PM Narendra Modi: ಪಾಕಿಸ್ತಾನದತ್ತ ಗುರಿಯಿಟ್ಟ 9 ಕ್ಷಿಪಣಿ! ಭಯಭೀತ ಇಮ್ರಾನ್‌ ಖಾನ್‌ ಫೋನ್‌ ತೆಗೆಯಲೇ ಇಲ್ಲ ಮೋದಿ! - Vistara News

ದೇಶ

PM Narendra Modi: ಪಾಕಿಸ್ತಾನದತ್ತ ಗುರಿಯಿಟ್ಟ 9 ಕ್ಷಿಪಣಿ! ಭಯಭೀತ ಇಮ್ರಾನ್‌ ಖಾನ್‌ ಫೋನ್‌ ತೆಗೆಯಲೇ ಇಲ್ಲ ಮೋದಿ!

ಭಾರತ- ಪಾಕ್‌ ನಡುವಿನ ತಲ್ಲಣದ ಸಂದರ್ಭಗಳನ್ನು ಮಾಜಿ ಭಾರತೀಯ ಹೈಕಮಿಷನರ್ ಅಜಯ್ ಬಿಸಾರಿಯಾ ಅವರು ತಮ್ಮ ಹೊಸ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ

VISTARANEWS.COM


on

modi imran khan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸದಿಲ್ಲಿ: 2019ರ ಫೆಬ್ರವರಿಯ ಒಂದು ಮಧ್ಯರಾತ್ರಿ; ಭಯಬೀತರಾಗಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ (Pakistan PM Imran Khan) ಅತ್ತಲಿಂದ ಒಂದೇ ಸಮನೆ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಲು ಯತ್ನಿಸುತ್ತಲೇ ಇದ್ದರು. ಆದರೆ ಮೋದಿ ಆ ಕರೆಯನ್ನು ಸ್ವೀಕರಿಸಲೇ ಇಲ್ಲ. ಭಾರತದ 9 ಕ್ಷಿಪಣಿಗಳು ಯಾವುದೇ ಕ್ಷಣದಲ್ಲಿ ಪಾಕಿಸ್ತಾನದ ಮೇಲೆ ಹಾರಲು ಸಜ್ಜಾಗಿ ನಿಂತಿದ್ದವು!

ಇಂಥದೊಂದು ಕುತೂಹಲಕಾರಿ ಘಟನೆಯನ್ನು ಮಾಜಿ ಭಾರತೀಯ ಹೈಕಮಿಷನರ್ ಅಜಯ್ ಬಿಸಾರಿಯಾ ಅವರು ತಮ್ಮ ಹೊಸ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ‘ಆ್ಯಂಗರ್ ಮ್ಯಾನೇಜ್ಮೆಂಟ್: ದ ಟ್ರಬಲ್ಡ್ ಡಿಪ್ಲೊಮ್ಯಾಟಿಕ್ ರಿಲೇಷನ್ ಶಿಪ್ ಬಿಟ್ವೀನ್ ಇಂಡಿಯಾ ಆ್ಯಂಡ್ ಪಾಕಿಸ್ತಾನ್’ನಲ್ಲಿ ಅಜಯ್‌ ಬಿಸಾರಿಯಾ ಈ ಸನ್ನಿವೇಶವನ್ನು ವರ್ಣಿಸಿದ್ದಾರೆ.

2019ರ ಫೆ.14ರಂದು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಯೋಧರಿದ್ದ ವಾಹನವೊಂದರ ಮೇಲೆ ಪಾಕ್‌ ಮೂಲದ ಉಗ್ರರ ದಾಳಿ (pulwama attack) ನಡೆದು ಅದರಲ್ಲಿದ್ದ 40 ಯೋಧರು ಸಾವನ್ನಪ್ಪಿದ್ದರು. ಅದರ ಬೆನ್ನಲ್ಲೇ ಭಾರತ, ಪಾಕ್ ಆಕ್ರಮಿತ ಕಾಶ್ಮೀರದ ಭಾಗವಾದ ಬಾಲಾಕೋಟ್‌ನಲ್ಲಿದ್ದ ಉಗ್ರರ ತರಬೇತಿ ಕೇಂದ್ರದ ಮೇಲೆ ಕ್ಷಿಪಣಿ ದಾಳಿ ನಡೆಸಿ, ತರಬೇತಿ ಕೇಂದ್ರವನ್ನು ಹಾಗೂ ಅದರೊಳಗಿದ್ದ ಉಗ್ರರನ್ನು ನಾಶ ಮಾಡಿತು. ಆ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವೇಷದ ವಾತಾವರಣ ಮತ್ತಷ್ಟು ಹೆಚ್ಚಾಯಿತು. ಈ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ವಿಮಾನ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಛಿದ್ರಗೊಂಡು, ಕೆಳಗೆ ಬಿದ್ದ ಅವರನ್ನು ಪಾಕ್‌ ಸೈನ್ಯ ಸೆರೆಹಿಡಿದಿತ್ತು.

ಅಭನಂದನ್‌ ಸಿಕ್ಕಿಬಿದ್ದ ಕೂಡಲೇ ಆತನನ್ನು ಹಿಡಿದಿದ್ದ ಸ್ಥಳೀಯರು ಹೊಡೆದು ಬಡಿದು ಮೂಗಿನಲ್ಲಿ ಬಾಯಲ್ಲಿ ರಕ್ತ ಬರುವಂತೆ ಮಾಡಿದ್ದರು. ಅದರ ದೃಶ್ಯಗಳು ಭಾರತೀಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಭಾರತೀಯರು ರೊಚ್ಚಿಗೆದ್ದರು. ಆ ಪ್ರಕರಣ ದೊಡ್ಡ ಸದ್ದು ಮಾಡಿತು. ವಿಂಗ್ ಕಮಾಂಡರ್ ಅಭಿನಂದನ್‌ ಅವರನ್ನು ಸುರಕ್ಷಿತವಾಗಿ ಒಪ್ಪಿಸದೇ ಇದ್ದಲ್ಲಿ ಖಂಡಿತವಾಗಿಯೂ ಪಾಕ್‌ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಭಾರತ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿತು. ಭಾರತದ ಬೆಂಬಲಕ್ಕೆ ಹಲವಾರು ದೇಶಗಳು ನಿಂತವು. ಭಾರತ -ಪಾಕ್ ನಡುವೆ ಯುದ್ಧದ ಭೀತಿ ಆವರಿಸಿತು.

ಮುನ್ನೆಚ್ಚರಿಕೆ ಕ್ರಮವಾಗಿ ಭಾರತದ 9 ಕ್ಷಿಪಣಿಗಳನ್ನು ಪಾಕಿಸ್ತಾನದತ್ತ ಗುರಿ ಮಾಡಿ ಇರಿಸಲಾಯಿತು. ಪ್ರಧಾನಿ ಮೋದಿ ಅವರ ಒಂದು ಸನ್ನೆಗಾಗಿ ಅವು ಕಾಯುತ್ತಿದ್ದವು. ಇದರ ಮಾಹಿತಿ ಪಾಕ್‌ಗೆ ದೊರೆಯಿತು. ಭಾರತ ಖಂಡಿತ ಸೇಡು ತೀರಿಸಿಕೊಳ್ಳಲಿದೆ ಎಂದು ಪ್ರಧಾನಿ ಇಮ್ರಾನ್‌ ಭಯಭೀತರಾದರು. ಕೂಡಲೇ ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಿ, ನರೇಂದ್ರ ಮೋದಿಯವರ ಜೊತೆಗೆ ಮಾತನಾದಲು ಮುಂದಾದರು. ಭಾರತದ ಕಡೆಯಿಂದ ಆಗಬಹುದಾಗಿದ್ದ ಸಂಭಾವ್ಯ ದಾಳಿಯನ್ನು ತಪ್ಪಿಸಿಕೊಳ್ಳುವುದೇ ಅವರ ಉದ್ದೇಶವಾಗಿತ್ತು. ಭಾರತದಲ್ಲಿ ಪಾಕಿಸ್ತಾನದ ಹೈಕಮೀಷನರ್ ಆಗಿದ್ದ ಸೊಹೈಲ್ ಮಹಮೂದ್ (ಆಗ ಅವರು ಪಾಕಿಸ್ತಾನದಲ್ಲಿದ್ದರು), ಅಜಯ್ ಬಿಸಾರಿಯಾ ಅವರಿಗೆ ಫೋನಾಯಿಸಿ, ಇಮ್ರಾನ್- ಮೋದಿ ಮಾತುಕತೆಗೆ ಕೂಡಲೇ ಸಂಪರ್ಕ ಕಲ್ಪಿಸಿಕೊಡಬೇಕೆಂದು ಕೋರಿದರು.

ಅಜಯ್ ಅವರು ಭಾರತದ ಪ್ರಧಾನಿ ಕಚೇರಿಯ ಸಿಬ್ಬಂದಿಯನ್ನು ಸಂಪರ್ಕಿಸಿದಾಗ, ಮೋದಿಯವರು ಇಮ್ರಾನ್ ಜೊತೆಗೆ ಮಾತನಾಡಲು ಸುತರಾಂ ಸಿದ್ಧರಿಲ್ಲ ಎಂಬುದು ತಿಳಿಯಿತು. ಸೊಹೈಲ್ ಮೆಹಮೂದ್ ಅವರು ಪುನಃ ಅಜಯ್ ಅವರಿಗೆ ಫೋನ್ ಮಾಡಿ, ಸಂಪರ್ಕ ಸಾಧ್ಯವೇ ಎಂದು ಕೇಳಿದರು. ಆಗ ಅಜಯ್, “ಸಾಧ್ಯವಿಲ್ಲ. ಪ್ರಧಾನಿ ಈಗ ಬ್ಯುಸಿ ಇದ್ದಾರೆ. ನೀವು ಪ್ರಧಾನಿಗೆ ಹೇಳಬೇಕಿರುವ ವಿಚಾರವನ್ನು ನನ್ನ ಬಳಿ ತಿಳಿಸುವಂತೆ ಹೇಳಿದ್ದಾರೆ. ನಾನು ಪ್ರಧಾನಿಯವರಿಗೆ ಸಂದೇಶ ತಲುಪಿಸುತ್ತೇನೆ’’ ಎಂದರು. ಆನಂತರ ಫೋನ್ ಮಾಡುವೆ ಎಂದು ಹೇಳಿ ಫೋನಿಟ್ಟ ಸೊಹೈಲ್ ಪುನಃ ಅಜಯ್ ಅವರಿಗೆ ಕರೆ ಮಾಡಲಿಲ್ಲ.

ಆದರೆ ಅದರ ಮರುದಿನವೇ ಅಂದರೆ ಫೆ.28ರಂದು ಇಮ್ರಾನ್ ಖಾನ್ ಅವರು ಪಾಕಿಸ್ತಾನದ ಸಂಸತ್ತಿನಲ್ಲಿ ಅಭಿನಂದನ್ ಅವರನ್ನು ಬಿಡುಗಡೆ ಮಾಡುವುದಾಗಿ ಪ್ರಕಟಿಸಿದರು. ಪ್ರಧಾನಿ ನರೇಂದ್ರ ಮೋದಿಯವರ ಕಠಿಣ ನಿಲುವು ಇಮ್ರಾನ್‌ ಅವರ ಮೇಲೆ, ಪಾಕ್‌ ಮೇಲೆ ಎಂಥ ಒತ್ತಡ ಸೃಷ್ಟಿಸಿತ್ತು ಎಂಬುದು ಇದರಿಂದ ತಿಳಿಯಬಹುದು.

ಇದನ್ನೂ ಓದಿ: Pulwama Attack: ಇನ್ನೊಂದು ಪುಲ್ವಾಮಾ ದಾಳಿ ಬೆದರಿಕೆ ಹಾಕಿದ ಮದ್ರಸ ವಿದ್ಯಾರ್ಥಿ ಜೈಲಿಗೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ವಾಣಿಜ್ಯ

Stock Market Crash: ಬಿಜೆಪಿ ಹಿನ್ನಡೆಯಿಂದ ಹೂಡಿಕೆದಾರರಿಗೆ 40 ಲಕ್ಷ ಕೋಟಿ ನಷ್ಟ! ಯಾವ ಷೇರುಗಳು ಹೆಚ್ಚು ಕುಸಿತ?

ಲೋಕಸಭೆ ಚುನಾವಣೆ 2024ರ ಮತಗಳ ಎಣಿಕೆ ನಡೆಯುತ್ತಿದೆ. ಇಂದಿನ ಫಲಿತಾಂಶವು ದಲಾಲ್ ಸ್ಟ್ರೀಟ್‌ನ ಮೇಲೆ ಗಮನಾರ್ಹ ಪರಿಣಾಮ ಬೀರಿದೆ. ಬಿಜೆಪಿ ನೇತೃತ್ವದ ಎನ್‌ಡಿಎಗೆ ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆ ಆಗಿರುವ ಹಿನ್ನೆಲೆಯಲ್ಲಿ ಷೇರು ದರಗಳು ಕುಸಿದು ಹೂಡಿಕೆದಾರರಿಗೆ ಸುಮಾರು 40 ಲಕ್ಷ ಕೋಟಿ ರೂ. ನಷ್ಟವಾಗಿದೆ.

VISTARANEWS.COM


on

By

Stock Market Crash
Koo

ಲೋಕಸಭಾ ಚುನಾವಣೆ 2024ರಲ್ಲಿ (lok sabha election-2024) ಪ್ರಧಾನಿ (PM) ನರೇಂದ್ರ ಮೋದಿ (narendra modi) ನೇತೃತ್ವವಾದ ಎನ್‌ಡಿಎ (NDA) ಮೈತ್ರಿ ಕೂಟವು 290 ಮತ್ತು ಇಂಡಿಯಾ (India) ಮೈತ್ರಿಕೂಟ 234 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ ಬಳಿಕ ಪವರ್ ಫೈನಾನ್ಸ್ ಕಾರ್ಪೊರೇಷನ್ ಷೇರುಗಳು ಭಾರೀ ಕುಸಿತ (Stock Market Crash) ಕಂಡಿವೆ. ಬಿಜೆಪಿ ನೇತೃತ್ವದ ಎನ್‌ಡಿಎಗೆ ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆ ಆಗಿರುವ ಹಿನ್ನೆಲೆಯಲ್ಲಿ ಷೇರು ದರಗಳು ಕುಸಿದು ಹೂಡಿಕೆದಾರರಿಗೆ ಸುಮಾರು 40 ಲಕ್ಷ ಕೋಟಿ ರೂ. ನಷ್ಟವಾಗಿದೆ.

ಆರ್ ಇ ಸಿ (REC) ಷೇರುಗಳು ಸುಮಾರು ಶೇ. 20ರಷ್ಟು ಕುಸಿತವಾಗಿದ್ದು, ಬಿ ಹೆಚ್ ಇ ಎಲ್ (BHEL) ಶೇ. 19ರಷ್ಟು ಕುಸಿದಿದೆ. ಗೈಲ್ (GAIL) ಶೇ. 18 ಮತ್ತು ಅದಾನಿ (adani) ಪೋರ್ಟ್ಸ್ ಶೇ. 17ರಷ್ಟು ಕುಸಿತವಾಗಿದೆ. ಅದಾನಿ ಎಂಟರ್‌ಪ್ರೈಸಸ್, ಹುಡ್ಕೊ, ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಒಎನ್‌ಜಿಸಿ ಮತ್ತು ಆರ್‌ಐಎಲ್ ಷೇರುಗಳು ಸಹ ಕುಸಿತದ ಹಾದಿಯಲ್ಲಿ ನಡೆದಿದೆ.

ಮತ ಎಣಿಕೆಯ ಆರಂಭದಲ್ಲಿ ಎನ್ಎಸ್ಇ ನಿಫ್ಟಿ 50 ಸೂಚ್ಯಂಕವು ಶೇಕಡಾ 3.03ರಷ್ಟು ಕುಸಿದು 22,557 ಕ್ಕೆ ತಲುಪಿದೆ ಮತ್ತು ಎಸ್ ಆಂಡ್ ಪಿ ಬಿಎಸ್ಇ ಸೆನ್ಸೆಕ್ಸ್ ಶೇಕಡಾ 3ರಷ್ಟು ಕುಸಿದು 74,107ಕ್ಕೆ ಇಳಿದಿತ್ತು.

ಷೇರು ಮಾರುಕಟ್ಟೆ ಕುಸಿತವು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಪಟ್ಟಿ ಮಾಡಲಾದ ಕಂಪೆನಿಗಳ ಮೇಲೆ ಭಾರಿ ನಷ್ಟವನ್ನುಂಟು ಮಾಡಿದೆ. ಬಿಎಸ್‌ಇಯಲ್ಲಿ ಪಟ್ಟಿ ಮಾಡಲಾದ 700ಕ್ಕೂ ಹೆಚ್ಚು ಕಂಪೆನಿಗಳು ಪೇಟಿಎಂ ಮತ್ತು ಐನಾಕ್ಸ್ ವಿಂಡ್ ಸೇರಿದಂತೆ ಅತೀ ಕಡಿಮೆ ಲಾಭಗಳಿಸಿತ್ತು.

ದಲಾಲ್ ಸ್ಟ್ರೀಟ್‌ನ ಕೆಲವು ವಲಯ ಮತ್ತು ಷೇರುಗಳು ಲಾಭವನ್ನು ಗಳಿಸಿವೆ. ಉದಾಹರಣೆಗೆ ಎಫ್‌ಎಂಸಿಜಿ ವಲಯವು ವಿಶಾಲವಾದ ನಷ್ಟಗಳ ನಡುವೆ ಉತ್ತಮವಾಗಿ ಕಾರ್ಯನಿರ್ವಹಿಸಿದೆ. ಎಚ್‌ಯುಎಲ್ ಮತ್ತು ಬ್ರಿಟಾನಿಯಾದಂತಹ ಷೇರುಗಳು ತೀವ್ರ ನಷ್ಟ ಅನುಭವಿಸಿದೆ. ಎಚ್‌ಯುಎಲ್ ಷೇರುಗಳು ಎನ್‌ಎಸ್‌ಇಯಲ್ಲಿ ಶೇ. 5.71ರಷ್ಟು ಏರಿಕೆಯಾಗಿ 2,490.45 ರೂ. ನಲ್ಲಿ ವಹಿವಾಟು ನಡೆಸುತ್ತಿದ್ದರೆ, ಬ್ರಿಟಾನಿಯಾ ಶೇ. 3.5ರಷ್ಟು ಏರಿಕೆಯಾಗಿ 5,348.25 ಕ್ಕೆ ತಲುಪಿದೆ.

ಮಧ್ಯಾಹ್ನದ ಬಳಿಕ ಚೇತರಿಕೆ

ಆರಂಭಿಕ ವಹಿವಾಟಿನಲ್ಲಿ ತೀವ್ರ ಕುಸಿತದ ಅನಂತರ ಬೆಂಚ್ಮಾರ್ಕ್ ಸ್ಟಾಕ್ ಮಾರುಕಟ್ಟೆ ಸೂಚ್ಯಂಕಗಳು ಮಧ್ಯಾಹ್ನದ ವೇಳೆಗೆ ಗಣನೀಯವಾಗಿ ಚೇತರಿಸಿಕೊಂಡವು.

30 ಷೇರುಗಳ ಸೆನ್ಸೆಕ್ಸ್ ಮಧ್ಯಾಹ್ನ ಒಂದು ಗಂಟೆಯ ಮೊದಲು 6,000 ಪಾಯಿಂಟ್‌ಗಳ ಕುಸಿತವನ್ನು ಹೊಂದಿದ್ದರೆ, ಬಳಿಕ ಅದು 2 ಗಂಟೆ ಸುಮಾರಿಗೆ 3,372.15 ಪಾಯಿಂಟ್‌ಗಳ ಇಳಿಕೆಯೊಂದಿಗೆ 73,096.63 ಕ್ಕೆ ವಹಿವಾಟು ನಡೆಸಿತು. ಮತ್ತೊಂದೆಡೆ, ನಿಫ್ಟಿ 50 1,053.50 ಪಾಯಿಂಟ್‌ಗಳ ಇಳಿಕೆಯೊಂದಿಗೆ 21884.50ಕ್ಕೆ ವಹಿವಾಟು ಮುಗಿಸಿದೆ.

ಆರ್‌ಐಎಲ್ ಷೇರುದಾರರಿಗೂ ಭಾರಿ ನಷ್ಟ

ಮಾರುಕಟ್ಟೆಯ ಕುಸಿತದ ಮಧ್ಯೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಷೇರುದಾರರು ಭಾರಿ ನಷ್ಟವನ್ನು ಅನುಭವಿಸಿದರು. ಷೇರುಗಳು ಬಾಂಬೆ ಸ್ಟಾಕ್ ಎಕ್ಸ್ ಚೇಂಜ್‌ನಲ್ಲಿ ಶೇ. 9.6ನಷ್ಟು ಕುಸಿದವು. ಇದು 1.67 ಲಕ್ಷ ಕೋಟಿ ರೂ. ಗಳಷ್ಟು ನಷ್ಟಕ್ಕೆ ಕಾರಣವಾಯಿತು.

ಅದಾನಿ ಗ್ರೂಪ್ ಷೇರುಗಳಲ್ಲಿ ದೊಡ್ಡ ನಷ್ಟ

ಅದಾನಿ ಎಂಟರ್‌ಪ್ರೈಸಸ್ ಮತ್ತು ಅದಾನಿ ಪೋರ್ಟ್‌ಗಳು ಶೇ. 25ರಷ್ಟು ಕುಸಿದು ಅದಾನಿ ಗ್ರೂಪ್ ಷೇರುಗಳಲ್ಲಿ ಕೆಲವು ದೊಡ್ಡ ನಷ್ಟವನ್ನು ಅನುಭವಿಸಿತ್ತು. ಮಂಗಳವಾರ ಮಧ್ಯಾಹ್ನ 1.22ರ ಸುಮಾರಿಗೆ, ಎನ್‌ಎಸ್‌ಇಯಲ್ಲಿ ಅದಾನಿ ಪೋರ್ಟ್ಸ್ ಷೇರುಗಳು ಶೇ. 16.07ರಷ್ಟು, ಅಂದರೆ 3,059.30 ರೂ.ಗೆ ಇಳಿದವು. ಆದರೆ ಅದಾನಿ ಪೋರ್ಟ್ಸ್ ಶೇ. 15.38 ಕಡಿಮೆಯಾಗಿ 1,340.30 ರೂ. ಗೆ ವಹಿವಾಟು ನಡೆಸಿತು.

ಇದನ್ನೂ ಓದಿ: Stock Market: ಮತ್ತೊಮ್ಮೆ ಮೋದಿ ಸರ್ಕಾರದ ನಿರೀಕ್ಷೆ; ಸೆನ್ಸೆಕ್ಸ್ 2,600 ಪಾಯಿಂಟ್ಸ್‌ ಏರಿಕೆ

ಲೋಕಸಭೆ ಚುನಾವಣೆ ಫಲಿತಾಂಶ 2024ರ ಎರಡು ಪ್ರಮುಖ ಮೈತ್ರಿಗಳಾದ ಎನ್‌ಡಿಎ ಮತ್ತು ಇಂಡಿಯಾ ಒಕ್ಕೂಟದ ನಡುವೆ ನಿಕಟ ಸ್ಪರ್ಧೆ ಉಂಟಾಗಿದ್ದರಿಂದ ಸೆನ್ಸೆಕ್ಸ್, ನಿಫ್ಟಿ 2024ರ 4 ವರ್ಷಗಳ ಎಲ್ಲಾ ಲಾಭಗಳನ್ನು ಇಂದು ಅಳಿಸಿ ಹಾಕಿದೆ. ಬೆಂಚ್‌ಮಾರ್ಕ್ ಸ್ಟಾಕ್ ಮಾರುಕಟ್ಟೆ ಸೂಚ್ಯಂಕಗಳು ಶೇ. 8ಕ್ಕಿಂತ ಹೆಚ್ಚು ಕುಸಿದವು.

Continue Reading

Lok Sabha Election 2024

Election Results 2024: ಉತ್ತರ-ದಕ್ಷಿಣ ಎರಡೂ ಕಡೆ ಭರ್ಜರಿ ಜಯ ದಾಖಲಿಸಿದ ರಾಹುಲ್‌ ಗಾಂಧಿ

Election Results 2024: ಕಾಂಗ್ರೆಸ್‌ (Congress) ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಸ್ಪರ್ಧಿಸಿದ್ದ ಎರಡೂ ಕಡೆ ಭರ್ಜರಿ ಜಯ ದಾಖಲಿಸಿದ್ದಾರೆ. ದೇಶದ ದಕ್ಷಿಣ ಭಾಗವಾದ ಕೇರಳದ ವಯನಾಡು ಮತ್ತು ಉತ್ತರ ಭಾಗವಾದ ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ರಾಹುಲ್‌ ಗಾಂಧಿ ಗೆದ್ದು ಬೀಗಿದ್ದಾರೆ. ವಯನಾಡಿನಲ್ಲಿ 3 ಲಕ್ಷಕ್ಕಿಂತ ಅಧಿಕ ಮತಗಳಿಂದ ಜಯ ಗಳಿಸಿರುವ ರಾಹುಲ್‌ ಗಾಂಧಿ ರಾಯ್‌ಬರೇಲಿಯಲ್ಲಿ 2 ಲಕ್ಷಕ್ಕಿಂತ ಅಧಿಕ ಮತಗಳಿಂದ ಜಯಭೇರಿ ಭಾರಿಸಿದ್ದಾರೆ.

VISTARANEWS.COM


on

Election Results 2024
Koo

ತಿರುವನಂತಪುರಂ: ಕಾಂಗ್ರೆಸ್‌ (Congress) ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಸ್ಪರ್ಧಿಸಿದ್ದ ಎರಡೂ ಕಡೆ ಭರ್ಜರಿ ಜಯ ದಾಖಲಿಸಿದ್ದಾರೆ. ದೇಶದ ದಕ್ಷಿಣ ಭಾಗವಾದ ಕೇರಳದ ವಯನಾಡು ಮತ್ತು ಉತ್ತರ ಭಾಗವಾದ ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ರಾಹುಲ್‌ ಗಾಂಧಿ ಗೆದ್ದು ಬೀಗಿದ್ದಾರೆ. 2019ರಲ್ಲಿಯೂ ಎರಡು ಕಡೆ ಸ್ಪರ್ಧಿಸಿದ್ದ ರಾಹುಲ್‌ ಗಾಂಧಿ ಅವರಿಗೆ ಸಿಹಿ-ಕಹಿಯ ಫಲಿತಾಂಶ ಎದುರಾಗಿತ್ತು. ವಯನಾಡಿನಲ್ಲಿ ಗೆದ್ದಿದ್ದರೆ, ಉತ್ತರ ಪ್ರದೇಶದ ಅಮೇಥಿಯಲ್ಲಿ ಸೋಲು ಕಂಡಿದ್ದರು. ಈ ಬಾರಿ ಎರಡೂ ಕಡೆ ವಿಜಯದ ನಗೆ ಬೀರಿದ್ದಾರೆ (Election Results 2024).

ವಯನಾಡಿನಲ್ಲಿ 3 ಲಕ್ಷಕ್ಕಿಂತ ಅಧಿಕ ಮತಗಳಿಂದ ಜಯ ಗಳಿಸಿರುವ ರಾಹುಲ್‌ ಗಾಂಧಿ ರಾಯ್‌ಬರೇಲಿಯಲ್ಲಿ 2 ಲಕ್ಷಕ್ಕಿಂತ ಅಧಿಕ ಮತಗಳಿಂದ ಜಯಭೇರಿ ಭಾರಿಸಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅವರು ವಯನಾಡಿನಲ್ಲಿ ಸಿಪಿಐನ ಪಿ.ಪಿ.ಸುನೀರ್ ಅವರನ್ನು 4.31 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಇಲ್ಲಿ ಸಿಪಿಐಯಿಂದ ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಆ್ಯನಿ ರಾಜಾ ಮತ್ತು ಬಿಜೆಪಿಯಿಂದ ಕೆ.ಸುರೇಂದ್ರನ್‌ ಸ್ಪರ್ಧಿಸಿದ್ದರು. ಈ ಮೂಲಕ ಕಠಿಣ ಸ್ಪರ್ಧೆ ಎದುರಾಗಿತ್ತು.

ರಾಯ್‌ಬರೇಲಿಯಲ್ಲಿ ಬಿಜೆಪಿ ದಿನೇಶ್‌ ಪ್ರತಾಪ್‌ ಸಿಂಗ್‌ ಅವರನ್ನು ಕಣಕ್ಕಿಳಿಸಿತ್ತು. ಕಳೆದ ಬಾರಿ ರಾಯ್‌ಬರೇಲಿಯಲ್ಲಿ ಕಾಂಗ್ರೆಸ್‌ನಿಂದ ಸೋನಿಯಾ ಗಾಂಧಿ ಕಣಕ್ಕಿಳಿದಿದ್ದರು. ಆಗಲೂ ದಿನೇಶ್‌ ಪ್ರತಾಪ್‌ ಸಿಂಗ್‌ ಸವಾಲು ಒಡ್ಡಿದ್ದರು. ಆಗ ಸೋನಿಯಾ ಗಾಂಧಿ 2.22 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿ ರಾಹುಲ್‌ ಗಾಂಧಿ ಇದಕ್ಕೂ ಹೆಚ್ಚಿನ ಅಂತರದಿಂದ ಜಯ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಯ್‌ಬರೇಲಿಯನ್ನು ಕಾಂಗ್ರೆಸ್‌ನ ಭದ್ರಕೋಟೆ ಎಂದೇ ಪರಿಗಣಿಸಲಾಗುತ್ತದೆ. ಈ ಬಾರಿ ಇದು ಮತ್ತೆ ಸಾಬೀತಾಗಿದೆ. ಈ ಕ್ಷೇತ್ರವನ್ನು ಸೋನಿಯಾ ಗಾಂಧಿ 2004ರಿಂದ ಪ್ರತಿನಿಧಿಸಿದ್ದರು. ಈ ಬಾರಿ ಅವರು ರಾಯ್‌ಬರೇಲಿಯನ್ನು ಮಗನಿಗೆ ಬಿಟ್ಟುಕೊಟ್ಟು ರಾಜ್ಯಸಭೆಯನ್ನು ಆಯ್ಕೆ ಮಾಡಿಕೊಂಡಿದ್ದರು.

ಅಮೇಥಿ ಸೋಲಿನ ನೋವು ಮರೆಸಿದ ಗೆಲುವು

ರಾಹುಲ್‌ ಗಾಂಧಿ ಅವರು 2019ರಲ್ಲಿ ಅಮೇಥಿಯಲ್ಲಿ ಸ್ಪರ್ಧಿಸಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿದ್ದರು. ಗಾಂಧಿ ಕುಟುಂಬದ ಪ್ರತಿಷ್ಠೆಯ ಕಣವಾಗಿದ್ದ ಅಮೇಥಿಯಲ್ಲಿನ ಸೋಲು ರಾಹುಲ್‌ ಗಾಂಧಿ ಮಾತ್ರವಲ್ಲ ಕಾಂಗ್ರೆಸ್‌ಗೆ ಬಹು ದೊಡ್ಡ ಶಾಕ್‌ ನೀಡಿತ್ತು. ಇದೀಗ ಆ ನೋವನ್ನು ಎರಡೂ ಕಡೆಯ ಭರ್ಜರಿ ಗೆಲುವು ಮರೆಸಿದೆ. ಈ ಬಾರಿಯೂ ಅಮೇಥಿಯಿಂದ ಬಿಜೆಪಿ ಸ್ಮೃತಿ ಇರಾನಿ ಅವರನ್ನು ಕಣಕ್ಕಿಳಿಸಿದ್ದು, ರಾಹುಲ್‌ ಗಾಂಧಿ ಬದಲು ಕಾಂಗ್ರೆಸ್‌ನಿಂದ ಕಿಶೋರ್‌ ಲಾಲ್‌ ಶರ್ಮಾ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. 25 ವರ್ಷಗಳಲ್ಲಿ ಮೊದಲ ಬಾರಿಗೆ ಇಲ್ಲಿ ಗಾಂಧಿ ಕುಟುಂಬದ ಸದಸ್ಯರು ಸ್ಪರ್ಧಿಸಿರಲಿಲ್ಲ. ಸದ್ಯ ಸ್ಮೃತಿ ಇರಾನಿ ಹಿನ್ನಡೆ ಅನುಭವಿಸುತ್ತಿದ್ದಾರೆ.

ಇದನ್ನೂ ಓದಿ: Election Results 2024: ಪಶ್ಚಿಮ ಬಂಗಾಲದಲ್ಲಿ ಮತ ಎಣಿಕೆಗೂ ಮುನ್ನ ಬಾಂಬ್‌ ಸ್ಫೋಟ, ಐವರಿಗೆ ಗಾಯ

ಇತ್ತೀಚಿನ ಅಂಕಿ ಅಂಶ ಪ್ರಕಾರ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ 294 ಸ್ಥಾನಗಳಲ್ಲಿ ಮುಂದಿದ್ದರೆ ಕಾಂಗ್ರೆಸ್‌ ಈ ಬಾರಿ ಪುಟಿದೆದ್ದಿದೆ. ಕಾಂಗ್ರೆಸ್‌ ನೇತೃತ್ವದ ʼಇಂಡಿಯಾʼ ಒಕ್ಕೂಟ 231 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್‌ಗೆ ಉತ್ತಮ ಸಾಧನೆ ಮಾಡಿದ ಹಿನ್ನಲೆಯಲ್ಲಿ ರಾಹುಲ್‌ ಗಾಂಧಿ ಇಂದು ಸಂಜೆ 5 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

Continue Reading

ದೇಶ

Election Results 2024: ನಿತೀಶ್‌ ಕುಮಾರ್‌ ಬೆಂಬಲ ಯಾರಿಗೆ? ಏನಂದ್ರು ಜೆಡಿಯು ನಾಯಕರು?

Election Results 2024:ಕಾಂಗ್ರೆಸ್‌ ಆಫರ್‌ ಅನ್ನು ನಿರಾಕರಿಸಿರುವ ಚಂದ್ರ ಬಾಬು ನಾಯ್ಡು ಈಗಾಗಲೇ ತಮ್ಮ ಬೆಂಬಲ ಏನಿದ್ದರೂ ಅದು ಎನ್‌ಡಿಎಗೆ ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ. ಇದೀಗ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಕೂಡ ಇದನ್ನೇ ಹೇಳಿದ್ದು, ಮೊದಲೇ ಹೇಳಿದಂತೆ ಬಿಜೆಪಿ ಜೊತೆಗೇ ಮುಂದುವರೆಯುವುದಾಗಿ ಸ್ಪಷ್ಟಪಡಿಸಿದೆ. ಈ ಬಗ್ಗೆ ಪಕ್ಷದ ಮುಖಂಡರಾದ ನೀರಜ್‌ ಕುಮಾರ್‌ ಮತ್ತು ವಕ್ತಾರ ಕೆಸಿ ತ್ಯಾಗಿ ಹೇಳಿದ್ದಾರೆ.

VISTARANEWS.COM


on

Election Results 2024
Koo

ನವದೆಹಲಿ: 2024ರ ಲೋಕಸಭಾ ಚುನಾವಣೆಯ ಫಲಿತಾಂಶಗಳು(Election Results 2024) ಪ್ರಕಟವಾಗುತ್ತಿದ್ದು,400ಕ್ಕೂ ಅಧಿಕ ಸ್ಥಾನಗಳ ಮೂಲಕ ಪ್ರಚಂಡ ಗೆಲುವು ಸಾಧಿಸಿ ಸ್ವತಂತ್ರವಾಗಿ ಕೇಂದ್ರದಲ್ಲಿ ಸರ್ಕಾರ ರಚಿಸುವ ಬಿಜೆಪಿ (BJP) ಕನಸು ಈ ಬಾರಿ ಕನಸಾಗಿಯೇ ಉಳಿದಿದೆ. ಈಗ ಬಿಜೆಪಿ ತನ್ನ ಮಿತ್ರಪಕ್ಷಗಳನ್ನೇ ನೆಚ್ಚಿಕೊಳ್ಳಬೇಕಿದ್ದು, ಮುಖ್ಯವಾಗಿ ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು (Chandrababu Naidu) ನೇತೃತ್ವದ ತೆಲುಗುದೇಶಂ ಪಾರ್ಟಿ (TDP) ಹಾಗೂ ಬಿಹಾರದ ನಿತೀಶ್‌ ಕುಮಾರ್‌(Nitish Kumar) ಕಿಂಗ್‌ ಮೇಕರ್‌ಗಳಾಗಲಿದ್ದಾರೆ. ಇನ್ನು ನಿತೀಶ್‌ ಕುಮಾರ್‌ ಮತ್ತು ಚಂದ್ರ ಬಾಬು ನಾಯ್ಡು ಭರ್ಜರಿ ಆಫರ್‌ ನೀಡಿ ತನ್ನತ್ತ ಸೆಳೆದು ಕೇಂದ್ರದಲ್ಲಿ ಸರ್ಕಾರ ರಚಿಸಲು ಕಾಂಗ್ರೆಸ್‌ ಹವಣಿಸುತ್ತಿದೆ.

ಆದರೆ ಕಾಂಗ್ರೆಸ್‌ ಆಫರ್‌ ಅನ್ನು ನಿರಾಕರಿಸಿರುವ ಚಂದ್ರ ಬಾಬು ನಾಯ್ಡು ಈಗಾಗಲೇ ತಮ್ಮ ಬೆಂಬಲ ಏನಿದ್ದರೂ ಅದು ಎನ್‌ಡಿಎಗೆ ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ. ಇದೀಗ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಕೂಡ ಇದನ್ನೇ ಹೇಳಿದ್ದು, ಮೊದಲೇ ಹೇಳಿದಂತೆ ಬಿಜೆಪಿ ಜೊತೆಗೇ ಮುಂದುವರೆಯುವುದಾಗಿ ಸ್ಪಷ್ಟಪಡಿಸಿದೆ. ಈ ಬಗ್ಗೆ ಪಕ್ಷದ ಮುಖಂಡರಾದ ನೀರಜ್‌ ಕುಮಾರ್‌ ಮತ್ತು ವಕ್ತಾರ ಕೆಸಿ ತ್ಯಾಗಿ ಹೇಳಿದ್ದಾರೆ.

ನಾವು ಮೊದಲೇ ಹೇಳಿದ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಎನ್‌ಡಿಎಗೆ ಮತ್ತೊಮ್ಮೆ ನಾವು ಬೆಂಬಲ ಕೊಡುತ್ತೇವೆ. ಎನ್‌ಡಿಎ ಜೊತೆಗೇ ಮುಂದುವರೆಯುತ್ತೇವೆ ಎಂದು ತ್ಯಾಗಿ ಹೇಳಿದ್ದಾರೆ. ನಿತೀಶ್‌ ಕುಮಾರ್‌ ಅವರಿಗೆ ಮೈತ್ರಿಕೂಟದ ನಿಜವಾದ ಅರ್ಥವನ್ನು ಅರ್ಥೈಸಿಕೊಂಡಿದ್ದಾರೆ. ಹೀಗಾಗಿ ನಾವು ಮೈತ್ರಿಕೂಟದ ಜೊತೆಗೆ ನಮ್ಮ ಮೈತ್ರಿಯನ್ನು ಮುಂದುವರೆಸುತ್ತೇವೆ ಎಂದು ನೀರಜ್‌ ಕುಮಾರ್‌ ತಿಳಿಸಿದ್ದಾರೆ. ಇನ್ನು ಜೆಡಿಯು ಜಮಾ ಖಾನ್‌ ಪ್ರತಿಕ್ರಿಯಿಸಿದ್ದು, ನಮ್ಮ ನಾಯಕರು ಏನು ನಿರ್ಧಾರ ಮಾಡುತ್ತಾರೋ ನಾವು ಹಾಗೇಯೇ ನಡೆದುಕೊಳ್ಳುತ್ತೇವೆ. ನಿತೀಶ್‌ ಕುಮಾರ್‌ ಸದಾ ಜನರ ಹಿತಾಸಕ್ತಿಯನ್ನು ಬಯಸುತ್ತಾರೆ. ಅವರ ನಿರ್ಧಾರಕ್ಕೆ ನಾವೆಲ್ಲರೂ ಬದ್ಧ ಎಂದಿದ್ದಾರೆ.

ಬಿಹಾರದ 40 ಸ್ಥಾನಗಳ ಪೈಕಿ ಜೆಡಿಯು 15ರಲ್ಲಿ ಮುನ್ನಡೆ ಸಾಧಿಸಿದ್ದರೆ, ಆಂಧ್ರಪ್ರದೇಶದ 25 ಲೋಕಸಭಾ ಸ್ಥಾನಗಳಲ್ಲಿ 16ರಲ್ಲಿ ಟಿಡಿಪಿ ಮುನ್ನಡೆ ಸಾಧಿಸಿದೆ. ಎರಡೂ ಪಕ್ಷಗಳು ಪ್ರಸ್ತುತ NDAಯಲ್ಲಿವೆ. ಆದರೆ ಇವರಿಬ್ಬರೂ ಹಿಂದೆ ಮಾಡಿದಂತೆ ಮೈತ್ರಿ ಬದಲಾಯಿಸಿದರೆ ಸನ್ನಿವೇಶ ಉಲ್ಟಾ ಹೊಡೆಯುತ್ತದೆ.

ಇಂಡಿಯಾ ಮೈತ್ರಿಕೂಟದ ಮುಖಂಡರು ಈಗಾಗಲೇ ಈ ಇಬ್ಬರೂ ನಾಯಕರನ್ನು ಸಂಪರ್ಕಿಸುವ ಕಾರ್ಯವನ್ನು ಶುರು ಮಾಡಿದ್ದಾರೆ. ಇಂಡಿ ನಾಯಕರೊಂದಿಗೂ ಉತ್ತಮ ಬಾಂಧವ್ಯವನ್ನು ಕಾಪಾಡಿಕೊಂಡಿರುವ ಈ ಇಬ್ಬರೂ ನಾಯಕರು, ಅಧಿಕಾರ ಹಂಚಿಕೆಯ ವಿಚಾರದಲ್ಲಿ ಉತ್ತಮ ಆಫರ್‌ ಬಂದರೆ ಅತ್ತ ಕಡೆ ಜಿಗಿಯುವ ಸಾಧ್ಯತೆ ಇದೆ ಎನ್ನಲಾಗಿತ್ತು.

ಇದನ್ನೂ ಓದಿ:Election results 2024: ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಢವಢವ; ಮತ ಎಣಿಕೆಯಲ್ಲಿ ಪೈಪೋಟಿ ಒಡ್ಡಿದ ಇಂಡಿಯಾ ಬ್ಲಾಕ್

Continue Reading

ದೇಶ

AP Election Results 2024 Live: ಚಂದ್ರಬಾಬು ನಾಯ್ಡುಗೆ ಮತ್ತೆ ಒಲಿಯಲಿದೆ ಸಿಎಂ ಪಟ್ಟ; ಜೂನ್‌ 9ರಂದು ಪ್ರಮಾಣ ವಚನ ಸ್ವೀಕಾರ ಸಾಧ್ಯತೆ

AP Election Results 2024 Live: ಆಂಧ್ರಪ್ರದೇಶ ವಿಧಾನ ಸಭಾ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಬಹುತೇಕ ಚಿತ್ರಣ ಲಭಿಸಸಿದೆ. ನಿರೀಕ್ಷೆಯಂತೆ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ (TDP) ಭರ್ಜರಿ ಜಯ ದಾಖಲಿಸುವತ್ತ ದಾಪುಗಾಲು ಇಟ್ಟಿದೆ. ಟಿಡಿಪಿ ಈಗಾಗಲೇ ಮ್ಯಾಜಿಕ್‌ ನಂಬರ್‌ 88 ಅನ್ನು ದಾಟಿದ್ದು, ಜೂನ್‌ 9ರಂದು ಅಮರಾವತಿಯಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಾಗಿ ಚಂದ್ರಬಾಬು ನಾಯ್ಡು ಘೋಷಿಸಿದ್ದಾರೆ

VISTARANEWS.COM


on

AP Election Results 2024 Live
Koo

ಅಮರಾವತಿ: ಆಂಧ್ರಪ್ರದೇಶ ವಿಧಾನ ಸಭಾ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಬಹುತೇಕ ಚಿತ್ರಣ ಲಭಿಸಸಿದೆ. ಚುನಾವಣೋತ್ತರ ಸಮೀಕ್ಷೆಯಂತೆಯೇ ಚಂದ್ರಬಾಬು ನಾಯ್ಡು (Chandrababu Naidu) ನೇತೃತ್ವದ ತೆಲುಗು ದೇಶಂ ಪಕ್ಷ (TDP) ಭರ್ಜರಿ ಜಯ ದಾಖಲಿಸುವತ್ತ ದಾಪುಗಾಲು ಇಟ್ಟಿದೆ. ಟಿಡಿಪಿ ಈಗಾಗಲೇ ಮ್ಯಾಜಿಕ್‌ ನಂಬರ್‌ 88 ಅನ್ನು ದಾಟಿದ್ದು, ಜೂನ್‌ 9ರಂದು ಅಮರಾವತಿಯಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಾಗಿ ಚಂದ್ರಬಾಬು ನಾಯ್ಡು ಘೋಷಿಸಿದ್ದಾರೆ (AP Election Results 2024 Live).

ಈ ಮೂಲಕ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ನಾಲ್ಕನೇ ಬಾರಿಗೆ ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಲಿದ್ದಾರೆ. ಆಂಧ್ರ ಪ್ರದೇಶದಲ್ಲಿ ಟಿಡಿಪಿ ಈ ಬಾರಿ ಬಿಜೆಪಿ ಮತ್ತು ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷ (JSP) ಜತೆಗೂಡಿ ಎನ್‌ಡಿಎ (NDA) ಬಣದ ಅಡಿಯಲ್ಲಿ ಸ್ಪರ್ಧಿಸಿತ್ತು. ಸದ್ಯ ಟಿಡಿಪಿ ಒಂದೇ 131 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇನ್ನು ಜಸಸೇನಾ ಪಕ್ಷ 20 ಮತ್ತು ಬಿಜೆಪಿ 7ರಲ್ಲಿ ಮುಂದಿದೆ. ಒಟ್ಟಾರೆಯಾಗಿ ಎನ್‌ಡಿಎ 158 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಇತ್ತ ಮಕಾಡೆ ಮಲಗಿರುವ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷ (YSRCP) ಕೇವಲ 17 ಕ್ಷೇತ್ರಗಳಲ್ಲಿ ಮುಂದಿದೆ. ಈ ಬಾರಿ ಆಂಧ್ರ ಪ್ರದೇಶದಲ್ಲಿ ಜನಸೇನಾ ಪಾರ್ಟಿ, ಬಿಜೆಪಿ ಮತ್ತು ಟಿಡಿಪಿ ಒಪ್ಪಂದ ಮಾಡಿಕೊಂಡಿತ್ತು. ಅದರ ಪ್ರಕಾರ 175 ಸೀಟುಗಳ ವಿಧಾನ ಸಭೆಯಲ್ಲಿ ಟಿಡಿಪಿ 144, ಜನಸೇನಾ ಪಾರ್ಟಿ 21 ಮತ್ತು ಬಿಜೆಪಿ 10 ಕಡೆ ಸ್ಪರ್ಧಿಸಿತ್ತು.

2019ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ದಾಖಲೆ ಪ್ರಮಾಣದ ಮತದಾನ ನಡೆದಿತ್ತು. 2019ರಲ್ಲಿ ಶೇ. 79.68ರಷ್ಟು ಮಂದಿ ತಮ್ಮ ಹಕ್ಕನ್ನು ಚಲಾಯಿಸಿದ್ದರೆ, ಈ ಬಾರಿ ಶೇ. 81.86 ಮತದಾನ ದಾಖಲಾಗಿತ್ತು. ವಿದ್ಯುನ್ಮಾನ ಮತದಾನ ಯಂತ್ರಗಳ (ಇವಿಎಂ) ಮೂಲಕ ಶೇ. 80.66 ಮತ್ತು ಅಂಚೆ ಮತಪತ್ರಗಳ ಮೂಲಕ ಶೇ. 1.2 ಮತ ಚಲಾವಣೆಯಾಗಿತ್ತು. ಲೋಕಸಭಾ ಚುನಾವಣೆಯ ಮತದಾನದ ಜತೆಗೆ ವಿಧಾನಸಭಾ ಚುನಾವಣೆಯ ಮತದಾನ ಮೇ 13ರಂದು ನಡೆದಿತ್ತು.

ಗೆದ್ದ ಪ್ರಮುಖರು

ರಾಜಮಂಡ್ರಿ ರೈರಲ್‌ ಕ್ಷೇತ್ರದಲ್ಲಿ ಟಿಡಿಪಿಯ ಜಿ.ಬುಚ್ಚಯ್ಯ ಚೌಧರಿ ಸುಮಾರು 64 ಸಾವಿರ ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಅವರು ಒಟ್ಟು 1,29,060 ಮತ ಪಡೆದುಕೊಂಡಿದ್ದಾರೆ. ಜತೆಗೆ ಪವನ್‌ ಕಲ್ಯಾಣ್‌ ಕೂಡ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.

ಇದನ್ನೂ ಓದಿ: AP Election results 2024 live: ಆಂಧ್ರ ಪ್ರದೇಶ ವಿಧಾನಸಭೆ: ಭರ್ಜರಿ ಗೆಲುವಿನತ್ತ ಟಿಡಿಪಿ

2019ರ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ವೈಎಸ್‌ಆರ್‌ಸಿಪಿ 151 ಸ್ಥಾನಗಳಲ್ಲಿ ಜಯಭೇರಿ ಬಾರಿಸಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದರು. ಆಗ ಆಡಳಿತದಲ್ಲಿದ್ದ ಟಿಡಿಪಿ ಕೇವಲ 23 ಸ್ಥಾನಗಳನ್ನು ಗೆದ್ದು ಮುಖಭಂಗ ಅನುಭವಿಸಿತ್ತು. ಪವನ್‌ ಕಲ್ಯಾಣ್‌ ನೇತೃತ್ವದ ಜೆಎಸ್‌ಪಿ ಒಂದೇ ಒಂದು ಸ್ಥಾನವನ್ನು ಗೆದ್ದಿದ್ದರೆ, ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಖಾತೆ ತೆರೆದಿರಲಿಲ್ಲ. ಈ ಬಾರಿ ಚಿತ್ರಣ ಸಂಪೂರ್ಣ ಬದಲಾಗಿದೆ. ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರಿಗೆ ತೀವ್ರ ಹಿನ್ನಡೆಯಾಗಿದೆ.

Continue Reading
Advertisement
Stock Market Crash
ವಾಣಿಜ್ಯ2 mins ago

Stock Market Crash: ಬಿಜೆಪಿ ಹಿನ್ನಡೆಯಿಂದ ಹೂಡಿಕೆದಾರರಿಗೆ 40 ಲಕ್ಷ ಕೋಟಿ ನಷ್ಟ! ಯಾವ ಷೇರುಗಳು ಹೆಚ್ಚು ಕುಸಿತ?

Fazalhaq Farooqi
ಕ್ರೀಡೆ8 mins ago

Fazalhaq Farooqi: ಟಿ20 ವಿಶ್ವಕಪ್​ನಲ್ಲಿ ದಾಖಲೆ ಬರೆದ ಫಜಲ್ಹಕ್ ಫಾರೂಕಿ

Election Results 2024
Lok Sabha Election 202418 mins ago

Election Results 2024: ಉತ್ತರ-ದಕ್ಷಿಣ ಎರಡೂ ಕಡೆ ಭರ್ಜರಿ ಜಯ ದಾಖಲಿಸಿದ ರಾಹುಲ್‌ ಗಾಂಧಿ

Karnataka Election Results 2024
Lok Sabha Election 202418 mins ago

Karnataka Election Results 2024: ಗ್ಯಾರಂಟಿ ದರ್ಬಾರ್ ಮಧ್ಯೆಯೂ ಬಿಜೆಪಿ ಗೆದ್ದು ಬೀಗಿದೆ ಎಂದ ವಿಜಯೇಂದ್ರ

Udupi Chikmagalur Result 2024:
ಪ್ರಮುಖ ಸುದ್ದಿ25 mins ago

Bangalore South Election Result 2024 : ತೇಜಸ್ವಿ ಸೂರ್ಯಗೆ ಭಾರಿ ಅಂತರದ ಗೆಲುವು

Election Results 2024
ದೇಶ45 mins ago

Election Results 2024: ನಿತೀಶ್‌ ಕುಮಾರ್‌ ಬೆಂಬಲ ಯಾರಿಗೆ? ಏನಂದ್ರು ಜೆಡಿಯು ನಾಯಕರು?

IND vs IRE T20 World Cup
ಕ್ರೀಡೆ1 hour ago

IND vs IRE T20 World Cup: ಐರ್ಲೆಂಡ್​ ಸವಾಲಿಗೆ ಟೀಮ್​ ಇಂಡಿಯಾ ಸಿದ್ಧ; ವಿಶ್ವಕಪ್​ ಸಾಧನೆ ಹೇಗಿದೆ?

AP Election Results 2024 Live
ದೇಶ1 hour ago

AP Election Results 2024 Live: ಚಂದ್ರಬಾಬು ನಾಯ್ಡುಗೆ ಮತ್ತೆ ಒಲಿಯಲಿದೆ ಸಿಎಂ ಪಟ್ಟ; ಜೂನ್‌ 9ರಂದು ಪ್ರಮಾಣ ವಚನ ಸ್ವೀಕಾರ ಸಾಧ್ಯತೆ

election results 2024 naidu
ಪ್ರಮುಖ ಸುದ್ದಿ1 hour ago

Election Results 2024: ಚಂದ್ರಬಾಬು ನಾಯ್ಡುಗೆ ಕರೆ ಮಾಡಿದ ಮೋದಿ, ಅಮಿತ್‌ ಶಾ‌; ಕೈ ಮುಖಂಡರಿಂದಲೂ‌ ಕಾಲ್; ನಾಯ್ಡು ಮನಸ್ಸು ಯಾರ ಕಡೆ?

Karnataka election results 2024
ಕರ್ನಾಟಕ1 hour ago

Karnataka election results 2024: ಕರ್ನಾಟಕದ ಜನರು ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ: ಪ್ರಲ್ಹಾದ್‌ ಜೋಶಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ10 hours ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ1 day ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ1 day ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ2 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು3 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ5 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ7 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌