₹ 2000 Notes Withdrawn: ನೋಟ್‌ ವಾಪಸ್‌ ಉತ್ತಮ ನಡೆಯೆ? ಮಾಜಿ ಸಿಇಎ ನೀಡಿದ 6 ಕಾರಣ ಇಲ್ಲಿದೆ - Vistara News

ದೇಶ

₹ 2000 Notes Withdrawn: ನೋಟ್‌ ವಾಪಸ್‌ ಉತ್ತಮ ನಡೆಯೆ? ಮಾಜಿ ಸಿಇಎ ನೀಡಿದ 6 ಕಾರಣ ಇಲ್ಲಿದೆ

2018ರಿಂದ 2021ರವರೆಗೆ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಡಾ.ಕೃಷ್ಣಮೂರ್ತಿ ಸುಬ್ರಮಣಿಯನ್, ಆರ್‌ಬಿಐನ ಇತ್ತೀಚಿನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

VISTARANEWS.COM


on

krishnamurthy subramanian
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸದಿಲ್ಲಿ: ₹ 2,000 ನೋಟುಗಳನ್ನು ಹಿಂತೆಗೆದುಕೊಳ್ಳುವ ಕ್ರಮ ಉತ್ತಮ ನಡೆ ಎಂದು ಒಟ್ಟಾರೆ ಉತ್ತಮವಾಗಿದೆ ಎಂದು ಮಾಜಿ ಸಿಇಎ ಡಾ ಕೃಷ್ಣಮೂರ್ತಿ ಸುಬ್ರಮಣಿಯನ್ ಹೇಳಿದ್ದಾರೆ.

2018ರಿಂದ 2021ರವರೆಗೆ ಮುಖ್ಯ ಆರ್ಥಿಕ ಸಲಹೆಗಾರರಾಗಿದ್ದ ಡಾ.ಕೃಷ್ಣಮೂರ್ತಿ ಸುಬ್ರಮಣಿಯನ್, ಆರ್‌ಬಿಐನ ಇತ್ತೀಚಿನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಉಪಕ್ರಮ ಯಾಕೆ ಉತ್ತಮ ಎಂಬುದಕ್ಕೆ ಕೆಲವು ಕಾರಣಗಳನ್ನು ನೀಡಿದ್ದಾರೆ. 2016ರ ನವೆಂಬರ್‌ನಲ್ಲಿ ₹ 500 ಮತ್ತು 1,000ರ ಹಳೆಯ ನೋಟುಗಳನ್ನು ನಿಷೇಧಿಸಿದಾಗ ₹ 2,000 ನೋಟುಗಳನ್ನು ಪರಿಚಯಿಸಲಾಗಿತ್ತು.

  1. ಒಂದನೆಯದಾಗಿ, ಬಹುತೇಕ ಕಡೆ ನಡೆದ ಐಡಿ, ಇಡಿ ದಾಳಿಗಳಲ್ಲಿ ₹ 2000 ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಮುಖಬೆಲೆಯನ್ನು ಮುಖ್ಯವಾಗಿ ಹಣ ಸಂಗ್ರಹಿಸಿಡಲು ಬಳಸಲಾಗುತ್ತಿದೆ. 80-20ರ ನಿಯಮದಂತೆ, 80% ಜನರು ಈ ಹಣವನ್ನು ಕಾನೂನುಬದ್ಧವಾಗಿ ₹ 2000 ನೋಟುಗಳಲ್ಲಿ ಸಂಗ್ರಹಿಸುತ್ತಿರಬಹುದಾಗಿದ್ದರೂ, ಅವರು ಒಟ್ಟಾರೆ ಮೌಲ್ಯದ 20%ರಷ್ಟು ಮಾತ್ರ ಸಂಗ್ರಹಿಸುವ ಸಾಧ್ಯತೆಯಿದೆ. ಇನ್ನುಳಿದ 20% ಮಂದಿ, 80%ರಷ್ಟು ₹ 2000 ನೋಟುಗಳನ್ನು (ಅಂದರೆ ಸುಮಾರು 3 ಲಕ್ಷ ಕೋಟಿ) ಹೊಂದಿರಬಹುದು.
  2. ಆರ್ಥಿಕ ವಹಿವಾಟುಗಳಿಗೆ ₹ 2,000 ನೋಟುಗಳು ಭಾರೀ ಸಂಖ್ಯೆಯಲ್ಲಿ ಬಳಕೆಯಾಗುತ್ತಿಲ್ಲವಾದ್ದರಿಂದ ಈ ನೋಟುಗಳ ಹಿಂತೆಗೆತ ಸಾಮಾನ್ಯ ಜನರಿಗೆ ಅನನುಕೂಲವಾಗುವುದಿಲ್ಲ.
  3. ಡಿಜಿಟಲ್ ಪಾವತಿಗಳನ್ನು ಬೃಹತ್ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಹೀಗಾಗಿ ಭೌತಿಕ ಕರೆನ್ಸಿ ನೋಟುಗಳ ಪಾತ್ರ, ವಿಶೇಷವಾಗಿ ₹ 2,000 ನೋಟುಗಳ ಚಲಾವಣೆ ಇಳಿದಿದೆ.
  4. ₹ 500 ನೋಟುಗಳನ್ನು ವಿನಿಮಯದ ಮಾಧ್ಯಮವಾಗಿ ₹ 2000 ನೋಟಿನ ಬದಲು ಸಮರ್ಥವಾಗಿ ಬಳಸಬಹುದಾಗಿದೆ.
  5. ಡಿಜಿಟಲ್ ವಹಿವಾಟುಗಳು ಈಗಿನಿಂದ 2026ರವರೆಗೆ ಮೂರು ಪಟ್ಟು ಆಗುವ ನಿರೀಕ್ಷೆಯಿದೆ. ಇದು ಮುಂಬರುವ ವರ್ಷಗಳಲ್ಲಿ ₹ 2000 ನೋಟಿನ ಅಗತ್ಯವನ್ನು ಕಡಿಮೆ ಮಾಡುತ್ತದೆ.
  6. ಅತ್ಯಂತ ಮುಖ್ಯವಾಗಿ, ₹ 2000 ನೋಟು ಕಾನೂನುಬದ್ಧವಾಗಿ ಮುಂದುವರಿಯುತ್ತದೆ ಎಂದು ಆರ್‌ಬಿಐ ಹೇಳಿದೆ (30 ಸೆಪ್ಟೆಂಬರ್ 2023ರ ನಂತರವೂ ಮುಂದುವರಿಯಲಿದೆ ಎಂಬುದು ನನ್ನ ತಿಳಿವಳಿಕೆ. ಆರ್‌ಬಿಐ ಇದನ್ನು ಸ್ಪಷ್ಟಪಡಿಸಬೇಕಾಗಬಹುದು.) ಹೀಗಾಗಿ ₹ 2000 ನೋಟು ಹೊಂದಿರುವವರು 30 ಸೆಪ್ಟೆಂಬರ್ ನಂತರವೂ ವಿನಿಮಯ ಮಾಡಿಕೊಳ್ಳಬಹುದಾಗಿದೆ.

ಇದನ್ನೂ ಓದಿ: 2000 Notes Withdrawn: 2 ಸಾವಿರ ರೂ. ನೋಟ್‌ ಬ್ಯಾನ್‌ ಅಲ್ಲ, ವಾಪಸ್;‌ ಬ್ಯಾನ್‌ಗೂ, ಹಿಂಪಡೆಯುವುದಕ್ಕೂ ವ್ಯತ್ಯಾಸವೇನು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Narendra Modi: ಅಯೋಧ್ಯೆಯಲ್ಲಿಂದು ಪ್ರಧಾನಿ ಮೋದಿ ರೋಡ್‌ಶೋ; ರಾಮಲಲ್ಲಾನಿಗೆ ವಿಶೇಷ ಪೂಜೆ

Narendra Modi:ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಬಳಿಕ ಪ್ರಧಾನಿ ಮೋದಿ ಇದೇ ಮೊದಲ ಬಾರಿಗೆ ಅಯೊಧ್ಯೆಗೆ ಭೇಟಿ ಕೊಡುತ್ತಿದ್ದಾರೆ. ಅವರ ರೋಡ್‌ಶೋದಲ್ಲಿ ಅನೇಕ ಸಾಧು ಸಂತರು ಭಾಗಿಯಾಗಲಿದ್ದಾರೆ.

VISTARANEWS.COM


on

Narendra Modi
Koo

ನವದೆಹಲಿ:ಲೋಕಸಭಾ ಚುನಾವಣೆ(Lok Sabha Election 2024) ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು ಇಂದು ಅಯೋಧ್ಯೆಗೆ ಭೇಟಿ ನೀಡಲಿದ್ದು, ರಾಮ ಜನ್ಮಭೂಮಿ(Ram Janmbhoomi)ಯಲ್ಲಿ ಶ್ರೀರಾಮ ಲಲ್ಲಾನಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ವಿಶೇಷ ಪೂಜೆ ಬಳಿಕ ಸುಮಾರು ಎರಡು ಕಿಲೋಮೀಟರ್‌ ರೋಡ್‌ ಶೋ(Roadshow) ನಡೆಸಲಿದ್ದಾರೆ. ಶನಿವಾರವೇ ಉತ್ತರಪ್ರದೇಶಕ್ಕೆ ಆಗಮಿಸಿದ್ದ ಪ್ರಧಾನಿ ಮೋದಿ, ಸಮಾಜವಾದಿ ಪಕ್ಷ(SP)ದ ಭದ್ರಕೋಟೆ ಇಟವಾದಲ್ಲಿ ಮಧ್ಯಾಹ್ನ ಸಾರ್ವಜನಿಕ ಸಭೆ ಹಾಗೂ ಧೌರಹರದಲ್ಲಿ ಸಂಜೆ ರ್ಯಾಲಿ ಕೈಗೊಳ್ಳಲಿದ್ದಾರೆ.

ಇದಾದ ಬಳಿಕ ನೇರವಾಗಿ ಅಯೋಧ್ಯೆಗೆ ತೆರಳಿರುವ ಪ್ರಧಾನಿ ಮೋದಿ, ಸಂಜೆ 7ಗಂಟೆಗೆ ರಾಮಮಂದಿರದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಇದಾದ ಬಳಿಕ ಸುಮಾರು 2 ಕಿಲೋ ಮೀಟರ್‌ ರೋಡ್‌ಶೋ ನಡೆಸಲಿದ್ದಾರೆ. ಇನ್ನು ಈ ರೋಡ್‌ ಸುಗ್ರೀವ ಕೋಟೆಯಿಂದ ಪ್ರಾರಂಭವಾಗಿ ಲತಾ ಚೌಕ್‌ವರೆಗೆ ಸಾಗಲಿದೆ. ಈ ಬೃಹತ್‌ ರೋಡ್‌ಶೋದಲ್ಲಿ ಸಿಂಧಿ, ಪಂಜಾಬಿಗಳು ಮತ್ತು ಮಹಿಳೆಯರು ಸಾಂಪ್ರದಾಯಿಕ ಉಡುಗೆಯಲ್ಲಿ ಭಾಗಿಯಾಗಲಿದ್ದಾರೆ. ದಾರಿಯುದ್ದಕ್ಕೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಇನ್ನು ರಾಮಮಂದಿರದ 11ನೇ ಗೇಟ್‌ನ ಎದುರು ಹೂವುಗಳು ಮತ್ತು ಧ್ವಜಗಳಿಂ ಸಿಂಗರಿಸಲಾಗಿದೆ. ಪೊಲೀಸರ ಜೊತೆಗೆ ಭಯೋತ್ಪಾದಕಾ ನಿಗ್ರಹ ದಳ(ATS) ಕಮಾಂಡೋಗಳು ಭದ್ರತಾ ವ್ಯವಸ್ಥೆಯನ್ನು ಪರಿಶೋಲಿಸುತ್ತಿದ್ದಾರೆ. ಅಲ್ಲದೇ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ರಾಮ ಜನ್ಮಭೂಮಿ ದೇಗುಲದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್‌ ಮಾಹಿತಿ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆ ಸಕಲ ಸಿದ್ದತೆ ನಡೆಸಲಾಗಿದೆ. ರಾಮಲಲ್ಲಾ ದರ್ಶನ ಮಾರ್ಗದ ಗೇಟ್‌ ನಂಬರ್‌ 11ರಲ್ಲಿ ಹೂಗಳಿಂದ ಸಿಂಗರಿಸಲಾಗಿದೆ. ರಸ್ತೆಯುದ್ಧಕ್ಕೂ ಪ್ರಧಾನಿ ಮೋದಿಯ ಕಟೌಟ್‌ ನಿರ್ಮಿಸಲಾಗಿದೆ. ಪ್ರಧಾನಿ ಮೋದಿಯವರ ಸ್ವಾಗತಕ್ಕೆ ಎಲ್ಲಾ ರೀತಿಯ ತಯಾರಿ ನಡೆಸಲಾಗಿದೆ. ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಬಳಿಕ ಪ್ರಧಾನಿ ಮೋದಿ ಇದೇ ಮೊದಲ ಬಾರಿಗೆ ಅಯೊಧ್ಯೆಗೆ ಭೇಟಿ ಕೊಡುತ್ತಿದ್ದಾರೆ. ಅವರ ರೋಡ್‌ಶೋದಲ್ಲಿ ಅನೇಕ ಸಾಧು ಸಂತರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ. ಉತ್ತರಪ್ರದೇಶದಲ್ಲಿ ಮೂರನೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, 10 ಲೋಕಸಭಾ ಕ್ಷೇತ್ರದಲ್ಲಿ ಮೇ 7 ಮತದಾನ ನಡೆಯಲಿದೆ. ಅಯೋಧ್ಯೆಯಲ್ಲಿ ಮೇ 20ರಂದು ಐದನೇ ಹಂತದಲ್ಲಿ ಮತದಾನ ನಡೆಯಲಿದೆ.

ಇದನ್ನೂ ಓದಿ: Covishield Vaccine: ಮಗಳ ಸಾವಿಗೆ ಕೋವಿಶೀಲ್ಡ್ ಲಸಿಕೆ ಕಾರಣ: ಆಸ್ಟ್ರಾಜೆನಿಕಾ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ತಂದೆ

ಮೇ 14ರಂದು ನಾಮಪತ್ರ ಸಲ್ಲಿಕೆ

ಪ್ರಧಾನಿ ನರೇಂದ್ರ ಮೋದಿ ಅವರು ಮೇ 14 ರಂದು ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಭಾನುವಾರ ಈ ವಿಷಯ ತಿಳಿಸಿದ ವಾರಣಾಸಿ ಬಿಜೆಪಿ ನಗರಾಧ್ಯಕ್ಷ ವಿದ್ಯಾಸಾಗರ್ ರೈ, ಮೇ 13 ರಂದು ಮೋದಿ ಅವರು ಕ್ಷೇತ್ರದಲ್ಲಿ ರೋಡ್‌ಶೋ ನಡೆಸಲಿದ್ದು, ಅದಕ್ಕೆ ಸಿದ್ಧತೆಗಳು ನಡೆಯುತ್ತಿರುವುದಾಗಿ ತಿಳಿಸಿದರು. “ರೋಡ್‌ಶೋಗೆ ಮಾರ್ಗವನ್ನು ಅಂತಿಮಗೊಳಿಸಲಾಗಿದೆ, ಮೇ 14 ರಂದು ಪ್ರಧಾನಿ ಮೋದಿ ವಾರಣಾಸಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ” ಎಂದು ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದರು. ವಾರಣಾಸಿಯಲ್ಲಿ ಕಾಂಗ್ರೆಸ್ ತನ್ನ ಉತ್ತರ ಪ್ರದೇಶದ ಮುಖ್ಯಸ್ಥ ಅಜಯ್ ರೈ ಮತ್ತು ಬಿಎಸ್ ಪಿ ಅಥರ್ ಜಮಾಲ್ ಲಾರಿ ಅವರನ್ನು ಕಣಕ್ಕಿಳಿಸಿದೆ. ವಾರಣಾಸಿಯಲ್ಲಿ ಜೂನ್ 1 ರಂದು ಏಳನೇ ಮತ್ತು ಕೊನೆಯ ಸುತ್ತಿನ ಸಾರ್ವತ್ರಿಕ ಚುನಾವಣೆಗಳಲ್ಲಿ ಚುನಾವಣೆ ನಡೆಯಲಿದೆ

Continue Reading

ದೇಶ

Police Officer: ಮರಳು ಮಾಫಿಯಾ ತಡೆಯಲು ಹೋದ ಎಎಸ್‌ಐ ಮೇಲೆ ಟ್ರ್ಯಾಕ್ಟರ್‌ ಹರಿಸಿ ಕೊಲೆ!

Police Officer: ಮಧ್ಯಪ್ರದೇಶದ ಶಾಹ್‌ದೋಲ್‌ ಜಿಲ್ಲೆಯ ನೌಧಿಯಾ ಗ್ರಾಮದ ಬಳಿ ಅಕ್ರಮವಾಗಿ ಮರಳು ಸಾಗಣೆ ಮಾಡಲಾಗುತ್ತಿತ್ತು. ಶನಿವಾರ ರಾತ್ರಿ (ಮೇ 5) ಒಬ್ಬ ಮಹೇಂದ್ರ ಬಾಗ್ರಿ ಹಾಗೂ ಇಬ್ಬರು ಪೊಲೀಸ್‌ ಪೇದೆಗಳು ದಂಧೆಕೋರರನ್ನು ಹಿಡಿಯಲು ಮಾಫಿಯಾ ನಡೆಯುವ ಜಾಗಕ್ಕೆ ತೆರಳಿದ್ದರು. ಇದೇ ವೇಳೆ ಎಎಸ್‌ಐ ಅವರು ಮೊದಲು ದಂಧೆಕೋರರ ಬಳಿ ಹೋಗಿದ್ದಾರೆ. ಆಗ ದಂಧೆಕೋರರು ಅವರ ಮೇಲೆ ಟ್ರ್ಯಾಕ್ಟರ್‌ ಹರಿಸಿ ಕೊಲೆ ಮಾಡಿದ್ದಾರೆ.

VISTARANEWS.COM


on

Police Officer
Koo

ಭೋಪಾಲ್:‌ ಮರಳು ಮಾಫಿಯಾ, ಗಣಿ ಮಾಫಿಯಾಗೆ ಆಗಾಗ ಪೊಲೀಸರು, ಅಧಿಕಾರಿಗಳು ದೇಶದಲ್ಲಿ ಬಲಿಯಾಗುತ್ತಲೇ ಇರುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ, ಮಧ್ಯಪ್ರದೇಶದಲ್ಲಿ ಮರಳು ಮಾಫಿಯಾ ತಡೆಯಲು ಹೋದ ಅಸಿಸ್ಟಂಟ್‌ ಸಬ್‌-ಇನ್ಸ್‌ಪೆಕ್ಟರ್‌ (ASI) ಮೇಲೆ ಟ್ರ್ಯಾಕ್ಟರ್‌ ಹರಿಸಿ ಕೊಲೆ ಮಾಡಿರುವ ಭೀಕರ ಘಟನೆ ನಡೆದಿದೆ. ಮೃತ ಪೊಲೀಸ್‌ ಅಧಿಕಾರಿಯನ್ನು (Police Officer) ಮಹೇಂದ್ರ ಬಾಗ್ರಿ (Mahendra Bagri) ಎಂಬುದಾಗಿ ಗುರುತಿಸಲಾಗಿದೆ.

ಮಧ್ಯಪ್ರದೇಶದ ಶಾಹ್‌ದೋಲ್‌ ಜಿಲ್ಲೆಯ ನೌಧಿಯಾ ಗ್ರಾಮದ ಬಳಿ ಅಕ್ರಮವಾಗಿ ಮರಳು ಸಾಗಣೆ ಮಾಡಲಾಗುತ್ತಿತ್ತು. ಶನಿವಾರ ರಾತ್ರಿ (ಮೇ 5) ಒಬ್ಬ ಮಹೇಂದ್ರ ಬಾಗ್ರಿ ಹಾಗೂ ಇಬ್ಬರು ಪೊಲೀಸ್‌ ಪೇದೆಗಳು ದಂಧೆಕೋರರನ್ನು ಹಿಡಿಯಲು ಮಾಫಿಯಾ ನಡೆಯುವ ಜಾಗಕ್ಕೆ ತೆರಳಿದ್ದರು. ಇದೇ ವೇಳೆ ಎಎಸ್‌ಐ ಅವರು ಮೊದಲು ದಂಧೆಕೋರರ ಬಳಿ ಹೋಗಿದ್ದಾರೆ. ಆಗ ದಂಧೆಕೋರರು ಅವರ ಮೇಲೆ ಟ್ರ್ಯಾಕ್ಟರ್‌ ಹರಿಸಿ ಕೊಲೆ ಮಾಡಿದ್ದಾರೆ. ಇದಾದ ಕೂಡಲೇ ಅವರನ್ನು ರಕ್ಷಿಸಲು ಇಬ್ಬರು ಪೇದೆಗಳು ತೆರಳಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ಎಎಸ್‌ಐ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.

ಪೊಲೀಸ್‌ ಅಧಿಕಾರಿಯ ಮೇಲೆ ಟ್ರ್ಯಾಕ್ಟರ್‌ ಹರಿಸಿದ ಚಾಲಕ ಸೇರಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಷ್ಟಾದರೂ, ಮರಳು ದಂಧೆ ನಡೆಸುತ್ತಿರುವ ಪ್ರಮುಖ ಆರೋಪಿಯು ತಪ್ಪಿಸಿಕೊಂಡು ಹೋಗಿದ್ದಾನೆ. “ನೌಧಿಯಾ ಗ್ರಾಮದ ಸುತ್ತಮುತ್ತ ಮರಳು ಮಾಫಿಯಾ ನಡೆಯುತ್ತಿರುವ ಕುರಿತು ನಿಖರ ಮಾಹಿತಿ ಪಡೆದ ಎಎಸ್‌ಐ ನೇತೃತ್ವದ ತಂಡವು ದಾಳಿ ನಡೆಸಿತ್ತು. ಅರೆಸ್ಟ್‌ ವಾರಂಟ್‌ ಜತೆಗೆ ಪೊಲೀಸರು ತೆರಳಿದ್ದರು. ಇದೇ ವೇಳೆ, ದುಷ್ಕರ್ಮಿಗಳು ಎಎಸ್‌ಐ ಮೇಲೆ ಟ್ರ್ಯಾಕ್ಟರ್‌ ಹರಿಸಿ ಹತ್ಯೆಗೈದಿದ್ದಾರೆ” ಎಂದು ಶಾಹ್‌ದೋಲ್‌ ಎಡಿಜಿಪಿ ಡಿ.ಸಿ.ಸಾಗರ್‌ ಮಾಹಿತಿ ನೀಡಿದ್ದಾರೆ.

ಎಎಸ್‌ಐ ಹತ್ಯೆಯ ಬೆನ್ನಲ್ಲೇ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಆಕ್ರೋಶ ವ್ಯಕ್ತಪಡಿಸಿದೆ. “ಮಧ್ಯಪ್ರದೇಶದಲ್ಲಿ ಭ್ರಷ್ಟಾಚಾರ, ಮಾಫಿಯಾ, ಅಕ್ರಮ ದಂಧೆಗಳು ಮಿತಿಮೀರಿವೆ. ಸರಾಸರಿ 1.7 ದಿನಕ್ಕೆ ಒಂದರಂತೆ ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿವೆ. ಮರಳು ಮಾಫಿಯಾ ಮಿತಿಮೀರಿ ಹೋಗಿದೆ. ಇಷ್ಟಾದರೂ ಆಳುವ ಸರ್ಕಾರವು ಕಣ್ಣುಮುಚ್ಚಿಕೊಂಡು ಕೂತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಹಿಂದೂ ಸಂಘಟನೆಯ ನಾಯಕನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಮೌಲ್ವಿಯ ಬಂಧನ

Continue Reading

ದೇಶ

Covishield Vaccine: ಮಗಳ ಸಾವಿಗೆ ಕೋವಿಶೀಲ್ಡ್ ಲಸಿಕೆ ಕಾರಣ: ಆಸ್ಟ್ರಾಜೆನಿಕಾ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ತಂದೆ

Covishield Vaccine: ಕೊರೊನಾ ಎದುರಿಸಲು ನೀಡಲಾದ ಕೋವಿಶೀಲ್ಡ್‌ ಲಸಿಕೆ ಅಡ್ಡ ಪರಿಣಾಮವನ್ನು ಹೊಂದಿದೆ ಎಂದು ಸ್ವತಃ ಅದನ್ನು ತಯಾರಿಸಿದ ಕಂಪನಿ ಬ್ರಿಟಿಷ್ ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ ಒಪ್ಪಿಕೊಂಡಿದೆ. ಇದರ ಬೆನ್ನಲ್ಲೇ ಇದೀಗ ವ್ಯಕ್ತಿಯೊಬ್ಬರು ಕೋವಿಶೀಲ್ಡ್ ಲಸಿಕೆ ಪಡೆದ ಬಳಿಕ ತಮ್ಮ ಪುತ್ರಿ ಸಾವಿಗೀಡಾಗಿದ್ದಾಳೆ ಎಂದು ಆರೋಪಿಸಿ, ಆಸ್ಟ್ರಾಜೆನಿಕಾ ಕಂಪನಿ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದಾರೆ. ವೇಣುಗೋಪಾಲನ್‌ ಗೋವಿಂದನ್‌ ಅವರಿಗೆ ತಮ್ಮ ಮಗಳ ಹಠಾತ್‌ ಸಾವಿಗೆ ಲಸಿಕೆಯೇ ಕಾರಣ ಎಂದು ಹೇಳಿ ನ್ಯಾಯಾಲಯದ ಮೊರೆ ಹೋಗಲು ನಿರ್ಧಿಸಿದ್ದಾರೆ.

VISTARANEWS.COM


on

Covishield Vaccine
Koo

ನವದೆಹಲಿ: ಕೊರೊನಾ (Covid 19) ಎದುರಿಸಲು ನೀಡಲಾದ ಕೋವಿಶೀಲ್ಡ್‌ ಲಸಿಕೆ (Covishield Vaccine) ಅಡ್ಡ ಪರಿಣಾಮವನ್ನು (Side effects) ಹೊಂದಿದೆ ಎಂದು ಸ್ವತಃ ಅದನ್ನು ತಯಾರಿಸಿದ ಕಂಪನಿ ಬ್ರಿಟಿಷ್ ಫಾರ್ಮಾ ದೈತ್ಯ ಅಸ್ಟ್ರಾಜೆನೆಕಾ (AstraZeneca) ಒಪ್ಪಿಕೊಂಡಿದೆ. ಇದರ ಬೆನ್ನಲ್ಲೇ ಇದೀಗ ವ್ಯಕ್ತಿಯೊಬ್ಬರು ಕೋವಿಶೀಲ್ಡ್ ಲಸಿಕೆ ಪಡೆದ ಬಳಿಕ ತಮ್ಮ ಪುತ್ರಿ ಸಾವಿಗೀಡಾಗಿದ್ದಾಳೆ ಎಂದು ಆರೋಪಿಸಿ, ಆಸ್ಟ್ರಾಜೆನಿಕಾ ಕಂಪನಿ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದಾರೆ.

ಕೋವಿಶೀಲ್ಡ್ ಅಪರೂಪದ ಸಂದರ್ಭಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಕಡಿಮೆ ಪ್ಲೇಟ್‌ಲೆಟ್ ಎಣಿಕೆಗೆ ಕಾರಣವಾಗುವ ಸ್ಥಿತಿಯನ್ನು ಉಂಟು ಮಾಡಬಹುದು ಎಂದು ಲಸಿಕೆ ತಯಾರಕರು ಇಂಗ್ಲೆಂಡ್‌ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ ನಂತರ ವೇಣುಗೋಪಾಲನ್‌ ಗೋವಿಂದನ್‌ ಅವರಿಗೆ ತಮ್ಮ ಮಗಳ ಹಠಾತ್‌ ಸಾವಿಗೆ ಲಸಿಕೆಯೇ ಕಾರಣ ಇರಬಹುದು ಎಂಬ ಅನುಮಾನ ಕಾಡಿದ್ದು, ಅದಕ್ಕಾಗಿ ನ್ಯಾಯಾಲಯದ ಮೊರೆ ಹೋಗಲು ನಿರ್ಧಿಸಿದ್ದಾರೆ.

ವೇಣುಗೋಪಾಲನ್ ಅವರು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. 2021ರಲ್ಲಿ ಇವರ ಪುತ್ರಿ 20 ವರ್ಷದ ಕಾರುಣ್ಯ ಕೋವಿಶೀಲ್ಡ್ ಪಡೆದ ಬಳಿಕ ಸಾವನ್ನಪ್ಪಿದ್ದರು. ಆಸ್ಟ್ರಾಜೆನಿಕಾ ಸಂಸ್ಥೆ ಬಹಳ ತಡವಾಗಿ ಅಂದರೆ ಹಲವರು ಜೀವ ಕಳೆದುಕೊಂಡ ನಂತರ ತನ್ನ ಲಸಿಕೆಯ ಲೋಪದೋಷಗಳನ್ನು ಒಪ್ಪಿಕೊಂಡಿದೆ ಎಂದು ಅವರು ಹೇಳಿದ್ದಾರೆ. ಸಾಂಕ್ರಾಮಿಕ ರೋಗದ ಸಮಯದಲ್ಲಿ ಅಸ್ಟ್ರಾಜೆನೆಕಾ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಿಂದ ಅಭಿವೃದ್ಧಿಪಡಿಸಲಾದ ಕೋವಿಶೀಲ್ಡ್ ಅನ್ನು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಿ ದೇಶದಲ್ಲಿ ವ್ಯಾಪಕವಾಗಿ ಹಂಚಿತ್ತು.

ರಕ್ತ ಹೆಪ್ಪುಗಟ್ಟುವಿಕೆಯ ಕಾರಣ ನೀಡಿ 15 ಯುರೋಪಿಯನ್ ದೇಶಗಳು ಕೋವಿಶೀಲ್ಡ್‌ ಬಳಕೆಗೆ ನಿಷೇಧ ಹೇರಿದ ಬಳಿಕವಾದರೂ ಸೆರಂ ಇನ್‌ಸ್ಟಿಟ್ಯೂಟ್‌ ಈ ಲಸಿಕೆಯ ಪೂರೈಕೆಯನ್ನು ಸ್ಥಗಿತಗೊಳಿಸಬೇಕಿತ್ತು. ಆದರೆ ಇದರಿಂದ ತೊಂದರೆಗೊಳಗಾಗಿ ತಮ್ಮವರನ್ನು ಕಳೆದುಕೊಂಡ ಅನೇಕ ಪೋಷಕರು ನ್ಯಾಯಾಲಯಗಳಲ್ಲಿ ಹೋರಾಟ ಮಾಡಿದ್ದರೂ ನ್ಯಾಯ ಸಿಕ್ಕಿಲ್ಲ ಎಂದು ವೇಣುಗೋಪಾಲನ್ ಹೇಳಿದ್ದಾರೆ. ಈಗಾಗಲೇ ಈ ಲಸಿಕೆಯಿಂದ ಜೀವ ಕಳೆದುಕೊಂಡ ಸಂತ್ರಸ್ತರ 8 ಕುಟುಂಬಗಳು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಅವರು ಬರೆದುಕೊಂಡಿದ್ದಾರೆ.

ಸೆರಮ್ ಇಸ್ಟಿಟ್ಯೂಟ್‌ನ ಪೂನಾವಾಲಾ ಅವರು ತಾವು ಮಾಡಿದ ಪಾಪಗಳಿಗೆ ಉತ್ತರ ನೀಡಬೇಕು. ಅವರ ತಪ್ಪಿನಿಂದ ಬಲಿಯಾದ ಜೀವಗಳಿಗೆ ಉತ್ತರ ನೀಡಬೇಕು ಎಂದು ಗೋವಿಂದನ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಜತೆಗೆ ಈ ಲಸಿಕೆಗೆ ಅನುಮೋದನೆ ನೀಡಿದ ಸರ್ಕಾರಿ ಅಧಿಕಾರಿಗಳ ಬಗ್ಗೆಯೂ ಅವರು ಕಿಡಿ ಕಾರಿದ್ದಾರೆ. ಹಾಗೆಯೇ 2021ರಲ್ಲಿ ರಚನಾ ಗಂಗು ಎಂಬವರು ಕೂಡ ತಮ್ಮ 18 ವರ್ಷದ ಮಗಳು ರಿತೈಕಾಳನ್ನು ಕಳೆದು ಕೊಂಡಿದ್ದು, ಇದಕ್ಕೂ ಕೋವಿಶೀಲ್ಡ್‌ ಕಾರಣ ಎಂದು ಹೇಳಿದ್ದಾರೆ.

ಇದನ್ನೂ ಓದಿ: Covishield Vaccine: ಕೋವಿಶೀಲ್ಡ್‌ನಿಂದ ಅಡ್ಡ ಪರಿಣಾಮವಿದೆ ಎಂದು ಕೊನೆಗೂ ಒಪ್ಪಿಕೊಂಡ ತಯಾರಿಕೆ ಕಂಪನಿ ಅಸ್ಟ್ರಾಜೆನೆಕಾ

ಕೋವಿಡ್‌ ನಂತರದ ದಿನಗಳಲ್ಲಿ ಯುವಜನರಲ್ಲಿಯೂ ವಿವರಿಸಲಾಗದ ತೀವ್ರ ಅಸ್ವಸ್ಥತೆ, ಹೃದಯಸ್ತಂಭನ ಮುಂತಾದವುಗಳು ಕಂಡುಬಂದಿವೆ. ಕೋವಿಡ್‌ ಹಾಗೂ ಅದರ ಲಸಿಕೆಯ ಬಗ್ಗೆ ಈ ಹಿಂದೆಯೂ ಅನುಮಾನ ಮೂಡಿಸಿದ್ದವು. ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಸಂಸ್ಥೆಯು ಈ ವಿವಾದದ ಕುರಿತು ಇನ್ನೂ ಹೇಳಿಕೆ ನೀಡಿಲ್ಲ.

Continue Reading

ದೇಶ

ಹಿಂದೂ ಸಂಘಟನೆಯ ನಾಯಕನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಮೌಲ್ವಿಯ ಬಂಧನ

ಹಿಂದೂ ಸಂಘಟನೆಯ ನಾಯಕನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಮತ್ತು ಸುದರ್ಶನ್ ಟೆಲಿವಿಷನ್ ಚಾನೆಲ್‌ನ ಮುಖ್ಯ ಸಂಪಾದಕ, ಬಿಜೆಪಿಯ ತೆಲಂಗಾಣ ಶಾಸಕ ರಾಜಾ ಸಿಂಗ್ ಹಾಗೂ ಪಕ್ಷದ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರಿಗೆ ಪಾಕಿಸ್ತಾನ ಮತ್ತು ನೇಪಾಳದ ಸಹಚರರೊಂದಿಗೆ ಸೇರಿಕೊಂಡು ಬೆದರಿಕೆ ಹಾಕಿದ ಆರೋಪದ ಮೇಲೆ ಮೌಲ್ವಿಯನ್ನು ಗುಜರಾತ್‌ನ ಸೂರತ್‌ನಲ್ಲಿ ಶನಿವಾರ ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಮೌಲ್ವಿ ಸೊಹೆಲ್ ಅಬೂಬಕರ್ ತಿಮೋಲ್ (27) ಎಂದು ಗುರುತಿಸಲಾಗಿದೆ.

VISTARANEWS.COM


on

arrest
Koo

ಗಾಂಧಿನಗರ: ಹಿಂದೂ ಸಂಘಟನೆಯ ನಾಯಕನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಮತ್ತು ಸುದರ್ಶನ್ ಟೆಲಿವಿಷನ್ ಚಾನೆಲ್‌ನ ಮುಖ್ಯ ಸಂಪಾದಕ, ಬಿಜೆಪಿಯ ತೆಲಂಗಾಣ ಶಾಸಕ ರಾಜಾ ಸಿಂಗ್ ಹಾಗೂ ಪಕ್ಷದ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರಿಗೆ ಪಾಕಿಸ್ತಾನ ಮತ್ತು ನೇಪಾಳದ ಸಹಚರರೊಂದಿಗೆ ಸೇರಿಕೊಂಡು ಬೆದರಿಕೆ ಹಾಕಿದ ಆರೋಪದ ಮೇಲೆ ಮೌಲ್ವಿ (Maulvi)ಯನ್ನು ಗುಜರಾತ್‌ನ ಸೂರತ್‌ನಲ್ಲಿ ಶನಿವಾರ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ʼʼಬಂಧಿತ ಆರೋಪಿಯನ್ನು ಮೌಲ್ವಿ ಸೊಹೆಲ್ ಅಬೂಬಕರ್ ತಿಮೋಲ್ (27) ಎಂದು ಗುರುತಿಸಲಾಗಿದೆ. ಈತ ಕಾರ್ಖಾನೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಜತೆಗೆ ಮುಸ್ಲಿಂ ಮಕ್ಕಳಿಗೆ ಇಸ್ಲಾಂ ಬಗ್ಗೆ ಬೋಧನೆ ಮಾಡುತ್ತಿದ್ದʼʼ ಎಂದು ಸೂರತ್ ಪೊಲೀಸ್ ಆಯುಕ್ತ ಅನುಪಮ್ ಸಿಂಗ್ ಗೆಹ್ಲೋಟ್ ವಿವರಿಸಿದ್ದಾರೆ.

ʼʼಹಿಂದೂ ಸನಾತನ ಸಂಘದ ರಾಷ್ಟ್ರೀಯ ಅಧ್ಯಕ್ಷ ಉಪದೇಶ್ ರಾಣಾ ಅವರನ್ನು ಹತ್ಯೆ ಮಾಡಲು ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಮತ್ತು 1 ಕೋಟಿ ರೂ.ಗಳ ‘ಸುಪಾರಿ’ ನೀಡಲು ಸೊಹೆಲ್ ಅಬೂಬಕರ್ ತಿಮೋಲ್ ಪಾಕಿಸ್ತಾನ ಮತ್ತು ನೇಪಾಳದ ಸಹಚರರೊಂದಿಗೆ ಸೇರಿ ಪಿತೂರಿ ನಡೆಸಿರುವುದು ತನಿಖೆ ವೇಳೆ ಕಂಡುಬಂದಿದೆʼʼ ಎಂದು ಗೆಹ್ಲೋಟ್ ಹೇಳಿದ್ದಾರೆ.

“ಬಂಧಿತ ಸೊಹೆಲ್ ಅಬೂಬಕರ್ ತಿಮೋಲ್ ಬಳಿಯಿಂದ ಉಪದೇಶ್‌ ರಾಣಾ ಅವರ ಹತ್ಯೆಗೆ 1 ಕೋಟಿ ರೂ.ಗಳ ಒಪ್ಪಂದ ಮಾಡಿಕೊಂಡಿರುವುದು ಸೇರಿದಂತೆ ಹಲವು ಪ್ರಮುಖ ಸಾಕ್ಷಿಗಳನ್ನು ಗುರುತಿಸಲಾಗಿದೆ. ಜತೆಗೆ ಮೊಬೈಲ್ ಫೋನ್‌ನಲ್ಲಿ ಹಲವು ಪ್ರಮುಖ ದಾಖಲೆಗಳು ದೊರೆತಿವೆ. ಹತ್ಯೆ ನಡೆಸುವ ಉದ್ದೇಶದಿಂದ ಆತ ಪಾಕಿಸ್ತಾನ ಮತ್ತು ನೇಪಾಳದ ವ್ಯಕ್ತಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದ” ಎಂದು ಗೆಹ್ಲೋಟ್ ತಿಳಿಸಿದ್ದಾರೆ.

“ಈ ವರ್ಷದ ಮಾರ್ಚ್‌ನಲ್ಲಿ ಉಪದೇಶ್‌ ರಾಣಾ ಅವರಿಗೆ ಬೆದರಿಕೆ ಹಾಕಿರುವ ಪ್ರಕರಣದಲ್ಲಿ ತಿಮೋಲ್ ಭಾಗಿಯಾಗಿರುವುದು ಕಂಡು ಬಂದಿದೆ. ಸುದರ್ಶನ್ ಟಿವಿಯ ಪ್ರಧಾನ ಸಂಪಾದಕ ಸುರೇಶ್ ಚವ್ಹಾಂಕೆ, ಬಿಜೆಪಿ ನಾಯಕಿ ನೂಪುರ್ ಶರ್ಮಾ ಮತ್ತು ಹೈದರಾಬಾದ್ ಶಾಸಕ ರಾಜಾ ಸಿಂಗ್ ಅವರಿಗೆ ಜೀವ ಬೆದರಿಕೆ ಹಾಕುವ ಬಗ್ಗೆ ಆರೋಪಿ ಮತ್ತು ಸಹಚರರು ಚರ್ಚಿಸುತ್ತಿದ್ದರು. ಆತನ ಮೊಬೈಲ್‌ನಲ್ಲಿ ದೊರೆತ ಫೋಟೊ ಮತ್ತು ಇತರ ವಿವರಗಳು ಇದನ್ನು ದೃಢಪಡಿಸುತ್ತದೆ. ಈ ಉದ್ದೇಶಕ್ಕಾಗಿ ಅವರು ಹಣ ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಯೋಜನೆ ರೂಪಿಸುತ್ತಿದ್ದರುʼʼ ಎಂದು ಹೇಳಿದ್ದಾರೆ.

ʼʼಆರೋಪಿಗಳು ಹಿಂದುತ್ವ ನಾಯಕರನ್ನು ಹತ್ಯೆ ಮಾಡುವ ಬಗ್ಗೆ ಮಾತನಾಡಿದ್ದಾರೆ ಮತ್ತು ಕಮಲೇಶ್ ತಿವಾರಿ (2019ರಲ್ಲಿ ಕೊಲೆಗೀಡಾದ ಉತ್ತರ ಪ್ರದೇಶ ಮೂಲದ ಹಿಂದೂ ಸಮಾಜ ಪಾರ್ಟಿಯ ಅಧ್ಯಕ್ಷ) ಅವರ ಹತ್ಯೆಯ ಬಗ್ಗೆ ಚರ್ಚಿಸಿದ್ದಾರೆʼʼ ಎಂದು ಗೆಹ್ಲೋಟ್ ತಿಳಿಸಿದ್ದಾರೆ. ʼʼಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಸಮಯದಲ್ಲಿ ಕೋಮು ಸೌಹಾರ್ದತೆಯನ್ನು ಕದಡುವ ಸಲುವಾಗಿ ತಿಮೋಲ್ ಶೀಘ್ರದಲ್ಲೇ ರಾಣಾ ಅವರನ್ನು ಕೊಲ್ಲಲು ಬಯಸಿದ್ದ ಎನ್ನುವ ಅಂಶ ಆತನ ಮೆಸೇಜ್‌ ಮೂಲಕ ಬಹಿರಂಗಗೊಂಡಿದೆʼʼ ಎಂದು ಅವರು ವಿವರಿಸಿದ್ದಾರೆ.

ಅಂತಾರಾಷ್ಟ್ರೀಯ ಸಿಮ್

ಪಾಕಿಸ್ತಾನ ಮತ್ತು ನೇಪಾಳಕ್ಕೆ ಸೇರಿದ ಫೋನ್ ಸಂಖ್ಯೆಗಳನ್ನು ಹೊಂದಿರುವ ದೋಗರ್ ಮತ್ತು ಶೆಹನಾಜ್ ಎಂದು ಗುರುತಿಸಲಾದ ಇಬ್ಬರು ವ್ಯಕ್ತಿಗಳು ತಿಮೋಲ್‌ನನ್ನು ಸಂಪರ್ಕಿಸಿದ್ದಾರೆ ಎನ್ನುವ ವಿಚಾರ ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ ಎಂದು ಅಪರಾಧ ವಿಭಾಗದ ಪ್ರಕಟಣೆ ತಿಳಿಸಿದೆ. ಪೊಲೀಸರ ಪ್ರಕಾರ, ತಿಮೋಲ್‌ ತನ್ನ ಗುರುತನ್ನು ರಹಸ್ಯವಾಗಿಡಲು ಲಾವೋಸ್‌ನಿಂದ ಅಂತಾರಾಷ್ಟ್ರೀಯ ಸಿಮ್ ಖರೀದಿಸಿದ್ದ. ಚಾಟ್ ಅಪ್ಲಿಕೇಶನ್‌ನಲ್ಲಿ ಹಿಂದೂ ಧರ್ಮದ ವಿರುದ್ಧ ಭಾಷಣಗಳನ್ನು ಬರೆದಿದ್ದ ಮತ್ತು ಕಮಲೇಶ್ ತಿವಾರಿಯಂತೆ ರಾಣಾ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Love Jihad: ಹಿಂದು ಎಂಬಂತೆ ಬಿಂಬಿಸಿ, ಯುವತಿಯನ್ನು ನಂಬಿಸಿ, ಕೊನೆಗೆ ಅತ್ಯಾಚಾರ ಎಸಗಿದ ಮುಸ್ಲಿಂ ಯುವಕ!

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 (ಎ) (ಧರ್ಮ, ಜನಾಂಗದ ಮೇಲೆ ಉದ್ದೇಶಪೂರ್ವಕ ನಿಂದನೆ ಅಥವಾ ದಾಳಿಯಲ್ಲಿ ತೊಡಗುವುದು), 467, 468 ಮತ್ತು 471 (ದಾಖಲೆಗಳು ಅಥವಾ ಎಲೆಕ್ಟ್ರಾನಿಕ್ ದಾಖಲೆಗಳನ್ನು ನಕಲು ಮಾಡುವುದು) ಮತ್ತು ಸೆಕ್ಷನ್ 120 (ಬಿ) ಕ್ರಿಮಿನಲ್ ಪಿತೂರಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ತಿಮೋಲ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Continue Reading
Advertisement
Ithichanda Ramesh Uthappaʼs Four books to be released in Mysore on May 9
ಮೈಸೂರು5 mins ago

Book Release: ಮೈಸೂರಿನಲ್ಲಿ ಮೇ 9ರಂದು ಐತಿಚಂಡ ರಮೇಶ ಉತ್ತಪ್ಪ ಅವರ 4 ಪುಸ್ತಕ ಬಿಡುಗಡೆ, ಸಂವಾದ

Karnataka Weather Forecast
ಮಳೆ10 mins ago

Karnataka Weather :ಮಳೆಯ ಕಣ್ಣಾ ಮುಚ್ಚಾಲೆ ಆಟ; ವರುಣ ದೇವನ ತಲೆ ಮೇಲೆ ಹೊತ್ತು ತಿರುಗಿದ ಗ್ರಾ.ಪಂ ಪಿಡಿಒ

Prajwal Revanna Case HD Revanna may be shifted to Parappana Agrahara SIT custody is doubtful
ಕ್ರೈಂ14 mins ago

Prajwal Revanna Case: ಪರಪ್ಪನ ಅಗ್ರಹಾರಕ್ಕೆ ಎಚ್‌.ಡಿ. ರೇವಣ್ಣ ಶಿಫ್ಟ್‌? SIT ಕಸ್ಟಡಿಗೆ ಕೊಡುವುದು ಡೌಟ್!

Narendra Modi
ದೇಶ15 mins ago

Narendra Modi: ಅಯೋಧ್ಯೆಯಲ್ಲಿಂದು ಪ್ರಧಾನಿ ಮೋದಿ ರೋಡ್‌ಶೋ; ರಾಮಲಲ್ಲಾನಿಗೆ ವಿಶೇಷ ಪೂಜೆ

Police Officer
ದೇಶ23 mins ago

Police Officer: ಮರಳು ಮಾಫಿಯಾ ತಡೆಯಲು ಹೋದ ಎಎಸ್‌ಐ ಮೇಲೆ ಟ್ರ್ಯಾಕ್ಟರ್‌ ಹರಿಸಿ ಕೊಲೆ!

Covishield Vaccine
ದೇಶ43 mins ago

Covishield Vaccine: ಮಗಳ ಸಾವಿಗೆ ಕೋವಿಶೀಲ್ಡ್ ಲಸಿಕೆ ಕಾರಣ: ಆಸ್ಟ್ರಾಜೆನಿಕಾ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ತಂದೆ

ICC Women's T20 World Cup
ಕ್ರೀಡೆ1 hour ago

ICC Women’s T20 World Cup: ಮಹಿಳಾ ಟಿ20 ವಿಶ್ವಕಪ್​ ವೇಳಾಪಟ್ಟಿ ಪ್ರಕಟ; ಒಂದೇ ಗುಂಪಿನಲ್ಲಿ ಭಾರತ-ಪಾಕ್​

Pakistan
ವಿದೇಶ1 hour ago

Pakistan: ಪಾಕಿಸ್ತಾನಕ್ಕೂ ಕಾಲಿಟ್ಟ ಯೋಗ; ಅಧಿಕೃತವಾಗಿ ತರಗತಿ ಆರಂಭ

Prajwal Revanna Case HD Revanna arrest is correct says R Ashok
ರಾಜಕೀಯ2 hours ago

Prajwal Revanna Case: ಅಶ್ಲೀಲ ವಿಡಿಯೊ ಪೆನ್‌ಡ್ರೈವ್‌ ಕೇಸ್‌; ರೇವಣ್ಣ ಬಂಧನ ಕ್ರಮ ಸರಿ ಇದೆ ಎಂದ ಆರ್.‌ ಅಶೋಕ್‌!

Vicky Pedia New reels about heat in Karnataka
ವೈರಲ್ ನ್ಯೂಸ್2 hours ago

Vicky Pedia: ʻಬಿಸಿ ಗಾಳಿ.. ಬಿಸಿ ಗಾಳಿ.. ಸಹಿ ಹಾಕಿದೆ ಬಿಸಿಲಿನಲಿʼಎಂದು ಹಾಡಿದ ವಿಕಾಸ್ ವಿಕ್ಕಿಪಿಡಿಯ: ಫ್ಯಾನ್ಸ್‌ ಫಿದಾ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ11 hours ago

Dina Bhavishya : ಈ ರಾಶಿಯವರಿಗೆ ಆಪ್ತರಿಂದ ಸಿಗಲಿದೆ ಸಿಹಿ ಸುದ್ದಿ

Dina Bhavishya
ಭವಿಷ್ಯ1 day ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ2 days ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ2 days ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ3 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ3 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ5 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20246 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20246 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ6 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

ಟ್ರೆಂಡಿಂಗ್‌