NIA Raid: ಮುಸ್ಲಿಂ ಉಗ್ರ ಸಂಘಟನೆ ಬಗ್ಗುಬಡಿಯಲು 4 ರಾಜ್ಯಗಳಲ್ಲಿ ಎನ್ಐಎ ದಾಳಿ - Vistara News

ದೇಶ

NIA Raid: ಮುಸ್ಲಿಂ ಉಗ್ರ ಸಂಘಟನೆ ಬಗ್ಗುಬಡಿಯಲು 4 ರಾಜ್ಯಗಳಲ್ಲಿ ಎನ್ಐಎ ದಾಳಿ

ಎನ್‌ಐಎ ಅಧಿಕಾರಿಗಳ ಪ್ರಕಾರ, ನಿನ್ನೆಯ ಎನ್‌ಐಎ ದಾಳಿಗಳು (NIA raid) ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳೊಂದಿಗೆ ದೇಶದೊಳಗಿನ ಶಂಕಿತರು ಹೊಂದಿರುವ ಸಂಪರ್ಕವನ್ನು ಬಹಿರಂಗಪಡಿಸಿವೆ.

VISTARANEWS.COM


on

NIA Raids
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸದಿಲ್ಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಭಾನುವಾರ ನಾಲ್ಕು ರಾಜ್ಯಗಳ ವಿವಿಧೆಡೆ ದಾಳಿ (NIA Raid) ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯಪ್ರದೇಶದ ದೇವಾಸ್ ಜಿಲ್ಲೆ, ಗುಜರಾತ್‌ನ ಗಿರ್ ಸೋಮನಾಥ್ ಜಿಲ್ಲೆ, ಉತ್ತರ ಪ್ರದೇಶದ ಅಜಂಗಢ ಜಿಲ್ಲೆ ಮತ್ತು ಕೇರಳದ ಕೋಝಿಕ್ಕೋಡ್ ಜಿಲ್ಲೆಗಳಲ್ಲಿ ಶಂಕಿತರ ಮೇಲೆ ದಾಳಿ ನಡೆಸಲಾಗಿದೆ. ಮುಸ್ಲಿಂ ಉಗ್ರ ಸಂಘಟನೆ ಘಜ್ವಾ-ಎ-ಹಿಂದ್ (Ghazwa-e-Hind) ಹೆಡೆಮುರಿ ಕಟ್ಟಲು ಈ ದಾಳಿಗಳು ನಡೆದಿವೆ.

ಕಳೆದ ವರ್ಷ ಬಿಹಾರದ ಪಾಟ್ನಾ ಜಿಲ್ಲೆಯ ಫುಲ್ವಾರಿ ಶರೀಫ್ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಪಾಕಿಸ್ತಾನಿ ಪ್ರಜೆ ಝೈನ್ (pakistan terrorist) ಎಂಬಾತ ಸೃಷ್ಟಿಸಿದ ʼಘಜ್ವಾ-ಎ-ಹಿಂದ್’ ಎಂಬ ಮೂಲಭೂತವಾದಿ, ಪ್ರಚೋದನಕಾರಿ ಕಂಟೆಂಟ್‌ನ ವಾಟ್ಸ್ಯಾಪ್ ಗುಂಪಿನ ನಿರ್ವಾಹಕ ಮಾರ್ಗೂಬ್ ಅಹ್ಮದ್ ಡ್ಯಾನಿಶ್ ಅಲಿಯಾಸ್ ʼತಾಹಿರ್ʼನನ್ನು ಪೊಲೀಸರು ಬಂಧಿಸಿದ್ದರು. ನಂತರ ಈ ಪ್ರಕರಣವನ್ನು ಎನ್‌ಐಎಗೆ ವರ್ಗಾಯಿಸಲಾಯಿತು. ಎನ್‌ಐಎ ಈ ವರ್ಷದ ಆರಂಭದಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯಡಿಯಲ್ಲಿ ಮಾರ್ಗೂಬ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು.

ಎನ್‌ಐಎ ಅಧಿಕಾರಿಗಳ ಪ್ರಕಾರ, ನಿನ್ನೆಯ ಎನ್‌ಐಎ ದಾಳಿಗಳು ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳೊಂದಿಗೆ ಶಂಕಿತರು ಹೊಂದಿರುವ ಸಂಪರ್ಕವನ್ನು ಬಹಿರಂಗಪಡಿಸಿವೆ. “ಈ ಶಂಕಿತರು ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕದಲ್ಲಿದ್ದರು ಮತ್ತು ಘಜ್ವಾ-ಎ-ಹಿಂದ್‌ನ ಆಮೂಲಾಗ್ರ, ಭಾರತ-ವಿರೋಧಿ ಕಲ್ಪನೆಯನ್ನು ಪ್ರಚಾರ ಮಾಡುವಲ್ಲಿ ತೊಡಗಿಸಿಕೊಂಡಿದ್ದಾರೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾರ್ಗೂಬ್ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಯೆಮೆನ್‌ ದೇಶಗಳಿಂದ ಹಲವರನ್ನು ಗುಂಪಿಗೆ ಸೇರಿಸಿದ್ದ.

ವಾಟ್ಸ್ಯಾಪ್ ಗ್ರೂಪ್ ಅನ್ನು ಪಾಕಿಸ್ತಾನ ಮೂಲದ ಉಗ್ರರು ನಿರ್ವಹಿಸುತ್ತಿದ್ದಾರೆ. ಭಾರತದ ಭೂಪ್ರದೇಶದಲ್ಲಿ ಘಜ್ವಾ-ಎ-ಹಿಂದ್ ಸ್ಥಾಪಿಸಲು ಚುರುಕು, ಪ್ರಚೋದಿತ ಯುವಕರನ್ನು ಸೇರಿಸಿಕೊಳ್ಳುವ ಗುರಿಯನ್ನು ಹೊಂದಿದ್ದಾರೆ. “ಮಾರ್ಗೂಬ್ ಭಾರತದಾದ್ಯಂತ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಸ್ಲೀಪರ್ ಸೆಲ್‌ಗಳನ್ನು ಹೆಚ್ಚಿಸುವ ಉದ್ದೇಶದಿಂದ ಗುಂಪಿನ ಸದಸ್ಯರನ್ನು ಪ್ರೇರೇಪಿಸಲು ಪ್ರಯತ್ನಿಸುತ್ತಿದ್ದ” ಎಂದು ಎನ್‌ಐಎ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: NIA Raids: ಪಂಜಾಬ್, ಹರ್ಯಾಣದ 14 ಕಡೆ ಎನ್ಐಎ ದಾಳಿ! ಕಾರಣ ಏನು?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಹಿಳೆ

Indian Railway: ಮಹಿಳಾ ಪ್ರಯಾಣಿಕರಿಗೆ ರೈಲಿನಲ್ಲಿ ಎಷ್ಟೊಂದು ಸುರಕ್ಷತಾ ಕ್ರಮಗಳಿವೆ ನೋಡಿ!

ಭಾರತೀಯ ರೈಲ್ವೇಯ (Indian Railway) ಏಕ ವ್ಯಕ್ತಿ ಪ್ರಯಾಣಿಕ ಮಹಿಳೆಯರ ರಕ್ಷಣೆಗಾಗಿ ಹಲವು ಕ್ರಮ ಕೈಗೊಂಡಿದೆ. ಇದು 1989ರಲ್ಲಿ ಜಾರಿಗೆ ಬಂದಿದ್ದರೂ ಹೆಚ್ಚಿನವರಿಗೆ ಈ ಬಗ್ಗೆ ಗೊತ್ತಿಲ್ಲ. ಈ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Indian Railway
Koo

ಮನೆಯ ಮಗಳು ರೈಲಿನಲ್ಲಿ (Indian Railway) ಒಬ್ಬಳೇ ಪ್ರಯಾಣ (Solo trip) ಮಾಡಬೇಕಾದ ಅನಿವಾರ್ಯತೆ ಬಂದಾಗ ಪೋಷಕರಿಗೆ ಒಂದು ಕ್ಷಣ ಗಾಬರಿಯಾಗುವುದು ಸಹಜ. ಇನ್ನು ಮಹಿಳೆಯರಿಗೂ ಅಷ್ಟೇ.. ಏಕಾಂಗಿಯಾಗಿ ರೈಲು ಪ್ರಯಾಣ (solo women travellers) ಮಾಡಬೇಕಾದ ಸಂದರ್ಭ ಬಂದರೆ ಕೊಂಚ ಆತಂಕವಂತೂ ಮನದಲ್ಲಿ ಇದ್ದೇ ಇರುತ್ತದೆ. ಆದರೆ ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಸಬೇಕಾದರೆ ಈ ಚಿಂತೆ ಬೇಕಾಗಿಲ್ಲ.

ಭಾರತೀಯ ರೈಲ್ವೇಯ ಏಕ ವ್ಯಕ್ತಿ ಪ್ರಯಾಣಿಕ ಮಹಿಳೆಯರ ರಕ್ಷಣೆಗಾಗಿ ಹಲವು ಕ್ರಮ ಕೈಗೊಂಡಿದೆ. ಇದು 1989ರಲ್ಲಿ ಜಾರಿಗೆ ಬಂದಿದ್ದರೂ ಹೆಚ್ಚಿನವರಿಗೆ ಈ ಬಗ್ಗೆ ಗೊತ್ತಿಲ್ಲ. ಈ ಕುರಿತು ಮಾಹಿತಿ ಇಲ್ಲಿದೆ.

1989ರಲ್ಲಿ ಜಾರಿಗೆ ಬಂದ ಈ ವಿಶೇಷ ಕಾನೂನು ಭಾರತೀಯ ರೈಲ್ವೇ ಕಾಯಿದೆ 1989 ರ ಸೆಕ್ಷನ್ 139 ರಲ್ಲಿ ವಿವರಿಸಲಾಗಿದೆ. ಒಂಟಿ ಮಹಿಳಾ ಪ್ರಯಾಣಿಕರಿಗೆ ವಿಶೇಷವಾಗಿ ಮಕ್ಕಳೊಂದಿಗೆ ಇರುವವರಿಗೆ ಇದು ರಕ್ಷಣೆ ನೀಡುತ್ತದೆ. ಉದಾಹರಣೆಗೆ ಈ ವಿಭಾಗದ ಪ್ರಕಾರ ಒಬ್ಬ ಮಹಿಳೆ ಪುರುಷ ಪ್ರಯಾಣಿಕರಿಲ್ಲದೆ ಒಂಟಿಯಾಗಿ ಪ್ರಯಾಣಿಸುತ್ತಿದ್ದರೆ ಮತ್ತು ಆಕೆ ತನ್ನ ಮಗುವಿನೊಂದಿಗೆ ಇದ್ದರೆ ಅವಳು ರೈಲು ಪಾಸ್ ಅಥವಾ ಟಿಕೆಟ್ ಇಲ್ಲದೆ ಕಂಡುಬಂದರೆ ರಾತ್ರಿಯಲ್ಲಿ ರೈಲಿನಿಂದ ಇಳಿಯಲು ಆದೇಶಿಸಲಾಗುವುದಿಲ್ಲ.

ಹದಿಹರೆಯದ ಹುಡುಗಿ ಅಥವಾ ಮಹಿಳೆ ಏಕಾಂಗಿಯಾಗಿ ಪ್ರಯಾಣಿಸುತ್ತಿದ್ದರೆ ಟಿಕೆಟ್ ಹೊಂದಿಲ್ಲದಿದ್ದರೆ ಟಿಟಿಇ ಅವರನ್ನು ರೈಲಿನಿಂದ ಹೊರಹಾಕಲು ಅನುಮತಿ ಇಲ್ಲ ಎಂದು ಭಾರತೀಯ ರೈಲ್ವೆ ಸ್ಪಷ್ಟವಾಗಿ ಹೇಳಿದೆ.

ಮಹಿಳೆಯ ಬಳಿ ಹಣವಿದ್ದರೆ ದಂಡ ಪಾವತಿಸಿ ಪ್ರಯಾಣ ಮುಂದುವರಿಸಬಹುದು. ಮಹಿಳೆಗೆ ಹಣದ ಕೊರತೆಯಿರುವ ಸಂದರ್ಭಗಳಲ್ಲಿ ಸಹ ಟಿಟಿಇ ಅವರನ್ನು ಕಂಪಾರ್ಟ್‌ಮೆಂಟ್‌ನಿಂದ ಹೊರಹಾಕಲು ಅನುಮತಿ ಇಲ್ಲ. ಆದರೆ ಹೆಚ್ಚಿನ ಮಹಿಳಾ ಪ್ರಯಾಣಿಕರಿಗೆ ಈ ಬಗ್ಗೆ ತಿಳಿದಿಲ್ಲ. ಒಂಟಿಯಾಗಿ ಪ್ರಯಾಣಿಸುವ ಪ್ರತಿಯೊಬ್ಬ ಮಹಿಳೆ ತಿಳಿದಿರಬೇಕಾದ ಪ್ರಮುಖ ಪ್ರಯಾಣಿಕರ ನಿಯಮಗಳಲ್ಲಿ ಇದು ಒಂದು. ಮಹಿಳಾ ಪ್ರಯಾಣಿಕರಿಗಾಗಿ ಅಧಿಕಾರಿಗಳು ಜಾರಿಗೆ ತಂದಿರುವ ಇನ್ನೂ ಕೆಲವು ನಿಯಮಗಳನ್ನು ಇಲ್ಲಿವೆ.


ಮಹಿಳಾ ಸುರಕ್ಷತೆಗಾಗಿ ಭಾರತೀಯ ರೈಲ್ವೇಯಲ್ಲಿ ಹಲವು ನಿಯಮಗಳು ಜಾರಿಯಲ್ಲಿವೆ
1. ಭಾರತೀಯ ರೈಲ್ವೆ ಕಾಯಿದೆ 1989 ರ ಸೆಕ್ಷನ್ 311 ರ ಅಡಿಯಲ್ಲಿ ಮಿಲಿಟರಿ ಸಿಬ್ಬಂದಿಗೆ ಮಹಿಳಾ ಕಂಪಾರ್ಟ್‌ಮೆಂಟ್‌ಗಳನ್ನು ಪ್ರವೇಶಿಸಲು ಅನುಮತಿಸಲಾಗುವುದಿಲ್ಲ.

2. ಅಧಿಕಾರಿಗಳೊಂದಿಗೆ ಮಹಿಳಾ ಕಾನ್‌ಸ್ಟೆಬಲ್ ಇದ್ದಾಗ ಮಾತ್ರ ಮಹಿಳೆಯನ್ನು ಹೊರಹೋಗುವಂತೆ ಹೇಳಬಹುದು.

3. ಸೆಕ್ಷನ್ 162 ರ ಪ್ರಕಾರ 12 ವರ್ಷದೊಳಗಿನ ಹುಡುಗರು ಮಹಿಳಾ ಕಂಪಾರ್ಟ್‌ಮೆಂಟ್‌ಗಳಲ್ಲಿ ಪ್ರಯಾಣಿಸಬಹುದು.

4. ಮಹಿಳಾ ಕೋಚ್‌ಗೆ ಪ್ರವೇಶಿಸುವ ಯಾವುದೇ ಪುರುಷ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ.

5. ಮಹಿಳೆಯರಿಗಾಗಿ ದೂರದ ಮೇಲ್/ ಎಕ್ಸ್‌ಪ್ರೆಸ್ ರೈಲುಗಳ ಸ್ಲೀಪರ್ ವರ್ಗದಲ್ಲಿ ಆರು ಬರ್ತ್‌ಗಳನ್ನು ಕಾಯ್ದಿರಿಸಲಾಗಿದೆ. ಅಲ್ಲದೆ, ಗರೀಬ್ ರಥ/ರಾಜಧಾನಿ/ ದುರೊಂಟೊ/ ಸಂಪೂರ್ಣ ಹವಾನಿಯಂತ್ರಿತ ಎಕ್ಸ್‌ಪ್ರೆಸ್ ರೈಲುಗಳ ಮೂರನೇ ಹಂತದ AC (3AC) ಕೋಚ್‌ಗಳಲ್ಲಿ ಆರು ಬರ್ತ್‌ಗಳನ್ನು ಮಹಿಳಾ ಪ್ರಯಾಣಿಕರಿಗೆ ಕಾಯ್ದಿರಿಸಲಾಗಿದೆ. ಅವರ ವಯಸ್ಸನ್ನು ಲೆಕ್ಕಿಸದೆ ಅಥವಾ ಅವರು ಏಕಾಂಗಿಯಾಗಿ ಅಥವಾ ಗುಂಪಿನಲ್ಲಿ ಪ್ರಯಾಣಿಸುತ್ತಿದ್ದರೆ ಇದನ್ನು ಮಾಡಲಾಗುತ್ತದೆ.

6. ಭಾರತೀಯ ರೈಲ್ವೇ ನಿಲ್ದಾಣಗಳಲ್ಲಿ ಸಿಸಿಟಿವಿಗಳು ಮತ್ತು ಮೇಲ್ವಿಚಾರಣಾ ಕೊಠಡಿಗಳನ್ನು ಸ್ಥಾಪಿಸುವ ಮೂಲಕ ಮಹಿಳೆಯರ ಸುರಕ್ಷತೆಯನ್ನು ಹೆಚ್ಚಿಸಿದೆ.

7. ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (RPF) 2020ರ ಅಕ್ಟೋಬರ್ 17ರಂದು ‘ಮೇರಿ ಸಹೇಲಿ’ ಎಂಬ ಪ್ಯಾನ್ ಇಂಡಿಯಾ ಉಪಕ್ರಮವನ್ನು ಪ್ರಾರಂಭಿಸಿದೆ.

ಇದನ್ನೂ ಓದಿ: Driving Tips: ವಾಹನ ಚಾಲನೆ ಮಾಡುತ್ತಿರುವಾಗ ಪ್ರಾಣಿಗಳಿಂದಾಗುವ ಅಪಘಾತ ತಪ್ಪಿಸಿಕೊಳ್ಳುವುದು ಹೇಗೆ?

8. ರೈಲಿನಲ್ಲಿ ಪ್ರಯಾಣಿಸುವ ಮಹಿಳಾ ಪ್ರಯಾಣಿಕರಿಗೆ ಬೋರ್ಡಿಂಗ್‌ನಿಂದ ಡಿ-ಬೋರ್ಡಿಂಗ್‌ವರೆಗಿನ ಸಂಪೂರ್ಣ ಪ್ರಯಾಣಕ್ಕಾಗಿ ವರ್ಧಿತ ಸುರಕ್ಷತೆ ಮತ್ತು ಭದ್ರತೆಯನ್ನು ಒದಗಿಸುವ ಉದ್ದೇಶವನ್ನು ಇದು ಹೊಂದಿದೆ.

9. ಮಹಿಳಾ ಪ್ರಯಾಣಿಕರಿಗೆ ವಿಶೇಷವಾಗಿ ಒಂಟಿಯಾಗಿ ಪ್ರಯಾಣಿಸುವವರಿಗೆ ಭದ್ರತೆಯನ್ನು ಒದಗಿಸುವುದು ಉಪಕ್ರಮದ ಕಡೆಗೆ ಹೆಚ್ಚಿನ ಗಮನ ನೀಡಲಾಗುತ್ತದೆ.

Continue Reading

ದೇಶ

Sachin Tendulkar: ಸಚಿನ್ ತೆಂಡೂಲ್ಕರ್ ಸೆಕ್ಯೂರಿಟಿ ಗಾರ್ಡ್‌ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

Sachin Tendulkar:ಮಹಾರಾಷ್ಟ್ರದಲ್ಲಿರುವ ತಮ್ಮ ಮನೆಯಲ್ಲಿ ಬುಧವಾರ ಬೆಳಗ್ಗಿನ ಜಾವ 1:30ಕ್ಕೆ ತನ್ನ ಸರ್ವೀಸ್ ಗನ್ ನಿಂದ ಕುತ್ತಿಗೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನು ಗಮನಿಸಿದ ಕುಟುಂಬಸ್ಥರು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಪ್ರಕಾಶ್ ಅದಾಗಲೇ ಮೃತಪಟ್ಟಿದ್ದರು. ಪ್ರಕಾಶ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

VISTARANEWS.COM


on

Sachin Tendulkar
Koo

ಮುಂಬೈ: ಭಾರತೀಯ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್(Sachin Tendulkar) ಅವರ ಭದ್ರತಾ ಸಿಬ್ಬಂದಿ(VVIP Security guard) ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ(Self Harming) ಮಾಡಿಕೊಂಡಿದ್ದಾರೆ. ರಾಜ್ಯ ಮೀಸಲು ಪೊಲೀಸ್ ಪಡೆಯ ಜವಾನ್ ಪ್ರಕಾಶ್ ಕಾಪ್ಡೆ (39) ಮೃತ ದುರ್ದೈವಿ. ಸಚಿನ್ ಅವರ ವಿವಿಐಪಿ ಭದ್ರತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾಪ್ಡೆ, ಇತ್ತೀಚೆಗಷ್ಟೇ ಕರ್ತವ್ಯಕ್ಕೆ ರಜೆ ಪಡೆದು ಊರಿಗೆ ತೆರಳಿದ್ದರು. ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿರುವ ತಮ್ಮ ಮನೆಯಲ್ಲಿ ಬುಧವಾರ ಬೆಳಗ್ಗಿನ ಜಾವ 1:30ಕ್ಕೆ ತನ್ನ ಸರ್ವೀಸ್ ಗನ್ ನಿಂದ ಕುತ್ತಿಗೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನು ಗಮನಿಸಿದ ಕುಟುಂಬಸ್ಥರು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಪ್ರಕಾಶ್ ಅದಾಗಲೇ ಮೃತಪಟ್ಟಿದ್ದರು. ಪ್ರಕಾಶ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: Viral Video: 160 ಕಿ.ಮೀ. ವೇಗದಲ್ಲಿ ಡ್ರೈವಿಂಗ್‌..ಇನ್‌ಸ್ಟಾಗ್ರಾಂನಲ್ಲಿ ಲೈವ್‌..ಡೆಡ್ಲಿ ಆಕ್ಸಿಡೆಂಟ್‌! ವೈರಲಾಯ್ತು ಶಾಕಿಂಗ್‌ ವಿಡಿಯೋ

ಆದರೆ ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆತ್ಮಹತ್ಯೆಗೆ ಕಾರಣವೇನು ಎಂಬುದನ್ನು ತಿಳಿಯಲು ಪ್ರಕಾಶ್ ಅವರ ಪೋಷಕರು, ಪತ್ನಿ, ಮಕ್ಕಳು, ಹತ್ತಿರದ ಸಂಬಂಧಿಕರು ಮತ್ತು ಸ್ನೇಹಿತರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ವಿವಿಐಪಿ ಭದ್ರತಾ ಸಿಬ್ಬಂದಿಯ ಆತ್ಮಹತ್ಯೆಯ ಬಗ್ಗೆಯೂ ಎಸ್‌ಆರ್‌ಪಿಎಫ್ ತನಿಖೆ ನಡೆಸುತ್ತಿದೆ.

ಪ್ರಕಾಶ್ ಕಾಪ್ಡೆ ಪತ್ನಿ, ಇಬ್ಬರು ಪುಟ್ಟ ಮಕ್ಕಳು, ಪೋಷಕರು, ಸಹೋದರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕಾಶ್ ಕಾಪ್ಡೆ ಮೃತದೇಹ, ರಿವಾಲ್ವರ್ , ಮೊಬೈಲ್ ಫೋನ್ ಸೇರಿದಂತೆ ಇತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇತ್ತ ಘಟನೆಗೆ ಕಾರಣಗಳು ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಜಾಮ್ನೆರ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್‌ಸ್ಪೆಕ್ಟರ್ ಕಿರಣ್ ಶಿಂಧೆ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಪಡೆದಿರುವ ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ ಅವರಿಗೆ, ಭಾರತ ಸರ್ಕಾರವು ಭಾರತ ರತ್ನ ಗೌರವ ನೀಡಿದೆ. ಪ್ರಸ್ತುತ ಅವರು ಮುಂಬೈ ಇಂಡಿಯನ್ಸ್‌ ತಂಡದ ಭಾಗವಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಹಾಗೂ ಶತಕ ಸಿಡಿಸಿರುವ ದಾಖಲೆ ಈಗಲೂ ತೆಂಡೂಲ್ಕರ್‌ ಹೆಸರಲ್ಲಿದೆ.

Continue Reading

ವೈರಲ್ ನ್ಯೂಸ್

Viral Video: 160 ಕಿ.ಮೀ. ವೇಗದಲ್ಲಿ ಡ್ರೈವಿಂಗ್‌..ಇನ್‌ಸ್ಟಾಗ್ರಾಂನಲ್ಲಿ ಲೈವ್‌..ಡೆಡ್ಲಿ ಆಕ್ಸಿಡೆಂಟ್‌! ವೈರಲಾಯ್ತು ಶಾಕಿಂಗ್‌ ವಿಡಿಯೋ

Viral Video:ಅಹ್ಮದಾಬಾದ್‌ನಿಂದ ಮುಂಬೈಗೆ SUV ಕಾರಿನಲ್ಲಿ ರೋಡ್‌ ಟ್ರಿಪ್‌ ಹೊರಟಿದ್ದ ಐವರು ಯುವಕರು ಕಾರು ಚಲಾಯಿಸುತ್ತಲೇ ಇನ್‌ಸ್ಟಾಗ್ರಾಂ ಲೈವ್‌ ಹೋಗಿದ್ದಾರೆ. ಒಂದು ಅತೀ ವೇಗದ ಕಾರು ಚಾಲನೆ ಅದರ ಜೊತೆ ಇನ್‌ಸ್ಟಾಗ್ರಾಂನಲ್ಲಿ ಲೈವ್‌ ಹೀಗೆ ಎದುರಿಗೆ ಬರುತ್ತಿದ್ದ ಒಂದೊಂದೆ ವಾಹಗಳನ್ನು ಓವರ್‌ಟೇಕ್‌ ಮಾಡುತ್ತಾ ಹುಚ್ಚಾಟ ಮೆರೆದಿದ್ದಾರೆ. ಫುಲ್‌ ಎಂಜಾಯ್‌ ಮೂಡ್‌ನಲ್ಲಿದ್ದ ಯುವಕರ ಹುಚ್ಚಾಟದಿಂದ ಎದುರಿಗೆ ಬರುತ್ತಿದ್ದ ವಾಹನ ತಪ್ಪಿಸಲು ಹೋಗಿ ಮರವೊಂದಕ್ಕೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಯುವಕರಿಬ್ಬರು ಸ್ಥಳದಲ್ಲೇ ಬಲಿಯಾಗಿದ್ದಾರೆ.

VISTARANEWS.COM


on

Viral Video
Koo

ಗುಜರಾತ್‌: ಮೋಜಿಗೆಂದು ವೇಗವಾಗಿ ವಾಹನ ಚಲಾಯಿಸಿ(Rash Driving) ಯುವಕರು ತಮ್ಮ ಪ್ರಾಣವನ್ನೇ ಕಳೆದುಕೊಳ್ಳುವ ಬಗ್ಗೆ ದಿನಾ ಒಂದಿಲ್ಲೊಂದು ಘಟನೆ ವರದಿ ಆಗುತ್ತಲೇ ಇರುತ್ತದೆ. ಅಂತಹದ್ದೇ ಮತ್ತೊಂದು ಘಟನೆ ಗುಜರಾತ್‌(Gujarat Accident)ನಲ್ಲಿ ನಡೆದಿದ್ದು, ಐವರು ಯುವಕರು ಇನ್‌ಸ್ಟಾ ಗ್ರಾಂ ಲೈವ್‌(Viral Video) ಹೋಗುತ್ತಾ ಕಾರನ್ನು ಪ್ರತಿ ಗಂಟೆಗೆ 160 ಕಿಲೋಮೀಟರ್‌ ವೇಗದಲ್ಲಿ ಚಲಾಯಿಸಿ ಕೊನೆಗೆ ಭೀಕರ ಅಪಘಾತಕ್ಕೀಡಾಗಿದ್ದಾರೆ. ಘಟನೆಯಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಅಸುನೀಗಿದರೆ, ಉಳಿದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆ ವಿವರ:

ಗುಜರಾತ್‌ನ ಕಛ್‌ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಅಹ್ಮದಾಬಾದ್‌ನಿಂದ ಮುಂಬೈಗೆ SUV ಕಾರಿನಲ್ಲಿ ರೋಡ್‌ ಟ್ರಿಪ್‌ ಹೊರಟಿದ್ದ ಐವರು ಯುವಕರು ಕಾರು ಚಲಾಯಿಸುತ್ತಲೇ ಇನ್‌ಸ್ಟಾಗ್ರಾಂ ಲೈವ್‌ ಹೋಗಿದ್ದಾರೆ. ಒಂದು ಅತೀ ವೇಗದ ಕಾರು ಚಾಲನೆ ಅದರ ಜೊತೆ ಇನ್‌ಸ್ಟಾಗ್ರಾಂನಲ್ಲಿ ಲೈವ್‌ ಹೀಗೆ ಎದುರಿಗೆ ಬರುತ್ತಿದ್ದ ಒಂದೊಂದೆ ವಾಹಗಳನ್ನು ಓವರ್‌ಟೇಕ್‌ ಮಾಡುತ್ತಾ ಹುಚ್ಚಾಟ ಮೆರೆದಿದ್ದಾರೆ. ಫುಲ್‌ ಎಂಜಾಯ್‌ ಮೂಡ್‌ನಲ್ಲಿದ್ದ ಯುವಕರ ಹುಚ್ಚಾಟದಿಂದ ಎದುರಿಗೆ ಬರುತ್ತಿದ್ದ ವಾಹನ ತಪ್ಪಿಸಲು ಹೋಗಿ ಮರವೊಂದಕ್ಕೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಯುವಕರಿಬ್ಬರು ಸ್ಥಳದಲ್ಲೇ ಬಲಿಯಾಗಿದ್ದಾರೆ. ಉಳಿದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತ ಸಂಭವಿಸುವುದಕ್ಕೂ ಮುನ್ನ ನಡೆದ ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಜೋರಾಗಿ ಮ್ಯೂಸಿಕ್‌ ಹಾಕಿಕೊಂಡು ಯುವಕನೋರ್ವ “ನೋಡಿ ನಮ್ಮ ಕಾರು ಎಷ್ಟು ವೇಗವಾಗಿ ಹೋಗುತ್ತಿದೆ” ಎಂದು ಹೇಳುತ್ತಾ ಸ್ಪೀಡೋ ಮೀಟರ್‌ ಅನ್ನು ತೋರಿಸುತ್ತಾನೆ. ಅದು ಪ್ರತಿಗಂಟೆಗೆ 160 ಕಿ.ಮೀ ವೇಗ ತೋರಿಸುತ್ತಿತ್ತು. ಅಷ್ಟು ಹೊತ್ತಿಗೆ ಕಾರನ್ನು ಮತ್ತಷ್ಟು ವೇಗವಾಗಿ ಚಲಾಯಿಸಿ ಒಂದೊಂದೆ ವಾಹನಗಳನ್ನು ಹಿಂದಿಕ್ಕಲು ಶುರು ಮಾಡುತ್ತಾರೆ. ಆಗ ಮತ್ತೊರ್ವ ಯುವಕ ಯೆಸ್‌…ಒನ್‌ ಮೋರ್‌ ಎಂದು ಕಿರುಚುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ:Shyam Rangeela: ವಾರಾಣಸಿಯಲ್ಲಿ ಮೋದಿ ವಿರುದ್ಧ ಕಣಕ್ಕಿಳಿದ ಕಲಾವಿದನ ನಾಮಪತ್ರ ತಿರಸ್ಕಾರ!

ಈ ಘಟನೆ ಮೇ 2ರಂದು ಅದಾಸ್‌ ಪ್ರದೇಶದಲ್ಲಿ ಬೆಳಗ್ಗಿನ ಜಾವ 3.30 ಮತ್ತು 4.30ರ ನಡುವೆ ನಡೆದಿದ್ದು, ಮೃತರನ್ನು ಅಮನ್‌ ಮೆಹಬೂಬ್‌ ಭಾಯ್‌ ಶೇಖ್‌ ಮತ್ತು ಚಿರಾಗ್‌ ಕುಮಾರ್‌ ಕೆ ಪಟೇಲ್‌ ಎಂದು ಗುರುತಿಸಲಾಗಿದೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಕಾರು ಚಲಾಯಿಸುತ್ತಿದ್ದ ಮುಸ್ತಾಫಾ ಅಲಿಯಾಸ್‌ ಶಹಬಾದ್‌ ಖಾನ್‌ ಪಠಾಣ್‌ ವಿರುದ್ಧ ಕೇಸ್‌ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Continue Reading

ಪ್ರಮುಖ ಸುದ್ದಿ

ಚುನಾವಣೆ ಫಲಿತಾಂಶಕ್ಕೆ ಮೊದಲೇ ಇಂಡಿಯಾ ಒಕ್ಕೂಟಕ್ಕೆ ದೀದಿ ಶಾಕ್; ಬಾಹ್ಯ ಬೆಂಬಲವಷ್ಟೇ ಎಂದು ಘೋಷಣೆ!

ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷಗಳಲ್ಲಿಯೇ ಒಮ್ಮತದ ಅಭಿಪ್ರಾಯ ಮೂಡದ ಕಾರಣ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷ ಸೇರಿ ಹಲವೆಡೆ ಹಲವು ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧಿಸಿವೆ. ಕೆಲವು ಕಡೆಯಂತೂ, ಇಂಡಿಯಾ ಒಕ್ಕೂಟದ ಪಕ್ಷಗಳ ಮಧ್ಯೆಯೇ ಪೈಪೋಟಿ ಇದೆ. ಇದರ ಮಧ್ಯೆಯೇ, ಮಮತಾ ಬ್ಯಾನರ್ಜಿ ಅವರು ಹೊಸ ಬಾಂಬ್‌ ಸಿಡಿಸಿದ್ದಾರೆ.

VISTARANEWS.COM


on

Mamata Banerjee
Koo

ನವದೆಹಲಿ: ಲೋಕಸಭೆ ಚುನಾವಣೆಯ (Lok Sabha Election 2024) ನಾಲ್ಕನೇ ಹಂತದ ಮತದಾನ ಮುಕ್ತಾಯವಾಗಿದೆ. ಐದನೇ ಹಂತದ ಮತದಾನಕ್ಕೆ ಚುನಾವಣೆ ಆಯೋಗ (Election Commission Of India) ಸಿದ್ಧತೆ ಮಾಡಿಕೊಳ್ಳುತ್ತಿದೆ. ರಾಜಕೀಯ ಪಕ್ಷಗಳು ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿವೆ. ಅಭ್ಯರ್ಥಿಗಳೂ ಇದೇ ಲೆಕ್ಕಾಚಾರದಲ್ಲಿದ್ದಾರೆ. ಇದರ ಬೆನ್ನಲ್ಲೇ, ಕೇಂದ್ರದ ಬಿಜೆಪಿ ಸರ್ಕಾರವನ್ನು ಕೆಳಗಿಳಿಸಬೇಕು ಎಂದೇ ಪ್ರತಿಪಕ್ಷಗಳು ಒಗ್ಗೂಡಿ ರಚಿಸಿರುವ ಇಂಡಿಯಾ ಒಕ್ಕೂಟಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಶಾಕ್‌ ನೀಡಿದ್ದಾರೆ. “ಇಂಡಿಯಾ ಒಕ್ಕೂಟಕ್ಕೆ ನಮ್ಮದೇನಿದ್ದರೂ ಬಾಹ್ಯ ಬೆಂಬಲ” ಎಂದಿದ್ದಾರೆ.

“ಕೇಂದ್ರದಲ್ಲಿ ಇಂಡಿಯಾ ಒಕ್ಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಟಿಎಂಸಿಯು ನಾಯಕತ್ವದ ಸಹಕಾರ ನೀಡುತ್ತದೆ. ಬಾಹ್ಯವಾಗಿಯೇ ಇಂಡಿಯಾ ಒಕ್ಕೂಟಕ್ಕೆ ಟಿಎಂಸಿಯು ಬೆಂಬಲ ನೀಡಲಿದೆ. ಪ್ರತಿಯೊಂದು ವಿಚಾರದಲ್ಲಿಯೂ ಇಂಡಿಯಾ ಒಕ್ಕೂಟಕ್ಕೆ ನಾವು ಸಹಕಾರ ನೀಡುತ್ತೇವೆ. ಅಷ್ಟೇ ಅಲ್ಲ, ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬಂದರೆ, ಪಶ್ಚಿಮ ಬಂಗಾಳದ ಜನರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಅದರಲ್ಲೂ, 100 ದಿನಗಳ ಉದ್ಯೋಗ ಯೋಜನೆ ಅಡಿಯಲ್ಲಿ ಕೆಲಸ ಮಾಡುತ್ತಿರುವವರಿಗಂತೂ ಯಾವುದೇ ಸಮಸ್ಯೆ ಆಗುವುದಿಲ್ಲ” ಎಂದು ಹೇಳಿದ್ದಾರೆ.

ಇದೇ ವೇಳೆ, ಇಂಡಿಯಾ ಒಕ್ಕೂಟಕ್ಕೂ ಮಮತಾ ಬ್ಯಾನರ್ಜಿ ಅವರು ವ್ಯಾಖ್ಯಾನ ನೀಡಿದರು. “ಯಾವುದು ಇಂಡಿಯಾ ಒಕ್ಕೂಟ, ಎಲ್ಲಿ ಮೈತ್ರಿ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು. ಪಶ್ಚಿಮ ಬಂಗಾಳದ ಕಾಂಗ್ರೆಸ್‌ ಅಥವಾ ಸಿಪಿಎಂ ಬಗ್ಗೆ ಯೋಚನೆ ಮಾಡದಿರಿ. ಈ ಪಕ್ಷಗಳ ಲೆಕ್ಕಾಚಾರ ತೆಗೆದುಕೊಳ್ಳದಿರಿ. ಈ ಎರಡೂ ಪಕ್ಷಗಳು ಬಿಜೆಪಿ ಜತೆಗಿವೆ. ನಾನು ಮಾತನಾಡುತ್ತಿರುವುದು ದೆಹಲಿ ಮೈತ್ರಿಯ ಬಗ್ಗೆ ಮಾತ್ರ” ಎಂದು ಹೇಳಿದರು. ಆ ಮೂಲಕ ಚುನಾವಣೆ ಫಲಿತಾಂಶದ ಬಳಿಕದ ಮೈತ್ರಿಯ ಬಗ್ಗೆ ಸೂಚನೆ ನೀಡಿದರು.

ನರೇಂದ್ರ ಮೋದಿ ನೇತೃತ್ವದ ಸರ್ಕಾರದವನ್ನು ಅಧಿಕಾರದಿಂದ ಕೆಳಗಿಳಿಸುವ ಏಕಮಾತ್ರ ಉದ್ದೇಶದಿಂದ ಹಲವು ಪ್ರತಿಪಕ್ಷಗಳು ಒಗ್ಗೂಡಿ ಇಂಡಿಯಾ ಒಕ್ಕೂಟವನ್ನು ರಚಿಸಿವೆ. ಆದರೆ, ಚುನಾವಣೆ ಸಂದರ್ಭದಲ್ಲಿ ಇಂಡಿಯಾ ಒಕ್ಕೂಟದ ಸದಸ್ಯ ಪಕ್ಷಗಳಲ್ಲಿಯೇ ಒಮ್ಮತದ ಅಭಿಪ್ರಾಯ ಮೂಡದ ಕಾರಣ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷ ಸೇರಿ ಹಲವೆಡೆ ಹಲವು ಪಕ್ಷಗಳು ಸ್ವತಂತ್ರವಾಗಿ ಸ್ಪರ್ಧಿಸಿವೆ. ಕೆಲವು ಕಡೆಯಂತೂ, ಇಂಡಿಯಾ ಒಕ್ಕೂಟದ ಪಕ್ಷಗಳ ಮಧ್ಯೆಯೇ ಪೈಪೋಟಿ ಇದೆ. ಇದರ ಮಧ್ಯೆಯೇ, ನಮ್ಮದೇನಿದ್ದರೂ ಬಾಹ್ಯ ಬೆಂಬಲ ಎಂದು ಹೇಳುವ ಮೂಲಕ ಮಮತಾ ಬ್ಯಾನರ್ಜಿ ಅವರು ಶಾಕ್‌ ಕೊಟ್ಟಿದ್ದಾರೆ.

ಇದನ್ನೂ ಓದಿ: Amit Shah: ಭಾರತದ ಜತೆ ಪಿಒಕೆ ವಿಲೀನ ಮಾಡುವುದೇ ನಮ್ಮ ಗುರಿ, ಬದ್ಧತೆ; ಅಮಿತ್‌ ಶಾ ಘೋಷಣೆ

Continue Reading
Advertisement
mlc election congress candidate gift boxes
ಬೆಂಗಳೂರು24 mins ago

MLC Election: ಮತದಾರರಿಗೆ ಬೆಂಗಳೂರು ಕಾಂಗ್ರೆಸ್‌ ಅಭ್ಯರ್ಥಿ ಆಮಿಷ? ಸಾವಿರಾರು ಗಿಫ್ಟ್‌ ಬಾಕ್ಸ್‌ಗಳು ಪತ್ತೆ

Pakistan
ವಿದೇಶ26 mins ago

Pakistan: “ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ, ಆದರೆ ನಾವು..” ಪಾಕ್‌ ಸಂಸದನ ಭಾಷಣ ವೈರಲ್‌

Kangana Ranaut's Emergency gets postponed again
ಬಾಲಿವುಡ್36 mins ago

Kangana Ranaut: ಲೋಕಸಭಾ ಚುನಾವಣೆ: ಕಂಗನಾ ʻಎಮರ್ಜೆನ್ಸಿʼ ಸಿನಿಮಾ ಮತ್ತೆ ಪೋಸ್ಟ್‌ಪೋನ್‌!

T20 World Cup 2024
ಕ್ರೀಡೆ44 mins ago

KMF Nandini Logo: ನಂದಿನಿ ಲೋಗೋ ಇರುವ ಜೆರ್ಸಿ ಅನಾವರಣಗೊಳಿಸಿದ ಸ್ಕಾಟ್ಲೆಂಡ್

Job Alert
ಉದ್ಯೋಗ45 mins ago

Job Alert: ಗುಡ್‌ನ್ಯೂಸ್‌: 277 ಗ್ರೂಪ್‌ ಬಿ ಹುದ್ದೆಗಳ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಿದ ಕೆಪಿಎಸ್‌ಸಿ; ಇಲ್ಲಿದೆ ಹೊಸ ವೇಳಾಪಟ್ಟಿ

IPL 2024 Points Table
ಕ್ರೀಡೆ1 hour ago

IPL 2024 Points Table: ಪಂಜಾಬ್​ಗೆ ಗೆಲುವು; ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದ ಮುಂಬೈ

Indian Railway
ಮಹಿಳೆ1 hour ago

Indian Railway: ಮಹಿಳಾ ಪ್ರಯಾಣಿಕರಿಗೆ ರೈಲಿನಲ್ಲಿ ಎಷ್ಟೊಂದು ಸುರಕ್ಷತಾ ಕ್ರಮಗಳಿವೆ ನೋಡಿ!

pes students self harming
ಕ್ರೈಂ1 hour ago

Student Self harming: ಪಿಇಎಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆ, ಪೋಷಕರ ಪ್ರತಿಭಟನೆ; ಟಾಪರ್‌ಗಳೇ ಸಾಯ್ತಿರೋದ್ಯಾಕೆ?

Sachin Tendulkar
ದೇಶ1 hour ago

Sachin Tendulkar: ಸಚಿನ್ ತೆಂಡೂಲ್ಕರ್ ಸೆಕ್ಯೂರಿಟಿ ಗಾರ್ಡ್‌ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

777 Charlie Dog Gives Birth To 6 Puppies Rakshit Shetty on live
ಸಿನಿಮಾ1 hour ago

777 Charlie: 6 ಮುದ್ದಾದ ಮರಿಗಳಿಗೆ ಜನ್ಮ ನೀಡಿದ ಚಾರ್ಲಿ: ರಕ್ಷಿತ್‌ ಶೆಟ್ಟಿ ಸರ್‌ಪ್ರೈಸ್‌ ಲೈವ್‌ !

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ1 day ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ1 day ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ2 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20242 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ2 days ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು2 days ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ2 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ3 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ3 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌