Indian Currency: 2000 ರೂ. ನೋಟು ತಯಾರಿಸಲು 4 ರೂ. ಖರ್ಚು; 10 ರೂ. ನೋಟು ಮುದ್ರಿಸಲು 96 ಪೈಸೆ ಬೇಕು! - Vistara News

ವಾಣಿಜ್ಯ

Indian Currency: 2000 ರೂ. ನೋಟು ತಯಾರಿಸಲು 4 ರೂ. ಖರ್ಚು; 10 ರೂ. ನೋಟು ಮುದ್ರಿಸಲು 96 ಪೈಸೆ ಬೇಕು!

ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಿವಿಧ ಮುಖಬೆಲೆಯ ನೋಟುಗಳನ್ನು (Indian Currency) ಮುದ್ರಿಸುತ್ತದೆ. ಎಲ್ಲ ನೋಟುಗಳ ಮುದ್ರಣ ವೆಚ್ಚ ಒಂದೇ ರೀತಿ ಇರುವುದಿಲ್ಲ. ಅವುಗಳ ಮೌಲ್ಯಕ್ಕೆ ಅನುಗುಣವಾಗಿ ಬದಲಾಗುತ್ತದೆ. ಈಗಾಗಲೇ ಚಲಾವಣೆಯಿಂದ ಹೊರತೆಗೆದಿರುವ 2,000 ರೂಪಾಯಿ ನೋಟಿನ ಮುದ್ರಣಕ್ಕೆ 2018 ರಲ್ಲಿ 4.18 ರೂಪಾಯಿ ವೆಚ್ಚವಾಗುತ್ತಿತ್ತು. ಬಳಿಕ ಅದು 3.53 ರೂಪಾಯಿಗೆ ಇಳಿಕೆಯಾಗಿತ್ತು. ಈ ಕುರಿತ ಕುತೂಹಲಕರ ಮಾಹಿತಿ ಇಲ್ಲಿದೆ.

VISTARANEWS.COM


on

Indian Currency
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿವಿಧ ನಾಣ್ಯ, ಮುಖಬೆಲೆಯ ನೋಟುಗಳನ್ನು (Indian Currency) ಮುದ್ರಿಸುವ ಭಾರತೀಯ ರಿಸರ್ವ್ ಬ್ಯಾಂಕ್‌ಗೆ (Reserve Bank of India) ಇವುಗಳನ್ನು ಮುದ್ರಿಸಲು ಎಷ್ಟು ಖರ್ಚಾಗುತ್ತದೆ (Printing costs) ಎಂಬುದು ತಿಳಿದರೆ ಆಶ್ಚರ್ಯವಾಗಬಹುದು. ಕೆಲವು ನೋಟುಗಳ ಮುದ್ರಣ ವೆಚ್ಚ ತುಂಬಾ ದುಬಾರಿಯಾಗಿದೆ. ನೋಟ್ ಬ್ಯಾನ್ ಆದ ಬಳಿಕ ಈ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇದೆ.

ಭಾರತೀಯ ರಿಸರ್ವ್ ಬ್ಯಾಂಕ್ 2024ರ ಮೇ ತಿಂಗಳಲ್ಲಿ 2,000 ರೂ. ಮುಖ ಬೆಲೆಯ ನೋಟುಗಳನ್ನು ತೆಗೆದು ಹಾಕಿತ್ತು. ಇದರ ವಾಪಸಾತಿಗೆ ಅಕ್ಟೋಬರ್ 7ರವರೆಗೆ ಹೊಸ ಗಡುವು ವಿಧಿಸಿದೆ. ಅಂದರೆ ಅಲ್ಲಿಯವರೆಗೆ ಮಾತ್ರ 2,000 ರೂ.ನ ನೋಟುಗಳು ಕಾನೂನು ಮೂಲಕ ಮಾನ್ಯವಾಗಿರುತ್ತವೆ. ಆದರೆ ಚಲಾವಣೆ ಮಾಡಲಾಗುವುದಿಲ್ಲ.

ಯಾವುದಕ್ಕೆ ಎಷ್ಟು ವೆಚ್ಚ?

ಆರ್‌ಬಿಐ ಮುದ್ರಿಸುವ ವಿವಿಧ ಮುಖಬೆಲೆಯ ನೋಟುಗಳ ಮುದ್ರಣ ವೆಚ್ಚವು ಒಂದೇ ರೀತಿ ಇರುವುದಿಲ್ಲ. 2,000 ರೂಪಾಯಿ ಒಂದು ನೋಟು ಮುದ್ರಣಕ್ಕೆ ಸರಿಸುಮಾರು 4 ರೂಪಾಯಿ ವೆಚ್ಚವಾಗುತ್ತದೆ. 2018ರಲ್ಲಿ 2,000 ರೂಪಾಯಿ ನೋಟಿನ ಮುದ್ರಣದ ವೆಚ್ಚ 4.18 ರೂಪಾಯಿ ಆಗಿದ್ದು, ಅನಂತರ ಅದು 3.53 ರೂಪಾಯಿಗೆ ಇಳಿಕೆಯಾಯಿತು.

ಕುತೂಹಲಕಾರಿ ವಿಷಯವೆಂದರೆ ಸರಾಸರಿ ಮೌಲ್ಯ ತೆಗೆದುಕೊಂಡರೆ ಅತ್ಯಧಿಕ ಮುದ್ರಣ ವೆಚ್ಚವಾಗುವುದು 10 ರೂ. ನೋಟುಗಳಿಗೆ ಎಂದರೆ ಆಶ್ಚರ್ಯವಾಗಬಹುದು. 10 ರೂಪಾಯಿಯ 1,000 ನೋಟುಗಳನ್ನು ಮುದ್ರಿಸಲು 960 ರೂ. ವೆಚ್ಚವಾಗುತ್ತದೆ. ಅಂದರೆ ಹತ್ತು ರೂಪಾಯಿಯ ಒಂದು ನೋಟಿಗೆ 96 ಪೈಸೆ ವೆಚ್ಚವಾಗುತ್ತದೆ!

100 ರೂ. ಗಳ 1,000 ನೋಟುಗಳನ್ನು ಮುದ್ರಿಸಲು 1,770 ರೂ., 200 ರೂ. ಗಳ 1,000 ನೋಟುಗಳನ್ನು ಮುದ್ರಿಸಲು 2,370 ರೂ., 500 ರೂ.ಗಳ 1,000 ನೋಟುಗಳನ್ನು ಮುದ್ರಿಸಲು 2,290 ರೂ. ಖರ್ಚಾಗುತ್ತದೆ. 2,000 ರೂಪಾಯಿಗಳ 1000 ನೋಟುಗಳನ್ನು ಮುದ್ರಿಸುವ ವೆಚ್ಚವು ಈ ಕೆಲವು ಮುಖಬೆಲೆಗಳಿಗೆ ಹೋಲಿಸಿದರೆ ಕಡಿಮೆಯಾಗಿದೆ.

Indian Currency
Indian Currency


ಚಲಾವಣೆಯಲ್ಲಿದ್ದ 2,000 ರೂ. ನೋಟುಗಳು

ಆರ್‌ಬಿಐ ಪ್ರಕಾರ ಮೇ 19ರವರೆಗೆ ಚಲಾವಣೆಯಲ್ಲಿದ್ದ 2,000 ರೂಪಾಯಿಗಳ ನೋಟುಗಳ ಒಟ್ಟು ಮೌಲ್ಯ 3.56 ಲಕ್ಷ ಕೋಟಿ ರೂಪಾಯಿ. ಇವುಗಳಲ್ಲಿ 3.42 ಲಕ್ಷ ಕೋಟಿ ರೂಪಾಯಿಗಳು ಬ್ಯಾಂಕ್‌ಗಳಿಗೆ ಮರಳಿದ್ದು ಸೆಪ್ಟೆಂಬರ್ 29 ರ ಹೊತ್ತಿಗೆ ಕೇವಲ 0.14 ಲಕ್ಷ ಕೋಟಿ ಚಲಾವಣೆಯಲ್ಲಿ ಉಳಿದಿದೆ. ಈ ನೋಟುಗಳನ್ನು ಠೇವಣಿ ಮಾಡಲು ಅಥವಾ ವಿನಿಮಯ ಮಾಡಿಕೊಳ್ಳಲು ಆರಂಭಿಕ ಗಡುವು ಸೆಪ್ಟೆಂಬರ್ 30 ಆಗಿತ್ತು.

2023ರ ಮೇ 19ರಂತೆ ಚಲಾವಣೆಯಲ್ಲಿರುವ 2,000 ರೂಪಾಯಿಗಳ ಬ್ಯಾಂಕ್‌ನೋಟುಗಳಲ್ಲಿ ಶೇ. 96ರಷ್ಟನ್ನು ಹಿಂತಿರುಗಿಸಲಾಗಿದೆ. ಹೆಚ್ಚುವರಿಯಾಗಿ, ಅಕ್ಟೋಬರ್ 8 ರಿಂದ ಬ್ಯಾಂಕ್ ಶಾಖೆಗಳಲ್ಲಿ 2,000 ರೂ. ಬ್ಯಾಂಕ್ ನೋಟುಗಳನ್ನು ಠೇವಣಿ ಮಾಡುವ ಅಥವಾ ಬದಲಾಯಿಸುವ ಪ್ರಕ್ರಿಯೆಯನ್ನು ನಿಲ್ಲಿಸಲಾಗುವುದು ಎಂದು ಆರ್ ಬಿಐ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: World Bank: ಅಮೆರಿಕದ ತಲಾ ಆದಾಯದ ಕಾಲು ಭಾಗ ತಲುಪಲು ಭಾರತಕ್ಕೆ 75 ವರ್ಷ ಬೇಕು: ವಿಶ್ವ ಬ್ಯಾಂಕ್‌

2,000 ರೂಪಾಯಿಗಳ ನೋಟುಗಳನ್ನು 19 ಆರ್‌ಬಿಐ ಇಶ್ಯೂ ಆಫೀಸ್‌ಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದು ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಒಂದು ಬಾರಿಗೆ 20,000 ರೂ. ಅನ್ನು ವಿನಿಮಯ ಮಾಡಿಕೊಳ್ಳಲು ಅವಕಾಶವಿದೆ. ಅಲ್ಲದೇ ಆರ್‌ಬಿಐ ಇಶ್ಯೂ ಆಫೀಸ್‌ಗಳಲ್ಲಿ 2,000 ರೂ ಬ್ಯಾಂಕ್‌ನೋಟುಗಳನ್ನು ತಮ್ಮ ಭಾರತೀಯ ಬ್ಯಾಂಕ್ ಖಾತೆಗಳಿಗೆ ಯಾವುದೇ ಮೊತ್ತಕ್ಕೆ ಜಮಾ ಮಾಡಬಹುದು. ಹೆಚ್ಚುವರಿಯಾಗಿ, ದೇಶದೊಳಗೆ ಇರುವ ವ್ಯಕ್ತಿಗಳು ಅಥವಾ ಘಟಕಗಳು ಭಾರತದಲ್ಲಿನ ತಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು 19 ಆರ್‌ಬಿಐ ಇಶ್ಯೂ ಕಚೇರಿಗಳಿಗೆ ಯಾವುದಾದರೂ ಇಂಡಿಯಾ ಪೋಸ್ಟ್ ಮೂಲಕ 2,000 ರೂ . ಬ್ಯಾಂಕ್ ನೋಟುಗಳನ್ನು ಕಳುಹಿಸುವ ಆಯ್ಕೆಯನ್ನು ಹೊಂದಿವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮನಿ-ಗೈಡ್

Money Guide: ನೆರೆ, ಭೂಕುಸಿತದಿಂದ ನಿಮ್ಮ ಮನೆಯನ್ನು ರಕ್ಷಿಸಲು ಜಸ್ಟ್‌ ಹೀಗೆ ಮಾಡಿ ಸಾಕು

Money Guide: ನೆರೆ, ಭೂಕುಸಿತದಂತಹ ಪ್ರಕೃತಿ ದುರಂತ, ಬೆಂಕಿ ಆಕಸ್ಮಿಕ, ಕಳ್ಳತನದಂತಹ ಸಂದರ್ಭದಲ್ಲಿ ಪರಿಹಾರ ನೀಡುವ ಯೋಜನೆಯೇ ಗೃಹ ವಿಮೆ. ಮನೆ ಕಳೆದುಕೊಂಡರೂ ಬೀದಿಗೆ ಬೀಳದಂತೆ ಇದು ನೋಡಿಕೊಳ್ಳುತ್ತದೆ. ಅತ್ಯಂತ ಅಮೂಲ್ಯ ಮತ್ತು ಬೆಲೆ ಬಾಳುವ ಆಸ್ತಿಯಾದ ಮನೆಗೆ ವಿಮೆ ಮಾಡಿಸಲೇಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ. ಹೀಗಾಗಿ ಗೃಹ ವಿಮೆಯ ವಿವರ ಇಂದಿನ ಮನಿಗೈಡ್‌ನಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಸ್ವಂತ ಮನೆ ಹೊಂದಬೇಕು ಎನ್ನುವುದು ಬಹುತೇಕ ಎಲ್ಲರ ಕನಸು. ಆದರೆ ಈ ದುಬಾರಿ ಜಗತ್ತಿನಲ್ಲಿ ಇದು ಸುಲಭ ಅಲ್ಲವೇ ಅಲ್ಲ. ಇದಕ್ಕಾಗಿಯೇ ʼಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡುʼ ಎನ್ನುವ ಮಾತು ಪ್ರಚಲಿತದಲ್ಲಿದೆ. ಅಂದರೆ ಈ ಎರಡು ಕೆಲಸ ಬಹಳ ಶ್ರಮದಾಯಕವಾದುದು. ಅದಾಗ್ಯೂ ಸಾಲ ಮಾಡಿ, ಇದ್ದ ಉಳಿತಾಯವನ್ನೆಲ್ಲ ಒಟ್ಟುಗೂಡಿಸಿ ಮನೆ ನಿರ್ಮಾಣ ಮಾಡಿ ನಿಟ್ಟುಸಿರು ಬಿಡುವಷ್ಟರಲ್ಲಿ ಅಗ್ನಿ ಆಕಸ್ಮಿಕ, ನೆರೆ ಅಥವಾ ಭೂಕುಸಿತದಂತಹ ಅವಘಡ ಎದುರಾದರೆ? ಇತ್ತೀಚಿನ ದಿನಗಳಲ್ಲಿ ಇಂತಹ ಅಪಾಯವನ್ನು ತಳ್ಳಿ ಹಾಕುವಂತಿಲ್ಲ. ಪ್ರಕೃತಿಯ ಅಸಮತೋಲನದಿಂದಾಗಿ ಯಾವಾಗ, ಎಲ್ಲಿ ದುರಂತ ಎದುರಾಗುತ್ತದೆ ಎನ್ನುವುದನ್ನು ಊಹಿಸಲು ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ಗೃಹ ವಿಮೆ (Home Insurance) ರಕ್ಷಾ ಕವಚದಂತೆ ನಮ್ಮನ್ನು ಕಾಪಾಡುತ್ತದೆ. ಮನೆ ಕಳೆದುಕೊಂಡರೂ ಬೀದಿಗೆ ಬೀಳದಂತೆ ನೋಡಿಕೊಳ್ಳುತ್ತದೆ. ಹಾಗಾದರೆ ಗೃಹ ವಿಮೆಯನ್ನು ಯಾರೆಲ್ಲ ಮಾಡಿಸಬಹುದು? ಯಾವೆಲ್ಲ ಕಾರಣಗಳಿಗೆ ಪರಿಹಾರ ದೊರೆಯುತ್ತದೆ? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ (Money Guide).

ವರದಿಗಳ ಪ್ರಕಾರ ಭಾರತವು ಯಾವಾಗ ಬೇಕಾದರೂ ಪ್ರಾಕೃತಿಕ ದುರಂತ ಸಂಭವಿಸಬಹುದಾದ ದೇಶಗಳ ಪೈಕಿ ಒಂದು ಎನಿಸಿಕೊಂಡಿದೆ. 27 ರಾಜ್ಯಗಳು ವಿಪತ್ತು ಪೀಡಿತವಾಗಿವೆ. ಶೇ. 58.6ರಷ್ಟು ಭೂಪ್ರದೇಶವು ಮಧ್ಯಮದಿಂದ ಹೆಚ್ಚಿನ ತೀವ್ರತೆಯ ಭೂಕಂಪಗಳಿಗೆ ಗುರಿಯಾಗುವ ಮತ್ತು ಶೇ. 12ರಷ್ಟು ಭೂಮಿ ಪ್ರವಾಹ ಮತ್ತು ನದಿ ಸವೆತಕ್ಕೆ ಒಳಗಾಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಾರೆ.

ಇನ್ನು 7,516 ಕಿ.ಮೀ. ವ್ಯಾಪ್ತಿಯ ಕರಾವಳಿಯಲ್ಲಿ ಪೈಕಿ 5,700 ಕಿ.ಮೀ.ಯಷ್ಟು ಚಂಡಮಾರುತ ಮತ್ತು ಸುನಾಮಿಗಳಿಗೆ ಗುರಿಯಾಗುತ್ತದೆ. ಕೃಷಿಯೋಗ್ಯ ಭೂಮಿಯ ಪೈಕಿ ಶೇ. 68ರಷ್ಟು ಬರಕ್ಕೆ ತುತ್ತಾಗಬಹುದು. ಶೇ. 15ರಷ್ಟು ಭೂ ಪ್ರದೇಶವು ಭೂ ಕುಸಿತಕ್ಕೆ ಗುರಿಯಾಗುವ ಅಪಾಯ ಎದುರಿಸುತ್ತಿದೆ. ವಿಶೇಷವಾಗಿ ಮಳೆಗಾಲದಲ್ಲಿ ಚಂಡಮಾರುತಗಳು, ಭೂಕುಸಿತಗಳು ಮತ್ತು ಮಿಂಚಿನಿಂದ ಉಂಟಾಗುವ ಅಪಾಯ ಹೆಚ್ಚು. ಇಷ್ಟೆಲ್ಲ ಅಪಾಯವಿದ್ದರೂ ನಾವು ಮನೆಗೆ ವಿಮೆ ಮಾಡಿಸಲು ಮುಂದಾಗುವುದಿಲ್ಲ ಎನ್ನುವುದು ವಿಪರ್ಯಾಸ. ಅತ್ಯಂತ ಅಮೂಲ್ಯ ಮತ್ತು ಬೆಲೆ ಬಾಳುವ ಆಸ್ತಿಯಾದ ಮನೆಗೆ ವಿಮೆ ಮಾಡಿಸಲೇಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಅಂಕಿ-ಅಂಶ ಏನು ಹೇಳುತ್ತದೆ?

ನೈಸರ್ಗಿಕ ವಿಕೋಪಕ್ಕೆ ತುತ್ತಾಗಿ ಮನೆ, ಆಸ್ತಿ ಕಳೆದುಕೊಳ್ಳುವವರ ಪೈಕಿ ಕೇವಲ ಶೇ. 8ರಷ್ಟು ಜನ ವಿಮೆ ಮಾಡಿಸಿಕೊಂಡಿರುತ್ತಾರೆ ಎನ್ನುತ್ತದೆ ಅಂಕಿ-ಅಂಶ. ಗೃಹ ವಿಮೆ ಕೇವಲ ರಕ್ಷಣೆಯಲ್ಲ; ಇದು ಕಠಿಣ ಪರಿಶ್ರಮದ ಮೂಲಕ ಗಳಿಸಿದ ಸ್ವತ್ತುಗಳನ್ನು ರಕ್ಷಿಸುವ ನಿರ್ಣಾಯಕ ಹೂಡಿಕೆ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ.

ಯಾಕಾಗಿ ಗೃಹ ವಿಮೆ?

ನಿಮ್ಮ ಮನೆಗೆ ಆಗಬಹುದಾದ ಹಾನಿ ಮತ್ತು ಅದರಲ್ಲಿನ ಬೆಲೆಬಾಳುವ ವಸ್ತುಗಳ ನಷ್ಟಕ್ಕೆ ಪರಿಹಾರ ಒದಗಿಸಲು ಗೃಹ ವಿಮೆ ಅತ್ಯಗತ್ಯ. ಜತೆಗೆ ಬೆಂಕಿ ಆಕಸ್ಮಿಕ, ಕಳ್ಳತನ, ಗಲಭೆ ಆದಾಗಲೂ ಪರಿಹಾರ ನೀಡುತ್ತದೆ. ಒಟ್ಟಿನಲ್ಲಿ ಮನೆಗೆ ಅನಿರೀಕ್ಷಿತವಾಗಿ ಉಂಟಾಗಬಹುದಾದ ಯಾವುದೇ ನಷ್ಟಗಳ ವಿರುದ್ಧ ರಕ್ಷಣೆ ನೀಡುವ ರಕ್ಷಾ ಕವಚದಂತೆ ಗೃಹ ವಿಮೆ ಕೆಲಸ ಮಾಡುತ್ತದೆ. ಹೀಗಾಗಿ ವೈಯಕ್ತಿಕ, ಆರೋಗ್ಯ, ವಾಹನ ವಿಮೆ ಮಾಡಿಸುವಂತೆ ಇದನ್ನು ಕೂಡ ಅತ್ಯಗತ್ಯವಾಗಿ ಮಾಡಿಸಬೇಕು.

ಗೃಹ ವಿಮೆ ಯಾರೆಲ್ಲ ಮಾಡಿಸಬಹುದು?

  • ಸ್ವಂತ ಮನೆ ಹೊಂದಿದವರು, ಭೂ ಮಾಲೀಕರು ಅಥವಾ ಬಾಡಿಗೆದಾರರು ಇನ್ಶೂರೆನ್ಸ್‌ ಖರೀದಿಸಬಹುದು. ಹೌದು, ಬಾಡಿಗೆದಾರರು ಸಹ ತಮ್ಮ ಮನೆಗಳಿಗೆ ವಿಮೆ ಮಾಡಬಹುದು.
  • ನಿವಾಸಕ್ಕಾಗಿ ಬಳಸುವ ಆಸ್ತಿಗಳಿಗೆ ಮಾತ್ರ ಗೃಹ ವಿಮೆಯನ್ನು ಖರೀದಿಸಬಹುದು. ವಸತಿಯನ್ನು ಯಾವುದೇ ವಾಣಿಜ್ಯ ಚಟುವಟಿಕೆಗೆ ಬಳಸಿದರೆ – ಗೃಹ ವಿಮೆ ಹೊರತುಪಡಿಸಿ ಸೂಕ್ತ ವಿಮಾ ಪಾಲಿಸಿ ಖರೀದಿಸಬೇಕು.

ಇದರಿಂದೆಲ್ಲ ರಕ್ಷಣೆ

ಗೃಹ ವಿಮೆ ಮಾಡಿಸಿದರೆ ವಿಶೇಷವಾಗಿ ಮಳೆಗಾಲದಲ್ಲಿ ಈ ಎಲ್ಲ ಕಾರಣಕ್ಕೆ ಮನೆಗೆ ಹಾನಿಯಾದರೆ ನಿಮಗೆ ಪರಿಹಾರ ಸಿಗಲಿದೆ.

  • ಚಂಡಮಾರುತ, ಸುಂಟರಗಾಳಿ, ಸುನಾಮಿ
  • ಪ್ರವಾಹ
  • ಮಿಂಚು, ಗುಡುಗು
  • ಭೂಕುಸಿತ
  • ಮರ ಬಿದ್ದು ಮನೆಗೆ ಹಾನಿ

ವಿಧಗಳು

ಮನೆಯ ರಚನೆ: ಇದು ನಿಮ್ಮ ಮನೆಗೆ ಉಂಟಾಗುವ ಹಾನಿಗೆ ಪರಿಹಾರ ನೀಡುತ್ತದೆ. ಗೃಹಬಳಕೆಯ ಔಟ್‌ಹೌಸ್‌, ಕಾಂಪೌಂಡ್ ಗೋಡೆಗಳು, ಪಾರ್ಕಿಂಗ್ ಸ್ಥಳ, ಸೌರ ಫಲಕಗಳು, ನೀರಿನ ಟ್ಯಾಂಕ್‌ ಮುಂತಾದವುಗಳನ್ನು ಇದು ಒಳಗೊಂಡಿರುತ್ತದೆ.

ಸಾಮಗ್ರಿ: ಈ ವಿಧದ ವಿಮೆ ನಿಮ್ಮ ಮನೆಯಲ್ಲಿನ ಗೃಹೋಪಯೋಗಿ ವಸ್ತುಗಳನ್ನು ಒಳಗೊಂಡಿದೆ. ಟಿವಿ, ರೆಫ್ರಿಜರೇಟರ್, ಪೀಠೋಪಕರಣಗಳು ಮತ್ತಿತರ ವಸ್ತುಗಳ ಹಾನಿಗೆ ಪರಿಹಾರ ನೀಡುತ್ತದೆ. ಹೆಚ್ಚುವರಿ ಪ್ರೀಮಿಯಂ ಪಾವತಿಸುವ ಮೂಲಕ ಆಭರಣಗಳು, ಕಲಾಕೃತಿಗಳು, ಬೆಳ್ಳಿಯ ವಸ್ತುಗಳು, ವರ್ಣಚಿತ್ರಗಳು ಮುಂತಾದ ಅಮೂಲ್ಯವಾದ ವಸ್ತುಗಳನ್ನು ಸಹ ನೀವು ಕವರ್ ಮಾಡಬಹುದು.

ಆಕಸ್ಮಿಕ ಸಾವು: ಈ ಕವರೇಜ್ ವಿಮಾದಾರರ ಸಾವಿನ ಸಂದರ್ಭದಲ್ಲಿ ನೆರವಾಗುತ್ತದೆ.

ಈ ಕೆಳಗಿನ ಕಾರಣಗಳಿಂದ ಮನೆಗೆ ಹಾನಿಯಾದರೆ ಗೃಹ ವಿಮೆಯ ಪರಿಹಾರ ಲಭ್ಯ

ವಿಮಾನ ದುರಂತ, ಗಲಭೆ, ಪ್ರತಿಭಟನೆ, ಕ್ಷಿಪಣಿ ಪ್ರಯೋಗ, ನೆರೆ, ಚಂಡ ಮಾರುತ, ಮಿಂಚು, ಭೂಕಂಪ, ಕಳವು, ಬೆಂಕಿ ಆಕಸ್ಮಿಕ.

ಈ ಕೆಳಗಿನ ಕಾರಣಗಳಿಂದ ಮನೆಗೆ ಹಾನಿಯಾದರೆ ಗೃಹ ವಿಮೆಯ ಪರಿಹಾರ ಲಭಿಸುವುದಿಲ್ಲ

ನಗದು ಕಳವು, ಯುದ್ಧ, ವಿದ್ಯುತ್‌ ಉಪಕರಣಗಳ ಅತಿಯಾದ ಬಳಿಕೆಯಿಂದ ಆಗುವ ಹಾನಿ.

ಇದನ್ನೂ ಓದಿ: Money Guide: ಹೋಮ್‌ ಲೋನ್‌ಗೆ ಇನ್ಶೂರೆನ್ಸ್‌ ಮಾಡಿಸಿದ್ದೀರಾ? ಏನಿದರ ಮಹತ್ವ? ನಿಮ್ಮ ಸಂಶಯಗಳಿಗೆ ಇಲ್ಲಿದೆ ಉತ್ತರ

Continue Reading

ವೈರಲ್ ನ್ಯೂಸ್

Viral News: 20 ವರ್ಷಗಳ ಹಿಂದೆ ಅಜ್ಜ ಖರೀದಿಸಿದ್ದ ಷೇರು; ಮೊಮ್ಮಗಳು ರಾತ್ರೋರಾತ್ರಿ ಕೋಟ್ಯಧಿಪತಿ!

ಷೇರು ಮಾರುಕಟ್ಟೆಯಲ್ಲಿ ಇಪ್ಪತ್ತು ವರ್ಷಗಳ ಹಿಂದೆ ಅಜ್ಜ ಮಾಡಿದ್ದ ಸಣ್ಣ ಹೂಡಿಕೆಯು ಈಗ ಅವರ ಮೊಮ್ಮಗಳನ್ನು ಕೋಟ್ಯಧಿಪತಿಯನ್ನಾಗಿ ಮಾಡಿದೆ. ಅಜ್ಜ ಈ ಷೇರುಗಳ ಬಗ್ಗೆ ಯಾರಿಗೂ ಹೇಳಿರಲಿಲ್ಲ. ಆದರೆ ಮನೆ ಕ್ಲೀನ್‌ ಮಾಡುವಾಗ ಇದು ಕಣ್ಣಿಗೆ ಬಿದ್ದಿತ್ತು. ಯಾವುದೇ ದಾಖಲೆ ಇಲ್ಲದ ಈ ಮೊತ್ತವನ್ನು ಪಡೆಯುವುದು ಅಷ್ಟು ಸುಲಭವಾಗಿರಲಿಲ್ಲ. ಮಹಿಳೆ ಸಾಕಷ್ಟು ಪರಿಶ್ರಮ ನಡೆಸಿ ಷೇರುಗಳಿಗೆ ಸಂಬಂಧಿಸಿದ ದಾಖಲೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸುದ್ದಿ ಈಗ ವೈರಲ್ (Viral News) ಆಗಿದೆ.

VISTARANEWS.COM


on

By

Viral News
Koo

ಇಪ್ಪತ್ತು ವರ್ಷಗಳ ಹಿಂದೆ ಷೇರು ಮಾರುಕಟ್ಟೆಯಲ್ಲಿ ಅಜ್ಜ ಖರೀದಿಸಿದ್ದ ಲಾರ್ಸೆನ್ ಮತ್ತು ಟೂಬ್ರೊ (L&T) ನ 500 ಷೇರುಗಳು (L&T share) ಬೆಂಗಳೂರಿನ ಮಹಿಳೆಯೊಬ್ಬರನ್ನು (bengaluru women) ಕೋಟ್ಯಧೀಶ್ವರರನ್ನಾಗಿ (millionaire women) ಮಾಡಿದೆ. ಈ ಸುದ್ದಿ ಈಗ ವೈರಲ್ (Viral News) ಆಗಿದೆ. ಪ್ರಿಯಾ ಶರ್ಮಾ ಅವರ ಅಜ್ಜ ಉದ್ಯಮಿಯಾಗಿದ್ದು, ಅವರು ತಮ್ಮ ಗಳಿಕೆಯ ಸ್ವಲ್ಪ ಭಾಗವನ್ನು 2004ರಲ್ಲಿ ಭಾರತದ ಆರ್ಥಿಕ ರಾಜಧಾನಿ ಮುಂಬಯಿನಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರು.

ಸುರಕ್ಷಿತ ಹೂಡಿಕೆಗಾಗಿ ಅವರು ಬ್ಲೂ-ಚಿಪ್ ನಿರ್ಮಾಣದ ಪ್ರಮುಖ ಲಾರ್ಸೆನ್ ಮತ್ತು ಟೂಬ್ರೊ (L&T) ನ 500 ಷೇರುಗಳನ್ನು ಖರೀದಿ ಮಾಡಿದ್ದರು. ಬಳಿಕ ಅವರು ಅದನ್ನು ಮರೆತೇ ಬಿಟ್ಟಿದ್ದರು. ಅವರ ಮರಣದ ಬಳಿಕವೂ ಯಾರೂ ಇದನ್ನು ಗಮನಿಸಿರಲಿಲ್ಲ. ಸಾಕಷ್ಟು ಸಮಯ ಕಳೆದಿದ್ದು, ಎಲ್ ಆಂಡ್ ಟಿ ಷೇರುಗಳಲ್ಲಿನ ಹೂಡಿಕೆಯ ಮೌಲ್ಯವು ಬೆಳೆಯುತ್ತಲೇ ಇತ್ತು.

ಬೆಂಗಳೂರಿನಲ್ಲಿ ನೆಲೆಸಿದ್ದ ಹೂಡಿಕೆದಾರರ ಮೊಮ್ಮಗಳು ಪ್ರಿಯಾ ಅವರು 2020ರಲ್ಲಿ ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಅಜ್ಜನ ಕೆಲವು ದಾಖಲೆಗಳನ್ನು ನೋಡುತ್ತಿದ್ದಾಗ ಅಜ್ಜ ಷೇರು ಖರೀದಿ ಮಾಡಿರುವುದು ಗೊತ್ತಾಗಿದೆ. ಆದರೆ ಪ್ರಿಯಾ ಅವರು 500 ಎಲ್ ಆಂಡ್ ಟಿ ಷೇರುಗಳ ವಾರಸುದಾರಿಕೆಯಲ್ಲಿ ಸುಲಭವಾಗಿ ಪಡೆಯಲು ಆಗಿರಲಿಲ್ಲ. ಸ್ಟಾಕ್ ವಿಭಜನೆ ಮತ್ತು ಬೋನಸ್ ಷೇರುಗಳ ಕಾರಣದಿಂದಾಗಿ ಅವರೀಗ 4,500 ಷೇರುಗಳನ್ನು ಈಗ ಸ್ವೀಕರಿಸಿದ್ದಾರೆ. ಇವುಗಳ ಮೌಲ್ಯ 1.72 ಕೋಟಿ ರೂ. ಆಗಿದೆ.


ತನ್ನಲ್ಲಿರುವ ಸಂಪತ್ತನ್ನು ಹೆಚ್ಚಿಸಲು ಕಂಪನಿಯು ತನ್ನ ಬಾಕಿ ಉಳಿದಿರುವ ಷೇರುಗಳ ಸಂಖ್ಯೆಯನ್ನು ಹೆಚ್ಚಿಸಿದಾಗ ಸ್ಟಾಕ್ ವಿಭಜನೆಯಾಗುತ್ತದೆ. 1:2 ವಿಭಜನೆಯಲ್ಲಿ ಪ್ರತಿ ಷೇರನ್ನು ಎರಡಾಗಿ ವಿಂಗಡಿಸಲಾಗಿದೆ. ಹೂಡಿಕೆಯ ಮೌಲ್ಯವನ್ನು ಬದಲಾಯಿಸದೆ ಷೇರುದಾರರ ಸಂಖ್ಯೆಯನ್ನು ಪರಿಣಾಮಕಾರಿಯಾಗಿ ದ್ವಿಗುಣಗೊಳಿಸುತ್ತದೆ.

ಬೋನಸ್ ಷೇರುಗಳು, ಮತ್ತೊಂದೆಡೆ, ಅಸ್ತಿತ್ವದಲ್ಲಿರುವ ಷೇರುದಾರರಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಹೆಚ್ಚುವರಿ ಷೇರುಗಳನ್ನು ನೀಡುತ್ತದೆ. ಇದು ಈಗಾಗಲೇ ಮಾಲೀಕತ್ವದ ಷೇರುಗಳ ಸಂಖ್ಯೆಯನ್ನು ಆಧರಿಸಿವೆ.
ಎಲ್ ಆಂಡ್ ಟಿ ಷೇರುಗಳ ಸಂಖ್ಯೆಯಲ್ಲಿ 500 ರಿಂದ 4,500 ಕ್ಕೆ ಒಂಬತ್ತು ಪಟ್ಟು ಹೆಚ್ಚಳವಾಗಿರುವುದು ಮಾತ್ರವಲ್ಲ ಅವುಗಳ ಮೌಲ್ಯವೂ ಬೆಳೆದಿದೆ. ಷೇರುಗಳ ಮೌಲ್ಯ ಸುಮಾರು 1.72 ಕೋಟಿ ರೂ. ಆಗಿದ್ದು, ರಾತ್ರೋರಾತ್ರಿ ಪ್ರಿಯಾ ಶರ್ಮಾ ಕೋಟ್ಯಧಿಪತಿಯಾಗಿದ್ದಾರೆ. ಆದರೆ ಇದನ್ನು ಪಡೆಯುವುದು ಅಷ್ಟೊಂದು ಸುಲಭವಾಗಿರಲಿಲ್ಲ.

ಬೆಂಗಳೂರಿನಲ್ಲಿ ನೆಲೆಸಿರುವ ಪ್ರಿಯಾ ತಮ್ಮ ಅಜ್ಜನ ದಾಖಲೆಗಳನ್ನು ಪಡೆಯಲು ಸಾಕಷ್ಟು ಸವಾಲುಗಳನ್ನು ಎದುರಿಸಿದರು. ಪ್ರಿಯಾ ಅವರ ಅಜ್ಜನ ಉಯಿಲು ಸೇರಿದಂತೆ ಅನೇಕ ದಾಖಲೆಗಳ ಪರಿಶೀಲನೆ ಬಳಿಕವೂ ಸಾಕಷ್ಟು ತೊಡಕುಗಳು ಎದುರಾಗಿತ್ತು.

ಇದನ್ನು ಓದಿ: Ayodhya: ಅಯೋಧ್ಯೆಗೆ ವಿಮಾನ ತಲುಪುತ್ತಲೇ ಭೂಮಿಗೆ ನಮಸ್ಕರಿಸಿದ ಗಗನಸಖಿ; ಭುಗಿಲೆದ್ದಿತು ವಿವಾದ!

ಕಾನೂನಿನ ನೆರವು ಪಡೆದುಕೊಂಡ ಪ್ರಿಯಾ ಅವರು ಷೇರು ಪ್ರಮಾಣಪತ್ರದಲ್ಲಿನ ಹೆಸರು ಮತ್ತು ಪ್ರಿಯಾ ಅವರ ಅಜ್ಜನ ಅಧಿಕೃತ ದಾಖಲೆಗಳ ನಡುವಿನ ವ್ಯತ್ಯಾಸವನ್ನು ಸರಿಪಡಿಸಲು ಸಾಕಷ್ಟು ಹೋರಾಟ ಮಾಡಬೇಕಾಯಿತು. ಕೊನೆಗೆ ಸುಮಾರು ಒಂದು ವರ್ಷದ ಸತತ ಪ್ರಯತ್ನದ ಅನಂತರ ಪ್ರಿಯಾ ಅವರು ಎಲ್ ಆಂಡ್ ಟಿ ನಿಂದ ಅಜ್ಜನ ಪ್ರಮಾಣ ಪತ್ರದ ದಾಖಲೆಯನ್ನು ಪಡೆದಳು. ಇದರಿಂದ ಆಕೆ ಈಗ ಕೋಟ್ಯಧಿಪತಿಯಾಗಿದ್ದಾಳೆ.

Continue Reading

ವಾಣಿಜ್ಯ

Gold Rate Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ಇಂದಿನ ಬೆಲೆ ಚೆಕ್‌ ಮಾಡಿ

Gold Rate Today: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ದರ ಇಂದು (ಆಗಸ್ಟ್‌ 4) ಯಥಾಸ್ಥಿತಿ ಕಾಯ್ದುಕೊಂಡಿದೆ. ಬುಧವಾರದಿಂದ ಸತತವಾಗಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಶನಿವಾರ ಇಳಿಕೆಯಾಗಿ ಗ್ರಾಹಕರು ತುಸು ಸಮಾಧಾನ ಪಟ್ಟುಕೊಂಡಿದ್ದರು. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,470 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 7,058 ಇದೆ. ಇತ್ತ ಬೆಳ್ಳಿಯ ಬೆಲೆಯಲ್ಲಿಯೂ ಯಾವುದೇ ಬದಲಾವಣೆ ಇಲ್ಲ.

VISTARANEWS.COM


on

Gold Rate Today
Koo

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ದರ ಇಂದು (ಆಗಸ್ಟ್‌ 4) ಯಥಾಸ್ಥಿತಿ ಕಾಯ್ದುಕೊಂಡಿದೆ (Gold Rate Today). ಬುಧವಾರದಿಂದ ಸತತವಾಗಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಶನಿವಾರ ಇಳಿಕೆಯಾಗಿ ಗ್ರಾಹಕರು ತುಸು ಸಮಾಧಾನ ಪಟ್ಟುಕೊಂಡಿದ್ದರು. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,470 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 7,058 ಇದೆ.

22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ ₹ 51,760 ಇದೆ. ಇನ್ನು 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹ 64,700 ಮತ್ತು ₹ 6,47,000 ದರದಲ್ಲಿ ಖರೀದಿಸಬಹುದು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ ₹ 56,464 ಇದೆ. 10 ಗ್ರಾಂ ಮತ್ತು 100 ಗ್ರಾಂನ 24 ಕ್ಯಾರಟ್‌ ಚಿನ್ನದ ಬೆಲೆ ₹ 70,580 ಮತ್ತು ₹ 7,05,800 ತಲುಪಿದೆ.

ನಗರ22 ಕ್ಯಾರಟ್ (1 ಗ್ರಾಂ)24 ಕ್ಯಾರಟ್ (1 ಗ್ರಾಂ)
ದಿಲ್ಲಿ₹ 6,485₹ 7,073
ಮುಂಬೈ₹ 6,470₹ 7,058
ಬೆಂಗಳೂರು₹ 6,470₹ 7,058
ಚೆನ್ನೈ₹ 6,450₹ 7,036

ಬೆಳ್ಳಿ ಧಾರಣೆ

ಇತ್ತ ಬೆಳ್ಳಿಯ ಬೆಲೆಯೂ ಯಥಾಸ್ಥಿತಿಯಲ್ಲಿ ಮುಂದುವರಿದಿದೆ. ಬೆಳ್ಳಿ 1 ಗ್ರಾಂಗೆ ₹ 85.75 ಹಾಗೂ 8 ಗ್ರಾಂಗೆ ₹ 686 ಇದೆ. 10 ಗ್ರಾಂ ₹ 857.50 ಹಾಗೂ 1 ಕಿಲೋಗ್ರಾಂ ₹ 85,750 ಬೆಲೆ ಬಾಳುತ್ತದೆ.

ಚಿನ್ನದ ದರದ ಮೇಲೆ ಪರಿಣಾಮ ಬೀರುವ ಅಂಶಗಳು

ಬೇಡಿಕೆ ಮತ್ತು ಪೂರೈಕೆ: ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಮತ್ತು ಪೂರೈಕೆಯಿಂದ ಚಿನ್ನದ ದರವನ್ನು ಹೆಚ್ಚಾಗಿ ನಿರ್ಧರಿಸಲಾಗುತ್ತದೆ. ಚಿನ್ನಕ್ಕೆ ಬೇಡಿಕೆ ಹೆಚ್ಚಾದರೆ ದರವೂ ಹೆಚ್ಚಾಗಲಿದೆ. ವ್ಯತಿರಿಕ್ತವಾಗಿ, ಚಿನ್ನದ ಪೂರೈಕೆ ಹೆಚ್ಚಾದರೆ, ದರ ಕಡಿಮೆಯಾಗುತ್ತದೆ.

ಜಾಗತಿಕ ಆರ್ಥಿಕ ಪರಿಸ್ಥಿತಿಗಳು: ಚಿನ್ನದ ದರದ ಮೇಲೆ ಜಾಗತಿಕ ಆರ್ಥಿಕ ಪರಿಸ್ಥಿತಿಗಳು ಕೂಡ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಜಾಗತಿಕ ಆರ್ಥಿಕತೆಯು ಕಳಪೆಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಕಾಣಬಹುದು. ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ರಾಜಕೀಯ ಅಸ್ಥಿರತೆ: ರಾಜಕೀಯ ಅಸ್ಥಿರತೆ ಚಿನ್ನದ ದರದ ಮೇಲೂ ಪರಿಣಾಮ ಬೀರಬಹುದು. ಉದಾಹರಣೆಗೆ, ಒಂದು ದೊಡ್ಡ ದೇಶದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾದರೆ, ಹೂಡಿಕೆದಾರರು ಅನಿಶ್ಚಿತತೆಯ ವಿರುದ್ಧ ಸುರಕ್ಷಿತರಾಗಲು ಚಿನ್ನವನ್ನು ಖರೀದಿಸಬಹುದು, ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ಇದಲ್ಲದೆ, ಭಾರತದಲ್ಲಿನ ಚಿಲ್ಲರೆ ಚಿನ್ನದ ಬೆಲೆಯು ಭಾರತದಲ್ಲಿ ಗ್ರಾಹಕರಿಗೆ ಚಿನ್ನವನ್ನು ಮಾರಾಟ ಮಾಡುವ ಬೆಲೆಯಾಗಿದೆ. ಜಾಗತಿಕ ಚಿನ್ನದ ಬೆಲೆ, ಭಾರತೀಯ ರೂಪಾಯಿ, ಮತ್ತು ಚಿನ್ನದ ಆಭರಣಗಳ ತಯಾರಿಕೆಯಲ್ಲಿ ತೊಡಗಿರುವ ಕಾರ್ಮಿಕ ಮತ್ತು ಸಾಮಗ್ರಿಗಳ ವೆಚ್ಚ ಸೇರಿದಂತೆ ಹಲವಾರು ಅಂಶಗಳಿಂದ ಇದನ್ನು ನಿರ್ಧರಿಸಲಾಗುತ್ತದೆ. ಭಾರತದಲ್ಲಿ ಚಿಲ್ಲರೆ ಚಿನ್ನದ ಬೆಲೆಯು ಸಾಮಾನ್ಯವಾಗಿ ಜಾಗತಿಕ ಚಿನ್ನದ ಬೆಲೆಗಿಂತ ಹೆಚ್ಚಾಗಿರುತ್ತದೆ. ಏಕೆಂದರೆ ಇದು ಆಭರಣ ಮತ್ತು ಇತರ ವೆಚ್ಚ ಒಳಗೊಂಡಿರುತ್ತದೆ.

ಇದನ್ನೂ ಓದಿ: World Bank: ಅಮೆರಿಕದ ತಲಾ ಆದಾಯದ ಕಾಲು ಭಾಗ ತಲುಪಲು ಭಾರತಕ್ಕೆ 75 ವರ್ಷ ಬೇಕು: ವಿಶ್ವ ಬ್ಯಾಂಕ್‌

Continue Reading

ಚಿನ್ನದ ದರ

Gold Rate Today: ಕೊನೆಗೂ ಆಭರಣ ಪ್ರಿಯರಿಗೆ ಸಿಕ್ತು ಗುಡ್‌ನ್ಯೂಸ್‌; ಚಿನ್ನದ ಬೆಲೆಯಲ್ಲಿ ಇಳಿಕೆ

Gold Rate Today: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ದರ ಇಂದು (ಆಗಸ್ಟ್‌ 3) ತುಸು ಇಳಿಕೆಯಾಗಿದೆ. ಬುಧವಾರದಿಂದ ಸತತವಾಗಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಇಳಿಕೆಯಾಗಿದ್ದು, ಗ್ರಾಹಕರಿಗೆ ತುಸು ಸಮಾಧಾನ ತಂದಿದೆ. 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 10 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 11 ಕಡಿಮೆಯಾಗಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,470 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 7,058 ಇದೆ.

VISTARANEWS.COM


on

Gold Rate Today
Koo

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ದರ ಇಂದು (ಆಗಸ್ಟ್‌ 3) ತುಸು ಇಳಿಕೆಯಾಗಿದೆ (Gold Rate Today). ಬುಧವಾರದಿಂದ ಸತತವಾಗಿ ಏರಿಕೆ ಕಂಡಿದ್ದ ಚಿನ್ನದ ಬೆಲೆ ಇಂದು ಇಳಿಕೆಯಾಗಿದ್ದು, ಗ್ರಾಹಕರಿಗೆ ತುಸು ಸಮಾಧಾನ ತಂದಿದೆ. 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 10 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 11 ಕಡಿಮೆಯಾಗಿದೆ.

ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,470 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 7,058 ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ ₹ 51,760 ಇದೆ. ಇನ್ನು 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹ 64,700 ಮತ್ತು ₹ 6,47,000 ದರದಲ್ಲಿ ಖರೀದಿಸಬಹುದು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ ₹ 56,464 ಇದೆ. 10 ಗ್ರಾಂ ಮತ್ತು 100 ಗ್ರಾಂನ 24 ಕ್ಯಾರಟ್‌ ಚಿನ್ನದ ಬೆಲೆ ₹ 70,580 ಮತ್ತು ₹ 7,05,800 ತಲುಪಿದೆ.

ನಗರ22 ಕ್ಯಾರಟ್ (1 ಗ್ರಾಂ)24 ಕ್ಯಾರಟ್ (1 ಗ್ರಾಂ)
ದಿಲ್ಲಿ₹ 6,485 ₹ 7,073
ಮುಂಬೈ₹ 6,470 ₹ 7,058
ಬೆಂಗಳೂರು₹ 6,470 ₹ 7,058
ಚೆನ್ನೈ₹ 6,450 ₹ 7,036

ಬೆಳ್ಳಿ ಧಾರಣೆ

ಇತ್ತ ಬೆಳ್ಳಿಯ ಬೆಲೆಯೂ ಕೊಂಚ ಇಳಿಕೆಯಾಗಿದೆ. ಬೆಳ್ಳಿ 1 ಗ್ರಾಂಗೆ ₹ 85.75 ಹಾಗೂ 8 ಗ್ರಾಂಗೆ ₹ 686 ಇದೆ. 10 ಗ್ರಾಂ ₹ 857.50 ಹಾಗೂ 1 ಕಿಲೋಗ್ರಾಂ ₹ 85,750 ಬೆಲೆ ಬಾಳುತ್ತದೆ.

ಮೊದಲ ಬಾರಿಗೆ ಚಿನ್ನದ ಆಭರಣವನ್ನು ಖರೀದಿಸುವಾಗ ಏನು ತಿಳಿದಿರಬೇಕು?

ನೀವು ಚಿನ್ನಕ್ಕಾಗಿ ಹಣವನ್ನು ಖರ್ಚು ಮಾಡಲು ಮುಂದಾಗುವ ಮೊದಲು ಅದರ ಬಗ್ಗೆ ಜ್ಞಾನವನ್ನು ಹೊಂದಿರುವುದು ಉತ್ತಮ. ಚಿನ್ನದಂತಹ ಅಮೂಲ್ಯ ವಸ್ತು ಹಾಗೂ ಹೂಡಿಕೆಗೆ ಸಂಬಂಧಿಸಿದ ವಸ್ತುವನ್ನು ಖರೀದಿಸುವ ಮೊದಲು ನೀವು ಪರಿಶೀಲಿಸಬೇಕಾದ ವಿಷಯಗಳು ಇಲ್ಲಿವೆ.

ಮೊದಲನೆಯದು ಶುದ್ಧತೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮಾರಾಟವಾಗುವ ಆಭರಣಗಳು 22 ಕ್ಯಾರೆಟ್ ಚಿನ್ನದ ಆಭರಣ. ಬೆಂಗಳೂರಿನಲ್ಲಿ ಆ ದಿನದ ಚಿನ್ನದ ದರ ಎಷ್ಟಿದೆ ಎಂಬುದನ್ನು ಮೊದಲು ಗಮನದಲ್ಲಿಟ್ಟುಕೊಳ್ಳಬೇಕು. ಬೆಂಗಳೂರಿನಲ್ಲಿ ಚಿನ್ನದ ದರಗಳು ಪ್ರತಿದಿನ ಬದಲಾಗುತ್ತಿರುತ್ತವೆ. ನಿಖರವಾದ ಮಾಹಿತಿ ನೀಡುವ ವೆಬ್‌ಸೈಟ್ ಅನ್ನು ಅವಲಂಬಿಸುವುದು ಉತ್ತಮ.

ನೀವು ಖರೀದಿಸುವ ಆಭರಣಗಳ ಮೇಲಿರುವ ಬಿಐಎಸ್ ಹಾಲ್‌ಮಾರ್ಕ್‌ ಅನ್ನು ಪರಿಶೀಲಿಸುವುದು ಬಹಳ ಮುಖ್ಯ. ಚಿನ್ನಾಭರಣ ಖರೀದಿಸುವಾಗ BIS ಹಾಲ್‌ಮಾರ್ಕ್ ಅನ್ನು ಪಡೆಯಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಭಾರತ ಸರ್ಕಾರವು ಚಿನ್ನವು ಅದರ ಮೇಲೆ ನಮೂದಿಸಲಾದ ಕ್ಯಾರಟ್‌ಗಳಷ್ಟೇ ಶುದ್ಧವಾಗಿದೆ ಎಂದು ಆ ಮೂಲಕ ಪ್ರಮಾಣೀಕರಿಸುತ್ತದೆ.

ಚಿನ್ನಾಭರಣಕ್ಕೆ ಮೇಕಿಂಗ್ ಚಾರ್ಜ್ ಮತ್ತು ವೇಸ್ಟೇಜ್ ಚಾರ್ಜ್ ಎಂದು ಇರುತ್ತದೆ. ಇದನ್ನು ಪ್ರತಿ ಆಭರಣ ವ್ಯಾಪಾರಿಯೂ ವಿಧಿಸುತ್ತಾರೆ. ನೀವು ಆಭರಣ ವ್ಯಾಪಾರಿಯನ್ನು ಈ ಬಗ್ಗೆ ಕೇಳಿ ಪರಿಶೀಲಿಸುವುದು ಉತ್ತಮ. ಎಲ್ಲಾ ಆಭರಣಗಳಿಗೆ ಮೇಕಿಂಗ್ ಅಥವಾ ವೇಸ್ಟೇಜ್ ಶುಲ್ಕಗಳು ಒಂದೇ ಆಗಿರುತ್ತವೆ ಎಂಬುದನ್ನು ಗಮನಿಸಿ. ಎಷ್ಟು ಶುಲ್ಕ ವಿಧಿಸಲಾಗಿದೆ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ.

ನೀವು ದುಬಾರಿ ವಹಿವಾಟು ಮಾಡುತ್ತಿರುವುದರಿಂದ ಚಿನ್ನಾಭರಣದ ಅಸಲಿತನ ಖಚಿತಪಡಿಸಿಕೊಳ್ಳುವುದು ಉತ್ತಮ. ಯಾಕೆಂದರೆ ನೀವು ಖರೀದಿಸುತ್ತಿರುವುದು ಬಹುಕಾಲ ಉಳಿಯುವ, ಹೂಡಿಕೆ ಎಂದು ಪರಿಗಣಿಸಬಹುದಾದ ವಸ್ತು. ಎಲ್ಲೇ ಆಗಲಿ ಚಿನ್ನ ಖರೀದಿಸುವ ಮುನ್ನ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು. ಕೆಲವು ದಶಕಗಳ ಹಿಂದೆ, ಚಿನ್ನವನ್ನು ಖರೀದಿಸುವಾಗ ಸುಲಭವಾಗಿ ಮೋಸ ಹೋಗಬಹುದಾಗಿತ್ತು. ಆದರೆ ಇಂದು ಹೆಚ್ಚಿನ ಚಿನ್ನವು ಹಾಲ್‌ಮಾರ್ಕ್‌ ಆಗಿದೆ. ಪ್ರತಿಷ್ಠಿತ ಅಂಗಡಿಗಳಲ್ಲಿ ಈ ಬಗ್ಗೆ ಹೆಚ್ಚಿನ ಎಚ್ಚರ ಇರುತ್ತದೆ.

ಇದನ್ನೂ ಓದಿ: Income Tax Returns: ಜುಲೈ 31ರೊಳಗೆ 7.28 ಕೋಟಿ ಐಟಿಆರ್ ಸಲ್ಲಿಕೆ! ಇದು ಹೊಸ ದಾಖಲೆ

Continue Reading
Advertisement
Viral Video
ವೈರಲ್ ನ್ಯೂಸ್3 mins ago

Viral Video: ಇಸ್ರೇಲಿ ಅಪಹೃತನ ಮೃತ ದೇಹವನ್ನು ನಡುಬೀದಿಯಲ್ಲಿ ಒದ್ದ ಪ್ಯಾಲೆಸ್ತೀನ್‌ ಜನ!

Krishnam Pranaya Sakhi
ಸಿನಿಮಾ33 mins ago

Krishnam Pranaya Sakhi: ಕೃಷ್ಣಂ ಪ್ರಣಯ ಸಖಿ ಸಿನಿಮಾದ 4ನೇ ಹಾಡು ಔಟ್;‌ ರೊಮ್ಯಾಂಟಿಕ್‌ ಸಾಂಗ್ ಇಲ್ಲಿ ಕೇಳಿ!

Mohammed Siraj
ಕ್ರೀಡೆ33 mins ago

Mohammed Siraj : ಲಂಕಾ ವಿರುದ್ಧದ ಪಂದ್ಯದಲ್ಲಿ ಹೊಸ ದಾಖಲೆ ಬರೆದ ಮೊಹಮ್ಮದ್​ ಸಿರಾಜ್​

Murder Case
ಕರ್ನಾಟಕ33 mins ago

Murder Case: 300 ರೂಪಾಯಿಗಾಗಿ ಹೆತ್ತಮ್ಮನನ್ನೇ ಕೊಂದ ಪಾಪಿ ಮಗ!

Amitabh Bachchan
ಸಿನಿಮಾ34 mins ago

Amitabh Bachchan: ʼಕೌನ್‌ ಬನೇಗಾ ಕರೋಡ್‌ಪತಿʼ ಸ್ಪರ್ಧಿಗಳ ಎದುರು ನಾನು ಅಸಹಾಯಕ; ಅಮಿತಾಭ್‌ ಹೀಗೆ ಹೇಳಿದ್ದೇಕೆ?

Paris Olympics 2024
ಕ್ರೀಡೆ45 mins ago

Paris Olympics 2024 : ಆ.​​​ 5ರಂದು ಭಾರತದ ಅಥ್ಲೀಟ್​ಗಳು ಒಲಿಂಪಿಕ್ಸ್​ನ ಯಾವ ಸ್ಪರ್ಧೆಗಳಲ್ಲಿ ಕಣಕ್ಕಿಳಿಯಲಿದ್ದಾರೆ? ಇಲ್ಲಿದೆ ಎಲ್ಲ ಮಾಹಿತಿ

Jaskaran Singh
ಸ್ಯಾಂಡಲ್ ವುಡ್54 mins ago

Jaskaran Singh: ಕನ್ನಡತಿಯನ್ನೇ ಮದುವೆ ಆಗುವೆ ಎಂದ ‘ದ್ವಾಪರ’ ಹಾಡಿನ ಗಾಯಕ ಜಸ್‌ಕರಣ್‌ ಸಿಂಗ್!

Viral Video
ವೈರಲ್ ನ್ಯೂಸ್59 mins ago

Viral Video: ಸೆಲ್ಫಿ ತೆಗೆಯಲು ಹೋಗಿ 100 ಅಡಿ ಆಳದ ಕಮರಿಗೆ ಬಿದ್ದ ಮಹಿಳೆ!

Western Ghats
ಕರ್ನಾಟಕ1 hour ago

Western Ghats: ನಾಳೆಯಿಂದ ಪಶ್ಚಿಮ ಘಟ್ಟದಲ್ಲಿ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ: ಸಚಿವ ಈಶ್ವರ ಖಂಡ್ರೆ

Viral Video
ವೈರಲ್ ನ್ಯೂಸ್1 hour ago

Viral Video: ವಧುವಿಗೆ ಮಾಲೆ ಹಾಕಬೇಕು ಎನ್ನುವಷ್ಟರಲ್ಲಿ ಮೂರ್ಛೆ ಹೋದ ವರ! ವಿಡಿಯೊ ನೋಡಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

assault case
ಬೆಳಗಾವಿ7 hours ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ1 day ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 days ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 days ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 days ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

karnataka Rain
ಮಳೆ5 days ago

Karnataka rain : ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಹಸು; ಬೈಂದೂರಿನಲ್ಲಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಬಾಳೆಹೊನ್ನೂರು ಮುಳುಗಡೆ; ನೆರೆಗೆ ಬೋಟ್‌ ಮೊರೆ ಹೋದ ಜನರು

Bharachukki falls
ಚಾಮರಾಜನಗರ5 days ago

Bharachukki Falls : ಭರಚುಕ್ಕಿ ಜಲಪಾತಕ್ಕೆ ಕಳ್ಳ ಮಾರ್ಗದಿಂದ ಹೋದೋರಿಗೆ ಬಸ್ಕಿ ಹೊಡೆಸಿದ ಪೊಲೀಸರು!

karnataka Rain
ಮಳೆ6 days ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ6 days ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

ಟ್ರೆಂಡಿಂಗ್‌