ಕಾಲಿವುಡ್
Movie Review: Vikram | ತೆರೆಯ ಮೇಲೆ ಘಟಾನುಘಟಿಗಳ ತ್ರಿವಿಕ್ರಮ, ಕ್ಷಣ ಕ್ಷಣವೂ ರೋಚಕ
Movie Review: Vikram ಕಮಲ ಹಾಸನ್, ಫಹಾದ್ ಫಾಸಿಲ್ ಹಾಗೂ ವಿಜಯ್ ಸೇತುಪತಿಯಂತಹ ಘಟಾನುಘಟಿಗಳನ್ನು ಒಟ್ಟಿಗೇ ನೋಡುವ ಖುಷಿಯೇ ಬೇರೆ. ಮೂವರಿಗೂ ನ್ಯಾಯ ನೀಡಿ ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕೂರಿಸುವ ರೋಚಕತೆ ವಿಕ್ರಮ್ ಚಿತ್ರದಲ್ಲಿದೆ. ಅದನ್ನು ನೋಡಿಯೇ ಅನುಭವಿಸಬೇಕು.
Movie Review: Vikram
ಚಿತ್ರ: ವಿಕ್ರಂ(ತಮಿಳು)
ನಿರ್ದೇಶನ: ಲೋಕೇಶ್ ಕನಕರಾಜ್
ನಿರ್ಮಾಪಕರು: ಕಮಲ ಹಾಸನ್, ಮಹೇಂದ್ರನ್
ಸಂಗೀತ: ಅನಿರುದ್ಧ್ ರವಿಚಂದ್ರನ್
ಛಾಯಾಗ್ರಹಣ: ಗಿರೀಶ್ ಗಂಗಾಧರನ್
ತಾರಾಗಣ: ಕಮಲ ಹಾಸನ್, ವಿಜಯ್ ಸೇತುಪತಿ, ಸೂರ್ಯ, ಫಹಾದ್ ಫಾಸಿಲ್, ಕಾಳಿದಾಸ್ ಜಯರಾಮ್, ಗಾಯತ್ರಿ
ರೇಟಿಂಗ್: 3.5/5
ಮಲ್ಟಿಸ್ಟಾರರ್ ಮೂವಿ ಎಂದರೆ ಅದರ ಮೇಲಿನ ನಿರೀಕ್ಷೆಯ ಲೆವೆಲ್ ಜಾಸ್ತಿನೇ ಇರುತ್ತದೆ. ಅದರಲ್ಲೂ ಕಮಲ ಹಾಸನ್, ಫಹಾದ್ ಫಾಸಿಲ್ ಹಾಗೂ ವಿಜಯ್ ಸೇತುಪತಿಯಂತಹ ಘಟಾನುಘಟಿಗಳನ್ನು ಒಟ್ಟಿಗೇ ನೋಡುವ ಖುಷಿಯೇ ಬೇರೆ. ವಿಕ್ರಮ್ ಸಿನಿಮಾದಲ್ಲಿ ಈ ಮೂವರ ನಟನೆಗೆ ಎಂಥವರೂ ಫಿದಾ ಆಗುವುದು ಖಂಡಿತ!
1984ರಲ್ಲಿ ಕಮಲ್ ಹಾಸನ್ ಅಭಿನಯಿಸಿದ ವಿಕ್ರಮ್ ಎನ್ನುವ ಸಿನಿಮಾದ ಶೀರ್ಷಿಕೆಯನ್ನೇ ಈ ಚಿತ್ರಕ್ಕೂ ಇಡಲಾಗಿದೆ. ಆ ಚಿತ್ರದಲ್ಲಿ ಕಮಲ ಹಾಸನ್ ಒಬ್ಬ ಸೀಕ್ರೆಟ್ ಏಜೆಂಟ್‌ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 2022ರ ಈ ಸಿನಿಮಾದಲ್ಲಿ ಅವರು ಯಾವ ಪಾತ್ರ ಮಾಡುತ್ತಿದ್ದಾರೆ ಎನ್ನುವುದನ್ನು ತೆರೆಯ ಮೇಲೆಯೇ ನೋಡಿದರೆ ಚೆಂದ.
ಯಾರು ಈ ವಿಕ್ರಮ್? ಏನು ಕಥೆ?
ವಿಕ್ರಮ್ ಸಿನಿಮಾದ ಓಪನಿಂಗ್ ಭಯಂಕರ! ಆರಂಭದಲ್ಲೇ ಒಂದು ಶಾಕ್ ನೀಡಲಾಗಿದೆ. ಆ ಶಾಕ್, ಆ ಸಸ್ಪೆನ್ಸ್ ನ್ನು ಸಿನಿಮಾದುದ್ದಕ್ಕೂ ಕಾಪಾಡಿಕೊಳ್ಳಲಾಗಿದೆ. ಒಂದು ಇಂಟರೆಸ್ಟಿಂಗ್ ಸಸ್ಪೆನ್ಸ್ ಕತೆ ಇದರದ್ದು. ಒಂದು ಹುಡುಕಾಟದ, ಒಂದು ಅನ್ಯಾಯದ ವಿರುದ್ಧದ ಜರ್ನಿ. ಈ ಜರ್ನಿಯಲ್ಲಿ ಒಳ್ಳೆಯವರು ಯಾರು? ಯಾರು ಕೆಟ್ಟವರು? ಬಿಸಿನೆಸ್ ಯಾವುದು? ಯಾವುದರಿಂದ ಸಮಾಜದ ಮೇಲೆ ಪರಿಣಾಮ ಆಗುತ್ತಿದೆ? ಈ ಎಲ್ಲಾ ಅಂಶಗಳನ್ನಿಟ್ಟುಕೊಂಡು ನಿರ್ದೇಶಕ ಲೋಕೇಶ್ ಕನಕರಾಜ್ ಕಥೆಯನ್ನು ಹೆಣೆದಿದ್ದಾರೆ.
ಆರಂಭದಲ್ಲಿ ವಿಕ್ರಮ್ ಯಾರು? ಎಂಬ ಪ್ರಶ್ನೆಯನ್ನು ಹುಟ್ಟಿಸಿ, ರೋಚಕ ತಿರುವುಗಳೊಂದಿಗೆ ಮುಂದುವರಿಸಿ ಮಧ್ಯಂತರದ ಅವಧಿಯಲ್ಲಿ ಈ ಪ್ರಶ್ನೆಗೆ ಉತ್ತರ ನೀಡಲಾಗಿದೆ. ರೌಡಿಸಂ ಆಧಾರಿತ ಚಿತ್ರಗಳು ಇತ್ತೀಚೆಗೆ ಬಹಳಷ್ಟು ಸದ್ದು ಮಾಡುತ್ತಿದ್ದು, ವಿಕ್ರಮ್ ಅವುಗಳ ನಡುವೆಯೇ ಸ್ವಲ್ಪ ಬೇರೆಯಾಗಿ ನಿಲ್ಲುತ್ತದೆ.
ಚಿತ್ರದಲ್ಲಿ ಗಮನ ಸೆಳೆಯುವ ಪ್ರಮುಖ ಅಂಶಗಳು:
- ಈ ಚಿತ್ರಕ್ಕೆ ಸಂಗೀತ ನೀಡಿದ ಅನಿರುದ್ಧ್ ರವಿಚಂದ್ರನ್‌ಗೆ ಹಾಗೂ ಛಾಯಾಗ್ರಾಹಕ ಗಿರೀಶ್ ಗಂಗಾಧರನ್‌ಗೆ ಮೊದಲು ಸೆಲ್ಯೂಟ್ ಹೇಳಲೇಬೇಕು. ಮ್ಯೂಸಿಕ್ ಹಾಗೂ ಮೇಕಿಂಗ್ ಈ ಚಿತ್ರದ ಹೈಲೈಟ್ಸ್. ಒಂದೊಂದು ಫ್ರೇಮ್ ನ್ನು ಕೂಡ ಅದ್ಭುತವಾಗಿ ಚಿತ್ರಿಸಿದ್ದಾರೆ. ಮುಂದಿನ ದೃಶ್ಯ ಏನಾಗುತ್ತದೆ ಎಂದು ಉಸಿರು ಬಿಗಿ ಹಿಡಿದು ನೋಡುವಂತೆ ಮಾಡುವಲ್ಲಿ ಛಾಯಾಗ್ರಾಹಕ, ಸಂಕಲನಕಾರ ಯಶಸ್ವಿಯಾಗಿದ್ದಾರೆ. ಚಿತ್ರದಲ್ಲಿ ಒಂದೊಂದು ಪಾತ್ರದ ಎಂಟ್ರಿಯಿಂದ ಆರಂಭಗೊಂಡು ಚಿತ್ರದ ಅಂತ್ಯದವರೆಗೂ ಅನಿರುದ್ಧ್ ನೀಡಿರುವ ಸಂಗೀತ ಮೈ ರೋಮಾಂಚನಗೊಳಿಸುತ್ತದೆ. ಅನಿರುದ್ಧ್ ವಿಭಿನ್ನ ಬಗೆಯ ಸಂಗೀತವನ್ನು ಪ್ರತಿಯೊಂದು ಸಿನಿಮಾಗೆ ನೀಡುತ್ತಿದ್ದಾರೆ ಹಾಗೂ ಭಾರತದ ಶ್ರೇಷ್ಠ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗುವ ಭರವಸೆ ಮೂಡಿಸಿದ್ದಾರೆ.
- ಮೂವರು ದಿಗ್ಗಜರು ಒಂದೇ ಪರದೆಯಲ್ಲಿ ಮೆರೆದಿರುವ ರೀತಿಯನ್ನು ನಿಜಕ್ಕೂ ಮೆಚ್ಚಲೇಬೆಕು. ಕಣ್ಣಲ್ಲೇ ಎದುರಾಳಿಯನ್ನು ಹೆದರಿಸುವಂತಹ ಉಲಗ ನಯಗನ್ (ಕಮಲ ಹಾಸನ್) ನಟನೆ ಮನಸಿನಲ್ಲಿ ಅಚ್ಚೊತ್ತಿ ನಿಲ್ಲುತ್ತದೆ. ಫಹಾದ್ ಫಾಸಿಲ್ ಹಾಗೂ ವಿಜಯ್ ಸೇತುಪತಿ ಇಬ್ಬರೂ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ನಟನೆಯ ಮೂಲಕ ಛಾಪು ಮೂಡಿಸಿದ್ದಾರೆ.
ಉಳಿದವರೂ ರೋಷ, ಆಕ್ರೋಷವನ್ನು ವ್ಯಕ್ತ ಪಡಿಸುವಂತಹ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. - ಒಂದು ಅದ್ಭುತ ಕಥೆಯನ್ನು ಇದರಲ್ಲಿ ಹೇಳಲಾಗಿದೆ. ಕಥೆಯನ್ನು ಹಂತ ಹಂತಗಳಲ್ಲಿ ರೋಚಕ ತಿರುವುಗಳೊಂದಿಗೆ ರೂಪಿಸಲಾಗಿದೆ. ಅದಕ್ಕೆ ತಕ್ಕಂತೆ ಸೂಕ್ತವಾದ ಸಂಭಾಷಣೆ ಇಲ್ಲಿದೆ. ವಾಟ್ ಈಸ್ ಪ್ಲಾನ್ ಬಿ? ಎಂಬ ಪ್ರಶ್ನೆಗೆ ಕಮಲ ಹಾಸನ್ ʼಪ್ಲಾನ್ ಬಿ ಈಸ್ ಟು ಮೇಕ್ ಪ್ಲಾನ್ ಎ ವರ್ಕ್ʼ ಎಂಬ ಪಂಚಿಂಗ್ ಡೈಲಾಗ್ಸ್ ಕೂಡ ಇದೆ.
ಯಾರ ದೊಡ್ಡಮ್ಮ ಹೆಚ್ಚು ಸೌಂಡ್ ಮಾಡಿದ್ದು?
ಕೆಜಿಎಫ್ ಸಿನಿಮಾದಲ್ಲಿ ರಾಕಿಭಾಯ್ ಒಂದು ಪೊಲೀಸ್ ಸ್ಟೇಷನ್‌ನ್ನೇ ಸುಟ್ಟು ಹಾಕಿದ್ದ. ಅದಕ್ಕೆ ಬಳಸಿದ್ದ ಗನ್ ಹೆಸರು ʼದೊಡ್ಡಮ್ಮʼ. ಅಲ್ಲಿ ರಾಕಿಭಾಯ್ ಕೈಯ್ಯಲ್ಲಿದ್ದ ʼದೊಡ್ಡಮ್ಮʼ ವಿಕ್ರಮ್ ಸಿನಿಮಾದಲ್ಲಿ ಕಮಲ ಹಾಸನ್ ಕೈಯಲ್ಲೂ ಇದೆ. ಕೆಜಿಫ್‌ನಲ್ಲಿ ಹೊಸ ಗನ್, ಆದರೆ ಇಲ್ಲಿ ಹಳತು. ಸೂಕ್ಷ್ಮವಾಗಿ ಗಮನಿಸಿದರೆ ಹಳೇ ʼದೊಡ್ಡಮ್ಮʼನ ಕೂಗೇ ಹೆಚ್ಚಿದ್ದಂತೆ ಕಾಣುತ್ತದೆ.
ವಿಕ್ರಂ ಪಾರ್ಟ್ 2?
ವಿಕ್ರಂ ಚಿತ್ರದ ಅಂತ್ಯದಲ್ಲಿ ಕೆಲವು ಪ್ರಶ್ನೆಗಳನ್ನು ಹುಟ್ಟಿಹಾಕಿದೆ. ಆ ಪ್ರಶ್ನೆಗಳಿಗೆ ಉತ್ತರವಾಗಿ ಎರಡನೇ ಪಾರ್ಟ್ ಬರಬಹುದು.
ಈ ಚಿತ್ರದಲ್ಲಿ ಮತ್ತೊಂದು ಮುಖ್ಯವಾದ ವಿಷಯ ಎಂದರೆ ನಟ ಸೂರ್ಯ. ವಿಕ್ರಂ ಚಿತ್ರತಂಡದವರು ಈ ಸಿನಿಮಾದಲ್ಲಿ ನಟ ಸೂರ್ಯ ಕೂಡ ಅಭಿನಯಿಸುತ್ತಿರುವ ಬಗ್ಗೆ ಇತ್ತೀಚೆಗಷ್ಟೇ ಹೇಳಿದ್ದರು. ಅವರ ಎಂಟ್ರಿ ಮಾತ್ರ ಭಯಂಕರ! ಒಂದು ಮುಖ್ಯ ಪಾತ್ರದಲ್ಲಿ ಸೂರ್ಯ ಅಭಿನಯಿಸಿದ್ದಾರೆ. ಮುಂಬರಲಿರುವ ಎರಡನೇ ಪಾರ್ಟ್‌ನಲ್ಲಿ ಸೂರ್ಯ ಪ್ರಮುಖ ಪಾತ್ರವಹಿಸಲಿದ್ದಾರೆ ಎಂದು ಸ್ಪಷ್ಟವಾಗಿದೆ. ಈ ಚಿತ್ರವು ಪ್ರೇಕ್ಷಕರನ್ನು ಪಾರ್ಟ್ 2 ನೋಡಲು ಕುತೂಹಲ ಮೂಡಿಸುವಲ್ಲಿ ಗೆದ್ದಿದೆ. ಅಭಿಮಾನಿಗಳ ನಿರೀಕ್ಷೆಯನ್ನು ಮುಟ್ಟಿದ, ಜನರು ಮೆಚ್ಚುವ ಸಿನಿಮಾ ಇದು.
ಇದನ್ನೂ ಓದಿ: Review: ಇನ್ನೂ ಬೆಸ್ಟ್ ಆಗಬಹುದಿತ್ತು ʼಬೀಸ್ಟ್ʼ
South Cinema
Rajinikanth : ಬೃಹತ್ ಕೇಕ್ ಕತ್ತರಿಸಿದ ರಜನಿಕಾಂತ್; ಈ ಸಂಭ್ರಮಕ್ಕೇನು ಕಾರಣ?
ರಜನಿಕಾಂತ್ (Rajinikanth) ಅಭಿನಯದ ಜೈಲರ್ ಸಿನಿಮಾದ ಚಿತ್ರೀಕರಣ ಪೂರ್ಣಗೊ೦ಡಿದೆ. ಆ ಹಿನ್ನೆಲೆಯಲ್ಲಿ ಚಿತ್ರತಂಡ ದೊಡ್ಡದೊಂದು ಕೇಕ್ ಕತ್ತರಿಸಿ, ಸಂಭ್ರಮಾಚರಿಸಿದೆ.
ಚೆನ್ನೈ: ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರು ಸದ್ಯ ಜೈಲರ್ ಆಗಿ ಮಿಂಚುವುದಕ್ಕೆ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದೀಗ ಈ ಜೈಲರ್ ಸಿನಿಮಾದ ಚಿತ್ರೀಕರಣ ಸಂಪೂರ್ಣಗೊಂಡಿದೆ. ಅದೇ ಖುಷಿಯಲ್ಲಿ ರಜನಿಕಾಂತ್ ಅವರು ಪೂರ್ತಿ ಚಿತ್ರತಂಡದೊಂದಿಗೆ ಸೇರಿಕೊಂಡು ದೊಡ್ಡದೊಂದು ಕೇಕ್ ಕತ್ತರಿಸಿದ್ದಾರೆ. ಅದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.
ಜೈಲರ್ ಸಿನಿಮಾ ಚಿತ್ರೀಕರಣ ಸಂಪೂರ್ಣಗೊಂಡ ಹಿನ್ನೆಲೆಯಲ್ಲಿ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಸನ್ ಪಿಕ್ಚರ್ಸ್ ದೊಡ್ಡದೊಂದು ಕೇಕ್ ತರಿಸಿದೆ. ಅದರಲ್ಲಿ ʼಜೈಲರ್ ಶೂಟ್ ರ್ಯಾಪಡ್ʼ ಎಂದು ಬರೆಸಲಾಗಿತ್ತು. ಅದನ್ನು ರಜನಿಕಾಂತ್ ಅವರು ಕತ್ತರಿಸಿದ್ದಾರೆ. ಅವರಿಗೆ ನಟಿ ತಮನ್ನಾ ಭಾಟಿಯಾ ಹಾಗೂ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಸಾಥ್ ಕೊಟ್ಟಿದ್ದಾರೆ. ಹಾಗೆಯೇ ಪೂರ್ತಿ ಚಿತ್ರತಂಡವು ಜತೆಯಾಗಿ ಫೋಟೋ ತೆಗೆಸಿಕೊಂಡಿದೆ.
ಇದನ್ನೂ ಓದಿ: Lal Salaam : ರಜನಿಕಾಂತ್ ಜತೆ ಬಣ್ಣ ಹಚ್ಚಲಿದ್ದಾರೆ ಕಪಿಲ್ ದೇವ್
ಈ ಸಂಭ್ರಮದ ಫೋಟೋಗಳನ್ನು ಸನ್ ಪಿಕ್ಚರ್ಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಅದರಲ್ಲಿ ಒಂದು ಫೋಟೋದಲ್ಲಿ ರಜನಿಕಾಂತ್ ಅವರು ಕ್ಯಾಮೆರಾಕ್ಕೆ ಥಮ್ಸ್ ಅಪ್ ತೋರಿಸಿರುವುದನ್ನು ಕಾಣಬಹುದಾಗಿದೆ.
It's a wrap for #Jailer! Theatre la sandhippom 😍💥#JailerFromAug10@rajinikanth @Nelsondilpkumar @anirudhofficial @Mohanlal @NimmaShivanna @bindasbhidu @tamannaahspeaks @meramyakrishnan @suneeltollywood @iYogiBabu @iamvasanthravi @kvijaykartik @Nirmalcuts @KiranDrk @StunShiva8 pic.twitter.com/Vhejuww4fg
— Sun Pictures (@sunpictures) June 1, 2023
ಜೈಲರ್ ಸಿನಿಮಾದಲ್ಲಿ ರಜನಿಕಾಂತ್, ತಮನ್ನಾ ಜತೆಯಲ್ಲಿ ಶಿವರಾಜ್ ಕುಮಾರ್, ಜಾಕಿ ಶಾರ್ಫ್, ಮೋಹನ್‌ಲಾಲ್, ರಮ್ಯ ಕೃಷ್ಣ ನಟಿಸಿದ್ದಾರೆ. ರಜನಿಕಾಂತ್ ಈ ಸಿನಿಮಾದಲ್ಲಿ ಜೈಲಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಇದೇ ಆಗಸ್ಟ್ 10ರಂದು ತೆರೆ ಕಾಣಲಿದೆ. ಈ ಸಿನಿಮಾದ ನಂತರ ರಜನಿಕಾಂತ್ ಅವರು ಮಗಳು ಐಶ್ವರ್ಯ ನಿರ್ದೇಶಿಸುತ್ತಿರುವ ಲಾಲ್ ಸಲಾಂ ಸಿನಿಮಾದಲ್ಲಿ ನಟಿಸಲಿದ್ದಾರೆ.
South Cinema
Kamal Haasan: ಇಂಡಿಯನ್ 2 ಸಿನಿಮಾದಲ್ಲಿ ಸಿದ್ಧಾರ್ಥ್; ಕಮಲ್ ಜತೆ ಯಾವ ಪಾತ್ರದಲ್ಲಿ ಇವರ ಕಮಾಲ್?
ನಟ ಸಿದ್ಧಾರ್ಥ್ ಅವರು ಕಮಲ್ ಹಾಸನ್ (Kamal Haasan) ಅಭಿನಯದ ಇಂಡಿಯನ್ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ಅವರೇ ಸ್ವತಃ ಇತ್ತೀಚಿನ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದರು. ಶಂಕರ್ ನಿರ್ದೇಶನ ಇರುವ ಈ ಚಿತ್ರವು ಈಗಾಗಲೇ ಒಂದು ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.
ಬೆಂಗಳೂರು: ತಮ್ಮ ಮುಂಬರುವ ತಮಿಳು ಚಿತ್ರ ʻಟಕ್ಕರ್ʼ ಬಿಡುಗಡೆಗೆ ಸಜ್ಜಾಗುತ್ತಿರುವ ನಟ ಸಿದ್ಧಾರ್ಥ್, ಇತ್ತೀಚಿನ ಸಂದರ್ಶನವೊಂದರಲ್ಲಿ ಕಮಲ್ ಹಾಸನ್ (Kamal Haasan) ಅವರ ಇಂಡಿಯನ್ 2 ಸಿನಿಮಾದ ಭಾಗವಾಗಿರುವ ಬಗ್ಗೆ ರಿವೀಲ್ ಮಾಡಿದ್ದಾರೆ. ಶಂಕರ್ ನಿರ್ದೇಶನದ ಹಾಗೂ ಕಮಲ್ ಹಾಸನ್ ನಟನೆಯ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಸಿದ್ಧಾರ್ಥ್ ಇಂಡಿಯನ್ 2 ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ವರದಿ ಪ್ರಕಾರ, ಅವರು ಕಮಲ್ ಹಾಸನ್ ಪಾತ್ರದಲ್ಲಿ ಮೊಮ್ಮಗನಾಗಿ ಕಾಣಿಸಿಕೊಳ್ಳಲಿದ್ದಾರೆ. 2003ರಲ್ಲಿ ತಮಿಳು ಚಲನಚಿತ್ರ ಬಾಯ್ಸ್ ಸಿನಿಮಾದಲ್ಲಿ ಸಿದ್ಧಾರ್ಥ್ ನಟಿಸಿದ್ದರು. ವಿಶೇಷ ಅಂದರೆ ಈ ಸಿನಿಮಾ ನಿರ್ದೇಶಿಸಿದ್ದು ಶಂಕರ್. ಇದೀಗ ಎರಡನೇ ಬಾರಿಗೆ ಶಂಕರ್ ಹಾಗೂ ಸಿದ್ಧಾರ್ಥ್ ಒಟ್ಟಿಗೆ ಕೆಲಸ ಮಾಡುವಂತಾಗಿದೆ.
ಸಿದ್ಧಾರ್ಥ್ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿ ʻʻಯಾವುದೇ ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆಯಾದರೂ, ಬ್ಲಾಕ್ ಬಸ್ಟರ್ ಆಗಲಿದೆ. ಈ ಸಿನಿಮಾಕ್ಕೆ ನನ್ನನ್ನು ಆಯ್ಕೆ ಮಾಡಿಕೊಂಡಿರುವ ಬಗ್ಗೆ ನನಗೆ ಸಂತೋಷವಿದೆ. ಇಷ್ಟು ವರ್ಷಗಳ ನಂತರ ಮತ್ತೆ ನಿರ್ದೇಶಕರಾದ ಶಂಕರ್ ಹಾಗೂ ಕಮಲ್ ಹಾಸನ್ ಅವರೊಂದಿಗೆ ಕೆಲಸ ಮಾಡುತ್ತಿರುವುದು ನನ್ನ ಅದೃಷ್ಟ. ನಿರ್ದೇಶಕರಿಗೆ ನಾನು ಯಾವಾಗಲೂ ಕೃತಜ್ಞರಾಗಿರುತ್ತೇನೆʼʼ ಎಂದು ಸಿದ್ಧಾರ್ಥ್ ಹೇಳಿಕೊಂಡಿದ್ದಾರೆ.
ಇಂಡಿಯನ್ 2 ಲುಕ್‌ಗಾಗಿ ಕಮಲ್ ಸಾಕಷ್ಟು ಶ್ರಮ ವಹಿಸಿಸುತ್ತಿದ್ದಾರೆ. ಕಳೆದ ವರ್ಷ, ಬರಹಗಾರ ಜಯಮೋಹನ್ ಅವರು ಸೆಟ್‌ಗಳಲ್ಲಿ ಕಮಲ್ ಹಾಸನ್ ಇರುವ ಬಗೆಯನ್ನು ಬಣ್ಣಿಸಿದ್ದರು. ಕಮಲ್ ಅವರ ಬದ್ಧತೆ ಮತ್ತು ನಟನಾ ಮಯದಲ್ಲಿ ಹೇಗೆ ಇರುತ್ತಾರೆ ಎಂಬುದರ ಬಗ್ಗೆ ವಿವರಿಸಿದ್ದರು. ʻʻಕಮಲ್ ಅವರು ಸೆಟ್‌ಗಳಲ್ಲಿ ಬಹುತೇಕ ಹಸಿವಿನಿಂದಲೇ ಇರುತ್ತಾರೆ. ನಟಿಸುವ ಸಮಯದಲ್ಲಿ ಏನನ್ನೂ ತಿನ್ನುವುದಿಲ್ಲ. ಇದಕ್ಕೆ ಕಾರಣವೂ ಇದ್ದು, ನಟನೆ ಸಂದರ್ಭದಲ್ಲಿ ಏನನ್ನಾದರೂ ತಿನ್ನುತ್ತಿದ್ದರೆ, ಅಂದರೆ ಬಾಯಲ್ಲಿ ಅಗಿಯುತ್ತಿದ್ದರೆ, ಅದು ಪ್ರಾಸ್ಥೆಟಿಕ್ ಮೇಕ್ಅಪ್ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಅವರು ನಟಿಸುವಾಗ ಕೇವಲ ಜ್ಯೂಸ್ ಡಯಟ್ ಮಾಡುತ್ತಿದ್ದರುʼʼ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ಇದನ್ನೂ ಓದಿ: Kamal Haasan: ನಿರ್ದೇಶಕ ಮಣಿರತ್ನಂ ಬಗ್ಗೆ ಅನೇಕರಿಗೆ ಅಸೂಯೆ! ನಟ ಕಮಲ್ ಹಾಸನ್ ಹೀಗೆ ಹೇಳಿದ್ದೇಕೆ?
ಈ ಸಿನಿಮಾದಲ್ಲಿ ಕಮಲ್ ಹಾಸನ್ ದ್ವಿಪಾತ್ರಗಳಲ್ಲಿ ನಟಿಸಲಿದ್ದಾರೆ ಎಂಬುದಾಗಿಯೂ ವರದಿಯಾಗಿದೆ. ಚಿತ್ರದಲ್ಲಿ ಕಾಜಲ್ ಅಗರ್ವಾಲ್ ಮತ್ತು ರಾಕುಲ್ ಪ್ರೀತ್ ಸಿಂಗ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
South Cinema
Actor Dhanush: ಧನುಷ್ ಹೊಸ ಲುಕ್ ಕಂಡೊಡನೆ ಬಾಬಾ ರಾಮದೇವ್ ಅಂದ್ರು ನೆಟ್ಟಿಗರು!
Actor Dhanush: ಮುಂಬೈ ವಿಮಾನ ನಿಲ್ದಾಣದಲ್ಲಿ ನಟ ಹೊಸ ಲುಕ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ. ಗಡ್ಡ ಹಾಗೂ ಉದ್ದನೆಯ ಕೂದಲನ್ನು ಕಂಡು ನೆಟ್ಟಿಗರು ನಟ ಧನುಷ್‌ರನ್ನು ಬಾಬಾ ರಾಮದೇವ್ ಎಂದು ಕಮೆಂಟ್ ಮಾಡಿದ್ದಾರೆ.
ಬೆಂಗಳೂರು: ಧನುಷ್ (Actor Dhanush) ಕೊನೆಯದಾಗಿ ʻವಾತಿʼ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲದೇ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿತು. ಇದು ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆಯಿತು. ಈ ಸಿನಿಮಾ ವೆಂಕಿ ಅಟ್ಲೂರಿ ನಿರ್ದೇಶಿಸಿದ್ದಾರೆ. ಸದ್ಯ ಅರುಣ್ ಮಾಥೇಶ್ವರನ್ ನಿರ್ದೇಶನದ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಧನುಷ್ ಕೆಲಸ ಮಾಡುತ್ತಿದ್ದಾರೆ. ಕನ್ನಡದ ಖ್ಯಾತ ನಟ ಶಿವ ರಾಜ್‌ಕುಮಾರ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಇದೀಗ ನಟ ಮುಂಬೈ ವಿಮಾನ ನಿಲ್ದಾಣದಲ್ಲಿ ಹೊಸ ಲುಕ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ. ಗಡ್ಡ ಹಾಗೂ ಉದ್ದನೆಯ ಕೂದಲನ್ನು ಕಂಡು ನೆಟ್ಟಿಗರು ನಟ ಧನುಷ್‌ರನ್ನು ಬಾಬಾ ರಾಮದೇವ್ ಎಂದು ಕಮೆಂಟ್ ಮಾಡಿದ್ದಾರೆ.
ಮುಂಬೈ ವಿಮಾನ ನಿಲ್ದಾಣದಲ್ಲಿ ಜೀನ್ಸ್ ಮತ್ತು ಸನ್‌ಗ್ಲಾಸ್‌ನೊಂದಿಗೆ ನೇರಳೆ ಬಣ್ಣದ ಸ್ವೆಟ್ಶರ್ಟ್ ಧರಿಸಿದ್ದರು ಧನುಷ್. ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಮೆಂಟ್‌ನಲ್ಲಿ ʻʻಕ್ಯಾಶುಯಲ್ ಬಟ್ಟೆಗಳನ್ನು ಧರಿಸಿ ಹೊರಬಂದಿರುವುದು ನೋಡಿದರೆ ಬಾಬಾ ರಾಮದೇವ್ ಎಂದು ನಾನು ಭಾವಿಸಿದೆ” ಎಂದು ಬರೆದಿದ್ದಾರೆ. ಮತ್ತೊಬ್ಬರು ʻʻಗುರುತು ಹಿಡಿಯಲಾರದಷ್ಟು ವಿಭಿನ್ನವಾಗಿ ಕಾಣುತ್ತಿದ್ದಾರೆʼʼಎಂದರೆ ಇನ್ನೊಬ್ಬರು ʻ”ಬಾಬಾ ರಾಮದೇವ್.. ಅದು ನೀವೇ?” ಎಂದು ಕಮೆಂಟ್ ಮಾಡಿದ್ದಾರೆ.
ಹಲವು ಸಿನಿಮಾಗಳಲ್ಲಿ ಬ್ಯುಸಿಯಾದ ಧನುಷ್
ಕ್ಯಾಪ್ಟನ್ ಮಿಲ್ಲರ್ ಸಿನಿಮಾ
ಕ್ಯಾಪ್ಟನ್ ಮಿಲ್ಲರ್ ಚಿತ್ರಕ್ಕೆ ಸತ್ಯಜ್ಯೋತಿ ಫಿಲ್ಮ್ಸ್ ಬಂಡವಾಳ ಹೂಡಿದೆ. ಇನ್ನು ಸಂದೀಪ್ ಕಿಶನ್ ಮತ್ತು ಪ್ರಿಯಾಂಕಾ ಅರುಲ್ ಮೋಹನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳು, ತೆಲುಗು ಹಾಗೂ ಹಿಂದಿಯಲ್ಲಿ ಈ ‘ಕ್ಯಾಪ್ಟನ್ ಮಿಲ್ಲರ್ ಸಿನಿಮಾ ಬಿಡುಗಡೆಯಾಗಲಿದೆ.
ಇದನ್ನೂ ಓದಿ; Actor Dhanush: ಹೊಸ ಸಿನಿಮಾ ಅನೌನ್ಸ್ ಮಾಡಿದ ಕಾಲಿವುಡ್ ಸ್ಟಾರ್ ಧನುಷ್!
ವೈರಲ್ ವಿಡಿಯೊ
ಐತಿಹಾಸಿಕ ಕಥಾ ಹಂದರ ಹೊಂದಿರುವ ‘ಕ್ಯಾಪ್ಟನ್ ಮಿಲ್ಲರ್’ !
ಈ ಚಿತ್ರ 1930 ಮತ್ತು 40ರ ದಶಕದ ಮದ್ರಾಸ್ ಪ್ರೆಸಿಡೆನ್ಸಿ ಹಿನ್ನೆಲೆಯಲ್ಲಿ ಸೆಟ್ಟೇರಲಿದೆ. ಶೀಘ್ರದಲ್ಲಿಯೇ ಚಿತ್ರೀಕರಣ ಪ್ರಾರಂಭವಾಗುತ್ತದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಚಿತ್ರಕ್ಕೆ ಶ್ರೇಯಸ್ ಕೃಷ್ಣ ಅವರ ಛಾಯಾಗ್ರಹಣ, ನಾಗೂರನ್ ಅವರ ಸಂಕಲನ ಮತ್ತು ಜಿ ವಿ ಪ್ರಕಾಶ್ ಕುಮಾರ್ ಅವರ ಸಂಗೀತ ಸಂಯೋಜನೆ ಇದೆ. ಸತ್ಯಜ್ಯೋತಿ ಫಿಲ್ಮ್ಸ್‌ನ ಸೆಂಧಿಲ್ ತ್ಯಾಗರಾಜನ್ ಮತ್ತು ಅರ್ಜುನ್ ತ್ಯಾಗರಾಜನ್ ನಿರ್ಮಿಸಿರುವ ʻಕ್ಯಾಪ್ಟನ್ ಮಿಲ್ಲರ್ʼ 2023ರಲ್ಲಿ ತೆರೆ ಕಾಣಲಿದೆ. ಮದನ್ ಕರ್ಕಿ ಸಂಭಾಷಣೆ ಇದೆ. ರಾಷ್ಟ್ರ ಪ್ರಶಸ್ತಿ ವಿಜೇತೆ ಪೂರ್ಣಿಮಾ ರಾಮಸ್ವಾಮಿ ಮತ್ತು ಕಾವ್ಯ ಶ್ರೀರಾಮ್ ಅವರು ವಸ್ತ್ರ ವಿನ್ಯಾಸ ಮಾಡಿದ್ದಾರೆ. ಅರುಣ್ ಮಾಥೇಶ್ವರನ್ ನಿರ್ದೇಶನದ, ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಧನುಷ್ ದ್ವಿಪಾತ್ರಗಳಲ್ಲಿ ನಟಿಸುತ್ತಿದ್ದಾರೆ ಎಂಬ ವದಂತಿಗಳಿವೆ. ತಂದೆ ಹಾಗೂ ಮಗನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಹೆಸರಿಡದ ತಮಿಳು ಚಿತ್ರಕ್ಕಾಗಿ ಒಂದಾದ ಮಾರಿ ಸೆಲ್ವರಾಜ್ ಮತ್ತು ಧನುಷ್
ಕ್ಯಾಪ್ಟನ್ ಮಿಲ್ಲರ್ ಜತೆಗೆ, ಧನುಷ್ ನಿರ್ದೇಶಕ ಮಾರಿ ಸೆಲ್ವರಾಜ್ ಅವರ ಮುಂಬರುವ ಇನ್ನೂ ಹೆಸರಿಡದ ತಮಿಳು ಚಿತ್ರಕ್ಕಾಗಿ ಒಂದಾಗಿದ್ದಾರೆ. ಈ ಹಿಂದೆ ಕರ್ಣನ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ ಮಾರಿ ಸೆಲ್ವರಾಜ್ ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ವಂಡರ್‌ಬಾರ್ ಫಿಲ್ಮ್ಸ್ ಬ್ಯಾನರ್‌ನಡಿಯಲ್ಲಿ ಈ ಸಿನಿಮಾ ನಿರ್ಮಿಸಲಿದ್ದಾರೆ. ಏಪ್ರಿಲ್ 9ರಂದು, ಧನುಷ್ ಅವರು ಹೊಸ ಚಿತ್ರವನ್ನು ಮಾರಿ ಸೆಲ್ವರಾಜ್ ಅವರೊಂದಿಗೆ ಘೋಷಿಸಿದ್ದರು.
South Cinema
Keerthy Suresh: ಹೊಂಬಾಳೆ ಫಿಲ್ಮ್ಸ್ ಮೊದಲ ತಮಿಳು ಚಿತ್ರದ ಶೂಟಿಂಗ್ ಮುಕ್ತಾಯ!
Keerthy Suresh: ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಕೊನೆ ದಿನ ಸೆಟ್‌ನಲ್ಲಿ ಕೇಕ್ ಕತ್ತರಿಸಿ ಚಿತ್ರತಂಡ ಖುಷಿಪಟ್ಟಿದೆ. ಆ ಫೋಟೊಗಳನ್ನು ಹೊಂಬಾಳೆ ಸಂಸ್ಥೆ ಹಂಚಿಕೊಂಡಿದೆ.
ಬೆಂಗಳೂರು: ನವರಸ ನಾಯಕ ಜಗ್ಗೇಶ್ ಅಭಿನಯದ ರಾಘವೇಂದ್ರ ಸ್ಟೋರ್ಸ್ ಸಿನಿಮಾ ರಿಲೀಸ್ ಆದ ಬೆನ್ನಲ್ಲೇ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣದ ಮೊದಲ ತಮಿಳು ಚಿತ್ರ ‘ರಘುತಾತʼ ಚಿತ್ರೀಕರಣ ಪೂರ್ಣಗೊಂಡಿದೆ. ಕೀರ್ತಿ ಸುರೇಶ್ (Keerthy Suresh) ಈ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಕೊನೆಯ ದಿನ ಸೆಟ್‌ನಲ್ಲಿ ಕೇಕ್ ಕತ್ತರಿಸಿ ಚಿತ್ರತಂಡ ಖುಷಿಪಟ್ಟಿದೆ. ಆ ಫೋಟೊಗಳನ್ನು ಹೊಂಬಾಳೆ ಸಂಸ್ಥೆ ಹಂಚಿಕೊಂಡಿದೆ.
ಈ ಹಿಂದೆ, ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸಿರೀಶ್ ಜತೆಗೆ ಕೆಲವು ಚಿತ್ರಗಳಿಗೆ ಕಥೆ-ಚಿತ್ರಕಥೆ ರಚಿಸಿದ್ದ ಸುಮನ್ ಕುಮಾರ್ ಈ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶನ ಈ ಸಿನಿಮಾಗಿದೆ. ‘ರಘುತಾತʼ’ ಒಂದು ಮಹಿಳಾಪ್ರಧಾನ ಚಿತ್ರವಾಗಿದ್ದು, ಒಬ್ಬ ಯುವತಿಯ ಸುತ್ತ ಸುತ್ತುತ್ತದೆ. ಆಕೆ ತನ್ನ ನೆಲ ಮತ್ತು ಜನರ ಗುರುತನ್ನು ರಕ್ಷಿಸುವ ನಿಟ್ಟಿನಲ್ಲಿ ಏನೆಲ್ಲ ಸಾಹಸಗಳನ್ನು ಮಾಡುತ್ತಾಳೆ ಎಂಬುದನ್ನು ಈ ಕಥೆಯಲ್ಲಿ ಹಾಸ್ಯಮಯವಾಗಿ ಚಿತ್ರಿಸಲಾಗಿದೆʼʼಎಂದು ಚಿತ್ರತಂಡ ಹೇಳಿಕೊಂಡಿದೆ.
ಇದೊಂದು ಕಾಮಿಡಿ ಡ್ರಾಮಾ ಚಿತ್ರವಾಗಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ಕೀರ್ತಿ ಸುರೇಶ್ ಜತೆಗೆ ಎಂ.ಎಸ್. ಭಾಸ್ಕರ್, ದೇವದರ್ಶಿನಿ, ರವೀಂದ್ರ ವಿಜಯ್, ಆನಂದ್ಸಾಮಿ, ರಾಜೇಶ್ ಬಾಲಕೃಷ್ಣನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯಾಮಿನಿ ಯಜ್ನಮೂರ್ತಿ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದು, ಜೈ ಭೀಮ್ ಖ್ಯಾತಿಯ ಸೀನ್ ರೋಲ್ಡನ್ ಸಂಗೀತ ಸಂಯೋಜಿಸುತ್ತಿದ್ದಾರೆ.
ಇದನ್ನೂ ಓದಿ: Keerthy Suresh: ಮಲ್ಟಿ ಕಲರ್ ಉಡುಗೆಯಲ್ಲಿ ಕೀರ್ತಿ ಸುರೇಶ್ ಹೊಸ ಫೋಟೊಶೂಟ್!
ಹೊಂಬಾಳೆ ಫಿಲ್ಮ್ಸ್ ಟ್ವೀಟ್
🎬 That’s a wrap, folks! 🎉🎥 Raghuthatha, where the revolution finds its home, has completed its fiery shoot! Stay tuned for a revolution that’ll make your heart race! #Raghuthatha@KeerthyOfficial @hombalefilms #VijayKiragandur @sumank #MSBhaskar @yaminiyag @RSeanRoldan… pic.twitter.com/rk4oSw7FyO
— Hombale Films (@hombalefilms) May 26, 2023
ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿದೆ ಹೊಂಬಾಳೆ
ಮುಂದಿನ 5 ವರ್ಷಗಳಲ್ಲಿ 3 ಸಾವಿರ ಕೋಟಿ ರೂ. ಮನರಂಜನಾ ಕ್ಷೇತ್ರದಲ್ಲಿ ತೊಡಗಿಸುವುದಾಗಿ ನಿರ್ಮಾಪಕ ವಿಜಯ್ ಕಿರಗಂದೂರ್ ಹೇಳಿದ್ದರು. ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ಇದೀಗ ಹೊಂಬಾಳೆ ಸಂಸ್ಥೆ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ.
ತೆಲುಗಿನಲ್ಲಿ ‘ಸಲಾರ್’, ಮಲಯಾಳಂನಲ್ಲಿ ‘ಟೈಸನ್’ ಸೇರಿದಂತೆ ದೊಡ್ಡ ದೊಡ್ಡ ಸಿನಿಮಾಗಳನ್ನು ಹೊಂಬಾಳೆ ಸಂಸ್ಥೆ ಕೈಗೆತ್ತಿಕೊಂಡಿದೆ. ಕನ್ನಡದಲ್ಲಿ ‘ಕಾಂತಾರ’- 2, ‘ರಿಚರ್ಡ್ ಆಂಟನಿ’, ‘ಯುವ’, ‘ಧೂಮಂ’, ‘ಬಘೀರ’ ಸಿನಿಮಾಗಳು ಶುರುವಾಗಿದ್ದರೆ ಮತ್ತೊಂದಷ್ಟು ಸಿನಿಮಾಗಳು ಮಾತುಕತೆ ಹಂತದಲ್ಲಿದೆ. ಮುಂದೆ ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಕಾಂಬಿನೇಷನ್‌ನಲ್ಲೂ ಸಿನಿಮಾಗಳು ಮೂಡಿ ಬರಲಿವೆ ಎನ್ನಲಾಗಿದೆ.
ಇತ್ತೀಚೆಗಷ್ಟೆ ‘ಧೂಮಂ’ ಸಿನಿಮಾ ಚಿತ್ರೀಕರಣ ಮುಕ್ತಾಯವಾಗಿತ್ತು. ಲೂಸಿಯಾ ಪವನ್ ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಮಲಯಾಳಂ ನಟ ಫಹಾದ್ ಫಾಸಿಲ್ ನಟಿಸಿದ್ದಾರೆ. ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಪ್ರಭಾಸ್ ನಟನೆಯ ‘ಸಲಾರ್’ ಚಿತ್ರೀಕರಣ ಭರದಿಂದ ಸಾಗುತ್ತಿದೆ.
-
ಸುವಚನ17 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ12 hours ago
EPF e-passbook : UMANG ಆ್ಯಪ್ನಲ್ಲಿ ನಿಮ್ಮ ಪಿಎಫ್ ಪಾಸ್ಬುಕ್ ಸುಲಭವಾಗಿ ಪರಿಶೀಲಿಸಿ
-
ಪ್ರಮುಖ ಸುದ್ದಿ14 hours ago
Apply for ration card : ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದು ಹೇಗೆ?
-
ಉತ್ತರ ಕನ್ನಡ22 hours ago
Karwar News: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: ಇಬ್ಬರು ಅಧಿಕಾರಿಗಳಿಗೆ 2 ವರ್ಷ ಜೈಲು
-
ಪ್ರಮುಖ ಸುದ್ದಿ17 hours ago
Horoscope Today : ಈ ರಾಶಿಯವರಿಗೆ ಇಂದು ಪ್ರೀತಿ ಅಂಕುರವಾಗಲಿದೆಯಂತೆ!
-
ಉತ್ತರ ಕನ್ನಡ24 hours ago
Karwar Accident: ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು
-
ಕರ್ನಾಟಕ8 hours ago
Monsoon Season: ಮಂಗಳೂರು ವಿವಿ ಕಾಲೇಜಲ್ಲಿ ಕೈ ತೊಳೆಯೋಕೂ ನೀರಿಲ್ಲ; ರಜೆ ಕೊಟ್ಟ ಆಡಳಿತ ಮಂಡಳಿ!
-
ಪ್ರಮುಖ ಸುದ್ದಿ24 hours ago
ವಿಸ್ತಾರ ಸಂಪಾದಕೀಯ: ಶಾಲಾ ಬಾಲಕಿಯರಿಗೆ ವಿಷ: ಅಫಘಾನಿಸ್ತಾನದಲ್ಲಿ ಮನುಷ್ಯತ್ವ ಮರುಕಳಿಸುವುದು ಯಾವಾಗ?