Motivational story: ಕಿಟಕಿ ಆಚೆಗೆ ಇದ್ದದ್ದು ಕತ್ತಲೆ! ಆದರೆ, ಇವರಿಗೆ ಬೆಳಕು ತುಂಬಿತ್ತು! - Vistara News

ಪ್ರಮುಖ ಸುದ್ದಿ

Motivational story: ಕಿಟಕಿ ಆಚೆಗೆ ಇದ್ದದ್ದು ಕತ್ತಲೆ! ಆದರೆ, ಇವರಿಗೆ ಬೆಳಕು ತುಂಬಿತ್ತು!

Motivational story ಆಸ್ಪತ್ರೆಯ ಬೆಡ್‌ನಲ್ಲಿ ಒಂದಿಂಚೂ ಕದಲಲಾಗದೆ ಮಲಗಿದ್ದ ವ್ಯಕ್ತಿಗೆ ಗೋಡೆ ಬದಿ ಬೆಡ್ಡಿನಲ್ಲಿದ್ದ ವ್ಯಕ್ತಿ ಹೇಳಿದ ಬಣ್ಣ ಬಣ್ಣದ ಕತೆಗಳನ್ನು ಹೇಳಿದ್ದರು. ಆವತ್ತು ಕತೆ ಕೇಳಿಸಲಿಲ್ಲ. ಅವರನ್ನು ಹುಡುಕಿ ಬಂದವರಿಗೆ ನಿಜಕ್ಕೂ ಕಂಡಿದ್ದೇನು?

VISTARANEWS.COM


on

motivational story
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕೃಷ್ಣ ಭಟ್‌ ಅಳದಂಗಡಿ- Motivational story
ಅವರು ಆಸ್ಪತ್ರೆಯ ಬೆಡ್‍ನಲ್ಲಿ ಜೀವಂತ ಶವದಂತೆ ಮಲಗಿದ್ದರು. ಕಾಲು, ಕೈಗಳೆಲ್ಲ ಸ್ವಾಧೀನ ಕಳೆದುಕೊಂಡಿದ್ದವು. ಯಾವ ಕಡೆಗೂ ಹೊರಳುವಂತಿಲ್ಲ, ಏಳುವಂತಿಲ್ಲ. ತನ್ನ ಬಳಿ ಬರುವ ನರ್ಸ್‌ಗೆ ಅವರು ಹೇಳುತ್ತಿದ್ದುದು ಒಂದೇ ಮಾತು: ಯಾವ ಸುಖಕ್ಕಾಗಿ ನಾನು ಬದುಕಬೇಕು? ಒಂದು ಇಂಜೆಕ್ಷನ್ ಕೊಟ್ಟು ಸಾಯಿಸಿಬಿಡು ನನ್ನನ್ನು!

ಅವರ ಪಕ್ಕದ ಬೆಡ್‍ನಲ್ಲಿ ಇನ್ನೊಬ್ಬ ರೋಗಿ ಇದ್ದರು. ಅವರು ಪ್ರತಿದಿನ ಬೆಳಗ್ಗೆ ಎದ್ದು ಕಿಟಕಿ ತೆರೆದು ಅದರಿಂದಾಚೆಗೆ ಏನು ನಡೆಯುತ್ತಿದೆ ಎಂದು ಚಂದ ಮಾಡಿ ವಿವರಿಸಿ  ಹೇಳುತ್ತಿದ್ದರು. ವ್ಹಾ ಅಲ್ಲೊಂದು ಸುಂದರವಾದ ಬೀಚು, ಅಲ್ಲಿ ಆಡುವ ಮಕ್ಕಳು, ಒಂದು ಮರ, ಹಕ್ಕಿಗಳ ಆಟ, ರಸ್ತೆಯಲ್ಲಿ ಓಡಾಡುವ ಜನ.. ಹೀಗೆ ಎಲ್ಲವನ್ನೂ ವಿವರಿಸುತ್ತಿದ್ದರು.

ಪ್ಯಾರಾಲಿಸಿಸ್‍ಗೆ ಒಳಗಾದ ವ್ಯಕ್ತಿಗೆ ಈ ಮಾತುಗಳು ಖುಷಿಕೊಡುತ್ತಿದ್ದವು. ಹಾಗಾಗಿ ಯಾವಾಗ ಬೆಳಗಾಗುತ್ತದೋ, ಆ ಪ್ರಕೃತಿಯ ಸೌಂದರ್ಯದ ವಿವರಣೆ ಯಾವಾಗ ಕೇಳುತ್ತೇನೋ ಎಂದು ಹಾತೊರೆಯುತ್ತಿದ್ದರು. ಅವರಲ್ಲೊಂದು ಜೀವ ಸಂಚಾರವಾಗಿತ್ತು.

ಅದೊಂದು ದಿನ ಬೆಳಗ್ಗೆ ಎದ್ದಾಗ  ಪಕ್ಕದ ಬೆಡ್ ಖಾಲಿಯಾಗಿತ್ತು. ನರ್ಸ್‌ ನ್ನು ಕರೆದು ಕೇಳಿದರು: ಅವರು ಎಲ್ಲಿ ಹೋದರು?
ನರ್ಸ್ ಹೇಳಿದಳು: ಅವರು ನಿನ್ನೆ ರಾತ್ರಿ ತೀರಿಕೊಂಡರು.
ಅಷ್ಟು ಹೊತ್ತಿಗೆ ಈ ವ್ಯಕ್ತಿಗೆ ಬಂದ ಜೀವವೂ ಹೋದಂತಾಯಿತು. ಹೊರ ಪ್ರಪಂಚಕ್ಕೆ ಕಿಂಡಿಯಾಗಿದ್ದ ನನ್ನ ಗೆಳೆಯನೇ ಹೋದ ಮೇಲೆ ನನಗೆ ಇನ್ನೇನು ಉಳೀತು ಅಂತ ದುಃಖಿತರಾದರು. ಆದರೂ ಸಾಯುವ ಮುನ್ನ ಆ ಕಿಟಕಿ ಮೂಲಕ ಗೆಳೆಯ ವರ್ಣಿಸುತ್ತಿದ್ದ ಸುಂದರ ಜಗತ್ತನ್ನೊಮ್ಮೆ ನೋಡೇ ಬಿಡಬೇಕು ಎಂದು ನಿರ್ಣಯಿಸಿದರು. ತನ್ನೆಲ್ಲಾ ಶಕ್ತಿಯನ್ನು ಒಗ್ಗೂಡಿಸಿ ಎದ್ದೇಳಲು ಯತ್ನಿಸಿದರು. ನೆಲಕ್ಕೆ ಬಿದ್ದರು. ಅಲ್ಲಿಂದ ತೆವಳುತ್ತಲೇ ಹೋಗಿ ಪಕ್ಕದ ಬೆಡ್ಡಿನಾಚೆ ಇದ್ದ ಕಿಟಕಿಯನ್ನು ಗಟ್ಟಿಯಾಗಿ ಹಿಡಿದು ನಿಂತರು.

ಇದನ್ನೂ ಓದಿ: Motivational story: ಬಡತನ ತೋರಿಸಲು ಹೋದರೆ ಮಗನಿಗೆ ಕಂಡದ್ದು ಶ್ರೀಮಂತಿಕೆ!

ಹೊರಗೆ ನೋಡುತ್ತಲೇ ಒಮ್ಮೆಲೇ ನರ್ಸನ್ನು ಕೂಗಿ ಕರೆದರು. “ʻʻಏನಿದು? ನನ್ನ ಗೆಳೆಯ ಹೇಳುತ್ತಿದ್ದ.. ಇಲ್ಲಿ ಬೀಚು ಕಾಣುತ್ತದೆ, ಮರ ಕಾಣಿಸುತ್ತದೆ, ಮಕ್ಕಳು ಕಾಣಿಸುತ್ತಾರೆ ಅಂತ. ಇಲ್ಲಿ ನೋಡಿದರೆ ಬರೀ ಗೋಡೆ ಇದೆ. ಬರೀ ಸುಳ್ಳ ಅವನು,” ಅಂತ ಕಿರುಚಿದರು.

ನರ್ಸ್ ಶಾಂತವಾಗಿ ಹೇಳಿದಳು: ಅವರ್ಯಾಕೆ ಸುಳ್ಳು ಹೇಳಿದರೋ ಗೊತ್ತಿಲ್ಲ. ಆದರೆ, ಅವರ ಈ ಮಾತುಗಳಿಂದಾಗಿಯೇ ನೀವು ಇವತ್ತು ಅಸಾಧ್ಯವನ್ನು ಸಾಧಿಸಿದ್ದೀರಿ. ಯಾವ ಕಾರಣಕ್ಕೂ ನೀವು ನಿಮ್ಮ ಕಾಲ ಮೇಲೆ ನಿಲ್ಲುವುದು ಸಾಧ್ಯವಿರಲಿಲ್ಲ. ಆದರೆ, ಅವರ ಮಾತು ನಿಮ್ಮನ್ನು ಈ ಸ್ಥಿತಿಗೆ ತಂದಿದೆ. ಮಾತು ಯಾರನ್ನಾದರೂ ಕೆಡವಬಲ್ಲದು ಸರ್, ಯಾರನ್ನು ಬೇಕಾದರೂ ಎದ್ದು ನಿಲ್ಲಿಸಬಲ್ಲುದು.. ಅಷ್ಟೇ ಸರ್.

ಇದನ್ನೂ ಓದಿ: motivational story: ನಾವಾಡಿದ ಮಾತೇ ನಮಗೆ ತಿರುಗಿ ಕೇಳೋದು ಮಗಾ..!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Personality Development: ಈ 10 ಸೂತ್ರ ಪಾಲಿಸಿದರೆ ನೆಮ್ಮದಿಯ ಬದುಕು ಗ್ಯಾರಂಟಿ!

ಯಾವ ರೀತಿ ಕುದಿಯುವ ನೀರಿನಲ್ಲಿ ನಮ್ಮ ಮುಖ ನಮಗೆ ಕಾಣುವುದಿಲ್ಲವೋ ಹಾಗೆಯೇ ಸಿಟ್ಟಿನಲ್ಲಿದ್ದಾಗ ಮನುಷ್ಯ ತನ್ನ ತಪ್ಪನ್ನು ಅರಿತುಕೊಳ್ಳುವುದಿಲ್ಲ. ಶಾಂತವಾದ ಮತ್ತು ಶುದ್ಧವಾದ ಪರಿಸರದಲ್ಲಿ ತನ್ನ ತನು, ಮನಗಳನ್ನು ಶುದ್ಧೀಕರಿಸಿಕೊಳ್ಳಲು ಆ ಮೂಲಕ ತನ್ನನ್ನು ತಾನು ತಿದ್ದಿಕೊಳ್ಳಲು ಈ ಕೆಲವು ವಿಷಯಗಳು ಮನುಷ್ಯನಿಗೆ ಸಹಾಯಕವಾಗುತ್ತವೆ. ನಮ್ಮ ವ್ಯಕ್ತಿತ್ವ ವಿಕಸನಗೊಳಿಸುವ (Personality Development) ಹತ್ತು ಸೂತ್ರಗಳು ಇಲ್ಲಿವೆ.

VISTARANEWS.COM


on

Personality Development
Koo
Veena Hemant Gowda Patil Mundaragi, Gadag

-ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ
ನಮ್ಮ ದೇಹವು (Personality Development) ಪಂಚಭೂತಗಳಾದ ಪೃಥ್ವಿ, ಆಕಾಶ, ವಾಯು, ಜಲ ಮತ್ತು ಅಗ್ನಿ ತತ್ವಗಳಿಂದ ಕೂಡಿದೆ. ಹುಟ್ಟಿದಾಗ ನಾವು ಪರಿಶುದ್ಧರಾಗಿಯೇ ಇದ್ದು ಜೀವಿತಾವಧಿಯಲ್ಲಿ ಸಿಟ್ಟು ಸೆಡವು ಕೋಪ ತಾಪ ದ್ವೇಷ ಅಸೂಯೆ, ಸುಖ ಸಂತೋಷ ನೆಮ್ಮದಿ ರಾಗ ಮುಂತಾದ ಎಲ್ಲಾ ರೀತಿಯ ಭಾವಗಳಿಗೆ ಸ್ಪಂದಿಸುತ್ತ ಬೆಳೆಯುತ್ತೇವೆ. ಒಟ್ಟಿನಲ್ಲಿ ಮನುಷ್ಯ ಜೀವಿ ಕಾರ್ಕೋಟಕ ವಿಷಕ್ಕಿಂತಲೂ ಕಡೆ ಎಂದು ಭಾವಿಸುವಂತೆ ತನ್ನ ಜೀವಿತಾವಧಿಯನ್ನು ಮನುಷ್ಯ ಕಳೆಯುತ್ತಾನೆ. ಯಾವ ರೀತಿ ಅಗರ ಬತ್ತಿಯು ತನ್ನನ್ನು ತಾನು ಸುಟ್ಟು ಕೊಳ್ಳುವುದೋ ಹಾಗೆಯೇ ನಮ್ಮಲ್ಲಿ ಉಂಟಾಗುವ ದ್ವೇಷ, ಅಸೂಯೆ, ಮದ, ಮತ್ಸರಗಳು ನಮ್ಮನ್ನು ನಮಗರಿವಿಲ್ಲದೆಯೇ ಸುಟ್ಟು ಹಾಕುತ್ತವೆ. ಯಾವ ರೀತಿ ಕುದಿಯುವ ನೀರಿನಲ್ಲಿ ನಮ್ಮ ಮುಖ ನಮಗೆ ಕಾಣುವುದಿಲ್ಲವೋ ಹಾಗೆಯೇ ಸಿಟ್ಟಿನಲ್ಲಿದ್ದಾಗ ಮನುಷ್ಯ ತನ್ನ ತಪ್ಪನ್ನು ಅರಿತುಕೊಳ್ಳುವುದಿಲ್ಲ. ಶಾಂತವಾದ ಮತ್ತು ಶುದ್ಧವಾದ ಪರಿಸರದಲ್ಲಿ ತನ್ನ ತನು, ಮನಗಳನ್ನು ಶುದ್ಧೀಕರಿಸಿಕೊಳ್ಳಲು ಆ ಮೂಲಕ ತನ್ನನ್ನು ತಾನು ತಿದ್ದಿಕೊಳ್ಳಲು ಈ ಕೆಲವು ವಿಷಯಗಳು ಮನುಷ್ಯನಿಗೆ ಸಹಾಯಕವಾಗುತ್ತವೆ. ನೀರಿನ ಸೇವನೆಯಿಂದ….. ದೇಹವು ಶುದ್ದವಾಗುತ್ತದೆ. ಹೆಚ್ಚು ನೀರು ಸೇವನೆ ಮಾಡುವುದರಿಂದ ಮನುಷ್ಯನ ದೇಹದಲ್ಲಿರುವ ಕಶ್ಮಲಗಳು ಮೂತ್ರ, ಮಲ ಮತ್ತು ಬೆವರಿನ ರೂಪದಲ್ಲಿ ಹೊರಹಾಕಲ್ಪಡುತ್ತದೆ. ಯೋಗಾಸನವನ್ನು ಮಾಡುವುದರಿಂದ ಮನುಷ್ಯ ತನ್ನ ಆಂತರಿಕ ಮತ್ತು ಮಾನಸಿಕ ಕಶ್ಮಲಗಳನ್ನು ಹೊರ ಹಾಕುತ್ತಾನೆ, ಇದರಿಂದ ಮನಸ್ಸು ಪ್ರಶಾಂತವಾಗಿ ಪ್ರಪುಲಿತವಾಗಿರುತ್ತದೆ. ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶವಿರುವುದಿಲ್ಲ.

Pranayama Yoga Poses For Bright And Glowing Skin

ಪ್ರಾಣಾಯಾಮ ಸೂಕ್ತ

ಪ್ರಾಣಾಯಾಮ ಮಾಡುವುದರಿಂದ ಉಸಿರಾಟ ಶುದ್ಧವಾಗುತ್ತದೆ. ಪ್ರತಿನಿತ್ಯ ಪ್ರಾಣಾಯಾಮದ ಅಭ್ಯಾಸ ಮಾಡುವುದು ಅನೇಕ ಮನೋ ದೈಹಿಕ ಕಾಯಿಲೆಗಳಿಗೆ ರಾಮಬಾಣದಂತೆ. ಕನಿಷ್ಠ ಮೂರು ನಿಮಿಷದಿಂದ ಗರಿಷ್ಠ ಮುಕ್ಕಾಲು ಗಂಟೆಯವರೆಗೆ ಪ್ರಾಣಾಯಾಮದ ಅಭ್ಯಾಸ ಮಾಡಿದಾಗ ಮನಸ್ಸು ಸಂಪೂರ್ಣ ನಿರಾಳವಾಗಿ ಜಂಜಡಗಳಿಂದ ಮುಕ್ತವಾಗುತ್ತದೆ. ಯಾವುದೇ ರೀತಿಯ ಆತಂಕ ಭಯಗಳಿಂದ ಮುಕ್ತವಾಗುತ್ತದೆ. ಸತತವಾಗಿ ಪ್ರಾಣಾಯಾಮದ ಅಭ್ಯಾಸ ಮಾಡುವುದರಿಂದ ವ್ಯಕ್ತಿಯು ಮಾನಸಿಕ ಒತ್ತಡ, ರಕ್ತದೊತ್ತಡ,
ಹೃದ್ರೋಗ ಮುಂತಾದ ಕಾಯಿಲೆಗಳಿಂದ ಮುಕ್ತನಾಗುತ್ತಾನೆ.

Meditation Yoga Poses For Bright And Glowing Skin

ಧ್ಯಾನ ಉತ್ತಮ ಅಭ್ಯಾಸ

ಧ್ಯಾನ ಮಾಡುವುದರಿಂದ ಮನಸ್ಸು ಶುದ್ದವಾಗುತ್ತದೆ. ಧ್ಯಾನವು ಮನಸ್ಸನ್ನು ಒಂದು ನಿಶ್ಚಿತ ಏಕಾಗ್ರತೆಯತ್ತ ಕೊಂಡೊಯ್ಯುವ ಸಾಧನ. ಸರಳವಾದ ಬಟ್ಟೆಯನ್ನು ತೊಟ್ಟು ಅನುಕೂಲಕರ ಆಸನದಲ್ಲಿ ಕುಳಿತು ಕತ್ತು, ಬೆನ್ನು ಮತ್ತು ತಲೆಯನ್ನು ನೇರವಾಗಿ ಇಟ್ಟುಕೊಂಡು ಕಣ್ಣು ಮುಚ್ಚಿ ಧ್ಯಾನಮಗ್ನ ರಾಗುವ ವ್ಯಕ್ತಿಗಳಿಗೆ ಅಪಾರವಾದ ಮಾನಸಿಕ ಶಾಂತಿ ಮತ್ತು ತನ್ಮೂಲಕ ಸ್ಥಿತಪ್ರಜ್ಞತೆ ಲಭಿಸುತ್ತದೆ. ಇಂದಿನ ಒತ್ತಡಭರಿತ ದೈನಂದಿನ ಜೀವನದಲ್ಲಿ ಧ್ಯಾನವನ್ನು ಅಭ್ಯಾಸ ಮಾಡುವುದು ಅತ್ಯಂತ ಸೂಕ್ತವಾದದ್ದು.

ಜ್ಞಾನ ಸಂಪಾದಿಸುವುದರಿಂದ…

ಇದರಿಂದ ಜಾಣ್ಮೆ, ಉನ್ನತ ವಿಚಾರಧಾರೆಗಳ ಹರಿವು ಹೆಚ್ಚುತ್ತದೆ. ಜ್ಞಾನ ಸಂಪಾದನೆಯು ಎಲ್ಲಾ ಚಟುವಟಿಕೆಗಳಲ್ಲಿಯೇ ಮಹತ್ತರವಾದ ಕ್ರಿಯೆ. ತಿಳಿದವರಿಂದ, ಪಂಡಿತರಿಂದ, ಜ್ಞಾನಿಗಳಿಂದ ಪುಸ್ತಕಗಳಿಂದ ಅನುಭವಗಳಿಂದ ಸಂಪಾದಿಸುವ ಜ್ಞಾನ ನಮ್ಮ ಜೀವಿತದ ಕೊನೆಯವರೆಗೂ ನಮ್ಮೊಂದಿಗೆ ಇರುತ್ತದೆ ಯಾರು ಕದಿಯಲಾರದ ವಿದ್ಯೆ ಜ್ಞಾನ. ಅರಿವಿನ ಕೊರತೆ ನಮ್ಮ ಎಷ್ಟೋ ಸಮಸ್ಯೆಗಳಿಗೆ ಮೂಲ ಕಾರಣವಾಗಿರುತ್ತದೆ ಅಂತಹ ಸಮಯದಲ್ಲಿ ಸೂಕ್ತವಾದ ಪ್ರಾಪಂಚಿಕ ಜ್ಞಾನವು ಕೂಡ ಎಷ್ಟೋ ಸಮಸ್ಯೆಗಳನ್ನು ನಿವಾರಿಸುತ್ತದೆ. ಐಹಿಕ ಜೀವನದ ಎಷ್ಟೋ ತೊಂದರೆಗಳಿಗೆ ಆಧ್ಯಾತ್ಮದಲ್ಲಿ ಉತ್ತರವಿದೆ.

Personality development activities

ಚಿಂತನ ಮಂಥನದಿಂದ

ಇದರಿಂದ ಅಜ್ಞಾನ ತೊಲಗಿ ಸುಜ್ಞಾನ ದೊರೆಯುತ್ತದೆ. ಸರಿ-ತಪ್ಪು,
ಒಳಿತು-ಕೆಡುಕು, ಧರ್ಮ-ಅಧರ್ಮ ಇವುಗಳ ಕುರಿತು ಸೂಕ್ತವಾದ ಚಿಂತನೆ ಮಾಡಿ ವಿಚಾರವೆಂಬ ಕಡೆಗೋಲಿನಿಂದ ಮಂಥನ ಮಾಡಿ ಒಳ್ಳೆಯ ನಿರ್ಧಾರಕ್ಕೆ ಬರುವುದು ಕೂಡ ಅತ್ಯಂತ ಒಳ್ಳೆಯ ಕಾರ್ಯ. ಸರಿ ತಪ್ಪುಗಳ ಪರಾಮರ್ಶೆಯಿಂದ ಮನುಷ್ಯ ತಪ್ಪು ವಿಷಯಗಳಿಂದ ದೂರ ಸರಿದು ಒಳ್ಳೆಯ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಚಿಂತನೆ ಮಾಡಿದರೆ ಕಾರ್ಯಾಕಾರ್ಯಗಳ ಅರಿವು ಆಗುವುದಿಲ್ಲ. *ಸರಿ ತಪ್ಪುಗಳ ಮೊಸರನ್ನು ಅರಿವು ಮತ್ತು ವಿಮರ್ಶೆಗಳ ಮಂಥನದ ಮೂಲಕ ಕಡೆದು ಉತ್ತಮ ವಿಚಾರಗಳ ಬೆಣ್ಣೆ ತೆಗೆದು ಉತ್ತಮ ವ್ಯಕ್ತಿತ್ವವೆಂಬ ಕಾಯಿಸಿದ ತುಪ್ಪವನ್ನು ಈ ಸಮಾಜಕ್ಕೆ ಬಡಿಸುವುದು ಸಮಾಜ ಜೀವಿಯಾಗಿ ನಮ್ಮ ಕರ್ತವ್ಯ.

ಸೇವೆ ಮಾಡುವುದರಿಂದ

ಇದರಿಂದ ಅಹಮ್ಮಿಗೆ ಸಂತೃಪ್ತಿ ದೊರೆಯುತ್ತದೆ. ಎಷ್ಟೋ ಜನ ಶ್ರೀಮಂತರು ಅಲ್ಲಲ್ಲಿ ನಡೆಯುವ ಪ್ರಸಾದ ಸೇವಾ ಕಾರ್ಯಗಳಲ್ಲಿ ಪ್ರವಾಹ, ಸುನಾಮಿ ಚಂಡಮಾರುತ ಮುಂತಾದ ಪ್ರಾಕೃತಿಕ ವಿಕೋಪಗಳಿಂದ ಸಂತ್ರಸ್ತರಾದ ಜನರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಹೀಗೆ ತೊಡಗಿಸಿಕೊಳ್ಳುವ ಮೂಲಕ ಅವರು ನಾನು ಶ್ರೀಮಂತ, ಉನ್ನತ ವರ್ಗದವನು ಎಲ್ಲರಿಗಿಂತ ಮೇಲು ಎಂಬ ಮೇಲರಿಮೆಯನ್ನು ತೊಡೆದು ಕೊಳ್ಳುತ್ತಾರೆ. ನಮ್ಮದೇ ಅಹಮ್ಮಿನ ಕೋಟೆಯೊಳಗೆ ಬಂಧಿಯಾದಾಗ ಇತರರ ಸಂಕಟಗಳು ನಮಗೆ ಕಾಣುವುದಿಲ್ಲ. ಆದರೆ ಸೇವೆಯ ಮೂಲಕ ಮನುಷ್ಯ ತನ್ನನ್ನು ಸಮಾಜಕ್ಕೆ ಅರ್ಪಿಸಿಕೊಳ್ಳುವ ಮನುಷ್ಯ ಪರಿಶುದ್ಧನಾಗುತ್ತಾನೆ. ಅಹಮ್ಮಿನ ಸಂತೃಪ್ತಿಗೆ ಕಾರಣವಾಗುತ್ತಾನೆ. ಎನಗಿಂತ ಕಿರಿಯರಿಲ್ಲ ಶಿವ ಭಕ್ತರಿಗಿಂತ ಹಿರಿಯರಿಲ್ಲ ಎಂಬ ಬಸವಣ್ಣನವರ ಉಕ್ತಿ ಸದಾ ಸರ್ವದ ನಮ್ಮ ಮನದಲ್ಲಿ ನೆಲೆ ಮಾಡಿರಬೇಕು.

Photo of Man Wearing Hooded Jacket in Front of Body of Water

ಮೌನದಿಂದ…

ಇದರಿಂದ ನಾನು ಮತ್ತು ನನ್ನದು ಎಂಬ ವೈಯಕ್ತಿಕತೆ ಸ್ವಾರ್ಥತೆಯು ಶುದ್ಧವಾಗುತ್ತದೆ. ಪ್ರಶಾಂತವಾಗಿರುವ ಮೌನವೆಂಬ ಕೊಳದಲ್ಲಿ ಒಂದೇ ಸಮನೆ ನಿರರ್ಥಕವಾದ ಒಣ ಮಾತುಗಳನ್ನಾಡಿ ಬಗ್ಗಡ ಮಾಡುವುದಕ್ಕಿಂತ ಹಿತವಾದ ಮೌನ ಲೇಸು. ಮೌನವು ನಮಗೆ ಆತ್ಮ ಚಿಂತನೆಗೆ ದಾರಿ ಮಾಡಿಕೊಡುತ್ತದೆ. ಸರಿ ತಪ್ಪುಗಳ ವಿಮರ್ಶೆ, ಒಳಿತು ಕೆಡುಕುಗಳ ಪರಾಮರ್ಶೆಯನ್ನು ನಾವು ಮೌನಾನುಸಂಧಾನದಲ್ಲಿ ಪಡೆಯಬಹುದು. ಮೌನದ ಶಕ್ತಿ ಅಪಾರ. ಮಾತು ನಮ್ಮನ್ನು ಹಗುರಗೊಳಿಸಿದರೆ ಮೌನವು ನಮ್ಮನ್ನು ಆಂತರಿಕವಾಗಿ ಬಲಿಷ್ಠವಾಗಿಸುತ್ತದೆ. ಆದ್ದರಿಂದಲೇ ಋಷಿ ಮುನಿಗಳು, ಜ್ಞಾನಿಗಳು ಸದಾ ಮೌನದ ಮೊರೆ ಹೋಗುತ್ತಾರೆ. ಇನ್ನು ಹಲವು ಜನ ಸಂತರು ವಾರಕ್ಕೊಂದು ದಿನ, ಪ್ರತಿದಿನ ಸ್ನಾನ ಪೂಜೆ ಮುಗಿಯುವವರೆಗೆ ಮತ್ತೆ ಹಲವಾರು ದಿನಗಳ ಕಾಲದ ಮೌನಾನುಷ್ಠಾನವನ್ನು ಮಾಡುತ್ತಾರೆ. ಮೌನವು ನಮ್ಮ ಆಂತರಿಕ ಶಕ್ತಿಯನ್ನು ಹೆಚ್ಚಿಸಿ ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಗಟ್ಟಿಗೊಳಿಸುತ್ತದೆ.

ಉನ್ನತ ಆಲೋಚನೆಗಳಿಂದ…

ಇದರಿಂದ ತಿನ್ನುವ ಆಹಾರ ಸಾತ್ವಿಕವಾಗುತ್ತದೆ. ಒಳ್ಳೆಯ ವಿಚಾರಗಳು, ಒಳ್ಳೆಯ ಕಾರ್ಯಗಳು, ಒಳ್ಳೆಯ ದುಡಿಮೆಯನ್ನು ಪ್ರೋತ್ಸಾಹಿಸುತ್ತದೆ. ಒಳ್ಳೆಯ ಮತ್ತು ಉನ್ನತ ವಿಚಾರಧಾರೆಗಳು ನಮ್ಮ ಆಹಾರದ ಮೇಲೂ ಪರಿಣಾಮ ಬೀರುತ್ತವೆ. ನಾವು ಆಹಾರವನ್ನು ತಯಾರಿಸುವಾಗ ಒಳ್ಳೆಯ ಆಲೋಚನೆ ಮಾಡಬೇಕು.ಸ್ವಚ್ಛ,ಶುದ್ಧವಾದ ಪ್ರಶಾಂತ ಪರಿಸರದಲ್ಲಿ ಅಡುಗೆಯನ್ನು ಮಾಡುವುದರ ಹಿಂದಿನ ಗುಟ್ಟು ಇದೇ. ವ್ಯವಹಾರವೇ ಮುಖ್ಯವಾಗಿರುವ ಹೋಟೆಲ್, ರೆಸ್ಟೋರೆಂಟ್ ಮುಂತಾದವುಗಳಲ್ಲಿ ನಾವು ಸೇವಿಸುವ ಆಹಾರ ತಾಮಸಿಕ ಮತ್ತು ರಾಜಸಿಕ ಗುಣವನ್ನು ಹೊಂದಿದ್ದು ಅಂತಹ ಆಹಾರವನ್ನು ಸೇವಿಸಿದಾಗ ನಮಗೆ ಅಜೀರ್ಣ, ಹುಳಿತೇಗು ಹೊಟ್ಟೆ ಉಬ್ಬರ ಮುಂತಾದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಸೇವೆಯೇ ಪ್ರಧಾನವಾಗಿರುವ ದೇವಸ್ಥಾನಗಳಲ್ಲಿ, ಮಠಗಳಲ್ಲಿ, ಸೇವಾ ಸದನಗಳಲ್ಲಿ ತಯಾರಿಸುವ ಆಹಾರಗಳಲ್ಲಿ ಸಾತ್ವಿಕ ಗುಣವೇ ತುಂಬಿದ್ದು ಮನಸ್ಸನ್ನು ಅರಳಿಸುವ ಮತ್ತು ಚೇತನ ಕೊಡುವ ಶಕ್ತಿ ಇರುತ್ತದೆ. ಒಳ್ಳೆಯ ಆಹಾರ ಸೇವನೆ ಮನಸ್ಸಿನಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಬಡಿದೆಬ್ಬಿಸಿ ನಮ್ಮನ್ನು ಉತ್ತಮ ಕಾರ್ಯಗಳತ್ತ ಪ್ರೇರೇಪಿಸುತ್ತದೆ.

The concept of sharing

ದಾನ ಮಾಡುವುದರಿಂದ…

ಇದರಿಂದ ಸಂಪತ್ತಿನ ಸದ್ವಿನಿಯೋಗವಾಗುವುದು. ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಎಂದು ಹೇಳುತ್ತಾರಲ್ಲವೇ. ಕೊಡುವುದರ ಮೂಲಕ ವ್ಯಕ್ತಿ ತನ್ನೊಳಗಿನ ಎಲ್ಲ ನಕಾರಾತ್ಮಕ ಚಿಂತನೆಗಳನ್ನು ಕಳೆದುಕೊಳ್ಳುತ್ತಾನೆ. ದಾನ ನೀಡುವ ಮೂಲಕ ತನ್ನಲ್ಲಿರುವ ಸಿಟ್ಟು ಸೆಡವು ಹಟಗಳನ್ನು ಕಳೆದುಕೊಳ್ಳುತ್ತಾನೆ. ಬೇಡುವ ಕೈಗಳಿಗಿಂತ ಕೊಡುವ ಕೈಗಳು ಶ್ರೇಷ್ಠ ಎಂದು ಹಿರಿಯರು ಹೇಳಿರುವುದು ಇದಕ್ಕೆ ಇರಬಹುದು. ದಾನಮಾಡುವ ಶಕ್ತಿಯನ್ನು ನೀಡಿರುವ ಆ ದೇವರಿಗೆ ಕೃತಾರ್ಥರಾಗಿರೋಣ.

ಇದನ್ನೂ ಓದಿ: Eating Style: ಉಣ್ಣುವ ರೀತಿ ನಾವು ಎಂಥವರು ಎನ್ನುವುದನ್ನು ಬಯಲು ಮಾಡುತ್ತದೆ! ಅದು ಹೇಗೆ?

ಪ್ರೀತಿ ಮತ್ತು ಸಮರ್ಪಣಾ ಭಾವದಿಂದ

ಇದರಿಂದ ಭಾವನೆಗಳು ಶುದ್ಧವಾಗುತ್ತವೆ. ವ್ಯಕ್ತಿಯನ್ನು ಆತನ ದೈಹಿಕ,ಮಾನಸಿಕ ಮತ್ತು ಇತರ ಒಳಿತು ಮತ್ತು ಕೆಡುಕುಗಳೊಂದಿಗೆ ಪ್ರೀತಿಸುವುದು ನಿಜವಾದ ಪ್ರೀತಿ. ಅಂತಹ ಪ್ರೀತಿಯಲ್ಲಿ ಯಾವುದೇ ಸ್ವಾರ್ಥ, ಆಕಾಂಕ್ಷೆಗಳು ಇರುವುದಿಲ್ಲ. ನೀನು ಹೀಗಿದ್ದರೆ ಮಾತ್ರ ನಾನು ನಿನ್ನನ್ನು ಪ್ರೀತಿಸಬಲ್ಲೆ ಎಂಬ ಶರತ್ತುಬದ್ಧ ಪ್ರೀತಿ ಸ್ವಾರ್ಥ ಎಂದೆನಿಸಿಕೊಳ್ಳುತ್ತದೆ. ಪ್ರೀತಿಗೆ ಬೇಕಾಗಿರುವುದು ಶುದ್ಧ ಅಂತಃಕರಣ ಮತ್ತು ಸಮರ್ಪಣಾ ಮನೋಭಾವ ಮಾತ್ರ. ಆದ್ದರಿಂದಲೇ ನಿಸ್ವಾರ್ಥವಾದ, ಕಲ್ಮಶವಿಲ್ಲದ ಮಾತೆಯ ಮಮತೆಯನ್ನು ಎಲ್ಲರೂ ಕೊಂಡಾಡುತ್ತಾರೆ. ಶುದ್ಧವಾದ ಪ್ರೀತಿ ವ್ಯಕ್ತಿಯ ಅಂದ ಚಂದಗಳನ್ನು ನೋಡದೆ ತನ್ನ ಎದುರಿರುವ ವ್ಯಕ್ತಿಯನ್ನು ಅವನಿರುವ ಹಾಗೆಯೇ ಅಂಗೀಕರಿಸುತ್ತದೆ.

ಮೇಲಿನ ದಶಗುಣಗಳನ್ನು ನಮ್ಮಲ್ಲಿ ನಾವು ಅಳವಡಿಸಿಕೊಳ್ಳುವ ಮೂಲಕ ನಮ್ಮಲ್ಲಿರುವ ಕೋಪ,ಅಸಹನೆ,ಉದ್ರೇಕ ಮುಂತಾದ ಗುಣಗಳನ್ನು ಕಳೆದುಕೊಂಡು ಪ್ರೀತಿ ವಿಶ್ವಾಸ ಭ್ರಾತೃತ್ವ, ಸಹನೆ, ಒಳ್ಳೆಯತನ ಮುಂತಾದ ಉನ್ನತ ಗುಣಗಳನ್ನು ಆವಾಹಿಸಿಕೊಳ್ಳುತ್ತಾ ವಿಶ್ವಮಾನವರಾಗುವ ಮೂಲಕ ರಾಷ್ಟ್ರಕವಿ ಕುವೆಂಪುರವರ ವಿಶ್ವಮಾನವ ಸಂದೇಶವನ್ನು ಜಗತ್ತಿನಲ್ಲಿ ಬಿತ್ತರಿಸೋಣ ಎಂಬ ಆಶಯದೊಂದಿಗೆ

Continue Reading

ಪ್ರಮುಖ ಸುದ್ದಿ

Terror Attack: ಕಂದಮ್ಮನನ್ನೂ ಕೊಂದ ಉಗ್ರರು; ಎದೆಗೆ ಗುಂಡು ಬಿದ್ದರೂ ಪ್ರಯಾಣಿಕರನ್ನು ಉಳಿಸಲು ಯತ್ನಿಸಿದ್ದ ಚಾಲಕ

Terror Attack: ಪೋನಿ ಪ್ರದೇಶದ ತೇರ್ಯತ್ ಗ್ರಾಮದ ಮೂಲಕ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್‌ ಚಾಲಕ ದಾಸನೂ ರಾಜ್‌ಬಾಗ್, ಭಯೋತ್ಪಾದಕರು ತನ್ನ ಮೇಲೆ ಬುಲೆಟ್‌ಗಳನ್ನು ಹಾರಿಸಿದಾಗ ಅಪಾರ ಧೈರ್ಯ ತಂದುಕೊಂಡು ಬಸ್ಸನ್ನು ವೇಗವಾಗಿ ಚಲಾಯಿಸಿ ಅಲ್ಲಿಂದ ಪಾರಾಗಲು ಯತ್ನಿಸಿದ.

VISTARANEWS.COM


on

reasi terror attack
Koo

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu & Kashmir) ರಿಯಾಸಿ ಜಿಲ್ಲೆಯಲ್ಲಿ ಭಾನುವಾರ ನಡೆದ ಭಯೋತ್ಪಾದಕರ ಗುಂಡಿನ ದಾಳಿಯ (Reasi terror Attack) ಸಂದರ್ಭದಲ್ಲಿ, ಪುಟ್ಟ ಕಂದಮ್ಮನೂ ಸೇರಿ 10 ಮಂದಿ ಸತ್ತಿದ್ದಾರೆ. ಕ್ರೂರಿ ಭಯೋತ್ಪಾದಕರು (Terrorists) ಪುಟ್ಟ ಮಗುವೆಂದೂ ನೋಡದೆ ಗುಂಡು ಹಾರಿಸಿ ಕೊಂದಿದ್ದಾರೆ. ಈ ನಡುವೆ, ಉಗ್ರರು ಮೈಕೈ ತುಂಬೆಲ್ಲಾ ಗುಂಡು (bullets) ಜಡಿದರೂ ಪ್ರಯಾಣಿಕರನ್ನು (tourists) ಉಳಿಸಲು ಚಾಲಕ (Bus driver) ಯತ್ನಿಸಿದ್ದಾನೆ ಎಂದು ಗೊತ್ತಾಗಿದೆ.

ಪೋನಿ ಪ್ರದೇಶದ ತೇರ್ಯತ್ ಗ್ರಾಮದ ಮೂಲಕ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್‌ ಚಾಲಕ ದಾಸನೂ ರಾಜ್‌ಬಾಗ್, ಭಯೋತ್ಪಾದಕರು ತನ್ನ ಮೇಲೆ ಬುಲೆಟ್‌ಗಳನ್ನು ಹಾರಿಸಿದಾಗ ಅಪಾರ ಧೈರ್ಯ ತಂದುಕೊಂಡು ಬಸ್ಸನ್ನು ವೇಗವಾಗಿ ಚಲಾಯಿಸಿ ಅಲ್ಲಿಂದ ಪಾರಾಗಲು ಯತ್ನಿಸಿದ. ಆದರೆ ಮೈಗೆ ಗುಂಡು ಬಿದ್ದ ಪರಿಣಾಮ ಬಸ್ ನಿಯಂತ್ರಣ ತಪ್ಪಿ ರಸ್ತೆಯಿಂದ ಆಳವಾದ ಕಮರಿಗೆ ಬಿತ್ತು. ಘಟನೆಯಲ್ಲಿ ಚಾಲಕನೂ ಮೃತಪಟ್ಟಿದ್ದಾನೆ.

ಚಾಲಕ ಮತ್ತು ಕಂಡಕ್ಟರ್ ಸೇರಿದಂತೆ ಹತ್ತು ಮಂದಿ ಈ ದಾಳಿಯಲ್ಲಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಂಡವು ಸ್ಥಳಕ್ಕೆ ತಲುಪಿ ಪೊಲೀಸರಿಗೆ ಸಹಾಯ ಮಾಡುತ್ತಿದೆ. ಭಾನುವಾರದ ದಾಳಿಯ ನಂತರ ಈ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಭಯೋತ್ಪಾದಕರನ್ನು ಹುಡುಕಲು ಭದ್ರತಾ ಪಡೆಗಳು ಡ್ರೋನ್‌ಗಳನ್ನು ಬಳಸುತ್ತಿವೆ.

ರಿಯಾಸಿ ದಾಳಿಯ ನಂತರ, ಭಾರತೀಯ ಸೇನೆಯ ಹತ್ತಿರದ ನೆಲೆಗಳಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಯಿತು. ಭದ್ರತಾ ಕ್ರಮಗಳನ್ನು ಬಲಪಡಿಸಲು ವಿವಿಧ ಸ್ಥಳಗಳಿಂದ ಪಡೆಗಳನ್ನು ಕಳುಹಿಸಲಾಗಿದೆ. ಸದ್ಯ ಉಗ್ರರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಭಾನುವಾರವೇ ತ್ವರಿತ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದ್ದು, ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ವೈದ್ಯಕೀಯ ಸೌಲಭ್ಯಗಳಿಗೆ ತ್ವರಿತವಾಗಿ ಸಾಗಿಸಲಾಯಿತು. ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಭದ್ರತಾ ಪಡೆಗಳು ಸೇರಿದಂತೆ ಸ್ಥಳೀಯ ಅಧಿಕಾರಿಗಳು ತಕ್ಷಣವೇ ಘಟನಾ ಸ್ಥಳಕ್ಕೆ ಧಾವಿಸಿದರು. ಪ್ರದೇಶವನ್ನು ಸುತ್ತುವರೆದು ತನಿಖೆ ಪ್ರಾರಂಭಿಸಿದರು.

“ಶಿವ್ ಖೋರಿಯಿಂದ ಕತ್ರಾಗೆ ಹೋಗುತ್ತಿದ್ದ ಪ್ರಯಾಣಿಕರ ಬಸ್‌ನ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಯಿಂದಾಗಿ ಬಸ್ ಚಾಲಕನ ಸಮತೋಲನ ತಪ್ಪಿ ಬಸ್ ಕಂದಕಕ್ಕೆ ಬಿದ್ದಿದೆ. ಘಟನೆಯಲ್ಲಿ 33 ಮಂದಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ. ಪ್ರಯಾಣಿಕರ ಗುರುತು ಇನ್ನೂ ದೃಢಪಟ್ಟಿಲ್ಲ. ಅವರು ಸ್ಥಳೀಯರಲ್ಲ. ಶಿವ ಖೋರಿ ದೇವಾಲಯವನ್ನು ಭದ್ರಪಡಿಸಲಾಗಿದೆ” ಎಂದು ರಿಯಾಸಿಯ ಎಸ್‌ಎಸ್‌ಪಿ ಮೋಹಿತಾ ಶರ್ಮಾ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಪರಿಸ್ಥಿತಿಯನ್ನು ಅವಲೋಕಿಸಿದ್ದು, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಅವರನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವಂತೆ ಕೇಳಿಕೊಂಡಿದ್ದಾರೆ. “ರಿಯಾಸಿಯಲ್ಲಿ ಯಾತ್ರಾರ್ಥಿಗಳ ಮೇಲೆ ನಡೆದ ದಾಳಿಯ ಘಟನೆಯಿಂದ ಆಳವಾದ ನೋವಾಗಿದೆ. ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮತ್ತು ಡಿಜಿಪಿ ಜೊತೆ ಘಟನೆಯ ಬಗ್ಗೆ ವಿಚಾರಿಸಿದ್ದೇನೆ. ಈ ಭೀಕರ ದಾಳಿಯ ಅಪರಾಧಿಗಳನ್ನು ಬಿಡಲಾಗುವುದಿಲ್ಲ. ದಾಳಿಕೋರರು ಕಾನೂನಿನ ಕ್ರಮವನ್ನು ಎದುರಿಸಬೇಕಾಗುತ್ತದೆ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಎಕ್ಸ್‌ನಲ್ಲಿ ಹೇಳಿದ್ದಾರೆ.

“ಜಮ್ಮು ಮತ್ತು ಕಾಶ್ಮೀರದ ರಿಯಾಸಿಯಲ್ಲಿ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ನಡೆದ ದಾಳಿ ಅತ್ಯಂತ ಖಂಡನೀಯ” ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಎಲ್ಲಾ ಕುಟುಂಬಗಳಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಘಟನೆಯನ್ನು ‘ಹೇಡಿತನ’ ಎಂದು ಕರೆದಿರುವ ಅವರು, ಜಮ್ಮು ಮತ್ತು ಕಾಶ್ಮೀರದ ಆತಂಕಕಾರಿ ಭದ್ರತಾ ಪರಿಸ್ಥಿತಿಯ ನೈಜ ಚಿತ್ರಣವನ್ನು ಈ ಘಟನೆ ತೆರೆದಿಡುತ್ತದೆ ಎಂದು ಹೇಳಿದ್ದಾರೆ. ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಭೀಕರ ಭಯೋತ್ಪಾದಕ ದಾಳಿಯನ್ನು ಖಂಡಿಸಿದ್ದಾರೆ.

ಇದನ್ನೂ ಓದಿ: Terror Attack: ಕಾಶ್ಮೀರದಲ್ಲಿ ಹಿಂದೂ ಯಾತ್ರಿಗಳಿದ್ದ ಬಸ್‌ ಮೇಲೆ ಉಗ್ರರ ದಾಳಿ; 10 ಸಾವು

Continue Reading

Latest

T20 World Cup : ಪಾಕಿಸ್ತಾನಕ್ಕೆ ಸಂಕಷ್ಟ ತಂದಿಟ್ಟ ಭಾರತ; ಸೂಪರ್ 8 ಹಂತ ಪ್ರವೇಶವೂ ಕಷ್ಟ!

T20 World Cup : ಸದ್ಯದ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾ ಆಡಿರುವ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ನಾಲ್ಕು ಅಂಕಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ. ಇದು ಅವರ ನೆಟ್ ರನ್ ರೇಟ್ (ಎನ್ಆರ್ಆರ್) ಅನ್ನು +1.455 ಕ್ಕೆ ಹೆಚ್ಚಿಸಿದೆ. ಭಾರತದಷ್ಟೇ ಅಂಕ ಹೊಂದಿರುವ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ (ಯುಎಸ್ಎ) ನಂತರದ ಸ್ಥಾನದಲ್ಲಿದೆ.

VISTARANEWS.COM


on

T20 World Cup
Koo

ನ್ಯೂಯಾರ್ಕ್​: ಇಲ್ಲಿ ಭಾನುವಾರ ರಾತ್ರಿ ನಡೆದ ಟಿ 20 ವಿಶ್ವಕಪ್ 2024ರ (T20 World Cup) 19 ನೇ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಪಾಕಿಸ್ತಾನ (Pakistan Cricket Team) ಮುಖಾಮುಖಿಯಾದಾಗ ಟೂರ್ನಿಯ ಕೇಂದ್ರ ಬಿಂದು ಎಂದು ಹೇಳಲಾಯಿತು. ಅದು ಸಾಕ್ಷಿ ಸಮೇತ ಸಾಬೀತು ಕೂಡ ಆಗಿದೆ. ಟಾಸ್ ಗೆದ್ದ ನಂತರ ನಾಯಕ ಬಾಬರ್ ಅಜಮ್ ಭಾರತ ತಂಡಕ್ಕೆ ಬ್ಯಾಟ್ ಮಾಡಲು ಆಹ್ವಾನ ಕೊಟ್ಟರು. ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಬೇಗ ಔಟಾದಾಗ ಇದು ಸರಿ ಎನಿಸಿತು. ಆದರೆ, ಸಿಕ್ಕ ಅವಕಾಶವನ್ನು ಕಳೆದುಕೊಂಡ ಪಾಕಿಸ್ತಾನ ತಂಡ ಕೊನೆಯಲ್ಲಿ 6 ರನ್​ಗಳಿಂದ ಸೋತಿತು. ಈ ಮೂಲಕ ಪರಿತಪಿಸಲು ಆರಂಭಿಸಿದೆ. ಭಾರತ ತಂಡದ ಪಾಕಿಸ್ತಾನದ ಸೂಪರ್-8 ಹಂತದ ಪ್ರವೇಶಕ್ಕೆ ಮುಳ್ಳಾಗಿದೆ.

ಪಂದ್ಯದಲ್ಲಿ ಭಾರತ ಪರ ಯುವ ಬ್ಯಾಟರ್​ ರಿಷಭ್ ಪಂತ್ 41 ರನ್ ಬಾರಿಸಿದರು. ಅವರ ರನ್​ ಭಾರತ ಪರ ಗರಿಷ್ಠ ಸ್ಕೋರ್. ಆದರೆ ನಸೀಮ್ ಶಾ ಮತ್ತು ಮೊಹಮ್ಮದ್ ಅಮೀರ್ ಅವರ ಬೌಲಿಂಗ್ ಸ್ಪೆಲ್​ಗಳು ಭಾರತದ ಬ್ಯಾಟಿಂಗ್ ಘಟಕವನ್ನು ಧೂಳಿಪಟ ಮಾಡಿದರು. ಒಂದು ಬಾರಿ ಕುಸಿದ ಭಾರತ ಚೇತರಿಸಿಕೊಳ್ಳಲೇ ಇಲ್ಲ. ಅಂತಿಮವಾಗಿ 18.3 ಓವರ್​ಗಳಲ್ಲಿ 119 ರನ್​ಗಳಿಗೆ ಆಲ್​ಔಟ್ ಆಯಿತು.

ಉತ್ತರವಾಗಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಎಚ್ಚರಿಕೆಯಿಂದ ಇನಿಂಗ್ಸ್​​ ಪ್ರಾರಂಭಿಸಿದರು. ಆದರೆ ಶೀಘ್ರದಲ್ಲೇ ಜಸ್ಪ್ರೀತ್ ಬುಮ್ರಾ ಭಾರತಕ್ಕೆ ಪ್ರಗತಿ ತಂದುಕೊಟ್ಟರು. ಆದಾಗ್ಯೂ, ರಿಜ್ವಾನ್ ತಳವೂರಿ ಆಡಿ ಸ್ಕೋರ್ ಬೋರ್ಡ್ ಹಿಗ್ಗಿಸಲು ಯತ್ನಿಸಿದರು. ಆದರೆ ಮೊಹಮ್ಮದ್ ಸಿರಾಜ್ ಮತ್ತು ನಂತರ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಅವರ ಕೆಲವು ಬಿಗಿಯಾದ ಸ್ಪೆಲ್​ಗಳು ಪಾಕಿಸ್ತಾನಕ್ಕೆ ರನ್​ ಗಳಿಸಲು ಕೊಂಚವೂ ಅವಕಾಶ ಕೊಡಲಿಲ್ಲ. ನಂತರ, ಬುಮ್ರಾ 19 ನೇ ಓವರ್​ನಲ್ಲಿ ವಿಕೆಟ್ ಪಡೆಯುವ ಮೂಲಕ ಪಂದ್ಯವನ್ನು ಭಾರತ ತಂಡ ಪರ ತಿರುಗಿಸಿದರು. ಅಲ್ಲದೆ ಮತ್ತೊಮ್ಮೆ ತಾವು ಮ್ಯಾಚ್ ವಿನ್ನರ್ ಎಂಬುದನ್ನು ಸಾಬೀತುಪಡಿಸಿದರು.

ಸದ್ಯದ ಪರಿಸ್ಥಿತಿಯಲ್ಲಿ ಟೀಮ್ ಇಂಡಿಯಾ ಆಡಿರುವ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ನಾಲ್ಕು ಅಂಕಗಳೊಂದಿಗೆ ಎ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ. ಇದು ಅವರ ನೆಟ್ ರನ್ ರೇಟ್ (ಎನ್ಆರ್ಆರ್) ಅನ್ನು +1.455 ಕ್ಕೆ ಹೆಚ್ಚಿಸಿದೆ. ಭಾರತದಷ್ಟೇ ಅಂಕ ಹೊಂದಿರುವ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ (ಯುಎಸ್ಎ) ನಂತರದ ಸ್ಥಾನದಲ್ಲಿದೆ. ಅವರ ನೆಟ್ ರನ್ ರೇಟ್ ಪ್ರಸ್ತುತ +0.626 ಆಗಿದೆ. ಇದಲ್ಲದೆ, ಆರಂಭಿಕ ಪಂದ್ಯದಲ್ಲಿ ಯುಎಸ್ಎ ವಿರುದ್ಧ ಸೋತ ನಂತರ ಐರ್ಲೆಂಡ್ ಅನ್ನು ಸೋಲಿಸಿದ ಕೆನಡಾ ಮೂರನೇ ಸ್ಥಾನದಲ್ಲಿದೆ. ಪಾಕಿಸ್ತಾನ ಮತ್ತು ಐರ್ಲೆಂಡ್ ಪ್ರಸ್ತುತ ನಾಲ್ಕು ಮತ್ತು ಐದನೇ ಸ್ಥಾನಗಳಲ್ಲಿವೆ. ಪಾಕ್​ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಇನ್ನೂ ಖಾತೆ ತೆರೆದಿಲ್ಲ. ಹೀಗಾಗಿ ಸೂಪರ್ 8 ರೌಂಡ್ ಅರ್ಹತೆಯ ಬೇಟೆಯಲ್ಲಿ ಆ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ.

ಪಾಕಿಸ್ತಾನದ ಪರಿಸ್ಥಿತಿ ಏನು?

ಮುಂದಿನ ಪಂದ್ಯಗಳಲ್ಲಿ ನೆಟ್ ರನ್ ರೇಟ್ (ಎನ್ಆರ್​ಆರ್​) ವಿಷಯದಲ್ಲಿ ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡುವುದರ ಜೊತೆಗೆ ಪಾಕಿಸ್ತಾನ ತಂಡವು ಈಗ ಇತರ ತಂಡಗಳನ್ನು ಅವಲಂಬಿಸಬೇಕಾಗಿದೆ. ಸೂಪರ್ 8 ಹಂತಕ್ಕೆ ಅರ್ಹತೆ ಪಡೆಯಲು ಪಾಕ್​ ಮೊದಲು ಗ್ರೂಪ್ ಹಂತದ ಉಳಿದ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಇದೇ ವೇಳೆ ಅಮೆರಿಕ ಮತ್ತು ಐರ್ಲೆಂಡ್​​ ಭಾರತ ವಿರುದ್ಧ ಸೋಲಲೇಬೇಕು. ಹಾಗಾದರೆ ಮಾತ್ರ ಯುಎಸ್ಎ ತಂಡ ಆರು ಅಂಕಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿ:IND vs PAK : ಪಾಕಿಸ್ತಾನದ ಬೌಲರ್​ ವಿರುದ್ಧ ವಿಶೇಷ ದಾಖಲೆ ಮಾಡಿದ ರೋಹಿತ್ ಶರ್ಮಾ

ಕುತೂಹಲಕಾರಿ ಸಂಗತಿಯೆಂದರೆ, ಐರ್ಲೆಂಡ್ ಯುಎಸ್ಎ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾದರೆ, ಇದು ಪಾಕಿಸ್ತಾನಕ್ಕೆ ಅವಕಾಶ ಕೊಡಲಿದೆ. ತಮ್ಮ ಉಳಿದ ಪಂದ್ಯಗಳನ್ನು ದೊಡ್ಡ ಅಂತರದಿಂದ ಗೆದ್ದು ಮತ್ತು ಭಾರತ ಅಥವಾ ಯುಎಸ್ಎಗಿಂತ ಉತ್ತಮ ರನ್ ರೇಟ್ ಹೊಂದಿದರೆ ಟಿ 20 ವಿಶ್ವಕಪ್ 2024 ರ ಸೂಪರ್ 8 ಸುತ್ತಿಗೆ ಪ್ರವೇಶಿಸಬಹುದು. ಇಲ್ಲದಿದ್ದರೆ ಪಾಕಿಸ್ತಾನ ಗುಂಪು ಹಂತದಿಂದಲೇ ಹೊರಕ್ಕೆ ಹೋಗುವುದು ಖಚಿತ.

ಟೀಮ್ ಇಂಡಿಯಾದ ಹೇಳುವುದಾದರೆ ಈಗಾಗಲೇ ಮುಂಚೂಣಿ ಸ್ಥಾನ ಪಡೆದುಕೊಂಡಿದೆ. ಗುಂಪಿನ ಅಗ್ರಸ್ಥಾನಿಗಳಾಗಿ ಉಳಿಯಲು ಇನ್ನೂ ಒಂದು ಪಂದ್ಯ ಗೆಲ್ಲಬೇಕು. ಆದ್ದರಿಂದ ಜೂನ್ 12 ರಂದು ಯುಎಸ್ಎ ವಿರುದ್ಧ ಗೆದ್ದರೆ ಸಾಕು. ಭಾರತಕ್ಕೆ ಕೆನಡಾ ವಿರುದ್ಧ ಇನ್ನೊಂದು ಪಂದ್ಯವಿದೆ. ಆದಾಗ್ಯೂ ಅಮೆರಿಕ ಮಣಿಸಿದರೆ ಸೂಪರ್8 ಸ್ಥಾನ ಖಾತರಿ.

Continue Reading

ಪ್ರಮುಖ ಸುದ್ದಿ

IND vs PAK : ಪಾಕಿಸ್ತಾನದ ಬೌಲರ್​ ವಿರುದ್ಧ ವಿಶೇಷ ದಾಖಲೆ ಮಾಡಿದ ರೋಹಿತ್ ಶರ್ಮಾ

IND vs PAK : ರೋಹಿತ್ ಶರ್ಮಾ ಓವರ್​ನ ಮೊದಲ ಎಸೆತದಲ್ಲಿ 2 ರನ್ ಗಳಿಸಿದರು ಮತ್ತು ನಂತರ ಅವರು ಹಿಂತಿರುಗಿ ನೋಡಲಿಲ್ಲ. ಓವರ್​ನ ಮೂರನೇ ಎಸೆತದಲ್ಲಿ ಎಡಗೈ ವೇಗಿ ಅಫ್ರಿದಿಗೆ ಅದ್ಭುತ ಸಿಕ್ಸರ್ ಬಾರಿಸಿದರು. ಇದು ಈ ಪಂದ್ಯದ ಅದ್ಭುತ ಸಿಕ್ಸರ್​. ಶಾಹಿನ್ ಅಫ್ರಿದಿ ಫುಲ್ ಲೆಂತ್ ಎಸೆತವನ್ನು ಎಸೆದಿದ್ದರು. ಅದು ರೋಹಿತ್​ ಪ್ಯಾಡ್​ಗಳಿಗೆ ಬಡಿಯಬೇಕಿತ್ತು. ಆದರೆ ಫ್ಲಿಕ್ ಮಾಡಿದ ರೋಹಿತ್ ಸಿಕ್ಸರ್ ಬಾರಿಸಿದರು.

VISTARANEWS.COM


on

IND vs PAK
Koo

ಬೆಂಗಳೂರು: ಪಾಕಿಸ್ತಾನ ವಿರುದ್ಧ ಪಂದ್ಯವನ್ನು (IND vs PAK) ಗೆದ್ದ ನಂತರ ಭಾರತ ಕ್ರಿಕೆಟ್​ ತಂಡದ ಅಭಿಮಾನಿಗಳು ತುಂಬಾ ಖುಷಿಯಲ್ಲಿದ್ದಾರೆ. ಯಾಕೆಂದರೆ ಟಿ20 ವಿಶ್ವ ಕಪ್​ನಲ್ಲಿ(T20 World Cup) ಭಾರತ ತಂಡದ ಪಾರಮ್ಯ 8-1 ಕ್ಕೆ ಮುನ್ನಡೆದಿದೆ. ಆದಾಗ್ಯೂ ಭಾರತ ತಂಡದ ಬ್ಯಾಟಿಂಗ್ ಪ್ರದರ್ಶನದ ಮೇಲೆ ಕಟ್ಟರ್ ಅಭಿಮಾನಿಗಳಿಗೆ ಕೋಪವಿದೆ. ಆದರೆ, ಬೌಲರ್​ಗಳು ತಂಡವನ್ನು ರಕ್ಷಿಸಿರುವ ಪರಿಗೆ ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ. ನಾಯಕ ರೋಹಿತ್ ಶರ್ಮಾ(Rohit Sharma) , ವಿರಾಟ್ ಕೊಹ್ಲಿಯಂಥ ವಿಶ್ವ ದರ್ಜೆಯ ಬ್ಯಾಟರ್​ಗಳ ಬಗ್ಗೆ ಪ್ರಶ್ನಿಸಲು ಆರಂಭಿಸಿದ್ದಾರೆ. ಇವೆಲ್ಲದರ ನಡುವೆಯೂ ನಾಯಕ ರೋಹಿತ್​ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಪರೂಪದ ಸಾಧನೆಯೊಂದನ್ನು ಮಾಡಿದ್ದಾರೆ.

ಪಂದ್ಯದಲ್ಲಿ ಟಾಸ್ ಗೆದ್ದ ಪಾಕ್ ನಾಯಕ ಬಾಬರ್​ ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಭಾರತ ಉತ್ತಮ ಆರಂಭವನ್ನು ಪಡೆಯಿತು. ನಾಯಕ ರೋಹಿತ್ ಶರ್ಮಾ ಎಡಗೈ ವೇಗಿ ಶಾಹೀನ್ ಅಫ್ರಿದಿ ವಿರುದ್ಧ ಅಬ್ಬರಿಸಿದರು. ಆದರೆ 13 ರನ್ ಗೆ ಸೀಮಿತಗೊಂಡರು. ಅದಕ್ಕಿಂತ ಮೊದಲು ಅವರು ಇನಿಂಗ್ಸ್​​ನ ಮೊದಲ ಓವರ್​ನಲ್ಲಿಯೇ ಅದ್ಭುತ ಸಿಕ್ಸರ್ ಒಂದನ್ನು ಬಾರಿಸಿದ್ದರು. ಇದು ಅಲ್ಲಿನ ಅಭಿಮಾನಿಗಳ ಕಣ್ಮನ ಸೆಳೆಯಿತು.

ರೋಹಿತ್ ಶರ್ಮಾ ಓವರ್​ನ ಮೊದಲ ಎಸೆತದಲ್ಲಿ 2 ರನ್ ಗಳಿಸಿದರು ಮತ್ತು ನಂತರ ಅವರು ಹಿಂತಿರುಗಿ ನೋಡಲಿಲ್ಲ. ಓವರ್​ನ ಮೂರನೇ ಎಸೆತದಲ್ಲಿ ಎಡಗೈ ವೇಗಿ ಅಫ್ರಿದಿಗೆ ಅದ್ಭುತ ಸಿಕ್ಸರ್ ಬಾರಿಸಿದರು. ಇದು ಈ ಪಂದ್ಯದ ಅದ್ಭುತ ಸಿಕ್ಸರ್​. ಶಾಹಿನ್ ಅಫ್ರಿದಿ ಫುಲ್ ಲೆಂತ್ ಎಸೆತವನ್ನು ಎಸೆದಿದ್ದರು. ಅದು ರೋಹಿತ್​ ಪ್ಯಾಡ್​ಗಳಿಗೆ ಬಡಿಯಬೇಕಿತ್ತು. ಆದರೆ ಫ್ಲಿಕ್ ಮಾಡಿದ ರೋಹಿತ್ ಸಿಕ್ಸರ್ ಬಾರಿಸಿದರು.

ಶಾಹೀನ್ ಅಫ್ರಿದಿ ವಿರುದ್ಧದ ಮೊದಲ ಓವರ್​ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ರೋಹಿತ್ ಶರ್ಮಾ ಇತ್ತಂಡಗಳ ಮುಖಾಮುಖಿ ಇತಿಹಾಸದಲ್ಲಿ ಪಾಕಿಸ್ತಾನದ ಎಡಗೈ ವೇಗಿ ಶಾಹೀನ್ ಅಫ್ರಿದಿ ವಿರುದ್ಧ ವಿಶೇಷ ದಾಖಲೆ ಬರೆದರು. ಎಡಗೈ ವೇಗಿ ವಿರುದ್ಧ ಇನ್ನಿಂಗ್ಸ್​​ನ ಮೊದಲ ಓವರ್​ನಲ್ಲಿ ಎರಡು ಸಿಕ್ಸರ್​ ಬಾರಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರೋಹಿತ್​ ಏಕದಿನ ಮಾದರಿಯಲ್ಲೂ ಅದೇ ದಾಖಲೆಯನ್ನು ಹೊಂದಿದ್ದಾರೆ.

ಇದನ್ನೂ ಓದಿ: IND vs PAK : ಭಾರತ ಪರ ಬೆಟ್ಟಿಂಗ್ ಕಟ್ಟಿ 5.4 ಕೋಟಿ ರೂಪಾಯಿ ಗೆದ್ದ ಕೆನಡಾದ ರ್ಯಾಪರ್ ಡ್ರೇಕ್!

ಶ್ರೀಲಂಕಾದಲ್ಲಿ ನಡೆದ ಏಷ್ಯಾ ಕಪ್ 2023 ರ ಸೂಪರ್ ಫೋರ್ ಪಂದ್ಯದಲ್ಲಿ ರೋಹಿತ್ ಶರ್ಮಾ ಏಕದಿನ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ರೋಹಿತ್ ಅಲ್ಲಿಯೂ ಇದೇ ರೀತಿಯ ಸಿಕ್ಸರ್ ಅನ್ನು ಹೊಡೆದಿದ್ದರು.

ಗೆಲುವು ತಂದುಕೊಟ್ಟ ಬೌಲರ್​ಗಳು

ಜಸ್ಪ್ರೀತ್ ಬುಮ್ರಾ ನೇತೃತ್ವದ ಭಾರತೀಯ ಬೌಲಿಂಗ್ ವಿಭಾಗ ಬ್ಯಾಟರ್​ಗಳು ಪೇರಿಸಿದ್ದ 119 ರನ್​ಗಳ ಸಾಧಾರಣ ಮೊತ್ತವನ್ನು ಯಶಸ್ವಿಯಾಗಿ ರಕ್ಷಿಸಿತು ಈ ಭಾರೀ ಜಿದ್ದಾಜಿದ್ದಿನ ಹೋರಾಟಕ್ಕೆ 34,000 ಕ್ಕೂ ಹೆಚ್ಚು ಅಭಿಮಾನಿಗಳು ಸಾಕ್ಷಿಯಾಗಿದ್ದರು. ಬುಮ್ರಾ ಅವರ ಅಸಾಧಾರಣ ಪ್ರದರ್ಶನವು ಪಾಕಿಸ್ತಾನ ವಿರುದ್ಧದ ಭಾರತದ ಗೆಲುವಿನಲ್ಲಿ ನಿರ್ಣಾಯಕ ಅಂಶವೆಂದು ಸಾಬೀತಾಗಿದೆ. ಯಾಕೆಂದರೆ ಈ ಹಂತದಲ್ಲಿ ಪಾಕಿಸ್ತಾನದ ಗೆಲುವಿನ ನಿರೀಕ್ಷೆ ಶೇಕಡಾ 92 ರಷ್ಟು ಇದ್ದರೆ, ಭಾರತದ್ದು ಕೇವಲ 8% ಇತ್ತು. ಆದರೆ, ಫಲಿತಾಂಶ ಮಾತ್ರ ಉಲ್ಟಾ ಆಯಿತು. ವಿಶ್ವ ವೇದಿಕೆಯಲ್ಲಿ ನಾವೇ ಬಾಸ್​ ಎಂಬುದನ್ನು ಭಾರತ ಮತ್ತೊಂದು ಬಾರಿ ಸಾಕ್ಷಿ ಸಮೇತ ತೋರಿಸಿತು.

ಭಾರತವು 119 ರನ್​ಗಳ ಸಾಧಾರಣ ಮೊತ್ತವನ್ನು ರಕ್ಷಿಸಿದಾಗ, ಅವರ ಪ್ರತಿಭೆ ಅನಾವರಣಗೊಂಡಿತು. 3 ವಿಕೆಟ್​ಗೆ 80 ರನ್ ಗಳಿಸಿದ್ದ ಪಾಕಿಸ್ತಾನವು ಅಂತಿಮವಾಗಿ 113 ರನ್​ಗೆ ಸೀಮಿತಗೊಂಡಿದ್ದು ಭಾರತ ತಂಡದ ಸಾಮರ್ಥ್ಯಕ್ಕೆ ಸಾಕ್ಷಿ. ಈ ಪ್ರದರ್ಶನವು ಬುಮ್ರಾ ಅವರ ಶ್ರೇಷ್ಠ ವೃತ್ತಿಜೀವನದಲ್ಲಿ ಸ್ಮರಣೀಯ ಎನಿಸಿಕೊಳ್ಳಲಿದೆ. ಪಾಕ್​ ತಂಡದ ರನ್​ ಎಚ್ಚರಿಕೆಯಿಂದ ಪ್ರಾರಂಭವಾಗಿತ್ತು. ಮೊಹಮ್ಮದ್ ರಿಜ್ವಾನ್ 31 ರನ್ ಗಳಿಸಿ ಇನ್ನಿಂಗ್ಸ್ ಗೆ ಭದ್ರ ಬುನಾದಿ ಹಾಕಿದ್ದರು. ಆದಾಗ್ಯೂ, ನಿಯಮಿತವಾಗಿ ವಿಕೆಟ್​ಗಳು ಕಳೆದುಕೊಂಡ ಕಾರಣ ಪಾಕಿಸ್ತಾನದ ವೇಗಕ್ಕೆ ಅಡ್ಡಿಯಾಯಿತು.

Continue Reading
Advertisement
Anirudh Jatkar again rise on voice jote joteyali serial issue
ಸ್ಯಾಂಡಲ್ ವುಡ್8 mins ago

Anirudh Jatkar: ʻಜೊತೆ ಜೊತೆಯಲಿ’ ಧಾರಾವಾಹಿಯ ವಿವಾದದ ಬಗ್ಗೆ ಬೇಸರ ಹೊರ ಹಾಕಿದ ಅನಿರುದ್ಧ್!

NEET UG
ಪ್ರೇಮಿಗಳ ದಿನಾಚರಣೆ21 mins ago

NEET UG : ನೀಟ್-ಯುಜಿ ಫಲಿತಾಂಶ ಹಿಂಪಡೆಯಲು ಕೋರಿ ಸುಪ್ರೀಂ ಕೋರ್ಟ್​​ಗೆ ಅರ್ಜಿ

Personality Development
ಪ್ರಮುಖ ಸುದ್ದಿ23 mins ago

Personality Development: ಈ 10 ಸೂತ್ರ ಪಾಲಿಸಿದರೆ ನೆಮ್ಮದಿಯ ಬದುಕು ಗ್ಯಾರಂಟಿ!

reasi terror attack
ಪ್ರಮುಖ ಸುದ್ದಿ48 mins ago

Terror Attack: ಕಂದಮ್ಮನನ್ನೂ ಕೊಂದ ಉಗ್ರರು; ಎದೆಗೆ ಗುಂಡು ಬಿದ್ದರೂ ಪ್ರಯಾಣಿಕರನ್ನು ಉಳಿಸಲು ಯತ್ನಿಸಿದ್ದ ಚಾಲಕ

T20 World Cup
Latest1 hour ago

T20 World Cup : ಪಾಕಿಸ್ತಾನಕ್ಕೆ ಸಂಕಷ್ಟ ತಂದಿಟ್ಟ ಭಾರತ; ಸೂಪರ್ 8 ಹಂತ ಪ್ರವೇಶವೂ ಕಷ್ಟ!

Kangana Ranaut Looks Gorgeous In A White Saree
ಬಾಲಿವುಡ್1 hour ago

Kangana Ranaut: ಪ್ರಮಾಣ ವಚನ ಸಮಾರಂಭದಲ್ಲಿ ಬಿಳಿ ಸೀರೆಯಲ್ಲಿ ಮಿಂಚಿದ ಕಂಗನಾ!

IND vs PAK
ಪ್ರಮುಖ ಸುದ್ದಿ2 hours ago

IND vs PAK : ಪಾಕಿಸ್ತಾನದ ಬೌಲರ್​ ವಿರುದ್ಧ ವಿಶೇಷ ದಾಖಲೆ ಮಾಡಿದ ರೋಹಿತ್ ಶರ್ಮಾ

IND vs PAK
ಕ್ರೀಡೆ2 hours ago

IND vs PAK : ಭಾರತಕ್ಕೆ ಗೆಲುವಿನ ಚಾನ್ಸ್ ಕೇವಲ ಶೇ. 8, ಪಾಕ್ ಗೆ ಶೇ.92 ಇತ್ತು; ಆದರೆ…

Poonam Pandey making cake with ice cream with hot look
ಬಾಲಿವುಡ್2 hours ago

Poonam Pandey: ಪೂನಂ ಪಾಂಡೆಯ ರೆಸಿಪಿಗಿಂತ ಏಪ್ರನ್ ಮೇಲೆ ನೆಟ್ಟಿಗರ ಕಣ್ಣು; ರಸಿಕರ ಕಣ್ಣರಳಿಸಿದ ಹಾಟ್‌ ಬೆಡಗಿ!

Vastu Tips
ಧಾರ್ಮಿಕ2 hours ago

Vastu Tips: ನೆಮ್ಮದಿಯಿಂದ ನಿದ್ದೆ ಮಾಡಬೇಕೆ? ಈ ವಾಸ್ತು ನಿಯಮ ಪಾಲಿಸಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ3 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ3 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ6 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ7 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ7 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 weeks ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌