ವಿಸ್ತಾರ Explainer: ಉಚಿತ, ಉಚಿತ, ಉಚಿತ; ಖಜಾನೆಗೆ ತೂತು ಖಚಿತ! Vistara News

EXPLAINER

ವಿಸ್ತಾರ Explainer: ಉಚಿತ, ಉಚಿತ, ಉಚಿತ; ಖಜಾನೆಗೆ ತೂತು ಖಚಿತ!

ರಾಜಕೀಯ ಪಕ್ಷಗಳು ಮತದಾರರನ್ನು ಓಲೈಸಲು ಉಚಿತ ಕೊಡುಗೆ ಆಮಿಷಗಳನ್ನು ಒಡ್ಡುತ್ತಿವೆ. ಇವು ನಿಜಕ್ಕೂ ತಮ್ಮ ಮಾತು ಈಡೇರಿಸಲು ಮುಂದಾದರೆ, ರಾಜ್ಯದ ಬೊಕ್ಕಸದ ಮೇಲೆ ಆಗುವ ಪರಿಣಾಮವೇನು?

VISTARANEWS.COM


on

freebies 2
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕಾಂಗ್ರೆಸ್‌ (congress) ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಎಲ್ಲ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಸಂಪೂರ್ಣ ಉಚಿತ ಪ್ರಯಾಣ ಯೋಜನೆ ಜಾರಿಗೊಳಿಸಲಾಗುವುದು ಎಂದಿದೆ. ಇದರ ಜೊತೆಗೆ, ಪದವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 3,000 ರೂಪಾಯಿ ನಿರುದ್ಯೋಗ ಭತ್ಯೆ, ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್, ಪ್ರತಿ ಕುಟುಂಬದ ಒಬ್ಬ ಮಹಿಳೆಗೆ ಮಾಸಿಕ 2000 ರೂ. ಮತ್ತು ಪ್ರತಿ ತಿಂಗಳು ಒಬ್ಬ ವ್ಯಕ್ತಿಗೆ ತಲಾ 10 ಕೆ.ಜಿ. ಅಕ್ಕಿ ಎಂಬ ಘೋಷಣೆಗಳನ್ನು ಮಾಡಿದೆ.

ಇದು ಉಚಿತಗಳ ಸರಣಿಯಲ್ಲಿ (freebies) ಒಂದು ಅಷ್ಟೇ. ಜೆಡಿಎಸ್‌ (JDS), ಆಪ್‌ (APP) ಕೂಡ ಇಂಥ ಘೋಷಣೆಗಳನ್ನು ಮಾಡಿವೆ. ಉಚಿತ ಆಶ್ವಾಸನೆ ನೀಡುವುದಿಲ್ಲ ಎಂದು ಈ ಮೊದಲು ಹೇಳಿದ್ದ ಬಿಜೆಪಿ ಕೂಡ ಇತರ ಪಕ್ಷಗಳ ಆಮಿಷದ ಮುಂದೆ ತಾನು ಸೋಲಬಾರದು ಎಂದೋ ಏನೋ, ಕೆಲವು ಭರವಸೆಗಳನ್ನು ನೀಡಿದೆ. ಈ ಉಚಿತ ಭರವಸೆಗಳನ್ನು ಈಡೇರಿಸಲು ಬೇಕಾದಷ್ಟು ಹಣ ರಾಜ್ಯದ ಬೊಕ್ಕಸದಲ್ಲಿ ಇದೆಯೇ? ಇಲ್ಲವಾದರೆ ಅದಕ್ಕೆಲ್ಲಾ ಹಣವನ್ನು ಎಲ್ಲಿಂದ ತರುತ್ತಾರೆ? ಇದು ಸಾಮಾನ್ಯ ಮತದಾರನ ಕುತೂಹಲ. ಇದನ್ನು ಉತ್ತರಿಸಲು ಪಕ್ಷಗಳು ಯಾವ ಪ್ರಯತ್ನವನ್ನೂ ಮಾಡುವುದಿಲ್ಲ. ಆ ಲೆಕ್ಕಾಚಾರ ನಾವೇ ಮಾಡಬೇಕು.

ರಾಜ್ಯದ ಆರ್ಥಿಕ ಆರೋಗ್ಯದ ಮೇಲೆ ರಾಜಕೀಯ ಪಕ್ಷಗಳ ಚುನಾವಣಾ ಭರವಸೆಗಳ ವೆಚ್ಚಗಳು ನಿರ್ಣಾಯಕವಾಗಲಿವೆ. ಸಾಮಾನ್ಯ ಮತದಾರನಿಗೆ ಸಾರ್ವಜನಿಕ ಸಾಲ, ಹಣಕಾಸಿನ ಕೊರತೆಯ ಬಗ್ಗೆ ಸಾಕಷ್ಟು ಜ್ಞಾನವಿಲ್ಲದಿರಬಹುದು. ಆದರೆ ಗೊತ್ತಿರುವ ಅಗತ್ಯವಿದೆ. IMFನಿಂದ ಸಾಕಷ್ಟು ಹಣಕಾಸು ಸಾಲ ಪಡೆದಿದ್ದರೂ ನೆರೆಯ ರಾಷ್ಟ್ರಗಳಾದ ಶ್ರೀಲಂಕಾ/ ಪಾಕಿಸ್ತಾನ ದಿವಾಳಿ ಪರಿಸ್ಥಿತಿ ಎದುರಿಸುತ್ತಿರುವುದೇಕೆ? ಈ ಪ್ರಶ್ನೆಗೆ ಉತ್ತರವೂ ಇದರಲ್ಲಿಯೇ ಇದೆ.

ರಾಜ್ಯದ ಆರ್ಥಿಕ ಆರೋಗ್ಯದಲ್ಲಿ ʼಆರ್ಥಿಕ ಶಿಸ್ತುʼ ಎಂಬುದು ನಿರ್ಣಾಯಕ. ಆದ್ದರಿಂದ ಕರ್ನಾಟಕ ವಿತ್ತೀಯ ಹೊಣೆಗಾರಿಕೆ ಕಾಯಿದೆ- 2002 (ಕೆಎಫ್‌ಆರ್‌ಎ), ವಿತ್ತೀಯ ಕೊರತೆಯು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ (ಜಿಎಸ್‌ಡಿಪಿ) 3%ಕ್ಕಿಂತ ಹೆಚ್ಚಿರಬಾರದು ಎನ್ನುತ್ತದೆ. ಹೀಗಾಗಿ ಉಚಿತ ಕೊಡುಗೆಗಳು ಆರ್ಥಿಕ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ವಿಮರ್ಶಿಸುವುದು ಬಹಳ ಮುಖ್ಯ. ಆರ್ಥಿಕ ಶಿಸ್ತನ್ನು ಗೌರವಿಸುವ ರಾಜ್ಯಗಳಲ್ಲಿ ಕರ್ನಾಟಕವೂ ಪ್ರಮುಖ. ಈಗ ಈ ಪಕ್ಷಗಳು ಅಧಿಕಾರಕ್ಕೆ ಬಂದರೆ, ಅವು ನೀಡಿರುವ ಭರವಸೆಗಳಿಂದ ರಾಜ್ಯದ ಬೊಕ್ಕಸದ ಮೇಲೆ ಪರಿಣಾಮ ಏನಾಗಬಹುದು?

ಕಾಂಗ್ರೆಸ್‌ನ ಉಚಿತ ಕೊಡುಗೆಗಳು

ಕರ್ನಾಟಕದಲ್ಲಿ ಸುಮಾರು 1.79 ಕೋಟಿ ಕುಟುಂಬಗಳಿವೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಪ್ರತಿ ಮನೆಗೆ ತಿಂಗಳಿಗೆ 200 ಯುನಿಟ್ ವಿದ್ಯುತ್ ನೀಡುವ ʼಗೃಹಜ್ಯೋತಿʼ ಯೋಜನೆ ಭರವಸೆ ನೀಡಿದೆ. ಇದು ಪ್ರತೀ ಮನೆಗೆ ತಿಂಗಳಿಗೆ ₹ 1202.50, ವರ್ಷಕ್ಕೆ ₹ 14,430 ಆಗುತ್ತದೆ. ಒಟ್ಟಾರೆಯಾಗಿ ₹ 25830 ಕೋಟಿ ರೂಪಾಯಿ. ಕರ್ನಾಟಕ ಜಿಎಸ್‌ಡಿಪಿ ₹ 23.33 ಲಕ್ಷ ಕೋಟಿ; ವಿತ್ತೀಯ ಕೊರತೆ ₹ 60,531 ಕೋಟಿ. ಇದು 2023-24ರ ಲೆಕ್ಕ. ವಿತ್ತೀಯ ಕೊರತೆಯು ಜಿಎಸ್‌ಡಿಪಿಯ 3%ಗಿಂತ ಹೆಚ್ಚಿರುವುದರಿಂದ ₹ 25830 ಕೋಟಿಗಳ ಈ ಆರ್ಥಿಕ ಹೊರೆಯು ಕೆಎಫ್‌ಆರ್‌ಎ ಮಿತಿಯನ್ನು ಮೀರುತ್ತದೆ. ಜತೆಗೆ ಈ ಉಚಿತವು ರೈತರಿಗೆ ನೀಡುತ್ತಿರುವ ₹ 13,000 ಕೋಟಿಯ ಉಚಿತ ವಿದ್ಯುತ್ ಪೂರೈಕೆಯ ವೆಚ್ಚದ ದುಪ್ಪಟ್ಟು ಆಗಿದೆ.

ಹೆಚ್ಚುತ್ತಿರುವ ಬಾಕಿಯಿಂದಾಗಿ ರಾಜ್ಯದ ವಿದ್ಯುತ್ ಕಂಪನಿಗಳು ಸಂಕಷ್ಟದ ಪರಿಸ್ಥಿತಿಯಲ್ಲಿವೆ. ಗ್ರಾಮೀಣ ಪ್ರದೇಶಗಳಿಗೆ ₹ 14,700 ಕೋಟಿ ಮೌಲ್ಯದ ಉಚಿತ ವಿದ್ಯುತ್‌ನ ಈಗಿರುವ ಬದ್ಧತೆಯೇ ರಾಜ್ಯದ ಹಣಕಾಸಿನ ಮೇಲೆ ಹೆಚ್ಚಿನ ಒಜ್ಜೆಯನ್ನು ಉಂಟುಮಾಡಿದೆ. ಗೃಹಜ್ಯೋತಿ ಮೂಲಕ ಮತ್ತೂ ₹ 25830 ಕೋಟಿ ಒದಗಿಸುವುದು ರಾಜ್ಯದ ಆರ್ಥಿಕತೆಯನ್ನು ಇನ್ನಷ್ಟು ಅಪಾಯಕ್ಕೆ ತಳ್ಳುತ್ತದೆ. ಇದು ವಿತ್ತೀಯ ಕೊರತೆಯ 3%ನ್ನು ಮೀರುತ್ತದೆ.

ಕಾಂಗ್ರೆಸ್‌ನ ಎರಡನೇ ಪ್ರಮುಖ ಭರವಸೆ ಎಂದರೆ ಎಲ್ಲಾ BPL ಕುಟುಂಬಗಳಿಗೆ, ಆ ಕುಟುಂಬದ ಮಹಿಳೆಗೆ ತಿಂಗಳಿಗೆ ₹ 2000 ನೀಡುವುದು. ಈಗ ರಾಜ್ಯದಲ್ಲಿ 1.28 ಕೋಟಿ ಬಿಪಿಎಲ್ ಕುಟುಂಬಗಳಿವೆ. ಪ್ರತಿ ಬಿಪಿಎಲ್ ಕುಟುಂಬದ ಮಹಿಳೆಗೆ ತಿಂಗಳಿಗೆ ₹ 2000 ನೀಡುವುದರಿಂದ ವಾರ್ಷಿಕ ₹ 30,720 ಕೋಟಿ ವೆಚ್ಚ ಆಗುತ್ತದೆ. 2022-23ರಲ್ಲಿ, ರಾಜ್ಯದ ಆದಾಯ ಕೊರತೆ ₹14,699 ಕೋಟಿಗಳಷ್ಟಿತ್ತು. ವಾರ್ಷಿಕ ₹ 30,720 ಕೋಟಿ ವೆಚ್ಚದ ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಮಾಡಬೇಕಾದರೆ ಬಂಡವಾಳ ವೆಚ್ಚವನ್ನು ₹ 46,955 ಕೋಟಿಯಿಂದ ₹ 16,235 ಕೋಟಿಗೆ ಇಳಿಸಬೇಕು. ಅಥವಾ ಆದಾಯ ಕೊರತೆಯನ್ನು ₹ 14,699 ಕೋಟಿಯಿಂದ ₹ 45,419 ಕೋಟಿಗೆ ಹೆಚ್ಚಿಸಬೇಕು. ಅಥವಾ ಬಂಡವಾಳಕ್ಕೆ ಯಾವುದೇ ವೆಚ್ಚ ಮಾಡಬಾರದು. ಕಂದಾಯದ ಮೇಲಿನ ವೆಚ್ಚ 90% ದಾಟಿದೆ, ಹೀಗಾಗಿ ಕಂದಾಯ ವೆಚ್ಚದಲ್ಲಿ ಇದಕ್ಕೆ ಹಾದಿಯಿಲ್ಲ.

ಇನ್ನು ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ, ಪದವೀಧರ ನಿರುದ್ಯೋಗಿಗಳಿಗೆ ಭತ್ಯೆ ಮುಂತಾದವುಗಳ ವೆಚ್ಚ ವಾರ್ಷಿಕ 2000 ಕೋಟಿ ರೂ.ಗಳನ್ನು ಮೀರುತ್ತದೆ. ಇತರ ಫ್ರೀಬೀಗಳ ಜತೆ ಕೂಡಿಸಿದಾಗ ಇದು ಕೂಡ ಹೊರೆಯೇ ಆಗುತ್ತದೆ. ಇದಕ್ಕೂ ವಿತ್ತೀಯ ಕೊರತೆ ಬಿಡುವುದಿಲ್ಲ.

ಆಪ್‌ ಪಕ್ಷ ಉಚಿತದ ಭರವಸೆ

ಆಮ್ ಆದ್ಮಿ ಪಕ್ಷ (ಎಎಪಿ) ಉಚಿತ ವಿದ್ಯುತ್, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ, ಕೃಷಿ ಸಾಲ ಮನ್ನಾ, ರೂ. 3000ನಂತೆ ನಿರುದ್ಯೋಗ ವಿಮೆ, 2000 ಲೀಟರ್ ವರೆಗೆ ಉಚಿತ ನೀರು, ನಗರ ಪ್ರದೇಶದ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುವ ಭರವಸೆ ನೀಡಿದೆ. ಯಾವುದೇ ಕೃಷಿ ಉತ್ಪನ್ನದ ಮೌಲ್ಯದ 10%ಕ್ಕಿಂತ ಹೆಚ್ಚಿನ ಬೆಂಬಲ ಬೆಲೆ ನೀಡುವುದು WTOಯ ನಿಬಂಧನೆಗಳನ್ನು ಉಲ್ಲಂಘಿಸುತ್ತದೆ. ರೈತರ ಸಾಲ ಮನ್ನಾಗೆ ₹ 36,201 ಕೋಟಿ ವೆಚ್ಚವಾಗುತ್ತದೆ. ಮನೆಗಳಿಗೆ ತಿಂಗಳಿಗೆ 200 ಯೂನಿಟ್‌ಗಳ ಉಚಿತ ವಿದ್ಯುತ್ ಅನ್ನು ಒದಗಿಸುವ ವೆಚ್ಚ ₹ 25830 ಕೋಟಿಗಳು. ಒಟ್ಟು ₹ 62301 ಕೋಟಿಗಳ ಉಚಿತ ಭರವಸೆ. ಇದು ಕೂಡ ಈಡೇರಿಸಲಾಗದ ಆಶ್ವಾಸನೆ, ಮೂಗಿಗೆ ಸವರಿದ ತುಪ್ಪ.

ಬಿಜೆಪಿಯ ಉಚಿತ ಕೊಡುಗೆಗಳು

2024ರ ಸಾಲಿನ ಬಜೆಟ್‌ನಲ್ಲಿ ಬಿಜೆಪಿ ಸರ್ಕಾರ ಗೃಹಿಣಿ ಶಕ್ತಿ ಯೋಜನೆಯಡಿಯಲ್ಲಿ ಪ್ರತಿ ಭೂರಹಿತ ಮಹಿಳಾ ರೈತ ಕಾರ್ಮಿಕರಿಗೆ ತಿಂಗಳಿಗೆ ₹ 1000 ನೀಡುವುದಾಗಿ ಘೋಷಿಸಿತು. ಕರ್ನಾಟಕದಲ್ಲಿ 77,58,600 ಗ್ರಾಮೀಣ ಕುಟುಂಬಗಳಿವೆ. ಮತ್ತು 8.4% ಗ್ರಾಮೀಣ ಕುಟುಂಬಗಳು ಭೂರಹಿತ. ಹೀಗೆ 6,51,722 ಭೂರಹಿತ ಗ್ರಾಮೀಣ ಕುಟುಂಬಗಳಿಗೆ ತಲಾ ಒಬ್ಬ ಕೃಷಿ ಕೆಲಸಗಾರ್ತಿಯಂತೆ ವರ್ಷಕ್ಕೆ ₹ 12000, ಹಾಗೂ ₹ 782 ಕೋಟಿ ವೆಚ್ಚವಾಗುತ್ತದೆ. ಸಂಘಟಿತ ವಲಯದಲ್ಲಿ ಕೆಲಸ ಮಾಡುವ 30 ಲಕ್ಷ ಮಹಿಳೆಯರಿಗೆ ಉಚಿತ ಬಸ್ ಪಾಸ್‌ಗಾಗಿ ₹ 1,000 ಕೋಟಿ ಮತ್ತು ಶಾಲಾ ಕಾಲೇಜುಗಳ 8 ಲಕ್ಷ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್‌ಗಾಗಿ ₹ 350 ಕೋಟಿ ಹೆಚ್ಚುವರಿ ಅನುದಾನ ನೀಡಲಿದೆ. ಇದು ಸೇರಿ ₹ 2132 ಕೋಟಿ ವೆಚ್ಚದ ಲೆಕ್ಕ.

ಇದನ್ನೂ ಓದಿ: ವಿಸ್ತಾರ Explainer : ಏನಿದು ಮಹಿಳಾ ಕುಸ್ತಿಪಟುಗಳು, ಕುಸ್ತಿ ಒಕ್ಕೂಟದ ಜಂಗೀ ಕುಸ್ತಿ?

ಕೊರತೆಗೆ ಯಾರ ಕೊಡುಗೆ ಎಷ್ಟು?

ಮೂರೂ ಪಕ್ಷಗಳು ನೀಡಿರುವ ಉಚಿತ ಕೊಡುಗೆಗಳು ರಾಜ್ಯ ಬೊಕಸದ ಮೇಲೆ ಉಂಟುಮಾಡುವ ಹೊರೆಯ ಒಂದು ತುಲನೆ ಮಾಡಬಹುದು. ಕಾಂಗ್ರೆಸ್‌ನ ಉಚಿತಗಳು ವಿತ್ತೀಯ ಕೊರತೆಯ 93.42% ಮತ್ತು GSDPಯ 2.43% ಆಗುತ್ತವೆ. AAPನ ಕೊಡುಗೆಗಳು ವಿತ್ತೀಯ ಕೊರತೆಯ 103% ಮತ್ತು GSDPಯ 2.59% ಕಬಳಿಸುತ್ತವೆ. ಆದರೆ ಬಿಜೆಪಿಯು ಪ್ರಸ್ತುತ 3.52%ನಷ್ಟು ವಿತ್ತೀಯ ಕೊರತೆಯನ್ನು ಹಾಗೂ GSDPಯ ಸುಮಾರು 0.09% ಕೊರತೆಯನ್ನು ಪೋಷಿಸುತ್ತಿದೆ. ಕಾಂಗ್ರೆಸ್‌ನ ಉಚಿತಗಳಿಂದ ಒಟ್ಟು ವಿತ್ತೀಯ ಕೊರತೆಯು ಜಿಎಸ್‌ಡಿಪಿಯ 5.02%ರಷ್ಟು ಮತ್ತು ₹ 1.17 ಲಕ್ಷ ಕೋಟಿಗೆ ಏರುತ್ತದೆ. ಆಪ್‌ ಕೊರತೆ ಜಿಎಸ್‌ಡಿಪಿಯ 5.26%ಕ್ಕೆ ಮತ್ತು ಬಿಜೆಪಿಯ ಕೊರತೆ ಜಿಎಸ್‌ಡಿಪಿಯ 2.69%ಕ್ಕೆ ಏರುತ್ತದೆ. ಕಾಂಗ್ರೆಸ್‌ ಮತ್ತು ಆಪ್‌ ಉಚಿತ ಕೊಡುಗೆಗಳು ವಿತ್ತೀಯ ಕೊರತೆಯನ್ನು ಬಹುತೇಕ ದ್ವಿಗುಣಗೊಳಿಸಿ ಕರ್ನಾಟಕದ ಆರ್ಥಿಕತೆಗೆ ಅಪಾಯವನ್ನುಂಟುಮಾಡುತ್ತವೆ. 3% ಮೇಲ್ಮಿತಿಯ ನಿಯಮವನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತವೆ. ಬಿಜೆಪಿಯ ಒಟ್ಟು ವಿತ್ತೀಯ ಕೊರತೆಯು ಜಿಎಸ್‌ಡಿಪಿಯ 2.69%ರಷ್ಟಿದ್ದು, ಕೆಎಫ್‌ಆರ್‌ಎ ಮಿತಿಯಲ್ಲಿದೆ.

ಅಧಿಕಾರಕ್ಕೆ ಅಂಟಿಕೊಳ್ಳುವುದಕ್ಕಾಗಿ ಆರ್ಥಿಕತೆಯನ್ನು ಕೆಳಕ್ಕೆ ತಳ್ಳುವುದು, ಜನತೆ ಹೆಚ್ಚಿನ ಹಣದುಬ್ಬರದಿಂದ ಬಳಲುವಂತೆ ಮಾಡುವುದು ಅಪಾಯಕರ. ಜನಪ್ರಿಯತೆಗಾಗಿ ಉಚಿತ ಕೊಡುಗೆಗಳನ್ನು ನೀಡುವ ದೇಶಗಳು ನಾಶವಾಗಿವೆ. ಉದಾಹರಣೆಗೆ ಶ್ರೀಲಂಕಾ ಮತ್ತು ಪಾಕಿಸ್ತಾನ. ಆರ್ಥಿಕತೆಯ ಸಂಭಾವ್ಯ ಕುಸಿತವನ್ನು ತಪ್ಪಿಸಲು ರಾಜ್ಯದ ಆರ್ಥಿಕ ಆರೋಗ್ಯದ ಬಗ್ಗೆ ಮತದಾರರು ತಿಳಿವಳಿಕೆ ಗಳಿಸುವುದು ಅಗತ್ಯ. ರಾಜಕೀಯ ಪಕ್ಷಗಳು ಮತದಾರರ ಮತ್ತು ರಾಜ್ಯದ ಆರ್ಥಿಕ ಆರೋಗ್ಯದ ಬಗ್ಗೆ ಜವಾಬ್ದಾರಿಯುತವಾಗಿ, ಧನಾತ್ಮಕವಾಗಿ ಯೋಚಿಸಬೇಕು.

ಇದನ್ನೂ ಓದಿ: ವಿಸ್ತಾರ Explainer: ಜೈಲಿನಿಂದ ಬಿಡುಗಡೆಯಾದ ಕೊಲೆ ಅಪರಾಧಿ, ಮಾಜಿ ಸಂಸದ, ʻಬಾಹುಬಲಿ’ ಯಾರಿವನು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

EXPLAINER

150 ಮೀಟರ್‌ ಸುರಂಗ ಕುಸಿತ, 57 ಮೀಟರ್‌ ಕೊರೆತ! 41 ಕಾರ್ಮಿಕರನ್ನು ರಕ್ಷಿಸಿದ್ದು ಹೇಗೆ?

12 ದಿನಗಳವರೆಗೆ ಸತತವಾಗಿ ಕಾರ್ಯಾಚರಣೆ ನಡೆಸಿ ಸುರಂಗದಲ್ಲಿ ಸಿಲುಕಿದ 41 ಕಾರ್ಮಿಕರನ್ನು ರಕ್ಷಿಸಲಾಗಿದೆ. ಹಾಗಾದರೆ, ಇದುವರೆಗೆ ನಡೆದ ಕಾರ್ಯಾಚರಣೆ ಹೇಗಿತ್ತು? ಯಾವ ಸವಾಲುಗಳು ಎದುರಾದವು? ಆದರೂ ಮುನ್ನಡೆ ಸಾಧಿಸಿದ್ದು ಹೇಗೆ ಎಂಬುದರ ಕಿರು ಮಾಹಿತಿ ಇಲ್ಲಿದೆ.

VISTARANEWS.COM


on

Uttarakhand Tunnel Collapse
Koo

ಡೆಹ್ರಾಡೂನ್:‌ ‌ಉತ್ತರಾಖಂಡದ ಉತ್ತರಕಾಶಿ (Uttarkashi Tunnel Collapse)ಜಿಲ್ಲೆಯಲ್ಲಿ ಸುರಂಗ ಕುಸಿದು ಅಪಾಯಕ್ಕೆ ಸಿಲುಕಿದ್ದ 41 ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ(Uttarkashi Tunnel Rescue). ನವೆಂಬರ್‌ 12ರಂದೇ ಸುರಂಗ ಕುಸಿದಿದ್ದು, ಸತತವಾಗಿ 17 ದಿನ ಕಾರ್ಯಾಚರಣೆ (Rescue Operation) ಕೈಗೊಂಡು ಜನರನ್ನು ರಕ್ಷಣೆ ಮಾಡಲಾಗಿದೆ. ಹಾಗಂತ ಈ 17 ದಿನಗಳ ರಕ್ಷಣಾ ಕಾರ್ಯಾಚರಣೆಯು ಸುಲಭವಾಗಿರಲಿಲ್ಲ. ಭೂಕುಸಿತ, ರಕ್ಷಣೆಗೆ ಬಳಸಿದ ಪೈಪ್‌ಗಳು ಕತ್ತರಿಸುವುದು ಸೇರಿ ಹಲವು ಸವಾಲುಗಳು ಎದುರಾದವು. ಹಾಗಾದರೆ, 17 ದಿನಗಳ ಕಾರ್ಯಾಚರಣೆ ಹೇಗಿತ್ತು? ಇಲ್ಲಿದೆ ಮಾಹಿತಿ.

ಇಲಿ ಬಿಲ ಗಣಿಗಾರಿಕೆ ತಂತ್ರದಿಂದಲೇ ಸಕ್ಸೆಸ್

56 ಮೀಟರ್ ಉದ್ದ ಅವಶೇಷಗಳ ನಡುವೆ ಡ್ರಿಲಿಂಗ್ ಮಾಡಲು ಆಗರ್ ಯಂತ್ರ ಪ್ರಯತ್ನಿಸಿದು. ಆದರೆ, ಇನ್ನು 20 ಮೀಟರ್ ಬಾಕಿ ಇದೆ ಎನ್ನುವಾಗಲೇ ಆ ಡ್ರಿಲಿಂಗ್ ಯಂತ್ರ ಕೈಕೊಟ್ಟಿತು. ಆಗ ರಕ್ಷಣಾ ಸಂಸ್ಥೆಗಳು ರೂಪಿಸಿದ್ದೇ ‘ರ‍್ಯಾಟ್‌ ಹೋಲ್’‌ ಮೈನಿಂಗ್‌. ಅಂತಿಮವಾಗಿ ಇಲಿ ಬಿಲ ಮೈನಿಂಗ್ ತಂತ್ರದ ಮೂಲಕವೇ ಸಿಲುಕಿದ್ದ ಕಾರ್ಮಿಕರನ್ನು ತಲುಪಲು ಸಾಧ್ಯವಾಯಿತು ಮತ್ತು ಮಂಗಳವಾರ 8 ಗಂಟೆ ಹೊತ್ತಿಗೆ ಎಲ್ಲ 41 ಕಾರ್ಮಿಕರನ್ನು ರಕ್ಷಣೆ ಮಾಡಲು ಸಾಧ್ಯವಾಯಿತು.

ರ‍್ಯಾಟ್‌ ಹೋಲ್‌ ಮೈನಿಂಗ್‌ ಎಂದರೆ, ಇಲಿಯಂತೆಯೇ ಚಿಕ್ಕದಾದ ರಂಧ್ರಗಳನ್ನು ಕೊರೆಯುವುದು. ಮನುಷ್ಯರು ಸುಲಭವಾಗಿ ಆ ರಂಧ್ರದಿಂದ ಹೊರಬರಲು ಈ ರೀತಿಯ ರಂಧ್ರಗಳನ್ನು ಕೊರೆಯುತ್ತಾರೆ. ಉತ್ತರಕಾಶಿ ಸುರಂಗದಲ್ಲಿ ಯಂತ್ರಗಳಿಂದಲೂ ಕೊರೆಯಲು ಸಾಧ್ಯವಾಗದ ಕಾರಣ ಈ ಪ್ಲಾನ್‌ ರೂಪಿಸಿ ಯಶಸ್ಸು ಕಾಣಲಾಗಿದೆ. ಇದಕ್ಕೂ ಮೊದಲು ಲಂಬವಾಗಿ 86 ಮೀಟರ್‌ ಕೊರೆಯುವ ಪ್ಲ್ಯಾನ್ ಕೂಡ ಜಾರಿ ಮಾಡಲಾಗಿತ್ತು. ಅಲ್ಲದೇ ಲಂಬವಾಗಿ 36 ಮೀಟರ್‌ ಕೂಡ ಕೊರೆಯಲಾಗಿತ್ತು. ಬಳಿಕ ರ‍್ಯಾಟ್‌ ಹೋಲ್‌ ಮೈನಿಂಗ್‌ ತಂತ್ರದ ಮೂಲಕ ಕೊರೆಯುವ ಕೆಲಸ ಆರಂಭಿಸಲಾಯಿತು. ಅಂತಿಮವಾಗಿ ಮಂಗಳವಾರ ಸಕ್ಸೆಸ್ ದೊರೆಯಿತು.

57 ಮೀಟರ್‌ ಸುರಂಗ ಕೊರೆತ

41 ಕಾರ್ಮಿಕರನ್ನು ಸುರಂಗದಿಂದ ರಕ್ಷಿಸಲು 17 ದಿನಗಳಲ್ಲಿ 57 ಮೀಟರ್‌ ಸುರಂಗವನ್ನು ಕೊರೆಯಲಾಗಿದೆ. ಜೆಸಿಬಿ, ಅತ್ಯಾಧುನಿಕ ಡ್ರಿಲ್ಲಿಂಗ್‌ ಯಂತ್ರಗಳು, ನುರಿತ ಸಿಬ್ಬಂದಿಯು ಇಷ್ಟು ಮೀಟರ್‌ ಸುರಂಗ ಕೊರೆದು, ಅದರ ಅವಶೇಷಗಳನ್ನು ಹೊರಗೆ ಹಾಕಿ, ಕೊನೆಗೂ ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ. ಸುಮಾರು 150 ಮೀಟರ್‌ ಸುರಂಗ ಕುಸಿದಿತ್ತು. ಇಷ್ಟೂ ಮೀಟರ್‌ ಸುರಂಗ ಕೊರೆಯಲು ಸಾಧ್ಯವಾಗದ ಕಾರಣ ಉಪಾಯ ಮಾಡಿ, ಕೇವಲ 57 ಮೀಟರ್‌ ಸುರಂಗವನ್ನಷ್ಟೇ ಕೊರೆದು ಜನರನ್ನು ರಕ್ಷಣೆ ಮಾಡಲಾಗಿದೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ ಏಜೆನ್ಸಿಗಳು

ಸುರಂಗದಲ್ಲಿ ಡ್ರಿಲ್ಲಿಂಗ್‌, ವರ್ಟಿಕಲ್‌ ಡ್ರಿಲ್ಲಿಂಗ್‌ ಸೇರಿ ಹಲವು ರೀತಿಯಲ್ಲಿ ಕಾರ್ಯಾಚರಣೆ ನಡೆಸಲು ದೇಶದ ಐದು ಏಜೆನ್ಸಿಗಳು ಭಾಗಿಯಾದವು. ಆಯಿಲ್‌ ಆ್ಯಂಡ್‌ ನ್ಯಾಚುರಲ್‌ ಗ್ಯಾಸ್‌ ಕಾರ್ಪೊರೇಷನ್‌ (ONGC), ಸತ್ಲುಜ್‌ ಜಲ ವಿದ್ಯುತ್‌ ನಿಗಮ (SJVNL), ರೈಲ್‌ ವಿಕಾಸ ನಿಗಮ ಲಿಮಿಟೆಡ್‌ (RVNL), ನ್ಯಾಷನಲ್‌ ಹೈವೇಸ್‌ ಆ್ಯಂಡ್‌ ಇನ್‌ಫ್ರಾಸ್ಟ್ರಕ್ಚರ್‌ ಡೆವಲಪ್‌ಮೆಂಟ್‌ ಕಾರ್ಪೊರೇಷನ್‌ ಲಿಮಿಟೆಡ್‌ (NHIDCL) ಹಾಗೂ ಟೆಹ್ರಿ ಹೈಡ್ರೋ ಡೆವಲಪ್‌ಮೆಂಟ್‌ ಕಾರ್ಪೊರೇಷನ್‌ ಲಿಮಿಟೆಡ್‌ (THDCL) ಏಜೆನ್ಸಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಿದವು.

ವಿದೇಶಿ ತಜ್ಞರ ಎಂಟ್ರಿ

ಭೂಕುಸಿತ, ಅವಶೇಷಗಳ ಪ್ರಮಾಣ ಜಾಸ್ತಿ ಇರುವುದು ಸೇರಿ ಹಲವು ಸವಾಲುಗಳು ಎದುರಾದ ಕಾರಣ ವಿದೇಶಿ ತಜ್ಞರನ್ನು ಕರೆಸಲಾಯಿತು. ಇಂಟರ್‌ನ್ಯಾಷನಲ್‌ ಟನೆಲಿಂಗ್‌ ಅಂಡರ್‌ಗ್ರೌಂಡ್‌ ಸ್ಪೇಸ್‌ ಪ್ರೊಫೆಸರ್‌ ಸಂಸ್ಥೆಯ ಅಧ್ಯಕ್ಷ ಅರ್ನಾಲ್ಡ್‌ ಡಿಕ್ಸ್‌ ಅವರ ತಂಡವು ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಿತು. ಇನ್ನು ಅಮೆರಿಕದಲ್ಲಿ ತಯಾರಾದ ಯಂತ್ರಗಳು, ಡ್ರಿಲ್ಲಿಂಗ್‌ ಮಷೀನ್‌ಗಳು, ಪುಶ್‌ ಇನ್‌ ಪೈಪ್‌ಗಳು ಸೇರಿ ಹಲವು ಅತ್ಯಾಧುನಿಕ ಉಪಕರಣಗಳನ್ನು ಬಳಸಲಾಯಿತು.

ಕಾರ್ಯಾಚರಣೆಗೆ ಮುನ್ನಡೆ ಸಿಕ್ಕಿದ್ದು ಎಲ್ಲಿ?

ಸುರಂಗ ಕುಸಿಯುತ್ತಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿ, ಕಾರ್ಮಿಕರು ಯಾವ ಜಾಗದಲ್ಲಿದ್ದಾರೆ ಎಂಬುದನ್ನು ಪತ್ತೆ ಹಚ್ಚಿ, ಪೈಪ್‌ ಮೂಲಕ ಅವರನ್ನು ಸಂಪರ್ಕಿಸಿದ್ದೇ ಕಾರ್ಯಾಚರಣೆಗೆ ಸಿಕ್ಕ ಬಹುದೊಡ್ಡ ಮುನ್ನಡೆ ಎಂದು ತಿಳಿದುಬಂದಿದೆ. ಕ್ಷಿಪ್ರವಾಗಿ ಕಾರ್ಮಿಕರಿದ್ದ ಸ್ಥಳವನ್ನು ಗುರುತಿಸಿದ್ದು, ಅವರ ಜತೆ ಸಂಪರ್ಕ ಸಾಧಿಸಿದ ಕಾರಣ ಅವರಿಗೆ ಆಹಾರ ಸೇರಿ ಅಗತ್ಯ ಮೂಲ ಸೌಕರ್ಯಗಳನ್ನು ನೀಡಲು ಸಾಧ್ಯವಾಯಿತು. ಅವರಿಗೆ ಧೈರ್ಯ ತುಂಬಿ, ಯೋಗ ಮಾಡಲು ಸಲಹೆ ಕೊಟ್ಟು, ಒತ್ತಡ ನಿರೋಧಕ ಮಾತ್ರೆಗಳನ್ನು ಪೂರೈಸಿ 12 ದಿನವೂ ಅವರು ಯಾವುದೇ ಒತ್ತಡಕ್ಕೆ ಸಿಲುಕದಂತೆ ನೋಡಿಕೊಳ್ಳಲಾಯಿತು. ಇದು ಕಾರ್ಯಾಚರಣೆಗೆ ಸಿಕ್ಕ ಬಹುದೊಡ್ಡ ಮುನ್ನಡೆ ಎನ್ನಲಾಗಿದೆ.

ಉತ್ತರಕಾಶಿ ಜಿಲ್ಲೆಯ ಸಿಲ್‌ಕ್ಯಾರ ಹಾಗೂ ದಂಡಲ್‌ಗಾಂವ್‌ಗೆ ಸಂಪರ್ಕ ಕಲ್ಪಿಸಲು ಚಾರ್‌ ಧಾಮ್‌ ರಸ್ತೆ ಯೋಜನೆ ಅಡಿಯಲ್ಲಿ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. ಸುಮಾರು 4.5 ಕಿಲೋ ಮೀಟರ್‌ ದೂರದ ಸುರಂಗ ನಿರ್ಮಾಣದ ವೇಳೆ ಸುಮಾರು 150 ಮೀಟರ್‌ ಉದ್ದದ ಸುರಂಗ ಕುಸಿದಿತ್ತು. ನವೆಂಬರ್‌ 12ರಂದು ಜಾವ 4 ಗಂಟೆ ಸುಮಾರಿಗೆ ಸುರಂಗ ಕುಸಿದಿದ್ದು, ಕೂಡಲೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು. ಇಷ್ಟಾದರೂ ಕ್ಷಿಪ್ರವಾಗಿ ಕಾರ್ಮಿಕರನ್ನು ರಕ್ಷಣೆ ಮಾಡಲು ಆಗಿರಲಿಲ್ಲ.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಬೃಹತ್ ಕಾಮಗಾರಿ ವೇಳೆ ಕಾರ್ಮಿಕರ ಸುರಕ್ಷತೆ ಖಾತರಿಪಡಿಸಿ

ಉತ್ತರಕಾಶಿಯಿಂದ ಯಮುನೋತ್ರಿಗೆ 26 ಕಿಲೋಮೀಟರ್‌ ಸಂಚರಿಸುವುದನ್ನು ಕಡಿಮೆಗೊಳಿಸಲು ಸುರಂಗ ನಿರ್ಮಿಸಲಾಗುತ್ತಿದೆ. ಸುರಂಗ ಕುಸಿಯುತ್ತಲೇ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರು ಒಳಗೆ ಸಿಲುಕಿದ್ದರು. ಏಕಾಏಕಿ ಸುರಂಗ ಕುಸಿದ ಕಾರಣ ಒಬ್ಬ ಕಾರ್ಮಿಕರೂ ಹೊರಗೆ ಬರಲು ಸಾಧ್ಯವಾಗಿರಲಿಲ್ಲ. ಉತ್ತರಾಖಂಡ ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ನಿರಂತರವಾಗಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ. ಭೂಕುಸಿತ, ಡ್ರಿಲ್ಲಿಂಗ್‌ ಯಂತ್ರಗಳು ಕೈಕೊಟ್ಟಿರುವುದು ಸೇರಿ ಹಲವು ಕಾರಣಗಳಿಂದಾಗಿ ಕಾರ್ಮಿಕರ ರಕ್ಷಣೆಯು ಕಷ್ಟವಾಗಿತ್ತು. ವಿದೇಶಿ ತಜ್ಞರನ್ನೂ ಜನರ ರಕ್ಷಣೆಗೆ ಕರೆಸಲಾಗಿತ್ತು. ಈಗ ಕೊನೆಗೆ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

EXPLAINER

Vistara Explainer: ಎತ್ತ ಸಾಗುತ್ತಿದೆ ಮಯನ್ಮಾರ್ ದಂಗೆ ಮತ್ತು ರೋಹಿಂಗ್ಯಾ ಬಿಕ್ಕಟ್ಟು?

Vsitara Explainer: ಇಡೀ ಜಗತ್ತು ಇಸ್ರೇಲ್-ಹಮಾಸ್ ನಡುವಿನ ಸಂಘರ್ಷದ ಬಗ್ಗೆ ಚಿಂತಿತವಾಗಿದೆ. ಆದರೆ ಸದ್ದಿಲ್ಲದೆ, ನಮ್ಮ ನೆರೆಯ ಮಯನ್ಮಾರ್‌ನಲ್ಲಿ ಜನಾಂಗೀಯ ಕದನ ಸ್ಫೋಟಗೊಳ್ಳುವ ಹಂತಕ್ಕೆ ಬಂದು ತಲುಪಿದೆ. ಅಂತಾರಾಷ್ಟ್ರೀಯ ಸಮುದಾಯ ಇತ್ತ ಚಿತ್ತ ಹರಿಸುವುದೇ?

VISTARANEWS.COM


on

vistara explainer about Myanmar insurgency and Rohingya crisis on the rise
Koo
Girish-Linganna

| ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು
ಕಳೆದ ಶನಿವಾರ ಇಸ್ರೇಲಿ ಸೇನೆ ಉತ್ತರ ಗಾಜಾದ ಜಬಾಲಿಯಾದಲ್ಲಿನ (Israel-Palestine War) ವಿಶ್ವಸಂಸ್ಥೆಯ ನಿರಾಶ್ರಿತ ಶಿಬಿರದ ಮೇಲೆ ನಡೆಸಿದ ವಾಯುದಾಳಿಯಲ್ಲಿ 80ಕ್ಕೂ ಹೆಚ್ಚು ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದರು. ಅಲ್ಲಿನ ಸಾವಿರಾರು ನಾಗರಿಕರಲ್ಲಿ ಭೀತಿ ಮೂಡಿಸಿದೆ. ಆದರೆ ನಾಗರಿಕರ ಸಾವಿಗೆ ಕಾರಣವಾದ ಈ ದಾಳಿಯನ್ನು ಜಗತ್ತು ಪ್ರಶ್ನಿಸಿದೆ. ಅದೇ ದಿನ, ಇಸ್ರೇಲಿ ಸೇನೆಯ ವಾಯುದಾಳಿಯಲ್ಲಿ, ಜಬಾಲಿಯ ನಿರಾಶ್ರಿತ ಶಿಬಿರದಲ್ಲಿ ವಿಶ್ವಸಂಸ್ಥೆಯ ಏಜೆನ್ಸಿ (UNRWA) ಪ್ಯಾಲೆಸ್ತೀನಿಯನ್ ನಿರಾಶ್ರಿತರಿಗಾಗಿ ನಡೆಸುತ್ತಿರುವ ಅಲ್-ಫಖೌರಾ ಶಾಲೆಯ ಮೇಲೆ ನಡೆದ ವಾಯುದಾಳಿಯಲ್ಲಿ ಮತ್ತು ಉತ್ತರ ಗಾಜಾದಲ್ಲಿನ ತಾಲ್ ಅಜ಼್ ಜ಼ಾತಾರ್ ಶಾಲೆಯ ಮೇಲೆ ನಡೆದ ದಾಳಿಯಲ್ಲಿ 50 ಪ್ಯಾಲೆಸ್ತೀನಿಯನ್ನರು ಸಾವಿಗೀಡಾದರು. ಈ ಘಟನೆಗಳಿಗೆ ಜಗತ್ತಿನಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಯಿತು. ಆದರೆ, ಕಳೆದ ವಾರದ ಮಧ್ಯಭಾಗದಲ್ಲಿ ನೆರೆಯ ಮಯನ್ಮಾರ್(Myanmar) ದೇಶದ, ಚಿನ್ ಸ್ಟೇಟ್‌ನ ಪರ್ವತ ಪ್ರದೇಶದ ವುಯ್ಲು ಗ್ರಾಮದ ಶಾಲೆಯ ಬಳಿ ಮಿಲಿಟರಿ ಜೆಟ್ ಬಾಂಬ್ ದಾಳಿ(Military Jet bomb attack) ನಡೆಸಿದ ಪರಿಣಾಮವಾಗಿ ಹನ್ನೊಂದು ಜನರು ಸಾವನ್ನಪ್ಪಿದರು. ಅವರಲ್ಲಿ ಎಂಟು ಜನ ಏಳರಿಂದ ಹನ್ನೊಂದರ ಹರೆಯದ ಮಕ್ಕಳಾಗಿದ್ದರು. ಆದರೆ ಈ ಘಟನೆ ಯಾಕೋ ಜಗತ್ತಿನ ಗಮನಕ್ಕೇ ಬರಲಿಲ್ಲ.(Vistara Explainer)

ಈ ವರ್ಷದ ಅಕ್ಟೋಬರ್ ತಿಂಗಳ ಆರಂಭದಲ್ಲಿ, ಉತ್ತರ ಮಯನ್ಮಾರ್‌ನ ಕಚಿನ್ ಸ್ಟೇಟ್ ಪ್ರದೇಶದ ಲಾಯ್ಜಾ ಪಟ್ಟಣದ ಬಳಿ, ಚೀನಾ ಗಡಿಯ ಸಮೀಪ, ಆಂತರಿಕವಾಗಿ ಸ್ಥಳಾಂತರಗೊಂಡ ಜನರಿಗಾಗಿ ಇರುವ ಶಿಬಿರದಲ್ಲಿ ಮಕ್ಕಳೂ ಸೇರಿದಂತೆ ಕನಿಷ್ಠ 29 ನಾಗರಿಕರನ್ನು ಮಿಲಿಟರಿ ದಾಳಿಯೊಂದರಲ್ಲಿ ಕೊಲೆಗೈಯಲಾಯಿತು. ಇದೂ ಜಗತ್ತಿನ ಗಮನದಿಂದ ದೂರವೇ ಉಳಿಯಿತು.

ಆಗ್ನೇಯ ಏಷ್ಯಾದ, 5.4 ಕೋಟಿ ಜನಸಂಖ್ಯೆ ಹೊಂದಿರುವ ರಾಷ್ಟ್ರವಾದ ಮಯನ್ಮಾರ್, ಈಗ ಆಂತರಿಕ ಯುದ್ಧದ ದಳ್ಳುರಿಗೆ ಸಿಲುಕಿ ನರಳುತ್ತಿದೆ. ಅಸಂಖ್ಯಾತ ಶಸ್ತ್ರಸಜ್ಜಿತ ಜನಾಂಗೀಯ ಗುಂಪುಗಳು ಮತ್ತು ಪ್ರಜಾಪ್ರಭುತ್ವ ಪರ ಗುಂಪುಗಳು 2021ರಲ್ಲಿ ಕ್ಷಿಪ್ರ ಕ್ರಾಂತಿ ನಡೆಸಿ, ಜನಾದೇಶ ಹೊಂದಿದ್ದ ಸರ್ಕಾರವನ್ನು ಕಿತ್ತಸೆದಿದ್ದ ಮಿಲಿಟರಿ ಜುಂಟಾ ವಿರುದ್ಧ ಕದನಕ್ಕಿಳಿದಿವೆ. ಭಾರತದ ಮಿಜೋರಾಂ ರಾಜ್ಯದ ಜೌಖಾತರ್ ಪ್ರದೇಶಕ್ಕೆ ಸನಿಹದಲ್ಲಿರುವ ಚಿನ್ ಸ್ಟೇಟ್ ಮಿಲಿಟರಿ ಆಡಳಿತದ ವಿರುದ್ಧ ನಿರಂತರವಾಗಿ ತನ್ನ ಪ್ರತಿರೋಧ ವ್ಯಕ್ತಪಡಿಸುತ್ತಾ ಬಂದಿದೆ. ಕಳೆದ ಮೂರು ವಾರಗಳಿಂದ ಮಿಲಿಟರಿ ಆಡಳಿತಕ್ಕೆ ದೇಶಾದ್ಯಂತ ವಿರೋಧಿ ಗುಂಪುಗಳಿಂದ ಭಾರೀ ಪ್ರತಿರೋಧ ವ್ಯಕ್ತವಾಗಿದ್ದು, ಸೇನೆ ಸಾಕಷ್ಟು ಹಿನ್ನಡೆ ಅನುಭವಿಸಿದೆ. ಆದ್ದರಿಂದ ಅದು ಮೇಲುಗೈ ಸಾಧಿಸಲು ಬಹುತೇಕ ವಾಯುಪಡೆಯ ಮೇಲೆ ಅವಲಂಬಿತವಾಗಿದೆ. ಚಿನ್ ಜನಾಂಗೀಯ ಗುಂಪು ಇತ್ತೀಚೆಗೆ ಗಡಿ ಪಟ್ಟಣವಾದ ರಿಖಾವ್ದರ್ ಅನ್ನು ವಶಪಡಿಸಿಕೊಂಡಿದೆ.

ಇತ್ತೀಚಿನ ವಾರಗಳಲ್ಲಿ, ಮಯನ್ಮಾರ್ ಆದ್ಯಂತ ಮಿಲಿಟರಿ ಆಡಳಿತ ಭಾರೀ ಪ್ರತಿರೋಧ ಎದುರಿಸಿದೆ. ಚೀನಾ ಗಡಿಯಾದ್ಯಂತ ಶಾನ್ ಸ್ಟೇಟ್ ಪ್ರದೇಶದಲ್ಲಿರುವ ಮೂರು ದೀರ್ಘಕಾಲೀನ ಜನಾಂಗೀಯ ಅಲ್ಪಸಂಖ್ಯಾತ ಶಸ್ತ್ರಸಜ್ಜಿತ ಗುಂಪುಗಳು ಮತ್ತು ದೇಶಾದ್ಯಂತ ಇರುವ ಪ್ರಜಾಪ್ರಭುತ್ವ ಪರ ಹೋರಾಟಗಾರರ ಕೂಟ ಸೇನೆ ಮತ್ತು ಪೊಲೀಸರನ್ನು ತಮ್ಮ ಪ್ರದೇಶಗಳಿಂದ ಹೊರಹಾಕುತ್ತಿವೆ. ಆಪರೇಶನ್ 1027 ಎಂಬ ರಹಸ್ಯ ಹೆಸರು ಹೊಂದಿರುವ ಹೊಸ ಆಕ್ರಮಣ ಅಕ್ಟೋಬರ್ 27ರಂದು ಆರಂಭಗೊಂಡಿತು. ಇದನ್ನು ನ್ಯಾಷನಲ್ ಡೆಮಾಕ್ರಟಿಕ್ ಅಲಯನ್ಸ್ ಆರ್ಮಿ, ಅರಾಕನ್ ಆರ್ಮಿ, ಹಾಗೂ ಟಾಂಗ್ ನ್ಯಾಷನಲ್ ಲಿಬರೇಶನ್ ಆರ್ಮಿಗಳನ್ನು ಒಳಗೊಂಡ ತ್ರೀ ಬ್ರದರ್‌ಹುಡ್ ಅಲಯನ್ಸ್ ಕೈಗೊಳ್ಳುತ್ತಿವೆ.

ಸೇನಾಡಳಿತಕ್ಕೆ ತೀವ್ರ ವಿರೋಧ

ಶಾನ್ ಸ್ಟೇಟ್‌ನಲ್ಲಿ ಮೂರು ಸಶಸ್ತ್ರ ಜನಾಂಗೀಯ ಗುಂಪುಗಳು ಸಾಧಿಸಿರುವ ಭಾರೀ ಯಶಸ್ಸು ಮಯನ್ಮಾರ್‌ನ ಇತರ ವಿರೋಧೀ ಪಡೆಗಳಿಗೆ ಇನ್ನಷ್ಟು ಧೈರ್ಯ ತುಂಬಿದೆ. ಮಯನ್ಮಾರ್ ಮಿಲಿಟರಿ ಆಡಳಿತ ತಾನು ಕಳೆದ ತಿಂಗಳ ಕೊನೆಯ ಭಾಗದಿಂದ ದಂಗೆ ವಿರೋಧಿ ಪಡೆಗಳಿಂದ ಪ್ರಬಲ ಪ್ರತಿರೋಧ ಎದುರಿಸುತ್ತಿದ್ದು, ಅವರು ಹಲವು ಗಡಿ ಪಟ್ಟಣಗಳು ಮತ್ತು ಬಹಳಷ್ಟು ಸೇನಾ ಹೊರಠಾಣೆಗಳನ್ನು ವಶಪಡಿಸಿಕೊಂಡಿವೆ ಎಂದು ಒಪ್ಪಿಕೊಂಡಿದೆ. ಮಯನ್ಮಾರ್ ಸೇನೆ ಭಾರತದ ಗಡಿಯಾದ್ಯಂತ ಬಹುತೇಕ ಪ್ರದೇಶಗಳ ಮೇಲೆ ತನ್ನ ನಿಯಂತ್ರಣ ಕಳೆದುಕೊಂಡಿದೆ.

ಮಯನ್ಮಾರ್ ಪೂರ್ವದಲ್ಲಿ ಕಯಾ ಸ್ಟೇಟ್‌ನ ಕ್ರಾಂತಿಕಾರಿಗಳು, ಪಶ್ಚಿಮದಲ್ಲಿ ರಖಿನ್ ಸ್ಟೇಟ್ ಕ್ರಾಂತಿಕಾರಿಗಳು, ಮತ್ತು ವಿಶೇಷವಾಗಿ ಉತ್ತರದ ಶಾನ್ ಸ್ಟೇಟ್‌ನ ಪ್ರಜಾಪ್ರಭುತ್ವ ಪರ ಹೋರಾಟಗಾರರು ಸೇನೆಯ ಮೇಲೆ ಭಾರೀ ದಾಳಿ ನಡೆಸುತ್ತಿದ್ದಾರೆ ಎಂದು ಸರ್ಕಾರ ಒಪ್ಪಿಕೊಂಡಿದೆ. ಈ ಹೋರಾಟಗಾರರು ನೂರಾರು ಡ್ರೋನ್‌ಗಳನ್ನು ಬಳಸಿಕೊಂಡು, ಸೇನಾ ನೆಲೆಗಳ ಮೇಲೆ ಬಾಂಬ್‌ಗಳನ್ನು ಸುರಿಸುತ್ತಿದ್ದಾರೆ. ಮಿಲಿಟರಿ ಬೆಂಬಲಿತ ಮಯನ್ಮಾರ್ ಅಧ್ಯಕ್ಷ ವಿನ್ ಮೀಂಟ್ ಅವರು, ಒಂದು ವೇಳೆ ಸರ್ಕಾರ ಏನಾದರೂ ಗಲಭೆ ಪೀಡಿತ ಶಾನ್ ಸ್ಟೇಟ್ ಪ್ರದೇಶದಲ್ಲಿ ಹಿಡಿತ ಬಿಗಿಪಡಿಸಿಕೊಳ್ಳಲು ಸಾಧ್ಯವಾಗದಿದ್ದರೆ ದೇಶ ವಿಭಜನೆಗೊಳ್ಳುವ ಅಪಾಯವಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ವಿಶ್ವ ಸಂಸ್ಥೆ ಕಳವಳ

ಇಸ್ರೇಲ್ – ಹಮಾಸ್ ಯುದ್ಧದ ರೀತಿಯಲ್ಲೇ, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರೆಸ್ ಅವರು ಮಯನ್ಮಾರ್‌ನಲ್ಲಿ ಹೆಚ್ಚುತ್ತಿರುವ ಹಿಂಸಾಚಾರಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ. ಮಯನ್ಮಾರ್ ಅಂತರ್ಯುದ್ಧದಲ್ಲಿ ಬಹುತೇಕ ಇಪ್ಪತ್ತು ಲಕ್ಷ ಜನರು ಸ್ಥಳಾಂತರಗೊಂಡಿದ್ದು, ಮಕ್ಕಳೂ ಸೇರಿದಂತೆ 75 ನಾಗರಿಕರು ಸಾವಿಗೀಡಾಗಿದ್ದಾರೆ. ಗುಟೆರೆಸ್ ಎಲ್ಲ ಯುದ್ಧದಲ್ಲಿ ಭಾಗವಹಿಸುವವರಿಗೂ ಸಾಮಾನ್ಯ ನಾಗರಿಕರನ್ನು ರಕ್ಷಿಸಲು ಮತ್ತು ಪರಿಹಾರ ಸಾಮಗ್ರಿಗಳನ್ನು ಪೂರೈಸಲು ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.

ತಾಮಡವ್ ಎಂದು ಕರೆಯಲಾಗುವ ಮಯನ್ಮಾರ್ ಸೇನೆ ಕ್ಷಿಪ್ರ ಕ್ರಾಂತಿ ನಡೆಸಿ, ಫೆಬ್ರವರಿ 1, 2021ರಂದು ನಾಗರಿಕ ನಾಯಕಿ ಆ್ಯಂಗ್ ಸಾನ್ ಸೂಕಿ ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್ಎಲ್‌ಡಿ) ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆದ ಬಳಿಕ, ಮಯನ್ಮಾರ್‌ನಲ್ಲಿ ವ್ಯಾಪಕ ಹಿಂಸಾಚಾರ ಆರಂಭಗೊಂಡಿತು.

2021ರ ದಂಗೆ, ಕಳೆದ ಹತ್ತು ವರ್ಷಗಳಿಂದ ಮಿಲಿಟರಿ ಮತ್ತು ನಾಗರಿಕ ಸರ್ಕಾರದ ನಡುವೆ ನಡೆಯುತ್ತಿದ್ದ ಅಧಿಕಾರದ ಸ್ಪರ್ಧೆಗೆ ಅಂತ್ಯ ಹಾಡಿತು. ಅವೆರಡೂ 2008ರಲ್ಲಿ ಮಿಲಿಟರಿ ರಚಿಸಿದ ಸಂವಿಧಾನದಡಿ ಅಧಿಕಾರ ಹಂಚಿಕೊಂಡಿದ್ದವು. ಈ ಸಂವಿಧಾನ, ಮಯನ್ಮಾರ್ ಸೇನೆಗೆ ಸಂಸತ್ತಿನಲ್ಲಿ ಕಾಲು ಭಾಗ ಸದಸ್ಯತ್ವವನ್ನು, ಪ್ರಮುಖ ಸಚಿವಾಲಯಗಳ ನಿಯಂತ್ರಣ, ಸಂವಿಧಾನ ತಿದ್ದುಪಡಿಗಳ ಮೇಲೆ ವಿಟೋ ಅಧಿಕಾರ ನೀಡಿತ್ತು ಮತ್ತು ಆ್ಯಂಗ್ ಸಾನ್ ಸೂಕಿ ಅವರಿಗಿದ್ದ ವಿದೇಶೀ ಕುಟುಂಬ ಸಂಬಂಧದ ಕಾರಣದಿಂದ ಅವರಿಗೆ ಅಧ್ಯಕ್ಷರಾಗುವ ಅಧಿಕಾರವನ್ನು ನಿರಾಕರಿಸಿತ್ತು.

ಮಯನ್ಮಾರ್ ಮಿಲಿಟರಿ ಜುಂಟಾ ನವೆಂಬರ್ 2020ರ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದಯ ಆರೋಪಿಸಿ, ತಾನು ನಡೆಸಿದ ಕ್ಷಿಪ್ರ ಕ್ರಾಂತಿಯನ್ನು ಸಮರ್ಥಿಸಿಕೊಂಡಿತ್ತು. ಆದರೆ ಸೇನೆಯ ಆರೋಪಗಳನ್ನು ಚುನಾವಣಾ ಆಯೋಗ ಮತ್ತು ಅಂತಾರಾಷ್ಟ್ರೀಯ ವೀಕ್ಷಕರು ನಿರಾಕರಿಸಿ, ಚುನಾವಣೆ ಮುಕ್ತವಾಗಿ, ನ್ಯಾಯಯುತವಾಗಿ ನಡೆದಿತ್ತು ಎಂದಿದ್ದರು. ಅಂತಾರಾಷ್ಟ್ರೀಯ ಸಮುದಾಯ ಸೇನಾ ಕ್ರಾಂತಿಯನ್ನು ಖಂಡಿಸಿ, ಸೇನೆಯ ಮೇಲೆ ನಿರ್ಬಂಧಗಳನ್ನು ಹೇರಿ, ಚೀನಾ ಮತ್ತು ರಷ್ಯಾಗಳಂತಹ ಮಿತ್ರರಾಷ್ಟ್ರಗಳಿಗೆ ಈ ಬಿಕ್ಕಟ್ಟನ್ನು ಕೊನೆಗೊಳಿಸಲು ನೆರವಾಗುವಂತೆ ಕೋರಿತ್ತು.

ಈ ದಂಗೆಗೆ ಪ್ರತಿಕ್ರಿಯೆಯಾಗಿ, ಮಯನ್ಮಾರ್ ನಾಗರಿಕರು ಬೃಹತ್ ಕ್ರಾಂತಿಯನ್ನೇ ಆರಂಭಿಸಿದರು. ಅವರು ತಮ್ಮ ಚುನಾಯಿತ ಸರ್ಕಾರದ ಮರುಸ್ಥಾಪನೆಯಾಗಬೇಕು ಮತ್ತು ಮಾನವ ಹಕ್ಕುಗಳು ಲಭ್ಯವಾಗಬೇಕು ಎಂದು ಆಗ್ರಹಿಸತೊಡಗಿದರು. ಈ ಹೋರಾಟದಲ್ಲಿ ಜನಾಂಗೀಯ ಅಲ್ಪಸಂಖ್ಯಾತರು, ಮಹಿಳೆಯರು, ಯುವಕರು ಮತ್ತು ನಾಗರಿಕ ಸೇವಾ ಉದ್ಯೋಗಿಗಳು ಸೇರಿದಂತೆ, ಎಲ್ಲಾ ಸ್ತರಗಳ ಜನರೂ ಭಾಗಿಯಾಗಿ, ಶಾಂತಿಯುತ ರೀತಿಯಲ್ಲಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸತೊಡಗಿದರು. ಆದರೆ ಮಯನ್ಮಾರ್ ಸೇನೆ ಇದಕ್ಕೆ ಭಾರೀ ಬಲಪ್ರಯೋಗದ ಮೂಲಕ ಪ್ರತಿಕ್ರಿಯಿಸಿ, ಕ್ಷೋಭೆಯನ್ನು ಇನ್ನಷ್ಟು ಹೆಚ್ಚಿಸಿ, ಮಾನವ ಹಕ್ಕುಗಳನ್ನು ದಮನಿಸಲು ಆರಂಭಿಸಿತು.

ಮಿಲಿಟರಿ ಜುಂಟಾ ಪ್ರತಿಭಟನಾಕಾರರನ್ನು ಚದುರಿಸಲು ಮಾರಣಾಂತಿಕ ಪ್ರಹಾರ ನಡೆಸಿದ ಪರಿಣಾಮವಾಗಿ, ಸಾಕಷ್ಟು ಜನರು ಪ್ರಾಣ ಕಳೆದುಕೊಂಡರು. ಮಹಿಳೆಯರು, ಮಕ್ಕಳು, ವೈದ್ಯರು, ಪತ್ರಕರ್ತರು, ವೈದ್ಯರು, ಶಿಕ್ಷಕರು ಮತ್ತು ರಾಜಕಾರಣಿಗಳು ಸೇರಿದಂತೆ ಸಾವಿರಾರು ಜನರನ್ನು ವಶಪಡಿಸಿಕೊಂಡು, ಅವರಿಗೆ ಚಿತ್ರಹಿಂಸೆ ನೀಡಿ ಸಾಯಿಸಲಾಯಿತು. ಮಯನ್ಮಾರ್ ಸೇನೆ ಜನಾಂಗೀಯ ಸಶಸ್ತ್ರ ಸಂಘಟನೆಗಳನ್ನು ಗುರಿಯಾಗಿಸಿ ಅವರ ಮೇಲೆ ವಾಯುದಾಳಿ, ಭೂ ಕಾರ್ಯಾಚರಣೆ ಮತ್ತು ವ್ಯಾಪಕ ಸ್ಥಳಾಂತರಗಳನ್ನು ನಡೆಸತೊಡಗಿತು. ಇದು ಭಾರೀ ಮಾನವೀಯ ಬಿಕ್ಕಟ್ಟು ಸೃಷ್ಟಿಸಿತು.

ಈ ಎಲ್ಲ ಕ್ರೌರ್ಯಗಳ ಹೊರತಾಗಿಯೂ, ನಾಗರಿಕ ಪ್ರತಿರೋಧ ಮುಂದುವರಿದಿದೆ. ಆಡಳಿತದಿಂದ ಕಿತ್ತು ಹಾಕಲ್ಪಟ್ಟ ಜನಪ್ರತಿನಿಧಿಗಳು, ವಿವಿಧ ಗುಂಪುಗಳು, ಸಂಘಟನೆಗಳ ಪ್ರತಿನಿಧಿಗಳು ಜೊತೆಯಾಗಿ, ನ್ಯಾಷನಲ್ ಯುನಿಟಿ ಗವರ್ನಮೆಂಟ್ (ಎನ್‌ಯುಜಿ) ಎಂಬ ಪರ್ಯಾಯ ಸರ್ಕಾರವನ್ನು ಸ್ಥಾಪಿಸಿದರು. ಸೇನಾ ಆಡಳಿತವನ್ನು ಕೊನೆಗೊಳಿಸಲು ಮತ್ತು ಪ್ರಜಾಪ್ರಭುತ್ವವನ್ನು ಮರಳಿ ಸ್ಥಾಪಿಸಲು ಅವರು ಪೀಪಲ್ಸ್ ಡಿಫೆನ್ಸ್ ಫೋರ್ಸ್ (ಪಿಡಿಎಫ್) ಎಂಬ ಗೆರಿಲ್ಲಾ ಸೇನೆಯನ್ನು ಸ್ಥಾಪಿಸಿ, ಮಿಲಿಟರಿಯ ದಮನಕಾರಿ ನೀತಿಯ ವಿರುದ್ಧ ಹೋರಾಟ ಆರಂಭಿಸಿದರು. ಎನ್‌ಯುಜಿ ಮಯನ್ಮಾರ್ ನಾಗರಿಕರನ್ನು ರಕ್ಷಿಸಲು, ಶಾಂತಿ ಮರುಸ್ಥಾಪಿಸಲು ಅಂತಾರಾಷ್ಟ್ರೀಯ ಮಾನ್ಯತೆ ಮತ್ತು ಬೆಂಬಲವನ್ನು ಎದುರು ನೋಡುತ್ತಿದೆ.

ಮಯನ್ಮಾರ್ ಆಂತರಿಕ ದಳ್ಳುರಿಯನ್ನು ಎದುರಿಸುತ್ತಿರುವಾಗಲೇ, ರೊಹಿಂಗ್ಯಾದ ಜನಾಂಗೀಯ ಅಲ್ಪಸಂಖ್ಯಾತರಿಗೆ, ಅದರಲ್ಲೂ ಪ್ರಮುಖವಾಗಿ ಮುಸ್ಲಿಮರಿಗೆ ಕಿರುಕುಳ ಮುಂದುವರಿಯುತ್ತಿದೆ. ಮುಖ್ಯವಾಗಿ ರಖಿನ್ ಸ್ಟೇಟ್‌ನಲ್ಲಿ ವಾಸಿಸುತ್ತಿರುವ ರೊಹಿಂಗ್ಯಾಗಳು ಅಪಾರ ತಾರತಮ್ಯಗಳನ್ನು ಎದುರಿಸಿದ್ದು, ಅವರಿಗೆ ಪೌರತ್ವ ನಿರಾಕರಿಸಿ, ಮೂಲಭೂತ ಹಕ್ಕುಗಳಿಂದಲೂ ವಂಚಿಸಲಾಗಿದೆ. ಹಿಂಸಾಚಾರ ಮತ್ತು ಮಿಲಿಟರಿ ಆಕ್ರಮಣ ಅಪಾರ ಸಂಖ್ಯೆಯಲ್ಲಿ ರೊಹಿಂಗ್ಯನ್ನರು ನೆರೆ ರಾಷ್ಟ್ರಗಳಲ್ಲಿ ಆಶ್ರಯ ಕೋರುವಂತೆ ಮಾಡಿದೆ. ಹೆಚ್ಚಿನ ಸಂಖ್ಯೆಯ ರೊಹಿಂಗ್ಯನ್ನರು ಬಾಂಗ್ಲಾದೇಶ ಮತ್ತು ಭಾರತದ ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ಮಯನ್ಮಾರ್‌ನಲ್ಲಿ ಚೀನಾ ಕಿತಾಪತಿ

ಮಯನ್ಮಾರ್‌ನ ರಾಜಕೀಯ ಚಿತ್ರಣದಲ್ಲಿ ಅದರ ಪ್ರಮುಖ ಮಿತ್ರ ರಾಷ್ಟ್ರವಾದ ಚೀನಾ ಮಹತ್ವದ ಪಾತ್ರ ವಹಿಸಿದೆ. ಚೀನಾ ಸಾರ್ವಜನಿಕವಾಗಿ ಮಯನ್ಮಾರ್‌ನಲ್ಲಿ ಸ್ಥಿರತೆಗಾಗಿ ಕರೆ ನೀಡಿದರೂ, ಅದು ಸೇನಾ ದಂಗೆಯನ್ನು ಖಂಡಿಸದಿರುವುದಕ್ಕೆ ಮತ್ತು ಮಿಲಿಟರಿ ಆಡಳಿತದೊಡನೆ ವ್ಯವಹಾರ ಮುಂದುವರಿಸಿರುವುದಕ್ಕೆ ವ್ಯಾಪಕ ಟೀಕೆ ಎದುರಿಸಿದೆ. ಚೀನಾದ ನಡೆಯ ಹಿಂದೆ, ಮೂಲ ಸೌಕರ್ಯ ನಿರ್ಮಾಣ ಯೋಜನೆಗಳು, ಪ್ರಮುಖ ವ್ಯಾಪಾರ ಮಾರ್ಗದ ಮೇಲಿನ ನಿಯಂತ್ರಣ ಸೇರಿದಂತೆ ಚೀನಾದ ಆರ್ಥಿಕ ಮತ್ತು ಕಾರ್ಯತಂತ್ರದ ಹಿತಾಸಕ್ತಿಗಳಿವೆ ಎಂದು ಹಲವರು ಆರೋಪಿಸಿದ್ದಾರೆ. ದಂಗೆಗೆ ಚೀನಾ ಬೆಂಬಲ ನೀಡಿರುವುದು ಪ್ರಜಾಪ್ರಭುತ್ವ ಪರ ಹೋರಾಟಗಾರರು ಮತ್ತು ಅಂತಾರಾಷ್ಟ್ರೀಯ ಸಮುದಾಯದೊಡನೆ ಚೀನಾದ ಸಂಬಂಧವನ್ನು ಹಾಳುಗೆಡವಿದೆ.

ಕಳೆದ ವಾರ ಭಾರತ ಅನಿರೀಕ್ಷಿತವಾಗಿ ಮಯನ್ಮಾರ್ ಸೇನೆಗೆ ನೆರವು ನೀಡಲು ಮುಂದೆ ಬಂತು. ಭಾರತ 46 ಮಯನ್ಮಾರ್ ಸೈನಿಕರಿಗೆ ಮಿಜೋರಾಂ ಒಳಗೆ ಪ್ರವೇಶಿಸಲು ಅನುಮತಿ ನೀಡಿತು. ಈ ಸೈನಿಕರು ಮಿಜೋರಾಂ ಗಡಿಯಾಚೆ ಪ್ರಜಾಪ್ರಭುತ್ವ ಪರ ಹೋರಾಟಗಾರರು ಚಿನ್ ಸ್ಟೇಟ್‌ನಲ್ಲಿ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿ, ಧ್ವಂಸಗೊಳಿಸಿದಾಗ ಅವರಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಬಹುಶಃ ಭಾರತ ಇದೇ ಮೊದಲ ಬಾರಿಗೆ ಅವರದೇ ನೆಲದಲ್ಲಿ ಹೋರಾಡುತ್ತಿದ್ದ ಇನ್ನೊಂದು ದೇಶದ ಸೈನಿಕರನ್ನು ರಕ್ಷಿಸುವ ಕೆಲಸಕ್ಕೆ ಮುಂದಾಗಿತ್ತು. ಇದು ಬಹುಶಃ ಭಾರತ ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಮಯನ್ಮಾರ್ ಮಿಲಿಟರಿ ಆಡಳಿತದೊಡನೆ ಸಹಕರಿಸಲು ಸಿದ್ಧವಾಗಿದೆ ಎಂಬ ಸಂಕೇತವೂ ಆಗಿರಬಹುದು ಎಂದು ಅಂದಾಜಿಸಲಾಗಿದೆ.

ಕಳವಳ ವ್ಯಕ್ತಪಡಿಸಿದ ಭಾರತ

ಮಯನ್ಮಾರ್ ನೆರೆ ರಾಷ್ಟ್ರವಾಗಿ, ಭಾರತ ಅಲ್ಲಿನ ಬಿಕ್ಕಟ್ಟಿನ ಕುರಿತು ಕಳವಳ ವ್ಯಕ್ತಪಡಿಸಿದ್ದು, ಪ್ರಾದೇಶಿಕ ಸ್ಥಿರತೆಗಾಗಿ ಆಗ್ರಹಿಸಿದೆ. ಭಾರತ ಇದಕ್ಕೆ ಒಂದು ಶಾಂತಿಯುತ ಪರಿಹಾರ ಕಂಡುಕೊಳ್ಳಲು ಕರೆ ನೀಡಿದ್ದು, ಅದಕ್ಕಾಗಿ ಮಯನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆಯಾಗಬೇಕು, ಹಿಂಸಾಚಾರ ಕೊನೆಯಾಗಬೇಕು ಎಂದಿದೆ. ಅದರಲ್ಲೂ ಭಾರತದ ಈಶಾನ್ಯ ಮತ್ತು ಪೂರ್ವದ ರಾಜ್ಯಗಳಿಗೆ ಬರುತ್ತಿರುವ ನಿರಾಶ್ರಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದು ಸ್ಥಳೀಯ ಸಂಪನ್ಮೂಲ, ಮೂಲಭೂತ ಸೌಕರ್ಯಗಳ ಮೇಲೆ ಹೆಚ್ಚಿನ ಒತ್ತಡ ಹೇರುತ್ತಿದೆ. ಫೆಬ್ರವರಿ 2021ರ ಕ್ಷಿಪ್ರ ದಂಗೆಯ ಬಳಿಕ 40,000ಕ್ಕೂ ಹೆಚ್ಚು ಚಿನ್ ನಿರಾಶ್ರಿತರು ಮಿಜೋರಾಂ ಪ್ರವೇಶಿಸಿರುವುದರಿಂದ, ಮಯನ್ಮಾರ್ ದಂಗೆಯ ಕಹಿ ಅನುಭವ ಭಾರತವನ್ನೂ ತಟ್ಟತೊಡಗಿದೆ.

ಅದರೊಡನೆ, ಭಾರತ ಮತ್ತು ಮಯನ್ಮಾರ್ ನಡುವಿನ ವ್ಯಾಪಾರ ಮತ್ತು ಆರ್ಥಿಕ ಸಂಬಂಧಕ್ಕೆ ಎದುರಾಗಿರುವ ಅಡಚಣೆ, ಗಡಿಯಾಚೆಗಿನ ವ್ಯಾಪಾರ ವಹಿವಾಟು ಮತ್ತು ಹೂಡಿಕೆಗಳ ಮೇಲೆ ಪರಿಣಾಮ ಬೀರಿದೆ. ಈ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಭಾರತದ ಕಾಳಜಿ ಗಡಿ ವ್ಯವಹಾರವನ್ನು ಮೀರಿದ್ದು, ಈ ಪ್ರದೇಶದಲ್ಲಿ ಶಾಂತಿ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವ ಮಹತ್ವವನ್ನು ಸಾರುತ್ತಿದೆ.

ಮಯನ್ಮಾರ್ ಬಿಕ್ಕಟ್ಟು ಹಲವು ಆಯಾಮಗಳನ್ನು ಹೊಂದಿದ್ದು, ಪ್ರಸ್ತುತ ಕ್ರಾಂತಿ, ದಮನಕಾರಿ ಆಡಳಿತ, ರೊಹಿಂಗ್ಯನ್ ಅಲ್ಪಸಂಖ್ಯಾತರ ಪಾಡು, ಮತ್ತು ಪ್ರಾದೇಶಿಕ ಶಕ್ತಿಯಾಗಿರುವ ಚೀನಾದ ಮಧ್ಯಪ್ರವೇಶಗಳು ಅದರಲ್ಲಿ ಪ್ರಮುಖವಾಗಿವೆ. ಭಾರತವೂ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯ ಈ ಸವಾಲುಗಳನ್ನು ಎದುರಿಸಲು ಜೊತೆಯಾಗಿ ಕಾರ್ಯಾಚರಿಸಿ, ಮಯನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪಿಸಿ, ಮಾನವ ಹಕ್ಕುಗಳನ್ನು ರಕ್ಷಿಸಲು ಮುಂದಾಗಬೇಕು. ಅದರೊಡನೆ, ರೊಹಿಂಗ್ಯನ್ನರ ಪರಿಸ್ಥಿತಿಯೆಡೆಗೂ ಗಮನ ಹರಿಸಿ, ಅವರ ದಮನವನ್ನು ಕೊನೆಗಾಣಿಸಿ, ಅವರಿಗೂ ಹಕ್ಕುಗಳು ಮತ್ತು ಸುರಕ್ಷತೆಯನ್ನು ಒದಗಿಸಬೇಕು. ಈ ಸಮಸ್ಯೆಗಳನ್ನು ಜೊತೆಯಾಗಿ ಎದುರಿಸುವ ಮೂಲಕ, ಮಯನ್ಮಾರ್ ಮತ್ತು ಸುತ್ತಲಿನ ಪ್ರದೇಶಗಳಿಗೆ ಶಾಂತಿಯುತ, ಸ್ಥಿರ ಭವಿಷ್ಯ ಒದಗಿಸಲು ಸಾಧ್ಯ.

ಈ ಸುದ್ದಿಯನ್ನೂ ಓದಿ: Vistara Explainer: ಇಸ್ರೇಲಿ ಗುಪ್ತಚರಕ್ಕೆ ಹಮಾಸ್ ಚಳ್ಳೆಹಣ್ಣು ತಿನ್ನಿಸಿದ್ದು ಹೇಗೆ? ಕತೆ ರೋಚಕವಾಗಿದೆ!

Continue Reading

EXPLAINER

ಬೆಂಗಳೂರಲ್ಲೇ ವಂಚಕ ಸುಕೇಶ್‌ ಚಂದ್ರಶೇಖರ್‌ 12 ಲಕ್ಸುರಿ ಕಾರುಗಳ ಹರಾಜು; ನಿಮಗೂ ಇದೆ ಚಾನ್ಸ್!

ನೂರಾರು ಕೋಟಿ ರೂ. ಸುಲಿಗೆ ಪ್ರಕರಣದಲ್ಲಿ ಜೈಲುಪಾಲಾಗಿರುವ ವಂಚಕ ಸುಕೇಶ್‌ ಚಂದ್ರಶೇಖರನ ಕಾರುಗಳನ್ನು ಹರಾಜಿಗಿಡಲು ತೀರ್ಮಾನಿಸಲಾಗಿದೆ. ಇದರ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ…

VISTARANEWS.COM


on

Sukesh Chandrasekhar
Koo

ಬೆಂಗಳೂರು: ದೇಶದ ಹಲವು ಉದ್ಯಮಿಗಳಿಂದ ಸುಮಾರು 200 ಕೋಟಿ ರೂಪಾಯಿ ಸುಲಿಗೆ ಮಾಡಿರುವ ಪ್ರಕರಣದಲ್ಲಿ ಜೈಲುಪಾಲಾಗಿರುವ ವಂಚಕ ಸುಕೇಶ್‌ ಚಂದ್ರಶೇಖರ್‌ಗೆ (Conman Sukesh Chandrasekhar) ಸೇರಿದ ಸುಮಾರು 12 ಐಷಾರಾಮಿ ಕಾರುಗಳನ್ನು ಬೆಂಗಳೂರಿನಲ್ಲಿಯೇ ಹರಾಜು ನಡೆಸಲು ಆದಾಯ ತೆರಿಗೆ ಇಲಾಖೆ (Income Tax Department) ತೀರ್ಮಾನಿಸಿದೆ. ಸುಖೇಶ್‌ ಚಂದ್ರಶೇಖರ್‌ನಿಂದ ವಶಪಡಿಸಿಕೊಂಡಿರುವ ಐಷಾರಾಮಿ ಕಾರುಗಳನ್ನು (Luxury Cars) ನವೆಂಬರ್‌ 28ರಂದು ಬೆಂಗಳೂರಿನಲ್ಲಿಯೇ ಹರಾಜು ಹಾಕಲಾಗುತ್ತದೆ. ಆ ಮೂಲಕ ಜಮೆಯಾದ ಹಣವನ್ನು ಹಲವು ಕಂಪನಿಗಳು ಹಾಗೂ ಉದ್ಯಮಿಗಳಿಗೆ ಸುಕೇಶ್‌ ಚಂದ್ರಶೇಖರ್‌ ಉಳಿಸಿಕೊಂಡಿರುವ ಬಾಕಿಯನ್ನು ಪಾವತಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಹತ್ತಾರು ಜನರಿಗೆ ವಂಚಿಸಿರುವ ಸುಕೇಶ್‌ ಚಂದ್ರಶೇಖರ್‌ನಿಂದ ಐಟಿ ಇಲಾಖೆ ಅಧಿಕಾರಿಗಳು 308 ಕೋಟಿ ರೂಪಾಯಿಯನ್ನು ವಸೂಲಿ ಮಾಡಬೇಕಿದೆ. ಇದರ ಭಾಗವಾಗಿಯೇ ಆತನಿಗೆ ಸೇರಿದ, ಆತನಿಂದ ಜಪ್ತಿ ಮಾಡಿರುವ 12 ಐಷಾರಾಮಿ ಕಾರುಗಳನ್ನು ಹರಾಜಿಗಿಡಲು ತೀರ್ಮಾನಿಸಲಾಗಿದೆ. ನಿಸಾನ್‌ ಟಿಯಾನಾದಿಂದ ಹಿಡಿದು ರೋಲ್ಸ್‌ ರಾಯ್ಸ್‌ವರೆಗೆ ಹಲವು ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಲಾಗಿದೆ. ಇವೆಲ್ಲವೂ ಸುಸ್ಥಿತಿಯಲ್ಲಿದ್ದು, ಮಾರಾಟ ಮಾಡುವ ಮೂಲಕ ಹಣ ವಸೂಲಿ ಮಾಡುವುದು ಐಟಿ ಇಲಾಖೆ ಅಧಿಕಾರಿಗಳ ಉದ್ದೇಶವಾಗಿದೆ. ಬೆಂಗಳೂರಿನಲ್ಲಿರುವ ಆದಾಯ ತೆರಿಗೆ ಇಲಾಖೆ ಕಚೇರಿಯಲ್ಲೇ ಕಾರುಗಳು ಇವೆ.

ಹರಾಜಿಗಿರುವ ಕಾರುಗಳು ಹಾಗೂ ಅವುಗಳ ಮೀಸಲು ಬೆಲೆ

 1. ಬಿಎಂಡಬ್ಲ್ಯೂ ಎಂ-5- ಮೀಸಲು ಬೆಲೆ 18.79 ಲಕ್ಷ ರೂ.
 2. ರೇಂಜ್‌ ರೋವರ್-‌ ಮೀಸಲು ಬೆಲೆ 44.43 ಲಕ್ಷ ರೂ.
 3. ಜಾಗ್ವಾರ್‌ ಎಕ್ಸ್‌ಕೆಆರ್‌ ಕೂಪ್-‌ 31.07 ಲಕ್ಷ ರೂ.
 4. ಡುಕಾಟಿ ಡೈವೆಲ್-‌ 3.56 ಲಕ್ಷ ರೂ.
 5. ಇನೋವಾ ಕ್ರಿಸ್ಟಾ- 11.89 ಲಕ್ಷ ರೂ.
 6. ನಿಸಾನ್‌ ಟಿಯಾನಾ- 2.03 ಲಕ್ಷ ರೂ.
 7. ಟೊಯೋಟಾ ಪ್ರ್ಯಾಡೋ-22.50 ಲಕ್ಷ ರೂ.
 8. ಲ್ಯಾಂಬೋರ್ಗಿನಿ- 38.52 ಲಕ್ಷ ರೂ.
 9. ರೋಲ್ಸ್‌ ರಾಯ್ಸ್-‌ 1.74 ಕೋಟಿ ರೂ.
 10. ಬೆಂಟ್ಲೆ- 83.35 ಲಕ್ಷ ರೂ.
 11. ಟೊಯೋಟಾ ಫಾರ್ಚುನರ್-‌ 15.31 ಲಕ್ಷ ರೂ.
 12. ಪೋರ್ಶೆ- 5.08 ಲಕ್ಷ ರೂ.

ಏನಿದು ಪ್ರಕರಣ?

ದೇಶದ ಹಲವು ಉದ್ಯಮಿಗಳಿಗೆ ಸುಮಾರು 200 ಕೋಟಿ ರೂ. ವಂಚಿಸಿದ ಪ್ರಕರಣದಲ್ಲಿ ಸುಕೇಶ್‌ ಚಂದ್ರಶೇಖರ್‌ ಬಂಧಿತನಾಗದ್ದಾನೆ. ಈತನ ವಿರುದ್ಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಂಚನೆ, ಸುಲಿಗೆ ಹಾಗೂ ಅಕ್ರಮವಾಗಿ ಹಣದ ವರ್ಗಾವಣೆ ಮಾಡಿದ ಪ್ರಕರಣಗಳು ದಾಖಲಾಗಿವೆ. 2023ರ ಫೆಬ್ರವರಿ 16ರಂದು ಇ.ಡಿ ಅಧಿಕಾರಿಗಳು ಈತನನ್ನು ಬಂಧಿಸಿದ್ದು, ಸದ್ಯ ದೆಹಲಿ ಜೈಲಿನಲ್ಲಿದ್ದಾನೆ. ಈತನ ಹಣಕಾಸು ವಹಿವಾಟಿನ ಕುರಿತು ಐ.ಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಬಾಲಿವುಡ್‌ ನಟಿಯರ ಜತೆ ಸುಕೇಶ್‌ ಚಂದ್ರಶೇಖರ್

ಸುಕೇಶ್‌ ಚಂದ್ರಶೇಖರ್‌ ವಿರುದ್ಧ ಕೇಳಿಬಂದಿರುವ ವಂಚನೆ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿದ್ದಲ್ಲದೆ, ಬಾಲಿವುಡ್‌ ನಂಟೂ ಬಿಚ್ಚಿಟ್ಟಿದೆ. ಸುಕೇಶ್‌ ಚಂದ್ರಶೇಖರ್‌ನಿಂದ ಕೋಟ್ಯಂತರ ರೂ. ಬೆಲೆಬಾಳುವ ಉಡುಗೊರೆ ಪಡೆದ ಆರೋಪದಲ್ಲಿ ಈಗಾಗಲೇ ಜಾಕ್ವೆಲಿನ್‌ ಫರ್ನಾಂಡಿಸ್‌ ಅವರನ್ನು ತನಿಖಾ ಸಂಸ್ಥೆಯು ವಿಚಾರಣೆ ನಡೆಸಿದೆ. ಆದಾಗ್ಯೂ, ನೋರಾ ಫತೇಹಿ ಅವರ ಹೆಸರೂ ಪ್ರಕರಣದಲ್ಲಿ ಕೇಳಿಬಂದಿದೆ. ಪ್ರಕರಣದಲ್ಲಿ ಎಳೆದುತಂದ ಕಾರಣ ಜಾಕ್ವೆಲಿನ್‌ ವಿರುದ್ಧ ನೋರಾ ಫತೇಹಿ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಸುಕೇಶ್‌ ಚಂದ್ರಶೇಖರ್‌ ಯಾರು? ಹಿನ್ನೆಲೆ ಏನು?

ಸುಕೇಶ್‌ ಮೂಲತಃ ಬೆಂಗಳೂರಿನವನು. ವಿಲಾಸಿ ಜೀವನದ ಅಭಿಲಾಷೆ ಹೊಂದಿದ್ದ ಈತ ತನ್ನ 17ನೇ ವಯಸ್ಸಿನಿಂದಲೇ ಸಿಕ್ಕಸಿಕ್ಕವರಿಗೆ ವಂಚನೆ ಎಸಗುತ್ತಾ ಬಂದಿದ್ದಾನೆ ಎಂದು ತನಿಖಾ ಮೂಲಗಳು ಹೇಳಿವೆ. ಆರಂಭದಲ್ಲಿ ಈತ ಬೆಂಗಳೂರಿನಲ್ಲಿ ಫೋರ್ಜರಿ ಮಾಡುತ್ತಿದ್ದ. ನಂತರ ಚೆನ್ನೈಗೆ ಸಾಗಿದ. ನಂತರ ಇತರ ಮೆಟ್ರೋ ಸಿಟಿಗಳಿಗೂ ಇವನ ವಂಚನೆಯ ಬಾಹುಗಳು ಚಾಚಿದವು. ಸುಮಾರು 15 ಎಫ್‌ಐಆರ್‌ಗಳು ಇವನ ವಿರುದ್ಧ ದಾಖಲಿಸಲಾಗಿವೆ. ಚೆನ್ನೈಯಲ್ಲಿ ಹತ್ತತ್ತಿರ ಒಂದು ಕೋಟಿ ರೂ. ಮೌಲ್ಯದ ಸಮುದ್ರ ತೀರದ ಬಂಗಲೆ ಹಾಗೂ ಒಂದು ಡಜನ್‌ ಐಷಾರಾಮಿ ಕಾರುಗಳನ್ನು ಇವನಿಂದ ಸೀಜ್ ಮಾಡಲಾಗಿದೆ.

ಸುಕೇಶ್‌ ಚಂದ್ರಶೇಖರ್‌ ಪತ್ನಿ ಲೀನಾ ಮಾರಿಯಾ ಪೌಲ್‌

ಇದಕ್ಕೂ ಮೊದಲು ಇವನು ತಿಹಾರ್‌ ಜೈಲಿನಲ್ಲಿದ್ದುಕೊಂಡೇ ತನ್ನ ಜಾಲದ ಮೂಲಕ ಸುಮಾರು 200 ಕೋಟಿ ರೂ. ಮೌಲ್ಯದ ವಂಚನೆ ಎಸಗಿದ ಪ್ರಕರಣಗಳು ಬಯಲಾಗಿವೆ. ಇವನಿಗೆ ಸಹಕರಿಸುತ್ತಿದ್ದ ಇವನ ಪತ್ನಿ ಲೀನಾ ಮಾರಿಯಾ ಪೌಲ್‌ ಸೇರಿದಂತೆ ಇತರ ಏಳು ಮಂದಿಯನ್ನೂ ಬಂಧಿಸಲಾಗಿದೆ. ರಾಜಕಾರಣಿಯಂತೆ ಪೋಸು ಕೊಟ್ಟು, ಕೆಲಸ ಕೊಡಿಸುವುದಾಗಿ ನಂಬಿಸಿ ನೂರಕ್ಕೂ ಹೆಚ್ಚು ಮಂದಿಯನ್ನು ವಂಚಿಸಿದ್ದಾನೆ.

ಇದನ್ನೂ ಓದಿ: Sukesh Chandrashekar : ಜೈಲಲ್ಲಿದ್ದುಕೊಂಡೇ ಜಾಕ್ವೆಲಿನ್‌ಗೆ ಚಿನ್ನ, ಬಂಗಾರವೆಂದು ಪ್ರೇಮ ಪತ್ರ ಬರೆದ ಸುಕೇಶ್‌!

2011ರಲ್ಲೇ ಕೆನರಾ ಬ್ಯಾಂಕ್‌ಗೆ ವಂಚಿಸಿದ ಪ್ರಕರಣದಲ್ಲಿ ಇವನನ್ನೂ ಲೀನಾ ಮಾರಿಯಾಳನ್ನೂ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಆದರೆ ಸುಕೇಶ್‌ ತನ್ನ ವಕ್ರಬುದ್ಧಿ ಬಿಟ್ಟಿರಲಿಲ್ಲ. ಇವನಿಂದ ಮೋಸ ಹೋದವರ ಪಟ್ಟಿಯಲ್ಲಿ ಪ್ರತಿಷ್ಠಿತ ಫೋರ್ಟಿಸ್‌ ಆಸ್ಪತ್ರೆಯ ಪ್ರಮೋಟರ್‌ ಶಿವಿಂದರ್‌ ಮೋಹನ್‌ ಸಿಂಗ್‌ ಅವರ ಪತ್ನಿ ಅದಿತಿ ಸಿಂಗ್‌ ಕೂಡ ಇದ್ದಾರೆ. ಕತ್ರಿನಾ ಕೈಫ್‌ ಅವರನ್ನು ಪ್ರಮೋಷನ್‌ ಇವೆಂಟ್‌ಗೆ ಕರೆತರುತ್ತೇನೆಂದು ಹೇಳಿ ಕೊಚ್ಚಿಯ ಎಮಾನ್ಯುಯೆಲ್‌ ಸಿಲ್ಕ್ಸ್‌ನ ಎಂಡಿ ಬೈಜು ಅವರಿಗೂ ಕೈ ಎತ್ತಿದ್ದ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

EXPLAINER

ವಿಸ್ತಾರ Explainer: ಬಾಹ್ಯಾಕಾಶದಲ್ಲಿ ಚೀನಾದ ಸೇನಾ ನೆಲೆ; ಇನ್ನು ಆಕಾಶದಿಂದಲೇ ಎರಗಲಿದೆ ಹೈಪರ್‌ಸಾನಿಕ್ ಕ್ಷಿಪಣಿ!

ʼಬಾಹ್ಯಾಕಾಶವೇ ಮುಂದಿನ ಸಮರ ತಾಣʼ ಎಂಬ ಅಭಿಪ್ರಾಯವನ್ನು ನಿಜಗೊಳಿಸುವತ್ತ ಚೀನಾ ಹೆಜ್ಜೆ ಹಾಕಿದೆ. ಹೈಪಸ್‌ಸಾನಿಕ್‌ ಕ್ಷಿಪಣಿಗಳನ್ನು ಉಡಾಯಿಸಬಲ್ಲ ನೆಲೆಗಳನ್ನು ಬಾಹ್ಯಾಕಾಶದ ಸಮೀಪದಲ್ಲಿ (near space command) ಸ್ಥಾಪಿಸಿದೆ.

VISTARANEWS.COM


on

near space command
Koo

ಮಾರಣಾಂತಿಕ ಹೈಪರ್‌ಸಾನಿಕ್ (Hypersonic) ಶಸ್ತ್ರಾಸ್ತ್ರಗಳನ್ನು ಹೊಂದಿರುವ ವಿಶ್ವದ ಮೊದಲ ʼನಿಯರ್-ಸ್ಪೇಸ್ ಕಮಾಂಡ್’ (near-space command) ಅನ್ನು ಚೀನಾ ನಿರ್ಮಿಸಿದೆ ಎಂದು ಹಾಂಗ್ ಕಾಂಗ್‌ನ ಎಸ್‌ಸಿಎಂಪಿ ಪತ್ರಿಕೆ ವರದಿ ಮಾಡಿದೆ. ಆ ನೆಲೆ, ಇನ್ನು ಮುಂದೆ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ (peoples liberation army) ಐದನೇ ಪಡೆಯಾಗಿ ಕಾರ್ಯನಿರ್ವಹಿಸಲಿದೆಯಂತೆ. ಉಳಿದ ನಾಲ್ಕು ಪಡೆಗಳು ಭೂಸೇನೆ, ನೌಕಾಪಡೆ, ವಾಯುಪಡೆ ಮತ್ತು ರಾಕೆಟ್ ಫೋರ್ಸ್.

ಇದರೊಂದಿಗೆ, ʼಬಾಹ್ಯಾಕಾಶವೇ ಮುಂದಿನ ಸಮರ ತಾಣʼ ಎಂಬ ಅಭಿಪ್ರಾಯವನ್ನು ನಿಜಗೊಳಿಸುವತ್ತ ಚೀನಾ ಹೆಜ್ಜೆ ಹಾಕಿದೆ. ಭವಿಷ್ಯದಲ್ಲಿ ನಡೆಯಬಹುದಾದ ಯುದ್ಧಗಳಲ್ಲಿ ಹೈಪರ್‌ಸಾನಿಕ್‌ ಶಸ್ತ್ರಾಸ್ತ್ರಗಳು ಮಹತ್ವದ ಪಾತ್ರವನ್ನು ವಹಿಸಲಿದೆ. ಸಾವಿರಾರು ಕಿಲೋಮೀಟರ್‌ ದೂರದಿಂದ ಪ್ರಯೋಗವಾಗುವ ಈ ಕ್ಷಿಪಣಿಗಳು ಕಣ್ಣೆವೆ ಮುಚ್ಚಿ ತೆರೆಯುವಷ್ಟರಲ್ಲಿ ಗುರಿಯನ್ನು ಧ್ವಂಸ ಮಾಡಬಲ್ಲವು. ಶತ್ರು ದೇಶದತ್ತ ಕಣ್ಣಿಟ್ಟಿರುವ ರೇಡಾರ್‌ಗಳು ಇವುಗಳನ್ನು ಪತ್ತೆ ಹಚ್ಚಬಲ್ಲವು. ಆದರೆ ತಡೆಯುವುದು ಕಷ್ಟ. ಇನ್ನು ಬಾಹ್ಯಾಕಾಶ ನೆಲೆಯಿಂದ ಇವು ಉಡಾವಣೆಯಾದರೆ ಸದ್ಯಕ್ಕಂತೂ ಯಾರೂ ತಡೆಯಲಾರರು. ಚೀನಾ ಈ ನಿಟ್ಟಿನಲ್ಲಿ ಎಲ್ಲ ದೇಶಗಳಿಗಿಂತ ಮುಂದೆ ದಾಪುಗಾಲಿಟ್ಟಿದೆ.

ಚೀನಾದ ಬಾಹ್ಯಾಕಾಶ ಸಮರನೆಲೆಯನ್ನು ಯಾವಾಗ ಸ್ಥಾಪಿಸಲಾಯಿತು ಎಂಬುದು ಸ್ಪಷ್ಟವಾಗಿಲ್ಲ. ಆದರೆ ಇದು ಇನ್ನೂ ಅಭಿವೃದ್ಧಿಯ ಹಂತದಲ್ಲಿದೆ ಎಂದು ನಂಬಲಾಗಿದೆ. SCMP ಉಲ್ಲೇಖಿಸಿರುವ ಚೀನಾದ ರಾಷ್ಟ್ರೀಯ ರಕ್ಷಣಾ ತಂತ್ರಜ್ಞಾನ ವಿಶ್ವವಿದ್ಯಾಲಯದ ಸಂಶೋಧಕರ ಪ್ರಕಾರ, ನೆಲೆಯ ಘಟಕಗಳ ಸ್ಥಾಪನೆಯು ಇನ್ನೂ ಪೂರ್ತಿಯಾಗಿಲ್ಲ ಹಾಗೂ ಯುದ್ಧ ಕಾರ್ಯಾಚರಣೆಗಳನ್ನು ಇನ್ನೂ ಪ್ರಮಾಣೀಕರಿಸಲಾಗಿಲ್ಲ. ಕಮಾಂಡ್ ಮತ್ತು ಕಂಟ್ರೋಲ್ ಅಧಿಕಾರ, ಕಮಾಂಡ್ ವಿಧಾನಗಳ ಆಯ್ಕೆ, ಕಾರ್ಯನಿರ್ವಾಹಕ ಆದೇಶಗಳ ಅನುಷ್ಠಾನ ಮತ್ತು ಕಮಾಂಡ್ ಸಂವಹನಕ್ಕೆ ಬೆಂಬಲ ಇತ್ಯಾದಿಗಳನ್ನೆಲ್ಲ ಜೋಡಿಸಿಕೊಳ್ಳಬೇಕಾಗಿದೆ.

ಬಾಹ್ಯಾಕಾಶವೇ ಮುಂದಿನ ಯುದ್ಧಭೂಮಿ

ಬಾಹ್ಯಾಕಾಶದಿಂದ ಅತ್ಯಾಧುನಿಕ ಯಂತ್ರಗಳ ಮೂಲಕ ಸ್ಪಷ್ಟವಾಗಿ ಭೂಮಿಯ ಮೇಲೆ ಕಣ್ಣಿಡಬಹುದಾಗಿದೆ. ಹೀಗಾಗಿ ಬಾಹ್ಯಾಕಾಶದಿಂದ ಬೇಹುಗಾರಿಕೆ ಈಗಾಗಲೇ ನಡೆಯುತ್ತಿದೆ. ಪ್ರತಿಯೊಂದು ದೇಶದ ಉಪಗ್ರಹವೂ ಇನ್ನೊಂದು ದೇಶದ ಮೇಲೆ ಕಣ್ಣುಗಳನ್ನಿಟ್ಟಿದೆ. ಚೀನಾ ಅಂತೂ ಅದು ತನ್ನ ಪ್ರತಿಸ್ಪರ್ಧಿಗಳಿಂತ ತಾನು ಎಷ್ಟೋ ಎತ್ತರದಲ್ಲಿರಲು ಬಯಸುವ ದೇಶ.

ಅಕ್ಟೋಬರ್‌ನಲ್ಲಿ 11ನೇ ಚೀನಾ ಕಮಾಂಡ್ ಮತ್ತು ಕಂಟ್ರೋಲ್ ಕಾನ್ಫರೆನ್ಸ್‌ನಲ್ಲಿ ವರದಿ ಮಂಡಿಸಿದ ತಜ್ಞರ ತಂಡವು, “ಭವಿಷ್ಯದ ಯುದ್ಧಗಳ ಫಲಿತಾಂಶವನ್ನು ನಿರ್ಧರಿಸುವ ಬಾಹ್ಯಾಕಾಶಕ್ಕೆ ಸಮೀಪದ ನೆಲೆಯು ತೀವ್ರ ಪೈಪೋಟಿಯ ವಲಯವಾಗಿದೆʼʼ ಎಂದು ಹೇಳಿತ್ತು.

ಶತ್ರುಗಳ ನಿರ್ಣಾಯಕ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಲು ಚೀನಾದ ನಿಯರ್‌ ಸ್ಪೇಸ್‌ ಕಮಾಂಡ್ ಆಧುನಿಕ ಹೈಪರ್ಸಾನಿಕ್ ಕ್ಷಿಪಣಿಗಳೊಂದಿಗೆ ಸಜ್ಜುಗೊಂಡಿದೆ. ನಿರ್ಣಾಯಕ ಗುರಿಗಳ ಮೇಲೆ “ಕರುಣೆಯಿಲ್ಲದ” ದಾಳಿಗಳನ್ನು ನಡೆಸಲು ಇದು ಸಜ್ಜಾಗುತ್ತಿದೆ. ಜೊತೆಗೆ ಸ್ವಯಂಚಾಲಿತ ಡ್ರೋನ್‌ಗಳು ಮತ್ತು ಪತ್ತೇದಾರಿ ಬಲೂನ್‌ಗಳ ಮೂಲಕ ಜಗತ್ತಿನಾದ್ಯಂತ ಹೆಚ್ಚಿನ ಎತ್ತರದ ಕಣ್ಗಾವಲು ಮಾಡುತ್ತದೆ.

Hypersonic Missile

ದ್ವಿಮುಖ ಅಲಗಿನ ಕತ್ತಿ

ಸೂಪರ್-ಅಡ್ವಾನ್ಸ್ಡ್ ನಿಯರ್-ಸ್ಪೇಸ್ ಕಮಾಂಡ್ ಎರಡು ಅಂಚಿನ ಕತ್ತಿಯಂತೆ ಕಾರ್ಯನಿರ್ವಹಿಸುತ್ತದೆ ಎಂದು ಚೀನಾದ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಇದು ಚೀನಾಕ್ಕೆ ಊಹಾತೀತ ವೇಗದಲ್ಲಿ ಭೂಮಿಯ ಮೇಲಿನ ಯಾವುದೇ ಗುರಿಯನ್ನು ಹೊಡೆಯುವ ಸಾಮರ್ಥ್ಯವನ್ನು ನೀಡುತ್ತದೆ. ಜತೆಗೆ ಅಂತರರಾಷ್ಟ್ರೀಯ ರಂಗದಲ್ಲಿ ಮಹತ್ವದ ರಾಜತಾಂತ್ರಿಕ ಸವಾಲುಗಳನ್ನು ಒಡ್ಡಲಿದೆ.

ಸ್ಪೇಸ್‌ ಕಮಾಂಡ್‌ನಿಂದಾಗಿ ಚೀನಾ ಮುಂಚೂಣಿಯಲ್ಲಿದೆ ಎಂಬ ಅಂಶವು ಯುಎಸ್, ಯುಕೆ, ಭಾರತ ಮತ್ತು ರಷ್ಯಾದಂತಹ ಪ್ರಮುಖ ಅಂತಾರಾಷ್ಟ್ರೀಯ ಆಟಗಾರರನ್ನು ಮತ್ತಷ್ಟು ಸ್ಪರ್ಧಗೆ ಇಳಿಸಲಿದೆ. ಪತ್ರಿಕೆಯ ಪ್ರಕಾರ ಬಾಹ್ಯಾಕಾಶ ಕಮಾಂಡ್‌, ದೊಡ್ಡ ಸಂಖ್ಯೆಯ ಪತ್ತೇದಾರಿ ಬಲೂನ್‌ಗಳು, ಸೌರಶಕ್ತಿ ಚಾಲಿತ ಡ್ರೋನ್‌ಗಳು ಮತ್ತು ಇತರ ಪೋಷಕ ಸಾಧನಗಳನ್ನು ಹೊಂದಿದೆ. ಸ್ಪೇಸ್‌ ಕಮಾಂಡ್‌ ನೇರವಾಗಿ ಮಿಲಿಟರಿಯ ಉನ್ನತ ಮಟ್ಟದಿಂದಲೇ ನಿಯಂತ್ರಿಸಲ್ಪಡಲಿದೆ.

ಬಾಹ್ಯಾಕಾಶ-ಆಧಾರಿತ ಕಾರ್ಯಾಚರಣೆಗಳಿಗಿಂತ ಭಿನ್ನವಾಗಿ, ಪತ್ತೇದಾರಿ ಬಲೂನ್‌ಗಳು ಕೆಲವೊಮ್ಮೆ ಇತರ ರಾಷ್ಟ್ರಗಳ ಪ್ರದೇಶಗಳು ಅಥವಾ ಸೂಕ್ಷ್ಮ ಪ್ರದೇಶಗಳ ಮೇಲೆ ವಿಶೇಷ ಕಾರ್ಯಾಚರಣೆಗಳನ್ನು ನಡೆಸುತ್ತವೆ. ಈ ವರ್ಷದ ಅಮೆರಿಕದಲ್ಲಿ ಎರಡು ಪತ್ತೇದಾರಿ ಬಲೂನ್ ಕಾಣಿಸಿಕೊಂಡಿದ್ದವು. ಫೆಬ್ರವರಿಯಲ್ಲಿ ಅಲಾಸ್ಕಾದಿಂದ ಪೂರ್ವ ಕರಾವಳಿಗೆ ದಾಟಿದ ಚೀನಾದ ಬಲೂನ್, ವಿಶ್ವದ ಎರಡು ಮಹಾಶಕ್ತಿಗಳ ನಡುವಿನ ಸಂಬಂಧವನ್ನು ಮತ್ತಷ್ಟು ಅಪಾಯಕ್ಕೆ ತಳ್ಳಿತು.

ಹೇಗೆ ಕಾರ್ಯನಿರ್ವಹಿಸುತ್ತದೆ?

ಚೀನಾದ ಬಾಹ್ಯಾಕಾಶ ಕಮಾಂಡ್‌ನ ಮುಖ್ಯ ಉದ್ದೇಶವೇ ಯುದ್ಧದ ಸಂದರ್ಭದಲ್ಲಿ ಚೀನಾ ಗೆಲ್ಲಲು ಸಹಾಯ ಮಾಡುವುದು. ಅದು ಹೇಗೆ? ಸ್ಪೇಸ್‌ ಕಮಾಂಡ್‌ ಮೊದಲು ಶತ್ರುಗಳ ರಾಕೆಟ್ ಉಡಾವಣಾ ತಾಣಗಳನ್ನು ಗುರಿಯಾಗಿಸುತ್ತದೆ. ಚೀನಾದ ನಾಗರಿಕ ಅಥವಾ ಮಿಲಿಟರಿ ಉಪಗ್ರಹ ಜಾಲಗಳ ಮೇಲೆ ಉಪಗ್ರಹ ವಿರೋಧಿ ಕ್ಷಿಪಣಿಗಳನ್ನು ಹಾರಿಸುವ ಸಾಮರ್ಥ್ಯವನ್ನು ತಡೆಯುತ್ತದೆ.

ಈ ದಾಳಿಗಳು ನಿಖರ, ವ್ಯಾಪಕವಾಗಿರುತ್ತವೆ. ಸಂಶೋಧಕರ ಪ್ರಕಾರ, ಇದು ಸಂಘರ್ಷದ ಆರಂಭಿಕ ಹಂತಗಳಲ್ಲಿ ಶತ್ರುಗಳ ನಿರ್ಣಾಯಕ ಮೂಲಸೌಕರ್ಯಗಳ ನಷ್ಟ ಉಂಟುಮಾಡುತ್ತದೆ. ಶತ್ರುಗಳ ಯುದ್ಧ ನೆಲೆಯನ್ನು ಭೇದಿಸುತ್ತದೆ ಮತ್ತು ಅದರ ಸಾಮರ್ಥ್ಯದ ಮೇಲೆ ತೀವ್ರ ದುಷ್ಪರಿಣಾಮ ಬೀರುತ್ತದೆ.

ಕಳೆದ 20 ವರ್ಷಗಳಿಂದ ಯುಕೆಯಲ್ಲಿ ಕೆಲಸ ಮಾಡುತ್ತಿರುವ ಒಬ್ಬರು ವಿಜ್ಞಾನಿ ಚೀನಾದ ಹೈಪರ್‌ಸಾನಿಕ್ ಪ್ರೋಗ್ರಾಂಗೆ ಸೇರಿದ್ದಾರೆ. ಜಾಂಗ್‌ ಯಾಂಗ್‌ಹೋ (Zhang Yonghao) ಎಂಬ ಹೆಸರಿನ ಇವರು ಮೂಲತಃ ಚೀನಾದವರು. 2000ನೇ ಇಸವಿಯಲ್ಲಿ ಬ್ರಿಟನ್‌ಗೆ ಬಂದ ಇವರು ಇಲ್ಲಿ ಕ್ಷಿಪಣಿ ತಂತ್ರಜ್ಞಾನದಲ್ಲಿ ಮಹತ್ವದ ಪಾತ್ರ ವಹಿಸಬಲ್ಲ ಏರೋಸ್ಪೇಸ್‌ ಇಂಜಿನಿಯರಿಂಗ್‌ನಲ್ಲಿ ಹೆಚ್ಚಿನ ಅಧ್ಯಯನ ನಡೆಸಿ, ಇದೀಗ ಚೀನಾ ಸೇರಿಕೊಂಡಿದ್ದಾರೆ.

ಹೈಪರ್‌ಸಾನಿಕ್‌ ಕ್ಷಿಪಣಿಗಳೆಂದರೆ ಶಬ್ದದಷ್ಟೇ ವೇಗವಾಗಿ ಚಲಿಸಬಲ್ಲ ಕ್ಷಿಪಣಿಗಳು. “ಇದು ಯುದ್ಧಗಳ ವೇಗವನ್ನು ಬದಲಾಯಿಸಬಹುದು ಮತ್ತು ಯುದ್ಧವು ಹೇಗೆ ಕೊನೆಗೊಳ್ಳುತ್ತದೆ ಎಂಬುದರ ಮೇಲೆ ಪ್ರಮುಖ ಪ್ರಭಾವವನ್ನು ತರಬಹುದು” ಎಂದು ಸಂಶೋಧಕರು ಹೇಳಿದ್ದಾರೆ. ಸಮರದ ಸನ್ನಿವೇಶದಲ್ಲಿ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡಲು ಕೆಲವು ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು PLAಯ ಉನ್ನತ ಅಧಿಕಾರಿಗಳಿಂದ ಕಮಾಂಡ್ ಫೋರ್ಸ್‌ಗೆ ವರ್ಗಾಯಿಸಲಾಗುತ್ತದೆ.

ಹೈಪರ್‌ಸಾನಿಕ್ ಶಸ್ತ್ರಾಸ್ತ್ರಗಳು

ನಿಯರ್‌ ಸ್ಪೇಸ್‌ ಕಮಾಂಡ್‌, ಇದು ಬಾಹ್ಯಾಕಾಶಕ್ಕೆ ಅತಿ ನಿಕಟ ತಾಣದಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಸುಮಾರು 20km (12 ಮೈಲಿಗಳು) ಎತ್ತರದಲ್ಲಿ ಪ್ರಾರಂಭವಾಗುತ್ತದೆ ಮತ್ತು ಭೂಮಿಯಿಂದ 100kmನಲ್ಲಿ ಬಾಹ್ಯಾಕಾಶದ ಕೆಳಗಿನ ಗಡಿಯನ್ನು ತಲುಪುತ್ತದೆ.

ಅಲ್ಲಿನ ಗಾಳಿಯು ವಿಮಾನಗಳನ್ನು ಬೆಂಬಲಿಸದಂತೆ ತುಂಬಾ ತೆಳುವಾಗಿದೆ. ಅದಕ್ಕಾಗಿಯೇ ಇದನ್ನು ಮಿಲಿಟರಿ ವಿಮಾನಗಳು ತಪ್ಪಿಸುತ್ತವೆ. ಆದರೆ ಹೈಪರ್‌ಸಾನಿಕ್ ಆಯುಧಗಳು ಶಬ್ದದ ಐದು ಪಟ್ಟು ಹೆಚ್ಚು ವೇಗದಲ್ಲಿ ಕಾರ್ಯನಿರ್ವಹಿಸುತ್ತವೆ ಮತ್ತು ತಮ್ಮ ಅನಿರೀಕ್ಷಿತ ಗುಣದಿಂದ ವಾಯು ರಕ್ಷಣಾ ವ್ಯವಸ್ಥೆಗಳನ್ನು ಮೋಸಗೊಳಿಸುತ್ತವೆ. ಯುದ್ಧದ ಸಮಯದಲ್ಲಿ ನಿಯರ್-ಸ್ಪೇಸ್ ಕಮಾಂಡ್ PLAಯ ಇತರ ಶಾಖೆಗಳು ಹೊಂದಿರುವ ಹೈಪರ್ಸಾನಿಕ್ ಶಸ್ತ್ರಾಸ್ತ್ರಗಳ ಸಂಪೂರ್ಣ ನಿಯಂತ್ರಣವನ್ನು ಸಹ ತೆಗೆದುಕೊಳ್ಳುತ್ತದೆ.

ನಿಯರ್‌ ಸ್ಪೇಸ್‌ ಪಡೆಯ ಯಶಸ್ಸು “ಶತ್ರುಗಳ ದೌರ್ಬಲ್ಯದ ಆಳವಾದ ವಿಶ್ಲೇಷಣೆಯ ಆಧಾರದ ಮೇಲೆ ಯುದ್ಧದ ನವೀನ ತಂತ್ರಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಳವಡಿಸುವುದರಲ್ಲಿದೆ.

ಇದನ್ನೂ ಓದಿ: Hypersonic Missile : ಕದನ ಕಣದಲ್ಲಿ ಸಂಚಲನ ಸೃಷ್ಟಿಸಿರುವ ಹೈಪರ್‌ಸಾನಿಕ್‌ ಕ್ಷಿಪಣಿಯಲ್ಲಿ ಏನೇನಿದೆ?

Continue Reading
Advertisement
Anju who went to Pakistan for to marry her lover, returns to India
ದೇಶ2 mins ago

Anju Love Story: ಪಾಕ್‌ಗೆ ಹೋಗಿ ಪ್ರಿಯಕರನ ಮದ್ವೆಯಾಗಿದ್ದ ಅಂಜು ಭಾರತಕ್ಕೆ ವಾಪಸ್!

vijaypura accident
ಕರ್ನಾಟಕ16 mins ago

Road Accident : ಕಬ್ಬು ತುಂಬಿದ ಟ್ರ್ಯಾಕ್ಟರ್‌ಗೆ ಬೈಕ್‌ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು

Task force committee meeting at Kottur
ವಿಜಯನಗರ27 mins ago

Vijayanagara News: ಮೂಲ ಸೌಕರ್ಯಗಳಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಿ: ಶಾಸಕ ನೇಮಿರಾಜ ನಾಯ್ಕ

Pooja Gandhi and Vijay Ghorpade
ಕರ್ನಾಟಕ31 mins ago

Pooja Gandhi: ಮಳೆ ಹುಡುಗಿಗೆ ಮಂತ್ರ ಮಾಂಗಲ್ಯ; ಹೊಸ ಬಾಳಿಗೆ ಕಾಲಿಟ್ಟ ಪೂಜಾ ಗಾಂಧಿ

Bombay High court orders to son to vacate his mother flat
ಕೋರ್ಟ್43 mins ago

ಆರೈಕೆ ಮಾಡದ ಮಗನಿಗೆ ತಾಯಿಯ ಫ್ಲ್ಯಾಟ್ ಖಾಲಿ ಮಾಡಲು ಬಾಂಬೆ ಹೈಕೋರ್ಟ್ ಆದೇಶ

TV Mohandas Pai Priyank Kharge
ಕರ್ನಾಟಕ53 mins ago

Mohandas Pai : ಐಟಿ ಸಿಟಿ ಗರಿ ಉದುರೀತು ಎಂದ ಮೋಹನ್‌ ದಾಸ್‌ ಪೈ, ಪ್ರಿಯಾಂಕ್‌ ತಿರುಗೇಟು

physical abuse
ದೇಶ1 hour ago

Physical Abuse : ನೀಚ ಕೃತ್ಯ; ನರ್ಸರಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಸ್ಕೂಲ್ ವ್ಯಾನ್ ಡ್ರೈವರ್​

peace accord between Manipur oldest armed group UNLF and Government
ದೇಶ1 hour ago

ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಮಣಿಪುರದ ಹಳೆ ಬಂಡುಕೋರ ಗುಂಪು ಯುಎನ್ಎಲ್ಎಫ್!

Gauvarav Yatra
ದೇಶ2 hours ago

Indian Railways : ಭಾರತ ಗೌರವ ಯಾತ್ರಾ ರೈಲಿನಲ್ಲಿ ಕಲುಷಿತ ಆಹಾರ ಸೇವಿಸಿ 90 ಮಂದಿ ಅಸ್ವಸ್ಥ

Actress Ramya
ಕರ್ನಾಟಕ2 hours ago

Actress Ramya: ಹುಟ್ಟುಹಬ್ಬದಂದು ನಾಯಿಮರಿಗಳೊಂದಿಗೆ ಕಾಲಕಳೆದ ಮೋಹಕ ತಾರೆ ರಮ್ಯಾ

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Bigg Boss- Saregamapa 20 average TRP
ಕಿರುತೆರೆ1 month ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ4 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Village Accountant Recruitment
ಉದ್ಯೋಗ10 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Sphoorti Salu
ಸುವಚನ6 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Dina Bhavishya
ಪ್ರಮುಖ ಸುದ್ದಿ16 hours ago

Dina Bhavishya : ಯಾರಾದರೂ ಕಾಳಜಿ ತೋರಿದರೆ ಈ ರಾಶಿಯವರು ನೆಗ್ಲೆಕ್ಟ್‌ ಮಾಡ್ಬೇಡಿ!

Dina Bhavishya
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರಿಗೆ ಬೇಸರ ತರಲಿದೆ ಸಂಗಾತಿಯ ಕಹಿ ಮಾತು

Cm Siddaramaiah in Janatha Darshan
ಕರ್ನಾಟಕ2 days ago

Janatha Darshan : ಜನಸ್ಪಂದನದಲ್ಲಿ ಸ್ವೀಕಾರವಾಗಿದ್ದು 3812 ಅರ್ಜಿ; ಇವುಗಳ ಸ್ಟೇಟಸ್‌ ಈಗ ಹೇಗಿದೆ?

CM Siddaramaiah Janatha Darshan
ಕರ್ನಾಟಕ2 days ago

Janatha Darshan : ಸಮಸ್ಯೆಗಳ ಪರಿಹಾರಕ್ಕೆ ಹದಿನೈದು ದಿನ ಗಡುವು ಕೊಟ್ಟ ಸಿಎಂ; ಕುಳಿತಲ್ಲೇ ಸಿದ್ದು ಊಟ!

Cm Siddaramaiah in Janatha Darshan
ಕರ್ನಾಟಕ2 days ago

Janatha Darshan : ಜಿಲ್ಲಾ ಮಟ್ಟದ ಸಮಸ್ಯೆ ಬೆಂಗಳೂರಿಗೆ ಬಂದರೆ ಸಹಿಸಲ್ಲ; ಸಿಎಂ ಖಡಕ್‌ ಎಚ್ಚರಿಕೆ

CM Janatha Darshana solved mysore citizens problem
ಕರ್ನಾಟಕ2 days ago

Janatha Darshan : ಮಾಲೀಕನ ಮನೆ ಹರಾಜು; ಲೀಸ್‌ ದುಡ್ಡಿಗೆ ಯಾರು ಗ್ಯಾರಂಟಿ? ಕಂಗೆಟ್ಟ ಕುಟುಂಬಕ್ಕೆ ಸಿಎಂ ರಕ್ಷಣೆ!

Shivajingar School building collapses The children escaped unhurt
ಕರ್ನಾಟಕ2 days ago

Building collapse : ಏಕಾಏಕಿ ಕುಸಿದು ಬಿದ್ದ ಶಾಲಾ ಕಟ್ಟಡ; ಪ್ರಾಣಾಪಾಯದಿಂದ ಚಿಣ್ಣರು ಪಾರು

CM Siddaramaiah Janatha Darshan
ಕರ್ನಾಟಕ2 days ago

Janatha Darshan : ಸಿಎಂಗೆ ದೂರು ನೀಡಬೇಕೇ? ಜನತಾ ದರ್ಶನಕ್ಕೆ ಹೋಗಬೇಕಿಲ್ಲ; ಈ ನಂಬರ್‌ಗೆ ಕರೆ ಮಾಡಿ!

read your daily horoscope predictions for november 27 2023
ಪ್ರಮುಖ ಸುದ್ದಿ3 days ago

Dina Bhavishya: ನಿಮ್ಮನ್ನು ಉರುಳಿಸಲು ಪಿತೂರಿ ಮಾಡ್ತಾರೆ ಹುಷಾರ್‌!

Danger Influenza People are suffering from the flu
ಆರೋಗ್ಯ3 days ago

Viral fever: ಡೆಡ್ಲಿ ಚೀನಾ ವೈರಸ್‌; ಮಕ್ಕಳಿಗೆ ಇದರಿಂದ ಅಪಾಯ ಇದೆಯಾ?

ಟ್ರೆಂಡಿಂಗ್‌