Paytm Payments Bank: ʼನಿಮ್ಮ ಹಣ ಸೇಫ್‌ʼ ಎಂದ ಪೇಟಿಎಂ ಪಾವತಿ ಬ್ಯಾಂಕ್; ಆದರೆ... - Vistara News

ಪ್ರಮುಖ ಸುದ್ದಿ

Paytm Payments Bank: ʼನಿಮ್ಮ ಹಣ ಸೇಫ್‌ʼ ಎಂದ ಪೇಟಿಎಂ ಪಾವತಿ ಬ್ಯಾಂಕ್; ಆದರೆ…

ಫೆಬ್ರವರಿ 29ರ ನಂತರ ತಮ್ಮ ಖಾತೆಗಳಿಗೆ/ವ್ಯಾಲೆಟ್‌ಗಳಿಗೆ ಹಣವನ್ನು ಸೇರಿಸಲು/ಠೇವಣಿ ಮಾಡಲು ಸಾಧ್ಯವಿಲ್ಲ ಎಂದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (Paytm Payments Bank) ತನ್ನ ಗ್ರಾಹಕರಿಗೆ ತಿಳಿಸಿದೆ.

VISTARANEWS.COM


on

paytm payments bank
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸದಿಲ್ಲಿ: “ಆತಂಕ ಬೇಡ, ನಿಮ್ಮ ಹಣ ನಮ್ಮಲ್ಲಿ ಸುರಕ್ಷಿತವಾಗಿರುತ್ತದೆ” ಎಂದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (Paytm Payments Bank) ತನ್ನ ಗ್ರಾಹಕರಿಗೆ ಭರವಸೆ ನೀಡಿದೆ. ಫೆಬ್ರವರಿ 29ರ ನಂತರ ಹೊಸ ಠೇವಣಿಗಳನ್ನು ಸ್ವೀಕರಿಸದಂತೆ ಅಥವಾ ಸಾಲದ ವಹಿವಾಟುಗಳನ್ನು ಅನುಮತಿಸದಂತೆ ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India – RBI- ಆರ್‌ಬಿಐ) ಪೇಟಿಎಂಗೆ ನಿರ್ದೇಶನ ನೀಡಿದ ಎರಡು ದಿನಗಳ ನಂತರ ಕಂಪನಿಯ ಈ ಹೇಳಿಕೆ ಬಂದಿದೆ.

ತನ್ನ ಗ್ರಾಹಕರಿಗೆ ನೀಡಿದ ಇಮೇಲ್ ಮತ್ತು ಪಠ್ಯ ಸಂದೇಶದಲ್ಲಿ, ಪೇಟಿಎಂ ಪೇಮೆಂಟ್‌ ಬ್ಯಾಂಕ್‌, RBI ನಿರ್ದೇಶನವು ಈಗಾಗಲೇ ಅಸ್ತಿತ್ವದಲ್ಲಿರುವ ಠೇವಣಿಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದೆ. “ನಿಮ್ಮ ಹಣವು ಬ್ಯಾಂಕ್‌ನಲ್ಲಿ ಸುರಕ್ಷಿತವಾಗಿರುತ್ತದೆ” ಎಂದು ಬ್ಯಾಂಕ್ ತನ್ನ ʼಪ್ರಮುಖ ಅಪ್‌ಡೇಟ್ʼನಲ್ಲಿ ಹೇಳಿದೆ.

ಹಾಗಾದರೆ ಆರ್‌ಬಿಐ ನಿರ್ದೇಶನದಿಂದ ಬದಲಾಗುವುದೇನು?

ಫೆಬ್ರವರಿ 29ರ ನಂತರ ತಮ್ಮ ಖಾತೆಗಳಿಗೆ/ವ್ಯಾಲೆಟ್‌ಗಳಿಗೆ ಹಣವನ್ನು ಸೇರಿಸಲು/ಠೇವಣಿ ಮಾಡಲು ಸಾಧ್ಯವಿಲ್ಲ ಎಂದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ತನ್ನ ಗ್ರಾಹಕರಿಗೆ ತಿಳಿಸಿದೆ. “ಆದಾಗ್ಯೂ, ಫೆಬ್ರವರಿ 29ರ ನಂತರವೂ ನಿಮ್ಮ ಅಸ್ತಿತ್ವದಲ್ಲಿರುವ ಬ್ಯಾಲೆನ್ಸ್‌ನಿಂದ ಹಣವನ್ನು ಹಿಂಪಡೆಯಲು ಯಾವುದೇ ನಿರ್ಬಂಧವಿಲ್ಲ” ಎಂದು ಅದು ಹೇಳಿದೆ.

“ಯಾವುದೇ ಹೆಚ್ಚಿನ ಸಹಾಯಕ್ಕಾಗಿ ದಯವಿಟ್ಟು ಪೇಟಿಎಂ ಅಪ್ಲಿಕೇಶನ್‌ನಲ್ಲಿ 24×7 ಸಹಾಯ ವಿಭಾಗದ ಮೂಲಕ ನಮ್ಮನ್ನು ಸಂಪರ್ಕಿಸಿ” ಎಂದು Paytm ಗ್ರಾಹಕರಿಗೆ ತಿಳಿಸಿದೆ.

ಆರ್‌ಬಿಐ ಕಡಿವಾಣ

ಮಾರ್ಚ್‌ನಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಠೇವಣಿಗಳನ್ನು ತೆಗೆದುಕೊಳ್ಳಲು, ಸಾಲ ಸೇವೆಗಳನ್ನು ನೀಡಲು ಅಥವಾ ನಿಧಿ ವರ್ಗಾವಣೆಯನ್ನು ಸುಗಮಗೊಳಿಸಲು ಸಾಧ್ಯವಿಲ್ಲ ಎಂದು ಆರ್‌ಬಿಐ ಬುಧವಾರ ಹೇಳಿತ್ತು.

“ಫೆಬ್ರವರಿ 29, 2024ರ ನಂತರ ಯಾವುದೇ ಗ್ರಾಹಕ ಖಾತೆಗಳು, ಪ್ರಿಪೇಯ್ಡ್ ಸಾಧನಗಳು, ವ್ಯಾಲೆಟ್‌ಗಳು, ಫಾಸ್ಟ್‌ಟ್ಯಾಗ್‌ಗಳು, NCMC ಕಾರ್ಡ್‌ಗಳು ಇತ್ಯಾದಿಗಳಲ್ಲಿ ಯಾವುದೇ ಡೆಪಾಸಿಟ್‌ ಮಾಡಲು, ಸಾಲ ಪಡೆಯಲು, ಟಾಪ್‌ಅಪ್‌ ಮಾಡಲು ಅನುಮತಿಯಿಲ್ಲ. ಆದರೆ ಬಡ್ಡಿ, ಕ್ಯಾಶ್‌ಬ್ಯಾಕ್ ಅಥವಾ ಮರುಪಾವತಿಗಳನ್ನು ಯಾವುದೇ ಸಮಯದಲ್ಲಿ ಪಡೆಯಬಹುದು” ಎಂದು ಸೆಂಟ್ರಲ್ ಬ್ಯಾಂಕ್ ಹೇಳಿದೆ.

ಹೊಸ ಗ್ರಾಹಕರನ್ನು ಸೇರಿಸುವುದನ್ನು ನಿಲ್ಲಿಸುವಂತೆ 2022ರ ಮಾರ್ಚ್‌ನಲ್ಲಿಯೇ Paytm ಪೇಮೆಂಟ್ಸ್ ಬ್ಯಾಂಕ್ ಅನ್ನು RBI ಕೇಳಿದೆ.

ಸಮಗ್ರ ಸಿಸ್ಟಮ್ ಆಡಿಟ್ ವರದಿ ಮತ್ತು ನಂತರದ ಬಾಹ್ಯ ಲೆಕ್ಕ ಪರಿಶೋಧಕರ ಅನುಸರಣೆಗಳಿಂದ, ಬ್ಯಾಂಕಿನಲ್ಲಿ ನಿಯಮಾವಳಿಗಳನ್ನು ಉಲ್ಲಂಘಿಸಿದ ಹಣಕಾಸು ವಹಿವಾಟು ಕಂಡುಬಂದಿದೆ. ಹೀಗಾಗಿ ಹೆಚ್ಚಿನ ಮೇಲ್ವಿಚಾರಣಾ ಕ್ರಮ ಅನಿವಾರ್ಯವಾಗಿದೆ ಎಂದು ಆರ್‌ಬಿಐ ಹೇಳಿದೆ.

Paytm ಷೇರುಗಳು ಕುಸಿತ

ತನ್ನ ಸಹವರ್ತಿ Paytm ಪೇಮೆಂಟ್ಸ್ ಬ್ಯಾಂಕ್ ವಿರುದ್ಧ RBIನ ಕ್ರಮದ ನಂತರ, ಡಿಜಿಟಲ್ ಪಾವತಿ ಸಂಸ್ಥೆ Paytm ಗುರುವಾರ ತನ್ನ ಮಾರುಕಟ್ಟೆ ಮೌಲ್ಯದ ಐದನೇ ಒಂದು ಭಾಗವನ್ನು ಕಳೆದುಕೊಂಡಿತು. Paytmನ ಷೇರುಗಳ ಬೆಲೆ ಆರು ವಾರಗಳ ಕನಿಷ್ಠ ಅಂದರೆ ₹609ಕ್ಕೆ ಕುಸಿದವು. ಕಂಪನಿಯಿಂದ ಸುಮಾರು $1.2 ಶತಕೋಟಿ ಸೋರಿಹೋಯಿತು.

ಸ್ಟಾಕ್ ಮೌಲ್ಯ 20%ದಷ್ಟು ಕಡಿಮೆಯಾಗಿದೆ. ಆರ್‌ಬಿಐನ ಆದೇಶದಿಂದ ತನ್ನ ವಾರ್ಷಿಕ ಗಳಿಕೆಗೆ ₹ 300 ಕೋಟಿಯಿಂದ ₹ 500 ಕೋಟಿಗಳಷ್ಟು “ದುಷ್ಪರಿಣಾಮ” ನಿರೀಕ್ಷಿಸುತ್ತದೆ ಎಂದು Paytm ಗುರುವಾರ ಹೇಳಿದೆ. ಕಂಪನಿಯು ಆರ್‌ಬಿಐ ನಿರ್ದೇಶನಗಳನ್ನು ಅನುಸರಿಸಲು “ತಕ್ಷಣದ ಕ್ರಮಗಳನ್ನು” ತೆಗೆದುಕೊಳ್ಳುತ್ತಿದೆ. ತನ್ನ ಲಾಭದಾಯಕತೆಯನ್ನು ಸುಧಾರಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದೆ.

ಇದನ್ನೂ ಓದಿ: Paytm Shares: ಪಾತಾಳಕ್ಕೆ ಕುಸಿದ ಪೇಟಿಎಂ ಷೇರು; 17 ಸಾವಿರ ಕೋಟಿ ರೂ. ನಷ್ಟ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ರಾಜಕೀಯ

Sedition Case: ಆರೋಪಿಗಳ ಧ್ವನಿ ಮಾದರಿ ಸಂಗ್ರಹಿಸಿದ್ದೇವೆ; ಮಂಡ್ಯ ಘೋಷಣೆಯನ್ನೂ ತನಿಖೆ ಮಾಡ್ತೇವೆ: ಡಿಕೆಶಿ

Sedition Case: ಬಿಜೆಪಿಯವರು ಯಾರಿಗೋ ಕೊಟ್ಟು ಖಾಸಗಿಯಾಗಿ ವರದಿ ತರಿಸಿದರೆ ಒಪ್ಪಲು ಆಗುತ್ತದೆಯಾ? ಅಧಿಕೃತವಾಗಿ ವರದಿ ನಮಗೆ ಬರಬೇಕು. ಮಾಧ್ಯಮಗಳಿಂದ ಸಿಕ್ಕ ವಿಡಿಯೊ ಕ್ಲಿಪ್ಪಿಂಗ್‌ಗಳನ್ನು ಇಟ್ಟುಕೊಂಡೇ ತನಿಖೆ ನಡೆಸಲಾಗುತ್ತಿದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

VISTARANEWS.COM


on

Sedition Case We have collected voice samples of accused DK Shivakumar
Koo

ಬೆಂಗಳೂರು: ವಿಧಾನಸೌಧದೊಳಗೆ ಪಾಕಿಸ್ತಾನ ಜಿಂದಾಬಾದ್ (Pakistan Zindabad slogans) ಘೋಷಣೆ ಸಂಬಂಧ ಸ್ವತಂತ್ರವಾಗಿ ತನಿಖೆ ನಡೆಸಲು ಪೊಲೀಸರಿಗೆ ಅಧಿಕಾರವನ್ನು ಕೊಟ್ಟಿದ್ದೇವೆ. ಅವರು ಸಮರ್ಪಕವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ದೇಶದ್ರೋಹದ ಕೇಸ್‌ (Sedition Case) ಇದಾಗಿರುವುದರಿಂದ ಇನ್ನೂ ತನಿಖೆ ನಡೆಯುತ್ತಿದೆ. ಧ್ವನಿ ಇನ್ನೂ ವಿಭಿನ್ನವಾಗಿ ಕೇಳಿಸುತ್ತಿದೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಯುತ್ತಿದೆ. ಅವರ ಧ್ವನಿ ಮಾದರಿಯನ್ನು ಸಹ ಪಡೆಯಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಹೇಳಿದ್ದಾರೆ.

ನಾಸಿರ್‌ ಹುಸೇನ್‌ ಅವರು ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ವೇಳೆ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ (Pakistan Zindabad slogans) ಘೋಷಣೆ ಕೂಗಿದ್ದ ದೇಶದ್ರೋಹದ ಪ್ರಕರಣಕ್ಕೆ (Sedition Case) ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಶಿವಕುಮಾರ್‌, ಈ ಪ್ರಕರಣದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಈಗಾಗಲೇ ನಾನು ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರು ಪೊಲೀಸರಿಗೆ ಸೂಚನೆ ಕೊಟ್ಟಿದ್ದೇವೆ. ಧ್ವನಿಯು ಒಮ್ಮೊಮ್ಮೆ ವಿಭಿನ್ನವಾಗಿ ಕೇಳಿಸುತ್ತಿದೆ. ಬಿಜೆಪಿಯವರು ಯಾರಿಗೋ ಕೊಟ್ಟು ಖಾಸಗಿಯಾಗಿ ವರದಿ ತರಿಸಿದರೆ ಒಪ್ಪಲು ಆಗುತ್ತದೆಯಾ? ಅಧಿಕೃತವಾಗಿ ವರದಿ ನಮಗೆ ಬರಬೇಕು. ಮಾಧ್ಯಮಗಳಿಂದ ಸಿಕ್ಕ ವಿಡಿಯೊ ಕ್ಲಿಪ್ಪಿಂಗ್‌ಗಳನ್ನು ಇಟ್ಟುಕೊಂಡೇ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.

ನೂತನ ರಾಜ್ಯಸಭಾ ಸದಸ್ಯರಾದ ನಾಸಿರ್‌ ಹುಸೇನ್‌ ಸಹ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಘಟನೆ ನಡೆದ ದಿನವೇ ಹೇಳಿದ್ದಾರೆ. ಒಂದು ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದೇ ಆದಲ್ಲಿ ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಧ್ವನಿಯ ಸ್ಯಾಂಪಲ್‌ ಪಡೆಯಲಾಗಿದೆ

ಈ ಕೇಸ್‌ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದೆ. ಸುತ್ತಮುತ್ತಲು ಯಾರು ಇದ್ದರು? ಯಾರು ಕೂಗಿರಬಹುದು? ಎಲ್ಲ ಆಯಾಮದಲ್ಲೂ ತನಿಖೆ ನಡೆಯುತ್ತದೆ. ನಾವು ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಪೊಲೀಸರು ನಡೆಸುವ ತನಿಖೆಯನ್ನು ನಾವು ನಂಬುತ್ತೇವೆ. ಮೂವರು ಆರೋಪಿಗಳನ್ನು ಸೋಮವಾರ ಮಧ್ಯಾಹ್ನ ವಶಕ್ಕೆ ಪಡೆದು ಧ್ವನಿ ಮಾದರಿಯನ್ನು ಪಡೆಯಲಾಗಿತ್ತು. ಕಾರಣ, ಇವರೇ ಘೋಷಣೆ ಕೂಗಿದ್ದಾರೆಯೇ? ಧ್ವನಿಯ ಫ್ರೀಕ್ವೆನ್ಸಿ ಏನು? ಅವರು ನಾಸಿರ್‌ ಹುಸೇನ್‌ ಜಿಂದಾಬಾದ್‌ ಎಂದು ಹೇಳಿದ್ದಾರೋ? ಪಾಕಿಸ್ತಾನ ಜಿಂದಾಬಾದ್‌ ಎಂದು ಹೇಳಿದ್ದಾರೋ? ಎಂಬಿತ್ಯಾದಿ ವಿಷಯಗಳ ಬಗ್ಗೆ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

ಬಿಜೆಪಿ ಘಟನೆಯೂ ತನಿಖೆ ಆಗುತ್ತಿದೆ

ಮಂಡ್ಯದಲ್ಲಿ ಬಿಜೆಪಿ ಪ್ರತಿಭಟನೆ ವೇಳೆ ಬಿಜೆಪಿ ಕಾರ್ಯಕರ್ತ ಬಾಯಿತಪ್ಪಿ ಘೋಷಣೆ ಕೂಗಿದ್ದರ ಬಗ್ಗೆಯೂ ತನಿಖೆ ಆಗುತ್ತಿದೆ. ಈಗ ಬಿಜೆಪಿಯವರು ಮಂಡ್ಯ ಘಟನೆ ಬಗ್ಗೆ ಮಾತನಾಡಲಿ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು.

Continue Reading

ರಾಜಕೀಯ

R AShok : ಕರ್ನಾಟಕದಲ್ಲಿ ಪಾಕಿಸ್ತಾನದ ಮಕ್ಕಳು ಹುಟ್ಟಿಕೊಳ್ತಿದ್ದಾರೆ ಎಂದ ಅಶೋಕ್‌

R Ashok : ರಾಜ್ಯದಲ್ಲಿ ಪಾಕಿಸ್ತಾನಿ ಮಕ್ಕಳು ಹುಟ್ಟಿಕೊಳ್ಳುತ್ತಿದ್ದಾರೆ. ಅವರಿಗೆ ಭಾರತದ ಸರ್ಟಿಫಿಕೆಟ್‌ ಕೊಡುವ ಕೆಲಸವೂ ನಡೆಯುತ್ತಿದೆ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌.

VISTARANEWS.COM


on

R Ashok Bangalore blastNew Project
Koo

ಕಲಬುರಗಿ: ʻʻಕರ್ನಾಟಕದಲ್ಲಿ ಪಾಕಿಸ್ತಾನ‌ ಮಕ್ಕಳು (Pakistani Children) ಹುಟ್ಟಿಕೊಳ್ಳುತ್ತಿದ್ದಾರೆ. ರಾಜ್ಯ ಪಾಕಿಸ್ತಾನದ ಅಡ್ಡೆಯಾಗುತ್ತಿದೆʼʼ ಎಂದು ವಿಧಾನಸಭೆಯ ವಿರೋಧ ಪಕ್ಷ ನಾಯಕ ಆರ್‌. ಅಶೋಕ್‌ (R Ashok) ಆರೋಪಿಸಿದ್ದಾರೆ. ಕಲಬುರಗಿಯ ಐವಾನ್ ಶಾಯಿ ಅತಿಥಿ ಗೃಹದಲ್ಲಿ ಮಾತನಾಡಿದ ಅವರು, ಪಾಕಿಸ್ತಾನಿಗಳಿಗೆ ರಾಜ್ಯದಲ್ಲಿ ಬೆಳೆಯಲು ಅವಕಾಶ ನೀಡಲಾಗುತ್ತಿದೆ. ಅವರಿಗೆ ಬರ್ತ್ ಸರ್ಟಿಫಿಕೇಟ್ (Birth Certificate) ಕೂಡಾ ಕೊಡ್ತಿದ್ದಾರೆ ಎಂದು ಆರೋಪಿಸಿದರು.

ʻʻಬೆಂಗಳೂರಿನ ಜನ ಭಯೋತ್ಪಾದಕ ಚಟುವಟಿಕೆಯಿಂದ (Terror Activities) ತತ್ತರಿಸಿ ಹೋಗಿದ್ದಾರೆ. ಕರ್ನಾಟಕ ರಾಜ್ಯ ಒಂದು ರೀತಿ ಅಶಾಂತಿ ತೋಟ ಆಗುತ್ತಿದೆ.. ದೇಶ ದ್ರೋಹ ಚಟುವಟಿಕೆ ಹಾಗೂ ರಕ್ತದ ಕಲೆಗಳು ಕಾಣುತ್ತಿವೆ. ಕುವೆಂಪು ಅವರು ಕರ್ನಾಟಕವನ್ನು ಶಾಂತಿಯ ತೋಟ ಎಂದಿದ್ದರೆ, ಕಾಂಗ್ರೆಸ್‌ ಸರ್ಕಾರ ಅದನ್ನು ಅಶಾಂತಿಯ ತೋಟವಾಗಿ ಮಾಡಿದೆ ಎಂದು ಹೇಳಿದರು ಅಶೋಕ್‌.

ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಜತೆ ಲಿಂಕ್‌ ಇರುವ ವ್ಯಕ್ತಿಗಳನ್ನು ಕಾಂಗ್ರೆಸ್‌ ಬೆಂಬಲಿಸುತ್ತಿದೆ. ವಿಧಾನಸಭೆಯಲ್ಲಿ ಪಾಕ್ ಪರ ಘೋಷಣೆ ಮಾಡಿದವರಲ್ಲಿ ಮೂವರ ಬಂಧನವಾಗಿದೆ. ಆದರೆ, ಇನ್ನೂ ಬಹಳ ಜನ‌ ಇದಕ್ಕೆ ಜೈ ಎಂದಿದ್ದಾರೆ. ಅವರನ್ನು ಕೂಡ ಬಂಧಿಸಬೇಕು ಎಂದು ಅಶೋಕ್‌ ಆಗ್ರಹಿಸಿದ್ದಾರೆ.

ಬಂಧಿತರಲ್ಲಿ ಒಬ್ಬ ದಿಲ್ಲಿ ನಿವಾಸಿಯಾಗಿದ್ದಾನೆ. ಅವನನ್ನು ದಿಲ್ಲಿಯಿಂದ ಕರೆದುಕೊಂಡು ಬಂದಿದ್ದಾರೆ ಎಂದರೆ ಏನು ಸುಮ್ಮನೆ ಕರೆದುಕೊಂದು ಬರ್ತಾರಾ? ಬಂಧಿತರಲ್ಲಿ ಒಬ್ಬ ಆಗಲೇ ಕಾಂಗ್ರೆಸ್‌ ಕಾರ್ಯಕರ್ತ ಎಂದು ಒಪ್ಪಿಕೊಡಿದ್ದಾನೆ. ಇನ್ನೊಬ್ಬ ನಾನೇ ಕೂಗಿದ್ದು ಎಂದು ಒಪ್ಪಿಕೊಂಡಿದ್ದಾನೆ. ಅವನ‌ ವಾಯ್ಸ್ ಸರಿ ಹೊಂದುತ್ತಿದೆ ಎನ್ನಲಾಗುತ್ತಿದೆ ಎಂದು‌ ಆರ್. ಅಶೋಕ್‌ ಅವರು ವಿವರಣೆ ನೀಡಿದ್ದಾರೆ.

ಇಷ್ಟೆಲ್ಲ ಆದಮೇಲೆ ನಾನು ಕಾಂಗ್ರೆಸ್‌ ಸಚಿವರಿಗೆ ಕೇಳ್ತೇನೆ, ಈಗ ಏನು ಹೇಳ್ತಿರಾ..? ಪ್ರಿಯಾಂಕ ಖರ್ಗೆ ಅವರೇ ಏನು ಹೇಳ್ತಿರಾ? ಈಗ ನಿಮ್ಮ ದ್ವನಿ ಅಡಗಿ ಹೋಗಿದೆಯಾ..! ಎಂದು ಅವರು ಪ್ರಶ್ನಿಸಿದರು.

ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ

ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಕಗ್ಗೊಲೆಗಳಾಗಿವೆ.. ಕಲಬುರಗಿಯಲ್ಲೇ 15ಕ್ಕೂ ಹೆಚ್ಚು ರಾಜಕೀಯ ಪ್ರೇರಿತ ಕೊಲೆಗಳಾಗಿವೆʼʼ ಎಂದು ಹೇಳಿದ ಅವರು, ಕರ್ನಾಟಕದಲ್ಲಿ‌ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದರು. ಇದಕ್ಕೆಲ್ಲ ಕಾರಣ ಕಾಂಗ್ರೆಸ್‌ ನಾಯಕರು ನೀಡುವ ಸಲುಗೆ ಎಂದರು.

ಮಂಗಳೂರಿನಲ್ಲಿ ಕುಕ್ಕರ್‌ ಬ್ಲಾಸ್ಟ್‌ ಸಂಭವಿಸಿದಾಗ ಡಿ.ಕೆ. ಶಿವಕುಮಾರ್‌ ಅವರು, ಅವರು ಅಮಾಯಕರು ನಮ್ಮ ಬ್ರದರ್ಶ್‌ ಎಂದು ಹೇಳಿದ್ದರು. ರಾಮೇಶ್ವರ ಕೆಫೆ ಬ್ಲಾಸ್ಟ್ ಪ್ರಕರಣದ ಹಿಂದೆ ಉದ್ಯಮ ದ್ದೇಷ, ಬಿಸಿನೆಸ್‌ ರೈವರ್ಲಿ ಇರಬಹುದು ಎಂದು ಹೇಳಿಕೆ ನೀಡಿದರು. ಈಗ ಅದು ಭಯೋತ್ಪಾದನಾ ಚಟುವಟಿಕೆ ಎಂದು ಸಾಬೀತಾಗಿದೆ ಎಂದು ನೆನಪಿಸಿದರು.

ಇದನ್ನೂ ಓದಿ :BY Vijayendra :‌ ನಾಸಿರ್‌ ಹುಸೇನ್‌ ಕೂಡಾ ಅಪರಾಧಿ, FIRನಲ್ಲಿ ಸೇರಿಸಿ; ವಿಜಯೇಂದ್ರ ಆಗ್ರಹ

ಎಲ್ಲ ಪರೀಕ್ಷೆಯಲ್ಲಿ ಸಿಎಂ ಫೇಲ್‌ ಎಂದ ಅಶೋಕ್‌

ʻʻಸಿಎಂ ಸಿದ್ದರಾಮಯ್ಯ ಅವರು ಪದೇಪದೆ ಒಂದು ಪ್ರಶ್ನೆ ಕೇಳ್ತಾರೆ. ಭಾರತ ಮಾತೆಯ ಮೇಲಿನ ನನ್ನ ಪ್ರೀತಿಯನ್ನು ಪರಿಕ್ಷೆ ಮಾಡೋಕೆ ಆಗುತ್ತಾ ಅಂತ. ಆದರೆ, ಈಗ ಆಗಿರುವ ಎಲ್ಲ ಪರೀಕ್ಷೆಗಲ್ಲಿ ಅವರು ಎಲ್ಲಿ ಪಾಸ್‌ ಆಗಿದ್ದಾರೆʼʼ ಎಂದು ಪಾಕಿಸ್ತಾನ್‌ ಜಿಂದಾಬಾದ್‌ ಮತ್ತು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣವನ್ನು ಉಲ್ಲೇಖಿಸಿ ಹೇಳಿದರು.

ಸಿಎಂ ಸಿದ್ದರಾಮಯ್ಯ ಎಲ್ಲಾ ಹಿಂದುಗಳ ವಿರುದ್ಧವಾಗಿದ್ದಾರೆ. ಕಾಂಗ್ರೆಸ್‌ ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಮಾಡುತ್ತಿದೆ, ಕಾಂಗ್ರೆಸ್‌ ಸರ್ಕಾರ ರಾಜ್ಯವನ್ನು ಪಾಕಿಸ್ತಾನದ ಮತ್ತು ಉಗ್ರರ ಸ್ಲೀಪರ್‌ ಸೆಲ್ ಮಾಡುತ್ತಿದೆ ಎಂದು ಆರೋಪಿಸಿದ ಆರ್‌ ಅಶೋಕ್‌ ಅವರು, ಕರ್ನಾಟಕ ಯಾರದೋ ಪ್ರಯೋಗ ಶಾಲೆ ಆಗೋದಕ್ಕೆ ಬಿಡಬೇಡಿ ಎಂದು ಮನವಿ ಮಾಡಿದರು.

ಪಿಎಫ್ ಐ ಕಾರ್ಯಕರ್ತರ ಮೇಲಿನ ಕೇಸ್ ವಾಪಾಸ್ ತೆಗೆದಿರಿ, ಡಿಜೆ ಹಳ್ಳಿ‌, ಕೆಜೆ ಹಳ್ಳಿ ಕೇಸ್‌ ವಾಪಾಸ್ ತೆಗೆಯುವ ಪ್ರಯತ್ನ ಮಾಡಲಾಗುತ್ತಿದೆ. ಈ ಮೂಲಕ ಸಿದ್ದರಾಮಯ್ಯ ಅವರು ತಾನೊಬ್ಬ ಹಿಂದು ವಿರೋಧಿ ಎಂದು ತೋರಿಸಿಕೊಳ್ಳುತ್ತಿದ್ದಾರೆ ಎಂದು ಆರ್‌. ಅಶೋಕ್‌ ಆರೋಪಿಸಿದರು.

Continue Reading

ರಾಜಕೀಯ

Vande Bharat Train: ವಂದೇ ಭಾರತ್ ರೈಲುಗಳ ಮೇಲೆ ಕಲ್ಲು ತೂರಾಟ​; ಒಂದೇ ದಿನ 2 ಟ್ರೈನ್‌ ಮೇಲೆ 3 ಕಡೆ ದಾಳಿ!

Vande Bharat Train: ಈ ವರ್ಷವೊಂದರಲ್ಲೇ ವಂದೇ ಭಾರತ್​ ರೈಲಿನ ಮೇಲೆ 10 ಬಾರಿ ಕಲ್ಲು ತೂರಾಟ ನಡೆಸಿದ ಪ್ರಕರಣಗಳು ಬೆಳಕಿಗೆ ಬಂದಿದೆ. ಕಳೆದ ವರ್ಷ 40 ಕಲ್ಲು ತೂರಾಟ ಪ್ರಕರಣಗಳು ನಡೆದಿದ್ದವು. ಅದೃಷ್ಟವಶಾತ್‌ ಈ ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಗಾಯವಾಗಿಲ್ಲ. ಆದರೆ, ರೈಲುಗಳ ಕಿಟಕಿ ಗಾಜುಗಳಿಗೆ ಹಾನಿಯಾಗಿವೆ.

VISTARANEWS.COM


on

Stones pelted at 3 Vande Bharat train in a single day
Koo

ಬೆಂಗಳೂರು: ಬೆಂಗಳೂರಿನ ನೈಋತ್ಯ ರೈಲ್ವೆ ವಲಯದ (South Western Railway Zone) ಮೂಲಕ ಹಾದುಹೋಗುವ 2 ವಂದೇ ಭಾರತ್ ರೈಲುಗಳ (Vande Bharat Train) ಮೇಲೆ ಇತ್ತೀಚೆಗೆ ಮೂರು ಕಡೆ ಪ್ರತ್ಯೇಕವಾಗಿ ಕಲ್ಲು ತೂರಾಟದ ಪ್ರಕರಣಗಳು ನಡೆದಿವೆ. ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲಿ ಭಾನುವಾರ (ಮಾ.03) ರಂದು ದುಷ್ಕರ್ಮಿಗಳು ಕಲ್ಲು ತೂರಿದ್ದು, ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಪ್ರಕರಣಗಳನ್ನು ರೈಲ್ವೆ ಇಲಾಖೆ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿದೆ. ಈ ವರ್ಷವೊಂದರಲ್ಲೇ ವಂದೇ ಭಾರತ್​ ರೈಲಿನ ಮೇಲೆ 10 ಬಾರಿ ಕಲ್ಲು ತೂರಾಟ ನಡೆಸಿದ ಪ್ರಕರಣಗಳು ಬೆಳಕಿಗೆ ಬಂದಿದೆ. ಕಳೆದ ವರ್ಷ 40 ಕಲ್ಲು ತೂರಾಟ ಪ್ರಕರಣಗಳು ನಡೆದಿದ್ದವು. ಅದೃಷ್ಟವಶಾತ್‌ ಈ ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಗಾಯವಾಗಿಲ್ಲ. ಆದರೆ, ರೈಲುಗಳ ಕಿಟಕಿ ಗಾಜುಗಳಿಗೆ ಹಾನಿಯಾಗಿವೆ.

ಕೆಎಸ್​ಆರ್​ ಬೆಂಗಳೂರು-ಧಾರವಾಡ (20661/20662) ಮಧ್ಯೆ ಸಂಚರಿಸುವ ವಂದೇ ಭಾರತ್​ ರೈಲಿನ ಮೇಲೆ ಎರಡು ಬಾರಿ ಮತ್ತು ಮೈಸೂರು-ಚೆನ್ನೈ ಸೆಂಟ್ರಲ್ ​​ವಂದೇ ಭಾರತ್​ (20608) ರೈಲಿನ ಮೇಲೆ ಕಲ್ಲು ತೂರಲಾಗಿದೆ. ಭಾನುವಾರ (ಮಾ.03) ರಂದು ಬೆಂಗಳೂರಿನಿಂದ ಧಾರವಾಡದ ಕಡೆ ಹೊರಟಿದ್ದ ವಂದೇ ಭಾರತ್​ ರೈಲಿನ ಮೇಲೆ ಚಿಕ್ಕಬಾಣಾವರ ರೈಲು ನಿಲ್ದಾಣದ ಬಳಿ ಮುಂಜಾನೆ 6.15ಕ್ಕೆ ಕಲ್ಲು ತೂರಲಾಗಿದೆ. ಇದೇ ರೈಲು ಧಾರವಾಡದಿಂದ ಬೆಂಗಳೂರಿಗೆ ಬರುವಾಗ ಮಾರ್ಗ ಮಧ್ಯೆ ಹಾವೇರಿ ಮತ್ತು ಹರಿಹರ ರೈಲು ನಿಲ್ದಾಣಗಳ ಸಮೀಪ ಮಧ್ಯಾಹ್ನ 3.30ರ ಸುಮಾರಿಗೆ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ.

Stones pelted at 3 Vande Bharat train in a single day

ಬೆಂಗಳೂರು ಮುಖಾಂತರ ಹಾದು ಚೈನ್ನೈ ತಲುಪುವ ಮೈಸೂರು-ಚೆನ್ನೈ ಸೆಂಟ್ರಲ್​ ವಂದೇ ಭಾರತ್​​ ರೈಲು ಮಾರ್ಗ ಮಧ್ಯೆ ಆಂಧ್ರಪ್ರದೇಶದ ಮೂಲಕ ಹಾದು ಹೋಗುತ್ತದೆ. ಈ ರೈಲು ಕುಪ್ಪಂ ನಿಲ್ದಾಣದ ಬಳಿ ಬಂದಾಗ ಸಂಜೆ 4.30ರ ಸುಮಾರಿಗೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ.

ಎರಡು ಕಲ್ಲು ತೂರಾಟಗಳು ಬೆಂಗಳೂರು ರೈಲು ನಿಲ್ದಾಣ ವ್ಯಾಪ್ತಿಯಲ್ಲಿ ಸಂಭವಿಸಿದರೆ (ಚಿಕ್ಕಬಾಣಾವವಾರ ಮತ್ತು ಹಾವೇರಿ-ಹರಿಹರ) ಮೂರನೇ ಕಲ್ಲು ತೂರಾಟ ಪ್ರಕರಣು ಮೈಸೂರು ರೈಲು ನಿಲ್ದಾಣ ವ್ಯಾಪ್ತಿಯಲ್ಲಿ ನಡೆದಿದೆ.

ಆರೋಪಿಗಳ ಪತ್ತೆ ಸುಲಭವೇ?

ಪದೆ ಪದೇ ಕಲ್ಲು ತೂರಾಟ ಪ್ರಕರಣಗಳು ಸಂಭವಿಸುತ್ತಿರುವುದರಿಂದ ರೈಲ್ವೆ ಇಲಾಖೆಗೆ ನಷ್ಟ ಉಂಟಾಗುತ್ತದೆ. ಅಲ್ಲದೆ, ಆರೋಪಿಗಳ ಪತ್ತೆ, ಬಂಧನ ಕಾರ್ಯವೂ ಅಷ್ಟು ಸುಲಭವಲ್ಲ. ಕೆಲವು ಸಂದರ್ಭದಲ್ಲಿ ಮಕ್ಕಳು, ಮದ್ಯವ್ಯಸನಿಗಳು ಇಲ್ಲವೇ ಮಾದಕ ವ್ಯಸನಿಗಳು ಎಸಗಿರುವುದು ಗೊತ್ತಾಗಿದೆ. ಈಗ ರೈಲಿನ ಒಳಗೆ ಇರುವ ಹಾಗೂ ಹೊರಗಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಪತ್ತೆ ಹಚ್ಚಲಾಗುವುದು. ಆದರೆ, ರೈಲು ಗಂಟೆಗೆ 100 ಕಿಮೀ ವೇಗದಲ್ಲಿ ಚಲಿಸುವುದರಿಂದ ಸಿಸಿ ಕ್ಯಾಮೆರಾದ ದೃಶ್ಯಗಳನ್ನು ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಲು ಸ್ವಲ್ಪ ಕಷ್ಟವಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: JP Nadda: ರಾಜ್ಯಸಭೆ ಸದಸ್ಯ ಸ್ಥಾನಕ್ಕೆ ಜೆ.ಪಿ. ನಡ್ಡಾ ರಾಜೀನಾಮೆ; ಚುನಾವಣೆ ಸ್ಪರ್ಧೆ ಫಿಕ್ಸ್?

5 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು!

ಸೆಕ್ಷನ್ 147 (ರೈಲ್ವೆ ಹಳಿಯಲ್ಲಿ ಅತಿಕ್ರಮಣ) ಮತ್ತು ಸೆಕ್ಷನ್ 153 (ಉದ್ದೇಶ ಪೂರ್ವಕ ಕ್ರಿಯೆ ಅಥವಾ ಲೋಪದಿಂದ ರೈಲ್ವೆಯಲ್ಲಿ ಪ್ರಯಾಣಿಸುವ ವ್ಯಕ್ತಿಗಳ ಸುರಕ್ಷತೆಗೆ ಅಪಾಯವನ್ನುಂಟು ಮಾಡುವುದು) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ರೈಲುಗಳ ಮೇಲೆ ಕಲ್ಲು ತೂರಾಟ ನಡೆಸುವುದು ಕ್ರಿಮಿನಲ್ ಅಪರಾಧವಾಗಿದೆ. ರೈಲ್ವೇ ಕಾಯ್ದೆ ಸೆಕ್ಷನ್ 153ರ ಅಡಿಯಲ್ಲಿ 5 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ.

Continue Reading

ಬೆಳಗಾವಿ

BY Vijayendra :‌ ನಾಸಿರ್‌ ಹುಸೇನ್‌ ಕೂಡಾ ಅಪರಾಧಿ, FIRನಲ್ಲಿ ಸೇರಿಸಿ; ವಿಜಯೇಂದ್ರ ಆಗ್ರಹ

BY Vijayendra : ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ಪ್ರಕರಣದಲ್ಲಿ ರಾಜ್ಯಸಭಾ ಚುನಾವಣೆ ಗೆದ್ದ ನಾಸಿರ್‌ ಹುಸೇನ್‌ ಕೂಡಾ ಆರೋಪಿ. ಅವರನ್ನು ಪ್ರಮಾಣವಚನ ಸ್ವೀಕರಿಸಲು ಬಿಡಬಾರದು ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.

VISTARANEWS.COM


on

Sedition Case BY Vijayendra
Koo

ಬೆಳಗಾವಿ: ವಿಧಾನ ಸೌಧದಲ್ಲಿ (Vidhana Soudha) ಪಾಕಿಸ್ತಾನ್ ಜಿಂದಾಬಾದ್‌ (Pakistan Zindabad) ಘೋಷಣೆ ಕೂಗಿದ ಪ್ರಕರಣದಲ್ಲಿ ರಾಜ್ಯಸಭಾ ಸದಸ್ಯರಾಗಿ (Rajyasabha Member) ಕಾಂಗ್ರೆಸ್‍ನಿಂದ ಆಯ್ಕೆಯಾದ ನಾಸಿರ್ ಹುಸೇನ್ (Nasir Husein) ಅವರನ್ನು ಕೂಡ ಅಪರಾಧಿ ಎಂದು ಎಫ್‍ಐಆರ್‌ನಲ್ಲಿ ಸೇರಿಸಬೇಕು. ಜಿಂದಾಬಾದ್‌ ಘೋಷಣೆ ಮಾಡಿದ ಮೂವರು ಆರೋಪಿಗಳ ವಿವರ ಲಭಿಸಿದೆ. ನಾಲ್ಕನೇ ಆರೋಪಿಯಾಗಿ ನಾಸೀರ್ ಹುಸೇನ್ ಹೆಸರು ಸೇರಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ (BY Vijayendra) ಅವರು ಆಗ್ರಹಿಸಿದ್ದಾರೆ.

ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಖಾಸಗಿ ಎಫ್‍ಎಸ್‍ಎಲ್ ವರದಿ ಬಿಡುಗಡೆ ಆಗದೆ ಇದ್ದಿದ್ದರೆ ಸರಕಾರ ಈ ದೇಶದ್ರೋಹಿಗಳನ್ನು ಬಂಧಿಸಲು ಮೀನ ಮೇಷ ಎಣಿಸುವ ಸಾಧ್ಯತೆ ಇತ್ತು ಎಂದು ಅನುಮಾನ ವ್ಯಕ್ತಪಡಿಸಿದರು.

Sedition Case : ಇನ್ನೂ ಎಫ್‌ಎಸ್‌ಎಲ್‌ ವರದಿ ಯಾಕೆ ಬಿಡುಗಡೆ ಮಾಡಿಲ್ಲ?

ವಿಧಾನಸೌಧದ ಒಳಗೆ ಕೆಲವು ದೇಶದ್ರೋಹಿಗಳು ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಕೂಗಿದ ನಂತರ ಬಿಜೆಪಿ ನಿರಂತರ ಹೋರಾಟದ ಪ್ರತಿಫಲವಾಗಿ ಸೋಮವಾರ ಮೂರು ದೇಶದ್ರೋಹಿಗಳನ್ನು ಬಂಧಿಸಿದ್ದಾರೆ. ಆದರೆ, ರಾಜ್ಯ ಸರಕಾರ ಇನ್ನೂ ಎಫ್.ಎಸ್.ಎಲ್ ವರದಿಯನ್ನು ಬಹಿರಂಗಪಡಿಸಿಲ್ಲ ಎಂದು ಆಕ್ಷೇಪಿಸಿದರು.

ಸರಕಾರ ಯಾವ ಕಾರಣಕ್ಕೆ ಎಫ್.ಎಸ್.ಎಲ್ ವರದಿಯನ್ನು ಬಿಡುಗಡೆ ಮಾಡಲು ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ ಅವರು, ಇದಕ್ಕೆ ಉತ್ತರ ಕೊಡಿ ಎಂದು ಆಗ್ರಹಿಸಿದರು. ಈ ದೇಶದ್ರೋಹಿ ಘಟನೆಯ ಸೂತ್ರಧಾರಿಗಳು ಯಾರು? ಪಾತ್ರಧಾರಿಗಳು ಯಾರು? ಎಂದು ಕೇಳಿದರು. ಪ್ರಮುಖರಾದ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಅವರ ಹೆಸರನ್ನೇ ಪೊಲೀಸರು ಕೈಬಿಟ್ಟಿದ್ದಾರೆ ಎಂದು ಆರೋಪಿಸಿದರು.

ತನಿಖೆ ಪೂರ್ಣ ಆಗುವವರೆಗೆ ನಾಸಿರ್‌ ಹುಸೇನ್‌ ಪ್ರಮಾಣವಚನ ಸ್ವೀಕರಿಸಬಾರದು

ಜನಪ್ರತಿನಿಧಿ, ರಾಜ್ಯಸಭಾ ಸದಸ್ಯ ಆಗುವವರು ಸಂವಿಧಾನ ಮತ್ತು ದೇಶದ ಸಾರ್ವಭೌಮತ್ವ- ಅಖಂಡತೆಯನ್ನು ಎತ್ತಿಹಿಡಿಯುವುದಾಗಿ ಪ್ರಮಾಣವಚನ ಸ್ವೀಕಾರ ಮಾಡುತ್ತಾರೆ. ಈ ತನಿಖೆ ಪೂರ್ಣಗೊಳ್ಳುವವರೆಗೆ ನಾಸೀರ್ ಹುಸೇನ್ ಅವರು ಪ್ರಮಾಣವಚನ ಸ್ವೀಕರಿಸಬಾರದು ಎಂದು ಅವರು ಒತ್ತಾಯಿಸಿದರು. ಈ ಸಂಬಂಧ ರಾಜ್ಯಸಭಾ ಅಧ್ಯಕ್ಷರಾದ ಉಪ ರಾಷ್ಟ್ರಪತಿಗಳಿಗೆ ಬಿಜೆಪಿ ವತಿಯಿಂದ ಇವತ್ತೇ ಪತ್ರ ಬರೆಯಲಿದ್ದೇವೆ. ತನಿಖೆ ಪೂರ್ಣಗೊಳ್ಳುವವರೆಗೆ ಅವರಿಗೆ ಪ್ರಮಾಣವಚನ ಬೋಧಿಸದೆ ಇರಲು ಒತ್ತಾಯ ಮಾಡಲಿದ್ದೇವೆ ಎಂದರು.

ಮುಖ್ಯಮಂತ್ರಿಗಳು, ಕಾಂಗ್ರೆಸ್ ಪಕ್ಷದಲ್ಲಿ ಪ್ರಾಮಾಣಿಕತೆ ಇದ್ದರೆ, ದೇಶಪ್ರೇಮ ಇದ್ದಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಎಂದು ಒತ್ತಾಯಿಸಿದರು. ನಾಸೀರ್ ಹುಸೇನ್ ಅವರು ಪ್ರಕರಣದಲ್ಲಿ ನಿರ್ದೋಷಿ ಎಂದು ಹೊರಕ್ಕೆ ಬರುವವರೆಗೆ ಅವರಿಗೆ ರಾಜ್ಯಸಭಾ ಸದಸ್ಯತ್ವದ ಪ್ರಮಾಣವಚನ ಸ್ವೀಕಾರಕ್ಕೆ ಅವಕಾಶ ಕೊಡಬಾರದು ಎಂದು ಆಗ್ರಹವನ್ನು ಮುಂದಿಟ್ಟರು.

ರಾಜ್ಯ ಸರಕಾರವು ಈ ವಿಷಯದಲ್ಲಿ ಪೊಲೀಸ್ ಅಧಿಕಾರಿಗಳ ಮೇಲೆ ಯಾಕೆ ಒತ್ತಾಯ ಹಾಕುತ್ತಿದೆ? ಎಫ್‍ಎಸ್‍ಎಲ್ ವರದಿ ಬಹಿರಂಗಪಡಿಸಲು ಯಾಕೆ ಮೀನಮೇಷ ಮಾಡುತ್ತ ಇದ್ದೀರಿ? ಎಂದ ಅವರು, ಈ ವಿಚಾರವನ್ನು ಇನ್ನೂ ಗಂಭೀರವಾಗಿ ಪರಿಗಣಿಸಿ ಎಂದು ಆಗ್ರಹಿಸಿದರು.

ಇದನ್ನೂ ಓದಿ: Sedition Case : ಪಾಕಿಸ್ತಾನ್‌ ಮುರ್ದಾಬಾದ್‌ ಬದಲು ಜಿಂದಾಬಾದ್‌ ಎಂದ ಬಿಜೆಪಿ ಕಾರ್ಯಕರ್ತ ಜೈಲಿಗೆ!

ದೇಶದ್ರೋಹದ ಪ್ರಶ್ನೆ ಬಂದಾಗ ಜಾತಿ, ಧರ್ಮ ನೋಡಬಾರದು

ದೇಶದ್ರೋಹದ ಪ್ರಶ್ನೆ ಬಂದಾಗ ಅವನು ಹಿಂದೂ, ಇವನು ಮುಸಲ್ಮಾನ ಎಂಬ ಪ್ರಶ್ನೆ ಉದ್ಭವವಾಗುವುದಿಲ್ಲ. ದೇಶದ್ರೋಹಿಗಳಿಗೆ ಯಾವುದೇ ಜಾತಿ, ಧರ್ಮ ಅಡ್ಡಿ ಬರಬಾರದು. ಈ ವಿಚಾರವನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದಂತೆ ನಮಗಂತೂ ತೋರುತ್ತಿಲ್ಲ ಎಂದು ಆಕ್ಷೇಪ ಸೂಚಿಸಿದರು. ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದರು.

Continue Reading
Advertisement
Sedition Case We have collected voice samples of accused DK Shivakumar
ರಾಜಕೀಯ25 mins ago

Sedition Case: ಆರೋಪಿಗಳ ಧ್ವನಿ ಮಾದರಿ ಸಂಗ್ರಹಿಸಿದ್ದೇವೆ; ಮಂಡ್ಯ ಘೋಷಣೆಯನ್ನೂ ತನಿಖೆ ಮಾಡ್ತೇವೆ: ಡಿಕೆಶಿ

R Ashok Bangalore blastNew Project
ರಾಜಕೀಯ48 mins ago

R AShok : ಕರ್ನಾಟಕದಲ್ಲಿ ಪಾಕಿಸ್ತಾನದ ಮಕ್ಕಳು ಹುಟ್ಟಿಕೊಳ್ತಿದ್ದಾರೆ ಎಂದ ಅಶೋಕ್‌

Murder by friends over love affair
ಕಲಬುರಗಿ51 mins ago

Murder Case : ಪ್ರೀತಿ ವಿಚಾರಕ್ಕೆ ಕಿತ್ತಾಟ; ಯುವಕನ ಕೊಲೆಯಲ್ಲಿ ಅಂತ್ಯ

modi
ದೇಶ59 mins ago

Narendra Modi: ತೆಲಂಗಾಣ, ಒಡಿಶಾಕ್ಕೆ ಮೋದಿ ಭೇಟಿ; 26,000 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಚಾಲನೆ

KSRTC to operate special buses for Mahashivratri
ಮಹಾ ಶಿವರಾತ್ರಿ1 hour ago

Maha Shivratri : ಮಹಾಶಿವರಾತ್ರಿಗೆ ಕೆಎಸ್‌ಆರ್‌ಟಿಸಿಯಿಂದ ಸ್ಪೆಷಲ್‌ ಬಸ್‌; ಶೇ.10ರಷ್ಟು ಡಿಸ್ಕೌಂಟ್‌!

Stones pelted at 3 Vande Bharat train in a single day
ರಾಜಕೀಯ1 hour ago

Vande Bharat Train: ವಂದೇ ಭಾರತ್ ರೈಲುಗಳ ಮೇಲೆ ಕಲ್ಲು ತೂರಾಟ​; ಒಂದೇ ದಿನ 2 ಟ್ರೈನ್‌ ಮೇಲೆ 3 ಕಡೆ ದಾಳಿ!

Sedition Case BY Vijayendra
ಬೆಳಗಾವಿ2 hours ago

BY Vijayendra :‌ ನಾಸಿರ್‌ ಹುಸೇನ್‌ ಕೂಡಾ ಅಪರಾಧಿ, FIRನಲ್ಲಿ ಸೇರಿಸಿ; ವಿಜಯೇಂದ್ರ ಆಗ್ರಹ

elon musk
ವಾಣಿಜ್ಯ2 hours ago

World’s Richest Person: ವಿಶ್ವದ ಅತ್ಯಂತ ಸಿರಿವಂತ ವ್ಯಕ್ತಿ ಪಟ್ಟ ಕಳೆದುಕೊಂಡ ಎಲಾನ್‌ ಮಸ್ಕ್‌; ಈಗ ಯಾರು ನಂ. 1 ಶ್ರೀಮಂತ?

Guest Lecturers salarys
ನೌಕರರ ಕಾರ್ನರ್2 hours ago

Guest Lecturers : ಅತಿಥಿ ಉಪನ್ಯಾಸಕರ ವೇತನ 8000 ರೂ. ಹೆಚ್ಚಳ, ಪಾಠದ ಅವಧಿಯೂ ಜಾಸ್ತಿ

Is there a drinking water problem in your area Call this helpline number
ಬೆಂಗಳೂರು2 hours ago

Water Crisis : ನಿಮ್ಮ ಏರಿಯಾದಲ್ಲಿ ಕುಡಿಯುವ ನೀರಿನ ಸಮಸ್ಯೆನಾ?; ಈ ಹೆಲ್ಪ್‌ಲೈನ್‌ ನಂಬರ್‌ಗೆ ಕಾಲ್‌ ಮಾಡಿ

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

BJP JDS alliance to finalise seats for Lok Sabha polls this week HD DeveGowda
ರಾಜಕೀಯ20 hours ago

HD Devegowda: ಈ ವಾರದಲ್ಲಿ ಲೋಕಸಭೆಗೆ ಬಿಜೆಪಿ-ಜೆಡಿಎಸ್‌ ಮೈತ್ರಿ ಸೀಟು ಅಂತಿಮ: ಎಚ್‌.ಡಿ. ದೇವೇಗೌಡ

Elephant attacks in Sakaleshpur workers escaped
ಹಾಸನ23 hours ago

Elephant Attack : ಆನೆ ಅಟ್ಯಾಕ್‌ಗೆ ಬಾಯಿಗೆ ಬಂತು ಜೀವ; ಜಸ್ಟ್‌ ಎಸ್ಕೇಪ್‌ ಆಗಿದ್ದು ಹೀಗೆ..

dina bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ಇಂದು ಗಾಬರಿಯಲ್ಲೇ ದಿನ ಕಳೆಯುವಿರಿ

read your daily horoscope predictions for march 3rd 2024
ಭವಿಷ್ಯ2 days ago

Dina Bhavishya : ಈ ರಾಶಿಯವರು ಆತುರದಲ್ಲಿ ಇಂದು ಈ ನಿರ್ಧಾರವನ್ನು ತೆಗೆದುಕೊಳ್ಳಬೇಡಿ!

Rameswaram cafe bomb blast case Accused caught on CCTV
ಬೆಂಗಳೂರು3 days ago

Blast In Bengaluru: ಸನ್ನೆ ಮಾಡಿ ಪೊಲೀಸರಿಗೆ ಶಂಕಿತನ ಚಾಲೆಂಜ್! ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಏನು

Rameswaram Cafe Blast Suspected travels in BMTC Volvo bus
ಬೆಂಗಳೂರು3 days ago

Blast In Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ವೋಲ್ವೋ ಬಸ್‌ನಲ್ಲಿ ಬಾಂಬರ್ ಸಂಚಾರ, ಸಿಸಿಟಿವಿಯಲ್ಲಿ ಸೆರೆ

Blast in Bengaluru Time bomb planted in rameshwaram cafe Important evidence found
ಬೆಂಗಳೂರು4 days ago

Blast in Bengaluru: ರಾಮೇಶ್ವರಂ ಕೆಫೆ ಬ್ಲಾಸ್ಟ್‌; ಹೋಟೆಲ್‌ನಲ್ಲಿಟ್ಟಿದ್ದು ಟೈಂ ಬಾಂಬ್‌? ಸಿಕ್ಕಿದೆ ಮಹತ್ವದ ಸಾಕ್ಷ್ಯ

rameshwaram cafe bengaluru incident
ಬೆಂಗಳೂರು4 days ago

Blast in Bengaluru : ರಾಮೇಶ್ವರಂ ಕೆಫೆ ಸ್ಫೋಟದ ಸ್ಥಳದಲ್ಲಿ ಬ್ಯಾಟರಿ ಪತ್ತೆ!

Elephants spotted in many places
ಹಾಸನ4 days ago

Elephant Attack: ಹಾಸನ, ರಾಮನಗರ, ಮೈಸೂರಲ್ಲಿ ಆನೆ ಬೇನೆ; ಬೆಳಗಾವಿಯಲ್ಲಿ ಬಿಂದಾಸ್‌ ಓಡಾಟ

read your daily horoscope predictions for march 1st 2024
ಭವಿಷ್ಯ4 days ago

Dina Bhavishya : ಈ ರಾಶಿಯವರು ಪ್ರಮುಖ ಜನರೊಡನೆ ವ್ಯವಹರಿಸುವಾಗ ಎಚ್ಚರಿಕೆಯಿಂದ ಮಾತನಾಡಿ

ಟ್ರೆಂಡಿಂಗ್‌