ವಾಣಿಜ್ಯ
Gold-Silver Rate Today: ಚಿನ್ನದ ಬೆಲೆ ಇಳಿಕೆ, ಬೆಳ್ಳಿ ದರದಲ್ಲಿ ಹೆಚ್ಚಳ; ಇಲ್ಲಿದೆ ನೋಡಿ ಇಂದಿನ ಮೌಲ್ಯ
ಭಾರತ ವಿಶ್ವದಲ್ಲಿಯೇ ಎರಡನೆಯ ಅತಿ ದೊಡ್ಡ ಬಂಗಾರದ ( Gold rate ) ಮಾರುಕಟ್ಟೆಯಾಗಿದೆ. ಚೀನಾ ಬಿಟ್ಟರೆ ಅತಿ ಹೆಚ್ಚು ಚಿನ್ನ ಕೊಳ್ಳುವ ದೇಶ ಜಗತ್ತಿನಲ್ಲಿ ಯಾವುದಾದರೂ ಇದ್ದರೆ ಅದು ಭಾರತ ಮಾತ್ರ. ಈಗಂತೂ ಮದುವೆ ಮತ್ತಿತರ ಸಮಾರಂಭಗಳ ಕಾಲ ಆಗಿದ್ದರಿಂದ ಬೆಳ್ಳಿ-ಬಂಗಾರ ಕೊಳ್ಳುವಿಕೆ ಹೆಚ್ಚಿದೆ.
ಚಿನ್ನ- ಬೆಳ್ಳಿ ಬೆಲೆಯಲ್ಲಿ (Gold-Silver Rate Today)ಏರಿಳಿತ ಆಗುತ್ತಿದೆ. ಇಂದು ದೇಶದಲ್ಲಿ ಒಟ್ಟಾರೆ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ ನಿನ್ನೆಗಿಂತಲೂ ಇಂದು 100 ರೂಪಾಯಿ ಕಡಿಮೆಯಾಗಿದೆ. ನಿನ್ನೆ 55,650 ರೂಪಾಯಿ ಇದ್ದಿದ್ದು, ಇಂದು 55,550 ರೂ.ಗೆ ಇಳಿಕೆಯಾಗಿದೆ. ಹಾಗೇ, 24 ಕ್ಯಾರೆಟ್ನ 10 ಗ್ರಾಂ ಬಂಗಾರದ ಬೆಲೆ 110 ರೂಪಾಯಿ ಇಳಿಕೆಯಾಗಿದೆ. ಅಂದರೆ ನಿನ್ನೆ 60,710 ರೂಪಾಯಿ ಇದ್ದಿದ್ದು, ಇಂದು 60,600ರೂ.ಗೆ ತಗ್ಗಿದೆ. ಆದರೆ ಬೆಳ್ಳಿ ಬೆಲೆ ಏರಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ಬೆಲೆ ನಿನ್ನೆ 72,900 ರೂ.ಇತ್ತು. ಅದು ಇಂದು 73000 ರೂ.ಏರಿಕೆಯಾಗಿದೆ.
ಬೆಂಗಳೂರಲ್ಲಿ ಎಷ್ಟಿದೆ ಚಿನ್ನ-ಬೆಳ್ಳಿ ಬೆಲೆ?
22 ಕ್ಯಾರೆಟ್ ಚಿನ್ನ: 1 ಗ್ರಾಂ: 5,560ರೂ., 8 ಗ್ರಾಂ: 44,480 ರೂ., 10 ಗ್ರಾಂ: 55,600 ರೂ. 100 ಗ್ರಾಂ: 5,56,000ರೂ.
24 ಕ್ಯಾರೆಟ್ ಚಿನ್ನ: 1 ಗ್ರಾಂ: 6,065 ರೂ., 8 ಗ್ರಾಂ: 48,520 ರೂ. ಗ್ರಾಂ, 10 ಗ್ರಾಂ: 60,650 ರೂ., 100 ಗ್ರಾಂ: 6,06,500 ರೂ.
ಬೆಳ್ಳಿಯ ಬೆಲೆ: 1 ಗ್ರಾಂ:77 ರೂ., 8 ಗ್ರಾಂ: 616 ರೂ., 10 ಗ್ರಾಂ: 770 ರೂ., 100 ಗ್ರಾಂ:7700 ರೂ, 1 ಕೆಜಿ: 77000 ರೂ.
ಇದನ್ನೂ ಓದಿ: Gold Price Today: ಚಿನ್ನ-ಬೆಳ್ಳಿ ದರದಲ್ಲಿ ಇಂದು ಮತ್ತೆ ಇಳಿಕೆ; ಬೆಂಗಳೂರಿನಲ್ಲಿ ಎಷ್ಟಿದೆ ಬೆಲೆ?
ಭಾರತ ವಿಶ್ವದಲ್ಲಿಯೇ ಎರಡನೆಯ ಅತಿ ದೊಡ್ಡ ಬಂಗಾರದ ( Gold rate ) ಮಾರುಕಟ್ಟೆಯಾಗಿದೆ. ಚೀನಾ ಬಿಟ್ಟರೆ ಅತಿ ಹೆಚ್ಚು ಚಿನ್ನ ಕೊಳ್ಳುವ ದೇಶ ಜಗತ್ತಿನಲ್ಲಿ ಯಾವುದಾದರೂ ಇದ್ದರೆ ಅದು ಭಾರತ ಮಾತ್ರ. ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಜನ ಸಂಖ್ಯೆಯ ಹೆಚ್ಚಳ, ವಿವಾಹ ಸಮಾರಂಭಗಳ ಏರಿಕೆ, ಹಬ್ಬಗಳ ಸಂಭ್ರಮ, ಜನರ ಆದಾಯದಲ್ಲಿ ಏರಿಕೆ, ನಗರೀಕರಣ ಮೊದಲಾದ ಕಾರಣಗಳಿಂದ ಚಿನ್ನದ ಖರೀದಿ ಗಣನೀಯ ಏರಿಕೆಯಾಗುತ್ತಿದೆ. ಈ ಟ್ರೆಂಡ್ ಮತ್ತಷ್ಟು ಹೆಚ್ಚಳವಾಗಲಿದೆ ಎಂದು ವರ್ಲ್ಡ್ ಗೋಲ್ಡ್ ಕೌನ್ಸಿಲ್ ತನ್ನ ವರದಿಯಲ್ಲಿ ತಿಳಿಸಿದೆ. ಈ ವರದಿ ಹಲವು ಸ್ವಾರಸ್ಯಕರ ಅಂಶಗಳನ್ನು ಬಹಿರಂಗಪಡಿಸಿದೆ.
ವಾಣಿಜ್ಯ
Gold Rate Today: ಚಿನ್ನ-ಬೆಳ್ಳಿ ಖರೀದಿಗೆ ಹೊರಟಿದ್ದರೆ ಸ್ವಲ್ಪ ನಿಲ್ಲಿ; ಇಂದಿನ ದರ ಇಲ್ಲಿದೆ, ಚೆಕ್ ಮಾಡಿಕೊಳ್ಳಿ
ಹಾಗೇ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಟ್ರಾಯ್ ಔನ್ಸ್ ಚಿನ್ನದ ಬೆಲೆ 1,947.24 ಡಾಲರ್ ಇತ್ತು. ಇದು ನಿನ್ನೆಯ ಕ್ಲೋಸಿಂಗ್ ಟ್ರೇಡ್ಗಿಂತಲೂ ಶೇ.1.67ರಷ್ಟು ಇಳಿಕೆಯಾಗಿದೆ.
ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿರುವುದು (Gold Rate Today) ಗ್ರಾಹಕರಿಗೆ ಸಮಾಧಾನ ಕೊಟ್ಟಿದೆ. ಬಹು ಸರಕು ವಿನಿಯಮ ಕೇಂದ್ರದಲ್ಲಿ ಇಂದು ಮಧ್ಯಾಹ್ನದ ಹೊತ್ತಿಗೆ 22 ಕ್ಯಾರೆಟ್ನ 10 ಗ್ರಾಂ. ಚಿನ್ನದ ಬೆಲೆ 59,425 ರೂಪಾಯಿ ಇದೆ. ಹಾಗೇ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಟ್ರಾಯ್ ಔನ್ಸ್ ಚಿನ್ನದ ಬೆಲೆ 1,947.24 ಡಾಲರ್ ಇತ್ತು. ಇದು ನಿನ್ನೆಯ ಕ್ಲೋಸಿಂಗ್ ಟ್ರೇಡ್ಗಿಂತಲೂ ಶೇ.1.67ರಷ್ಟು ಇಳಿಕೆಯಾಗಿದೆ. ಹಾಗೇ, ಬಹು ಸರಕು ವಿನಿಮಯ ಕೇಂದ್ರದಲ್ಲಿ ಬೆಳ್ಳಿ ದರ (Silver Rate Today) ಆರಂಭಿಕ ವ್ಯಾಪಾರದಲ್ಲಿ ಕೆಜಿಗೆ 71,901ರೂ. ಇತ್ತು. ಅದು ಮಧ್ಯಾಹ್ನದ ಹೊತ್ತಿಗೆ ಕೆಜಿಗೆ 71,741ರೂ ತಲುಪಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ ಟ್ರಾಯ್ ಔನ್ಸ್ಗೆ 23.59 ಡಾಲರ್ಗಳಷ್ಟಿದೆ.
ದೇಶದಲ್ಲಿ ಚಿನ್ನ-ಬೆಳ್ಳಿ ದರ ಎಷ್ಟು?
22 ಕ್ಯಾರೆಟ್ ಚಿನ್ನ: 1 ಗ್ರಾಂ-5,530 ರೂ., 8 ಗ್ರಾಂ-44,240ರೂ., 10 ಗ್ರಾಂ-55,300ರೂ., 100 ಗ್ರಾಂ-5,53,000 ರೂ.
24 ಕ್ಯಾರೆಟ್ ಚಿನ್ನ; 1 ಗ್ರಾಂ-6033 ರೂ., 8 ಗ್ರಾಂ-48,264 ರೂ., 10 ಗ್ರಾಂ-60,330 ರೂ., 100 ಗ್ರಾಂ-6,03,300 ರೂ.
ಬೆಳ್ಳಿಯ ಬೆಲೆ: 1 ಗ್ರಾಂ-73 ರೂ., 8ಗ್ರಾಂ-584 ರೂ., 10 ಗ್ರಾಂ-730 ರೂ., 100 ಗ್ರಾಂ-7300 ರೂ., 1 ಕೆಜಿ-73,000 ರೂ.
ಬೆಂಗಳೂರಿನಲ್ಲಿ ಚಿನ್ನ-ಬೆಳ್ಳಿ ಬೆಲೆ
22 ಕ್ಯಾರೆಟ್ ಚಿನ್ನ: 1 ಗ್ರಾಂ- 5,535 ರೂ., 8 ಗ್ರಾಂ-44,280 ರೂ., 10 ಗ್ರಾಂ-55,350 ರೂ., 100 ಗ್ರಾಂ-5,53,500ರೂ.
24 ಕ್ಯಾರೆಟ್ ಚಿನ್ನ: 1 ಗ್ರಾಂ- 6,038 ರೂ., 8 ಗ್ರಾಂ-48,304 ರೂ., 10 ಗ್ರಾಂ-60,380 ರೂ., 100 ಗ್ರಾಂ-6,03,800 ರೂ.
ಬೆಳ್ಳಿ ಬೆಲೆ: 1 ಗ್ರಾಂ-74.50 ರೂ., 8 ಗ್ರಾಂ- 596 ರೂಪಾಯಿ., 10 ಗ್ರಾಂ-745 ರೂ., 100 ಗ್ರಾಂ-7,450 ರೂಪಾಯಿ., 1 ಕೆಜಿ-74,500 ರೂಪಾಯಿ.
ಇದನ್ನೂ ಓದಿ: Abhishek Ambareesh Wedding: ಮದುವೆಗೂ ಮುನ್ನ ಅವಿವಗೆ ಸಿಕ್ತು ಚಿನ್ನದ ಸರ; ಇದರ ಸ್ಪೆಷಾಲಿಟಿ ಏನು?
ಜಾಗತಿಕ ಆರ್ಥಿಕ ಸ್ಥಿತಿಗತಿ, ಹಣದುಬ್ಬರ, ಕರೆನ್ಸಿ ವಿನಿಮಯ, ಸ್ಥಳೀಯ ಬೇಡಿಕೆ, ಪೂರೈಕೆ ಆಧಾರದ ಮೇಲೆ ಚಿನ್ನ-ಬೆಳ್ಳಿ ಬೆಲೆ ನಿರ್ಧಾರವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಚಿನ್ನ-ಬೆಳ್ಳಿ ಬೆಲೆ ಒಂದು ವಾರ ಸತತ ಏರಿಕೆ ಕಂಡರೆ, ಇನ್ನೊಂದು ಮೂರ್ನಾಲ್ಕು ದಿನ ನಿರಂತರವಾಗಿ ಇಳಿಕೆಯಾಗುತ್ತಿದೆ. ಚೀನಾವನ್ನು ಬಿಟ್ಟರೆ, ಚಿನ್ನವನ್ನು ಅತಿ ಹೆಚ್ಚಾಗಿ ಖರೀದಿ ಮಾಡುವ ದೇಶ ಭಾರತ. ಅಂದಹಾಗೇ, ಬೆಂಗಳೂರಲ್ಲಿ ಕಳೆದ ಮೂರುದಿನಗಳಿಂದಲೂ ಚಿನ್ನ-ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಆಟೋಮೊಬೈಲ್
EV Battery Plant: ಗುಜರಾತಕ್ಕೆ ಜಾಕ್‌ಪಾಟ್, ಟಾಟಾದಿಂದ ಬೃಹತ್ ಇವಿ ಬ್ಯಾಟರಿ ಫ್ಯಾಕ್ಟರಿ, 13000 ಜನರಿಗೆ ಉದ್ಯೋಗ ಖಾತರಿ
EV Battery Plant: ಟಾಟಾ ಗ್ರೂಪ್‌ನ ಅಂಗಸಂಸ್ಥೆಯಾದ ಅಗರತಾಸ್, ಗುಜರಾತ್‌ನಲ್ಲಿ 13000 ಕೋಟಿ ರೂ. ವೆಚ್ಚದಲ್ಲಿ ಇವಿ ಬ್ಯಾಟರಿ ಘಟಕವನ್ನು ಆರಂಭಿಸಲು ಮುಂದಾಗಿದೆ. ಈ ಬಗ್ಗೆ ಗುಜರಾತ್ ಸರ್ಕಾರದ ಜತೆಗೆ ಒಡಂಬಡಿಕೆಯನ್ನು ಮಾಡಿಕೊಂಡಿದೆ.
ನವದೆಹಲಿ: ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಕಂಪನಿಯು (Tata Group) ಇದೀಗ ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ಎಲೆಕ್ಟ್ರಿಕ್ ವಾಹನಗಳ (electric vehicle) ಬಳಕೆಯನ್ನು ಹೆಚ್ಚಿಸಲು ಮತ್ತು ಮೂಲ ಸೌಕರ್ಯವನ್ನು ಕಲ್ಪಿಸುವುದಕ್ಕಾಗಿ ಟಾಟಾ ಕಂಪನಿಯು ಗುಜರಾತ್‌ನಲ್ಲಿ (Gujarat) 13000 ಕೋಟಿ ರೂ.ವೆಚ್ಚದ ಬೃಹತ್ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ತಯಾರಿಕಾ ಘಟಕವನ್ನು (EV Battery Plant) ಆರಂಭಿಸಲಿದೆ. ಈ ಸಂಬಂಧ ಟಾಟಾ ಕಂಪನಿಯು ಗುಜರಾತ್ ಸರ್ಕಾರದೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಿದೆ. ಟಾಟಾ ಗ್ರೂಪ್‌ನ ಅಂಗಸಂಸ್ಥೆಯಾದ ಟಾಟಾ ಅಗರತಾಸ್ ಎನರ್ಜಿ ಸ್ಟೋರೇಜ್ ಸೊಲ್ಯೂಷನ್ಸ್ ಪ್ರೈವೇಟ್ (Agaratas Energy Storage Solutions Pvt) ಶುಕ್ರವಾರ 20 ಗಿಗಾವ್ಯಾಟ್ ಗಂಟೆಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿರುವ ವಿದ್ಯುತ್-ವಾಹನ ಬ್ಯಾಟರಿ ಘಟಕವನ್ನು ಸ್ಥಾಪಿಸಲು ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದೆ. ಇದು 13,000 ಕ್ಕೂ ಹೆಚ್ಚು ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗವನ್ನು ಸೃಷ್ಟಿಸುತ್ತದೆ ಎಂದು ಕಂಪನಿಯ ಜಾಲತಾಣದಲ್ಲಿ ತಿಳಿಸಲಾಗಿದೆ.
2070ರ ಹೊತ್ತಿಗೆ ಭಾರತವನ್ನು ಶೂನ್ಯ ಕಾರ್ಬನ್ ರಾಷ್ಟ್ರವನ್ನಾಗಿ ಮಾಡಲು ಕೇಂದ್ರ ಸರ್ಕಾರ ನಾನಾ ಯೋಜನೆಗಳನ್ನು ಹಾಕಿಕೊಂಡಿದೆ. ಈ ವಿಷಯದಲ್ಲಿ ಭಾರತವು ಈಗಲೂ ಚೀನಾ, ಅಮೆರಿಕ ಸೇರಿದಂತೆ ಕೆಲವು ರಾಷ್ಟ್ರಗಳ ಹಿಂದೆಯೇ ಇದೆ. ಟಾಟಾ ಘಟಕವು ಗುಜರಾತ್ ಅನ್ನು ಲಿಥಿಯಂ-ಬ್ಯಾಟರಿ ಉತ್ಪಾದನೆಯಲ್ಲಿ ಮುಂಚೂಣಿಗೆ ತರಲಿದೆ. ರಾಜ್ಯದಲ್ಲಿ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸಲು ಗುಂಪು ಸಹಾಯವನ್ನು ಪಡೆಯುತ್ತದೆ ಎಂದು ರಾಜ್ಯ ಸರ್ಕಾರ ಹೇಳಿದೆ. ಆದರೆ, ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು, ಟಾಟಾ ಸಮೂಹದ ಪ್ರತಿನಿಧಿಯೊಬ್ಬರು ನಿರಾಕರಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಟಾಟಾ ಗ್ರೂಪ್‌ನ ಈ ನಿರ್ಧಾರವು ಅದರ ಜಾಗ್ವಾರ್ ಲ್ಯಾಂಡ್ ರೋವರ್ ಘಟಕವು ಬ್ರಿಟನ್‌ನಲ್ಲಿ ಪ್ರಮುಖ ಇವಿ ಬ್ಯಾಟರಿ ಸ್ಥಾವರವನ್ನು ಸ್ಥಾಪಿಸಲು ಪರಿಗಣಿಸುತ್ತಿರುವ ಸಮಯದಲ್ಲಿ ಬಂದಿದೆ. ಬ್ರಿಟನ್ ಸರ್ಕಾರವು ಬೆಂಬಲ ಪ್ಯಾಕೇಜ್ ಅನ್ನು ನೀಡಿದ ನಂತರ ಟಾಟಾ ಸ್ಪೇನ್‌ಗಿಂತ ಇಂಗ್ಲೆಂಡ್‌ನಲ್ಲಿ ಕಾರ್ಖಾನೆಯನ್ನು ಆರಂಭಿಸಲು ಮುಂದಾಗಿದೆ ಎಂದು ಬ್ಲೂಮ್‌ಬರ್ಗ್ ಮೇನಲ್ಲಿ ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಈ ಸುದ್ದಿಯನ್ನೂ ಓದಿ: Subsidy on E-Vehicle : ಎಲೆಕ್ಟ್ರಿಕ್ ವಾಹನಗಳಿಗೆ ಸಿಗಲಿದೆ 2.5 ಲಕ್ಷ ರೂ. ತನಕ ಸಬ್ಸಿಡಿ, ಇಲ್ಲಿದೆ ಡಿಟೇಲ್ಸ್
ಭಾರತದಲ್ಲೂ ಸಾಂಪ್ರದಾಯಿಕ ಇಂಧನ ಆಧಾರಿತ ವಾಹನಗಳ ಬದಲಿಗೆ ಬ್ಯಾಟರಿ ಆಧರಿತ ವಾಹನಗಳ ಬಳಕೆಗೆ ಸಾಕಷ್ಟು ಉತ್ತೇಜನ ನೀಡಲಾಗುತ್ತಿದೆ. ಉತ್ಪಾದನಾ ಕಂಪನಿಗಳಿಗೂ, ಬಳಕೆದಾರರಿಗೂ ಸಾಕಷ್ಟು ಲಾಭಗಳನ್ನು ಮಾಡಿಕೊಡಲಾಗುತ್ತಿದೆ. ಆದರೆ, ದೇಶದಲ್ಲಿ ಇನ್ನೂ ವಿದ್ಯುತ್ ಚಾಲಿತ ವಾಹನಗಳಿಗೆ ಅಗತ್ಯವಾಗಿರುವ ಮೂಲಸೌಕರ್ಯದ ಕೊರತೆಗಳು ಎದ್ದು ಕಾಣುತ್ತಿದೆ.
ಆಟೋಮೊಬೈಲ್‌ನ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಅಂಕಣ
Brand story : ಜಗತ್ತನ್ನೇ ದಂಗುಬಡಿಸಿದ ಚಾಟ್‌ಜಿಪಿಟಿ ಜನಕ ಓಪನ್‌ಎಐನಲ್ಲಿ ಇನ್ಫೋಸಿಸ್ ಹಣ ಹೂಡಿದ್ದೇಕೆ?!
Brand story ಜಗತ್ತಿನಾದ್ಯಂತ ತಂತ್ರಜ್ಞಾನ ಮತ್ತು ಕಾರ್ಪೊರೇಟ್ ವಲಯದಲ್ಲಿ ಈಗ ಚಾಟ್ ಜಿಪಿಟಿಯದ್ದೇ ಮಾತು. ಇದರ ರೂವಾರಿ ಓಪನ್‌ಎಐ ಹಿಂದಿನ ಬ್ರಾಂಡ್ ಸ್ಟೋರಿ ಇಲ್ಲಿದೆ.
ಆರು ತಿಂಗಳಿನ ಹಿಂದೆ ಇಂಥದ್ದೊಂದು ಚಾಟ್‌ಬೋಟ್ ಈ ಜಗತ್ತಿನಲ್ಲೇ ಇದ್ದಿರಲಿಲ್ಲ. ಆದರೆ ಈಗ ಕಾರ್ಪೊರೇಟ್ ವಲಯದ ಪಡಸಾಲೆಗಳಲ್ಲಿ ಕಾಳ್ಗಿಚ್ಚಿನಂತೆ ಇದರ ಪ್ರತಾಪದ ಬಗ್ಗೆ ಚರ್ಚೆ ನಡೆದಿದೆ. ಇಂಥ ಸಾಧನಗಳಿಂದ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂಬ ಆತಂಕ ಮನೆ ಮಾಡಿದೆ. ದೈತ್ಯ ಟೆಕ್ ಕಂಪನಿಗಳು ಇವುಗಳ ಮೇಲೆ ಭಾರಿ ಹೂಡಿಕೆಯನ್ನು ಮಾಡಿವೆ. ನಿಮ್ಮ ಊಹೆ ನಿಜ, ( ChatGPT) ಅಮೆರಿಕದ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ರಿಸರ್ಚ್ ಲ್ಯಾಬೊರೇಟರಿ ಸಂಸ್ಥೆಯಾದ ಓಪನ್ ಎಐ, (Brand story) ಚಾಟ್‌ಜಿಪಿಟಿ ಎಂಬ ಕೃತಕಬುದ್ದಿಮತ್ತೆ ಅಥವಾ ಆರ್ಟಿಫಿಶಿಯಲ್ ಟೆಕ್ನಾಲಜಿ ಆಧರಿತ ಚಾಟ್‌ಬೋಟ್ ಬಿಡುಗಡೆಗೊಳಿಸಿ ಪ್ರಪಂಚದಲ್ಲೇ ಸಂಚಲನ ಸೃಷ್ಟಿಸಿದೆ.
ಚಾಟ್‌ಬೋಟ್ (Chatbot) ಅಂದರೆ ಒಂದು ಸಾಫ್ಟ್‌ವೇರ್ ಅಪ್ಲಿಕೇಶನ್. ಅದು ಮನುಷ್ಯರ ಸಂಭಾಷಣೆಯನ್ನು ಆನ್‌ಲೈನ್‌ನಲ್ಲಿ ಟೆಕ್ಸ್ಟ್ ಅಥವಾ ಧ್ವನಿಯ ರೂಪದಲ್ಲಿ ಅನುಕರಿಸುತ್ತದೆ. ಈ ಚಾಟ್‌ಜಿಪಿಟಿಯ ಕ್ರಾಂತಿಕಾರಕ ಪ್ರಯೋಜನ ಏನೆಂದರೆ ಸಹಜವಾಗಿ ಭಾಷೆಯನ್ನು ಅರ್ಥ ಮಾಡಿಕೊಳ್ಳುತ್ತದೆ ಮತ್ತು ಮನುಷ್ಯರ ಜತೆ Text ಸಂಭಾಷಣೆ ನಡೆಸಬಲ್ಲುದು. ಬಹುತೇಕ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ. ಬಳಕೆದಾರರ ಇಂಗಿತವನ್ನೂ ಅರಿಯಬಲ್ಲುದು. ಕೇವಲ ಚಾಟ್‌ಬೋಟ್‌ಗಿಂತ ಹೆಚ್ಚು ಆಧುನಿಕ. ನೀವು ಚಾಟ್‌ಜಿಪಿಟಿಗೆ ಪ್ರಶ್ನೆಗಳನ್ನು ಕೇಳಬಹುದು. ಗೂಗಲ್ ಸರ್ಚ್ ಎಂಜಿನ್‌ಗೂ ಚಾಟ್‌ಜಿಪಿಟಿಗೂ ಇರುವ ವ್ಯತ್ಯಾಸ ಏನು? ಗೂಗಲ್ ಮಾಹಿತಿಗಳ ಲಿಂಕ್‌ಗಳನ್ನು ಮಾತ್ರ ನೀಡುತ್ತದೆ. ಆದರೆ ಚಾಟ್‌ಜಿಪಿಟಿ ಬಳಕೆದಾರರಿಗೆ ತಾನೇ ಹಲವಾರು ಕ್ಷೇತ್ರಗಳಲ್ಲಿ (domains) ಮಾಹಿತಿಯನ್ನು ಸಂಸ್ಕರಿಸಿ ಸಂಭಾಷಣೆಯ ಶೈಲಿಯಲ್ಲಿ ನೀಡುತ್ತದೆ. ಉದಾಹರಣೆಗೆ ಕಾರು ಸಾಲದ ಬಗ್ಗೆ ಲೇಖನ ಕೋರಿದರೆ ಗೂಗಲ್, ಹಲವು ಲಿಂಕ್‌ಗಳನ್ನು ಕೊಡಬಹುದು. ಆದರೆ ಚಾಟ್‌ಜಿಪಿಟಿ ಲೇಖನವನ್ನೇ ಸಿದ್ಧಪಡಿಸಿ ಕೊಡುತ್ತದೆ. ಹಾಗಂತ ಗೂಗಲ್‌ಗಿಂತಲೂ ಚಾಟ್‌ಜಿಪಿಟಿ ಮೇಲು ಎಂದಲ್ಲ, ಎರಡಕ್ಕೂ ಅದರದ್ದೇ ಆದ ವಿಶೇಷತೆ ಇದೆ.
10 ಕೋಟಿ ಬಳಕೆದಾರರೊಂದಿಗೆ ಇತಿಹಾಸ ಸೃಷ್ಟಿಸಿದ ಚಾಟ್‌ಜಿಪಿಟಿ : ಓಪನ್ ಎಐ ಸಂಸ್ಥೆ ಕೃತಕಬುದ್ಧಿಮತ್ತೆ ಕುರಿತ ಸಂಶೋಧನೆ, ಎಐ ಉತ್ಪನ್ನಗಳ ಅಭಿವೃದ್ಧಿ ಮತ್ತು ಮಾರಾಟವನ್ನು ಮಾಡುತ್ತದೆ. ಇದರ ಉತ್ಪನ್ನಗಳೆಂದರೆ ಜಿಪಿಟಿ-4, DALL-4, ಓಪನ್‌ಎಐ ಫೈವ್, ಚಾಟ್‌ಜಿಪಿಟಿ, ಓಪನ್‌ಎಐ ಕೋಡೆಕ್ಸ್. (www.openai.com) ವಿಶ್ವದಲ್ಲೇ ಈಗ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವೆಬ್‌ಸೈಟ್ ಓಪನ್‌ಎಐನದ್ದಾಗಿದೆ (OpenAI) ಚಾಟ್‌ಜಿಪಿಟಿ ಇಡೀ ಜಗತ್ತಿನಲ್ಲಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ. ಕೇವಲ 7 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಓಪನ್‌ಎಐ ಮಾಡುತ್ತಿರುವ ಸದ್ದು ಅಷ್ಟಿಷ್ಟಲ್ಲ. ಚಾಟ್‌ಜಿಪಿಟಿ 2023ರ ಜನವರಿಯಲ್ಲಿ ಕನ್‌ಸ್ಯೂಮರ್ ಸಾಫ್ಟ್‌ವೇರ್ ಅಪ್ಲಿಕೇಶನ್‌ನ ಇತಿಹಾಸದಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಅಪ್ಲಿಕೇಶನ್ ಆಗಿ ಚಾಟ್‌ಜಿಪಿಟಿ ಹೊರಹೊಮ್ಮಿತು. ಇದರ ವೇಗ ಕಂಡು ಬೆಚ್ಚಿದ ಗೂಗಲ್, ತನ್ನ ಚಾಟ್‌ಬೋಟ್ ಬಾರ್ಡ್ ಅನ್ನು ಅಭಿವೃದ್ಧಿಪಡಿಸಿತು.
ಓಪನ್ ಎಐ ಸ್ಥಾಪಕರು ಯಾರು?
ಓಪನ್ ಎಐ ಅನ್ನು ಹತ್ತು ಮಂದಿ ತಂತ್ರಜ್ಞರು ಸೇರಿ 2015ರಲ್ಲಿ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಸ್ಥಾಪಿಸಿದರು. ವಾಸ್ತವವಾಗಿ ಮೊದಲಿಗೆ ಓಪನ್ ಎಐ ಒಂದು ಎನ್‌ಜಿಒ ಆಗಿ ಅಸ್ತಿತ್ವಕ್ಕೆ ಬಂದಿತ್ತು. ಆರಂಭದಲ್ಲಿ ಇನ್ಫೋಸಿಸ್, ಎಲಾನ್ ಮಸ್ಕ್ ಮತ್ತಿತರ ಮೂಲಗಳಿಂದ 1 ಶತಕೋಟಿ ಡಾಲರ್ ಹೂಡಿಕೆ ಲಭಿಸಿತ್ತು (ಅಂದಾಜು 8,200 ಕೋಟಿ ರೂ.) ಇಲ್ಯಾ ಸುಟ್ಸ್‌ಕೆವರ್, ಗ್ರೇಗ್ ಬ್ರೋಕ್ ಮನ್, ಟ್ರೆವೊರ್ ಬ್ಲಾಕ್‌ವೆಲ್, ವಿಕಿ ಚೆಯುಂಗ್, ಆಂಡ್ರೇಜ್ ಕಾರ್‌ಪಥಿ, ಡ್ಯುರ್ಕ್ ಕಿಂಗ್‌ಮಾ, ಜೆಸ್ಸಿಕಾ ಲಿವಿಂಗ್‌ಸ್ಟನ್, ಜಾನ್ ಸ್ಕುಲ್‌ಮ್ಯಾನ್, ಪಮೇಲಾ ವಗಾಟಾ ಮತ್ತು ವೊಜಿಸ್ಕ್ ಜೆರೆಮ್‌ಬಾ. ಉದ್ಯಮಿ ಸ್ಯಾಮ್ ಅಲ್ಟ್‌ಮನ್ ಮತ್ತು ಎಲಾನ್ ಮಸ್ಕ್ ಆರಂಭಿಕ ಹಂತದಲ್ಲಿ ಕಂಪನಿಯ ನಿರ್ದೇಶಕರುಗಳ ಮಂಡಳಿಯ ಸದಸ್ಯರಾಗಿದ್ದರು. ಸ್ಯಾಮ್ ಆಲ್ಟ್‌ಮನ್ ಕಂಪನಿಯ ಸಿಇಒ ಆಗಿದ್ದಾರೆ. ಇವರೆಲ್ಲರೂ ಅಸಾಧಾರಣ ಯುವ ತಂತ್ರಜ್ಞಾನಿಗಳು. ಸಿಇಒ ಆಲ್ಟ್‌ಮನ್ ಅವರಿಗೆ ಈಗ 37 ವರ್ಷ ವಯಸ್ಸು. ಯೆಹೂದಿ ಕುಟುಂಬದಲ್ಲಿ ಜನಿಸಿದ್ದ ಆಲ್ಟ್‌ಮನ್ 8 ವರ್ಷದ ಬಾಲಕನಾಗಿದ್ದಾಗ ಕಂಪ್ಯೂಟರ್ ಬಳಸುತ್ತಿದ್ದ. 2005ರಲ್ಲಿ ಸ್ಟಾನ್‌ಫೋರ್ಡ್ ಯುನಿವರ್ಸಿಟಿಯಲ್ಲಿ 1 ವರ್ಷ ಕಂಪ್ಯೂಟರ್ ಸೈನ್ಸ್ ಓದಿ ಡ್ರಾಪೌಟ್ ಆಗಿದ್ದರು. 2005ರಲ್ಲಿ ಲೊಕೇಶನ್ ಆಧರಿತ ಮೊಬೈಲ್ ಅಪ್ಲಿಕೇಶನ್ ಲೂಪ್ಟ್ ಅನ್ನು ಅಭಿವೃದ್ಧಿಪಡಿಸಿದ್ದರು. 2020ರಲ್ಲಿ ಓಪನ್ ಎಐನ ಸಿಇಒ ಆದರು. 2023ರಲ್ಲಿ ಟೈಮ್ ನಿಯತಕಾಲಿಕೆಯ ಪ್ರಕಾರ 100 ಪ್ರಭಾವಿಶಾಲಿ ವ್ಯಕ್ತಿಗಳಲ್ಲಿ ಆಲ್ಟ್ ಮನ್ ಕೂಡ ಒಬ್ಬರಾಗಿದ್ದಾರೆ. ಆಲ್ಟ್‌ಮನ್ ಒಬ್ಬ ಅದ್ಭುತ ಉದ್ಯಮಿ ಎನ್ನುತ್ತಾರೆ ಮೈಕ್ರೊಸಾಫ್ಟ್ ಸಿಇಒ ಸತ್ಯ ನಾಡೆಳ್ಳಾ.
ಓಪನ್ ಎಐನಲ್ಲಿ ಇನ್ಫೋಸಿಸ್ ಹೂಡಿದ್ದೇಕೆ?
ಚಾಟ್‌ಜಿಪಿಟಿ ತಯಾರಕ ಓಪನ್‌ಎಐ ಆರಂಭದಲ್ಲಿ ಎನ್‌ಜಿಒ ( non-profit) ಆಗಿತ್ತು. ಆದರೆ 2015ರಲ್ಲೇ ಇನ್ಫೋಸಿಸ್, ಎಲಾನ್ ಮಸ್ಕ್, ವೈಸಿ ರೀಸರ್ಚ್, ಎಡಬ್ಲ್ಯುಎಸ್ ಮುಖ್ಯಸ್ಥರು ಓಪನ್ ಎಐನಲ್ಲಿ ಸುಮಾರು 1 ಶತಕೋಟಿ ಡಾಲರ್ ಹೂಡಿಕೆ ಮಾಡಿದ್ದರು ಎಂದು ವರದಿಯಾಗಿತ್ತು. ಅದರಲ್ಲೂ ಆಗ ಇನ್ಫೋಸಿಸ್‌ನ ಸಿಇಒ ಆಗಿದ್ದ ವಿಶಾಲ್ ಸಿಕ್ಕಾ ಅವರಿಗೆ ಎಐ ತಂತ್ರಜ್ಞಾನದ ಬಗ್ಗೆ ಸಿಕ್ಕಾಪಟ್ಟೆ ಆಸಕ್ತಿ ಇತ್ತು. ಹೀಗಾಗಿ ಇನ್ಫೋಸಿಸ್, ಓಪನ್‌ಎಐಗೆ ಡೊನೇಶನ್ ನೀಡಿತ್ತು. ಸಿಕ್ಕಾ ಅವರು ಓಪನ್ ಎಐಗೆ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು. ಆಗ ಓಪನ್ ಎಐ ಮುಕ್ತ ತಂತ್ರಾಂಶ ಅಭಿವೃದ್ಧಿಗೆ ಬದ್ಧವಾಗಿತ್ತು. ಆದರೆ 2017ರಲ್ಲಿ ವಿಶಾಲ್ ಸಿಕ್ಕಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಇದರೊಂದಿಗೆ ಓಪನ್ ಎಐ ಟೆಕ್ನಾಲಜಿಯನ್ನು ಇನ್ಫೋಸಿಸ್ ಜತೆ ಸಂಯೋಜಿಸುವ ಯೋಜನೆ ನನೆಗುದಿಗೆ ಬಿತ್ತು. 2019ರ ವೇಳೆಗೆ ಓಪನ್‌ಎಐನಲ್ಲಿ ಸಾಕಷ್ಟು ಬದಲಾವಣೆ ಆಗಿತ್ತು. ಎನ್‌ಜಿಒ ಆಗಿದ್ದ ಓಪನ್ ಎಐ, ಕಂಪನಿಯಾಗಿ ಬದಲಾಯಿತು. ಇದಕ್ಕೆ ಕಾರಣ ಓಪನ್ ಎಐನ ಹಾಲಿ ಸಿಇಒ ಆಲ್ಟ್‌ಮನ್!
ಕಂಪ್ಯೂಟರ್ ಕೋಡ್ ಅನ್ನೂ ಬರೆಯಬಲ್ಲ ಸ್ಫೋಟಕ ಎಐ ಟೂಲ್ಸ್! ಓಪನ್ ಎಐನಲ್ಲಿ ಎಂಜಿನಿಯರ್‌ಗಳು ಅಭಿವೃದ್ಧಿಪಡಿಸಿದ ಪವರ್‌ಫುಲ್ ಎಐ ಟೂಲ್ಸ್‌ಗಳು ಸಿಲಿಕಾನ್ ವ್ಯಾಲಿಯಲ್ಲೇ ಮಿಂಚಿನ ಸಂಚಾರ ಮೂಡಿಸಿದೆ. ಅದು ಸಂಕೀರಣ text ಗಳಿಂದ computer code ತನಕ ಎಲ್ಲವನ್ನೂ ಮಾಡಬಲ್ಲ ಸಾಮರ್ಥ್ಯ ಹೊಂದಿವೆ. ಓಪನ್‌ಎಐನ GPT2 ಲಾಂಗ್ವೇಜ್ ಮಾಡೆಲ್ ಟೂಲ್ ಬಿಡುಗಡೆಯಾದಾಗ, ಸ್ವತಃ ಕಂಪನಿಯ ಉದ್ಯೋಗಿಗಳು ಇದರ ದುರ್ಬಳಕೆ ಆಗಬಹುದೇನೋ ಎಂದು ಆತಂಕ ವ್ಯಕ್ತಪಡಿಸಿದ್ದರಂತೆ. ಜಿಪಿಟಿ2 ಟೂಲ್ ಸಮಕಾಲೀನ ಘಟನೆಗಳ ಬಗ್ಗೆ ಒಂದು ಸಾಲು ಸಿಕ್ಕಿದರೂ, ಅದನ್ನು ಸುದ್ದಿಯಾಗಿ ಬರೆಯುವ ಸಾಮರ್ಥ್ಯ ಹೊಂದಿದೆ. ಸಾಂಸ್ಥಿಕ ಮಾಧ್ಯಮ, ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ಎಐ ತಂತ್ರಜ್ಞಾನದ ಕಾರುಬಾರು ಶುರುವಾಗಿದೆ. ಇಮೇಜ್‌ಗಳ ಸೃಷ್ಟಿಯಲ್ಲಿ ಕ್ರಾಂತಿಕಾರಕ ಪರಿವರ್ತನೆಯಾಗುತ್ತಿದೆ. ನಿಮಗೆ ಬೇಕಾದಂಥ ಚಿತ್ರಗಳ ಸೃಷ್ಟಿ ಇಲ್ಲಿ ಸಾಧ್ಯ. ಆಟೊಮ್ಯಾಟಿಕ್ ಫೊಟೊ ಎಡಿಟಿಂಗ್ ಅನ್ನು ಮಾಡಬಹುದು. ಚಿತ್ರ ಕಲಾವಿದರು, ಸಂಗೀತಜ್ಞರು, ಬಿಸಿನೆಸ್‌ಮ್ಯಾನ್, ಸ್ಟಾರ್ಟಪ್ ನಡೆಸುವವರು ಹೀಗೆ ಎಲ್ಲರೂ ಎಐ ನೆರವನ್ನು ಪಡೆಯುತ್ತಿದ್ದಾರೆ.
ಎಐ ತಂತ್ರಜ್ಞಾನ ಕ್ರಾಂತಿಯ ಬಗ್ಗೆ ಓಪನ್ ಎಐ ಸಿಇಒ ಹೇಳಿದ್ದೇನು? ಈ ಹಿಂದಿನ ತಂತ್ರಜ್ಞಾನಗಳು ಉದ್ಯೋಗ, ಉದ್ದಿಮೆ ವಲಯದ ಮೇಲೆ ಗಣನೀಯ ಪ್ರಭಾವ ಬೀರಿದೆ. ಎಐ ಟೆಕ್ನಾಲಜಿ ಕೂಡ ಇದೇ ಸಾಲಿನಲ್ಲಿದೆ. ಆದರೆ ಇದರ ಪರಿಣಾಮ ಹೇಗಿರಬಹುದು ಎಂದು ಊಹಿಸುವುದು ಕಷ್ಟ. ತಂತ್ರಜ್ಞಾನ ಅಭಿವೃದ್ಧಿಗಳ ಎರಡೂ ಮುಖಗಳನ್ನು ನೋಡಬೇಕು. ಆದರೆ ಭವಿಷ್ಯದಲ್ಲಿ ಉದ್ಯೋಗಗಳ ಸ್ಥಿತಿಗತಿ ಮತ್ತು ಗುಣಮಟ್ಟ ಸುಧಾರಿಸಲಿದೆ ಎಂದು ನಾನು ನಂಬುತ್ತೇನೆ. ಈಗಾಗಲೇ ಜಿಪಿಟಿ 4 ಬಳಸುತ್ತಿರುವ ಜನತೆ ಅದರ ಪ್ರಯೋಜನ ಪಡೆಯುತ್ತಿದ್ದಾರೆ. ಜನ ಜೀವನದ ಗುಣಮಟ್ಟ ಅಭಿವೃದ್ಧಿಗೆ ಎಐ ಸಹಕಾರಿಯಾಗುವುದಿದ್ದರೆ ಅದನ್ನು ತಡೆಯುವುದು ಕಷ್ಟ. ನಾನು ಆಶಾವಾದಿಯಾಗಿದ್ದೇನೆ ಎನ್ನುತ್ತಾರೆ ಓಪನ್ ಎಐ ಸಿಇಒ ಆಲ್ಟ್‌ಮನ್. ಎಐ ಟೆಕ್ನಾಲಜಿ ಉದ್ಯೋಗಗಳನ್ನು ಕಸಿದುಕೊಳ್ಳಲಿದೆಯೇ ಎಂಬ ಚರ್ಚೆ ಈಗ ವ್ಯಾಪಕವಾಗಿದೆ. ಹಾಲಿ ಮನುಷ್ಯರು ಮಾಡುವ ಏಕತಾನತೆಯ ಟಾಸ್ಕ್‌ಗಳನ್ನು (automate tasks) ಭವಿಷ್ಯದಲ್ಲಿ ಎಐ ಟೂಲ್‌ಗಳು ಮಾಡಲಿವೆ. ಆಗ ಮನುಷ್ಯರು ಏನು ಮಾಡಬಹುದು? ಮತ್ತಷ್ಟು ಸೃಜನಶೀಲ ಅಥವಾ ಮಹತ್ವದ ಕೆಲಸಗಳನ್ನು ಮಾಡಬಹುದು. ಅದೇ ರೀತಿ ಹೊಸ ಕೆಲಸಗಳು ಕೂಡ ಸೃಷ್ಟಿಯಾಗಬಹುದು ಎನ್ನುತ್ತಾರೆ ತಜ್ಞರು.
2024ರಲ್ಲಿ ಬಿಡುಗಡೆಯಾಗಲಿದೆಯೇ GPT 5 ? ಓಪನ್ ಎಐ ಜಿಪಿಟಿ5 ( Generative Pre-trained Transformer) ಅನ್ನು ತಯಾರಿಸುತ್ತಿದೆ. 2024ರಲ್ಲಿ ಇದು ಬಿಡುಗಡೆಯಾಗುವ ನಿರೀಕ್ಷೆ ಇದೆ. ಇದು ಗೇಮ್ ಚೇಂಜರ್ ಆಗಲಿದೆ ಎನ್ನುತ್ತಾರೆ ಕಂಪನಿಯ ಸಿಇಒ ಆಲ್ಟ್‌ಮನ್. ಜಿಪಿಟಿ 5 ಸ್ವತಃ ವೆಬ್ ಸೈಟ್ ಅನ್ನು ತಯಾರಿಸಲಿದೆ. ಇದರ ಮೆಮೊರಿ ಜಾಸ್ತಿಯಾಗಿರಲಿದೆ. ಇದರಲ್ಲಿ ಸುದೀರ್ಘ ಮೆಸೇಜ್‌ಗಳನ್ನು ಬಳಕೆದಾರರು ಕಳಿಸಬಹುದು. ಮಲ್ಟಿಪಲ್ ಟಾಸ್ಕ್‌ಗಳನ್ನು ಜಿಪಿಟಿ 5ಗೆ ನೀಡಬಹುದು. ಲಾಜಿಕಲ್ ರೀಸನಿಂಗ್ ಸುಧಾರಿಸಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಏಐ ಪ್ರಭಾವ ಬೀರಲಿದೆ. ಓಪನ್ ಎಐ ಅಕಾಡೆಮಿ ಎಂಬ ಪ್ರಾಜೆಕ್ಟ್ ಅನ್ನೂ ಕಂಪನಿ ಆರಂಭಿಸಲು ಉದ್ದೇಶಿಸಿದೆ. ಅಂದರೆ ಇದರ ಮೂಲಕ ಯಾರಿಗೂ ಯಾವುದೇ ವಿಷಯದ ಬಗ್ಗೆ ಕಲಿಯಲು ಹಾದಿ ಸುಗಮವಾಗಲಿದೆ ಎನ್ನುತ್ತಾರೆ ಆಲ್ಟ್‌ಮನ್.
ಎಐ ಗೇಮ್‌ನಲ್ಲಿ ಯಾರಿದ್ದಾರೆ?
ಮೈಕ್ರೊಸಾಫ್ಟ್, ಗೂಗಲ್, ಮೆಟಾ ಇತ್ಯಾದಿ ದಿಗ್ಗಜ ಕಂಪನಿಗಳು ತಮ್ಮದೇ ಎಐ ಟೂಲ್‌ಗಳ ಅಭಿವೃದ್ಧಿಗೆ ಹೂಡಿಕೆ ಮಾಡುತ್ತಿವೆ. ಮೈಕ್ರೊಸಾಫ್ಟ್ 2023ರಲ್ಲಿ 10 ಶತಕೋಟಿ ಡಾಲರ್ (82,000 ಕೋಟಿ ರೂ.) ಹೂಡಿಕೆ ಮಾಡಿದೆ. ಇದು Azure AI platform ಅನ್ನು ಅಭಿವೃದ್ಧಿಪಡಿಸಿದೆ. ಮೈಕ್ರೊಸಾಫ್ಟ್ ಮೊದಲ ಬಾರಿಗೆ ಓಪನ್‌ಎಐನಲ್ಲಿ 2019ರಲ್ಲಿ 1 ಶತಕೋಟಿ ಡಾಲರ್ ಹೂಡಿದಾಗ (8200 ಕೋಟಿ ರೂ.) ಈ ಡೀಲ್ ಅಷ್ಟಾಗಿ ಗಮನ ಸೆಳೆದಿರಲಿಲ್ಲ. ಆಗ ಸ್ಟಾರ್ಟಪ್ ಮಾರುಕಟ್ಟೆ ಬೆಳೆಯುತ್ತಿತ್ತು. ಎಲೆಕ್ಟ್ರಿಕ್ ವಾಹನ, ಏರೊಸ್ಪೇಸ್ ಮಾದರಿಯಲ್ಲಿ ಎಐ ಕ್ಷೇತ್ರ ಕೂಡ ಹೂಡಿಕೆ ಆಕರ್ಷಿಸಿದೆ ಎಂದು ಭಾವಿಸಲಾಗಿತ್ತು. ಆದರೆ ಮೂರು ವರ್ಷಗಳ ಬಳಿಕ ಆಯಾಮ ಬದಲಾಯಿತು. ವರದಿಗಳ ಪ್ರಕಾರ ಮೈಕ್ರೊಸಾಫ್ಟ್ ಓಪನ್‌ಎಐನಲ್ಲಿ 13 ಶತಕೋಟಿ ಡಾಲರ್ ಹೂಡಿದೆ. (1.06 ಲಕ್ಷ ಕೋಟಿ ರೂ.) ಹೂಡಿಕೆ ಮಾಡಿದೆ. ಇದರಿಂದಾಗಿ ಓಪನ್‌ಎಐನ ಮಾರುಕಟ್ಟೆ ಮೌಲ್ಯ 29 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ. (2.37 ಲಕ್ಷ ಕೋಟಿ ರೂ.) ಮೈಕ್ರೊಸಾಫ್ಟ್ ಬಿಂಗ್ (Microsoft Bing) ಎಂಬುದು ಮೈಕ್ರೊಸಾಫ್ಟ್‌ನ ವೆಬ್ ಸರ್ಚ್ ಎಂಜಿನ್. ಓಪನ್ ಎಐನ ತಂತ್ರಜ್ಞಾನವನ್ನು ಬಳಸಿಕೊಂಡು ಇದನ್ನು ಅಭಿವೃದ್ಧಿಪಡಿಸಲು ಮೈಕ್ರೊಸಾಫ್ಟ್ ಬಯಸಿದೆ.
ಗೂಗಲ್ ಕಂಪನಿ ಕೂಡ ಗೂಗಲ್ ಬ್ರೈನ್ (Google Brain) ಎಂಬ ಡೀಪ್ ಲರ್ನಿಂಗ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಘಟಕವನ್ನು ಹೊಂದಿದೆ. ಈ ಪ್ರಾಜೆಕ್ಟ್ 2011ರಲ್ಲೇ ಶುರುವಾಗಿತ್ತು. ಫೇಸ್‌ಬುಕ್‌ನ ಮಾತೃಸಂಸ್ಥೆ ಮೆಟಾ ಕೂಡ ಮೆಟಾ ಎಐ ಎಂಬ ಎಐ ಲ್ಯಾಬೊರೇಟರಿಯನ್ನು ಹೊಂದಿದೆ. ಭಾರತದಲ್ಲೂ ಟಿಸಿಎಸ್, ಇನ್ಫೋಸಿಸ್, ವಿಪ್ರೊ, ಎಚ್‌ಸಿಎಲ್ ಟೆಕ್ ಮತ್ತು ಟೆಕ್ ಮಹೀಂದ್ರಾ ಮತ್ತು ಇತರ ಕಂಪನಿಗಳು ಆರ್ಟಿಫಿಶಿಯಲ್ ಟೆಕ್ನಾಲಜಿ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿವೆ. ಒಟ್ಟಿನಲ್ಲಿ ಎಐ ಕ್ರಾಂತಿಗೆ ಚಾಟ್‌ಜಿಪಿಟಿ ಜನಕ ಓಪನ್ ಎಐ ನೀಡಿರುವ ಪುಷ್ಟಿ ಅತ್ಯಂತ ಕುತೂಹಲಕರ. ಇದು ಮನುಕುಲದ ಒಳಿತಿಗೆ ಸಹಕಾರಿಯಾದರೆ ಸಾರ್ಥಕ.
ಇನ್ಫೋಸಿಸ್ ಹೂಡಿಕೆ-ಸಂಪರ್ಕ ಮುಂದುವರಿಸುತ್ತಿದ್ದರೆ!? ವಿಶಾಲ್ ಸಿಕ್ಕಾ ಅವರು ಸಿಇಒ ಆಗಿದ್ದಾಗ ಮೊದಲ ಬಾರಿಗೆ ಓಪನ್ ಎಐನಲ್ಲಿ ಇನ್ಫೋಸಿಸ್ ಹೂಡಿಕೆ ಮಾಡಿತ್ತು. ಒಂದು ವೇಳೆ ಬಳಿಕವೂ ಇನ್ಫೋಸಿಸ್ ಓಪನ್ ಎಐನಲ್ಲಿ ಹೂಡಿಕೆ ಮತ್ತು ಸಹಯೋಗ ಮುಂದುವರಿಸುತ್ತಿದ್ದರೆ ಈಗ ಎಐ ಕ್ಷೇತ್ರದಲ್ಲಿ ಅದು ಗಮನಾರ್ಹ ಮುನ್ನಡೆ ಸಾಧಿಸುತ್ತಿತ್ತೋ ಎನ್ನುತ್ತಾರೆ ಐಟಿ ಕುತೂಹಲಿಗಳು. ಆದರೆ ಸದ್ಯಕ್ಕೆ ಮೈಕ್ರೊಸಾಫ್ಟ್ ಓಪನ್ ಎಐನಲ್ಲಿ ಭಾರಿ ಹೂಡಿಕೆ ಮಾಡಿದೆ.
ಇದನ್ನೂ ಓದಿ: Brand story : ತಂದೆ ನಡೆಸುತ್ತಿದ್ದ ಸಣ್ಣ ಡಯಾಗ್ನಸ್ಟಿಕ್ಸ್ ಸೇರಿ ದೇಶ-ವಿದೇಶಗಳಲ್ಲಿ 1,500ಕ್ಕೆ ವಿಸ್ತರಿಸಿದ ಮಗಳ ಯಶೋಗಾಥೆ
ಪ್ರಮುಖ ಸುದ್ದಿ
Odisha Train Accident : ಮರೆಯದಿರಿ ಪ್ಲೀಸ್, ರೈಲ್ವೆಯಿಂದ ಕೇವಲ 35 ಪೈಸೆಗೆ 10 ಲಕ್ಷ ರೂ. ವಿಮೆ ಸಿಗುತ್ತೆ
Odisha Train Accident ಒಡಿಶಾದಲ್ಲಿ ಭೀಕರ ರೈಲು ದುರಂತದ ಬಳಿಕ ರೈಲ್ವೆ ಇಲಾಖೆ ತನ್ನ ಪ್ರಯಾಣಿಕರಿಗೆ ಕೇವಲ 35 ಪೈಸೆಗೆ ನೀಡುವ ವಿಮೆ ಮಹತ್ವ ಗಳಿಸಿದೆ. ಇದರ ವಿವರ ಇಲ್ಲಿದೆ.
ನವ ದೆಹಲಿ: ಒಡಿಶಾದಲ್ಲಿ ಭೀಕರ ರೈಲು ಅಪಘಾತದ ಬಳಿಕ ರೈಲ್ವೆ ಇಲಾಖೆಯು ಪ್ರಯಾಣಿಕರ ಸುರಕ್ಷತೆ ಮತ್ತು ಆರ್ಥಿಕ ಭದ್ರತೆಯ ದೃಷ್ಟಿಯಿಂದ ನೀಡುತ್ತಿರುವ ವಿಮೆಯ ಮಹತ್ವ ಹೈಲೈಟ್ ಆಗಿದೆ. (Odisha Train Accident) ರೈಲ್ವೆ ಇಲಾಖೆಯು ಕೇವಲ 35 ಪೈಸೆಗೆ ಪ್ರತಿ ಪ್ರಯಾಣಿಕರಿಗೆ ಪ್ರಯಾಣ ವಿಮೆಯನ್ನು ಒದಗಿಸುತ್ತದೆ. (travel insurance) ಒಡಿಶಾದಲ್ಲಿ ನಡೆದ ರೈಲ್ವೆ ಅಪಘಾತದಲ್ಲಿ 288 ಮಂದಿ ಮೃತಪಟ್ಟಿದ್ದಾರೆ. 1000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಒಡಿಶಾ ರೈಲ್ವೆ ದುರಂತದಲ್ಲಿ ಮಡಿದವರಿಗೆ ತಲಾ 10 ಲಕ್ಷ ರೂ. ವಿಮೆ ಸಿಗಲಿದೆ. ತೀವ್ರ ಗಾಯಗೊಂಡಿರುವವರಿಗೆ 2 ಲಕ್ಷ ರೂ, ಸಣ್ಣಪುಟ್ಟ ಗಾಯಗೊಂಡಿರುವವರಿಗೆ 50,000 ರೂ. ನೆರವು ಸಿಗಲಿದೆ. ಈ ದುರಂತವು ಪ್ರಯಾಣ ವಿಮೆಯ ಮಹತ್ವವನ್ನು ಸಾರಿದೆ.
ವಿಮೆ ಪಡೆಯುವುದು ಹೇಗೆ? ಇಂಡಿಯನ್ ರೈಲ್ವೆ ಕೇಟರಿಂಗ್ & ಟೂರಿಸಂ ಕಾರ್ಪೊರೇಷನ್ ( Indian railway catering and tourism corporation-IRCTC) ವೆಬ್‌ಸೈಟ್ ಅಥವಾ ಆ್ಯಪ್ ಮೂಲಕ ಟಿಕೆಟ್ ಬುಕ್ ಮಾಡುವ ಸಂದರ್ಭ ಕೇವಲ 35 ಪೈಸೆ ವೆಚ್ಚದಲ್ಲಿ ಪ್ರಯಾಣ ವಿಮೆ ಪಡೆಯಬಹುದು.
ಪ್ರಯಾಣಿಕರು ಆನ್‌ಲೈನ್‌ನಲ್ಲಿ ರೈಲ್ವೆ ಟಿಕೆಟ್ ಖರೀದಿಸುವಾಗ Travel insurance ಅನ್ನು ಆಯ್ಕೆ ಮಾಡಬೇಕು. ಆಗ ವಿಮೆ ಸಂಸ್ಥೆ ಎಸ್ಸೆಮ್ಮೆಸ್ ಕಳಿಸುತ್ತದೆ. ಹಾಗೂ ನೋಂದಾಯಿತ ಇ-ಮೇಲ್‌ಗೆ ವಿಮೆಯ ವಿವರಗಳನ್ನು ಕಳಿಸುತ್ತದೆ. ಲಿಂಕ್ ಕ್ಲಿಕ್ಕಿಸಿ ನಾಮಿನೇಶನ್ ವಿವರ ಸಲ್ಲಿಸಿ.
ಒಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ಸಂಭವಿಸಿದ ಕೋರಮಂಡಲ ಎಕ್ಸ್‌ಪ್ರೆಸ್ ಸೇರಿದಂತೆ ಮೂರು ರೈಲುಗಳ ಅಪಘಾತದ ದುರಂತದಲ್ಲಿ ಸಂತ್ರಸ್ತರಾದವರಿಗೆ ವಿಮೆ ಪರಿಹಾರದ ಇತ್ಯರ್ಥ ಪ್ರಕ್ರಿಯೆಯನ್ನು ಎಲ್‌ಐಸಿ (LIC) ಸರಳಗೊಳಿಸಿದೆ. (Coromandel express accident) ಈ ಸಂಬಂಧ ಎಲ್‌ಐಸಿ ಚೇರ್ಮನ್ ಸಿದ್ಧಾರ್ಥ ಮೊಹಾಂತಿ ಹಲವಾರು ಕ್ರಮಗಳನ್ನು ಸಡಿಲಗೊಳಿಸಿರುವುದನ್ನು ಘೋಷಿಸಿದ್ದಾರೆ.
ಎಲ್‌ಐಸಿ ಕ್ಲೇಮ್ ಪ್ರಕ್ರಿಯೆ ಸಡಿಲ:
ವಿಪತ್ತುಗಳ ಸಂದರ್ಭ ಎಲ್‌ಐಸಿ ಈ ಹಿಂದೆಯೂ ತನ್ನ ಪಾಲಿಸಿಗಳ ಕ್ಲೇಮ್ ಸೆಟ್ಲ್‌ಮೆಂಟ್ ಹಾಗೂ ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆಯ ಕ್ಲೇಮ್‌ಗಳನ್ನು ಇತ್ಯರ್ಥ ಪ್ರಕ್ರಿಯೆಗಳನ್ನು ಸಡಿಲಗೊಳಿಸಿತ್ತು. ಇದೀಗ ಒಡಿಶಾ ರೈಲು ದುರಂತಕ್ಕೂ ಸ್ಪಂದಿಸಿದೆ. ರೈಲ್ವೆ ಇಲಾಖೆ, ಪೊಲೀಸ್ ಇಲಾಖೆ ಅಥವಾ ಯಾವುದೇ ರಾಜ್ಯ ಅಥವಾ ಕೇಂದ್ರ ಸರ್ಕಾರ ಪ್ರಕಟಿಸಿದ ಸಾವು-ನೋವಿನ ಪ್ರಕಟಣೆಯನ್ನು ಸಾವಿನ ದೃಢೀಕರಣ ಪತ್ರ ಎಂದು ಪರಿಗಣಿಸಿ ಕ್ಲೇಮ್ ಇತ್ಯರ್ಥಪಡಿಸಲಾಗುವುದು ಎಂದು ತಿಳಿಸಿದೆ.
ಎಲ್‌ಐಸಿಯಿಂದ ಹೆಲ್ಪ್ ಡೆಸ್ಕ್: ಎಲ್‌ಐಸಿ ರೈಲು ದುರಂತದಲ್ಲಿ ಸಂತ್ರಸ್ತರಾದವರಿಗೆ ನೆರವಾಗಲು ಸಹಾಯವಾಣಿ ಆರಂಭಿಸಿದೆ. 022-68276827 ಸಂಖ್ಯೆಗೆ ಕರೆ ಮಾಡಬಹುದು. ಕ್ಲೇಮ್‌ಗೆ ಸಂಬಂಧಿಸಿ ಪ್ರಶ್ನೆಗಳಿಗೆ ಉತ್ತರ ಪಡೆಯಬಹುದು ಎಂದು ಎಲ್‌ಐಸಿ ತಿಳಿಸಿದೆ. ಮೊಹಾಂತಿ ಅವರು ಒಡಿಶಾ ರೈಲು ದುರಂತದಲ್ಲಿ ಮಡಿದವರಿಗೆ ಕಂಬನಿ ಮಿಡಿದಿದ್ದಾರೆ. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಎಲ್‌ಐಸಿ ತನ್ನಿಂದಾಗುವ ಎಲ್ಲ ಸಹಕಾರವನ್ನು ನೀಡಲಿದೆ ಎಂದು ತಿಳಿಸಿದ್ದಾರೆ.
ಒಡಿಶಾದ ಬಾಲಾಸೋರ್ನಲ್ಲಿ ನಡೆದ ಭೀಕರ ರೈಲು ದುರಂತದಲ್ಲಿ (Odisha Train Accident) ಮೃತಪಟ್ಟವರ ಸಂಖ್ಯೆ 288ಕ್ಕೆ ಏರಿಕೆಯಾಗಿದೆ. 900ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಮೂರು ರೈಲುಗಳ ಮಧ್ಯೆಯ ಡಿಕ್ಕಿಯಿಂದ ಇಷ್ಟು ದೊಡ್ಡಮಟ್ಟದ ಅವಘಡ ಆಗಿದ್ದು, ಇತ್ತೀಚಿನ ವರ್ಷಗಳಲ್ಲೇ ಭೀಕರ ರೈಲು ಅಪಘಾತವಾಗಿದೆ. ಬೆಂಗಳೂರು-ಹೌರಾ ಸೂಪರ್ಫಾಸ್ಟ್ ಎಕ್ಸ್‌ಪ್ರೆಸ್, ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ ಎಕ್ಸ್‌ಪ್ರೆಸ್ ಮತ್ತು ಗೂಡ್ಸ್ ರೈಲಿನ ಮಧ್ಯೆ ಅಪಘಾತವಾಗಿತ್ತು.
ಶಾಲಿಮಾರ್-ಚೆನ್ನೈ ಸೆಂಟ್ರಲ್ ಕೋರಮಂಡಲ ಎಕ್ಸ್‌ಪ್ರೆಸ್ ರೈಲು ಮತ್ತು ಒಂದು ಗೂಡ್ಸ್ ರೈಲಿನ ಮಧ್ಯೆ ಬಾಲಾಸೋರ್ ಬಳಿ ಮೊದಲು ಡಿಕ್ಕಿಯಾಯಿತು. ಈ ಡಿಕ್ಕಿಯ ರಭಸಕ್ಕೆ ಕೋರಮಂಡಲ ರೈಲಿನ 10-12 ಬೋಗಿಗಳು ಕಳಚಿ ಅಕ್ಕ-ಪಕ್ಕದ ಹಳಿಗಳ ಮೇಲೆ ಉರುಳಿಬಿದ್ದವು. ಆದರೆ ಈ ಅಪಘಾತದ ಬಗ್ಗೆ ಗೊತ್ತಿಲ್ಲದೆ, ಪಕ್ಕದ ಹಳಿಯ ಮೇಲೆ ಬಂದ ಬೆಂಗಳೂರು-ಹೌರಾ ಸೂಪರ್ಫಾಸ್ಟ್ ರೈಲಿಗೂ ಅಪಾಯ ಕಾದಿತ್ತು. ಅದಾಗಲೇ ಹಳಿಯ ಮೇಲೆ ಬಿದ್ದಿದ್ದ ಕೋರಮಂಡಲ ರೈಲಿನ ಬೋಗಿಗಳಿಗೆ ಡಿಕ್ಕಿ ಹೊಡೆದು, ಈ ರೈಲು ಕೂಡ ಅಪಘಾತಕ್ಕೀಡಾಗಿತ್ತು.
ಇದನ್ನೂ ಓದಿ: ಒಡಿಶಾ ರೈಲು ಅಪಘಾತದ ಬಗ್ಗೆ ತುರ್ತು ಸೇವೆಗಳಿಗೆ ತಕ್ಷಣ ಮಾಹಿತಿ ನೀಡಿದ್ದು, ರಜಾದಲ್ಲಿದ್ದ ಎನ್ಡಿಆರ್ಎಫ್ ಯೋಧ!
-
ಕರ್ನಾಟಕ18 hours ago
Odisha Train Accident: ಒಡಿಶಾ ರೈಲು ದುರಂತಕ್ಕೆ ಕೋಮು ಬಣ್ಣ ನೀಡಿದ ಮಹಿಳೆ, ಒಡಿಶಾ ಪೊಲೀಸರಿಂದ ತನಿಖೆ
-
ಕರ್ನಾಟಕ16 hours ago
ವಿಶ್ವ ಪರಿಸರ ದಿನ: ಸಸಿ ನೆಡಿ, ಫೋಟೊ ಕಳುಹಿಸಿ; ವಿಸ್ತಾರ ನ್ಯೂಸ್ ಅಭಿಯಾನ
-
ಕರ್ನಾಟಕ9 hours ago
DK Shivakumar: ಹೊಸಕೆರೆಹಳ್ಳಿ ಕೆರೆ ಮಧ್ಯೆ ರಸ್ತೆ ಮಾಡಿದ್ದಕ್ಕೆ ಜಾಡಿಸಿದ ಡಿಕೆಶಿ; ಅಧಿಕಾರಿಗಳ ಅಮಾನತಿಗೆ ಆದೇಶ
-
ಕರ್ನಾಟಕ13 hours ago
Murder Case: ಟೋಲ್ ವಿಚಾರಕ್ಕೆ ಕಿರಿಕ್; ಹಾಕಿ ಸ್ಟಿಕ್ನಿಂದ ಬಡಿದು ಕೊಂದೇಬಿಟ್ಟರು ದುರುಳರು
-
ದೇಶ14 hours ago
Odisha Train Accident: ಗಾಯದ ಮೇಲೆ ಬರೆ ಎಂದರೆ ಇದೇ; ಒಡಿಶಾದಲ್ಲಿ ಹಳಿ ತಪ್ಪಿದ ಮತ್ತೊಂದು ರೈಲು
-
ದೇಶ17 hours ago
world environment day : ಇಂದು ವಿಶ್ವ ಪರಿಸರ ದಿನ 2023: ಈ ದಿನದ ಮಹತ್ವ, ಇತಿಹಾಸ, ಥೀಮ್ ತಿಳಿಯಿರಿ
-
ಪರಿಸರ9 hours ago
ವಿಶ್ವ ಪರಿಸರ ದಿನ: ‘ಸಸಿ ನೆಡಿ, ಫೋಟೊ ಕಳುಹಿಸಿ’ ವಿಸ್ತಾರ ಅಭಿಯಾನ; ನಿಮ್ಮ ಮತ್ತಷ್ಟು ಫೋಟೊಗಳು ಇಲ್ಲಿವೆ
-
ಕರ್ನಾಟಕ16 hours ago
ಕಲಬುರಗಿಯಲ್ಲಿ ಚಂಡಿಕಾ ಹೋಮದ ಬೆಂಕಿಯಲ್ಲಿ ಕಾಣಿಸಿಕೊಂಡ ದುರ್ಗಾ ದೇವಿ!; ಇಲ್ಲಿದೆ ನೋಡಿ ಫೋಟೊ