Road Rage Incident: ಒಳಗೆ ಮಗು ಇದೆ ಅಂದ್ರೂ ಬಿಡದ ಕಿಡಿಗೇಡಿ; ಕಾರಿನ ಗ್ಲಾಸ್‌ ಒಡೆದು ದಾಂಧಲೆ! - Vistara News

ವೈರಲ್ ನ್ಯೂಸ್

Road Rage Incident: ಒಳಗೆ ಮಗು ಇದೆ ಅಂದ್ರೂ ಬಿಡದ ಕಿಡಿಗೇಡಿ; ಕಾರಿನ ಗ್ಲಾಸ್‌ ಒಡೆದು ದಾಂಧಲೆ!

Road Rage Incident: ಬೆಂಗಳೂರು ಹೊರವಲಯದ ಸರ್ಜಾಪುರ ಮುಖ್ಯರಸ್ತೆಯ ದೊಡ್ಡಕನ್ನಹಳ್ಳಿಯಲ್ಲಿ ಶನಿವಾರ ರಾತ್ರಿ ಘಟನೆ ನಡೆದಿದೆ. ವ್ಯಕ್ತಿಯ ದೌರ್ಜನ್ಯ ಕಂಡು ಕಾರೊಳಗೆ ಇದ್ದ ಮಹಿಳೆ ಮತ್ತು ಮಗು ಕಿರುಚಾಡಿದ್ದಾರೆ. ಅಲ್ಲದೇ ಬೈಕ್ ಸವಾರನ ಗುಂಡಾ ವರ್ತನೆ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜಧಾನಿಯಲ್ಲಿ ರೋಡ್ ರೇಜ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ರಸ್ತೆಯಲ್ಲಿ ಹೋಗುವಾಗ ಸೈಡ್ ಬಿಡಲಿಲ್ಲ ಎಂದು ಗಲಾಟೆ, ಹಲ್ಲೆ, ಕಿರಿಕ್ ಸೇರಿ ಒಂದಲ್ಲಾ ಒಂದು ಪ್ರಕರಣ ನಡೆಯುತ್ತಲೇ ಇರುತ್ತವೆ. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ಪುಂಡರ ಕಾಟ ಮಾತ್ರ ತಪ್ಪುತ್ತಿಲ್ಲ. ಈ ನಡುವೆ ನಗರ ಹೊರವಲಯದ ಸರ್ಜಾಪುರ ಮುಖ್ಯರಸ್ತೆಯ ದೊಡ್ಡಕನ್ನಹಳ್ಳಿಯಲ್ಲಿ ಶನಿವಾರ ರಾತ್ರಿ ಇಂತಹುದೇ ಘಟನೆಯೊಂದು (Road Rage Incident) ನಡೆದಿದ್ದು, ಕಾರು ತಡೆದು ಯುವಕನೊಬ್ಬ ಪುಂಡಾಟ ಮೆರೆದಿರುವ ಘಟನೆ ನಡೆದಿದೆ.

ಸರ್ಜಾಪುರ ಮುಖ್ಯರಸ್ತೆಯ ದೊಡ್ಡಕನ್ನಹಳ್ಳಿಯಲ್ಲಿ ಬಲ ತಿರುವು ಪಡೆಯಲು ಇಂಡಿಕೇಟರ್ ಬಳಸದೆ ಕಾರು ಚಾಲಕ ಏಕಾಏಕಿ ನುಗ್ಗಿಸಿದ್ದ. ಇದರಿಂದ ಹಿಂಬದಿಯಿಂದ ಬರುತ್ತಿದ್ದ ಬೈಕ್ ಸವಾರ ಅನಿಲ್ ರೆಡ್ಡಿ ಎಂಬಾತ ರಸ್ತೆಗೆ ಬಿದ್ದಿದ್ದಾನೆ. ಹೀಗಾಗಿ ಕೋಪಗೊಂಡ ಆತ, ಕಾರನ್ನು ತಡೆದು ಹಲ್ಲೆಗೆ ಯತ್ನಿಸಿದ್ದಾನೆ.

ಸರ್ಜಾಪುರ ಮುಖ್ಯರಸ್ತೆಯ ದೊಡ್ಡಕನ್ನಹಳ್ಳಿಯಲ್ಲಿ ಶನಿವಾರ ರಾತ್ರಿ ಕಾರು ತಡೆದು ಯುವಕನೋರ್ವ ಪುಂಡಾಟ ಮೆರೆದಿರುವ ಘಟನೆ ನಡೆದಿದೆ. ಕಾರಿನಲ್ಲಿ ಮಗು ಮತ್ತು ಮಹಿಳೆ ಇದ್ದರೂ ಯೋಚಿಸದೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಬೈಕ್‌ ಸವಾರ, ಕಲ್ಲು ಹಿಡಿದು ಕಾರಿನಲ್ಲಿದ್ದವರಿಗೆ ಬೆದರಿಸಿ ವೈಪರ್ ಕಿತ್ತು ಗ್ಲಾಸ್ ಒಡೆದಿದ್ದಾನೆ. ಈ ಸನ್ನಿವೇಶವನ್ನು ಕಾರಿನಲ್ಲಿದ್ದ ದಂಪತಿ ವಿಡಿಯೊ ಮಾಡಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ, ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ದೂರು ನೀಡಿದ್ದಾರೆ. ಬೆಳ್ಳಂದೂರು ಪೊಲೀಸರು ಎಫ್ಐಆರ್ ದಾಖಲಿಸಿ, ಕಾರಿನ ಗ್ಲಾಸ್ ಒಡೆದು ಹಾಕಿದ್ದ ಆರೋಪಿ ಅನಿಲ್ ರೆಡ್ಡಿ ಎಂಬಾತನನ್ನು ಬಂಧಿಸಿದ್ದಾರೆ.

ಇಂಡಿಕೇಟರ್‌ ಹಾಕದೆ ಕಾರು ಚಾಲಕ ಯಡವಟ್ಟು

ಘಟನೆ ಸಂಬಂಧ ದೂರು ದಾಖಲಾಗುತ್ತಿದ್ದಂತೆ ಆರೋಪಿ ಅನಿಲ್ ರೆಡ್ಡಿ ಎಂಬಾತನನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಕಾರು ಚಾಲಕ ಬಲ ತಿರುವ ಪಡೆಯಲು ಇಂಡಿಕೇಟರ್ ಬಳಸದೆ ಏಕಾಏಕಿ ನುಗ್ಗಿದ್ದ. ಈ ವೇಳೆ ಬೈಕ್ ಸವಾರನಿಗೆ ಕಾರ್ ಡಿಕ್ಕಿಯಾಗಿ ಕೆಳಗೆ ಬಿದ್ದಿದ್ದ. ಸಾವರಿಸಿಕೊಂಡು ಮೇಲೆ ಎದ್ದ ಅನಿಲ್ ರೆಡ್ಡಿ ಕಾರಿನಿಂದ ಕೆಳಗೆಇಳಿಯುವಂತೆ ಚಾಲಕನಿಗೆ ಹೇಳಿದ್ದ. ಆದರೆ ಕಾರಿನಿಂದ ಚಾಲಕ ಕೆಳಗೆ ಇಳಿಯದೆ ಕುಳಿತಿದ್ದರಿಂದ ಕೋಪಗೊಂಡು ಕಲ್ಲಿನಿಂದ ಗ್ಲಾಸ್ ಪುಡಿಗಟ್ಟಿದ್ದ. ಘಟನೆ ಸಂಬಂಧ ಕಾರು ಚಾಲಕನಿಂದ ಬೆಳ್ಳಂದೂರು ಠಾಣೆಗೆ ದೂರು ದೂರಿನ ಹಿನ್ನಲೆ ಕೇಸ್ ದಾಖಲಾಗಿತ್ತು. ಕಾರಿನಿಂದ ಚಾಲಕ ಕೆಳಗೆ ಇಳಿಯದೆ ಕುಳಿತಿದ್ದರಿಂದ ಕೋಪಗೊಂಡು ಅನಿಲ್ ರೆಡ್ಡಿ ಗ್ಲಾಸ್ ಪುಡಿಗಟ್ಟಿದ್ದ ಎಂಬುದು ವಿಚಾರಣೆ ವೇಳೆ ಬಯಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Kailash Vijayvargiya: 30 ವರ್ಷದಲ್ಲಿ ದೇಶದೊಳಗೆ ಅಂತರ್ಯುದ್ಧ, ಹಿಂದೂಗಳು ಬದುಕುವುದೇ ಕಷ್ಟ: ಕೈಲಾಶ್‌ ವಿಜಯ್‌ವರ್ಗೀಯ

ಹಿಂದೂ ಪದವನ್ನು ಬಲಪಡಿಸುವ ಕೆಲಸ ಮಾಡಬೇಕು. ಬ್ರಿಟಿಷರ ಒಡೆದು ಆಳುವ ನೀತಿಯಂತೆ ಕೆಲವರು ಹಿಂದೂ ಸಮಾಜವನ್ನು ಜಾತಿ ಆಧಾರದ ಮೇಲೆ ವಿಭಜಿಸಲು ಬಯಸುತ್ತಿದ್ದಾರೆ ಎಂದು ಕೈಲಾಶ್‌ ವಿಜಯ್‌ವರ್ಗೀಯ (Kailash Vijayvargiya) ಹೇಳಿದ್ದಾರೆ.

VISTARANEWS.COM


on

Kailash Vijayvargiya
Koo

ಇಂದೋರ್: 30 ವರ್ಷಗಳ ನಂತರ ದೇಶದಲ್ಲಿ ಅಂತರ್ಯುದ್ಧ (Civil War) ಪ್ರಾರಂಭವಾಗಲಿದೆ. 30 ವರ್ಷಗಳ ನಂತರ ಹಿಂದೂಗಳು (Hindus) ಈ ರೀತಿ ಬದುಕಲು ಸಾಧ್ಯವಿಲ್ಲ ಎಂದು ಮಧ್ಯಪ್ರದೇಶದ ಬಿಜೆಪಿ ಸಚಿವ (Madhya Pradesh BJP minister) ಕೈಲಾಶ್‌ ವಿಜಯ್‌ವರ್ಗೀಯ (Kailash Vijayvargiya) ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ.

ಇಂದಿನ ಕಾಲದಲ್ಲಿ ಸಾಮಾಜಿಕ ಸಾಮರಸ್ಯ ಅತಿಮುಖ್ಯವಾಗಿದೆ. ನಿನ್ನೆ ನಾನು ನಿವೃತ್ತ ಸೇನಾ ಅಧಿಕಾರಿಯೊಬ್ಬರನ್ನು ಭೇಟಿಯಾಗಿದ್ದೆ. ಅವರು ಸಾಮಾಜಿಕ ಕಾರ್ಯಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. 30 ವರ್ಷಗಳ ನಂತರ ದೇಶದಲ್ಲಿ ಅಂತರ್ಯುದ್ಧ ಪ್ರಾರಂಭವಾಗಲಿದೆ. 30 ವರ್ಷಗಳ ನಂತರ ಹಿಂದೂಗಳು ಈ ರೀತಿ ಬದುಕಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ನಾವು ಈ ವಿಷಯದ ಬಗ್ಗೆ ಚಿಂತನ ಮನನ ಮಾಡಬೇಕು ಎಂದು ವಿಜಯ್‌ವರ್ಗೀಯ ಹೇಳಿದರು.

ಹಿಂದೂ ಪದವನ್ನು ಬಲಪಡಿಸುವ ಕೆಲಸ ಮಾಡಬೇಕು ಎಂದವರು ನುಡಿದರು. ʼಸಾಮಾಜಿಕ ಸಾಮರಸ್ಯ ರಕ್ಷಾಬಂಧನ ಉತ್ಸವ’ ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಬ್ರಿಟಿಷರ ಒಡೆದು ಆಳುವ ನೀತಿಯಂತೆ ಕೆಲವರು ಹಿಂದೂ ಸಮಾಜವನ್ನು ಜಾತಿ ಆಧಾರದ ಮೇಲೆ ವಿಭಜಿಸಲು ಬಯಸುತ್ತಿದ್ದಾರೆ ಎಂದು ಹೇಳಿದರು.

ವಿಜಯವರ್ಗೀಯ ಅವರ ಹೇಳಿಕೆ ಬೇಜವಾಬ್ದಾರಿತನದ್ದಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ. ಮಧ್ಯಪ್ರದೇಶ ಕಾಂಗ್ರೆಸ್ ವಕ್ತಾರ ನೀಲಭ್ ಶುಕ್ಲಾ ಅವರು ವಿಜಯವರ್ಗೀಯ ಅವರ ಹೇಳಿಕೆ ಸಂಪೂರ್ಣ ಬೇಜವಾಬ್ದಾರಿಯಿಂದ ಕೂಡಿದೆ ಎಂದು ಟೀಕಿಸಿದ್ದಾರೆ. ಈ ಹೇಳಿಕೆಯು ದೇಶದಲ್ಲಿ ಅಸ್ಥಿರತೆ ಮತ್ತು ಭಯದ ವಾತಾವರಣವನ್ನು ಸೃಷ್ಟಿಸುತ್ತದೆ. ಶಾಂತಿ ಮತ್ತು ಸಹೋದರತ್ವದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಇದಕ್ಕೆ ವಿಜಯವರ್ಗೀಯ ಅವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು. 30 ವರ್ಷಗಳ ನಂತರ ದೇಶದಲ್ಲಿ ಅಂತರ್ಯುದ್ಧದ ಭೀತಿಯನ್ನು ಯಾವ ನಿವೃತ್ತ ಸೇನಾಧಿಕಾರಿ ವ್ಯಕ್ತಪಡಿಸಿದ್ದಾರೆ ಮತ್ತು ಅದಕ್ಕೆ ಆಧಾರವೇನು ಎಂಬುದನ್ನು ವಿಜಯವರ್ಗೀಯ ಅವರು ಸ್ಪಷ್ಟಪಡಿಸಬೇಕು ಎಂದು ಅವರು ಹೇಳಿದರು.

ಒತ್ತಡಕ್ಕೆ ಒಳಗಾಗಬೇಡಿ; ಭಾರತದ ಕ್ರೀಡಾಳುಗಳಿಗೆ ಪ್ರಧಾನಿ ಮೋದಿ ಸಲಹೆ

ನವದೆಹಲಿ: ಇದೇ ತಿಂಗಳು ಆಗಸ್ಟ್​ 28ರಿಂದ ಪ್ಯಾರಿಸ್​ನಲ್ಲಿ(Paralympic 2024) ಆರಂಭಗೊಳ್ಳಲಿರುವ ಪ್ಯಾರಾಲಿಂಪಿಕ್ಸ್(Paris Paralympics)​ ಕ್ರೀಡಾಕೂಟದಲ್ಲಿ ಈ ಬಾರಿ ಭಾರತದಿಂದ ದಾಖಲೆಯ 84 ಮಂದಿ ಪ್ಯಾರಾ ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ. ಕಳೆದ ಶುಕ್ರವಾರ ಭಾರತ ಪ್ಯಾರಾಲಿಂಪಿಕ್‌ ಸಮಿತಿ (ಪಿಸಿಐ) ಮತ್ತು ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಎಲ್ಲ ಕ್ರೀಡಾಪಟುಗಳಿಗೆ ಅದ್ಧೂರಿ ಬೀಳ್ಕೊಡುಗೆ ನೀಡಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿ(PM Modi) ಅವರು ಭಾರತದ ಕ್ರೀಡಾಪಟುಗಳಿಗೆ ಶುಭ ಹಾರೈಸಿದ್ದಾರೆ. ಜತೆಗೆ ಆತ್ಮ ವಿಶ್ವಾಸ ತುಂಬಿದ್ದಾರೆ.

ಸೋಮವಾರ ರಾತ್ರಿ ನಡೆದಿದ್ದ ವರ್ಚುವಲ್‌ ಸಂವಾದದಲ್ಲಿ ಮೋದಿ ಅವರು ಅಥ್ಲೀಟ್​ಗಳ ಜತೆ ಸಂವಾದ ನಡೆಸಿದ್ದರು. ಇದೇ ವೇಳೆ ಹಲವು ಕ್ರೀಡಾಪಟುಗಳು ತಮ್ಮ ತಯಾರಿಯ ಬಗ್ಗೆ ಮತ್ತು ಈ ಬಾರಿ ಪದಕ ಗೆಲ್ಲುವ ವಿಶ್ವಾಸವನ್ನು ಮೋದಿ ಜತೆ ಹಂಚಿಕೊಂಡರು. ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಜಾವೆಲಿನ್‌ ತ್ರೋವರ್‌ ಸುಮಿತ್‌ ಅಂಟಿಲ್‌ ಈ ಬಾರಿಯೂ ಚಿನ್ನ ಗೆಲ್ಲುವುದಾಗಿ ಮೋದಿಗೆ ಭರವಸೆ ನೀಡಿದರು. ಸುಮಿತ್‌ ಅಂಟಿಲ್‌ ಪ್ಯಾರಾಲಿಂಪಿಕ್ಸ್‌ ಉದ್ಘಾಟನ ಸಮಾರಂಭದಲ್ಲಿ ಶಾಟ್‌ಪುಟರ್‌ ಭಾಗ್ಯಶ್ರೀ ಜಾಧವ್‌ ಅವರೊಂದಿಗೆ ಭಾರತದ ಧ್ವಜಧಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: PM Narendra Modi : ಆಗಸ್ಟ್​ 23ರಂದು ಉಕ್ರೇನ್​ ಪ್ರವಾಸಕ್ಕೆ ತೆರಳಲಿದ್ದಾರೆ ಪ್ರಧಾನಿ ಮೋದಿ

Continue Reading

ಕ್ರೀಡೆ

Manu Bhaker Dance: ‘ಕಾಲಾ ಚಷ್ಮಾ’ ಹಾಡಿಗೆ ವಿದ್ಯಾರ್ಥಿಗಳ ಜತೆ ಹೆಜ್ಜೆ ಹಾಕಿದ ಒಲಿಂಪಿಯನ್​ ಮನು ಭಾಕರ್​

Manu Bhaker Dance: ತಮಿಳುನಾಡಿನ ವೇಲಮ್ಮಾಳ್ ನೆಕ್ಸಸ್ ಗ್ರೂಪ್​ನ ಶಾಲೆಯಲ್ಲಿ ನಡೆದ ಕ್ರೀಡಾ ಸ್ಕಾಲರ್‌ಷಿಪ್‌ ವಿತರಣಾ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಪಾಲ್ಗೊಂಡ ಮನು ಭಾಕರ್ ಕಾಲಾ ಚಷ್ಮಾ(‘Kala Chashma’ Song) ಹಿಂದಿ ಹಾಡೊಂದಕ್ಕೆ ನೃತ್ಯ ಮಾಡಿದ ವಿಡಿಯೊ ವೈರಲ್​ ಆಗಿದೆ.

VISTARANEWS.COM


on

Manu Bhaker Dance
Koo

ಚೆನ್ನೈ: ಪ್ಯಾರಿಸ್​ ಒಲಿಂಪಿಕ್ಸ್ ಶೂಟಿಂಗ್​ನಲ್ಲಿ ಅವಳಿ ಪದಕ ಗೆದ್ದ ಮನು ಭಾಕರ್​ ಅವರು ತಮ್ಮ ನೆಚ್ಚಿನ ಭರತನಾಟ್ಯ(Manu Bhaker Bharatnatyam) ಕಲಿಕೆಗಾಗಿ ತಮಿಳುನಾಡಿನಲ್ಲಿದ್ದಾರೆ. ಇಲ್ಲಿನ ಸ್ಥಳೀಯ ಶಾಲಾ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡ ಮನು ಭಾಕರ್(Manu Bhaker Dance)​ ವಿದ್ಯಾರ್ಥಿಗಳ ಜತೆಗೆ ವೇದಿಕೆಯಲ್ಲಿ ನೃತ್ಯ ಮಾಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್(viral video)​ ಆಗಿದೆ.

ತಮಿಳುನಾಡಿನ ವೇಲಮ್ಮಾಳ್ ನೆಕ್ಸಸ್ ಗ್ರೂಪ್​ನ ಶಾಲೆಯಲ್ಲಿ ನಡೆದ ಕ್ರೀಡಾ ಸ್ಕಾಲರ್‌ಷಿಪ್‌ ವಿತರಣಾ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಪಾಲ್ಗೊಂಡ ಮನು ಭಾಕರ್​ ವಿದ್ಯಾರ್ಥಿಗಳಲ್ಲಿ ಕ್ರೀಡೆಯ ಕುರಿತಾದ ಸಂವಾದ ನಡೆಸಿದರು. ಬಳಿಕ ವಿದ್ಯಾರ್ಥಿಗಳ ಜತೆಗೆ ಕತ್ರಿನಾ ಕೈಫ್ ಹೆಜ್ಜೆ ಹಾಕಿದ್ದ ಕಾಲಾ ಚಷ್ಮಾ(‘Kala Chashma’ Song) ಹಿಂದಿ ಹಾಡೊಂದಕ್ಕೆ ನೃತ್ಯ ಮಾಡಿದರು.

ತಮಿಳುನಾಡಿನ ಶಿಕ್ಷಕರೊಬ್ಬರ ಸಹಾಯದಿಂದ ಆನ್​ಲೈನ್​ನಲ್ಲಿಯೇ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದ 22 ವರ್ಷದ ಮನು ಭಾಕರ್​ ಇದೀಗ ಶೂಟಿಂಗ್​ನಿಂದ ಮೂರು ತಿಂಗಳ ವಿಶ್ರಾಂತಿ ಪಡೆದು ನೇರವಾಗಿ ತರಗತಿಗೆ ಹಾಜರಾಗಿ ನೃತ್ಯ ಕಲಿಯಲಿದ್ದಾರೆ. ಜತೆಗೆ ವಯೋಲಿನ್​ ಕಲಿಕೆ ಕೂಡ ಮಾಡಲಿದ್ದಾರೆ. ಇದಾದ ಬಳಿಕ ಕುದುರೆ ಸವಾರಿ ಮಾರ್ಷಿಯಲ್​ ಆರ್ಟ್ಸ್​ ಮತ್ತು ಸ್ಕೇಟಿಂಗ್ ಅಭ್ಯಾಸ ಕೂಡ ಮಾಡಲಿದ್ದೇನೆ ಎಂದು ಮನು ಅವರು ಹೇಳಿದ್ದರು.​

ಪ್ಯಾರಿಸ್​ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಮನು ಭಾಕರ್​ ಪಾತ್ರರಾಗಿದ್ದರು. ಜತೆಗೆ 12 ವರ್ಷಗಳ ಬಳಿಕ ಒಲಿಂಪಿಕ್​ ಶೂಟಿಂಗ್​ನಲ್ಲಿ ದೇಶಕ್ಕೆ ಪದಕ ಗೆದ್ದ ಸಾಧನೆ ಮಾಡಿದ್ದರು.

ಇದನ್ನೂ ಓದಿ Manu Bhaker: 3 ತಿಂಗಳ ರಜೆಯಲ್ಲಿ ಭರತನಾಟ್ಯ, ಕುದುರೆ ಸವಾರಿ, ಸ್ಕೇಟಿಂಗ್ ಕಲಿಯಲಿದ್ದಾರೆ ಮನು ಭಾಕರ್

ಭಾಕರ್(Manu Bhaker)​ ಅವರ ಜಾಹೀರಾತು ಮೌಲ್ಯದಲ್ಲಿ ಇದೀಗ ಭಾರೀ ಏರಿಕೆ ಕಂಡಿದೆ. ಮನು ಅವರ ಬ್ರ್ಯಾಂಡ್​ ಮೌಲ್ಯ ಈಗ 1.5 ರೂ. ಆಗಿದೆ. ಅವರು ಪ್ರತಿ ಡಿಜಿಟಲ್​ ಜಾಹೀರಾತಿಗೂ 30 ಲಕ್ಷ ರೂ. ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗಿದೆ. ಪ್ರಮುಖವಾಗಿ ತಂಪು ಪಾನೀಯ, ಸ್ಕಿನ್​ ಕೇರ್​, ನ್ಯೂಟ್ರೀಷಿಯನ್​ ಕಂಪನಿಗಳು ಮನು ಅವರನ್ನು ಸಂಪರ್ಕಿಸಿವೆ ಎಂದು ತಿಳಿದುಬಂದಿದೆ. ಕೆಲ ದಿನಗಳ ಹಿಂದೆ 40 ಕಂಪನಿಗಳು(40 brands chasing Manu Bhaker) ಮನು ಅವರನ್ನು ಸಂಪರ್ಕಿಸಿದ್ದವು ಎಂದು ವರದಿಯಾಗಿತ್ತು.

ಭಾರತ ತಂಡದ ಸ್ಟಾರ್​ ಕ್ರಿಕೆಟಿಗರು ಜಾಹೀರಾತು ಒಪ್ಪಂದಗಳಿಗೆ ವಾರ್ಷಿಕ 3 ರಿಂದ 6 ಕೋಟಿ ರೂ. ಪಡೆಯುತ್ತಾರೆ. ಬ್ಯಾಡ್ಮಿಂಟನ್​ ಆಟಗಾರ್ತಿ ಪಿ,ವಿ ಸಿಂಧು 2022ರಲ್ಲಿ 2.21 ಕೋಟಿ ರೂ. ಮೊತ್ತದ ಒಪ್ಪಂದ ಪಡೆದಿದ್ದೇ ಭಾರತದಲ್ಲಿ ಕ್ರಿಕೆಟಿಗರ ಹೊರತಾಗಿ ಇತರ ಕ್ರೀಡಾಪಟುಗಳು ಪಡೆದ ಇದುವರೆಗಿನ ಗರಿಷ್ಠ ಮೊತ್ತವಾಗಿದೆ. ಒಲಿಂಪಿಕ್ಸ್​ ಪದಕ ಗೆಲ್ಲುವ ಮೊದಲು ಮನು ಪ್ರತಿ ಒಪ್ಪಂದವನ್ನು 20-25 ಲಕ್ಷ ರೂ.ಗೆ ಮಾಡಿಕೊಳ್ಳುತ್ತಿದ್ದರು. ಸದ್ಯ ಮನು ಪಾಮ್ಯಾಕ್ಸ್​ ಆಕ್ಟಿವ್​ವೇರ್​ಗೆ ಮಾತ್ರ ಪ್ರಚಾರ ರಾಯಭಾರಿಯಾಗಿದ್ದಾರೆ.

Continue Reading

Latest

Viral Video: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಬಿದ್ದ; ಹೆಡ್ ಕಾನ್‌ಸ್ಟೇಬಲ್‌ ಹೀರೋನಂತೆ ಜೀವ ರಕ್ಷಿಸಿದ!

ಪ್ರಯಾಣಿಕನೊಬ್ಬ (Viral Video) ಚಲಿಸುತ್ತಿದ್ದ ರೈಲನ್ನು ಹತ್ತುವ ಪ್ರಯತ್ನದಲ್ಲಿ ಪ್ಲಾಟ್‌ಪಾರ್ಮ್‌ ಮತ್ತು ರೈಲಿನ ನಡುವೆ ಬಿದ್ದಿದ್ದಾನೆ. ಇನ್ನೇನು ಆತ ರೈಲಿನ ಚಕ್ರಕ್ಕೆ ಸಿಲುಕುವ ವೇಳೆ ಇದನ್ನು ನೋಡುತ್ತಿದ್ದ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್‌) ಅಧಿಕಾರಿಯೊಬ್ಬರು ಆ ವ್ಯಕ್ತಿಯ ಕಡೆಗೆ ಓಡಿ ಹೊರಗೆಳೆದಿದ್ದಾರೆ. ಹೆಡ್ ಕಾನ್‌ಸ್ಟೇಬಲ್‌ ತಕ್ಷಣದ ಆಲೋಚನೆಯು ಆ ವ್ಯಕ್ತಿಯ ಜೀವವನ್ನು ಉಳಿಸಿತು. ಈ ಘಟನೆ ಪ್ಲಾಟ್‌ಫಾರ್ಮ್‌ನಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

VISTARANEWS.COM


on

Viral Video
Koo


ಮಂಗಳೂರು: ಪ್ರಯಾಣಿಕರು ಬರುವುದು ಸ್ವಲ್ಪ ತಡವಾದಾಗ ಅವರು ಗಡಿಬಿಡಿಯಲ್ಲಿ ಮುಂದಿನ ಅಪಾಯವನ್ನು ಗಮನಕ್ಕೆ ತೆಗೆದುಕೊಳ್ಳದೇ ಚಲಿಸುತ್ತಿದ್ದ ರೈಲನ್ನೇ ಕೆಲವೊಮ್ಮೆ ಹತ್ತಿ ಬಿಡುತ್ತಾರೆ. ಆದರೆ ಇದು ತುಂಬಾ ಅಪಾಯಕಾರಿ. ಇದರಿಂದ ಜೀವ ಕಳೆದುಕೊಳ್ಳುವುದು ಮಾತ್ರವಲ್ಲ ತಮ್ಮ ದೇಹದ ಅಂಗಗಳನ್ನು ಕಳೆದುಕೊಂಡವರು ಹಲವರಿದ್ದಾರೆ. ಇದೀಗ ಅಂತಹದೊಂದು ಘಟನೆ ಮಂಗಳೂರು ಜಂಕ್ಷನ್ ನಿಲ್ದಾಣದ ಪ್ಲಾಟ್‍ಫಾರ್ಮ್ ನಂ.1ರಲ್ಲಿ ನಡೆದಿದ್ದು, ಆದರೆ ಹೆಡ್ ಕಾನ್ಸ್ಟೇಬಲ್ ಅವರ ತಕ್ಷಣದ ಕ್ರಮದಿಂದ ಆತ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ವಿಡಿಯೊದಲ್ಲಿ ಪ್ರಯಾಣಿಕನೊಬ್ಬ ತನ್ನ ಬೆನ್ನಿನ ಮೇಲೆ ಟೂರಿಸ್ಟ್ ಬ್ಯಾಗ್ ಹಿಡಿದುಕೊಂಡು ಚಲಿಸುತ್ತಿದ್ದ ರೈಲನ್ನು ಹತ್ತಲು ಪ್ರಯತ್ನಿಸಿದ್ದಾನೆ. ಚಲಿಸುವ ರೈಲನ್ನು ಹತ್ತುವ ಪ್ರಯತ್ನದಲ್ಲಿ, ಆ ವ್ಯಕ್ತಿ ಪ್ಲಾಟ್‍ಫಾರ್ಮ್‍ ಮತ್ತು ರೈಲಿನ ನಡುವೆ ಬಿದ್ದಿದ್ದಾನೆ. ಇನ್ನೇನು ಆತ ರೈಲಿನ ಚಕ್ರಕ್ಕೆ ಸಿಲುಕುವ ವೇಳೆ ಇದನ್ನು ನೋಡುತ್ತಿದ್ದ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್‌) ಅಧಿಕಾರಿಯೊಬ್ಬರು ಅವರ ಕಡೆಗೆ ಓಡಿ ಅವರನ್ನು ಹೊರಗೆಳೆದರು. ಹೆಡ್ ಕಾನ್ಸ್ಟೇಬಲ್‍ನ ತಕ್ಷಣದ ಆಲೋಚನೆಯು ಆ ವ್ಯಕ್ತಿಯ ಜೀವವನ್ನು ಉಳಿಸಿತು. ಈ ಘಟನೆ ಪ್ಲಾಟ್‍ಫಾರ್ಮ್‍ನಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ವರದಿ ಪ್ರಕಾರ ಈ ಘಟನೆ 11:35 ಕ್ಕೆ ಸಂಭವಿಸಿದ್ದು, ಚಲಿಸುವ ರೈಲನ್ನು ಹತ್ತಲು ಪ್ರಯತ್ನಿಸುತ್ತಿದ್ದ ವ್ಯಕ್ತಿ ಹೆಸರು ಸಸಾಂಗ್ ಎಂಬುದಾಗಿ ತಿಳಿದುಬಂದಿದೆ. ಆ ವೇಳೆ ಈತ ತನ್ನ ಸಮತೋಲನವನ್ನು ಕಳೆದುಕೊಂಡು ರೈಲು ಮತ್ತು ಪ್ಲಾಟ್‍ಫಾರ್ಮ್ ನಡುವೆ ಬಿದ್ದಿದ್ದಾನೆ. ಆ ಸಮಯದಲ್ಲಿ ಕರ್ತವ್ಯದಲ್ಲಿದ್ದ ಹೆಡ್ ಕಾನ್ಸ್ಟೇಬಲ್‍ ಎಂ ರಾಘವನ್ ತಕ್ಷಣ ಅವರನ್ನು ಮೇಲಕ್ಕೆ ಎತ್ತಿದ್ದಾರೆ.

ಇದನ್ನೂ ಓದಿ:ಮಗನನ್ನು ಕೊಲ್ಲಲು ಕತ್ತಿ ಬೀಸಿದ ದುಷ್ಕರ್ಮಿಗಳನ್ನು ಕಲ್ಲೆಸೆದು ಓಡಿಸಿದ ತಾಯಿ! ವಿಡಿಯೊ ನೋಡಿ

ಮಂಗಳೂರು ಜಂಕ್ಷನ್‍ನಲ್ಲಿ ಬೀಡುಬಿಟ್ಟಿರುವ ರೈಲ್ವೆ ಸಂರಕ್ಷಣಾ ಪಡೆಯ ಸದಸ್ಯ ಎಂ. ರಾಘವನ್ ಅವರ ಈ ಜೀವ ಉಳಿಸುವ ಕಾರ್ಯವು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ರೈಲ್ವೆ ಸಿಬ್ಬಂದಿ ವಹಿಸುವ ನಿರ್ಣಾಯಕ ಪಾತ್ರವನ್ನು ನೆನಪಿಸುತ್ತದೆ. ಹಾಗೇ ಹೆಡ್ ಕಾನ್ಸ್ಟೇಬಲ್‍ ಕಾರ್ಯಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Continue Reading

ಕ್ರೀಡೆ

Rishabh Pant: ‘ಕಬಾಲಿ ಡಾ’, ‘ನೆರಪ್ಪು ಡಾ’; ತಲೈವಾ ರಜನಿಕಾಂತ್​ಗೆ ಸಡ್ಡು ಹೊಡೆದ ರಿಷಭ್​ ಪಂತ್​

Rishabh Pant: ರಿಷಭ್​ ಪಂತ್​ ಅವರು ರಜನಿಕಾಂತ್ ಶೈಲಿಯಲ್ಲೇ ಫೋಟೊ ಶೂಟ್​ ಮಾಡಿಸಿದನ್ನು ನೋಡುವಾಗ ಪಂತ್​ ಮುಂದಿನ ಆವೃತ್ತಿಯಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಪರ ಆಡುವುದು ಬಹುತೇಕ ಖಚಿತ ಎನ್ನುವ ಸುಳಿವು ಬಿಟ್ಟುಕೊಟ್ಟಂತಿದೆ

VISTARANEWS.COM


on

Rishabh Pant
Koo

ನವದೆಹಲಿ: ಟೀಮ್​ ಇಂಡಿಯಾದ ಸ್ಟಾರ್​ ಕ್ರಿಕೆಟಿಗ ರಿಷಭ್​ ಪಂತ್​(Rishabh Pant)​ ಅವರು ‘ತಲೈವಾ’ ಖ್ಯಾತಿಯ ಸ್ಟಾರ್​ ನಟ, ರಜನಿಕಾಂತ್(Star Actor Rajinikanth) ಅವರ ಶೈಲಿಯಲ್ಲೇ ಫೋಟೊ ಶೂಟ್​ ಮಾಡಿಸಿಕೊಂಡಿದ್ದಾರೆ. 2016ರಲ್ಲಿ ತೆರೆ ಕಂಡ ಕಬಾಲಿ ಸಿನಿಮಾದಲ್ಲಿ ರಜನಿಕಾಂತ್ ಅವರು ಸೋಫಾದ ರೀತಿಯ ಕುರ್ಚಿಯೊಂದರಲ್ಲಿ ಕುಳಿತ ಶೈಲಿಯಲ್ಲೇ ಪಂತ್​ ಕೂಡ ಕುಳಿತು ಫೋಟೊ(Thalaiva Look Rishabh Pant) ತೆಗೆಸಿಕೊಂಡಿದ್ದಾರೆ. ಈ ಫೋಟೊವನ್ನು ತಮ್ಮ ಇನ್​ಸ್ಟಾಗ್ರಾಮ್​ ಮತ್ತು ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿರುವ ಪಂತ್​ ‘ತಲೈವಾ’ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಫೋಟೊ ವೈರಲ್​ ಆಗುತ್ತಿದೆ.

ರಿಷಭ್​ ಪಂತ್​ ಅವರು ರಜನಿಕಾಂತ್ ಶೈಲಿಯಲ್ಲೇ ಫೋಟೊ ಶೂಟ್​ ಮಾಡಿಸಿದನ್ನು ನೋಡುವಾಗ ಪಂತ್​ ಮುಂದಿನ ಆವೃತ್ತಿಯಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಪರ ಆಡುವುದು ಬಹುತೇಕ ಖಚಿತ ಎನ್ನುವ ಸುಳಿವು ಬಿಟ್ಟುಕೊಟ್ಟಂತಿದೆ. ಕೆಲವು ದಿನಗಳ ಹಿಂದೆಯೇ ಪಂತ್​ ಡೆಲ್ಲಿ ತಂಡದ ಪರ ರಿಟೈನ್ ಆಸಕ್ತಿ ಹೊಂದಿಲ್ಲ ಅವರು ಚೆನ್ನೈ ತಂಡ ಸೇರಲಿದ್ದಾರೆ ಎನ್ನಲಾಗಿತ್ತು. ಇದೀಗ ತಲೈವಾ ಎಂದು ರಜನಿಕಾಂತ್ ಶೈಲಿಯಲ್ಲೇ ಫೋಟೊ ತೆಗೆಸಿಕೊಂಡಿರುವುದನ್ನು ನೋಡುವಾಗ ಈ ವರದಿ ಸತ್ಯವಾದಂತೆ ತೋರುತ್ತಿದೆ. ಧೋನಿ ಕೂಡ 2016ರಲ್ಲಿ ರಜನಿಕಾಂತ್ ಶೈಲಿಯಲ್ಲೇ ಫೋಟೊ ಶೂಟ್​ ಮಾಡಿಸಿದ್ದರು.

ಮಹೇಂದ್ರ ಸಿಂಗ್​ ಧೋನಿ ಮುಂದಿನ ವರ್ಷ ಐಪಿಎಲ್​ ಆಡುವುದು ಖಚಿತತೆ ಇಲ್ಲ. ಇಂಪ್ಯಾಕ್ಟ್​ ನಿಯಮ ಇದ್ದರೆ ಆಡುವುದಾಗಿ ಫ್ರಾಂಚೈಸಿ ಮೂಲಗಳು ಈಗಾಗಲೇ ಮಾಹಿತಿ ನೀಡಿದೆ. ಈ ಬಾರಿಯೇ ಧೋನಿ ನಿವೃತ್ತಿಯಾಗಬೇಕಿತ್ತು. ಆದರೆ ಅವರು ಇನ್ನೂ ನಿವೃತ್ತಿ ಪ್ರಕಟಿಸಿಲ್ಲ. ತಂಡದಲ್ಲಿ ಸೂಕ್ತ ವಿಕೆಟ್​ ಕೀಪರ್​ ಇಲ್ಲದ ಕಾರಣ ಧೋನಿ ತಮ್ಮ ಕಾಲು ನೋವಿನ ಮಧ್ಯೆಯೂ ಸಂಪೂರ್ಣವಾಗಿ ಕೀಪಿಂಗ್​ ನಡೆಸಿದ್ದರು. ಧೋನಿ ಸ್ಥಾನಕ್ಕೆ ಪಂತ್​ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯೊಂದು ಕಂಡುಬಂದಿದೆ.

ಮಹೇಂದ್ರ ಸಿಂಗ್​ ಧೋನಿ ಮನೆಯ ಯಾವುದೇ ವಿಶೇಷ ಕಾರ್ಯಕ್ರಮದಲ್ಲೂ, ರಿಷಭ್​ ಪಂತ್​ ಕಾಣಿಸಿಕೊಳ್ಳುವುದು ಸರ್ವೇ ಸಾಮಾನ್ಯ. ಅಣ್ಣನ ಸ್ಥಾನದಲ್ಲಿ ನಿಂತು ಧೋನಿ ಅವರು ಪಂತ್​ಗೆ ಸಲಹೆ ನೀಡುತ್ತಾರೆ. ಪಂತ್​ ಕೂಡ ಧೋನಿ ಪರಿವಾರದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಧೋನಿಯೇ ಪಂತ್​ ಅವರನ್ನು ಸಿಎಸ್​ಕೆ ತಂಡಕ್ಕೆ ಆಹ್ವಾನಿಸಬಹುದು. ಪಂತ್​ ಚೆನ್ನೈ ಸೇರಿದರೆ ಕೀಪಿಂಗ್​ ನಡೆಸಬಹುದು. ಧೋನಿ ಇಂಪ್ಯಾಕ್ಟ್​ ಆಟಗಾರನಾಗಿ ಬ್ಯಾಟಿಂಗ್​ ಮಾತ್ರ ನಡೆಸುವ ಸಾಧ್ಯತೆ ಇದೆ.

ಇದನ್ನೂ ಓದಿ Rishabh Pant: ಕೀಪಿಂಗ್​ ಬಿಟ್ಟು ಬೌಲಿಂಗ್​ ನಡೆಸಿದ ರಿಷಭ್​ ಪಂತ್​; ವಿಡಿಯೊ ವೈರಲ್​

ಬೌಲಿಂಗ್​ ನಡೆಸಿದ್ದ ಪಂತ್​


ಕೆಲ ದಿನಗಳ ಹಿಂದಷ್ಟೇ ರಿಷಭ್​ ಪಂತ್​ ದೆಹಲಿ ಪ್ರೀಮಿಯರ್ ಲೀಗ್ 2024 ರ(Delhi Premier League T20 2024) ಉದ್ಘಾಟನಾ ಆವೃತ್ತಿಯ ಪಂದ್ಯದಲ್ಲಿ ಬೌಲಿಂಗ್(rishabh pant bowling)​ ನಡೆಸುವ ಮೂಲಕ ಗಮನಸೆಳೆದಿದ್ದರು. ಪಂತ್ ಪಂದ್ಯದ ಅಂತಿಮ ಓವರ್​ನಲ್ಲಿ ಎದುರಾಳಿ ಸೌತ್​ ಡೆಲ್ಲಿ ತಂಡಕ್ಕೆ 6 ಎಸೆತಗಳಲ್ಲಿ ಗೆಲುವಿಗೆ ಒಂದು ರನ್​ ಬೇಕಿದ್ದಾಗ ಸ್ಪಿನ್​ ಬೌಲಿಂಗ್​ ನಡೆಸಿದ್ದರು. ಬೌಲಿಂಗ್​ ನಡೆಸಿದ್ದ ವಿಡಿಯೊ ವೈರಲ್ ಆಗಿತ್ತು.

Continue Reading
Advertisement
puttur stabbing case
ಕ್ರೈಂ9 mins ago

Stabbing Case: ಪುತ್ತೂರು ನಗರ ಉದ್ವಿಗ್ನತೆಗೆ ಕಾರಣವಾದ ವಿದ್ಯಾರ್ಥಿನಿಗೆ ಬ್ಲೇಡ್‌ ಇರಿತ ಪ್ರಕರಣ; ನಿಜಕ್ಕೂ ನಡೆದದ್ದೇನು?

Cincinnati Open
ಕ್ರೀಡೆ39 mins ago

ATP Cincinnati Open: ಚೊಚ್ಚಲ ಪ್ರಶಸ್ತಿ ಗೆದ್ದ ಜಾನಿಕ್‌ ಸಿನ್ನರ್‌, ಅರಿನಾ ಸಬಲೆಂಕಾ

students death
ಕ್ರೈಂ47 mins ago

Students Death: ಇಬ್ಬರು ಮಕ್ಕಳ ಜೀವ ಕಸಿದ ಮೊಬೈಲ್;‌ ತಂದೆ- ತಾಯಿ ಫೋನ್ ಕೊಡದಿದ್ದುದಕ್ಕೆ ಆತ್ಮಹತ್ಯೆ

Agritech India 2024
ಬೆಂಗಳೂರು1 hour ago

Agritech India 2024: ಬೆಂಗಳೂರಿನಲ್ಲಿ ʼಅಗ್ರಿಟೆಕ್ ಇಂಡಿಯಾ 2024ʼಕ್ಕೆ ಆ. 22ರಂದು ಚಾಲನೆ

ajmer pocso case
ಕ್ರೈಂ1 hour ago

Ajmer Pocso Case: 32 ವರ್ಷ ಹಿಂದಿನ ಅಜ್ಮೀರ್‌ ಪೋಕ್ಸೋ ಕೇಸ್‌ನಲ್ಲಿ 6 ಮಂದಿಗೆ ಜೀವಾವಧಿ ಶಿಕ್ಷೆ

Imran Khan
ವಿದೇಶ1 hour ago

Imran Khan: ಆಕ್ಸ್‌ಫರ್ಡ್ ವಿವಿ ಕುಲಪತಿಯಾಗಲು ಅರ್ಜಿ ಸಲ್ಲಿಸಿದ ಪಾಕ್‌ ಮಾಜಿ ಪ್ರಧಾನಿ!

Reliance Jio
ಕರ್ನಾಟಕ2 hours ago

Reliance Jio: ಜಿಯೋ ಟಿವಿ ಪ್ಲಸ್ 2 ಇನ್ 1 ಆಫರ್; ಒಂದೇ ಸಂಪರ್ಕದಲ್ಲಿ ನೋಡಿ ಎರಡು ಟಿವಿ!

Kannada New Movie
ಕರ್ನಾಟಕ2 hours ago

Kannada New Movie: ಟೀಸರ್‌ನಲ್ಲೇ ಕುತೂಹಲ ಮೂಡಿಸಿದೆ ರಿಷಿ ಅಭಿನಯದ ‘ರುದ್ರ ಗರುಡ ಪುರಾಣ’ ಚಿತ್ರ

EV charging
ಕರ್ನಾಟಕ2 hours ago

EV Charging: ಕರ್ನಾಟಕವೇ ಕಿಂಗ್;‌ ಅತಿ ಹೆಚ್ಚು ಇವಿ ಚಾರ್ಜಿಂಗ್ ಸ್ಟೇಷನ್ ಹೊಂದಿರುವ ರಾಜ್ಯ!

What is Lateral Entry?
ದೇಶ2 hours ago

What is Lateral Entry?: ಏನಿದು ಲ್ಯಾಟರಲ್ ಎಂಟ್ರಿ ವಿವಾದ? ಕಾಂಗ್ರೆಸ್‌ ಆರೋಪವೇನು? ಬಿಜೆಪಿಯ ವಾದವೇನು?

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌