Stock Market: ಭರ್ಜರಿಯಾಗಿಯೇ ಕಂಬ್ಯಾಕ್‌ ಮಾಡಿದ ಷೇರುಪೇಟೆ; ಸಾರ್ವಕಾಲಿಕ ಗರಿಷ್ಠ ಅಂಕಕ್ಕೆ ತಲುಪಿದ ಸೆನ್ಸೆಕ್ಸ್‌ - Vistara News

ವಾಣಿಜ್ಯ

Stock Market: ಭರ್ಜರಿಯಾಗಿಯೇ ಕಂಬ್ಯಾಕ್‌ ಮಾಡಿದ ಷೇರುಪೇಟೆ; ಸಾರ್ವಕಾಲಿಕ ಗರಿಷ್ಠ ಅಂಕಕ್ಕೆ ತಲುಪಿದ ಸೆನ್ಸೆಕ್ಸ್‌

Stock Market: ಸೋಮವಾರ (ಜುಲೈ 29) ಆರಂಭದಲ್ಲೇ ಬಿಎಸ್‌ಇ ಸೆನ್ಸೆಕ್ಸ್‌ (BSE Sensex) ಸಾರ್ವಕಾಲಿಕ ಗರಿಷ್ಠ 81,720.25 ಅಂಕಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 50 (NSE Nifty50) ಕೂಡ ಏರಿಕೆ ಕಂಡು 24,980.45 ತಲುಪಿದ್ದು, ಇಂದು 25,000 ಅಂಕಗಳ ಮೈಲಿಗಲ್ಲು ದಾಟಲಿದೆ. ಬಿಎಸ್ಇ ಸೆನ್ಸೆಕ್ಸ್ ಶೇ. 0.51 ಅಥವಾ 416.62 ಪಾಯಿಂಟ್ಸ್ ಏರಿಕೆ ಕಂಡು ಸಾರ್ವಕಾಲಿಕ ಗರಿಷ್ಠ 81,749.34 ಮಟ್ಟವನ್ನು ತಲುಪಿದರೆ, ನಿಫ್ಟಿ 50 ಶೇ. 0.58 ಅಥವಾ 145.6 ಪಾಯಿಂಟ್ ಏರಿಕೆ ಕಂಡು 24,980.45 ಮಟ್ಟ ಸ್ಪರ್ಶಿಸಿದೆ.

VISTARANEWS.COM


on

Stock Market
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ: ಕೇಂದ್ರ ಬಜೆಟ್‌ (Union Budget 2024) ಮಂಡಿಸಿದ ದಿನವಾದ ಜುಲೈ 23 ಸೇರಿ ನಂತರದ ದಿನಗಳಲ್ಲಿ ಸತತವಾಗಿ ಇಳಿಕೆ ಕಂಡಿದ್ದ ಷೇರು ಮಾರುಕಟ್ಟೆಯು (Stock Market) ಶುಕ್ರವಾರ (ಜುಲೈ 26) ಭಾರಿ ಸುಧಾರಣೆ ಕಂಡಿತ್ತು. ಈ ಬೆಳವಣಿಗೆ ಇಂದೂ ಮುಂದುವರಿದಿದ್ದು, ಸೋಮವಾರ (ಜುಲೈ 29) ಆರಂಭದಲ್ಲೇ ಬಿಎಸ್‌ಇ ಸೆನ್ಸೆಕ್ಸ್‌ (BSE Sensex) ಸಾರ್ವಕಾಲಿಕ ಗರಿಷ್ಠ 81,720.25 ಅಂಕಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 50 (NSE Nifty50) ಕೂಡ ಏರಿಕೆ ಕಂಡು 24,980.45 ತಲುಪಿದ್ದು, ಇಂದು 25,000 ಅಂಕಗಳ ಮೈಲಿಗಲ್ಲು ದಾಟಲಿದೆ.

ಬಿಎಸ್ಇ ಸೆನ್ಸೆಕ್ಸ್ ಶೇ. 0.51 ಅಥವಾ 416.62 ಪಾಯಿಂಟ್ಸ್ ಏರಿಕೆ ಕಂಡು ಸಾರ್ವಕಾಲಿಕ ಗರಿಷ್ಠ 81,749.34 ಮಟ್ಟವನ್ನು ತಲುಪಿದರೆ, ನಿಫ್ಟಿ 50 ಶೇ. 0.58 ಅಥವಾ 145.6 ಪಾಯಿಂಟ್ ಏರಿಕೆ ಕಂಡು 24,980.45 ಮಟ್ಟ ಸ್ಪರ್ಶಿಸಿದೆ.

ನಿಫ್ಟಿ 50ರಲ್ಲಿ ಎನ್‌ಟಿಪಿಸಿ, ಬಿಪಿಸಿಎಲ್, ಐಸಿಐಸಿಐ ಬ್ಯಾಂಕ್, ಎಸ್‌ಬಿಐ ಮತ್ತು ಶ್ರೀರಾಮ್ ಫೈನಾನ್ಸ್ ಅತೀ ಹೆಚ್ಚು ಲಾಭ ಗಳಿಸಿದರೆ ಡಾ.ರೆಡ್ಡೀಸ್ ಲ್ಯಾಬೊರೇಟರೀಸ್, ಟೈಟಾನ್, ಸಿಪ್ಲಾ, ಟಾಟಾ ಕನ್ಸೂಮರ್ ಪ್ರಾಡಕ್ಟ್ಸ್ ಮತ್ತು ಎಸ್‌ಬಿಐ ಲೈಫ್ ಹೆಚ್ಚು ನಷ್ಟ ಅನುಭವಿಸಿದ ಷೇರುಗಳಾಗಿವೆ.

ಆರ್ಥಿಕ ತಜ್ಞ ಡಾ.ವಿ.ಕೆ.ವಿಜಯ ಕುಮಾರ್ ಈ ಬಗ್ಗೆ ಮಾತನಾಡಿ, “ಷೇರು ಮಾರುಕಟ್ಟೆಯ ಒಳಹರಿವು ಸಕಾರಾತ್ಮಕ ಸೂಚನೆಗಳ ಮೇಲೆ ದೃಢವಾಗಿದೆ. ಅಮೆರಿಕ ಆರ್ಥಿಕತೆಯ ಬಲ ವರ್ಧನೆಗೆ ಸಾಫ್ಟ್ ಲ್ಯಾಂಡಿಂಗ್ ನೆರವಾಗುವ ಸಾಧ್ಯತೆ ಇದೆ. ಜತೆಗೆ ಸೆಪ್ಟೆಂಬರ್‌ನಲ್ಲಿ ಫೆಡ್ ದರ ಕಡಿತದ ನಿರೀಕ್ಷೆ ಇದ್ದು ಇದು ಕೂಡ ಅನುಕೂಲ ವಾತಾವಣ ಸೃಷ್ಟಿಸಿದೆ. ಇದು ಈ ಷೇರು ಮಾರುಕಟ್ಟೆಗೆ ಜಾಗತಿಕ ಬೆಂಬಲವನ್ನು ಒದಗಿಸುತ್ತದೆ. ಬ್ರೆಂಟ್ ಕಚ್ಚಾ ತೈಲವು 81.2 ಡಾಲರ್‌ಗೆ ಇಳಿದಿರುವುದು ಕೂಡ ಅನುಕೂಲಕರವಾಗಿ ಪರಿಣಮಿಸಿದೆʼʼ ಎಂದಿದ್ದಾರೆ.

ಇದನ್ನೂ ಓದಿ: Mukesh Ambani: ಬಜೆಟ್ ದಿನ 9,200 ಕೋಟಿ ರೂ. ಕಳೆದುಕೊಂಡಿದ್ದ ಮುಕೇಶ್ ಅಂಬಾನಿ!

ಷೇರು ಮಾರುಕಟ್ಟೆಗೆ ಶುಭ ಶುಕ್ರವಾರ

ಸತತವಾಗಿ ಇಳಿಕೆ ಕಂಡಿದ್ದ ಷೇರು ಮಾರುಕಟ್ಟೆಯಲ್ಲಿ ಶುಕ್ರವಾರ (ಜುಲೈ 26) ಭಾರಿ ಸುಧಾರಣೆ ಕಂಡು ಬಂದಿತ್ತು. ಷೇರುಪೇಟೆಯಲ್ಲಿ ಶುಕ್ರವಾರ ಬಿಎಸ್‌ಇ ಸೆನ್ಸೆಕ್ಸ್‌ 1,292.92 ಪಾಯಿಂಟ್‌ಗಳ ಏರಿಕೆ ಕಂಡರೆ, ಎನ್‌ಎಸ್‌ಇ ನಿಫ್ಟಿಯು 428.75 ಅಂಕಗಳಷ್ಟು ಏರಿಕೆಯಾಗಿತ್ತು. ಇದರಿಂದಾಗಿ ಹೂಡಿಕೆದಾರರಿಗೆ ಒಂದೇ ದಿನ 7 ಲಕ್ಷ ಕೋಟಿ ರೂ. ಲಾಭವಾಗಿತ್ತು. ಬಿಎಸ್‌ಇ ಸೆನ್ಸೆಕ್ಸ್‌ 1,292.92 ಪಾಯಿಂಟ್‌ಗಳ ಏರಿಕೆಯೊಂದಿಗೆ 81,332.72 ಪಾಯಿಂಟ್‌ ತಲುಪಿದ್ದರೆ, ಎನ್‌ಎಸ್‌ಇ ನಿಫ್ಟಿಯು 428.75 ಪಾಯಿಂಟ್‌ಗಳ ಏರಿಕೆಯೊಂದಿಗೆ 24,834.85 ಪಾಯಿಂಟ್ಸ್‌ ತಲುಪಿತ್ತು. ಇದರಿಂದಾಗಿ ಕಳೆದ ನಾಲ್ಕು ದಿನಗಳಿಂದ ನಷ್ಟ ಅನುಭವಿಸಿದ್ದ ಹೂಡಿಕೆದಾರರು ಶುಕ್ರವಾರ ಲಾಭ ಗಳಿಸಿದ್ದರು.

ಭಾರ್ತಿ ಏರ್‌ಟೆಲ್‌ ಕಂಪನಿಯು ಅತಿ ಹೆಚ್ಚು ಲಾಭ ಗಳಿಸಿದ ಕಂಪನಿ ಎನಿಸಿಕೊಂಡಿತ್ತು. ಭಾರ್ತಿ ಏರ್‌ಟೆಲ್‌ ಲಾಭದ ಪ್ರಮಾಣವು ಶೇ. 4.51ರಷ್ಟು ಏರಿಕೆಯಾಗಿತ್ತು. ಇದರ ಜತೆಗೆ ಅದಾನಿ ಪೋರ್ಟ್ಸ್‌, ಸನ್‌ ಫಾರ್ಮಾ, ಟಾಟಾ ಸ್ಟೀಲ್‌, ಎಚ್‌ಸಿಎಲ್‌ ಟೆಕ್ನಾಲಜೀಸ್‌, ಇನ್ಫೋಸಿಸ್‌, ಜೆಎಸ್‌ಡಬ್ಲ್ಯೂ ಸ್ಟೀಲ್‌ ಹಾಗೂ ಮಹೀಂದ್ರಾ & ಮಹೀಂದ್ರಾ ಕಂಪನಿಗಳು ಲಾಭ ಗಳಿಸಿದ್ದವು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಚಿನ್ನದ ದರ

Gold Rate Today: ಮತ್ತೆ ಏರಿಕೆಯಾದ ಚಿನ್ನದ ದರ; ಇಂದಿನ ಬೆಲೆ ಗಮನಿಸಿ

Gold Rate Today: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ದರ ಇಂದು (ಜುಲೈ 29) ಮತ್ತೆ ಏರಿಕೆಯಾಗಿದೆ. ಬಜೆಟ್‌ ಮಂಡನೆಯ ಬಳಿಕ ಸತತವಾಗಿ ಇಳಿದಿದ್ದ ದರ ಶನಿವಾರ ಮೊದಲ ಬಾರಿ ಏರಿಕೆಯಾಗಿತ್ತು. ಭಾನುವಾರ ಅದೇ ದರವನ್ನು ಕಾಯ್ದುಕೊಂಡಿದ್ದರೆ ಇಂದು ಮತ್ತೆ ಹೆಚ್ಚಾಗಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 15 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 16 ಏರಿಕೆಯಾಗಿದೆ.

VISTARANEWS.COM


on

Gold Rate Today
Koo

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನದ ದರ ಇಂದು (ಜುಲೈ 29) ಮತ್ತೆ ಏರಿಕೆಯಾಗಿದೆ (Gold Rate Today). ಬಜೆಟ್‌ ಮಂಡನೆಯ ಬಳಿಕ ಸತತವಾಗಿ ಇಳಿದಿದ್ದ ದರ ಶನಿವಾರ ಮೊದಲ ಬಾರಿ ಏರಿಕೆಯಾಗಿತ್ತು. ಭಾನುವಾರ ಅದೇ ದರವನ್ನು ಕಾಯ್ದುಕೊಂಡಿದ್ದರೆ ಇಂದು ಮತ್ತೆ ಹೆಚ್ಚಾಗಿದೆ. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 15 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 16 ಏರಿಕೆಯಾಗಿದೆ.

ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆಯು ₹ 6,340 ಮತ್ತು 24 ಕ್ಯಾರಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು ₹ 6,916 ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ ₹ 50,720 ಇದೆ. ಇನ್ನು 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹ 63,400 ಮತ್ತು ₹ 6,34,000 ದರದಲ್ಲಿ ಖರೀದಿಸಬಹುದು. 24 ಕ್ಯಾರಟ್‌ ಎಂಟು ಗ್ರಾಂ ಚಿನ್ನದ ಬೆಲೆ ₹ 55,328 ಇದೆ. 10 ಗ್ರಾಂ ಮತ್ತು 100 ಗ್ರಾಂನ 24 ಕ್ಯಾರಟ್‌ ಚಿನ್ನದ ಬೆಲೆ ₹ 69,160 ಮತ್ತು ₹ 6,91,600 ತಲುಪಿದೆ.

ನಗರ22 ಕ್ಯಾರಟ್ (1 ಗ್ರಾಂ)24 ಕ್ಯಾರಟ್ (1 ಗ್ರಾಂ)
ದಿಲ್ಲಿ₹ 6,355 ₹ 6,931
ಮುಂಬೈ₹ 6,340 ₹ 6,916
ಬೆಂಗಳೂರು₹ 6,340 ₹ 6,916
ಚೆನ್ನೈ₹ 6,415₹ ₹ 6,998

ಬೆಳ್ಳಿ ಧಾರಣೆ

ಇತ್ತ ಬೆಳ್ಳಿಯ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಬೆಳ್ಳಿ ಒಂದು ಗ್ರಾಂಗೆ ₹ 84 ಹಾಗೂ 8 ಗ್ರಾಂಗೆ ₹ 672 ಇದೆ. 10 ಗ್ರಾಂ ₹ 840 ಹಾಗೂ 1 ಕಿಲೋಗ್ರಾಂ ₹ 84,000 ಬೆಲೆ ಬಾಳುತ್ತದೆ.

ಚಿನ್ನದ ದರದ ಮೇಲೆ ಪರಿಣಾಮ ಬೀರುವ ಅಂಶಗಳು

ಬೇಡಿಕೆ ಮತ್ತು ಪೂರೈಕೆ: ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಮತ್ತು ಪೂರೈಕೆಯಿಂದ ಚಿನ್ನದ ದರವನ್ನು ಹೆಚ್ಚಾಗಿ ನಿರ್ಧರಿಸಲಾಗುತ್ತದೆ. ಚಿನ್ನಕ್ಕೆ ಬೇಡಿಕೆ ಹೆಚ್ಚಾದರೆ ದರವೂ ಹೆಚ್ಚಾಗಲಿದೆ. ವ್ಯತಿರಿಕ್ತವಾಗಿ, ಚಿನ್ನದ ಪೂರೈಕೆ ಹೆಚ್ಚಾದರೆ, ದರ ಕಡಿಮೆಯಾಗುತ್ತದೆ.

ಜಾಗತಿಕ ಆರ್ಥಿಕ ಪರಿಸ್ಥಿತಿಗಳು: ಚಿನ್ನದ ದರದ ಮೇಲೆ ಜಾಗತಿಕ ಆರ್ಥಿಕ ಪರಿಸ್ಥಿತಿಗಳು ಕೂಡ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಜಾಗತಿಕ ಆರ್ಥಿಕತೆಯು ಕಳಪೆಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಕಾಣಬಹುದು. ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ರಾಜಕೀಯ ಅಸ್ಥಿರತೆ: ರಾಜಕೀಯ ಅಸ್ಥಿರತೆ ಚಿನ್ನದ ದರದ ಮೇಲೂ ಪರಿಣಾಮ ಬೀರಬಹುದು. ಉದಾಹರಣೆಗೆ, ಒಂದು ದೊಡ್ಡ ದೇಶದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾದರೆ, ಹೂಡಿಕೆದಾರರು ಅನಿಶ್ಚಿತತೆಯ ವಿರುದ್ಧ ಸುರಕ್ಷಿತರಾಗಲು ಚಿನ್ನವನ್ನು ಖರೀದಿಸಬಹುದು, ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ಇದಲ್ಲದೆ, ಭಾರತದಲ್ಲಿನ ಚಿಲ್ಲರೆ ಚಿನ್ನದ ಬೆಲೆಯು ಭಾರತದಲ್ಲಿ ಗ್ರಾಹಕರಿಗೆ ಚಿನ್ನವನ್ನು ಮಾರಾಟ ಮಾಡುವ ಬೆಲೆಯಾಗಿದೆ. ಜಾಗತಿಕ ಚಿನ್ನದ ಬೆಲೆ, ಭಾರತೀಯ ರೂಪಾಯಿ, ಮತ್ತು ಚಿನ್ನದ ಆಭರಣಗಳ ತಯಾರಿಕೆಯಲ್ಲಿ ತೊಡಗಿರುವ ಕಾರ್ಮಿಕ ಮತ್ತು ಸಾಮಗ್ರಿಗಳ ವೆಚ್ಚ ಸೇರಿದಂತೆ ಹಲವಾರು ಅಂಶಗಳಿಂದ ಇದನ್ನು ನಿರ್ಧರಿಸಲಾಗುತ್ತದೆ. ಭಾರತದಲ್ಲಿ ಚಿಲ್ಲರೆ ಚಿನ್ನದ ಬೆಲೆಯು ಸಾಮಾನ್ಯವಾಗಿ ಜಾಗತಿಕ ಚಿನ್ನದ ಬೆಲೆಗಿಂತ ಹೆಚ್ಚಾಗಿರುತ್ತದೆ, ಏಕೆಂದರೆ ಇದು ಆಭರಣ ಮತ್ತು ಇತರ ವೆಚ್ಚ ಒಳಗೊಂಡಿರುತ್ತದೆ.

ಇದನ್ನೂ ಓದಿ: 4 ಲಕ್ಷ ಬೈಕ್‌, ಸ್ಕೂಟರ್‌ ಹಿಂಪಡೆಯಲು ಮುಂದಾದ ಸುಜುಕಿ ಇಂಡಿಯಾ; ಈ ಪಟ್ಟಿಯಲ್ಲಿ ನಿಮ್ಮ ವಾಹನವೂ ಇದ್ಯಾ? ಹೀಗೆ ಚೆಕ್‌ ಮಾಡಿ

Continue Reading

ಮನಿ-ಗೈಡ್

ITR Filing: ಐಟಿಆರ್ ಸಲ್ಲಿಕೆ; ಜುಲೈ 31ರ ಗಡುವು ತಪ್ಪಿಸಿಕೊಂಡರೆ ಎಷ್ಟು ದಂಡ?

ಆದಾಯ ತೆರಿಗೆ ಇಲಾಖೆಯು ತೆರಿಗೆದಾರರಿಗೆ ಇಮೇಲ್‌ ಮತ್ತು ಎಸ್‌ಎಂಎಸ್‌ಗಳ ಮೂಲಕ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ನೆನಪಿಸುತ್ತಿದೆ. ಹೀಗಾಗಿ ಹೆಚ್ಚಿನವರು ಕೂಡಲೇ ಐಟಿಆರ್ ಸಲ್ಲಿಸುವ ಮೂಲಕ ದಂಡದಿಂದ ತಪ್ಪಿಸಿಕೊಳ್ಳಬಹುದು. 2024- 25ರ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು (ITR Filing) ಗಡುವು ಮುಗಿದರೂ ದಂಡ ಸಹಿತ ರಿಟರ್ನ್ ಸಲ್ಲಿಕೆಗೆ ಅವಕಾಶವಿದೆ.

VISTARANEWS.COM


on

By

ITR Filing
Koo

ಆದಾಯ ತೆರಿಗೆ ರಿಟರ್ನ್ (Income Tax Returns) ಸಲ್ಲಿಸಲು (ITR Filing) ಇನ್ನು ಕೇವಲ ಎರಡು ದಿನಗಳು ಬಾಕಿ ಉಳಿದಿವೆ. ಆದರೆ ಗಡಿಬಿಡಿಯಲ್ಲಿ ಐಟಿಆರ್ ಸಲ್ಲಿಸಿ ತೊಂದರೆ ಪಡುವವರೂ ಇದ್ದಾರೆ. 2024- 25ರ ಮೌಲ್ಯಮಾಪನ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸಲು ಗಡುವು ಮುಗಿದರೂ ದಂಡ ಸಹಿತ ರಿಟರ್ನ್ (ITR Filing With penalty) ಸಲ್ಲಿಕೆಗೆ ಅವಕಾಶವಿದೆ.

ಆದಾಯ ತೆರಿಗೆ ಇಲಾಖೆಯು ತೆರಿಗೆದಾರರಿಗೆ ಇಮೇಲ್‌ ಮತ್ತು ಎಸ್‌ಎಂಎಸ್‌ಗಳ ಮೂಲಕ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ನೆನಪಿಸುತ್ತಿದೆ. ಹೀಗಾಗಿ ಹೆಚ್ಚಿನವರು ಕೂಡಲೇ ಐಟಿಆರ್ ಸಲ್ಲಿಸುವ ಮೂಲಕ ದಂಡದಿಂದ ತಪ್ಪಿಸಿಕೊಳ್ಳುತ್ತಾರೆ.

ಪ್ರತಿ ಜುಲೈನಲ್ಲಿ ತೆರಿಗೆ ಇಲಾಖೆಯು ಗಡುವು ಮುಗಿಯುವವರೆಗೆ ತೆರಿಗೆದಾರರಿಗೆ ನಿಗದಿತ ದಿನಾಂಕವನ್ನು ನಿರಂತರವಾಗಿ ನೆನಪಿಸುತ್ತಿರುತ್ತದೆ. ಐಟಿಆರ್ ಸಲ್ಲಿಕೆಗೆ ಈ ವರ್ಷದ ಗಡುವನ್ನು ವಿಸ್ತರಿಸುವ ಸಾಧ್ಯತೆಯ ಬಗ್ಗೆ ಆದಾಯ ತೆರಿಗೆ ಇಲಾಖೆ ಇನ್ನೂ ಪ್ರತಿಕ್ರಿಯಿಸಿಲ್ಲ.

ಅಂತಿಮ ಗಡುವು ಯಾವಾಗ?

ತೆರಿಗೆ ಲೆಕ್ಕಪರಿಶೋಧನೆಯ ಅಗತ್ಯವಿರುವ ತೆರಿಗೆದಾರರಿಗೆ ಐಟಿಆರ್ ಫೈಲ್ ಮಾಡಲು 2024ರ ಅಕ್ಟೋಬರ್ 31ರವರೆಗೆ ಅವಕಾಶವಿದೆ. ಆರ್ಥಿಕ ವರ್ಷ 2024-25ಗಾಗಿ ಪರಿಷ್ಕೃತ ಮತ್ತು ತಡವಾದ ರಿಟರ್ನ್‌ಗಳನ್ನು ಸಲ್ಲಿಸಲು ಅಂತಿಮ ಗಡುವು 2024ರ ಡಿಸೆಂಬರ್ 31 ಆಗಿದೆ.

ITR Filing
ITR Filing

ತೆರಿಗೆ ಸಲ್ಲಿಸುವಿಕೆ ಪ್ರಕ್ರಿಯೆಯನ್ನು ಸುಲಭಗೊಳಿಸಲು ಆದಾಯ ತೆರಿಗೆ ಇಲಾಖೆಯು ಪ್ರತಿ ಹಣಕಾಸು ವರ್ಷದ ಆರಂಭದಲ್ಲಿ ವಿವಿಧ ಐಟಿಆರ್ ಫಾರ್ಮ್‌ಗಳು ಮತ್ತು ಎಕ್ಸೆಲ್ ಮಾಹಿತಿಗಳನ್ನು ನಿರ್ಧಿಷ್ಟ ವೆಬ್‌‌ಸೈಟ್ ಮೂಲಕ ಪ್ರಕಟಿಸುತ್ತದೆ. ಆದರೂ ಹೆಚ್ಚಿನ ಸಂಬಳ ಪಡೆಯುವ ವ್ಯಕ್ತಿಗಳು ತಮ್ಮ ಫಾರ್ಮ್ 16 ಅನ್ನು ಉದ್ಯೋಗದಾತರಿಂದ ಸ್ವೀಕರಿಸಲು ಕಾಯುತ್ತಾರೆ. ಸಾಮಾನ್ಯವಾಗಿ ಇದನ್ನು ಜೂನ್ ಕೊನೆಯಲ್ಲಿ ಅಥವಾ ಜುಲೈ ಆರಂಭದಲ್ಲಿ ವಿತರಿಸಲಾಗುತ್ತದೆ.

ಐಟಿಆರ್ ಫೈಲಿಂಗ್‌ಗೆ ಜುಲೈ 31 ಅಂತಿಮ ದಿನಾಂಕದೊಂದಿಗೆ ತೆರಿಗೆದಾರರು ಹಿಂದಿನ ಹಣಕಾಸು ವರ್ಷದ ಎಲ್ಲಾ ಆದಾಯ ಮತ್ತು ಹೂಡಿಕೆ ವಿವರಗಳನ್ನು ಕ್ರೋಡೀಕರಿಸಲು ಮತ್ತು ತಮ್ಮ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಲು ಏಪ್ರಿಲ್ 1ರಿಂದ ಜುಲೈ 31 ರವರೆಗೆ ನಾಲ್ಕು ತಿಂಗಳ ಅವಧಿಯನ್ನು ನೀಡಲಾಗುತ್ತದೆ.

ಇದನ್ನೂ ಓದಿ: Money Guide: ಐಟಿಆರ್ ಇನ್ನೂ ಸಲ್ಲಿಸಿಲ್ಲವೇ? ಕೊನೆಯ ಕ್ಷಣದ ಗೊಂದಲ ತಪ್ಪಿಸಲು ಈ ಟಿಪ್ಸ್‌ ಫಾಲೋ ಮಾಡಿ

ಎಷ್ಟು ದಂಡ?

ಜುಲೈ 31ರ ಗಡುವಿನ ನಂತರ ಐಟಿಆರ್ ಸಲ್ಲಿಸುವುದರಿಂದ ದಂಡ ಪಾವತಿಸಬೇಕಾಗುತ್ತದೆ. ನಿವ್ವಳ ತೆರಿಗೆಯ ಆದಾಯವು 5 ಲಕ್ಷ ರೂ. ವರೆಗೆ ಇದ್ದರೆ ತಡವಾಗಿ ತೆರಿಗೆ ರಿಟರ್ನ್‌ಗೆ ಗರಿಷ್ಠ ದಂಡ 1,000 ರೂ ಆಗಿದೆ.

5 ಲಕ್ಷ ರೂ. ಗಿಂತ ಹೆಚ್ಚಿನ ಆದಾಯ ಹೊಂದಿರುವವರು 5,000 ರೂ. ವರೆಗೆ ದಂಡ ವಿಧಿಸಲಾಗುತ್ತದೆ. ಆದಾಯ ತೆರಿಗೆ ಕಾಯಿದೆಯ ಪ್ರಕಾರ ಒಟ್ಟು ಆದಾಯವು ಮೂಲ ವಿನಾಯಿತಿ ಮಿತಿಗಿಂತ ಕಡಿಮೆಯಾದರೆ ಯಾವುದೇ ದಂಡವನ್ನು ವಿಧಿಸಲಾಗುವುದಿಲ್ಲ.

Continue Reading

ಆಟೋಮೊಬೈಲ್

4 ಲಕ್ಷ ಬೈಕ್‌, ಸ್ಕೂಟರ್‌ ಹಿಂಪಡೆಯಲು ಮುಂದಾದ ಸುಜುಕಿ ಇಂಡಿಯಾ; ಈ ಪಟ್ಟಿಯಲ್ಲಿ ನಿಮ್ಮ ವಾಹನವೂ ಇದ್ಯಾ? ಹೀಗೆ ಚೆಕ್‌ ಮಾಡಿ

Suzuki India: ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿ ಸುಜುಕಿ ಇಂಡಿಯಾ ಗ್ರಾಹಕರು ಈ ಸುದ್ದಿ ಓದಲೇಬೇಕು. ಕಂಪನಿ ಸುಮಾರು 4 ಲಕ್ಷಕ್ಕೂ ಹೆಚ್ಚು ಬೈಕ್‌ ಮತ್ತು ಸ್ಕೂಟರ್‌ಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಮುಂದಾಗಿದೆ. ಇಗ್ನಿಷನ್ ಕಾಯಿಲ್‌ಗೆ ಸಂಪರ್ಕ ಹೊಂದಿರುವ ಹೈ-ಟೆನ್ಶನ್ ಕಾರ್ಡ್‌ನಲ್ಲಿ ದೋಷ ಪತ್ತೆಯಾದ ಹಿನ್ನಲೆಯಲ್ಲಿ ಒಟ್ಟು 3,88,411 ದ್ವಿಚಕ್ರ ವಾಹನಗಳನ್ನು ತಪಾಸಣೆ ಮಾಡಬೇಕಾದ ಅನಿವಾರ್ಯತೆ ಎದುರಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಪಟ್ಟಿಯಲ್ಲಿ ನಿಮ್ಮ ವಾಹನವೂ ಇದ್ಯಾ ಎನ್ನುವುದನ್ನು ಪರಿಶೀಲಿಸಲು ಇಲ್ಲಿದೆ ಸುಲಭ ವಿಧಾನ.

VISTARANEWS.COM


on

Suzuki India
Koo

ನವದೆಹಲಿ: ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿ ಸುಜುಕಿ ಇಂಡಿಯಾ (Suzuki India) ಸುಮಾರು 4 ಲಕ್ಷಕ್ಕೂ ಹೆಚ್ಚು ಬೈಕ್‌ ಮತ್ತು ಸ್ಕೂಟರ್‌ಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಲು ಮುಂದಾಗಿದೆ. ಇಗ್ನಿಷನ್ ಕಾಯಿಲ್‌ಗೆ ಸಂಪರ್ಕ ಹೊಂದಿರುವ ಹೈ-ಟೆನ್ಶನ್ ಕಾರ್ಡ್‌ನಲ್ಲಿ ದೋಷ ಪತ್ತೆಯಾದ ಹಿನ್ನಲೆಯಲ್ಲಿ ಒಟ್ಟು 3,88,411 ದ್ವಿಚಕ್ರ ವಾಹನಗಳನ್ನು ತಪಾಸಣೆ ಮಾಡಬೇಕಾದ ಅನಿವಾರ್ಯತೆ ಎದುರಾಗಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಂಪನಿ ತಿಳಿಸಿದೆ.

2022ರ ಏಪ್ರಿಲ್ 30 ಮತ್ತು 2022ರ ಡಿಸೆಂಬರ್ 3ರ ನಡುವೆ ತಯಾರಿಸಲಾದ, ಬಹು ಬೇಡಿಕೆಯ ಆಕ್ಸೆಸ್ 125, ಅವೆನಿಸ್ 125 ಮತ್ತು ಬರ್ಗ್‌ಮ್ಯಾನ್ ಸ್ಟ್ರೀಟ್ 125 (Access 125, Avenis 125, and Burgman Street 125) ಅನ್ನು ಹಿಂಪಡೆಯಲು ಕಂಪನಿ ಮುಂದಾಗಿದೆ ಎಂದು ವರದಿ ತಿಳಿಸಿದೆ. ಇನ್ನು ಬೈಕ್‌ಗಳ ಪೈಕಿ ಟೆಕ್-ಲೋಡೆಡ್ ವಿ-ಸ್ಟ್ರೋಮ್ 800 ಡಿಇ (V-Strom 800 DE) ಮಾಡೆಲ್‌ನಲ್ಲಿ ಕೂಡ ಇದೇ ಸಮಸ್ಯೆ ಕಂಡು ಬಂದಿದೆ. ಜತೆಗೆ ಹಿಂದಿನ ಟೈರ್‌ ವಿಚಾರದಲ್ಲಿ ಸಮಸ್ಯೆ ಇರುವ ಬಗ್ಗೆಯೂ ಕಂಪನಿ ಗಮನಿಸಿದೆ. ಬ್ರ್ಯಾಂಡ್ ಹಂಚಿಕೊಂಡ ವಿವರಗಳ ಪ್ರಕಾರ, ಟೈರ್ ಟ್ರೆಡ್‌ನ ಕೆಲವು ಭಾಗವು ಬೇರ್ಪಟ್ಟು ಅದರಲ್ಲಿ ಬಿರುಕುಗಳನ್ನು ಉಂಟು ಮಾಡಬಹುದು ಈ ಕಾರಣಕ್ಕೆ ವಿ-ಸ್ಟ್ರೋಮ್ 800 ಡಿಇ ಅನ್ನೂ ಪರಿಶೀಲನೆಗೆ ಒಳಪಡಿಸಲಾಗುತ್ತದೆ.

ಹೀಗೆ ಪರಿಶೀಲಿಸಿ

ಒಂದುವೇಳೆ ನೀವು ಖರೀದಿಸಿದ ವಾಹನ ಕಂಪನಿ ಹಿಂಪಡೆಯಲಿರುವ ಲಿಸ್ಟ್‌ನಲ್ಲಿದ್ದು ಅದನ್ನು ಹೇಗೆ ಕಂಡುಕೊಳ್ಳುವುದು ಎನ್ನುವ ಚಿಂತೆಯಲ್ಲಿದ್ದೀರಾ? ಪರಿಶೀಲಿಸಲು ಇಲ್ಲಿದೆ ಸುಲಭ ವಿಧಾನ. ನೀವು ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ವಾಹನದ ವಿಐಎನ್‌ (VIN) ನಮೂದಿಸಿ ನಿಮ್ಮ ವಾಹನದಲ್ಲಿಯೂ ಬದಲಾವಣೆಯ ಅವಶ್ಯಕತೆ ಇದೆಯೇ ಇಲ್ಲವೇ ಎನ್ನುವುದನ್ನು ತಿಳಿದುಕೊಳ್ಳಬಹುದಾಗಿದೆ.

ನಿಮ್ಮ ವಾಹನವನ್ನು ಚೆಕ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ (https://www.suzukimotorcycle.co.in/service-campaign)

ಅಪಾರ ಬೇಡಿಕೆ

ಸುಜುಕಿ ಇಂಡಿಯಾ ಸದ್ಯ ಸ್ಕೂಟರ್ ಮತ್ತು ಬೈಕ್ ವಿಭಾಗಗಳಲ್ಲಿ ಭಾರತದ ಗ್ರಾಹಕರ ಮನಸ್ಸು ಗೆದ್ದಿದೆ. ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ಹೊಂದಿದ್ದು ಪ್ರತಿಸ್ಪರ್ಧಿಗಳಿಗೆ ಸವಾಲೊಡ್ಡಿದೆ. ಈ ಪಟ್ಟಿಯಲ್ಲಿ ಸುಜುಕಿ ಆಕ್ಸೆಸ್ 125, ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ ಮತ್ತು ಸುಜುಕಿ ಬರ್ಗ್‌ಮ್ಯಾನ್ ಸ್ಟ್ರೀಟ್ 125, ಸುಜುಕಿ ಕಟಾನಾ, ಸುಜುಕಿ ಜಿಕ್ಸರ್ ಎಸ್ಎಫ್, ಸುಜುಕಿ ಜಿಕ್ಸರ್ 250, ಸುಜುಕಿ ವಿ-ಸ್ಟ್ರೋಮ್ ಎಸ್ಎಕ್ಸ್, ಸುಜುಕಿ ಜಿಎಸ್ಎಕ್ಸ್-ಆರ್ 1000 ಆರ್‌ಗೆ ಅಪಾರ ಬೇಡಿಕೆ ಇದೆ.

ಕಂಪನಿ ಹೇಳಿದ್ದೇನು?

ಎಂಜಿನ್ ಸ್ಥಗಿತ, ಸ್ಟಾರ್ಟ್ ಮಾಡುವಾಗ ಕಂಡುಬರುವ ತೊಂದರೆ, ದೋಷಪೂರಿತ ಸ್ಪೀಡೋಮೀಟರ್‌ಗಳ ಬಗ್ಗೆ ಗ್ರಹಾಕರು ದೂರು ಸಲ್ಲಿಸಿರುವ ಹಿನ್ನಲೆಯಲ್ಲಿ ವಾಹನಗಳನ್ನು ಹಿಂಪಡೆಯಲಾಗುತ್ತಿದೆ. ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು ಅಧಿಕೃತ ಸುಜುಕಿ ಸೇವಾ ಕೇಂದ್ರಗಳಲ್ಲಿ ತಮ್ಮ ವಾಹನಗಳನ್ನು ದುರಸ್ತಿ ಪಡಿಸಬೇಕು ಎಂದು ಕಂಪನಿ ತಿಳಿಸಿದೆ.

ಇದನ್ನೂ ಓದಿ: Royal Enfield Guerrilla 450 : ರಾಯಲ್ ಎನ್‌ಫೀಲ್ಡ್ ಗೆರಿಲ್ಲಾ 450 ಖರೀದಿ ಮಾಡಲು ಐದು ಕಾರಣ ಇಲ್ಲಿದೆ

Continue Reading

ವಾಣಿಜ್ಯ

Mukesh Ambani: ಮುಕೇಶ್ ಅಂಬಾನಿಯ ಒಂದು ದಿನದ ಆದಾಯ 163 ಕೋಟಿ ರೂ! ಒಟ್ಟು ಸಂಪತ್ತೆಷ್ಟು?

ಭಾರತ ಮತ್ತು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಮುಕೇಶ್ ಅಂಬಾನಿ (Mukesh Ambani) ಫೋರ್ಬ್ಸ್ ನಿಯತಕಾಲಿಕೆಯಿಂದ ವಿಶ್ವದ ಅಗ್ರ 10 ಶ್ರೀಮಂತ ವ್ಯಕ್ತಿಗಳಲ್ಲಿ ಸತತವಾಗಿ ಸ್ಥಾನ ಪಡೆಯುತ್ತಿದ್ದಾರೆ. ಅವರ ಸಂಪತ್ತಿನ ನಿವ್ವಳ ಮೌಲ್ಯ 80.7 ಬಿಲಿಯನ್ ಡಾಲರ್, ಅಂದರೆ 7.65 ಲಕ್ಷ ಕೋಟಿ ರೂಪಾಯಿಗಳಾಗಿದೆ. ಅವರ ವೃತ್ತಿ ಜೀವನ, ಸಂಪತ್ತಿನ ಬಗ್ಗೆ ಇನ್ನಷ್ಟು ಕೂತಹಲಕಾರಿ ಸಂಗತಿಗಳು ಇಲ್ಲಿವೆ.

VISTARANEWS.COM


on

By

Mukesh Ambani
Koo

ಇತ್ತೀಚೆಗೆ ಪುತ್ರ ಅನಂತ್ ಅಂಬಾನಿಯ ಮದುವೆಯನ್ನು (anant ambani wedding) ಅದ್ಧೂರಿಯಾಗಿ ನಡೆಸಿ ವಿಶ್ವದ ಗಮನ ಸೆಳೆದ ಭಾರತದ ಅತ್ಯಂತ ಶ್ರೀಮಂತ ಉದ್ಯಮಿ (India’s richest businessman) ಮುಕೇಶ್ ಅಂಬಾನಿ (Mukesh Ambani) ಅವರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ಎಲ್ಲರಲ್ಲೂ ಹೆಚ್ಚಾಗಿದೆ. ಅದರಲ್ಲೂ ಮುಖ್ಯವಾಗಿ ಅವರ ಆದಾಯ, ಸಂಪತ್ತು, ಯಾವ ರೀತಿಯ ಜೀವನ ನಡೆಸುತ್ತಿದ್ದಾರೆ ಎಂಬುದು ಎಲ್ಲರ ಗಮನ ಸೆಳೆಯುತ್ತಿದೆ.

ಭಾರತೀಯ ಉದ್ಯಮಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮತ್ತು ಅತಿದೊಡ್ಡ ಷೇರುದಾರರಾಗಿರುವ ಮುಖೇಶ್ ಅಂಬಾನಿ ಪೆಟ್ರೋಕೆಮಿಕಲ್ಸ್, ರಿಫೈನಿಂಗ್, ತೈಲ ಮತ್ತು ಅನಿಲ ಪರಿಶೋಧನೆಯಂತಹ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವ ಅವರ ನಿವ್ವಳ ಸಂಪತ್ತಿನ ಮೌಲ್ಯ 80.7 ಬಿಲಿಯನ್ ಡಾಲರ್ ಅಂದರೆ 7.65 ಲಕ್ಷ ಕೋಟಿ ರೂಪಾಯಿ.

ಭಾರತ ಮತ್ತು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಅವರು ಫೋರ್ಬ್ಸ್ ನಿಯತಕಾಲಿಕೆಯಿಂದ ವಿಶ್ವದ ಅಗ್ರ 10 ಶ್ರೀಮಂತ ವ್ಯಕ್ತಿಗಳಲ್ಲಿ ಸತತವಾಗಿ ಸ್ಥಾನ ಪಡೆಯುತ್ತಿದ್ದಾರೆ. 1957ರ ಏಪ್ರಿಲ್ 19ರಂದು ಜನಿಸಿರುವ ಮುಖೇಶ್ ಅಂಬಾನಿ ಅವರ ವಯಸ್ಸು 65, ಅವರ ಸಂಬಳ 15 ಕೋಟಿ ರೂ. ಗಳಾಗಿದ್ದು, ದೈನಂದಿನ ಆದಾಯ 163 ಕೋಟಿ ರೂ. ಗಳಾಗಿದೆ.


ಆರಂಭಿಕ ವೃತ್ತಿಜೀವನ

ಮುಖೇಶ್ ಅಂಬಾನಿ ಪ್ರಸ್ತುತ ಭಾರತದ ಅತಿದೊಡ್ಡ ಮತ್ತು ವೈವಿಧ್ಯಮಯ ಸಂಘಟಿತ ಸಂಸ್ಥೆಗಳಲ್ಲಿ ಒಂದಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ನ ಅಧ್ಯಕ್ಷರು ಮತ್ತು ಅತಿದೊಡ್ಡ ಷೇರುದಾರರಾಗಿದ್ದಾರೆ. ಅಂಬಾನಿ 1981 ರಲ್ಲಿ ಆರ್‌ಐಎಲ್‌ಗೆ ಸೇರಿದರು. ಕಂಪೆನಿಯ ತ್ವರಿತ ಬೆಳವಣಿಗೆ ಮತ್ತು ವಿಸ್ತರಣೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.

ಆರ್‌ಐಎಲ್ ಮುಕೇಶ್ ಅಂಬಾನಿ ನಾಯಕತ್ವದಲ್ಲಿ ಪೆಟ್ರೋಕೆಮಿಕಲ್ಸ್, ರಿಫೈನಿಂಗ್, ತೈಲ ಮತ್ತು ಅನಿಲ ಪರಿಶೋಧನೆ, ಜವಳಿ, ಚಿಲ್ಲರೆ ವ್ಯಾಪಾರ ಮತ್ತು ದೂರಸಂಪರ್ಕ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸುತ್ತಿದೆ. ಅಂಬಾನಿ ತನ್ನ ಅಂಗಸಂಸ್ಥೆಯಾದ ರಿಲಯನ್ಸ್ ರಿಟೇಲ್ ಮೂಲಕ ಭಾರತದ ಚಿಲ್ಲರೆ ಮಾರುಕಟ್ಟೆಗೆ ಕಂಪೆನಿಯು ಯಶಸ್ವಿಯಾಗಿ ಪ್ರವೇಶಿಸುವಂತೆ ಮಾಡಿದ್ದಾರೆ. ಇದು ಭಾರತದಲ್ಲಿನ ಅತಿದೊಡ್ಡ ಚಿಲ್ಲರೆ ಸರಪಳಿಗಳಲ್ಲಿ ಒಂದಾಗಿದೆ.

2010ರಲ್ಲಿ ರಿಲಯನ್ಸ್ ಜಿಯೋವನ್ನು ಪ್ರಾರಂಭಿಸುವುದರೊಂದಿಗೆ ಅಂಬಾನಿ ಭಾರತೀಯ ದೂರಸಂಪರ್ಕ ವಲಯಕ್ಕೆ ಕಂಪೆನಿಯನ್ನು ಮುನ್ನಡೆಸಿದರು. ಇದು ಉದ್ಯಮವನ್ನು ಅಭಿವೃದ್ಧಿ ಪಡಿಸಿದ್ದು, ದೇಶವನ್ನು ಡೇಟಾ-ಚಾಲಿತ ಸಮಾಜವಾಗಿ ಪರಿವರ್ತಿಸಿತು. 400 ಮಿಲಿಯನ್ ಚಂದಾದಾರರನ್ನು ಹೊಂದಿರುವ ಜಿಯೋ ಭಾರತದಲ್ಲಿ ಅತಿದೊಡ್ಡ ಮೊಬೈಲ್ ನೆಟ್‌ವರ್ಕ್ ಆಪರೇಟರ್ ಆಗಿದೆ.

ಅಂಬಾನಿಯವರ ವ್ಯವಹಾರ ಕುಶಾಗ್ರಮತಿ ಮತ್ತು ನಾಯಕತ್ವದ ಕೌಶಲಗಳು ಅವರನ್ನು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರನ್ನಾಗಿ ಮಾಡಿದೆ. ಜಾಗತಿಕ ವ್ಯಾಪಾರ ಸಮುದಾಯದಲ್ಲಿ ಪ್ರಮುಖ ವ್ಯಕ್ತಿಯಾಗುವಂತೆ ಮಾಡಿದೆ. ಅವರು ಭಾರತೀಯ ವ್ಯಾಪಾರ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ ಹಲವಾರು ಪ್ರಶಸ್ತಿಗಳು ಮತ್ತು ಮನ್ನಣೆಯನ್ನು ಪಡೆದಿದ್ದಾರೆ.

ನಿವ್ವಳ ಮೌಲ್ಯ 2024

2022ರಲ್ಲಿ ಉದ್ಯಮಿ ಮತ್ತು ಬಿಲಿಯನೇರ್ ಗೌತಮ್ ಅದಾನಿ ಇವರನ್ನು ನಂಬರ್‌ 1 ಪಟ್ಟದಿಂದ ಕೆಳಗಿಳಿಸುವವರೆಗೂ ಮುಖೇಶ್ ಅಂಬಾನಿ ನಿರಂತರವಾಗಿ ಭಾರತದ ಶ್ರೀಮಂತ ವ್ಯಕ್ತಿಯಾಗಿದ್ದರು. ಆದರೆ ಹಿಂಡೆನ್‌ಬರ್ಗ್ ರಿಸರ್ಚ್‌ನಿಂದ ಅದಾನಿ ಗುಂಪಿನ ವಿರುದ್ಧ ಇತ್ತೀಚಿನ ಆರೋಪಗಳಿಂದಾಗಿ ಅಂಬಾನಿ ಮತ್ತೊಮ್ಮೆ ಶ್ರೀಮಂತ ಎಂಬ ಬಿರುದನ್ನು ಗಳಿಸಿದ್ದಾರೆ.

ಗಳಿಕೆಯ ಆಸ್ತಿ ಎಷ್ಟು?

ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷರಾಗಿ ಮತ್ತು ಅತಿದೊಡ್ಡ ಷೇರುದಾರರಾಗಿ ಮುಖೇಶ್ ಅಂಬಾನಿ ಪೆಟ್ರೋಕೆಮಿಕಲ್ಸ್, ರಿಫೈನಿಂಗ್, ತೈಲ ಮತ್ತು ಅನಿಲ ಪರಿಶೋಧನೆ, ಜವಳಿ, ಚಿಲ್ಲರೆ ವ್ಯಾಪಾರ ಮತ್ತು ದೂರಸಂಪರ್ಕ ಸೇರಿದಂತೆ ಹಲವಾರು ಉದ್ಯಮಗಳಲ್ಲಿ ಗಮನಾರ್ಹ ಅಸ್ತಿತ್ವವನ್ನು ಹೊಂದಿದ್ದಾರೆ. ಅವರು ರಿಯಲ್ ಎಸ್ಟೇಟ್ ಮತ್ತು ಇತರ ಹೂಡಿಕೆಗಳಲ್ಲಿ ಆಸ್ತಿಯನ್ನು ಹೊಂದಿದ್ದಾರೆ.

ಮನೆ ಮತ್ತು ರಿಯಲ್ ಎಸ್ಟೇಟ್ ಆಸ್ತಿಗಳು

ಮುಖೇಶ್ ಅಂಬಾನಿ ಭಾರತ ಮತ್ತು ಪ್ರಪಂಚದಾದ್ಯಂತ ಹಲವಾರು ಐಷಾರಾಮಿ ಮನೆಗಳು ಮತ್ತು ಆಸ್ತಿಗಳನ್ನು ಹೊಂದಿದ್ದಾರೆ. ಇದರಲ್ಲಿ ಪ್ರಮುಖವಾದವುಗಳೆಂದರೆ ಆಂಟಿಲಿಯಾ ಮುಂಬಯಿನಲ್ಲಿರುವ 27 ಅಂತಸ್ತಿನ ವಸತಿ ಗಗನಚುಂಬಿ ಕಟ್ಟಡವು ವಿಶ್ವದ ಅತ್ಯಂತ ದುಬಾರಿ ಖಾಸಗಿ ನಿವಾಸಗಳಲ್ಲಿ ಒಂದಾಗಿದೆ.

ಸ್ಟೋಕ್ ಪಾರ್ಕ್ ಎಸ್ಟೇಟ್ ಇಂಗ್ಲೆಂಡ್‌ನ ಲಂಡನ್‌ನಲ್ಲಿ 300 ಎಕರೆ ಎಸ್ಟೇಟ್ ಅನ್ನು 500 ಕೋಟಿ ರೂ. ಹೆಚ್ಚು ನೀಡಿ ಖರೀದಿ ಮಾಡಲಾಗಿದೆ.

ದುಬೈನ ಪಾಮ್ ಜುಮೇರಾದಲ್ಲಿ ನೆಲೆಗೊಂಡಿರುವ ಅರಮನೆಯ ವಿಲ್ಲಾವನ್ನು 80 ಮಿಲಿಯನ್‌ ಡಾಲರ್ ನೀಡಿ ಖರೀದಿಸಲಾಗಿದೆ. ಇದು ದುಬೈನಲ್ಲಿ ಇಲ್ಲಿಯವರೆಗಿನ ಅತ್ಯಂತ ದುಬಾರಿ ರಿಯಲ್ ಎಸ್ಟೇಟ್ ಖರೀದಿಯಾಗಿದೆ ಎಂದು ಹೇಳಲಾಗುತ್ತದೆ.

Mukesh Ambani
Mukesh Ambani


ಯಾವ ಕಾರುಗಳಿವೆ?

ಮುಕೇಶ್ ಅಂಬಾನಿ ಅವರು ಮರ್ಸಿಡಿಸ್-ಬೆನ್ಜ್, ಬಿಎಂಡಬ್ಲ್ಯೂ, ರೋಲ್ಸ್-ರಾಯ್ಸ್ ಮತ್ತು ಮೇಬ್ಯಾಕ್‌ನಂತಹ ಉನ್ನತ-ಮಟ್ಟದ ಬ್ರ್ಯಾಂಡ್‌ಗಳನ್ನು ಒಳಗೊಂಡಂತೆ ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಫೆರಾರಿ ಎಸ್ ಎಫ್ 90 ಸ್ಟ್ರಾಡೇಲ್ ವ್ಯಾಪಾರ ಅಧಿಕಾರಿ, ವಿವಿಐಪಿಗಳು ಬಳಸುವ ಜನಪ್ರಿಯ ಐಷಾರಾಮಿ ಕಾರುಗಳಲ್ಲಿ ಒಂದಾಗಿದೆ.

ಬಿಎಂಡಬ್ಲ್ಯೂ 7 ಸರಣಿ ಸೌಕರ್ಯ, ಕಾರ್ಯಕ್ಷಮತೆ ಮತ್ತು ತಂತ್ರಜ್ಞಾನಕ್ಕೆ ಹೆಸರುವಾಸಿಯಾದ ಮತ್ತೊಂದು ಐಷಾರಾಮಿ ಸೆಡಾನ್.

ಪ್ರೀಮಿಯಂ ಐಷಾರಾಮಿ ಕಾರು ರೋಲ್ಸ್ ರಾಯ್ಸ್ ಫ್ಯಾಂಟಮ್ ಟೈಮ್‌ಲೆಸ್ ವಿನ್ಯಾಸ ಮತ್ತು ಕ್ಲಾಸಿಕ್ ಸ್ಟೈಲಿಂಗ್‌ಗೆ ಹೆಸರುವಾಸಿಯಾಗಿದೆ.

ಮರ್ಸಿಡಿಸ್ ಮೇಬ್ಯಾಕ್ ಬೆನ್ಜ್ ಎಸ್ 660 ಗಾರ್ಡ್ ಐಷಾರಾಮಿ ಕಾರು ಅದರ ವಿಶಾಲವಾದ ಒಳಾಂಗಣ, ಉನ್ನತ-ಮಟ್ಟದ ಸೌಕರ್ಯಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನಕ್ಕೆ ಖ್ಯಾತಿ ಪಡೆದಿದೆ.


ದತ್ತಿ ಕಾರ್ಯಗಳು ಏನೇನು?

ಮುಖೇಶ್ ಅಂಬಾನಿ ಮತ್ತು ಅವರ ಕುಟುಂಬವು ಅನೇಕ ದತ್ತಿ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಇದರಲ್ಲಿ ರಿಲಯನ್ಸ್ ಫೌಂಡೇಶನ್ ಕೂಡ ಒಂದಾಗಿದೆ. ಮುಖೇಶ್ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಸ್ಥಾಪಿಸಿದ ಈ ಸಂಸ್ಥೆ, ಶಿಕ್ಷಣ, ಆರೋಗ್ಯ ರಕ್ಷಣೆ, ಗ್ರಾಮೀಣ ಪರಿವರ್ತನೆ, ನಗರ ನವೀಕರಣ, ವಿಪತ್ತು ನಿರ್ವಹಣೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತದೆ.

ರಿಲಯನ್ಸ್ ಫೌಂಡೇಶನ್ ಭಾರತದಲ್ಲಿ ಶಿಕ್ಷಣವನ್ನು ಉತ್ತೇಜಿಸಲು ಮತ್ತು ಅವಕಾಶಗಳನ್ನು ಒದಗಿಸುವಲ್ಲಿ ಸಕ್ರಿಯವಾಗಿದೆ. ಗುಣಮಟ್ಟದ ಶಿಕ್ಷಣದ ಪ್ರವೇಶವನ್ನು ಸುಧಾರಿಸಲು ಪ್ರತಿಷ್ಠಾನವು ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತದೆ ಮತ್ತು ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ಶಾಲೆಗಳನ್ನು ನಿರ್ಮಿಸಿದೆ.

ಇದನ್ನೂ ಓದಿ: Sameer Nigam: ಕನ್ನಡಿಗರ ಕ್ಷಮೆಯಾಚಿಸಿದ PhonePe ಸಿಇಒ ಸಮೀರ್‌ ನಿಗಮ್‌; ಬಾಯ್ಕಾಟ್‌ ಪೆಟ್ಟಿಗೆ ಥಂಡಾ

Continue Reading
Advertisement
BPNL Recruitment 2024
ಉದ್ಯೋಗ37 seconds ago

BPNL Recruitment 2024: ಭಾರತೀಯ ಪಶುಪಾಲನಾ ನಿಗಮದಲ್ಲಿದೆ 2,250 ಹುದ್ದೆ; 10ನೇ ತರಗತಿ ಪಾಸಾದವರೂ ಅಪ್ಲೈ ಮಾಡಿ

BJP-JDS Padayatra
ಕರ್ನಾಟಕ13 mins ago

BJP-JDS Padayatra: ಬಿಜೆಪಿ-ಜೆಡಿಎಸ್‌ ಪಾದಯಾತ್ರೆಗೆ ಅನುಮತಿ ಕೊಡಲ್ಲ: ಗೃಹ ಸಚಿವ ಪರಮೇಶ್ವರ್‌

Physical Abuse
ದೇಶ16 mins ago

Physical Abuse: ತಂಗಿ ಮೇಲೆ 13 ವರ್ಷದ ಬಾಲಕನಿಂದ ಅತ್ಯಾಚಾರ, ಕೊಲೆ; ಕೇಸ್‌ ಮುಚ್ಚಲು ತಾಯಿಯೇ ಸಾಥ್!

train service
ಹಾಸನ17 mins ago

Train services: ಎಡಕುಮೇರಿಯಲ್ಲಿ ಭೂಕುಸಿತ; ಆಗಸ್ಟ್‌ 4ರವರೆಗೆ 14 ರೈಲುಗಳ ಸಂಚಾರ ರದ್ದು

International Tiger Day 2024
ಪರಿಸರ19 mins ago

International Tiger Day 2024: 150 ವರ್ಷಗಳಲ್ಲಿ ಹುಲಿಗಳ ಸಂಖ್ಯೆ ಶೇ. 95ರಷ್ಟು ಕುಸಿತ!

puncture mafia viral video
ವೈರಲ್ ನ್ಯೂಸ್22 mins ago

Viral video: ರಸ್ತೆಯಿಂದ ರಾಶಿಗಟ್ಟಲೆ ಮೊಳೆ ಹೆಕ್ಕಿ ತೆಗೆದ ಟ್ರಾಫಿಕ್‌ ಪೊಲೀಸರು; ಪಂಕ್ಚರ್‌ ಮಾಫಿಯಾ ಸಕ್ರಿಯ?

Fraud Case
Latest30 mins ago

Fraud Case: ಪತ್ನಿಗೆ ಮಕ್ಕಳಾಗಿಲ್ಲ ಎಂದು ಮಾವನ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಿದ!

Shraddha Srinath Love tattoo on chest What does that mean
ಸ್ಯಾಂಡಲ್ ವುಡ್31 mins ago

Shraddha Srinath: ಶ್ರದ್ಧಾ ಶ್ರೀನಾಥ್‌ ಎದೆ ಮೇಲೆ ʻLove’ ಟ್ಯಾಟೂ ; ಏನಿದರ ಅರ್ಥ?

OBC Reservation
ದೇಶ55 mins ago

OBC Reservation: ಒಬಿಸಿ ಮೀಸಲಾತಿ ಹೆಚ್ಚಳಕ್ಕೆ ಸುಪ್ರೀಂ ಕೋರ್ಟ್‌ ತಡೆ; ನಿತೀಶ್‌ ಕುಮಾರ್‌ಗೆ ಮುಖಭಂಗ!

Rajendra Nagar Tragedy
ದೇಶ56 mins ago

Rajendra Nagar Tragedy: ದೆಹಲಿ ಕೋಚಿಂಗ್‌ ಸೆಂಟರ್‌ನಲ್ಲಿ ವಿದ್ಯಾರ್ಥಿಗಳ ಸಾವಿನ ಪ್ರಕರಣ; 7 ಮಂದಿಯ ಬಂಧನ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Tungabhadra Dam
ಕೊಪ್ಪಳ19 hours ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ21 hours ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ23 hours ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ1 day ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ2 days ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ2 days ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ2 days ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ3 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ3 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

Karnataka Rain
ಮಳೆ3 days ago

Karnataka Rain: ವಿದ್ಯುತ್‌ ದುರಸ್ತಿಗಾಗಿ ಪ್ರಾಣದ ಹಂಗು ತೊರೆದು ಉಕ್ಕಿ ಹರಿಯುವ ನೀರಿಗೆ ಧುಮುಕಿದ ಲೈನ್‌ ಮ್ಯಾನ್‌!

ಟ್ರೆಂಡಿಂಗ್‌