅವರು ಆರೋಪಿಸಿದರು.

ದೇಶದ್ರೋಹಿಗಳಿಗೆ ರಕ್ಷಣೆ

ಜೈಕಾರದ ಸುದ್ದಿ ಮಾಧ್ಯಮಗಳಲ್ಲಿ ಬಂದು ಜನರಿಗೆ ಗೊತ್ತಾದರೂ ಜನರ ಕಣ್ಣಿಗೆ ಮಣ್ಣೆರಚುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಹೀಗೆಯೇ ಬಿಟ್ಟರೆ ವಿಧಾನಸೌಧ ಕೂಡ ಭಯೋತ್ಪಾದಕರ ತಾಣವಾಗಲಿದೆ. ಕೆಂಗಲ್ ಹನುಮಂತಯ್ಯ ಅವರು ಕಟ್ಟಿದ ವಿಧಾನಸೌಧವನ್ನು ಉಳಿಸಲು ನಾವು ಹೋರಾಟ ಮಾಡುತ್ತಿದ್ದೇವೆ. ಸರ್ಕಾರದ ಕೆಲಸ ದೇವರ ಕೆಲಸ ಎಂದರೆ, ಈ ಸರ್ಕಾರ ಅದಕ್ಕೆ ಅಪಮಾನ ಮಾಡುತ್ತಿದೆ. ಈ ಪ್ರಕರಣ ಮುಚ್ಚಿಹಾಕಿ ದೇಶದ್ರೋಹಿಗಳಿಗೆ ರಕ್ಷಣೆ ನೀಡುವ ಇವರು ಭಂಡರು ಎಂದು ಅಶೋಕ್ ಕಿಡಿಕಾರಿದರು.

ರಾಜ್ಯ ಕಾಂಗ್ರೆಸ್​ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಆಗ್ರಹಿಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ. ರಾಜ್ಯದ ಜನರು ಇದನ್ನು ಮನಗಾಣಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಅಶೋಕ್ ಅವರು ಒತ್ತಾಯಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಲೆಯಲ್ಲಿ ಹಿಂದೂ ವಿರೋಧಿ ವಿಷ ಹಾಗೂ ಪ್ರಧಾನಿ ಮೋದಿ ವಿರುದ್ಧ ದ್ವೇಷ ತುಂಬಿದೆ. ಮೋದಿ ಎಂದರೆ ಕಾಂಗ್ರೆಸ್ ನಾಯಕರು ಭಯ ಪಡುತ್ತಾರೆ ಎಂದು ಹೇಳಿದರು. ಬಿ.ಕೆ.ಹರಿಪ್ರಸಾದ್ ಅವರು ಪಾಕಿಸ್ತಾನಿಗಳು ಸಹೋದರರು ಎನ್ನುತ್ತಾರೆ. ಕಾಂಗ್ರೆಸ್ ನಾಯಕರ ಮನಸ್ಸಿನ ಪೂರ್ತಿ ಪಾಕಿಸ್ತಾನ ತುಂಬಿಕೊಂಡಿದೆ. ಇದೇ ರೀತಿ ಕುಕ್ಕರ್ ಬಾಂಬ್ ಸ್ಫೋಟಗೊಂಡಾಗ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ನನ್ನ ಬ್ರದರ್ಸ್ ಎಂದಿದ್ದರು ಎಂದು ನೆನಪಿಸಿದರು.

ಇದನ್ನೂ ಓದಿ : Sedition Case : ವಿಧಾನಸೌಧದಲ್ಲಿ ಪಾಕ್​ ಜಿಂದಾಬಾದ್​ ಕೇಸ್​​ನ ಎಫ್​ಎಸ್​​ಎಲ್​ ವರದಿ ಸಲ್ಲಿಕೆ

ಎಫ್ಎಸ್ಎಲ್ ವರದಿ ಬಹಿರಂಗಪಡಿಸಿ

ರಾಜ್ಯ ಸರ್ಕಾರಕ್ಕೆ ತಾಕತ್ತಿದ್ದರೆ ಎಫ್ಎಸ್ಎಲ್ ವರದಿ ಬಹಿರಂಗಪಡಿಸಲಿ. ಯಾರನ್ನೋ ರಕ್ಷಣೆ ಮಾಡಲು ಸರ್ಕಾರ ವರದಿಯನ್ನು ಮುಚ್ಚಿಡುವುದು ಬೇಡ. ಈಗಾಗಲೇ ಮಾಧ್ಯಮಗಳಲ್ಲಿ ಈ ಸುದ್ದಿ ಬಂದಿದೆ. ಈಗ ಜನರಿಗೆ ವರದಿ ನೀಡಲಿ ಎಂದು ಆರ್.ಅಶೋಕ ಆಗ್ರಹಿಸಿದರು.

ಜಾತಿ ಗಣತಿ ಅವೈಜ್ಞಾನಿಕ

ಸರ್ಕಾರ ರೂಪಿಸಿರುವ ಜಾತಿ ಗಣತಿ ಅವೈಜ್ಞಾನಿಕವಾಗಿದ್ದು, ಇದನ್ನು ವೈಜ್ಞಾನಿಕವಾಗಿ ರೂಪಿಸಲಿ. ಸರಿಯಾದ ಅಂಕಿ ಅಂಶ ಸಂಗ್ರಹಿಸಿ ವರದಿ ರೂಪಿಸಲಿ ಎಂದು ಆರ್.ಅಶೋಕ ಒತ್ತಾಯಿಸಿದರು.

Continue Reading

ಬೆಂಗಳೂರು

Lakshmi Hebbalkar : ವಿಕಲಚೇತನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಿದ ಸಚಿವೆ ಹೆಬ್ಬಾಳ್ಕರ್

Lakshmi Hebbalkar : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರು ವಿಕಲಚೇತನರ ಬಹು ದಿನದ ಬೇಡಿಕೆಯನ್ನು ಈಡೇರಿಸಿದ್ದಾರೆ. ಆ ಮೂಲಕ ಅವರು ಪ್ರತಿಭಟನೆ ಅಂತ್ಯಗೊಳ್ಳುವಂತೆ ಮಾಡಿದರು.

VISTARANEWS.COM


on

Lakshmi Hebbalkar Handicapped
Koo

ಬೆಂಗಳೂರು : ವಿಕಲಚೇತನರ ಬಹುದಿನಗಳ ಪ್ರಮುಖ ಬೇಡಿಕೆಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಸ್ಥಳದಲ್ಲೇ ಆದೇಶ ಹೊರಡಿಸುವ ಮೂಲಕ ಸಮಸ್ಯೆಗಳಿಗೆ ಪರಿಹಾರ ನೀಡಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ (Freedom Park) ವಿಕಲ ಚೇತನರು (Protest by Handicapped) ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಸಿದ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ ಸಚಿವರು, ಪ್ರಮುಖ ಎರಡು ಬೇಡಿಕೆಗಳಿಗೆ ಸ್ಥಳದಲ್ಲೇ ಪರಿಹಾರ ಆದೇಶ ಹೊರಡಿಸಿದ್ದಾರೆ.

ಸ್ಥಳದಲ್ಲೇ ಆದೇಶ ನೀಡಿದ ಸಚಿವರು

ಆದೇಶ: 1: ಮಹಿಳಾ ಪುನರ್ವಸತಿ ಕಾರ್ಯಕರ್ತೆಯರಿಗೆ ವೇತನ ಸಹಿತ ಹೆರಿಗೆ ರಜೆ, ಆರು ತಿಂಗಳು, ಗರ್ಭಪಾತ ರಜೆ 45 ದಿನ.
ಆದೇಶ: 2: ಹೊಸದಾಗಿ ರಚನೆಗೊಂಡಿರುವ 51 ತಾಲೂಕುಗಳಿಗೆ ವಿವಿದೊದ್ದೇಶ ಪುನರ್ವಸತಿ ಕಾರ್ಯಕರ್ತರು (ಎಂಆರ್ ಡಬ್ಲ್ಯೂ) ನೇಮಕಾತಿ ಮಾಡಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡುವಂತೆ ಆರ್ಥಿಕ ಇಲಾಖೆಗೆ ಶಿಫಾರಸು.

Lakshmi Hebbalkar Handicapped1

ಮುಂದಿನ ವಾರ ಸಿಎಂ ಜೊತೆ ಚರ್ಚೆ ಎಂದ ಹೆಬ್ಬಾಳ್ಕರ್‌

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ವಿಕಲಾಂಗ ಚೇತನರ ಸಮಸ್ಯೆಗಳಿಗೆ ಸರ್ಕಾರ ಶೀಘ್ರವೇ ಪರಿಹಾರ ನೀಡಲಿದೆ. ಈ ಸಂಬಂಧ ಮಾರ್ಚ್ 13 ಅಥವಾ 14ರಂದು ಸಿಎಂ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ವಿಕಲ ಚೇತನರ ಉಳಿದ ಬೇಡಿಕೆಗಳನ್ನೂ ಈಡೇರಿಸಲಾಗುವುದು ಎಂದು ಸಚಿವರು ಹೇಳಿದರು. ಧರಣಿ ವಾಪಸ್ ಪಡೆದ ಪ್ರತಿಭಟನಾಕಾರರು
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ ನೀಡಿದ ಹಿನ್ನೆಲೆಯಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.

ಇದನ್ನೂ ಓದಿ : Lakshmi Hebbalkar : ನಿಮ್ಮ ಕ್ಷೇತ್ರದಲ್ಲೂ ಗೃಹಲಕ್ಷ್ಮಿ ಸಕ್ಸಸ್‌; ಸಿದ್ದು ಸವದಿಗೆ ಸಚಿವೆ ಹೆಬ್ಬಾಳ್ಕರ್‌ ತಿರುಗೇಟು

ಜಾತಿ ಗಣತಿಯಲ್ಲಿ ಕೆಲವು ದೋಷಗಳಿವೆ ಎಂದ ಲಕ್ಷ್ಮೀ ಹೆಬ್ಬಾಳ್ಕರ್‌

ಈ ನಡುವೆ ರಾಮನಗರದಲ್ಲಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar) ಅವರು, ಈ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಎಲ್ಲಾ ಸಮುದಾಯಕ್ಕೂ ಸಮಾನ ಅವಕಾಶ ಸಿಗಬೇಕು. ಆದರೆ ಈ ಜನಗಣತಿಯಲ್ಲಿ ಕೆಲ ದೋಷಗಳಿವೆ ಎಂದು ಹೇಳಿದರು.

ʻʻನಾಲ್ಕು ಜನರ ಮನೆಗೆ ಹೋಗಿದ್ದರೆ, ಇನ್ನು ಕೆಲವರ ಮನೆಗೆ ಹೋಗಲೇ ಇಲ್ಲ. ನಮ್ಮ ಸಂಬಂಧಿಕರ ಹಲವು ಮನೆಗಳಿಗೆ ಬಂದೇ ಇಲ್ಲ. ಹೀಗಾಗಿ ಈ ರೀತಿಯ ಕೆಲ ಗೊಂದಲಗಳಿವೆ. ವೀರಶೈವ ಲಿಂಗಾಯತ ಜಾತಿಯಲ್ಲಿ ಅನೇಕ ಉಪಪಂಗಡಗಳಿವೆ‌. 103 ಉಪ ಪಂಗಡಳಿರುವುದರಿಂದ ಅಧ್ಯಯನ ಮಾಡಬೇಕು. ಇದರ ವೈಜ್ಞಾನಿಕ ವರದಿ ಮಾಡಿ ಬಳಿಕ ಸ್ವೀಕರಿಸಬೇಕು. ಇದರಲ್ಲಿ ನಾವು ರಾಜಕೀಯ ಮಾಡಲ್ಲ.ʼʼ ಎಂದು ಮಾಗಡಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

Continue Reading

ಪ್ರಮುಖ ಸುದ್ದಿ

Sedition Case : ವಿಧಾನಸೌಧದಲ್ಲಿ ಪಾಕ್​ ಜಿಂದಾಬಾದ್​ ಕೇಸ್​​ನ ಎಫ್​ಎಸ್​​ಎಲ್​ ವರದಿ ಸಲ್ಲಿಕೆ

Sedition Case : ಪಾಕಿಸ್ತಾನ ಜಿಂದಾಬಾದ್​ ಕೂಗಿದ್ದಾರೆ ಎಂದು ಹೇಳಲಾಘಿರುವ ವಿಡಿಯೊವನ್ನು ಎಫ್​ಎಸ್​​ಎಲ್​ ಅಧಿಕಾರಿಗಳು ತನಿಖೆ ನಡೆಸಿ ವರದಿ ನೀಡಿದ್ದಾರೆ.

VISTARANEWS.COM


on

FSL Report
Koo

ಬೆಂಗಳೂರು: ರಾಜ್ಯಸಭಾ ಚುನಾವಣೆಯ (Rajya Sabha Election) ಫಲಿತಾಂಶ ಪ್ರಕಟಗೊಂಡ ವೇಳೆ ಕಾಂಗ್ರೆಸ್‌ನ ಮೂವರು ಸದಸ್ಯರ ಪೈಕಿ ನಾಸಿರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ ಪರ ಜೈಕಾರ ಕೂಗಿದ್ದಾರೆ ಎಂಬ ಪ್ರಕರಣದ ಕುರಿತು ವಿಧಿ ವಿಜ್ಞಾನ ಪ್ರಯೋಗಾಲಯದ (FSL Report) ವರದಿ ಸಿದ್ಧಗೊಂಡಿದೆ. ಘಟನೆ ನಡೆದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಅವರುಎರಡು ದಿನಗಳ ಎಫ್ಎಸ್ಎಲ್ ರಿಪೋರ್ಟ್ ಕೊಡುವಂತೆ ಸೂಚಿಸಿದ್ದ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು. ಅಂತೆಯೇ ವರದಿ ಸಿದ್ದಗೊಂಡಿದ್ದು ಗೃಹ ಇಲಾಖೆಗೆ ವರದಿ ಸಲ್ಲಿಕೆಯಾಗಿದೆ.

ಭಾರತದ ಸೌರ್ವಭೌಮತ್ವವನ್ನು ಧಿಕ್ಕರಿಸಿ ಪಾಕ್‌ ಪರ ಘೋಷಣೆ ಕೂಗಿರುವ ಬಗ್ಗೆ ರಾಜ್ಯ ಸೇರಿ ದೇಶಾದ್ಯಂತ ಭಾರಿ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಇಂಥದ್ದೊಂದು ಪಾಪಿ ಕೃತ್ಯ, ಅಕ್ಷಮ್ಯ ಅಪರಾಧವನ್ನು ವಿಧಾನಸೌಧದೊಳಗೆ ಮಾಡಿರುವುದು ಮತ್ತೊಂದು ದುರಂತವಾಗಿದೆ ಎಂಬ ಆರೋಪಗಳನ್ನು ವಿಪಕ್ಷಗಳು ಮಾಡಿದ್ದವು.

ಇದನ್ನೂ ಓದಿ : Budget Session : ಬಿಜೆಪಿಯ ಜೈ ಶ್ರೀರಾಮ್‌ VS ಸಿದ್ದರಾಮಯ್ಯರ ಜೈ ಸೀತಾರಾಮ್‌!

ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಕಾಂಗ್ರೆಸ್‌ನ ಮೂವರು ಹಾಗೂ ಬಿಜೆಪಿಯ ಒಬ್ಬರು ಗೆಲುವು ಸಾಧಿಸಿದ್ದಾರೆ ಎಂದು ಘೋಷಣೆಯಾಯಿತು. ಆಗ ನೂತನ ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಅವರನ್ನು ಕಾಂಗ್ರೆಸ್‌ ಬೆಂಬಲಿಗರು ಎತ್ತಿ ಖುಷಿಪಟ್ಟಿದ್ದಾರೆ. ಹಾರವನ್ನು ಹಾಕಿ ಸಂಭ್ರಮಿಸಿದ್ದಾರೆ. ಇದೇ ವೇಳೆ, ಕೆಲವು ಪಾಪಿಗಳು “ಪಾಕಿಸ್ತಾನ್‌ ಜಿಂದಾಬಾದ್‌” ಎಂದು ಘೋಷಣೆ ಕೂಗಿದ್ದಾರೆ ಎನ್ನಲಾಗಿದೆ. ಅದರ ವಿಡಿಯೊ ಎಲ್ಲೆಡೆ ವೈರಲ್ ಆಗಿದ್ದವು.

ಇದು ಅತ್ಯಂತ ನಾಚಿಕೆಗೇಡಿನ ಸಂಗತಿ

ಈ ಬಗ್ಗೆ ವಿಧಾನ ಪರಿಷತ್‌ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.‌ ರವಿಕುಮಾರ್‌ ಪ್ರತಿಕ್ರಿಯೆ ನೀಡಿ, ಇದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ. ಇದಕ್ಕೆ ಸುಮೋಟೋ ಕೇಸ್‌ ಅನ್ನು ದಾಖಲು ಮಾಡಬೇಕು. ತಕ್ಷಣವೇ ತಪ್ಪಿತಸ್ಥರನ್ನು ಬಂಧಿಸಬೇಕು. ಇದು ದೇಶದ್ರೋಹದ ಕೆಲಸವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರು ಕೂಡಲೇ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ನಾನು ಆಗ್ರಹಿಸುತ್ತೇನೆ ಎಂದು ಹೇಳಿದ್ದರು.

ಈ ಕೂಡಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಕೂಡಲೇ ಈ ಬಗ್ಗೆ ತಮ್ಮ ಹೇಳಿಕೆಯನ್ನು ನೀಡಬೇಕು. ಇದು ಅಕ್ಷಮ್ಯವಾಗಿದೆ. ಈ ಸರ್ಕಾರ ಏನು ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ನಾವು ಕಾದು ನೋಡುತ್ತೇವೆ ಎಂದು ರವಿಕುಮಾರ್‌ ಒತ್ತಾಯಿಸಿದ್ದರು.

ಕಾಂಗ್ರೆಸ್‌ನ ಗೆಲುವು ದೇಶದ್ರೋಹಿಗಳ ಗೆಲುವಾ?

ಇದೊಂದು ಅಕ್ಷಮ್ಯ ಅಪರಾಧವಾಗಿದೆ. ಇದು ಪಾಕಿಸ್ತಾನ ಚುನಾವಣೆಯಾ? ಭಾರತದ ಚುನಾವಣೆಯಾ? ಇದು ಕಾಂಗ್ರೆಸ್‌ನ ಮಾನಸಿಕತನವನ್ನು ತೋರಿಸುತ್ತದೆ. ಕಾಂಗ್ರೆಸ್‌ ಗೆಲುವು ಸಾಧಿಸಿದ ಮೇಲೆ ಇಂಥ ವಿಧ್ವಂಸಕ ಕೃತ್ಯ ಎಸಗುವವರಿಗೆ ಬಲ ಸಿಕ್ಕಂತೆ ಆಗಿದೆ. ಇವರೇನು ಪಾಕಿಸ್ತಾನದ ಏಜೆಂಟರಾ? ಇದರ ವಿರುದ್ಧ ಈ ಸರ್ಕಾರ ಕ್ರಮವನ್ನು ಕೈಗೊಳ್ಳಬೇಕು. ಈ ದೇಶದ ಅನ್ನ ತಿಂದು, ಸೌಲಭ್ಯವನ್ನು ಪಡೆದು ಪಾಕಿಸ್ತಾನದ ಪರ ಘೋಷಣೆ ಕೂಗುತ್ತಾರಲ್ಲವೇ? ಇವರು ಹೊಟ್ಟೆಗೆ ಏನನ್ನು ತಿನ್ನುತ್ತಾರೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಕಿಡಿಕಾರಿದ್ದರು.

Continue Reading

ಪ್ರಮುಖ ಸುದ್ದಿ

GDP Growth : ಜಿಡಿಪಿಯ ಭರ್ಜರಿ ಏರಿಕೆಗೆ ಮೋದಿ ಸಂತಸ; ಏನಂದ್ರು ಅವರು?

GDP Growth : 2022-23ರ ಮೂರನೇ ತ್ರೈಮಾಸಿಕದಲ್ಲಿ ಶೇ.4.3ರಷ್ಟಿತ್ತು ಹಾಗೂ ಈ ಬಾರಿ ಶೇ. 8.4 ರಷ್ಟು ಬೆಳವಣಿಗೆ ಸಾಧಿಸಿದೆ.

VISTARANEWS.COM


on

Modi GDP
Koo

ನವದಹೆಲಿ : ಭಾರತದ ಜಿಡಿಪಿಯು 2023-24ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಶೇಕಡಾ 8.4ರಷ್ಟು ಭರ್ಜರಿ ಪ್ರಗತಿಯಾಗಿರುವುದಕ್ಕೆ (GDP Growth) ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಂಭ್ರಮ ವ್ಯಕ್ತಪಡಿಸಿದ್ದಾರೆ. ತಮ್ಮ ಟ್ವಿಟರ್​ ಖಾತೆಯ ಮೂಲಕ ಅವರು ಆರ್ಥಿಕ ಬೆಳವಣಿಗೆಯ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.

“2023-24ರ ಮೂರನೇ ತ್ರೈಮಾಸಿಕದಲ್ಲಿ 8.4% ಜಿಡಿಪಿ ಬೆಳವಣಿಗೆಯು ಭಾರತೀಯ ಆರ್ಥಿಕತೆಯ ಶಕ್ತಿ ಮತ್ತು ಅದರ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ. ತ್ವರಿತ ಆರ್ಥಿಕ ಬೆಳವಣಿಗೆಯನ್ನು ಕಾಣಲು ನಮ್ಮ ಪ್ರಯತ್ನಗಳು ಮುಂದುವರಿಯಲಿದೆ. ಇದು 140 ಕೋಟಿ ಭಾರತೀಯರಿಗೆ ಉತ್ತಮ ಜೀವನವನ್ನು ನಡೆಸಲು ಮತ್ತು ವಿಕಸಿತ್​ ಭಾರತವನ್ನು ರಚಿಸಲು ಸಹಾಯ ಮಾಡುತ್ತದೆ” ಎಂದು ಪ್ರಧಾನಿ ಪೋಸ್ಟ್ ಮಾಡಿದ್ದಾರೆ.

ಕಳೆದ ತ್ರೈಮಾಸಿಕದಲ್ಲಿ ಭರ್ಜರಿ ಪ್ರಗತಿ

ನವದೆಹಲಿ : ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ (GDP Growth) ಶೇಕಡಾ 8.4 ಕ್ಕೆ ಏರಿಕೆಯಾಗಿದೆ ಎಂದು ಸಾಂಖ್ಯಿಕ ಮತ್ತು ಯೋಜನೆ ಅನುಷ್ಠಾನ ಸಚಿವಾಲಯ ಗುರುವಾರ ಹೇಳಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ ಶೇ.4.3ರಷ್ಟಿತ್ತು. ಹೀಗಾಗಿ ನಿರೀಕ್ಷೆ ಮೀರಿದ ಬೆಳವಣಿಗೆಯಾಗಿದೆ ಎಂದು ಹೇಳಲಾಗಿದೆ.

2023-24ರ ಮೂರನೇ ತ್ರೈಮಾಸಿಕದಲ್ಲಿ ಸ್ಥಿರ (2011-12) ದರಗಳಲ್ಲಿ ಜಿಡಿಪಿ 43.72 ಲಕ್ಷ ಕೋಟಿ ರೂ.ಗೆ ಅಂದಾಜಿಸಲಾಗಿದೆ. ಇದು 2022-23 ರ ಮೂರನೇ ತ್ರೈಮಾಸಿಕದಲ್ಲಿ 40.35 ಲಕ್ಷ ಕೋಟಿ ರೂ ಆಗಿತ್ತು. ಅದಕ್ಕೆ ಹೋಲಿಕೆ ಮಾಡಿದರೆ 8.4 ರಷ್ಟು ಬೆಳವಣಿಗೆಯ ದರವನ್ನು ತೋರಿಸುತ್ತದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ. ವಿಶ್ಲೇಷಕರು ಮೂರನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯನ್ನು ಶೇಕಡಾ 7ಕ್ಕಿಂತ ಕಡಿಮೆ ಎಂದು ಅಂದಾಜಿಸಿದ್ದರು. ಆದರೆ, ಸರ್ಕಾರ ಬಿಡುಗಡೆ ಮಾಡಿದ ಅಂಕಿ ಅಂಶವು ಭಾರತೀಯ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ ಎಂದು ತೋರಿಸಿದೆ.

ಇದನ್ನೂ ಓದಿ : Nitasha Kaul : ಬ್ರಿಟನ್​ ಲೇಖಕಿಯನ್ನು ಏರ್​ಪೋರ್ಟ್​​ನಿಂದಲೇ ವಾಪಸ್​ ಕಳಿಸಿದ್ದಕ್ಕೆ ಕಾರಣ ಕೊಟ್ಟ ಕೇಂದ್ರ ಸರ್ಕಾರ

ನಿರ್ಮಾಣ ಕ್ಷೇತ್ರದ ಎರಡಂಕಿ ಬೆಳವಣಿಗೆ ದರ (ಶೇ.10.7), ಉತ್ಪಾದನಾ ವಲಯದ ಬೆಳವಣಿಗೆ ದರ (ಶೇ.8.5) 2024ರ ಹಣಕಾಸು ವರ್ಷದಲ್ಲಿ ಜಿಡಿಪಿ ಬೆಳವಣಿಗೆಯನ್ನು ಹೆಚ್ಚಿಸಿದೆ ಎಂದು ಸರಕಾರ ತಿಳಿಸಿದೆ. ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ಶೇಕಡಾ 8.4 ರಷ್ಟು ಬೆಳವಣಿಗೆಯ ಹಿಂದಿನ ಪ್ರಮುಖ ಕಾರಣವೇ ಈ ಕ್ಷೇತ್ರಗಳಲ್ಲಿನ ಬೆಳವಣಿಗೆಯಾಗಿದೆ.

ಇದರ ಪರಿಣಾಮವಾಗಿ, ಸಾಂಖ್ಯಿಕ ಸಚಿವಾಲಯವು ಈಗ ಪೂರ್ಣ ವರ್ಷದ ಜಿಡಿಪಿ ಬೆಳವಣಿಗೆಯು ಅಂದಾಜು ಶೇಕಡಾಕ 7.3ಕ್ಕಿಂತ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಿದೆ.. ಎರಡನೇ ಮುಂಗಡ ಅಂದಾಜಿನ ಪ್ರಕಾರ 2023-24ನೇ ಸಾಲಿಗೆ ಜಿಡಿಪಿ ಬೆಳವಣಿಗೆ ದರ ಶೇ.7.6ರಷ್ಟಾಗಲಿದೆ ಎಂದು ಅಂದಾಜಿಸಲಾಗಿದೆ. ಇದು ವಿಶ್ವದ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿ ಭಾರತದ ಸ್ಥಾನಮಾನವನ್ನು ದೃಢಪಡಿಸಿದೆ.

Continue Reading
Advertisement
R Ashok
ಪ್ರಮುಖ ಸುದ್ದಿ2 mins ago

R Ashok : ರಾಜ್ಯ ಕಾಂಗ್ರೆಸ್ ಸರ್ಕಾರ ವಜಾಗೊಳಿಸಲು ರಾಜ್ಯಪಾಲರಿಗೆ ಬಿಜೆಪಿ ಮನವಿ

Lakshmi Hebbalkar Handicapped
ಬೆಂಗಳೂರು30 mins ago

Lakshmi Hebbalkar : ವಿಕಲಚೇತನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಿದ ಸಚಿವೆ ಹೆಬ್ಬಾಳ್ಕರ್

FSL Report
ಪ್ರಮುಖ ಸುದ್ದಿ37 mins ago

Sedition Case : ವಿಧಾನಸೌಧದಲ್ಲಿ ಪಾಕ್​ ಜಿಂದಾಬಾದ್​ ಕೇಸ್​​ನ ಎಫ್​ಎಸ್​​ಎಲ್​ ವರದಿ ಸಲ್ಲಿಕೆ

Russia Ukraine War
ವಿದೇಶ45 mins ago

Russia Ukraine War: ರಷ್ಯಾ ಸೇನೆಯಲ್ಲಿರುವ ಭಾರತೀಯರು ಶೀಘ್ರ ತಾಯ್ನಾಡಿಗೆ; ವಿದೇಶಾಂಗ ಸಚಿವಾಲಯದ ಭರವಸೆ

Modi GDP
ಪ್ರಮುಖ ಸುದ್ದಿ2 hours ago

GDP Growth : ಜಿಡಿಪಿಯ ಭರ್ಜರಿ ಏರಿಕೆಗೆ ಮೋದಿ ಸಂತಸ; ಏನಂದ್ರು ಅವರು?

2nd PU Exam from tomorrow what are the conditions
ಶಿಕ್ಷಣ2 hours ago

2nd PU Exam: ನಾಳೆಯಿಂದ ರಾಜ್ಯಾದ್ಯಂತ ದ್ವಿತೀಯ ಪಿಯು ಪರೀಕ್ಷೆ; ವಿದ್ಯಾರ್ಥಿಗಳಿಗೆ ಇಲ್ಲಿದೆ ಕಂಡಿಷನ್!

insurance
ಮನಿ-ಗೈಡ್2 hours ago

Money Guide: ಸಾಮಾನ್ಯ ವಿಮೆ v/s ಜೀವ ವಿಮೆ; ಯಾವುದು ಉತ್ತಮ? ನಿಮಗೆ ತಿಳಿದಿರಲೇಬೇಕಾದ ಮಾಹಿತಿ ಇಲ್ಲಿದೆ

Budget session Siddaramaiah
ವಿಧಾನಮಂಡಲ ಅಧಿವೇಶನ2 hours ago

Budget Session : ಬಿಜೆಪಿಯ ಜೈ ಶ್ರೀರಾಮ್‌ VS ಸಿದ್ದರಾಮಯ್ಯರ ಜೈ ಸೀತಾರಾಮ್‌!

Nitasha Kaul
ದೇಶ2 hours ago

Nitasha Kaul : ಬ್ರಿಟನ್​ ಲೇಖಕಿಯನ್ನು ಏರ್​ಪೋರ್ಟ್​​ನಿಂದಲೇ ವಾಪಸ್​ ಕಳಿಸಿದ್ದಕ್ಕೆ ಕಾರಣ ಕೊಟ್ಟ ಕೇಂದ್ರ ಸರ್ಕಾರ

Siddaramaiah plan behind accepting Caste Census Report Sunil Kumar reveals reason
ರಾಜಕೀಯ3 hours ago

‌Caste Census Report: ಜಾತಿ ಗಣತಿ ಸ್ವೀಕಾರದ ಹಿಂದೆ ಸಿದ್ದರಾಮಯ್ಯ ಪ್ಲ್ಯಾನ್‌ ಏನು? ಕಾರಣ ಬಿಚ್ಚಿಟ್ಟಿದ್ದಾರೆ ಸುನಿಲ್‌ ಕುಮಾರ್!

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for February 28 2024
ಭವಿಷ್ಯ17 hours ago

Dina Bhavishya: ಇಂದು 12 ರಾಶಿಯವರ ಲಕ್ಕಿ ನಂಬರ್‌ ಏನು? ಯಾರಿಗೆ ಧನ ಲಾಭ?

Dina Bhavishya
ಭವಿಷ್ಯ2 days ago

Dina Bhavishya : ಈ ರಾಶಿಯವರು ಇಂದು ದೊಡ್ಡದೊಂದು ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ

Rajya Sabha election Pakistan Zindabad slogans raised inside Vidhana Soudha by Nasir Hussain supporters
ರಾಜಕೀಯ2 days ago

ವಿಧಾನಸೌಧದೊಳಗೇ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ; ನಾಸಿರ್‌ ಹುಸೇನ್‌ ಬೆಂಬಲಿಗ ದೇಶದ್ರೋಹಿಗಳ ಉದ್ಧಟತನ

Ghar Wapsi ST Somashekhar and Shivaram Hebbar to quit BJP
ರಾಜಕೀಯ2 days ago

Ghar Wapsi: ಎಸ್‌.ಟಿ. ಸೋಮಶೇಖರ್‌, ಶಿವರಾಂ ಹೆಬ್ಬಾರ್‌ ಬಿಜೆಪಿಗೆ ಗುಡ್‌ ಬೈ? ಇಂದೇ ರಾಜೀನಾಮೆ?

Rajyasabha Elections 42 Congress MLAs contacted by JDS candidate says DK Shivakumar
ರಾಜಕೀಯ2 days ago

Rajya sabha Election: ಕಾಂಗ್ರೆಸ್‌ನ 42 ಶಾಸಕರನ್ನು ಸಂಪರ್ಕ ಮಾಡಿದ್ದಾರೆ: ಡಿ.ಕೆ. ಶಿವಕುಮಾರ್

read your daily horoscope predictions for february 27 2024
ಭವಿಷ್ಯ3 days ago

Dina Bhavishya : ಇಂದು ಆಪ್ತರಿಂದಲೇ ಈ ರಾಶಿಯವರಿಗೆ ಕಂಟಕ!

Crowd mistakes Arabic words as Quran Verses on the kurta and Pak Women mobbed
ವಿದೇಶ3 days ago

Pak Woman: ಕುರ್ತಾ ಮೇಲಿನ ಅರೇಬಿಕ್ ಪದಗಳನ್ನು ತಪ್ಪಾಗಿ ತಿಳಿದು ಮಹಿಳೆ ಮೇಲೆ ಹಲ್ಲೆಗೆ ಯತ್ನ

read your daily horoscope predictions for february 26 2024
ಭವಿಷ್ಯ4 days ago

Dina Bhavishya : ಈ ಮೂರು ರಾಶಿಯವರು ಇಂದು ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ

Dina Bhavishya
ಭವಿಷ್ಯ5 days ago

Dina Bhavishya : ಈ ರಾಶಿಯವರು ಆಪ್ತರೊಂದಿಗೆ ಗೌಪ್ಯ ವಿಷಯವನ್ನು ಹೇಳುವಾಗ ಎಚ್ಚರ!

Video Viral Student falls under school bus He escaped with minor injuries
ವೈರಲ್ ನ್ಯೂಸ್5 days ago

Video Viral: ಸ್ಕೂಲ್ ಬಸ್‌ನಡಿ ಬಿದ್ದ ವಿದ್ಯಾರ್ಥಿ; ಪಾರಾಗಿದ್ದೇ ಪವಾಡ!

ಟ್ರೆಂಡಿಂಗ್‌