ವಾಣಿಜ್ಯ
GOLD RATE: ಬಂಗಾರದ ದರದಲ್ಲಿ 350 ರೂ. ಇಳಿಕೆ
ಬಂಗಾರದ ದರದಲ್ಲಿ ಕೆಲ ದಿನಗಳಿಂದ ಇಳಿಕೆಯಾಗುತ್ತಿದ್ದು, ಖರೀದಿಗೆ ಸಕಾಲವಾಗಿದೆ.
ಬೆಂಗಳೂರು: ಬಂಗಾರವನ್ನು ಖರೀದಿಸಲು ಬಯಸುವವರಿಗೆ ಇದು ಶುಭ ಸುದ್ದಿ. ಪ್ರತಿ 10ಗ್ರಾಮ್ ಚಿನ್ನದ ದರದಲ್ಲಿ ಗುರುವಾರ 350 ರೂ. ಕಡಿತವಾಗಿದೆ. ಕಳೆದ ಎರಡು ದಿನಗಳಲ್ಲಿ 700 ರೂ. ಇಳಿಕೆಯಾಗಿದೆ.
ಬೆಂಗಳೂರಿನಲ್ಲಿ 24 ಕ್ಯಾರಟ್ ಬಂಗಾರದ ಬೆಲೆ ಗುರುವಾರ 10 ಗ್ರಾಮ್‌ಗೆ 51,000 ರೂ.ಗೆ ಇಳಿಕೆಯಾಗಿದೆ.
ಕಳೆದ ಹಲವು ದಿನಗಳಿಂದ ಬಂಗಾರದ ಬೆಲೆ ಇಳಿಮುಖವಾಗಿದೆ.ಆಭರಣ ಚಿನ್ನ ಅಥವಾ 22 ಕ್ಯಾರಟ್ ಬಂಗಾರದ ಬೆಲೆ 46,750 ರೂ.ಗೆ ತಗ್ಗಿತ್ತು. 100 ಗ್ರಾಮ್ ಆಭರಣ ಬಂಗಾರ ಖರೀದಿಸಿದರೆ 3,800 ರೂ. ಉಳಿತಾಯವಾಗುತ್ತದೆ. ಕಳೆದ ಮಾರ್ಚ್ 9ರಂದು 24ಕ್ಯಾರಟ್ ಚಿನ್ನದ ದರ 10೧೦ ಗ್ರಾಮ್‌ಗೆ 53,890 ರೂ. ಇತ್ತು ಎಂಬುದನ್ನಿದಲ್ಲಿ ಸ್ಮರಿಸಬಹುದು. ಬೆಳ್ಳಿಯ ದರ ಬೆಂಗಳೂರಿನಲ್ಲಿ ಪ್ರತಿ ಕೆ.ಜಿಗೆ 64,800 ರೂ.ಗಳಾಗಿದ್ದು, 1,300 ರೂ. ಇಳಿಕೆಯಾಗಿದೆ.
ಮೇ 2ರಂದು 67,600 ರೂ. ಇತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಅಂದರೆ ಬಂಗಾರ ಮತ್ತು ಬೆಳ್ಳಿ ಎರಡರ ಬೆಲೆಯಲ್ಲೂ ಇಳಿಕೆಯಾಗಿರುವುದನ್ನು ಗಮನಿಸಬಹುದು.
ವಾಣಿಜ್ಯ
Smartphone Export : ಭಾರತದಿಂದ 2 ತಿಂಗಳಲ್ಲಿ ದಾಖಲೆಯ 16,500 ಕೋಟಿ ರೂ. ಮೌಲ್ಯದ ಸ್ಮಾರ್ಟ್‌ಫೋನ್ ರಫ್ತು
ಭಾರತವು ಸ್ಮಾರ್ಟ್‌ಫೋನ್ ರಫ್ತಿನ ಪ್ರಮುಖ ತಾಣವಾಗಿ ಹೊರಹೊಮ್ಮುತ್ತಿದೆ. ಕಳೆದ ಜನವರಿ-ಫೆಬ್ರವರಿಯಲ್ಲಿ 16,500 ಕೋಟಿ ರೂ. ಮೌಲ್ಯದ ಸ್ಮಾರ್ಟ್‌ಫೋನ್ ರಫ್ತಾಗಿದೆ.
ನವ ದೆಹಲಿ: ಭಾರತ ಈ ವರ್ಷ ಜನವರಿ ಮತ್ತು ಫೆಬ್ರವರಿಯಲ್ಲಿ ಒಟ್ಟು ದಾಖಲೆಯ 16,500 ಕೋಟಿ ರೂ. ಮೌಲ್ಯದ ಸ್ಮಾರ್ಟ್‌ಫೋನ್‌ಗಳನ್ನು ರಫ್ತು ಮಾಡಿದೆ. ಇದರಲ್ಲಿ 90% ಪಾಲು ಆ್ಯಪಲ್ ಮತ್ತು ಸ್ಯಾಮ್‌ಸಂಗ್ ಕಂಪನಿಗಳದ್ದಾಗಿದೆ. 2022ರ ಏಪ್ರಿಲ್‌ನಿಂದ (Smartphone Export) ಇಲ್ಲಿಯವರೆಗೆ ಒಟ್ಟು 9 ಶತಕೋಟಿ ಡಾಲರ್ (73,800 ಕೋಟಿ ರೂ.) ಮೌಲ್ಯದ ಸ್ಮಾರ್ಟ್‌ಫೋನ್ ರಫ್ತಾಗಿದೆ.
2.5 ಶತಕೋಟಿ ಡಾಲರ್ (20,500 ಕೋಟಿ ರೂ.) ಆಸುಪಾಸಿನಲ್ಲಿದ್ದ ಸ್ಮಾರ್ಟ್‌ಫೋನ್ ರಫ್ತು, ಕಳೆದ 2022ರ ಏಪ್ರಿಲ್‌ನಿಂದ 2023ರ ಫೆಬ್ರವರಿ ಅವಧಿಯಲ್ಲಿ ರಫ್ತು ಇಮ್ಮಡಿಯಾಗಿದೆ ಎಂದು ಇಂಡಿಯಾ ಸೆಲ್ಯುಲಾರ್ & ಎಲೆಕ್ಟ್ರಾನಿಕ್ಸ್ ಅಸೋಸಿಯೇಶನ್ (ICEA) ತಿಳಿಸಿದೆ. 2021-22ರಲ್ಲಿ 5.8 ಶತಕೋಟಿ ಡಾಲರ್‌ನಷ್ಟಿದ್ದ (47,560 ಕೋಟಿ ರೂ.) ಸ್ಮಾರ್ಟ್‌ಫೋನ್ ರಫ್ತು, 2022-23ರಲ್ಲಿ ಇಮ್ಮಡಿಯಾಗುವ ನಿರೀಕ್ಷೆ ಇದೆ. 2022ರ ಸೆಪ್ಟೆಂಬರ್ ಬಳಿಕ ಪ್ರತಿ ತಿಂಗಳೂ ಸರಾಸರಿ 1 ಶತಕೋಟಿ ಡಾಲರ್ (8,200 ಕೋಟಿ ರೂ.) ಮೌಲ್ಯದ ಸ್ಮಾರ್ಟ್‌ಫೋನ್ ರಫ್ತಾಗಿದೆ. ಕೇಂದ್ರ ಸರ್ಕಾರದ ಉತ್ಪಾದನೆ ಆಧಾರಿತ ಇನ್ಸೆಂಟಿವ್ (PLI) ಯೋಜನೆ ಈ ಸಾಧನೆಗೆ ಪುಷ್ಟಿ ನೀಡಿದೆ.
ಐಫೋನ್ ಉತ್ಪಾದಕ ಆ್ಯಪಲ್ ಭಾರತದಲ್ಲಿ ತನ್ನ ಉತ್ಪಾದನೆಯನ್ನು ಗಣನೀಯ ಹೆಚ್ಚಿಸಿರುವುದು, ದಕ್ಷಿಣ ಕೊರಿಯಾದ ಸ್ಯಾಮ್ ಸಂಗ್ ಕೂಡ ಇಲ್ಲಿ ಉತ್ಪಾದನೆ ಹೆಚ್ಚಳ ಮಾಡಿರುವುದು ಸಹಕಾರಿಯಾಗಿದೆ. ಐಫೋನ್ ತಯಾರಿಕೆಯ ಗುತ್ತಿಗೆದಾರ ಕಂಪನಿಗಳಾದ ಫಾಕ್ಸ್‌ಕಾನ್, ವಿಸ್ಟ್ರಾನ್ ಮತ್ತು ಪೆಗಾಟ್ರಾನ್ ಭಾರತದಲ್ಲಿ ಉತ್ಪಾದನೆಯನ್ನು ಹೆಚ್ಚಿಸಿವೆ.
ವಾಣಿಜ್ಯ
Retail inflation : ಚಿಲ್ಲರೆ ಹಣದುಬ್ಬರ ಹೆಚ್ಚಳಕ್ಕೆ ಆರ್‌ಬಿಐ ಕಳವಳ
ದೇಶದಲ್ಲಿ ಚಿಲ್ಲರೆ ಹಣದುಬ್ಬರ ಈಗಲೂ ಉನ್ನತ ಮಟ್ಟದಲ್ಲಿ ಇರುವುದಕ್ಕೆ ಆರ್‌ಬಿಐ ಕಳವಳ ವ್ಯಕ್ತಪಡಿಸಿದೆ. ಹೀಗಿದ್ದರೂ ಜಗತ್ತಿನ ಹಲವು ದೇಶಗಳಿಗೆ ಹೋಲಿಸಿದರೆ ಭಾರತದ ಎಕಾನಮಿ ( Retail inflation) ಉತ್ತಮವಾಗಿದೆ ಎಂದು ಬುಲೆಟಿನ್‌ನಲ್ಲಿ ತಿಳಿಸಿದೆ.
ಮುಂಬಯಿ: ದೇಶದಲ್ಲಿ ಚಿಲ್ಲರೆ ಹಣದುಬ್ಬರ ಈಗಲೂ ಉನ್ನತ ಮಟ್ಟದಲ್ಲಿ ಮುಂದುವರಿದಿರುವುದಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಂಗಳವಾರ ತನ್ನ ಮಾಸಿಕ ಬುಲೆಟಿನ್‌ನಲ್ಲಿ ಕಳವಳ ವ್ಯಕ್ತಪಡಿಸಿದೆ. ( Retail inflation) ಮೂಲ ಹಣದುಬ್ಬರ (core inflation) ಹೆಚ್ಚಳದ ಪರಿಣಾಮ ಉತ್ಪಾದನಾ ವೆಚ್ಚ ಹೆಚ್ಚುತ್ತಿದೆ ಎಂದು ತಿಳಿಸಿದೆ.
ರಿಟೇಲ್ ಹಣದುಬ್ಬರ 2023ರ ಜನವರಿಯಲ್ಲಿ 6.52% ಮತ್ತು ಫೆಬ್ರವರಿಯಲ್ಲಿ 6.44% ರಷ್ಟಿತ್ತು. ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 8% ಅಧಿಕ ಹಣದುಬ್ಬರ ಇತ್ತು. ಛತ್ತೀಸ್‌ಗಢ, ದಿಲ್ಲಿ, ಗೋವಾ, ಹಿಮಾಚಲಪ್ರದೇಶ, ಮಣಿಪುರದಲ್ಲಿ 4% ಕ್ಕಿಂತ ಕಡಿಮೆ ಹಣದುಬ್ಬರ ಇತ್ತು ಎಂದು ಆರ್‌ಬಿಐ ಬುಲೆಟಿನ್ ತಿಳಿಸಿದೆ.
ಭಾರತ ಪ್ರಗತಿಪರ ಮಾರುಕಟ್ಟೆಯಾಗಿದ್ದು, ವಿತ್ತೀಯ ಕೊರತೆ ( current account deficit) ಇದೆ. ಉಳಿತಾಯದ ಪ್ರಮಾಣ ಇಳಿಕೆಯಾಗಿದ್ದರೂ, ವಿದೇಶಿ ಸಂಪನ್ಮೂಲದ ಪೂರೈಕೆಯಿಂದ ಭರಿಸಲಾಗುತ್ತಿದೆ. ಹೀಗಾಗಿ ಉದ್ದೇಶಿತ ಹೂಡಿಕೆ ಸಾಧ್ಯವಾಗುತ್ತಿದೆ ಎಂದು ಆರ್‌ಬಿಐ ಬುಲೆಟಿನ್ ತಿಳಿಸಿದೆ.
ಜಗತ್ತಿನ ಹಲವಾರು ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಆರ್ಥಿಕತೆ ಉತ್ತಮ ಸ್ಥಿತಿಯಲ್ಲಿದೆ. ಜಾಗತಿಕ ಆರ್ಥಿಕತೆ 2023ರಲ್ಲಿ ಆರ್ಥಿಕ ಹಿಂಜರಿತದ ಭೀತಿಯಲ್ಲಿದ್ದರೂ, ಭಾರತವು ಕೋವಿಡ್ ಬಿಕ್ಕಟ್ಟಿನ ಬಳಿಕ ಆರ್ಥಿಕವಾಗಿಯೂ ಚೇತರಿಸಿಕೊಂಡಿದೆ ಎಂದು ಆರ್‌ಬಿಐ ತಿಳಿಸಿದೆ.
ವಾಣಿಜ್ಯ
Bisleri : ಬಿಸ್ಲೇರಿ ಕಂಪನಿಗೆ ಜಯಂತಿ ಚೌಹಾಣ್ ಸಾರಥ್ಯ
ಬಿಸ್ಲೇರಿ ( Bisleri ) ಸಾರಥ್ಯವನ್ನು ಕಂಪನಿಯ ಅಧ್ಯಕ್ಷ ರಮೇಶ್ ಚೌಹಾಣ್ ಅವರು ತಮ್ಮ ಪುತ್ರಿ ಜಯಂತಿ ಚೌಹಾಣ್ ಅವರಿಗೆ ವಹಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.
ಮುಂಬಯಿ: ಟಾಟಾ ಕನ್‌ಸ್ಯೂಮರ್ ಪ್ರಾಡಕ್ಸ್ಟ್ ಬಿಸ್ಲೇರಿ ಇಂಟರ್‌ನ್ಯಾಶನಲ್ ಕಂಪನಿಯ (Bisleri International) ಸ್ವಾಧೀನ ಪ್ರಕ್ರಿಯೆಯಿಂದ ಹಿಂದೆ ಸರಿದ ಬಳಿಕ, ಬಿಸ್ಲೇರಿಯ ಸಾರಥ್ಯವನ್ನು ಕಂಪನಿಯ ಅಧ್ಯಕ್ಷ ರಮೇಶ್ ಚೌಹಾಣ್ ಅವರ ಪುತ್ರಿ ಜಯಂತಿ ಚೌಹಾಣ್ (42) ವಹಿಸಲಿದ್ದಾರೆ. ಸ್ವತಃ ರಮೇಶ್ ಚೌಹಾಣ್ ಅವರೇ ಈ ವಿಷಯ ತಿಳಿಸಿದ್ದಾರೆ. ಬಿಸ್ಲೇರಿಯನ್ನು ಖರೀದಿಸುವ ಬಗ್ಗೆ ಟಾಟಾ ಕನ್‌ಸ್ಯೂಮರ್ ಪ್ರಾಡಕ್ಟ್ಸ್ ಮಾತುಕತೆ ನಡೆಸಿತ್ತು. ಆದರೆ ಇದೀಗ ಮಾತುಕತೆ ಸ್ಥಗಿತವಾಗಿದೆ. ಸುಮಾರು 7,000 ಕೋಟಿ ರೂ.ಗೆ ಬಿಸ್ಲೇರಿಯನ್ನು ಟಾಟಾ ಕಂಪನಿ ಖರೀದಿಸಲಿದೆ ಎಂದು ಕೆಲ ತಿಂಗಳ ಹಿಂದೆಯೇ ವದಂತಿ ಉಂಟಾಗುತ್ತು.
ಬಿಸ್ಲೇರಿಯನ್ನು ಸಿಇಒ ಏಂಜೆಲೊ ಜಾರ್ಜ್ ನೇತೃತ್ವದ ವೃತ್ತಿಪರ ತಂಡದ ಜತೆಗೆ ಮಗಳು ಜಯಂತಿ ಚೌಹಾಣ್ ಮುನ್ನಡೆಸಲಿದ್ದಾರೆ ಎಂದು ರಮೇಶ್ ಚೌಹಾಣ್ ತಿಳಿಸಿದ್ದಾರೆ. ಜಯಂತಿ ಚೌಹಾಣ್ ಪ್ರಸ್ತುತ ಕಂಪನಿಯ ಉಪಾಧ್ಯಕ್ಷೆಯಾಗಿದ್ದಾರೆ. ಪ್ರಾಡಕ್ಟ್ ಡೆವಲಪ್‌ಮೆಂಟ್ ಕೋರ್ಸ್ ಪೂರ್ಣಗೊಳಿಸಿದ್ದಾರೆ. 24ನೇ ವಯಸ್ಸನಲ್ಲಿ ಕಂಪನಿಗೆ ಸೇರ್ಪಡೆಯಾಗಿದ್ದರು.
ಬಿಸ್ಲೇರಿಯ ಭಾಗವಾಗಿರುವ ವೇದಿಕಾ ಬ್ರಾಂಡ್‌ನ ಅಭಿವೃದ್ಧಿಯಲ್ಲಿ ಕಳೆದ ಕೆಲ ವರ್ಷಗಳಿಂದ ಜಯಂತಿ ಚೌಹಾಣ್ ತೊಡಗಿಸಿಕೊಂಡಿದ್ದರು. ಜತೆಗೆ ಪ್ರತಿ ವಿಭಾಗದಲ್ಲೂ ಕ್ರಿಯಾಶೀಲತೆಗೆ ಒತ್ತು ನೀಡಿದ್ದರು. ಡಿಜಿಟಲ್ ಮಾರ್ಕೆಂಟಿಂಗ್‌ನಲ್ಲೂ ಅವರಿಗೆ ಆಸಕ್ತಿ ಇದೆ. ಕಂಪನಿಯ ಆಟೊಮೇಶನ್‌ನಲ್ಲೂ ಅವರು ಸಕ್ರಿಯರಾಗಿದ್ದರು ಎಂದು ರಮೇಶ್ ಚೌಹಾಣ್ ತಿಳಿಸಿದ್ದಾರೆ.
ಪ್ರಮುಖ ಸುದ್ದಿ
ChatGPT : ಚಾಟ್ ಜಿಪಿಟಿಯ ಪರಿಣಾಮ ಅನುವಾದಕರು, ವೆಬ್ ಡಿಸೈನರ್, ಲೇಖಕರಿಗೆ ಉದ್ಯೋಗ ನಷ್ಟ
ಚಾಟ್ ಜಿಪಿಟಿ (ChatGPT) ತಂತ್ರಜ್ಞಾನದ ಪರಿಣಾಮ ಅನುವಾದಕರು, ವೆಬ್ ಡಿಸೈನರ್, ಲೇಖಕರು, ವೆಬ್ ಡಿಸೈನರ್ಸ್ ಉದ್ಯೋಗಗಳು ನಷ್ಟವಾಗಲಿದೆ ಎಂದು ಅಮೆರಿಕದ ಓಪನ್ ಎಐ ವರದಿ ತಿಳಿಸಿದೆ.
ನವ ದೆಹಲಿ: ಚಾಟ್ ಜಿಪಿಟಿ (Chat GPT) ತಂತ್ರಜ್ಞಾನದ ಕ್ರಾಂತಿಯ ಪರಿಣಾಮ ಹಲವಾರು ಉದ್ಯೋಗಾವಕಾಶಗಳು ಕಣ್ಮರೆಯಾಗಲಿವೆ ಎಂದು ಅಮೆರಿಕ ಮೂಲದ ಓಪನ್ ಎಐ (OpenAI) ಮತ್ತು ಇತರ ಸಂಸ್ಥೆಗಳು ನಡೆಸಿದ ಅಧ್ಯಯನ ವರದಿ ತಿಳಿಸಿದೆ. ಕೃತಕ ಬುದ್ದಿಮತ್ತೆ ತಂತ್ರಜ್ಞಾನದ ಆಧಾರದಲ್ಲಿ ಮಶೀನ್ ಲರ್ನಿಂಗ್ ಮಾಡೆಲ್ ಆಗಿರುವ ಚಾಟ್ ಜಿಪಿಟಿಯ ಪರಿಣಾಮ ಅಮೆರಿಕದ ಎಕಾನಮಿಯಲ್ಲಿ ಹಲವು ಉದ್ಯೋಗಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಭಾಷೆಗಳನ್ನು ಆಧರಿಸಿದ ಹಲವು ಉದ್ಯೋಗಗಳಿಗೆ ಚಾಟ್ ಜಿಪಿಟಿಯಿಂದ ಕುತ್ತಾಗಲಿದೆ ಎಂದು ತಿಳಿಸಿದೆ.
ಕಡಿಮೆ ಸಂಬಳಕ್ಕಿಂತ ಹೆಚ್ಚು ವೇತನ ಇರುವ ಉದ್ಯೋಗಗಳು ಜಿಪಿಟಿ ತಂತ್ರಜ್ಞಾನ ಬಳಕೆಯಲ್ಲಿ ಪರ್ಯವಸಾನವಾಗಲಿದೆ. ಆದರೆ ಕ್ರಿಟಿಕಲ್ ಥಿಂಕಿಂಗ್ ಕೌಶಲ ಬಯಸುವ ಉದ್ಯೋಗಗಳಿಗೆ ತೊಂದರೆ ಆಗದು. ವೆಬ್ ಮತ್ತು ಡಿಜಿಟಲ್ ಇಂಟರ್‌ಫೇಸ್ ಡಿಸೈನರ್ಸ್, ಬ್ಲಾಕ್‌ಚೈನ್ ಎಂಜಿನಿಯರ್ಸ್, ತೆರಿಗೆ ಸಲಹೆಗಾರರು, ಲೇಖಕರು ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಚಾಟ್ ಜಿಪಿಟಿ ತಂತ್ರಜ್ಞಾನ ಪ್ರಭಾವ ಬೀರಲಿರುವ ಉದ್ಯೋಗಗಳ ಪಟ್ಟಿ ಇಂತಿದೆ:
ಅನುವಾದಕರು ಮತ್ತು ಇಂಟರ್‌ಪ್ರೆಟರ್ಸ್ , ಸರ್ವೇ ಸಂಶೋಧಕರು, ಕವಿಗಳು, ಕ್ರಿಯೇಟಿವ್ ಲೇಖಕರು, ಆನಿಮಲ್ ಸೈಂಟಿಸ್ಟ್, ಸಾರ್ವಜನಿಕ ಸಂಪರ್ಕ ತಜ್ಞರು, ಗಣಿತಜ್ಞರು, ತೆರಿಗೆ ಸಲಹೆಗಾರರು, ವೆಬ್ ಮತ್ತು ಡಿಜಿಟಲ್ ಇಂಟರ್‌ಫೇಸ್ ಡಿಸೈನರ್ಸ್, ಕರೆಸ್ಪಾಂಡೆನ್ಸ್ ಕ್ಲರ್ಕ್, ಬ್ಲಾಕ್‌ಚೈನ್ ಎಂಜಿನಿಯರ್ಸ್, ಕೋರ್ಟ್ ರಿಪೋರ್ಟರ್, ಅಕೌಂಟೆಂಟ್ಸ್, ಆಡಿಟರ್ಸ್, ವಾರ್ತಾ ವಿಶ್ಲೇಷಕರು, ವರದಿಗಾರರು, ಪತ್ರಕರ್ತರು, ಕಾನೂನು ಸಲಹೆಗಾರರು, ಆಡಳಿತಾತ್ಮಕ ಸಹಾಯಕರು, ಕ್ಲಿನಿಕಲ್ ಡೇಟಾ ಮ್ಯಾನೇಜರ್, ಹವಾಮಾನ ಬದಲಾವಣೆ ವಿಶ್ಲೇಷಕರು, ಮಾರ್ಕೆಟಿಂಗ್ ಸ್ಟ್ರಾಟಜಿಸ್ಟ್ಸ್, ಗ್ರಾಫಿಕ್ ಡಿಸೈನರ್ಸ್, ಇನ್ವೆಸ್ಟ್‌ಮೆಂಟ್ ಫಂಡ್ ಮ್ಯಾನೇಜರ್ಸ್, ಇನ್ಷೂರೆನ್ಸ್ ಅಪ್ರೈಸರ್ಸ್.
-
ಸುವಚನ15 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ21 hours ago
ವಿಸ್ತಾರ ಸಂಪಾದಕೀಯ: ಪಬ್ಲಿಕ್ ಪರೀಕ್ಷೆ ಗೊಂದಲ; ವಿದ್ಯಾರ್ಥಿಗಳು, ಪೋಷಕರ ಮೇಲೆ ಮಾನಸಿಕ ಒತ್ತಡ
-
ಆಟೋಮೊಬೈಲ್22 hours ago
Oscar 2023 : ನಾಟು ನಾಟು ಹಾಡಿಗೆ ಡಾನ್ಸ್ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ
-
ಕ್ರಿಕೆಟ್6 hours ago
IND VS AUS: ಭಾರತ-ಆಸ್ಟ್ರೇಲಿಯಾ ಅಂತಿಮ ಏಕದಿನ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ10 hours ago
Shivamogga politics : ಯುಗಾದಿ, ರಂಜಾನ್ಗೆ ಶುಭ ಕೋರಿ ಫ್ಲೆಕ್ಸ್ ಹಾಕಿಸಿದ ಆಯನೂರು, ಹರಕು ಬಾಯಿ ಮುಚ್ಚಲಿ ಅಂದಿದ್ದು ಯಾರಿಗೆ?
-
ಧಾರ್ಮಿಕ9 hours ago
Ugadi 2023 : ಜಗದ ಆದಿ ಈ ಯುಗಾದಿ!
-
ಅಂಕಣ10 hours ago
ನನ್ನ ದೇಶ ನನ್ನ ದನಿ ಅಂಕಣ: ಪಂಜಾಬ್ ನಾಶವಾಗುವುದು ಒಳ್ಳೆಯ ಲಕ್ಷಣವಲ್ಲ
-
ಕರ್ನಾಟಕ11 hours ago
Drugs Mafia : ಸಾಗರದಲ್ಲಿ ಡ್ರಗ್ಸ್ ಮಾರಾಟ ಯತ್ನ: ಲಾಂಗ್ ಸಹಿತ ಇಬ್ಬರ ಅರೆಸ್ಟ್, ಕೊಲೆ ಸಂಚೂ ಬಯಲು