Reliance Jio: ಡಾಟಾ ಟ್ರಾಫಿಕ್‌; ವಿಶ್ವದ ಅತಿದೊಡ್ಡ ಮೊಬೈಲ್ ಆಪರೇಟರ್ ಆಗಿ ಹೊರ ಹೊಮ್ಮಿದ ರಿಲಯನ್ಸ್ ಜಿಯೊ - Vistara News

ವಾಣಿಜ್ಯ

Reliance Jio: ಡಾಟಾ ಟ್ರಾಫಿಕ್‌; ವಿಶ್ವದ ಅತಿದೊಡ್ಡ ಮೊಬೈಲ್ ಆಪರೇಟರ್ ಆಗಿ ಹೊರ ಹೊಮ್ಮಿದ ರಿಲಯನ್ಸ್ ಜಿಯೊ

Reliance Jio: ಭಾರತದ ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೊ ಡಾಟಾ ಟ್ರಾಫಿಕ್‌ ವಿಚಾರದಲ್ಲಿ ಚೀನಾ ಮೊಬೈಲ್ ಅನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ಮೊಬೈಲ್ ಆಪರೇಟರ್ ಆಗಿ ಹೊರಹೊಮ್ಮಿದೆ. 2024ರ ಮಾರ್ಚ್ ವೇಳೆಗೆ ಜಿಯೊ 481.8 ಮಿಲಿಯನ್ (48,18,00000) ಚಂದಾದಾರರನ್ನು ಹೊಂದಿದೆ. ಜಿಯೊ ನೆಟ್‌ವರ್ಕ್‌ನಲ್ಲಿ ಟ್ರಾಫಿಕ್‌ 40.9 ಎಕ್ಸಾಬೈಟ್‌ (Exabytes)ಗೆ ತಲುಪಿದೆ. ಇದು ವರ್ಷದಿಂದ ವರ್ಷಕ್ಕೆ ಶೇ. 35.2ರಷ್ಟು ಹೆಚ್ಚಳವನ್ನು ಸೂಚಿಸುತ್ತದೆ ಎಂದು ಮೂಲಗಳು ತಿಳಿಸಿವೆ.

VISTARANEWS.COM


on

Reliance Jio
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: ಭಾರತದ ಟೆಲಿಕಾಂ ದೈತ್ಯ ರಿಲಯನ್ಸ್ ಜಿಯೊ (Reliance Jio) ಡಾಟಾ ಟ್ರಾಫಿಕ್‌ (Data traffic)ಯ ವಿಚಾರದಲ್ಲಿ ಚೀನಾ ಮೊಬೈಲ್ ಅನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ಮೊಬೈಲ್ ಆಪರೇಟರ್ ಆಗಿ ಹೊರಹೊಮ್ಮಿದೆ. ಜಿಯೋ ತನ್ನ ತ್ರೈಮಾಸಿಕ ಫಲಿತಾಂಶಗಳನ್ನು ಬಹಿರಂಗಪಡಿಸುತ್ತಿದ್ದಂತೆ ಈ ವಿಚಾರ ಬಹಿರಂಗಗೊಂಡಿದೆ.

2024ರ ಮಾರ್ಚ್ ವೇಳೆಗೆ ಜಿಯೊ 481.8 ಮಿಲಿಯನ್ (48,18,00000) ಚಂದಾದಾರರನ್ನು ಹೊಂದಿದೆ. ಅದರಲ್ಲಿ 108 ಮಿಲಿಯನ್ (10,80,00000) ಚಂದಾದಾರರು ಜಿಯೋದ ಟ್ರೂ 5 ಜಿ ಸ್ವತಂತ್ರ ನೆಟ್‌ವರ್ಕ್‌ ಬಳಸುತ್ತಿದ್ದಾರೆ. ಈ ಸಂಖ್ಯೆಯು ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ ಯಾವ ರೀತಿಯ ಪ್ರಭಾವ ಬೀರಿದೆ ಎನ್ನುವುದನ್ನು ಸಾಬೀತುಪಡಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಜಿಯೊ ನೆಟ್‌ವರ್ಕ್‌ನಲ್ಲಿ ಟ್ರಾಫಿಕ್‌ 40.9 ಎಕ್ಸಾಬೈಟ್‌ (Exabytes)ಗೆ ತಲುಪಿದೆ. ಇದು ವರ್ಷದಿಂದ ವರ್ಷಕ್ಕೆ ಶೇ. 35.2ರಷ್ಟು ಹೆಚ್ಚಳವನ್ನು ಸೂಚಿಸುತ್ತದೆ.

ಶೇ. 28ರಷ್ಟು ಟ್ರಾಫಿಕ್ 5 ಜಿ ಚಂದಾದಾರರಿಂದ ಕಂಡು ಬಂದಿದೆ. ಹೆಚ್ಚುವರಿಯಾಗಿ ಜಿಯೊ ಫಿಕ್ಸೆಡ್ ವೈರ್‌ಲೆಸ್‌ ಆಕ್ಸೆಸ್ (Fixed Wireless Access) ಸೇವೆಗಳು ಡಾಟಾ ಟ್ರಾಫಿಕ್‌ಗೆ ಗಮನಾರ್ಹ ಕೊಡುಗೆ ನೀಡಿವೆ ಎನ್ನುವುದನ್ನು ಅಂಕಿ-ಅಂಶಗಳು ತಿಳಿಸಿವೆ. ಕೋವಿಡ್ -19 ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ಬಳಿಕ ವಾರ್ಷಿಕ ಡಾಟಾ ಟ್ರಾಫಿಕ್‌ನಲ್ಲಿ 2.4 ಪಟ್ಟು ಹೆಚ್ಚಳ ಕಂಡು ಬಂದಿದೆ. ಮಾಸಿಕ ಡಾಟಾ ಬಳಕೆಯು ಮೂರು ವರ್ಷಗಳ ಹಿಂದೆ ಕೇವಲ 13.3 ಜಿಬಿ ಇತ್ತು. ಇದು 28.7 ಜಿಬಿಗೆ ಏರಿಕೆಯಾಗಿದೆ. ಈ ಅಂಕಿ-ಅಂಶ ಭಾರತದಲ್ಲಿ ಡಿಜಿಟಲ್ ಸಂಪರ್ಕದ ಮೇಲೆ ಹೆಚ್ಚುತ್ತಿರುವ ಅವಲಂಬನೆಯನ್ನು ಸೂಚಿಸುತ್ತದೆ ಎಂದು ವರದಿಗಳು ತಿಳಿಸಿವೆ.

ಫಲಿತಾಂಶಗಳ ಬಗ್ಗೆ ಪ್ರತಿಕ್ರಿಯಿಸಿದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ, ʼʼಕಂಪೆನಿಯ ಕಾರ್ಯಕ್ಷಮತೆ ಮತ್ತು ಭಾರತೀಯ ಆರ್ಥಿಕತೆಗೆ ಅದರ ಕೊಡುಗೆಯ ಬಗ್ಗೆ ತೃಪ್ತಿ ಇದೆʼʼ ಎಂದು ಹೇಳಿದ್ದಾರೆ.

“ರಿಲಯನ್ಸ್‌ ಇಂಡಸ್ಟ್ರೀಸ್‌ನ ಉಪಕ್ರಮಗಳು ಭಾರತೀಯ ಆರ್ಥಿಕತೆಯ ವಿವಿಧ ಕ್ಷೇತ್ರಗಳ ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಗಮನಾರ್ಹ ಕೊಡುಗೆ ನೀಡಿವೆ. ರಾಷ್ಟ್ರೀಯ ಆರ್ಥಿಕತೆಯನ್ನು ಬಲಪಡಿಸುವುದರ ಜತೆಗೆ ಕಂಪೆನಿಯ ಎಲ್ಲ ವಿಭಾಗಗಳು ದೃಢವಾದ ಹಣಕಾಸು ಮತ್ತು ಕಾರ್ಯಾಚರಣೆಯ ಕಾರ್ಯಕ್ಷಮತೆಯನ್ನು ದಾಖಲಿಸಿವೆ. ಇದು ಕಂಪೆನಿಯು ಅನೇಕ ಮೈಲಿಗಲ್ಲುಗಳನ್ನು ಸಾಧಿಸಲು ಸಹಾಯ ಮಾಡಿದೆ. ಈ ವರ್ಷ ತೆರಿಗೆ ಪೂರ್ವ ಲಾಭದಲ್ಲಿ 100,000 ಕೋಟಿ ರೂ.ಗಳ ಮಿತಿಯನ್ನು ದಾಟಿದ ಮೊದಲ ಭಾರತೀಯ ಕಂಪೆನಿ ರಿಲಯನ್ಸ್ ಎನ್ನುವುದು ಹೆಮ್ಮೆಯ ಸಂಗತಿʼʼ ಎಂದು ಅವರು ಸಂತಸ ವ್ಯಕಪಡಿಸಿದ್ದಾರೆ.

ಇದನ್ನೂ ಓದಿ: Reliance Jio Q4 Results: ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

“108,000,000ಕ್ಕೂ ಹೆಚ್ಚು ಟ್ರೂ 5 ಜಿ ಗ್ರಾಹಕರೊಂದಿಗೆ ಜಿಯೊ ಭಾರತದಲ್ಲಿ 5 ಜಿ ನೆಟ್‌ವರ್ಕ್‌ ವಿಚಾರದಲ್ಲಿ ಮುಂಚೂಣಿಯಲ್ಲಿದೆ. ಜಿಯೋ ದೇಶದ ಡಿಜಿಟಲ್ ಮೂಲ ಸೌಕರ್ಯವನ್ನು ಬಲಪಡಿಸುವಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಕಂಪೆನಿಯ ಚಿಲ್ಲರೆ ವಿಭಾಗವಾದ ರಿಲಯನ್ಸ್ ರೀಟೇಲ್ ಕೂಡ ದೃಢವಾದ ಬೆಳವಣಿಗೆಯನ್ನು ದಾಖಲಿಸಿದೆ. ಗ್ರಾಹಕರ ಸಂಖ್ಯೆಯಲ್ಲಿ ಶೇ. 36ರಷ್ಟು ಹೆಚ್ಚಳವಾಗಿದೆʼʼ ಎಂದು ಅವರು ತಿಳಿಸಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Equity Market: ದೇಶದ ಷೇರುಪೇಟೆಯಲ್ಲಿ ಗೂಳಿ ನೆಗೆತ; 6 ತಿಂಗಳಲ್ಲಿ 1 ಲಕ್ಷ ಕೋಟಿ ಡಾಲರ್‌ ಗಳಿಕೆ!

Equity Market: ಕಳೆದ 6 ತಿಂಗಳಲ್ಲಿ ಬಾಂಬ್‌ ಸ್ಟಾಕ್‌ ಎಕ್ಸ್‌ಚೇಂಜ್‌ (BSE) ಪಟ್ಟಿಯಲ್ಲಿರುವ ಕಂಪನಿಗಳು 1 ಲಕ್ಷ ಕೋಟಿ ಡಾಲರ್‌ ಗಳಿಸಿವೆ ಎಂಬುದಾಗಿ ತಿಳಿದುಬಂದಿದೆ. ಇದರೊಂದಿಗೆ ಭಾರತದ ಈಕ್ವಿಟಿ ಮಾರುಕಟ್ಟೆಯ ಮೌಲ್ಯವು 5 ಲಕ್ಷ ಕೋಟಿ ಡಾಲರ್‌ ದಾಟುವ ಮೂಲಕ ಹೊಸ ಇತಿಹಾಸ ಸೃಷ್ಟಿಯಾದಂತಾಗಿದೆ. ಜೂನ್‌ 4ರ ಬಳಿಕ ದೇಶದ ಷೇರು ಮಾರುಕಟ್ಟೆಯನ್ನು ನಿಯಂತ್ರಿಸುವುದು ಕಷ್ಟ ಎಂಬುದಾಗಿ ಮೋದಿ ಹೇಳಿರುವ ಬೆನ್ನಲ್ಲೇ ಸಕಾರಾತ್ಮಕ ಬೆಳವಣಿಗೆ ಕಂಡುಬಂದಿದೆ. ಇದು ಹೂಡಿಕೆದಾರರ ವಿಶ್ವಾಸ ಹೆಚ್ಚಿಸಿದೆ ಎಂದು ಹೇಳಲಾಗುತ್ತಿದೆ.

VISTARANEWS.COM


on

Equity Market
Koo

ಮುಂಬೈ: ಲೋಕಸಭೆ ಚುನಾವಣೆ (Lok Sabha Election 2024) ಫಲಿತಾಂಶ ಪ್ರಕಟವಾಗುವ ಜೂನ್‌ 4ರ ಬಳಿಕ ಭಾರತದ ಷೇರು ಮಾರುಕಟ್ಟೆಯನ್ನು ಹಿಡಿಯಲು ಆಗುವುದಿಲ್ಲ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ಜೂನ್‌ 4ರ ಬಳಿಕ ಹೂಡಿಕೆದಾರರಿಗೆ ಭಾರಿ ಲಾಭವಾಗಲಿದೆ ಎಂಬುದಾಗಿ ಅಮಿತ್‌ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ, ಕಳೆದ 6 ತಿಂಗಳಲ್ಲಿ ಬಾಂಬ್‌ ಸ್ಟಾಕ್‌ ಎಕ್ಸ್‌ಚೇಂಜ್‌ (BSE) ಪಟ್ಟಿಯಲ್ಲಿರುವ ಕಂಪನಿಗಳು 1 ಲಕ್ಷ ಕೋಟಿ ಡಾಲರ್‌ ಗಳಿಸಿವೆ ಎಂಬುದಾಗಿ ತಿಳಿದುಬಂದಿದೆ. ಇದರೊಂದಿಗೆ ಭಾರತದ ಈಕ್ವಿಟಿ ಮಾರುಕಟ್ಟೆಯ ಮೌಲ್ಯವು 5 ಲಕ್ಷ ಕೋಟಿ ಡಾಲರ್‌ ದಾಟುವ ಮೂಲಕ ಹೊಸ ಇತಿಹಾಸ ಸೃಷ್ಟಿಯಾದಂತಾಗಿದೆ.

ಹೌದು, 2023ರ ನವೆಂಬರ್‌ನಲ್ಲಿ ಬಿಎಸ್‌ಇ ಒಟ್ಟು ಮಾರುಕಟ್ಟೆ ಮೊತ್ತವು 4 ಲಕ್ಷ ಕೋಟಿ ಡಾಲರ್‌ ಇತ್ತು. ಬಿಎಸ್‌ಇನಲ್ಲಿ ಲಿಸ್ಟ್‌ ಆಗಿರುವ ಕಂಪನಿಗಳ ಮಾರುಕಟ್ಟೆ ಬಂಡವಾಳವು ಕಳೆದ 6 ತಿಂಗಳಲ್ಲಿಯೇ 1 ಲಕ್ಷ ಕೋಟಿ ಡಾಲರ್‌ ಜಾಸ್ತಿಯಾಗಿದೆ. ಬಿಎಸ್‌ಇ ಲಿಸ್ಟ್‌ ಆಗಿರುವ ಕಂಪನಿಯಗಳ ಮಾರುಕಟ್ಟೆ ಬಂಡವಾಳವು 2007ರ ಮೇ ತಿಂಗಳಲ್ಲಿ 1 ಲಕ್ಷ ಕೋಟಿ ಡಾಲರ್‌ ತಲುಪಿತ್ತು. ಇದಾದ ಒಂದು ದಶಕದ ಬಳಿಕ ಅಂದರೆ, 2017ರ ಜುಲೈನಲ್ಲಿ 2 ಲಕ್ಷ ಕೋಟಿ ಡಾಲರ್‌ ತಲುಪಿತ್ತು. ಇನ್ನು 2021ರ ಮೇ ತಿಂಗಳಲ್ಲಿ 4 ಲಕ್ಷ ಕೋಟಿ ಡಾಲರ್‌ ಆಗಿತ್ತು. ಈಗ ಆರೇ ತಿಂಗಳಲ್ಲಿ ಮಾರುಕಟ್ಟೆ ಬಂಡವಾಳವು 1 ಲಕ್ಷ ಕೋಟಿ ಡಾಲರ್‌ ಜಾಸ್ತಿಯಾಗಿದೆ.

ಇದರೊಂದಿಗೆ ಮಾರುಕಟ್ಟೆ ಬಂಡವಾಳ ಮೌಲ್ಯವು 5 ಲಕ್ಷ ಕೋಟಿ ಡಾಲರ್‌ ತಲುಪಿರುವುದು ಐತಿಹಾಸಿಕ ಎಂದೇ ಹೇಳಲಾಗುತ್ತಿದೆ. ಇದರಿಂದ ಹೂಡಿಕೆದಾರರ ವಿಶ್ವಾಸವೂ ಹೆಚ್ಚಾಗಿದೆ ಎಂದು ವಿಶ್ಲೇಷಿಸಲಾಗಿದೆ. 5 ಲಕ್ಷ ಕೋಟಿ ಡಾಲರ್‌ ಎಂದರೆ ಭಾರತದ 414.75 ಲಕ್ಷ ಕೋಟಿ ರೂ. ಆಗಿದೆ. ಭಾರತದ ಈಕ್ವಿಟಿ ಮಾರುಕಟ್ಟೆಯಲ್ಲಿಯೇ ಮೊದಲ ಬಾರಿಗೆ ಇಷ್ಟೊಂದು ವೇಗದಲ್ಲಿ ಮಾರುಕಟ್ಟೆಯ ಬಂಡವಾಳವು ಏರಿಕೆಯಾಗಿದೆ ಎಂಬುದಾಗಿ ತಜ್ಞರು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿ ನಿರೀಕ್ಷಿಸಲಾಗಿದೆ.

ಸದ್ಯ, ನಿಫ್ಟಿಯು ತನ್ನ ಗರಿಷ್ಠ ಪಾಯಿಂಟ್‌ಗಳಿಗಿಂತ 250 ಪಾಯಿಂಟ್‌ ಹಿಂದಿದೆ. ಆದರೂ, ಸಣ್ಣ ಹಾಗೂ ಮಧ್ಯಮ ಶ್ರೇಣಿಯ ಹೂಡಿಕೆಯು ಹೆಚ್ಚಾಗಿದೆ. ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಭಾರತದ ಷೇರುಪೇಟೆಯು ಮಹತ್ವದ ಸ್ಥಾನ ಪಡೆದಿದೆ. ಹಾಂಕಾಂಗ್‌, ಜಪಾನ್‌, ಚೀನಾ ಹಾಗೂ ಅಮೆರಿಕದ ನಂತರ ಭಾರತದ ಷೇರುಪೇಟೆಯು ಬೃಹತ್‌ ಷೇರು ಮಾರುಕಟ್ಟೆ ಎನಿಸಿದೆ. 2027ರ ವೇಳೆಗೆ ಭಾರತವು ವಿಶ್ವದಲ್ಲೇ ಮೂರನೇ ಬೃಹತ್‌ ಆರ್ಥಿಕತೆ ರಾಷ್ಟ್ರ ಎಂಬ ಖ್ಯಾತಿ ಗಳಿಸುವ ವಿಶ್ವಾಸ ಹೊಂದಿದೆ. 2030ರ ವೇಳೆಗೆ ಮಾರುಕಟ್ಟೆ ಬಂಡವಾಳವು 10 ಲಕ್ಷ ಡಾಲರ್‌ ತಲುಪಬೇಕು ಎಂಬ ಗುರಿ ಇದೆ. ಇದರ ದಿಸೆಯಲ್ಲಿ ಈಕ್ವಿಟಿ ಮೌಲ್ಯವು ಗಣನೀಯವಾಗಿ ಏರಿಕೆಯಾಗಿರುವುದು ಸಕಾರಾತ್ಮಕ ಸಂಗತಿಯಾಗಿದೆ.

ಇದನ್ನೂ ಓದಿ: LIC: ಎಲ್‌ಐಸಿಗೆ ಬಿಗ್‌ ರಿಲೀಫ್‌; ಸಾರ್ವಜನಿಕರ ಷೇರು ಪಾಲು ಶೇ. 10ಕ್ಕೆ ಹೆಚ್ಚಿಸಲು 3 ವರ್ಷ ಹೆಚ್ಚುವರಿ ಕಾಲಾವಕಾಶ

Continue Reading

ಮನಿ-ಗೈಡ್

Money Guide: ಉಮಂಗ್ ಆ್ಯಪ್‌ ಮೂಲಕ ಪಿಎಫ್‌ ಮೊತ್ತ ಹೀಗೆ ವಿತ್‌ಡ್ರಾ ಮಾಡಬಹುದು

Money Guide: ನೌಕರರ ಭವಿಷ್ಯ ನಿಧಿ ಉದ್ಯೋಗಿಗಳ ಪಾಲಿಗೆ ಅತ್ಯುತ್ತಮ ನಿವೃತ್ತಿ ಉಳಿತಾಯ ಆಯ್ಕೆ ಎನಿಸಿಕೊಂಡಿದೆ. ಉದ್ಯೋಗಿಗಳ ಪಾಲಿಗೆ ಅತ್ಯುತ್ತಮ ನಿವೃತ್ತಿ ಉಳಿತಾಯ ಆಯ್ಕೆ ಎನಿಸಿಕೊಂಡಿದೆ. ಈ ಯೋಜನೆಯಲ್ಲಿ ಉದ್ಯೋಗಿಗಳು ಮತ್ತು ಉದ್ಯೋಗದಾತರಿಂದ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ನೌಕರರ ಉಳಿತಾಯ ಮನೋಭಾವವನ್ನು ಉತ್ತೇಜಿಸಲಾಗುತ್ತದೆ. ಪ್ರತಿ ತಿಂಗಳು ತಮ್ಮ ಮೂಲ ವೇತನದ ಶೇ. 12ರಷ್ಟು ಕೊಡುಗೆ ನೀಡುವ ಉದ್ಯೋಗಿಗಳಿಗೆ ಈ ಯೋಜನೆಯು ಶೇ. 8.15 ಬಡ್ಡಿದರವನ್ನು ನೀಡುತ್ತದೆ. ಉದ್ಯೋಗಿಗಳು ನಿವೃತ್ತರಾದ ನಂತರ ತಮ್ಮ ಪಿಎಫ್‌ ಖಾತೆಯಲ್ಲಿ ಸಂಗ್ರಹವಾದ ಸಂಪೂರ್ಣ ಮೊತ್ತವನ್ನು ಹಿಂಪಡೆಯಬಹುದು. ಅದಕ್ಕಾಗಿ ನೀವು ಉಮಾಂಗ್ ಆ್ಯಪ್‌ ಬಳಸಬಹುದು. ಉಮಾಂಗ್ ಆ್ಯಪ್‌ ಬಳಕೆಯ ಸಂಪೂರ್ಣ ವಿವರ ಇಲ್ಲಿದೆ.

VISTARANEWS.COM


on

Money Guide
Koo

ಬೆಂಗಳೂರು: ಪಿಎಫ್ (PF) ಎಂದೂ ಕರೆಯಲ್ಪಡುವ ನೌಕರರ ಭವಿಷ್ಯ ನಿಧಿ (Employees Provident Fund-EPFಉದ್ಯೋಗಿಗಳ ಪಾಲಿಗೆ ಅತ್ಯುತ್ತಮ ನಿವೃತ್ತಿ ಉಳಿತಾಯ ಆಯ್ಕೆ ಎನಿಸಿಕೊಂಡಿದೆ. ಈ ಯೋಜನೆಯಲ್ಲಿ ಉದ್ಯೋಗಿಗಳು ಮತ್ತು ಉದ್ಯೋಗದಾತರಿಂದ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ನೌಕರರ ಉಳಿತಾಯ ಮನೋಭಾವವನ್ನು ಉತ್ತೇಜಿಸಲಾಗುತ್ತದೆ. ಪ್ರತಿ ತಿಂಗಳು ತಮ್ಮ ಮೂಲ ವೇತನದ ಶೇ. 12ರಷ್ಟು ಕೊಡುಗೆ ನೀಡುವ ಉದ್ಯೋಗಿಗಳಿಗೆ ಈ ಯೋಜನೆಯು ಶೇ. 8.15 ಬಡ್ಡಿದರವನ್ನು ನೀಡುತ್ತದೆ. ಉದ್ಯೋಗಿಗಳು ನಿವೃತ್ತರಾದ ನಂತರ ತಮ್ಮ ಪಿಎಫ್‌ ಖಾತೆಯಲ್ಲಿ ಸಂಗ್ರಹವಾದ ಸಂಪೂರ್ಣ ಮೊತ್ತವನ್ನು ಹಿಂಪಡೆಯಬಹುದು. ಅದಾಗ್ಯೂ ಅನಾರೋಗ್ಯದಂತಹ ತುರ್ತು ಸಂದರ್ಭಗಳಲ್ಲಿ ಪಿಎಫ್ ಅಕೌಂಟ್‌ನಿಂದ ಒಂದಷ್ಟು ದುಡ್ಡು ಹಿಂಪಡೆಯಬಹುದು. ಹೀಗ ಹಣ ಹಿಂಪಡೆಯುವುದು ಈಗ ಸುಲಭ. ಕೂತಲ್ಲಿಯೇ, ಮೊಬೈಲ್‌ ಮೂಲಕವೇ ಅಪ್ಲೈ ಮಾಡಬಹುದು. ಆ ಕುರಿತಾದ ವಿವರ ಇಲ್ಲಿದೆ (Money Guide).

ಇ-ನಾಮಿನೇಷನ್‌ ಮಾಡಿಕೊಂಡಿರುವ ಪಿಎಫ್‌ ಸದಸ್ಯರು ತಮ್ಮ ಖಾತೆಯಿಂದ ಒಂದಷ್ಟು ಮೊತ್ತ, ಅಡ್ವಾನ್ಸ್‌ ಮತ್ತು ಪೆನ್ಶನ್‌ ಪಡೆಯಲು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ಇಪಿಎಫ್‌ಒ ವೆಬ್‌ಸೈಟ್‌ ಅಥವಾ ಉಮಾಂಗ್ ಆ್ಯಪ್‌ ಬಳಸಬಹುದು. ಅದರಲ್ಲಿಯೂ ಉಮಂಗ್ ಆ್ಯಪ್‌ ಅನ್ನು ಹೆಚ್ಚು ಅನುಕೂಲ ಎಂದೇ ಪರಿಗಣಿಸಲಾಗುತ್ತದೆ. ಹೀಗಾಗಿ ಇದರ ಬಳಕೆಗೆ ತಜ್ಞರು ಶಿಫಾರಸ್ಸು ಮಾಡುತ್ತಾರೆ. ಹಣ ವಿತ್‌ಡ್ರಾ ಮಾತ್ರವಲ್ಲ ಉಮಾಂಗ್ ಆ್ಯಪ್‌ ಮೂಲಕ ಬ್ಯಾಲೆನ್ಸ್‌ ಕೂಡ ಚೆಕ್‌ ಮಾಡಬಹುದು ಎನ್ನುವುದು ವಿಶೇಷ.

ಉಮಾಂಗ್ ಆ್ಯಪ್‌ ಬಳಕೆಯ ವಿಧಾನ

 • ಗೂಗಲ್‌ ಪ್ಲೇ ಸ್ಟೋರ್‌ ಅಥವಾ ಆ್ಯಪಲ್‌ ಆ್ಯಪ್‌ ಸ್ಟೋರ್‌ನಿಂದ ಉಮಂಗ್ ಆ್ಯಪ್‌ ಡೌನ್‌ಲೋಡ್‌ ಮಾಡಿ.
 • ಆ್ಯಪ್‌ ಓಪನ್‌ ಮಾಡಿ ಆಧಾರ್‌ ನಂಬರ್‌ ಮತ್ತು ಪಾಸ್‌ವರ್ಡ್‌ ಮೂಲಕ ಲಾಗಿನ್‌ ಆಗಿ.
 • ಲಾಗಿನ್‌ ಆದ ಬಳಿಕ ಸರ್ವಿಸ್‌ ಲಿಸ್ಟ್‌ನಲ್ಲಿನ EPFO ಆಯ್ಕೆ ಸೆಲೆಕ್ಟ್‌ ಮಾಡಿ.
 • ಈಗ ಪಿಎಫ್‌ ಬ್ಯಾಲನ್ಸ್‌, ನಾಮಿನೇಷನ್‌ ಅಥವಾ ಕೆವೈಸಿ ಅಪ್‌ಡೇಟ್‌ ಆಯ್ಕೆ ಕಾಣಿಸಿಕೊಳ್ಳಲಿದ್ದು, ನಿಮಗೆ ಅಗತ್ಯವಿರುವುದನ್ನು ಸೆಲೆಕ್ಟ್‌ ಮಾಡಿ.
 • ಬಳಿಕ ಸ್ಕ್ರೀನ್‌ನಲ್ಲಿ ಕಾಣಿಸುವ ಸ್ಟೆಪ್‌ ಫಾಲೋ ಮಾಡಿ.

ಹಣ ವಿತ್‌ಡ್ರಾ ಮಾಡುವ ವಿಧಾನ

 • ಉಮಂಗ್ ಆ್ಯಪ್‌ ಓಪನ್‌ ಮಾಡಿ ಆಧಾರ್‌ ನಂಬರ್‌, ಪಾಸ್‌ವರ್ಡ್‌ ನಮೂದಿಸಿ ಲಾಗಿನ್‌ ಆಗಿ.
 • ಸರ್ವಿಸ್‌ ಲಿಸ್ಟ್‌ನಲ್ಲಿನ EPFO ಆಯ್ಕೆ ಸೆಲೆಕ್ಟ್‌ ಮಾಡಿ.
 • Raise Claim ಆಯ್ಕೆಯನ್ನು ಸೆಲೆಕ್ಟ್‌ ಮಾಡಿ.
 • ಈಗ UAN ನಂಬರ್‌ ನಮೂದಿಸಿ. ಅದಾದ ಬಳಿಕ ನಿಮ್ಮ ಮೊಬೈಲ್‌ ನಂಬರ್‌ಗೆ ಬರುವ ಒಟಿಪಿಯನ್ನು ನಮೂದಿಸಿ.
 • ಯಾವ ರೀತಿಯ ವಿತ್‌ಡ್ರಾ ಅಗತ್ಯ ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಿ
 • ಅಗತ್ಯ ಮಾಹಿತಿಗಳನ್ನು ತುಂಬಿ.

ಉಮಾಂಗ್ ಆ್ಯಪ್‌ ಮೂಲಕ ನೀವು ಪಡೆಯಬಹುದಾದ ಇತರ ಸೇವೆಗಳು

 • ಪಿಎಫ್‌ ಬ್ಯಾಲನ್ಸ್‌ ಪರಿಶೀಲನೆ
 • ಕೆವೈಸಿ ಮಾಹಿತಿಯ ಅಪ್‌ಡೇಟ್‌
 • ಪಾಸ್‌ಬುಕ್‌ ಪರಿಶೀಲನೆ
 • ಜೀವನ್‌ ಪ್ರಮಾಣ್‌ ಸರ್ಟಿಫಿಕೆಟ್‌ ಪಡೆಯಲು
 • ಪೆನ್ಶನ್‌ ಪೇಮೆಂಟ್‌ ಆರ್ಡರ್‌ (PPO) ಡೌನ್‌ಲೋಡ್‌ ಮಾಡಲು

ಇಪಿಎಫ್‌ ಖಾತೆಯ ವೈಶಿಷ್ಟ್ಯ

 • ಉದ್ಯೋಗಿಗಳ ಕೊಡುಗೆ ಸಾಮಾನ್ಯವಾಗಿ ಮೂಲ ವೇತನದ ಶೇ. 12ರಷ್ಟಿರುತ್ತದೆ.
 • ಉದ್ಯೋಗದಾತರ ಕೊಡುಗೆ ನಿಮ್ಮ ಮೂಲ ವೇತನ ಮತ್ತು ತುಟ್ಟಿಭತ್ಯೆಯ ಶೇ. 12ಕ್ಕೆ ಸಮನಾಗಿರುತ್ತದೆ. ಉದ್ಯೋಗದಾತರ ಕೊಡುಗೆಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ: ಅವೆಂದರೆ- ಇಪಿಎಫ್ ಮತ್ತು ನೌಕರರ ಪಿಂಚಣಿ ಯೋಜನೆ(ಇಪಿಎಸ್).
 • ಹೀಗೆ ನಿಮ್ಮ ಮತ್ತು ಉದ್ಯೋಗದಾತರ ಕೊಡುಗೆಗಳೊಂದಿಗೆ ಪ್ರತಿ ತಿಂಗಳು ನಿವೃತ್ತಿಗಾಗಿ ಗಣನೀಯ ಮೊತ್ತವನ್ನು ಮೀಸಲಿಡಲಾಗುತ್ತದೆ. ಇದು ಭಾರತದಲ್ಲಿ ಕಡ್ಡಾಯ.

ಇದನ್ನೂ ಓದಿ: Money Guide: ಮೊಬೈಲ್‌ನಲ್ಲಿಯೇ ಪಿಎಫ್‌ ಮೊತ್ತ ಪರಿಶೀಲಿಸಬೇಕೆ?; ಜಸ್ಟ್‌ ಹೀಗೆ ಮಾಡಿ ಸಾಕು

Continue Reading

ದೇಶ

India Skills: ಇಂಡಿಯಾ ಸ್ಕಿಲ್ಸ್ 2024 ಗ್ರ್ಯಾಂಡ್ ಫಿನಾಲೆ; ವರ್ಲ್ಡ್ ಸ್ಕಿಲ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ 58 ವಿಜೇತರು

India Skills: ʼಇಂಡಿಯಾ ಸ್ಕಿಲ್ಸ್ ನ್ಯಾಷನಲ್ ಕಾಂಪಿಟೇಶನ್ 2024ʼ ಸ್ಪರ್ಧಾ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಭಾನುವಾರ ದ್ವಾರಕಾದ ಯಶೋಭೂಮಿಯಲ್ಲಿ ನಡೆದಿದ್ದು, ಫ್ರಾನ್ಸ್‌ನ ಲಿಯಾನ್‌ನಲ್ಲಿ ಇದೇ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ವರ್ಲ್ಡ್ ಸ್ಕಿಲ್ಸ್‌ನಲ್ಲಿ 58 ವಿಜೇತರು ಭಾರತವನ್ನು ಪ್ರತಿನಿಧಿಸಲಿದ್ದಾರೆ. ವಾಲ್ ಮತ್ತು ಫ್ಲೋರ್ ಟೈಲಿಂಗ್, ಬ್ರಿಕ್ಲೇಯಿಂಗ್, ಕಾರ್ಪೆಂಟ್ರಿ, ಫ್ಯಾಶನ್ ಟೆಕ್ನಾಲಜಿ, 3ಡಿ ಡಿಜಿಟಲ್ ಗೇಮ್ ಆರ್ಟ್, ಕ್ಲೌಡ್ ಕಂಪ್ಯೂಟಿಂಗ್, ಮೊಬೈಲ್ ಅಪ್ಲಿಕೇಶನ್‌ಗಳ ಅಭಿವೃದ್ಧಿ, ಸ್ವಾಯತ್ತ ಮೊಬೈಲ್ ರೊಬೋಟಿಕ್ಸ್, ಆರೋಗ್ಯ ಮತ್ತು ಸಾಮಾಜಿಕ ಕಾಳಜಿ ಸೇರಿದಂತೆ 61ಕ್ಕೂ ಅಧಿಕ ಕೌಶಲ್ಯಗಳಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 900 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 400ಕ್ಕೂ ಹೆಚ್ಚು ಉದ್ಯಮ ತಜ್ಞರು ಪಾಲ್ಗೊಂಡಿದ್ದರು.

VISTARANEWS.COM


on

India Skills National Competition 2024 Grand Finale 58 Winners to Represent India at World Skills
Koo

ಬೆಂಗಳೂರು: ʼಇಂಡಿಯಾ ಸ್ಕಿಲ್ಸ್ ನ್ಯಾಷನಲ್ ಕಾಂಪಿಟೇಶನ್ 2024ʼ (India Skills National Competition 2024) ಸ್ಪರ್ಧಾ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಭಾನುವಾರ ದ್ವಾರಕಾದ ಯಶೋಭೂಮಿಯಲ್ಲಿ ನಡೆದಿದ್ದು, ಫ್ರಾನ್ಸ್‌ನ ಲಿಯಾನ್‌ನಲ್ಲಿ ಇದೇ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ವರ್ಲ್ಡ್ ಸ್ಕಿಲ್ಸ್‌ನಲ್ಲಿ 58 ವಿಜೇತರು ಭಾರತವನ್ನು ಪ್ರತಿನಿಧಿಸಲಿದ್ದಾರೆ.

ನಾಲ್ಕು ದಿನಗಳ ಕಾಲ ನಡೆದ ʼಇಂಡಿಯಾ ಸ್ಕಿಲ್ಸ್ ನ್ಯಾಷನಲ್ ಕಾಂಪಿಟೇಶನ್ 2024ʼ ಸ್ಪರ್ಧೆಯಲ್ಲಿ ವಾಲ್ ಮತ್ತು ಫ್ಲೋರ್ ಟೈಲಿಂಗ್, ಬ್ರಿಕ್ಲೇಯಿಂಗ್, ಕಾರ್ಪೆಂಟ್ರಿ, ಫ್ಯಾಶನ್ ಟೆಕ್ನಾಲಜಿ, 3ಡಿ ಡಿಜಿಟಲ್ ಗೇಮ್ ಆರ್ಟ್, ಕ್ಲೌಡ್ ಕಂಪ್ಯೂಟಿಂಗ್, ಮೊಬೈಲ್ ಅಪ್ಲಿಕೇಶನ್‌ಗಳ ಅಭಿವೃದ್ಧಿ, ಸ್ವಾಯತ್ತ ಮೊಬೈಲ್ ರೊಬೊಟಿಕ್ಸ್, ಆರೋಗ್ಯ ಮತ್ತು ಸಾಮಾಜಿಕ ಕಾಳಜಿ ಸೇರಿದಂತೆ 61ಕ್ಕೂ ಅಧಿಕ ಕೌಶಲ್ಯಗಳಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 900ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 400ಕ್ಕೂ ಹೆಚ್ಚು ಉದ್ಯಮ ತಜ್ಞರು ಪಾಲ್ಗೊಂಡಿದ್ದರು.

ಇದನ್ನೂ ಓದಿ: 2nd PUC Result : ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟ; ಬಾಲಕಿಯರದೇ ಮೇಲುಗೈ

ʼಇಂಡಿಯಾ ಸ್ಕಿಲ್ಸ್ ನ್ಯಾಷನಲ್ ಕಾಂಪಿಟೇಶನ್ 2024ʼ ಸ್ಪರ್ಧಾ ಕಾರ್ಯಕ್ರಮದಲ್ಲಿ ಒಡಿಶಾ ಅತಿ ಹೆಚ್ಚು ವಿಜೇತರನ್ನು ಹೊಂದಿದ್ದು, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ನಂತರದ ಸ್ಥಾನದಲ್ಲಿವೆ. 17 ಚಿನ್ನ, 13 ಬೆಳ್ಳಿ, 9 ಕಂಚಿನ ಪದಕಗಳನ್ನು ಮತ್ತು 12 ಸ್ಪರ್ಧಾಳುಗಳು ಶ್ರೇಷ್ಠತಾ ಪ್ರಶಸ್ತಿ ಪಡೆಯುವುದರೊಂದಿಗೆ ಒಡಿಶಾ ಅತಿ ಹೆಚ್ಚು ವಿಜೇತರನ್ನು ಹೊಂದಿದೆ. ಕರ್ನಾಟಕ ರಾಜ್ಯವು 13 ಚಿನ್ನ, 12 ಬೆಳ್ಳಿ, 3 ಕಂಚಿನ ಪದಕ ಮತ್ತು 19 ಶ್ರೇಷ್ಠತಾ ಪ್ರಶಸ್ತಿ, ತಮಿಳುನಾಡು 6 ಚಿನ್ನ, 8 ಬೆಳ್ಳಿ, 9 ಕಂಚು ಮತ್ತು 17 ಸ್ಪರ್ಧಾಳುಗಳು ಶ್ರೇಷ್ಠತಾ ಪ್ರಶಸ್ತಿಯನ್ನು ಪಡೆದಿದ್ದಾರೆ.

ಮಹಾರಾಷ್ಟ್ರ 3 ಚಿನ್ನ, 5 ಬೆಳ್ಳಿ, 6 ಕಂಚಿನ ಪದಕ ಮತ್ತು 14 ಶ್ರೇಷ್ಠತಾ ಪ್ರಶಸ್ತಿ, ಉತ್ತರ ಪ್ರದೇಶ ರಾಜ್ಯವು 3 ಚಿನ್ನ, 3 ಬೆಳ್ಳಿ, 6 ಕಂಚಿನ ಪದಕಗಳು ಮತ್ತು 16 ಶ್ರೇಷ್ಠತಾ ಪ್ರಶಸ್ತಿ, ದೆಹಲಿ 5 ಚಿನ್ನ, 3 ಬೆಳ್ಳಿ, 2 ಕಂಚಿನ ಪದಕಗಳು ಮತ್ತು 10 ಶ್ರೇಷ್ಠತಾ ಪ್ರಶಸ್ತಿ, ರಾಜಸ್ಥಾನ ರಾಜ್ಯವು 2 ಚಿನ್ನ, 5 ಬೆಳ್ಳಿ, 3 ಕಂಚಿನ ಪದಕಗಳು, ಮತ್ತು 9 ಶ್ರೇಷ್ಠತಾ ಪ್ರಶಸ್ತಿ, ಹರಿಯಾಣ 2 ಚಿನ್ನ, 3 ಬೆಳ್ಳಿ, 3 ಕಂಚಿನ ಪದಕಗಳು ಮತ್ತು 13 ಶ್ರೇಷ್ಠತಾ ಪ್ರಶಸ್ತಿ, ಮಧ್ಯಪ್ರದೇಶ 1 ಚಿನ್ನ, 2 ಬೆಳ್ಳಿ, 4 ಕಂಚು, ಮತ್ತು 11 ಶ್ರೇಷ್ಠತಾ ಪ್ರಶಸ್ತಿ, ಬಿಹಾರ ರಾಜ್ಯವು 3 ಚಿನ್ನ, 1 ಬೆಳ್ಳಿ, 3 ಕಂಚು ಮತ್ತು 6 ಸ್ಪರ್ಧಾಳುಗಳು ಶ್ರೇಷ್ಠತಾ ಪ್ರಶಸ್ತಿಯನ್ನು ಪಡೆದಿದ್ದಾರೆ.

ಇದನ್ನೂ ಓದಿ: Viral Video: ಇಂಗ್ಲೀಷ್‌ನಲ್ಲೂ ಮಾತಾಡುತ್ತೆ…ಮಿಮಿಕ್ರಿನೂ ಮಾಡುತ್ತೆ ಈ ಗಿಣಿ; ವಿಡಿಯೋ ನೋಡಿದ್ರೆ ಫಿದಾ ಆಗೋದು ಗ್ಯಾರಂಟಿ!

47 ಕೌಶಲ್ಯ ಸ್ಪರ್ಧೆಗಳನ್ನು ಆನ್‌ಸೈಟ್‌ನಲ್ಲಿ ನಡೆಸಿದರೆ, ಕರ್ನಾಟಕ, ಹರಿಯಾಣ, ಉತ್ತರ ಪ್ರದೇಶ ಮತ್ತು ಗುಜರಾತ್‌ನಲ್ಲಿ ಲಭ್ಯವಿರುವ ಅತ್ಯುತ್ತಮ ಮೂಲಸೌಕರ್ಯಗಳನ್ನು ಗಮನದಲ್ಲಿಟ್ಟುಕೊಂಡು ಆಫ್‌ಸೈಟ್‌ನಲ್ಲಿ 14 ಕೌಶಲ್ಯ ಸ್ಪರ್ಧೆಗಳನ್ನು ನಡೆಸಲಾಯಿತು. ಸ್ಪರ್ಧಾ ಕಾರ್ಯಕ್ರಮದಲ್ಲಿ 86 ಸ್ಪರ್ಧಿಗಳೊಂದಿಗೆ ತಮಿಳುನಾಡು ಗರಿಷ್ಠ ಭಾಗವಹಿಸುವಿಕೆಗೆ ಸಾಕ್ಷಿಯಾಗಿದೆ, ನಂತರ ಒಡಿಶಾ (64), ಕರ್ನಾಟಕ (61), ಪಂಜಾಬ್ (53), ಮತ್ತು ಹರಿಯಾಣದಿಂದ 47 ಸ್ಪರ್ಧಿಗಳು ಭಾಗವಹಿಸಿದ್ದರು.

ಈ ವೇಳೆ ಕೌಶಲ್ಯಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ಕಾರ್ಯದರ್ಶಿ ಅತುಲ್ ಕುಮಾರ್ ತಿವಾರಿ ಮಾತನಾಡಿ, ಸ್ಪರ್ಧೆಯ ವಿನ್ಯಾಸ ಮತ್ತು ಕಾರ್ಯಗತಗೊಳಿಸುವಿಕೆಯು ನಿಖರವಾಗಿತ್ತು ಮಾತ್ರವಲ್ಲದೆ ಭಾಗವಹಿಸುವವರು, ಮಾರ್ಗದರ್ಶಕರು, ಉದ್ಯಮದ ವೃತ್ತಿಪರರು, ಸಾರ್ವಜನಿಕರಿಂದ ಹೆಚ್ಚಿನ ಮೆಚ್ಚುಗೆ ಗಳಿಸಿದ್ದಾರೆ. ʼಇಂಡಿಯಾ ಸ್ಕಿಲ್ಸ್ ನ್ಯಾಷನಲ್ ಕಾಂಪಿಟೇಶನ್ 2024ʼ ಅಭೂತಪೂರ್ವ ಯಶಸ್ಸನ್ನು ಕಂಡಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Rameshwaram Cafe Blast: ಬೆಂಗಳೂರಿನ 4 ಕಡೆ ಸೇರಿ ದೇಶಾದ್ಯಂತ ಎನ್‌ಐಎ ದಾಳಿ

ಈ ಸಂದರ್ಭದಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ಕಾರ್ಯದರ್ಶಿ ಅತುಲ್ ಕುಮಾರ್ ತಿವಾರಿ, ಖ್ಯಾತ ನಿರ್ಮಾಪಕ, ಪದ್ಮಶ್ರೀ ಪುರಸ್ಕೃತ ರಮೇಶ್ ಸಿಪ್ಪಿ, ವೃತ್ತಿಪರ ಶಿಕ್ಷಣ ಮತ್ತು ತರಬೇತಿ ರಾಷ್ಟ್ರೀಯ ಮಂಡಳಿ ಅಧ್ಯಕ್ಷ ಡಾ. ನಿರ್ಮಲಜೀತ್ ಸಿಂಗ್ ಕಲ್ಸಿ ವೇದ್ ಮಣಿ ತಿವಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Continue Reading

ವಾಣಿಜ್ಯ

Ujjivan Small Finance Bank : ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನ ಲಾಭಾಂಶ ಹೆಚ್ಚಳ

Ujjivan Small Finance Bank: ಮಾ.31ಕ್ಕೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಕೈಗೆಟಕುವ ದರದಲ್ಲಿ ಒಟ್ಟು 730 ಕೋಟಿ ರೂ.ಗಳ ಗೃಹ ಸಾಲ ನೀಡಲಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಶೇ.66ರಷ್ಟು ಹೆಚ್ಚು ಸಾಲ ವಿತರಣೆಯಾಗಿದೆ. 2023-2024ನೇ ಹಣಕಾಸು ವರ್ಷದಲ್ಲಿ 2,284 ಕೋಟಿ ರೂ. ಗೃಹ ಸಾಲ ವಿತರಿಸಲಾಗಿದ್ದು, ಕಳೆದ ವಿತ್ತ ವರ್ಷಕ್ಕೆ ಹೋಲಿಸಿದರೆ ಶೇ.64ರಷ್ಟು ಹೆಚ್ಚಳ ಕಂಡಿದೆ ಎಂದು ಬ್ಯಾಂಕ್ ಹೇಳಿದೆ.

VISTARANEWS.COM


on

Ujjivan Small Finance Bank
Koo

ಬೆಂಗಳೂರು: ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿ. (Ujjivan Small Finance Bank) ತನ್ನ ಕಳೆದ ಹಣಕಾಸು ವರ್ಷದ ಮತ್ತು ಮಾರ್ಚ್ 31, 2024ಕ್ಕೆ ಅಂತ್ಯಗೊಂಡ 4ನೇ ತ್ರೈಮಾಸಿಕ ಅವಧಿಯ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಬ್ಯಾಂಕ್ ಮಾರ್ಚ್ 31ಕ್ಕೆ ಕೊನೆಯಾದ ತ್ರೈಮಾಸಿಕ ಅವಧಿಯಲ್ಲಿ 6,681 ಕೋಟಿ ರೂ. ಸಾಲವನ್ನು ವಿತರಿಸಿದ್ದು, ಕಳೆದ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಸಾಲ ವಿತರಣೆಯಲ್ಲಿ ಶೇ.11ರಷ್ಟು ಬೆಳವಣಿಗೆ ಸಾಧಿಸಲಾಗಿದೆ. ಅದೇ ರೀತಿ, 2023-2024ನೇ ಹಣಕಾಸು ವರ್ಷದಲ್ಲಿ ಬ್ಯಾಂಕ್ ಒಟ್ಟಾರೆ 23,389 ಕೋಟಿ ರೂ. ಸಾಲ ವಿತರಿಸಿದ್ದು, ಕಳೆದ ವಿತ್ತೀಯ ವರ್ಷಕ್ಕೆ ಹೋಲಿಸಿದರೆ ಶೇ.17ರಷ್ಟು ಹೆಚ್ಚಳವಾಗಿದೆ ಎಂದು ಬ್ಯಾಂಕ್​ ಮೂಲಗಳು ತಿಳಿಸಿವೆ.

ಮಾ.31ಕ್ಕೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಕೈಗೆಟಕುವ ದರದಲ್ಲಿ ಒಟ್ಟು 730 ಕೋಟಿ ರೂ.ಗಳ ಗೃಹ ಸಾಲ ನೀಡಲಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಶೇ.66ರಷ್ಟು ಹೆಚ್ಚು ಸಾಲ ವಿತರಣೆಯಾಗಿದೆ. 2023-2024ನೇ ಹಣಕಾಸು ವರ್ಷದಲ್ಲಿ 2,284 ಕೋಟಿ ರೂ. ಗೃಹ ಸಾಲ ವಿತರಿಸಲಾಗಿದ್ದು, ಕಳೆದ ವಿತ್ತ ವರ್ಷಕ್ಕೆ ಹೋಲಿಸಿದರೆ ಶೇ.64ರಷ್ಟು ಹೆಚ್ಚಳ ಕಂಡಿದೆ ಎಂದು ಬ್ಯಾಂಕ್ ಹೇಳಿದೆ.

23-24ರ ಒಟ್ಟಾರೆ ಸಾಲದ ಮೊತ್ತವು ಶೇ.24ರಷ್ಟು ಏರಿಕೆಯಾಗಿ, 29,780 ಕೋಟಿ ರೂ.ಗಳಾಗಿವೆ. ಹಿಂದಿನ ತ್ರೈಮಾಸಿಕ ಅವಧಿಗೆ ಹೋಲಿಸಿದರೆ ಮಾರ್ಚ್ ಗೆ ಕೊನೆಯಾದ ತ್ರೈಮಾಸಿಕದಲ್ಲಿ ಒಟ್ಟಾರೆ ಸಾಲದ ಪ್ರಮಾಣವು ಶೇ.7ರಷ್ಟು ಏರಿಕೆಯಾಗಿದೆ. ಇನ್ನು, 2024ರ ಮಾರ್ಚ್ ನಲ್ಲಿ ಸೆಕ್ಯೂರ್ಡ್ ಬುಕ್ ಶೇ.30.2ರಷ್ಟಿದ್ದರೆ, 2023ರ ಡಿಸೆಂಬರ್ ನಲ್ಲಿ ಇದು ಶೇ.28.4ರಷ್ಟಿತ್ತು ಎಂದು ಅಂಕಿ ಅಂಶಗಳು ತಿಳಿಸಿವೆ.

ಸಾಲ ವಸೂಲಿ ಮುಂದುವರಿಕೆ

ಮಾರ್ಚ್ ಗೆ ಅಂತ್ಯವಾದ ತ್ರೈಮಾಸಿಕದಲ್ಲಿ ಸಾಲ ವಸೂಲಾತಿ ಪ್ರಕ್ರಿಯೆಯೂ ಉತ್ತಮವಾಗಿ ಮುಂದುವರಿದಿದ್ದು, ಶೇ.99ರಷ್ಟು ದಕ್ಷತೆಯನ್ನು ಕಾಯ್ದುಕೊಳ್ಳಲಾಗಿದೆ. ಎನ್ ಡಿಎ ಸಂಗ್ರಹ ಶೇ.100ರಷ್ಟಾಗಿದೆ. ಮರುಪಾವತಿಗೆ ಬಾಕಿಯಿರುವ ಸಾಲವು(ಪೋರ್ಟ್ ಫೋಲಿಯೋ ಅಟ್ ರಿಸ್ಕ್) ಶೇ.3.5ರಷ್ಟಿದ್ದು, ಒಟ್ಟು ಅನುತ್ಪಾದಕ ಆಸ್ತಿ (ಜಿಎನ್ ಪಿಎ) ಸ್ಥಿರವಾಗಿದ್ದು, ಶೇ.2.1 ರಷ್ಟಿದೆ. 2023ರ ಡಿಸೆಂಬರ್ ಗೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಇದು ಶೇ.2.1 ರಷ್ಟಿತ್ತು. ಮಾರ್ಚ್ ಗೆ ಕೊನೆಯಾದ ತ್ರೈಮಾಸಿಕದಲ್ಲಿ ಎನ್ಎನ್ ಪಿಎ(ನಿವ್ವಳ ಅನುತ್ಪಾದಕ ಆಸ್ತಿ) ಕೇವಲ ಶೇ.0.3ರಲ್ಲಿ ಮುಂದುವರಿದಿದೆ. ಈ ಅವಧಿಯಲ್ಲಿ ಒಟ್ಟು 65 ಕೋಟಿ ರೂ.ಗಳ ಸಾಲವನ್ನು ರೈಟ್ ಆಫ್ ಮಾಡಲಾಗಿದೆ ಎಂದು ಬ್ಯಾಂಕ್​ ಮೂಲಗಳು ತಿಳಿಸಿವೆ.

ಮಾರ್ಚ್ ಗೆ ಅಂತ್ಯವಾದ ತ್ರೈಮಾಸಿಕದಲ್ಲಿ 31,462 ಕೋಟಿ ರೂ. ಠೇವಣಿ ಸಂಗ್ರಹವಾಗಿದ್ದು, ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ.6 ಹಾಗೂ ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ.23ರಷ್ಟು ಹೆಚ್ಚಳವಾಗಿದೆ. ಸಿಎಎಸ್ಎ(ಚಾಲ್ತಿ ಖಾತೆ ಉಳಿತಾಯ ಖಾತೆ) ಮೊತ್ತವು ಕಳೆದ ವಿತ್ತೀಯ ವರ್ಷಕ್ಕೆ ಹೋಲಿಸಿದರೆ ಶೇ.24ರಷ್ಟು ಮತ್ತು ಕಳೆದ ತ್ರೈಮಾಸಿಕಕ್ಕೆ ಹೋಲಿಸದರೆ ಶೇ.10ರಷ್ಟು ಏರಿಕೆಯಾಗಿದ್ದು, ಮಾರ್ಚ್ ತ್ರೈಮಾಸಿಕದಲ್ಲಿ ಒಟ್ಟು 8,335 ಕೋಟಿ ರೂ. ಸಂಗ್ರಹವಾಗಿದೆ. ಸಿಎಎಸ್ಎ ಅನುಪಾತವು ಈ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಶೇ.26.5ರಷ್ಟಿದ್ದರೆ, ಅದರ ಹಿಂದಿನ ತ್ರೈಮಾಸಿಕ ಅವಧಿಯಲ್ಲಿ ಶೇ.25.5ರಷ್ಟಿತ್ತು. ಚಿಲ್ಲರೆ ಅವಧಿ ಠೇವಣಿ (ರಿಟೇಲ್ ಟಿಡಿ) ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ 2023-24ರ ಹಣಕಾಸು ವರ್ಷದಲ್ಲಿ ಶೇ.36ರಷ್ಟು ಮತ್ತು ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಮಾರ್ಚ್ ಗೆ ಅಂತ್ಯವಾದ ತ್ರೈಮಾಸಿಕದಲ್ಲಿ ಶೇ.7ರಷ್ಟು ಬೆಳವಣಿಗೆ ದಾಖಲಿಸಿದೆ.

ಇದನ್ನೂ ಓದಿ: Chitta Ranjan Dash: ಆರ್‌ಎಸ್‌ಎಸ್‌ನ ಸ್ವಯಂಸೇವಕನಾಗಿದ್ದೆ; ಈಗಲೂ ಮರಳಲು ಸಿದ್ಧ ಎಂದ ಹೈಕೋರ್ಟ್‌ ನಿವೃತ್ತ ಜಡ್ಜ್‌ ಚಿತ್ತರಂಜನ್‌ ದಾಸ್‌

ನಿವ್ವಳ ಬಡ್ಡಿ ಆದಾಯ(ಎನ್ಐಐ)ವು 4ನೇ ತ್ರೈಮಾಸಿಕದಲ್ಲಿ 934 ಕೋಟಿ ರೂ. ಆಗಿದ್ದು, ಕಳೆದ ತ್ರೈಮಾಸಿಕಕ್ಕಿಂತ ಶೇ.27ರಷ್ಟು ಹೆಚ್ಚಳವಾಗಿದೆ. 2023-24ರ ವಿತ್ತ ವರ್ಷದಲ್ಲಿ ಇದು 3,409 ಕೋಟಿ ರೂ.ಗಳಾಗಿದ್ದು ಕಳೆದ ವಿತ್ತ ವರ್ಷಕ್ಕಿಂತ ಶೇ.26ರಷ್ಟು ಬೆಳವಣಿಗೆ ಸಾಧಿಸಿದೆ. ಇದೇ ವೇಳೆ, ಬ್ಯಾಂಕಿನ ನಿವ್ವಳ ಬಡ್ಡಿ ಅಂತರ(ಎನ್ಐಎಂ)ವು 4ನೇ ತ್ರೈಮಾಸಿಕದಲ್ಲಿ ಶೇ.9.4ರಷ್ಟು, ಇಡೀ ವಿತ್ತ ವರ್ಷದಲ್ಲಿ ಶೇ.9.1ರಷ್ಟು ಇತ್ತು. ವೆಚ್ಚದಿಂದ ಆದಾಯ ಅನುಪಾತವು 4ನೇ ತ್ರೈಮಾಸಿಕದಲ್ಲಿ ಶೇ.55.7 ಆಗಿದ್ದು, 2024ನೇ ಹಣಕಾಸು ವರ್ಷದಲ್ಲಿ ಶೇ.54.3ರಷ್ಟಾಗಿದೆ.

ಮಾರ್ಚ್ ಗೆ ಅಂತ್ಯಗೊಂಡ 4ನೇ ತ್ರೈಮಾಸಿಕದಲ್ಲಿ ಬ್ಯಾಂಕಿನ ಕಾರ್ಯಾಚರಣೆಯಿಂದ ಬಂದ ಆದಾಯ(ಪಿಪಿಒಪಿ) 519 ಕೋಟಿ ರೂ.ಗಳಾಗಿದ್ದು, ಕಳೆದ ತ್ರೈಮಾಸಿಕಕ್ಕಿಂತ ಶೇ.26ರಷ್ಟು ಪ್ರಗತಿ ಸಾಧಿಸಲಾಗಿದೆ. ಅದೇ ರೀತಿ, 24ನೇ ಹಣಕಾಸು ವರ್ಷದಲ್ಲಿ ಕಾರ್ಯಾಚರಣೆಯಲ್ಲಿ ಬಂದ ಆದಾಯವು 1,917 ಕೋಟಿ ರೂ.ಗಳಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.29ರ ಏರಿಕೆ ಕಂಡಿದೆ. ತೆರಿಗೆ ನಂತರದ ಲಾಭ (ಪಿಎಟಿ)ವು 4ನೇ ತ್ರೈಮಾಸಿಕದಲ್ಲಿ 330 ಕೋಟಿ ರೂ.ಗಳಾಗಿದ್ದು (3ನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ.7ರಷ್ಟು ಹೆಚ್ಚಳ), 24ನೇ ಹಣಕಾಸು ವರ್ಷದಲ್ಲಿ 1,281 ಕೋಟಿ ರೂ.ಗಳಷ್ಟಾಗಿದೆ (ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.17 ಹೆಚ್ಚಳ).

ಷೇರುದಾರರ ಅನುಮತಿಗೆ ಒಳಪಟ್ಟು, ಬ್ಯಾಂಕಿನ ಆಡಳಿತ ಮಂಡಳಿಯು ಪ್ರತಿ ಷೇರಿಗೆ 1.5 ರೂ.ಗಳಂತೆ ಅಂತಿಮ ಲಾಭಾಂಶ ನೀಡಲು ಶಿಫಾರಸು ಮಾಡಿದೆ.

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಕಾರ್ಯನಿರ್ವಹಣಾಧಿಕಾರಿ ಶ್ರೀ. ಇಟ್ಟಿರಾ ಡೇವಿಸ್ ರವರು ಮಾತನಾಡಿ, 2024ರ ಹಣಕಾಸು ವರ್ಷದ 4ನೇ ತ್ರೈಮಾಸಿಕವು ಮತ್ತೊಂದು ಯಶಸ್ವಿ ವಿತ್ತ ವರ್ಷಕ್ಕೆ ಉತ್ತಮ ಮುನ್ನುಡಿ ಬರೆದಿದೆ. ಈ  ಅವಧಿಯಲ್ಲಿ ನಮಗೆ ಗುಣಮಟ್ಟದ ಬೆಳವಣಿಗೆಯನ್ನು ಸಾಧಿಸಲು ಸಾಧ್ಯವಾಗಿದೆ. ನಾವು ಬ್ಯಾಂಕ್ ಮತ್ತು ಅದರ ಹೋಲ್ಡಿಂಗ್ ಕಂಪನಿ ನಡುವಿನ ವಿಲೀನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ. ನಮ್ಮ ಸೆಕ್ಯೂರ್ಡ್ ಬುಕ್ (ಸುರಕ್ಷಿತ ಪುಸ್ತಕ) ಈ ತ್ರೈಮಾಸಿಕದಲ್ಲಿ 177 ಮೂಲಾಂಕ (ಬಿಪಿಎಸ್) ನಷ್ಟು ಸುಧಾರಣೆ ಕಂಡು, 30.2%ಕ್ಕೆ ತಲುಪಿದೆ. 4ನೇ ತ್ರೈಮಾಸಿಕದಲ್ಲಿ ₹ 6,681 ಕೋಟಿ ರೂ. ಮತ್ತು ವಾರ್ಷಿಕವಾಗಿ ₹ 23,389 ಕೋಟಿ ರೂ. ಸಾಲ ವಿತರಣೆ ಮಾಡಲಾಗಿದೆ.  ಕೈಗೆಟುಕುವ ಗೃಹ (ಸೂಕ್ಷ್ಮ ಅಡಮಾನಗಳು ಸೇರಿದಂತೆ) ಸಾಲ ವಿತರಣೆಯಲ್ಲೂ ಪ್ರಗತಿ ಸಾಧಿಸಲಾಗಿದ್ದು, 4ನೇ ತ್ರೈಮಾಸಿಕದಲ್ಲಿ  ₹730 ಕೋಟಿ ಮತ್ತು ವಾರ್ಷಿಕ ₹ 2,284 ಕೋಟಿ ಸಾಲ ವಿತರಿಸಲಾಗಿದೆ. ಈ ಮೂಲಕ 2023-24ರ ಹಣಕಾಸು ವರ್ಷದಲ್ಲಿ ಗೃಹ ಸಾಲ ವಿತರಣೆಯಲ್ಲಿ ಶೇ.45ರ ಬೆಳವಣಿಗೆ ಸಾಧಿಸಲಾಗಿದೆ. ಈ ವೇಗವು ಮುಂದಿನ ವರ್ಷವೂ ಮುಂದುವರಿಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಹೇಳಿದರು. ಹೆಚ್ಚುವರಿಯಾಗಿ, ನಾವು ಪರಿಷ್ಕೃತ ಎಲ್ಒಎಸ್ ಅನ್ನು ಪರಿಚಯಿಸುವ ಅಂತಿಮ ಹಂತದಲ್ಲಿರುತ್ತೇವೆ, ಒಮ್ಮೆ ಸಂಪೂರ್ಣವಾಗಿ ಕಾರ್ಯನಿರ್ವಹಿಸಿದರೆ ಅದು ವ್ಯವಹಾರ ದಕ್ಷತೆಯನ್ನು ಮತ್ತಷ್ಟು ಸುಧಾರಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಕಳೆದ ತ್ರೈಮಾಸಿಕದಲ್ಲಿ ಪೂರ್ವ-ಅರ್ಹ ಟಾಪ್-ಅಪ್ ಸಾಲಗಳನ್ನು ನಮ್ಮ ಉತ್ಪನ್ನ ಸೂಟ್ ಗೆ ಸೇರಿಸಲಾಗಿದೆ, ಇದು ನಮ್ಮ ಅಸ್ತಿತ್ವದಲ್ಲಿರುವ ಕೈಗೆಟುಕುವ ವಸತಿ ಗ್ರಾಹಕರಿಗೆ ಪ್ರಯೋಜನಕಾರಿಯಾಗಿದೆ ಎಂದು ನುಡಿದರು.

Continue Reading
Advertisement
Turbulence
ವಿದೇಶ11 mins ago

Turbulence: ಟರ್ಬುಲೆನ್ಸ್‌ಗೆ ತುತ್ತಾದ ವಿಮಾನ: ಇಲ್ಲಿದೆ ನೋಡಿ ಭೀಕರತೆಯನ್ನು ಸಾರುವ ಫೋಟೊಗಳು

MDH, Everest Spices
ದೇಶ14 mins ago

MDH, Everest Spices: ಎಂಡಿಎಚ್‌, ಎವರೆಸ್ಟ್‌ ಮಸಾಲೆಗಳಲ್ಲಿ ಮಾರಕ ರಾಸಾಯನಿಕ ಇಲ್ಲ; FSSAI ವರದಿಯಲ್ಲಿ ಬಯಲು

drink and drive RTO check
ಬೆಂಗಳೂರು38 mins ago

Drink and Drive: ಕುಡಿದು ವಾಹನ ಓಡಿಸಿದರೆ ಎರಡೆರಡು ಕಡೆ ಸಿಕ್ಕಿಹಾಕಿಕೊಳ್ತೀರಿ ಹುಷಾರ್!‌

Amruthadhaare Serial Gautham Propose Bhoomika
ಕಿರುತೆರೆ43 mins ago

Amruthadhaare Serial: ಜೋಡಿ ಜೀವಗಳ ಒಲವಧಾರೆ; ಭೂಮಿಗೆ ʻಐಲವ್‌ಯೂʼ ಎಂದ ಡುಮ್ಮ ಸರ್‌!

Aam Aadmi Party
ದೇಶ48 mins ago

Aam Aadmi Party: ಆಪ್‌ಗೆ ಬರ್ತಿದ್ಯಾ ಖಲಿಸ್ತಾನಿ ಫಂಡಿಂಗ್ಸ್?‌ BKI ಉಗ್ರನ ಜೊತೆ ಪಕ್ಷ ಮುಖಂಡ ಫೊಟೋ

Car Crash
ವಿದೇಶ1 hour ago

Car Crash: ಅಮೆರಿಕದಲ್ಲಿ ಮತ್ತೆ ಮೂವರು ಭಾರತೀಯ ವಿದ್ಯಾರ್ಥಿಗಳ ಸಾವು; ಕಾರಣವೇನು?

Kannada New Movie Chilli Chicken Teaser Out
ಸ್ಯಾಂಡಲ್ ವುಡ್1 hour ago

Kannada New Movie: ‘ಚಿಲ್ಲಿ ಚಿಕನ್’ ಟೀಸರ್‌ ಔಟ್‌: ಚೈನೀಸ್ ಹೋಟೆಲ್ ಹುಡುಗರ ಸ್ಟೋರಿ ಇದು!

Munjya teaser unveils first computer generated actor
ಬಾಲಿವುಡ್2 hours ago

Munjya Teaser: ʻಮುಂಜ್ಯಾʼ ಟೀಸರ್‌ ಔಟ್‌; ಇದು ಭಾರತದ ಮೊದಲ CGI ಚಿತ್ರ!

IndiGo Flight
ದೇಶ2 hours ago

IndiGo Flight: ಇಂಡಿಗೊ ವಿಮಾನದಲ್ಲಿ ಮತ್ತೊಂದು ಎಡವಟ್ಟು; ನಿಂತುಕೊಂಡೇ ಪ್ರಯಾಣಿಸಲು ಮುಂದಾದ ಪ್ಯಾಸೆಂಜರ್‌!

prabuddha murder case
ಕ್ರೈಂ2 hours ago

Murder Case: ಯುವತಿ ಪ್ರಬುದ್ಧ ಸಾವು ಆತ್ಮಹತ್ಯೆಯಲ್ಲ, ಕೊಲೆ: ತಾಯಿ ದೂರು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ5 hours ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ18 hours ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು23 hours ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು1 day ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ2 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ3 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ3 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ3 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ5 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ5 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

ಟ್ರೆಂಡಿಂಗ್‌