Sex Racket: ಹೋಟೆಲ್‍ನಲ್ಲಿ ಸೆಕ್ಸ್ ದಂಧೆ ಪತ್ತೆ; ನಗ್ನ ಸ್ಥಿತಿಯಲ್ಲಿದ್ದ 10 ಜೋಡಿಗಳು ಪೊಲೀಸ್‌ ಬಲೆಗೆ! - Vistara News

Latest

Sex Racket: ಹೋಟೆಲ್‍ನಲ್ಲಿ ಸೆಕ್ಸ್ ದಂಧೆ ಪತ್ತೆ; ನಗ್ನ ಸ್ಥಿತಿಯಲ್ಲಿದ್ದ 10 ಜೋಡಿಗಳು ಪೊಲೀಸ್‌ ಬಲೆಗೆ!

Sex Racket ವಾರಣಾಸಿ ಪೊಲೀಸ್ ತಂಡ ಹೋಟೆಲ್‌ನಲ್ಲಿ ಸೆಕ್ಸ್ ದಂಧೆಯನ್ನು ಪತ್ತೆಹಚ್ಚಿದ್ದು, ಅಲ್ಲಿದ್ದ 20 ಮಂದಿ ಹುಡುಗ-ಹುಡುಗಿಯರನ್ನು ಬಂಧಿಸಿದ್ದಾರೆ. ಮಾಹಿತಿದಾರರೊಬ್ಬರು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಹೋಟೆಲ್‌ ಮೇಲೆ ದಾಳಿ ನಡೆಸಿ ಈ ದಂಧೆ ಪತ್ತೆ ಹಚ್ಚಿದರು. ಆಗ ಅಲ್ಲಿ ದಂಧೆಯಲ್ಲಿ ತೊಡಗಿದ್ದ 10 ಮಂದಿ ಹುಡುಗರು ಹಾಗೂ 10 ಮಂದಿ ಹುಡುಗಿಯರು ನಗ್ನ ಸ್ಥಿತಿಯಲ್ಲಿ ಕಂಡು ಬಂದರು. ತಕ್ಷಣ ಪೊಲೀಸರು ಅವರನ್ನು ಬಂಧಿಸಿ ಠಾಣೆಗೆ ಎಳೆದೊಯ್ದಿದ್ದಾರೆ.

VISTARANEWS.COM


on

Sex Racket
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo


ವಾರಣಾಸಿ : ಅಲ್ಲಲ್ಲಿ ಸೆಕ್ಸ್ ದಂಧೆ ಪ್ರಕರಣಗಳು ನಡೆಯುತ್ತಿದ್ದು, ಹೋಟೆಲ್, ರೆಸ್ಟೋರೆಂಟ್‍ಗಳಲ್ಲಿ ಈ ದಂಧೆ ನಡೆಸುತ್ತಿದ್ದ ಹಲವರು ಸಿಕ್ಕಿಬಿದ್ದಿದ್ದಾರೆ. ಹಣ ಸಂಪಾದಿಸಲು ಹಲವರು ಈ ದಂಧೆಯಲ್ಲಿ ತೊಡಗುತ್ತಾರೆ. ಇದೀಗ ಅಂತಹದೊಂದು ಪ್ರಕರಣ ವಾರಾಣಾಸಿಯ ಹೋಟೆಲ್‍ವೊಂದರಲ್ಲಿ ಪತ್ತೆಯಾಗಿದೆ. ವಾರಣಾಸಿ ಪೊಲೀಸ್ ಕಮಿಷನರೇಟ್ ಆಗಸ್ಟ್ 4 ರಂದು ರಂಜಿತ್ ಹೋಟೆಲ್‍ನಲ್ಲಿ ಸೆಕ್ಸ್ ದಂಧೆ(sex racket) ಯನ್ನು ಪತ್ತೆಹಚ್ಚಿದ್ದು, ಅಲ್ಲಿದ್ದ 20 ಮಂದಿ ಹುಡುಗ ಹುಡುಗಿಯರನ್ನು ಬಂಧಿಸಿದ್ದಾರೆ.

ಮಾಹಿತಿದಾರರೊಬ್ಬರು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಹೋಟೆಲ್‍ನ ಮೇಲೆ ದಾಳಿ ನಡೆಸಿದರು. ಆಗ ಅಲ್ಲಿ ದಂಧೆಯಲ್ಲಿ ತೊಡಗಿದ್ದ 10 ಮಂದಿ ಹುಡುಗರು ಹಾಗೂ 10 ಮಂದಿ ಹುಡುಗಿಯರು ಆಕ್ಷೇಪಾರ್ಹ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣ ಪೊಲೀಸರು ಅವರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಹೆಚ್ಚುವರಿ ಉಪ ಪೊಲೀಸ್ ಆಯುಕ್ತರಾದ ಎಡಿಸಿಪಿ ನೀತು ಕುಮಾರಿ ಅವರು, “ರಂಜಿತ್ ಹೋಟೆಲ್‍ನಲ್ಲಿ ಯುವಕರು ಮತ್ತು ಹುಡುಗಿಯರು ಸೆಕ್ಸ್ ರಾಕೆಟ್‍ನಲ್ಲಿ ಭಾಗಿಯಾಗಿರಬಹುದು ಎಂದು ಮಾಹಿತಿದಾರರಿಂದ ನಮಗೆ ಮಾಹಿತಿ ಬಂದಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳಿಗೆ, ರೂಂನಲ್ಲಿ ಕನಿಷ್ಠ 10 ಹುಡುಗಿಯರು ಮತ್ತು ಅಷ್ಟೇ ಸಂಖ್ಯೆಯ ಹುಡುಗರು ಆಕ್ಷೇಪಾರ್ಹ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಎಲ್ಲಾ ಆರೋಪಿಗಳನ್ನು ಬಂಧಿಸಲಾಯಿತು. ಮತ್ತು ಈ ದಂಧೆಯಲ್ಲಿ ಭಾಗಿಯಾಗಿರುವ ಎಲ್ಲಾ ಪಕ್ಷಗಳನ್ನು ಗುರುತಿಸಲು ಅಧಿಕಾರಿಗಳು ಈಗ ಸಮಗ್ರ ತನಿಖೆ ನಡೆಸುತ್ತಿದ್ದಾರೆ” ಎಂಬುದಾಗಿ ಹೇಳಿದ್ದಾರೆ.

ಅಲ್ಲದೇ ಪೊಲೀಸರ ತಂಡವು ಪ್ರಾರಂಭಿಸಿದ ತ್ವರಿತ ಕ್ರಮದಿಂದ ಹೋಟೆಲ್ ಸಿಬ್ಬಂದಿಗೆ ರೂಂನಲ್ಲಿ ದಂಧೆಯಲ್ಲಿ ತೊಡಗಿದ್ದವರನ್ನು ಎಚ್ಚರಿಸಲು ಅವಕಾಶ ಸಿಗಲಿಲ್ಲ. ಆದರೆ ಹೋಟೆಲ್ ಸಿಬ್ಬಂದಿ ತಕ್ಷಣ ಎಲ್ಲಾ ರೂಂಗಳಿಗೆ ಬೀಗ ಹಾಕಿದ್ದಾರೆ, ಆದರೆ ಸಿಸಿಟಿವಿಯನ್ನು ಪರಿಶೀಲಿಸಿದ ನಂತರ ಪೊಲೀಸರು ಹೋಟೆಲ್ ಸಿಬ್ಬಂದಿಗೆ ಆ ರೂಂಗಳನ್ನು ತೆರೆಯಲು ಹೇಳಿದ್ದಾರೆ. ಪೊಲೀಸರು ಸಿಸಿಟಿವಿ ನೆಟ್‍ವರ್ಕ್ ಡಿವಿಆರ್ ಅನ್ನು ಸಹ ವಶಪಡಿಸಿಕೊಂಡಿದ್ದಾರೆ. ದಂಧೆಯಲ್ಲಿ ಭಾಗಿಯಾಗಿರುವ ಇತರ ಸದಸ್ಯರನ್ನು ಕಂಡುಹಿಡಿಯಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎಡಿಸಿಪಿ ತಿಳಿಸಿದ್ದಾರೆ.

ಇದನ್ನೂ ಓದಿ:ನಿನಗೆಷ್ಟು ಬಾಯ್‌ಫ್ರೆಂಡ್‌ ಎನ್ನುತ್ತ ಗೆಳತಿಗೆ ಭೀಕರವಾಗಿ ಇರಿದ ಯುವ ಕಾಂಗ್ರೆಸ್ ಮುಖಂಡ!

ಇದೇರೀತಿಯ ಪ್ರಕರಣ ಥಾಣೆ ಜಿಲ್ಲೆಯಲ್ಲಿ ನಡೆದಿದ್ದು, ಪೊಲೀಸರು ಸೆಕ್ಸ್ ರಾಕೆಟ್ ನಡೆಸುತ್ತಿದ್ದ ಆರೋಪದ ಮೇಲೆ 23 ವರ್ಷದ ಮಹಿಳೆಯನ್ನು ಬಂಧಿಸಿದ್ದಾರೆ. ಮಾನವ ಕಳ್ಳಸಾಗಣೆ ಮಾಡುತ್ತಿದ್ದ ಭಿವಾಂಡಿಯ ರೆಸ್ಟೋರೆಂಟ್ ಮೇಲೆ ದಾಳಿ ನಡೆಸಿ ಶಂಕಿತನನ್ನು ಬಂಧಿಸಿದ್ದು, 22 ಮತ್ತು 28 ವರ್ಷದ ಇತರ ಇಬ್ಬರು ಮಹಿಳೆಯರನ್ನು ರಕ್ಷಿಸಿ ಅವರನ್ನು ರಕ್ಷಣಾ ಗೃಹಕ್ಕೆ ಕಳುಹಿಸಲಾಯಿತು. ಭಾರತೀಯ ನ್ಯಾಯ ಸಂಹಿತಾ ಮತ್ತು ಅನೈತಿಕ ಸಂಚಾರ (ತಡೆಗಟ್ಟುವಿಕೆ) ಕಾಯ್ದೆಯ ಸೆಕ್ಷನ್‍ಗಳ ಅಡಿಯಲ್ಲಿ ಈ ಪ್ರಕರಣವನ್ನು ದಾಖಲಿಸಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

Latest

Viral Video: ಮಳೆಯಲಿ ಜೊತೆಯಲಿ… ಆನೆ-ಮಾವುತ ನಡುವಿನ ಮಾಂತ್ರಿಕ ಕ್ಷಣ! ಹೃದಯ ತಟ್ಟುವ ವಿಡಿಯೊ

Viral Video: ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಆನೆ ಮತ್ತು ಅದರ ಮಾವುತನ ನಡುವಿನ “ಮಾಂತ್ರಿಕ ಕ್ಷಣಗಳನ್ನು” ಸೆರೆಹಿಡಿದಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ತಮಿಳುನಾಡಿನ ಅಣ್ಣಾಮಲೈ ಹುಲಿ ಮೀಸಲು ಪ್ರದೇಶವಾದ ಕೋಝಿಕಮುತಿ ಆನೆ ಶಿಬಿರದಲ್ಲಿ ಆನೆ ತನ್ನ ಮಾವುತನ ಜೊತೆ ನಡೆಯುತ್ತಾ ಆ ಸುಂದರ ಕ್ಷಣವನ್ನು ಆನಂದಿಸುವುದನ್ನು ವನ್ಯಜೀವಿ ಛಾಯಾಗ್ರಾಹಕ ಧನು ಪರನ್ ಅವರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

VISTARANEWS.COM


on

Viral Video
Koo


ಬೆಂಗಳೂರು: ದೇಶದ ಹಲವೆಡೆ ಮಳೆ ಧಾರಕಾರವಾಗಿ ಸುರಿಯುತ್ತಿದೆ. ಬಿಸಿಲಿನ ಬೇಗೆಯಿಂದ ದಣಿದು ಬಾಡಿದ ಭೂಮಿ, ಪ್ರಕೃತಿ, ಮನುಷ್ಯರು, ಪ್ರಾಣಿಪಕ್ಷಿಗಳಿಗೂ ಇದು ಆನಂದ ನೀಡಿದೆ. ಭೂಮಿ ತಂಪಾಗಿ, ಪ್ರಕೃತಿ ಹಚ್ಚ ಹಸಿರಾಗಿ ಕಂಗೊಳಿಸುತ್ತಿದೆ. ಈ ಪ್ರಕೃತಿಯ ಸೌಂದರ್ಯವನ್ನು ಕಂಡು ಪ್ರಾಣಿಪಕ್ಷಿಗಳು ಆನಂದಿಸುತ್ತಿವೆ. ಇದೀಗ ಈ ಹಚ್ಚ ಹಸಿರಾದ ಪ್ರಕೃತಿಯ ಸೌಂದರ್ಯವನ್ನು ವೀಕ್ಷಿಸುತ್ತಾ ಆನೆಯೊಂದು ತನ್ನ ಮಾವುತನ ಜೊತೆಗೆ ಸಾಗುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ. ಈ ವಿಡಿಯೊಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಆನೆ ಮತ್ತು ಅದರ ಮಾವುತನ ನಡುವಿನ “ಮಾಂತ್ರಿಕ ಕ್ಷಣಗಳನ್ನು” ಸೆರೆಹಿಡಿದಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ತಮಿಳುನಾಡಿನ ಅಣ್ಣಾಮಲೈ ಹುಲಿ ಮೀಸಲು ಪ್ರದೇಶವಾದ ಕೋಝಿಕಮುತಿ ಆನೆ ಶಿಬಿರದಲ್ಲಿ ಆನೆ ತನ್ನ ಮಾವುತನ ಜೊತೆ ನಡೆಯುತ್ತಾ ಆ ಸುಂದರ ಕ್ಷಣವನ್ನು ಆನಂದಿಸುವುದನ್ನು ವನ್ಯಜೀವಿ ಛಾಯಾಗ್ರಾಹಕ ಧನು ಪರನ್ ಅವರು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. 27 ಸೆಕೆಂಡುಗಳ ಈ ವಿಡಿಯೊ ಅನೇಕ ಜನರ ಮನಗೆದ್ದಿದೆ.

ಈ ವಿಡಿಯೊದಲ್ಲಿ ಮಳೆಗಾಲದ ಮಧ್ಯಾಹ್ನದ ವೇಳೆ ಮಾವುತನು ತನ್ನ ಒಂದು ಕೈಯಲ್ಲಿ ಛತ್ರಿಯನ್ನು ಹಿಡಿದು ಇನ್ನೊಂದು ಕೈಯಿಂದ ಆನೆಯ ಕಿವಿ, ದೇಹವನ್ನು ಮೃದುವಾಗಿ ಸವರುತ್ತಾ ನಡೆದು ಬರುತ್ತಿದ್ದಾನೆ. ಈ ವಿಡಿಯೊದಲ್ಲಿ ಆನೆ ಮತ್ತು ಮಾವುತನ ನಡುವಿನ ಬಾಂಧ್ಯವ್ಯ ಸ್ಪಷ್ಟವಾಗಿ ಕಾಣಿಸುತ್ತದೆ. ಮತ್ತು ಅವರ ನಡುವಿನ ಪ್ರೀತಿ ಮತ್ತು ಪರಸ್ಪರ ಗೌರವ ಎದ್ದು ಕಾಣುತ್ತದೆ.

“ತಮಿಳುನಾಡಿನ ಅಣ್ಣಾಮಲೈ ಹುಲಿ ಮೀಸಲು ಪ್ರದೇಶದ ಕೋಝಿಕಮುತಿ ಆನೆ ಶಿಬಿರದಲ್ಲಿ ಮಾನ್ಸೂನ್ ಮಳೆಯಲ್ಲಿ ಮಾವುತ ಮತ್ತು ಅವನ ಆನೆಯ ನಡುವಿನ ಮಾಂತ್ರಿಕ ಕ್ಷಣಗಳು” ಎಂದು ಸಾಹು ತನ್ನ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. ಇದಕ್ಕೆ ಹಲವರು ಕಾಮೆಂಟ್‍ಗಳ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇಂತಹ ಪ್ರಶಾಂತವಾದ ಈ ದೈವಿಕ ಕ್ಷಣವನ್ನು ಹಂಚಿಕೊಂಡಿದ್ದಕ್ಕಾಗಿ ಅನೇಕರು ಸುಪ್ರಿಯಾ ಸಾಹು ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಇದನ್ನೂ ಓದಿ:ಹಾವು ಹಿಡಿಯುವವನನ್ನು ಕಚ್ಚಿ ತಾನೇ ಜೀವ ಬಿಟ್ಟ ಕಾಳಿಂಗ ಸರ್ಪ! ಸಾವಿಗೆ ಕಾರಣ ಏನು?

ಬಳಕೆದಾರರು, “ಮಾವುತ ಮತ್ತು ಆನೆಯ ನಡುವಿನ ಬಂಧವು ನಂಬಲಾಗದ ಸಂಗತಿಯಾಗಿದೆ. ಇದನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು.” ಎಂದು ತಿಳಿಸಿದ್ದಾರೆ. “ಇದು ತುಂಬಾ ಸುಂದರವಾಗಿದೆ.” ಎಂದು ಇನ್ನೊಬ್ಬರು ಬರೆದಿದ್ದಾರೆ. ಮತ್ತೊಬ್ಬರು “ಈ ವಿಡಿಯೊ ನೋಡಿ ನನ್ನ ಈ ದಿನ ಬಹಳ ಸುಂದರವೆನಿಸಿತು” ಎಂದು ಹೇಳಿದ್ದಾರೆ.

Continue Reading

ಧಾರ್ಮಿಕ

Shravana 2024: ಶ್ರಾವಣ ಉಪವಾಸದ ವೇಳೆ ಈ 5 ಪಾನೀಯ ಆರೋಗ್ಯಕರ

Shravana 2024:ಶ್ರಾವಣ ಮಾಸದಲ್ಲಿ (Shravana Masa) ಉಪವಾಸ ಕೈಗೊಳ್ಳುವಾಗ ದೇಹಾರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡ ಮುಖ್ಯವಾಗಿರುತ್ತದೆ. ದೇವರ ಧ್ಯಾನ, ಪೂಜೆಯಲ್ಲಿ ನಿರತರಾಗಿರುವಾಗ ದೇಹದಲ್ಲಿ ನಿರ್ಜಲೀಕರಣವಾಗದಂತೆ ನೋಡಿಕೊಳ್ಳುವುದು ಅತ್ಯಗತ್ಯ. ಉಪವಾಸದ ಸಮಯದಲ್ಲಿ ಸೇವಿಸಬಹುದಾದ ಕೆಲವು ಆರೋಗ್ಯಕರ ಪಾನೀಯಗಳು ಇಲ್ಲಿವೆ.

VISTARANEWS.COM


on

By

Shravana 2024
Koo

ದೇಶಾದ್ಯಂತ ಅತ್ಯಂತ ಭಕ್ತಿ ಮತ್ತು ಸಂತೋಷದಿಂದ (Shravana 2024) ಆಚರಿಸಲಾಗುವ ಶ್ರಾವಣ ಮಾಸ (Shravana Masa) ಹಿಂದೂ ಚಂದ್ರನ ಕ್ಯಾಲೆಂಡರ್‌ನಲ್ಲಿ (Hindu Lunar calendar) ಪವಿತ್ರವಾದ ತಿಂಗಳು (sacred month). ಇದು ಸಾಂಸ್ಕೃತಿಕ ಚೈತನ್ಯ ಮತ್ತು ಧಾರ್ಮಿಕ ಮಹತ್ವಕ್ಕಾಗಿ ಹೆಸರುವಾಸಿಯಾಗಿದೆ. ಇಂದಿನಿಂದ (ಆ.5) ಶ್ರಾವಣ ಮಾಸ ಆರಂಭ. ಬಹುತೇಕ ಹಿಂದೂಗಳು ಈ ತಿಂಗಳು ಪೂರ್ತಿ ದೇವರ ಪೂಜೆ, ಧ್ಯಾನ, ಜಪ, ತಪಗಳಲ್ಲಿ ನಿರತರಾಗುತ್ತಾರೆ. ಹೆಚ್ಚಿನವರು ಸೋಮವಾರ, ಮಂಗಳವಾರ, ಶುಕ್ರವಾರ, ಶನಿವಾರದಂದು ಉಪವಾಸ ವ್ರತ ಕೈಗೊಳ್ಳುತ್ತಾರೆ.

ಶ್ರಾವಣ ಮಾಸ ಶಿವ ಮತ್ತು ಪಾರ್ವತಿ ದೇವಿಗೆ ಸಮರ್ಪಿತವಾಗಿದೆ. ವಿವಿಧ ಧಾರ್ಮಿಕ ಆಚರಣೆಗಳನ್ನು ನಡೆಸಲಾಗುತ್ತದೆ. ಶ್ರಾವಣ ಮಾಸದಲ್ಲಿ ಆಚರಿಸಲಾಗುವ ಪ್ರಮುಖ ಆಚರಣೆಗಳಲ್ಲಿ ಉಪವಾಸವೂ ಒಂದಾಗಿದೆ. ಶಿವ ಭಕ್ತರು ಶಿವನ ಆಶೀರ್ವಾದ ಪಡೆಯಲು ಈ ತಿಂಗಳ ಪ್ರತಿ ಸೋಮವಾರ ಉಪವಾಸವನ್ನು ಆಚರಿಸುತ್ತಾರೆ.

ಜನರು ಈ ಸಂದರ್ಭದಲ್ಲಿ ಮಾಂಸಾಹಾರಿ ಆಹಾರಗಳು, ಈರುಳ್ಳಿ, ಬೆಳ್ಳುಳ್ಳಿ ಸೇವನೆಯನ್ನು ತ್ಯಜಿಸುತ್ತಾರೆ.
ಉಪವಾಸದೊಂದಿಗೆ ದೇಹಾರೋಗ್ಯವನ್ನು ಕಾಪಾಡಿಕೊಳ್ಳುವುದು ಕೂಡ ಮುಖ್ಯವಾಗಿರುತ್ತದೆ. ದೇವರ ಧ್ಯಾನ, ಪೂಜೆಯಲ್ಲಿ ನಿರತರಾಗಿರುವಾಗ ದೇಹದಲ್ಲಿ ನಿರ್ಜಲೀಕರಣವಾಗದಂತೆ ನೋಡಿಕೊಳ್ಳುವುದು ಅತ್ಯಗತ್ಯ. ಉಪವಾಸದ ಸಮಯದಲ್ಲಿ ಸೇವಿಸಬಹುದಾದ ಕೆಲವು ಆರೋಗ್ಯಕರ ಪಾನೀಯಗಳು ಇಲ್ಲಿವೆ.

Shravana Masa
Shravana Masa


ಎಳನೀರು

ತೆಂಗಿನ ನೀರು ಉಪವಾಸ ನಿರತರಿಗೆ ಅತ್ಯತ್ತಮ ಆಯ್ಕೆಯಾಗಿದೆ. ಇದು ಕಡಿಮೆ ಕ್ಯಾಲೋರಿ ಮತ್ತು ಕೊಬ್ಬನ್ನು ಹೊಂದಿದ್ದು, ಡಿಟಾಕ್ಸ್ ಪಾನೀಯವಾಗಿದೆ. ತೆಂಗಿನ ನೀರಿನಲ್ಲಿ ಪೊಟ್ಯಾಸಿಯಮ್, ಕ್ಯಾಲ್ಸಿಯಂ, ರಂಜಕ, ಮೆಗ್ನೀಸಿಯಮ್, ಕಾರ್ಬೋಹೈಡ್ರೇಟ್‌ ಮತ್ತು ಸಕ್ಕರೆಯ ಅದ್ಭುತ ಮೂಲವಾಗಿದೆ. ಇದು ಆರೋಗ್ಯಕರ ದೇಹದ ಬೆಳವಣಿಗೆಗೆಯನ್ನು ಉತ್ತೇಜಿಸುತ್ತದೆ.

Shravana Masa
Shravana Masa


ಸೌತೆಕಾಯಿ ಪುದೀನಾ ರಸ

ಶೇ. 95ಕ್ಕಿಂತ ಹೆಚ್ಚು ನೀರನ್ನು ಹೊಂದಿರುವ ಸೌತೆಕಾಯಿ ಪೌಷ್ಟಿಕಾಂಶದಿಂದ ತುಂಬಿರುವ ಸಮೃದ್ಧ ಆಹಾರ. ಹಲವಾರು ಆರೋಗ್ಯ ಪ್ರಯೋಜನಗಳಿಂದಾಗಿ ಉಪವಾಸ ನಿರತರು ಇದನ್ನು ಸೇವಿಸಬಹುದು. ಅಗತ್ಯ ಜೀವಸತ್ವ, ಖನಿಜಾಂಶಗಳು ಸೌತೆಕಾಯಿಗಳಲ್ಲಿ ಹೇರಳವಾಗಿವೆ.


ನಿಂಬೆ ನೀರು

ಉಪವಾಸದ ಸಮಯದಲ್ಲಿ ಸೇವಿಸುವ ಆರೋಗ್ಯಕರ ಪಾನೀಯವೆಂದರೆ ನಿಂಬೆ ನೀರು. ಶ್ರಾವಣ ಮಾಸದಲ್ಲಿ ಉಪವಾಸ ನಿರತರಾಗಿರುವವರು ನಿಂಬೆ ರಸ ಅಥವಾ ನಿಂಬೆ ಪಾನಕವನ್ನು ಕುಡಿಯುವುದು ಹೈಡ್ರೇಟೆಡ್ ಆಗಿರಲು ಮತ್ತು ಹೆಚ್ಚು ಕಾಲ ಹೊಟ್ಟೆ ತುಂಬಿದ ಅನುಭವ ಕೊಡಲು ಇದು ಸಹಾಯ ಮಾಡುತ್ತದೆ.


ಹಣ್ಣಿನ ರಸಗಳು

ಸೇಬು, ಕಿತ್ತಳೆ, ದಾಳಿಂಬೆ ಮತ್ತು ಇತರ ತಾಜಾ ಹಣ್ಣುಗಳನ್ನು ಜ್ಯೂಸ್ ಮಾಡಿ ಉಪವಾಸ ನಿರತರು ದಿನವಿಡೀ ಸೇವಿಸಬಹುದು. ಇದು ದೇಹವನ್ನು ಹೈಡ್ರೀಕರಿಸುವುದರ ಜೊತೆಗೆ ತಾಜಾ ಹಣ್ಣಿನ ರಸಗಳು ದೇಹದ ಆರೋಗ್ಯಕ್ಕೆ ಬೇಕಾದ ಪ್ರಮುಖ ಪೋಷಕಾಂಶಗಳನ್ನು ಪೂರೈಸುತ್ತವೆ.

ಇದನ್ನೂ ಓದಿ: Health Tips: ಪಾದಗಳ ಊತ, ನೋವನ್ನು ಕಡಿಮೆ ಮಾಡಲು ಇಲ್ಲಿದೆ ಸರಳ ಉಪಾಯ

Shravana Masa
Shravana Masa


ಚಿಯಾ ಬೀಜಗಳು

ಚಿಯಾ ಬೀಜದ ನೀರು ಅನೇಕ ಗಮನಾರ್ಹವಾದ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಉಪವಾಸದ ದಿನವನ್ನು ಪ್ರಾರಂಭಿಸಲು ತುಂಬಾ ಆರೋಗ್ಯಕರ ಮಾರ್ಗವಾಗಿದೆ. ಉತ್ಕರ್ಷಣ ನಿರೋಧಕಗಳು, ಖನಿಜಗಳು, ಫೈಬರ್ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳ ಸಮೃದ್ಧಿಯಿಂದಾಗಿ, ಚಿಯಾ ಬೀಜಗಳು ದೇಹವನ್ನು ನಿರ್ಜಲೀಕರಣಗೊಳ್ಳದಂತೆತಡೆಯುತ್ತದೆ. ಹೆಚ್ಚು ಗಂಟೆಗಳ ಕಾಲ ದೇಹಕ್ಕೆ ಶಕ್ತಿಯನ್ನು ಕೊಡುತ್ತದೆ.

Continue Reading

Latest

Viral Video: ಯುವತಿ ಜತೆ ಡ್ಯಾನ್ಸ್ ಮಾಡ್ತಾ ಮಾಡ್ತಾ ಪ್ರಾಣಬಿಟ್ಟ ಯುವಕ; ಆಘಾತಕಾರಿ ವಿಡಿಯೊ

Viral Video: ಸಾವು ಹೇಗೆ ಬರುತ್ತದೆ ಎನ್ನುವುದು ಯಾರಿಗೂ ಗೊತ್ತಿರುವುದಿಲ್ಲ. ಇಲ್ಲೊಬ್ಬ ವ್ಯಕ್ತಿ ಡ್ಯಾನ್ಸ್ ಮಾಡುತ್ತಾ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ರಾಜಸ್ಥಾನದ ಭೈನ್ಸ್ ಲಾನಾ ಗ್ರಾಮದಲ್ಲಿ ನಡೆದಿದೆ. ಮನ್ನಾ ಲಾಲ್ ಜಖರ್ ಅವರ ಹಿರಿಯ ಸಹೋದರ ಕೆಲಸದಿಂದ ನಿವೃತ್ತಿಯನ್ನು ಹೊಂದಿದ ಪ್ರಯುಕ್ತ ‘ಸತ್ಸಂಗ’ ಕಾರ್ಯಕ್ರಮವನ್ನು ಆಚರಿಸಲಾಗಿತ್ತು. ಆ ಸಮಯದಲ್ಲಿ ಇವರು ಸಂಭ್ರಮದಿಂದ ಡ್ಯಾನ್ಸ್ ಮಾಡಿದ್ದು, ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇವರು ಕುಸಿದು ಬಿದ್ದ ಆ ಆಘಾತಕಾರಿ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

VISTARANEWS.COM


on

Viral Video
Koo


ಜೀವನ ಎನ್ನುವುದು ನೀರ ಮೇಲಿನ ಗುಳ್ಳೆಯಂತೆ ಕ್ಷಣಿಕ ಮಾತ್ರ. ಅದು ಯಾವ ಕ್ಷಣದಲ್ಲಾದರೂ ಒಡೆಯಬಹುದು. ಹಾಗಾಗಿ ಸಾವು ಯಾರಿಗೆ ಯಾವಾಗ ಸಂಭವಿಸುತ್ತದೆ ಎಂದು ಹೇಳಲು ಆಗುವುದಿಲ್ಲ. ಇದೀಗ ಶಿಕ್ಷಕನೊಬ್ಬ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಡ್ಯಾನ್ಸ್ ಮಾಡುವಾಗ ಕುಸಿದು ಬಿದ್ದು ಸಾವನಪ್ಪಿದ ಆಘಾತಕಾರಿ ಘಟನೆ ರಾಜಸ್ಥಾನದ ಭೈನ್ಸ್ ಲಾನಾ ಗ್ರಾಮದಲ್ಲಿ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video)ಆಗಿದೆ.

ಮನ್ನಾ ಲಾಲ್ ಜಖರ್ ಡ್ಯಾನ್ಸ್ ಮಾಡುತ್ತಾ ಸಾವನಪ್ಪಿದ ವ್ಯಕ್ತಿ. ಇವರು ವೃತ್ತಿಯಲ್ಲಿ ಶಿಕ್ಷಕನಾಗಿದ್ದು, ಇವರ ಹಿರಿಯ ಸಹೋದರ ಕೆಲಸದಿಂದ ನಿವೃತ್ತಿಯನ್ನು ಹೊಂದಿದ ಪ್ರಯುಕ್ತ ‘ಸತ್ಸಂಗ’ ಕಾರ್ಯಕ್ರಮವನ್ನು ಆಚರಿಸಲಾಗಿದೆ. ಆ ಸಮಯದಲ್ಲಿ ಇವರು ಸಂಭ್ರಮದಿಂದ ಡ್ಯಾನ್ಸ್ ಮಾಡಿದ್ದು, ಆ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಇವರು ಕುಸಿದು ಬಿದ್ದ ಆ ಆಘಾತಕಾರಿ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ವಿಡಿಯೊದಲ್ಲಿ ಮಹಿಳೆಯೊಬ್ಬಳ ಜೊತೆ ಜಖರ್ ಡ್ಯಾನ್ಸ್ ಮಾಡುವಾಗ ಅವರು ಇದ್ದಕ್ಕಿದ್ದಂತೆ ನೆಲದ ಮೇಲೆ ಬಿದ್ದಿದ್ದಾರೆ. ಅವರನ್ನು ಮೇಲೆತ್ತಲು ಕುಟುಂಬಸ್ಥರು ಮತ್ತು ಮತ್ತು ಗ್ರಾಮಸ್ಥರು ಎಷ್ಟೇ ಪ್ರಯತ್ನಿಸಿದರೂ ಅವರು ಎದ್ದೇಳದ ಕಾರಣ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ವೈದ್ಯರು ಜಖರ್ ಮೃತಪಟ್ಟಿದ್ದಾರೆ ಎಂದ ತಿಳಿಸಿದ್ದಾರೆ. ಜಖರ್‌ಗೆ ಹೃದಯಾಘಾತವಾಗಿದೆ ಎಂದು ವೈದ್ಯರು ಶಂಕಿಸಿದ್ದಾರೆ. ಈ ಘಟನೆಯು ಕುಟುಂಬ ಮತ್ತು ಗ್ರಾಮವನ್ನು ಆಘಾತಕ್ಕೀಡು ಮಾಡಿದೆ, ಸಂತೋಷದ ಸಂದರ್ಭದ ನಡುವೆ ಈ ಘಟನೆ ಗೊಂದಲವನ್ನುಂಟು ಮಾಡಿದೆ.

ಜೋಧಪುರದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಜಖರ್, ಈ ಕಾರ್ಯಕ್ರಮಕ್ಕಾಗಿ ತಮ್ಮ ಗ್ರಾಮಕ್ಕೆ ಬಂದಿದ್ದರು. ಆದರೆ ಈ ರೀತಿಯಲ್ಲಿ ದುರಂತಕ್ಕೀಡಾದರು. ಅವರ ಸಾವಿನ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮನುಷ್ಯ ಹೇಗೆ ಅಕಾಲಿಕ ಸಾವಿಗೆ ಗುರುಯಾಗುತ್ತಾನೆ ಎಂಬುದನ್ನು ಈ ವಿಡಿಯೊ ಎತ್ತಿ ತೋರಿಸುತ್ತದೆ.

ಇದನ್ನೂ ಓದಿ: ಮೈಗೆ ಟವೆಲ್ ಸುತ್ತಿಕೊಂಡು ಬೀದಿ ತುಂಬಾ ಓಡಾಡಿದ ಯುವತಿ; ನೋಡಿದ ಜನ ಸುಸ್ತು!

Viral Video
Viral Video

ಈ ಹಿಂದೆ ಈ ವರ್ಷದ ಮೇ ತಿಂಗಳಿನಲ್ಲಿ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಮಲನ್ವಾಸಾ ಗ್ರಾಮದಲ್ಲಿ ಭಜನೆಗೆ ನೃತ್ಯ ಮಾಡುವಾಗ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದರು. ಈ ಘಟನೆಯ ಆಘಾತಕಾರಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಮೃತರನ್ನು ರಾಜಸ್ಥಾನ ಪಂಚಾಯತ್ ರಾಜ್ ಇಲಾಖೆಯಲ್ಲಿ ಕಿರಿಯ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಜೋಧ್ರಾಜ್ ನಗರ್ ಎಂದು ಗುರುತಿಸಲಾಗಿದೆ. ಗ್ರಾಮದಲ್ಲಿ ಸಂಜೆ ಆಯೋಜಿಸಿದ್ದ ಭಜನಾ ಕಾರ್ಯಕ್ರಮದಲ್ಲಿ ನಾಗರ್ ನೃತ್ಯ ಮಾಡುತ್ತಿದ್ದಾಗ ಹೃದಯಾಘಾತದಿಂದ ಇದ್ದಕ್ಕಿದ್ದಂತೆ ಕುಸಿದುಬಿದ್ದು ಸಾವನಪ್ಪಿದ್ದರು.

Continue Reading

Latest

Viral Video: ಅಳುತ್ತಿರುವ ಹುಡುಗನನ್ನು ಸಮಾಧಾನಪಡಿಸಿದ ನಾಯಿ ಮರಿ! ಆನಂದ್‌ ಮಹೀಂದ್ರಾ ಹಂಚಿಕೊಂಡ ವಿಡಿಯೊ ಇದು

Viral Video: ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಇತ್ತೀಚೆಗೆ ಅಂತಾರಾಷ್ಟ್ರೀಯ ಸ್ನೇಹಿತರ ದಿನದಂದು ನಾಯಿಮರಿ ಮತ್ತು ಮಗುವಿನ ಸ್ನೇಹದ ಮುದ್ದಾದ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಅಳುತ್ತಿರುವ ಹುಡುಗನನ್ನು ಆತನ ಸ್ನೇಹಿತನಂತೆ ಇದ್ದ ಸಾಕುಪ್ರಾಣಿ ನಾಯಿಮರಿ ಸಂತೈಸುತ್ತಿದೆ. 39 ಸೆಕೆಂಡುಗಳ ಈ ವಿಡಿಯೊದಲ್ಲಿ ಪುಟ್ಟ ಹುಡುಗನೊಬ್ಬ ನೆಲದ ಮೇಲೆ ಕುಳಿತು ತನ್ನ ಬೆನ್ನನ್ನು ಮಂಚದ ಮೇಲೆ ಇಟ್ಟುಕೊಂಡು ಬೇಸರದಿಂದ ಅಳುತ್ತಿದ್ದಾನೆ. ಆಗ ಅವನ ಪಕ್ಕ ಇದ್ದ ನಾಯಿಮರಿ ಅವನನ್ನು ಸಮಾಧಾನಪಡಿಸುತ್ತಿದೆ.ಈ ಮುದ್ದಾದ ವಿಡಿಯೊ ಸಖತ್ ವೈರಲ್ ಆಗಿದೆ.

VISTARANEWS.COM


on

Viral Video
Koo


ನವದೆಹಲಿ: ಜಗತ್ತಿನೆಲ್ಲೆಡೆ ಆಗಸ್ಟ್ 4ರಂದು ಸ್ನೇಹಿತರ ದಿನವನ್ನು ಆಚರಿಸಲಾಗಿದೆ. ನಮ್ಮ ರಕ್ತ ಸಂಬಂಧಿಕರ ಜೊತೆ ನಮ್ಮ ಸಂಬಂಧ ಬೆಸೆದುಕೊಳ್ಳುವುದು ಸಹಜ. ಆದರೆ ನಮ್ಮ ಜೊತೆ ಯಾವುದೇ ಸಂಬಂಧವಿಲ್ಲದೇ ಬೆಸೆದುಕೊಳ್ಳುವುದೇ ಸ್ನೇಹ. ಜಗತ್ತಿನಲ್ಲಿ ಹೆಚ್ಚಿನ ಜನರಿಗೆ ಸಂಬಂಧಿಕರಿಗಿಂತ ಹೆಚ್ಚು ನೆರವಾಗುವವರು ಸ್ನೇಹಿತರು. ತಮ್ಮ ಸುಖ, ದುಃಖಗಳನ್ನು ಹಂಚಿಕೊಳ್ಳುವ ಮನಸ್ಸೆಂದರೆ ಅದು ಸ್ನೇಹ. ಎಷ್ಟೋ ಜನರು ತಮ್ಮ ಕಷ್ಟಗಳನ್ನು ಸಂಬಂಧಿಕರಿಗಿಂತ ಹೆಚ್ಚು ಸ್ನೇಹಿತರ ಬಳಿಯೇ ಹಂಚಿಕೊಳ್ಳುತ್ತಾರೆ. ಯಾಕೆಂದರೆ ಸ್ನೇಹ ಸಂಬಂಧ ಅಷ್ಟೋಂದು ಬಲವಾಗಿರುತ್ತದೆ. ನಾವು ಸ್ನೇಹವನ್ನು ಮನುಷ್ಯರ ಜೊತೆಯೇ ಮಾಡಬೇಕೆಂದಿಲ್ಲ. ಕೆಲವರು ತಮ್ಮ ಸಾಕು ಪ್ರಾಣಿಗಳ ಜೊತೆಯೂ ಸ್ನೇಹ ಬೆಳೆಸುತ್ತಾರೆ. ಇಂತಹ ಸ್ನೇಹವನ್ನು ವ್ಯಕ್ತಪಡಿಸುವ ಸ್ನೇಹಿತರ ದಿನದಂದು ಉದ್ಯಮಿಯೊಬ್ಬರು ಉತ್ತಮ ಸ್ನೇಹಕ್ಕೆ ನಿರ್ದಶನವೆಂಬಂತೆ ಮುದ್ದಾದ ವಿಡಿಯೊವನ್ನು ಹಂಚಿಕೊಂಡಿದ್ದು ಅದು ಸಖತ್ ವೈರಲ್ (Viral Video) ಆಗಿದೆ.

ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಇತ್ತೀಚೆಗೆ ಅಂತರರಾಷ್ಟ್ರೀಯ ಸ್ನೇಹಿತರ ದಿನದಂದು ನಾಯಿಮರಿ ಮತ್ತು ಮಗುವಿನ ಸ್ನೇಹದ ಮುದ್ದಾದ ವಿಡಿಯೊವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಅಳುತ್ತಿರುವ ಹುಡುಗನನ್ನು ಆತನ ಸ್ನೇಹಿತನಂತೆ ಇದ್ದ ಸಾಕುಪ್ರಾಣಿ ನಾಯಿಮರಿ ಸಂತೈಸುತ್ತಿದೆ. 39 ಸೆಕೆಂಡುಗಳ ಈ ವಿಡಿಯೊದಲ್ಲಿ ಪುಟ್ಟ ಹುಡುಗನೊಬ್ಬ ನೆಲದ ಮೇಲೆ ಕುಳಿತು ತನ್ನ ಬೆನ್ನನ್ನು ಮಂಚದ ಮೇಲೆ ಇಟ್ಟುಕೊಂಡು ಬೇಸರದಿಂದ ಅಳುತ್ತಿದ್ದಾನೆ. ಆಗ ಅವನ ಪಕ್ಕ ಇದ್ದ ನಾಯಿಮರಿ ಅವನನ್ನು ಸಮಾಧಾನಪಡಿಸುತ್ತಿದೆ. ಹಾಗೇ ಅವನ ಕಣ್ಣೀರನ್ನು ಒರೆಸಿಕೊಳ್ಳಲು ಅದು ಟಿಶ್ಯೂವನ್ನು ಅವನಿಗೆ ತಂದು ನೀಡಿದೆ. ಮತ್ತು ಅಳುತ್ತಿರುವ ಅವನ ಮುಖವನ್ನೇ ಬೇಸರದಿಂದ ನೋಡುತ್ತಿದೆ. ಆ ಹುಡುಗ ಕೂಡ ನಾಯಿಮರಿಯನ್ನು ಗಟ್ಟಿಯಾಗಿ ತಬ್ಬಿಕೊಳ್ಳುತ್ತಾನೆ. ಈ ದೃಶ್ಯವನ್ನು ನೋಡಿದ ಎಂತವರಿಗೂ ಹೃದಯ ಭಾರವೆನಿಸುತ್ತದೆ. ಮೂಕ ಪ್ರಾಣಿಗಳಲ್ಲಿರುವ ಸ್ನೇಹದ ಮನೋಭಾವನೆಯನ್ನು ಈ ವಿಡಿಯೊ ಎತ್ತಿ ತೋರಿಸಿದೆ.

Viral Video
Viral Video

ಇದನ್ನೂ ಓದಿ: ವಯನಾಡ್ ಭೂಕುಸಿತ; ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಕುಟುಂಬಕ್ಕೆ ಕಣ್ಣೀರು ಸುರಿಸುತ್ತ ಆಶ್ರಯ ನೀಡಿದ ಆನೆ!

“ನಿಜವಾದ ಸ್ನೇಹಿತರು ನಮ್ಮ ಪ್ರತಿ ಕಣ್ಣೀರನ್ನು ಹಂಚಿಕೊಳ್ಳುತ್ತಾರೆ” ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. “ಈ ದೃಶ್ಯ ನಿಜವಾಗಿಯೂ ಸುಂದರವಾಗಿದೆ,” ಎಂದು ಇನ್ನೊಬ್ಬರು ಹೇಳಿದರು. “ಇದು ಮುದ್ದಾದ ಸಂಬಂಧ,” ಎಂದು ಮೂರನೆಯವರು ತಿಳಿಸಿದ್ದಾರೆ. “ಸ್ನೇಹವು ಎಂದಿಗೂ ವಿಶೇಷ ಜನರೊಂದಿಗೆ ಇರುವುದಿಲ್ಲ … ನಾವು ಸ್ನೇಹಿತರಾಗಿರುವ ಜನರು ವಿಶೇಷವಾಗುತ್ತಾರೆ” ಎಂದು ಬಳಕೆದಾರ ಸುಲೇಮಾನ್ ಖಾನ್ ಎಂಬುವವರು ಹಂಚಿಕೊಂಡಿದ್ದಾರೆ.

Continue Reading
Advertisement
Bangladesh Protest
ವಿದೇಶ2 mins ago

‘ಭೂತಯ್ಯ’ನ ಮನೆಯಂತಾದ ಶೇಖ್‌ ಹಸೀನಾ ನಿವಾಸ; ಬಿರಿಯಾನಿ ತಿಂದು, ವಸ್ತುಗಳನ್ನು ಕದ್ದ ಪ್ರತಿಭಟನಾಕಾರರು, Videoಗಳು ಇವೆ

Paris Olympics 2024
ಪ್ರಮುಖ ಸುದ್ದಿ21 mins ago

Paris Olympics 2024 : ಪದಕದ ಸ್ಪರ್ಧೆಗೆ ಅರ್ಹತೆ ಗಿಟ್ಟಿಸಿದ ಭಾರತದ ಶೂಟಿಂಗ್​ ಸ್ಕೀಟ್ ಮಿಶ್ರ ತಂಡ

Congress Protest
ಕರ್ನಾಟಕ39 mins ago

Congress Protest: ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಸಿಎಂ ಸಿದ್ದರಾಮಯ್ಯ ಅಭಿಮಾನಿ

Paris Olympics 2024
ಕ್ರಿಕೆಟ್41 mins ago

Manu Bhaker : ಪ್ಯಾರಿಸ್​ ಒಲಿಂಪಿಕ್ಸ್​​ ಸಮಾರೋಪದಲ್ಲಿ ಮನು ಭಾಕರ್​​ ತ್ರಿವರ್ಣ ಧ್ವಜಧಾರಿ

Bangladesh Protests
ವಿದೇಶ49 mins ago

Bangladesh Protests: ಬಾಂಗ್ಲಾ ಹಿಂಸಾಚಾರದ ಹಿಂದೆ ಪಾಕ್‌ ಕೈವಾಡ; ಭಾರತದ ಜತೆ ಹಸೀನಾ ಸ್ನೇಹ ಕಾರಣ?

Bangla Protest Explainer
ವಿದೇಶ55 mins ago

Bangla Protest Explainer: ಬಾಂಗ್ಲಾದಲ್ಲಿ ಹಿಂಸೆ ಭುಗಿಲೆದ್ದಿದ್ದೇಕೆ? ಶೇಖ್ ಹಸೀನಾ ಭಾರತಕ್ಕೆ ಪರಾರಿಯಾಗಿದ್ದೇಕೆ? ಮುಂದೇನು?

Paris Olympics 2024
ಕ್ರೀಡೆ1 hour ago

Paris Olympics 2024 : ಒಲಿಂಪಿಕ್ಸ್​ನ ಕ್ವಾರ್ಟರ್​ ಫೈನಲ್​ಗೇರಿದ ಭಾರತ ಮಹಿಳೆಯರ ಟೇಬಲ್ ಟೆನಿಸ್​ ತಂಡ

Road Accident
ವಿಜಯನಗರ1 hour ago

Road Accident : ಶಾಲಾ ಶಿಕ್ಷಕನ ಬಲಿ ಪಡೆದ ಸ್ಕೂಲ್‌ ವ್ಯಾನ್‌; ಒಂಟಿ ಸಲಗ ದಾಳಿಗೆ ವೃದ್ಧೆ ಸಾವು

Chiyaan Vikram danie caltagirone kissed hand on stage
ಕಾಲಿವುಡ್1 hour ago

Chiyaan Vikram: ವೇದಿಕೆಯಲ್ಲೇ ನಿರೂಪಕಿ ಸುಮಾಗೆ ಕಿಸ್ ಕೊಟ್ಟ ಖ್ಯಾತ ನಟ!

Viral Video
Latest1 hour ago

Viral Video: ಮಳೆಯಲಿ ಜೊತೆಯಲಿ… ಆನೆ-ಮಾವುತ ನಡುವಿನ ಮಾಂತ್ರಿಕ ಕ್ಷಣ! ಹೃದಯ ತಟ್ಟುವ ವಿಡಿಯೊ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ1 day ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ4 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ4 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ4 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ6 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ6 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ7 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ1 week ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌