Forex Reserves: ವಿದೇಶಿ ವಿನಿಮಯ ಸಂಗ್ರಹದಲ್ಲಿ 43,081 ಕೋಟಿ ರೂ. ಏರಿಕೆ; ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಒಟ್ಟು ಮೌಲ್ಯ - Vistara News

ವಾಣಿಜ್ಯ

Forex Reserves: ವಿದೇಶಿ ವಿನಿಮಯ ಸಂಗ್ರಹದಲ್ಲಿ 43,081 ಕೋಟಿ ರೂ. ಏರಿಕೆ; ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಒಟ್ಟು ಮೌಲ್ಯ

Forex Reserves: ಭಾರತದ ವಿದೇಶಿ ವಿನಿಮಯ ಸಂಗ್ರಹವು ಜುಲೈ 5ಕ್ಕೆ ಅಂತ್ಯವಾದ ವಾರದಲ್ಲಿ 5.158 ಬಿಲಿಯನ್‌ ಡಾಲರ್‌ (43,081 ಕೋಟಿ ರೂ.) ವೃದ್ಧಿಸಿದ್ದು, ಒಟ್ಟು ಸಂಗ್ರಹವು 657.155 ಬಿಲಿಯನ್‌ ಡಾಲರ್‌ (54.88 ಲಕ್ಷ ಕೋಟಿ ರೂ.)ಗೆ ತಲುಪಿದೆ. ಜೂನ್ 28ರ ವೇಳೆಗೆ ವಿದೇಶಿ ವಿನಿಮಯ ಸಂಗ್ರಹ 1.713 ಬಿಲಿಯನ್ ಡಾಲರ್ ಇಳಿದು 651.997 ಬಿಲಿಯನ್ ಡಾಲರ್‌ಗೆ ತಲುಪಿತ್ತು. ಈ ವರ್ಷದ ಜೂನ್‌ 7ರಂದು ಗರಿಷ್ಠ ಮಟ್ಟ 655.817 ಬಿಲಿಯನ್ ಡಾಲರ್‌ ದಾಖಲಾಗಿತ್ತು. ವಿದೇಶಿ ಕರೆನ್ಸಿಗಳ ಸಂಗ್ರಹವು 35,313 ಕೋಟಿ ರೂ. ಹೆಚ್ಚಾಗಿದ್ದು, ಒಟ್ಟು 48.20 ಲಕ್ಷ ಕೋಟಿ ರೂ.ಗೆ ತಲುಪಿದೆ.

VISTARANEWS.COM


on

Forex Reserves
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಭಾರತದ ವಿದೇಶಿ ವಿನಿಮಯ ಸಂಗ್ರಹವು (Forex Reserves) ಜುಲೈ 5ಕ್ಕೆ ಅಂತ್ಯವಾದ ವಾರದಲ್ಲಿ 5.158 ಬಿಲಿಯನ್‌ ಡಾಲರ್‌ (43,081 ಕೋಟಿ ರೂ.) ವೃದ್ಧಿಸಿದ್ದು, ಒಟ್ಟು ಸಂಗ್ರಹವು 657.155 ಬಿಲಿಯನ್‌ ಡಾಲರ್‌ (54.88 ಲಕ್ಷ ಕೋಟಿ ರೂ.)ಗೆ ತಲುಪಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (Reserve Bank of India) ತಿಳಿಸಿದೆ. ಸತತ ಎರಡು ವಾರಗಳ ಕುಸಿತದ ನಂತರ ಈ ಏರಿಕೆ ಕಂಡುಬಂದಿದೆ. ಜೂನ್ 28ರ ವೇಳೆಗೆ ವಿದೇಶಿ ವಿನಿಮಯ ಸಂಗ್ರಹ 1.713 ಬಿಲಿಯನ್ ಡಾಲರ್ ಇಳಿದು 651.997 ಬಿಲಿಯನ್ ಡಾಲರ್‌ಗೆ ತಲುಪಿತ್ತು. ಈ ವರ್ಷದ ಜೂನ್‌ 7ರಂದು ಗರಿಷ್ಠ ಮಟ್ಟ 655.817 ಬಿಲಿಯನ್ ಡಾಲರ್‌ ದಾಖಲಾಗಿತ್ತು.

ವಿದೇಶಿ ಕರೆನ್ಸಿಗಳ ಸಂಗ್ರಹವು 35,313 ಕೋಟಿ ರೂ. ಹೆಚ್ಚಾಗಿದ್ದು, ಒಟ್ಟು 48.20 ಲಕ್ಷ ಕೋಟಿ ರೂ.ಗೆ ತಲುಪಿದೆ. ಇನ್ನು ಚಿನ್ನದ ಮೀಸಲು ಸಂಗ್ರಹವೂ ಏರಿಕೆಯಾಗಿದ್ದು, 7,550 ಕೋಟಿ ರೂ. ಹೆಚ್ಚಾಗಿದೆ. ಸ್ಪೆಷಲ್‌ ಡ್ರಾಯಿಂಗ್‌ ರೈಟ್ಸ್‌ (SDR) ಮೀಸಲು 175 ಕೋಟಿ ರೂ. ಹೆಚ್ಚಾಗಿ 1.50 ಲಕ್ಷ ಕೋಟಿ ರೂ.ಗೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.

ಇನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ(IMF)ಯಲ್ಲಿ ಭಾರತದ ಮೀಸಲು ಸಂಗ್ರಹ 33 ಕೋಟಿ ರೂ. ಅಧಿಕವಾಗಿದ್ದು, ಒಟ್ಟು ಸಂಗ್ರಹ 38,244 ಕೋಟಿ ರೂ.ಗೆ ಮುಟ್ಟಿದೆ.

ಆರ್ಥಿಕ ತಜ್ಞರು ಈ ಬೆಳವಣಿಗೆಯನ್ನು ಸ್ವಾಗತಿಸಿದ್ದಾರೆ. ವಿವೇಕಯುತ ನೀತಿ ಕ್ರಮಗಳು ಮತ್ತು ಜಾಗರೂಕ ವಿತ್ತೀಯ ನಿಲುವು ಇದಕ್ಕೆ ಕಾರಣ ಎಂದು ಹೇಳಿದ್ದಾರೆ. “ವಿವೇಕಯುತ ನೀತಿ ಕ್ರಮಗಳು ಮತ್ತು ಜಾಗರೂಕ ವಿತ್ತೀಯ ನೀತಿ ನಿಲುವಿನ ಹಿನ್ನೆಲೆಯಲ್ಲಿ ವಿದೇಶಿ ವಿನಿಮಯವು ಜುಲೈ 5ರ ವೇಳೆಗೆ 657 ಬಿಲಿಯನ್ ಡಾಲರ್‌ಗೆ ತಲುಪಿ ಹೊಸ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಇದು ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವವನ್ನು ಹೆಚ್ಚಿಸಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಿದೇಶಿ ವಿನಿಮಯ ಮೀಸಲುಗಳಲ್ಲಿನ ಈ ದೃಢವಾದ ಬೆಳವಣಿಗೆಯು ಭಾರತದ ಆರ್ಥಿಕ ಬೆಳವಣಿಗೆಗೆ ಬಲ ನೀಡುತ್ತದೆ. ಜತೆಗೆ ಜಾಗತಿಕ ಆಕರ್ಷಣೆಯನ್ನು ಹೆಚ್ಚಿಸುತ್ತದೆ ಮತ್ತು ದೇಶೀಯ ವ್ಯಾಪಾರ ಮತ್ತು ಉದ್ಯಮವನ್ನು ಬೆಂಬಲಿಸುತ್ತದೆ ಎಂದು ಅವರು ಒತ್ತಿ ಹೇಳಿದ್ದಾರೆ. ಹೆಚ್ಚಿನ ವಿದೇಶಿ ವಿನಿಮಯ ಮೀಸಲು ಜಾಗತಿಕ ಆರ್ಥಿಕ ಸವಾಲುಗಳ ನಡುವೆ ದೇಶದ ಕರೆನ್ಸಿ ಮತ್ತು ಹಣಕಾಸು ನೀತಿಯನ್ನು ನಿರ್ವಹಿಸುವಲ್ಲಿ ಆರ್‌ಬಿಐಗೆ ಹೆಚ್ಚಿನ ಅವಕಾಶವನ್ನು ಒದಗಿಸುತ್ತದೆ.

ಇದನ್ನೂ ಓದಿ: EXPLAINER: ಡಾಲರ್‌ ಎದುರು ರೂಪಾಯಿ ಬೆಲೆ ಕುಸಿದಾಗ ಏನಾಗುತ್ತದೆ?

ವಿದೇಶಿ ವಿನಿಮಯ ಸಂಗ್ರಹ ಎಂದರೇನು?

ವಿದೇಶಿ ವಿನಿಮಯ ಸಂಗ್ರಹ ಸದೃಢವಾಗಿದ್ದರೆ ದೇಶದ ವಿದೇಶಿ ವಿನಿಮಯ ದರವು ಸ್ಥಿರವಾಗಿರುತ್ತದೆ. ದೇಶದ ಮಧ್ಯವರ್ತಿ ಅಥವಾ ಸೆಂಟ್ರಲ್‌ ಬ್ಯಾಂಕ್‌ (ಭಾರತದ ಆರ್‌ಬಿಐ) ಹೊಂದಿರುವ ಒಟ್ಟು ವಿದೇಶಿ ಕರೆನ್ಸಿ ಮೌಲ್ಯವನ್ನು ವಿದೇಶಿ ವಿನಿಮಯ ಸಂಗ್ರಹ ಎಂದು ಕರೆಯಲಾಗುತ್ತದೆ. ಇದರಲ್ಲಿ ವಿದೇಶಿ ಬ್ಯಾಂಕ್‌ಗಳ ನೋಟುಗಳು, ಬಾಂಡ್‌, ಠೇವಣಿ, ಸರ್ಕಾರಿ ಸೆಕ್ಯುರಿಟಿ, ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿರುವ ಠೇವಣಿ, ಚಿನ್ನ ಇತ್ಯಾದಿ ಸೇರಿರುತ್ತದೆ. ನಮ್ಮಲ್ಲಿ ಸಾಕಷ್ಟು ವಿದೇಶಿ ವಿನಿಮಯ ಸಂಗ್ರಹವಿದ್ದರೆ ವಿದೇಶಿ ಹೂಡಿಕೆದಾರರಿಗೆ ತಮ್ಮ ಹೂಡಿಕೆ ಬಗ್ಗೆ ನಂಬಿಕೆ ಮೂಡುತ್ತದೆ. ಹೀಗಾಗಿ ವಿದೇಶಿ ವಿನಿಮಯ ಸಂಗ್ರಹಕ್ಕೆ ಪ್ರಧಾನ್ಯತೆ ನೀಡಲಾಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಾಣಿಜ್ಯ

Anant Radhika Wedding: ನಮ್ಮಿಂದ ಏನಾದರು ತಪ್ಪಾಗಿದ್ದರೆ ದಯವಿಟ್ಟು ಕ್ಷಮಿಸಿ; ನೀತಾ ಅಂಬಾನಿ ವಿನಮ್ರ ಮನವಿ!

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆ (Anant Radhika Wedding) ಪ್ರಯುಕ್ತ ನೀತಾ ಅಂಬಾನಿಯವರು ಪಾಪರಾಜಿಗಳಿಗೆ ಧನ್ಯವಾದ ಹೇಳಲು ಮತ್ತು ಸೋಮವಾರದ ವಿಶೇಷ ಆಚರಣೆಗೆ ಅವರನ್ನು ಸ್ವಾಗತಿಸಿದ್ದು ಇದನ್ನು ಸಾಮಾಜಿಕ ಜಾಲತಾಣದಲ್ಲಿ ನೆಟಿಜನ್‌ಗಳು ಶ್ಲಾಘಿಸಿದ್ದಾರೆ. ನೀತಾ ಅಂಬಾನಿ ಅವರ ಹೇಳಿಕೆಯ ವಿಡಿಯೊ ಇಲ್ಲಿದೆ.

VISTARANEWS.COM


on

By

Anant Radhika Wedding
Koo

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆಗೆ (Anant Radhika Wedding) ನೀತಾ ಅಂಬಾನಿ (nita ambani) ವೈಯಕ್ತಿಕವಾಗಿ (ಮಾಧ್ಯಮ ಛಾಯಾಗ್ರಾಹಕರು) ಪಾಪರಾಜಿಗಳನ್ನು (paparazzi) ಆಹ್ವಾನಿಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಇದು ಈಗ ಸಾಕಷ್ಟು ಮಂದಿಯ ಗಮನ ಸೆಳೆದಿದೆ.

ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆ ಪ್ರಯುಕ್ತ ನಡೆದ ಮಂಗಲ್ ಉತ್ಸವ ಅಥವಾ ಅದ್ಧೂರಿ ವಿವಾಹದ ಆರತಕ್ಷತೆಯಲ್ಲಿ ಸಾಕಷ್ಟು ಗಣ್ಯರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಎ.ಆರ್. ರೆಹಮಾನ್ ಮತ್ತು ಶ್ರೇಯಾ ಘೋಷಾಲ್ ಅವರಿಬ್ಬರ ಸಂಗೀತ ಕಛೇರಿಯನ್ನು ನಡೆಸಿಕೊಟ್ಟರು. ಧೀರೂಬಾಯಿ ಅಂಬಾನಿಯವರ ಜೀವನವನ್ನು ಆಧರಿಸಿದ ಸಂಗೀತ ಕಾರ್ಯಕ್ರಮದ ವಿಡಿಯೋಗಳನ್ನು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ನಡುವೆ ನೀತಾ ಅಂಬಾನಿಯವರು ಪಾಪರಾಜಿಗಳಿಗೆ ಧನ್ಯವಾದ ಹೇಳಲು ಮತ್ತು ಸೋಮವಾರದ ವಿಶೇಷ ಆಚರಣೆಗೆ ಅವರನ್ನು ಸ್ವಾಗತಿಸಿದ್ದು ಇದನ್ನು ಸಾಮಾಜಿಕ ಜಾಲತಾಣದಲ್ಲಿ ನೆಟಿಜನ್‌ಗಳು ಶ್ಲಾಘಿಸಿದ್ದಾರೆ.


ಈ ವಿಡಿಯೋದಲ್ಲಿ ನೀತಾ ಅಂಬಾನಿ, ನಿಮ್ಮ ತಾಳ್ಮೆ ಮತ್ತು ತಿಳುವಳಿಕೆಗೆ ಧನ್ಯವಾದಗಳು. ಯಾವುದಾದರೂ ತಪ್ಪಾಗಿದ್ದರೆ ದಯವಿಟ್ಟು ನಮ್ಮನ್ನು ಕ್ಷಮಿಸಿ. ಯಾಕೆಂದರೆ ನಮ್ಮದು ಈಗ ಮದುವೆ ನಡೆಯುತ್ತಿರುವ ಮನೆ. ನಾಳೆ ನಮ್ಮ ಅತಿಥಿಗಳಾಗಿ ಬನ್ನಿ, ನೀವೆಲ್ಲರೂ ಆಹ್ವಾನವನ್ನು ಸ್ವೀಕರಿಸಿದ್ದೀರಿ. ನಮ್ಮ ಅತಿಥಿಗಳಾಗಿ ನಾಳೆ ನಿಮ್ಮನ್ನು ಸ್ವಾಗತಿಸಲು ನಾವು ಎದುರು ನೋಡುತ್ತಿದ್ದೇವೆ. ದಯವಿಟ್ಟು ನಿಮ್ಮ ಕುಟುಂಬಗಳೊಂದಿಗೆ ಬನ್ನಿ ಎಂದು ಪಾಪರಾಜಿಗಳನ್ನು ಆಮಂತ್ರಿಸಿದರು.

ಇದನ್ನೂ ಓದಿ: Anant Ambani Wedding: ಕೌಟುಂಬಿಕ ಮುನಿಸು ಮರೆತು ವರನೊಂದಿಗೆ ಜತೆಯಾಗಿ ಹೆಜ್ಜೆ ಹಾಕಿದ ಮುಖೇಶ್ ಅಂಬಾನಿ-ಅನಿಲ್ ಅಂಬಾನಿ

ಈ ಕಾರ್ಯಕ್ರಮದ ಮೂಲಕ ಅವರು ಪಾಪರಾಜಿಗಳ ಮನ ಗೆದ್ದಿರುವುದು ಮಾತ್ರವಲ್ಲ ಅವರ ವಿನಮ್ರಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.

ಜುಲೈ 12 ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅದ್ಧೂರಿ ವಿವಾಹದ ವಿಧಿವಿಧಾನಗಳ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಸಮಾರಂಭಕ್ಕೆ ಸಾಕ್ಷಿಯಾಗಲು ಪ್ರಪಂಚದಾದ್ಯಂತದ ಹಲವಾರು ಅತಿಥಿಗಳು ಸಾಕ್ಷಿಯಾಗಿದ್ದರು. ಕಿಮ್, ಕ್ಲೋಯ್ ಕಾರ್ಡಶಿಯಾನ್, ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್, ಮತ್ತು ಜಾನ್ ಸೆನಾ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ರಾಜಕಾರಣಿಗಳು ಹಾಗೂ ಖ್ಯಾತನಾಮರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ಮುಂಬಯಿಗೆ ಆಗಮಿಸಿದ್ದರು.

Continue Reading

ದೇಶ

Anant Ambani Wedding: ಮಗನ ಮದುವೆಯಲ್ಲಿ ರಿಲಯನ್ಸ್ ಉದ್ಯೋಗಿಗಳಿಗೂ ಭರ್ಜರಿ ಔತಣ ನೀಡಿದ ಮುಖೇಶ್ ಅಂಬಾನಿ

Anant Ambani Wedding: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್‌ ಅವರ ವಿವಾಹವು ಮುಂಬೈನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಈ ಹಿನ್ನೆಲೆಯಲ್ಲಿ ಅಂಬಾನಿ ಕುಟುಂಬ 4 ದಿನಗಳ ಕಾಲ ವೈಭವದ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಸೋಮವಾರ ತೆರೆ ಬಿದ್ದಿದ್ದು, ಕೊನೆಯ ದಿನ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಪಾಲ್ಗೊಂಡಿದ್ದರು.

VISTARANEWS.COM


on

Anant Ambani Wedding
Koo

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಕೇಶ್ ಅಂಬಾನಿ (Mukesh Ambani) ಅವರ ಕಿರಿಯ ಪುತ್ರ ಅನಂತ್ ಅಂಬಾನಿ (Anant Ambani Wedding) ಮತ್ತು ಕೈಗಾರಿಕೋದ್ಯಮಿ ವೀರೇನ್ ಮರ್ಚಂಟ್‌ ಅವರ ಪುತ್ರಿ ರಾಧಿಕಾ ಮರ್ಚಂಟ್‌ (Radhika Merchant) ಅವರ ವಿವಾಹವು ಮುಂಬೈನಲ್ಲಿ ಅದ್ಧೂರಿಯಾಗಿ ನೆರವೇರಿದೆ. ಈ ಹಿನ್ನೆಲೆಯಲ್ಲಿ ಅಂಬಾನಿ ಕುಟುಂಬ 4 ದಿನಗಳ ಕಾಲ ವೈಭವದ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಸೋಮವಾರ ತೆರೆ ಬಿದ್ದಿದೆ. ಕೊನೆಯ ದಿನವಾದ ಸೋಮವಾರ ಜಿಯೋ ವರ್ಲ್ಡ್ ಡ್ರೈವ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳು, ರಿಲಯನ್ಸ್ ಉದ್ಯೋಗಿಗಳು ಮತ್ತು ಅಂಬಾನಿ ಕುಟುಂಬದ ಸಿಬ್ಬಂದಿಗೆ ವಿಶೇಷ ಸಮಾರಂಭ ಆಯೋಜಿಸಲಾಗಿತ್ತು.

ಮಾಧ್ಯಮಗಳು ಮತ್ತು ರಿಲಯನ್ಸ್‌ ಸಿಬ್ಬಂದಿಗೆಂದು ವಿಶೇಷವಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಪಾಲ್ಗೊಂಡಿದ್ದರು. ಅಕ್ಷಯ್‌ ಕುಮಾರ್‌ ಅವರಿಗೆ ಕೋವಿಡ್ ಬಾಧಿಸಿದ್ದ ಹಿನ್ನೆಲೆಯಲ್ಲಿ ಅವರು ಮದುವೆಯಲ್ಲಿ ಪಾಲ್ಗೊಂಡಿರಲಿಲ್ಲ. ಹೀಗಾಗಿ ಸೋಮವಾರ ಅವರು ಸಮಾರಂಭದಕ್ಕೆ ಪತ್ನಿ ಟ್ವಿಂಕಲ್‌ ಖನ್ನಾ ಜತೆಗೆ ಆಗಮಿಸಿದ ವಧು-ವರರಿಗೆ ಶುಭಾಶಯ ತಿಳಿಸಿದ್ದರು.

ಯಾರೆಲ್ಲ ಭಾಗಿ?

ಅಂಬಾನಿ ಆಸ್ತಿಗಳ ಹೌಸ್ ಕೀಪಿಂಗ್, ಸೆಕ್ಯುರಿಟಿ, ಸೆಕ್ರೆಟರಿಯಲ್‌ ಮತ್ತು ನಿರ್ವಹಣಾ ವಿಭಾಗಗಳ ಉದ್ಯೋಗಿಗಳು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ. ಸಾವಿರಾರು ಕಾರ್ಮಿಕರು ಮತ್ತು ಅವರ ಕುಟುಂಬಗಳ ಜತೆಗೆ ಮಾಧ್ಯಮ ಪ್ರತಿನಿಧಿಗಳೂ ಪಾಲ್ಗೊಂಡಿದ್ದರು. ಈ ಮೂಲಕ ಅನಂತ್‌-ರಾಧಿಕಾ ಮದುವೆಯ ಆಚರಣೆಗೆ ತೆರೆ ಎಳೆಯಲಾಗಿದೆ.

ಗಣ್ಯರ ದಂಡೇ ಉಪಸ್ಥಿತಿ

ಸಮಾರಂಭಕ್ಕೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಕೂಡ ಆಗಮಿಸಿ ಮದುಮಕ್ಕಳನ್ನು ಆಶೀರ್ವದಿಸಿದ್ದರು. ಜತೆಗೆ ನಟ-ನಟಿಯರು, ಕ್ರಿಕೆಟಿಗರು, ಬೇರೆ ದೇಶಗಳ ನಾಯಕರಿಂದ ಹಿಡಿದು ಸಾವಿರಾರು ಗಣ್ಯರು, ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು. ಮಹೇಂದ್ರ ಸಿಂಗ್‌ ಧೋನಿ, ಅಮಿತಾಭ್‌ ಬಚ್ಚನ್‌, ಯಶ್‌, ದೀಪಿಕಾ ಪಡುಕೋಣೆ, ಆಲಿಯಾ ಭಟ್‌, ರಣವೀರ್‌ ಸಿಂಗ್‌, ರಣಬೀರ್‌ ಕಪೂರ್‌, ಅನನ್ಯಾ ಪಾಂಡೆ, ರಜನಿಕಾಂತ್‌, ಮಹೇಶ್‌ ಬಾಬು, ಹಾರ್ದಿಕ್‌ ಪಾಂಡ್ಯ, ಐಶ್ವರ್ಯಾ ರೈ, ದಿಶಾ ಪಟಾಣಿ, ನಯನತಾರಾ, ವಿಘ್ನೇಶ್‌ ಶಿವನ್‌, ಜೆನಿಲಿಯಾ, ರಿತೇಶ್‌ ದೇಶ್‌ಮುಖ್‌, ಮಾಧುರಿ ದೀಕ್ಷಿತ್‌, ಶಾರುಖ್‌ ಖಾನ್‌, ಸಲ್ಮಾನ್‌ ಖಾನ್‌, ಸೂರ್ಯ, ಜ್ಯೋತಿಕಾ, ರಶ್ಮಿಕಾ ಮಂದಣ್ಣ, ಪ್ರಿಯಾಂಕಾ ಚೋಪ್ರಾ, ಬ್ರಿಟನ್‌ ಮಾಜಿ ಪ್ರಧಾನಿಗಳಾದ ಬೋರಿಸ್‌ ಜಾನ್ಸನ್‌, ಟೋನಿ ಬ್ಲೇರ್‌ ಸೇರಿ ಹಲವು ಗಣ್ಯರು ಪಾಲ್ಗೊಂಡಿದ್ದರು.

ಇದನ್ನೂ ಓದಿ: ಧೋನಿಯಿಂದ ರಜನಿಕಾಂತ್‌ವರೆಗೆ; ಅನಂತ್‌ ಅಂಬಾನಿ ಮದುವೆಯಲ್ಲಿ ಪಾಲ್ಗೊಂಡ ಗಣ್ಯರ ಫೋಟೊ, ವಿಡಿಯೊಗಳು ಇಲ್ಲಿವೆ

5 ಸಾವಿರ ಕೋಟಿ ರೂ. ಖರ್ಚು

ಅದ್ಧೂರಿ ವಿವಾಹ ಸಮಾರಂಭಕ್ಕೆ ಅಂದಾಜು ವೆಚ್ಚ 4,000ರಿಂದ 5000 ಕೋಟಿ ರೂ. ಎನ್ನಲಾಗಿದೆ. ಇದು ಅವರ ನಿವ್ವಳ ಆದಾಯದ ಶೇ. 0.5ರಷ್ಟು ಮಾತ್ರ! ವರದಿಗಳ ಪ್ರಕಾರ ಮುಖೇಶ್ ಅಂಬಾನಿ ಅವರ ನಿವ್ವಳ ಆದಾಯ ಮೌಲ್ಯವು 7.65 ಲಕ್ಷ ಕೋಟಿ ರೂ. ಮಾರ್ಚ್‌ನಲ್ಲಿ ಮದುವೆಯ ಪೂರ್ವಭಾವಿ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿತ್ತು. ಅಂಬಾನಿ ಕುಟುಂಬದ ವಿವಾಹ ಕಾರ್ಯಕ್ರಮದಲ್ಲಿ ಜಾಗತಿಕ ಗಾಯನ ಐಕಾನ್‌ಗಳಾದ ಜಸ್ಟಿನ್ ಬೀಬರ್, ರಿಹಾನ್ನಾ, ದಿಲ್ಜಿತ್ ದೋಸಾಂಜ್ ಸೇರಿದಂತೆ ಹಾಲಿವುಡ್‌-ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು.

Continue Reading

ಕರ್ನಾಟಕ

Tata Motors: ಟಾಟಾ ಮೋಟರ್ಸ್‌ನಿಂದ ‘ಆಟೋಮೋಟಿವ್ ಸ್ಕಿಲ್ ಲ್ಯಾಬ್ಸ್’ ಮೂಲಕ 4000 ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ

Tata Motors: ಟಾಟಾ ಮೋಟಾರ್ಸ್ ಕಂಪನಿಯು ನವೋದಯ ವಿದ್ಯಾಲಯ ಸಮಿತಿ (ಎನ್‌ವಿಎಸ್) ಸಹಯೋಗದ ಮೂಲಕ ಜವಾಹರ್ ನವೋದಯ ವಿದ್ಯಾಲಯಗಳಲ್ಲಿ (ಜೆಎನ್‌ವಿ) ‘ಆಟೋಮೋಟಿವ್ ಸ್ಕಿಲ್ ಲ್ಯಾಬ್ಸ್’ ಸ್ಥಾಪಿಸಿದೆ. ಇಲ್ಲಿಯವರೆಗೂ ಮಹಾರಾಷ್ಟ್ರ, ಕರ್ನಾಟಕ, ಗುಜರಾತ್, ಜಾರ್ಖಂಡ್, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಆಯ್ದ ಜೆಎನ್‌ವಿಗಳಲ್ಲಿ ಅಗತ್ಯ ಉಪಕರಣಗಳಿಂದ ಸುಸಜ್ಜಿತಗೊಂಡ 25 ಲ್ಯಾಬ್‌ಗಳನ್ನು ಸ್ಥಾಪಿಸಲಾಗಿದ್ದು, ಈ ವಿಶಿಷ್ಟವಾದ ಔದ್ಯಮಿಕ- ಶೈಕ್ಷಣಿಕ ಜಂಟಿ ಉಪಕ್ರಮದ ಮೂಲಕ ವರ್ಷದಲ್ಲಿ ಸುಮಾರು 4000 ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಆಟೋಮೋಟಿವ್ ಕೌಶಲ್ಯಗಳನ್ನು ಕಲಿಸುವ ಮೂಲಕ ಆಟೋಮೋಟಿವ್ ಕ್ಷೇತ್ರಕ್ಕೆ ಬೇಕಾದ ಉದ್ಯೋಗಿಗಳನ್ನಾಗಿ ಸಜ್ಜುಗೊಳಿಸಲಾಗುತ್ತದೆ.

VISTARANEWS.COM


on

Automotive skill training for 4000 students through Automotive Skill Labs by Tata Motors
Koo

ಬೆಂಗಳೂರು: ಯುವ ಪ್ರತಿಭೆಗಳನ್ನು ಬೆಳೆಸುವ ಮತ್ತು ಆಟೋಮೋಟಿವ್ ಉದ್ಯಮಕ್ಕೆ ಬೇಕಾಗುವ ನುರಿತ ಉದ್ಯೋಗಿಗಳನ್ನು ಸಿದ್ಧಗೊಳಿಸುವ ನಿಟ್ಟಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು (Tata Motors) ನವೋದಯ ವಿದ್ಯಾಲಯ ಸಮಿತಿ (ಎನ್‌ವಿಎಸ್) ಸಹಯೋಗದ ಮೂಲಕ ಜವಾಹರ್ ನವೋದಯ ವಿದ್ಯಾಲಯಗಳಲ್ಲಿ (ಜೆಎನ್‌ವಿ) ‘ಆಟೋಮೋಟಿವ್ ಸ್ಕಿಲ್ ಲ್ಯಾಬ್ಸ್’ ಸ್ಥಾಪಿಸಿದೆ.

ಇಲ್ಲಿಯವರೆಗೂ ಮಹಾರಾಷ್ಟ್ರ, ಕರ್ನಾಟಕ, ಗುಜರಾತ್, ಜಾರ್ಖಂಡ್, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಆಯ್ದ ಜೆಎನ್‌ವಿಗಳಲ್ಲಿ ಅಗತ್ಯ ಉಪಕರಣಗಳಿಂದ ಸುಸಜ್ಜಿತಗೊಂಡ 25 ಲ್ಯಾಬ್‌ಗಳನ್ನು ಸ್ಥಾಪಿಸಲಾಗಿದೆ. ಈ ವಿಶಿಷ್ಟವಾದ ಔದ್ಯಮಿಕ- ಶೈಕ್ಷಣಿಕ ಜಂಟಿ ಉಪಕ್ರಮದ ಮೂಲಕ ವರ್ಷದಲ್ಲಿ ಸುಮಾರು 4000 ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಆಟೋಮೋಟಿವ್ ಕೌಶಲ್ಯಗಳನ್ನು ಕಲಿಸುವ ಮೂಲಕ ಆಟೋಮೋಟಿವ್ ಕ್ಷೇತ್ರಕ್ಕೆ ಬೇಕಾದ ಉದ್ಯೋಗಿಗಳನ್ನಾಗಿ ಸಜ್ಜುಗೊಳಿಸಲಾಗುತ್ತದೆ. ಅಷ್ಟು ಮಂದಿಯಲ್ಲಿ 30% ಮಂದಿ ಹುಡುಗಿಯರಾಗಿರುತ್ತಾರೆ ಎನ್ನುವುದು ವಿಶೇಷ.

‘ರಾಷ್ಟ್ರೀಯ ಶಿಕ್ಷಣ ನೀತಿ 2020’ ರಲ್ಲಿ ಪರಿಕಲ್ಪಿಸಲಾದ ವೃತ್ತಿಪರ ಕೋರ್ಸ್‌ಗಳ ಸಾಲಿನಲ್ಲಿ ನಿಲ್ಲುವ ಟಾಟಾ ಮೋಟಾರ್ಸ್‌ನ ‘ಆಟೋಮೋಟಿವ್ ಸ್ಕಿಲ್ ಲ್ಯಾಬ್ಸ್,’ 9 ರಿಂದ 12 ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿಯೇ ಅವರಿಗೆ ಅಗತ್ಯವಾಗಿ ಬೇಕಾಗುವ ವಿಷಯ ಜ್ಞಾನ, ಪ್ರಾಯೋಗಿಕ ಕೌಶಲ್ಯಗಳನ್ನು ಕಲಿಯುವುದರ ಕಡೆಗೆ ಮತ್ತು ಅವರಿಗೆ ಉತ್ತಮವಾದ ಔದ್ಯಮಿಕ ಕ್ಷೇತ್ರದ ಅರಿವು ನೀಡುವ ಕಡೆಗೆ ಗಮನ ಕೇಂದ್ರೀಕರಿಸುತ್ತದೆ.

ಇದನ್ನೂ ಓದಿ: Healthy Heart Tips: ನಿಮ್ಮ ಹೃದಯ ಆರೋಗ್ಯವಾಗಿರಬೇಕೆ? ಮಳೆಗಾಲದಲ್ಲಿ ಈ ಏಳು ಆಹಾರಗಳಿಂದ ದೂರವಿರಿ!

ಜತೆಗೆ ವಿದ್ಯಾರ್ಥಿಗಳು ಟಾಟಾ ಮೋಟಾರ್ಸ್‌ನ ಘಟಕಗಳಿಗೆ ಭೇಟಿ ನೀಡಬಹುದು. ಸರ್ವೀಸ್ ಮತ್ತು ಡೀಲರ್‌ಶಿಪ್ ವೃತ್ತಿಪರರ ಜತೆ ಸಂವಹನ ನಡೆಸಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಉದ್ಯಮ ತಜ್ಞರ ಉಪನ್ಯಾಸ ಕಾರ್ಯಕ್ರದಲ್ಲಿ ಭಾಗಿಯಾಗಿ ಹೆಚ್ಚು ಜ್ಞಾನ ಪಡೆಯುವ ಮತ್ತು ಉತ್ತಮ ಅನುಭವ ಹೊಂದುವ ಅವಕಾಶ ಪಡೆಯಲಿದ್ದಾರೆ. ಅಷ್ಟು ಮಾತ್ರವಲ್ಲದೆ ಈ ಲ್ಯಾಬ್‌ಗಳಲ್ಲಿ ಬೋಧನೆ ಮಾಡುವ ಬೋಧಕರು ಕಂಪನಿಯ ಪ್ಲಾಂಟ್‌ಗಳಿರುವ ಸ್ಥಳಗಳಲ್ಲಿ ಅಗತ್ಯ ತರಬೇತಿಯನ್ನು ಪಡೆಯುತ್ತಾರೆ. ಪುಣೆಯ ಸ್ಕಿಲ್ ಲ್ಯಾಬ್‌ನಲ್ಲಿ ವಿದ್ಯಾರ್ಥಿಗಳು ರಚಿಸಿರುವ ಇ-ರಿಕ್ಷಾ ಈ ವಿಶಿಷ್ಟವಾದ ಕಲಿಕಾ ಉಪಕ್ರಮದ ಯಶಸ್ಸಿಗೆ ಒಂದು ಶ್ರೇಷ್ಠ ಪುರಾವೆಯಾಗಿದೆ.

ಈ ಕಲಿಕಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ ವಿದ್ಯಾರ್ಥಿಗಳು ಟಾಟಾ ಮೋಟಾರ್ಸ್ ಮತ್ತು ಎನ್‌ವಿಎಸ್ ನಿಂದ ಜಂಟಿ ಪ್ರಮಾಣಪತ್ರ ಸ್ವೀಕರಿಸುತ್ತಾರೆ. ತಮ್ಮ ಶಿಕ್ಷಣದ ಬಳಿಕ ವಿದ್ಯಾರ್ಥಿಗಳು ಡಿಪ್ಲೊಮಾ ಇನ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿಗೆ ಸೇರಿಕೊಳ್ಳಬಹುದು. ಸೇರಿಕೊಳ್ಳುವವರಿಗೆ ಪೂರ್ತಿ ಸ್ಟೈಫಂಡ್ ನೀಡಲಾಗುತ್ತದೆ ಮತ್ತು ಟಾಟಾ ಮೋಟಾರ್ಸ್‌ನ ಉತ್ಪಾದನಾ ಘಟಕಗಳಲ್ಲಿ ಉದ್ಯೋಗ ತರಬೇತಿಯನ್ನೂ ಪಡೆಯಬಹುದಾಗಿದೆ. ಜತೆಗೆ ಟಾಟಾ ಮೋಟಾರ್ಸ್‌ನಲ್ಲಿ ಮುಂದುವರಿಯಲು ಆಸಕ್ತಿಯುಳ್ಳವರು ಆಯ್ದ ಎಂಜಿನಿಯರಿಂಗ್ ಸಂಸ್ಥೆಗಳ ಸಹಯೋಗದೊಂದಿಗೆ ನಡೆಸುವ 3.5 ವರ್ಷಗಳ ವಿಶೇಷ ಶಿಕ್ಷಣ ಕಾರ್ಯಕ್ರಮವಾದ ಬಿಟೆಕ್ ಇನ್ ಎಂಜಿನಿಯರಿಂಗ್‌ ಪದವಿಗೆ ಸೇರಿಕೊಳ್ಳಬಹುದು. ಹಾಗೆ ಮಾಡಿದರೆ ಐದು ವರ್ಷಗಳ ನಂತರ ಟಾಟಾ ಮೋಟಾರ್ಸ್‌ನಲ್ಲಿ ಪರ್ಮನೆಂಟ್ ಉದ್ಯೋಗಕ್ಕೆ ಸೇರಿಕೊಳ್ಳಬಹುದು.

ಈ ಕುರಿತು ಟಾಟಾ ಮೋಟಾರ್ಸ್‌ನ ಸಿಎಸ್‌ಆರ್ ಮುಖ್ಯಸ್ಥ ವಿನೋದ್ ಕುಲಕರ್ಣಿ ಮಾತನಾಡಿ, “ನಮ್ಮ ಆಟೋಮೋಟಿವ್ ಸ್ಕಿಲ್ ಲ್ಯಾಬ್‌ಗಳು ನಿರ್ಲಕ್ಷ್ಯಕ್ಕೆ ಒಳಗಾದ ಸಮುದಾಯಗಳ ಯುವಜನತೆಗೆ ಬೆಳೆಯುತ್ತಿರುವ ಆಟೋಮೋಟಿವ್‌ ಕ್ಷೇತ್ರದ ಉದ್ಯೋಗ ಗಳಿಸಲು ಬೇಕಾಗುವ ಸೂಕ್ತವಾದ ಕೌಶಲ್ಯಗಳನ್ನು ಕಲಿಸಿ ಅವರನ್ನು ಸಶಕ್ತಗೊಳಿಸುತ್ತವೆ. ಈ ಲ್ಯಾಬ್ ಗಳು 9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಪಡೆಯಲು ಮತ್ತು ಉದ್ಯೋಗಾವಕಾಶಗಳನ್ನು ಹೊಂದಲು ದಾರಿಗಳನ್ನು ಸೃಷ್ಟಿಸುತ್ತದೆ.

ಇದನ್ನೂ ಓದಿ: One Nation One Rate: ಚಿನ್ನಕ್ಕೆ ದೇಶಾದ್ಯಂತ ಒಂದೇ ದರ! ಹೊಸ ನಿಯಮ ಶೀಘ್ರ ಜಾರಿ ಸಾಧ್ಯತೆ

‘ಸ್ಕಿಲ್ ಇಂಡಿಯಾ ಮಿಷನ್ʼಗೆ ಕೊಡುಗೆ ನೀಡುವ ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ನವೀನ ಚಿಂತನೆ, ಉದ್ಯಮಶೀಲತಾ ಮನೋಭಾವ, ವಿಶ್ಲೇಷಣಾತ್ಮಕ ಮನಸ್ಥಿತಿ ಮತ್ತು ವಿಮರ್ಶಾತ್ಮಕ ಸಂವಹನ ಇತ್ಯಾದಿ ಕೌಶಲಗಳನ್ನು ಬೆಳೆಸುತ್ತದೆ. ಈ ಉಪಕ್ರಮಕ್ಕೆ ವಿದ್ಯಾರ್ಥಿಯರು ಕೂಡ ಉತ್ತಮವಾಗಿ ಸ್ಪಂದಿಸಿದ್ದು, ಆ ಮೂಲಕ ವಿಕಸಿತ ಭಾರತ @2047 ಪರಿಕಲ್ಪನೆಗೆ ಪೂರಕವಾಗಿ ಭವಿಷ್ಯದ ನಾಯಕರನ್ನು ಸಜ್ಜುಗೊಳಿಸುವ ನಮ್ಮ ಬದ್ಧತೆಗೆ ಬಲ ದೊರೆತಿದೆ” ಎಂದು ತಿಳಿಸಿದ್ದಾರೆ.

Continue Reading

ದೇಶ

Made In Bihar: ರಷ್ಯಾ ಸೈನ್ಯಕ್ಕೆ ಬಿಹಾರದಿಂದ ಸೇಫ್ಟಿ ಶೂ ಪೂರೈಕೆ; ವಾರ್ಷಿಕ 100 ಕೋಟಿ ರೂ. ವ್ಯವಹಾರ

Made In Bihar: ರಷ್ಯಾ ಸೈನಿಕರು ಬಿಹಾರದ ಹಾಜಿಪುರದಲ್ಲಿ ತಯಾರಿಸುವ ‘ಮೇಡ್ ಇನ್ ಬಿಹಾರ್’ ಶೂಗಳನ್ನು ಬಳಸುತ್ತಿದ್ದಾರೆ. ಹೌದು, ಬಿಹಾರದ ಹಾಜಿಪುರ ನಗರವು ರಷ್ಯಾದ ಸೈನ್ಯಕ್ಕಾಗಿ ಸೇಫ್ಟಿ ಶೂ ತಯಾರಿಸುವ ಮೂಲಕ ಜಗತ್ತಿನ ಗಮನ ಸೆಳೆದಿದೆ. ಹಾಜಿಪುರ ಮೂಲದ ಕಾಂಪಿಟೆನ್ಸ್ ಎಕ್ಸ್‌ಪೋರ್ಟ್ಸ್‌ ಕಂಪನಿ ರಷ್ಯಾಕ್ಕೆ ಸೇಫ್ಟಿ ಬೂಟ್‌ ಮತ್ತು ಯುರೋಪಿಯನ್ ಮಾರುಕಟ್ಟೆಗಳಿಗೆ ಡಿಸೈನರ್ ಶೂಗಳನ್ನು ಪೂರೈಸುತ್ತಿದೆ.

VISTARANEWS.COM


on

Made In Bihar
Koo

ಪಟನಾ: ರಷ್ಯಾ ಸೇನೆ (Russian soldiers)ಯು ಉಕ್ರೇನ್‌ ವಿರುದ್ಧ ಯುದ್ಧ ಮುಂದುವರಿಸಿದೆ. ವಿಶೇಷ ಎಂದರೆ ಈ ಕಾರ್ಯಾಚರಣೆಗೆ ರಷ್ಯಾ ಸೈನಿಕರು ಬಿಹಾರದ ಹಾಜಿಪುರ (Hajipur)ದಲ್ಲಿ ತಯಾರಿಸುವ ‘ಮೇಡ್ ಇನ್ ಬಿಹಾರ್’ (Made In Bihar) ಶೂಗಳನ್ನು ಬಳಸುತ್ತಿದ್ದಾರೆ.

ಕೃಷಿ ಉತ್ಪಾದನೆಗೆ ಹೆಸರುವಾಸಿಯಾದ ಬಿಹಾರದ ಹಾಜಿಪುರ ನಗರವು ರಷ್ಯಾದ ಸೈನ್ಯಕ್ಕಾಗಿ ಸೇಫ್ಟಿ ಶೂ ತಯಾರಿಸುವ ಮೂಲಕ ಜಗತ್ತಿನ ಗಮನ ಸೆಳೆದಿದೆ. ಹಾಜಿಪುರ ಮೂಲದ ಕಾಂಪಿಟೆನ್ಸ್ ಎಕ್ಸ್‌ಪೋರ್ಟ್ಸ್‌ (Competence Exports) ಖಾಸಗಿ ಕಂಪನಿಯಾಗಿದ್ದು, ರಷ್ಯಾಕ್ಕೆ ಸೇಫ್ಟಿ ಬೂಟ್‌ ಮತ್ತು ಯುರೋಪಿಯನ್ ಮಾರುಕಟ್ಟೆಗಳಿಗೆ ಡಿಸೈನರ್ ಶೂಗಳನ್ನು ಪೂರೈಸುತ್ತಿದೆ.

ಈ ಬಗ್ಗೆ ಮಾತನಾಡಿದ ಜನರಲ್ ಮ್ಯಾನೇಜರ್ ಶಿಬ್ ಕುಮಾರ್ ರಾಯ್, “ನಾವು 2018ರಲ್ಲಿ ಹಾಜಿಪುರದಲ್ಲಿ ಈ ಕಂಪನಿ ಆರಂಭಿಸಿದೆವು. ಸ್ಥಳೀಯರಿಗೆ ಉದ್ಯೋಗವನ್ನು ಸೃಷ್ಟಿಸುವುದು ನಮ್ಮ ಮುಖ್ಯ ಗುರಿ. ಹಾಜಿಪುರದಲ್ಲಿ ನಾವು ರಷ್ಯಾಕ್ಕೆ ರಫ್ತು ಮಾಡಬಹುದಾದ ಸೇಫ್ಟಿ ಶೂಗಳನ್ನು ತಯಾರಿಸುತ್ತೇವೆ. ರಷ್ಯಾದ ಜತೆಗೆ ಯುರೋಪ್‌ಗೂ ರಫ್ತು ಮಾಡುತ್ತಿದ್ದೇವೆ. ಶೀಘ್ರದಲ್ಲೇ ದೇಶೀಯ ಮಾರುಕಟ್ಟೆಯಲ್ಲಿ ವಹಿವಾಟು ಪ್ರಾರಂಭಿಸಲಿದ್ದೇವೆʼʼ ಎಂದು ತಿಳಿಸಿದ್ದಾರೆ.

ರಷ್ಯಾ ಸೈನ್ಯಕ್ಕೆ ಪೂರೈಸುವ ಸೇಫ್ಟಿ ಶೂ ವಿಶೇಷತೆಗಳ ಬಗ್ಗೆ ಮಾತನಾಡಿದ ಅವರು, “ಈ ಶೂಗಳು ಹಗುರವಾಗಿರಬೇಕು. ಜಾರದಂತಿರಬೇಕು. ಸೋಲ್‌ನಲ್ಲಿ ವೈಶಿಷ್ಟ್ಯ ಹೊಂದಿರಬೇಕು ಮತ್ತು -40 ಡಿಗ್ರಿ ಸೆಲ್ಸಿಯಸ್‌ನಂತಹ ವಾತಾವರಣಕ್ಕೂ ಹೊಂದಿಕೆಯಾಗುವಂತಿರಬೇಕು. ಈ ರೀತಿಯಲ್ಲಿ ನಾವು ಶೂ ತಯಾರಿಸುತ್ತಿದ್ದೇವೆʼʼ ಎಂದು ವಿವರಿಸಿದ್ದಾರೆ.

ಅಂತಾರಾಷ್ಟ್ರೀಯ ಗುಣಮಟ್ಟ

“ಬಿಹಾರದಲ್ಲಿ ವಿಶ್ವ ದರ್ಜೆಯ ಕಾರ್ಖಾನೆಯನ್ನು ಆರಂಭಿಸುವುದು ಮತ್ತು ರಾಜ್ಯದ ಯುವ ಜನತೆಗೆ ಉದ್ಯೋಗ ನೀಡುವುದು ಕಂಪನಿಯ ಎಂ.ಡಿ. ದಾನೇಶ್ ಪ್ರಸಾದ್ ಅವರ ಮಹತ್ವಾಕಾಂಕ್ಷೆ. ಸದ್ಯ ನಮ್ಮಲ್ಲಿರುವ 300 ಉದ್ಯೋಗಿಗಳಲ್ಲಿ ಶೇ. 70ರಷ್ಟು ಮಹಿಳೆಯರುʼʼ ಎಂದು ಶಿಬ್ ಕುಮಾರ್ ರಾಯ್ ತಿಳಿಸಿದ್ದಾರೆ.

ಕಂಪೆನಿಯುವ ಕಳೆದ ವರ್ಷ 15 ಲಕ್ಷ ಜೋಡಿ ಶೂಗಳನ್ನು ರಫ್ತು ಮಾಡಿದೆ. ಇದರ ಮೌಲ್ಯ ಸುಮಾರು 100 ಕೋಟಿ ರೂ. ಮುಂದಿನ ದಿನಗಳಲ್ಲಿ ಈ ಸಂಖ್ಯೆಯನ್ನು ಹೆಚ್ಚಿಸುವ ಗುರಿಯನ್ನು ಕಂಪನಿ ಹೊಂದಿದೆ. ʼʼಬಿಹಾರ ಸರ್ಕಾರವು ಕೈಗಾರಿಕೆಗಳಿಗೆ ಉತ್ತೇಜನ ನೀಡುತ್ತಿದೆ. ಜತೆಗೆ ರಸ್ತೆ ಮತ್ತು ಸಂವಹನದಂತಹ ಮೂಲಸೌಕರ್ಯಗಳಲ್ಲಿ ಸುಧಾರಣೆಯ ಅಗತ್ಯವಿದೆ. ಇದರಿಂದ ಗ್ರಾಹಕರಿಗೆ ಸುಲಭವಾಗಿ ನಮ್ಮನ್ನು ತಲುಪಲು ಸಾಧ್ಯವಾಗುತ್ತದೆʼʼ ಎಂದು ಶಿಬ್ ಕುಮಾರ್ ರಾಯ್ ಅಭಿಪ್ರಾಯಪಟ್ಟಿದ್ದಾರೆ. “ತರಬೇತಿ ಸಂಸ್ಥೆಯನ್ನು ಸ್ಥಾಪಿಸುವ ಗುರಿ ಹೊಂದಿದ್ದೇವೆ. ಇದರಿಂದ ಕೌಶಲ್ಯ ಹೊಂದಿದ ಯುವ ಜನತೆಯನ್ನು ಸಿದ್ಧ ಪಡಿಸುತ್ತೇವೆʼʼ ಎಂದಿದ್ದಾರೆ.

ಸದ್ಯ ಹಾಜಿಪುರ ಘಟಕವು ಸೇಫ್ಟಿ ಶೂಗಳಲ್ಲದೆ ಐಷಾರಾಮಿ ಡಿಸೈನರ್ ಶೂಗಳನ್ನು ಯುರೋಪಿಯನ್ ಮಾರುಕಟ್ಟೆಗಳಾದ ಇಟಲಿ, ಫ್ರಾನ್ಸ್, ಸ್ಪೇನ್ ಮತ್ತು ಇಂಗ್ಲೆಂಡ್‌ಗೆ ರಫ್ತು ಮಾಡುತ್ತಿದೆ. “ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳಿಗಾಗಿ ಉನ್ನತ ಮಟ್ಟದ ಶೂಗಳನ್ನು ಅಭಿವೃದ್ಧಿಪಡಿಸುವುದು ನಮ್ಮ ಗುರಿ. ನಾವು ಇತ್ತೀಚೆಗೆ ಬೆಲ್ಜಿಯಂ ಕಂಪನಿಯೊಂದಿಗೆ ಮಾತುಕತೆಗಳನ್ನು ಪ್ರಾರಂಭಿಸಿದ್ದೇವೆ ” ಎಂದು ಕಂಪನಿಯ ಮಾರ್ಕೆಟಿಂಗ್ ಮುಖ್ಯಸ್ಥ ಮಜರ್ ಪಲ್ಲುಮಿಯಾ ತಿಳಿಸಿದ್ದಾರೆ. ಮುಂದಿನ ತಿಂಗಳು ಕೆಲವು ವಿದೇಶಿ ಕಂಪನಿಗಳು ಕಾರ್ಖಾನೆಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದೂ ಅವರು ಹೇಳಿದ್ದಾರೆ.

ಇದನ್ನೂ ಓದಿ: Israel Palestine War: ಇಸ್ರೇಲ್‌ ಪೊಲೀಸರಿಗೂ ಕೇರಳದ ಟೇಲರ್‌ಗಳಿಗೂ ಎಲ್ಲಿಂದೆಲ್ಲಿಯ ಸಂಬಂಧ!

Continue Reading
Advertisement
Rishabh Pant
ಕ್ರೀಡೆ9 mins ago

Rishabh Pant: ಡೆಲ್ಲಿ ತೊರೆದು ಮುಂದಿನ ಐಪಿಎಲ್​ನಲ್ಲಿ ಈ ಫ್ರಾಂಚೈಸಿ ಪರ ಆಡಲಿದ್ದಾರೆ ರಿಷಭ್​ ಪಂತ್​

Job Alert
ಉದ್ಯೋಗ19 mins ago

Job Alert: ಅಂಚೆ ಇಲಾಖೆಯಿಂದ ಬೃಹತ್‌ ನೇಮಕಾತಿ; ಕರ್ನಾಟಕದಲ್ಲಿಯೂ ಇದೆ 1,940 ಹುದ್ದೆ: ಹೀಗೆ ಅಪ್ಲೈ ಮಾಡಿ

Viral Video
Latest35 mins ago

Viral Video: ಕಾಮುಕರ ಹಾವಳಿ ಮಿತಿ‌ ಮೀರಿದೆ; ಬೀದಿ ನಾಯಿಯನ್ನೂ ಇವರು ಬಿಡುತ್ತಿಲ್ಲ! ಆಘಾತಕಾರಿ ವಿಡಿಯೊ

Jitan Sahani
ದೇಶ43 mins ago

Jitan Sahani: ಬಿಹಾರದಲ್ಲಿ ವಿಕಾಸಶೀಲ ಇನ್ಸಾನ್‌ ಪಕ್ಷದ ಮುಖ್ಯಸ್ಥನ ತಂದೆಯ ಭೀಕರ ಹತ್ಯೆ; ಮನೆ ತುಂಬ ರಕ್ತ!

karnataka assembly live
ಪ್ರಮುಖ ಸುದ್ದಿ1 hour ago

Karnataka Assembly Live: ಸದನದಲ್ಲಿ ಇಂದು ಕಿಡಿಯೆಬ್ಬಿಸಲಿರುವ ವಾಲ್ಮೀಕಿ ಹಗರಣ; ಉತ್ತರ ನೀಡಲು ಸಿಎಂ ಸಜ್ಜು; ಇಲ್ಲಿದೆ ಕ್ಷಣಕ್ಷಣದ ಲೈವ್‌

David Warner
ಕ್ರೀಡೆ1 hour ago

David Warner: ​ಚಾಂಪಿಯನ್ಸ್ ಟ್ರೋಫಿಗೆ ವಾರ್ನರ್​ ಆಯ್ಕೆ ಇಲ್ಲ ಎಂದ ಜಾರ್ಜ್​ ಬೈಲಿ

Kannada New Movie
ಸ್ಯಾಂಡಲ್ ವುಡ್1 hour ago

Kannada New Movie: ಸೆಟ್ಟೇರಿತು ‘ಆಕಾಶ್’, ‘ಅರಸು’ ಚಿತ್ರಗಳ ಡೈರೆಕ್ಟರ್ ಹೊಸ ಸಿನಿಮಾ; ಕಿರುತೆರೆಯ ಈ ಪ್ರತಿಭೆ ನಾಯಕ

Kannada In Madrasa
ಕರ್ನಾಟಕ1 hour ago

Kannada In Madrasa: ರಾಜ್ಯದ ಮದರಸಾಗಳಲ್ಲಿ ಇನ್ನು ಕನ್ನಡ ಕಲಿಕೆ ಕಡ್ಡಾಯ; ಶೀಘ್ರವೇ ಆದೇಶ!

murder case set fire bagalakote
ಕ್ರೈಂ2 hours ago

Horrible Murder Case: ಶೆಡ್‌ ಹೊರಗಿನಿಂದ ಲಾಕ್‌ ಮಾಡಿ ಬೆಂಕಿ ಇಟ್ಟ ದುಷ್ಟರು; ಇಬ್ಬರು ಸಜೀವ ದಹನ

Iti Acharya
ಸಿನಿಮಾ2 hours ago

Iti Acharya: ಬಾಲಿವುಡ್‌ಗೆ ಕಾಲಿಟ್ಟ ಮತ್ತೊಬ್ಬ ಕನ್ನಡತಿ; ದಕ್ಷಿಣ ಭಾರತದ ಚಿತ್ರಗಳ ಬಳಿಕ ಹಿಂದಿಯಲ್ಲೂ ಅಭಿನಯ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ17 hours ago

Karnataka Weather : ವ್ಯಾಪಕ ಮಳೆ ಎಚ್ಚರಿಕೆ; ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

karnataka Rain
ಮಳೆ24 hours ago

Karnataka Rain : ಶಾಲಾ-ಕಾಲೇಜಿಗೆ ಈ ದಿನ ರಜಾ; ಅಬ್ಬರಿಸುತ್ತಿರುವ ಮಳೆಗೆ ಮನೆಯಲ್ಲೇ ಎಲ್ಲರೂ ಸಜಾ!

karnataka weather Forecast
ಮಳೆ1 day ago

Karnataka Weather : ಮುಂದಿನ 24 ಗಂಟೆಯಲ್ಲಿ ರಣಮಳೆ ಫಿಕ್ಸ್‌; ರೆಡ್‌ ಅಲರ್ಟ್‌ ಘೋಷಣೆ

Karnataka Rain
ಮಳೆ2 days ago

Karnataka Rain : ಧಾರಾಕಾರ ಮಳೆಗೆ ತೇಲಿ ಹೋದ ಸ್ಕೂಲ್‌ ಬಸ್‌; ಕೊಡಗಿನಲ್ಲಿ ಕುಸಿದು ಬಿದ್ದ ಮನೆಗಳ ಗೋಡೆ

karnataka Rain
ಮಳೆ2 days ago

Karnataka Rain : ಭಾರಿ ಗಾಳಿ ಮಳೆ; ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ತುಳಿದು ವಿಲವಿಲ ಒದ್ದಾಡಿ ಸತ್ತ ಗಬ್ಬದ ಹಸು

haveri News
ಹಾವೇರಿ2 days ago

Haveri News : ಹಾವೇರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಯಿ ಜಗಳ; ಊರಿನೊಳಗೆ ದಾಂಧಲೆ ಮಾಡುತ್ತಿದ್ದ ಕರಡಿ ಸೆರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆ ಎಫೆಕ್ಟ್‌; ಕಪಿಲಾ ನದಿ ತೀರದಲ್ಲೀಗ ಪ್ರವಾಹ ಭೀತಿ

karnataka Weather Forecast
ಮಳೆ3 days ago

Karnataka Weather : ಶಿರಸಿಯಲ್ಲಿ ಭೂಕುಸಿತ; ಮತ್ತೆ ಕರಾವಳಿ, ಮಲೆನಾಡಿಗೆ ಭಾರಿ ಮಳೆ ಎಚ್ಚರಿಕೆ

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್‌ ಮರ

Wild Animal Attack
ಹಾಸನ3 days ago

Wild Animal Attack : ಬೇಲೂರಿನಲ್ಲಿ ಒಂಟಿ ಸಲಗ ಡೆಡ್ಲಿ ಅಟ್ಯಾಕ್; ಮನೆ ಅಂಗಳದಲ್ಲಿ ಓಡಾಡಿದ ಚಿರತೆ

ಟ್ರೆಂಡಿಂಗ್‌