UPI Transaction Limit: ಯುಪಿಐ ಟ್ಯಾಕ್ಸ್ ಪೇಮೆಂಟ್ ಮಿತಿ 5 ಲಕ್ಷ ರೂ.ಗೆ ಏರಿಕೆ - Vistara News

ವಾಣಿಜ್ಯ

UPI Transaction Limit: ಯುಪಿಐ ಟ್ಯಾಕ್ಸ್ ಪೇಮೆಂಟ್ ಮಿತಿ 5 ಲಕ್ಷ ರೂ.ಗೆ ಏರಿಕೆ

UPI Transaction Limit: ಯುಪಿಐ ಟ್ಯಾಕ್ಸ್ ಪೇಮೆಂಟ್ ಮಿತಿಯನ್ನು 1 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಿಸುವುದಾಗಿ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ. ಮಿತಿಯ ಹೆಚ್ಚಳವು ಗ್ರಾಹಕರಿಗೆ ಹೆಚ್ಚಿನ ಮೌಲ್ಯದ ತೆರಿಗೆ ವಹಿವಾಟುಗಳನ್ನು ಸರಳಗೊಳಿಸುವ ಮತ್ತು ಸುಗಮಗೊಳಿಸುವ ಗುರಿಯನ್ನು ಹೊಂದಿದೆ. ʼʼಸದ್ಯಕ್ಕೆ ಯುಪಿಐ ಮೂಲಕ 1 ಲಕ್ಷ ರೂ.ವರೆಗೆ ಹಣ ಕಳುಹಿಸಬಹುದು. ಇನ್ನು ಮುಂದೆ ತೆರಿಗೆ ಪಾವತಿಗಾಗಿ ಯುಪಿಐ ಮೂಲಕ 5 ಲಕ್ಷ ರೂ.ವರೆಗೆ ಹಣ ಕಳುಹಿಸಲು ಸಾಧ್ಯ. ಅಂದರೆ ಒಂದು ವಹಿವಾಟಿನಲ್ಲಿ ನೀವು 5 ಲಕ್ಷ ರೂ.ವರೆಗೆ ತೆರಿಗೆ ಪಾವತಿ ಮಾಡಲು ಸಾಧ್ಯವಾಗಲಿದೆʼʼ ಎಂದು ಅವರು ಹೇಳಿದ್ದಾರೆ. ಆದರೆ ಇದು ತೆರಿಗೆ ಪಾವತಿಗೆ ಮಾತ್ರ ಅನ್ವಯವಾಗುತ್ತದೆ.

VISTARANEWS.COM


on

UPI Transaction Limit
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಮೂಲಕ ತೆರಿಗೆ ಪಾವತಿಸುವವರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಗುಡ್‌ನ್ಯೂಸ್‌ ನೀಡಿದೆ. ಯುಪಿಐ ಟ್ಯಾಕ್ಸ್ ಪೇಮೆಂಟ್ ಮಿತಿಯನ್ನು 1 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಿಸುವುದಾಗಿ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ತಿಳಿಸಿದ್ದಾರೆ (UPI Transaction Limit).

ಮಿತಿಯ ಹೆಚ್ಚಳವು ಗ್ರಾಹಕರಿಗೆ ಹೆಚ್ಚಿನ ಮೌಲ್ಯದ ತೆರಿಗೆ ವಹಿವಾಟುಗಳನ್ನು ಸರಳಗೊಳಿಸುವ ಮತ್ತು ಸುಗಮಗೊಳಿಸುವ ಗುರಿಯನ್ನು ಹೊಂದಿದೆ. ʼʼಸದ್ಯಕ್ಕೆ ಯುಪಿಐ ಮೂಲಕ 1 ಲಕ್ಷ ರೂ.ವರೆಗೆ ಹಣ ಕಳುಹಿಸಬಹುದು. ಇನ್ನು ಮುಂದೆ ತೆರಿಗೆ ಪಾವತಿಗಾಗಿ ಯುಪಿಐ ಮೂಲಕ 5 ಲಕ್ಷ ರೂ.ವರೆಗೆ ಹಣ ಕಳುಹಿಸಲು ಸಾಧ್ಯ. ಅಂದರೆ ಒಂದು ವಹಿವಾಟಿನಲ್ಲಿ ನೀವು 5 ಲಕ್ಷ ರೂ.ವರೆಗೆ ತೆರಿಗೆ ಪಾವತಿ ಮಾಡಲು ಸಾಧ್ಯವಾಗಲಿದೆʼʼ ಎಂದು ಅವರು ಹೇಳಿದ್ದಾರೆ. ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ)ನ ದ್ವೈಮಾಸಿಕ ಹಣಕಾಸು ನೀತಿ ಸಮಿತಿ (MPC)ಯ ಸಭೆಯ ಬಳಿಕ ಅವರು ಸುದ್ದಿಗೋಷ್ಠಿ ನಡೆಸಿ ಈ ಮಾಹಿತಿ ನೀಡಿದ್ದಾರೆ. ಆದರೆ ಇದು ತೆರಿಗೆ ಪಾವತಿಗೆ ಮಾತ್ರ ಅನ್ವಯವಾಗುತ್ತದೆ.

“ಪ್ರಸ್ತುತ ಕೆಲವೊಂದು (ಉದಾಹರಣೆಗೆ ಆಸ್ಪತ್ರೆ, ಶಿಕ್ಷಣ ಸಂಸ್ಥೆ) ಕ್ಷೇತ್ರಗಳಿಗೆ ಹೊರತುಪಡಿಸಿ ಯುಪಿಐ ವಹಿವಾಟು 1 ಲಕ್ಷ ರೂ. ಮಿತಿಯನ್ನು ಹೊಂದಿದೆ. ಇದೀಗ ಯುಪಿಐ ಮೂಲಕ ತೆರಿಗೆ ಪಾವತಿಯ ಮಿತಿಯನ್ನು ಪ್ರತಿ ವಹಿವಾಟಿಗೆ 5 ಲಕ್ಷ ರೂ.ಗೆ ಹೆಚ್ಚಿಸಲು ನಾವು ನಿರ್ಧರಿಸಿದ್ದೇವೆ. ಇದರಿಂದ ಯುಪಿಐ ಬಳಸಿ ತೆರಿಗೆ ಪಾವತಿಸುವ ಗ್ರಾಹಕರಿಗೆ ಅನುಕೂಲವಾಗುತ್ತದೆʼʼ ಎಂದು ಅವರು ವಿವರಿಸಿದ್ದಾರೆ.

ಡೆಲಿಗೇಟೆಡ್ ಪೇಮೆಂಟ್ಸ್ ವಿಧಾನ

ಇದರ ಜತೆಗೆ ಆರ್‌ಬಿಐ ‘ಡೆಲಿಗೇಟೆಡ್ ಪೇಮೆಂಟ್ಸ್’ ಎಂಬ ಹೊಸ ಯುಪಿಐ ವೈಶಿಷ್ಟ್ಯವನ್ನು ಪರಿಚಯಿಸಿದೆ. ಒಬ್ಬ ವ್ಯಕ್ತಿಯ ಬ್ಯಾಂಕ್ ಖಾತೆಯನ್ನು ಮತ್ತೊಬ್ಬ ವ್ಯಕ್ತಿ ಬಳಸಲು ಅನುವು ಮಾಡಿಕೊಡುವ ಫೀಚರ್ ಇದಾಗಿದೆ. ಇದರಲ್ಲಿ ಪ್ರಾಥಮಿಕ ಬಳಕೆದಾರರ ಬ್ಯಾಂಕ್ ಖಾತೆಯಿಂದ ನಿರ್ದಿಷ್ಟ ಮಿತಿಯವರೆಗೆ ಯುಪಿಐ ವಹಿವಾಟುಗಳನ್ನು ನಡೆಸಲು ದ್ವಿತೀಯ ಬಳಕೆದಾರನಿಗೆ ಅನುಮತಿ ನೀಡಲಾಗುತ್ತದೆ. ಇದಕ್ಕಾಗಿ ದ್ವಿತೀಯ ಬಳಕೆದಾರರಿಗೆ ಪ್ರತ್ಯೇಕ ಯುಪಿಐ-ಲಿಂಕ್ ಮಾಡಿದ ಬ್ಯಾಂಕ್ ಖಾತೆಯ ಅಗತ್ಯವಿಲ್ಲ. ಈ ವೈಶಿಷ್ಟ್ಯವು ಡಿಜಿಟಲ್ ಪಾವತಿಗಳನ್ನು ಇನ್ನಷ್ಟು ಸುಗಮಗೊಳಿಸಲಿದೆ.

ರೆಪೋ ದರಲ್ಲಿ ಯಾವುದೇ ಬದಲಾವಣೆ ಇಲ್ಲ

ಇದೇ ವೇಳೆ ರೆಪೋ ದರವನ್ನೂ ಪ್ರಕಟಿಸಲಾಗಿದೆ. ರೆಪೋ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ರೆಪೋ ದರ ಸತತ 9ನೇ ಬಾರಿಯೂ ಶೇ. 6.50ರಲ್ಲಿಯೇ ಮುಂದುವರಿಯಲಿದೆ. ಜತೆಗೆ ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಪ್ರಗತಿ ದರವನ್ನು ಶೇ. 7.2 ಎಂದು ಆರ್‌ಬಿಐ ಅಂದಾಜಿಸಿದೆ. ಮಾತ್ರವಲ್ಲ ಕೆಲವೇ ಗಂಟೆಗಳಲ್ಲಿ ಚೆಕ್‌ ವಿಲೇವಾರಿ ಆಗುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಶಕ್ತಿಕಾಂತ ದಾಸ್ ತಿಳಿಸಿದ್ದಾರೆ. ಪ್ರಸ್ತುತ ಚೆಕ್‌ ಹಾಕಿದರೆ ಕ್ಲಿಯರ್‌ ಆಗಲು ಎರಡು ದಿನಗಳು ಬೇಕಾಗುತ್ತವೆ. ಅದನ್ನು ಕೆಲವೇ ಗಂಟೆಗಳಿಗೆ ಇಳಿಯಲಿದೆ.

ಇದನ್ನೂ ಓದಿ: Indian Currency: 2000 ರೂ. ನೋಟು ತಯಾರಿಸಲು 4 ರೂ. ಖರ್ಚು; 10 ರೂ. ನೋಟು ಮುದ್ರಿಸಲು 96 ಪೈಸೆ ಬೇಕು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಾಣಿಜ್ಯ

Bank Cheque: ಬ್ಯಾಂಕ್‌ಗೆ ಚೆಕ್‌ ಹಾಕಿದ ಕೆಲವೇ ಗಂಟೆಗಳಲ್ಲಿ ಇನ್ನು ಖಾತೆಗೆ ಜಮಾ; ಆರ್‌ಬಿಐ ಮಹತ್ವದ ಘೋಷಣೆ

Bank Cheque: ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಅವರ ನೇತೃತ್ವದಲ್ಲಿ ಕಳೆದ ಮೂರು ದಿನಗಳಿಂದ ಹಣಕಾಸು ನೀತಿ ಸಭೆ ನಡೆದಿದೆ. ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳ ಕುರಿತು ಶಕ್ತಿಕಾಂತ ದಾಸ್‌ ಅವರು ಮಾಹಿತಿ ನೀಡಿದ್ದಾರೆ.

VISTARANEWS.COM


on

Bank Cheque
Koo

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ ಹಣಕಾಸು ನೀತಿ ಸಭೆ (RBI Monetary Policy Meeting) ನಡೆದಿದ್ದು, ರೆಪೋ ದರವನ್ನು ಸತತ 9ನೇ ಬಾರಿಗೆ ಯಥಾಸ್ಥಿತಿ ಮುಂದುವರಿಸಲಾಗಿದೆ. ಇನ್ನು, ರೆಪೋ ದರದ (Repo Rate) ಜತೆಗೆ ಆರ್‌ಬಿಐ ಕೆಲವು ಪ್ರಮುಖ ತೀರ್ಮಾನಗಳನ್ನು ತೆಗೆದುಕೊಂಡಿದೆ. ಅದರಲ್ಲೂ, ಬ್ಯಾಂಕ್‌ಗಳಿಗೆ ಚೆಕ್‌ ಹಾಕಿದ ಕೆಲವೇ ಗಂಟೆಗಳಲ್ಲಿ ಮೊತ್ತವು ಬ್ಯಾಂಕ್‌ ಖಾತೆಗೆ ಜಮೆಯಾಗಲಿದೆ ಎಂಬ ಘೋಷಣೆಯು ಜನರಿಗೆ ತುಂಬ ಅನುಕೂಲವಾಗಲಿದೆ.

ಮೊಬೈಲ್‌ನಲ್ಲಿ ಯುಪಿಐ ಮೂಲಕ ಹಣ ವರ್ಗಾವಣೆ ಮಾಡುವುದು, ಬ್ಯಾಂಕ್‌ಗಳಲ್ಲಿ ಆರ್‌ಟಿಜಿಎಸ್‌, ಎನ್‌ಇಎಫ್‌ಟಿ (ನೆಫ್ಟ್)‌ ಮೂಲಕ ಹಣ ವರ್ಗಾವಣೆ ಮಾಡುವ ಕಾಲದಲ್ಲಿ ಬ್ಯಾಂಕ್‌ನಲ್ಲಿ ಚೆಕ್‌ ಹಾಕಿದರೆ, 2-3 ದಿನ ಬೇಕಾಗುತ್ತಿತ್ತು. ವಾರಾಂತ್ಯ ಅಥವಾ ರಜೆ ಇದ್ದರೆ ಚೆಕ್‌ನ ಮೊತ್ತವು ಜಮೆಯಾಗಲು 4-5 ದಿನ ಬೇಕಾಗುತ್ತಿತ್ತು. ಈಗ ಬ್ಯಾಂಕ್‌ಗೆ ನೀಡಿದ ಕೆಲವೇ ಗಂಟೆಗಳಲ್ಲಿ ಮೊತ್ತವು ಇನ್ನು ಮುಂದೆ ಖಾತೆಗೆ ಜಮೆಯಾಗಲಿದೆ. ಇದರಿಂದ ಉದ್ಯಮಿಗಳು ಸೇರಿ ಎಲ್ಲರಿಗೂ ಅನುಕೂಲವಾಗಲಿದೆ.

ರೆಪೋ ದರದ ಕುರಿತು ಶಕ್ತಿಕಾಂತ ದಾಸ್‌ ಮಾಹಿತಿ ನೀಡಿದರು. ʼʼಬಡ್ಡಿ ದರ ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಲಾಗಿದೆ. ಎಂಪಿಸಿ ಸಭೆಯಲ್ಲಿ ಆರು ಸದಸ್ಯರಲ್ಲಿ ನಾಲ್ವರು ಬಡ್ಡಿದರ ಯಥಾಸ್ಥಿತಿ ಮುಂದುವರಿಸುವ ಇಚ್ಛೆ ವ್ಯಕ್ತಪಡಿಸಿದ್ದರಿಂದ ಈ ತೀರ್ಮಾನ ಕೈಗೊಳ್ಳಲಾಗಿದೆʼʼ ಎಂದು ಶಕ್ತಿಕಾಂತ ದಾಸ್ ತಿಳಿಸಿದರು. ಆರ್‌ಬಿಐ ಕೊನೆಯ ಬಾರಿಗೆ 2023ರ ಫೆಬ್ರವರಿಯಲ್ಲಿ ರೆಪೋ ದರವನ್ನು ಶೇ. 6.25ರಿಂದ ಶೇ. 6.50ಕ್ಕೆ ಏರಿಕೆ ಮಾಡಿತ್ತು.

ಹಣದುಬ್ಬರ ನಿಯಂತ್ರಣದ ಗುರಿ

ಹಣದುಬ್ಬರವನ್ನು ನಿಯಂತ್ರಿಸುವುದೇ ಆರ್‌ಬಿಐಯ ಹಣಕಾಸು ನೀತಿಯ ಪ್ರಮುಖ ಗುರಿ. ಪ್ರಸ್ತುತ ಹಣದುಬ್ಬರ ದರ ಆರ್‌ಬಿಐಯ ಗುರಿಯಾದ ಶೇ. 4ಕ್ಕಿಂತ ಹೆಚ್ಚಾಗಿದೆ. ರೆಪೋ ದರವನ್ನು ಕಡಿಮೆ ಮಾಡುವುದು ಆರ್ಥಿಕತೆಯಲ್ಲಿ ಹಣದುಬ್ಬರದ ಒತ್ತಡದ ಹೆಚ್ಚಳಕ್ಕೆ ಕಾರಣವಾಗಬಹುದು. ಪ್ರಸ್ತುತ ದರವನ್ನು ಕಾಯ್ದುಕೊಳ್ಳುವುದು ಹಣದುಬ್ಬರವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ಸ್ವಲ್ಪ ಆರ್ಥಿಕ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ ಎನ್ನುವುದು ಆರ್‌ಬಿಐಯ ಅಭಿಮತ. ʼʼರೆಪೋ ದರ ಕಡಿತವು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಬಹುದಾದರೂ ಆರ್‌ಬಿಐ ಈ ಹಂತದಲ್ಲಿ ಹಣದುಬ್ಬರವನ್ನು ನಿಯಂತ್ರಿಸಲು ಆದ್ಯತೆ ನೀಡುತ್ತಿದೆʼʼ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Repo Rate: ಗೃಹಸಾಲದ ಇಎಂಐ ಭಾರ ಇಳಿಕೆ ಇಲ್ಲ; ರೆಪೋ ದರ ಯಥಾಸ್ಥಿತಿ

Continue Reading

ಮನಿ-ಗೈಡ್

Money Guide: ಕಾರು ಚಲಾಯಿಸಿದಷ್ಟೇ ವಿಮೆ ಪ್ರೀಮಿಯಂ ಪಾವತಿಸಿ; ಏನಿದು ಹೊಸ ಯೋಜನೆ? ಅನುಕೂಲಗಳೇನು?

Money Guide: ಈಗ ಕಾರು ʼಚಲಾಯಿಸಿದಷ್ಟೇ ಪಾವತಿʼ ವಿಮಾ ಮಾದರಿ ಜನಪ್ರಿಯವಾಗುತ್ತಿದೆ. ಅಂದರೆ ವಾರ್ಷಿಕ ಪ್ರೀಮಿಯಂ ಬದಲಾಗಿ ನೀವು ಕಾರನ್ನು ಎಷ್ಟು ದೂರ ಚಲಾಯಿಸಿದ್ದೀರೋ ಅದರ ಆಧಾರದಲ್ಲಿ ಪ್ರೀಮಿಯಂ ಅನ್ನು ಪಾವತಿಸಿದರೆ ಸಾಕು. ಅಂದರೆ ನೀವು ಕಾರನ್ನು ಕಡಿಮೆ ಬಳಸಿದರೆ ಕಡಿಮೆ ಪ್ರೀಮಿಯಂ ಪಾವತಿಸಿದರೆ ಸಾಕು. ಈ ಯೋಜನೆಯ ಅನುಕೂಲ, ಅನಾನುಕೂಲಗಳೇನು? ಎನ್ನುವ ವಿವರ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಭಾರತದಲ್ಲಿ ಪ್ರತಿಯೊಂದು ವಾಹನ ವಿಮೆಯನ್ನು (Vehicle insurance) ಹೊಂದಿರುವುದು ಕಡ್ಡಾಯ. ಇದು ವಾಹನಗಳಿಗೆ ಗರಿಷ್ಠ ಸುರಕ್ಷತೆ ಒದಗಿಸುತ್ತದೆ. ಒಂದು ವೇಳೆ ವಾಹನ ಕಳ್ಳತನವಾದರೆ ಅಥವಾ ಅಪಘಾತದಂತಹ ಅನಿರೀಕ್ಷಿತ ಸಮಸ್ಯೆ ಎದುರಾದರೆ ವಾಹನ ವಿಮಾ ಪಾಲಿಸಿ ಆರ್ಥಿಕವಾಗಿ ಸಹಾಯ ಮಾಡುತ್ತದೆ. ವಾಹನ ಮಾದರಿಗಳನ್ನು ಆಧರಿಸಿ ವಿಮೆಯ ಪ್ರೀಮಿಯಂ ಪಾವತಿ ನಿರ್ಧಾರವಾಗುತ್ತದೆ. ಇದರ ಜತೆಗೆ ಈಗ ಕಾರಿಗೆ ʼಚಲಾಯಿಸಿದಷ್ಟೇ ಪಾವತಿʼ (Pay as You Drive-PAYD) ವಿಧಾನ ಜನಪ್ರಿಯವಾಗುತ್ತಿದೆ. ಅಂದರೆ ವಾರ್ಷಿಕ ಪ್ರೀಮಿಯಂ ಬದಲಾಗಿ ನೀವು ಕಾರನ್ನು ಎಷ್ಟು ದೂರ ಚಲಾಯಿಸಿದ್ದೀರೋ ಅದರ ಆಧಾರದಲ್ಲಿ ಪ್ರೀಮಿಯಂ ಅನ್ನು ಪಾವತಿಸಿದರೆ ಸಾಕು. ಅಂದರೆ ನೀವು ಕಾರನ್ನು ಕಡಿಮೆ ಬಳಸಿದರೆ ಕಡಿಮೆ ಪ್ರೀಮಿಯಂ ಪಾವತಿಸಿದರೆ ಸಾಕು. ಈ ಯೋಜನೆಯ ಅನುಕೂಲ, ಅನಾನುಕೂಲಗಳೇನು? ಎನ್ನುವ ವಿವರ ಇಲ್ಲಿದೆ (Money Guide).

ವಾಹನ ವಿಮೆಯಲ್ಲಿನ ವಿಧಗಳು

ಸಾಮಾನ್ಯ ವಾಹನ ವಿಮೆಯಲ್ಲಿ 2 ವಿಧಗಳಿವೆ. ಮೊದಲನೆಯದ್ದು ಮೂರನೇ ವ್ಯಕ್ತಿಯಿಂದ ಪಡೆದುಕೊಳ್ಳುವಂತದ್ದು. ಇದು ಭಾರತದಲ್ಲಿ ಕಡ್ಡಾಯ. ಮತ್ತೊಂದು ಸಮಗ್ರ ವಿಮಾ ಪಾಲಿಸಿ. ಮೂರನೇ ವ್ಯಕ್ತಿಯ ವಿಮೆಯನ್ನು ಬಹುತೇಕ ಡೀಲರ್‌ಗಳೇ ಒದಗಿಸುತ್ತಾರೆ ಹಾಗೂ ಪ್ರೀಮಿಯಂ ವಾಹನದ ಬೆಲೆಯನ್ನು ಅವಲಂಬಿಸಿರುತ್ತದೆ. ಸಮಗ್ರ ವಿಮೆಯು ಮೂರನೇ ವ್ಯಕ್ತಿಯ ಹೊಣೆಗಾರಿಕೆಗಳು, ವೈಯಕ್ತಿಕ ಅಪಘಾತಗಳು ಮತ್ತು ಕಳ್ಳತನಗಳನ್ನು ಒಳಗೊಂಡಿರುತ್ತದೆ. ಆದಾಗ್ಯೂ ಸಮಗ್ರ ವಿಮೆಯು ಮೂರನೇ ವ್ಯಕ್ತಿಯ ವಿಮೆಗೆ ಹೋಲಿಸಿದರೆ ದುಬಾರಿ. ಇನ್ನು ಚಲಾಯಿಸಿದಷ್ಟೇ ಪಾವತಿ ವಿಧಾನದ ಬಗ್ಗೆ ತಿಳಿದುಕೊಳ್ಳೋಣ.

ಹೇಗೆ ಲೆಕ್ಕ ಹಾಕಲಾಗುತ್ತದೆ?

ಕಿ.ಮೀ. ಲೆಕ್ಕಾಚಾರ: ನೀವು ಕಾರು ಓಡಿಸಲು ನಿರೀಕ್ಷಿಸುವ ಒಟ್ಟು ಕಿಲೋ ಮೀಟರ್‌ಗಳನ್ನು ಪಾಲಿಸಿ ಅವಧಿಯಲ್ಲಿ ನೀವು ಅಂದಾಜು ಮಾಡಿ ಸೂಕ್ತವಾದ ಸ್ಲ್ಯಾಬ್ ಅನ್ನು ಆಯ್ಕೆ ಮಾಡಿ.

ಟೆಲಿಮ್ಯಾಟಿಕ್ಸ್‌ ಆಧಾರಿತ ವಾಹನ ವಿಮೆ: ಈ ಪಾಲಿಸಿಯಲ್ಲಿ ನಿಮ್ಮ ವಾಹನವನ್ನು ಚಲಾಯಿಸುವ ಕ್ರಮ, ಸಂಚಾರ ನಿಯಮಗಳನ್ನು ಪಾಲಿಸುವ ಶಿಸ್ತು ಮತ್ತು ಗುಣಮಟ್ಟವನ್ನು ಆಧರಿಸಿ ವಿಮೆಯ ಪ್ರೀಮಿಯಂ ದರ ನಿಗದಿಯಾಗುತ್ತದೆ. ವೇಗ, ದೂರ, ದಿನದ ಸಮಯ ಮತ್ತು ಚಾಲನಾ ಮಾದರಿಗಳು ಸೇರಿದಂತೆ ಚಾಲನೆಯ ವಿವಿಧ ಅಂಶಗಳ ಬಗ್ಗೆ ಡೇಟಾವನ್ನು ಸಂಗ್ರಹಿಸಿ ಪ್ರೀಮಿಯಂ ನಿರ್ಧರಿಸಲಾಗುತ್ತದೆ.

ಪ್ರೀಮಿಯಂ ಮೊತ್ತ ನಿರ್ಧಾರ: ನೀವು ಆಯ್ಕೆ ಮಾಡಿದ ಕಿ.ಮೀ. ಸ್ಲ್ಯಾಬ್‌ನ ಆಧಾರದ ಮೇಲೆ ಕಂಪನಿ ಪ್ರೀಮಿಯಂ ನಿರ್ಧರಿಸುತ್ತದೆ.

ಟ್ರ್ಯಾಕಿಂಗ್: ಟೆಲಿಮ್ಯಾಟಿಕ್ಸ್ ಉಪಕರಣವನ್ನು ಬಳಸಿಕೊಂಡು ಅಥವಾ ನಿಮ್ಮ ಸ್ಮಾರ್ಟ್‌ಫೋನ್‌ ಅಪ್ಲಿಕೇಶನ್ ಮೂಲಕ ವಾಹನದ ಮೈಲೇಜ್ ಅನ್ನು ಟ್ರ್ಯಾಕ್ ಮಾಡಲಾಗುತ್ತದೆ.

ಪ್ರೀಮಿಯಂ ಹೊಂದಾಣಿಕೆ: ಪಾಲಿಸಿ ಅವಧಿಯ ಕೊನೆಯಲ್ಲಿ ನಿಮ್ಮ ನಿಜವಾದ ಮೈಲೇಜ್ ಅನ್ನು ಘೋಷಿತ ಮೈಲೇಜ್‌ಗೆ ಹೋಲಿಸಲಾಗುತ್ತದೆ. ನೀವು ಕಡಿಮೆ ಚಾಲನೆ ಮಾಡಿದ್ದರೆ ನೀವು ಮರುಪಾವತಿ ಪಡೆಯುತ್ತೀರಿ. ನೀವು ಹೆಚ್ಚು ಚಾಲನೆ ಮಾಡಿದ್ದರೆ ನೀವು ಹೆಚ್ಚುವರಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ.

ಅನುಕೂಲಗಳೇನು?

  • ವೆಚ್ಚ ಉಳಿತಾಯ: ನೀವು ಕಾರನ್ನು ಕಡಿಮೆ ಕಿ.ಮೀ. ಚಲಾಯಿಸಿದ್ದರೆ ಅಲ್ಪ ಮೊತ್ತದ ಪ್ರೀಮಿಯಂ ಪಾವತಿಸಿದರೆ ಸಾಕು.
  • ನ್ಯಾಯೋಚಿತ ಬೆಲೆ: ನೀವು ಬಳಸುವ ಕವರೇಜ್‌ಗೆ ಮಾತ್ರ ಪಾವತಿ.
  • ಸುರಕ್ಷಿತವಾಗಿ ವಾಹನ ಚಲಾಯಿಸಲು ಪ್ರೋತ್ಸಾಹ: ಕೆಲವು ವಿಮಾ ಕಂಪನಿಗಳು ಟೆಲಿಮ್ಯಾಟಿಕ್ಸ್ ಉಪಕರಣದ ಮೂಲಕ ಟ್ರ್ಯಾಕ್ ಮಾಡಿ ಸುರಕ್ಷಿತ ಚಾಲನೆಗೆ ರಿಯಾಯಿತಿಗಳನ್ನು ನೀಡುತ್ತವೆ.
  • ಬಳಕೆ ಆಧಾರಿತ ಪ್ರೀಮಿಯಂಗಳು: ವಾಹನವನ್ನು ಓಡಿಸುವ ದೂರವನ್ನು ಆಧರಿಸಿ ವಿಮಾ ಪ್ರೀಮಿಯಂ ಅನ್ನು ಲೆಕ್ಕ ಹಾಕಲಾಗುತ್ತದೆ. ಮೈಲೇಜ್ ಮತ್ತು ಚಾಲನಾ ನಡವಳಿಕೆಯನ್ನು ದಾಖಲಿಸುವ ಟೆಲಿಮ್ಯಾಟಿಕ್ಸ್ ಉಪಕರಣ ಅಥವಾ ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡು ಇದನ್ನು ಸಾಮಾನ್ಯವಾಗಿ ಟ್ರ್ಯಾಕ್ ಮಾಡಲಾಗುತ್ತದೆ.
  • ವೆಚ್ಚದ ದಕ್ಷತೆ: ಕಾರನ್ನು ವಿರಳವಾಗಿ ಬಳಸುವ ಅಥವಾ ಕಡಿಮೆ ದೂರ ಸಂಚರಿಸುವವರಿಗೆ ಪಿಇಡಿ ಹೆಚ್ಚು ಸೂಕ್ತ. ಪ್ರೀಮಿಯಂಗಳು ಬಳಕೆಯೊಂದಿಗೆ ನೇರ ಸಂಬಂಧ ಹೊಂದಿವೆ.
  • ಕಸ್ಟಮೈಸ್ ಮಾಡಬಹುದಾದ ಕವರೇಜ್: ಪಾಲಿಸಿದಾರರು ತಮ್ಮ ಚಾಲನಾ ಅಭ್ಯಾಸ ಮತ್ತು ಅಗತ್ಯಗಳ ಆಧಾರದ ಮೇಲೆ ವಿವಿಧ ಹಂತದ ಕವರೇಜ್ ಅನ್ನು ಆಯ್ಕೆ ಮಾಡಬಹುದು.
  • ಚಾಲನಾ ಅಭ್ಯಾಸವನ್ನು ಸುಧಾರಣೆ: ನಿಮ್ಮ ಚಾಲನಾ ಅಭ್ಯಾಸವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಅನಾನುಕೂಲ

  • ಗೌಪ್ಯತೆ ಬಗ್ಗೆ ಪ್ರಶ್ನೆ: ಚಾಲನಾ ಅಭ್ಯಾಸದ ನಿರಂತರ ಟ್ರ್ಯಾಕಿಂಗ್ ಗೌಪ್ಯತೆಗೆ ಧಕ್ಕೆ ತರುತ್ತದೆ.
  • ಆಗಾಗ್ಗೆ ಚಾಲನೆ ಮಾಡುವವರಿಗೆ ಅಧಿಕ ವೆಚ್ಚ: ಸಾಂಪ್ರದಾಯಿಕ ವಿಮಾ ಪಾಲಿಸಿಗೆ ಹೋಲಿಸಿದರೆ ಆಗಾಗ್ಗೆ ಚಾಲನೆ ಮಾಡುವವರು ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ.
  • ಕ್ಲೈಮ್‌ಗಳಲ್ಲಿನ ಸಂಕೀರ್ಣತೆ: ಕ್ಲೈಮ್ ಸಂದರ್ಭದಲ್ಲಿ, ದೂರ ಚಾಲಿತ ಮತ್ತು ಇತರ ಟೆಲಿಮ್ಯಾಟಿಕ್ಸ್ ಡೇಟಾವನ್ನು ಪರಿಶೀಲಿಸಲು ತೊಡಕು ಎದುರಾಗುವ ಸಾಧ್ಯತೆ ಇದೆ.
  • ಟೆಲಿಮ್ಯಾಟಿಕ್ಸ್‌ನ ವಿಶ್ವಾಸಾರ್ಹತೆ: ಟೆಲಿಮ್ಯಾಟಿಕ್ಸ್ ಉಪಕರಣ ಅಥವಾ ಅಪ್ಲಿಕೇಶನ್‌ನಲ್ಲಿನ ಯಾವುದೇ ಅಸಮರ್ಪಕ ಕಾರ್ಯ ವಿಧಾನ ಪ್ರೀಮಿಯಂ ಲೆಕ್ಕಾಚಾರದ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: Money Guide: ನೆರೆ, ಭೂಕುಸಿತದಿಂದ ನಿಮ್ಮ ಮನೆಯನ್ನು ರಕ್ಷಿಸಲು ಜಸ್ಟ್‌ ಹೀಗೆ ಮಾಡಿ ಸಾಕು

Continue Reading

ವಾಣಿಜ್ಯ

Repo Rate: ಗೃಹಸಾಲದ ಇಎಂಐ ಭಾರ ಇಳಿಕೆ ಇಲ್ಲ; ರೆಪೋ ದರ ಯಥಾಸ್ಥಿತಿ

Repo Rate: ಭಾರತೀಯ ರಿಸರ್ವ್ ಬ್ಯಾಂಕ್ ನಿರೀಕ್ಷೆಯಂತೆ ರಿಪೋ ದರವನ್ನು ಶೇ. 6.5ರಲ್ಲಿ ಮುಂದುವರಿಸಲು ನಿರ್ಧರಿಸಿದೆ. ಹಣದುಬ್ಬರ ಇನ್ನೂ ಅಧಿಕ ಮಟ್ಟದಲ್ಲಿ ಇರುವುದರಿಂದ ರಿಪೋ ದರ ಇಳಿಕೆ ಸದ್ಯಕ್ಕೆ ಬೇಡ ಎಂಬುದು ಮಾನಿಟರಿ ಪಾಲಿಸಿ ಕಮಿಟಿಯ ಹೆಚ್ಚಿನ ಸದಸ್ಯರ ಅಭಿಮತದ ಹಿನ್ನಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಇದರಿಂದ ರಿಯಲ್ ಎಸ್ಟೇಟ್ ಅಥವಾ ಗೃಹ ಸಾಲದ ಇಎಂಐಗಳ ಮೇಲೆ ಯಾವುದೇ ಬದಲಾವಣೆ ಆಗುವುದಿಲ್ಲ.

VISTARANEWS.COM


on

Repo Rate
Koo

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ನಿರೀಕ್ಷೆಯಂತೆ ರಿಪೋ ದರ (Repo Rate) ಅಥವಾ ಬಡ್ಡಿದರವನ್ನು ಶೇ. 6.5ರಲ್ಲಿ ಮುಂದುವರಿಸಲು ನಿರ್ಧರಿಸಿದೆ. ಹಣದುಬ್ಬರ ಇನ್ನೂ ಅಧಿಕ ಮಟ್ಟದಲ್ಲಿ ಇರುವುದರಿಂದ ರಿಪೋ ದರ ಇಳಿಕೆ ಸದ್ಯಕ್ಕೆ ಬೇಡ ಎಂಬುದು ಮಾನಿಟರಿ ಪಾಲಿಸಿ ಕಮಿಟಿ (Monetary Policy Committee)ಯ ಹೆಚ್ಚಿನ ಸದಸ್ಯರ ಅಭಿಮತದ ಹಿನ್ನಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಎಂಪಿಸಿ ಸಭೆಯಲ್ಲಿ ಕೈಗೊಂಡ ಈ ತೀರ್ಮಾನದ ಬಗ್ಗೆ ಇಂದು ಪತ್ರಿಕಾಗೋಷ್ಠಿಯಲ್ಲಿ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ (Shaktikanta Das) ಮಾಹಿತಿ ನೀಡಿದರು. ಇದರಿಂದ ರಿಯಲ್ ಎಸ್ಟೇಟ್ ಅಥವಾ ಗೃಹ ಸಾಲದ ಇಎಂಐಗಳ ಮೇಲೆ ಯಾವುದೇ ಬದಲಾವಣೆ ಆಗುವುದಿಲ್ಲ.

ʼʼಬಡ್ಡಿ ದರ ಯಥಾಸ್ಥಿತಿಯಲ್ಲಿ ಮುಂದುವರಿಸಲು ನಿರ್ಧರಿಸಲಾಗಿದೆ. ಎಂಪಿಸಿ ಸಭೆಯಲ್ಲಿ ಆರು ಸದಸ್ಯರಲ್ಲಿ ನಾಲ್ವರು ಬಡ್ಡಿದರ ಯಥಾಸ್ಥಿತಿ ಮುಂದುವರಿಸುವ ಇಚ್ಛೆ ವ್ಯಕ್ತಪಡಿಸಿದ್ದರಿಂದ ಈ ತೀರ್ಮಾನ ಕೈಗೊಳ್ಳಲಾಗಿದೆʼʼ ಎಂದು ಶಕ್ತಿಕಾಂತ ದಾಸ್ ತಿಳಿಸಿದರು. ಆರ್‌ಬಿಐ ಕೊನೆಯ ಬಾರಿಗೆ 2023ರ ಫೆಬ್ರವರಿಯಲ್ಲಿ ರೆಪೋ ದರವನ್ನು ಶೇ. 6.25ರಿಂದ ಶೇ. 6.50ಕ್ಕೆ ಏರಿಕೆ ಮಾಡಿತ್ತು.

ಗೃಹ ಸಾಲದ ಮೇಲೆ ಪರಿಣಾಮ ಬೀರುವುದಿಲ್ಲ

ರೆಪೋ ದರ ಯಥಾಸ್ಥಿಯಲ್ಲಿರುವುದರಿಂದ ರಿಯಲ್ ಎಸ್ಟೇಟ್ ಅಥವಾ ಗೃಹ ಸಾಲದ ಇಎಂಐಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ರೆಪೋ ದರವು ಬದಲಾಗದೆ ಉಳಿದಿರುವುದರಿಂದ ಬ್ಯಾಂಕ್‌ಗಳು ಶೀಘ್ರದಲ್ಲೇ ತಮ್ಮ ಸಾಲದ ದರಗಳನ್ನು ಬದಲಾಯಿಸುವ ಸಾಧ್ಯತೆಯಿಲ್ಲ. ಅಂದರೆ ನಿಮ್ಮ ಇಎಂಐ ಸದ್ಯ ಏರಿಕೆ ಅಥವಾ ಇಳಿಕೆಯಾಗುವುದಿಲ್ಲ.

ಹಣದುಬ್ಬರ ನಿಯಂತ್ರಣದ ಗುರಿ

ಹಣದುಬ್ಬರವನ್ನು ನಿಯಂತ್ರಿಸುವುದೇ ಆರ್‌ಬಿಐಯ ಹಣಕಾಸು ನೀತಿಯ ಪ್ರಮುಖ ಗುರಿ. ಪ್ರಸ್ತುತ ಹಣದುಬ್ಬರ ದರ ಆರ್‌ಬಿಐಯ ಗುರಿಯಾದ ಶೇ. 4ಕ್ಕಿಂತ ಹೆಚ್ಚಾಗಿದೆ. ರೆಪೋ ದರವನ್ನು ಕಡಿಮೆ ಮಾಡುವುದು ಆರ್ಥಿಕತೆಯಲ್ಲಿ ಹಣದುಬ್ಬರದ ಒತ್ತಡದ ಹೆಚ್ಚಳಕ್ಕೆ ಕಾರಣವಾಗಬಹುದು. ಪ್ರಸ್ತುತ ದರವನ್ನು ಕಾಯ್ದುಕೊಳ್ಳುವುದು ಹಣದುಬ್ಬರವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ಸ್ವಲ್ಪ ಆರ್ಥಿಕ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ ಎನ್ನುವುದು ಆರ್‌ಬಿಐಯ ಅಭಿಮತ. ʼʼರೆಪೋ ದರ ಕಡಿತವು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಬಹುದಾದರೂ ಆರ್‌ಬಿಐ ಈ ಹಂತದಲ್ಲಿ ಹಣದುಬ್ಬರವನ್ನು ನಿಯಂತ್ರಿಸಲು ಆದ್ಯತೆ ನೀಡುತ್ತಿದೆʼʼ ಎಂದು ಮೂಲಗಳು ತಿಳಿಸಿವೆ.

ರೆಪೋ ದರ ಎಂದರೇನು?

ದೇಶದ ವಾಣಿಜ್ಯ ಬ್ಯಾಂಕ್‌ಗಳಿಗೆ ಆರ್‌ಬಿಐ ನೀಡುವ ಸಾಲಕ್ಕೆ ವಿಧಿಸುವ ಬಡ್ಡಿದರವೇ ರೆಪೋದರ ಆಗಿದೆ. ಹಣದ ಕೊರತೆ ಸೇರಿ ಯಾವುದೇ ತುರ್ತು ಸಂದರ್ಭಗಳಲ್ಲಿ ವಾಣಿಜ್ಯ ಬ್ಯಾಂಕ್‌ಗಳು ಆರ್‌ಬಿಐನಿಂದ ಸಾಲ ಪಡೆಯುತ್ತವೆ. ಈ ಸಾಲಕ್ಕೆ ಆರ್‌ಬಿಐ ಬಡ್ಡಿ ವಿಧಿಸುತ್ತದೆ. ಇದನ್ನೇ ರೆಪೋ ರೇಟ್‌ ಎನ್ನುತ್ತಾರೆ. ಕೆಲವೊಮ್ಮೆ, ವಾಣಿಜ್ಯ ಬ್ಯಾಂಕ್‌ಗಳಿಂದ ಆರ್‌ಬಿಐ ಸಾಲ ಪಡೆಯತ್ತದೆ. ಆ ಸಾಲದ ಮೇಲಿನ ಬಡ್ಡಿಗೆ ರಿವರ್ಸ್‌ ರೆಪೋ ದರ ಎನ್ನುತ್ತಾರೆ. ರೆಪೋ ದರ ಏರಿಕೆಯಾದರೆ, ಬ್ಯಾಂಕುಗಳು ಕೂಡ ಗ್ರಾಹಕರಿಗೆ ನೀಡುವ ಸಾಲದ ಮೇಲಿನ ಬಡ್ಡಿಯನ್ನು ಏರಿಕೆ ಮಾಡುತ್ತವೆ. ಹಾಗಾಗಿ, ರೆಪೋ ದರವು ಸಾಲಗಾರರಿಗೆ ಪ್ರಮುಖ ಎನಿಸುತ್ತದೆ.

ಇದನ್ನೂ ಓದಿ: Bangladesh Unrest: ಬಾಂಗ್ಲಾ ಹಿಂಸಾಚಾರ; ಬಹುರಾಷ್ಟ್ರೀಯ ಕಂಪನಿಗಳು ತತ್ತರ; ಭಾರತದ ಉದ್ಯಮಗಳ ಮೇಲೇನು ಪರಿಣಾಮ?

Continue Reading

ಚಿನ್ನದ ದರ

Gold Rate Today: ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ; ಬಂಗಾರ ಇಂದು ಇಷ್ಟು ಅಗ್ಗ

Gold Rate Today: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಚಿನ್ನದ ದರ ಕೊಂಚ ಇಳಿಕೆಯಾಗಿದೆ. ಮಂಗಳವಾರದಿಂದ ಬೆಲೆ ಸತತವಾಗಿ ಇಳಿಕೆಯಾಗುತ್ತಿರುವುದರಿಂದ ಗ್ರಾಹಕರ ಮೊಗದಲ್ಲಿ ನಗು ಮೂಡಿದೆ. ಇಂದು ಬೆಂಗಳೂರಿನಲ್ಲಿ 1 ಗ್ರಾಂ 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಚಿನ್ನಕ್ಕೆ ತಲಾ ₹ 1 ಕಡಿಮೆಯಾಗಿದೆ. 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,349 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 6,926 ಇದೆ.

VISTARANEWS.COM


on

Gold Rate Today
Koo

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು (ಆಗಸ್ಟ್‌ 8) ಚಿನ್ನದ ದರ ಕೊಂಚ ಇಳಿಕೆಯಾಗಿದೆ (Gold Rate Today). ಮಂಗಳವಾರದಿಂದ ಬೆಲೆ ಸತತವಾಗಿ ಇಳಿಕೆಯಾಗುತ್ತಿರುವುದರಿಂದ ಗ್ರಾಹಕರ ಮೊಗದಲ್ಲಿ ನಗು ಮೂಡಿದೆ. ಇಂದು ಬೆಂಗಳೂರಿನಲ್ಲಿ 1 ಗ್ರಾಂ 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಚಿನ್ನಕ್ಕೆ ತಲಾ ₹ 1 ಕಡಿಮೆಯಾಗಿದೆ.

ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,349 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 6,926 ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ ₹ 50,792 ಇದೆ. ಇನ್ನು 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹ 63,490 ಮತ್ತು ₹ 6,34,900 ದರದಲ್ಲಿ ಖರೀದಿಸಬಹುದು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ ₹ 55,408 ಇದೆ. 10 ಗ್ರಾಂ ಮತ್ತು 100 ಗ್ರಾಂನ 24 ಕ್ಯಾರಟ್‌ ಚಿನ್ನದ ಬೆಲೆ ₹ 69,260 ಮತ್ತು ₹ 6,92,600 ತಲುಪಿದೆ.

ನಗರ22 ಕ್ಯಾರಟ್ (1 ಗ್ರಾಂ)24 ಕ್ಯಾರಟ್ (1 ಗ್ರಾಂ)
ದಿಲ್ಲಿ₹ 6,364 ₹ 6,941
ಮುಂಬೈ₹ 6,349 ₹ 6,926
ಬೆಂಗಳೂರು₹ 6,349 ₹ 6,926
ಚೆನ್ನೈ₹ 6,329 ₹ 6,905

ಬೆಳ್ಳಿ ಧಾರಣೆ

ಇತ್ತ ಬೆಳ್ಳಿಯ ಬೆಲೆಯಲ್ಲಿಯೂ ಕೊಂಚ ಇಳಿಕೆಯಾಗಿದೆ. ಬೆಳ್ಳಿ 1 ಗ್ರಾಂಗೆ ₹ 80.90 ಹಾಗೂ 8 ಗ್ರಾಂಗೆ ₹ 647.20 ಇದೆ. 10 ಗ್ರಾಂ ₹ 809 ಹಾಗೂ 1 ಕಿಲೋಗ್ರಾಂ ₹ 80,900 ಬೆಲೆ ಬಾಳುತ್ತದೆ.

ಚಿನ್ನ ಖರೀದಿಸುವ ಮುನ್ನ ಈ ಅಂಶಗಳನ್ನು ಗಮನಿಸಿ

ಮೇಕಿಂಗ್‌ ಚಾರ್ಜಸ್‌: ಚಿನ್ನಾಭರಣ ಬೆಲೆಯಲ್ಲಿ ಮೇಕಿಂಗ್‌ ಚಾರ್ಜಸ್‌ (Making Charges) ಪ್ರಧಾನ ಪಾತ್ರ ವಹಿಸುತ್ತದೆ. ಚಿನ್ನದ ತೂಕ ಮತ್ತು ಪರಿಶುದ್ಧತೆಯ ಜತೆಗೆ ಆಭರಣಗಳನ್ನು ತಯಾರಿಸುವ ಶುಲ್ಕವನ್ನೂ ಖರೀದಿ ಸಂದರ್ಭದಲ್ಲಿ ವಿಧಿಸಲಾಗುತ್ತದೆ. ಇದನ್ನು ಮೇಕಿಂಗ್‌ ಚಾರ್ಜಸ್‌ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಚಿನ್ನದ ಬೆಲೆಯನ್ನು ಆಧರಿಸಿ ತಯಾರಿಕಾ ಶುಲ್ಕವನ್ನು ನಿರ್ಧರಿಸಲಾಗುತ್ತದೆ. ತಯಾರಿಕಾ ಶುಲ್ಕಗಳಲ್ಲಿ ಹಣವನ್ನು ಉಳಿಸಲು ಅವುಗಳನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ಉದಾಹರಣೆಗೆ 8 ಗ್ರಾಂ ಚಿನ್ನದ ಸರದ ಬೆಲೆ 40,000 ರೂ. ಎಂದಿಟ್ಟುಕೊಳ್ಳೋಣ. ಪ್ರತಿ ಗ್ರಾಂಗೆ 300 ರೂ. ಫ್ಲಾಟ್ ದರದಲ್ಲಿ ತಯಾರಿಕಾ ಶುಲ್ಕವು 2,400 ರೂ. ಆಗಿರುತ್ತದೆ. 12%ದಂತೆ ಲೆಕ್ಕ ಹಾಕಿದರೆ ಇದು ಗರಿಷ್ಠ 4,800 ರೂ.ವರೆಗೆ ಹೆಚ್ಚಾಗುತ್ತದೆ.

ಬೆಲೆ ಲೆಕ್ಕ ಹಾಕಿ: ಚಿನ್ನದ ದರ ಅದರ ಶುದ್ಧತೆಯ ಮೇಲೆ ನಿರ್ಧಾರವಾಗುತ್ತದೆ. ಮಾರುಕಟ್ಟೆಯ ದರಕ್ಕೆ ಅನುಗುಣವಾಗಿ ಚಿನ್ನದ ಬೆಲೆ ಪ್ರತಿದಿನ ಬದಲಾಗುತ್ತಿರುತ್ತದೆ. ಜ್ಯುವೆಲ್ಲರಿಗಳು ದಿನಂಪ್ರತಿ ಆಯಾ ದಿನದ ಬೆಲೆ ಪ್ರದರ್ಶಿಸುತ್ತವೆ. ಇದನ್ನು ಗಮನಿಸಿ. ಆಭರಣದ ವಿನ್ಯಾಸವೂ ಬೆಲೆಯ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶ. ಹೀಗಾಗಿ ಖರೀದಿಗೆ ತೆರಳುವ ಮುನ್ನ ಈ ಎಲ್ಲ ಅಂಶಗಳತ್ತ ಗಮನ ಹರಿಸುವುದು ಮುಖ್ಯ.

ಬೆಲೆಗಳನ್ನು ಹೋಲಿಸಿ: ಮೊದಲೇ ಹೇಳಿದಂತೆ ಆಭರಣದ ಬೆಲೆಯಲ್ಲಿ ತಯಾರಿಕಾ ವೆಚ್ಚವೂ ಸೇರಿರುತ್ತದೆ. ಸಾಮಾನ್ಯವಾಗಿ ಯಂತ್ರದಿಂದ ತಯಾರಿಸಿದ ಆಭರಣಗಳು ಅಥವಾ ಕಡಿಮೆ ವಿನ್ಯಾಸವನ್ನು ಹೊಂದಿರುವ ಆಭರಣಗಳಿಗೆ ಕಡಿಮೆ ಮೇಕಿಂಗ್ ಚಾರ್ಜ್ ಇರುತ್ತದೆ. ಪ್ರಸ್ತುತ ಭಾರತದಲ್ಲಿ ಮೇಕಿಂಗ್ ಚಾರ್ಜಸ್ ಶೇ. 6ರಿಂದ ಶೇ. 20ರವರೆಗೆ ಇದೆ. ಆದ್ದರಿಂದ ವಿವಿಧ ಹಂತಗಳಲ್ಲಿನ ಶುಲ್ಕಗಳನ್ನು ಹೋಲಿಸಿ ಎನ್ನುವುದು ತಜ್ಞರು ನೀಡುವ ಟಿಪ್ಸ್‌.

ಇದನ್ನೂ ಓದಿ: Gautam Adani: ಅಧಿಕಾರ ತೊರೆದು ನಿವೃತ್ತರಾಗಲಿದ್ದಾರಾ ಗೌತಮ್ ಅದಾನಿ? ಈ ಬಗ್ಗೆ ಅವರು ಹೇಳಿದ್ದೇನು?

Continue Reading
Advertisement
Waqf Act
ದೇಶ20 mins ago

Waqf Act: ಪುರಸಭೆ ಕಚೇರಿಯನ್ನೇ ನುಂಗಿದ ವಕ್ಫ್‌ ಮಂಡಳಿ; ಆಸ್ತಿ ಕಬಳಿಕೆ ಬಣ್ಣ ಬಯಲು ಮಾಡಿದ ಕೇಂದ್ರ ಸಚಿವ!

ಪ್ರಮುಖ ಸುದ್ದಿ34 mins ago

Paris Olympics 2024 : ಭಾರತ ಹಾಕಿ ತಂಡಕ್ಕೆ ಕಂಚಿನ ಪದಕ, ಸ್ಪೇನ್ ವಿರುದ್ಧ 2-1 ಗೋಲ್​ಗಳ ಗೆಲುವು

Viral Video
Latest58 mins ago

Viral Video: ಮೃಗಾಲಯಕ್ಕೆ ನುಗ್ಗಿ ಪ್ರಾಣಿಗಳನ್ನೂ ಹಿಂಸಿಸಿದ ಬಾಂಗ್ಲಾದ ದುಷ್ಟ ಪ್ರತಿಭಟನಾಕಾರರು!

CM Siddaramaiah
ಕರ್ನಾಟಕ1 hour ago

CM Siddaramaiah: ಮೋದಿ ಸರ್ಕಾರದ ವಕ್ಫ್ ಬೋರ್ಡ್ ಕಾನೂನು ತಿದ್ದುಪಡಿಗೆ ಸಿದ್ದರಾಮಯ್ಯ ವಿರೋಧ

KPSC Exam
ನೋಟಿಸ್ ಬೋರ್ಡ್1 hour ago

KPSC Exam: ಆ.25ರಂದು 384 ಗೆಜೆಟೆಡ್‌ ಹುದ್ದೆಗಳ ನೇಮಕಾತಿಗಾಗಿ ನಡೆಯಬೇಕಿದ್ದ ಪರೀಕ್ಷೆ ಮುಂದೂಡಿಕೆ

Baby Death
Latest1 hour ago

Baby Death: ಪ್ರಣಯಕ್ಕೆ ಡಿಸ್ಟರ್ಬ್‌ ಆಯಿತೆಂದು ಕೋಪಗೊಂಡ ಪ್ರಿಯತಮ ಮಹಿಳೆಯ ಮಗುವನ್ನು ನೆಲಕ್ಕೆ ಬಡಿದು ಕೊಂದ!

Wayanad Landslide
ದೇಶ1 hour ago

Wayanad Landslide: ವಯನಾಡಿನಲ್ಲಿ ಸೈನಿಕರ ಕಾರ್ಯಾಚರಣೆ ಮುಕ್ತಾಯ; ಸೆಲ್ಯೂಟ್‌ ಹೊಡೆದು ಬೀಳ್ಕೊಟ್ಟ ಜನ, Video ಇದೆ

Manu Bhaker
ಪ್ರಮುಖ ಸುದ್ದಿ1 hour ago

Paris Olympics 2024 : ಅಥ್ಲೀಟ್​ಗಳಿಗೆ ಒಲಿಂಪಿಕ್ಸ್​ ಮಸ್ಕಾಟ್​ ಚಿತ್ರ ಇರುವ ಕಾಂಡೋಮ್ ಹಂಚಿದ ಆಯೋಜಕರು!

Viral Video
Latest2 hours ago

Viral Video: ಒಂಟೆಯ ಮುಂದಿನ ಕಾಲು ಕಟ್ಟಿ ಚೂರಿಯಿಂದ ಇರಿದ; ಒಂಟೆ ಜಾಡಿಸಿ ಒದ್ದ ಹೊಡೆತಕ್ಕೆ ಸತ್ತೇ ಹೋದ!

Bengaluru Power Cut
ಕರ್ನಾಟಕ2 hours ago

Bengaluru Power Cut: ಆ.10ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 hours ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ4 hours ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ5 hours ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 days ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 days ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ4 days ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ5 days ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ1 week ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ1 week ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ1 week ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌