French Open 2022 | ನಡಾಲ್‌ಗೆ ಐತಿಹಾಸಿಕ 106ನೇ ಗೆಲುವು, ಟಾಪ್‌ ಆಟಗಾರರು ಔಟ್‌ - Vistara News

ಕ್ರೀಡೆ

French Open 2022 | ನಡಾಲ್‌ಗೆ ಐತಿಹಾಸಿಕ 106ನೇ ಗೆಲುವು, ಟಾಪ್‌ ಆಟಗಾರರು ಔಟ್‌

French Open 2022 : ನಡಾಲ್ ಹಾಗೂ ಥಾಂಪ್ಸನ್‌ ವಿರುದ್ಧದ ಪಂದ್ಯದಲ್ಲಿ ನಡಾಲ್ ಗೆಲುವು ಸಾಧಿಸಿದ್ದಾರೆ. ಈ ಗ್ರಾನ್‌ಸ್ಲಾಮ್‌ನಲ್ಲಿ 106 ಪಂದ್ಯವನ್ನು ಗೆಲ್ಲುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

French Open 2022 : ಫ್ರೆಂಚ್ ಓಪನ್ ಟೆನಿಸ್‌ ಟೂರ್ನಮೆಂಟ್‌ನಲ್ಲಿ ಸ್ಪೇನ್‌ನ ರಫಾಲ್ ನಡಾಲ್ ಐತಿಹಾಸಿಕ ಗೆಲವು ಸಾಧಿಸಿದ್ದಾರೆ. ಆಸ್ಟ್ರೇಲಿಯಾದ ಜೋರ್ಡನ್ ಥಾಂಪ್ಸನ್‌ ವಿರುದ್ಧದ ಪಂದ್ಯದಲ್ಲಿ ನಡಾಲ್ ಗೆಲುವು ಸಾಧಿಸಿ ಹೊಸ ದಾಖಲೆ ಬರೆದಿದ್ದಾರೆ. ಈ ಮ್ಯಾಚ್ ಗೆಲ್ಲುವ ಮೂಲಕ ರಫಾಲ್ ನಡಾಲ್ ಅವರು ಗ್ರಾನ್‌ಸ್ಲಾಮ್‌ ಒಂದರ ಸಿಂಗಲ್ಸ್‌ನಲ್ಲಿ 106ನೇ ಗೆಲುವನ್ನು ದಾಖಲಿಸಿದ್ದಾರೆ. 

ಭಾನುವಾರದಿಂದ ಪ್ರಸಕ್ತ ಸಾಲಿನ ಫ್ರೆಂಚ್‌ ಓಪನ್‌ ಗ್ರಾನ್‌ಸ್ಲಾಮ್‌ ಟೂರ್ನಿ ಆರಂಭಗೊಂಡಿದ್ದು ಪುರುಷರ ನಂಬರ್‌ ವನ್‌ ಆಟಗಾರ ನೋವಾಕ್‌ ಜಾಕೋವಿಕ್‌, ಮಹಿಳೆಯರ ಅಗ್ರ ಶ್ರೆಯಾಂಕಿತೆ ಇಗಾ ಸ್ವೆಟಿಕ್‌ ಸೇರಿದಂತೆ ಘಟಾನುಘಟಿ ಆಟಗಾರರು ಪ್ರಶಸ್ತಿಗೆ ಸೆಣಸುತ್ತಿದ್ದಾರೆ. 13 ಬಾರಿ ಫ್ರೆಂಚ್‌ ಓಪನ್‌ ಮುಡಿಗೇರಿಸಿಕೊಂಡಿರುವ ನಡಾಲ್‌ ಗಾಯದ ಸಮಸ್ಯೆಯ ನಡುವೆ ಕಣಕ್ಕಿಳಿದಿದ್ದರು. ಹೀಗಾಗಿ ಈ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿತ್ತು. ತನ್ನ ನೆಚ್ಚಿನ ಅವೆ ಅಂಕಣದಲ್ಲಿ ಥಾಂಪ್ಸನ್‌ ವಿರುದ್ಧ ಟೂರ್ನಿಯ ಮೊದಲ ಪಂದ್ಯ ಗೆಲ್ಲುವುದರೊಂದಿಗೆ ಯಶಸ್ವಿಯಾಗಿ ಅಭಿಯಾನ ಆರಂಭಿಸಿದ್ದಾರೆ.

ಸ್ಟಾಟಿಸ್ಟಿಕ್ಸ್ ಹೀಗಿದೆ:

  • ನಡಾಲ್ ಹಾಗೂ ಥಾಮ್ಸನ್ ನಡುವಿನ ಪಂದ್ಯದ ಸ್ಕೋರ್ ಹೀಗಿದೆ: 6-2, 6-2, 6-2
  • ನಡಾಲ್ ಒಟ್ಟು 9೦ ಆಂಕಗಳನ್ನು ಪಡೆದಿದ್ದಾರೆ. ಹಾಗೂ 27 ವಿನ್ನರ್ ಅಂಕವನ್ನು ಗಳಿಸಿದ್ದಾರೆ
  • ನಡಾಲ್ ಒಟ್ಟು 54%ರಷ್ಟು(43/80) ರಿಸೀವಿಂಗ್ ಅಂಕ ಹಾಗೂ 64%ರಷ್ಟು(7/11) ಬ್ರೇಕ್ ಅಂಕವನ್ನು ಗಳಿಸಿದ್ದಾರೆ.
  • 75%ರಷ್ಟು (12/16) ನೆಟ್ ಪಾಯಿಂಟ್ಸ್ ನಡಾಲ್ ಈ ಪಂದ್ಯದಲ್ಲಿ ಗಳಿಸಿದ್ದಾರೆ. 
  • ಈ ಪಂದ್ಯದಲ್ಲಿ ಕೇವಲ ಒಂದೇ ಡಬಲ್-ಫಾಲ್ಟ್ ಆಗಿದೆ. ಆಸ್ಟ್ರೇಲಿಯಾದ ಥಾಮ್ಸನ್ ಈ ಫಾಲ್ಟ್ ಮಾಡಿದ್ದಾರೆ.
  • ಆಸ್ಟ್ರೇಲಿಯಾ ತಂಡದಿಂದ ಒಟ್ಟು 29 ಅನ್ಫೋರ್ಸ್ಡ್ ತಪ್ಪುಗಳಾಗಿವೆ. 

ನಡಾಲ್ ಅವರ ಗೆಲುವು ಯಾಕೆ ಐತಿಹಾಸಿಕ?

ಈ ಪಂದ್ಯಕ್ಕೂ ಮುನ್ನ ನಡಾಲ್ ಅವರು 105 ಪಂದ್ಯಗಳನ್ನು (ಫ್ರೆಂಚ್ ಓಪನ್) ಗೆದ್ದಿದ್ದರು. ರೊಜರ್ ಫೆಡರರ್ ಕೂಡ 105 ಗ್ರಾಂಡ್ ಸ್ಲಾಮ್(ವಿಂಬಲ್ಡನ್) ಪಂದ್ಯವನ್ನು ಗೆದ್ದಿದ್ದರು. ಆದರೆ, ನಡಾಲ್ ಈ ಪಂದ್ಯವನ್ನು ಗೆಲ್ಲುವ ಮೂಲಕ ಅತಿ ಹೆಚ್ಚು ಪಂದ್ಯವನ್ನು ಗೆದ್ದಿರುವರಲ್ಲಿ ಅಗ್ರಗಣ್ಯರಾಗಿದ್ದಾರೆ. ರೊಜರ್ ಫೆಡರರ್ ಜತೆ ಇದ್ದ ಟೈ ಮುರಿದು ಈಗ ನಡಾಲ್ ಮುಂದೆ ಸಾಗಿದ್ದಾರೆ. 

ಹಾಲಿ ಚಾಂಪಿಯನ್‌ ಕ್ರಜಿಕೊವಾ ಔಟ್‌:

ಫ್ರೆಂಚ್ ಯುವ ಟೆನ್ನಿಸ್ ಆಟಗಾರ್ತಿ ಡಿಯನೆ ಪೆರ್ರಿ ಹಾಲಿ ಚಾಂಪಿಯನ್ ಆಗಿದ್ದ ಬರ್ಬೊರಾ ಕ್ರಜಿಕೊವಾ ವಿರುದ್ಧ ರೋಚಕ ಗೆಲುವು ಸಾಧಿಸಿದ್ದಾರೆ (1-6, 6-2, 6-3). ಫ್ರಾನ್ಸ್‌ನ ಯುವ ಪ್ರತಿಭೆ ಪೆರ್ರಿ ಅವರ ಈ ಗೆಲುವು ವಿಶ್ವದ ಟಾಪ್ 10 ಆಟಗಾರರ ವಿರುದ್ಧದ ಮೊದಲ ಗೆಲುವಾಗಿದೆ. ಕ್ರೆಜಿಕೊವಾ ಟಾಪ್ 10 ಆಟಗಾರರಲ್ಲಿ  ಒಬ್ಬರಾದವರು. ಅವರು ಈ ಪಂದ್ಯವನ್ನು ಸೋತು ಫ್ರಂಚ್ ಓಪನ್ ಸರಣಿಯಿಂದ ಹೊರಬಿದ್ದಿದ್ದಾರೆ. ಇವರಲ್ಲದೆ ಈಗಾಗಲೇ ನವಾಮಿ ಒಸಾಕ, ಡಾಮಿನಿಕ್‌ ಥೀಮ್‌, ಡೆನಿಸ್‌ ಶಪಾವಲೋವ್‌ ಮೊದಲಾದ ಅಗ್ರಮಾನ್ಯ ಆಟಗಾರರು ಟೂರ್ನಿಯಿಂದ ಹೊರಬಿದ್ದಿದ್ದಾರೆ. 

ಇದನ್ನೂ ಓದಿ: ಕ್ರಿಕೆಟಿಗ ವಿಲ್ಲಿಯರ್ಸ್‌ & ಟೆನಿಸ್‌ ತಾರೆ ಆಶ್ಲೇ ಈಗ ಗಾಲ್ಫ್‌ ಜೋಡಿ !

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

Euro 2024 : ಸ್ಕಾಟ್ಲೆಂಡ್​ ವಿರುದ್ಧ ಜರ್ಮನಿಗೆ 5-1 ಗೋಲ್​ಗಳ ಭರ್ಜರಿ ವಿಜಯ

Euro 2024 :ಜರ್ಮನಿ-ಸ್ಕಾಟ್ಲೆಂಡ್ ಮುಖಾಮುಖಿ
10ನೇ ನಿಮಿಷದಲ್ಲಿ ಫ್ಲೋರಿಯನ್ ವಿರ್ಟ್ಜ್ ಗಳಿಸಿದ ಗೋಲಿನಿಂದ ಜರ್ಮನಿ ಮೇಲುಗೈ ಸಾಧಿಸಿತು. ಪ್ಲೋರಿನ್ ಗೋಲ್ ಪೋಸ್ಟ್ ಕಡೆಗೆ ಒದ್ದ ಚೆಂಡನ್ನು ತಡೆಯಲು ಸ್ಕಾಟ್ಲೆಂಡ್​ನ ಗೋಲ್​ ಕೀಪರ್ ಆಂಗನ್​ ಗನ್​ ಯತ್ನಿಸಿದರೂ ಚೆಂಡು ಗೋಲ್ ಪೋಸ್ಟ್ ಹಿಂಬದಿಯ ನೆಟ್​ ತನಕ ನುಗ್ಗಿತು.

VISTARANEWS.COM


on

Euro 2024
Koo

ಮ್ಯೂನಿಚ್: ಯೂರೊ ಕಪ್​ ಫುಟ್ಬಾಲ್​​ 2024ನೇ (Euro 2024) ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡ ಜರ್ಮನಿಯ ವಿರುದ್ಧ 5-1 ಗೋಲ್​ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಟೂರ್ನಿಯಲ್ಲಿ ಪಾಲ್ಗೊಂಡಿರುವ ಇತರ ತಂಡಗಳಿಗೆ ಸ್ಪಷ್ಟ ಸಂದೇಶ ರವಾನಿಸಿತು. ಜರ್ಮನಿ ಪರ ಅಮೋಘ ಗೆಲುವಿನಲ್ಲಿ ಜಮಾಲ್ ಮುಸಿಯಾಲಾ, ನಿಕ್ಲಾಸ್ ಫುಲ್ಕ್ರುಗ್ ಮತ್ತು ಟೋನಿ ಕ್ರೂಸ್ ದೊಡ್ಡ ಪಾತ್ರ ವಹಿಸಿದರು. ಪಂದ್ಯದ 10ನೇ ನಿಮಿಷದಲ್ಲಿ ಫ್ಲೋರಿಯನ್ ವಿರ್ಟ್ಜ್ ಜರ್ಮನಿ ಪರ ಗೋಲ್ ಬಾರಿಸಿದ್ದರೆ, ಮೊದಲಾರ್ಧ ಮುಗಿಯುವುದರೊಳಗೆ ಜಮಾಲ್ ಮುಸಿಯಾಲಾ, ಕೈ ಹ್ಯಾವರ್ಟ್ಜ್ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟರು.

ಅಲಿಯನ್ಸ್ ಅರೆನಾದಲ್ಲಿ ಶುಕ್ರವಾರ ಸಂಜೆ ನಡೆದ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡ ಮೊದಲಾರ್ಧದಲ್ಲಿ ರೆಡ್ ಕಾರ್ಡ್ ಪಡೆದುಕೊಂಡಿತು. ಹೀಗಾಗಿ ಬಲಿಷ್ಠ ಎದುರಾಳಿಯನ್ನು ತಡೆಯಲು ಸಾಧ್ಯವಾಗಲಿಲ್ಲ. ದ್ವಿತೀಯಾರ್ಧದಲ್ಲಿ ಬದಲಿ ಆಟಗಾರರಾದ ನಿಕ್ಲಾಸ್ ಫುಲ್ಕ್ರುಗ್ ಮತ್ತು ಎಮ್ರೆ ಕ್ಯಾನ್ ಅವರ 2 ಗೋಲುಗಳನ್ನು ಗಳಿಸಿದ ಕಾರಣ 1-5 ಗೋಲುಗಳ ಅಂತರದಲ್ಲಿ ಸೋಲು ಕಂಡಿತು.

ಜರ್ಮನಿ-ಸ್ಕಾಟ್ಲೆಂಡ್ ಮುಖಾಮುಖಿ
10ನೇ ನಿಮಿಷದಲ್ಲಿ ಫ್ಲೋರಿಯನ್ ವಿರ್ಟ್ಜ್ ಗಳಿಸಿದ ಗೋಲಿನಿಂದ ಜರ್ಮನಿ ಮೇಲುಗೈ ಸಾಧಿಸಿತು. ಪ್ಲೋರಿನ್ ಗೋಲ್ ಪೋಸ್ಟ್ ಕಡೆಗೆ ಒದ್ದ ಚೆಂಡನ್ನು ತಡೆಯಲು ಸ್ಕಾಟ್ಲೆಂಡ್​ನ ಗೋಲ್​ ಕೀಪರ್ ಆಂಗನ್​ ಗನ್​ ಯತ್ನಿಸಿದರೂ ಚೆಂಡು ಗೋಲ್ ಪೋಸ್ಟ್ ಹಿಂಬದಿಯ ನೆಟ್​ ತನಕ ನುಗ್ಗಿತು.

ಮ್ಯೂನಿಚ್ ಫುಟ್ಬಾಲ್ ಅರೆನಾದಲ್ಲಿ ನಡೆದ ಪಂದ್ಯದಲ್ಲಿ 19ನೇ ನಿಮಿಷದಲ್ಲಿ ಜಮಾಲ್ ಮುಸಿಯಾಲಾ ಮತ್ತೊಂದು ಗೋಲ್ ಬಾರಿಸುವ ಮೂಲಕ ಮೂಲಕ ಮೂರು ಬಾರಿಯ ಯುರೋಪಿಯನ್ ಚಾಂಪಿಯನ್ಸ್ ತಂಡ ಮುನ್ನಡೆಯನ್ನು ದ್ವಿಗುಣಗೊಳಿಸಿತು. ಇನ್ನು ಹ್ಯಾವಟ್ಜ್​​ ಮತ್ತೊಂದು ಗೋಲ್​ ಬಾರಿಸುವುದರೊಂದಿಗೆ ಜರ್ಮನಿ 3-0 ಮುನ್ನಡೆ ಕಾಪಾಡಿಕೊಂಡಿತು.

ಇದನ್ನೂ ಓದಿ: T20 World Cup 2024: ಟಿ-20 ವಿಶ್ವಕಪ್‌ನಿಂದ ಪಾಕಿಸ್ತಾನ ಔಟ್;‌ ಸೂಪರ್‌ 8ಕ್ಕೆ ಲಗ್ಗೆ ಇಟ್ಟ ಅಮೆರಿಕ

ಪಂದ್ಯದ ಕೊನೆಯಲ್ಲಿ ಆಂಟೋನಿಯೊ ರುಡಿಗರ್ ಅವರ ಗೋಲಿನಿಂದ ಸ್ಕಾಟ್ಲೆಂಡ್ ಸ್ಕೋರ್ ಶೀಟ್ ನಲ್ಲಿ ತನ್ನ ಖಾತೆ ತೆರೆಯಿತು. ವನಂತರ ಎಮ್ರೆ ಕ್ಯಾನ್ ಆತಿಥೇಯ ಜರ್ಮನಿ ತಂಡಕ್ಕಾಗಿ ಗೋಲು ಗಳಿಸಿದರು. ಮುಂದಿನ ಪಂದ್ಯದಲ್ಲಿ ‘ಎ’ ಗುಂಪಿನಲ್ಲಿ ಜರ್ಮನಿ ಹಂಗೇರಿ ವಿರುದ್ಧ ಸೆಣಸಲಿದ್ದು, ಸ್ಕಾಟ್ಲೆಂಡ್ ಸ್ವಿಟ್ಜರ್ಲೆಂಡ್ ವಿರುದ್ಧ ಸೆಣಸಲಿದೆ.

ಯೂರೂ ಕಪ್​ ಫುಟ್ಬಾಲ್​ ಬಗ್ಗೆ

ಇಂಗ್ಲೆಂಡ್, ಫ್ರಾನ್ಸ್, ಪೋರ್ಚುಗಲ್ ಮತ್ತು ಸ್ಪೇನ್ ನಂತಹ ಉನ್ನತ ಫುಟ್ಬಾಲ್​ ಆಡುವ ಯುರೋಪಿಯನ್ ಅಂತರರಾಷ್ಟ್ರೀಯ ತಂಡಗಳು ಜೂನ್ 15 ರಿಂದ ಜರ್ಮನಿಯ ಆತಿಥ್ಯದಲ್ಲಿ ನಡೆಯತ್ತಿರುವ ಯುಇಎಫ್ ಎ ಯೂರೋ 2024 ನಲ್ಲಿ ಹೋರಾಟ ಆರಂಭಿಸಿದೆ. ಪಶ್ಚಿಮ ಜರ್ಮನಿಯು ಈ ಸ್ಪರ್ಧೆಯ 1988 ರ ಆವೃತ್ತಿಯನ್ನು ಆಯೋಜಿಸಿದ ನಂತರ, ಜರ್ಮನಿಯು ಆತಿಥೇಯ ರಾಷ್ಟ್ರವಾಗಿ ಯುರೋಪಿಯನ್ ಸ್ಪರ್ಧೆಯನ್ನು ನಡೆಸುತ್ತಿರುವುದು ಇದೇ ಮೊದಲು. 2021 ರ ಯೂರೋ ಫೈನಲ್​ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿದ ಇಟಲಿ ಚಾಂಪಿಯನ್ ಆಗಿತ್ತು.

ಯೂರೋ 2024 24 ತಂಡಗಳನ್ನು ಒಳಗೊಂಡಿದ್ದು, ಅವುಗಳನ್ನು ಎ, ಬಿ, ಸಿ, ಡಿ, ಇ, ಎಫ್ ಎಂಬ ನಾಲ್ಕು ತಂಡಗಳ 6 ವಿಭಿನ್ನ ಗುಂಪುಗಳಾಗಿ ವಿಂಗಡಿಸಲಾಗಿದೆ. ಪಂದ್ಯಾವಳಿಯ ಗುಂಪು ಹಂತದ ಪಂದ್ಯಗಳು ಜೂನ್ 27 ರವರೆಗೆ ನಡೆಯಲಿದ್ದು, ನಾಕೌಟ್ ಪಂದ್ಯಗಳು ಜೂನ್ 29 ರಿಂದ ರೌಂಡ್ ಆಫ್ 16 ನೊಂದಿಗೆ ಪ್ರಾರಂಭವಾಗುತ್ತವೆ. ಯುರೋಪಿಯನ್ ಫುಟ್ಬಾಲ್ ತಾರೆಗಳಾದ ಕ್ರಿಸ್ಟಿಯಾನೊ ರೊನಾಲ್ಡೊ, ಕೈಲಿಯನ್ ಎಂಬಪೆ, ಲುಕಾ ಮೊಡ್ರಿಕ್, ಟೋನಿ ಕ್ರೂಸ್ ಮತ್ತು ಹ್ಯಾರಿ ಕೇನ್ ಈಗಾಗಲೇ ಪ್ರತಿಷ್ಠಿತ ಮತ್ತು ಹೆಚ್ಚು ಸ್ಪರ್ಧಾತ್ಮಕ ಯೂರೋ 2024 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಯುಇಎಫ್ಎ ಯುರೋ 2024 ಅನ್ನು ಯಾವ ತಂಡಗಳು ಆಡುತ್ತಿವೆ?

ಗ್ರೂಪ್ ಎ: ಜರ್ಮನಿ, ಹಂಗೇರಿ, ಸ್ಕಾಟ್ಲೆಂಡ್, ಸ್ವಿಟ್ಜರ್ಲೆಂಡ್
ಬಿ ಗುಂಪು: ಕ್ರೊಯೇಷಿಯಾ, ಇಟಲಿ, ಸ್ಪೇನ್, ಅಲ್ಬೇನಿಯಾ
ಸಿ ಗುಂಪು: ಇಂಗ್ಲೆಂಡ್, ಡೆನ್ಮಾರ್ಕ್, ಸೆರ್ಬಿಯಾ, ಸ್ಲೊವೇನಿಯಾ
ಗ್ರೂಪ್ ಡಿ: ಫ್ರಾನ್ಸ್, ನೆದರ್ಲ್ಯಾಂಡ್ಸ್, ಆಸ್ಟ್ರಿಯಾ, ಪೋಲೆಂಡ್
ಗ್ರೂಪ್ ಇ: ಬೆಲ್ಜಿಯಂ, ರೊಮೇನಿಯಾ, ಸ್ಲೋವಾಕಿಯಾ, ಉಕ್ರೇನ್
ಗ್ರೂಪ್ ಎಫ್: ಪೋರ್ಚುಗಲ್, ಜೆಕ್ ಗಣರಾಜ್ಯ, ಜಾರ್ಜಿಯಾ, ಟರ್ಕಿ

Continue Reading

ಕ್ರಿಕೆಟ್

T20 World Cup 2024: ಟಿ-20 ವಿಶ್ವಕಪ್‌ನಿಂದ ಪಾಕಿಸ್ತಾನ ಔಟ್;‌ ಸೂಪರ್‌ 8ಕ್ಕೆ ಲಗ್ಗೆ ಇಟ್ಟ ಅಮೆರಿಕ

T20 World Cup 2024: ಅಮೆರಿಕದ ಲೌಡರ್‌ಹಿಲ್‌ನಲ್ಲಿ ಶುಕ್ರವಾರ (ಜೂನ್‌ 14) ಯುಎಸ್‌ಎ ಹಾಗೂ ಐರ್ಲೆಂಡ್‌ ನಡುವೆ ಮಹತ್ವದ ಪಂದ್ಯ ನಡೆಯಬೇಕಿತ್ತು. ಆದರೆ, ಮಳೆಯಿಂದಾಗಿ ಅಮೆರಿಕ ಹಾಗೂ ಐರ್ಲೆಂಡ್‌ ನಡುವಿನ ಪಂದ್ಯವನ್ನು ರದ್ದುಗೊಳಿಸಲಾಯಿತು. ಹಾಗಾಗಿ, ಅಮೆರಿಕ ತಂಡವು 5 ಅಂಕಗಳೊಂದಿಗೆ ಸೂಪರ್‌ 8ಕ್ಕೆ ಪ್ರವೇಶ ಪಡೆಯಿತು. ಭಾನುವಾರ ಪಾಕಿಸ್ತಾನವು ಐರ್ಲೆಂಡ್‌ ವಿರುದ್ಧ ಆಡಲಿದ್ದು, ಗೆದ್ದರೂ 4 ಅಂಕಗಳೊಂದಿಗೆ ವಿಮಾನ ಹತ್ತಬೇಕಿದೆ.

VISTARANEWS.COM


on

T20 World Cup 2024
Koo

ವಾಷಿಂಗ್ಟನ್‌: ಉತ್ತಮ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗವನ್ನು ಹೊಂದಿದ್ದರೂ ಸಂಘಟಿತ ಪ್ರದರ್ಶನ ನೀಡುವಲ್ಲಿ ವಿಫಲವಾಗುವ ಜತೆಗೆ ಅದೃಷ್ಟದಾಟದಲ್ಲೂ ಹಿನ್ನಡೆ ಅನುಭವಿಸಿದ ಪಾಕಿಸ್ತಾನ ಕ್ರಿಕೆಟ್‌ ತಂಡವು (Pakistan Cricket Team) ಅಮೆರಿಕ ಹಾಗೂ ವೆಸ್ಟ್‌ ಇಂಡೀಸ್‌ನಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್‌ ಟೂರ್ನಿಯಿಂದಲೇ (T20 World Cup 2024) ಹೊರಬಿದ್ದಿದೆ. ಸೂಪರ್‌ 8ರ ರೇಸ್‌ನಲ್ಲಿ ಹಿನ್ನಡೆ ಅನುಭವಿಸಿದ ಬಾಬರ್‌ ಅಜಂ (Babar Azam) ನೇತೃತ್ವದ ತಂಡವು ಟೂರ್ನಿಯಿಂದ ಹೊರಬಿದ್ದಿದ್ದು, ಪಾಕ್‌ ಕ್ರಿಕೆಟ್‌ ಅಭಿಮಾನಿಗಳು ತಂಡದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಅಮೆರಿಕದ ಲೌಡರ್‌ಹಿಲ್‌ನಲ್ಲಿ ಶುಕ್ರವಾರ (ಜೂನ್‌ 14) ಯುಎಸ್‌ಎ ಹಾಗೂ ಐರ್ಲೆಂಡ್‌ ನಡುವೆ ಮಹತ್ವದ ಪಂದ್ಯ ನಡೆಯಬೇಕಿತ್ತು. ಆದರೆ, ಮಳೆಯಿಂದಾಗಿ ಅಮೆರಿಕ ಹಾಗೂ ಐರ್ಲೆಂಡ್‌ ನಡುವಿನ ಪಂದ್ಯವನ್ನು ರದ್ದುಗೊಳಿಸಲಾಯಿತು. ಇದರಿಂದಾಗಿ ಎರಡೂ ತಂಡಗಳು ತಲಾ ಒಂದು ಪಾಯಿಂಟ್‌ ಸಂಪಾದಿಸಿದವು. ಇದರೊಂದಿಗೆ ಒಟ್ಟು 5 ಅಂಕ ಗಳಿಸಿದ ಅಮೆರಿಕ ತಂಡವು ಸೂಪರ್‌ 8ಕ್ಕೆ ಲಗ್ಗೆ ಇಟ್ಟಿತು. ಮೊದಲ ಬಾರಿಗೆ ಟಿ-20 ವಿಶ್ವಕಪ್‌ನಲ್ಲಿ ಆಡುತ್ತಿರುವ ಅಮೆರಿಕ ತಂಡವು ಮೊದಲ ಪ್ರಯತ್ನದಲ್ಲಿಯೇ ಸೂಪರ್‌ 8 ಪ್ರವೇಶಿಸಿದೆ.

ಮೂರು ಪಂದ್ಯಗಳನ್ನು ಆಡಿರುವ ಪಾಕಿಸ್ತಾನವು ಅಮೆರಿಕ ಹಾಗೂ ಭಾರತದ ವಿರುದ್ಧ ಹೀನಾಯವಾಗಿ ಸೋಲನುಭವಿಸಿದೆ. ಕೆನಡಾ ವಿರುದ್ಧ ಮಾತ್ರ ಗೆದ್ದಿರುವ ಕಾರಣ 2 ಪಾಯಿಂಟ್‌ಗಳನ್ನು ಪಡೆದಿದೆ. ಇನ್ನು, ನಾಲ್ಕು ಪಾಯಿಂಟ್ ಹೊಂದಿದ್ದ ಅಮೆರಿಕ ತಂಡವು ಐರ್ಲೆಂಡ್‌ ವಿರುದ್ಧ ಸೋತು, ಜೂನ್‌ 16ರಂದು ಐರ್ಲೆಂಡ್‌ ವಿರುದ್ಧ ನಡೆಯುವ ಪಂದ್ಯದಲ್ಲಿ ಬಾಬರ್‌ ಅಜಂ ಬಳಗ ಗೆದ್ದರೆ ಮಾತ್ರ ಸೂಪರ್‌ 8ಕ್ಕೆ ಅರ್ಹತೆ ಪಡೆಯುತ್ತಿತ್ತು. ಆದರೆ, ಅಮೆರಿಕ ಹಾಗೂ ಐರ್ಲೆಂಡ್‌ ನಡುವಿನ ಪಂದ್ಯವು ಮಳೆಯಿಂದ ರದ್ದಾದ ಕಾರಣ ಅಮೆರಿಕದ ಅಂಕಗಳು 5ಕ್ಕೆ ಏರಿಕೆಯಾದವು. ಇದರಿಂದಾಗಿ ಐರ್ಲೆಂಡ್‌ ವಿರುದ್ಧ ಪಾಕ್‌ ಗೆದ್ದರೂ ಯಾವುದೇ ಉಪಯೋಗವಿಲ್ಲದಂತಾಗಿದೆ.

2023ರ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನವು ಸೆಮಿಫೈನಲ್‌ ಕೂಡ ತಲುಪಿರಲಿಲ್ಲ. ಇನ್ನು, 2009ರ ಟಿ-20 ವಿಶ್ವಕಪ್‌ ಚಾಂಪಿಯನ್‌ ಆಗಿರುವ ಪಾಕಿಸ್ತಾನವು 2022ರ ಟಿ-20 ವಿಶ್ವಕಪ್‌ನಲ್ಲಿ ಫೈನಲ್‌ ತಲುಪಿ, ರನ್ನರ್‌ ಅಪ್‌ ಆಗಿತ್ತು. ಆದರೆ, ಪ್ರಸಕ್ತ ಟೂರ್ನಿಯಲ್ಲಿ ಗ್ರೂಪ್‌ ಹಂತದಲ್ಲಿಯೇ ಮನೆಯ ದಾರಿ ಹಿಡಿದಿದೆ. 2007ರಿಂದಲೂ ಟಿ-20 ವಿಶ್ವಕಪ್‌ ಟೂರ್ನಿಗಳಲ್ಲಿ ಪಾಕಿಸ್ತಾನವು ಒಮ್ಮೆಯೂ ಗ್ರೂಪ್‌ ಹಂತದಲ್ಲಿಯೇ ಹೊರಬಿದ್ದಿರಲಿಲ್ಲ. ಆದರೆ, ಪ್ರಸಕ್ತ ಟೂರ್ನಿಯಲ್ಲಿ ಹೊರಬೀಳುವ ಮೂಲಕ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗದೆ.

ಆಡಿರುವ ಮೂರೂ ಪಂದ್ಯಗಳನ್ನು ಗೆದ್ದಿರುವ ಭಾರತ ತಂಡವು ಅಗ್ರಸ್ಥಾನಿಯಾಗಿ ಸೂಪರ್‌ 8ಕ್ಕೆ ಪ್ರವೇಶ ಪಡೆದಿದೆ. ಶನಿವಾರ ಕೆನಡಾ ವಿರುದ್ಧ ಔಪಚಾರಿಕ ಪಂದ್ಯವನ್ನಷ್ಟೇ ಆಡಲಿದೆ. ಜೂನ್‌ 19ರಿಂದ ಸೂಪರ್‌ 8 ಪಂದ್ಯಗಳು ಆರಂಭವಾಗಲಿವೆ. ಸೂಪರ್‌ 8 ಪಂದ್ಯಗಳು ವೆಸ್ಟ್‌ ಇಂಡೀಸ್‌ನಲ್ಲಿ ನಡೆಯಲಿವೆ.

ಇದನ್ನೂ ಓದಿ: T20 World Cup Viral Video: ಪಾಕ್​ ತಂಡದ ವೇಗಿಗೆ ತವರಿನ ಅಭಿಮಾನಿಗಳಿಂದಲೇ ಗೇಲಿ

Continue Reading

ಕ್ರಿಕೆಟ್

Viral Video: ‘ಹಿಟ್​ ದಿ ಟಾರ್ಗೆಟ್’​ ಎಂದು ಬೌಲಿಂಗ್​ ಅಭ್ಯಾಸ ಆರಂಭಿಸಿದ ಮೊಹಮ್ಮದ್ ಶಮಿ

Viral Video: ಚೇತರಿಕೆಯ ಹಾದಿಯಲ್ಲಿರುವ ಶಮಿ  ಈ ವರ್ಷದ ಕೊನೆಯಲ್ಲಿ ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ನಡೆಯುವ ಟೆಸ್ಟ್ ಸರಣಿಗೆ ಪುನರಾಗಮನ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಗಾಯದಿಂದಾಗಿ ಶಮಿಗೆ ಈ ಬಾರಿ ಐಪಿಎಲ್​ ಸೇರಿ ಮಹತ್ವದ ಟಿ20 ವಿಶ್ವಕಪ್​ ಟೂರ್ನಿ ಕೈತಪ್ಪಿತ್ತು.

VISTARANEWS.COM


on

Viral Video
Koo

ಲಕ್ನೋ: ಪಾದದ ಶಸ್ತ್ರಚಿಕಿತ್ಸೆಗೆ(mohammed shami injury update) ಒಳಗಾಗಿ ಚೇತರಿಕೆ ಕಾಣುತ್ತಿರುವ ಭಾರತ ಕ್ರಿಕೆಟ್​ ತಂಡದ ಪ್ರಧಾನ​ ವೇಗಿ ಮೊಹಮ್ಮದ್ ಶಮಿ(Mohammed Shami) ಕ್ರಿಕೆಟ್​ಗೆ ಮರಳುವು ಸಿದ್ಧತೆಯಲ್ಲಿದ್ದಾರೆ. ತಮ್ಮ ನಿವಾಸದಲ್ಲೇ ನಿರ್ಮಿಸಲಾಗಿರುವ ಕ್ರಿಕೆಟ್​ ಪಿಚ್​ನಲ್ಲಿ ಬೌಲಿಂಗ್​ ಅಭ್ಯಾಸ ಆರಂಭಿಸಿದ್ದು, ಈ ವಿಡಿಯೊವನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ವೈರಲ್​(Viral Video) ಆಗಿದೆ.

ಫೆಬ್ರವರಿಯಲ್ಲಿ ಶಮಿ ಅವರು ಲಂಡನ್​ನಲ್ಲಿ ತಮ್ಮ ಪಾದದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಬಳಿಕ ಶಮಿ ಯಾವುದೇ ಕ್ರಿಕೆಟ್​ ಸರಣಿ ಆಡಿಲ್ಲ. ಇದೀಗ ಕ್ರಿಕೆಟ್​ಗೆ ಮರಳುವ ನಿಟ್ಟಿನಲ್ಲಿ ಪುನರ್ವಸತಿ ಆರಂಭಿಸಿದ್ದಾರೆ. ಬೌಲಿಂಗ್​ ಅಭ್ಯಾಸ ಆರಂಭಿಸಿರುವ ಶಮಿ ‘ಹಿಟ್​ ದಿ ಟಾರ್ಗೆಟ್​’ ಎಂದು ಬರೆದುಕೊಂಡಿದ್ದಾರೆ. ಶಮಿ ಅವರು ಬೌಲಿಂಗ್​ನಲ್ಲಿ ವಿಕೆಟ್​ ಉರುಳಿಸಿದ್ದು ಈ ವಿಡಿಯೊದಲ್ಲಿ ಕಾಣಬಹುದಾಗಿದೆ.

2 ವಾರ ಹಿಂದೆ ಶಮಿ ಅವರು 2 ಸ್ಟಿಕ್​ ವಾಕರ್​ಗಳೊಂದಿಗೆ ಗಾರ್ಡನ್​ನಲ್ಲಿ ನಿಂತಿರುವ ಫೋಟೊವನ್ನು ಹಂಚಿಕೊಂಡು, ‘ಮತ್ತೆ ಟ್ರ್ಯಾಕ್‌ಗೆ ಮರಳುವ ಹಸಿದಿದೆ. ಈ ಹಾದಿ ಕಠಿಣವಾಗಿರಬಹುದು, ಆದರೆ ಇದನ್ನೇಲ್ಲ ಎದುರಿಸಿ ಶೀಘ್ರದಲ್ಲೇ ಕ್ರಿಕೆಟ್​ಗೆ ಮರಳುವ ವಿಶ್ವಾಸವಿದೆ’ ಎಂದು ಬರೆದುಕೊಂಡಿದ್ದರು. ಇದಕ್ಕೂ ಮುನ್ನ ಶಮಿ ತಮ್ಮ ಮನೆಯಲ್ಲಿ ಪಾದಕ್ಕೆ ಎಲೆಕ್ಟ್ರಿಕ್​ ಮಸಾಜ್​ ಮಾಡುತ್ತಿರುವ ಫೋಟೊವನ್ನು ಹಂಚಿಕೊಂಡಿದ್ದರು.

ಬಾಂಗ್ಲಾ ಸರಣಿಯಲ್ಲಿ ಕಣಕ್ಕೆ?

ಚೇತರಿಕೆಯ ಹಾದಿಯಲ್ಲಿರುವ ಶಮಿ  ಈ ವರ್ಷದ ಕೊನೆಯಲ್ಲಿ ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ನಡೆಯುವ ಟೆಸ್ಟ್ ಸರಣಿಗೆ ಪುನರಾಗಮನ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಗಾಯದಿಂದಾಗಿ ಶಮಿಗೆ ಈ ಬಾರಿ ಐಪಿಎಲ್​ ಸೇರಿ ಮಹತ್ವದ ಟಿ20 ವಿಶ್ವಕಪ್​ ಟೂರ್ನಿ ಕೈತಪ್ಪಿತ್ತು. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ವೇಳೆ ಗಾಯಗೊಂಡಿದ್ದ ಶಮಿ, ಈ ಗಾಯವನ್ನು ಮರೆಮಾಚಿ ವಿಶ್ವಕಪ್​ನಲ್ಲಿ ಅಮೋಘ ಬೌಲಿಂಗ್​ ಪ್ರದರ್ಶನ ತೋರಿದ್ದರು.

ಇದನ್ನು ಓದಿ Anushka Sharma: ಕೊಹ್ಲಿಯಂತೆ ತಾಳ್ಮೆ ಕಳೆದುಕೊಂಡ ಪತ್ನಿ ಅನುಷ್ಕಾ; ವಿಡಿಯೊ ವೈರಲ್​

ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಶಮಿ ಅವರು ತಮ್ಮ ಮೊನಚಾದ ಬೌಲಿಂಗ್​ ದಾಳಿಯ ಮೂಲಕ ಟೂರ್ನಿಯಲ್ಲಿಯೇ ಅತ್ಯಧಿಕ ವಿಕೆಟ್​ ಪಡೆದ ಬೌಲರ್​ ಎನಿಸಿಕೊಂಡಿದ್ದರು. ಆಡಿದ 7 ಪಂದ್ಯಗಳಲ್ಲಿ 24 ವಿಕೆಟ್‌ ಉರುಳಿಸಿದ್ದರು. ಅವರ ಈ ಸಾಧನೆಯನ್ನು ಪರಿಗಣಿಸಿ ಅವರಿಗೆ ದೇಶದ ಎರಡನೇ ಅತ್ಯುನ್ನತ ಕ್ರೀಡಾ ಗೌರವವಾದ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಮೊಹಮ್ಮದ್ ಶಮಿ ಅರ್ಜುನ ಪ್ರಶಸ್ತಿ ಸ್ವೀಕರಿಸಿದ್ದರು. ಮೊಹಮ್ಮದ್ ಶಮಿ ಭಾರತ ಪರ 64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್ ಪಡೆದಿದ್ದಾರೆ. 101 ಏಕದಿನ ಪಂದ್ಯಗಳಲ್ಲಿ 195 ವಿಕೆಟ್ ಪಡೆದಿದ್ದಾರೆ. 23 ಟಿ20 ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದಾರೆ.

Continue Reading

ಕ್ರೀಡೆ

INDW vs SAW: ಏಕದಿನ ಸರಣಿಗೆ ಅಭ್ಯಾಸ ಆರಂಭಿಸಿದ ಭಾರತ ಮಹಿಳಾ ತಂಡ; ಕನ್ನಡದಲ್ಲೇ ತಂಡದ ಸಿದ್ಧತೆ ವಿವರಿಸಿದ ಶ್ರೇಯಾಂಕಾ

INDW vs SAW: ಭಾನುವಾರದಂದು ಮೊದಲ ಏಕದಿನ ಪಂದ್ಯ ನಡೆಯಲಿದೆ. ಒಟ್ಟು ಮೂರು ಪಂದ್ಯಗಳ ಏಕದಿನ ಸರಣಿ ಇದಾಗಿದ್ದು ಎಲ್ಲ ಪಂದ್ಯಗಳು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಏಕೈಕ ಟೆಸ್ಟ್​ ಮತ್ತು 3 ಟಿ20 ಪಂದ್ಯಗಳು ಚೆನ್ನೈಯ ಚೆಪಾಕ್​ ಸ್ಟೇಡಿಯಂನಲ್ಲಿ ನಡೆಯಲಿದೆ.

VISTARANEWS.COM


on

INDW vs SAW
Koo

ಬೆಂಗಳೂರು: ಜೂನ್ 16ರಿಂದ ಆರಂಭಗೊಳ್ಳಲಿರುವ ದಕ್ಷಿಣ ಆಫ್ರಿಕಾ(India women’s vs South Africa women’s) ಮತ್ತು ಭಾರತ ಮಹಿಳಾ(INDW vs SAW) ಏಕದಿನ(INDW vs SAW 1st ODI) ಸರಣಿಗೆ ಉಭಯ ತಂಡಗಳ ಆಟಗಾರ್ತಿಯರು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದ್ದಾರೆ. ತಂಡದ ಸಿದ್ಧತೆ ಬಗ್ಗೆ ಶ್ರೇಯಾಂಕಾ ಪಾಟೀಲ್(Shreyanka Patil) ಕನ್ನಡದಲ್ಲೇ ವಿವರಿಸಿದ್ದಾರೆ. ಈ ವಿಡಿಯೊವನ್ನು ಆರ್​ಸಿಬಿ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದೆ. ಉದಯೋನ್ಮುಖ ಆಟಗಾರ್ತಿಯಾಗಿರುವ ಶ್ರೇಯಾಂಕಾ ಏಕದಿನ ಮತ್ತು ಟಿ20 ಸರಣಿಯಲ್ಲಿ ಸ್ಥಾನ ಪಡೆದಿದ್ದಾರೆ.


ಭಾನುವಾರದಂದು ಮೊದಲ ಏಕದಿನ ಪಂದ್ಯ ನಡೆಯಲಿದೆ. ಒಟ್ಟು ಮೂರು ಪಂದ್ಯಗಳ ಏಕದಿನ ಸರಣಿ ಇದಾಗಿದ್ದು ಎಲ್ಲ ಪಂದ್ಯಗಳು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಏಕೈಕ ಟೆಸ್ಟ್​ ಮತ್ತು 3 ಟಿ20 ಪಂದ್ಯಗಳು ಚೆನ್ನೈಯ ಚೆಪಾಕ್​ ಸ್ಟೇಡಿಯಂನಲ್ಲಿ ನಡೆಯಲಿದೆ.

ಪಂದ್ಯ ಸಿದ್ಧತೆ ಬಗ್ಗೆ ಮಾತನಾಡಿದ ಶ್ರೇಯಾಂಕ, ‘ಎಲ್ಲರಿಗೂ ನಮಸ್ಕಾರ, ನಾವು ಬೆಂಗಳೂರಿನಲ್ಲಿದ್ದೇವೆ. ಇಲ್ಲಿನ ವಾತಾವರಣ ತುಂಬಾ ಹಿತ ನೀಡಿದೆ. ಮೊದಲ ಅಭ್ಯಾಸ ಅವಧಿಯನ್ನು ಅತ್ಯಂತ ಯಶಸ್ವಿಯಾಗಿ ಮುಗಿಸಿದ್ದೇವೆ. ಎಲ್ಲರು ತುಂಬಾ ಎನರ್ಜಿಯಿಂದ ಅಭ್ಯಾಸ ನಡೆಸಿದೆವು. ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ಆಡಲು ಕಾತರಗೊಂಡಿದ್ದೇವೆ. ಇಲ್ಲಿ ನಡೆದ ಡಬ್ಲ್ಯುಪಿಎಲ್​ ಪಂದ್ಯಾವಳಿಯ ವೇಳೆ ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ಬಂದು ಸ್ಟೇಡಿಯಂ ತುಂಬಿ ಹೋಗಿತ್ತು. ಇದೀಗ ಏಕದಿನ ಸರಣಿಗೂ ಅದೇ ರೀತಿ ಸ್ಟೇಡಿಯಂಗೆ ಬಂದು ಟೀಮ್​ ಇಂಡಿಯಾಕ್ಕೆ ಸಪೋರ್ಟ್​ ಮಾಡಿ’ ಎಂದು ಕೇಳಿಕೊಂಡಿದ್ದಾರೆ. ಡ್ಯಾಶಿಂಗ್​ ಓಪನರ್​ ಶಫಾಲಿ ವರ್ಮಾ ಕೂಡ ಬಿಸಿಸಿಐ ವಿಶೇಷ ವಿಡಿಯೊದಲ್ಲಿ ಮಾತನಾಡಿ ಪಂದ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಬಂದು ಬೆಂಬಲಿಸುವಂತೆ ಕೇಳಿಕೊಂಡಿದ್ದಾರೆ.

ಇದನ್ನೂ ಓದಿ WPL 2024: ಶ್ರೇಯಾಂಕಾ ಪಾಟೀಲ್ ಅದ್ಭುತ ಫೀಲ್ಡಿಂಗ್​ ಕಂಡು ದಂಗಾದ ಆರ್​ಸಿಬಿ ಅಭಿಮಾನಿಗಳು

ಹರ್ಮನ್‌ಪ್ರೀತ್‌ ಕೌರ್‌ ಅವರು ಮೂರು ಮಾದರಿಯಲ್ಲೂ ಭಾರತ ತಂಡವನ್ನು ಮುನ್ನಡೆಸಲಿದ್ದು, ಸ್ಮೃತಿ ಮಂಧಾನ ಉಪನಾಯಕಿಯಾಗಿದ್ದಾರೆ. ಗಾಯದಿಂದ ವಿಶ್ರಾಂತಿ ಪಡೆದಿದ್ದ ಅನುಭವಿ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ಈ ಸರಣಿ ಮೂಲಕ ಮತ್ತೆ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ದಾರೆ. ಕಳೆದ ಬಾಂಗ್ಲಾ ವಿರುದ್ಧದ ಸರಣಿಯಿಂದ ಅವರು ಹೊರಗುಳಿದಿದ್ದರು. ವೇಗಿ ಪೂಜಾ ವಸ್ತ್ರಕರ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ದೇಶೀಯ ಕ್ರಿಕೆಟ್​ ಟೂರ್ನಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್​ ಪ್ರದರ್ಶನ ತೋರುತ್ತಿದ್ದ ಅಗ್ರ ಕ್ರಮಾಂಕದ ಬ್ಯಾಟರ್ ಪ್ರಿಯಾ ಪೂನಿಯಾ ಏಕದಿನ ಮತ್ತು ಟೆಸ್ಟ್‌ ತಂಡಕ್ಕೆ ಮರಳಿದ್ದಾರೆ.

ಏಕದಿನ ತಂಡ


ಹರ್ಮನ್‌ಪ್ರೀತ್‌ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪನಾಯಕಿ), ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೆಟ್‌ ಕೀಪರ್‌), ಉಮಾ ಚೆಟ್ರಿ (ವಿಕೆಟ್ ಕೀಪರ್‌), ದಯಾಳನ್ ಹೇಮಲತಾ, ರಾಧಾ ಯಾದವ್, ಆಶಾ ಶೋಭನ, ಶ್ರೇಯಾಂಕಾ ಪಾಟೀಲ್​, ಸೈಕಾ ಇಶಾಕ್, ಪೂಜಾ ವಸ್ತ್ರಕರ್, ರೇಣುಕಾ ಸಿಂಗ್ ಠಾಕೂರ್, ಅರುಂಧತಿ ರೆಡ್ಡಿ, ಪ್ರಿಯಾ ಪೂನಿಯಾ

Continue Reading
Advertisement
G7 Summit
ಪ್ರಮುಖ ಸುದ್ದಿ14 mins ago

G7 Summit : ನಿಮ್ಮ ಭೇಟಿಯಿಂದ ಸಂತೋಷವಾಗಿದೆ; ಅಮೆರಿಕ ಅಧ್ಯಕ್ಷ ಬೈಡೆನ್​ ಭೇಟಿ ಬಗ್ಗೆ ಮೋದಿ ಉತ್ಸಾಹ

Actor Darshan
ಕರ್ನಾಟಕ22 mins ago

Actor Darshan: ಇಂದು ನಟ ದರ್ಶನ್‌ ಭವಿಷ್ಯ ನಿರ್ಧಾರ; ಕೋರ್ಟ್‌ ತೀರ್ಪು ಏನಿರಲಿದೆ?

Euro 2024
ಪ್ರಮುಖ ಸುದ್ದಿ46 mins ago

Euro 2024 : ಸ್ಕಾಟ್ಲೆಂಡ್​ ವಿರುದ್ಧ ಜರ್ಮನಿಗೆ 5-1 ಗೋಲ್​ಗಳ ಭರ್ಜರಿ ವಿಜಯ

Head Shave
Latest56 mins ago

Head Shave: ಪೋಷಕರು ಬಿಜೆಪಿಯನ್ನು ಬೆಂಬಲಿಸಿದ್ದಕ್ಕೆ ದಲಿತ ಹುಡುಗನ ತಲೆ ಬೋಳಿಸಿದರು!

Accident Case
Latest1 hour ago

Accident Case: ಕಾರು ಡಿಕ್ಕಿ ರಭಸಕ್ಕೆ ಹತ್ತಾರು ಅಡಿ ದೂರ ಹಾರಿ ಬಿದ್ದ ಮಹಿಳೆ; ಭಯಾನಕ ವಿಡಿಯೊ

karnataka weather forecast
ಮಳೆ1 hour ago

Karnataka Weather : ಬೆಂಗಳೂರಲ್ಲಿ ವೀಕೆಂಡ್‌ಗೆ ಬ್ರೇಕ್‌ ಕೊಟ್ಟ ವರುಣ! ಈ 3 ಜಿಲ್ಲೆಗಳಿಗೆ ಮಳೆ ಎಚ್ಚರಿಕೆ

Life Insurance
ಮನಿ-ಗೈಡ್2 hours ago

Life Insurance: ಜೀವ ವಿಮೆ ನಿಯಮಗಳಲ್ಲಿ ಹಲವು ಬದಲಾವಣೆ; ಐಆರ್‌ಡಿಎಐಯಿಂದ ಗ್ರಾಹಕಸ್ನೇಹಿ ಕ್ರಮ

Betel leaves health benefits
ಆರೋಗ್ಯ2 hours ago

Betel Leaves Health Benefits: ರಾತ್ರಿ ಊಟದ ಬಳಿಕ ವೀಳ್ಯದೆಲೆ ಸೇವನೆ ಆರೋಗ್ಯಕ್ಕೆ ಉತ್ತಮ

Narendra Modi
ದೇಶ2 hours ago

Narendra Modi: ತಂತ್ರಜ್ಞಾನ ಜತೆಗೆ ಮಾನವ ಕೇಂದ್ರಿತ ಏಳಿಗೆಗೆ ಭಾರತ ಆದ್ಯತೆ; ಇಟಲಿ ಜಿ7 ಸಭೆಯಲ್ಲಿ ಮೋದಿ

Teachers Transfer 2024
ಕರ್ನಾಟಕ2 hours ago

Teachers Transfer 2024: ಶಿಕ್ಷಕರ ವರ್ಗಾವಣೆಯ ಪರಿಷ್ಕೃತ ವೇಳಾಪಟ್ಟಿ ಇಂದು ಪ್ರಕಟ ಸಾಧ್ಯತೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ14 hours ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು15 hours ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು16 hours ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ16 hours ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ4 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ4 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ4 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ4 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

ಟ್ರೆಂಡಿಂಗ್‌