Kamala Harris: ಕಮಲಾ ಹ್ಯಾರಿಸ್ ಪಕ್ಷದ ಭಾರಿ ಕಾರ್ಯಕ್ರಮದಲ್ಲಿ ಅಮೆರಿಕನ್ನರ ಮನ ಗೆದ್ದ ಉಡುಪಿಯ ಪುರೋಹಿತರ ಸಂಸ್ಕೃತ ಪ್ರಾರ್ಥನೆ! - Vistara News

ಪ್ರಮುಖ ಸುದ್ದಿ

Kamala Harris: ಕಮಲಾ ಹ್ಯಾರಿಸ್ ಪಕ್ಷದ ಭಾರಿ ಕಾರ್ಯಕ್ರಮದಲ್ಲಿ ಅಮೆರಿಕನ್ನರ ಮನ ಗೆದ್ದ ಉಡುಪಿಯ ಪುರೋಹಿತರ ಸಂಸ್ಕೃತ ಪ್ರಾರ್ಥನೆ!

Kamala Harris: ಡೆಮೊಕ್ರಾಟಿಕ್‌ ಪಕ್ಷದ ಭಾರಿ ಸಭೆಯಲ್ಲಿ ಸಂಸ್ಕೃತ ಪ್ರಾರ್ಥನೆ ಮಾಡಿದ ರಾಕೇಶ್ ಭಟ್ ಮೂಲತಃ ಕರ್ನಾಟಕದವರು. ಇವರು ತಮ್ಮ ಗುರುಗಳಾದ ಉಡುಪಿ ಅಷ್ಟಮಠದ ಪೇಜಾವರ ಸ್ವಾಮೀಜಿಯವರ ಬಳಿ ಋಗ್ವೇದ ಮತ್ತು ತಂತ್ರಸಾರ (ಮಾಧ್ವ) ಆಗಮದಲ್ಲಿ ತರಬೇತಿ ಪಡೆದಿದ್ದಾರೆ.

VISTARANEWS.COM


on

rakesh bhat kamala harris
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಿಕಾಗೋ: ಅಮೆರಿಕದ ಚಿಕಾಗೋದಲ್ಲಿ ಕಮಲಾ ಹ್ಯಾರಿಸ್‌ (Kamala Harris) ಅವರ ಡೆಮಾಕ್ರಟಿಕ್ ಪಕ್ಷದ ನ್ಯಾಷನಲ್ ಕನ್ವೆನ್ಶನ್‌ನ (Democratic National convention) 3ನೇ ದಿನದಂದು ಕರ್ನಾಟಕದ ಉಡುಪಿ ಮೂಲದ (Udupi Priest) ಅರ್ಚಕರೊಬ್ಬರು ಸಂಸ್ಕೃತ ಪ್ರಾರ್ಥನೆಯ (Sanskrit Prayer) ಮೂಲಕ ಕಲಾಪವನ್ನು ಪ್ರಾರಂಭಿಸಿದರು. ವೈದಿಕ ಪ್ರಾರ್ಥನೆ (Vedic Prayer) ಹಾಗೂ ಅದರ ಅರ್ಥವನ್ನು ಅವರು ವಿವರಿಸಿದ ಬಳಿಕ, ಸಭಾಂಗಣದಾದ್ಯಂತ “ಓಂ ಶಾಂತಿ ಶಾಂತಿ” ಘೋಷಣೆಗಳು ಪ್ರತಿಧ್ವನಿಸಿದವು.

ಮೇರಿಲ್ಯಾಂಡ್‌ನ ಶ್ರೀ ಶಿವ ವಿಷ್ಣು ದೇವಸ್ಥಾನದ ಅರ್ಚಕ ರಾಕೇಶ್ ಭಟ್ (Rakesh Bhat) ಅವರು ಅಖಂಡ ದೇಶಕ್ಕಾಗಿ ದೇವರ ಆಶೀರ್ವಾದ ಕೋರಿ ವೈದಿಕ ಪ್ರಾರ್ಥನೆ ಮಾಡಿದರು. ʼʼನಮ್ಮಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ರಾಷ್ಟ್ರದ ವಿಷಯಕ್ಕೆ ಬಂದಾಗ ನಾವು ಒಗ್ಗಟ್ಟಾಗಿರಬೇಕುʼʼ ಎಂದು ಭಟ್ ಹೇಳಿದರು. “ನಾವು ಒಗ್ಗಟ್ಟಿನಿಂದ ಇರಬೇಕು. ನಮ್ಮ ಮನಸ್ಸು ಒಟ್ಟಿಗೆ ಯೋಚಿಸಲಿ. ನಮ್ಮ ಹೃದಯಗಳು ಒಂದಾಗಿ ಮಿಡಿಯಲಿ. ಎಲ್ಲರೂ ಸಮಾಜದ ಒಳಿತಿಗಾಗಿ ದುಡಿಯಲಿ. ಇದು ನಮ್ಮನ್ನು ಶಕ್ತಿಯುತರನ್ನಾಗಿ ಮಾಡಲಿ. ನಾವು ಒಂದಾಗಬಹುದು ಮತ್ತು ನಮ್ಮ ರಾಷ್ಟ್ರದ ಬಗ್ಗೆ ಹೆಮ್ಮೆಪಡಬಹುದು” ಎಂದು ರಾಕೇಶ್‌ ಭಟ್‌ ಹೇಳಿದರು.

ಗುರುವಾರ ಕಮಲಾ ಹ್ಯಾರಿಸ್ ಅವರ ಪರ ಪಕ್ಷದ ಪ್ರಚಾರದ ಭಾರಿ ಸಭೆ ನಡೆಯಿತು. ಅಮೆರಿಕದ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿರುವ ಕಮಲಾ ಹ್ಯಾರಿಸ್‌, ಭಾರತೀಯ ಮೂಲದವರಾಗಿದ್ದಾರೆ. ಪ್ರಾರ್ಥನೆ ಮಾಡಿದ ಭಟ್, ʼವಸುಧೈವ ಕುಟುಂಬಕಂ’ (ಇಡೀ ಜಗತ್ತು ಒಂದೇ ಕುಟುಂಬ) ಎಂಬ ವೈದಿಕ ಪರಿಕಲ್ಪನೆಯಲ್ಲಿ ನಂಬಿಕೆಯಿರುವ ನಾಯಕನನ್ನು ಆಯ್ಕೆ ಮಾಡುವಂತೆ ಅಮೆರಿಕವನ್ನು ಒತ್ತಾಯಿಸಿದರು.

“ನಾವು ಒಂದು ಸಾರ್ವತ್ರಿಕ ಕುಟುಂಬ. ಸತ್ಯವು ನಮ್ಮ ಅಡಿಪಾಯ ಮತ್ತು ಅದು ಯಾವಾಗಲೂ ಮೇಲುಗೈ ಸಾಧಿಸುತ್ತದೆ. ನಮ್ಮನ್ನು ಅವಾಸ್ತವದಿಂದ ವಾಸ್ತವಕ್ಕೆ, ಕತ್ತಲೆಯಿಂದ ಬೆಳಕಿನೆಡೆಗೆ ಮತ್ತು ಸಾವಿನಿಂದ ಅಮರತ್ವಕ್ಕೆ ಕರೆದೊಯ್ಯುತ್ತದೆ. ಓಂ ಶಾಂತಿ ಶಾಂತಿ ಶಾಂತಿ” ಎಂದು ಭಟ್ ಸಂಸ್ಕೃತದ ಶ್ಲೋಕವನ್ನು ನುಡಿದು ಅದರ ಅರ್ಥವನ್ನು ವಿವರಿಸಿದರು.

ರಾಕೇಶ್ ಭಟ್ ಮೂಲತಃ ಕರ್ನಾಟಕದವರು. ಇವರು ತಮ್ಮ ಗುರುಗಳಾದ ಉಡುಪಿ ಅಷ್ಟಮಠದ ಪೇಜಾವರ ಸ್ವಾಮೀಜಿಯವರ ಬಳಿ ಋಗ್ವೇದ ಮತ್ತು ತಂತ್ರಸಾರ (ಮಾಧ್ವ) ಆಗಮದಲ್ಲಿ ತರಬೇತಿ ಪಡೆದಿದ್ದಾರೆ. ಹಿಂದಿ, ಇಂಗ್ಲಿಷ್, ಸಂಸ್ಕೃತ, ತಮಿಳು, ತೆಲುಗು, ಕನ್ನಡ ಮತ್ತು ತುಳು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲರು. ಸಂಸ್ಕೃತ, ಇಂಗ್ಲಿಷ್ ಮತ್ತು ಕನ್ನಡ ಈ ಮೂರು ಭಾಷೆಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದಾರೆ. ಇವರು ಬೆಂಗಳೂರಿನ ಒಸ್ಟೀನ್ ಕಾಲೇಜಿನಲ್ಲಿ ಇಂಗ್ಲಿಷ್ ಮತ್ತು ಕನ್ನಡ ಪದವಿಗಳನ್ನು ಪಡೆದವರು. ಜಯಚಾಮರಾಜೇಂದ್ರ ಕಾಲೇಜಿನಲ್ಲಿ ಸಂಸ್ಕೃತ ಪದವಿ ಪಡೆದರು. ಉಡುಪಿ ಅಷ್ಟಮಠದಲ್ಲಿ ಅಲ್ಪಾವಧಿ ಸೇವೆ ಸಲ್ಲಿಸಿದ ನಂತರ ಬದರಿನಾಥ, ಸೇಲಂ ರಾಘವೇಂದ್ರ ಸ್ವಾಮಿ ದೇವಾಲಯಗಳಲ್ಲಿ ಸೇವೆ ಸಲ್ಲಿಸಿ ಬಳಿಕ 2013 ಜುಲೈಯಲ್ಲಿ ಅಮೆರಿಕಕ್ಕೆ ತೆರಳಿ ಮೇರಿಲ್ಯಾಂಡ್‌ನಲ್ಲಿ ಶ್ರೀ ವಿಷ್ಣು ದೇವಸ್ಥಾನದ ಅರ್ಚಕರಾಗಿದ್ದಾರೆ.

ಡೆಮಾಕ್ರಟಿಕ್ ಪಾರ್ಟಿಯ ಡೆಪ್ಯುಟಿ ನ್ಯಾಷನಲ್ ಫೈನಾನ್ಸ್ ಚೇರ್ ಅಜಯ್ ಭುಟೋರಿಯಾ, “ಇಂದು ಡಿಎನ್‌ಸಿಯಲ್ಲಿ ರಾಕೇಶ್ ಭಟ್ ಅವರ ಹಿಂದೂ ಪ್ರಾರ್ಥನೆಯು ಮಹತ್ವದ ಕ್ಷಣವಾಗಿದೆ. ಇದು ಡೆಮಾಕ್ರಟಿಕ್ ಪಕ್ಷದ ಒಳಗೊಳ್ಳುವಿಕೆ ಮತ್ತು ವೈವಿಧ್ಯತೆಯ ಬದ್ಧತೆಯನ್ನು ಪ್ರದರ್ಶಿಸುತ್ತದೆ” ಎಂದರು. “ಭಾರತೀಯ ಅಮೆರಿಕನ್ ಸಮುದಾಯದ ಶ್ರೀಮಂತ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಪ್ರದಾಯಗಳನ್ನು ಇಂತಹ ಪ್ರಮುಖ ವೇದಿಕೆಯಲ್ಲಿ ಗೌರವಿಸುವುದು ಆತ್ಮೀಯ ಕ್ಷಣ. ಈ ಕ್ಷಣವು ಅಮೇರಿಕನ್ ಸಮಾಜದ ವಿನ್ಯಾಸದಲ್ಲಿ ನಮ್ಮ ಸಮುದಾಯದ ಬೆಳೆಯುತ್ತಿರುವ ಪ್ರಭಾವ ಮತ್ತು ಗುರುತಿಸುವಿಕೆಯನ್ನು ಪ್ರತಿಬಿಂಬಿಸುತ್ತದೆ” ಎಂದು ಭೂಟೋರಿಯಾ ಹೇಳಿದರು.

ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸುವ ಭರವಸೆಯೊಂದಿಗೆ ಡೆಮೋಕ್ರಾಟ್‌ ಪಕ್ಷದ 59 ವರ್ಷದ ಕಮಲಾ ಹ್ಯಾರಿಸ್‌ ಸ್ಪರ್ಧಿಸುತ್ತಿದ್ದಾರೆ. ಸ್ಪರ್ಧೆಯಲ್ಲಿ ಹ್ಯಾರಿಸ್ ಸ್ವಲ್ಪ ಮುಂದಿದ್ದಾರೆ ಎನ್ನಲಾಗುತ್ತಿದೆ. ಕೇವಲ ಒಂದು ತಿಂಗಳ ಹಿಂದೆ ಜೋ ಬೈಡೆನ್ ವಿರುದ್ಧ ಟ್ರಂಪ್‌ ಹಿಡಿತ ಸಾಧಿಸಿದ್ದರು.

ಇದನ್ನೂ ಓದಿ: Kamala Harris: ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಹೆಸರು ಅಂತಿಮ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Gold Rate Today: ಸುವರ್ಣಪ್ರಿಯರಿಗೆ ಸಿಹಿ ಸುದ್ದಿ; ಇಂದೂ ಚಿನ್ನದ ದರದಲ್ಲಿ ಇಳಿಕೆ

ಮಾರುಕಟ್ಟೆಯಲ್ಲಿ ಇಂದಿನ ಚಿನ್ನದ ದರ (Gold Rate Today) ಹಾಗೂ ಚಿನ್ನದಂತಹ ಅಮೂಲ್ಯ ವಸ್ತು ಹಾಗೂ ಹೂಡಿಕೆಗೆ ಸಂಬಂಧಿಸಿದ ವಸ್ತುವನ್ನು ಖರೀದಿಸುವ ಮೊದಲು ನೀವು ಪರಿಶೀಲಿಸಬೇಕಾದ ವಿಷಯಗಳು ಇಲ್ಲಿವೆ.

VISTARANEWS.COM


on

gold rate today
Koo

ಬೆಂಗಳೂರು: ಸತತವಾಗಿ ಏರಿಕೆಯಾಗಿದ್ದ ಚಿನ್ನದ ದರ ಕಳೆದ ಎರಡು ದಿನಗಳಿಂದ ಇಳಿಕೆ ಕಾಣುತ್ತಿದೆ (Gold Rate Today). ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 30 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 33 ಕಡಿಮೆಯಾಗಿದೆ.

ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,680 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 7,287 ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ ₹ 53,440 ಇದೆ. ಇನ್ನು 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹ 66,800 ಮತ್ತು ₹ 6,68,000 ದರದಲ್ಲಿ ಖರೀದಿಸಬಹುದು. 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ ₹ 58,296 ಇದೆ. 10 ಗ್ರಾಂ ಮತ್ತು 100 ಗ್ರಾಂನ 24 ಕ್ಯಾರಟ್‌ ಚಿನ್ನದ ಬೆಲೆ ₹ 72,870 ಮತ್ತು ₹ 7,28,700 ತಲುಪಿದೆ.

ನಗರ22 ಕ್ಯಾರಟ್ (1 ಗ್ರಾಂ)24 ಕ್ಯಾರಟ್ (1 ಗ್ರಾಂ)
ದಿಲ್ಲಿ₹ 6,695₹ 7,297
ಮುಂಬೈ₹ 6,680₹ 7,287
ಬೆಂಗಳೂರು₹ 6,680₹ 7,287
ಚೆನ್ನೈ₹ 6,680₹ 7,287

ಬೆಳ್ಳಿ ಧಾರಣೆ

ಇತ್ತ ಬೆಳ್ಳಿಯ ಬೆಲೆಯಲ್ಲಿ ಕೊಂಚ ಏರಿಕೆ ಕಂಡಿದೆ. ಬೆಳ್ಳಿ 1 ಗ್ರಾಂಗೆ ₹ 86 ಹಾಗೂ 8 ಗ್ರಾಂಗೆ ₹ 688 ಇದೆ. 10 ಗ್ರಾಂ ₹ 860 ಹಾಗೂ 1 ಕಿಲೋಗ್ರಾಂ ₹ 86,000 ಬೆಲೆ ಬಾಳುತ್ತದೆ.

ಮೊದಲ ಬಾರಿಗೆ ಚಿನ್ನದ ಆಭರಣವನ್ನು ಖರೀದಿಸುವಾಗ ಏನು ತಿಳಿದಿರಬೇಕು?

ನೀವು ಚಿನ್ನಕ್ಕಾಗಿ ಹಣವನ್ನು ಖರ್ಚು ಮಾಡಲು ಮುಂದಾಗುವ ಮೊದಲು ಅದರ ಬಗ್ಗೆ ಜ್ಞಾನವನ್ನು ಹೊಂದಿರುವುದು ಉತ್ತಮ. ಚಿನ್ನದಂತಹ ಅಮೂಲ್ಯ ವಸ್ತು ಹಾಗೂ ಹೂಡಿಕೆಗೆ ಸಂಬಂಧಿಸಿದ ವಸ್ತುವನ್ನು ಖರೀದಿಸುವ ಮೊದಲು ನೀವು ಪರಿಶೀಲಿಸಬೇಕಾದ ವಿಷಯಗಳು ಇಲ್ಲಿವೆ.

ಮೊದಲನೆಯದು ಶುದ್ಧತೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮಾರಾಟವಾಗುವ ಆಭರಣಗಳು 22 ಕ್ಯಾರೆಟ್ ಚಿನ್ನದ ಆಭರಣ. ಬೆಂಗಳೂರಿನಲ್ಲಿ ಆ ದಿನದ ಚಿನ್ನದ ದರ ಎಷ್ಟಿದೆ ಎಂಬುದನ್ನು ಮೊದಲು ಗಮನದಲ್ಲಿಟ್ಟುಕೊಳ್ಳಬೇಕು. ಬೆಂಗಳೂರಿನಲ್ಲಿ ಚಿನ್ನದ ದರಗಳು ಪ್ರತಿದಿನ ಬದಲಾಗುತ್ತಿರುತ್ತವೆ. ನಿಖರವಾದ ಮಾಹಿತಿ ನೀಡುವ ವೆಬ್‌ಸೈಟ್ ಅನ್ನು ಅವಲಂಬಿಸುವುದು ಉತ್ತಮ.

ನೀವು ಖರೀದಿಸುವ ಆಭರಣಗಳ ಮೇಲಿರುವ ಬಿಐಎಸ್ ಹಾಲ್‌ಮಾರ್ಕ್‌ ಅನ್ನು ಪರಿಶೀಲಿಸುವುದು ಬಹಳ ಮುಖ್ಯ. ಚಿನ್ನಾಭರಣ ಖರೀದಿಸುವಾಗ BIS ಹಾಲ್‌ಮಾರ್ಕ್ ಅನ್ನು ಪಡೆಯಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಭಾರತ ಸರ್ಕಾರವು ಚಿನ್ನವು ಅದರ ಮೇಲೆ ನಮೂದಿಸಲಾದ ಕ್ಯಾರಟ್‌ಗಳಷ್ಟೇ ಶುದ್ಧವಾಗಿದೆ ಎಂದು ಆ ಮೂಲಕ ಪ್ರಮಾಣೀಕರಿಸುತ್ತದೆ.

ಚಿನ್ನಾಭರಣಕ್ಕೆ ಮೇಕಿಂಗ್ ಚಾರ್ಜ್ ಮತ್ತು ವೇಸ್ಟೇಜ್ ಚಾರ್ಜ್ ಎಂದು ಇರುತ್ತದೆ. ಇದನ್ನು ಪ್ರತಿ ಆಭರಣ ವ್ಯಾಪಾರಿಯೂ ವಿಧಿಸುತ್ತಾರೆ. ನೀವು ಆಭರಣ ವ್ಯಾಪಾರಿಯನ್ನು ಈ ಬಗ್ಗೆ ಕೇಳಿ ಪರಿಶೀಲಿಸುವುದು ಉತ್ತಮ. ಎಲ್ಲಾ ಆಭರಣಗಳಿಗೆ ಮೇಕಿಂಗ್ ಅಥವಾ ವೇಸ್ಟೇಜ್ ಶುಲ್ಕಗಳು ಒಂದೇ ಆಗಿರುತ್ತವೆ ಎಂಬುದನ್ನು ಗಮನಿಸಿ. ಎಷ್ಟು ಶುಲ್ಕ ವಿಧಿಸಲಾಗಿದೆ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ.

ನೀವು ದುಬಾರಿ ವಹಿವಾಟು ಮಾಡುತ್ತಿರುವುದರಿಂದ ಚಿನ್ನಾಭರಣದ ಅಸಲಿತನ ಖಚಿತಪಡಿಸಿಕೊಳ್ಳುವುದು ಉತ್ತಮ. ಯಾಕೆಂದರೆ ನೀವು ಖರೀದಿಸುತ್ತಿರುವುದು ಬಹುಕಾಲ ಉಳಿಯುವ, ಹೂಡಿಕೆ ಎಂದು ಪರಿಗಣಿಸಬಹುದಾದ ವಸ್ತು. ಎಲ್ಲೇ ಆಗಲಿ ಚಿನ್ನ ಖರೀದಿಸುವ ಮುನ್ನ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು. ಕೆಲವು ದಶಕಗಳ ಹಿಂದೆ, ಚಿನ್ನವನ್ನು ಖರೀದಿಸುವಾಗ ಸುಲಭವಾಗಿ ಮೋಸ ಹೋಗಬಹುದಾಗಿತ್ತು. ಆದರೆ ಇಂದು ಹೆಚ್ಚಿನ ಚಿನ್ನವು ಹಾಲ್‌ಮಾರ್ಕ್‌ ಆಗಿದೆ. ಪ್ರತಿಷ್ಠಿತ ಅಂಗಡಿಗಳಲ್ಲಿ ಈ ಬಗ್ಗೆ ಹೆಚ್ಚಿನ ಎಚ್ಚರ ಇರುತ್ತದೆ.

ಇನನ್ನೂ ಓದಿ: Gold Rate Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ಇಂದಿನ ಬೆಲೆ ಚೆಕ್‌ ಮಾಡಿ

Continue Reading

ಪ್ರಮುಖ ಸುದ್ದಿ

DK Shivakumar: ಡಿಕೆ ಶಿವಕುಮಾರ್‌ಗೆ ಇಂದು ವಿಚಾರಣೆಗೆ ಹಾಜರಾಗಲು ಲೋಕಾಯುಕ್ತ ನೋಟೀಸ್

DK Shivakumar: ಸಿಬಿಐಗೆ ನೀಡಿದ್ದ ಅನುಮತಿ ವಾಪಸ್ಸು ಪಡೆದು ಲೋಕಾಯುಕ್ತ ತನಿಖೆಗೆ ರಾಜ್ಯ ಸರ್ಕಾರ ವಹಿಸಿದೆ. ಈ ಪ್ರಕರಣದಲ್ಲಿ ಇಂದು ವಿಚಾರಣೆಗೆ ಹಾಜರಾಗಲು ನೋಟೀಸ್ ನೀಡಲಾಗಿದೆ. ಇಂದು ಕ್ಯಾಬಿನೆಟ್‌ ಸಭೆಯಲ್ಲಿ ಡಿಸಿಎಂ ಭಾಗವಹಿಸಿದ್ದು, ಅದು ಮುಗಿದ ಬಳಿಕ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

VISTARANEWS.COM


on

DCM DK Shivakumar
Koo

ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ (DCM DK Shivakumar) ಅವರಿಗೆ ಇಂದು ವಿಚಾರಣೆಗೆ ಹಾಜರಾಗಲು ಲೋಕಾಯುಕ್ತ ಪೊಲೀಸರು (Lokayukta police) ನೋಟೀಸ್‌ (Notice) ನೀಡಿದ್ದಾರೆ. ಅಕ್ರಮ ಆಸ್ತಿ ಗಳಿಕೆ (disproportionate assets) ಪ್ರಕರಣದಲ್ಲಿ ಈ ನೋಟೀಸ್‌ ನೀಡಲಾಗಿದೆ.

ಈ ಪ್ರಕರಣದ ತನಿಖೆಯನ್ನು ಹಿಂದಿನ ಸರ್ಕಾರ ಸಿಬಿಐಗೆ ನೀಡಿತ್ತು. ಸಿಬಿಐಗೆ ನೀಡಿದ್ದ ಅನುಮತಿ ವಾಪಸ್ಸು ಪಡೆದು ಲೋಕಾಯುಕ್ತ ತನಿಖೆಗೆ ರಾಜ್ಯ ಸರ್ಕಾರ ವಹಿಸಿದೆ. ಈ ಪ್ರಕರಣದಲ್ಲಿ ಇಂದು ವಿಚಾರಣೆಗೆ ಹಾಜರಾಗಲು ನೋಟೀಸ್ ನೀಡಲಾಗಿದೆ. ಇಂದು ಕ್ಯಾಬಿನೆಟ್‌ ಸಭೆಯಲ್ಲಿ ಡಿಸಿಎಂ ಭಾಗವಹಿಸಿದ್ದು, ಅದು ಮುಗಿದ ಬಳಿಕ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.

ಇದೇ ವರ್ಷದ ಫೆಬ್ರವರಿಯಲ್ಲಿ ಡಿಕೆಶಿಯವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿದ್ದ ಈ ಹಿಂದಿನ ರಾಜ್ಯ ಸರ್ಕಾರದ ನಿರ್ಧಾರವನ್ನು ಸಿದ್ದರಾಮಯ್ಯನವರ ಸರ್ಕಾರ ಹಿಂಪಡೆದಿತ್ತು. ಸಿಬಿಐನಿಂದ ಹಿಂಪಡೆಯಲಾದ ಪ್ರಕರಣವನ್ನು ಲೋಕಾಯುಕ್ತಕ್ಕೆ ವಹಿಸಲಾಗಿತ್ತು. ಅದಾದ ನಂತರ, ಲೋಕಾಯುಕ್ತ ಸಂಸ್ಥೆಯು ಡಿಕೆಶಿ ವಿರುದ್ಧ ಎಫ್ಐಆರ್ ದಾಖಲಿಸಿತ್ತು. ಆ ಹಿನ್ನೆಲೆಯಲ್ಲಿ ದಾಖಲೆಗಳನ್ನು ಸಲ್ಲಿಸುವಂತೆಯೂ ಹಿಂದೆ ನೋಟಿಸ್ ನೀಡಲಾಗಿತ್ತು.

ಈ ಹಿಂದೆ, ರಾಜ್ಯ ಸರ್ಕಾರ ಡಿಕೆಶಿಯವರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿದ ಮೇಲೆ ಸಿಬಿಐ, ಡಿಕೆಶಿಯವರ ವಿರುದ್ಧ ಕೆಲವು ಆರೋಪಗಳನ್ನು ದಾಖಲಿಸಿತ್ತು. ಮೂಲಗಳ ಪ್ರಕಾರ, ಆ ಆರೋಪಪಟ್ಟಿಯಲ್ಲಿ, 2013ರಲ್ಲಿ ಡಿಕೆ ಶಿವಕುಮಾರ್ ಅವರ ಕುಟುಂಬ 33 ಕೋಟಿ ರೂ.ಗಳ ಆಸ್ತಿ ಹೊಂದಿತ್ತು. ಆದರೆ, ಆನಂತರದ ಐದು ವರ್ಷಗಳಲ್ಲಿ, ಅಂದರೆ 2018ರಲ್ಲಿ ಅವರ ಕುಟುಂಬದ ಆಸ್ತಿ 166.79 ಕೋಟಿ ರೂ. ಗಳಿಗೆ ಏರಿಕೆಯಾಗಿದೆ ಎಂದು ಹೇಳಲಾಗಿತ್ತು. ಅಲ್ಲದೆ, ಇದೇ ಅವಧಿಯಲ್ಲಿ 113.20 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ ಎಂಬ ಮತ್ತೊಂದು ಆರೋಪವನ್ನೂ ಮಾಡಲಾಗಿತ್ತು. ಅವರ ಆದಾಯಕ್ಕೆ, ಅವರು ಗಳಿಸಿರುವ ಆಸ್ತಿಗೆ ಹಾಗೂ ಅವರು ಮಾಡಿರುವ ವೆಚ್ಚಕ್ಕೆ ಹೋಲಿಸಿದರೆ ಅವರಿಗೆ ಅವರ ಆದಾಯಕ್ಕಿಂತ ಶೇ. 44.93ರಷ್ಟು ಹೆಚ್ಚು ಆಸ್ತಿಯಿದೆ ಎಂದು ತನ್ನ ಪ್ರಾಥಮಿಕ ವರದಿಯಲ್ಲಿ ಸಿಬಿಐ ಉಲ್ಲೇಖಿಸಿತ್ತು.

ಯಾರು ಬೇಕಾದರೂ ಬಯ್ಯಲಿ, ನೀರು ಬೆಲೆ ಏರಿಕೆ ಮಾಡೋನೇ ನಾನು: ಡಿಸಿಎಂ ಡಿಕೆ ಶಿವಕುಮಾರ್‌

ಬೆಂಗಳೂರು: ರಾಜಧಾನಿಯಲ್ಲಿ ಕುಡಿಯುವ ನೀರಿನ ದರ ಏರಿಕೆ ಮಾಡಲೇಬೇಕಿದೆ. ಜಲಮಂಡಳಿ ನಷ್ಟದಲ್ಲಿ ನಡೆಯುತ್ತಿದೆ. ಸಂಬಳ ಕೊಡಲು ಹಣವಿಲ್ಲ. ಯಾರು ಏನು ಹೇಳಿದರೂ ನಾನು ನೀರಿನ ಬೆಲೆ ಏರಿಸುವವನೇ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ನೀರಿದ ದರ 8-9 ವರ್ಷದಿಂದ ಏರಿಕೆ ಮಾಡಿಲ್ಲ. ನೀರಿನ‌ ದರ ಹೆಚ್ಚಿಸಬೇಕು, ಅಂತರ್ಜಲ ಹೆಚ್ಚಳ ಆಗಬೇಕು. ಜಲಮಂಡಳಿ ನಷ್ಟದಲ್ಲಿ ನಡೆಯುತ್ತಿದೆ. ಸಂಬಳ ಕೊಡೋಕೆ‌ ಆಗುತ್ತಿಲ್ಲ. ಮಂಡಳಿಯ ವಿದ್ಯುತ್ ದರವೂ ಪಾವತಿ ಮಾಡಲು ಆಗುತ್ತಿಲ್ಲ. ಕೆಲವು ಸೆಕ್ಷನ್‌ಗೆ ನೋಡಿ ದರ ನಿಗದಿ ಮಾಡಬೇಕು. ಎಷ್ಟು ದರ ಏರಿಕೆ ಮಾಡಬೇಕು ಅಂತ ನಿರ್ಧಾರ ಮಾಡಿಲ್ಲ. ಕಮಿಟಿ‌ ಸಭೆ ಮತ್ತು ಕ್ಯಾಬಿನೆಟ್‌ನಲ್ಲಿ ತೀರ್ಮಾನ ಮಾಡುತ್ತೇವೆ. ಆದರೆ ಇಂದಿನ ಕ್ಯಾಬಿನೆಟ್‌ ಮೀಟಿಂಗ್‌ನಲ್ಲಿ ಈ ವಿಷಯ ಇಲ್ಲ ಎಂದು ಡಿಕೆ ಶಿವಕುಮಾರ್‌ ತಿಳಿಸಿದ್ದಾರೆ.

ನಾಗರಿಕರಿಗೆ ಎಷ್ಟು ಮಾಡಿದರೂ ಅಷ್ಟೆ, ಅವರಿಗೆ ಉಪಕಾರ ಸ್ಮರಣೆ ಇಲ್ಲ. ಬೈತಾರೆ, ಕಾಮೆಂಟ್ ಮಾಡ್ತಾರೆ, ವಾಟ್ಸ್ಯಾಪ್‌ನಲ್ಲಿ ಹಾಕ್ತಾರೆ. ನಂತರ ಮರೆತು ಬಿಡ್ತಾರೆ. ನೀರು ಕೊಟ್ಟರೆ ತಗೋತಾರೆ ಅಷ್ಟೆ. ಕೆಲವರು ದುಡ್ಡು ಕಟ್ಟುವವರು ಕಟ್ಟುತ್ತಾರೆ, ಕೆಲವರು ಕಟ್ಟಲ್ಲ. ಮೀಡಿಯಾದವರಾದರೂ ಬೈಯಲಿ, ಜನರಾದರೂ ಬಯ್ಯಲಿ, ವಿರೋಧ ಪಕ್ಷದವರಾದರೂ ವಿರೋಧ ಮಾಡಲಿ. ಕಂಪನಿ ಉಳಿಯಬೇಕಾಗಿದೆ ಅದಕ್ಕಾಗಿ ನಾವು ನೀರಿನ ದರ ಹೆಚ್ಚಳ‌ ಮಾಡಿಯೇ ಮಾಡುತ್ತೇವೆ ಎಂದು ಡಿಕೆಶಿ ಹೇಳಿದರು.

ಇದನ್ನೂ ಓದಿ: CM Siddaramaiah: ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೀತಾರಾ? ಡಿಕೆ ಶಿವಕುಮಾರ್ ಏನಂದ್ರು?

Continue Reading

ಬೆಂಗಳೂರು

Bengaluru News : ಹದಗೆಟ್ಟ ರಸ್ತೆಗಳ ರಿಪೇರಿಗೆ ಮುಂದಾದ ಬಿಬಿಎಂಪಿ; ಇನ್ನೊಂದು ತಿಂಗಳು ಈ ರಸ್ತೆಗಳಲ್ಲಿ ವಾಹನ ಸಂಚಾರ ಬಂದ್‌!

Traffic Notice: ಬಿಬಿಎಂಪಿ ಬೆಂಗಳೂರಿನ (Bengaluru News ) ಪ್ರಮುಖ ರಸ್ತೆಗಳ ಕಾಮಗಾರಿನ್ನು (Major roadworks in Bengaluru) ಕೈಗೆತ್ತಿಕೊಂಡಿದೆ. ಹೀಗಾಗಿ ಮುಂದಿನ 30 ದಿನಗಳ ಕಾಲ ವಾಹನಗಳ ಸಂಚಾರದ ಮೇಲೆ ಪರಿಣಾಮ ಬೀರುತ್ತದೆ.

VISTARANEWS.COM


on

By

Bengaluru News
Koo

ಬೆಂಗಳೂರು: ರಾಜಧಾನಿ ಬೆಂಗಳೂರಿನ (Bengaluru News ) ಹದಗೆಟ್ಟಿರುವ ರಸ್ತೆಗಳ ರಿಪೇರಿ ಕೆಲಸಕ್ಕೆ (Major roadworks in Bengaluru) ಬಿಬಿಎಂಪಿ ಕೈಹಾಕಿದೆ. ಹೀಗಾಗಿ ವಾಹನಗಳ ಸಂಚಾರದಲ್ಲಿ ಏರುಪೇರಾಗಲಿದೆ. ಬೆಂಗಳೂರಿನ ಅತಿ ಹೆಚ್ಚು ಜನದಟ್ಟಣೆ ಪ್ರದೇಶ ಅಂದರೆ ಅದು ಚಿಕ್ಕಪೇಟೆ ಹಾಗೂ ಕೆ.ಆರ್ ಮಾರುಕಟ್ಟೆ ಆಗಿದೆ. ಸದ್ಯ ಚಿಕ್ಕಪೇಟೆ, ಕೆ.ಆರ್.ಮಾರ್ಕೆಟ್ ಸುತ್ತ ಒಂದು ತಿಂಗಳ ಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ (Traffic Notice) ಉಂಟಾಗಲಿದೆ.

ಬಿಬಿಎಂಪಿಯು ರಸ್ತೆ ರಿಪೇರಿ ಹಾಗೂ ಹೊಸ ರಸ್ತೆ ನಿರ್ಮಾಣ ಕಾಮಾಗಾರಿಯನ್ನು ಕೈಗೆತ್ತಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸುಮಾರು 30 ದಿನ ಸಂಚಾರಕ್ಕೆ ಪರ್ಯಾಯ ಮಾರ್ಗ ಬಳಸಲು ಮನವಿ ಮಾಡಲಾಗಿದೆ. ನಗರದ ಸಂಚಾರ ಪಶ್ಚಿಮ ವಿಭಾಗದ ಹಲಸೂರು ಗೇಟ್, ಚಿಕ್ಕಪೇಟೆ ಹಾಗೂ ಸಿ.ಟಿ.ಮಾರ್ಕೆಟ್ ಸಂಚಾರ ಪೊಲೀಸ್‌ರು ಈ ಕುರಿತು ಮಾಹಿತಿ ನೀಡಿದ್ದಾರೆ.

ಬಿಬಿಎಂಪಿಯಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ವಾಹನಗಳ ಸಂಚಾರಕ್ಕೆ ರಸ್ತೆ ಮಾರ್ಗಗಳಲ್ಲಿ ಕೆಲವು ಮಾರ್ಪಾಡು ಮಾಡಿದ್ದಾರೆ.

ಇದನ್ನೂ ಓದಿ: UGCET 2024: ಸೆಪ್ಟೆಂಬರ್ 1ಕ್ಕೆ ಸಿಇಟಿ/ನೀಟ್ ಸೀಟು ಹಂಚಿಕೆ ರಿಸ್ಟಲ್‌ ಅನೌನ್ಸ್‌; ಆಪ್ಶನ್ ಎಂಟ್ರಿಗೆ ಇವತ್ತೆ ಲಾಸ್ಟ್

ಯಾವ ರಸ್ತೆಗಳಲ್ಲಿ ಸಂಚಾರ ನಿರ್ಬಂಧ‌?

ಕಬ್ಬನ್ ಪೇಟೆ ಮುಖ್ಯ ರಸ್ತೆ, ಅವೆನ್ಯೂ ರಸ್ತೆಯಿಂದ ಸಿದ್ದಣ್ಣಗಲ್ಲಿ, ಬನ್ನಪ್ಪಪಾರ್ಕ್ ರಸ್ತೆ, ಅವೆನ್ಯೂ ರಸ್ತೆಯಿಂದ 15ನೇ ಕ್ರಾಸ್, ವಿಲ್ ರಸ್ತೆ, ಡಾ.ಟಿಸಿಎಂ ರಾಯನ್ ರಸ್ತೆ ಜಂಕ್ಷನ್‌ನಿಂದ ಅಕ್ಕಿಪೇಟೆ ಮುಖ್ಯರಸ್ತೆ, ಆರ್.ಟಿ.ಸ್ಪೀಟ್‌ನಲ್ಲಿ ಬಿವಿಕೆ ಐಯ್ಯಂಗಾರ್ ರಸ್ತೆಯಿಂದ ಅವನೂ ರಸ್ತೆ, ಆರ್.ಟಿ.ಸ್ಪೀಟ್‌ನಲ್ಲಿ ಬಿವಿಕೆ ಐಯ್ಯಂಗಾರ್ ರಸ್ತೆಯಿಂದ ಬಳೆಪೇಟೆ ಮುಖ್ಯರಸ್ತೆ, ಸಿಟಿ ಸ್ಪೀಟ್‌ನಲ್ಲಿ ದೇವರದಾ ಸಿಮಯ್ಯ ರಸ್ತೆಯಿಂದ ನಗರ್ತ ಪೇಟೆ ಮುಖ್ಯ ರಸ್ತೆವರೆಗೆ ಒಂದು ತಿಂಗಳವರೆಗೆ ತಾತ್ಕಾಲಿಕವಾಗಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.

ಪರ್ಯಾಯ ಮಾರ್ಗಗಳು ಹೀಗಿವೆ

ಹಲಸೂರು ಗೇಟ್ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಕಬ್ಬನ್ ಪೇಟೆ ಮುಖ್ಯ ರಸ್ತೆಯಲ್ಲಿ ಕಾಮಗಾರಿ ಹಿನ್ನೆಲೆಯಲ್ಲಿ ಬನ್ನಪ್ಪ ರಸ್ತೆ ಮತ್ತು ಕೆ.ಜಿ ರಸ್ತೆ ಬಳಸಬಹುದು. ಹಲಸೂರುಗೇಟ್ ಪೊಲೀಸ್ ಠಾಣೆ ಜಂಕ್ಷನ್‌ನಿಂದ ಅವೆನ್ಯೂ ರಸ್ತೆ ಕಡೆ ಸಂಚರಿಸುವ ವಾಹನಗಳು ಕೆ.ಜಿ. ರಸ್ತೆ ಮುಖಾಂತರ ಸಂಚರಿಸಿ ಅವೆನ್ಯೂ ರಸ್ತೆ ತಲುಪಬಹುದು.

ಬನ್ನಪ್ಪ ರಸ್ತೆ ಕಾಮಗಾರಿ ಹಿನ್ನೆಲೆ ಕಬ್ಬನ್‌ಪೇಟೆ ಮುಖ್ಯ ರಸ್ತೆ ಬಳಸಬಹುದು. ಸಿ.ಟಿ.ಮಾರ್ಕೆಟ್ ಸಂಚಾರ ಠಾಣೆ ವ್ಯಾಪ್ತಿ- ಆ.ಟಿ ಸ್ಪೀಟ್ ರಸ್ತೆಯಲ್ಲಿ ಕಾಮಗಾರಿ ವೇಳೆ ಬಿವಿಕೆ ಅಯ್ಯಂಗಾರ್ ರಸ್ತೆಯಿಂದ ಅವನ್ಯೂ ರಸ್ತೆಗೆ ಸಂಚರಿಸಬೇಕಾದ ವಾಹನಗಳು ಬಿವಿಕೆ ಅಯ್ಯಂಗಾರ್‌ ರಸ್ತೆಯಲ್ಲಿ ಮುಂದುವರೆದು ಮಾಮೂಲ್ ಪೇಟೆಗೆ (ಬೆಳ್ಳಿ ಬಸವಣ್ಣ ದೇವಸ್ಥಾನ ರಸ್ತೆ) ಎಡ ತಿರುವು ಪಡೆದು ಅವನ್ಯೂ ರಸ್ತೆಯನ್ನು ಸಂಪರ್ಕಿಸಬಹುದು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

Bomb Threat: ಏರ್‌ ಇಂಡಿಯಾ ವಿಮಾನಕ್ಕೆ ಬಾಂಬ್‌ ಬೆದರಿಕೆ, ತಿರುವನಂತಪುರಂ ಏರ್‌ಪೋರ್ಟ್‌ನಲ್ಲಿ ತುರ್ತುಸ್ಥಿತಿ

Bomb Threat: ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಹೊರಟ ಬಳಿಕ ಬಾಂಬ್‌ ಬೆದರಿಕೆ ಗೊತ್ತಾಗಿತ್ತು. ಏರ್ ಇಂಡಿಯಾದ ಮುಂಬೈ-ತಿರುವನಂತಪುರಂ ವಿಮಾನ ನಂ. AI657ರಲ್ಲಿ ಈ ಘಟನೆ ನಡೆದಿದೆ.

VISTARANEWS.COM


on

air india bomb threat
Koo

ತಿರುವನಂತಪುರಂ: ಮುಂಬೈನಿಂದ ಹೊರಟಿದ್ದ ಏರ್ ಇಂಡಿಯಾ (Air India) ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ (Bomb Threat) ಹಿನ್ನೆಲೆಯಲ್ಲಿ ಇಂದು ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Thiruvananthapuram Airport) ಸಂಪೂರ್ಣ ತುರ್ತು ಪರಿಸ್ಥಿತಿ (Emergency) ಘೋಷಿಸಲಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ವಿಮಾನವು ಬೆಳಿಗ್ಗೆ 8 ಗಂಟೆಯ ಸುಮಾರಿಗೆ ವಿಮಾನ ನಿಲ್ದಾಣದಲ್ಲಿ ಇಳಿಯಿತು ಮತ್ತು ಅದನ್ನು ಪ್ರತ್ಯೇಕ ವಿಭಾಗಕ್ಕೆ ಸ್ಥಳಾಂತರಿಸಲಾಯಿತು. ಪ್ರಯಾಣಿಕರನ್ನು ಶೀಘ್ರವಾಗಿ ವಿಮಾನದಿಂದ ಸ್ಥಳಾಂತರಿಸಲಾಯಿತು. ವಿಮಾನವು ತಿರುವನಂತಪುರಂ ವಿಮಾನ ನಿಲ್ದಾಣವನ್ನು ಸಮೀಪಿಸುತ್ತಿದ್ದಂತೆ ಪೈಲಟ್‌ನಿಂದ ಬಾಂಬ್ ಬೆದರಿಕೆ ಕರೆಯ ಬಗ್ಗೆ ಮಾಹಿತಿ ದೊರೆತಿದೆ.

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಹೊರಟ ಬಳಿಕ ಬಾಂಬ್‌ ಬೆದರಿಕೆ ಗೊತ್ತಾಗಿತ್ತು. ಏರ್ ಇಂಡಿಯಾದ ಮುಂಬೈ-ತಿರುವನಂತಪುರಂ ವಿಮಾನ ನಂ. AI657ರಲ್ಲಿ ಈ ಘಟನೆ ನಡೆದಿದೆ. ವಿಮಾನದಲ್ಲಿ 135 ಪ್ರಯಾಣಿಕರಿದ್ದರು. ಬಾಂಬ್ ಬೆದರಿಕೆಯ ಮೂಲದ ವಿವರಗಳನ್ನು ಮತ್ತು ಇತರ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.‌

ಹೋಟೆಲ್‌ನಲ್ಲಿ ಏರ್‌ ಇಂಡಿಯಾ ಗಗನಸಖಿ ಮೇಲೆ ಹಲ್ಲೆ; ನೆಲಕ್ಕೆ ಕೆಡವಿ ಎಳೆದಾಡಿದ ದುಷ್ಕರ್ಮಿ

ಲಂಡನ್‌: ಏರ್‌ ಇಂಡಿಯಾ ವಿಮಾನದ ಗಗನಸಖಿ (Air India Hostess)ಯೊಬ್ಬರ ಮೇಲೆ ಇಂಗ್ಲೆಂಡ್‌ನ ಲಂಡನ್‌ನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಹಲ್ಲೆ ನಡೆದಿರುವ ಆಘಾತಕಾರಿ ಘಟನೆ ನಡೆದಿದೆ. ಗಗನಸಖಿ ತಂಗಿದ್ದ ಹೋಟೆಲ್‌ ರೂಮ್‌ಗೆ ನುಗ್ಗಿದ ಅಪರಿಚಿತನೊಬ್ಬ ಹಲ್ಲೆ ನಡೆಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಲಂಡನ್‌ನ ಹೀಥ್ರೂನಲ್ಲಿರುವ ರಾಡಿಸನ್ ರೆಡ್ ಹೋಟೆಲ್‌ನಲ್ಲಿ ಆಗಸ್ಟ್‌ 15ರಂದು ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಏರ್ ಇಂಡಿಯಾ ವಿಮಾನದ ಹಲವು ಸಿಬ್ಬಂದಿ ತಂಗಿರುವ ಈ ಹೋಟೆಲ್‌ಗೆ ನುಗ್ಗಿದ ದುಷ್ಕರ್ಮಿ ಏಕಾಏಕಿ ದಾಳಿ ನಡೆಸಿದ್ದಾನೆ. ಸದ್ಯ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದ್ದು, ಹಲ್ಲೆಗೊಳಗಾದ ಗಗನಸಖಿಗೆ ಸೂಕ್ತ ಚಿಕಿತ್ಸೆ ನೀಡಿ ಭಾರತಕ್ಕರ ಕರೆತರಲಾಗುತ್ತಿದೆ ಎಂದು ವರದಿಯಾಗಿದೆ.

“ಪ್ರಮುಖ ಅಂತಾರಾಷ್ಟ್ರೀಯ ಹೋಟೆಲ್‌ನಲ್ಲಿ ನಡೆದ ಈ ಕಾನೂನುಬಾಹಿರ ಒಳನುಸುಳುವಿಕೆಯಿಂದ ಆಘಾತಕ್ಕೆ ಒಳಗಾಗಿದ್ದೇವೆ. ಇದು ನಮ್ಮ ಸಿಬ್ಬಂದಿಯೊಬ್ಬರ ಮೇಲೆ ಪರಿಣಾಮ ಬೀರಿದೆ. ಕೌನ್ಸಿಲಿಂಗ್‌ ಸೇರಿದಂತೆ ನಮ್ಮ ಸಹೋದ್ಯೋಗಿಗಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಿದ್ದೇವೆʼʼ ಎಂದು ಏರ್‌ ಇಂಡಿಯಾ ತಿಳಿಸಿದೆ.

ಏರ್‌ ಇಂಡಿಯಾ ವಿಮಾನದ ಸಿಬ್ಬಂದಿ ತಂಗಿರುವ ಹೋಟೆಲ್‌ನಲ್ಲಿ ಮಧ್ಯರಾತ್ರಿಯ ವೇಳೆಗೆ ಈ ಘಟನೆ ನಡೆದಿದೆ. ʼʼಗಗನಸಖಿ ತಮ್ಮ ರೂಮ್‌ನಲ್ಲಿ ನಿದ್ರಿಸುತ್ತಿದ್ದರು. ಮಧ್ಯರಾತ್ರಿ ಸುಮಾರು 1.30ರ ವೇಳೆಗೆ ಆಗಂತುಕನೊಬ್ಬ ಗಗನಸಖಿಯ ರೂಮ್‌ಗೆ ನುಗ್ಗಿದ. ಅನಿರೀಕ್ಷಿತ ಘಟನೆಯಿಂದ ಆಘಾತಕ್ಕೊಳಗಾದ ಆಕೆ ಕೂಡಲೇ ಸಹಾಯಕ್ಕಾಗಿ ಕೂಗಿಕೊಂಡರು. ಸಿಟ್ಟಿನಿಂದ ಆತ ಹ್ಯಾಂಗರ್‌ನಿಂದ ಹಲ್ಲೆ ನಡೆಸಿದ. ಅಲ್ಲದೆ ತಪ್ಪಿಸಿಕೊಳ್ಳಲು ಯತ್ನಿಸಿದ ಆಕೆಯನ್ನು ನೆಲಕ್ಕೆ ಕೆಡವಿ ಎಳೆದಾಡಿದ್ದಾನೆʼʼ ಎಂದು ಮೂಲಗಳು ತಿಳಿಸಿವೆ.

ಈ ದಾಳಿಯಿಂದ ಗಗನಸಖಿ ತೀವ್ರವಾಗಿ ಗಾಯಗೊಂಡಿದ್ದರು. ನಂತರ ಪೊಲೀಸರನ್ನು ಕರೆಸಿ ಆತನನ್ನು ಅವರ ವಶಕ್ಕೆ ಒಪ್ಪಿಸಲಾಯಿತು. ದಾಳಿಗೊಳಗಾದ ಗಗನಸಖಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಅವರೊಂದಿಗೆ ಸ್ನೇಹಿತರು ಉಳಿದುಕೊಂಡಿದ್ದರು. ಈ ಹಿಂದೆಯೂ ವಿಮಾನ ಸಿಬ್ಬಂದಿ ತಮಗಾಗುತ್ತಿರುವ ಕರಾಳ ಅನುಭವಗಳ ಬಗ್ಗೆ ದೂರು ನೀಡಿದ್ದರು. ಸೂಕ್ತ ದೀಪದ ವ್ಯವಸ್ಥೆ ಇಲ್ಲದಿರುವುದು, ಪದೇ ಪದೆ ಬಾಗಿಲು ತಟ್ಟುವುದು ಇತ್ಯಾದಿ ಅನುಭವಗಳ ಬಗ್ಗೆ ಮಾಹಿತಿ ನೀಡಿದ್ದರು. ಸದ್ಯ ದುಷ್ಕರ್ಮಿ ಯಾಕಾಗಿ ಈ ದಾಳಿ ನಡೆಸಿದ್ದಾನೆ ಎನ್ನುವ ಬಗ್ಗೆ ಮಾಹಿತಿ ಲಭಿಸಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಇದನ್ನೂ ಓದಿ: Air India Flight: 225 ಪ್ರಯಾಣಿಕರನ್ನು ಹೊತ್ತು ಸ್ಯಾನ್ ಫ್ರಾನ್ಸಿಸ್ಕೋಗೆ ಹೊರಟಿದ್ದ ವಿಮಾನದಲ್ಲಿ ತಾಂತ್ರಿಕ ದೋಷ; ರಷ್ಯಾದಲ್ಲಿ ಲ್ಯಾಂಡಿಂಗ್‌

Continue Reading
Advertisement
gold rate today
ಪ್ರಮುಖ ಸುದ್ದಿ49 seconds ago

Gold Rate Today: ಸುವರ್ಣಪ್ರಿಯರಿಗೆ ಸಿಹಿ ಸುದ್ದಿ; ಇಂದೂ ಚಿನ್ನದ ದರದಲ್ಲಿ ಇಳಿಕೆ

Green Ammonia Export
ದೇಶ6 mins ago

Green Ammonia Export: ಜಪಾನ್‌ಗೆ ಇನ್ನು ಭಾರತದಿಂದ ಹಸಿರು ಅಮೋನಿಯಾ ರಫ್ತು! ಒಪ್ಪಂದಕ್ಕೆ ಸಹಿ

TVK Party Flag Unveils
ರಾಜಕೀಯ12 mins ago

TVK Party Flag Unveils: ತಮ್ಮ ರಾಜಕೀಯ ಪಕ್ಷದ ಧ್ವಜ, ಚಿಹ್ನೆ ಅನಾವರಣಗೊಳಿಸಿದ ನಟ ವಿಜಯ್

Viral Video
Latest15 mins ago

Viral Video: ಅಪ್ಪ-ಮಗನ ಗುದ್ದಾಟದಿಂದ ಮೂವರು ಅಮಾಯಕರ ಸ್ಥಿತಿ ಗಂಭೀರ!

Neeraj Chopra
ಕ್ರಿಕೆಟ್31 mins ago

Neeraj Chopra: ಬ್ರ್ಯಾಂಡ್ ಮೌಲ್ಯದಲ್ಲಿ ಹಾರ್ದಿಕ್​ ಪಾಂಡ್ಯ ಹಿಂದಿಕ್ಕಿದ ನೀರಜ್​ ಚೋಪ್ರಾ

cylinder blast
ಬೆಂಗಳೂರು43 mins ago

Gas Cylinder Blast: ಸಿಲಿಂಡರ್‌ ಸ್ಫೋಟಕ್ಕೆ ಸುಟ್ಟುಕರಕಲಾದ ವ್ಯಕ್ತಿ; ಮನೆ ಗೋಡೆ ಬಿದ್ದು ಮಕ್ಕಳು ಗಾಯ

DCM DK Shivakumar
ಪ್ರಮುಖ ಸುದ್ದಿ45 mins ago

DK Shivakumar: ಡಿಕೆ ಶಿವಕುಮಾರ್‌ಗೆ ಇಂದು ವಿಚಾರಣೆಗೆ ಹಾಜರಾಗಲು ಲೋಕಾಯುಕ್ತ ನೋಟೀಸ್

Kannada New Movie
ಬೆಂಗಳೂರು50 mins ago

Kannada New Movie: ಕವೀಶ್ ಶೆಟ್ಟಿ, ಮೇಘಾ ಶೆಟ್ಟಿ ಅಭಿನಯದ ʼಆಪರೇಷನ್ ಲಂಡನ್ ಕೆಫೆʼ ಚಿತ್ರದ ಟೀಸರ್ ರಿಲೀಸ್‌

Kalki 2898 AD
ಸಿನಿಮಾ56 mins ago

Kalki 2898AD: ಎರಡು ಪ್ರಮುಖ ಒಟಿಟಿಗಳಲ್ಲಿ ಹಲವು ಭಾಷೆಗಳಲ್ಲಿ ಲಗ್ಗೆ ಇಟ್ಟ ಕಲ್ಕಿ 2898 ಎಡಿ!

murder case
ಚಿಕ್ಕಮಗಳೂರು1 hour ago

Murder Case : ಆಸ್ತಿಗಾಗಿ ಸಹೋದರನ ಕಣ್ಣಿಗೆ ಖಾರದ ಪುಡಿ ಎರಚಿ, ಕೊಚ್ಚಿ ಸಾಯಿಸಿದ ರಾಕ್ಷಸಿ ಸಹೋದರಿಯರು!

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ11 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Bigg Boss- Saregamapa 20 average TRP
ಕಿರುತೆರೆ10 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ11 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ9 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ9 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

karnataka Weather Forecast
ಮಳೆ2 weeks ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 weeks ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 weeks ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 weeks ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 weeks ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ3 weeks ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ3 weeks ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

karnataka Rain
ಮಳೆ3 weeks ago

Karnataka Rain : ಹುಲಿಗೆಮ್ಮದೇವಿ ದೇವಸ್ಥಾನದ ಸ್ನಾನ ಘಟ್ಟ ಜಲಾವೃತ;ಯಾದಗಿರಿ-ರಾಯಚೂರು ಸಂಪರ್ಕ ಕಡಿತ

Karnataka Rain
ಮಳೆ3 weeks ago

Karnataka Rain: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟಕ್ಕೆ ಮನೆ ಮೇಲೆ ಕುಸಿದ ಗುಡ್ಡ; ಕೂದಲೆಳೆ ಅಂತರದಲ್ಲಿ ಪಾರು

karnataka Rain
ಮಳೆ3 weeks ago

Karnataka Rain : ತಿ. ನರಸೀಪುರ-ತಲಕಾಡು ಸಂಚಾರ ಬಂದ್; ಸುತ್ತೂರು ಸೇತುವೆ ಮುಳುಗಡೆ

ಟ್ರೆಂಡಿಂಗ್‌