ವಿಸ್ತಾರ ಅಂಕಣ: ಪಠ್ಯ ಪುಸ್ತಕ ಪರಿಷ್ಕರಣೆ ಎಂದರೆ ಮಕ್ಕಳ ಆಟ ಎಂದುಕೊಂಡಿದೆಯೇ ಸರ್ಕಾರ? - Vistara News

ಪ್ರಮುಖ ಸುದ್ದಿ

ವಿಸ್ತಾರ ಅಂಕಣ: ಪಠ್ಯ ಪುಸ್ತಕ ಪರಿಷ್ಕರಣೆ ಎಂದರೆ ಮಕ್ಕಳ ಆಟ ಎಂದುಕೊಂಡಿದೆಯೇ ಸರ್ಕಾರ?

ಯಾವುದೋ ಒಂದು ಗುಂಪನ್ನು ಮೆಚ್ಚಿಸಲು ದಿನಬೆಳಗಾದರೆ ಪಠ್ಯಪುಸ್ತಕ ಪರಿಷ್ಕರಣೆಯ ಮಾತನ್ನು ಸರ್ಕಾರದ ಭಾಗವಾಗಿರುವವರು ನಿಲ್ಲಿಸುವುದು ಒಳ್ಳೆಯದು. ಪಠ್ಯ ಪುಸ್ತಕ ರಚನೆಯ ಜವಾಬ್ದಾರಿಯನ್ನು ರಾಜಕೀಯ ಹಿತಾಸಕ್ತಿ ಇಲ್ಲದ ಚಿಂತಕರಿಗೆ ಒಪ್ಪಿಸಬೇಕು.

VISTARANEWS.COM


on

karnataka government decision to revise textbook vistara column
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Vistara Column @ Hariprakash Konemane

“ಮೊಘಲ್ ಬಾದಶಹರಲ್ಲಿ ಕೊನೆಯವನಾದ ಔರಂಗಜೇಬನು ಕಾಲಚಕ್ರವನ್ನು ಹಿಂದಕ್ಕೆ ತಿರುಗಿಸಲು ಪ್ರಯತ್ನ ಮಾಡಿ ಪ್ರಗತಿಯನ್ನು ತಡೆದು, ಕಡೆಗೆ ನುಚ್ಚು ನೂರು ಮಾಡಿದನು. ಜನತೆಯ ಸ್ವಭಾವಕ್ಕನುಗುಣವಾಗಿ ಎಲ್ಲಿಯವರೆಗೆ ಎಲ್ಲರನ್ನೂ ಸಮಾನವಾಗಿ ಕಂಡು, ರಾಷ್ಟ್ರೀಯ ಭಾವನೆಯನ್ನು ಉದ್ದೀಪನಗೊಳಿಸಲು ಮೊಘಲ್ ರಾಜರು ಪ್ರಯತ್ನಿಸಿದರೋ, ಅಲ್ಲಿಯವರೆಗೂ ಅವರು ಬಲಿಷ್ಠರಾಗಿದ್ದರು. ಔರಂಗಜೇಬನು ಇದಕ್ಕೆ ವಿರುದ್ಧವಾಗಿ ನಡೆದುಕೊಂಡು, ಭಾರತೀಯನಲ್ಲದ ಮುಸ್ಲಿಂ ಚಕ್ರವರ್ತಿಯಾಗಲು ಪ್ರಯತ್ನಪಟ್ಟನೋ ಅಂದಿನಿಂದಲೇ ಮೊಘಲ್ ಚಕ್ರಾಧಿಪತ್ಯವು ಕುಸಿಯಲು ಆರಂಭವಾಯಿತು. ಅಕ್ಬರನೂ ಅವನ ವಂಶಿಕರೂ ಮಾಡಿದ ಕೆಲಸವೆಲ್ಲ ನಿರರ್ಥಕವಾಯಿತು. “
-ಜವಾಹರಲಾಲ್ ನೆಹರು

ಭಾರತದ ಪ್ರಥಮ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂ ಅವರು ತಮ್ಮ ʼಭಾರತ ದರ್ಶನʼ ಸರಣಿಯ ಮೊದಲ ಸಂಪುಟದಲ್ಲಿ ಬರೆದಿರುವ ಈ ಮಾತಿಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಬಹುದು. ಮೊಘಲ್ ವಂಶದ ಬಹುತೇಕ ರಾಜರು ಔರಂಗಜೇಬನ ರೀತಿಯೇ ಇದ್ದರು ಎನ್ನಲೂ ಬಹುದು. ಇನ್ನೂ ಕೆಲವರು ಇದು ನೆಹರು ಅವರ ಅಲ್ಪಸಂಖ್ಯಾತರ ತುಷ್ಟೀಕರಣ ನೀತಿ ಎನ್ನಲೂ ಬಹುದು. ಈ ಎಲ್ಲವೂ ಚರ್ಚೆಯ ವಿಷಯಗಳು. ಆದರೆ, ನೆಹರು ಅವರ ಈ ಮಾತಿನಲ್ಲಿ- ರಾಜನೊಬ್ಬ ಹೇಗಿರಬೇಕು ಎಂಬ ವಿವೇಕವನ್ನು ಗಮನಿಸಬೇಕು.

ಆಡಳಿತ ಎನ್ನುವುದು ಎಲ್ಲಿಯವರೆಗೆ ಜನರ ಭಾವನೆಗಳಿಗೆ ಅನುಗುಣವಾಗಿ ಇರುತ್ತದೆಯೋ ಅಲ್ಲಿಯವರೆಗೆ ನಿರಾತಂಕವಾಗಿ ನಡೆಯುತ್ತದೆ. ಆದರೆ ಎಂದು ಕೆಲವೇ ತನ್ನ ಸುತ್ತಮುತ್ತಲಿರುವವರ ವಿಷಯವನ್ನೋ ಅಥವಾ ತನ್ನ ಖಾಸಗಿ ನಂಬಿಕೆಯನ್ನೋ ಸಮಾಜದ ಮೇಲೆ ಹೇರಲು ಹೊರಟಾಗ ಸಮಾಜ ಅದನ್ನು ಪ್ರತಿಭಟಿಸುತ್ತದೆ. ಅದು ರಾಜಾಡಳಿತವಾದರೂ ಅಷ್ಟೆ, ಆಕ್ರಮಣಕಾರರಾದರೂ ಅಷ್ಟೆ, ಪ್ರಜಾಪ್ರಭುತ್ವವಾದರೂ ಅಷ್ಟೆ. ಈ ಸಂದೇಶವು ಕರ್ನಾಟಕದಲ್ಲಿ 10-15 ವರ್ಷದಿಂದ ನಡೆಯುತ್ತಿರುವ ಕದನಕ್ಕೆ ಹೊಂದಿಕೆಯಾಗುತ್ತದೆ.

2008ರಲ್ಲಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಪೂರ್ಣಪ್ರಮಾಣದ ಸರ್ಕಾರ ರಚನೆಯಾದ ನಂತರ ಶಾಲಾ ಪಠ್ಯಪುಸ್ತಕ ಪರಿಷ್ಕರಣೆಗೆ (textbook revision) ಕೈ ಹಾಕಲಾಯಿತು. ಪ್ರೊ. ಮುಡಂಬಡಿತ್ತಾಯ ಅವರ ಅಧ್ಯಕ್ಷತೆಯ ಸಮಿತಿ ರಚಿಸಿದ್ದ ಬಿಜೆಪಿ ಸರ್ಕಾರ, ಪಠ್ಯಪುಸ್ತಕ ಬದಲಾಯಿಸುವ, ವಿವಿಧ ಪಠ್ಯವನ್ನು ಸೇರಿಸುವ ಕೆಲಸ ಮಾಡಿತು. ಧರಣಿ ಮಂಡಲ ಮಧ್ಯದೊಳಗೆ ಪದ್ಯದ ಆಶಯವನ್ನೇ ಬಿಜೆಪಿ ತಿರುಚಿದೆ ಎಂದು ಆರೋಪಿಸಲಾಯಿತು. ಇದಕ್ಕೆ ಸಹಜವಾಗಿಯೇ ಕಾಂಗ್ರೆಸ್ ಹಾಗೂ ಎಡಪಂಥೀಯ ಒಲವುಳ್ಳ ಲೇಖಕರು ವಿರೋಧ ವ್ಯಕ್ತಪಡಿಸಿದರು.

2013ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಬಿಜೆಪಿ ಮಾಡಿದ ಈ ‘ತಪ್ಪನ್ನುʼ ಸರಿಮಾಡಲು ಮುಂದಾಯಿತು. ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಪಠ್ಯಪುಸ್ತಕ ರಚನಾ ಸಮಿತಿಯನ್ನು ರಚಿಸಿತು. ಈ ಸಮಿತಿಯು ಅನೇಕ ಬದಲಾವಣೆಗಳನ್ನು ಮಾಡಿತು. ಆದರೆ, ಬ್ರಾಹ್ಮಣರು ಯಜ್ಞ ಯಾಗಾದಿಗಳನ್ನು ಮಾಡಲು ತುಪ್ಪವನ್ನು ಬಳಸಿದ್ದರಿಂದ ಪ್ರಪಂಚದಲ್ಲಿ ಆಹಾರದ ಅಭಾವ ಸೃಷ್ಟಿಯಾಯಿತು ಎಂಬ ಸಾಲುಗಳನ್ನು ಈ ಸಮಿತಿ ಸೇರಿಸಿತ್ತು. ಇದಕ್ಕೆ ಬಿಜೆಪಿ ವಲಯದಿಂದ ಸಹಜವಾಗಿ ವಿರೋಧ ವ್ಯಕ್ತವಾಯಿತು.

siddaramaiah and niranjanaradhya

ಕಾಂಗ್ರೆಸ್ ಸಮಯದಲ್ಲಿ ಮಾಡಿದ್ದ ಈ ʼಮಹಾ ಪ್ರಮಾದʼವನ್ನು ಸರಿಪಡಿಸಲು 2019ರಲ್ಲಿ ಅಧಿಕಾರಕ್ಕೇರಿದ ಬಿಜೆಪಿ ಸರ್ಕಾರ ಮುಂದಾಯಿತು. ರೋಹಿತ್ ಚಕ್ರತೀರ್ಥ ಅವರ ಅಧ್ಯಕ್ಷತೆಯ ಸಮಿತಿ ರಚನೆ ಮಾಡಿ ಪಠ್ಯಪುಸ್ತಕವನ್ನು ತಿದ್ದಿತು. ಇದರಲ್ಲಿ ನಾರಾಯಣಗುರು, ಕುವೆಂಪು ಸೇರಿ ಅನೇಕರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಮತ್ತೊಮ್ಮೆ ಇನ್ನೊಂದು ತುದಿಯಲ್ಲಿದ್ದ ಕಾಂಗ್ರೆಸ್ ಹಾಗೂ ಎಡ ಪರ ಲೇಖಕರ ವಲಯದಿಂದ ಕೇಳಿಬಂದಿತು.
ಇದೀಗ 2023ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅಧಿಕಾರಕ್ಕೇರಿ ಇನ್ನೂ ಒಂದು ತಿಂಗಳೂ ಕಳೆದಿಲ್ಲ. ಈಗಾಗಲೆ ಶಾಲೆಗಳು ಆರಂಭವಾಗಿದ್ದರೂ, ಶಾಲಾ ಪಠ್ಯಪುಸ್ತಕಗಳನ್ನು ಪರಿಷ್ಕರಣೆ ಮಾಡುವ ಮಾತುಗಳನ್ನು ಸ್ವತಃ ಸಿಎಂ ಸಿದ್ದರಾಮಯ್ಯ ಆದಿಯಾಗಿ ಅನೇಕರು ಮಾತನಾಡುತ್ತಿದ್ದಾರೆ. ಸ್ವತಃ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪಠ್ಯಪುಸ್ತಕ ಪರಿಷ್ಕರಣೆ ಆಗುವುದು ಖಚಿತ ಎಂದಿದ್ದಾರೆ. ಇದೆಲ್ಲವೂ ರಾಜಕೀಯ ಪಕ್ಷಗಳು ತಮ್ಮ ಸೈದ್ಧಾಂತಿಕ ನೆಲೆಯನ್ನು ಭದ್ರಪಡಿಸಿಕೊಳ್ಳಲು ಪ್ರಯತ್ನಿಸುತ್ತಿರುವುದರ ಸ್ಪಷ್ಟ ಸಂಕೇತ. ಆದರೆ, ಈ ಪ್ರಯತ್ನದಲ್ಲಿ ವಿದ್ಯಾರ್ಥಿಗಳು ಸಂತ್ರಸ್ತರಾಗುತ್ತಿದ್ದಾರೆ ಎಂಬುದನ್ನೇ ಸರಕಾರ ಮರೆತಿದೆ.

ದೇಶದ ಎರಡನೇ ರಾಷ್ಟ್ರಪತಿಯಾಗಿದ್ದ ಡಾ. ಎಸ್. ರಾಧಾಕೃಷ್ಣನ್ ಅವರು ಸ್ವತಃ ಶಿಕ್ಷಕರು, ಶಿಕ್ಷಣ ತಜ್ಞರೂ ಆಗಿದ್ದರು. ಅವರು ಹೇಳಿರುವಂತೆ, “ಶಿಕ್ಷಣದ ಅಂತಿಮ ಗುರಿಯು ಮುಕ್ತ ಆಲೋಚನೆಯ ಮನುಷ್ಯನನ್ನು ಸೃಜಿಸುವುದಾಗಿರಬೇಕು. ಈ ಮನುಷ್ಯನು ಐತಿಹಾಸಿಕ ಸನ್ನಿವೇಶಗಳು ಹಾಗೂ ನಿಸರ್ಗದ ಪ್ರತಿಕೂಲಗಳ ವಿರುದ್ಧ ಹೋರಾಡುವವನಾಗಿರಬೇಕು” ಎಂದರು. ಅಲ್ಲಿಗೆ, ಶಿಕ್ಷಣ ಕ್ಷೇತ್ರದಲ್ಲಿ ನಿರಂತರ ಪ್ರವಾಹವನ್ನು ಕಾಯ್ದುಕೊಳ್ಳಬೇಕು ಎಂಬ ಸಂದೇಶವನ್ನು ರಾಧಾಕೃಷ್ಣನ್ ಅವರು ನೀಡಿದ್ದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಐದು ವರ್ಷಕ್ಕೊಮ್ಮೆ ವಿಧಾನಸಭೆ, ಲೋಕಸಭೆ ಚುನಾವಣೆಗಳನ್ನು ನಡೆಸಲಾಗುತ್ತದೆ. ತಮ್ಮ ಅಭಿಪ್ರಾಯಕ್ಕೆ ಮನ್ನಣೆ ನೀಡುವವರನ್ನು ಜನರು ಆಯ್ಕೆ ಮಾಡಲಿ, ತಮಗೆ ಇಷ್ಟ ಇಲ್ಲದವರನ್ನು ಮನೆಗೆ ಕಳಿಸಲಿ ಎಂದು ಮಾಡಿಕೊಂಡಿರುವ ವ್ಯವಸ್ಥೆ. ಹೊಸ ಸರ್ಕಾರ ಬಂದ ಕೂಡಲೆ ವ್ಯವಸ್ಥೆಯನ್ನು ಮತ್ತಷ್ಟು ಸರಳಗೊಳಿಸಬೇಕು. ಹಳೆಯ ವ್ಯವಸ್ಥೆಯಲ್ಲಿರುವಲೋಪದೋಷಗಳನ್ನು, ವ್ಯವಸ್ಥೆಗೆ ಧಕ್ಕೆ ಆಗದಂತೆ ಹೊರತೆಗೆಯಬೇಕು ಎನ್ನುವುದು. ಬಿಜೆಪಿ ಸರ್ಕಾರ ಹೋಗಿ ಕಾಂಗ್ರೆಸ್ ಸರ್ಕಾರ ಬರಬಹುದು, ಮತ್ತೆ ಕಾಂಗ್ರೆಸ್ ಸರ್ಕಾರ ಹೋಗಿ ಬಿಜೆಪಿ ಸರ್ಕಾರ ಅಧಿಕಾರ ಹಿಡಿಯಬಹುದು. ಇಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಯಾವುದೇ ಪಕ್ಷಗಳು ಬದಲಾಗುತ್ತವೆಯೇ ವಿನಃ ಸರ್ಕಾರ ಅಲ್ಲ. ಸರ್ಕಾರ ಎನ್ನುವುದು ನಿರಂತರ ವ್ಯವಸ್ಥೆ. ಒಟ್ಟಾರೆಯಾಗಿ ಅದು ಕರ್ನಾಟಕ ಸರ್ಕಾರ, ಭಾರತ ಸರ್ಕಾರ, ಮಹಾರಾಷ್ಟ್ರ ಸರ್ಕಾರ, ಇತ್ಯಾದಿ ಇತ್ಯಾದಿ. ಪಕ್ಷಗಳೂ ಹೆಸರು ಹೇಳುವುದು, ಸಿಎಂ, ಪಿಎಂ ಇಲ್ಲವೇ ಪಕ್ಷಗಳ ಹೆಸರಿನಲ್ಲಿ ಸರ್ಕಾರವನ್ನು ಸಂಬೋಧಿಸುವುದು ನಮ್ಮ ಅನುಕೂಲಕ್ಕಾಗಿ ಮಾತ್ರ.

ಬಿಜೆಪಿ ಸರ್ಕಾರ ರಚನೆ ಮಾಡಿದ ಕೂಡಲೆ ಅದರ ಕಣ್ಣು ಶಾಲಾ ಮಕ್ಕಳ ಪಠ್ಯಪುಸ್ತಕದ ಮೇಲೆ ಹೋಗುತ್ತದೆ. ಅವರ ವಾದ ಏನು? ಭಾರತದ ಇತಿಹಾಸವನ್ನು ಕಳೆದ 75 ವರ್ಷಗಳಲ್ಲಿ ತಪ್ಪಾಗಿ ಹೇಳಲಾಗಿದೆ. ಅಲೆಕ್ಸಾಂಡರ್, ಅಕ್ಬರ್, ಟಿಪ್ಪುವನ್ನೇ ಮೆರೆಸಲಾಗಿದೆ. ನಮ್ಮದೇ ರಾಜರಾದ ಕೃಷ್ಣದೇವರಾಯ, ಶಿವಾಜಿ, ರಾಣಾ ಪ್ರತಾಪನನ್ನು ಮರೆತಿದ್ದಾರೆ. ಕೇವಲ ಮಹಾತ್ಮ ಗಾಂಧಿ ಸ್ವಾತಂತ್ರ್ಯ ತಂದುಕೊಟ್ಟರು ಎಂದು ಬಿಂಬಿಸಲಾಗಿದೆ. ಕ್ರಾಂತಿಕಾರಿಗಳನ್ನು ಕಡೆಗಣಿಸಲಾಗಿದೆ…. ಹೀಗೆ ಇತಿಹಾಸದಲ್ಲಿ ಆಗಿರುವ ಪ್ರಮಾದಗಳ ದೊಡ್ಡ ಪಟ್ಟಿಯೇ ಬಿಜೆಪಿ ಹಾಗೂ ಅದರ ಚಿಂತಕ ವಲಯದಲ್ಲಿದೆ. ಇದು ಸತ್ಯ ಕೂಡ. ನಮ್ಮ ದೇಶದ ಇತಿಹಾಸವನ್ನು ಮಕ್ಕಳಿಗೆ ತಿಳಿಸಿದರೆ ಅವರಲ್ಲಿ ಸ್ವಾಭಿಮಾನ ಜಾಗೃತಿಯಾಗುತ್ತದೆ. ಅವರು ಯಾವುದೇ ಭ್ರಷ್ಟಾಚಾರ, ಅನಾಚಾರಕ್ಕೆ ಮುಂದಾಗದೆ ದೇಶದ ಏಳಿಗೆಗಾಗಿ ದುಡಿಯುತ್ತಾರೆ. ಆಗ ದೇಶವು ಇಡೀ ವಿಶ್ವದಲ್ಲಿ ಗೌರವಯುತ ಸ್ಥಾನ ಪಡೆಯುತ್ತದೆ. ಇದರಲ್ಲಿ ತಪ್ಪೇನೂ ಇಲ್ಲ.

Vinayak Damodar Savarkar and Keshav Baliram Hedgewar

ಆದರೆ ಶಿಕ್ಷಣ ಎನ್ನುವುದು ಕೇವಲ ಪಠ್ಯಪುಸ್ತಕ ಎಂಬ ತಪ್ಪು ತಿಳುವಳಿಕೆ ಇಲ್ಲಿದೆ. ಸಮಾಜ ವಿಜ್ಞಾನ, ಕನ್ನಡ ಪಠ್ಯಪುಸ್ತಕ ಬದಲು ಮಾಡಿಬಿಟ್ಟರೆ ಇಡೀ ಮಕ್ಕಳ ಮನಸ್ಥಿತಿ ಬದಲಾಗಿಬಿಡುತ್ತದೆ ಎನ್ನುವುದು ಭ್ರಮೆ. ಒಟ್ಟಾರೆ ಶಿಕ್ಷಣ ವ್ಯವಸ್ಥೆಯಲ್ಲಿ ಪಠ್ಯಪುಸ್ತಕವೂ ಒಂದು ಭಾಗ. ಇದರಲ್ಲಿ ಶಾಲಾ ಮೂಲಸೌಕರ್ಯ, ಶಿಕ್ಷಕರ ಗುಣಮಟ್ಟ, ಶಿಕ್ಷಕರ ತರಬೇತಿ, ಮೌಲ್ಯಮಾಪನ ವ್ಯವಸ್ಥೆ, ಬೋಧನಾ ವಿಧಾನ, ಆಟೋಟಗಳಿಗೆ ಪ್ರೋತ್ಸಾಹಕ, ವಿಜ್ಞಾನ ತಿಳಿವಳಿಕೆ… ಹೀಗೆ ಹತ್ತಾರು ವಿಚಾರಗಳು ಸೇರಿ ಒಬ್ಬ ಒಳ್ಳೆಯ, ದೇಶಭಕ್ತ ವಿದ್ಯಾರ್ಥಿ ತಯಾರಾಗುತ್ತಾನೆ. ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಾಗಲೂ ಮಾನವ ಸಂಪನ್ಮೂಲ ಸಚಿವರಾಗಿದ್ದ ಡಾ. ಮುರಳೀಮನೋಹರ ಜೋಶಿ ಅವರು ಪಠ್ಯಪುಸ್ತಕಗಳ ಪರಿಷ್ಕರಣೆಗೆ ಕೈಹಾಕಿದರು. ಆಗ ದೇಶಾದ್ಯಂತ ಕೇಸರೀಕರಣದ ಹುಯಿಲೆಬ್ಬಿಸಲಾಯಿತು. ಆನಂತರ 2004ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಬಂದಾಗ, ಬಿಜೆಪಿ ಅವಧಿಯ ಅನೇಕ ಬದಲಾವಣೆಗಳನ್ನು ತೆಗೆದುಹಾಕಿತು. ಆಗ ಬಿಜೆಪಿ ಮತ್ತೆ, ಇದು ಹಿಂದುಗಳನ್ನು ದಮನ ಮಾಡುವ ಕ್ರಿಯೆ ಎಂದು ಬೊಬ್ಬೆ ಹಾಕಿತು.

ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸರಳ ಬಹುಮತ ಪಡೆದು ಸ್ಥಾಪನೆಯಾಗಿದೆ. ಯಾವುದೇ ಪಕ್ಷ ಸುಲಭವಾಗಿ ಆಪರೇಷನ್ ಮಾಡಿ ಸರ್ಕಾರವನ್ನು ಬೀಳಿಸಲು ಸಾಧ್ಯವಾಗದಿರುವಷ್ಟು ಸುಭದ್ರ ಸಂಖ್ಯೆಯನ್ನು ಜನರು ಕಾಂಗ್ರೆಸ್ ಪಕ್ಷಕ್ಕೆ ನೀಡಿದ್ದಾರೆ. ಈಗ ಜನರಿಗೆ ಅತ್ಯಗತ್ಯವಾಗಿ ಬೇಕಾದ ಅನೇಕ ವಿಚಾರಗಳತ್ತ ಸರ್ಕಾರ ಗಮನ ಹರಿಸುವ ಅಗತ್ಯವಿದೆ.

ಈಗಾಗಲೆ ಚುನಾವಣೆಯಲ್ಲಿ ಘೋಷಣೆ ಮಾಡಿರುವ ಐದು ಗ್ಯಾರಂಟಿ ಯೋಜನೆಗಳ ಜತೆಗೆ ಒಟ್ಟಾರೆ ಪ್ರಣಾಳಿಕೆಯನ್ನು ಜಾರಿಗೆ ತರಬೇಕಿದೆ. ಪ್ರತಿ ವರ್ಷ ಬಜೆಟ್ ಮಂಡಿಸುವ ಮೂಲಕ ಒಂದೊಂದೇ ಹೆಜ್ಜೆ ರಾಜ್ಯವನ್ನು ಸುಭಿಕ್ಷದೆಡೆಗೆ ಕರೆದೊಯ್ಯಬೇಕಿದೆ. ಇದೆಲ್ಲದರ ನಡುವೆ ಎದುರಾಗುವ ಬರ, ನೆರೆ ಮುಂತಾದ ಪ್ರಕೃತಿ ವಿಕೋಪಗಳಿಗೂ ಸ್ಪಂದಿಸಬೇಕಿದೆ. ಆದರೆ ಕಾಂಗ್ರೆಸ್ ಸರ್ಕಾರ ಇದೆಲ್ಲವನ್ನೂ ಬಿಟ್ಟು ಮತ್ತೆ ಪಠ್ಯಪುಸ್ತಕಕ್ಕೆ ಕೈ ಹಾಕಿದೆ. ಬಿಜೆಪಿ ಅವಧಿಯಲ್ಲಿ ನಡೆಸಿದ ತಿದ್ದುಪಡಿಗಳನ್ನು ಬದಲಾಯಿಸಲು ಮುಂದಾಗಿದೆ. ಯಾರದ್ದೋ ಮೇಲಿನ ದ್ವೇಷವನ್ನು ಪಠ್ಯದ ಮೇಲೆ ತೀರಿಸಲು ಹೊರಟಿದೆ. ಸ್ವಾತಂತ್ರ್ಯ ಹೋರಾಟಗಾರರ ಕುರಿತ ಪಾಠ, ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯರು ರಚಿಸಿರುವ ಪಾಠ, ಆರ್ ಎಸ್ ಎಸ್ ಸಂಸ್ಥಾಪಕ ಡಾ. ಕೇಶವ ಬಲಿರಾಮ್ ಹೆಡಗೆವಾರ್ ಅವರ ಭಾಷಣದ ಮೇಲೆ ಕಾಂಗ್ರೆಸ್ ಸರ್ಕಾರದ ಕಣ್ಣು ಬಿದ್ದಿದೆ. ಕಾಂಗ್ರೆಸ್ ಹೇಳುವ ಪ್ರಕಾರ ಈ ಪಠ್ಯಪುಸ್ತಕವನ್ನು ಸರಿಯಾದ ಕ್ರಮದಲ್ಲಿ ಪರಿಷ್ಕರಣೆ ಮಾಡಲಿಲ್ಲ. ಸಮಿತಿಯಲ್ಲಿ ಇದ್ದವರಿಗೆ ಅದಕ್ಕೆ ತಕ್ಕ ಅರ್ಹತೆ ಇರಲಿಲ್ಲ, ಒಟ್ಟಾರೆ ಪಠ್ಯಪುಸ್ತಕ ಪರಿಷ್ಕರಣೆಗೆ ಸರ್ಕಾರ ಆದೇಶವನ್ನೇ ನೀಡಿಲ್ಲ ಎಂಬಂತಹ ವಾದಗಳನ್ನು ಮುಂದಿಡಲಾಗುತ್ತಿದೆ. ಚಿಂತಕರು ಎಂದು ಹೇಳಿಕೊಂಡ, ಎಡ ಪರ, ಕಾಂಗ್ರೆಸ್ ಪರ ಸಾಹಿತಿಗಳ ನಿಯೋಗವೊಂದು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಪಠ್ಯಪುಸ್ತಕ ಪರಿಷ್ಕರಣೆಯನ್ನು ಕೈಬಿಡಲು ಮನವಿ ಮಾಡಿದೆ.

ಈಗಾಗಲೆ ಚುನಾವಣೆ ಪ್ರಣಾಳಿಕೆಯಲ್ಲೂ ಕಾಂಗ್ರೆಸ್ ಈ ವಿಷಯವನ್ನು ಹೇಳಿರುವುದರಿಂದ ಅದಕ್ಕೆ ಬದ್ಧವಾಗಿರುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಇಲ್ಲಿರುವ ಪ್ರಶ್ನೆ, ಇಷ್ಟೆಲ್ಲ ರಾದ್ಧಾಂತದ ನಂತರ ಶಾಲೆಯಲ್ಲಿ ಪಾಠ ಓದುವ ಮಕ್ಕಳ ಪಾಡೇನು? ಇಂತಹ ಪಾಠವನ್ನು ಈ ಬಾರಿ ಮೌಲ್ಯಮಾಪನಕ್ಕೆ ಪರಿಗಣನೆ ಮಾಡುವುದಿಲ್ಲ ಎಂದು ತಿದ್ದೋಲೆಯನ್ನು ಸರ್ಕಾರ ಕಳಿಸಬಹುದು. ಆಗ ಶಿಕ್ಷಕರು ಆ ಪಾಠವನ್ನು ಬೋಧನೆ ಮಾಡುವುದಿಲ್ಲ. ಆದರೆ ಆ ಪಾಠ ವಿದ್ಯಾರ್ಥಿಯ ಪುಸ್ತಕದಲ್ಲಿ ಆ ಪಾಠ ಹಾಗೆಯೇ ಇರುತ್ತದೆ ಅಲ್ಲವೇ? ಮೌಲ್ಯಮಾಪನ ಮಾಡದಿದ್ದ ಮಾತ್ರಕ್ಕೆ, ಶಿಕ್ಷಕರು ಬೋಧಿಸದ ಮಾತ್ರಕ್ಕೆ ವಿದ್ಯಾರ್ಥಿಗಳು ಆ ಪಾಠವನ್ನು ಓದುವುದನ್ನು ತಡೆಯಲು ಆಗುತ್ತದೆಯೇ? ಸ್ವಾತಂತ್ರ್ಯ ಹೋರಾಟಗಾರರ ಕುರಿತು ಇಂತಹ ಒಳ್ಳೆಯ ಪಾಠವನ್ನು ಸರ್ಕಾರ ಏಕೆ ನಿಷೇಧ ಮಾಡಿದೆ? ಎಂದು ವಿದ್ಯಾರ್ಥಿಗೆ ಅನ್ನಿಸುವುದಿಲ್ಲವೇ? ಆಗ ಸರ್ಕಾರದ ಬಗ್ಗೆ ಆತನಿಗೆ ಯಾವ ಅಭಿಪ್ರಾಯ ಬರಬಹುದು? ಇಂತಹ ಸೂಕ್ಷ್ಮ ಸಂಗತಿಗಳನ್ನೂ ಆಳುವವರು ಗಮನದಲ್ಲಿ ಇರಿಸಿಕೊಳ್ಳಬೇಕು. ಏಕೆಂದರೆ ರಾಧಾಕೃಷ್ಣನ್ ಅವರು ಹೇಳಿದಂತೆ ಶಿಕ್ಷಣ ಎನ್ನುವುದು ಮನುಷ್ಯನನ್ನು ಸೃಜನಶೀಲನನ್ನಾಗಿಸಬೇಕೆ ಹೊರತು ಈ ರೀತಿ ಒಟ್ಟಾರೆ ವ್ಯವಸ್ಥೆಯ ಮೇಲೆಯೇ ಅನುಮಾನವನ್ನು ಹುಟ್ಟುಹಾಕುವುದಲ್ಲ.

ಇದನ್ನೂ ಓದಿ: ವಿಸ್ತಾರ ಅಂಕಣ: ವಿದೇಶದಲ್ಲಿ ಕಾಲಿಟ್ಟ ತಕ್ಷಣ ರಾಹುಲ್ ಗಾಂಧಿ ಭಾರತ ವಿರೋಧಿ ಆಗುವುದೇಕೆ?

ಈ ಹಿಂದೆ ಬಿಜೆಪಿ ಸರ್ಕಾರ ಮಾಡಿದ ತಪ್ಪನ್ನು ಈಗಿನ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಲಿಲ್ಲ. ಕೇವಲ ಪಠ್ಯಪುಸ್ತಕ ಪರಿಷ್ಕರಣೆಯಿಂದ ಯಾವ ಉದ್ದೇಶವೂ ಈಡೇರುವುದಿಲ್ಲ ಎನ್ನುವುದು ಆ ಪಕ್ಷದ ಅರಿವಿಗೆ ಬಂದಿತ್ತು. ಹಾಗಾಗಿ ಒಟ್ಟಾರೆ ಶಿಕ್ಷಣ ವ್ಯವಸ್ಥೆಯನ್ನೇ ಆಮೂಲಾಗ್ರವಾಗಿ ಬದಲಾವಣೆ ಮಾಡುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಆರಂಭಿಸಿದೆ. ಹಂತಹಂತವಾಗಿ ಸುಮಾರು 10 ವರ್ಷದಲ್ಲಿ ಈ ಯೋಜನೆ ಜಾರಿಯಾದಾಗ ಒಟ್ಟಾರೆ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಆಗಬೇಕು ಎನ್ನುವುದು ನಿರೀಕ್ಷೆ.

No textbooks from 3 years to 6 years Children

ಈಗಂತೂ ಶಾಲೆಗಳು ಆರಂಭವಾಗಿವೆ. ಪ್ರಸಕ್ತ ವರ್ಷದಲ್ಲಿ ಪಾಠ ಪ್ರವಚನಗಳು ಎಂದಿನಂತೆ ನಡೆಯಲಿ. ಮುಖ್ಯವಾಗಿ ರಾಜ್ಯದ ಅನೇಕ ಸರ್ಕಾರಿ ಶಾಲೆಗಳು ಕಟ್ಟಡಗಳು ಬೀಳುವ ಹಂತದಲ್ಲಿವೆ. ವಿದ್ಯಾರ್ಥಿಗಳು ಕಿಲೋಮೀಟರ್ ಗಟ್ಟಲೆ ನಡೆದೇ ಶಾಲೆಗೆ ಹೋಗುತ್ತಿದ್ದಾರೆ. ಶಿಕ್ಷಕರ ಹತ್ತಾರು ಬೇಡಿಕೆಗಳನ್ನು ಈಡೇರಿಸಬೇಕಿದೆ. ಶಿಕ್ಷಕರ ತರಬೇತಿಯತ್ತಲೂ ಗಮನ ನೀಡಬೇಕಿದೆ. ಬೇಕಿದ್ದರೆ ಪಠ್ಯಪುಸ್ತಕ ಪರಿಷ್ಕರಣೆಗೊಂದು ತಜ್ಞರ ಸಮಿತಿಯನ್ನು ರಚನೆ ಮಾಡಿ ಕೆಲಸ ಆರಂಭಿಸಲಿ. ಅವರು ಈ ವರ್ಷದ ಅಂತ್ಯಕ್ಕೆ ವರದಿ ನೀಡಿ, ಆ ವರದಿಯ ಅನುಷ್ಠಾನದ ಕುರಿತು ಸರ್ಕಾರ ನಿರ್ಧಾರ ಮಾಡಲಿ. ಮುಂದಿನ ವರ್ಷದಿಂದ ಹೊಸ ಪಠ್ಯಕ್ರಮಕ್ಕೆ ತೆರೆದುಕೊಳ್ಳಬಹುದು. ಅದನ್ನು ಬಿಟ್ಟು, ಯಾವುದೋ ಒಂದು ಗುಂಪನ್ನು ಮೆಚ್ಚಿಸುವ ಸಲುವಾಗಿ ಹಾಗೂ ಸರ್ಕಾರದ ಮೇಲಿನ ಗಮನವನ್ನು ಬೇರೆಡೆ ಸೆಳೆಯಲು ದಿನಬೆಳಗಾದರೆ ಪಠ್ಯಪುಸ್ತಕ ಪರಿಷ್ಕರಣೆಯ ಮಾತನ್ನು ಸರ್ಕಾರದ ಭಾಗವಾಗಿರುವವರು ನಿಲ್ಲಿಸುವುದು ಒಳ್ಳೆಯದು. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ, ಸಮಾಜ ಸುಧಾರಣೆಗೆ ಶ್ರಮಿಸಿದವರನ್ನು ರಾಜಕಾರಣ ಹಾಗೂ ಸ್ವಾರ್ಥಕ್ಕಾಗಿ ಅವಮಾನಿಸುವುದಕ್ಕೆ ಅಂತ್ಯ ಹಾಡುವ ಕೆಲಸ ಕಾಂಗ್ರೆಸ್ ಸರ್ಕಾರದಿಂದಲೇ ಆರಂಭವಾಗಲಿ.

ಇದನ್ನೂ ಓದಿ: ವಿಸ್ತಾರ ಅಂಕಣ: ಗ್ಯಾರಂಟಿ ಮರೆಮಾಚಲು ʼಗೋಹತ್ಯೆʼ ಗುರಾಣಿಯಾಗಬೇಕೆ?

ಕಡೆಯದಾಗಿ ನೆಹರು ಅವರು ಬರೆದಿರುವ ಮೊಘಲ್ ಚಕ್ರಾಧಿಪತ್ಯದ ಸಾಲುಗಳಿಗೆ ಮರಳೋಣ. ಅವರು ಹೇಳಿದರೆ, ನಾನು ಹಾಗೂ ನನ್ನ ವಯಸ್ಸಿನ(35ರಿಂದ 45) ತಲೆಮಾರು ಬಾಬರ್ ನಿಂದ ಔರಂಗಬೇಬ್ ವರೆಗೆ ಎಲ್ಲರನ್ನೂ ಓದಿದ್ದೇವೆ. ಅವರ ಚಿತ್ರಪಟುಗಳು ನಮ್ಮ ಸ್ಮೃತಿಪಟಲದಲ್ಲಿವೆ. ಆದರೆ, ಕೃಷ್ಣದೇವರಾಯ, ಶಿವಾಜಿ, ರಾಣಾ ಪ್ರತಾಪ ಬಗ್ಗೆ ನಾವು ಓದಿದ್ದು ಕಡಿಮೆ. ಅಂತೆಯೇ ನಮ್ಮ ರಾಜ್ಯದಲ್ಲೂ ಟಿಪ್ಪು, ಹೈದರಾಲಿ ಬಗ್ಗೆ ಓದಿದಷ್ಟು ನಾಲ್ವಡಿ, ಮುಮ್ಮಡಿ ಒಡೆಯರ್ ಬಗ್ಗೆ ಓದಿದ್ದು ಕಡಿಮೆ. ಏಕೆಂದರೆ, ಪಠ್ಯ ಪುಸ್ತಕದ ಮೇಲೆ ಬಹಳಷ್ಟು ವರ್ಷಗಳ ಕಾಲ ಎಡಪಂಥೀಯ ಸಿದ್ಧಾಂತವಾದಿಗಳ ಹಿಡಿತವಿತ್ತು. ಅವರು ಎಲ್ಲವನ್ನೂ ತಮ್ಮ ಸಿದ್ಧಾಂತಕ್ಕೆ ಅನುಗುಣವಾಗಿಯೇ ರೂಪಿಸಿದರು. ಬಳಿಕ ಬಂದ ಬಿಜೆಪಿ ಸರಕಾರ, ಈ ಪ್ರಮಾದವನ್ನು ಸರಿಪಡಿಸುತ್ತಲೇ, ತನಗಿಷ್ಟವಾದ ಸಿದ್ಧಾಂತವನ್ನು ಮೆರೆಸಲು ಯತ್ನಿಸಿತು. ಪ್ರಮಾಣದಲ್ಲಿ ವ್ಯತ್ಯಾಸವಿದ್ದರೂ ಈ ಎರಡೂ ತಪ್ಪೇ.

ಹಾಗಾಗಿ, ಪಠ್ಯ ಪುಸ್ತಕ ಪರಿಷ್ಕರಣೆಯ ಜವಾಬ್ದಾರಿಯನ್ನು. ಆಯಾ ಕಾಲದ ರಾಜಕೀಯ ಪಕ್ಷಗಳ ಸಿದ್ಧಾಂತವಾದಿಗಳಿಗೆ ಒಪ್ಪಿಸುವ ಬದಲು . ಚಿಂತನೆಯ ಸಂಸ್ಥೆಗೆ ಒಪ್ಪಿಸುವ ಅಗತ್ಯವಿದೆ. ಇದಕ್ಕಾಗಿ ಸರಕಾರ ರಾಜಕಿಯೇತರವಾದ ಒಂದು ಶಾಶ್ವತ ಸಾಂವಿಧಾನಿಕ ಸಂಸ್ಥೆಯನ್ನು ಹುಟ್ಟುಹಾಕಿದರೂ ತಪ್ಪಲ್ಲ. ಯಾವುದೇ ಪಂಥಕ್ಕೆ ಅಂಟಿಕೊಳ್ಳದ, ವೃತ್ತಿಪರವಾಗಿ ಆಲೋಚಿಸುವ ದೊಡ್ಡ ಮಾನವ ಸಂಪನ್ಮೂಲ ಭಾರತದಲ್ಲಿ ಇದೆ. ಅವರನ್ನು ದುಡಿಸಿಕೊಳ್ಳುವ ಜರೂರತ್ತೂ ಇದೆ.

ಇದನ್ನೂ ಓದಿ: ವಿಸ್ತಾರ ಅಂಕಣ: ಜನಕಲ್ಯಾಣದ ಕನಸಿಗೆ ಕಾರ್ಯಾಂಗವೂ ಕೈ ಜೋಡಿಸಲಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

Lok Sabha Election 2024

Lok Sabha Election : ಲೊಕಸಭಾ ಚುನಾವಣೆಯ ಎರಡನೇ ಹಂತದ 88 ಕ್ಷೇತ್ರಗಳಲ್ಲಿ ಶೇ 60.96 ಮತದಾನ

Lok Sabha Election: ತ್ರಿಪುರಾದ ಏಕೈಕ ಕ್ಷೇತ್ರದಲ್ಲಿ ಶೇ.77.93, ಛತ್ತೀಸ್ ಗಢದ ಮೂರು ಕ್ಷೇತ್ರಗಳಲ್ಲಿ ಶೇ.72.13 ಹಾಗೂ ಪಶ್ಚಿಮ ಬಂಗಾಳದ ಮೂರು ಕ್ಷೇತ್ರಗಳಲ್ಲಿ ಶೇ.71.84ರಷ್ಟು ಮತದಾನವಾಗಿದೆ. ಮಣಿಪುರದ 13 ಮತಗಟ್ಟೆಗಳಲ್ಲಿ ಶೇ.76.06ರಷ್ಟು ಮತದಾನವಾಗಿದ್ದರೆ, ಅಸ್ಸಾಂನ ಮತಗಟ್ಟೆಗಳಲ್ಲಿ ಸಂಜೆ 5 ಗಂಟೆಯವರೆಗೆ ಶೇ.70.66ರಷ್ಟು ಮತದಾನವಾಗಿದೆ. ಎರಡನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಶೇ.53.51ರಷ್ಟು ಮತದಾನವಾಗಿದೆ.

VISTARANEWS.COM


on

lok sabha election
Koo

ಬೆಂಗಳೂರು : ಏಪ್ರಿಲ್​​ 26ರಂದು ಬೆಳಗ್ಗೆ 7 ಗಂಟೆಗೆ ಪ್ರಾರಂಭವಾದ ಲೋಕ ಸಭಾ ಚುನಾವಣೆಯ (Lok Sabha Election) ಎರಡನೇ ಹಂತದ ಮತದಾನವು ಶಾಂತಿಯುತವಾಗಿ ನಡೆಯಿತು. ಒಟ್ಟು 88 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು ಸಂಜೆ 7 ಗಂಟೆಯ ವೇಳೆಗೆ ಅಂದಾಜು 60.96% ಮತದಾನವನ್ನು ದಾಖಲಿಸಿದೆ. ಎಂದು ಚುನಾವಣಾ ಆಯೋಗ ಹೇಳಿದೆ. 13 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳ ಮತದಾರರು ಬಿಸಿ ಹವಾಮಾನ ಪರಿಸ್ಥಿತಿಗಳನ್ನು ಲೆಕ್ಕಿಸದೆ ತಮ್ಮ ಮತಗಟ್ಟೆಯಲ್ಲಿ ಉತ್ಸಾಹದಿಂದ ಮತ ಚಲಾಯಿಸಿದರು. ನವವಿವಾಹಿತರಿಂದ ಹಿಡಿದು ಹಿರಿಯ ನಾಗರಿಕರವರೆಗೆ, ಬುಡಕಟ್ಟು ಜನಾಂಗದವರಿಂದ ಐಟಿ ವೃತ್ತಿಪರರು, ಅಂಗವಿಕಲರು, ಮಹಿಳೆಯರು ಮತ್ತು ಯುವಕರು ಎಲ್ಲರೂ ತಮ್ಮ ಮತ ಚಲಾಯಿಸಿದರು. 2024ರ ಲೋಕಸಭಾ ಚುನಾವಣೆಗೆ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ಪೂರ್ಣಗೊಂಡಿದೆ.

ತ್ರಿಪುರಾದ ಏಕೈಕ ಕ್ಷೇತ್ರದಲ್ಲಿ ಶೇ.77.93, ಛತ್ತೀಸ್ ಗಢದ ಮೂರು ಕ್ಷೇತ್ರಗಳಲ್ಲಿ ಶೇ.72.13 ಹಾಗೂ ಪಶ್ಚಿಮ ಬಂಗಾಳದ ಮೂರು ಕ್ಷೇತ್ರಗಳಲ್ಲಿ ಶೇ.71.84ರಷ್ಟು ಮತದಾನವಾಗಿದೆ. ಮಣಿಪುರದ 13 ಮತಗಟ್ಟೆಗಳಲ್ಲಿ ಶೇ.76.06ರಷ್ಟು ಮತದಾನವಾಗಿದ್ದರೆ, ಅಸ್ಸಾಂನ ಮತಗಟ್ಟೆಗಳಲ್ಲಿ ಸಂಜೆ 5 ಗಂಟೆಯವರೆಗೆ ಶೇ.70.66ರಷ್ಟು ಮತದಾನವಾಗಿದೆ. ಎರಡನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರದಲ್ಲಿ ಶೇ.53.51ರಷ್ಟು ಮತದಾನವಾಗಿದೆ.

ಬಿಹಾರದಲ್ಲಿ ಮತದಾನದ ಶೇಕಡಾವಾರು ಮೊದಲ ಹಂತಕ್ಕಿಂತ ಹೆಚ್ಚಾಗಿದ್ದರೆ, ಇದು ಉತ್ತರ ಪ್ರದೇಶಕ್ಕಿಂತ 53.03% ಹೆಚ್ಚಾಗಿದೆ. ಉತ್ತರ ಪ್ರದೇಶದ ಎಂಟು ಲೋಕಸಭಾ ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಯವರೆಗೆ 52.74% ಮತದಾನ ದಾಖಲಾಗಿದೆ. ಎರಡನೇ ಹಂತದಲ್ಲಿ ಮತದಾನ ನಡೆದ ರಾಜಸ್ಥಾನದ 13 ಕ್ಷೇತ್ರಗಳಲ್ಲಿ ಸಂಜೆ 5 ಗಂಟೆಯವರೆಗೆ ಸರಾಸರಿ ಶೇಕಡಾ 59.19 ರಷ್ಟು ಮತದಾನವಾಗಿತ್ತು. ಕೆಲವು ಘಟನೆಗಳ ಹೊರತಾಗಿಯೂ, ಮತದಾನವು ಶಾಂತಿಯುತವಾಗಿ ನಡೆಯಿತು.

ಇದನ್ನೂ ಓದಿ: Lok Sabha Election 2024: ಕರ್ನಾಟಕದಲ್ಲಿ ದಾಖಲೆಯ ಮತದಾನ; ಕಳೆದ ಬಾರಿಗಿಂತ ಏರಿಕೆ, ಮಂಡ್ಯದಲ್ಲಿ ಅತಿ ಹೆಚ್ಚು!

ಮಧ್ಯಪ್ರದೇಶದ ಆರು ಕ್ಷೇತ್ರಗಳಲ್ಲಿ ಎರಡನೇ ಹಂತದಲ್ಲಿ ಕನಿಷ್ಠ 54.83% ಮತದಾನವಾಗಿದೆ. ಕರ್ನಾಟಕದ ಹದಿನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ಎರಡನೇ ಹಂತದಲ್ಲಿ ಮತದಾನ ನಡೆದಿದೆ. ಕರ್ನಾಟಕ 69. 23 ಶೇಕಡಾ ಮತದಾನವಾಗಿದೆ.

ಬಹುತೇಕ ಶಾಂತಿಯುತ ಮತದಾನ

ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನವು ಸುಗಮವಾಗಿ ಮತ್ತು ಶಾಂತಿಯುತವಾಗಿ ನಡೆಯಿತು. ಸಿಇಸಿ ಶ್ರೀ ರಾಜೀವ್ ಕುಮಾರ್ ನೇತೃತ್ವದ ಆಯೋಗವು ಚುನಾವಣಾ ಆಯುಕ್ತರಾದ ಶ್ರೀ ಜ್ಞಾನೇಶ್ ಕುಮಾರ್ ಮತ್ತು ಶ್ರೀ ಸುಖ್ಬೀರ್ ಸಿಂಗ್ ಸಂಧು ಅವರೊಂದಿಗೆ ಬೆಳಿಗ್ಗೆಯಿಂದ ಮತದಾನ ಪ್ರಕ್ರಿಯೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಿತು. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಕಠಿಣ ಭದ್ರತಾ ಕ್ರಮಗಳನ್ನು ಜಾರಿಗೆ ತರಲಾಯಿತು. ಮತದಾರರು ಭಯ ಅಥವಾ ಬೆದರಿಕೆಯಿಲ್ಲದೆ ಮತ ಚಲಾಯಿಸಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸಲಾಯಿತು. 1 ಲಕ್ಷಕ್ಕೂ ಹೆಚ್ಚು ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಮಾಡಲಾಗಿದೆ.

ಬಿಹಾರದ ಬಂಕಾ, ಮಾಧೇಪುರ, ಖಗರಿಯಾ ಮತ್ತು ಮುಂಗೇರ್ ಕ್ಷೇತ್ರಗಳ ಅನೇಕ ಮತಗಟ್ಟೆಗಳಲ್ಲಿ ಮತದಾನದ ಸಮಯವನ್ನು ಸಂಜೆ 6 ಗಂಟೆಯ ಬಳಿಕವೂ ವಿಸ್ತರಿಸಲಾಗಿತ್ತು. ಎರಡನೇ ಹಂತದಲ್ಲಿ, ಛತ್ತೀಸ್​​ಗಢದ ಬಸ್ತಾರ್ ಮತ್ತು ಕಂಕೇರ್ ಪಿಸಿಗಳ 46 ಗ್ರಾಮಗಳ ಮತದಾರರು ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ತಮ್ಮ ಸ್ವಂತ ಗ್ರಾಮದಲ್ಲಿ ಸ್ಥಾಪಿಸಲಾದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಗ್ರಾಮಸ್ಥರ ಅನುಕೂಲಕ್ಕಾಗಿ ಈ ಪಿಸಿಗಳಲ್ಲಿ ಮೊದಲ ಬಾರಿಗೆ 102 ಹೊಸ ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಯಿತು

ಕ್ರಿಕೆಟ್ ತಾರೆಗಳಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಮತ್ತು ಜಾವಗಲ್ ಶ್ರೀನಾಥ್ ಅವರು ಬೆಂಗಳೂರಿನ ವಿವಿಧ ಮತಗಟ್ಟೆಗಳಲ್ಲಿ ಮತ ಚಲಾಯಿಸಿದರು. ಶಾಯಿ ಹಾಕಿದ ಬೆರಳುಗಳಿಂದ ಪೋಸ್ ನೀಡಿದ ಅವರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮಹತ್ವದ ಸಂದೇಶವನ್ನು ಯುವಕರಿಗೆ ತಲುಪಿಸಿದರು.

Continue Reading

ಕರ್ನಾಟಕ

Lok Sabha Election 2024: ಕರ್ನಾಟಕದಲ್ಲಿ ದಾಖಲೆಯ ಮತದಾನ; ಕಳೆದ ಬಾರಿಗಿಂತ ಏರಿಕೆ, ಮಂಡ್ಯದಲ್ಲಿ ಅತಿ ಹೆಚ್ಚು!

Lok Sabha Election 2024: ರಾಜ್ಯದಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಎರಡೂ ಹಂತಗಳಲ್ಲೂ ಒಟ್ಟು ಶೇ. 68.96 ಮತದಾನ ನಡೆದಿತ್ತು. ಈ ಬಾರಿ ಮೊದಲ ಹಂತದಲ್ಲಿ ಶೇ.69.23 ವೋಟಿಂಗ್‌ ನಡೆದಿದೆ, ಇನ್ನು ರಾಜ್ಯದ ಎಲ್ಲ ಮತಗಟ್ಟೆಗಳಲ್ಲಿ ಬಹುತೇಕ ಶಾಂತಿಯುತವಾಗಿ ಶುಕ್ರವಾರ ಮತದಾನವಾಗಿದೆ.

VISTARANEWS.COM


on

Koo

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ 2024ರ (Lok Sabha Election 2024) ಮೊದಲ ಹಂತದ ಮತದಾನ ಶುಕ್ರವಾರ ಮುಕ್ತಾಯವಾಗಿದೆ. ಒಂದೆರಡು ಕಡೆ ಸಣ್ಣಪುಟ್ಟ ಅಹಿತಕರ ಘಟನೆಗಳು ಹೊರತುಪಡಿಸಿದರೆ ಎಲ್ಲೆಡೆ ಬಹುತೇಕ ಶಾಂತಿಯುತವಾಗಿ ಮತದಾನ ಜರುಗಿದ್ದು, 14 ಕ್ಷೇತ್ರಗಳಲ್ಲಿ ಸಂಜೆ 6 ಗಂಟೆವರೆಗೆ ಒಟ್ಟು ಶೇ.69.23 ಮತದಾನ ದಾಖಲಾಗಿದೆ. ಮಂಡ್ಯ ಕ್ಷೇತ್ರದಲ್ಲಿ ಅತಿಹೆಚ್ಚು ಮತದಾನವಾಗಿದ್ದು, ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಲ್ಲಿ ಅತಿ ಕಡಿಮೆ ಮತದಾನ ದಾಖಲಾಗಿದೆ.

ಮಂಡ್ಯ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ ಶೇ.81.48 ಮತದಾನವಾಗಿದ್ದು, ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಲ್ಲಿ ಅತಿ ಕಡಿಮೆ ಅಂದರೆ 52.81 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇನ್ನು ಮೊದಲ ಹಂತದಲ್ಲಿ ಒಟ್ಟು 2,88,08,182 ಮತದಾರರು ಮತ ಚಲಾಯಿಸಿದ್ದು, 14 ಕ್ಷೇತ್ರಗಳಲ್ಲಿ 118 ಪಕ್ಷೇತರ ಅಭ್ಯರ್ಥಿಗಳು ಸೇರಿ 247 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಇದರಲ್ಲಿ 226 ಪುರುಷ, 21 ಮಹಿಳಾ ಅಭ್ಯರ್ಥಿಗಳಿದ್ದಾರೆ. ಜೂನ್‌ 4ರಂದು ಫಲಿತಾಂಶ ಹೊರಬೀಳಲಿದೆ.

14 ಕ್ಷೇತ್ರಗಳ ಶೇಕಡಾವಾರು ಮತದಾನ ಪಟ್ಟಿ

ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ?

ಕ್ಷೇತ್ರಲೋಕಸಭಾ ಚುನಾವಣೆ-2024ಲೋಕಸಭಾ ಚುನಾವಣೆ-2019
ಉಡುಪಿ-ಚಿಕ್ಕಮಗಳೂರುಶೇ. 76.06ಶೇ. 76.07
ಹಾಸನಶೇ. 77.51ಶೇ. 77.35
ದಕ್ಷಿಣ ಕನ್ನಡ
ಶೇ. 77.43ಶೇ. 77.99
ಚಿತ್ರದುರ್ಗ
ಶೇ. 73.11ಶೇ. 70.80
ತುಮಕೂರು
ಶೇ. 77.70ಶೇ. 77.43
ಮಂಡ್ಯಶೇ. 81.48ಶೇ. 80.59
ಮೈಸೂರುಕೊಡಗು
ಶೇ. 70.45ಶೇ. 69.51
ಚಾಮರಾಜನಗರ
ಶೇ. 76.59ಶೇ. 75.35
ಬೆಂಗಳೂರು ಗ್ರಾಮಾಂತರ
ಶೇ.67.29ಶೇ. 64.98
ಬೆಂಗಳೂರು ಉತ್ತರ
ಶೇ.54.42ಶೇ. 54.76
ಬೆಂಗಳೂರು ಸೆಂಟ್ರಲ್‌
ಶೇ. 52.81ಶೇ. 54.32
ಬೆಂಗಳೂರು ದಕ್ಷಿಣ
ಶೇ. 53.15ಶೇ. 53.70
ಚಿಕ್ಕಬಳ್ಳಾಪುರ
ಶೇ. 76.82ಶೇ. 76.74
ಕೋಲಾರಶೇ. 78.07
ಶೇ. 77.25
ಒಟ್ಟು ಶೇಕಡಾವಾರು ಮತದಾನ 69.23

2019ರ ಲೋಕಸಭಾ ಚುನಾವಣೆಯ ಒಟ್ಟು ಮತದಾನ ಎಷ್ಟು?
2019ರ ಲೋಕಸಭಾ ಚುನಾವಣೆಯಲ್ಲಿ ಎರಡೂ ಹಂತ ಸೇರಿ ಒಟ್ಟು ಶೇ. 68.96 ಮತದಾನ ನಡೆದಿತ್ತು. ಮಂಡ್ಯದಲ್ಲಿ ಅತಿಹೆಚ್ಚು ಶೇ. 80.59, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಶೇ. 53.70 ಮತದಾನ ದಾಖಲಾಗಿತ್ತು.

ಇದನ್ನೂ ಓದಿ | Lok Sabha Election 2024: ಮತ ಹಾಕದವರನ್ನು ಮತ ಪಟ್ಟಿಯಿಂದ ತೆಗೆದುಹಾಕಬೇಕು: ಅನಂತ್ ನಾಗ್ ಸಲಹೆಗೆ ಏನಂತೀರಿ?

ಇಂಡಿಗನತ್ತ ಮತಗಟ್ಟೆಯಲ್ಲಿ ಮರು ಮತದಾನ ಸಾಧ್ಯತೆ

ಚಾಮರಾಜನಗರದ ಹನೂರು ತಾಲೂಕಿನ ಇಂಡಿಗನತ್ತ ಗ್ರಾಮದ ಮತಗಟ್ಟೆಯಲ್ಲಿ ಮರು ಮತದಾನ ನಡೆಯುವ ಸಾಧ್ಯತೆ ಇದೆ. ಶುಕ್ರವಾರ ಕೇವಲ 10 ಮತದಾರರು ಮಾತ್ರ ಹಕ್ಕು ಚಲಾವಣೆ ಮಾಡಿದ್ದಾರೆ. ಮತಗಟ್ಟೆಯಲ್ಲಿ ಮೂಲಸೌಕರ್ಯ ಇಲ್ಲ ಎಂದು ಮತದಾರರು ಅಸಮಾಧಾನ ಹೊರಹಾಕಿ ಮತದಾನ ಬಹಿಷ್ಕರಿಸಿದ್ದರು. ಹೀಗಾಗಿ 2 ದಿನಗಳೊಳಗೆ ಅಧಿಕಾರಿಗಳು ಮಾತುಕತೆ ನಡೆಸಿ ಮರು ಮತದಾನ ಮಾಡಿಸುವ ಸಾಧ್ಯತೆ ಇದೆ.

ಬೆಳಗ್ಗೆ ಏಳು ಗಂಟೆಗೆ ಆರಂಭಗೊಂಡ ಮತದಾನ ಪಕ್ರಿಯೆ ಸಂಜೆ 6 ಗಂಟೆಗೆ ಸರಿಯಾಗಿ ಅಂತ್ಯಗೊಂಡಿತು. ನಿಗದಿತ ಸಮಯವಾಗುತ್ತಿದ್ದಂತೆ ಅಧಿಕಾರಿಗಳು ಮತಗಟ್ಟೆಯ ಪ್ರಮುಖ ದ್ವಾರಗಳನ್ನು ಮುಚ್ಚಿದರು. ಸಂಜೆ ಐದು ಗಂಟೆಯ ವೇಳೆಗೆ ಶೇ 63.90 ಮತದಾನ ದಾಖಲಾಗಿತ್ತು. ಮತದಾನ ಅವಧಿ ಮುಕ್ತಾಯಗೊಂಡ ಬಳಿಕ 6 ಗಂಟೆ ವೇಳೆಗೆ ಸಾಲಿನಲ್ಲಿದ್ದವರಿಗೆ ಮಾತ್ರ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಇವಿಎಂಗಳಿಗೆ ಸೀಲ್​

ಮತದಾನದ ಸಮಯ ಮುಕ್ತಾಯಗೊಳ್ಳುತ್ತಿದ್ದಂತೆ ಅಧಿಕಾರಿಗಳು ಗೇಟ್​ ಮುಚ್ಚಿದರು. ಈ ವೇಳೆ ಮೊದಲೇ ಬಂದು ಸರತಿಯಲ್ಲಿ ಸಾಲಿನಲ್ಲಿ ನಿಂತವರಿಗೆ ಮಾತ್ರ ಅವಕಾಶ ನೀಡಲಾಯಿತು. ಕೆಲವರು ಅ ಬಳಿಕ ಬಂದರೂ ಅವರಿಗೆ ಅವಕಾಶ ನೀಡಲು ಹಿರಿಯ ಅಧಿಕಾರಿಗಳು ಒಪ್ಪಲಿಲ್ಲ. ಎಲ್ಲರೂ ಮತ ಚಲಾವಣೆ ಮಾಡಿದ ಬಳಿಕ ಹಿರಿಯ ಅಧಿಕಾರಿಗಳು ಇವಿಎಂ ಯಂತ್ರಗಳಿಗೆ ಸೀಲ್ ಮಾಡಿದರು. ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಅವರು ಮತ ಯಂತ್ರಗಳನ್ನು ಪ್ಯಾಕ್ ಮಾಡಿದರು. ಈ ಮತಪೆಟ್ಟಿಗಳು ಇನ್ನು ಭಾರೀ ಭದ್ರತೆಯೊಂದಿಗೆ ನಿಗದಿತ ಸ್ಟ್ರಾಂಗ್ ರೂಮ್​ಗೆ ರವಾನೆಯಾಗಲಿವೆ.

ಇದನ್ನೂ ಓದಿ | Lok Sabha Election 2024: ಹೃದಯಾಘಾತಕ್ಕೆ 3 ಬಲಿ; ಮೈಸೂರು, ತುಮಕೂರಿನಲ್ಲಿ ಮತ ಹಾಕಿದ್ದ, ಕೊಡಗಲ್ಲಿ ವೋಟ್‌ ಹಾಕಲು ನಿಂತಿದ್ದವ ಸಾವು!

ಭರ್ಜರಿ ಪ್ರತಿಕ್ರಿಯೆ

ಬೆಂಗಳೂರು ನಗರ ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಮುಂಜಾನೆಯಿಂದಲೇ ಜನರು ಅತ್ಯಂತ ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಬೇಸಿಗೆ ಬಿಸಿಲು ಹೆಚ್ಚಿರಬಹುದು ಎಂಬ ಕಾರಣಕ್ಕೆ ಮುಂಜಾನೆ ಅವಧಿಯಲ್ಲಿ ಮತಗಟ್ಟೆಗಳ ಬಳಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಕಂಡು ಬಂದರು. ಕೆಲವೊಂದು ಜನನಿಬಿಡ ಮತಗಟ್ಟೆಗಳಲ್ಲಿ 2 ಗಂಟೆಗಳಷ್ಟು ಕಾಲ ಜನ ಮತ ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿದ್ದರು.

Continue Reading

ಪ್ರಮುಖ ಸುದ್ದಿ

Mohammad Shami : ಸರ್ಜರಿ ಗಾಯದ ನಡುವೆಯೂ ಮತದಾನ ಮಾಡಿದ ಮೊಹಮ್ಮದ್​ ಶಮಿ

Mohammad Shami: ಮೊಹಮ್ಮದ್ ಶಮಿ ಅವರನ್ನು ಶಸ್ತ್ರಚಿಕಿತ್ಸೆಗಾಗಿ ಯುನೈಟೆಡ್ ಕಿಂಗ್​ಡಮ್​​​ಗೆ ಕಳುಹಿಸಲಾಗಿತ್ತು. ಇದೀಗ ಹೆಚ್ಚಿನ ಪುನಶ್ಚೇತನಕ್ಕಾಗಿ ಶಮಿ ಭಾರತಕ್ಕೆ ಮರಳಿದ್ದಾರೆ. ವಿಶೇಷವೆಂದರೆ, ಗಾಯವು ಸರಿಯಾಗಿ ಗುಣವಾಗಲು ಕನಿಷ್ಠ 4-5 ತಿಂಗಳುಗಳು ಬೇಕಾಗುವುದರಿಂದ ವೇಗಿ ಮುಂಬರುವ ಟಿ 20 ವಿಶ್ವಕಪ್​ನಿಂದ ಹೊರಗುಳಿದಿದ್ದಾರೆ.

VISTARANEWS.COM


on

Mohammad Shami
Koo

ಲಖನೌ: ಭಾರತದ ವೇಗದ ಬೌಲರ್ ಮೊಹಮ್ಮದ್ ಶಮಿ (Mohammad Shami) ಶುಕ್ರವಾರ (ಏಪ್ರಿಲ್​ 26ರಂದು) ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನದಲ್ಲಿ ಮತ ಚಲಾಯಿಸಿದರು. 2023 ರ ಐಸಿಸಿ ಏಕದಿನ ವಿಶ್ವಕಪ್​​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಮೊಹಮ್ಮದ್ ಶಮಿ, ಪಂದ್ಯಾವಳಿಯ ಸಮಯದಲ್ಲಿ ಹಿಮ್ಮಡಿ ಗಾಯದಿಂದ ಬಳಲುತ್ತಿದ್ದರು. ಇದೀಗ ಸರ್ಜರಿಗೆ ಒಳಗಾಗಿದ್ದು ಅದರ ಪುನಶ್ಚೇತನ ಕಾರ್ಯದಲ್ಲಿ ತೊಡಗಿದ್ದಾರೆ. ಈ ನಡುವೆ ಅವರು ಮತದಾನ ಮಾಡಿದ್ದಾರೆ.

ಮೊಹಮ್ಮದ್ ಶಮಿ ಅವರನ್ನು ಶಸ್ತ್ರಚಿಕಿತ್ಸೆಗಾಗಿ ಯುನೈಟೆಡ್ ಕಿಂಗ್​ಡಮ್​​​ಗೆ ಕಳುಹಿಸಲಾಗಿತ್ತು. ಇದೀಗ ಹೆಚ್ಚಿನ ಪುನಶ್ಚೇತನಕ್ಕಾಗಿ ಶಮಿ ಭಾರತಕ್ಕೆ ಮರಳಿದ್ದಾರೆ. ವಿಶೇಷವೆಂದರೆ, ಗಾಯವು ಸರಿಯಾಗಿ ಗುಣವಾಗಲು ಕನಿಷ್ಠ 4-5 ತಿಂಗಳುಗಳು ಬೇಕಾಗುವುದರಿಂದ ವೇಗಿ ಮುಂಬರುವ ಟಿ 20 ವಿಶ್ವಕಪ್​ನಿಂದ ಹೊರಗುಳಿದಿದ್ದಾರೆ.

ಮೊಹಮ್ಮದ್ ಶಮಿ ಮೈದಾನದಿಂದ ಹೊರಗಿರುವುದರಿಂದ ಅವರು ಭಾರತೀಯ ಪ್ರಜೆಯಾಗಿ ತಮ್ಮ ಕರ್ತವ್ಯವನ್ನು ಪೂರೈಸಲು ಮರೆಯಲಿಲ್ಲ. ನಡೆಯುತ್ತಿರುವ ಲೋಕಸಭಾ ಚುನಾವಣೆಯ ಎರಡನೇ ಹಂತದಲ್ಲಿ ಮತ ಚಲಾಯಿಸಲು ಮತಗಟ್ಟೆಗೆ ಬಂದಿದ್ದರು.

ಇದನ್ನೂ ಓದಿ: IPL 2024 : ಅಂಕಪಟ್ಟಿಯ ಅಗ್ರಸ್ಥಾನಿ ರಾಜಸ್ಥಾನ್​ಗೆ ಸವಾಲೊಡ್ಡುವುದೇ ಲಕ್ನೊ ಸೂಪರ್​ ಜೈಂಟ್ಸ್​​

ಶಮಿ ಅವರ ಕ್ಷೇತ್ರವಾದ ಅಮ್ರೋಹಾ ಸೇರಿದಂತೆ ಉತ್ತರ ಪ್ರದೇಶದ ಎಂಟು ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯಿತು. , ಅವರು ಗಾಯದ ಹಿನ್ನಡೆಯಿಂದ ಬಳಲುತ್ತಿದ್ದರೂ ಮತ ಚಲಾಯಿಸಲು ಬಂದರು. ಪ್ರತಿಯೊಬ್ಬ ಭಾರತೀಯ ನಾಗರಿಕರು ತಮ್ಮ ಮತದಾನದ ಹಕ್ಕನ್ನು ಬಳಸಿಕೊಳ್ಳಬೇಕು ಮತ್ತು ತಮ್ಮ ಆಯ್ಕೆಯ ಸರ್ಕಾರವನ್ನು ಆಯ್ಕೆ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಹೊರಬರಬೇಕು ಎಂದು ಮೊಹಮ್ಮದ್ ಶಮಿ ಅಭಿಪ್ರಾಯಪಟ್ಟರು.

ವಿಶೇಷವೆಂದರೆ, ಸೆಪ್ಟೆಂಬರ್​ನಲ್ಲಿ ಬಾಂಗ್ಲಾದೇಶ ವಿರುದ್ಧ ನಿಗದಿಯಾಗಿರುವ ತವರು ಸರಣಿಯ ಸಮಯದಲ್ಲಿ ಶಮಿ ಈ ವರ್ಷದ ಕೊನೆಯಲ್ಲಿ ಮೈದಾನಕ್ಕೆ ಮರಳುವ ನಿರೀಕ್ಷೆಯಿಲ್ಲ. ಅವರ ಅನುಪಸ್ಥಿತಿಯು ಮುಂಬರುವ ಟಿ 20 ವಿಶ್ವಕಪ್​​ಗೆ ಭಾರತೀಯ ಸಂಯೋಜನೆಗೆ ಖಂಡಿತವಾಗಿಯೂ ಹಾನಿ ಮಾಡುತ್ತದೆ. ಏಕೆಂದರೆ ಆಯ್ಕೆದಾರರು ವೇಗದ ಬೌಲಿಂಗ್ ಆಯ್ಕೆಗಳ ಕೊರತೆಯನ್ನು ಹೊಂದಿದ್ದಾರೆ.

ಜಸ್ಪ್ರೀತ್ ಬುಮ್ರಾ ಬೌಲಿಂಗ್ ದಾಳಿಯನ್ನು ಮುನ್ನಡೆಸುವ ನಿರೀಕ್ಷೆಯಿದ್ದರೆ, ಅವರ ಉಳಿದ ಪಡೆಗಳನ್ನು ಇನ್ನೂ ನಿರ್ಧರಿಸಲಾಗಿಲ್ಲ.

Continue Reading

ಪ್ರಮುಖ ಸುದ್ದಿ

Lok Sabha Election : ಎನ್​ಡಿಎಗೆ ಶುಭ ಶಕುನ : 2ನೇ ಹಂತದ ಮತದಾನದ ಬಳಿಕ ಪ್ರಧಾನಿ ಮೋದಿ ಹೀಗಿತ್ತು

Lok Sabha Election: ಏಪ್ರಿಲ್ 19 ರಂದು ನಡೆದ ಮೊದಲ ಹಂತದ ಮತದಾನದ ನಂತರ ಪ್ರಧಾನಿ ಇದೇ ರೀತಿಯ ಪ್ರತಿಪಾದನೆಯನ್ನು ಮಾಡಿದ್ದರು/ ಆಡಳಿತಾರೂಢ ಮೈತ್ರಿಕೂಟವು ಉತ್ತಮ ಪ್ರತಿಕ್ರಿಯೆಯನ್ನು ಕಂಡಿದೆ ಎಂದು ಹೇಳಿದರು. ಭಾರತದಾದ್ಯಂತ ಜನರು ದಾಖಲೆ ಸಂಖ್ಯೆಯಲ್ಲಿ ಎನ್​ಡಿಎಗೆ ಮತ ಚಲಾಯಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.

VISTARANEWS.COM


on

Narendra modi
Koo

ನವದೆಹಲಿ: ಲೋಕಸಭಾ ಚುನಾವಣೆಯ (Lok Sabha Election) ಎರಡನೇ ಹಂತವು ಬಿಜೆಪಿ ನೇತೃತ್ವದ ಎನ್​​ಡಿಗೆ ಗೆ “ತುಂಬಾ ಅನುಕೂಲಕರ ” ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ. ಮತದಾನ ಮುಗಿಯುತ್ತಿದ್ದಂತೆ ಅವರು ಎಕ್ಸ್ ನಲ್ಲಿ ಪೋಸ್ಟ್​ ಹಾಕಿದ್ದಾಎ.

“ಎರಡನೇ ಹಂತವು ತುಂಬಾ ಉತ್ತಮವಾಗಿದೆ. ಮತ ಚಲಾಯಿಸಿದ ಭಾರತದಾದ್ಯಂತದ ಜನರಿಗೆ ಕೃತಜ್ಞತೆಗಳು. ಎನ್​ಡಿಗೆ ಸಾಟಿಯಿಲ್ಲದ ಬೆಂಬಲವು ಪ್ರತಿಪಕ್ಷಗಳನ್ನು ಇನ್ನಷ್ಟು ನಿರಾಶೆಗೊಳಿಸಲಿದೆ ” ಎಂದು ಅವರು ಹೇಳಿದರು. “ಮತದಾರರು ಎನ್​ಡಿಎಯ ಉತ್ತಮ ಆಡಳಿತವನ್ನು ಬಯಸುತ್ತಾರೆ. ಯುವಕರು ಮತ್ತು ಮಹಿಳಾ ಮತದಾರರು ಎನ್​ಡಿಎಗ ಬೆಂಬಲಕ್ಕೆ ಶಕ್ತಿ ತುಂಬುತ್ತಿದ್ದಾರೆ” ಎಂದು ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Lok Sabha Election 2024: ಮತದಾನ ಬಹಿಷ್ಕರಿಸಿದ್ದ 2 ಗ್ರಾಮದ ಜನ, ಸಂಜೆಗೆ ಮನವೊಲಿಕೆ; 7 ಗಂಟೆ ದಾಟಿದರೂ ಮುಗಿಯದ ಮತದಾನ

ಏಪ್ರಿಲ್ 19 ರಂದು ನಡೆದ ಮೊದಲ ಹಂತದ ಮತದಾನದ ನಂತರ ಪ್ರಧಾನಿ ಇದೇ ರೀತಿಯ ಪ್ರತಿಪಾದನೆಯನ್ನು ಮಾಡಿದ್ದರು/ ಆಡಳಿತಾರೂಢ ಮೈತ್ರಿಕೂಟವು ಉತ್ತಮ ಪ್ರತಿಕ್ರಿಯೆಯನ್ನು ಕಂಡಿದೆ ಎಂದು ಹೇಳಿದರು. ಭಾರತದಾದ್ಯಂತ ಜನರು ದಾಖಲೆ ಸಂಖ್ಯೆಯಲ್ಲಿ ಎನ್​ಡಿಎಗೆ ಮತ ಚಲಾಯಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.

ದೇಶದ ರಕ್ಷಣೆಗಾಗಿ ಮತ್ತೆ ಬಿಜೆಪಿಯನ್ನು ಬೆಂಬಲಿಸಿ: ಜೆ.ಪಿ.ನಡ್ಡಾ

ದೇಶದ ರಕ್ಷಣೆಗಾಗಿ ಮೂರನೇ ಬಾರಿ ಮೋದಿ ಅವರನ್ನು ಮತ್ತೆ ಪಿಎಂ (PM) ಮಾಡಲು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.‌ ನಡ್ಡಾ ಮನವಿ (Lok Sabha Election 2024) ಮಾಡಿದರು.
ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದಲ್ಲಿ ಶುಕ್ರವಾರ ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಾಅಮರೇಶ್ವರ ನಾಯಕ ಹಾಗೂ ಸುರಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ರಾಜುಗೌಡ ಅವರ ಪರ ರೋಡ್ ಶೋ ನಡೆಸಿ, ಮತಯಾಚಿಸಿ ಅವರು ಮಾತನಾಡಿದರು.

ಈ ಚುನಾವಣೆಯು ಮಹತ್ವದ ಚುನಾವಣೆಯಾಗಿದೆ. ದೇಶವನ್ನು ಗಟ್ಟಿಗೊಳಿಸುವ ಸುಭದ್ರ ಸರ್ಕಾರಕ್ಕೆ ದೇಶದ ಜನರು ಬಿಜೆಪಿಗೆ ಹೆಚ್ಚಿನ ಶಕ್ತಿ ತುಂಬಬೇಕಿದೆ. ಪಿಎಂ ನರೇಂದ್ರ ಮೋದಿ ಅವರು ದೇಶದಲ್ಲಿ ಅನೇಕ ಯೋಜನೆಗಳ ಮೂಲಕ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ರೈತರಿಗೆ ಅನೇಕ ಯೋಜನೆ ಜಾರಿ ಮೂಲಕ ರೈತರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷವು ಸಮಾಜ ಒಡೆಯುವ ಕಾರ್ಯ ಮಾಡಲಿದೆ. ಆದರೆ, ಪ್ರಧಾನಿ ಮೋದಿ ಅವರು ದೇಶವನ್ನು ವಿಕಸಿತ ಮಾಡಲಿದ್ದಾರೆ. ರಾಯಚೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಾಜಾಅಮರೇಶ್ವರ ನಾಯಕ ಹಾಗೂ ಸುರಪುರ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ರಾಜುಗೌಡ ಅವರು ಬಿಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡಿದ್ದು, ರಾಜುಗೌಡ ಹಾಗೂ ರಾಜಾಅಮರೇಶ್ವರ ನಾಯಕ ಅವರಿಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕು. ರಾಜಾಅಮರೇಶ್ವರ ನಾಯಕ ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡಬೇಕು.. ರಾಜುಗೌಡ ಅವರನ್ನು ಶಾಸಕರನ್ನಾಗಿ ಆಯ್ಕೆ ಮಾಡಬೇಕೆಂದು ಮನವಿ ಮಾಡಿದರು.

ಈ ವೇಳೆ ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಾಅಮರೇಶ್ವರ ನಾಯಕ ಮಾತನಾಡಿ, ರಾಯಚೂರು ಲೋಕಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ತಮಗೆ ಹೆಚ್ಚಿನ ಮತಗಳು ನೀಡಿ ಗೆಲ್ಲಿಸುವಂತೆ ಮನವಿ ಮಾಡಿದರು.

Continue Reading
Advertisement
lok sabha election
Lok Sabha Election 202442 seconds ago

Lok Sabha Election : ಲೊಕಸಭಾ ಚುನಾವಣೆಯ ಎರಡನೇ ಹಂತದ 88 ಕ್ಷೇತ್ರಗಳಲ್ಲಿ ಶೇ 60.96 ಮತದಾನ

Hassan News
ಕರ್ನಾಟಕ21 mins ago

Hassan News: ಎರಡು ಗುಂಪುಗಳ ನಡುವೆ ಮಾರಾಮಾರಿ; ಕೈ ಕಾರ್ಯಕರ್ತನಿಗೆ ಗಂಭೀರ ಗಾಯ

Pandya brothers
ಕ್ರೀಡೆ40 mins ago

Pandya Brothers : ಪಾಂಡ್ಯ ಸಹೋದರರ ಮನೆಗೆ ಹೊಸ ಅತಿಥಿ ಆಗಮನ, ಖುಷಿಯಲ್ಲಿ ಕುಟುಂಬ

ಕರ್ನಾಟಕ58 mins ago

Lok Sabha Election 2024: ಕರ್ನಾಟಕದಲ್ಲಿ ದಾಖಲೆಯ ಮತದಾನ; ಕಳೆದ ಬಾರಿಗಿಂತ ಏರಿಕೆ, ಮಂಡ್ಯದಲ್ಲಿ ಅತಿ ಹೆಚ್ಚು!

Mohammad Shami
ಪ್ರಮುಖ ಸುದ್ದಿ2 hours ago

Mohammad Shami : ಸರ್ಜರಿ ಗಾಯದ ನಡುವೆಯೂ ಮತದಾನ ಮಾಡಿದ ಮೊಹಮ್ಮದ್​ ಶಮಿ

Narendra modi
ಪ್ರಮುಖ ಸುದ್ದಿ2 hours ago

Lok Sabha Election : ಎನ್​ಡಿಎಗೆ ಶುಭ ಶಕುನ : 2ನೇ ಹಂತದ ಮತದಾನದ ಬಳಿಕ ಪ್ರಧಾನಿ ಮೋದಿ ಹೀಗಿತ್ತು

Udupi Sri Krishna Temple
ಕರ್ನಾಟಕ2 hours ago

Udupi Sri Krishna Temple: ಮತದಾನದ ದಿನ ಕಮಲಾರೂಢನಾದ ಉಡುಪಿ ಕೃಷ್ಣ! ಇಲ್ಲಿದೆ ಫೋಟೊ ಝಲಕ್‌

IPL 2024
ಕ್ರೀಡೆ3 hours ago

IPL 2024 : ಅಂಕಪಟ್ಟಿಯ ಅಗ್ರಸ್ಥಾನಿ ರಾಜಸ್ಥಾನ್​ಗೆ ಸವಾಲೊಡ್ಡುವುದೇ ಲಕ್ನೊ ಸೂಪರ್​ ಜೈಂಟ್ಸ್​​

Lok Sabha Election 2024 2 villagers who boycotted voting cast their votes in evening
ಕರ್ನಾಟಕ3 hours ago

Lok Sabha Election 2024: ಮತದಾನ ಬಹಿಷ್ಕರಿಸಿದ್ದ 2 ಗ್ರಾಮದ ಜನ, ಸಂಜೆಗೆ ಮನವೊಲಿಕೆ; 7 ಗಂಟೆ ದಾಟಿದರೂ ಮುಗಿಯದ ಮತದಾನ

Modi in Karnataka stay in Belagavi tomorrow and Huge gatherings at five places
Lok Sabha Election 20244 hours ago

Modi in Karnataka: ನಾಳೆ ರಾಜ್ಯಕ್ಕೆ ಮೋದಿ, ಬೆಳಗಾವಿಯಲ್ಲಿ ವಾಸ್ತವ್ಯ; 2 ದಿನ ಪ್ರವಾಸ, 5 ಕಡೆ ಬೃಹತ್‌ ಸಮಾವೇಶ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 congress booth agent allegation for Fake voting in Hassan Lok Sabha constituency
ಹಾಸನ11 hours ago

Lok Sabha Election 2024: ಹಾಸನ ಲೋಕಸಭಾ ಕ್ಷೇತ್ರದಲ್ಲಿ ನಕಲಿ ಮತದಾನ! ಏನಿದು ಕಾಂಗ್ರೆಸ್‌ ಬೂತ್‌ ಏಜೆಂಟ್‌ ಆರೋಪ?

Lok Sabha Election 2024 Woman suffers cardiac arrest at polling booth Doctor who came to cast his vote saved life
Lok Sabha Election 202412 hours ago

Lok Sabha Election 2024: ಮತಗಟ್ಟೆಯಲ್ಲಿ ಮಹಿಳೆಗೆ ಹೃದಯ ಸ್ತಂಭನ; ಮತ ಹಾಕಲು ಬಂದಿದ್ದ ವೈದ್ಯನಿಂದ ಪ್ರಾಣ ರಕ್ಷಣೆ

Lok Sabha Election 2024 Youth Congress protest
Lok Sabha Election 202412 hours ago

Lok Sabha Election 2024 : ಮತಗಟ್ಟೆ ಬಳಿ ಚೆಂಬು, ಗ್ಯಾಸ್ ಸಿಲಿಂಡರ್ ಪ್ರದರ್ಶಿಸಿದ ಯೂತ್‌ ಕಾಂಗ್ರೆಸ್‌

Dina bhavishya
ಭವಿಷ್ಯ18 hours ago

Dina Bhavishya : ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರ

Neha Murder Case in hubblli
ಹುಬ್ಬಳ್ಳಿ1 day ago

Neha Murder Case : ಮನೆ ಸುತ್ತಮುತ್ತ ಅನಾಮಧೇಯ ವ್ಯಕ್ತಿಗಳ ಓಡಾಟ; ಸಂತಾಪ ನೆಪದಲ್ಲಿ ನೇಹಾ ಬೆಡ್‌ರೂಂ ಚಿತ್ರೀಕರಣ!

Neha Murder Case
ಹುಬ್ಬಳ್ಳಿ1 day ago

Neha Murder case : ನೇಹಾ ಹತ್ಯೆ; ಕಾರು ಚಾಲಕ, ಅಕೌಂಟೆಂಟ್‌ ಸಿಐಡಿ ವಶಕ್ಕೆ! ಅಜ್ಞಾತ ಸ್ಥಳದಲ್ಲಿ ವಿಚಾರಣೆ

Neha Murder case CID Officer
ಹುಬ್ಬಳ್ಳಿ1 day ago

Neha Murder Case : ರಹಸ್ಯ ಸ್ಥಳದಲ್ಲಿ ಫಯಾಜ್‌; ನೇಹಾ ಪೋಷಕರಿಗೆ ಸಿಐಡಿ ತಂಡದಿಂದ 1 ಗಂಟೆ ಸುದೀರ್ಘ ವಿಚಾರಣೆ

Lok sabha election 2024
Lok Sabha Election 20241 day ago

Lok Sabha Election 2024 : ಕರ್ನಾಟಕದಲ್ಲಿ ಮೊದಲ ಹಂತದ ಮತದಾನ; ಪ್ರವಾಸಿ ತಾಣಗಳ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ

Dina Bhavishya
ಭವಿಷ್ಯ3 days ago

Dina Bhavishya : ಇಂದು ಈ ರಾಶಿಯ ಉದ್ಯೋಗಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

ಟ್ರೆಂಡಿಂಗ್‌