ಬಸವ ಜಯಂತಿ: ಭಕ್ತಿ ಭಂಡಾರಿ ಬಸವಣ್ಣನವರ ನೆನಪು, ಸಂದೇಶ - Vistara News

ಧಾರ್ಮಿಕ

ಬಸವ ಜಯಂತಿ: ಭಕ್ತಿ ಭಂಡಾರಿ ಬಸವಣ್ಣನವರ ನೆನಪು, ಸಂದೇಶ

12ನೇ ಶತಮಾನದಲ್ಲಿ ಶರಣ ಚಳವಳಿಯ ಮೂಲಕ ಹೊಸ ಚಿಂತನೆಯ ಪ್ರವಾಹವನ್ನು ತಂದವರು ಭಕ್ತಿ ಭಂಡಾರಿ ಬಸವಣ್ಣನವರು. ಅವರ ಭಕ್ತಿ, ಕಾಯಕನಿಷ್ಠೆ ನೆನೆಯುವ ದಿನ ಬಸವ ಜಯಂತಿ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬಸವಣ್ಣನವರು ಕವಿ, ತತ್ವಜ್ಞಾನಿ, ಸಮಾಜ ಸುಧಾರಕ ಎಲ್ಲವೂ ಹೌದು. ಹುಟ್ಟಿ ಬೆಳೆದು ಸಾಧಿಸಿದ್ದೆಲ್ಲ 12ನೇ ಶತಮಾನದಲ್ಲಿ. ಆದರೆ ಅವರ ವಚನಗಳು ಇಂದಿಗೂ ಆದರ್ಶ. ಅವರು ನೀಡಿದ ಮಾರ್ಗದರ್ಶನ ಇಂದಿಗೂ ಅನುಸರಣೀಯ. ಕಲಚೂರ್ಯರ ಬಿಜ್ಜಳ ರಾಜನ ಆಸ್ಥಾನದಲ್ಲಿ ಮಹಾಮಂತ್ರಿಯಾಗಿದ್ದ ಅವರು ಕಲಿಯೂ ಹೌದು, ಕವಿಯೂ ಹೌದು. ಕಲ್ಯಾಣದಲ್ಲಿ ಅನುಭವ ಮಂಟಪವನ್ನು ಸ್ಥಾಪಿಸಿ ಅವರು ಜಂಗಮ ಚಳವಳಿಯ ನೇತಾರರಾದರು. ಅಕ್ಕಮಹಾದೇವಿ, ಅಲ್ಲಮಪ್ರಭು, ಸಿದ್ಧರಾಮ, ಚನ್ನಬಸವಣ್ಣ ಮುಂತಾದವರು ಬಸವಣ್ಣನವರಿಗೆ ಈ ಕಾಯಕದಲ್ಲಿ ಸಾಂಗತ್ಯ ನೀಡಿದರು.

ಆಗಿನ ಕಾಲದಲ್ಲಿ ಸಾಮಾನ್ಯವಾಗಿದ್ದ ಜಾತಿ ತಾರತಮ್ಯ, ಢಾಂಬಿಕ ಭಕ್ತಿ ಎಲ್ಲದರ ವಿರುದ್ಧ ತಿರುಗಿ ಬಿದ್ದ ಬಸವಣ್ಣ, ತಮ್ಮದೇ ಆದ ರೀತಿಯಲ್ಲಿ ದಮನಕ್ಕೊಳಗಾದವರ ಧ್ವನಿಯಾಗಿ ನಿಂತರು. ಇಷ್ಟಲಿಂಗ ಮೂರ್ತಿಯ ಪರಿಕಲ್ಪನೆಯನ್ನು ನೀಡಿ ದೇವರನ್ನು ಎಲ್ಲರ ಕರಸ್ಥಲಕ್ಕೆ ತಂದರು. ಕಾಯಕವೇ ಕೈಲಾಸ ಎಂದು ಹೇಳಿ, ಎಲ್ಲರಲ್ಲೂ ದುಡಿಯುವ ಛಲ ಹುಟ್ಟು ಹಾಕಿದರು. ಅನುಭವ ಮಂಟಪ ಸ್ಥಾಪಿಸಿ, ಅದರಲ್ಲಿ ಎಲ್ಲರೂ ವಿಚಾರ ವಿನಿಮಯ ಮಾಡಲು ವೇದಿಕೆ ಕಲ್ಪಿಸಿದರು. ಕೆಳ ಜಾತಿಗಳಿಂದಲೂ ಬಂದ ಶರಣರು ಇಲ್ಲಿ ತಮ್ಮ ಚಿಂತನೆಗಳನ್ನು ಮಂಡಿಸಿ ಮನುಕುಲಕ್ಕೆ ಆದರ್ಶರೆನಿಸಿದರು.

1105ರಲ್ಲಿ ಜನಿಸಿದ ಬಸವೇಶ್ವರರು ಧರ್ಮ, ಸಮಾಜ, ತತ್ವಜ್ಞಾನ, ಸಾಹಿತ್ಯ, ರಾಜಕೀಯದಲ್ಲಿ ಕೈಗೊಂಡ ಎಲ್ಲ ಕಾರ್ಯಗಳೂ ಕ್ರಾಂತಿಕಾರಿ. ಲಿಂಗಾಯತ ಧರ್ಮದ ಮೂಲಪುರುಷರಾದ ಬಸವೇಶ್ವರರು ಕರ್ನಾಟಕದ ಬಸವಕಲ್ಯಾಣ ಮತ್ತು ಶ್ರವಣಬೆಳಗೊಳದಲ್ಲಿ ಅದನ್ನು ಪಸರಿಸಿದರು. ಲಿಂಗಾಯತ ಸಮುದಾಯವು ಬಸವೇಶ್ವರರನ್ನು ಶಿವನ ವಾಹನ ನಂದಿಯ ಮಾನವ ಅವತಾರ ಎಂದೇ ನಂಬುತ್ತದೆ.

ಉಳ್ಳವರು ಶಿವಾಲಯ ಮಾಡುವರು,
ನಾನೇನ ಮಾಡುವೆ ಬಡವನಯ್ಯಾ,
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರ ಹೊನ್ನ ಕಲಶವಯ್ಯಾ,
ಕೂಡಲಸಂಗಮದೇವಾ, ಕೇಳಯ್ಯಾ
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ
ಎನ್ನುವ ಮೂಲಕ ಬಸವಣ್ಣನವರು ತಮ್ಮ ಸರ್ವವೂ ಕಾಯಕ ಹಾಗೂ ಭಕ್ತಿಗೆ ಮೀಸಲು ಎಂದು ಸಾರಿದರು. ಇದೇ ಪರಮ ಮುಕ್ತಿಯ ಸೋಪಾನ ಎಂದರು. ಉಳ್ಳವರ ಭಕ್ತಿಯ ಪೊಳ್ಳುತನವನ್ನು ವಿಡಂಬಿಸಿದರು.

ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದೊದವೆ ಅತ್ತತ್ತ ನಿಮ್ಮ ಶ್ರೀಮಕುಟ,
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ
ಎನ್ನುವಲ್ಲಿ ಬಸವಣ್ಣನವರು ಹೊಂದಿದ್ದ ನಿರ್ಗುಣ ನಿರಾಕಾರ ಭಗವಂತನ ಪರಿಕಲ್ಪನೆ, ಪುರಾಣೋಪನಿಷತ್ತುಗಳು ಪರಿಕಲ್ಪಿಸಿದ ಮಹಾ ಭಗವತ್‌ ಕಲ್ಪನೆಯ ಬಗ್ಗೆ ಅವರಿಗೆ ಇದ್ದ ಒಲವು ವ್ಯಕ್ತವಾಗುತ್ತದೆ.

ನೀರ ಕಂಡಲ್ಲಿ ಮುಳುಗುವರಯ್ಯಾ,
ಮರನ ಕಂಡಲ್ಲಿ ಸುತ್ತುವರಯ್ಯಾ,
ಬತ್ತುವ ಜಲವ,ಒಣಗುವ ಮರನ
ಮಚ್ಚಿದವರು ನಿಮ್ಮನೆತ್ತ ಬಲ್ಲರು?
ಕೂಡಲಸಂಗಮದೇವಾ- ಎಂದು ಡಾಂಭಿಕ ಭಕ್ತಿ ತೋರುವವರನ್ನು ವಿಡಂಬಿಸಿದರು.

ಶರಣರ ಗುಣ ಹೇಗಿರಬೇಕು ಎಂಬುದನ್ನು ಅವರು ಮಾರ್ಮಿಕವಾಗಿ ವ್ಯಕ್ತಪಡಿಸಿರುವುದು ಹೀಗೆ:
ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ,
ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ,
ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ,
ಛಲಬೇಕು ಶರಣಂಗೆ ಲಿಂಗ ಜಂಗಮವನೊಂದೆಂಬ,
ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ,
ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವ.

ಇದನ್ನೂ ಓದಿ: ದಾನದ ಮಹತ್ವ ಎತ್ತಿ ಹಿಡಿಯುವ ರಂಜಾನ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Koppala News: ಅಂಜನಾದ್ರಿ ದೇಗುಲ ಹುಂಡಿಯಲ್ಲಿ 32.95 ಲಕ್ಷ ರೂ; ವಿವಿಧ ದೇಶಗಳ ನೋಟುಗಳು

Koppala News: ಗಂಗಾವತಿ ತಾಲೂಕಿನ ಪ್ರಮುಖ ಧಾರ್ಮಿಕ ತಾಣವಾಗಿರುವ ಚಿಕ್ಕರಾಂಪುರದ ಅಂಜನಾದ್ರಿ ಬೆಟ್ಟದ ಆಂಜನೇಯ ದೇಗುಲದ ಹುಂಡಿ ಎಣಿಕೆ ಕಾರ್ಯವು ಮಂಗಳವಾರ ನಡೆಯಿತು. ಕಾಣಿಕೆ ಹುಂಡಿಯಲ್ಲಿ 32.95 ಲಕ್ಷ ರೂಪಾಯಿ ಮೊತ್ತದ ಕಾಣಿಕೆ ಸಂಗ್ರಹವಾಗಿದೆ. ನಾನಾ ದೇಶಗಳ ನೋಟುಗಳು ಮತ್ತು ನಾಣ್ಯಗಳು ಪತ್ತೆಯಾಗಿರುವುದು ವಿಶೇಷವಾಗಿದೆ.

VISTARANEWS.COM


on

Anjanadri Temple Hundi Count
Koo

ಗಂಗಾವತಿ: ತಾಲೂಕಿನ ಪ್ರಮುಖ ಧಾರ್ಮಿಕ ತಾಣವಾಗಿರುವ ಚಿಕ್ಕರಾಂಪುರದ ಅಂಜನಾದ್ರಿ (Anjanadri) ಬೆಟ್ಟದ ಆಂಜನೇಯ ದೇಗುಲದ ಹುಂಡಿ ಎಣಿಕೆ ಕಾರ್ಯವು ಮಂಗಳವಾರ (Koppala News) ನಡೆಯಿತು. ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗತ್ತಿ ಸೂಚನೆ ಮೇರೆಗೆ ತಹಸೀಲ್ದಾರ್ ನಾಗರಾಜ್ ನೇತೃತ್ವದಲ್ಲಿ ಹುಂಡಿ ಕಾಣಿಕೆ ಹಣದ ಎಣಿಕೆ ಕಾರ್ಯವು ನಡೆಯಿತು. ಕಾಣಿಕೆ ಹುಂಡಿಯಲ್ಲಿ 32.95 ಲಕ್ಷ ರೂಪಾಯಿ ಮೊತ್ತದ ಕಾಣಿಕೆ ಸಂಗ್ರಹವಾಗಿದೆ.

ಇದನ್ನೂ ಓದಿ: Eshwar Khandre: ಚಾರಣಪಥಗಳ ಆನ್‌ಲೈನ್ ಟಿಕೆಟ್‌ಗೆ ಶೀಘ್ರ ಚಾಲನೆ; ಸಚಿವ ಈಶ್ವರ ಖಂಡ್ರೆ

ವಿವಿಧ ದೇಶಗಳ ಮೂರು ನೋಟು ಮತ್ತು ಏಳು ನಾಣ್ಯಗಳು ಪತ್ತೆ

ಅಂಜನಾದ್ರಿ ಆಂಜನೇಯ ದೇಗುಲದ ಹುಂಡಿಯಲ್ಲಿ ಸಂಗ್ರವಾಗಿದ್ದ ಕಾಣಿಕೆ ಹಣದ ಎಣಿಕೆಯ ಸಂದರ್ಭದಲ್ಲಿ ಸೌದಿ ಅರೇಬಿಯಾ ಸೇರಿದಂತೆ ವಿವಿಧ ದೇಶಗಳ ಮೂರು ನೋಟು ಮತ್ತು ಏಳು ನಾಣ್ಯಗಳು ಪತ್ತೆಯಾಗಿವೆ.

ಈ ಪೈಕಿ ಸೌತ್ ಆಫ್ರಿಕಾದ ಒಂದು ನೂರು ರಾಂಡ್ ಮೊತ್ತದ ಒಂದು ನೋಟು, ಮತ್ತು ಯುನೈಟೆಡ್ ಸ್ಟೇಟ್ಸ್‌ ಆಫ್ ಅಮೆರಿಕಾದ ತಲಾ ಹತ್ತು ಡಾಲರ್ ಮೊತ್ತದ ಎರಡು ನೋಟು ಪತ್ತೆಯಾಗಿವೆ ಹಾಗೂ ಸೌದಿ ಅರೇಬಿಯಾ, ಥೈಲ್ಯಾಂಡ್, ಇಟಲಿ, ಓಮನ್, ಯುಕೆ ಮತ್ತು ನೇಪಾಳದ ನಾನಾ ಮುಖಬೆಲೆಯ ನಾಣ್ಯಗಳು ಪತ್ತೆಯಾಗಿವೆ.

ಇದನ್ನೂ ಓದಿ: Yuva Sambhrama 2024: ಬೆಂಗಳೂರಿನಲ್ಲಿ ಜು.12ರಿಂದ 3 ದಿನ ಯುವ ಸಂಭ್ರಮ

ಕಳೆದ ಮೇ 21ರಂದು ಹಣ ಎಣಿಕೆ ಮಾಡಿದ ಸಂದರ್ಭದಲ್ಲಿ 30.21 ಲಕ್ಷ ರೂ. ಮೊತ್ತದ ಹಣ ಸಂಗ್ರವಾಗಿತ್ತು.

Continue Reading

ದೇಶ

Hathras Stampede: ಹತ್ರಾಸ್‌ನಲ್ಲಿ ಕಾಲ್ತುಳಿತ ಹೇಗಾಯ್ತು? ಸತ್ಸಂಗ ನಡೆಸಿದ ಭೋಲೆ ಬಾಬಾ ಯಾರು? ಇಲ್ಲಿದೆ ಮಾಹಿತಿ

Hathras Stampede: ಭೋಲೆ ಬಾಬಾ ಅವರಿಗೆ ಭಾರತದಾದ್ಯಂತ ಅನುಯಾಯಿಗಳು ಇದ್ದಾರೆ. ಅದರಲ್ಲೂ, ಉತ್ತರ ಪ್ರದೇಶದ ಪಶ್ಚಿಮ ಭಾಗ, ಉತ್ತರಾಖಂಡ, ಹರಿಯಾಣ, ರಾಜಸ್ಥಾನ ಹಾಗೂ ದೆಹಲಿಯಲ್ಲಿ ಹೆಚ್ಚು ಅನುಯಾಯಿಗಳು ಇದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಖಾತೆ ಹೊಂದಿರದಿದ್ದರೂ ಇವರ ಧಾರ್ಮಿಕ ಕಾರ್ಯಕ್ರಮವನ್ನು ಭಕ್ತರು ತಪ್ಪಿಸಿಕೊಳ್ಳುವುದಿಲ್ಲ.

VISTARANEWS.COM


on

Hathras Stampede
Koo

ಲಖನೌ: ಉತ್ತರ ಪ್ರದೇಶದ ಹತ್ರಾಸ್‌ ಜಿಲ್ಲೆ ಮೊಘಲ್‌ಘರಾಹಿ ಎಂಬ ಗ್ರಾಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ (Hathras Stampede) ಸಂಭವಿಸಿದ್ದು, 100ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ನಾರಾಯಣ ಸಕಾರ್‌ ಹರಿ (Narayan Sakaar Hari) ಅಥವಾ ಸಕಾರ್‌ ವಿಶ್ವ ಹರಿ ಅಥವಾ ಭೋಲೆ ಬಾಬಾ (Bhole Baba) ಅವರು ಸತ್ಸಂಗ ನೆರವೇರಿಸಿದ ಬಳಿಕ ಉಂಟಾದ ಕಾಲ್ತುಳಿತವು ನೂರಾರು ಜನರ ಸಾವಿಗೆ ಕಾರಣವಾಗಿದೆ. ಇನ್ನು, ದುರಂತದ ಕುರಿತು ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ. ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ. ಪರಿಹಾರವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಘೋಷಣೆ ಮಾಡಿದ್ದಾರೆ. ಇನ್ನು ಕಾಲ್ತುಳಿತ ಹೇಗಾಯಿತು? ನೂರಾರು ಜನರ ಸಾವಿಗೆ ಕಾರಣವೇನು? ಪ್ರತ್ಯಕ್ಷದರ್ಶಿಗಳು ಹೇಳುವುದು ಏನು ಎಂಬುದರ ಮಾಹಿತಿ ಇಲ್ಲಿದೆ.

ಪ್ರತ್ಯಕ್ಷದರ್ಶಿಗಳು ಹೇಳುವುದಿಷ್ಟು…

ಸತ್ಸಂಗ ಮುಗಿದ ಬಳಿಕ ನೂರಾರು ಜನ ಹೊರಗೆ ಬಂದಿದ್ದಾರೆ. ಎತ್ತರದ ಚರಂಡಿ ಮೇಲೆ ನಿರ್ಮಿಸಿದ ರಸ್ತೆ ಮೇಲೆ ಸಾವಿರಾರು ಜನ ನಿಂತಿದ್ದಾರೆ. ಆಗ ರಸ್ತೆಯ ಒಂದು ಭಾಗ ಚರಂಡಿಯೊಳಗೆ ಕುಸಿದಿದೆ. ಕೂಡಲೇ ಹತ್ತಾರು ಜನ ಚರಂಡಿಯೊಳಗೆ ಬಿದ್ದಿದ್ದು, ಒಬ್ಬರ ಮೇಲೆ ಒಬ್ಬರು ಬಿದ್ದ ಕಾರಣ ಹೆಚ್ಚಿನ ಜನ ಸಾವಿಗೀಡಾಗಿದ್ದಾರೆ. ಇನ್ನು ಚರಂಡಿ ಮೇಲಿನ ರಸ್ತೆ ಕುಸಿದ ಸುದ್ದಿ ಹರಿದಾಡುತ್ತಲೇ ಎಲ್ಲರೂ ಓಡಲು ಶುರು ಮಾಡಿದರು. ಆಗಲೂ ಒಬ್ಬರ ಮೇಲೆ ಒಬ್ಬರು ಬಿದ್ದು, ತುಳಿದಾಡಿದ ಕಾರಣ ಸಾವಿನ ಸಂಖ್ಯೆ ಜಾಸ್ತಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಧ್ಯಮಗಳಿಗೆ ಘಟನೆ ಕುರಿತು ವಿವರ ನೀಡಿದ್ದಾರೆ.

ಇನ್ನೊಂದಿಷ್ಟು ಮೂಲಗಳ ಪ್ರಕಾರ, ಸಣ್ಣದೊಂದು ಹಾಲ್‌ನಲ್ಲಿ ಸತ್ಸಂಗ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹೊರಗಡೆ ಚರಂಡಿ ಮೇಲಿನ ಸ್ಲ್ಯಾಬ್‌ ಕುಸಿದಿದೆ ಎಂಬ ಸುದ್ದಿ ಕೇಳಿ ಎಲ್ಲರೂ ಓಡಲು ಶುರು ಮಾಡಿದರು. ಹೊರಗೆ ಹೋಗುವ ಗೇಟ್‌ ಚಿಕ್ಕದಿದ್ದ ಕಾರಣ ಎಲ್ಲರೂ ನುಗ್ಗಿದಾಗ ಕಾಲ್ತುಳಿತ ಸಂಭವಿಸಿದೆ. ಹೆಣ್ಣುಮಕ್ಕಳು ಓಡಲೂ ಆಗದೆ, ನೂಕುತ್ತಿದ್ದ ಪುರುಷರನ್ನು ಹಿಮ್ಮೆಟ್ಟಿಸಲೂ ಆಗದೆ ನೆಲಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಯಾರಿವರು ಭೋಲೆ ಬಾಬಾ?

ಭೋಲೆ ಬಾಬಾ ಅವರು ಉತ್ತರ ಪ್ರದೇಶದ ಎತಾಹ್‌ ಜಿಲ್ಲೆಯ ಬಹದ್ದೂರ್‌ ಗ್ರಾಮದವರಾಗಿದ್ದಾರೆ. ಇವರು ಈಗ ಪ್ರಮುಖ ಧಾರ್ಮಿಕ ಮುಖಂಡರೆನಿಸಿದ್ದು, ಇವರ ಭಾಷಣ, ಬೋಧನೆಗಳನ್ನು ಕೇಳಲು ಸಾವಿರಾರು ಜನ ಆಗಮಿಸುತ್ತಾರೆ. ಇವರು ದೇಶದ ಗುಪ್ತಚರ ಇಲಾಖೆಯಲ್ಲಿ (IB) ಕಾರ್ಯನಿರ್ವಹಿಸಿದ್ದು, 26 ವರ್ಷಗಳ ಹಿಂದೆಯೇ ಸರ್ಕಾರಿ ನೌಕರಿ ತೊರೆದು, ಸ್ವಯಂಘೋಷಿತ ದೇವಮಾನವರಾಗಿದ್ದಾರೆ.

ಭೋಲೆ ಬಾಬಾ ಅವರಿಗೆ ಭಾರತದಾದ್ಯಂತ ಅನುಯಾಯಿಗಳು ಇದ್ದಾರೆ. ಅದರಲ್ಲೂ, ಉತ್ತರ ಪ್ರದೇಶದ ಪಶ್ಚಿಮ ಭಾಗ, ಉತ್ತರಾಖಂಡ, ಹರಿಯಾಣ, ರಾಜಸ್ಥಾನ ಹಾಗೂ ದೆಹಲಿಯಲ್ಲಿ ಹೆಚ್ಚು ಅನುಯಾಯಿಗಳು ಇದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಖಾತೆ ಹೊಂದಿರದಿದ್ದರೂ ಇವರ ಧಾರ್ಮಿಕ ಕಾರ್ಯಕ್ರಮವನ್ನು ಭಕ್ತರು ತಪ್ಪಿಸಿಕೊಳ್ಳುವುದಿಲ್ಲ. ಪ್ರತಿ ಮಂಗಳವಾರ ಅಲಿಗಢದಲ್ಲಿ ಅವರ ಕಾರ್ಯಕ್ರಮ ನಡೆಯುತ್ತದೆ. ಅಲ್ಲಿಯೂ ಸಾವಿರಾರು ಜನ ಸೇರುತ್ತಾರೆ. ಕೊರೊನಾ ನಿರ್ಬಂಧದ ಮಧ್ಯೆಯೂ ಸಾವಿರಾರು ಜನರನ್ನು ಸೇರಿಸಿ, ಸತ್ಸಂಗ ಆಯೋಜಿಸಿದ್ದು ವಿವಾದಕ್ಕೂ ಕಾರಣವಾಗಿತ್ತು.

ಇದನ್ನೂ ಓದಿ: Uttar Pradesh stampede: ಹತ್ರಾಸ್‌ ಕಾಲ್ತುಳಿತ ದುರ್ಘಟನೆ; ಸಾವಿನ ಸಂಖ್ಯೆ 60ಕ್ಕೆ ಏರಿಕೆ

Continue Reading

ಧಾರ್ಮಿಕ

Vastu Tips: ಮನೆಯ ದ್ವಾರದಲ್ಲಿ ಗಣೇಶನ ವಿಗ್ರಹ ಇಡುವುದು ಸರಿಯೇ?

ಎಲ್ಲ ವಿಘ್ನಗಳನ್ನು ದೂರ ಮಾಡುವ ಗಣಪತಿಯನ್ನು ಪೂಜಿಸಿದರೆ ಜೀವನದಲ್ಲಿ ಎಂದಿಗೂ ಸಮಸ್ಯೆಗಳಿರುವುದಿಲ್ಲ ಎಂದೇ ನಂಬಲಾಗುತ್ತದೆ. ಕೆಲವರು ತಮ್ಮ ಮನೆಯ ಮುಂಭಾಗದ ಬಾಗಿಲುಗಳಲ್ಲಿ ಗಣಪತಿಯ ಚಿತ್ರ ಅಥವಾ ವಿಗ್ರಹವನ್ನು ನೇತುಹಾಕುತ್ತಾರೆ. ವಾಸ್ತು ಶಾಸ್ತ್ರದಲ್ಲಿ (Vastu Tips) ಇದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಗಣೇಶ ವಿಗ್ರಹವನ್ನು ಎಲ್ಲಿ ಇಡಬೇಕು, ಹೇಗೆ ಇಡಬೇಕು ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

By

Vastu Tips
Koo

ಪ್ರಥಮ ಪೂಜಿತ ಗಣಪತಿಯನ್ನು (ganapati) ನಮ್ಮ ನಿತ್ಯದ ಎಲ್ಲ ಕಾರ್ಯದಲ್ಲೂ ಮೊದಲ ಆದ್ಯತೆ (First priority) ನೀಡಲಾಗುತ್ತದೆ. ಎಲ್ಲಾ ದೇವರುಗಳಲ್ಲಿ (god) ಗಣಪತಿಯನ್ನು ಅತ್ಯಂತ ಪೂಜನೀಯ ಎಂದು ಪರಿಗಣಿಸಲಾಗಿದೆ. ಈ ಕಾರಣಕ್ಕಾಗಿ ಪ್ರತಿಯೊಂದು ಕೆಲಸದಲ್ಲೂ ಆತನಿಗೆ ಮೊದಲ ಪೂಜೆಯನ್ನು ಸಲ್ಲಿಸಲಾಗುತ್ತದೆ. ಆದರೆ ಇದಕ್ಕೆ ವಾಸ್ತು ಶಾಸ್ತ್ರದ (Vastu Tips) ಪ್ರಕಾರ ಇದರ ಕುರಿತು ಕೆಲವೊಂದು ನಿಯಮಗಳಿವೆ.

ಎಲ್ಲ ವಿಘ್ನಗಳನ್ನು ದೂರ ಮಾಡುವ ಗಣಪತಿಯನ್ನು ಪೂಜಿಸಿದರೆ ಜೀವನದಲ್ಲಿ ಎಂದಿಗೂ ಸಮಸ್ಯೆಗಳಿರುವುದಿಲ್ಲ ಎಂದೇ ನಂಬಲಾಗುತ್ತದೆ. ಕೆಲವರು ತಮ್ಮ ಮನೆಯ ಮುಂಭಾಗದ ಬಾಗಿಲುಗಳಲ್ಲಿ ಗಣಪತಿಯ ಚಿತ್ರ ಅಥವಾ ವಿಗ್ರಹವನ್ನು ನೇತುಹಾಕುತ್ತಾರೆ. ವಾಸ್ತು ಶಾಸ್ತ್ರದಲ್ಲಿ ಇದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೆ ಪ್ರವೇಶದ್ವಾರದಲ್ಲಿ ಗಣೇಶನ ಚಿತ್ರವನ್ನು ಪ್ರತಿಷ್ಠಾಪಿಸುವಾಗ ಪ್ರತಿಯೊಬ್ಬರೂ ಕೆಲವೊಂದು ನಿಯಮಗಳನ್ನು ಪಾಲಿಸಬೇಕು.


ಯಾವ ದಿಕ್ಕು ಸೂಕ್ತ?

ವಾಸ್ತು ಶಾಸ್ತ್ರದಲ್ಲಿ ಮನೆಯ ಮುಂಭಾಗದ ದ್ವಾರದ ಮೇಲೆ ಗಣಪತಿ ವಿಗ್ರಹವನ್ನು ಇರಿಸಲು ಕೆಲವೊಂದು ಸೂಚನೆಗಳನ್ನು ಅನುಸರಿಸುವುದು ಮುಖ್ಯವಾಗಿದೆ. ಇದಕ್ಕಾಗಿ ಮನೆಯ ಮುಂಭಾಗದ ಬಾಗಿಲು ಉತ್ತರ ಅಥವಾ ದಕ್ಷಿಣಕ್ಕೆ ಎದುರಾಗಿರಬೇಕು. ಆದರೆ ಮುಖ್ಯ ಪ್ರವೇಶ ದ್ವಾರ ಇರುವಲ್ಲಿ ಪೂರ್ವ ಅಥವಾ ಪಶ್ಚಿಮಕ್ಕೆ ಎದುರಾಗಿರುವ ಗಣೇಶನ ಪ್ರತಿಮೆಯನ್ನು ಇರಿಸಬಾರದು.

ಸ್ಥಾಪನೆ ಸರಿಯಾಗಿರಲಿ

ಮನೆಯ ಮುಂಭಾಗದ ದ್ವಾರದ ಮೇಲೆ ಗಣೇಶನ ವಿಗ್ರಹವನ್ನು ಇರಿಸುವಾಗ ಅದನ್ನು ವಿಧಿವತ್ತಾಗಿ ಸ್ಥಾಪಿಸಬೇಕು. ವಿಗ್ರಹವು ಎಲ್ಲಾ ಸಮಯದಲ್ಲೂ ಒಳಮುಖವಾಗಿರಬೇಕು. ಪಶ್ಚಿಮ, ಉತ್ತರ ಮತ್ತು ಈಶಾನ್ಯ ದೃಷ್ಟಿಕೋನಗಳು ಇದಕ್ಕೆ ಅತ್ಯುತ್ತಮವೆಂದು ಹೇಳಲಾಗುತ್ತದೆ.

ಇದನ್ನೂ ಓದಿ Sadhguru Jaggi Vasudev: ಮಕ್ಕಳಲ್ಲಿ ಅಲರ್ಜಿ ಸಮಸ್ಯೆಗೆ ಏನು ಪರಿಹಾರ? ಸದ್ಗುರು ಸಲಹೆ ಇಲ್ಲಿದೆ ಕೇಳಿ

ಬಣ್ಣ ಯಾವುದು?

ವಾಸ್ತು ಶಾಸ್ತ್ರದ ಪ್ರಕಾರ ಕುಟುಂಬದಲ್ಲಿ ಸಮೃದ್ಧಿಯಾಗಬೇಕೆಂದು ಬಯಸಿದರೆ ಬಿಳಿ ಅಥವಾ ಸಿಂಧೂರ ವರ್ಣದ ಗಣೇಶನನ್ನು ಪ್ರತಿಷ್ಠಾಪಿಸಬೇಕು. ಇದನ್ನು ಮಾಡುವುದರಿಂದ ಕುಟುಂಬದಲ್ಲಿ ಸಂಪತ್ತು ಮತ್ತು ಸಂತೋಷವನ್ನುನಿರಂತರವಾಗಿ ಇರುವುದು.

ಪ್ರತಿಮೆಯ ಭಂಗಿ

ಗಣೇಶನ ಪ್ರತಿಮೆಯನ್ನು ಮನೆಯ ಮುಂಭಾಗದ ಬಾಗಿಲಿನಲ್ಲಿ ಕುಳಿತುಕೊಳ್ಳುವ ಭಂಗಿಯಲ್ಲಿ ಇಡಬೇಕು. ಮನೆಯ ದ್ವಾರದ ಹೊರಗೆ ನಿಂತಿರುವ ಗಣೇಶನ ಪ್ರತಿಷ್ಠಾಪನೆಯು ಅದೃಷ್ಟವನ್ನು ತರುವುದಿಲ್ಲ. ಕಾರ್ಯಸ್ಥಳ ಅಥವಾ ಕಚೇರಿಯಲ್ಲಿ ನಿಂತಿರುವ ಗಣೇಶನ ವಿಗ್ರಹವನ್ನು ಇಡಬಹುದು. ಆದರೆ ಮನೆಯಲ್ಲಿ ಇಡಬಾರದು ಎನ್ನುತ್ತದೆ ವಾಸ್ತು ನಿಯಮ.

Continue Reading

ಆರೋಗ್ಯ

Sadhguru Jaggi Vasudev: ಮಕ್ಕಳಲ್ಲಿ ಅಲರ್ಜಿ ಸಮಸ್ಯೆಗೆ ಏನು ಪರಿಹಾರ? ಸದ್ಗುರು ಸಲಹೆ ಇಲ್ಲಿದೆ ಕೇಳಿ

ಅಲರ್ಜಿ ತೊಂದರೆಗಳು ಈಗ ಎಲ್ಲರಲ್ಲೂ ಸಾಮಾನ್ಯ. ಇದಕ್ಕೆ ಮುಖ್ಯ ಕಾರಣ ನಮ್ಮ ಆಹಾರ. ಆದರೆ ಅದು ಹೇಗೆ ಬಂತು, ಕಡಿಮೆ ಮಾಡುವುದು ಹೇಗೆ ಎನ್ನುವುದಕ್ಕೆ ನಮ್ಮಲ್ಲಿ ಉತ್ತರವಿರುವುದಿಲ್ಲ. ವೈದ್ಯರನ್ನು ಸಂಪರ್ಕಿಸಿ ಒಂದೆರಡು ದಿನ ಔಷಧ ಪಡೆದು ಸುಮ್ಮನಾಗುತ್ತೇವೆ. ಇದು ಮತ್ತೊಮ್ಮೆ , ಮಗದೊಮ್ಮೆ ಉಂಟಾಗುತ್ತಲೇ ಇರುತ್ತದೆ. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಅಲರ್ಜಿಯನ್ನು ನಾವು ಸಣ್ಣ ವಯಸ್ಸಿನಲ್ಲೇ ದೂರ ಮಾಡಬಹುದು. ಅದು ಹೇಗೆ ಎಂಬುದನ್ನು ಸದ್ಗುರು (Sadhguru Jaggi Vasudev) ಹೇಳಿರುವುದು ಹೀಗೆ.

VISTARANEWS.COM


on

By

Sadhguru Jaggi Vasudev
Koo

ಇತ್ತೀಚಿನ ದಿನಗಳಲ್ಲಿ ಸಣ್ಣ ಮಕ್ಕಳು (children’s) ಅಲರ್ಜಿ (allergies ) ತೊಂದರೆಯಿಂದ ಬಳಲುತ್ತಿರುತ್ತಾರೆ. ಎಷ್ಟೇ ಆರೈಕೆ ಮಾಡಿದರೂ ಸಂಪೂರ್ಣ ಗುಣಮುಖರಾಗುವುದಿಲ್ಲ. ಎಷ್ಟೋ ಬಾರಿ ಪೋಷಕರು (parents) ತಮ್ಮ ಮಕ್ಕಳಿಗೆ ಏಕೆ ಈ ತೊಂದರೆ ಕಾಣಿಸಿಕೊಂಡಿತು ಎಂದು ತಮ್ಮನ್ನು ತಾವು ಪ್ರಶ್ನಿಸುತ್ತಲೇ ಇರುತ್ತಾರೆ. ಆದರೆ ಅವರಿಗೆ ಇದಕ್ಕೆ ಉತ್ತರವೇ ಸಿಗುವುದಿಲ್ಲ. ಪ್ರಸಿದ್ಧ ಆಧ್ಯಾತ್ಮಿಕ ಮಾರ್ಗದರ್ಶಿ ಮತ್ತು ಆರೋಗ್ಯ ತಜ್ಞ ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ಅವರು ಇದೀಗ ಮಕ್ಕಳಲ್ಲಿ ಉಂಟಾಗುವ ಅಲರ್ಜಿ ಸಮಸ್ಯೆಗಳಿಗೆ ಕಾರಣ ಮತ್ತು ಪರಿಹಾರವನ್ನು ಹೇಳಿದ್ದಾರೆ.

ಅಲರ್ಜಿ ತೊಂದರೆಗಳು ಈಗ ಎಲ್ಲರಲ್ಲೂ ಸಾಮಾನ್ಯ. ಇದಕ್ಕೆ ಮುಖ್ಯ ಕಾರಣ ನಮ್ಮ ಆಹಾರ. ಆದರೆ ಅದು ಹೇಗೆ ಬಂತು, ಕಡಿಮೆ ಮಾಡುವುದು ಹೇಗೆ ಎನ್ನುವುದಕ್ಕೆ ನಮ್ಮಲ್ಲಿ ಉತ್ತರವಿರುವುದಿಲ್ಲ. ವೈದ್ಯರನ್ನು ಸಂಪರ್ಕಿಸಿ ಒಂದೆರಡು ದಿನ ಔಷಧ ಪಡೆದು ಸುಮ್ಮನಾಗುತ್ತೇವೆ. ಇದು ಮತ್ತೊಮ್ಮೆ , ಮಗದೊಮ್ಮೆ ಉಂಟಾಗುತ್ತಲೇ ಇರುತ್ತದೆ. ಮಕ್ಕಳಲ್ಲಿ ಕಾಣಿಸಿಕೊಳ್ಳುವ ಅಲರ್ಜಿಯನ್ನು ನಾವು ಸಣ್ಣ ವಯಸ್ಸಿನಲ್ಲೇ ದೂರ ಮಾಡಬಹುದು ಎಂದಿದ್ದಾರೆ ಅವರು.

ಮಗುವು ಅಲರ್ಜಿಯೊಂದಿಗೆ ಹೋರಾಡುವುದನ್ನು ನೋಡುವುದು ಪ್ರತಿಯೊಬ್ಬ ಪೋಷಕರಿಗೂ ಸಂಕಟ ಮತ್ತು ಅಸಮಾಧಾನವನ್ನು ಉಂಟುಮಾಡುತ್ತದೆ. ಎಷ್ಟೇ ಔಷಧ ಮಾಡಿದರೂ ಇದು ಗುಣವಾಗದೇ ಇರುವುದು ನಮ್ಮನ್ನು ಚಿಂತೆಗೆ ಈಡಾಗುವಂತೆ ಮಾಡುತ್ತದೆ. ಎಷ್ಟೋ ಬಾರಿ ಇದು ಪುಟ್ಟ ಮಕ್ಕಳಿಗೆ ತಮ್ಮ ಬದುಕಿನಲ್ಲಿ ಬೇಸರ, ನಿರಾಸೆಯನ್ನು ಉಂಟು ಮಾಡಬಹುದು. ಆದರೂ ಮಕ್ಕಳ ಈ ಅಲರ್ಜಿ ಸಮಸ್ಯೆಗಳನ್ನು ನೈಸರ್ಗಿಕವಾಗಿ ಪರಿಹರಿಸಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು, ಆಧ್ಯಾತ್ಮಿಕ ಚಿಂತಕರಾದ ಜಗ್ಗಿ ವಾಸುದೇವ್.

ಮಕ್ಕಳಲ್ಲಿ ಅಲರ್ಜಿಯನ್ನು ನಿರ್ವಹಿಸುವ ಕುರಿತು ಅವರು ತಮ್ಮ ಸಲಹೆಯನ್ನು ನೀಡಿದ್ದಾರೆ. ಸುಲಭವಾದ ಜೀವನಶೈಲಿ ಹೊಂದಾಣಿಕೆಯಿಂದ ಶಕ್ತಿಯುತವಾದ ಮನೆ ಚಿಕಿತ್ಸೆಗಳವರೆಗೆ ಎಲ್ಲವೂ ಅಲರ್ಜಿಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಮತ್ತು ಮಕ್ಕಳ ಸಾಮಾನ್ಯ ಆರೋಗ್ಯವನ್ನು ಹೆಚ್ಚಿಸಲು ಪ್ರೇರಣೆಯಾಗುತ್ತದೆ ಎನ್ನುತ್ತಾರೆ ಅವರು.
ಇತ್ತೀಚಿಗೆ ಅವರು ಅಲರ್ಜಿಯ ಪ್ರಮುಖ ವಿಷಯವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಅಲರ್ಜಿಯನ್ನು ಜಯಿಸಲು ಪ್ರಮುಖ ಮಾರ್ಗಗಳನ್ನು ಸೂಚಿಸಿದ್ದಾರೆ.

ಇದನ್ನೂ ಓದಿ: Priyanka Chopra: ಬೆಳ್ಳುಳ್ಳಿ ಎಸಳು ಪಾದಗಳಿಗೆ ಉಜ್ಜುವುದರಿಂದ ಏನು ಪ್ರಯೋಜನ? ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದೇನು?

ಮಕ್ಕಳ ಬಗ್ಗೆ ಮಾತನಾಡಿದ ಅವರು, ಅಲರ್ಜಿಯಿಂದ ಪರಿಹಾರ ಪಡೆಯಲು ಹಲವು ದಾರಿಗಳಿವೆ. ಆರೋಗ್ಯಕರ ಜೀವಿಗಳಿಗೆ ಆಹಾರ ಸೇವನೆಯಲ್ಲಿ ಕೆಲವು ಬದಲಾವಣೆಗಳನ್ನು ಸಲಹೆ ನೀಡಿದ್ದಾರೆ.

ಮಕ್ಕಳಿಗೆ ಅಲರ್ಜಿಗಳು ಹೋಗಬೇಕಾದರೆ ಹಾಲು ಮತ್ತು ಮಾಂಸದ ಉತ್ಪನ್ನಗಳಿಂದ ಅವರನ್ನು ದೂರವಿರಿಸಿ. ಇವು ತುಂಬಾ ಕೆಟ್ಟದಾಗಿ ಅಲರ್ಜಿ ಉಂಟು ಮಾಡಬಲ್ಲದು. ಸ್ವಲ್ಪ ಅಲರ್ಜಿ ಕಾಣಿಸಿ ಕೊಂಡರೆ ಪರವಾಗಿಲ್ಲ. ತುಂಬಾ ಕೆಟ್ಟದಾಗಿ ಅಲರ್ಜಿಯಾಗಿದ್ದರೆ ಮಾಂಸ ಉತ್ಪನ್ನಗಳನ್ನು ತ್ಯಜಿಸಿ ಸಾಕಷ್ಟು ತರಕಾರಿ, ತಾಜಾ ಹಣ್ಣು ಮತ್ತು ವಸ್ತುಗಳನ್ನೇ ಅವರಿಗೆ ಸೇವಿಸಲು ಕೊಡಿ. ಇದರಿಂದ ಅವರು ಬಹುಬೇಗನೆ ಅಲರ್ಜಿ ತೊಂದರೆಯಿಂದ ಗುಣಮುಖರಾಗುತ್ತಾರೆ ಎಂದು ಸದ್ಗುರು ತಿಳಿಸಿದ್ದಾರೆ.

Continue Reading
Advertisement
Mahua Moitra
ಪ್ರಮುಖ ಸುದ್ದಿ14 mins ago

Mahua Moitra: ಸುಮ್ನೆ ಕೂತ್ಕೊಳ್ಳಿ ರಾಹುಲ್‌ ಗಾಂಧಿ; ಸಂಸತ್ತಲ್ಲೇ ಮಹುವಾ ಮೊಯಿತ್ರಾ ಹೀಗೆ ಸಿಟ್ಟಾಗಿದ್ದೇಕೆ?

Viral Video
Latest21 mins ago

Viral Video: ಲೈವ್‌ ವರದಿ ಮಾಡುತ್ತಿದ್ದಾಗ ಪಾಕ್ ಟಿವಿ ವರದಿಗಾರ್ತಿ ಮೇಲೆ ಗೂಳಿ ದಾಳಿ!

Hemant Nimbalkar
ಪ್ರಮುಖ ಸುದ್ದಿ25 mins ago

Hemant Nimbalkar: ವಾರ್ತಾ ಇಲಾಖೆ ಆಯುಕ್ತರಾಗಿ ಐಪಿಎಸ್​ ಅಧಿಕಾರಿ ಹೇಮಂತ್ ನಿಂಬಾಳ್ಕರ್ ನೇಮಕ

Kolar News
ಕರ್ನಾಟಕ25 mins ago

Kolar News: ಕಾಲೇಜಿನ ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ವಿದ್ಯಾರ್ಥಿನಿ; ಯುವಕನ ಬಂಧನ

Tamanna Bhatia
Latest33 mins ago

Tamanna Bhatia: ‘ಜೀ ಕರ್ದಾ’ದಲ್ಲಿ ತಮನ್ನಾ ಭಾಟಿಯಾ ಪೂರ್ತಿ ಟಾಪ್‌ಲೆಸ್‌! ವಿಡಿಯೊ ಇದೆ

bengaluru student Vaishnavi M who won the prestigious award from IIT Bombay
ಬೆಂಗಳೂರು43 mins ago

Bengaluru News: ಬೆಂಗಳೂರಿನ ವಿದ್ಯಾರ್ಥಿನಿಗೆ ಐಐಟಿ ಬಾಂಬೆಯ ಪ್ರತಿಷ್ಠಿತ ಪ್ರಶಸ್ತಿ

IPL 2025
ಪ್ರಮುಖ ಸುದ್ದಿ49 mins ago

IPL 2025 : ಐಪಿಎಲ್​ ತಂಡಗಳಲ್ಲಿ ಉಳಿಸಿಕೊಳ್ಳುವ ಆಟಗಾರರ ವಿಚಾರದಲ್ಲಿ ಫ್ರಾಂಚೈಸಿಗಳ ನಡುವೆ ಭಿನ್ನಾಭಿಪ್ರಾಯ

Dharma Keerthiraj starrer production No 1 movie Muhurta
ಕರ್ನಾಟಕ51 mins ago

Kannada New Movie: ಗೋಪಿನಾಥ ಬೆಟ್ಟದಲ್ಲಿ ನಡೆದ ಧರ್ಮ ಕೀರ್ತಿರಾಜ್ ಅಭಿನಯದ ʼಪ್ರೊಡಕ್ಷನ್ ನಂ 1ʼ ಚಿತ್ರದ ಮುಹೂರ್ತ

Anjanadri Temple Hundi Count
ಕರ್ನಾಟಕ54 mins ago

Koppala News: ಅಂಜನಾದ್ರಿ ದೇಗುಲ ಹುಂಡಿಯಲ್ಲಿ 32.95 ಲಕ್ಷ ರೂ; ವಿವಿಧ ದೇಶಗಳ ನೋಟುಗಳು

Pancreatitis
ಆರೋಗ್ಯ56 mins ago

Pancreatitis: ಏನಿದು ಪ್ಯಾಂಕ್ರಿಯಾಟೈಟಿಸ್‌ನಿಂದ ಉಂಟಾಗುವ ಉರಿಯೂತ? ಇದಕ್ಕೇನು ಪರಿಹಾರ?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ3 hours ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ1 day ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ2 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು2 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ3 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ3 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ4 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

ಟ್ರೆಂಡಿಂಗ್‌