Gold Rate Today: ಚಿನ್ನ-ಬೆಳ್ಳಿ ಖರೀದಿಗೆ ಹೊರಟಿದ್ದರೆ ಸ್ವಲ್ಪ ನಿಲ್ಲಿ; ಇಂದಿನ ದರ ಇಲ್ಲಿದೆ, ಚೆಕ್​ ಮಾಡಿಕೊಳ್ಳಿ - Vistara News

ವಾಣಿಜ್ಯ

Gold Rate Today: ಚಿನ್ನ-ಬೆಳ್ಳಿ ಖರೀದಿಗೆ ಹೊರಟಿದ್ದರೆ ಸ್ವಲ್ಪ ನಿಲ್ಲಿ; ಇಂದಿನ ದರ ಇಲ್ಲಿದೆ, ಚೆಕ್​ ಮಾಡಿಕೊಳ್ಳಿ

ಹಾಗೇ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಟ್ರಾಯ್​ ಔನ್ಸ್​​ ಚಿನ್ನದ ಬೆಲೆ 1,947.24 ಡಾಲರ್​ ಇತ್ತು. ಇದು ನಿನ್ನೆಯ ಕ್ಲೋಸಿಂಗ್​ ಟ್ರೇಡ್​​ಗಿಂತಲೂ ಶೇ.1.67ರಷ್ಟು ಇಳಿಕೆಯಾಗಿದೆ.

VISTARANEWS.COM


on

Gold And Silver
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿರುವುದು (Gold Rate Today) ಗ್ರಾಹಕರಿಗೆ ಸಮಾಧಾನ ಕೊಟ್ಟಿದೆ. ಬಹು ಸರಕು ವಿನಿಯಮ ಕೇಂದ್ರದಲ್ಲಿ ಇಂದು ಮಧ್ಯಾಹ್ನದ ಹೊತ್ತಿಗೆ 22 ಕ್ಯಾರೆಟ್​ನ 10 ಗ್ರಾಂ. ಚಿನ್ನದ ಬೆಲೆ 59,425 ರೂಪಾಯಿ ಇದೆ. ಹಾಗೇ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಟ್ರಾಯ್​ ಔನ್ಸ್​​ ಚಿನ್ನದ ಬೆಲೆ 1,947.24 ಡಾಲರ್​ ಇತ್ತು. ಇದು ನಿನ್ನೆಯ ಕ್ಲೋಸಿಂಗ್​ ಟ್ರೇಡ್​​ಗಿಂತಲೂ ಶೇ.1.67ರಷ್ಟು ಇಳಿಕೆಯಾಗಿದೆ. ಹಾಗೇ, ಬಹು ಸರಕು ವಿನಿಮಯ ಕೇಂದ್ರದಲ್ಲಿ ಬೆಳ್ಳಿ ದರ (Silver Rate Today) ಆರಂಭಿಕ ವ್ಯಾಪಾರದಲ್ಲಿ ಕೆಜಿಗೆ 71,901ರೂ. ಇತ್ತು. ಅದು ಮಧ್ಯಾಹ್ನದ ಹೊತ್ತಿಗೆ ಕೆಜಿಗೆ 71,741ರೂ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ ಟ್ರಾಯ್​ ಔನ್ಸ್​​ಗೆ 23.59 ಡಾಲರ್​​ಗಳಷ್ಟಿದೆ.

ದೇಶದಲ್ಲಿ ಚಿನ್ನ-ಬೆಳ್ಳಿ ದರ ಎಷ್ಟು?
22 ಕ್ಯಾರೆಟ್​ ಚಿನ್ನ
: 1 ಗ್ರಾಂ-5,530 ರೂ., 8 ಗ್ರಾಂ-44,240ರೂ., 10 ಗ್ರಾಂ-55,300ರೂ., 100 ಗ್ರಾಂ-5,53,000 ರೂ.
24 ಕ್ಯಾರೆಟ್​ ಚಿನ್ನ; 1 ಗ್ರಾಂ-6033 ರೂ., 8 ಗ್ರಾಂ-48,264 ರೂ., 10 ಗ್ರಾಂ-60,330 ರೂ., 100 ಗ್ರಾಂ-6,03,300 ರೂ.
ಬೆಳ್ಳಿಯ ಬೆಲೆ: 1 ಗ್ರಾಂ-73 ರೂ., 8ಗ್ರಾಂ-584 ರೂ., 10 ಗ್ರಾಂ-730 ರೂ., 100 ಗ್ರಾಂ-7300 ರೂ., 1 ಕೆಜಿ-73,000 ರೂ.

ಬೆಂಗಳೂರಿನಲ್ಲಿ ಚಿನ್ನ-ಬೆಳ್ಳಿ ಬೆಲೆ
22 ಕ್ಯಾರೆಟ್ ಚಿನ್ನ: 1 ಗ್ರಾಂ- 5,535 ರೂ., 8 ಗ್ರಾಂ-44,280 ರೂ., 10 ಗ್ರಾಂ-55,350 ರೂ., 100 ಗ್ರಾಂ-5,53,500ರೂ.
24 ಕ್ಯಾರೆಟ್​ ಚಿನ್ನ: 1 ಗ್ರಾಂ- 6,038 ರೂ., 8 ಗ್ರಾಂ-48,304 ರೂ., 10 ಗ್ರಾಂ-60,380 ರೂ., 100 ಗ್ರಾಂ-6,03,800 ರೂ.
ಬೆಳ್ಳಿ ಬೆಲೆ: 1 ಗ್ರಾಂ-74.50 ರೂ., 8 ಗ್ರಾಂ- 596 ರೂಪಾಯಿ., 10 ಗ್ರಾಂ-745 ರೂ., 100 ಗ್ರಾಂ-7,450 ರೂಪಾಯಿ., 1 ಕೆಜಿ-74,500 ರೂಪಾಯಿ.

ಇದನ್ನೂ ಓದಿ: Abhishek Ambareesh Wedding: ಮದುವೆಗೂ ಮುನ್ನ ಅವಿವಗೆ ಸಿಕ್ತು ಚಿನ್ನದ ಸರ; ಇದರ ಸ್ಪೆಷಾಲಿಟಿ ಏನು?

ಜಾಗತಿಕ ಆರ್ಥಿಕ ಸ್ಥಿತಿಗತಿ, ಹಣದುಬ್ಬರ, ಕರೆನ್ಸಿ ವಿನಿಮಯ, ಸ್ಥಳೀಯ ಬೇಡಿಕೆ, ಪೂರೈಕೆ ಆಧಾರದ ಮೇಲೆ ಚಿನ್ನ-ಬೆಳ್ಳಿ ಬೆಲೆ ನಿರ್ಧಾರವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಚಿನ್ನ-ಬೆಳ್ಳಿ ಬೆಲೆ ಒಂದು ವಾರ ಸತತ ಏರಿಕೆ ಕಂಡರೆ, ಇನ್ನೊಂದು ಮೂರ್ನಾಲ್ಕು ದಿನ ನಿರಂತರವಾಗಿ ಇಳಿಕೆಯಾಗುತ್ತಿದೆ. ಚೀನಾವನ್ನು ಬಿಟ್ಟರೆ, ಚಿನ್ನವನ್ನು ಅತಿ ಹೆಚ್ಚಾಗಿ ಖರೀದಿ ಮಾಡುವ ದೇಶ ಭಾರತ. ಅಂದಹಾಗೇ, ಬೆಂಗಳೂರಲ್ಲಿ ಕಳೆದ ಮೂರುದಿನಗಳಿಂದಲೂ ಚಿನ್ನ-ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಉದ್ಯೋಗ

IT Hiring: ಟಿಸಿಎಸ್‌ನಲ್ಲಿ ಫ್ರೆಶರ್‌ಗಳಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸುವುದು ಹೇಗೆ? ಯಾವಾಗ ಕೊನೆಯ ದಿನ?

IT Hiring: 2023-24ರಲ್ಲಿ ಟಿಸಿಎಸ್‌ 40,000 ಫ್ರೆಶರ್‌ಗಳನ್ನು ನೇಮಿಸಿಕೊಳ್ಳುವ ಗುರಿಯನ್ನು ಹೊಂದಿತ್ತು. ಈ ವರ್ಷವೂ ಹೆಚ್ಚಿನ ಪ್ರಮಾಣದಲ್ಲಿ ನೇಮಕ ಆಗಲಿದೆ.

VISTARANEWS.COM


on

tcs jobs IT hiring
Koo

ಹೊಸದಿಲ್ಲಿ: ಭಾರತದ ಅತಿದೊಡ್ಡ ಐಟಿ ಸೇವೆಗಳ (IT services) ಕಂಪನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್ – TCS) ನೂತನ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು (IT Hiring) ಪ್ರಾರಂಭಿಸಿದೆ. ಏಪ್ರಿಲ್ 10ರವರೆಗೆ ಹೊಸ ಉದ್ಯೋಗಗಳಿಗಾಗಿ (Job Openings) ಅರ್ಜಿಗಳನ್ನು ಕರೆಯಲಾಗುತ್ತಿದೆ.

ಇದುವರೆಗಿನ ನೇಮಕಾತಿ ಸ್ಥಗಿತದಿಂದ ಸಂಕಷ್ಟದಲ್ಲಿರುವ ಎಂಜಿನಿಯರಿಂಗ್ ಪದವೀಧರರಿಗೆ ಇದು ಸಿಹಿ ಸುದ್ದಿಯಾಗಿದೆ. ಕಲೆದೆರಡು ವರ್ಷಗಳಲ್ಲಿ ವಿವಿಧ ದೊಡ್ಡ ಐಟಿ ಸಂಸ್ಥೆಗಳು ನೇಮಕಾತಿ ನಿಲ್ಲಿಸಿದ್ದವು.

TCS ಏಪ್ರಿಲ್ 26ರಂದು ಪರೀಕ್ಷೆಗಳನ್ನು ನಡೆಸಲಿದೆ. ಕಂಪನಿಯು 2024ರ BTech, BE, MCA, MSc ಮತ್ತು MS ಬ್ಯಾಚ್‌ನಿಂದ ಏಪ್ರಿಲ್ 10ರವರೆಗೆ ಉದ್ಯೋಗ ಅರ್ಜಿಗಳನ್ನು ಆಹ್ವಾನಿಸುತ್ತಿದೆ ಎಂದು TCS ವೆಬ್‌ಸೈಟ್‌ನ ಇತ್ತೀಚಿನ ಪ್ರಕಟಣೆ ತಿಳಿಸಿದೆ. TCS ಮೂರು ವಿಭಾಗಗಳಲ್ಲಿ- ನಿಂಜಾ, ಡಿಜಿಟಲ್ ಮತ್ತು ಪ್ರೈಮ್- ನೇಮಕಾತಿ ಮಾಡುತ್ತಿದೆ.

ನಿಂಜಾ ವರ್ಗವು ವರ್ಷಕ್ಕೆ 3.36 ಲಕ್ಷ ರೂಪಾಯಿಗಳ, ಡಿಜಿಟಲ್ ಮತ್ತು ಪ್ರೈಮ್ ವಿಭಾಗಗಳು ವಾರ್ಷಿಕವಾಗಿ ಕ್ರಮವಾಗಿ 7 ಲಕ್ಷ ಮತ್ತು 9-11.5 ಲಕ್ಷ ರೂ.ಗಳ ಪ್ಯಾಕೇಜ್‌ ಅನ್ನು ನೀಡಲಿವೆ. ಖಾಲಿ ಇರುವ ಹುದ್ದೆಗಳ ಸಂಖ್ಯೆಯನ್ನು ಟಿಸಿಎಸ್‌ ಬಹಿರಂಗಪಡಿಸಿಲ್ಲ.

ಡಿಸೆಂಬರ್ 2023ರಂದೇ ಸಂಸ್ಥೆ ಹೊಸ ಉದ್ಯೋಗಗಳ ಸೂಚನೆ ನೀಡಿತ್ತು. “ನಾವು ಮುಂದಿನ ವರ್ಷಕ್ಕೆ ನಮ್ಮ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ. TCSಗೆ ಸೇರಲು ಫ್ರೆಶರ್‌ಗಳಲ್ಲಿ ಪ್ರಚಂಡ ಉತ್ಸಾಹವನ್ನು ಕಾಣುತ್ತಿದೇವೆ” ಎಂದು TCS ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಮಿಲಿಂದ್ ಲಕ್ಕಡ್ ಹೇಳಿದ್ದರು.

“ಉದ್ಯೋಗಿಗಳ ಸಂಖ್ಯೆಯನ್ನು ನಿರ್ದಿಷ್ಟಪಡಿಸುವುದು ಕಷ್ಟ” ಎಂದು ಲಕ್ಕಾಡ್ ಹೇಳಿದ್ದರು. ದೊಡ್ಡ ಪ್ರಮಾಣದಲ್ಲಿ ನೇಮಕಾತಿ ಆಗುವ ಸಂಭವ ಇದೆ. 2023-24ರಲ್ಲಿ ಟಿಸಿಎಸ್‌ 40,000 ಫ್ರೆಶರ್‌ಗಳನ್ನು ನೇಮಿಸಿಕೊಳ್ಳುವ ಗುರಿಯನ್ನು ಹೊಂದಿತ್ತು.

ಏತನ್ಮಧ್ಯೆ, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಶುಕ್ರವಾರ ಅಮೆಜಾನ್ ವೆಬ್ ಸೇವೆಗಳು (AWS) ಜನರೇಟಿವ್ AI (GenAI) ಅನ್ನು ಬಿಡುಗಡೆ ಪಾಲುದಾರನಾಗಿ ಹೊಂದಿದೆ. GenAIನಲ್ಲಿ 350,000ಕ್ಕೂ ಹೆಚ್ಚು ಉದ್ಯೋಗಿಗಳು ಮೂಲಭೂತ ಕೌಶಲ್ಯಗಳ ಬಗ್ಗೆ ತರಬೇತಿ ಪಡೆದಿದ್ದು, TCS ವಿಶ್ವದಲ್ಲೇ ಅತಿ ದೊಡ್ಡ AI ಕಾರ್ಯಪಡೆಗಳಲ್ಲಿ ಒಂದನ್ನು ನಿರ್ಮಿಸಲು ಸಿದ್ಧವಾಗಿದೆ.

TCS ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ?

ಹಂತ 1: TCS NextStep ಪೋರ್ಟಲ್‌ಗೆ ಲಾಗಿನ್ ಮಾಡಿ
ಹಂತ 2: ಡ್ರೈವ್‌ಗಾಗಿ ನೋಂದಾಯಿಸಿ ಮತ್ತು ಅರ್ಜಿ ಸಲ್ಲಿಸಿ
ಸನ್ನಿವೇಶ A: ನೀವು TCS NextStep ಪೋರ್ಟಲ್, ‘IT’ ವರ್ಗದ ಅಡಿಯಲ್ಲಿ ನೋಂದಾಯಿತ ಬಳಕೆದಾರರಾಗಿದ್ದರೆ, ದಯವಿಟ್ಟು ನಿಮ್ಮ TCS ಉಲ್ಲೇಖ ID (CT/ DT ಉಲ್ಲೇಖ ಸಂಖ್ಯೆ) ಒಂದಿಗೆ ಲಾಗಿನ್ ಮಾಡಿ ಮತ್ತು ಅರ್ಜಿ ನಮೂನೆಯನ್ನು ಪೂರ್ಣಗೊಳಿಸಿ. ಸಲ್ಲಿಸಿದ ನಂತರ, ದಯವಿಟ್ಟು Apply For Drive ಮೇಲೆ ಕ್ಲಿಕ್ ಮಾಡಿ.
ಸನ್ನಿವೇಶ B: ನೀವು ಹೊಸ ಬಳಕೆದಾರರಾಗಿದ್ದರೆ, Register Now ಕ್ಲಿಕ್ ಮಾಡಿ. “IT” ವರ್ಗವನ್ನು ಆಯ್ಕೆಮಾಡಿ ಮತ್ತು ನಿಮ್ಮ ವಿವರಗಳನ್ನು ಭರ್ತಿ ಮಾಡಿ. ನಿಮ್ಮ ಅರ್ಜಿ ನಮೂನೆಯನ್ನು ಸಲ್ಲಿಸಿ ಮತ್ತು Apply For Drive ಮೇಲೆ ಕ್ಲಿಕ್ ಮಾಡಿ.

ಇದನ್ನೂ ಓದಿ: Bangalore Water Crisis: “ನೀರು ಕೊಡ್ತೀವಿ, ಪ್ಲೀಸ್‌ ಹೋಗ್ಬೇಡಿ…” ಐಟಿ ಸಂಸ್ಥೆಗಳಿಗೆ ರಾಜ್ಯ ಮನವಿ; ಗಾಳ ಹಾಕಿದ ಕೇರಳ

Continue Reading

ವಾಣಿಜ್ಯ

SBI Debit Cards: ಎಸ್‌ಬಿಐ ಡೆಬಿಟ್‌ ಕಾರ್ಡ್‌ದಾರರಿಗೆ ಬ್ಯಾಡ್‌ ನ್ಯೂಸ್‌; ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!

SBI Debit Cards: ಏಪ್ರಿಲ್‌ 1ರಿಂದ ಎಸ್‌ಬಿಐ ಡೆಬಿಟ್ ಕಾರ್ಡ್‌ ಗ್ರಾಹಕರಿಗೆ ಹೆಚ್ಚುವರಿ ಹೊರೆ ಬೀಳಲಿದೆ. ವಾರ್ಷಿಕ ನಿರ್ವಹಣಾ ಶುಲ್ಕವನ್ನು ಹೆಚ್ಚಿಸುವುದಾಗಿ ಬ್ಯಾಂಕ್‌ ಘೋಷಿಸಿದೆ.

VISTARANEWS.COM


on

SBI Debit Cards
Koo

ನವದೆಹಲಿ: ನೀವು ಎಸ್‌ಬಿಐ (State Bank of India)ಯ ಡೆಬಿಟ್‌ ಕಾರ್ಡ್‌ ಹೊಂದಿದ್ದೀರಾ? ಹಾಗಾದರೆ ನಿಮಗಿದು ಬ್ಯಾಡ್‌ ನ್ಯೂಸ್‌. ಯಾಕೆಂದರೆ ಎಸ್‌ಬಿಐ ಕೆಲವು ವರ್ಗದ ಡೆಬಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ವಾರ್ಷಿಕ ನಿರ್ವಹಣಾ ಶುಲ್ಕವನ್ನು ಹೆಚ್ಚಿಸುವುದಾಗಿ ಘೋಷಿಸಿದೆ (SBI Debit Cards). ಹೊಸ ದರಗಳು ಹೊಸ ಹಣಕಾಸು ವರ್ಷದ ಮೊದಲ ದಿನವಾದ ಏಪ್ರಿಲ್ 1ರಿಂದ ಜಾರಿಗೆ ಬರಲಿವೆ ಎಂದು ಎಸ್‌ಬಿಐ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಯಾವೆಲ್ಲ ಕಾರ್ಡ್‌ಗಳಿಗೆ ಅನ್ವಯ?

ಡೆಬಿಟ್ ಕಾರ್ಡ್‌ಗಳಾದ ಕ್ಲಾಸಿಕ್ / ಸಿಲ್ವರ್ / ಗ್ಲೋಬಲ್, ಯುವ / ಗೋಲ್ಡ್, ಪ್ಲಾಟಿನಂ ಮತ್ತು ಪ್ರೈಡ್ / ಪ್ರೀಮಿಯಂ ಬಿಸಿನೆಸ್ ವಿಭಾಗಗಳಿಗೆ ಹೊಸ ಶುಲ್ಕಗಳು ಅನ್ವಯವಾಗುತ್ತವೆ. ವಿವಿಧ ವಿಭಾಗಗಳಲ್ಲಿ ವಾರ್ಷಿಕ ನಿರ್ವಹಣಾ ಶುಲ್ಕವನ್ನು 75 ರೂ. ಹೆಚ್ಚಿಸಲಾಗಿದೆ ಎಂದು ಎಸ್‌ಬಿಐ ತಿಳಿಸಿದೆ.

ಡೆಬಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ಇತರ ಶುಲ್ಕಗಳನ್ನು ಸಹ ಉಲ್ಲೇಖಿಸಲಾಗಿದೆ. ಇವುಗಳಲ್ಲಿ ಡೆಬಿಟ್ ಕಾರ್ಡ್‌ಗಳ ವಿತರಣೆ ಮತ್ತು ಬದಲಾವಣೆಯೂ ಸೇರಿವೆ. ಗ್ರಾಹಕರು ಡೆಬಿಟ್ ಕಾರ್ಡ್ ಬದಲಾಯಿಸಲು (300 ರೂ. ಮತ್ತು ಜಿಎಸ್‌ಟಿ), ನಕಲಿ ಪಿನ್ / ಪಿನ್ ರಿಜನರೇಷನ್‌ (50 ರೂ. ಪ್ಲಸ್ ಜಿಎಸ್‌ಟಿ)ಗೆ ಶುಲ್ಕ ಪಾವತಿಸಬೇಕಾಗುತ್ತದೆ. ಅಂತಾರಾಷ್ಟ್ರೀಯ ವಹಿವಾಟುಗಳಂತಹ ಸೇವೆಗಳ ಫೀಸ್‌ ಬಗ್ಗೆಯೂ ಎಸ್‌ಬಿಐ ಉಲ್ಲೇಖಿಸಿದೆ. ಎಲ್ಲ ಶುಲ್ಕಗಳು ಶೇ. 18 ರಷ್ಟು ಜಿಎಸ್‌ಟಿಯನ್ನು ಒಳಗೊಂಡಿದೆ.

  • ಎಸ್‌ಬಿಐ ಕ್ಲಾಸಿಕ್, ಸಿಲ್ವರ್, ಗ್ಲೋಬಲ್, ಕಾಂಟ್ಯಾಕ್ಟ್‌ಲೆಸ್ ಡೆಬಿಟ್ ಕಾರ್ಡ್‌ಗಳ ಗ್ರಾಹಕರು ವಾರ್ಷಿಕ 200 ರೂ. ನಿರ್ವಹಣಾ ಶುಲ್ಕ ಮತ್ತು ಜಿಎಸ್‌ಟಿಯನ್ನು ಪಾವತಿಸಬೇಕಾಗುತ್ತದೆ. ಪ್ರಸ್ತುತ ಈ ಕಾರ್ಡ್‌ಗಳಿಗೆ 125 ರೂ. ಶುಲ್ಕ + ಜಿಎಸ್‌ಟಿ ಪಾವತಿಸಬೇಕಿದೆ.
  • ಯುವ, ಗೋಲ್ಡ್, ಕಾಂಬೋ ಡೆಬಿಟ್ ಕಾರ್ಡ್, ಮೈ ಕಾರ್ಡ್ (ಇಮೇಜ್ ಕಾರ್ಡ್)ಗೆ ಏಪ್ರಿಲ್‌ 1ರಿಂದ 250 ರೂ. + ಜಿಎಸ್‌ಟಿ ನಿರ್ವಹಣಾ ಶುಲ್ಕ ಪಾವತಿಸಬೇಕು (ಇದುವರೆಗೆ 175 ರೂ. + ಜಿಎಸ್‌ಟಿ ಇತ್ತು). ಎಸ್‌ಬಿಐ ಪ್ಲಾಟಿನಂ ಡೆಬಿಟ್ ಕಾರ್ಡ್‌ಗಳಿಗೆ 250 ರೂ. ಬದಲಿಗೆ 325 ರೂ. + ಜಿಎಸ್‌ಟಿ ವಾರ್ಷಿಕ ಶುಲ್ಕ ಪಾವತಿಸಬೇಕು.
  • ಪ್ರೈಡ್ ಮತ್ತು ಪ್ರೀಮಿಯಂ ಬ್ಯುಸಿನೆಸ್ ಡೆಬಿಟ್ ಕಾರ್ಡ್‌ಗಳ ವಾರ್ಷಿಕ ನಿರ್ವಹಣೆ ಶುಲ್ಕವು ಈಗಿನ 350 ರೂ. + ಜಿಎಸ್‌ಟಿಯಿಂದ 425 ರೂ. + ಜಿಎಸ್‌ಟಿಗೆ ಹೆಚ್ಚಾಗುತ್ತದೆ.

ಇದನ್ನೂ ಓದಿ: LIC News: ಎಲ್‌ಐಸಿ ಈಗ ನಂಬರ್‌ ಒನ್‌ ಜಾಗತಿಕ ವಿಮೆ ಬ್ರಾಂಡ್!‌

ಕ್ರೆಡಿಟ್‌ ಕಾರ್ಡ್‌ನಲ್ಲಿಯೂ ಬದಲಾವಣೆ

ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್‌ಗಳ ಕನಿಷ್ಠ ದಿನದ ಬಿಲ್ ಲೆಕ್ಕಾಚಾರ ಪ್ರಕ್ರಿಯೆಯಲ್ಲಿ ಬದಲಾವಣೆಗಳನ್ನು ಘೋಷಿಸಿದೆ. ಕೆಲವು ವಿಶೇಷ ಕ್ರೆಡಿಟ್ ಕಾರ್ಡ್ ಹೊಂದಿರುವವರು ಇನ್ನು ಮುಂದೆ ಕ್ರೆಡಿಟ್ ಕಾರ್ಡ್‌ಗಳ ಮೂಲಕ ದರ ಪಾವತಿಗಳನ್ನು ಮಾಡುವಾಗ ರಿವಾರ್ಡ್ ಪಾಯಿಂಟ್‌ಗಳನ್ನು ಪಡೆಯುವುದಿಲ್ಲ. ಇದುವರೆಗೆ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮೂಲಕ ದರ ಪಾವತಿ ಮಾಡುವವರಿಗೆ ರಿವಾರ್ಡ್ ಪಾಯಿಂಟ್ಸ್‌ ಸಿಗುತ್ತಿತ್ತು. ಇದುವರೆಗೆ ಗಳಿಸಿರುವ ರಿವಾರ್ಡ್ ಪಾಯಿಂಟ್‌ಗಳು 2024ರ ಏಪ್ರಿಲ್ 15ರ ನಂತರ ಮುಕ್ತಾಯಗೊಳ್ಳಲಿವೆ. ಅಂದರೆ ರಿವಾರ್ಡ್ ಪಾಯಿಂಟ್ಸ್‌ ಪಡೆದಿದ್ದರೆ ಈ ಅವಧಿಯೊಳಗೆ ಬಳಸಿಕೊಳ್ಳಬೇಕು. ಎಸ್‌ಬಿಐ ದೇಶದ ಎರಡನೇ ಅತಿದೊಡ್ಡ ಕ್ರೆಡಿಟ್ ಕಾರ್ಡ್ ವಿತರಕನಾಗಿದ್ದು, 18 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮನಿ-ಗೈಡ್

Money Guide: ಗಮನಿಸಿ; ಏ. 1ರಿಂದ ಬದಲಾಗುತ್ತವೆ ಈ ಎಲ್ಲ ಹಣಕಾಸು ನಿಯಮಗಳು

Money Guide: ಏಪ್ರಿಲ್‌ 1ರಂದು ದೇಶದಲ್ಲಿ ಹೊಸ ಹಣಕಾಸು ವರ್ಷ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಹಣಕಾಸಿನ ವಿಚಾರದ ಕೆಲವೊಂದು ನಿಯಮಗಳಲ್ಲಿ ಬದಲಾವಣೆ ಕಂಡು ಬರಲಿದೆ. ಅದು ಯಾವುವು ಎನ್ನುವುದರ ವಿವರ ಇಲ್ಲಿದೆ.

VISTARANEWS.COM


on

money guide
Koo

ಬೆಂಗಳೂರು: ಹೊಸ ಹಣಕಾಸು ವರ್ಷ ಆರಂಭವಾಗಲು ಕೆಲವೇ ದಿನಗಳು ಬಾಕಿ. ಏಪ್ರಿಲ್‌ 1ರಿಂದ 2024-25ರ ಸಾಲಿನ ಹಣಕಾಸು ವರ್ಷ ನಡೆಯಲಿದೆ. ಅದರ ಜತೆಗೆ ಏಪ್ರಿಲ್‌ 1ರಿಂದ ಹಣಕಾಸಿಗೆ ಸಂಬಂಧಿಸಿದಂತೆ ಕೆಲವು ನಿಯಮಗಳಲ್ಲಿ ಬದಲಾವಣೆಯೂ ನಡೆಯಲಿದೆ. ವಿಶೇಷವಾಗಿ ಜನ ಸಾಮಾನ್ಯರ ಮೇಲೆ ಪರಿಣಾಮ ಬೀರುವಂತಹ ಬದಲಾವಣೆ ಕಂಡು ಬರಲಿದೆ. ಅವು ಯಾವುವು ಎನ್ನುವ ವಿವರ ಇಂದಿನ ಮನಿಗೈಡ್‌ (Money Guide)ನಲ್ಲಿದೆ.

ಫಾಸ್ಟ್‌ ಟ್ಯಾಗ್‌ (FASTag)

2021ರ ಫೆಬ್ರವರಿಯಿಂದ ದೇಶದಲ್ಲಿ ಫಾಸ್ಟ್‌ಟ್ಯಾಗ್‌ ಕಡ್ಡಾಯಗೊಳಿಸಲಾಗಿದೆ. ಇದೀಗ ಫಾಸ್ಟ್‌ಟ್ಯಾಗ್‌ನ ಕೆವೈಸಿಯನ್ನು ಅಪ್​ಡೇಟ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಇದಕ್ಕಾಗಿ ಮಾರ್ಚ್‌ 31 ಕೊನೆಯ ದಿನ. ಅಪ್‌ಡೇಟ್‌ ಆಗದಿದ್ದರೆ ಬ್ಯಾಂಕ್‌ಗಳು ನಿಮ್ಮ ಫಾಸ್ಟ್‌ಟ್ಯಾಗ್‌ ಅನ್ನು ಡೀ ಆ್ಯಕ್ಟಿವೇಟ್ ಮಾಡುವ ಸಾಧ್ಯತೆ ಇದೆ. ಹೀಗಾಗಿ ಕೆವೈಸಿ ಅಪ್​ಡೇಟ್ ಆಗದ ಫಾಸ್ಟ್‌ಟ್ಯಾಗ್‌ನ ಖಾತೆಯಲ್ಲಿ ಹಣ ಇದ್ದರೂ ಅದು ಕೆಲಸ ಮಾಡುವುದಿಲ್ಲ. ಆದ್ದರಿಂದ ಈಗಲೇ ಅಪ್‌ಡೇಟ್‌ ಮಾಡಿ.

ಕೆವೈಸಿ ಅಪ್‌ಡೇಟ್ ಮಾಡುವುದು ಹೇಗೆ?

  • ಬ್ಯಾಂಕ್ ಲಿಂಕ್ ಮಾಡಲಾದ ಫಾಸ್ಟ್‌ಟ್ಯಾಗ್ ವೆಬ್‌ಸೈಟ್‌ಗೆ ಭೇಟಿ ನೀಡಿ
  • ಮೊಬೈಲ್‌ ನಂಬರ್‌ ಬಳಸಿ ಲಾಗಿನ್‌ ಆಗಿ ಮತ್ತು ಮೊಬೈಲ್‌ಗೆ ಬಂದ ಒಟಿಪಿಯನ್ನು ನಮೂದಿಸಿ.
  • ಹೋಮ್‌ಪೇಜ್‌ನಲ್ಲಿ ಕಂಡು ಬರುವ My Profile ಸೆಕ್ಷನ್‌ಗೆ ಹೋಗಿ KYC ಟ್ಯಾಬ್‌ ಮೇಲೆ ಕ್ಲಿಕ್‌ ಮಾಡಿ.
  • ತೆರೆದುಕೊಳ್ಳುವ ಹೊಸ ಪುಟದಲ್ಲಿ ಅಗತ್ಯ ಮಾಹಿತಿಯನ್ನು ತುಂಬಿ Submit ಬಟನ್‌ ಕ್ಲಿಕ್‌ ಮಾಡಿ.
  • ಈಗ ನಿಮ್ಮ ಫಾಸ್ಟ್‌ಟ್ಯಾಗ್ ಖಾತೆಯ ಕೆವೈಸಿ ಪೂರ್ಣಗೊಳ್ಳುತ್ತದೆ.

ಎನ್​ಪಿಎಸ್  (NPS)

ಹೆಚ್ಚಿನ ಭದ್ರತೆ ಒದಗಿಸಲು ಮತ್ತು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಚಂದಾದಾರರ ಹಿತಾಸಕ್ತಿಗಳನ್ನು ಕಾಪಾಡಲು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು ಹೆಚ್ಚು ಸುರಕ್ಷಿತವಾದ ಈ ವಿಧಾನವನ್ನು ಘೋಷಿಸಿದೆ. ಇದಕ್ಕಾಗಿ ಎರಡು ಅಂಶಗಳ ಆಧಾರ್ ದೃಢೀಕರಣ(ಅಥೆಂಟಿಕೇಷನ್‌) ಅನ್ನು ಪರಿಚಯಿಸಿದೆ. ಇನ್ನು ಮುಂದೆ ಪಾಸ್‌ವರ್ಡ್‌ನೊಂದಿಗೆ ಆಧಾರ್ ದೃಢೀಕರಣವನ್ನೂ ಪೂರ್ಣಗೊಳಿಸಬೇಕು. ಆಗ ಮಾತ್ರ ಲಾಗಿನ್ ಯಶಸ್ವಿಯಾಗುತ್ತದೆ. ಇದರಿಂದ ಅನಧಿಕೃತ ಎನ್‌ಪಿಎಸ್‌ ವಹಿವಾಟು ನಡೆಸಲು ಸಾಧ್ಯವಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ. ಈ ನಿಯಮ ಏಪ್ರಿಲ್‌ 1ರಿಂದಲೇ ಜಾರಿಗೆ ಬರಲಿದೆ.

ಇಪಿಎಫ್‌ಒ (EPFO)

ಹೊಸ ಹಣಕಾಸು ವರ್ಷದ ಆರಂಭದ ದಿನ ನೌಕರರ ಭವಿಷ್ಯ ನಿಧಿ ದೊಡ್ಡ ಬದಲಾವಣೆಗೆ ಸಾಕ್ಷಿಯಾಗಲಿದೆ. ಅಂದರೆ ಏಪ್ರಿಲ್ 1ರಿಂದ ನೌಕರರ ಭವಿಷ್ಯ ನಿಧಿ ಸಂಸ್ಥೆ ಹೊಸ ನಿಯಮಗಳನ್ನು ಜಾರಿಗೆ ತರಲಿದೆ. ಹೊಸ ನಿಯಮದ ಪ್ರಕಾರ ನೀವು ಉದ್ಯೋಗವನ್ನು ಬದಲಾಯಿಸಿದರೆ, ನಿಮ್ಮ ಹಳೆಯ ಪಿಎಫ್ ಅಕೌಂಟ್‌ ಅನ್ನು ಅನ್ನು ಆಟೋ ಮೋಡ್‌ಗೆ ವರ್ಗಾಯಿಸಲಾಗುತ್ತದೆ. ಇದರಿಂದ ಉದ್ಯೋಗವನ್ನು ಬದಲಾಯಿಸಿದಾಗ ಪಿಎಫ್ ಮೊತ್ತವನ್ನು ವರ್ಗಾಯಿಸಲು ನೀವು ವಿನಂತಿಸುವ ಅಗತ್ಯವಿಲ್ಲ.

ಎಸ್‌ಬಿಐ ಕ್ರೆಡಿಟ್ ಕಾರ್ಡ್ (SBI Credit Card)

ನೀವು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಕ್ರೆಡಿಟ್ ಕಾರ್ಡ್ ಹೊಂದಿದ್ದರೆ ಈ ಅಂಶವನ್ನು ಗಮನಿಸಲೇಬೇಕು. ಏಪ್ರಿಲ್ 1ರಿಂದ ಎಸ್‌ಬಿಐ ತನ್ನ ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ತರುತ್ತಿದೆ. ಏಪ್ರಿಲ್ 1ರಿಂದ ನೀವು ಬಾಡಿಗೆ ಪಾವತಿ ಮಾಡಿದರೆ ನಿಮಗೆ ಯಾವುದೇ ರಿವಾರ್ಡ್ ಪಾಯಿಂಟ್‌ ಲಭಿಸುವುದಿಲ್ಲ. ಕೆಲವು ಕ್ರೆಡಿಟ್ ಕಾರ್ಡ್‌ಗಳಿಗೆ ಈ ನಿಯಮ ಏಪ್ರಿಲ್ 15ರಿಂದ ಅನ್ವಯವಾಗುತ್ತದೆ.

ಎಸ್‌ಬಿಐ ಅಮೃತ್‌ ಕಲಶ್‌ ವಿಶೇಷ ಎಫ್‌ಡಿ (SBI Amrit Kalash Deposit)

ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್‌ ಎಸ್‌ಬಿಐಯ ವಿಶೇಷ ಯೋಜನೆ ಅಮೃತ್‌ ಕಲಶ್‌ ಎಫ್‌ಡಿ ಡೆಪಾಸಿಟ್‌ ಸ್ಕೀಮ್‌ನ ಅವಧಿ ಮಾರ್ಚ್‌ 31ಕ್ಕೆ ಮುಕ್ತಾಯವಾಗಲಿದೆ. 400 ದಿನಗಳ ಈ ಯೋಜನೆಯಲ್ಲಿ ಬಡ್ಡಿಯನ್ನು ಮಾಸಿಕ, ತ್ರೈಮಾಸಿಕ ಅಥವಾ ಅರ್ಧ ವಾರ್ಷಿಕ ಅವಧಿಗೆ ನೀಡುವ ವ್ಯವಸ್ಥೆ ಇದೆ.‌ ದೇಶೀಯ ಹಾಗೂ ಅನಿವಾಸಿ ಭಾರತೀಯರು ಈ ಯೋಜನೆಯಲ್ಲಿ ಠೇವಣಿ ಇಡಬಹುದು. ರೆಗ್ಯುಲರ್‌ ಗ್ರಾಹಕರಿಗೆ 7.1% ಮತ್ತು ಹಿರಿಯ ಗ್ರಾಹಕರಿಗೆ 7.6% ಬಡ್ಡಿ ಸಿಗುತ್ತದೆ.

ತೆರಿಗೆ ವ್ಯವಸ್ಥೆ (Income Tax)

2023-24ರ ಹಣಕಾಸು ವರ್ಷದಿಂದ ಸರ್ಕಾರ ಹಳೆಯ ತೆರಿಗೆ ಪದ್ಧತಿ ಜತೆಗೆ ಹೊಸ ಆದಾಯ ತೆರಿಗೆ ಪದ್ಧತಿಯನ್ನೂ ಸೇರಿಸಿದೆ. ಹೊಸ ಟ್ಯಾಕ್ಸ್ ರೆಜಿಮೆ ಡೀಫಾಲ್ಟ್ ಆಗಿರಲಿದೆ. ನೀವು ಈಗಾಗಲೇ ಓಲ್ಡ್ ಟ್ಯಾಕ್ಸ್ ರೆಜಿಮೆಯಲ್ಲಿಯೇ ಇದ್ದರೆ ಹೊಸ ಹಣಕಾಸು ವರ್ಷಕ್ಕೂ ಅದರಲ್ಲೇ ಮುಂದುವರಿಸಬಹುದು. ಒಂದು ವೇಳೆ ನೀವು ಓಲ್ಡ್ ಟ್ಯಾಕ್ಸ್ ರೆಜಿಮೆ ಆಯ್ಕೆ ಮಾಡಿಕೊಳ್ಳದೇ ಇದ್ದಲ್ಲಿ ಹೊಸ ತೆರಿಗೆ ಪದ್ಧತಿಯೇ ಡೀಫಾಲ್ಟ್ ಆಗಿರುತ್ತದೆ. ಒಮ್ಮೆ ನೀವು ಹೊಸ ತೆರಿಗೆ ಪದ್ಧತಿಯಲ್ಲಿ ರಿಟರ್ನ್ ಫೈಲ್ ಮಾಡಿದರೆ ಅದರಲ್ಲೇ ಮುಂದುವರಿಯಬೇಕು.

ಇದನ್ನೂ ಓದಿ: Money Guide: ಆದಾಯ ತೆರಿಗೆ ರಿಟರ್ನ್‌ ಸಲ್ಲಿಸಲು ಎಷ್ಟು ಬಗೆಯ ಫಾರ್ಮ್‌ಗಳಿವೆ? ನಿಮಗೆ ಯಾವುದು ಸೂಕ್ತ? ಚೆಕ್‌ ಮಾಡಿ

Continue Reading

ಮನಿ-ಗೈಡ್

Money Guide: ಮೊಬೈಲ್‌ನಲ್ಲಿಯೇ ಪಿಎಫ್‌ ಮೊತ್ತ ಪರಿಶೀಲಿಸಬೇಕೆ?; ಜಸ್ಟ್‌ ಹೀಗೆ ಮಾಡಿ ಸಾಕು

Money Guide: ಉದ್ಯೋಗಿಗಳ ಉಳಿತಾಯ ಮನೋಭಾವವನ್ನು ಉತ್ತೇಜಿಸಲು ನೌಕರರ ಭವಿಷ್ಯ ನಿಧಿ (ಇಪಿಎಫ್‌) ಯೋಜನೆಯನ್ನು ಜಾರಿಗೆ ತರಲಾಗಿದೆ. ಇದರಲ್ಲಿ ನಿಮ್ಮ ಜತೆಗೆ ನಿಮ್ಮ ಉದ್ಯೋಗದಾತ ಸಂಸ್ಥೆಯೂ ಕೊಡುಗೆ ನೀಡುತ್ತದೆ. ಇದರ ಬ್ಯಾಲನ್ಸ್‌ ಅನ್ನು ನೀವು ಮೊಬೈಲ್‌ನಲ್ಲಿಯೇ ಆನ್‌ಲೈನ್‌ / ಆಫ್‌ಲೈನ್‌ ಮೂಲಕ ಪರಿಶೀಲಿಸಬಹುದು. ಅದು ಹೇಗೆ ಎನ್ನುವ ವಿವರ ಇಲ್ಲಿದೆ.

VISTARANEWS.COM


on

money guide
Koo

ಬೆಂಗಳೂರು: ನೌಕರರ ಭವಿಷ್ಯ ನಿಧಿ (Employees’ Provident Fund) ಅತ್ಯುತ್ತಮ ನಿವೃತ್ತಿ ಉಳಿತಾಯ ಆಯ್ಕೆ ಎನಿಸಿಕೊಂಡಿದೆ. ಈ ಯೋಜನೆಯಲ್ಲಿ ಉದ್ಯೋಗಿಗಳು ಮತ್ತು ಉದ್ಯೋಗದಾತರಿಂದ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ಉಳಿತಾಯವನ್ನು ಉತ್ತೇಜಿಸಲಾಗುತ್ತದೆ. ನಿವೃತ್ತಿಗಾಗಿ ಉಳಿತಾಯ ಮಾಡಲು ಇಪಿಎಫ್ ಒಂದು ಸುಲಭ ಮಾರ್ಗ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಇದು ನಿಮ್ಮ ಸಂಬಳದಿಂದ ಸ್ವಯಂಚಾಲಿತವಾಗಿ ಕಡಿತಗೊಳ್ಳುವುದರಿಂದ ಪ್ರತ್ಯೇಕವಾಗಿ ಹೂಡಿಕೆ ಮಾಡಬೇಕಾಗಿಲ್ಲ. ಇನ್ನೊಂದು ಮುಖ್ಯ ಅನುಕೂಲ ಎಂದರೆ ತುರ್ತು ಪರಿಸ್ಥಿತಿಯಲ್ಲಿ ಈ ಅಕೌಂಟ್‌ನಿಂದ ಒಂದಷ್ಟು ಹಣವನ್ನು ಹಿಂಪಡೆಯಬಹುದು. ಇದಕ್ಕಾಗಿ ನಿವೃತ್ತಿವರೆಗೆ ಕಾಯಬೇಕಾಗಿಲ್ಲ. ಇಂದಿನ ಮನಿಗೈಡ್‌ (Money Guide)ನಲ್ಲಿ ನಿಮ್ಮ ಇಪಿಎಫ್‌ ಬ್ಯಾಲನ್ಸ್‌ ಅನ್ನು ಮೊಬೈಲ್‌ನಲ್ಲೇ ಹೇಗೆ ನೋಡಬಹುದು ಎನ್ನುವ ವಿವರವಿದೆ.

ಎಪಿಎಫ್‌ ಖಾತೆಯ ವೈಶಿಷ್ಟ್ಯ

  • ಉದ್ಯೋಗಿಗಳ ಕೊಡುಗೆ ಸಾಮಾನ್ಯವಾಗಿ ಮೂಲ ವೇತನದ ಶೇ. 12ರಷ್ಟಿರುತ್ತದೆ.
  • ಉದ್ಯೋಗದಾತರ ಕೊಡುಗೆ ನಿಮ್ಮ ಮೂಲ ವೇತನ ಮತ್ತು ತುಟ್ಟಿಭತ್ಯೆಯ ಶೇ. 12ಕ್ಕೆ ಸಮನಾಗಿರುತ್ತದೆ. ಉದ್ಯೋಗದಾತರ ಕೊಡುಗೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ: ಅವೆಂದರೆ- ಇಪಿಎಫ್ ಮತ್ತು ನೌಕರರ ಪಿಂಚಣಿ ಯೋಜನೆ(ಇಪಿಎಸ್).
  • ಹೀಗೆ ನಿಮ್ಮ ಮತ್ತು ಉದ್ಯೋಗದಾತರ ಕೊಡುಗೆಗಳೊಂದಿಗೆ ಪ್ರತಿ ತಿಂಗಳು ನಿವೃತ್ತಿಗಾಗಿ ಗಣನೀಯ ಮೊತ್ತವನ್ನು ಮೀಸಲಿಡಲಾಗುತ್ತದೆ. ಇದು ಭಾರತದಲ್ಲಿ ಕಡ್ಡಾಯ.

ಬ್ಯಾಲನ್ಸ್‌ ಪರಿಶೀಲಿಸುವುದು ಹೇಗೆ?

ವೆಬ್‌ಸೈಟ್‌

  • ಇಪಿಎಫ್ಒ ವೆಬ್‌ಸೈಟ್‌  www.epfindia.gov.in ವೆಬ್‌ಸೈಟ್‌ಗೆ ಭೇಟಿ ನೀಡಿ. 
  • ಬಳಿಕ ‘Our Services’ ಆಯ್ಕೆಯ ಒಳಗೆ ಬರುವ ‘For Employees’ ಅನ್ನು ಸೆಲೆಕ್ಟ್‌ ಮಾಡಿ.
  • ನಂತರ ‘Services’ ಆಯ್ಕೆ ಕ್ಲಿಕ್‌ ಮಾಡಿ
  • ‘Member Passbook’ ಸೆಲೆಕ್ಟ್‌ ಮಾಡಿ.
  • ಈಗ ಯುಎಎನ್‌ ನಂಬರ್‌, ಪಾಸ್‌ವರ್ಡ್‌, ಕ್ಯಾಪ್ಚಾ ನಮೂದಿಸಿದರೆ ವಿವರ ಲಭ್ಯವಾಗುತ್ತದೆ.

ಉಮಾಂಗ್ ಆ್ಯಪ್‌

ಗೂಗಲ್‌ ಪ್ಲೇ ಸ್ಟೋರ್‌ ಅಥವಾ ಆ್ಯಪಲ್‌ ಆ್ಯಪ್‌ ಸ್ಟೋರ್‌ನಲ್ಲಿ ‘UMANG’ ಆ್ಯಪ್‌ ಡೌನ್‌ಲೋಡ್‌ ಮಾಡಿ. ಬಳಿಕ ನಿಮ್ಮ ಹೆಸರು ನೋಂದಾಯಿಸಿ. ‘Service’ ಆಯ್ಕೆ ಕ್ಲಿಕ್‌ ಮಾಡಿ. ನಂತರ ‘View Passbook’ ಕ್ಲಿಕ್‌ ಮಾಡಿ. ಅದಾದ ಬಳಿಕ ‘Employee-centric service’ ಆಪ್ಶನ್‌ ಆಯ್ಕೆ ಮಾಡಿ. ಮುಂದಿನ ಹಂತದಲ್ಲಿ ಮತ್ತೊಂದು ಹೊಸ ಪುಟ ತೆರೆಯುತ್ತದೆ. ಇಪಿಎಫ್ಒನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗಿದೆ ಎಂಬ ಸಂದೇಶ ಇದರಲ್ಲಿ ಮೂಡುತ್ತದೆ. ಒಮ್ಮೆ ನೀವು ಒಟಿಪಿಯನ್ನು ನಮೂದಿಸಿ ಮತ್ತು ‘OK’ ಬಟನ್ ಕ್ಲಿಕ್ ಮಾಡಿದ ನಂತರ, ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಇಪಿಎಫ್ ಪಾಸ್‌ಬುಕ್‌ ಅನ್ನು ನೋಡಬಹುದು ಮತ್ತು ನಿಮ್ಮ ಇಪಿಎಫ್ ಬ್ಯಾಲೆನ್ಸ್ ಪರಿಶೀಲಿಸಬಹುದು.

ಎಸ್‌ಎಂಎಸ್‌

ನಿಮ್ಮ ಮೊಬೈಲ್‌ ನಂಬರ್‌ ಯುಎಎನ್ ಇಪಿಎಫ್ಒನಲ್ಲಿ ನೋಂದಾಯಿಸಲ್ಪಟ್ಟಿದ್ದರೆ, 7738299899 ಎಸ್ಎಂಎಸ್ ಕಳುಹಿಸುವ ಮೂಲಕ ಪಿಎಫ್ ಬ್ಯಾಲೆನ್ಸ್ ವಿವರಗಳನ್ನು ನೀವು ಪಡೆಯಬಹುದು. 7738299899 ನಂಬರ್‌ಗೆ EPFOHO UAN ENG ಎಂದು ಸಂದೇಶ ಕಳುಹಿಸಿ.

ಮಿಸ್ಡ್ ಕಾಲ್

ಮಿಸ್ಡ್ ಕಾಲ್ ಕೊಡುವ ಮೂಲಕವೂ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಬಹುದು. ಅದಕ್ಕಾಗಿ ನೀವು 011-22901406 ನಂಬರ್‌ಗೆ ನೋಂದಾಯಿಸಿದ ಮೊಬೈಲ್‌ ನಂಬರ್‌ನಿಂದ ಮಿಸ್ಡ್ ಕಾಲ್ ಕೊಡಿ.

ಇದನ್ನೂ ಓದಿ: Money Guide: ಎನ್‌ಪಿಎಸ್‌ನಲ್ಲಿ ಸಿಪ್‌; ನಿವೃತ್ತಿ ಜೀವನಕ್ಕೆ ಉತ್ತಮ ಕೊಡುಗೆ; ನೋಂದಣಿಯ ಸಂಪೂರ್ಣ ವಿವರ ಇಲ್ಲಿದೆ

Continue Reading
Advertisement
Lok Sabha Election 2024 BJP JDS coordination committee meeting successful Fight to win with the workers
Lok Sabha Election 20246 mins ago

Lok Sabha Election 2024: ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆ ಯಶಸ್ವಿ; ಎಲೆಕ್ಷನ್‌ ಗೆಲ್ಲಲು ಮಾಸ್ಟರ್‌ ಪ್ಲ್ಯಾನ್!

tcs jobs IT hiring
ಉದ್ಯೋಗ8 mins ago

IT Hiring: ಟಿಸಿಎಸ್‌ನಲ್ಲಿ ಫ್ರೆಶರ್‌ಗಳಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಸುವುದು ಹೇಗೆ? ಯಾವಾಗ ಕೊನೆಯ ದಿನ?

Road Accident
ಬೆಂಗಳೂರು ಗ್ರಾಮಾಂತರ10 mins ago

Road Accident : ತಲೆ ಮೇಲೆ ಹರಿದ ಲಾರಿ; ಅರಣ್ಯ ಇಲಾಖೆ ಸಿಬ್ಬಂದಿ ಸಾವು, ಮತ್ತೊಬ್ಬ ಗಂಭೀರ

Sonarika Bhadoria
ಕಿರುತೆರೆ19 mins ago

Sonarika Bhadoria: ಹನಿಮೂನ್‌ನ ಹಾಟ್‌ ಫೋಟೊ ಶೇರ್‌ ಮಾಡಿದ ಹಿಂದಿ ಸೀರಿಯಲ್‌ ನಟಿ!

Riyan Parag
ಕ್ರೀಡೆ31 mins ago

Riyan Parag: 3 ದಿನ ನೋವು ನಿವಾರಕ ಮಾತ್ರೆ ಸೇವಿಸಿ ಹಾಸಿಗೆಯಲ್ಲಿದ್ದೆ; ಪಂದ್ಯಶ್ರೇಷ್ಠ ಪ್ರಶಸ್ತಿ ವೇಳೆ ಭಾವುಕರಾದ ​ಪರಾಗ್

Accident Case
ತುಮಕೂರು44 mins ago

Accident Case : ಮರ ಕಡಿಯುವಾಗ ಕರೆಂಟ್‌ ಶಾಕ್‌ಗೆ ಬಲಿ; ಹುಣಸೆ ಹಣ್ಣು ಕೊಯ್ಯುವಾಗ ಬಿದ್ದು ಸಾವು

shani louk photo hamas terrorists
ವಿದೇಶ58 mins ago

Shani Louk Photo: ಹಮಾಸ್‌ ಒತ್ತೆಯಾಳು ಇಸ್ರೇಲಿ ಮಹಿಳೆಯ ನಗ್ನ ದೇಹದ ಫೋಟೋಗೆ ಪ್ರಶಸ್ತಿ; ಆಕ್ರೋಶ; ಉಗ್ರನೇ ತೆಗೆದ ಫೋಟೋನಾ?

Rahul Gandhi And Sonia Gandhi
ದೇಶ60 mins ago

Congress: ಕಾಂಗ್ರೆಸ್‌ಗೆ ಐಟಿ ಮತ್ತೊಂದು ಶಾಕ್;‌ 1,700 ಕೋಟಿ ರೂ. ಟ್ಯಾಕ್ಸ್ ನೋಟಿಸ್‌ ಜಾರಿ‌

Karimani Malika Ninalla play by violinist Aneesh Vidyashankar
ವೈರಲ್ ನ್ಯೂಸ್1 hour ago

Karimani Malika Ninalla: ʻಕರಿಮಣಿ ಮಾಲೀಕʼ ರೀಲ್ಸ್‌ಗೆ ಇನ್ನಷ್ಟು ಮೆರುಗು ನೀಡಿದ ವಯೋಲಿನ್‌ ವಾದಕ!

Karnataka Weather
ಮಳೆ1 hour ago

Karnataka Weather: 28 ವರ್ಷಗಳ ಬಳಿಕ ಬೆಂಗಳೂರಲ್ಲಿ ದಾಖಲೆಯ ತಾಪಮಾನ; ಇನ್ನೊಂದು ವಾರ ಕಾದ ಕೆಂಡ

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ9 hours ago

Dina Bhavishya : ಗೌಪ್ಯ ವಿಷಯಗಳು ಬಹಿರಂಗವಾಗದಿರಲಿ; ಈ ರಾಶಿಯವರು ಎಚ್ಚರಿಕೆ ವಹಿಸಿ

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 20241 day ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20241 day ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ1 day ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 20242 days ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20242 days ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20242 days ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ2 days ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು3 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ3 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

ಟ್ರೆಂಡಿಂಗ್‌