Vastu Tips: ಕನ್ನಡಿಯನ್ನು ಮನೆಯ ಎಲ್ಲೆಂದರಲ್ಲಿ ಇಡಬೇಡಿ! ನಕಾರಾತ್ಮಕ ಶಕ್ತಿ ಆಹ್ವಾನಿಸಬೇಡಿ! - Vistara News

ಧಾರ್ಮಿಕ

Vastu Tips: ಕನ್ನಡಿಯನ್ನು ಮನೆಯ ಎಲ್ಲೆಂದರಲ್ಲಿ ಇಡಬೇಡಿ! ನಕಾರಾತ್ಮಕ ಶಕ್ತಿ ಆಹ್ವಾನಿಸಬೇಡಿ!

ಕನ್ನಡಿ ಪ್ರತಿಯೊಂದು ಮನೆಯಲ್ಲೂ ಇರುತ್ತದೆ. ಅದನ್ನು ನಾವು ಅಲಂಕಾರದ ಉದ್ದೇಶಗಳಿಗಾಗಿ ಹೆಚ್ಚಾಗಿ ಬಳಸುತ್ತೇವೆ. ಆದರೆ ಈ ಕನ್ನಡಿಯನ್ನು ಸರಿಯಾಗಿ ಇಡದೇ ಇದ್ದರೆ ಅದು ನಕಾರಾತ್ಮಕ ಶಕ್ತಿಯನ್ನು ಆಹ್ವಾನಿಸಬಹುದು ಎನ್ನುತ್ತದೆ ವಾಸ್ತು ನಿಯಮ. ಕನ್ನಡಿಗೆ ಮನೆಯಲ್ಲಿ ಯಾವ ರೀತಿ ವಾಸ್ತು ತತ್ತ್ವಗಳಿವೆ (Vastu Tips) ಎಂಬುದರ ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

Vastu Tips
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು (Positive energy) ತುಂಬಿಸಲು, ಜೀವನದಲ್ಲಿ ಸಮೃದ್ಧಿ, ಸಂತೋಷವನ್ನು ತರಲು ವಾಸ್ತು ಶಾಸ್ತ್ರದಲ್ಲಿ (Vastu Tips) ಕೆಲವೊಂದು ನಿಯಮಗಳನ್ನು ಮಾಡಲಾಗಿದೆ. ನಂಬಿಕೆಯೇ ಇದರ ಆಧಾರವಾಗಿದೆ. ಅಲಂಕಾರಕ್ಕಾಗಿ ಅಥವಾ ಅಗತ್ಯಕ್ಕಾಗಿ ಮನೆಯಲ್ಲಿ ಇಡುವ ಕೆಲವೊಂದು ವಸ್ತುಗಳು ಮನೆಗೆ ಶಕ್ತಿ ತುಂಬುತ್ತವೆ. ಅದು ಸಕಾರಾತ್ಮಕ ಫಲಿತಾಂಶ ಬೀರಲು ವಾಸ್ತು ನಿಯಮಕ್ಕೆ (vastu shastra) ಅನುಸಾರವಾಗಿ ಅವುಗಳನ್ನು ಇಡುವುದು ಮುಖ್ಯವಾಗಿರುತ್ತದೆ.

ಕನ್ನಡಿ ಪ್ರತಿಯೊಂದು ಮನೆಯಲ್ಲೂ ಇರುತ್ತದೆ. ಅದನ್ನು ನಾವು ಅಲಂಕಾರದ ಕಾರ್ಯಗಳಿಗಾಗಿ ಬಳಸುತ್ತೇವೆ. ಈ ಕನ್ನಡಿಯನ್ನು ಸರಿಯಾಗಿ ಇಡದೇ ಇದ್ದರೆ ಅದು ನಕಾರಾತ್ಮಕ ಶಕ್ತಿಯನ್ನು ಆಹ್ವಾನಿಸಬಹುದು ಎನ್ನುತ್ತದೆ ವಾಸ್ತು ನಿಯಮ. ಹಾಗಾದರೆ ಕನ್ನಡಿಗೆ ಮನೆಯಲ್ಲಿ ಯಾವ ರೀತಿ ವಾಸ್ತು ತತ್ತ್ವಗಳಿವೆ ಎಂಬುದನ್ನು ತಿಳಿಯೋಣ.


ಸೂಕ್ತ ಪ್ರದೇಶ

ಡ್ರೆಸ್ಸಿಂಗ್ ರೂಮ್ ಮತ್ತು ವಾಶ್‌ರೂಮ್ ಹೊರತುಪಡಿಸಿ ಡೈನಿಂಗ್ ಟೇಬಲ್‌ಗೆ ಎದುರಾಗಿ ಡೈನಿಂಗ್ ಏರಿಯಾದಲ್ಲಿ ಕನ್ನಡಿಯನ್ನು ಇರಿಸಬಹುದು. ಇದನ್ನು ಈ ಪ್ರದೇಶದಲ್ಲಿ ಇರಿಸುವ ಮುಖ್ಯ ಉದ್ದೇಶ ಇಡೀ ಕುಟುಂಬವು ಒಟ್ಟಿಗೆ ರಾತ್ರಿ ಊಟವನ್ನು ಮಾಡುವಾಗ ಅದು ಕನ್ನಡಿಯಲ್ಲಿ ಪ್ರತಿಫಲಿಸಬೇಕು. ಇದು ಮನೆಯಲ್ಲಿ ಸಮೃದ್ಧಿಯನ್ನು ತರುತ್ತದೆ ಮತ್ತು ಕುಟುಂಬ ಸದಸ್ಯರಲ್ಲಿ ಪ್ರೀತಿಯನ್ನು ಹೆಚ್ಚಿಸುತ್ತದೆ.

ಸ್ವಚ್ಛತೆ ಕಾಪಾಡಿ

ಕನ್ನಡಿಯನ್ನು ಎಲ್ಲಿ ಇರಿಸಿದರೂ ಅದನ್ನು ಸ್ವಚ್ಛವಾಗಿ ಇರಿಸಬೇಕು. ಇಲ್ಲದಿದ್ದರೆ ಅದು ನಕಾರಾತ್ಮಕತೆಯನ್ನು ಆಕರ್ಷಿಸಬಹುದು. ಕನ್ನಡಿಯ ಮೇಲೆ ಯಾವುದೇ ಸ್ಟಿಕ್ಕರ್‌ಗಳನ್ನು ಅಂಟಿಸಬಾರದು.


ಮಲಗುವ ಕೋಣೆ

ಮಾಸ್ಟರ್ ಬೆಡ್‌ರೂಮ್‌ನ ದಕ್ಷಿಣ ಅಥವಾ ನೈಋತ್ಯ ದಿಕ್ಕಿನಲ್ಲಿ ಕನ್ನಡಿಯನ್ನು ಇರಿಸಬಹುದು. ಕನ್ನಡಿಯನ್ನು ಮಲಗುವ ಕೋಣೆಯಲ್ಲಿ ಎಲ್ಲೆಂದರಲ್ಲಿ ಇರಿಸಿದರೆ ನಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸುತ್ತದೆ. ಹಾಗಾಗಿ ಎಚ್ಚರಿಕೆಯಿಂದ ಇರಿಸಬೇಕು.

ಕನ್ನಡಿಯನ್ನು ಇಡುವ ಸ್ಥಳ

ಕನ್ನಡಿಯನ್ನು ಯಾವಾಗಲೂ ಪೂರ್ವ, ಉತ್ತರ ಅಥವಾ ಪಶ್ಚಿಮ ಗೋಡೆಗಳ ಮೇಲೆ ಇಡಬೇಕು.

ಇದನ್ನೂ ಓದಿ: Vastu Tips: ಶಾಂತಿ, ನೆಮ್ಮದಿ, ಸಮೃದ್ಧಿಯಲ್ಲಿ ಮನೆಯ ಕರ್ಟನ್‌ಗಳ ಪಾತ್ರವೂ ಇರುತ್ತದೆ!


ಆಕಾರ ಹೇಗಿರಬೇಕು?

ವಾಸ್ತು ಪ್ರಕಾರ ಕನ್ನಡಿಯ ಚದರ ಮತ್ತು ಆಯತಾಕಾರದ ಆಕಾರಗಳನ್ನು ಹೊಂದಿರಬೇಕು. ಯಾಕೆಂದರೆ ಅವುಗಳು ಸುತ್ತಲೂ ಸಮವಾಗಿ ಶಕ್ತಿಯನ್ನು ಹರಡುತ್ತವೆ. ಕನ್ನಡಿಗೆ ವೃತ್ತದ ಆಕಾರವನ್ನು ಶ್ರೇಷ್ಠವೆಂದು ಪರಿಗಣಿಸಲಾಗುವುದಿಲ್ಲ.

ಮುರಿದ ಕನ್ನಡಿ

ಕನ್ನಡಿಯು ಎಷ್ಟೇ ದುಬಾರಿಯಾಗಿದ್ದರೂ ಅದು ಒಂದು ಬದಿಯಿಂದ ಒಡೆದರೆ ತಕ್ಷಣ ಅದನ್ನು ಎಸೆಯಬೇಕು. ಯಾಕೆಂದರೆ ಒಡೆದ ಕನ್ನಡಿಯನ್ನು ಮನೆಯಲ್ಲಿ ಇಡುವುದು ಶುಭವಲ್ಲ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Bangladesh Unrest: ಬಾಂಗ್ಲಾದಲ್ಲಿ ಹಿಂದುಗಳ ಮೇಲಿನ ದಾಳಿಗೆ ಇಸ್ಲಾಮಿಕ್‌ ರಾಷ್ಟ್ರಗಳಿಂದ ಹಣ; ಇಲ್ಲಿದೆ ಸ್ಫೋಟಕ ಮಾಹಿತಿ

Bangladesh Unrest: ಹಿಂದುಗಳು, ಅದರಲ್ಲೂ ಶೇಖ್‌ ಹಸೀನಾ ಅವರ ಜತೆ ಆಪ್ತರಾಗಿದ್ದ ಸೆಲೆಬ್ರಿಟಿಗಳನ್ನು ಹತ್ಯೆ ಮಾಡುತ್ತಿರುವುದರ ಹಿಂದೆ ಗಲ್ಫ್‌ ರಾಷ್ಟ್ರಗಳ ಕೈವಾಡ ಇದೆ. ಹಿಂದು ಗಾಯಕ ರಾಹುಲ್‌ ಆನಂದ್‌, ಕೌನ್ಸಿಲರ್‌ಗಳನ್ನು ಇದೇ ಕಾರಣಕ್ಕಾಗಿ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

VISTARANEWS.COM


on

Bangladesh Unrest
Koo

ಢಾಕಾ: ಬಾಂಗ್ಲಾದೇಶದಲ್ಲಿ ಮಾಜಿ ಪ್ರಧಾನಿ ಶೇಖ್‌ ಹಸೀನಾ (Sheikh Hasina) ನೇತೃತ್ವದ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಸೇರಿ ಹಲವರು ಆರಂಭಿಸಿದ್ದ ಪ್ರತಿಭಟನೆ, ಹಿಂಸಾಚಾರ ಈಗ ಹಿಂದುಗಳ ಮೇಲೆ ತಿರುಗಿದೆ. ಮೀಸಲಾತಿ ವಿರುದ್ಧದ ಹೋರಾಟವೀಗ ಹಿಂದುಗಳ ಮೇಲಿನ ಸೇಡು, ದಾಳಿಯಾಗಿ (Bangladesh Unrest) ಪರಿವರ್ತನೆಗೊಂಡಿದೆ. ಹಿಂದುಗಳ ಮೇಲೆ ದಾಳಿ (Bangladesh Hindus) ನಡೆಸಲಾಗುತ್ತಿದೆ. ಹಿಂದುಗಳನ್ನು ಹತ್ಯೆ ಮಾಡಲಾಗುತ್ತಿದೆ. ಹಿಂದು ದೇವಾಲಯಗಳನ್ನು ಧ್ವಂಸ ಮಾಡಲಾಗಿದೆ. ಇದರ ಮಧ್ಯೆಯೇ, ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ದಾಳಿ ನಡೆಸುತ್ತಿರುವುದರ ಹಿಂದೆ ಇಸ್ಲಾಮಿಕ್‌ ರಾಷ್ಟ್ರಗಳ ಹಣ ಹಾಗೂ ಕುತಂತ್ರ ಇದೆ ಎಂದು ತಿಳಿದುಬಂದಿದೆ.

ಹೌದು, ಬಾಂಗ್ಲಾದೇಶದಲ್ಲಿ ಹಿಂಸಾಚಾರ ಆರಂಭವಾದ ಬಳಿಕ ದೇವಾಲಯಗಳು ಸೇರಿ 97ಕ್ಕೂ ಹಿಂದು ಸ್ಥಳಗಳ ಮೇಲೆ ದಾಳಿ ಇಸ್ಲಾಮಿಕ್‌ ಮೂಲಭೂತವಾದಿಗಳು ದಾಳಿ ನಡೆಸಿದ್ದಾರೆ. ಹಿಂದುಗಳನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಳ್ಳುವುದು, ಹಿಂದು ಮಹಿಳೆಯರ ಮೇಲೆ ದೌರ್ಜನ್ಯ ಎಸಗುವುದು ಸೇರಿ ಹಲವು ರೀತಿಯಲ್ಲಿ ದಾಳಿ ನಡೆಸಲಾಗಿದೆ. ಇದಕ್ಕೆಲ್ಲ ಗಲ್ಫ್‌ ದೇಶಗಳು ಬಾಂಗ್ಲಾದೇಶದ ಮೂಲಭೂತವಾದಿಗಳು ನೀಡುತ್ತಿರುವ ಹಣವೇ ಕಾರಣ ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಆದರೆ, ಯಾವ ರಾಷ್ಟ್ರಗಳಿಂದ ಬಾಂಗ್ಲಾದೇಶದ ಮೂಲಭೂತವಾದಿಗಳಿಗೆ ಹಣ ಸಂದಾಯವಾಗುತ್ತಿದೆ ಎಂಬುದು ಗೊತ್ತಾಗಿಲ್ಲ.

ಬಾಂಗ್ಲಾದೇಶದಲ್ಲಿರುವ ನಾಲ್ಕು ಇಸ್ಕಾನ್‌ ಹಾಗೂ ಕಾಳಿ ದೇವಾಲಯಗಳನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಕಾಳಿ ದೇವಾಲಯಕ್ಕೆ ಬೆಂಕಿ ಹಚ್ಚಿದ ಇಸ್ಲಾಮಿಕ್‌ ಮೂಲಭೂತವಾದಿಗಳು ತಮ್ಮ ಮನಸ್ಥಿತಿ ಪ್ರದರ್ಶಿಸಿದ್ದಾರೆ. ರಂಗ್‌ಪುರ ಸಿಟಿ ಕಾರ್ಪೊರೇಷನ್‌ನ ಹಿಂದು ಕೌನ್ಸಿರ್‌ ಹರಧನ್‌ ರಾಯ್‌ ಹರ ಎಂಬುವರನ್ನು ಉದ್ರಿಕ್ತರು ಕೊಂದು ಹಾಕಿದ್ದಾರೆ. ಇದೇ ಪಟ್ಟಣದ ಮತ್ತೊಬ್ಬ ಹಿಂದು ಕೌನ್ಸಿಲರ್‌ ಕಾಜಲ್‌ ರಾಯ್‌ ಎಂಬವರನ್ನೂ ಕೊಲೆ ಮಾಡಿದ್ದಾರೆ. ಅಲ್ಲದೆ, ಭಾರತೀಯ ಕಲ್ಚರಲ್ ಸೆಂಟರ್‌ ಮೇಲೆಯೂ ದುಷ್ಕರ್ಮಿಗಳು ದಾಳಿ ನಡೆಸಿ, ಕಟ್ಟಡಕ್ಕೆ ಹಾನಿ ಮಾಡಿದ್ದಾರೆ.

‌2013ರಿಂದ 4 ಸಾವಿರ ದಾಳಿ

ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತರು, ಅದರಲ್ಲೂ ಹಿಂದುಗಳ ಮೇಲೆ ಹಲವು ವರ್ಷಗಳಿಂದ ದಾಳಿ ನಡೆಯುತ್ತಿದೆ. ವರದಿಗಳ ಪ್ರಕಾರ 2013ರಿಂದ ಇದುವರೆಗೆ ಹಿಂದುಗಳ ಮೇಲೆ ಸುಮಾರು 4 ಸಾವಿರ ದಾಳಿಗಳು ನಡೆದಿವೆ ಎಂದು ತಿಳಿದುಬಂದಿದೆ. ಹಿಂದುಗಳು, ಅದರಲ್ಲೂ ಶೇಖ್‌ ಹಸೀನಾ ಅವರ ಜತೆ ಆಪ್ತರಾಗಿದ್ದ ಸೆಲೆಬ್ರಿಟಿಗಳನ್ನು ಹತ್ಯೆ ಮಾಡುತ್ತಿರುವುದರ ಹಿಂದೆ ಗಲ್ಫ್‌ ರಾಷ್ಟ್ರಗಳ ಕೈವಾಡ ಇದೆ. ಹಿಂದು ಗಾಯಕ ರಾಹುಲ್‌ ಆನಂದ್‌, ಕೌನ್ಸಿಲರ್‌ಗಳನ್ನು ಇದೇ ಕಾರಣಕ್ಕಾಗಿ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Muhammad Yunus: ಬಾಂಗ್ಲಾ ಮಧ್ಯಂತರ ಸರ್ಕಾರಕ್ಕೆ ಮಹಮ್ಮದ್ ಯೂನಸ್‌ರನ್ನು ಮುಖ್ಯಸ್ಥರಾಗಿ ಮಾಡಿದ್ದೇಕೆ? ಏನಿವರ ಹಿನ್ನೆಲೆ?

Continue Reading

ದೇಶ

Waqf Act: ನಾಳೆ ವಕ್ಫ್‌ ಕಾಯ್ದೆಗೆ ತಿದ್ದುಪಡಿ ತರುವ ವಿಧೇಯಕ ಮಂಡನೆ; ಪರಮಾಧಿಕಾರ ರದ್ದು ಸೇರಿ ಏನೆಲ್ಲ ಬದಲು?

Waqf Act: ದೇಶದ ಯಾವುದೇ ಆಸ್ತಿಯನ್ನು ವಕ್ಫ್‌ ಮಂಡಳಿ ಆಸ್ತಿ ಎಂಬುದಾಗಿ ಘೋಷಿಸವ, ಅದನ್ನು ಯಾರೂ ಕೋರ್ಟ್‌ನಲ್ಲೂ ಪ್ರಶ್ನಿಸಲು ಸಾಧ್ಯವಾಗದಂತಹ ಪರಮಾಧಿಕಾರವನ್ನು ವಕ್ಫ್‌ ಕಾಯ್ದೆಯು ನೀಡಿದೆ. ಈಗ ಕೇಂದ್ರ ಸರ್ಕಾರವು ಇದಕ್ಕೆ ತಿದ್ದುಪಡಿ ತರಲು ಮುಂದಾಗಿದೆ.

VISTARANEWS.COM


on

Waqf Act
Koo

ನವದೆಹಲಿ: ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರವು ವಕ್ಫ್‌ ಕಾಯ್ದೆಗೆ (Waqf Act) ತಿದ್ದುಪಡಿ ತರಲು ಮುಂದಾಗಿದೆ. ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರವು (Central Government) ಸಂಸತ್‌ನಲ್ಲಿ ಗುರುವಾರ (ಆಗಸ್ಟ್‌ 8) ವಿಧೇಯಕ ಮಂಡಿಸಲಿದೆ. ಮಂಗಳವಾರ (ಆಗಸ್ಟ್‌ 6) ರಾತ್ರಿಯೇ ವಿಧೇಯಕದ ಪ್ರತಿಯನ್ನು ಲೋಕಸಭೆ ಸದಸ್ಯರಿಗೆ ಹಂಚಿಕೆ ಮಾಡಲಾಗಿದೆ. ವಕ್ಫ್‌ ಕಾಯ್ದೆಗೆ ತಿದ್ದುಪಡಿ ತರುವುದನ್ನು ಈಗಾಗಲೇ ಎಐಎಂಐಎಂ ಮುಖ್ಯಸ್ಥ ವಿರೋಧಿಸಿದ್ದಾರೆ. ಹಾಗಾದರೆ, ವಕ್ಫ್‌ ಕಾಯ್ದೆಗೆ ಏನೆಲ್ಲ ತಿದ್ದುಪಡಿ ತರಲಾಗುತ್ತದೆ? ಏನೆಲ್ಲ ಬದಲಾವಣೆ ಮಾಡಲಾಗುತ್ತದೆ? ಇಲ್ಲಿದೆ ಮಾಹಿತಿ.

1995ರ ವಕ್ಫ್‌ ಕಾಯ್ದೆಯ ಸೆಕ್ಷನ್‌ 40ಕ್ಕೆ ತಿದ್ದುಪಡಿ ತಂದು ಹಲವು ಬದಲಾವಣೆ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಇದನ್ನು ವಕ್ಫ್‌ ಕಾಯ್ದೆ ಎನ್ನುವ ಬದಲು ಯುನಿಫೈಡ್‌ ವಕ್ಫ್‌ ಮ್ಯಾನೇಜ್‌ಮೆಂಟ್‌, ಎಫಿಶಿಯೆನ್ಸಿ & ಡೆವಲಪ್‌ಮೆಂಟ್‌ ಆಕ್ಟ್‌ ಎಂಬುದಾಗಿ ಮರು ನಾಮಕರಣ ಮಾಡಲಾಗುತ್ತದೆ. ಇನ್ನು, 1923ರಲ್ಲಿ ಜಾರಿಗೆ ತಂದ ವಕ್ಫ್‌ ಕಾಯ್ದೆಯನ್ನು ರದ್ದುಗೊಳಿಸಲು ಕೂಡ ಕೇಂದ್ರ ಸರ್ಕಾರವು ಮತ್ತೊಂದು ವಿಧೇಯಕ ಮಂಡನೆ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.

ಏನೆಲ್ಲ ಬದಲಾವಣೆ?

ದೇಶದ ಯಾವುದೇ ಆಸ್ತಿಯನ್ನು ವಕ್ಫ್‌ ಮಂಡಳಿ ಆಸ್ತಿ ಎಂಬುದಾಗಿ ಘೋಷಿಸವ, ಅದನ್ನು ಯಾರೂ ಕೋರ್ಟ್‌ನಲ್ಲೂ ಪ್ರಶ್ನಿಸಲು ಸಾಧ್ಯವಾಗದಂತಹ ಪರಮಾಧಿಕಾರವನ್ನು ವಕ್ಫ್‌ ಕಾಯ್ದೆಯು ನೀಡಿದೆ. ಆದರೆ, ಈ ಪರಮಾಧಿಕಾರವನ್ನು ರದ್ದುಗೊಳಿಸುವುದು ಪ್ರಮುಖ ಬದಲಾವಣೆಯಾಗಿದೆ. ಇನ್ನು, ಆಯಾ ರಾಜ್ಯಗಳ ವಕ್ಫ್‌ ಮಂಡಳಿಗಳಲ್ಲಿ ಇಬ್ಬರು ಹೆಣ್ಣುಮಕ್ಕಳು ಕಡ್ಡಾಯವಾಗಿ ಇರುವುದು, ವಕ್ಫ್‌ ಮಂಡಳಿ ಆಸ್ತಿ ಕುರಿತು ಜಿಲ್ಲಾಧಿಕಾರಿ ತೀರ್ಮಾನ ತೆಗೆದುಕೊಳ್ಳುವುದು ಸೇರಿ ಹಲವು ಬದಲಾವಣೆ ಮಾಡಲಾಗುತ್ತದೆ.

ಅಷ್ಟೇ ಅಲ್ಲ, ಸಮಿತಿಯಲ್ಲಿ ಒಬ್ಬ ಕೇಂದ್ರ ಸಚಿವ, ಮೂವರು ಸಂಸದರು, ಮೂರು ಮುಸ್ಲಿಂ ಸಂಘಟನೆಗಳ ಮುಖಂಡರು ಹಾಗೂ ಮೂವರು ಮುಸ್ಲಿಂ ಕಾನೂನು ತಜ್ಞರು ಇರಲಿದ್ದಾರೆ. ಸುಪ್ರೀಂ ಕೋರ್ಟ್‌ ಅಥವಾ ಹೈಕೋರ್ಟ್‌ನ ಇಬ್ಬರು ಜಡ್ಜ್‌ಗಳು ಸಮಿತಿಯ ಸದಸ್ಯರಾಗಿರುತ್ತಾರೆ. ಯಾವುದೇ ಆಸ್ತಿಯನ್ನು ವಕ್ಫ್‌ ಆಸ್ತಿ ಎಂಬುದಾಗಿ ಘೋಷಿಸುವ ಮೊದಲು ನೋಟಿಸ್‌ ನೀಡಬೇಕು. ಆ ಕುರಿತು ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ವಕ್ಫ್‌ ಆಸ್ತಿಗಳ ಸರ್ವೇಯನ್ನು ಜಿಲ್ಲಾಧಿಕಾರಿ ಎದುರು ಮಾಡಬೇಕು. ಮಂಡಳಿಯ ನಿರ್ಧಾರ ಪ್ರಶ್ನಿಸಿ 90 ದಿನಗಳಲ್ಲಿ ಆಸ್ತಿಯ ಮಾಲೀಕರು ಅಥವಾ ಸಂಬಂಧಪಟ್ಟವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವ ಅಧಿಕಾರ ನೀಡಲಾಗಿದೆ.

ಆಸ್ತಿಯ ಬದಲು ಹಣಕಾಸು ನೆರವು ಬಂದರೆ, ಆ ಹಣವನ್ನು ಕೇಂದ್ರ ಸರ್ಕಾರ ಸಲಹೆಯಂತೆ ವಿಧವೆಯರು, ವಿಚ್ಛೇದನ ಪಡೆದವರು ಹಾಗೂ ಅನಾಥರ ಕಲ್ಯಾಣಕ್ಕೆ ವಿನಿಯೋಗಿಸಬೇಕು. ವಕ್ಫ್‌ ಮಂಡಳಿಯನ್ನು ವಿರೋಧಿಸುತ್ತಿರುವ ಬೋಹ್ರಾ ಹಾಗೂ ಆಗಾಖಾನಿ ಸಮುದಾಯದವರಿಗೆ ಪ್ರತ್ಯೇಕ ಮಂಡಳಿಸಲು ಪ್ರಸ್ತಾಪಿಸಲಾಗಿದೆ.

ಏನಿದು ವಕ್ಫ್‌ ಕಾಯ್ದೆ?

ಮುಸ್ಲಿಂ ವ್ಯಕ್ತಿಯೊಬ್ಬ ಧಾರ್ಮಿಕ ಕಾರಣಕ್ಕಾಗಿ ದಾನವಾಗಿ ನೀಡಿದ ಭೂಮಿಯನ್ನು ನಿಯಂತ್ರಿಸುವ ದಿಸೆಯಲ್ಲಿ 1995ರಲ್ಲಿ ವಕ್ಫ್‌ ಕಾಯ್ದೆಯನ್ನು ಜಾರಿಗೆ ತರಲಾಯಿತು. ಇದಕ್ಕೆ ಮುಸ್ಲಿಂ ಕಾನೂನನ್ನು ಕೂಡ ಅನ್ವಯ ಮಾಡಲಾಗಿದೆ. ಧಾರ್ಮಿಕ ಕಾರಣಕ್ಕಾಗಿ ನೀಡಿದ ಆಸ್ತಿಯು ವಕ್ಫ್‌ ಮಂಡಳಿ ವ್ಯಾಪ್ತಿಗೆ ಬರುತ್ತದೆ. ಅಷ್ಟೇ ಅಲ್ಲ, ಯಾವುದೇ ಆಸ್ತಿಯನ್ನು ವಕ್ಫ್‌ ಮಂಡಳಿಯು ತನ್ನ ಆಸ್ತಿಯನ್ನು ಘೋಷಿಸುವ ಜತೆಗೆ ಅದನ್ನು ವಶಕ್ಕೆ ಪಡೆಯುವ ಪರಮಾಧಿಕಾರ ಹೊಂದಿದೆ. ಇದು ಜನರ ಅಸಮಾಧಾನಕ್ಕೂ ಕಾರಣವಾಗಿದೆ.

ವರದಿಗಳ ಪ್ರಕಾರ, ದೇಶದಲ್ಲಿ ವಕ್ಫ್‌ ಮಂಡಳಿಯು ಸುಮಾರು 8.7 ಲಕ್ಷ ಆಸ್ತಿಗಳನ್ನು ಹೊಂದಿದೆ. ಇದರ ವ್ಯಾಪ್ತಿಯು ಸುಮಾರು 9.4 ಲಕ್ಷ ಎಕರೆ ಆಗಿದೆ. 2022ರಲ್ಲಿ ಹಿಂದುಗಳೇ ಬಹುಸಂಖ್ಯಾತರಾಗಿರುವ ತಮಿಳುನಾಡಿನ ತಿರುಚೆಂದುರೈ ಎಂಬ ಹಳ್ಳಿಯನ್ನು ವಕ್ಫ್‌ ಬೋರ್ಡ್‌ ತಮ್ಮದು ಎಂದು ಘೋಷಿಸಿತ್ತು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇನ್ನು, ಕಳೆದ ವರ್ಷ, ದೆಹಲಿ ವಕ್ಫ್‌ ಬೋರ್ಡ್‌ ಮಂಡಳಿಯ ಅಧೀನದಲ್ಲಿರುವ 123 ಆಸ್ತಿಗಳ ಪರಿಶೀಲನೆಗೆ ದೆಹಲಿ ಹೈಕೋರ್ಟ್‌ ಆದೇಶಿಸಿತ್ತು. ವಕ್ಫ್‌ ಮಂಡಳಿಯು ಇಂತಹ ವಿವಾದಿತ ಆಸ್ತಿಗಳನ್ನೇ ತುಂಬ ಹೊಂದಿದೆ. ಇಸ್ಲಾಂನಲ್ಲಿರುವ ಕೆಲ ಉಪ ಪಂಗಡಗಳೇ ವಕ್ಫ್‌ ಮಂಡಳಿಯನ್ನು ವಿರೋಧಿಸುತ್ತಿವೆ.

ಇದನ್ನೂ ಓದಿ: Waqf Board: ಜಾಮಾ ಮಸೀದಿ ಸೇರಿ ವಕ್ಫ್‌ ಬೋರ್ಡ್‌ಗೆ ಕಾಂಗ್ರೆಸ್‌ ನೀಡಿದ 123 ಆಸ್ತಿ ಸ್ವಾಧೀನಕ್ಕೆ ಕೇಂದ್ರ ಸರ್ಕಾರ ನಿರ್ಧಾರ!

Continue Reading

ಪ್ರಮುಖ ಸುದ್ದಿ

Shravan 2024: ಶ್ರಾವಣ ಶುಕ್ರವಾರದ ವಿಶೇಷವೇನು? ಅಂದು ಏನು ಮಾಡಬೇಕು? ಏನು ಮಾಡಬಾರದು?

Shravan 2024: ಶ್ರಾವಣ ಮಾಸ ಹಿಂದೂಗಳಿಗೆ ಬಹಳ ಪವಿತ್ರವಾದ ಮಾಸವಾಗಿದೆ. ಈ ಮಾಸದಲ್ಲಿ ಹಬ್ಬಗಳು ಸಾಲು ಸಾಲಾಗಿ ಬರುತ್ತದೆ. ಹಾಗಾಗಿ ಈ ಮಾಸದಲ್ಲಿ ಶಿವನ ಆರಾಧನೆಯ ಜೊತೆಗೆ ವಿಷ್ಣು, ಲಕ್ಷ್ಮಿ, ಪಾರ್ವತಿ ಮುಂತಾದ ದೇವರುಗಳ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಆದಕಾರಣ ಈ ಮಾಸದ ಪ್ರತಿದಿನವೂ ಹಬ್ಬವೇ ಇರುತ್ತದೆ. ಅದರಲ್ಲೂ ಶ್ರಾವಣ ಶುಕ್ರವಾರ ಬಹಳ ವಿಶೇಷವಾದದ್ದು. ಶ್ರಾವಣ ಮಾಸದಲ್ಲಿ ಬರುವ ಪ್ರತಿ ಶುಕ್ರವಾರವನ್ನು ಶ್ರಾವಣ ಶುಕ್ರವಾರವೆಂದು ಕರೆಯುತ್ತಾರೆ. ಈ ದಿನ ಲಕ್ಷ್ಮಿದೇವಿಯನ್ನು ಪೂಜಿಸಲಾಗುತ್ತದೆ. ಹಾಗಾಗಿ ಶ್ರಾವಣ ಶುಕ್ರವಾರದ ಪೂಜಾ ವಿಧಾನದ ಮಾಹಿತಿ ಇಲ್ಲಿದೆ.

VISTARANEWS.COM


on

Shravan 2024
Koo
  • ಪವಿತ್ರಾ ಶೆಟ್ಟಿ

ಆಗಸ್ಟ್ 5ರಿಂದ ಶ್ರಾವಣ ಮಾಸ (Shravan 2024) ಪ್ರಾರಂಭವಾಗಿದೆ. ಸೆಪ್ಟೆಂಬರ್ 3, 2024 ಮಂಗಳವಾರದ ಅಮಾವಾಸ್ಯೆಯ ತಿಥಿಯಂದು ಶ್ರಾವಣ ಮಾಸ ಕೊನೆಗೊಳ್ಳುತ್ತದೆ. ಈ ಮಾಸ ಹಿಂದೂಗಳಿಗೆ ಬಹಳ ಪವಿತ್ರವಾದ ಮಾಸವಾಗಿದೆ. ಈ ಮಾಸದಲ್ಲಿ ಹಬ್ಬಗಳು ಸಾಲು ಸಾಲಾಗಿ ಬರುತ್ತದೆ. ಹಾಗಾಗಿ ಈ ಮಾಸದಲ್ಲಿ ಶಿವನ ಆರಾಧನೆಯ ಜೊತೆಗೆ ವಿಷ್ಣು, ಲಕ್ಷ್ಮಿ, ಪಾರ್ವತಿ ಮುಂತಾದ ದೇವರುಗಳ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಆದಕಾರಣ ಈ ಮಾಸದ ಪ್ರತಿದಿನವೂ ಹಬ್ಬವೇ ಇರುತ್ತದೆ. ಅದರಲ್ಲೂ ಶ್ರಾವಣ ಶುಕ್ರವಾರ ಬಹಳ ವಿಶೇಷವಾದದ್ದು.

ಈ ಮಾಸದಲ್ಲಿ ಜಪ-ತಪ, ವ್ರತ-ನಿಯಮ, ಪೂಜೆ-ಪುರಾಣಶಾಸ್ತ್ರ, ಪ್ರವಚನ, ಭಜನೆ, ಕೀರ್ತನೆ, ಸತ್ಸಾಂಗ, ಪುಣ್ಯ ಕ್ಷೇತ್ರಗಳ ದರ್ಶನ, ಯಜ್ಞ-ಯಾಗ, ಹೋಮ-ಹವನ ಮುಂತಾದವುಗಳನ್ನು ಹೆಚ್ಚು ಮಾಡುತ್ತಾರೆ. ಶ್ರಾವಣ ಮಾಸದಲ್ಲಿ ಬರುವ ಪ್ರತಿವಾರಗಳಿಗೆ ವಿಶೇಷ ಮಹತ್ವವಿದೆ. ಹಾಗಾಗಿ ಶ್ರಾವಣ ಮಾಸದಲ್ಲಿ ಬರುವ ಪ್ರತಿ ಶುಕ್ರವಾರವನ್ನು ಶ್ರಾವಣ ಶುಕ್ರವಾರವೆಂದು ಕರೆಯುತ್ತಾರೆ. ಈ ದಿನ ಲಕ್ಷ್ಮಿದೇವಿಯನ್ನು ಪೂಜಿಸಲಾಗುತ್ತದೆ. ಹಾಗಾಗಿ ಶ್ರಾವಣ ಶುಕ್ರವಾರದ ಪೂಜಾ ವಿಧಾನಗಳನ್ನು ತಿಳಿದುಕೊಳ್ಳಿ.

Shravan 2024
Shravan 2024

ಶ್ರಾವಣ ಶುಕ್ರವಾರದ ಮಹತ್ವ :

ಶ್ರಾವಣ ಮಾಸದ ಶುಕ್ರವಾರದಂದು ಲಕ್ಷ್ಮಿ ಪೂಜೆ ಮಾಡುವುದರಿಂದ ಸಕಲ ಇಷ್ಟಾರ್ಥಗಳು ನೇರವೇರುತ್ತದೆ. ಯಾವುದೇ ಆರ್ಥಿಕ ಸಮಸ್ಯೆಗಳಿದ್ದರೂ ಅದು ನಿವಾರಣೆಯಾಗುತ್ತದೆ. ಸಾಲದ ಹೊರೆ, ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ. ಮನೆಗೆ ಧನಲಕ್ಷ್ಮಿಯ ಆಗಮನವಾಗುತ್ತದೆ. ಹಾಗಾಗಿ ಶ್ರಾವಣ ಮಾಸದ ಪ್ರತಿ ಶುಕ್ರವಾರಲಕ್ಷ್ಮಿದೇವಿಯ ಆರಾಧನೆ ಮಾಡಿ.

ಶ್ರಾವಣ ಶುಕ್ರವಾರದ ಆಚರಣೆಗಳು :

ಈ ವರ್ಷದ ಶ್ರಾವಣ ಮಾಸದಲ್ಲಿ ಆಗಸ್ಟ್ 9, 16, 23, 30 ರಂದು ಶ್ರಾವಣ ಶುಕ್ರವಾರ ಬರುತ್ತದೆ. ಹಾಗಾಗಿ ಪ್ರತಿ ಶ್ರಾವಣ ಶುಕ್ರವಾರದಂದು ನಿಮ್ಮ ಮನೆಯನ್ನು ಗೋಮೂತ್ರ ಮತ್ತು ಕಲ್ಲುಪ್ಪನ್ನು ಸೇರಿಸಿದ ನೀರಿನಿಂದ ಮನೆಯನ್ನು ಸ್ವಚ್ಛಗೊಳಿಸಿ. ಮನೆಯ ಬಾಗಿಲಿಗೆ ಮಾವಿನ ತೋರಣಗಳನ್ನು ಕಟ್ಟಿ. ಮನೆಯ ಮುಂದೆ ರಂಗೋಲಿ ಹಾಕಿ. ಮನೆಯ ಹೊಸ್ತಿಲನ್ನು ಲಕ್ಷ್ಮಿಯ ವಾಸಸ್ಥಾನ ಎಂದು ಕರೆಯುತ್ತಾರೆ. ಹಾಗಾಗಿ ಈ ದಿನ ಮನೆಯ ಹೊಸ್ತಿಲನ್ನು ತೊಳೆದು ಅರಿಶಿನ ಕುಂಕುಮ ಹಚ್ಚಿ ಹೂಗಳಿಂದ ಅಲಂಕರಿಸಿ ದೀಪ ಬೆಳಗಿಸಿ ಪೂಜೆ ಮಾಡಿ.

Shravan 2024
Shravan 2024

ಹಾಗೇ ಮನೆಯಲ್ಲಿರುವ ಗೃಹಿಣಿಯರು ಸ್ನಾನಾಧಿಗಳನ್ನು ಮಾಡಿ ಸೀರೆಯುಟ್ಟು ಅರಿಶಿನ, ಕುಂಕುಮ, ಹೂ, ಬಳೆಗಳನ್ನು ತೊಟ್ಟು ಅಲಂಕರಿಸಿಕೊಳ್ಳಿ. ನಂತರ ಲಕ್ಷ್ಮಿದೇವಿಯ ಪೋಟೊ ಅಥವಾ ವಿಗ್ರಹ ಅಥವಾ ಕಳಶಕ್ಕೆ ಅರಿಶಿನ ಕುಂಕುಮ ಹಚ್ಚಿ, ಚಿನ್ನ ತೊಡಿಸಿ ಹೂಗಳನ್ನಿಟ್ಟು ಅಲಂಕಾರ ಮಾಡಿ, ದೇವಿಗೆ ತುಪ್ಪದ ದೀಪ ಹಚ್ಚಿದರೆ ಒಳ್ಳೆಯದು. ಹಾಗೇ ಬೆಲ್ಲದನ್ನ, ಬೆಲ್ಲದ ಪಾಯಸ, ಲಕ್ಷ್ಮಿಗೆ ಪ್ರಿಯವಾದ ಬೆಲ್ಲದಿಂದ ತಯಾರಿಸಿದ ನೈವೇದ್ಯವನ್ನು ಅರ್ಪಿಸಿ. ಈ ದಿನ ಲಕ್ಷ್ಮಿ ಅಷ್ಟೋತ್ತರವನ್ನು ಪಠಿಸಿದರೆ ಶುಭ.

Shravan 2024
Shravan 2024

ಹಾಗೇ ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ವರಮಹಾಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತದೆ, ಈ ದಿನ ಲಕ್ಷ್ಮಿದೇವಿಯನ್ನು ಬಹಳ ವೈಭವದಿಂದ ಪೂಜಿಸಲಾಗುತ್ತದೆ, ದೇವಿಗೆ ಹಣದಿಂದ ಅಲಂಕರಿಸಲಾಗುತ್ತದೆ. ಹಾಗೇ ಈ ದಿನ ಮುತ್ತೈದೆಯರಿಗೆ ತಾಂಬೂಲ ನೀಡಬೇಕು. ಇದರಿಂದ ಲಕ್ಷ್ಮಿದೇವಿಯ ವರದಿಂದ ಪತಿಗೆ ದೀರ್ಘಾವಾಯುಷ್ಯದ ಜೊತೆಗೆ ಸಂಪತ್ತು ನಿಮ್ಮ ಮನೆಯಲ್ಲಿ ನೆಲೆಸುತ್ತದೆ ಎಂದು ನಂಬಲಾಗುತ್ತದೆ.

ಶ್ರಾವಣ ಶುಕ್ರವಾರ ಈ ಕೆಲಸಗಳನ್ನು ಮಾಡಬೇಡಿ:
ಶಾಸ್ತ್ರದ ಪ್ರಕಾರ ಶುಕ್ರವಾರದಂದು ಹಣದ ವ್ಯವಹಾರ ಮಾಡಬಾರದು. ಈ ದಿನ ಭೂಮಿ ಅಥವಾ ಆಸ್ತಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡಬಾರದು, ಈ ಕೆಲಸಗಳನ್ನು ಮಾಡಿದರೆ ನಷ್ಟವನ್ನು ಎದುರಿಸಬೇಕಾಗಬಹುದು ಎಂಬ ನಂಬಿಕೆಯಿದೆ. ಶುಕ್ರವಾರ ಉಪ್ಪು, ಹಣ, ಸಕ್ಕರೆಯನ್ನು ಸಾಲವಾಗಿ ಹೊರಗೆ ನೀಡಬೇಡಿ.

ಶ್ರಾವಣ ಶುಕ್ರವಾರ ಈ ಕೆಲಸಗಳನ್ನು ಮಾಡಿ:
ಶ್ರಾವಣ ಶುಕ್ರವಾರದಂದು ಪೊರಕೆ, ಉಪ್ಪು, ಚಿನ್ನ, ಬೆಳ್ಳಿ, ಗೋಮತಿ ಚಕ್ರ, ಶಂಖ, ಕವಡೆಗಳನ್ನು ಖರೀದಿಸಿ ಮನೆಗೆ ತಂದರೆ ಒಳ್ಳೆಯದು. ಈ ವಸ್ತುಗಳನ್ನು ಮನೆಗೆ ತಂದರೆ ಲಕ್ಷ್ಮಿ ದೇವಿಯ ವಿಶೇಷ ಆಶೀರ್ವಾದ ಸಿಗುತ್ತದೆ ಎಂದು ಹೇಳಲಾಗುವುದು.

ಇದನ್ನೂ ಓದಿ: Nagara Panchami : ಶ್ರಾವಣದ ಮೊದಲ ಹಬ್ಬ ನಾಗರ ಪಂಚಮಿ; ಏನಿದರ ಹಿನ್ನೆಲೆ, ವಿಶೇಷ?

ಈ ರೀತಿಯಲ್ಲಿ ಈ ವರ್ಷದ ಶ್ರಾವಣ ಮಾಸದ ಪ್ರತಿ ಶ್ರಾವಣ ಶುಕ್ರವಾರದಂದು ಲಕ್ಷ್ಮಿದೇವಿಯ ಪೂಜೆ ಮಾಡಿ ನಿಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳಿ. ಇದರಿಂದ ನಿಮ್ಮ ಹಣಕಾಸಿನ ಸಮಸ್ಯೆಗಳು ದೂರವಾಗಿ ನಿಮ್ಮ ಜೀವನದಲ್ಲಿ ನೆಮ್ಮದಿ ದೊರೆಯುವಂತಾಗಲಿ.

Continue Reading

ಧಾರ್ಮಿಕ

Vastu Tips: ಶಾಂತಿ, ನೆಮ್ಮದಿ, ಸಮೃದ್ಧಿಯಲ್ಲಿ ಮನೆಯ ಕರ್ಟನ್‌ಗಳ ಪಾತ್ರವೂ ಇರುತ್ತದೆ!

ಮನೆಯಲ್ಲಿ ಅಲಂಕಾರಕ್ಕಾಗಿ ಬಳಸುವ ಪರದೆಗಳಿಗೂ ಕೆಲವು ವಿಶೇಷ ನಿಯಮಗಳಿವೆ. ಇದನ್ನು ಅನುಸರಿಸದೇ ಇರುವುದು ಕೆಲವು ತೊಂದರೆಗಳಿಗೆ ಕಾರಣವಾಗಬಹುದು. ವಾಸ್ತು ಶಾಸ್ತ್ರವು (Vastu Tips) ಮನೆಯ ಪರದೆಗಳಿಗೆ ಸಂಬಂಧಿಸಿ ಕೆಲವು ನಿಯಮಗಳನ್ನು ಸೂಚಿಸಿದೆ ಅವು ಯಾವುದು ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

By

Vastu Tips
Koo

ವಾಸ್ತು ಶಾಸ್ತ್ರದ (Vastu Tips) ಪ್ರಕಾರ ಮನೆಯಲ್ಲಿ ಇರಿಸುವ ಪ್ರತಿಯೊಂದು ವಸ್ತುವೂ ಧನಾತ್ಮಕ (Positive energy) ಅಥವಾ ನಕಾರಾತ್ಮಕ ಶಕ್ತಿಯನ್ನು (Negative energy) ಹೊಂದಿರುತ್ತದೆ. ಇದು ಮನೆಯಲ್ಲಿ ವಾಸಿಸುವ ಸದಸ್ಯರ ಮೇಲೂ ಪರಿಣಾಮ ಬೀರುತ್ತದೆ. ಇದರಲ್ಲಿ ಮನೆಯಲ್ಲಿ ಅಳವಡಿಸಿರುವ ಕರ್ಟನ್‌ಗಳು (curtains) ಕೂಡ ಸೇರಿವೆ.

ಕರ್ಟನ್‌ ಗಳು ಮನೆಯ ಅಂದವನ್ನು ಹೆಚ್ಚಿಸುವುದರ ಜೊತೆಗೆ ಸೂರ್ಯನ ಬೆಳಕು ಮತ್ತು ಧೂಳಿನಿಂದ ಮನೆಯನ್ನು ರಕ್ಷಿಸುತ್ತದೆ. ವಾಸ್ತು ಶಾಸ್ತ್ರದಲ್ಲಿ ಮನೆಯ ಪರದೆಗಳಿಗೆ ಸಂಬಂಧಿಸಿದ ಕೆಲವು ವಿಶೇಷ ನಿಯಮಗಳನ್ನು ಮಾಡಲಾಗಿದೆ. ಪರದೆಗಳಿಗೆ ಸಂಬಂಧಿಸಿದ ವಾಸ್ತುವಿನ ಈ ನಿಯಮಗಳನ್ನು ಅನುಸರಿಸದಿರುವುದು ಸಹ ಹಾನಿಯನ್ನು ಉಂಟು ಮಾಡುತ್ತದೆ. ಹೀಗಾಗಿ ಮನೆಯ ಯಾವ ಕೋಣೆಯಲ್ಲಿ ಯಾವ ರೀತಿಯ ಕರ್ಟನ್ ಅಳವಡಿಸಬೇಕು ಎಂಬುದು ತಿಳಿದಿರಲಿ.

Vastu Tips
Vastu Tips


ಡ್ರಾಯಿಂಗ್ ರೂಮ್ ಪರದೆ

ಮನೆಯಲ್ಲಿ ಅತಿಥಿಗಳಿಗಾಗಿ ನಿರ್ಮಿಸುವ ಡ್ರಾಯಿಂಗ್ ರೂಮ್ ಅಥವಾ ಪ್ರತ್ಯೇಕ ಕೊಠಡಿ ಇದ್ದರೆ ಅಲ್ಲಿ ಬಾದಾಮಿ ಅಥವಾ ಕೆನೆ ಬಣ್ಣದ ಪರದೆಗಳನ್ನು ಸ್ಥಾಪಿಸಿ. ಇದು ಮನೆಯನ್ನು ಉತ್ಸಾಹಭರಿತವಾಗಿಡುತ್ತದೆ ಮತ್ತು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.

Vastu Tips
Vastu Tips


ಮನೆ ಮಾಲೀಕನ ಕೊಠಡಿ

ಮನೆಯ ಮುಖ್ಯಸ್ಥರ ಕೋಣೆಯಲ್ಲಿ ಕಿಟಕಿ ಮತ್ತು ಬಾಗಿಲುಗಳಿಗೆ ನೀಲಿ, ಕಂದು ಅಥವಾ ಕಿತ್ತಳೆ ಬಣ್ಣದ ಪರದೆಗಳನ್ನು ಹಾಕಬೇಕು. ಇದರಿಂದ ಮನೆಯ ಮುಖ್ಯಸ್ಥನ ಆರೋಗ್ಯ ಉತ್ತಮವಾಗಿರುತ್ತದೆ. ಇದರಿಂದ ಇಡೀ ಮನೆಯಲ್ಲಿ ಧನಾತ್ಮಕ ಶಕ್ತಿ ಉಳಿಯುತ್ತದೆ. ಈ ಬಣ್ಣದ ಪ್ರಭಾವದಿಂದ ಮನೆಯ ಸದಸ್ಯರು ಪ್ರಗತಿ ಹೊಂದುತ್ತಾರೆ.


ಮಲಗುವ ಕೋಣೆ

ಹೊಸದಾಗಿ ಮದುವೆಯಾಗಿರುವ ದಂಪತಿಯ ಮಲಗುವ ಕೋಣೆಯ ಪರದೆಗಳ ಬಣ್ಣದ ಆಯ್ಕೆಗೆ ವಿಶೇಷ ಗಮನ ಕೊಡಿ. ಗಂಡ ಮತ್ತು ಹೆಂಡತಿ ತಮ್ಮ ಕೋಣೆಯಲ್ಲಿ ಕೆಂಪು, ನೇರಳೆ ಅಥವಾ ಗುಲಾಬಿ ಬಣ್ಣದ ಪರದೆಗಳನ್ನು ಹಾಕಬೇಕು. ಇದು ದಾಂಪತ್ಯ ಜೀವನದಲ್ಲಿ ಹೊಸ ಚೈತನ್ಯವನ್ನು ತರುತ್ತದೆ. ಅಲ್ಲದೆ, ಪತಿ ಮತ್ತು ಪತ್ನಿ ನಡುವೆ ಪ್ರಣಯ ಹೆಚ್ಚಾಗುತ್ತದೆ!


ಅಧ್ಯಯನ ಕೊಠಡಿ

ಮಕ್ಕಳ ಅಧ್ಯಯನ ಕೊಠಡಿಯಲ್ಲಿ ಹಸಿರು, ನೀಲಿ ಅಥವಾ ಗುಲಾಬಿ ಬಣ್ಣದ ಪರದೆಗಳನ್ನು ಅಳವಡಿಸಿ. ಈ ಬಣ್ಣಗಳನ್ನು ಶಾಂತಿ ಮತ್ತು ಆರೋಗ್ಯದ ಸೂಚಕಗಳು ಎಂದು ಪರಿಗಣಿಸಲಾಗುತ್ತದೆ. ಸ್ಟಡಿ ರೂಂ ಇದ್ದರೆ ಅದರಲ್ಲಿ ಹಸಿರು ಬಣ್ಣದ ಕರ್ಟನ್ ಹಾಕುವುದರಿಂದ ಮಕ್ಕಳ ಏಕಾಗ್ರತೆ ಹೆಚ್ಚುತ್ತದೆ ಮತ್ತು ಅವರು ಅಧ್ಯಯನದತ್ತ ಗಮನ ಹರಿಸುತ್ತಾರೆ.

Vastu Tips
Vastu Tips


ಪೂಜಾ ಕೋಣೆ

ಮನೆಯಲ್ಲಿ ಅತ್ಯಂತ ಪವಿತ್ರವಾದ ಸ್ಥಳವೆಂದರೆ ಪೂಜಾ ಕೋಣೆ. ಈ ಕೋಣೆಯಲ್ಲಿನ ಪರದೆಗಳು ಯಾವಾಗಲೂ ಕಿತ್ತಳೆ ಅಥವಾ ತಿಳಿ ಹಳದಿಯಾಗಿರಬೇಕು. ಈ ಎರಡೂ ಬಣ್ಣಗಳನ್ನು ಶುದ್ಧತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಬಣ್ಣದ ಪರದೆಗಳನ್ನು ಅಳವಡಿಸುವ ಮೂಲಕ ಇಡೀ ಮನೆಯಲ್ಲಿ ಸಾತ್ವಿಕ ವಾತಾವರಣವನ್ನು ಕಾಪಾಡಿಕೊಳ್ಳಬಹುದು.

ಇದನ್ನೂ ಓದಿ: Vastu Tips: ಅಪ್ಪಿತಪ್ಪಿಯೂ ಮನೆಯಲ್ಲಿ ಈ ವಸ್ತುಗಳನ್ನು ಖಾಲಿ ಇಡಬೇಡಿ!


ಯಾವ ದಿಕ್ಕಿಗೆ ಯಾವ ಬಣ್ಣ?

ಮನೆಯ ಸದಸ್ಯರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿದ್ದರೆ ಅಥವಾ ಪರಸ್ಪರ ಹೊಂದಾಣಿಕೆ ಇಲ್ಲದೇ ಇದ್ದರೆ ಮನೆಯ ದಕ್ಷಿಣ ದಿಕ್ಕಿನಲ್ಲಿ ಕೆಂಪು ಪರದೆಗಳನ್ನು ಅಳವಡಿಸಬೇಕು. ಇದು ಮನೆಯ ಸದಸ್ಯರಲ್ಲಿ ಪ್ರೀತಿಯನ್ನು ಹೆಚ್ಚಿಸುತ್ತದೆ ಮತ್ತು ಪರಸ್ಪರ ಸಂಬಂಧಗಳು ಸಹ ಬಲಗೊಳ್ಳುತ್ತವೆ.

ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲದಿದ್ದರೆ ಮನೆಯ ಉತ್ತರ ದಿಕ್ಕಿನಲ್ಲಿ ನೀಲಿ ಪರದೆಗಳನ್ನು ಹಾಕಿ. ಇದು ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಪ್ರಾರಂಭಿಸುತ್ತದೆ.

Continue Reading
Advertisement
Vinay Rajkumar pepe preset Vinay Rajkumar Shreelesh S Nair
ಸ್ಯಾಂಡಲ್ ವುಡ್1 min ago

Vinay Rajkumar: ʻಪೆಪೆ’ ಸಿನಿಮಾದಲ್ಲಿ ಜೇನು ಕುರುಬ ಸಾಂಗ್: ಚಿತ್ರತಂಡದ ವಿಭಿನ್ನ ಪ್ರಯತ್ನಕ್ಕೆ ಪ್ರೇಕ್ಷಕರ ಜೈಕಾರ!

Mary Kom
ಕ್ರೀಡೆ5 mins ago

Mary Kom: ಒಂದೇ ತಾಸಿನಲ್ಲಿ 2 ಕೆಜಿ ತೂಕ ಇಳಿಸಿ ಚಿನ್ನ ಗೆದ್ದಿದ್ದ ಬಾಕ್ಸರ್​ ಮೇರಿ ಕೋಮ್

Repo Rate
ವಾಣಿಜ್ಯ9 mins ago

Repo Rate: ಗೃಹಸಾಲದ ಇಎಂಐ ಭಾರ ಇಳಿಕೆ ಇಲ್ಲ; ರೆಪೋ ದರ ಯಥಾಸ್ಥಿತಿ

Naga Chaitanya Nagarjuna Called Sobhita Dhulipala Hot
ಟಾಲಿವುಡ್15 mins ago

Naga Chaitanya: ನಾನು ಹೀಗೆ ಹೇಳಬಾರದು..ಆದರೂ ಶೋಭಿತಾ ತುಂಬಾ ಹಾಟ್‌ ಎಂದಿದ್ದ ನಾಗಾರ್ಜುನ; ವಿಡಿಯೊ ವೈರಲ್‌!

Henna Jihad
ದೇಶ27 mins ago

Henna Jihad: ಹಿಂದೂ ಮಹಿಳೆಯರಿಗೆ ಮುಸ್ಲಿಮರು ಮೆಹಂದಿ ಹಚ್ಚಿದರೆ ಹುಷಾರ್‌! ಭುಗಿಲೆದ್ದ ಹೆನ್ನಾ ಜಿಹಾದ್‌ ವಿವಾದ

lalbagh flower show 2024
ಪ್ರಮುಖ ಸುದ್ದಿ31 mins ago

Lalbagh Flower Show: ಸಸ್ಯಕಾಶಿಯಲ್ಲಿ ಇಂದಿನಿಂದ ಫಲಪುಷ್ಪ ಪ್ರದರ್ಶನ; ಏನೇನಿದೆ, ಪಾರ್ಕಿಂಗ್‌ ಎಲ್ಲಿ, ಟಿಕೆಟ್‌ ದರ ಎಷ್ಟು?

Gold Rate Today
ಚಿನ್ನದ ದರ36 mins ago

Gold Rate Today: ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ; ಬಂಗಾರ ಇಂದು ಇಷ್ಟು ಅಗ್ಗ

ಉದ್ಯೋಗ42 mins ago

Banking Recruitment 2024: ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 896 ಸ್ಪೆಷಲಿಸ್ಟ್ ಆಫೀಸರ್ ಹುದ್ದೆ; ಆಯ್ಕೆ ಪ್ರಕ್ರಿಯೆ ಹೇಗೆ? Complete Details

Actor Yash journey begins Yash Gave Update On Toxic Movie
ಸ್ಯಾಂಡಲ್ ವುಡ್44 mins ago

Actor Yash:  ʻಟಾಕ್ಸಿಕ್‌ʼ ಪಯಣ ಶುರುವಾಗಿದೆ ಎಂದು ಗುಡ್‌ ನ್ಯೂಸ್‌ ಕೊಟ್ಟ ರಾಕಿಂಗ್‌ ಸ್ಟಾರ್‌ ಯಶ್‌!

head master self harming
ಕ್ರೈಂ53 mins ago

Self Harming: ಇಬ್ಬರು ಇನ್‌ಸ್ಪೆಕ್ಟರ್‌ಗಳ ಬಳಿಕ ಹೆಡ್‌ಮಾಸ್ಟರ್‌ ಶಾಲೆಯಲ್ಲೇ ಆತ್ಮಹತ್ಯೆ; ಏನಾಗ್ತಿದೆ ರಾಜ್ಯದಲ್ಲಿ?

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Wild Animals Attack
ಚಿಕ್ಕಮಗಳೂರು2 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ5 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ7 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ7 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ7 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ1 week ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ1 week ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

ಟ್ರೆಂಡಿಂಗ್‌