Wheat Crop: 3.4 ಕೋಟಿ ಹೆಕ್ಟೇರ್ ಪ್ರದೇಶಕ್ಕೆ ವ್ಯಾಪಿಸಿದ ಗೋಧಿ ಬೆಳೆ; ಇಳಿಯುತ್ತಾ ಬೆಲೆ? - Vistara News

ಕೃಷಿ

Wheat Crop: 3.4 ಕೋಟಿ ಹೆಕ್ಟೇರ್ ಪ್ರದೇಶಕ್ಕೆ ವ್ಯಾಪಿಸಿದ ಗೋಧಿ ಬೆಳೆ; ಇಳಿಯುತ್ತಾ ಬೆಲೆ?

Wheat Crop: ಈ ಋತುವಿನಲ್ಲಿ ಭಾರತದಲ್ಲಿ ದಾಖಲೆಯ ಪ್ರಮಾಣದ ಪ್ರದೇಶದಲ್ಲಿ ಗೋಧಿ ಬೆಳೆಯಲಾಗಿದೆ. ಇದರಿಂದ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.

VISTARANEWS.COM


on

wheat crop
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಈ ಋತುವಿನಲ್ಲಿ ಗೋಧಿ ಉತ್ಪಾದನೆ (Wheat Crop) ದಾಖಲೆಯ ಮಟ್ಟಕ್ಕೆ ತಲುಪುವ ಸಾಧ್ಯತೆ ಇದೆ. ಗೋಧಿ ಬಿತ್ತನೆ ಪ್ರದೇಶವು ಗಣನೀಯವಾಗಿ ವಿಸ್ತರಿಸಿದೆ ಮತ್ತು ಪ್ರಮುಖ ಉತ್ಪಾದಕ ರಾಜ್ಯಗಳಲ್ಲಿನ ಶೀತ ಹವಾಮಾನವು ಇಳುವರಿಯನ್ನು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಅಧಿಕೃತ ಅಂಕಿ-ಅಂಶಗಳ ಪ್ರಕಾರ, ಗೋಧಿ ಬೆಳೆಯುವ ಪ್ರದೇಶವು 3.4 ಕೋಟಿ ಹೆಕ್ಟೇರ್ (34 million hectares) ಪ್ರದೇಶಕ್ಕೆ ವ್ಯಾಪಿಸಿದೆ. ಇದು ಮೂರು ವರ್ಷಗಳಲ್ಲೇ ಗರಿಷ್ಠ. ದೇಶದ ಪ್ರಮುಖ ಗೋಧಿ ಉತ್ಪಾದಕ ರಾಜ್ಯಗಳಾದ ಮಧ್ಯಪ್ರದೇಶ, ಪಂಜಾಬ್, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ಬಿತ್ತನೆ ಬಹುತೇಕ ಪೂರ್ಣಗೊಂಡಿದೆ. ನವೆಂಬರ್‌ನಲ್ಲಿ ಬಿತ್ತನೆ ಮಾಡಲಾಗುತ್ತದೆ ಮತ್ತು ಮಾರ್ಚ್‌ನಲ್ಲಿ ಕೊಯ್ಲು ಮಾಡಲಾಗುತ್ತದೆ.

ಬೆಲೆ ಇಳಿಕೆ ಸಾಧ್ಯತೆ

ʼʼಹೆಚ್ಚಿನ ಗೋಧಿ ಉತ್ಪಾದನೆಯು ಬೆಲೆ ಇಳಿಕೆಗೆ ಸಹಾಯ ಮಾಡಲಿದೆʼʼ ಎಂದು ಕೃಷಿ ಸಚಿವ ಅರ್ಜುನ್ ಮುಂಡಾ ತಿಳಿಸಿದ್ದಾರೆ. “ಈ ವರ್ಷ ಗೋಧಿಯನ್ನು ಹೆಚ್ಚಿನ ಪ್ರದೇಶದಲ್ಲಿ ಬೆಳೆಯಲಾಗಿದೆ ಮತ್ತು ಉತ್ತಮ ಇಳುವರಿಯನ್ನು ನಿರೀಕ್ಷಿಸುತ್ತಿದ್ದೇವೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹವಾಮಾನ ಪರಿಸ್ಥಿತಿಗಳು ಅನುಕೂಲಕರವಾಗಿದ್ದರೆ 2023-24ರ ಸಾಲಿನಲ್ಲಿ ದೇಶವು ದಾಖಲೆಯ 114 ಮಿಲಿಯನ್ ಟನ್‌ ಗೋಧಿಯನ್ನು ಉತ್ಪಾದಿಸಲಿದೆ ಎಂದು ಭಾರತೀಯ ಆಹಾರ ನಿಗಮದ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಶೋಕ್ ಕೆ.ಕೆ.ಮೀನಾ ಇತ್ತೀಚೆಗೆ ತಿಳಿಸಿದ್ದರು. ಬಿಸಿಗಾಳಿ ಹಾವಳಿಯಿಂದಾಗಿ ಉತ್ಪಾದನೆ ಕುಸಿತವಾಗಿದ್ದರಿಂದ ದೇಶವು 2022ರಲ್ಲಿ ಗೋಧಿ ರಫ್ತು ನಿಷೇಧಿಸಿತ್ತು. 2022-23ರಲ್ಲಿ ಉತ್ಪಾದನೆಯು 100 ಮಿಲಿಯನ್ ಟನ್ ಆಗಿತ್ತು. ಹಿಂದಿನ ವರ್ಷದ 107.7 ಮಿಲಿಯನ್ ಟನ್‌ ಉತ್ಪಾದನೆಗೆ ಹೋಲಿಸಿದರೆ ಕುಸಿತ ಕಂಡು ಬಂದಿತ್ತು.

ಕಳೆದ ಎರಡು ವರ್ಷಗಳಲ್ಲಿ ಉಂಟಾದ ಹವಾಮಾನ ವೈಪರೀತ್ಯ ಗೋಧಿ ಬೆಳೆ ಮೇಲೆ ದುಷ್ಪರಿಣಾಮ ಬೀರಿದ್ದು, ಇದು ವಾರ್ಷಿಕ ಸರಾಸರಿ ಶೇ. 20ರಷ್ಟು ಬೆಲೆ ಏರಿಕೆಗೆ ಕಾರಣವಾಗಿದೆ. ಏರುತ್ತಿರುವ ಬೆಲೆಗಳ ನಿಯಂತ್ರಣಕ್ಕೆ ಕ್ರಮ ಕೈಗೊಂಡ ಕೇಂದ್ರ ಸರ್ಕಾರವು ಸುಮಾರು 6 ಮಿಲಿಯನ್ ಟನ್ ಗೋಧಿಯನ್ನು ಖಾಸಗಿಯವರಿಗೆ ಮಾರಾಟ ಮಾಡಿದ್ದರಿಂದ ಸರ್ಕಾರಿ ಸ್ವಾಮ್ಯದ ಉಗ್ರಾಣಗಳಲ್ಲಿ ಗೋಧಿ ದಾಸ್ತಾನು 19 ಮಿಲಿಯನ್ ಮೆಟ್ರಿಕ್ ಟನ್‌ಗೆ ಇಳಿದಿದೆ. ಇದು ಏಳು ವರ್ಷಗಳಲ್ಲಿ ಕನಿಷ್ಠವಾಗಿದೆ.

ಹೊಸ ತಳಿಯತ್ತ ಮುಖ ಮಾಡಿದ ಕೃಷಿಕರು

ಹವಾಮಾನ ಬಿಕ್ಕಟ್ಟಿನ ಪರಿಣಾಮಗಳನ್ನು ಎದುರಿಸಲು ಕೃಷಿಕರೂ ಕ್ರಮ ಕೈಗೊಂಡಿದ್ದಾರೆ. ಗೋಧಿ ಬೆಳೆಯುವ ಪ್ರಮುಖ ರಾಜ್ಯಗಳಲ್ಲಿನ ಕೃಷಿಕರು ಈ ಋತುವಿನಲ್ಲಿ ಬಿಸಿ ಸಹಿಸಿಕೊಳ್ಳುವ ಗೋಧಿ ಪ್ರಭೇದಗಳ ಮೊರೆ ಹೋಗಿದ್ದಾರೆ. ಬದಲಾಗುತ್ತಿರುವ ಹವಾಮಾನಗಳ ಬಗ್ಗೆ ಹೆಚ್ಚುತ್ತಿರುವ ಜಾಗೃತಿಯೇ ಇದಕ್ಕೆ ಕಾರಣ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಇದನ್ನೂ ಓದಿ: Wheat Stock: ಜನರಿಗೆ ಮೋದಿ ಮತ್ತೊಂದು ಸಿಹಿ ಸುದ್ದಿ; ಗೋಧಿ ಬೆಲೆ ಇಳಿಕೆಗೆ ಮಹತ್ವದ ಕ್ರಮ

“ಪಂಜಾಬ್ ಮತ್ತು ಹರಿಯಾಣಗಳಲ್ಲಿ ಈ ವರ್ಷ ಶೇ. 80ರಷ್ಟು ಪ್ರದೇಶಗಳಲ್ಲಿ ಹವಾಮಾನ ಪರಿಸ್ಥಿತಿಗಳನ್ನು ಎದುರಿಸಲು ಶಕ್ತವಾಗಿರುವ ಮತ್ತು ಜೈವಿಕ ಬಲವರ್ಧಿತ ಗೋಧಿ ಪ್ರಭೇದವನ್ನು ಬಿತ್ತನೆ ಮಾಡಲಾಗಿದೆʼʼ ಎಂದು ಭಾರತೀಯ ಗೋಧಿ ಮತ್ತು ಬಾರ್ಲಿ ಸಂಶೋಧನಾ ಸಂಸ್ಥೆಯ (ಐಐಬಿಆರ್) ನಿರ್ದೇಶಕ ಜ್ಞಾನೇಂದ್ರ ಸಿಂಗ್ ತಿಳಿಸಿದ್ದಾರೆ. ʼʼಉತ್ತರ ಭಾರತದ ಕೆಲವು ಭಾಗಗಳಲ್ಲಿ ಈಗ ಶೀತಗಾಳಿ ಬೀಸುತ್ತಿರುವುದು ಇಳುವರಿಯನ್ನು ಹೆಚ್ಚಿಸಲು ಸಹಾಯ ಮಾಡಲಿದೆʼʼ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Arecanut Insurance Karnataka: ಅಡಿಕೆ ಬೆಳೆ ವಿಮೆ ನೋಂದಣಿ ಮುಗಿಯದ ಗೋಳು; ಸಮಸ್ಯೆಗಳು ಸಾಲುಸಾಲು!

Arecanut Insurance Karnataka: ಕೃಷಿ ಸಂಬಂಧಿಸಿದ ತಂತ್ರಜ್ಞಾನವನ್ನು ಅಳವಡಿಸುವಾಗ ವಾಸ್ತವದ ಮತ್ತು ಎದುರಾಗಬಹುದಾದ ಸಮಸ್ಯೆಗಳನ್ನು ಒಂದು ಟ್ರಯಲ್ ಮಾಡಿ ನೋಡುವುದು ಬೇಡವಾ? ಯಾರು ಇಂತಹ ಅಸಂಬದ್ಧ ಅವ್ಯವಸ್ಥೆಯ ತಂತ್ರಜ್ಞಾನಗಳನ್ನು ಪ್ರತೀವರ್ಷ ಅನುಷ್ಠಾನಕ್ಕೆ ತಂದು ಎಲ್ಲರನ್ನೂ ಗೋಳಿನ ಕೂಪಕ್ಕೆ ತಳ್ಳುವುದು? ಆ್ಯಪ್/ವೆಬ್ಸೈಟ್ ಮಾಡುವವರು ಯಾರು? ಯಾವ ಅತಿ ಬುದ್ದಿವಂತರು ಇದನ್ನು ಅನುಮೋದನೆ ಮಾಡುವವರು? ಸರ್ಕಾರ ಈ ಸಮಸ್ಯೆಯನ್ನು ಏಕೆ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ?

VISTARANEWS.COM


on

Arecanut Insurance Karnataka
Koo

| ಅರವಿಂದ ಸಿಗದಾಳ್, ಮೇಲುಕೊಪ್ಪ

ಸಹಜವಾಗಿ ಯಾವುದೇ ಹೊಸ (Arecanut insurance Karnataka) ತಂತ್ರಜ್ಞಾನವನ್ನು ಅಳವಡಿಸುವಾಗ, ‘ಗೋ ಲೈವ್’ ಎಂದು ಅನುಷ್ಠಾನಕ್ಕೆ ತರುವಾಗ, ಒಂದು ಮಾಕ್ ಟೆಸ್ಟ್ ಅಥವಾ ಪ್ರಾಯೋಗಿಕ ಪರೀಕ್ಷೆ ಮಾಡುತ್ತಾರೆ. ಆದರೆ, ಇತ್ತೀಚಿಗಿನ ಕೃಷಿ ಕ್ಷೇತ್ರದಲ್ಲಿ ಅಳವಡಿಸುತ್ತಿರುವ ಆ್ಯಪ್ ಮತ್ತು ವೆಬ್‌ಸೈಟ್ ತಂತ್ರಜ್ಞಾನಗಳಿಗೆ ಈ ಪ್ರಾಯೋಗಿಕ ಪರೀಕ್ಷೆ ಮಾಡದೆ, ಎದುರಾಗಬಹುದಾದ ಪ್ರಾಕ್ಟಿಕಲ್ ಸಮಸ್ಯೆಗಳನ್ನು ಬಗೆಹರಿಸದೆ, ನೇರವಾಗಿ ತಂತ್ರಜ್ಞಾನಗಳನ್ನು ತೋಟಗಾರಿಕೆ, ಕೃಷಿ ಇಲಾಖೆಗಳ ಮೂಲಕ ಅನುಷ್ಠಾನಕ್ಕೆ ತರಲಾಗುತ್ತಿದೆ. ಇದರ ಪರಿಣಾಮ ರೈತರು, ಕೃಷಿ/ತೋಟಗಾರಿಕಾ ಅಧಿಕಾರಿಗಳು, VAಗಳು, ತಾಲೂಕು ಕಚೇರಿ ಅಧಿಕಾರಿಗಳು, ಬ್ಯಾಂಕ್ ಮತ್ತು ಕೊ-ಆಪರೇಟಿವ್ ಸೊಸೈಟಿ ಅಧಿಕಾರಿಗಳು ತಮ್ಮ ಸಮಯ ವ್ಯವದಾನಗಳನ್ನು ಕಳೆದುಕೊಳ್ಳುವಂತಾಗುತ್ತಿದೆ. ಜನಸಾಮಾನ್ಯರ ಗೋಳಾಟ ಹೆಚ್ಚಾಗುತ್ತಿದೆ!

ಕೃಷಿ ಸಂಬಂಧಿಸಿದ ತಂತ್ರಜ್ಞಾನವನ್ನು ಅಳವಡಿಸುವಾಗ ವಾಸ್ತವದ ಮತ್ತು ಎದುರಾಗಬಹುದಾದ ಸಮಸ್ಯೆಗಳನ್ನು ಒಂದು ಟ್ರಯಲ್ ಮಾಡಿ ನೋಡುವುದು ಬೇಡವಾ? ಯಾರು ಇಂತಹ ಅಸಂಬದ್ಧ ಅವ್ಯವಸ್ಥೆಯ ತಂತ್ರಜ್ಞಾನಗಳನ್ನು ಪ್ರತೀವರ್ಷ ಅನುಷ್ಠಾನಕ್ಕೆ ತಂದು ಎಲ್ಲರನ್ನೂ ಗೋಳಿನ ಕೂಪಕ್ಕೆ ತಳ್ಳುವುದು? ಆ್ಯಪ್/ವೆಬ್ಸೈಟ್ ಮಾಡುವವರು ಯಾರು? ಯಾವ ಅತಿ ಬುದ್ದಿವಂತರು ಇದನ್ನು ಅನುಮೋದನೆ ಮಾಡುವವರು?
ಕಳೆದ ವರ್ಷ ಅಸ್ತಿತ್ವಕ್ಕೆ ತಂದ ಬೆಳೆ ಸರ್ವೆ ಆ್ಯಪ್‌ನ ದೋಷದಿಂದ ಬರಿ ಚಿಕ್ಕಮಗಳೂರು ಜಿಲ್ಲೆಯಲ್ಲಿ 8876 ಬೆಳೆ ಸರ್ವೆಗಳು ತಪ್ಪಾಗಿ ದಾಖಲಾದವು. ಮತ್ತೆ ಅದನ್ನು ಸರಿ ಪಡಿಸಲು ತಿಂಗಳುಗಳೇ ಬೇಕಾದವು. ಕೆಲವಷ್ಟು ಇನ್ನೂ ಸರಿಯಾಗಿಲ್ಲ. ಇದು ಒಂದು ಜಿಲ್ಲೆಯದು. ಇಡೀ ರಾಜ್ಯದಲ್ಲಿ ಆದ ಪ್ರಕರಣಗಳು ಇನ್ನೆಷ್ಟೋ!

ಪ್ರಾಯೋಗಿಕ ಪರೀಕ್ಷೆ ಏಕಿಲ್ಲ?

ಈ ತಂತ್ರಜ್ಞಾನ ಅನುಷ್ಠಾನದ ಮೊದಲು ಒಂದು ಗ್ರಾಮವನ್ನೋ, ಒಂದು ಹೋಬಳಿಯನ್ನೋ ಆಯ್ಕೆ ಮಾಡಿಕೊಂಡು, ಪ್ರಾಯೋಗಿಕ ಪರೀಕ್ಷೆ ಮಾಡಿ, ಎದುರಾಗುವ ಪ್ರಾಕ್ಟಿಕಲ್ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುವ ಅಪ್‌ಡೇಟ್‌ನೊಂದಿಗೆ ಇಡೀ ರಾಜ್ಯಕ್ಕೆ ತಂತ್ರಜ್ಞಾನವನ್ನು ಅಳವಡಿಸಬಹುದಲ್ಲವಾ? ಇಷ್ಟಕ್ಕೂ ಹೊಸ ತಂತ್ರಜ್ಞಾನವನ್ನು ಅಳವಡಿಸುವ ಮೊದಲು ಒಂದು ಆಡಿಟ್ ವ್ಯವಸ್ಥೆ ಇರೋದಿಲ್ವಾ?

ರೈತರ ಜಮೀನಿನ ಫ್ರೂಟ್ ಐಡಿ (Farmer Registration and a Unified beneficiary Information System (FRUITS) ಮಾಡುವಾಗಲೂ ಇದೇ ಸಮಸ್ಯೆ, ಆಧಾರ್-ಪಹಣಿ ಸೀಡಿಂಗ್ ಮಾಡುವಾಗಲೂ ಇದೇ ಸಮಸ್ಯೆ, ಈಗ ಬೆಳೆ ವಿಮೆ ನೊಂದಣಿ ಮಾಡಿಸುವಾಗಲೂ ಇದೇ ಗೋಳು. ಅಡಿಕೆ, ಮೆಣಸು ಬೆಳೆಗಳಿಗೆ ವಿಮೆ ನೊಂದಣಿ ಮಾಡಿಸಲು ಹತ್ತು ಜನ ರೈತರು ಬ್ಯಾಂಕ್, ಕೋ ಆಪರೇಟಿವ್ ಸಂಸ್ಥೆಗಳಿಗೆ ಹೋದರೆ, ಸುಸೂತ್ರವಾಗಿ ಇಬ್ಬರು ರೈತರಿಗೂ ಬೆಳೆ ವಿಮೆ ನೊಂದಣಿ ಆಗ್ತಾ ಇಲ್ಲ ಅಂತ ಅಧಿಕಾರಿಗಳು ಹೇಳ್ತಾ ಇದಾರೆ. ತಂತ್ರಜ್ಞಾನದಲ್ಲಿ ಒಬ್ಬೊಬ್ಬ ರೈತರ ನೋಂದಣಿಗೆ ಒಂದೊಂದು ಸಮಸ್ಯೆ.

ಅಡಿಕೆ ಮೆಣಸು ಬೆಳೆ ವಿಮೆ ಸಮಸ್ಯೆ

ಮಲೆನಾಡು-ಕರಾವಳಿಗಳಲ್ಲಿ ಅಡಿಕೆ ಮೆಣಸು ಬೆಳೆ ವಿಮೆ ನೊಂದಣಿ ಪ್ರಕ್ರಿಯೆ ಪ್ರಾರಂಭಿಸಿ 12 ದಿನಗಳಾದವು. ಸಾಫ್ಟ್‌ವೇರ್ ಸಮಸ್ಯೆಗಳು ಇನ್ನೂ ಮುಂದುವರೆದಿವೆ. ಬೆಳೆ ವಿಮೆ ನೊಂದಣಿಯಲ್ಲಿ ಕಾಣಿಸುತ್ತಿರುವ ಸಾಮಾನ್ಯ ಸಮಸ್ಯೆಗಳು, ದೂರುಗಳು ಇಲ್ಲಿವೆ.
1) Aadhar not valided. You cannot generate this application
2) No FRUIT details available for this district, taluk and Gram panchayat ULB combinations
3) Error connecting to FRUIT server
4) FRUIT details not available for this Aadhar No. You can not enroll
5) ಕೆಲವು ರೈತರ ಬೆಳೆ ವಿಮೆ ಕಟ್ಟಿಯಾಗಿದೆ. ಆದರೆ, ಬೆಳೆ ವಿಸ್ತೀರ್ಣವೇ ವ್ಯತ್ಯಾಸ ಆಗಿದೆ. 17 ಗುಂಟೆ ಭಾಗಾಯ್ತು ಅಂತ ಪಹಣಿ ಇದೆ, ಸಿಸ್ಟಮ್‌ನಲ್ಲಿ ಎಂಟು ಗುಂಟೆಗೆ ಬೆಳೆ ವಿಮೆ ನೊಂದಣಿ ಆಗಿದೆ.
6) ಕಳೆದ ವರ್ಷ ಜಮೀನು ಜಾಯಿಂಟ್ ಅಕೌಂಟ್‌ನಲ್ಲಿದ್ದರೂ ಬೆಳೆ ವಿಮೆ ಮಾಡಿಸಬಹುದಿತ್ತು. ಈ ವರ್ಷ ಅದಕ್ಕೆ “ಎಲ್ಲಾ ಸದಸ್ಯರ FRUIT ID ಇಲ್ಲ, ಹಾಗಾಗಿ ನೊಂದಣಿ ಆಗ್ತಾ ಇಲ್ಲ” ಅನ್ನುವ ಕಂಪ್ಲೇಂಟ್‌.
7) ಕಳೆದ ವರ್ಷ ಬೆಳೆ ಸರ್ವೆಯಲ್ಲಾದ ಲೋಪಗಳನ್ನು ಸರಿಪಡಿಸಲಾಗಿಲ್ಲ, ಹಾಗಾಗಿ ನೊಂದಣಿ ಆಗ್ತಾ ಇಲ್ಲ.
ಹೀಗೆ ಬೇರೆ ಬೇರೆ ರೈತರ ಪಹಣಿಗೆ ಬೇರೆ ಬೇರೆ ಸಮಸ್ಯೆಗಳು. ಕೊ-ಆಪರೇಟಿವ್ ಸಂಸ್ಥೆಗಳಿಗೆ, ಬ್ಯಾಂಕುಗಳಿಗೆ ರೈತರಿಂದ ದಿನಾ ಕರೆಗಳು “ಸಾರ್, ನಮ್ದು ಇನ್ಷ್ಯೂರೆನ್ಸ್ ಕಟ್ಟಿ ಆಯ್ತಾ?” ಅಂತ.
ಮೊನ್ನೆ ದಕ್ಷಿಣ ಕೋರಿಯಾದಲ್ಲಿ ರೋಬೋಟ್ ಒಂದು ಮಾನಸಿಕ ಅಸ್ವಸ್ಥತೆಯಿಂದ ಆತ್ಮಹತ್ಯೆ ಮಾಡಿಕೊಂಡಿತ್ತಂತೆ!! ಈ ಕೃಷಿ ಸಾಫ್ಟ್‌ವೇರ್‌ಗಳು ಬೆಳೆ ನೊಂದಣಿಗೆ ಸಹಕರಿಸದೆ ರೈತರಿಗೆ ‘ಅಸಹಕಾರ’ ತೋರುತ್ತಿವೆಯಾ ಹೇಗೆ?
ಬೆಳೆ ವಿಮೆ ನೊಂದಣಿಗೆ ಇನ್ನು 18 ದಿನಗಳ ಸಮಯ ಮಾತ್ರ ಇರುವುದು. ಅಷ್ಟರಲ್ಲಿ ಎಲ್ಲ ಸಮಸ್ಯೆಗಳು ಬಗೆಹರಿಯಬಹುದಾ? ಬೆಳೆ ವಿಮೆ ನೊಂದಣಿ ಆಗುತ್ತಾ? ಅಥವಾ ಬಹುತೇಕ ರೈತರಿಗೆ ಗೋಳಾಟವೇ ಗತಿಯಾ?

ಇದನ್ನೂ ಓದಿ: Arecanut Import: ಅಕ್ರಮ ಅಡಿಕೆ ಆಮದು ರೋಗಕ್ಕೆ ಔಷಧವೇ ಇಲ್ಲವೇ?

Continue Reading

ಕರ್ನಾಟಕ

Job News: 961 ಹುದ್ದೆಗಳ ಭರ್ತಿಗೆ ಕೃಷಿ ಇಲಾಖೆಯಿಂದ ಕೆಪಿಎಸ್‌ಸಿಗೆ ಪ್ರಸ್ತಾವನೆ; ಎಲ್ಲಿ ಎಷ್ಟು ಹುದ್ದೆ?

Job News: ಮೊದಲ ಹಂತದಲ್ಲಿ ಕೃಷಿ ಇಲಾಖೆಯಲ್ಲಿ ಖಾಲಿ ಇರುವ 961 ವಿವಿಧ ವೃಂದದ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಈಗಾಗಲೇ ಆರ್ಥಿಕ ಇಲಾಖೆ ಅನುಮೋದನೆ ಪಡೆದು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

VISTARANEWS.COM


on

Job News Proposal for filling 961 posts from Agriculture Department to KPSC
Koo

ಬೆಂಗಳೂರು: ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಇಲಾಖೆಯಲ್ಲಿನ ಆಡಳಿತಾತ್ಮಕ ಸುಧಾರಣೆಗೆ ಹಲವು ರೀತಿಯ ಕ್ರಮ ಕೈಗೊಂಡಿದ್ದು, ಖಾಲಿ ಇರುವ ಹುದ್ದೆಗಳ ಹಂತಹಂತವಾಗಿ ಭರ್ತಿಗೆ (Job News) ಮುಂದಾಗಿದ್ದಾರೆ. ಮೊದಲ ಹಂತದಲ್ಲಿ ಇಲಾಖೆಯಲ್ಲಿ ಖಾಲಿ ಇರುವ 961 ವಿವಿಧ ವೃಂದದ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಈಗಾಗಲೇ ಆರ್ಥಿಕ ಇಲಾಖೆ ಅನುಮೋದನೆ ಪಡೆದು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಹುದ್ದೆಗಳ ವಿವರ

ಕಲ್ಯಾಣ ಕರ್ನಾಟಕ ಭಾಗದಲ್ಲಿ 34 ಕೃಷಿ ಅಧಿಕಾರಿ, 223 ಸಹಾಯಕ ಕೃಷಿ ಅಧಿಕಾರಿ, 17 ದ್ವಿತೀಯ ದರ್ಜೆ ಸಹಾಯಕರು, 17 ಬೆರಳಚ್ಚುಗಾರರು ಹಾಗೂ ಉಳಿಕೆ ವೃಂದದಲ್ಲಿ 84 ಕೃಷಿ ಅಧಿಕಾರಿ, 586 ಸಹಾಯಕ ಕೃಷಿ ಅಧಿಕಾರಿಗಳು ಸೇರಿದಂತೆ ಒಟ್ಟಾರೆ 961 ಹುದ್ದೆಗಳ ನೇಮಕಾತಿಗೆ ಕೃಷಿ ಇಲಾಖೆಯಿಂದ ಕರ್ನಾಟಕ ಲೋಕಾಸೇವಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಬೆಳೆ ವಿಮೆ ಯೋಜನೆಯನ್ನು ಮತ್ತಷ್ಟು ಪಾರದರ್ಶಕಗೊಳಿಸಿ

ರೈತರ ಹಿತಕಾಯಲು ಸರ್ಕಾರ ರೂಪಿಸಿರುವ ಬೆಳೆ ವಿಮೆ ಯೋಜನೆಯ ಸಂಪೂರ್ಣ ಫಲ ಕೃಷಿಕರಿಗೆ ಹೋಗುತ್ತಿದ್ದು, ಇದನ್ನು ಇನ್ನಷ್ಟು ಪಾರದರ್ಶಕಗೊಳಿಸಿ ಎಲ್ಲರ ಅನುಮಾನಗಳನ್ನು ಸಂಪೂರ್ಣವಾಗಿ ಬಗೆಹರಿಸಿ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ನಿರ್ದೇಶನ ನೀಡಿದ್ದಾರೆ.

ಇದನ್ನೂ ಓದಿ: MB Patil: ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಖಚಿತ; ಎಂ ಬಿ ಪಾಟೀಲ್‌

ವಿಕಾಸ ಸೌಧದ ತಮ್ಮ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮದ 313ನೇ ನಿರ್ದೇಶಕ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಲಾಖೆಯ ಯಾವುದೇ ಅಧಿಕಾರಿಗಳು ಏಜೆನ್ಸಿಗಳ ಪರ ಇಲ್ಲವೇ ಇಲ್ಲ, ನಾವೆಲ್ಲರೂ ರೈತರಿಗಾಗಿ ಕೆಲಸ ಮಾಡುತ್ತಿದ್ದೇವೆ. ಆದರೂ ಕೆಲವು ರೈತರು, ಜನ ಪ್ರತಿನಿಧಿಗಳಲ್ಲಿ ಇರುವ ಅನುಮಾನಗಳನ್ನು ವ್ಯವಸ್ಥಿತವಾಗಿ ಮನವರಿಕೆ ಮಾಡಿಕೊಟ್ಟು ಬಗೆಹರಿಸಬೇಕು ಇದಕ್ಕಾಗಿ ಒಂದು ಸಭೆ ಆಯೋಜಿಸುವಂತೆ ಸಚಿವರು ಸೂಚಿಸಿದರು.

ತಳ ಹಂತದಿಂದ ಮೇಲ್ಮಟ್ಟದವರೆಗೆ ಯಾವುದೇ ಅಧಿಕಾರಿ, ಸಿಬ್ಬಂದಿ ಬೆಳೆ ವಿಮೆ ಕಂಪನಿಗಳಿಂದ ಒಂದು ಸಣ್ಣ ಅನುಕೂಲವನ್ನೂ ಪಡೆಯುತ್ತಿಲ್ಲ. ಮುಂದೇಯೂ ಯಾವುದೇ ಸಂದರ್ಭದಲ್ಲಿಯೂ ನಡೆಯಬಾರದು ಎಂದು ಸೂಚನೆ ನೀಡಿದರು.

ಇದೇ ವೇಳೆ ಕೃಷಿ ಇಲಾಖೆ ಕಾರ್ಯದರ್ಶಿ ಅನ್ಭುಕುಮಾರ್ ಮತ್ತು ಆಯುಕ್ತ ವೈ.ಎಸ್. ಪಾಟೀಲ್ ಅವರು ಬೆಳೆ ಸಮೀಕ್ಷೆ ಕೇವಲ ಕೃಷಿ ಇಲಾಖೆಗಳಿಂದ ಆಗುತ್ತಿಲ್ಲ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಲಾಗುವ ವಿವಿಧ ಇಲಾಖೆ ಅಧಿಕಾರಿಗಳ ಸಮಿತಿಯಿಂದ ನಡೆಯುತ್ತಿದ್ದು, ಯಾವುದೇ ಲೋಪಗಳಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: Kannada New Movie: ಮೋಷನ್ ಪೋಸ್ಟರ್‌ನಲ್ಲೇ ಕುತೂಹಲ ಮೂಡಿಸಿದ ವಿಭಿನ್ನ ಕಥಾಹಂದರ ಹೊಂದಿರುವ ‘ಹಗ್ಗ’

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ದೇವರಾಜ್, ತೋಟಗಾರಿಕೆ ನಿರ್ದೇಶಕ ರಮೇಶ್, ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿ ಹೊನ್ನಲಿಂಗಪ್ಪ ಹಾಗೂ ಇತರರು ಹಾಜರಿದ್ದರು.

Continue Reading

ತುಮಕೂರು

Tumkur News: ರೈತರು ಮೊಬೈಲ್ ಆ್ಯಪ್ ಮೂಲಕ ಬೆಳೆ ವಿವರ ದಾಖಲಿಸಬೇಕು

Tumkur News: 2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದ ತಮ್ಮ ಜಮೀನಿನ ಬೆಳೆ ವಿವರಗಳನ್ನು ದಾಖಲಿಸಲು ಮುಂಗಾರು ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗಿದೆ ಎಂದು ಕೊರಟಗೆರೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಆರ್.ರುದ್ರಪ್ಪ ತಿಳಿಸಿದ್ದಾರೆ.

VISTARANEWS.COM


on

Farmers record crop details through mobile app
ಕೊರಟಗೆರೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಆರ್.ರುದ್ರಪ್ಪ.
Koo

ಕೊರಟಗೆರೆ: 2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆದ ತಮ್ಮ ಜಮೀನಿನ ಬೆಳೆ ವಿವರಗಳನ್ನು ದಾಖಲಿಸಲು ಮುಂಗಾರು ರೈತರ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಬಿಡುಗಡೆ ಮಾಡಲಾಗಿದೆ ಎಂದು ಕೊರಟಗೆರೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಆರ್.ರುದ್ರಪ್ಪ (Tumkur News) ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ರೈತರು ತಮ್ಮ ಮೊಬೈಲ್ ಆ್ಯಪ್ ಬೆಳೆಸಿ ತಾವು ಬೆಳೆದಿರುವ ಬೆಳೆಗಳಿಗೆ ಸ್ವತಃ ತಾವೇ ಬೆಳೆ ಸಮೀಕ್ಷೆ ಮಾಡಿ, ಬೆಳೆ ವಿವರಗಳನ್ನು ದಾಖಲಿಸಲು ಕೋರಲಾಗಿದೆ.

ಇದನ್ನೂ ಓದಿ: Foreign Investment: ರಾಜ್ಯದಲ್ಲಿ ಸ್ಮಾರ್ಟ್ ಫೋನ್ ಕ್ಯಾಮೆರಾ ಬಿಡಿಭಾಗ ತಯಾರಿಕೆ ಘಟಕ; ದ.ಕೊರಿಯಾ ಜತೆ ಕರ್ನಾಟಕ ಒಪ್ಪಂದ

ರೈತರಿಂದಲೇ ಬೆಳೆ ಸಮೀಕ್ಷೆ ಮಾಡುವ ರೈತ ಸ್ನೇಹಿ ಕಾರ್ಯಕ್ರಮ ಬಹಳ ಉಪಯುಕ್ತವಾಗಿದ್ದು. ಈ ಮಾಹಿತಿಯನ್ನು ಬೆಳೆ ಸಾಲ, ಬೆಳೆ ವಿಮೆ, ಬೆಂಬಲ ಬೆಲೆ ಖರೀದಿ, ಬೆಳೆ ಪರಿಹಾರ ಮತ್ತು ವಿವಿಧ ಇಲಾಖೆಗಳ ಸವಲತ್ತುಗಳನ್ನು ಪಡೆಯಲು ಹಾಗೂ ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು ಉಪಯೋಗಿಸಲಾಗುವುದು ಆದ್ದರಿಂದ ಸ್ವತಃ ರೈತರೇ ತಮ್ಮ ಮೊಬೈಲ್ ಆ್ಯಪ್ ಮೂಲಕ ಸಕಾಲಿಕವಾಗಿ ಬೆಳೆ ವಿವರಗಳನ್ನು ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡುವುದರಿಂದ ನ್ಯೂನ್ಯತೆಗಳನ್ನು ಕಡಿಮೆ ಮಾಡಬಹುದು ಹಾಗೂ ಸೌಲಭ್ಯಗಳಿಂದ ವಂಚಿತರಾಗುವುದನ್ನು ಸಹ ತಪ್ಪಿಸಬಹುದಾಗಿದೆ.

ಇದನ್ನೂ ಓದಿ: Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

ತಾಲೂಕಿನ ಎಲ್ಲಾ ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಂಡು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರವನ್ನು ನಿಗದಿತ ಸಮಯದೊಳಗೆ ಅಪ್‌ಲೋಡ್ ಮಾಡುವುದು ಮತ್ತು ಮಾಹಿತಿಗಾಗಿ ಟೋಲ್ ಫ್ರೀ ಸಂಖ್ಯೆ 18004253553 ಅಥವಾ ಗ್ರಾಮದ ಖಾಸಗಿ ನಿವಾಸಿಗಳು ಮತ್ತು ಕಂದಾಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ರೇಷ್ಮೆ ಇಲಾಖೆ ಮತ್ತು ಸಾಂಖ್ಯಿಕ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Continue Reading

ಕೃಷಿ

Arecanut Import: ಅಕ್ರಮ ಅಡಿಕೆ ಆಮದು ರೋಗಕ್ಕೆ ಔಷಧವೇ ಇಲ್ಲವೇ?

Arecanut Import: ಡ್ರೈ ಫ್ರೂಟ್ಸ್ ಹೆಸರಲ್ಲಿ ಕಡಿಮೆ ದರ, ಕಡಿಮೆ ಕಸ್ಟಮ್ಸ್ ಡ್ಯೂಟಿಯಲ್ಲಿ ಅಕ್ರಮ ಅಡಿಕೆ ಭಾರತದ ಒಳಗೆ ಬಂದು ಉದುರುತ್ತಿದೆ. ಹಸಿ ಅಡಿಕೆ ಹೆಸರಿನಲ್ಲಿ ಫೇಕ್ ದರದ ಬಿಲ್ ಮಾಡಿ, ನಾಮಕಾವಸ್ತೆ ಆಮದು ಸುಂಕ ಕಟ್ಟಿ, ಅಡಿಕೆ ಭ್ರಷ್ಟ ಆಮದುದಾರರ ಮೂಲಕ ಗುಟ್ಕಾ ಕಂಪನಿಗಳಿಗೆ ಬಂದು ಸೇರುತ್ತಿವೆ. ಸಾಗರದ ಮೂಲಕ 40 feet ಕಂಟೈನರ್‌ಗಳ ಮೂಲಕ ನೇರ ಪೋರ್ಟಿಗೆ ಕಳ್ಳ ದಾಖಲಾತಿಗಳೊಂದಿಗೆ ಅಡಿಕೆ ಆಮದಾಗುತ್ತಿದೆ. ಇದರ ಪರಿಣಾಮ ಅಡಿಕೆ ದರ ಕುಸಿದಿದೆ.

VISTARANEWS.COM


on

By

Arecanut Import
ಸಾಂದರ್ಭಿಕ ಚಿತ್ರ
Koo

ಅರವಿಂದ ಸಿಗದಾಳ್, ಮೇಲುಕೊಪ್ಪ
ಕಳ್ಳ ದಾರಿಯಲ್ಲಿ ಅಡಿಕೆ ಆಮದು (Arecanut Import) ಆಗುತ್ತಿರುವುದು ಒಂದೋ ಎರಡೋ ಪ್ರಕರಣ ಅಲ್ಲ. ಕೆಲವು ವರ್ಷಗಳಿಂದ ಅನೇಕ ಪ್ರಕರಣಗಳು ಸುದ್ದಿ ಆಗುತ್ತಲೇ ಇವೆ. ಸುದ್ದಿ ಆಗುವುದು ಬೆಳಕಿಗೆ ಬಂದ ಪ್ರಕರಣಗಳು ಮಾತ್ರ! ಡ್ರೈ ಫ್ರೂಟ್ಸ್ ಹೆಸರಲ್ಲಿ ಕಡಿಮೆ ದರ, ಕಡಿಮೆ ಕಸ್ಟಮ್ಸ್ ಡ್ಯೂಟಿಯಲ್ಲಿ ಅಕ್ರಮ ಅಡಿಕೆ ಭಾರತದ ಒಳಗೆ ಬಂದು ಉದುರುತ್ತಿದೆ! ಹಸಿ ಅಡಿಕೆ ಹೆಸರಿನಲ್ಲಿ ಫೇಕ್ ದರದ ಬಿಲ್ ಮಾಡಿ, ನಾಮಕಾವಸ್ತೆ ಆಮದು ಸುಂಕ ಕಟ್ಟಿ, ಅಡಿಕೆ ಭ್ರಷ್ಟ (Illegal transportation of arecanut) ಆಮದುದಾರರ ಮೂಲಕ ಗುಟ್ಕಾ ಕಂಪನಿಗಳಿಗೆ ಬಂದು ಸೇರುತ್ತಿವೆ.

ಸಾಗರದ ಮೂಲಕ 40 feet ಕಂಟೈನರ್‌ಗಳ ಮೂಲಕ ನೇರ ಪೋರ್ಟಿಗೆ ಕಳ್ಳ ದಾಖಲಾತಿಗಳೊಂದಿಗೆ ಅಡಿಕೆ ಆಮದಾಗುತ್ತಿದೆ. ಆಮದು ಆದ ಕೆಲವು ಕಳ್ಳ ಅಡಿಕೆ ಸೀಜ್ ಆಗುತ್ತದೆ. ಅವು ಮಾತ್ರ ಸುದ್ದಿ ಆಗುತ್ತದೆ. ಹೀಗೆ ಸಿಕ್ಕಿ ಹಾಕಿಕೊಂಡ ಅಡಿಕೆ ಮಾತ್ರ ಅತ್ಯಂತ ಕಡಿಮೆ ಬೆಲೆಯಲ್ಲಿ ಹರಾಜ್ ಹಾಕಲಾಗುತ್ತದೆ. ಇಲ್ಲಿಯ ವರ್ತಕರು ಅದನ್ನು ಕಡಿಮೆ ಬೆಲೆಗೆ ಹರಾಜು ಹಿಡಿಯುತ್ತಾರಂತೆ. ಇದಲ್ಲದೆ ಈಶಾನ್ಯ ರಾಜ್ಯಗಳ ಗಡಿಯಿಂದಲೂ ರಾಜಾರೋಷವಾಗಿ ಅಡಿಕೆ ಕಳ್ಳಸಾಗಾಣಿಯಾಗಿ ಬರುತ್ತಿದೆ ಎಂದು ಅಲ್ಲಿನ ಮುಖ್ಯ ಮಂತ್ರಿಗಳೇ ಕೇಂದ್ರಕ್ಕೆ ಮಾಹಿತಿ ಕೊಡುತ್ತಿದ್ದಾರೆ.

ಇದನ್ನೂ ಓದಿ: Arecanut Insurance : ಮೆಣಸು, ಅಡಿಕೆಗೆ ವಿಮೆ ಪ್ರೀಮಿಯಂ ಕಟ್ಟಲು ಜು.31 ಕೊನೆಯ ದಿನ

ಭೂತಾನ್‌ನಿಂದ ಬರುತ್ತಿದೆ ಸಾವಿರಾರು ಟನ್ ಹಸಿ ಅಡಿಕೆ!

ಚೇಣಿ ವಹಿಸಿಕೊಂಡವರು ಅಡಿಕೆ ಕೊನೆಯನ್ನು ಊರಿನಿಂದ ಊರಿಗೆ ಸಾಗಿಸುವಷ್ಟೇ ಸರಳವಾಗಿ ವರ್ತಕರು ಶ್ರೀಲಂಕದಿಂದ ಅಕ್ರಮ ಕಳಪೆ ಸಿದ್ದ ಅಡಿಕೆಯನ್ನು ದೇಶದ ಕಸ್ಟಮ್ ಚಕ್ ಪೋಸ್ಟ್‌ನ್ನು ‘ಮಾಂತ್ರಿಕ’ ಮೋಡಿಯಲ್ಲಿ ಮೌನವಾಗಿಸಿ ಕದ್ದು ತರುತ್ತಾರೆ! ಅಡಿಕೆಯನ್ನು ಬೆಳೆಯದ ಅರಬ್ ದೇಶಗಳಿಂದ ಅಕ್ರಮವಾಗಿ ಭಾರತದ ಹರಿವಾಣಕ್ಕೆ ತಂದು ಸುರಿಯಲಾಗುತ್ತದೆ. ನೇಪಾಳ, ಬಾಂಗ್ಲಾ, ಇಂಡೋನೇಷಿಯಾ, ಯುಎಇ (UAE) ಗಳಿಂದ ಅಕ್ರಮ ಅಡಿಕೆ ಬಂದ ಸುದ್ದಿಗಳು ಆಗಾಗ ಪ್ರಕಟವಾಗುತ್ತಲೇ ಇರುತ್ತವೆ.

ಇಷ್ಟಾದರೂ ರಾಜ್ಯದ ಕೇಂದ್ರ ಸಂಸದರಾಗಲಿ, ರಾಜ್ಯದ ಶಾಸಕ-ಸಚಿವರುಗಳಾಗಲಿ, ಜನಪ್ರತಿನಿಧಿಗಳಾಗಲಿ ಈ ಬಗ್ಗೆ ಬಾಯಿ ಬಿಡುವುದಿಲ್ಲ. ಅಡಿಕೆ ದರ ಕುಸಿಯುತ್ತಿದ್ದರೂ, ಅಡಿಕೆ ಬೆಳೆವ ಜಿಲ್ಲೆಗಳ ಜನಪ್ರತಿನಿಧಿಗಳದು ಮೌನ ಬಂಗಾರ! ಅಡಿಕೆ ಕೊಳೆ ರೋಗಕ್ಕೆ ಔಷಧಿ ಹೊಡೆದಂತೆ, ಅಕ್ರಮ ಅಡಿಕೆ ಆಮದು ರೋಗಕ್ಕೆ ನಿಯಮಿತವಾಗಿ ಸರಕಾರಕ್ಕೆ ಆಗ್ರಹ/ಮನವಿಗಳ ಔಷಧಿ ಹೊಡೆಯುತ್ತಿರಬೇಕು! ಅಕ್ರಮ ಅಡಿಕೆ ಆಮದು ರೋಗದ ವಿರುದ್ಧ ‘ನಿಯಂತ್ರಣಕ್ಕಾಗಿ’ ಕ್ಯಾಂಪ್ಕೋ, ಮ್ಯಾಮ್‌ಕೋಸ್, ಬೆಳೆಗಾರರ ಸಂಘಟನೆಗಳು ಆಗಾಗ ಮನವಿಯೊಂದಿಗೆ ಒತ್ತಾಯದ ಜತೆಗೆ ಬೋರ್ಡೋ ಸ್ಪ್ರೇ ಮಾಡುತ್ತಿರುತ್ತವೆ.

ಅಕ್ರಮದಿಂದಾಗಿಯೇ ಇಳಿಯಿತು ದರ

ಕಳೆದ ಎರಡು ತಿಂಗಳಲ್ಲಿ ರಾಶಿ ಇಡಿ ಅಡಿಕೆ ಅಕ್ರಮ ಆಮದು ರೋಗದ ಪರಿಣಾಮ ಕ್ವಿಂಟಾಲ್‌ಗೆ 5,000 ರೂ. ಇಳಿಕೆ ಕಂಡಿದೆ. ಅಕ್ರಮ ಆಮದು ರೋಗ ಬಂದು ಸ್ಥಳೀಯ ಅಡಿಕೆ ದರ ಕುಸಿದರೂ ಜನ ಪ್ರತಿನಿಧಿಗಳು ಬಹುಶಃ ಯಾವುದೋ ಸ್ವಾದಿಷ್ಟಭರಿತ ‘ತಾಂಬೂಲ’ ಸೇವನೆಯಿಂದ ಮಾತಾಡಲಾರದ ಪರಿಸ್ಥಿತಿಯಲ್ಲಿರಬಹುದು! ಅಡಿಕೆ ಆಕ್ರಮ ಆಮದು ರೋಗ ನಿಯಂತ್ರಣಕ್ಕೆ ಪೂರಕ ‘ವಾತಾವರಣ’ ನಿರ್ಮಾಣ ಆದೀತಾ ಎಂದು ಅಡಿಕೆ ಬೆಳೆಗಾರರು ಕಾಯುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Rakshit Shetty copy right issue Bachelor Party File a complaint
ಸ್ಯಾಂಡಲ್ ವುಡ್3 mins ago

Rakshit Shetty: ರಕ್ಷಿತ್‌ ಶೆಟ್ಟಿಗೆ ತಪ್ಪದ ಸಂಕಷ್ಟ; ಮತ್ತೊಂದು ದೂರು ದಾಖಲು!

Euro 2024 final
ಕ್ರೀಡೆ14 mins ago

Euro 2024 final: 4ನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಸ್ಪೇನ್​

udupi fire tragedy bar owner
ಉಡುಪಿ22 mins ago

Fire Tragedy: ಅಗ್ನಿ ಆಕಸ್ಮಿಕಕ್ಕೆ ಮನೆ ಸುಟ್ಟು ಕರಕಲು, ಬಾರ್‌ ಮಾಲೀಕ ಸಾವು

Anant Ambani Wedding Tamannaah Bhatia is vintage beauty
ಬಾಲಿವುಡ್27 mins ago

Anant Ambani Wedding: ಅನಂತ್ ಅಂಬಾನಿ ಆರತಕ್ಷತೆಯಲ್ಲಿ ದುಬಾರಿ ಲೆಹೆಂಗಾ ಧರಿಸಿ ಅಪ್ಸರೆಯಂತೆ ಕಂಡ ತಮನ್ನಾ ಭಾಟಿಯಾ!

Katrina Kaif Visited Swamy Koragajja Aadisthala Kuthar
ಬಾಲಿವುಡ್44 mins ago

Katrina Kaif: ಕೊರಗಜ್ಜನ ಕ್ಷೇತ್ರದಲ್ಲಿ ಕತ್ರಿನಾ ಕೈಫ್; ದೈವದ ಬಳಿ ನಟಿ ಬೇಡಿಕೊಂಡಿದ್ದೇನು?

Trump Assassination Bid
ವಿದೇಶ47 mins ago

Trump Assassination Bid: ಟ್ರಂಪ್‌ ಮೇಲೆ ಗುಂಡಿನ ದಾಳಿ; ಶೂಟರ್‌ ಫೋಟೋ ರಿಲೀಸ್‌- ಆತನ ಸ್ನೇಹಿತರು ಹೇಳಿದ್ದೇನು?

Donald Trump
ವೈರಲ್ ನ್ಯೂಸ್51 mins ago

Donald Trump: ಜಗನ್ನಾಥನ ಕೃಪೆಯಿಂದ ಡೊನಾಲ್ಡ್‌ ಟ್ರಂಪ್‌ ಪಾರು; ಏನಿದು ದೈವಿಕ ಪವಾಡ? ವೈರಲ್‌ ಪೋಸ್ಟ್‌ ಇಲ್ಲಿದೆ

assembly session
ಪ್ರಮುಖ ಸುದ್ದಿ57 mins ago

Assembly Session: ಇಂದಿನಿಂದ ವಿಧಾನ ಮಂಡಲ ಅಧಿವೇಶನ, ರಂಗೇರಲಿರುವ ಕೈ- ಕಮಲ ಕದನ; ಚಕಮಕಿಗೆ ಅಸ್ತ್ರ- ಪ್ರತ್ಯಸ್ತ್ರಗಳು ಸಜ್ಜು

T20 World Cup 2026: Pakistan to boycott 2026 T20 World Cup in India
ಕ್ರೀಡೆ58 mins ago

T20 World Cup 2026: ಆತಿಥೇಯ ಭಾರತಕ್ಕೆ ಬೆದರಿಕೆಯೊಡ್ಡಿದ ಪಾಕಿಸ್ತಾನ ಕ್ರಿಕೆಟ್​ ಮಂಡಳಿ​

Kalki 2898 AD Prabhas thanks fans
ಟಾಲಿವುಡ್1 hour ago

Kalki 2898 AD: ನೀವಿಲ್ಲದೆ ನಾನು ಶೂನ್ಯ ಎಂದು ಅಭಿಮಾನಿಗಳಿಗೆ ಧನ್ಯವಾದ ಹೇಳಿದ ನಟ ಪ್ರಭಾಸ್‌!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ3 hours ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ16 hours ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ17 hours ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ21 hours ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ22 hours ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ2 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ2 days ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

karnataka Rain Effect
ಮಳೆ4 days ago

Karnataka Rain : ಭಾರಿ ಮಳೆಗೆ ಕರೆಯಂತಾದ ರಸ್ತೆಯಲ್ಲಿ ಬೈಕ್‌ ಚಲಾಯಿಸಿ ಮುಗ್ಗರಿಸಿ ಬಿದ್ದ ಸವಾರರು; ನಾಳೆಗೂ ರೈನ್‌ ಅಲರ್ಟ್‌

Chikkamagaluru News Police detained youths for consuming liquor at tourist spot in Chikmagaluru
ಮಳೆ6 days ago

Chikkamagaluru News : ಚಿಕ್ಕಮಗಳೂರು ಚಳಿಗೆ ನಶೆ ಏರಿಸಿಕೊಳ್ಳುತ್ತಿದ್ದವರ ಕಿಕ್ಕಿಳಿಸಿದ ಬಣಕಲ್ ಪಿಎಸ್ಐ ರೇಣುಕಾ

ಟ್ರೆಂಡಿಂಗ್‌