Crime news | ಬೆಂಗಳೂರಿನ ಬೀದಿಯಲ್ಲಿ ಹೆಣಗಳು ಬೀಳುತ್ತಿವೆ, ಹೊಯ್ಸಳ ಗಸ್ತು ಎಲ್ಲಿದೆ? - Vistara News

ಕ್ರೈಂ

Crime news | ಬೆಂಗಳೂರಿನ ಬೀದಿಯಲ್ಲಿ ಹೆಣಗಳು ಬೀಳುತ್ತಿವೆ, ಹೊಯ್ಸಳ ಗಸ್ತು ಎಲ್ಲಿದೆ?

ಬೆಂಗಳೂರಿನಲ್ಲಿ ಇತ್ತೀಚೆಗೆ ನಡುಬೀದಿಯಲ್ಲೇ ಎರಡು ಕೊಲೆಗಳಾಗಿವೆ. ಆರೋಪಿಗಳು ಪರಾರಿಯಾಗಿದ್ದಾರೆ. ಹೊಯ್ಸಳ ಪೊಲೀಸರು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಮೂಡಿದೆ.

VISTARANEWS.COM


on

hoyasala police
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜಧಾನಿಯ ಜನನಿಬಿಡ ಬೀದಿಗಳಲ್ಲೇ ರಾತ್ರೋರಾತ್ರಿ ಹೆಣಗಳು ಬೀಳುತ್ತಿವೆ. ಕೊಲೆಪಾತಕಿಗಳು ಬೇರೆ ಜಿಲ್ಲೆಗೆ ಎಸ್ಕೇಪ್‌ ಆಗುತ್ತಾರೆ. ರೌಡಿಗಳು ಹೊಡೆದಾಡಿಕೊಳ್ಳುತ್ತಾರೆ. ಇದೆಲ್ಲವನ್ನೂ ಗಮನಿಸಿದಾಗ, ಬೆಂಗಳೂರಿನಲ್ಲಿ ನಿಜಕ್ಕೂ ಹೊಯ್ಸಳ ಪೊಲೀಸ್ ಗಸ್ತು ವ್ಯವಸ್ಥೆ ಸರಿಯಾಗಿ ಇದೆಯಾ‌ ಎಂಬ ಅನುಮಾನ ಮೂಡಿದೆ.

ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆದ ಎರಡು ಕೊಲೆ ಪ್ರಕರಣಗಳು ಪೊಲೀಸ್ ಗಸ್ತಿನ ಬಗ್ಗೆ ಅನುಮಾನ ಹುಟ್ಟು ಹಾಕಿವೆ. ಕೆ.ಪಿ ಆಗ್ರಹಾರದಲ್ಲಿ, ವಾಸದ ಮನೆಗಳೇ ಹೆಚ್ಚಾಗಿರುವ ಜಾಗದಲ್ಲಿ ನಡುಬೀದಿಯಲ್ಲಿ ಆರು ಮಂದಿಯ ತಂಡ ವ್ಯಕ್ತಿಯೊಬ್ಬನನ್ನು ಭೀಕರ ವಾಗಿ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿತ್ತು. ಕೊಲೆ ಮಾಡಿದ ಬಳಿಕ ಆರೋಪಿಗಳು ಆರಾಮವಾಗಿ ಬೇರೆ ಜಿಲ್ಲೆಗೆ ಪರಾರಿಯಾಗಿದ್ದರು. ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೂಡ ಕೊಲೆ ಮಾಡಿ, ಹೆಣವನ್ನು ಠಾಣೆ ಪಕ್ಕದಲ್ಲೇ ಹಾಕಿ ಹೋಗಿದ್ದರು. ಇತ್ತೀಚೆಗೆ ಕೆಲವು ಕಡೆ ಬೀದಿಗಳಲ್ಲಿ ಹಾಗೂ ಬಾರ್‌ಗಳಲ್ಲಿ ರೌಡಿ ಗ್ಯಾಂಗ್‌ಗಳು ಹೊಡೆದಾಡಿಕೊಂಡಿದ್ದವು.

ಇದನ್ನೂ ಓದಿ | Murder by husband | ಪೇಟೆಗೆ ಕರೆ ತಂದು ಲಾರಿ ಕೆಳಗೆ ತಳ್ಳಿ ಪತ್ನಿಯನ್ನು ಕೊಲೆ ಮಾಡಿದ ಪತಿ!

ಕೊಲೆ ಮಾಡಿ ಅನಾಯಸವಾಗಿ ಆರೋಪಿಗಳು ಹೋಗುತ್ತಿದ್ದರೂ, ಪೊಲೀಸ್ ಇಲಾಖೆ ಮಾತ್ರ ಹೊಯ್ಸಳ ಗಸ್ತು ತುಂಬಾ ಚೆನ್ನಾಗಿದೆ ಎಂದು ಹೇಳುತ್ತಿದೆ. ಜನನಿಬಿಡ ಸ್ಥಳಗಳಲ್ಲೇ ಕೊಲೆ ಮಾಡಿ ಹೋದರೂ ಪೊಲೀಸ್ ಗಸ್ತಿಗೆ ಮಾತ್ರ ಆರೋಪಿಗಳು ಸಿಗುತ್ತಿಲ್ಲ. ಈ ಹಿಂದೆ ಬೀಟ್‌ನಲ್ಲಿ ಘಟನೆ ನಡೆದಿದ್ದರೆ ಆಯಾ ಬೀಟ್ ಪೊಲೀಸರೇ ಹೊಣೆ ಎಂದು ಆಗಿನ ಪೊಲೀಸ್ ಆಯುಕ್ತ ಕಮಲ್ ಪಂಥ್ ಹೇಳಿದ್ದರು. ಅಷ್ಟಲ್ಲದೆ ತಮ್ಮ ಚೇಂಬರ್‌ನಲ್ಲಿಯೇ ಕೂತು ಹೊಯ್ಸಳ ಬೀಟ್ ಅನ್ನು ಮಾನಿಟರ್ ಮಾಡುತ್ತಿದ್ದರು. ಹೀಗಾಗಿ ಬೀಟ್‌ಗಳನ್ನು ಪೊಲೀಸರು ಶ್ರದ್ಧೆಯಿಂದ ಮಾಡುತ್ತಿದ್ದರು.

ಸದ್ಯ ಅಂತಹ ಬಿಗಿ ಇಲ್ಲದ ಕಾರಣ ಹೀಗಾಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಕೃತ್ಯಗಳು ನಡೆದ ಬಳಿಕವೂ ಆರೋಪಿಗಳು ಸಿಗದೆ ಪರಾರಿಯಾಗುತ್ತಿದ್ದಾರೆ. ಹೊಯ್ಸಳ ಬೀಟ್‌ ಇನ್ನಷ್ಟು ಚುರುಕಾಗಬೇಕಿದೆ ಎನ್ನುತ್ತಿದ್ದಾರೆ ಜನ.

ಇದನ್ನೂ ಓದಿ | Murder Case | 24 ಬಾರಿ ಕಲ್ಲು ಎತ್ತಿಹಾಕಿ ಯುವಕನ ಕೊಲೆ; ಆರೋಪಿಗಳನ್ನು ಬಂಧಿಸಿದ ಪೊಲೀಸರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Drown in Quarry: ಕ್ವಾರಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರ ಸಾವು

Drown in Quarry: ಧಾರವಾಡ ತಾಲೂಕಿನ ಮನಸೂರ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. ಒಬ್ಬ ಯುವಕನ ಮೃತದೇಹ ಸಿಕ್ಕಿದ್ದು, ಮತ್ತೊಬ್ಬನ ಮೃತದೇಹಕ್ಕಾಗಿ ಹುಡುಕಾಟ ನಡೆಯುತ್ತಿದೆ.

VISTARANEWS.COM


on

Two drown in quarry
Koo

ಧಾರವಾಡ: ಕಲ್ಲಿನ‌ ಕ್ವಾರಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲಾಗಿರುವ (Drown in Quarry) ಘಟನೆ ತಾಲೂಕಿನ ಮನಸೂರ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಧಾರವಾಡದ ಮಾಳಮಡ್ಡಿಯ ಶ್ರೇಯಸ್ ಸೇರಿ ಇಬ್ಬರು ಮೃತರು. ಶ್ರೇಯಸ್‌ ಮೃತದೇಹ ಸಿಕ್ಕಿದ್ದು, ಮತ್ತೊಬ್ಬನ ದೇಹಕ್ಕೆ ಹುಡುಕಾಟ ನಡೆಸಲಾಗುತ್ತಿದೆ. ಸ್ಥಳಕ್ಕೆ ಗ್ರಾಮೀಣ ಠಾಣೆಯ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ವಿದ್ಯುತ್ ತಗುಲಿ ಯುವಕ ಸಾವು

ಮಂಗಳೂರು: ವಿದ್ಯುತ್ ಕಂಬ ಏರಿ ದುರಸ್ತಿ ಮಾಡುತ್ತಿದ್ದಾಗ ವಿದ್ಯುತ್‌ ಸ್ಪರ್ಶಿಸಿ ಯುವಕ ಮೃತಪಟ್ಟಿರುವ ಅವಘಡ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಪಂಜದಲ್ಲಿ ನಡೆದಿದೆ. ಬೆಳ್ತಂಗಡಿಯ ಮೊಗ್ರು ಸಮೀಪದ ನಡುಎರ್ಮಲ್‌ನ ಪ್ರಕಾಶ್ (29) ಮೃತ.

ಪಂಜದ ಅಲೆಕ್ಕಾಡಿ ಸಮೀಪದ ಪಿಜಾವ್‌ನಲ್ಲಿ ವಿದ್ಯುತ್ ಕಂಬ ಏರಿ ಕೆಲಸ ಮಾಡುತ್ತಿದ್ದಾಗ ಯುವಕನಿಗೆ ವಿದ್ಯುತ್‌ ತಗುಲಿ ಮೃತಪಟ್ಟಿದ್ದಾನೆ. ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Actor Darshan: ಅಂದು `ತಗಡು’ ಅಂದಿದ್ದ ದರ್ಶನ್‌ಗೆ ಇಂದು ಉಮಾಪತಿ ಕೌಂಟರ್!

ರಸ್ತೆ ದಾಟುವಾಗ ಹರಿದ ಕಾರು; ಒದ್ದಾಡಿ ಪ್ರಾಣಬಿಟ್ಟ ಬಾಲಕ

ಬೆಳಗಾವಿ: ಕಾರೊಂದು ಹರಿದ ಪರಿಣಾಮ (Road Accident) ಬಾಲಕನೊರ್ವ ದಾರುಣವಾಗಿ ಮೃತಪಟ್ಟಿದ್ದಾನೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರು ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ವಿನಯ್ ಲಕ್ಷ್ಮಣ ಕೆಂಚನ್ನವರ್(8) ಮೃತ ದುರ್ದೈವಿ.

ಅಂದಹಾಗೇ ವಿನಯ್‌ ನಾಗನೂರು ಬಳಿ ರಸ್ತೆ ದಾಟುವಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಗಂಭೀರ ಗಾಯಗೊಂಡಿದ್ದ ವಿನಯ್‌ ತೀವ್ರ ರಕ್ತಸ್ರಾವವಾಗಿ ಒದ್ದಾಡುತ್ತಿದ್ದ. ಇತ್ತ ಅಪಘಾತವಾಗುತ್ತಿದ್ದಂತೆ ಕಾರು ಚಾಲಕನೇ ಬಾಲಕನನ್ನು ಆಸ್ಪತ್ರೆಗೆ ಕರೆತಂದಿದ್ದಾರೆ.

ಇದನ್ನೂ ಓದಿ | Road Accident : ನಿಂತಿದ್ದ ಟ್ಯಾಂಕರ್‌ ಟ್ಯಾಲಿಗೆ ಬೈಕ್‌ ಡಿಕ್ಕಿ; ಸವಾರ ಸಾವು, ಮತ್ತೋರ್ವ ಗಂಭೀರ

ಆದರೆ ವೈದ್ಯರು ಪರೀಕ್ಷಿಸಿ ಬಾಲಕ ಮೃತಪಟ್ಟಿದ್ದಾಗಿ ಖಚಿತ ಪಡಿಸಿದ್ದಾರೆ. ಬಳಿಕ ಆಸ್ಪತ್ರೆಯಿಂದ ಚಾಲಕ ನೇರ ಠಾಣೆಗೆ ಹಾಜರಾಗಿದ್ದಾನೆ. ಸದ್ಯ ಬಾಲಕನ ಮೃತದೇಹವು ಗೋಕಾಕ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ. ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

Continue Reading

ಬೆಳಗಾವಿ

Road Accident : ರಸ್ತೆ ದಾಟುವಾಗ ಹರಿದ ಕಾರು; ಒದ್ದಾಡಿ ಪ್ರಾಣಬಿಟ್ಟ ಬಾಲಕ

Road Accident : ರಸ್ತೆ ದಾಟುತ್ತಿದ್ದವನ ಮೇಲೆ ಕಾರೊಂದು ಹರಿದ ಪರಿಣಾಮ ಬಾಲಕನೊಬ್ಬ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ. ಗಾಯಗೊಂಡಿದ್ದ ಬಾಲಕನನ್ನು ಚಾಲಕನೇ ಆಸ್ಪತ್ರೆಗೆ ಕರೆದುಹೋಗಿದ್ದಾನೆ. ಆದರೆ ಬಾಲಕ ಮೃತಪಟ್ಟ ಹಿನ್ನೆಲೆಯಲ್ಲಿ ನೇರವಾಗಿ ಠಾಣೆಗೆ ಹೋಗಿ ಶರಣಾಗಿದ್ದಾನೆ.

VISTARANEWS.COM


on

By

Road Accident
Koo

ಬೆಳಗಾವಿ: ಕಾರೊಂದು ಹರಿದ ಪರಿಣಾಮ (Road Accident) ಬಾಲಕನೊರ್ವ ದಾರುಣವಾಗಿ ಮೃತಪಟ್ಟಿದ್ದಾನೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರು ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ವಿನಯ್ ಲಕ್ಷ್ಮಣ ಕೆಂಚನ್ನವರ್(8) ಮೃತ ದುರ್ದೈವಿ.

ಅಂದಹಾಗೇ ವಿನಯ್‌ ನಾಗನೂರು ಬಳಿ ರಸ್ತೆ ದಾಟುವಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಗಂಭೀರ ಗಾಯಗೊಂಡಿದ್ದ ವಿನಯ್‌ ತೀವ್ರ ರಕ್ತಸ್ರಾವವಾಗಿ ಒದ್ದಾಡುತ್ತಿದ್ದ. ಇತ್ತ ಅಪಘಾತವಾಗುತ್ತಿದ್ದಂತೆ ಕಾರು ಚಾಲಕನೇ ಬಾಲಕನನ್ನು ಆಸ್ಪತ್ರೆಗೆ ಕರೆತಂದಿದ್ದಾರೆ.

ಆದರೆ ವೈದ್ಯರು ಪರೀಕ್ಷಿಸಿ ಬಾಲಕ ಮೃತಪಟ್ಟಿದ್ದಾಗಿ ಖಚಿತ ಪಡಿಸಿದ್ದಾರೆ. ಬಳಿಕ ಆಸ್ಪತ್ರೆಯಿಂದ ಚಾಲಕ ನೇರ ಠಾಣೆಗೆ ಹಾಜರಾಗಿದ್ದಾನೆ. ಸದ್ಯ ಬಾಲಕನ ಮೃತದೇಹವು ಗೋಕಾಕ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ. ಮೂಡಲಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ.

ವಿಜಯನಗರದಲ್ಲಿ ಲಾರಿ ಪಲ್ಟಿ

ಮೊಟ್ಟೆ ಹೊತ್ತು ಹೊರಟಿದ್ದ ಲಾರಿಯೊಂದು ಪಲ್ಟಿಯಾಗಿದೆ. ರಾಷ್ಟ್ರೀಯ ಹೆದ್ದಾರಿ 50ರ ಶಿವಪುರ ಗ್ರಾಮದ ಬಳಿ ಘಟನೆ ನಡೆದಿದೆ. ವಿಜಯನಗರದ ಕೂಡ್ಲಿಗಿ ತಾಲೂಕಿನ ಹಾರುವನಹಳ್ಳಿ ಗ್ರಾಮದ ಬಳಿಯ ಕೋಳಿ ಫಾರಂನಿಂದ ಲೋಡ್ ಆಗಿ ಲಾರಿ ಹೊರಟಿತ್ತು. ನಿದ್ರೆ ಮಂಪರಿನಲ್ಲಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಲಾರಿ ಪಲ್ಟಿಯಾದ ರಭಸಕ್ಕೆ ಮೊಟ್ಟೆಗಳು ಒಡೆದು ಹೋಗಿತ್ತು. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Hunters Arrest : ಶಿವಮೊಗ್ಗದಲ್ಲಿ ಕಾಡುಕೋಣಗಳು ಬಲಿ; ಚಿಕ್ಕಬಳ್ಳಾಪುರ, ಬಾಗಲಕೋಟೆಯಲ್ಲಿ ಬೇಟೆಗಾರರು ಸೆರೆ

ಹಿಟ್‌ ಆ್ಯಂಡ್‌ ರನ್‌ ಕೇಸ್‌ಗೆ ಬೈಕ್‌ ಸವಾರ ಸಾವು

ಬೈಕ್‌ಗೆ ಡಿಕ್ಕಿ ಹೊಡೆದು ಕಾರು ಚಾಲಕ ಪರಾರಿಯಾಗಿದ್ದಾನೆ. ಅಪಘಾತದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉತ್ತರಕನ್ನಡದ ಭಟ್ಕಳದ ರಾಷ್ಟ್ರೀಯ ಹೆದ್ದಾರಿ 66ರ ಶಿರಾಲಿ ಬಳಿ ಘಟನೆ ನಡೆದಿದೆ. ರಾಮಚಂದ್ರ ನಾಗೇಶ್ ಮೊಗೇರ (42) ಮೃತ ದುರ್ದೈವಿ.

ರಾಮಚಂದ್ರ ಭಟ್ಕಳ ತಾಲೂಕಿನ ಅಳ್ವೆಕೋಡಿ ನಿವಾಸಿಯಾಗಿದ್ದು, ಕೈಕಿಣಿಯಿಂದ ಅಳ್ವೆಕೋಡಿಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಮುರ್ಡೇಶ್ವರ ಕಡೆಯಿಂದ ಭಟ್ಕಳ ಕಡೆ ತೆರಳುತ್ತಿದ್ದ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಾಘತದ ಬಳಿಕ ವೆಂಕಟಾಪುರ ಬಳಿ ಕಾರು ಬಿಟ್ಟು ಚಾಲಕ ಪರಾರಿ ಆಗಿದ್ದಾನೆ.

ಗಂಭೀರ ಗಾಯಗೊಂಡಿದ್ದ ರಾಮಚಂದ್ರರನ್ನು ಕೂಡಲೇ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ತನಿಖೆಯನ್ನು ನಡೆಸಲಾಗುತ್ತಿದೆ.

ನಿಂತಿದ್ದ ಟ್ಯಾಂಕರ್‌ ಟ್ಯಾಲಿಗೆ ಬೈಕ್‌ ಡಿಕ್ಕಿ; ಸವಾರ ಸಾವು, ಮತ್ತೋರ್ವ ಗಂಭೀರ

ನಿಂತಿದ್ದ ಟ್ಯಾಂಕರ್ ಟ್ಯಾಲಿಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ (Road Accident) ಮೃತಪಟ್ಟರೆ, ಮತ್ತೋರ್ವನಿಗೆ ಗಂಭೀರ ಗಾಯವಾಗಿದೆ. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮದ ಬಳಿ ಅಪಘಾತ ನಡೆದಿದೆ. ಯಮನಪ್ಪ (40) ಮೃತ ದುರ್ದೈವಿ.

ಮಸ್ಕಿ ತಾಲೂಕಿನ ಗುಡಿಹಾಳ ಗ್ರಾಮದ ಯಮನಪ್ಪ ಲಿಂಗಸೂಗೂರು ಕಡೆಯಿಂದ ಮಸ್ಕಿ ಕಡೆಗೆ ಬೈಕ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ನಿಂತಿದ್ದ ಟ್ಯಾಂಕರ್‌ ಟ್ಯಾಲಿ ಕಾಣದೆ ಬೈಕ್‌ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ತಲೆಗೆ ಗಂಭೀರ ಪೆಟ್ಟಾಗಿದ್ದು, ಯಮನಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜತೆಗೆ ಇದ್ದ ಗಂಗಣ್ಣ ಎಂಬಾತನಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮಸ್ಕಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ನಜ್ಜು-ಗುಜ್ಜಾಗಿದ್ದ ಬೈಕ್‌ ಅನ್ನು ವಶಕ್ಕೆ ಪಡೆಯಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Self Harming: ಆನ್‌ಲೈನ್‌ ಹೂಡಿಕೆಯಲ್ಲಿ ನಷ್ಟ; ಮಹಾರಾಣಿ ಕ್ಲಸ್ಟರ್ ವಿವಿ ವಿದ್ಯಾರ್ಥಿನಿ ನೇಣಿಗೆ ಶರಣು

Self Harming: ಆನ್‌ಲೈನ್‌ ಮೂಲಕ ಹೂಡಿಕೆ ಮಾಡಿ ವಿದ್ಯಾರ್ಥಿನಿ ಹಣ ಕಳೆದುಕೊಂಡಿದ್ದಾಳೆ. ಕೆಜಿಎಫ್‌ ಮೂಲಕ ವಿದ್ಯಾರ್ಥಿನಿ ಸಾಲ ಮಾಡಿ ಮೋಸದ ಜಾಲಕ್ಕೆ ಬಲಿಯಾಗಿದ್ದಾಳೆ.

VISTARANEWS.COM


on

Self harming
Koo

ಬೆಂಗಳೂರು: ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಮಾಡಿ ನಷ್ಟಕ್ಕೆ ಒಳಗಾದ ಹಿನ್ನೆಲೆಯಲ್ಲಿ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವುದು ನಡೆದಿದೆ. ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ನೇಣಿಗೆ (Self Harming) ಶರಣಾಗಿದ್ದು, ಸಾಲ ಮಾಡಿ ಮೋಸದ ಜಾಲಕ್ಕೆ ಬಲಿಯಾಗಿದ್ದಾಳೆ.

ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಪಾವನಿ ಮೃತ ಯುವತಿ. ಕೆಜಿಎಫ್ ಮೂಲದ ಯುವತಿ ಬಿಎಸ್‌ಸಿ ವ್ಯಾಸಂಗ ಮಾಡುತ್ತಿದ್ದಳು. ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಿ ಸುಮಾರು 15 ಸಾವಿರ ನಷ್ಟ ಮಾಡಿಕೊಂಡಿದ್ದಳು ಎನ್ನಲಾಗಿದೆ.

ಸಾಲ ಮಾಡಿ ಹೇಗೋ 10 ಸಾವಿರ ರೂಪಾಯಿ ಹೊಂದಿಸಿದ್ದ ಯುವತಿ, ಉಳಿದ 5 ಸಾವಿರ ರೂಪಾಯಿ ಹೊಂದಿಸಲು ಆಗದೆ ಚಿಂತೆಗೆ ಒಳಗಾಗಿದ್ದಳು. ಕೊನೆಗೆ ಸಾಲ ತೀರಸಲು ಆಗದೆ ಆತಂಕದಿಂದ ಭಾನುವಾರ ರಾತ್ರಿ ಪತ್ರ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ.

ಇದನ್ನೂ ಓದಿ | Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

ನಿಂತಿದ್ದ ಟ್ಯಾಂಕರ್‌ ಟ್ಯಾಲಿಗೆ ಬೈಕ್‌ ಡಿಕ್ಕಿ; ಸವಾರ ಸಾವು, ಮತ್ತೋರ್ವ ಗಂಭೀರ

Road Accident

ರಾಯಚೂರು: ನಿಂತಿದ್ದ ಟ್ಯಾಂಕರ್ ಟ್ಯಾಲಿಗೆ ಬೈಕ್ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ (Road Accident) ಮೃತಪಟ್ಟರೆ, ಮತ್ತೋರ್ವನಿಗೆ ಗಂಭೀರ ಗಾಯವಾಗಿದೆ. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮದ ಬಳಿ ಅಪಘಾತ ನಡೆದಿದೆ. ಯಮನಪ್ಪ (40) ಮೃತ ದುರ್ದೈವಿ.

ಮಸ್ಕಿ ತಾಲೂಕಿನ ಗುಡಿಹಾಳ ಗ್ರಾಮದ ಯಮನಪ್ಪ ಲಿಂಗಸೂಗೂರು ಕಡೆಯಿಂದ ಮಸ್ಕಿ ಕಡೆಗೆ ಬೈಕ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ನಿಂತಿದ್ದ ಟ್ಯಾಂಕರ್‌ ಟ್ಯಾಲಿ ಕಾಣದೆ ಬೈಕ್‌ ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ತಲೆಗೆ ಗಂಭೀರ ಪೆಟ್ಟಾಗಿದ್ದು, ಯಮನಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜತೆಗೆ ಇದ್ದ ಗಂಗಣ್ಣ ಎಂಬಾತನಿಗೆ ಗಂಭೀರ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮಸ್ಕಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ನಜ್ಜು-ಗುಜ್ಜಾಗಿದ್ದ ಬೈಕ್‌ ಅನ್ನು ವಶಕ್ಕೆ ಪಡೆಯಲಾಗಿದೆ.


ಹಿಟ್‌ ಆ್ಯಂಡ್‌ ರನ್‌ ಕೇಸ್‌ಗೆ ಬೈಕ್‌ ಸವಾರ ಸಾವು

ಬೈಕ್‌ಗೆ ಡಿಕ್ಕಿ ಹೊಡೆದು ಕಾರು ಚಾಲಕ ಪರಾರಿಯಾಗಿದ್ದಾನೆ. ಅಪಘಾತದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉತ್ತರಕನ್ನಡದ ಭಟ್ಕಳದ ರಾಷ್ಟ್ರೀಯ ಹೆದ್ದಾರಿ 66ರ ಶಿರಾಲಿ ಬಳಿ ಘಟನೆ ನಡೆದಿದೆ. ರಾಮಚಂದ್ರ ನಾಗೇಶ್ ಮೊಗೇರ (42) ಮೃತ ದುರ್ದೈವಿ.

ರಾಮಚಂದ್ರ ಭಟ್ಕಳ ತಾಲೂಕಿನ ಅಳ್ವೆಕೋಡಿ ನಿವಾಸಿಯಾಗಿದ್ದು, ಕೈಕಿಣಿಯಿಂದ ಅಳ್ವೆಕೋಡಿಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಮುರ್ಡೇಶ್ವರ ಕಡೆಯಿಂದ ಭಟ್ಕಳ ಕಡೆ ತೆರಳುತ್ತಿದ್ದ ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಅಪಾಘತದ ಬಳಿಕ ವೆಂಕಟಾಪುರ ಬಳಿ ಕಾರು ಬಿಟ್ಟು ಚಾಲಕ ಪರಾರಿ ಆಗಿದ್ದಾನೆ.

ಗಂಭೀರ ಗಾಯಗೊಂಡಿದ್ದ ರಾಮಚಂದ್ರರನ್ನು ಕೂಡಲೇ ಮಣಿಪಾಲ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ತನಿಖೆಯನ್ನು ನಡೆಸಲಾಗುತ್ತಿದೆ.

Continue Reading

ಕ್ರೈಂ

Hunters Arrest : ಶಿವಮೊಗ್ಗದಲ್ಲಿ ಕಾಡುಕೋಣಗಳು ಬಲಿ; ಚಿಕ್ಕಬಳ್ಳಾಪುರ, ಬಾಗಲಕೋಟೆಯಲ್ಲಿ ಬೇಟೆಗಾರರು ಸೆರೆ

Hunters Arrest :ರಾಜ್ಯದ ಹಲವೆಡೆ ಬೇಟೆಗಾರರ ಬೆನ್ನತ್ತಿರುವ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಕಾಡು ಹಂದಿ ಹಾಗೂ ಬಾಗಲಕೋಟೆಯಲ್ಲಿ ಕೃಷ್ಣ ಮೃಗ ಬೇಟೆಯಾಡುತ್ತಿದ್ದವರನ್ನು ಬಂಧಿಸಲಾಗಿದೆ. ಇತ್ತ ಶಿವಮೊಗ್ಗದಲ್ಲಿ ಬೇಟೆಗಾರರ ಕೃತ್ಯಕ್ಕೆ ಕಾಡು ಕೋಣಗಳು ಬಲಿಯಾಗಿವೆ.

VISTARANEWS.COM


on

By

Hunters Arrest
Koo

ಶಿವಮೊಗ್ಗ: ಶಿವಮೊಗ್ಗದಲ್ಲಿ ಕಾಡು ಕೋಣಗಳ ಮಾರಣಹೋಮ ಹೋಗಿದೆ. ದುಷ್ಕರ್ಮಿಗಳು (Hunters Arrest) ನಾಲ್ಕೈದು ಕಾಡು ಕೋಣಗಳನ್ನು ಬೇಟೆಯಾಡಿದ್ದಾರೆ. ಶಿವಮೊಗ್ಗದ ಹೊಸನಗರ ತಾಲೂಕಿನ ನಾಗರಹಳ್ಳಿ ಗ್ರಾಮದಲ್ಲಿ ಅಕ್ರಮ ಬಂದೂಕು ಬಳಸಿ ಕಾಡುಕೋಣಗಳ ಹತ್ಯೆ (Bison) ಮಾಡಲಾಗಿದೆ. ಕಾಡುಕೋಣಗಳ ಕಳೆಬರ ಪತ್ತೆಯಾಗಿದೆ.

ಸ್ಥಳಕ್ಕೆ ಸಾಗರ ಡಿಎಫ್‌ಓ ಸಂತೋಷ್ ಕೆಂಚಣ್ಣನವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಡುಕೋಣದ ಕಳೇಬರಗಳನ್ನು ಪರೀಕ್ಷೆಗಾಗಿ ಲ್ಯಾಬ್‌ಗೆ ಕಳುಹಿಸಿದ್ದಾರೆ. ಆರೋಪಿಗಳು ಕಾಡುಕೋಣಗಳ ಮಾಂಸಕಾಗಿ ಬೇಟೆಯಾಡಿರುವ ಸಾಧ್ಯತೆ ಇದೆ. ಸದ್ಯ ಅರಣ್ಯಾಧಿಕಾರಿಗಳು ಕಾಡುಕೋಣಗಳ ಹತ್ಯೆ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಕಾಡು ಹಂದಿಗಳ ಬೇಟೆ

ಚಿಕ್ಕಬಳ್ಳಾಪುರದಲ್ಲಿ ಕಾಡು ಹಂದಿಗಳ ಬೇಟೆಯಾಡಿ ಸಾಗಾಟ ಮಾಡುತ್ತಿದ್ದ ಜಾಲವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಭೇದಿಸಿದ್ದಾರೆ. ಬೀಚಗಾನಹಳ್ಳಿ ಮಿಟ್ಟೇಮರಿ ಅರಣ್ಯದಲ್ಲಿ ಕಾಡು ಹಂದಿಗಳ ಬೇಟೆಯಾಡುತ್ತಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳ ದಾಳಿ ಮಾಡಿದ್ದಾರೆ.

ದಾಳಿ ವೇಳೆ ಸಿಕ್ಕಿದ ಆರು ಕಾಡು ಹಂದಿಗಳನ್ನು ರಕ್ಷಣೆ ಮಾಡಲಾಗಿದೆ. ದಾಳಿಯಲ್ಲಿ ಇಬ್ಬರು ಸಿಕ್ಕಿ ಬಿದ್ದಿದ್ದು, ನಾಲ್ವರು ಪರಾರಿ ಆಗಿದ್ದಾರೆ. ಒಂದು ಬುಲೇರೋ ವಾಹನ ಸೀಸ್ ಮಾಡಿದ್ದಾರೆ. ಬಾಗೇಪಲ್ಲಿ ಅರಣ್ಯ ವಲಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Hunters Arrest

ಇದನ್ನೂ ಓದಿ: Road Accident : ನಿಂತಿದ್ದ ಟ್ಯಾಂಕರ್‌ ಟ್ಯಾಲಿಗೆ ಬೈಕ್‌ ಡಿಕ್ಕಿ; ಸವಾರ ಸಾವು, ಮತ್ತೋರ್ವ ಗಂಭೀರ

ಕೃಷ್ಣ ಮೃಗ ಬೇಟೆಯಾಡುತ್ತಿದ್ದ 7 ಜನರ ಬಂಧನ

ಬಾಗಲಕೋಟೆಯ ಜಮಖಂಡಿ ಹೊರ ವಲಯದ ಅರಣ್ಯ ಪ್ರದೇಶದಲ್ಲಿ ಕೃಷ್ಣ ಮೃಗ ಬೇಟೆಯಾಡುತ್ತಿದ್ದ 7 ಜನರನ್ನು ಬಂಧಿಸಲಾಗಿದೆ. ರಾಯಭಾಗ ತಾಲೂಕಿನ ಕಡಕಬಾವಿ ಗ್ರಾಮದ ಸಿದ್ದಪ್ಪ ಪಿಡಾಯಿ (23), ಬ್ಯಾಕೋಡ ಗ್ರಾಮದ ಸುರೇಶ್ ಪಕಾಂಡೆ (21), ಚೇತನ್ ಬಿದರಿ (24) , ಕಂಕನವಾಡಿ ಗ್ರಾಮದ ನಿಂಗಪ್ಪ ಪಡತಾರೆ (24) ಹಾಗೂ ದೇವರಪಟ್ಟಿ ಗ್ರಾಮದ ಪ್ರಜ್ವಲ್ ಮೆಳವಂಕಿ (18), ರಬಕವಿ ಬನಹಟ್ಟಿ ತಾಲ್ಲೂಕಿನ ಹಳಿಂಗಳಿ ಗ್ರಾಮದ ಶಬ್ಬಿರ್ ಗುಡ್ಡದಮನಿ (25), ರಮಜಾನ್‌ಸಾಬ್ ಅಲಸ್ (25) ಬಂಧಿತ ಆರೋಪಿಗಳು.

Hunters Arrest

ಬಂಧಿತರಿಂದ 13.5 ಕೆಜಿ ಹಂದಿ ಮಾಂಸ, 4 ಮೊಬೈಲ್, ಕಾರು, ನಾಲ್ಕು ಬೇಟೆ ನಾಯಿಯನ್ನು ವಶಕ್ಕೆ ಪಡೆಯಲಾಗಿದೆ. ಡಿಸಿಎಫ್‌ಸಿ ಶ್ರೀಧರ್ ನೇತೃತ್ವದಲ್ಲಿ ಎಸಿಎಫ್ ರಾಜೇಶ್ವರಿ, ಆರ್‌ಎಫ್‌ಒ ಪವನ್ ಕುರನಿಂಗ ತಂಡ ಕಾರ್ಯಾಚರಣೆ ನಡೆಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
NEETPG 2024
ಶಿಕ್ಷಣ6 mins ago

NEETPG 2024 : ಜೂ.23ಕ್ಕೆ ನೀಟ್‌ ಪಿಜಿ ಪರೀಕ್ಷೆ; ನಾಳೆಯಿಂದಲೇ ಪ್ರವೇಶ ಪತ್ರ ಬಿಡುಗಡೆ

DK Shivakumar
ಪ್ರಮುಖ ಸುದ್ದಿ24 mins ago

DK Shivakumar: ಇವಿಎಂ ಸತ್ಯಾಸತ್ಯತೆ ಪ್ರಪಂಚಕ್ಕೇ ಅರ್ಥವಾಗಿದೆ; ಮಸ್ಕ್ ಅನುಮಾನ ಸಮರ್ಥಿಸಿಕೊಂಡ ಡಿಕೆಶಿ

Viral Video
Latest41 mins ago

Viral Video: 7 ಅಜ್ಜಂದಿರ ಜೊತೆ ಸಂಸಾರ ನಡೆಸುತ್ತಿರುವ ಯುವತಿ; ಆಕೆಯ ಪ್ಲ್ಯಾನ್ ಇಂಟರೆಸ್ಟಿಂಗ್!

Malaika Vasupal experimented with a halter neck blouse for a traditional saree
ಫ್ಯಾಷನ್44 mins ago

Malaika Vasupal: ಟ್ರೆಡಿಷನಲ್‌ ಸೀರೆಗೆ ಹಾಲ್ಟರ್‌ ನೆಕ್‌ ಬ್ಲೌಸ್‌ ಪ್ರಯೋಗಿಸಿದ ನಟಿ ಮಲೈಕಾ ವಸುಪಾಲ್‌

Air India Food
ದೇಶ47 mins ago

Air India Food:‌ ಪ್ರಯಾಣಿಕರೇ ಎಚ್ಚರ; ವಿಮಾನದ ಊಟದಲ್ಲಿ ಸಿಕ್ತು ಮೆಟಲ್‌ ಬ್ಲೇಡ್!

Viral news
ವೈರಲ್ ನ್ಯೂಸ್58 mins ago

Viral News: ಕಾಯಿಲೆ ಗುರುತು ಹಿಡಿಯಲು ಖ್ಯಾತ ವೈದ್ಯರ ತಿಣುಕಾಟ; ಹತ್ತೇ ಸೆಕೆಂಡ್ ನಲ್ಲಿ ಪತ್ತೆಹಚ್ಚಿದ ಕೆಲಸದ ಮಹಿಳೆ!

T20 World Cup Super 8
ಕ್ರೀಡೆ58 mins ago

T20 World Cup Super 8 Stage: ಸೂಪರ್​-8 ಪಂದ್ಯಕ್ಕೂ ಮಳೆ ಭೀತಿ; ಭಾರತ-ಆಸೀಸ್​ ಪಂದ್ಯ ಅನುಮಾನ!

Rakshit Shetty Ekam web series release date announce
ಸ್ಯಾಂಡಲ್ ವುಡ್59 mins ago

Rakshit Shetty: ʻಏಕಂʼ ವೆಬ್ ಸಿರೀಸ್​ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ ಸಿಂಪಲ್‌ ಸ್ಟಾರ್‌ ರಕ್ಷಿತ್ ಶೆಟ್ಟಿ!

Dawood Ibrahim
ವಿದೇಶ1 hour ago

Dawood Ibrahim: ವೃದ್ಧ ಡಾನ್‌ ದಾವೂದ್‌ ಇಬ್ರಾಹಿಂ ಈಗ ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆಯ ಕೈಗೊಂಬೆ?

Two drown in quarry
ಕರ್ನಾಟಕ1 hour ago

Drown in Quarry: ಕ್ವಾರಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರ ಸಾವು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಮೈಸೂರು5 hours ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು5 hours ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ24 hours ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 day ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 day ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ3 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ3 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

ಟ್ರೆಂಡಿಂಗ್‌