Baddiewinkle | ಬಣ್ಣಬಣ್ಣದ ಅಂಗಿಯಿಂದಲೇ ಇಂಟರ್ನೆಟ್‌ ಸೆಲೆಬ್ರಿಟಿ ಆದ 94ರ ಅಜ್ಜಿ! - Vistara News

ಪ್ರಮುಖ ಸುದ್ದಿ

Baddiewinkle | ಬಣ್ಣಬಣ್ಣದ ಅಂಗಿಯಿಂದಲೇ ಇಂಟರ್ನೆಟ್‌ ಸೆಲೆಬ್ರಿಟಿ ಆದ 94ರ ಅಜ್ಜಿ!

ಕಲರ್‌ ಕಲರ್‌ ಬಟ್ಟೆ ಧರಿಸಿ ಪೋಸ್‌ ನೀಡಿ ಮಿಂಚುವುದರಿಂದಲೇ ಇಂಟರ್‌ನೆಟ್‌ ಸೆಲೆಬ್ರಿಟಿ ಆಗಿಬಿಟ್ಟಿರುವ Baddiewinkle ಎಂಬ ಈ ಅಜ್ಜಿಗೆ ಈಗ ಲಕ್ಷಾಂತರ ಅಭಿಮಾನಿಗಳಿದ್ದಾರೆ!

VISTARANEWS.COM


on

granny
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

“ಬಣ್ಣಬಣ್ಣದ ಚಂದನೆಯ ಅಂಗಿ ತೊಡಲೂ ವಯಸ್ಸಿನ ಹಂಗಿದೆಯೇ? ಅಜ್ಜಿಯಾದ ಮಾತ್ರಕ್ಕೆ ದೊಗಳೆ ದೊಗಳೆಯಾದ ಸಾದಾ ಬಣ್ಣದ ಸಾಮಾನ್ಯ ಬಟ್ಟೆಯೇ ತೊಡಬೇಕೇ? ತಾನೂ ಸುಂದರವಾಗಿ ಕಾಣಿಸಬೇಕೆಂಬ ಆಸೆ ಅಜ್ಜಿಯರಿಗೆ ಇರುವುದಿಲ್ಲವೇ?” ಎಂದು ದಿಟ್ಟವಾಗಿ ಕೇಳಿ ರಾತ್ರೋರಾತ್ರಿ ಇಂಟರ್ನೆಟ್‌ ಸೆಲೆಬ್ರಿಟಿಯಾಗಿ ಮಿಂಚುತ್ತಿರುವ ಅಜ್ಜಿ ಹೆಲೆನ್‌ ರುತ್‌ ವ್ಯಾನ್‌ ವಿಂಕಲ್‌.

ಈ ಅಜ್ಜಿ ಕಾಮನಬಿಲ್ಲಿನಂತೆ ಢಾಳಾಗಿ ಏಳು ಬಣ್ಣಗಳಿರುವ ಟೋಪಿ ಹಾಕಿಕೊಂಡು, ತುಟಿಯನ್ನು ಪೌಟ್‌ ಮಾಡಿ ಸೆಲ್ಫೀ ತೆಗೆದುಕೊಳ್ಳುತ್ತಾರೆ. ಸ್ವಿಮ್‌ ಸೂಟ್‌ ಹಾಕಿಕೊಂಡು ಮಾದಕವಾಗಿ ಫೋಟೋಗಳಿಗೆ ಪೋಸ್‌ ಕೊಡುತ್ತಾರೆ. ಚಂದ ಚಂದದ ತಂಪು ಕನ್ನಡಕ ಧರಿಸಿ ಬೇಸಗೆಯಲ್ಲಿ ಜಗತ್ತನ್ನು ತಂಪಾಗಿಯೇ ನೋಡುತ್ತಾರೆ. ಕಲರ್‌ ಕಲರ್‌ ಕೂದಲು, ಕಲರ್‌ ಕಲರ್‌ ತುಟಿಗಳ ರಂಗು ಹೀಗೆ ಒಟ್ಟಿನಲ್ಲಿ ಕಲರ್‌ಫುಲ್‌ ಆಗಿರುವ ಈ ಅಜ್ಜಿಯೀಗ ಇಂಟರ್ನೆಟ್‌ನಲ್ಲಿ ಸ್ಟೈಲ್‌ ಐಕಾನ್!‌

granny

ಯುಎಸ್‌ನಲ್ಲಿ ನೆಲೆಸಿರುವ ಅಜ್ಜಿಗೆ ಈಗ ೯೪ರ ಹರೆಯ. ಈಕೆ ಸದ್ಯಕ್ಕೀಗ ಇಂಟರ್ನೆಟ್‌ ಸೆಲೆಬ್ರಿಟಿ. ಖ್ಯಾತ ಹಾಲಿವುಡ್‌ ಸಲೆಬ್ರಿಟಿ ರಿಹ್ಹಾನಾ ಕೂಡಾ ಈ ಅಜ್ಜಿಯ ಇನ್‌ಸ್ಟಾ ಖಾತೆಯನ್ನು ಫಾಲೋ ಮಾಡುತ್ತಾರಂತೆ. ಈಕೆಯ ಡ್ರೆಸ್ಸಿಂಗ್‌ ಸ್ಟೈಲಿಗೆ ಫಿದಾ ಆದ ಮಂದಿ ಮಿಲಿಯಗಟ್ಟಲೆ ಮಂದಿ ಈಕೆಯಿಂದ ಸ್ಪೂರ್ತಿ ಪಡೆದಿದ್ದಾರೆ! ವಯಸ್ಸಾದರೂ ಖುಷಿಯಾಗಿರುವುದು ಹೇಗೆ ಎಂಬುದನ್ನು ಈಕೆ ತನ್ನ ಬಣ್ಣ ಬಣ್ಣದ ಅಂಗಿಗಳ ಮೂಲಕ, ಹಂಚುವ ಜೊತೆಗೆ ಎಲ್ಲರ ಹಾಟ್‌ ಫೇವರಿಟ್‌!

ಅಜ್ಜಿಯರೆಂದರೆ, ದೊಗಳೆ ದೊಗಳೆಯಾಗಿರುವ ಸಾಮಾನ್ಯ ಬಣ್ಣದ ದಿರಿಸುಗಳನ್ನು ಧರಿಸೋದು ರೂಢಿ. ಅಜ್ಜಿಯರ ಅಂಗಿ, ಚಪ್ಪಲಿ, ಬ್ಯಾಗು, ಸ್ಟೈಲನ್ನೆಲ್ಲ ಯಾರು ನೋಡುತ್ತಾರೆ ಎಂಬುದು ಸಾಮಾನ್ಯರ ಭಾವನೆ. ಹಾಗಾದರೆ, ವಯಸ್ಸಾದರೇನಂತೆ, ಬದುಕುವಾಗ ಅನಿಸಿದಂತೆ, ಇಷ್ಟಪಟ್ಟದ್ದು ಧರಿಸಿಕೊಂಡು ಖುಷಿಯಾಗಿರುವುದು ಸಮಾಜಕ್ಕೆ ಬೇಕಾಗಿಲ್ಲವೇ ಎಂಬ ಪ್ರಶ್ನೆ ಏಳುವುದು ಸಹಜ. ವಯಸ್ಸಾದವರಿಗೂ ಆಸೆಗಳು, ಬಯಕೆಗಳೂ ಇರುತ್ತವೆ, ಆಸೆಪಟ್ಟಂತೆ ಬದುಕಬೇಕು ಅಷ್ಟೆ ಎಂದು ಈ ಅಜ್ಜಿ ತನ್ನಿಷ್ಟದಂತೆ ಡ್ರೆಸ್‌ ತೊಡಲು ಬಯಸುತ್ತಾರೆ! ಈಕೆಗೆ ಬಣ್ಣಬಣ್ಣದ ಅಂಗಿಗಳೆಂದರೆ ಪ್ರಿಯ. ಅದಕ್ಕಾಗಿಯೇ ಯಾವುದೇ ಮುಚ್ಚುಮರೆಯಿಲ್ಲದೆ, ನಾಚಿಕೆ ಬಿಗುಮಾನಗಳಿಲ್ಲದೆ ಧೈರ್ಯವಾಗಿ ತಾನಿಚ್ಛೆ ಪಡುವ ಅಂಗಿಗಳನ್ನು ಈಕೆ ಧರಿಸುತ್ತಾರೆ.

ಇದನ್ನೂ ಓದಿ: ಪತ್ರಿಕೆಯಲ್ಲಿ ಒಂದಿಡೀ ಪುಟದ ಜಾಹೀರಾತು ಹಾಕಿ ಮಾಜಿ ಸಂಗಾತಿಗೆ ಬಿಸಿ ಮುಟ್ಟಿಸಿದ ಮಹಿಳೆ!

ಹದಿಹರೆಯದ ಹೆಣ್ಣುಮಕ್ಕಳು ಇಷ್ಟ ಪಡುವ ಮಾದರಿಯ ಬಟ್ಟೆಗಳನ್ನೇ ಧರಿಸುವ ಈಕೆ ಯಾವ ಬಾರ್ಬಿ ಡಾಲ್‌ಗೂ ಕಡಿಮೆಯಿಲ್ಲ. ಈಕೆ ತನ್ನ ಡ್ರೆಸ್ಸಿಂಗ್‌ ಸ್ಟೈಲ್‌ ಮೂಲಕ ಕೇವಲ ವಯಸ್ಸಾದ ಮಂದಿಗಲ್ಲ, ಯುವಕರಿಗೂ ಉತ್ಸಾಹದ ಸ್ಪೂರ್ತಿ ಚಿಲುಮೆಯಾಗಿದ್ದಾರೆ. ೨೦೧೪ರಲ್ಲಿ ತನ್ನದೇ ಮೊಮ್ಮಗಳ ಪುಟ್ಟ ಶಾರ್ಟ್ಸ್‌ ಹಾಗೂ ಟೀ ಶರ್ಟ್‌ ಧರಿಸಿದಾಗ, ತನ್ನ ಅಜ್ಜಿ ಮುದ್ದಾಗಿ ಕಾಣಿಸುತ್ತಿದ್ದಾಳೆ ಎಂದು ಆಕೆಯ ಮೊಮ್ಮಗಳು ಫೋಟೋ ತೆಗೆದು, ಟ್ವಿಟರ್/‌ ಇನ್ಸ್ಟಾಗ್ರಾಂ ಖಾತೆ ತೆರೆದು ಅಲ್ಲಿ ಅಪ್‌ಲೋಡ್‌ ಮಾಡುವ ಮೂಲಕ ಸಾಮಾಜಿಕ ಜಾಲತಾಣದ ಜಗತ್ತಿಗೆ ಕಾಲಿಟ್ಟ ಅಜ್ಜಿ ಆಮೇಲೆ ಹಿಂತಿರುಗಿ ನೋಡಿಲ್ಲ. ಒಂದೇ ವರ್ಷದಲ್ಲಿ ಮಿಲಿಯನ್‌ ಫಾಲೋವರ್‌ಗಳನ್ನು ದಾಟಿದ ಅಜ್ಜಿಗೆ ಸಾಮಾಜಿಕ ಜಾಲತಾಣಗಳ ರುಚಿ ಸಿಕ್ಕಿ ತಾನೇ ತನ್ನ ಫೋಟೋಗಳನ್ನು ಅಪ್‌ಲೋಡ್‌ ಮಾಡತೊಡಗಿದ್ದಾಳೆ. ಸದ್ಯ ಇಂಟರ್ನೆಟ್‌ ಜಗತ್ತಿನ ಸೆಲೆಬ್ರಿಟಿಯೇ ಆಗಿಹೋಗಿದ್ದು, ಅಜ್ಜಿಯೂ ತನ್ನ ಪ್ರಸಿದ್ಧಿಯನ್ನು ಎಂಜಾಯ್‌ ಮಾಡುತ್ತಿದ್ದಾಳೆ!

ಬ್ಯಾಡೀ ವಿಂಕಲ್‌ ಎಂಬ ಹೆಸರಿನಿಂದಲೇ ಖ್ಯಾತಿವೆತ್ತ ಈಕೆಯ ಹೆಸರಿನೊಂದಿಗೆ ʻಬ್ಯಾಡ್‌ʼ ಸೇರಿಕೊಂಡಿದೆ. ಅಜ್ಜಿಯರು ಹೇಗಿರಬೇಕೆಂದು ಬಯಸುವ ಸಮಾಜದ ಪರಿಕಲ್ಪನೆಯಿಂದ ಈಕೆ ಬಹಳಷ್ಟು ಡಿಫರೆಂಟ್‌ ಆಗಿರುವುದರಿಂದ ಹಾಗೂ ಅಜ್ಜಿಯರು ಹೀಗಿರುವುದೇ ಬ್ಯಾಡ್‌ ಎಂಬ ಚಿಂತನೆ ಇರುವುದರಿಂದ ಈಕೆಯ ಹೆಸರೇ ಬ್ಯಾಡೀ ವಿಂಕಲ್‌ ಆಗಿಬಿಟ್ಟಿದೆ. ಆದರೆ, ಈಕೆಗೆ ಆ ಬಗ್ಗೆ ಬೇಸರವೇನಿಲ್ಲ. ʻನಾನು ಬ್ಯಾಡ್‌ ವುಮನ್‌ ಎಂದು ಒಪ್ಪಿಕೊಳ್ಳುವೆ. ಮೊದಲಿನಿಂದಲೂ ನಾನು ಬಂಡಾಯ ಪ್ರಿಯೆ. ಸಮಾಜ ಮಹಿಳೆಯರು ಹೇಗಿರಬೇಕೆಂದು ಬಯಸುತ್ತಿತ್ತೋ, ಹಾಗೆ ನಾನು ಯಾವತ್ತೂ ಇರಲಿಲ್ಲ. ಹಾಗಾಗಿ ನನ್ನ ಈ ಅಡ್ಡ ಹೆಸರಿನ ಬಗ್ಗೆ ನನಗೇನೂ ಬೇಸರವಿಲ್ಲ. ಅದೇ ಬಹಳ ಪ್ರಸಿದ್ಧವಾಗಿದೆʼ ಎಂದು ಆಕೆ ಯಾವುದೇ ಮುಜುಗರವಿಲ್ಲದೆ  ಒಪ್ಪಿಕೊಳ್ಳುತ್ತಾರೆ.

ಇದನ್ನೂ ಓದಿ: Woman style | ಎಂಥ ಮಹಿಳೆಯರನ್ನು ಕಂಡರೆ ಪುರುಷರಿಗೆ ಇಷ್ಟವೇ ಆಗುವುದಿಲ್ಲ?!

ಹೆಲೆನ್‌ ಹುಟ್ಟಿದ್ದು ೧೯೨೮ ಜುಲೈ ೧೮ರಂದು. ಈಕೆ ಹೇಳುವಂತೆ ಜೀವನವೇನೂ ಸುಲಭವಾಗಿರಲಿಲ್ಲ. ಈಕೆಯ ೩೫ನೇ ವಿವಾಹ ವಾರ್ಷಿಕೋತ್ಸವದ ದಿನದಂದೇ ಗಂಡ ಕಾರು ಅಫಘಾತದಲ್ಲಿ ತೀರಿಕೊಂಡರು. ಕ್ಯಾನ್ಸರ್‌ನಿಂದಾಗಿ ಮಗನನ್ನೂ ಕಳೆದುಕೊಂಡಿದ್ದಾರೆ. ಇಂಥ ಬೇಸರವನ್ನು ಕಳೆಯಲು ತನಗೆ ಖುಷಿಯಿರುವಂತೆ ಬದುಕಲು ಬಯಸಿದ ಬ್ಯಾಡಿ ವಿಂಕಲ್‌ ಹೀಗೆ ತನಗಿಷ್ಟದ ಬಟ್ಟೆ ಧರಿಸುವುದು, ಖುಷಿಯಾಗಿರುವುದನ್ನು ರೂಢಿಸಿಕೊಂಡಿದ್ದಾರೆ. ಆದರೆ, ಇದನ್ನು ಬಹುತೇಕರು ಇಷ್ಟಪಡುವುದಿಲ್ಲ ಎಂಬುದು ಗೊತ್ತಿದ್ದರೂ, ಇದ್ಯಾವುದನ್ನೂ ತಲೆಗೆ ಹಾಕಿಕೊಳ್ಳದೆ, ʻಇರುವ ಬದುಕನ್ನು ಸಂತೋಷದಿಂದ ಕಳೆಯಬೇಕು. ಎಲ್ಲರಿಗೂ ಖುಷಿಯನ್ನು ಹಂಚಬೇಕು. ನಾನು ನನ್ನ ಬಣ್ಣಬಣ್ಣದ ಬಟ್ಟೆಗಳ ಮೂಲಕ ಖುಷಿಪಟ್ಟು ಎಲ್ಲರಿಗೂ ಸಂತೋಷ, ಉತ್ಸಾಹವನ್ನು ಹಂಚುತ್ತೇನೆʼ ಎನ್ನುತ್ತಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Prajwal Revanna Video: ಪ್ರಜ್ವಲ್‌ ಪ್ರತ್ಯಕ್ಷನಾಗಿದ್ದಕ್ಕೆ ಸಮಾಧಾನ ಆಯ್ತು ಎಂದ ಎಚ್‌ಡಿಕೆ; ಫಸ್ಟ್‌ ರಿಯಾಕ್ಷನ್‌ ಹೀಗಿದೆ

Prajwal Revanna Video: ವಿದೇಶದಲ್ಲಿದ್ದುಕೊಂಡೇ ಪ್ರಜ್ವಲ್‌ ರೇವಣ್ಣ ವಿಡಿಯೊ ಬಿಡುಗಡೆ ಮಾಡಿದ್ದಾರೆ. “ರಾಜಕೀಯ ಬೆಳವಣಿಗೆ ಸಹಿಸಲಾಗದೆ ಷಡ್ಯಂತ್ರ ರೂಪಿಸಲಾಗಿದೆ. ನನ್ನ ವಿರುದ್ಧ ಪಿತೂರಿ ಮಾಡಲಾಗಿದೆ. ಕೆಲವು ಶಕ್ತಿಗಳು ಒಟ್ಟಾಗಿ ನನ್ನ ವಿರುದ್ಧ ಪಿತೂರಿ ನಡೆಸಿವೆ. ಇಷ್ಟಾದರೂ ನಾನು ನನ್ನ ತಾತ, ಜೆಡಿಎಸ್‌ ಕಾರ್ಯಕರ್ತರಿಗೆ ಕ್ಷಮೆಯಾಚಿಸುತ್ತೇನೆ. ನಾನು ಮೇ 31ರಂದು ಬೆಳಗ್ಗೆ 10 ಗಂಟೆಗೆ ಭಾರತಕ್ಕೆ ಬಂದು ಎಸ್‌ಐಟಿ ಎದುರು ವಿಚಾರಣೆಗೆ ಹಾಜರಾಗುತ್ತೇನೆ” ಎಂದಿದ್ದಾರೆ. ಇದಕ್ಕೆ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

VISTARANEWS.COM


on

Prajwal Revanna Video
Koo

ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಾಗುತ್ತಲೇ ವಿದೇಶಕ್ಕೆ ತೆರಳಿ, ಕಳೆದ ಒಂದು ತಿಂಗಳಿಂದ ತಲೆಮರೆಸಿಕೊಂಡಿದ್ದ ಪ್ರಜ್ವಲ್‌ ರೇವಣ್ಣ ಅವರು ವಿಡಿಯೊ (Prajwal Revanna Video) ಮೂಲಕ ಪ್ರತ್ಯಕ್ಷರಾಗಿದ್ದಾರೆ. ವಿದೇಶದಿಂದಲೇ ವಿಡಿಯೊ ಬಿಡುಗಡೆ ಮಾಡಿರುವ ಪ್ರಜ್ವಲ್‌ ರೇವಣ್ಣ, “ನಾನು ಎಲ್ಲೂ ತಲೆಮರೆಸಿಕೊಂಡಿಲ್ಲ. ಮೇ 31ರಂದು ಬೆಳಗ್ಗೆ ಬಂದು ಎಸ್‌ಐಟಿ ವಿಚಾರಣೆಗೆ ಹಾಜರಾಗುತ್ತೇನೆ. ನೆಲದ ಕಾನೂನು ಗೌರವಿಸಿ, ದೋಷಮುಕ್ತನಾಗಿ ಹೊರಬರುವ ವಿಶ್ವಾಸವಿದೆ” ಎಂದು ಅವರು ಹೇಳಿದ್ದಾರೆ. ಇದರ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಅವರು ಪ್ರತಿಕ್ರಿಯಿಸಿದ್ದು, “ಪ್ರಜ್ವಲ್‌ ರೇವಣ್ಣನನ್ನು ನೋಡಿ ಸಮಾಧಾನ ಅಗಿದೆ” ಎಂದು ತಿಳಿಸಿದ್ದಾರೆ.

“ಪ್ರಕರಣದ ಕುರಿತು ಎಸ್‌ಟಿ ತನಿಖೆ ನಡೆಸುತ್ತಿದೆ, ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡೋಣ. ಪ್ರಜ್ವಲ್‌ ರೇವಣ್ಣನನ್ನು ನೋಡಿ ನನಗೆ ಈಗ ಸಮಾಧಾನ ಆಗಿದೆ. ಪ್ರಕರಣದ ಬಗ್ಗೆ ಎಚ್.ಡಿ.ದೇವೇಗೌಡರು ಮಾತನಾಡಿದ್ದಾರೆ. ದೇವೇಗೌಡರು ಪ್ರಜ್ವಲ್ ರೇವಣ್ಣಗೆ ಮನವಿ ಹಾಗೂ ಎಚ್ಚರಿಕೆ ಕೊಟ್ಟಿದ್ದರು. ಅದರಂತೆ ಈಗ ಭಾರತಕ್ಕೆ ವಾಪಸ್‌ ಆಗುವುದಾಗಿ ಪ್ರಜ್ವಲ್‌ ರೇವಣ್ಣ ಹೇಳಿದ್ದಾನೆ. ಎಸ್‌ಐಟಿ ವಿಚಾರಣೆ ಬಳಿಕ ಏನಾಗುತ್ತದೆ ಎಂಬುದನ್ನು ನೋಡೋಣ” ಎಂದು ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ವಿಡಿಯೊದಲ್ಲಿ ಏನಿದೆ?

“ನಾನು ಎಲ್ಲಿದ್ದೇನೆ ಎಂಬ ಮಾಹಿತಿ ನೀಡಲು ಬಂದಿದ್ದೇನೆ. ನಾನು ಎಲ್ಲಿಯೂ ಓಡಿ ಹೋಗಿಲ್ಲ. ನನ್ನ ರಾಜಕೀಯ ಬೆಳವಣಿಗೆ ಸಹಿಸಲಾಗದೆ ಷಡ್ಯಂತ್ರ ರೂಪಿಸಲಾಗಿದೆ. ನನ್ನ ವಿರುದ್ಧ ಪಿತೂರಿ ಮಾಡಲಾಗಿದೆ. ಕೆಲವು ಶಕ್ತಿಗಳು ಒಟ್ಟಾಗಿ ನನ್ನ ವಿರುದ್ಧ ಪಿತೂರಿ ನಡೆಸಿವೆ. ಇಷ್ಟಾದರೂ ನಾನು ನನ್ನ ತಾತ, ಜೆಡಿಎಸ್‌ ಕಾರ್ಯಕರ್ತರಿಗೆ ಕ್ಷಮೆಯಾಚಿಸುತ್ತೇನೆ. ನಾನು ಮೇ 31ರಂದು ಬೆಳಗ್ಗೆ 10 ಗಂಟೆಗೆ ಭಾರತಕ್ಕೆ ಬಂದು ಎಸ್‌ಐಟಿ ಎದುರು ವಿಚಾರಣೆಗೆ ಹಾಜರಾಗುತ್ತೇನೆ. ವಿದೇಶ ಪ್ರವಾಸವು ಮೊದಲೇ ನಿಗದಿಯಾಗಿತ್ತು. ಆದರೂ, ನಾನು ಭಾರತಕ್ಕೆ ಬಂದು ವಿಚಾರಣೆ ಎದುರಿಸುತ್ತೇನೆ” ಎಂಬುದಾಗಿ ಪ್ರಜ್ವಲ್‌ ರೇವಣ್ಣ ವಿಡಿಯೊದಲ್ಲಿ ತಿಳಿಸಿದ್ದಾರೆ.

“ನಾನು ಇದೇ ಶುಕ್ರವಾರ ಕರ್ನಾಟಕಕ್ಕೆ ಆಗಮಿಸಿ, ಎಸ್‌ಐಟಿ ತನಿಖೆಗೆ ಸಹಕಾರ ನೀಡುತ್ತೇನೆ. ನನಗೆ ಕಾನೂನಿನ ಮೇಲೆ ಅಪಾರ ಗೌರವವಿದೆ. ನನ್ನ ವಿರುದ್ಧ ಮಾಡಿದ ಆರೋಪಗಳನ್ನು ಕೇಳಿ ನನಗೆ ಶಾಕ್‌ ಆಯಿತು. ಇದೇ ಕಾರಣಕ್ಕಾಗಿ ನಾನು ಕೆಲ ದಿನಗಳಿಂದ ಐಸೋಲೇಷನ್‌ನಲ್ಲಿ ಇದ್ದೆ. ವಿದೇಶ ಪ್ರವಾಸವು ಮೊದಲೇ ನಿಗದಿಯಾಗಿತ್ತು. ನಾನು ವಿದೇಶಕ್ಕೆ ಬಂದ ಬಳಿಕ ಪ್ರಕರಣ ತಿಳಿಯಿತು. ನನ್ನ ವಿರುದ್ಧ ರಾಹುಲ್‌ ಗಾಂಧಿ ಸೇರಿ ಎಲ್ಲರೂ ವೇದಿಕೆ ಮೇಲೆಯೇ ಹೇಳಿಕೆಗಳನ್ನು ಕೊಟ್ಟರು. ಆ ಮೂಲಕ ರಾಜಕೀಯ ಪಿತೂರಿ ನಡೆಸಿದರು. ಆದರೂ, ನಾನು ರಾಜ್ಯಕ್ಕೆ ಆಗಮಿಸಿ ತನಿಖೆಗೆ ಸಹಕಾರ ನೀಡುತ್ತೇನೆ. ನಾನು ಈ ಪ್ರಕರಣದಿಂದ ಆರೋಪಮುಕ್ತನಾಗಿ ಹೊರಬರುತ್ತೇನೆ ಎಂಬ ವಿಶ್ವಾಸವಿದೆ” ಎಂಬುದಾಗಿ ಹೇಳಿದ್ದಾರೆ.

ಇದನ್ನೂ ಓದಿ: Prajwal Revanna Video: ನಾನು ‘ಅಮಾಯಕ’ ಎನ್ನುವ ಪ್ರಜ್ವಲ್‌ಗೆ ‘ವಿಸ್ತಾರ ನ್ಯೂಸ್‌’ 10 ಪ್ರಶ್ನೆಗಳು

Continue Reading

ಕರ್ನಾಟಕ

Prajwal Revanna Video: ನಾನು ‘ಅಮಾಯಕ’ ಎನ್ನುವ ಪ್ರಜ್ವಲ್‌ಗೆ ‘ವಿಸ್ತಾರ ನ್ಯೂಸ್‌’ 10 ಪ್ರಶ್ನೆಗಳು

Prajwal Revanna Video: ನನಗೆ ಪ್ರಕರಣದ ಬಗ್ಗೆ ಗೊತ್ತೇ ಇರಲಿಲ್ಲ, ನಾನು ತಪ್ಪೇ ಮಾಡಿಲ್ಲ, ಕಾನೂನಿನ ಬಗ್ಗೆ ಗೌರವ ಇದೆ ಎನ್ನುವ ಪ್ರಜ್ವಲ್‌ ರೇವಣ್ಣ ಅವರು ಕಳೆದ 1 ತಿಂಗಳಿಂದ ಏಕೆ ವಿಚಾರಣೆಗೆ ಹಾಜರಾಗಲಿಲ್ಲ? ಸಾರ್ವಜನಿಕರಿಗೆ ಮುಖ ತೋರಿಸಲಿಲ್ಲ? ಇಂತಹ ಹತ್ತಾರು ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲೂ ಇರಬಹುದು. ಅವುಗಳನ್ನು ವಿಸ್ತಾರ ನ್ಯೂಸ್‌ ಕೇಳಿದೆ.

VISTARANEWS.COM


on

Prajwal Revanna Video
Koo

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕಳೆದ ಒಂದು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರೀಗ ವಿಡಿಯೊದಲ್ಲಿ ಪ್ರತ್ಯಕ್ಷರಾಗಿದ್ದಾರೆ. ವಿದೇಶದಲ್ಲಿದ್ದಾರೆ ಎನ್ನಲಾಗುವ ಪ್ರಜ್ವಲ್‌ ರೇವಣ್ಣ, ವಿಡಿಯೊ (Prajwal Revanna Video) ಬಿಡುಗಡೆ ಮಾಡಿದ್ದು, “ನಾನು ಮೇ 31ರಂದು ವಿಚಾರಣೆಗೆ ಹಾಜರಾಗುತ್ತೇನೆ. ನಾನು ಪ್ರಕರಣದಲ್ಲಿ ಯಾವುದೇ ತಪ್ಪು ಮಾಡಿಲ್ಲ. ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಯುತಿದ್ದು, ಆರೋಪಮುಕ್ತನಾಗಿ ಹೊರಬರುತ್ತೇನೆ ಎಂಬ ವಿಶ್ವಾಸವಿದೆ” ಎಂದಿದ್ದಾರೆ. ಆದರೆ, ನನಗೆ ಪ್ರಕರಣದ ಬಗ್ಗೆ ಗೊತ್ತೇ ಇರಲಿಲ್ಲ, ನಾನು ತಪ್ಪೇ ಮಾಡಿಲ್ಲ, ಕಾನೂನಿನ ಬಗ್ಗೆ ಗೌರವ ಇದೆ ಎನ್ನುವ ಪ್ರಜ್ವಲ್‌ ರೇವಣ್ಣ (Prajwal Revanna) ಅವರು ಕಳೆದ 1 ತಿಂಗಳಿಂದ ಏಕೆ ವಿಚಾರಣೆಗೆ ಹಾಜರಾಗಲಿಲ್ಲ? ಸಾರ್ವಜನಿಕರಿಗೆ ಮುಖ ತೋರಿಸಲಿಲ್ಲ? ಜನರ ಮನಸಲ್ಲಿರುವ ಇಂತಹ 10 ಪ್ರಶ್ನೆಗಳನ್ನು ‘ವಿಸ್ತಾರ ನ್ಯೂಸ್’‌ ಪ್ರಜ್ವಲ್‌ ರೇವಣ್ಣ ಅವರಿಗೆ ಕೇಳಿದೆ. ಅವು ಇಂತಿವೆ.

ವಿಸ್ತಾರ ನ್ಯೂಸ್‌ 10 ಪ್ರಶ್ನೆಗಳು

  1. ನನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಾಗಿದೆ ಎಂದು ಹೇಳುತ್ತಿರುವ ನೀವು ಒಂದು ತಿಂಗಳಿಂದ ತಲೆಮರೆಸಿಕೊಂಡಿರುವುದು ಏಕೆ?
  2. ಯುಟ್ಯೂಬ್‌ ಮೂಲಕ ಪ್ರಕರಣ ಗೊತ್ತಾಗಿದೆ ಅಂತಿದ್ದೀರಿ, ಗೊತ್ತಾದ ಮೇಲೂ ವಿದೇಶದಲ್ಲೇ ಇರುವುದೇಕೆ? ಆಗಲೇ ಸ್ಪಷ್ಟನೆ ನೀಡಲಿಲ್ಲ ಏಕೆ?
  3. ಅಮಾಯಕರಾದ ನೀವು ಕಾಂಗ್ರೆಸ್‌ನ ನವೀನ್‌ ಗೌಡ ಸೇರಿ ಹಲವರ ವಿರುದ್ಧ ಕೇಸ್‌ ದಾಖಲಿಸಿದ್ದೇಕೆ?
  4. ನ್ಯಾಯಾಂಗದ ಮೇಲೆ ವಿಶ್ವಾಸ ಇದೆ ಎಂದು ಹೇಳುವ ನೀವು, ನೋಟಿಸ್‌ ನೀಡಿದರೂ ವಿಚಾರಣೆಗೆ ಹಾಜರಾಗಲಿಲ್ಲ ಏಕೆ?
  5. ತಪ್ಪೇ ಮಾಡದ, ಸತ್ಯಸಂಧರಾದ ನೀವು ಒಂದು ತಿಂಗಳು ಮೊದಲೇ ಸ್ಟೇ ತಂದಿದ್ದು ಏಕೆ?
  6. ತಾತ, ತಂದೆ-ತಾಯಿ, ಚಿಕ್ಕಪ್ಪನ ಮೇಲೆ ಗೌರವ ಇರುವ ನೀವು, ಅವರು ವಾಪಸ್‌ ಬಾ ಎಂದರೂ ಏಕೆ ಬರಲಿಲ್ಲ?
  7. ವಿಚಾರಣೆ ಎದುರಿಸಿ, ದೋಷಮುಕ್ತರಾಗುವ ವಿಶ್ವಾಸ ಇರುವ ನೀವು ಎಸ್‌ಐಟಿಗೆ ಒಂದು ವಾರ ಕಾಲಾವಕಾಶ ಏಕೆ ಕೇಳಿದಿರಿ?
  8. ಒಂದು ವಾರ ಕಾಲಾವಕಾಶ ಕೇಳಿದ ಬಳಿಕವೂ ನಿಗದಿತ ದಿನಾಂಕದಂದು ಭಾರತಕ್ಕೆ ಏಕೆ ಬರಲಿಲ್ಲ? ಏಕೆ ವಿಚಾರಣೆ ಎದುರಿಸಲಿಲ್ಲ?
  9. ತಾತ, ತಂದೆ-ತಾಯಿ, ಕುಮಾರಣ್ಣನ ಮೇಲೆ ಗೌರವ ಹೊಂದಿರುವ ನೀವು, ಅವರ ಮಾತನ್ನು ಏಕೆ ಕೇಳಲಿಲ್ಲ?
  10. ವಿದೇಶದಲ್ಲಿದ್ದೇನೆ ಎಂದು ಹೇಳುವ ನೀವು ಏಕೆ ಯಾವ ದೇಶದಲ್ಲಿದ್ದೇನೆ ಎಂದು ಹೇಳುತ್ತಿಲ್ಲ?

ವಿಡಿಯೊದಲ್ಲಿ ಏನಿದೆ?

“ನಾನು ಎಲ್ಲಿದ್ದೇನೆ ಎಂಬ ಮಾಹಿತಿ ನೀಡಲು ಬಂದಿದ್ದೇನೆ. ನಾನು ಎಲ್ಲಿಯೂ ಓಡಿ ಹೋಗಿಲ್ಲ. ನನ್ನ ರಾಜಕೀಯ ಬೆಳವಣಿಗೆ ಸಹಿಸಲಾಗದೆ ಷಡ್ಯಂತ್ರ ರೂಪಿಸಲಾಗಿದೆ. ನನ್ನ ವಿರುದ್ಧ ಪಿತೂರಿ ಮಾಡಲಾಗಿದೆ. ಕೆಲವು ಶಕ್ತಿಗಳು ಒಟ್ಟಾಗಿ ನನ್ನ ವಿರುದ್ಧ ಪಿತೂರಿ ನಡೆಸಿವೆ. ಇಷ್ಟಾದರೂ ನಾನು ನನ್ನ ತಾತ, ಜೆಡಿಎಸ್‌ ಕಾರ್ಯಕರ್ತರಿಗೆ ಕ್ಷಮೆಯಾಚಿಸುತ್ತೇನೆ. ನಾನು ಮೇ 31ರಂದು ಬೆಳಗ್ಗೆ 10 ಗಂಟೆಗೆ ಭಾರತಕ್ಕೆ ಬಂದು ಎಸ್‌ಐಟಿ ಎದುರು ವಿಚಾರಣೆಗೆ ಹಾಜರಾಗುತ್ತೇನೆ. ವಿದೇಶ ಪ್ರವಾಸವು ಮೊದಲೇ ನಿಗದಿಯಾಗಿತ್ತು. ಆದರೂ, ನಾನು ಭಾರತಕ್ಕೆ ಬಂದು ವಿಚಾರಣೆ ಎದುರಿಸುತ್ತೇನೆ” ಎಂಬುದಾಗಿ ಪ್ರಜ್ವಲ್‌ ರೇವಣ್ಣ ವಿಡಿಯೊದಲ್ಲಿ ತಿಳಿಸಿದ್ದಾರೆ.

“ನಾನು ಇದೇ ಶುಕ್ರವಾರ ಕರ್ನಾಟಕಕ್ಕೆ ಆಗಮಿಸಿ, ಎಸ್‌ಐಟಿ ತನಿಖೆಗೆ ಸಹಕಾರ ನೀಡುತ್ತೇನೆ. ನನಗೆ ಕಾನೂನಿನ ಮೇಲೆ ಅಪಾರ ಗೌರವವಿದೆ. ನನ್ನ ವಿರುದ್ಧ ಮಾಡಿದ ಆರೋಪಗಳನ್ನು ಕೇಳಿ ನನಗೆ ಶಾಕ್‌ ಆಯಿತು. ಇದೇ ಕಾರಣಕ್ಕಾಗಿ ನಾನು ಕೆಲ ದಿನಗಳಿಂದ ಐಸೋಲೇಷನ್‌ನಲ್ಲಿ ಇದ್ದೆ. ವಿದೇಶ ಪ್ರವಾಸವು ಮೊದಲೇ ನಿಗದಿಯಾಗಿತ್ತು. ನಾನು ವಿದೇಶಕ್ಕೆ ಬಂದ ಬಳಿಕ ಪ್ರಕರಣ ತಿಳಿಯಿತು. ನನ್ನ ವಿರುದ್ಧ ರಾಹುಲ್‌ ಗಾಂಧಿ ಸೇರಿ ಎಲ್ಲರೂ ವೇದಿಕೆ ಮೇಲೆಯೇ ಹೇಳಿಕೆಗಳನ್ನು ಕೊಟ್ಟರು. ಆ ಮೂಲಕ ರಾಜಕೀಯ ಪಿತೂರಿ ನಡೆಸಿದರು. ಆದರೂ, ನಾನು ರಾಜ್ಯಕ್ಕೆ ಆಗಮಿಸಿ ತನಿಖೆಗೆ ಸಹಕಾರ ನೀಡುತ್ತೇನೆ. ನಾನು ಈ ಪ್ರಕರಣದಿಂದ ಆರೋಪಮುಕ್ತನಾಗಿ ಹೊರಬರುತ್ತೇನೆ ಎಂಬ ವಿಶ್ವಾಸವಿದೆ” ಎಂಬುದಾಗಿ ಹೇಳಿದ್ದಾರೆ.

ಇದನ್ನೂ ಓದಿ: Prajwal Revanna Video: ವಿದೇಶದಿಂದಲೇ ಪ್ರಜ್ವಲ್‌ ವಿಡಿಯೊ ಮೆಸೇಜ್; ಮೇ 31ರ ಬೆಳಗ್ಗೆ 10ಕ್ಕೆ ಎಸ್‌ಐಟಿಗೆ ಹಾಜರ್‌!

Continue Reading

ಕರ್ನಾಟಕ

PM Narendra Modi: ಪ್ರಧಾನಿ ಮೋದಿ ಉಳಿದುಕೊಂಡಿದ್ದ ಹೋಟೆಲ್ ಬಿಲ್ ಪಾವತಿಸಲು ರಾಜ್ಯ ಸರ್ಕಾರ ನಿರ್ಧಾರ; ಎಷ್ಟು ಖರ್ಚಾಗಿತ್ತು?

PM Narendra Modi: 2023ರ ಏಪ್ರಿಲ್‌ನಲ್ಲಿ ಮೈಸೂರಿನಲ್ಲಿ ಆಯೋಜಿಸಿದ್ದ “ಹುಲಿ ಯೋಜನೆ – 50” ಕಾರ್ಯಕ್ರಮಕ್ಕಾಗಿ ಆಗಮಿಸಿದ್ದ ವೇಳೆ ಖಾಸಗಿ ಹೋಟೆಲ್‌ನಲ್ಲಿ ಪ್ರಧಾನಿ ಮೋದಿ ಅವರು ವಾಸ್ತವ್ಯ ಹೂಡಿದ್ದರು. ಹೋಟೆಲ್‌ನ ಬಾಕಿ ಬಿಲ್‌ ಪಾವತಿಸಲು ರಾಜ್ಯ ಸರ್ಕಾರ ಮುಂದಾಗಿದೆ.

VISTARANEWS.COM


on

PM Narendra Modi
Koo

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಉಳಿದುಕೊಂಡಿದ್ದ ಹೋಟೆಲ್ ಬಿಲ್ ಪಾವತಿಸಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. 2023ರ ಏಪ್ರಿಲ್‌ನಲ್ಲಿ ಮೈಸೂರಿನಲ್ಲಿ ಆಯೋಜಿಸಿದ್ದ “ಹುಲಿ ಯೋಜನೆ – 50” ಕಾರ್ಯಕ್ರಮಕ್ಕಾಗಿ ಆಗಮಿಸಿದ್ದ ವೇಳೆ ಖಾಸಗಿ ಹೋಟೆಲ್‌ನಲ್ಲಿ ಪ್ರಧಾನಿ ಮೋದಿ ಅವರು ವಾಸ್ತವ್ಯ ಹೂಡಿದ್ದರು. ಅದಕ್ಕಾಗಿ ಸುಮಾರು 80 ಲಕ್ಷ ರೂಪಾಯಿ ಬಿಲ್ ಆಗಿತ್ತು. ಹೀಗಾಗಿ ಬಾಕಿ ಬಿಲ್ ಪಾವತಿಸಲು ಪರಿಸರ ಮತ್ತು ಅರಣ್ಯ ಇಲಾಖೆ ನಿರ್ಧಾರ ಮಾಡಿದೆ.

ಒಂದು ವರ್ಷದಿಂದಲೂ ಹೋಟೆಲ್‌ನ ಬಾಕಿ ಬಿಲ್ ಪಾವತಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಜಟಾಪಟಿ ನಡೆಯುತ್ತಿತ್ತು. ಬಿಲ್‌ ಪಾವತಿಸಬೇಕು ಎಂದು ಇವರ ಮೇಲೆ ಅವರು, ಅವರ ಮೇಲೆ ಇವರು ಹೇಳಿಕೊಂಡು ಬಂದಿದ್ದರು. ಆದರೆ, ಹೋಟೆಲ್ ಮಾಲೀಕ ಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಬಾಕಿ ಬಿಲ್ 80 ಲಕ್ಷ ರೂ. ಪಾವತಿಸಲು ಪರಿಸರ ಮತ್ತು ಅರಣ್ಯ ಇಲಾಖೆ ನಿರ್ಧಾರ ಮಾಡಿದೆ.

ಬಾಕಿ ಬಿಲ್‌ ಪಾವತಿಗೆ ಕೇಂದ್ರ- ರಾಜ್ಯ ಸರ್ಕಾರದ ನಡುವೆ ಜಟಾಪಟಿ

ಕಳೆದ ವರ್ಷ ಏಪ್ರಿಲ್‌ನಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್.ಟಿ.ಸಿ.ಎ) ವತಿಯಿಂದ ರಾಜ್ಯದಲ್ಲಿ ಆಯೋಜಿಸಲಾಗಿದ್ದ ಹುಲಿ ಯೋಜನೆ – 50 (Tiger Project 50) ಕಾರ್ಯಕ್ರಮಕ್ಕಾಗಿ ಮೈಸೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಆತಿಥ್ಯಕ್ಕೆ ಸಂಬಂಧಪಟ್ಟಂತೆ 6.33 ಕೋಟಿ ರೂಪಾಯಿ ವೆಚ್ಚವಾಗಿತ್ತು ಎನ್ನಲಾಗಿತ್ತು. ಇದರಲ್ಲಿ 3 ಕೋಟಿ ರೂಪಾಯಿ ಬಂದಿದ್ದು, ಇನ್ನೂ 3 ಕೋಟಿ 33 ಲಕ್ಷ ರೂಪಾಯಿ ಬಾಕಿ ಬರಬೇಕಿದೆ. ಇದರಲ್ಲಿ ಖಾಸಗಿ ಹೋಟೆಲ್‌ ಬಿಲ್‌ (Hotel Bill) ಕೂಡಾ ಇದೆ. ಆದರೆ, ಇದರ ವೆಚ್ಚವನ್ನು ಯಾರು ಹೊರುವುದು? ಎಂಬುದೇ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ಜಟಾಪಟಿಗೆ ಕಾರಣವಾಗಿತ್ತು.

ಇದನ್ನೂ ಓದಿ | Narendra Modi: 10 ವರ್ಷ ಬಲಿಷ್ಠ ಪ್ರತಿಪಕ್ಷ ಇರಲಿಲ್ಲ ಎಂಬುದೇ ನೋವು ತಂದಿದೆ; ಮೋದಿ ಬೇಸರ

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ್ದೇ (National Tiger Conservation Authority) ಹೊಣೆ ಎಂದು ರಾಜ್ಯ ಅರಣ್ಯ ಇಲಾಖೆ (Karnataka State Forest Department) ಹೇಳಿತ್ತು. ಬಿಲ್ ಬಾಕಿ ಬಗ್ಗೆ ಪ್ರತಿಕ್ರಿಯಿಸಿದ್ದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ (Ishwar Khandre) ಅವರು, ಪ್ರಧಾನಿ ಮೋದಿ (PM Modi) ಆತಿಥ್ಯ ವೆಚ್ಚಕ್ಕೆ ಸಂಬಂಧಪಟ್ಟಂತೆ ಇರುವ ಸಮಸ್ಯೆಯನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದ್ದರು.

Rs 6 crore spent on hosting PM Modi visit to Bandipur Centre and state departments tussle over bill arrears

2023ರ ಏಪ್ರಿಲ್‌ನಲ್ಲಿ “ಹುಲಿ ಯೋಜನೆ – 50” ಕಾರ್ಯಕ್ರಮವನ್ನು ನಡೆಸಲಾಗಿತ್ತು. ಆದರೆ, ಆ ಸಮಯದಲ್ಲಿ ವಿಧಾನಸಭಾ ಚುನಾವಣೆ ಇದ್ದಿದ್ದರಿಂದ ಮಾದರಿ ನೀತಿ ಸಂಹಿತೆ ಜಾರಿಯಲ್ಲಿತ್ತು. ಹೀಗಾಗಿ ರಾಜ್ಯ ಸರ್ಕಾರ ಭಾಗಿ ಆಗಿರಲಿಲ್ಲ. ರಾಜ್ಯ ಲಾಂಛನದ ಬಳಕೆಯೂ ಆಗಿರಲಿಲ್ಲ. ಇದು ಸಂಪೂರ್ಣ ಎನ್.ಟಿ.ಸಿ.ಎ. ಕಾರ್ಯಕ್ರಮವಾಗಿತ್ತು ಎಂದು ಈಶ್ವರ ಖಂಡ್ರೆ ತಿಳಿಸಿದ್ದರು.

ಎನ್.ಟಿ.ಸಿ.ಎ. ಖರ್ಚಿನ ಹೊಣೆ ಹೊತ್ತಿತ್ತು

ದೇಶದ ಪ್ರಧಾನಿಯವರು ರಾಜ್ಯಕ್ಕೆ ಬಂದಿದ್ದ ಹಿನ್ನೆಲೆಯಲ್ಲಿ ಆತಿಥ್ಯ ನಿರ್ವಹಣೆಗಾಗಿ ಸ್ಥಳೀಯವಾಗಿ ರಚಿಸಲಾಗಿದ್ದ ಸಮಿತಿಯಲ್ಲಿ ನಮ್ಮ ಅರಣ್ಯ ಇಲಾಖೆಯ ಅಧಿಕಾರಿಗಳು ಇದ್ದರು. ವಾಸ್ತವವಾಗಿ ಈ ಕಾರ್ಯಕ್ರಮಕ್ಕೆ ಆಗುವ ಸಂಪೂರ್ಣ ವೆಚ್ಚವನ್ನು ಭರಿಸುವುದಾಗಿ ಎನ್.ಟಿ.ಸಿ.ಎ. ಹೇಳಿತ್ತು ಎಂದು ಈಶ್ವರ ಖಂಡ್ರೆ ವಿವರಿಸಿದ್ದರು.

Rs 6 crore spent on hosting PM Modi visit to Bandipur Centre and state departments tussle over bill arrears

ಕಾರ್ಯಕ್ರಮಕ್ಕೆ ಆಗಿರುವ ವೆಚ್ಚ 6.33 ಕೋಟಿ ರೂಪಾಯಿ ಆಗಿದೆ. ಈ ಪೈಕಿ 3 ಕೋಟಿ ರೂಪಾಯಿ ಬಂದಿದ್ದು, ಇನ್ನೂ 3 ಕೋಟಿ 33 ಲಕ್ಷ ರೂಪಾಯಿ ಬಾಕಿ ಬರಬೇಕಿದೆ. ಇದರಲ್ಲಿ ರಾಡಿಸನ್ ಬ್ಲೂ ಆತಿಥ್ಯ ವೆಚ್ಚ ಸುಮಾರು 80 ಲಕ್ಷ ರೂ. ಸೇರಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದರು.

ಇದನ್ನೂ ಓದಿ | Varanasi: ಮೋದಿ ಕುರಿತು ವಾರಾಣಸಿಯಲ್ಲಿರುವ ಕನ್ನಡಿಗರು ಏನಂತಾರೆ? ಇಲ್ಲಿದೆ ‘ವಿಸ್ತಾರ ನ್ಯೂಸ್’ ಗ್ರೌಂಡ್‌ ರಿಪೋರ್ಟ್!

ಪತ್ರ ಬರೆದರೂ ಬಾಕಿ ಹಣ ನೀಡಿಲ್ಲ

ಈ ಬಗ್ಗೆ ನಮ್ಮ ಇಲಾಖೆಯ ಅಧಿಕಾರಿಗಳು ಹಲವು ಬಾರಿ ಪತ್ರ ಬರೆದಿದ್ದರೂ, ಫೋನ್ ಮಾಡಿದ್ದರೂ ಎನ್.ಟಿ.ಸಿ.ಎ. (ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ) ಈ ಬಾಕಿ ಹಣ ನೀಡಿಲ್ಲ. ಈಗ ವಿಷಯ ತಮ್ಮ ಗಮನಕ್ಕೆ ಬಂದಿದ್ದು, ಸೌಹಾರ್ದಯುತವಾಗಿ ಪರಿಹರಿಸಲು ಪ್ರಯತ್ನಿಸುವುದಾಗಿ ಈಶ್ವರ ಖಂಡ್ರೆ ಹೇಳಿದ್ದರು. ಆದರೆ, ಇದೀಗ ರಾಜ್ಯ ಸರ್ಕಾರವೇ ಬಾಕಿ ಬಿಲ್‌ ಪಾವತಿಸಲು ನಿರ್ಧಾರ ಮಾಡಿದೆ.

Continue Reading

ಪ್ರಮುಖ ಸುದ್ದಿ

IPL 2024 : ಇದು ಕಾಕತಾಳಿಯವೇ? ಐಪಿಎಲ್ ಮತ್ತು ಡಬ್ಲ್ಯುಪಿಎಲ್​ ಫೈನಲ್ ರಿಸಲ್ಟ್​​ನಲ್ಲಿದೆ ಸಾಮ್ಯತೆ

IPL 2024: ಈ ವರ್ಷದ ಆರಂಭದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫೈನಲ್ ಪಂದ್ಯದಲ್ಲಿ ಮೆಗ್ ಲ್ಯಾನಿಂಗ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡವನ್ನು ಸೋಲಿಸುವ ಮೂಲಕ ಡಬ್ಲ್ಯುಪಿಎಲ್​​ನ ಎರಡನೇ ಆವೃತ್ತಿಯನ್ನು ಗೆದ್ದುಕೊಂಡಿತು.

VISTARANEWS.COM


on

IPL 2024
Koo

ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ (WPL 2024) 2024 ಫೈನಲ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) 2024 ಫೈನಲ್ ನಡುವಿನ ಕೆಲವು ವಿಲಕ್ಷಣ ಹೋಲಿಕೆಗಳು ಕ್ರಿಕೆಟ್ ಪ್ರೇಮಿಗಳನ್ನು ಅಚ್ಚರಿಗೆ ಒಳಪಡಿಸಿವೆ. ಪ್ಯಾಟ್ ಕಮಿನ್ಸ್ ನೇತೃತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿದ ಕೋಲ್ಕತಾ ನೈಟ್ ರೈಡರ್ಸ್ (KKR) ಮೂರನೇ ಬಾರಿಗೆ ಐಪಿಎಲ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ವರ್ಷದ ಆರಂಭದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫೈನಲ್ ಪಂದ್ಯದಲ್ಲಿ ಮೆಗ್ ಲ್ಯಾನಿಂಗ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡವನ್ನು ಸೋಲಿಸುವ ಮೂಲಕ ಡಬ್ಲ್ಯುಪಿಎಲ್​​ನ ಎರಡನೇ ಆವೃತ್ತಿಯನ್ನು ಗೆದ್ದುಕೊಂಡಿತು.

ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ 18.3 ಓವರ್​ಗಳಲ್ಲಿ ಸನ್​ರೈಸರ್ಸ್​​ ಹೈದರಾಬಾದ್ ತಂಡವನ್ನು 113 ರನ್​ ಗಳಿಗೆ ಆಲೌಟ್ ಮಾಡಿತ್ತು. ಏತನ್ಮಧ್ಯೆ, ಸ್ಮೃತಿ ಮಂದಾನ ನೇತೃತ್ವದ ಆರ್ಸಿಬಿ ಕೂಡ ಮಾರ್ಚ್ 17 ರಂದು ಅಷ್ಟೇ ಓವರ್​​ಗಳಲ್ಲಿ ಡೆಲ್ಲಿ ತಂಡವನ್ನು ಅದೇ ಮೊತ್ತಕ್ಕೆ ಕಟ್ಟಿಹಾಕಿತ್ತು. ಇದು ಎರಡು ಫೈನಲ್ ಗಳ ನಡುವಿನ ಪ್ರಮುಖ ಹೋಲಿಕೆಗಳಲ್ಲಿ ಒಂದಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಡಬ್ಲ್ಯುಪಿಎಲ್​ ಮತ್ತು ಐಪಿಎಲ್​ನಲ್ಲಿ ಸೋತ ಎಸ್ಆರ್​ಎಚ್​ ಮತ್ತು ಡಿಸಿ ತಂಡ ನಾಯಕರು ಆಸ್ಟ್ರೇಲಿಯಾದ ಕ್ರಿಕೆಟಿಗರು. ಅವರೆಂದರೆ ಎಸ್​ಆರ್​ಎಚ್​ ತಂಡ ಪ್ಯಾಟ್​ ಕಮಿನ್ಸ್ ಮತ್ತು ಡಿಸಿ ಮಹಿಳಾ ತಂಡ ಮೆಗ್​ ಲ್ಯಾನಿಂಗ್. ಮುಂದುವರಿಂತೆ ಈ ಇಬ್ಬರೂ ಅದಕ್ಕಿಂತ ಹಿಂದೆ ಐಸಿಸಿ ಟೂರ್ನಿಗಳಲ್ಲಿ (ವಿಶ್ವ ಕಪ್​, ಟೆಸ್ಟ್ ಚಾಂಪಿಯನ್​ಷಿಪ್​​) ಭಾರತ ತಂಡವನ್ನು ಸೋಲಿಸಿದ್ದರು. ಕಮಿನ್ಸ್ 2023 ರ ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ (ಡಬ್ಲ್ಯುಟಿಸಿ) ಫೈನಲ್​​ನಲ್ಲಿ ಹಾಗೂ 2023 ರ ಏಕದಿನ ವಿಶ್ವಕಪ್ ಫೈನಲ್​​ನಲ್ಲಿ ಭಾರತ ತಂಡವನ್ನು ಸೋಲಿಸಿದ್ದರು. ಲ್ಯಾನಿಂಗ್ ಆಸ್ಟ್ರೇಲಿಯಾದ ಮಹಿಳಾ ತಂಡವನ್ನು 2022 ರ ಟಿ 20 ಮಹಿಳಾ ವಿಶ್ವಕಪ್ ಫೈನಲ್ ಪ್ರಶಸ್ತಿಗೆ ಕೊಂಡೊಯ್ದಿದ್ದರು. ಅಲ್ಲಿ ಭಾರತ ಸೋತಿತ್ತು . ಇದೀಗ ಭಾರತೀಯ ನಾಯಕರು ಆ ಆಸ್ಟ್ರೇಲಿಯನ್ ಆಟಗಾರರ ನಾಯಕತ್ವದ ತಂಡವನ್ನು ಮಣಿಸಿದ್ದಾರೆ. ಶ್ರೇಯಸ್​ ಅಯ್ಯರ್​ ಪ್ಯಾಟ್​ ಕಮಿನ್ಸ್ ನೇತೃತ್ವದ ಎಸ್​ಆರ್​ಎಚ್​ ತಂಡವನ್ನು ಸೋಲಿಸಿದರೆ, ಸ್ಮೃತಿ ಮಂಧಾನ ಅವರು ಆರ್​ಸಿಬಿ ಮೂಲಕ ಮೆಗ್​ ಲ್ಯಾನಿಂಗ್ ಅವರನ್ನು ಮಣಿಸಿದ್ದರು.

ಕೆಕೆಆರ್ ಬೌಲರ್​ಗಳಿಗೆ ಭರ್ಜರಿ ಖಷಿ

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕಮಿನ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮಿಚೆಲ್ ಸ್ಟಾರ್ಕ್ ಮತ್ತು ವೈಭವ್ ಅರೋರಾ ಪವರ್​ಪ್ಲೇನಲ್ಲಿ ತಲಾ ಮೂರು ಓವರ್​ಗಳನ್ನು ಎಸೆದು ಎಸ್​ಆರ್​ಎಚ್ ತಂಡ ಮೂರು ವಿಕೆಟ್​ಗಳನ್ನು ಪಡೆದರು. ಆರೆಂಜ್ ಆರ್ಮಿ 18.3 ಓವರ್​ಗಳಲ್ಲಿ 113 ರನ್​ಗಳಿಗೆ ಆಲೌಟ್ ಆಯಿತು. ಆಸೀಸ್ ಪರ ಆ್ಯಂಡ್ರೆ ರಸೆಲ್ 3 ವಿಕೆಟ್ ಕಿತ್ತರೆ, ಸ್ಟಾರ್ಕ್ ಹಾಗೂ ಹರ್ಷಿತ್ ರಾಣಾ ತಲಾ 2 ವಿಕೆಟ್ ಪಡೆದರು.

ಇದನ್ನೂ ಓದಿ: Virat Kohli: ಐಪಿಎಲ್​ 2024ರ ಸಾಧನೆ ಕುರಿತು ಹೇಳಿಕೆ ನೀಡಿದ ವಿರಾಟ್ ಕೊಹ್ಲಿ

ಉತ್ತರವಾಗಿ ಆಡಿದ ಕೆಕೆಆರ್ ಪರ ಸುನಿಲ್ ನರೈನ್ ಬೇಗನೆ ನಿರ್ಗಮಿಸಿದರು. ಆದರೆ ವೆಂಕಟೇಶ್ ಅಯ್ಯರ್ (26 ಎಸೆತಗಳಲ್ಲಿ 52* ರನ್) ಮತ್ತು ರಹಮಾನುಲ್ಲಾ ಗುರ್ಬಾಜ್ (32 ಎಸೆತಗಳಲ್ಲಿ 39 ರನ್) 45 ಎಸೆತಗಳಲ್ಲಿ 91 ರನ್​ಗಳ ಜೊತೆಯಾಟವನ್ನು ನೀಡಿದರು. ನಂತರ, ಶ್ರೇಯಸ್ ಅಯ್ಯರ್ ಮಧ್ಯದಲ್ಲಿ ವೆಂಕಟೇಶ್ ಅವರೊಂದಿಗೆ ಸೇರಿಕೊಂಡರು ಪಂದ್ಯವನ್ನು ಪೂರ್ಣಗೊಳಿಸಿದರು. ಅಂತಿಮವಾಗಿ ಕೆಕೆಆರ್ 57 ಎಸೆತಗಳು ಬಾಕಿ ಇರುವಾಗಲೇ 8 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.

Continue Reading
Advertisement
Karnataka Weather Forecast
ಮಳೆ6 mins ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

HairStyle Craze
ಫ್ಯಾಷನ್14 mins ago

Hairstyle Craze: ಸೋಷಿಯಲ್‌ ಮೀಡಿಯಾದಲ್ಲಿ ರಂಗೇರಿದ ಹೇರ್‌ ಸ್ಟೈಲ್ಸ್

Lok Sabha Election 2024
ಕರ್ನಾಟಕ29 mins ago

Lok Sabha Election 2024: ಲೋಕಸಭೆ ಚುನಾವಣೆ ಮತ ಎಣಿಕೆ; ಜೂ. 4ರಂದು ಬೆಂಗಳೂರಿನಲ್ಲಿ ನಿಷೇಧಾಜ್ಞೆ

Prajwal Revanna Video
ಕರ್ನಾಟಕ39 mins ago

Prajwal Revanna Video: ಪ್ರಜ್ವಲ್‌ ಪ್ರತ್ಯಕ್ಷನಾಗಿದ್ದಕ್ಕೆ ಸಮಾಧಾನ ಆಯ್ತು ಎಂದ ಎಚ್‌ಡಿಕೆ; ಫಸ್ಟ್‌ ರಿಯಾಕ್ಷನ್‌ ಹೀಗಿದೆ

Mouthwashes
ಆರೋಗ್ಯ44 mins ago

Mouthwashes: ಬಾಯಿಯ ಎಲ್ಲ ಸಮಸ್ಯೆಗಳಿಗೂ ಮೌತ್‌ವಾಷ್‌ ಪರಿಹಾರವೆ? ಇದರ ಇತಿಮಿತಿ ಬಗ್ಗೆಯೂ ತಿಳಿದಿರಲಿ

Surya Prakash Maayi director dies
ಕಾಲಿವುಡ್1 hour ago

Surya Prakash: ʻಮಾಯಿʼ ಸಿನಿಮಾ ಖ್ಯಾತಿಯ ತಮಿಳು ನಿರ್ದೇಶಕ ಸೂರ್ಯ ಪ್ರಕಾಶ್ ಇನ್ನಿಲ್ಲ

Prajwal Revanna Video
ಕರ್ನಾಟಕ1 hour ago

Prajwal Revanna Video: ನಾನು ‘ಅಮಾಯಕ’ ಎನ್ನುವ ಪ್ರಜ್ವಲ್‌ಗೆ ‘ವಿಸ್ತಾರ ನ್ಯೂಸ್‌’ 10 ಪ್ರಶ್ನೆಗಳು

physical abuse
ಕ್ರೈಂ1 hour ago

Physical Abuse: ಮಧ್ಯಪ್ರದೇಶದಲ್ಲೂ ಬುಲ್ಡೋಜರ್‌ ಅಸ್ತ್ರ; ವಿದ್ಯಾರ್ಥಿನಿ ಅತ್ಯಾಚಾರ ಆರೋಪಿಯ ಮನೆ ನೆಲಸಮ

Constable Death commits suicide by hanging himself from train
ಹುಬ್ಬಳ್ಳಿ1 hour ago

Constable Death : ಹುಬ್ಬಳ್ಳಿಯಲ್ಲಿ ರೈಲಿಗೆ ತಲೆ ಕೊಟ್ಟ ಕಾನ್ಸ್‌ಟೇಬಲ್‌; ಆತ್ಮಹತ್ಯೆಗೆ ಕಾರಣ ಇನ್ನೂ ನಿಗೂಢ

DCM DK Shivakumar latest statement in Bengaluru
ಕರ್ನಾಟಕ1 hour ago

DK Shivakumar: ಪೊಲೀಸ್‌ ಠಾಣೆ ಮೇಲೆ ದಾಳಿ ಮಾಡಿದವರ ಮೇಲೆ ಕಠಿಣ ಕ್ರಮ; ಡಿ.ಕೆ.ಶಿವಕುಮಾರ್

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ6 mins ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 day ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 day ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ5 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ5 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು6 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು6 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 week ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಟ್ರೆಂಡಿಂಗ್‌