ಸ್ಮರಣೆ: ಕಾರ್ಗಿಲ್‌ ಕದನ ಕಲಿ ಕ್ಯಾಪ್ಟನ್ ವಿಕ್ರಂ ಬಾತ್ರಾ - Vistara News

ಶ್ರದ್ಧಾಂಜಲಿ

ಸ್ಮರಣೆ: ಕಾರ್ಗಿಲ್‌ ಕದನ ಕಲಿ ಕ್ಯಾಪ್ಟನ್ ವಿಕ್ರಂ ಬಾತ್ರಾ

ತಮ್ಮ ಬದುಕಲ್ಲಿ ಅಪರಿಮಿತ ಸಾಹಸ, ಛಲ ಮತ್ತು ದೇಶಭಕ್ತಿಯಿಂದ ಹೋರಾಡಿ ದೇಶಕ್ಕಾಗಿ ಬಲಿದಾನಿಯಾದವರು ಕ್ಯಾಪ್ಟನ್ ವಿಕ್ರಂ ಬಾತ್ರಾ. ವಿಕ್ರಂ ಬಾತ್ರಾರವರ ತಂಡ ವಶಪಡಿಸಿಕೊಂಡ ಪಾಯಿಂಟ್ 4875 ಕಾರ್ಗಿಲ್‍ನಲ್ಲಿ “ಬಾತ್ರಾ ಟಾಪ್” ಎಂದೇ ಪ್ರಸಿದ್ಧವಾಗಿದೆ.

VISTARANEWS.COM


on

vikram batra captain
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
mayuralakshmi

ಜುಲೈ 26, 1999, ಭಾರತದ ಸಶಸ್ತ್ರ ಪಡೆಗಳು ಪಾಕಿಸ್ತಾನದ ವಿರುದ್ಧ ವಿಜಯ ಸಾಧಿಸಿದ ಅಪ್ರತಿಮ ಐತಿಹಾಸಿಕ ದಿನ.
ಅದು ಕಾರ್ಗಿಲ್ ಯುದ್ಧದ ವಿಜಯ ದಿನ!
ಶ್ರೀನಗರದಿಂದ 205 ಕಿಲೋ ಮೀಟರ್ ದೂರದಲ್ಲಿರುವ “ಕಾರ್ಗಿಲ್” ಜಿಲ್ಲೆ.
ಭಾರತ-ಪಾಕಿಸ್ತಾನ ಉಭಯ ರಾಷ್ಟ್ರಗಳ ಗಡಿ ನಿಯಂತ್ರಣ ರೇಖೆಯ ಉತ್ತರದ ಕಡೆಗೆ ರಾಷ್ಟ್ರೀಯ ಹೆದ್ದಾರಿ-1ರ ಕಡೆಗೆ ಪಾಪಿ ಪಾಕಿಸ್ತಾನ್ ಸೈನಿಕರು ನುಸುಳಿದ್ದರು.
ಇದನ್ನು ಕಂಡು ಅಲ್ಲಿನ ದನಗಾಹಿಗಳು ನಮ್ಮ ಸೈನಿಕರ ಗಮನಕ್ಕೆ ತಂದ ನಂತರ ಆರಂಭವಾದ ಸಶಸ್ತ್ರ ಯುದ್ಧವೇ “ಕಾರ್ಗಿಲ್ ಯುದ್ಧ”!

ಮೇ 3, 1999ರಿಂದ ಆರಂಭವಾಗಿ ಜುಲೈ ತಿಂಗಳ 26ರರವರೆಗೆ ನಡೆದ ಕಾರ್ಗಿಲ್ ಯುದ್ಧದಲ್ಲಿ ನಮ್ಮ ಸೈನಿಕರು ಭಾರತಾಂಬೆಯ ಮಡಿಲಲ್ಲಿ ವೀರಸ್ವರ್ಗ ಪಡೆದ ಕಾರ್ಗಿಲ್ ಯುದ್ಧದ ವಿಜಯ ದಿನವನ್ನು ಇಡೀ ದೇಶ ವಿಝ್ರಂಭಿಸಿತು.
ಇಪ್ಪತ್ತು ವರ್ಷಗಳ ಹಿಂದೆ ಕಾರ್ಗಿಲ್ ಕದನದಲ್ಲಿ ನಮ್ಮ ಯೋಧರು ಹಗಲಿರುಳೆನ್ನದೆ ಧೈರ್ಯ, ಸಾಹಸ ಮತ್ತು ಬಲಿದಾನಗಳ ಕುರುಹಾಗಿ ಇಂದಿಗೂ ಅತ್ಯಂತ ರೋಚಕ ಯುದ್ಧದ ನೆನಪುಗಳು ಹಸಿರಾಗಿವೆ.

ಹಿಮಾಚಲ ಪ್ರದೇಶದ ಪಾಲಂಪುರ್‍ನಲ್ಲಿ ಸರಕಾರಿ ಶಾಲಾ ಶಿಕ್ಷಕರಾಗಿದ್ದ ಗಿರಿಧಾರಿ ಲಾಲ್ ಬಾತ್ರಾ ಮತ್ತು ಕಮಲ್ ಕಾಂತಾ ಬಾತ್ರಾ ಅವರಿಗೆ ಸೆಪ್ಟೆಂಬರ್ 9, 1974ರಂದು ಇಬ್ಬರು ಅವಳಿ ಮಕ್ಕಳು ಜನಿಸಿದರು. ಅವರ ಹೆಸರುಗಳು ವಿಕ್ರಂ ಮತ್ತು ವಿಶಾಲ್ ಪ್ರೀತಿಯಿಂದ ಪೋಷಕರು ಅವರನ್ನು ಲವ ಮತ್ತು ಕುಶ ಎಂದು ಕರೆಯುತ್ತಿದ್ದರು.
ಇಬ್ಬರಿಗೂ ಭಾರತೀಯ ಸೇನೆ ಸೇರಬೇಕೆಂಬ ಹಂಬಲವಿತ್ತು. ವಿಶಾಲ್ ಬಾತ್ರಾ ಸತತ ಮೂರು ಬಾರಿ ಪ್ರಯತಿಸಿದರೂ ಸಫಲರಾಗಲಿಲ್ಲ.

ವಿಕ್ರಂ ಬಾತ್ರಾ ತನ್ನ ಮೊದಲನೇ ಪ್ರಯತ್ನದಲ್ಲೇ ಸಫಲರಾಗಿ ಸರ್ವಿಸ್ ಸೆಲೆಕ್ಷನ್ ಬೋರ್ಡ್‍ನಿಂದ ಆಯ್ಕೆಯಾದರು.
ಬಾಲ್ಯದಿಂದಲೂ ಅಪ್ರತಿಮ ಸಾಹಸಿಯಾಗಿದ್ದ ವಿಕ್ರಂ ಪಾಲಂಪುರದ ಡಿಏವಿ ಪಬ್ಲಿಕ್ ಶಾಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಮುಗಿಸಿ ನಂತರ ಅಲ್ಲಿನ ಸೆಂಟ್ರಲ್ ಶಾಲೆಯಲ್ಲಿ ಓದಿದರು. ಮುಂದೆ ಚಂದಿಗಢದ ಡಿಏವಿ ಕಾಲೇಜಲ್ಲಿ ಬಿಎಸ್‍ಸಿ ಓದುವಾಗಲೇ ಅತ್ಯುತ್ತಮ ಎನ್‍ಸಿಸಿ ಕ್ಯಾಡೇಟ್ ಎನಿಸಿಕೊಂಡರು. ಮೊದಲಿಗೆ 1006ರಲ್ಲಿ ಭಾರತೀಯ ಸೇನೆಯ ದೆಹರಾದೂನ್‍ನಲ್ಲಿ ಸೇರ್ಪಡೆಯಾಗಿ ನಂತರ ಮಾಣಿಕ್ ಶಾ ಬೆಟಾಲಿಯನ್‍ನ ಜೆಸ್ಸೋರ ಕಂಪನಿಯಲ್ಲಿ ಸೇರಿದರು.
13-ಜಮ್ಮು-ಕಾಶ್ಮೀರ್ ರೈಫಲ್ಸ್‍ಗೆ ಲೆಫ್ಟಿನೆಂಟ್ ಆಗಿ ಕಳುಹಿಸಲ್ಪಟ್ಟರು.

ನಂತರ ಜಬಲ್‍ಪುರ, ಮಧ್ಯಪ್ರದೇಶದಲ್ಲಿ ಡಿಸೆಂಬರ್ 1997ರಿಂದ ಜನವರಿ 1998ವರೆಗೆ ತರಬೇತಿ.
ಜಮ್ಮು ಕಾಶ್ಮೀರದ ಬಾರಮುಲ್ಲಾದಲ್ಲಿ ತೀವ್ರ ಆತಂಕವಾದಿಗಳ ಚಟುವಟಿಕೆಗಳು ನಡೆಯುತ್ತಿದ್ದ ಸಮಯ, ಸೋಪೋರ್ ಮತ್ತು ಕಾಶ್ಮೀರದದಲ್ಲಿ ಆಫೀಸರ್ ತರಬೇತಿ ಪಡೆದರು. ಪ್ರಶಿಕ್ಷಣ ಮುಗಿದ ನಂತರ ಮತ್ತೆ ಸೋಪೋರ್‍ಗೆ ಹಿಂತಿರುಗಿ ತೀವ್ರವಾದಿಗಳೊಂದಿಗೆ ಹೋರಾಡಿದರು. ಜನವರಿ 1999ರಲ್ಲಿ ಕರ್ನಾಟಕದ ಬೆಳಗಾವಿಯಲ್ಲಿ ಕಮಾಂಡೋ ತರಬೇತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ತಮ್ಮ ಊರಾದ ಪಾಲಂಪುರಕ್ಕೆ ರಜೆಗಾಗಿ ತೆರಳಿದ್ದ ಸಮಯದಲ್ಲಿ ತಮ್ಮ ಸ್ನೇಹಿತನ ಬಳಿ ಅವರು ಹೇಳಿದ್ದು: “ಯುದ್ಧದ ಸಂದರ್ಭ ಎದುರಾದಲ್ಲಿ ನಾನು ನನ್ನ ದೇಶದ ಧ್ವಜವನ್ನು ಹಾರಿಸುತ್ತೇನೆ ಅಥವಾ ಧ್ವಜವನ್ನೇ ಹೊದೆದ ನನ್ನ ದೇಹ ಹಿಂತಿರುಗುತ್ತದೆ” ಎಂದು.

ಅವರ ನುಡಿ ನಿಜವಾಗುವ ಸಮಯ ಬಹು ಬೇಗ ಅವರ ಬದುಕಲ್ಲಿ ಎದುರಾಯಿತು. ಸೋಪೋರ್‍ನ 13-ಜೆ-ಕೆ ರೈಫಲ್ಸ್‍ನಲ್ಲಿದ್ದಾಗ ಉತ್ತರ ಪ್ರದೇಶದ ಶಾಹಜಾನ್‍ಪುರಕ್ಕೆ ತೆರಳಲು ಸೂಚನೆ ಬಂದಿತು. ನಂತರ ಕಾರ್ಗಿಲ್ ಯುದ್ಧಾರಂಭದ ಸೂಚನೆಯ ಮೇರೆಗೆ ಅಲ್ಲಿಂದ ಜಮ್ಮು-ಕಾಶ್ಮೀರದ ಡ್ರಾಸ್‍ಗೆ ಹೊರಡಲು ಆದೇಶ ಬಂದಿತು.
ತನ್ನ ತಂದೆ-ತಾಯಿಗೆ ತಾನು ಕ್ಷೇಮವಾಗಿರುತ್ತೇನೆ ಮತ್ತು ಪ್ರತಿ ಹತ್ತು ದಿನಗಳಿಗೊಮ್ಮೆ ಕರೆ ಮಾಡುವುದಾಗಿ ತಿಳಿಸಿ ಹೊರಟರು.

1999, ಜೂನ್ 6..
ರಾಜಪುತಾನಾ ರೈಫಲ್ಸ್ ಯೋಧರು ಡ್ರಾಸ್‍ನಿಂದ ಹೊರಟು ಟೋಲೋಲಿಂಗ್ ಪರ್ವತವನ್ನು ಜೂನ್ 13ಕ್ಕೆ ತಲುಪಿದರು. ಅವರ ತಂಡದ 18 ಗ್ರೆನೇಡಿಯರ್ಸ್ ಅಲ್ಲಿದ್ದ ಪಾಕ್ ಸೈನಿಕರ ಮೇಲೆ ದಾಳಿ ಮಾಡಿದರು. ನಾಲ್ಕು ದಿನಗಳಲ್ಲಿ ಪಾಯಿಂಟ್ 5100, 4700, ಶಿಖರವನ್ನು ಸುತ್ತುವರಿದಿದ್ದ ಮೂರು ಪ್ರಮುಖ ಕಾಂಪ್ಲೆಕ್ಸ್‍ಗಳನ್ನು ವಶಪಡಿಸಿಕೊಂಡರು. ಜೂನ್ 17ಕ್ಕೆ ಲೆಫ್ಟಿನೆಂಟ್ ಕರ್ನಲ್ ಯೋಗೇಶ್ ಕುಮಾರ್ ಜೋಶಿ ನೇತೃತ್ವದಲ್ಲಿ 13-ಜೆ-ಕೆ ರೈಫಲ್ಸ್ ಪಡೆ ಟೋಲೋಲಿಂಗ್ ಪರ್ವವನ್ನೇರಿದರು. ಪಾಯಿಂಟ್ 5140 ಬಳಿ ಬೃಹತ್ ಬಂಡೆಯನ್ನು ವಶಪಡಿಸಿಕೊಂಡ ನಂತರ ಶತೃಗಳೊಡನೆ ತೀವ್ರ ಹೋರಾಟ ನಡೆಯಿತು. ಅಲ್ಲಿ ಶತೃ ಪಡೆಯ ಏಳು ಸಂಗಾರ್‍ಗಳನ್ನು ಕರ್ನಲ್ ಜೋಶಿ, ಸಂಜೀವ್ ಜಮ್ವಾಲ್ ಮತ್ತು ವಿಕ್ರಂ ಬಾತ್ರಾರೊಡನೆ ಎದುರಿಸಿದರು.

ವಿಕ್ರಂ ಬಾತ್ರಾ ಎದುರಾಗುತ್ತಿದ್ದ ಶತೃಗಳನ್ನು ನೋಡಿ “ಯೇ ದಿಲ್ ಮಾಂಗೇ ಮೋರ್” ಇನ್ನಷ್ಟು ಶತೃಗಳು ಬರಲಿ ಸದೆಬಡಿಯುವೆ ಎಂದು ಘರ್ಜಿಸಿ ತಮ್ಮವರನ್ನು ಹುರಿದುಂಬಿಸುತ್ತಾ ಹೋರಾಡುತ್ತಿದ್ದರು. ಭಾರತೀಯ ಯೋಧರಿಗೆ ಯಾವುದೇ ಸಾವು-ನೋವುಗಳಾಗದೇ ಪಾಯಿಂಟ್ 5140 ವಶಪಡಿಸಿಕೊಂಡರು. ಬ್ರಿಗೇಡ್ ಹೆಡ್‍ಕ್ವಾರ್ಟ್ಸ್‍ಗೆ ಸುದ್ದಿ ತಲುಪಿತು. ಅಂದಿನ ಸೇನಾ ಮುಖ್ಯಸ್ಥ ವೇದ್ ಪ್ರಕಾಶ್ ಮಲಿಕ್ ಸ್ವತ: ಬಾತ್ರಾರವರಿಗೆ ಕರೆ ಮಾಡಿ ಶುಭಾಶಯ ಕೋರಿದರು. ಅವರಿಗೆ ಕೂಡಲೇ ಕ್ಯಾಪ್ಟನ್ ಹುದ್ದೆಗೆ ಭಡ್ತಿ ನೀಡಲಾಯಿತು.

ಪಾಯಿಂಟ್ 4875 ವಶ:

26 ಜೂನ್, 13-ಜೆ-ಕೆ ರೈಫಲ್ಸ್ ಪಡೆ ಡ್ರಾಸ್‍ನಿಂದ ಘುಮರಿಗೆ ವಿಶ್ರಮಿಸಲು ತೆರಳಿತು. ಅಲ್ಲಿಂದ ಜೂನ್ 39ರಂದು ಪಯಣಿಸಿ ಮುಷೋಕ್ ಕಣಿವೆ ತಲುಪಿದರು. 79 ಪರ್ವತ ಬ್ರಿಗೇಡ್‍ನ ಕಮಾಂಡ್‍ನಲ್ಲಿ ಚಟುವಟಿಕೆಗಳು ಮತ್ತಿ ಆರಂಭವಾಯಿತು. ಶತೃಗಳು ಮುಷೋಕ್ ಕಣಿವೆಯನ್ನು ಸುತ್ತುವರೆದಿದ್ದು ಅಲ್ಲಿನ ಬಹು ಮುಖ್ಯ ಶಿಖರ ತುದಿ ಪಾಯಿಂಟ್ 4875 ವಶಪಡಿಸಿಕೊಂಡಿದ್ದರು. “ಪಾಯಿಂಟ್ 4875” ಡ್ರಾಸ್‍ನಿಂದ ಮಾತಯಾನ್‍ವರೆಗೆ ನ್ಯಾಶನಲ್ ಹೈವೇ 1 ಸರಹದ್ದಿಗೆ ಬಹು ಸಮೀಪ. ಮುಂದೆ ಶತೃಗಳು ಮುಂದುವರೆದರೆ ಇನ್ನಷ್ಟು ಅಪಾಯ.

ಆದ್ದರಿಂದ ಭಾರತೀಯ ಸೇನೆ ಅದನ್ನು ಮರಳಿ ಪಡೆಯುವುದು ಅವಶ್ಯಕವಾಗಿತ್ತು. ಜುಲೈ 1 ಮೇಜರ್ ವಿಜಯ ಭಾಸ್ಕರ್, ಕರ್ನಲ್ ಜೋಶಿ ತಂಡ ಶತೃಗಳ ಮೇಲೆ ದಾಳಿ ನಡೆಸಲು ಯೋಚಿಸಿ ಹೆಡ್‍ಕ್ವಾರ್ಟಸ್ ಬಳಿ ತೆರಳಿದರು.
ಅದೇ ಸಮಯದಲ್ಲಿ “13-ಜೆ-ಕೆ ರೈಫಲ್ಸ್” ಪಡೆ ಸಪೋರ್ಟ್ ಬೇಸ್ ಬಳಿ ಬಂದಾಗಿತ್ತು. ಅದು ಪಾಯಿಂಟ್ 4875ನಿಂದ 1500 ಮೀಟರ್ ಅಂತರದಲ್ಲಿತ್ತು. “13-ಜೆ-ಕೆ ರೈಫಲ್ಸ್” ಜುಲೈ 2 ಮತ್ತು 3ರಂದು “28-ರಾಷ್ಟ್ರೀಯ ರೈಫಲ್ಸ್” ಜೊತೆಗೂಡಿ ಆಯುಧಗಳೊಡನೆ ಸಜ್ಜಾದರು. ಜುಲೈ 3ರಂದು ಸಂಜೆ 6 ಗಂಟೆಯ ಸುಮಾರು ಶತೃಗಳು ದಾಳಿ ಆರಂಭಿಸಿದರು.
ಮರುದಿನವೂ ದಾಳಿ ತೀವ್ರವಾಯಿತು. ಭಾರತದ ಎರಡೂ ಪಡೆಗಳು ಅಂದು ರಾತ್ರಿಯೆಲ್ಲಾ ಪಾಕ್ ಸೈನಿಕರ ಮೇಲೆ ಬೋಫರ್ಸ್ ಹೊವಿಟ್ಸರ್ಸ್ ಮತ್ತು ಫೀಲ್ಡ್ ಗನ್‍ಗಳೊಡನೆ ಆಕ್ರಮಣ ಮಾಡಿದರು.

ಜುಲೈ 5ರಂದು ಪಾಯಿಂಟ್ 4875 ಆರೋಹಣ ಆರಂಭಸಿದರು. ಒಂದೆಡೆ ಕರ್ನಲ್ ಜೋಶಿಯವರ ಆದೇಶದಂತೆ ಸೈನಿಕರು ಮುನ್ನುಗ್ಗುತ್ತಿದ್ದರು. ಮತ್ತೊಂದೆಡೆ ವಿಕ್ರಂ ಬಾತ್ರಾ ಮುಷೋಕ್‍ನುಲ್ಲಾ ಬಳಿ ತೀವ್ರ ಜ್ವರ ಮತ್ತು ಆಯಾಸದಿಂದಾಗಿ ತಮ್ಮ ಟಂಟ್‍ನ ಬಳಿ ಸ್ಲೀಪಿಂಗ್ ಬ್ಯಾಗ್‍ನಲ್ಲಿ ವಿಶ್ರಮಿಸುತ್ತಿದ್ದರು. ಮುಂಜಾವು ಬೆಳಕು ಹರಿಯತೊಡಗಿತು. ಪಾಕಿಸ್ತಾನಿ ಸೈನಿಕರಿಗೆ ಸುಲಭವಾಗಿ ಭಾರತೀಯ ಪಡೆ ಕಾಣುವಂತಹ ಅಪಾಯಕರ ಸ್ಥಿತಿ.
ಶತೃಗಳು ಎಡಬಿಡದೆ ಫೈರಿಂಗ್ ನಡೆಸಿ ಭಾರತೀಯ ಪಡೆಯನ್ನು ತಡೆ ಹಿಡಿದರು. ಜುಲೈ 6ರಂದು ಭಾರತದ ಸೈನಿಕರು ಪಾಯಿಂಟ್ 4875 ಪಡೆಯುವ ಪ್ರಯತ್ನವನ್ನು ಅಲ್ಪವಾಗಿ ತಡೆಹಿಡಿದರೂ ದಾಳಿ ಮುಂದುವರೆದಿತ್ತು.13-ಜೆ-ಕೆ ರೈಫಲ್ಸ್ ಯೋಧರು ಮುಖ್ಯವಾದ ಏರಿಯಾ ಫ್ಲಾಟ್ ಟಾಪ್ ವಶಪಡಿಸಿಕೊಂಡರು.

ಕ್ಷಣಗಳಲ್ಲೇ ಪಾಕಿಸ್ತಾನಿ ಸೇನೆ ಕೌಂಟರ್ ಅಟ್ಯಾಕ್ ನಡೆಸಿತು. ಎರಡೂ ಬದಿಯಿಂದ ಮರುದಿನದವರೆಗೂ ಆಕ್ರಮಣ ನಡೆಯಿತು. ಮರುದಿನ ಮುಂಜಾನೆ ಪಾಕ್ ಸೈನಿಕರು ಗ್ರೆನೇಡ್ ದಾಳಿ ಮಾಡಿದರು. ಅಲ್ಲಿಂದ ಹಾರಿ ಬಂದ ಷೆಲ್ ಶಿಖರದ ತುದಿಯಲ್ಲಿದ್ದ ಕರ್ನಾಟಕ ಮೂಲದ ಯೋಧ ಕ್ಯಾಪ್ಟನ್ ನವೀನ್ ನಾಗಪ್ಪ ಅವರ ಕಾಲ ಬಳಿ ಬಿತ್ತು. ಅದನ್ನು ಪುನ: ದೂರಕ್ಕೆ ಎಸೆಯುವ ಪ್ರಯತ್ನ ವಿಫಲವಾಗಿ ನವೀನ್ ಅವರ ಹತ್ತಿರದಲ್ಲೇ ಸಿಡಿದು ಅವರನ್ನು ತೀವ್ರವಾಗಿ ಗಾಯಗೊಳಿಸಿತು. ಕೂಡಲೇ ಶತೃಗಳು ಮುಂದುವರೆಯತೊಡಗಿದರು. ವಿಕ್ರಂ ಬಾತ್ರಾ ತಾವಿದ್ದ ಸಪೋರ್ಟ್ ಬೇಸ್‍ನಿಂದ ಗಮನಿಸುತ್ತಿದ್ದರು. ತಮ್ಮ ಅನಾರೋಗ್ಯ ಸ್ಥಿತಿಯಲ್ಲಿ ಮುಂದುವರೆಯುವುದು ಬೇಡ ಎಂದು ಕರ್ನಲ್ ಜೋಶಿ ಹೇಳಿದರು. ಆದರೆ ವಿಕ್ರಂ ಬಾತ್ರಾ ಹಠದಿಂದ ಶತೃಗಳನ್ನು ಸದೆಬಡೆಯಲು ಮುಂದಾದರು.

ಅದೇ ದಿನ ಪಾಕ್ ಸೈನಿಕರು ಎರಡನೆಯ ಬಾರಿ ಪ್ರತಿದಾಳಿ ನಡೆಸತೊಡಗಿದರು. ಚಿಂತಾಜನಕ ಸ್ಥಿತಿಯಲ್ಲಿ ಗಾಯಗೊಂಡಿದ್ದ ನವೀನ್ ನಾಗಪ್ಪ ಅವರನ್ನು ಕೂಡಲೇ ತುರ್ತು ಚಿಕಿತ್ಸೆಗಾಗಿ ಕಳುಹಿಸಿದರು. ಬಾತ್ರಾರವರ ಅಚಲಿತ ನಿರ್ಧಾರ ಕಂಡು ಉಳಿದ ಸೈನಿಕರೂ ಅವರೊಡನೆ ಹೊರಟರು. 25 “ಡಿ ಕಾಯ್” ಯೋಧರೊಡನೆ ಬಾತ್ರಾ ದುರ್ಗಾ ಮಾತಾ ಗುಡಿಯಲ್ಲಿ ಪ್ರಾರ್ಥಿಸಿ ಶಿಖರವೇರತೊಡಗಿದರು. ಪಾಕಿಸ್ತಾನದವರು ತಮ್ಮವರಿಗೆ “ಷೇರ್‍ಶಾಹ” ಅಂದರೆ ವಿಕ್ರಂ ಬಾತ್ರಾ ಬರುತ್ತಿರುವುದಾಗಿ ವಯರ್‍ಲೆಸ್ ಮೆಸೇಜ್ ನೀಡಿದರು. ಜುಲೈ 6-7 ಎರಡೂ ಪಡೆಗಳ ನಡುವೆ ಫೈರಿಂಗ್ ನಡೆಯುತ್ತಿತ್ತು. ಭಾರತೀಯ ಸೇನೆಯ ಕೆಲವು ಬಂಕರ್‍ಗಳು ನಾಶವಾಗಿದ್ದವು.

ವಿಕ್ರಂ ಬಾತ್ರಾ ತಾವಿದ್ದ ಪಾಯಿಂಟ್ 5410ರಿಂದ ಗಾಯಗೊಂಡಿದ್ದ ತಮ್ಮ ಕೆಲವು ಸೈನಿಕರ ಬಳಿ ತೆರಳಿದರು.
ಕತ್ತಲಾಗತೊಡಗಿತ್ತು. ಮಂಜು ಮುಸುಕಿದ್ದ ಕಾರಣ ಪರ್ವತವೇರುವುದು ಕಷ್ಟವಾಗತೊಡಗಿತ್ತು. ಜೊತೆಗೆ ಹಿಮ ಸುರಿಯಲಾರಂಭಿಸಿತು. ಮೇಲೆ ಹತ್ತುತ್ತಿದ್ದಾಗ, ತಮ್ಮ ಸೈನಿಕರತ್ತ ಪಾಕಿಸ್ತಾನೀ ಮೆಷೀನ್ ಗನ್ ಗುರಿಯನ್ನು ಕಂಡು ಕೂಡಲೇ ಬಂಡೆಯ ಹಿಂದೆ ಅವಿತುಕೊಂಡು ಗುರಿಯಿಟ್ಟು ಒಂದು ಗ್ರೆನೇಡ್ ಸಿಡಿಸಿ ಮೆಷೀನ್ ಗನ್ ಸಿಡಿಸಿದರು. ತಮ್ಮನ್ನು ಹಿಂಬಾಲಿಸಲು ತಮ್ಮವರಿಗೆ ಮೆಲುದನಿಯಲ್ಲಿ ಹೇಳಿದರು. ಹದಿನಾರು ಸಾವಿರ ಅಡಿಗಳ ಎತ್ತರದಲ್ಲಿ ಉಸಿರಾಡಲೂ ಕಷ್ಟವಾಗಿದ್ದ ಸ್ಥಿತಿಯಲ್ಲಿ ಕಾಳಗ ನಡೆಯುತ್ತಿತ್ತು.

ಇನ್ನು ಎಡ-ಬಲದಿಂದ ಎದುರಿಸಿ ಪ್ರಯೋಜನವಿಲ್ಲ ಎಂದು ಅರಿತು ವಿಕ್ರಂ ಬಾತ್ರಾ ನೇರವಾಗಿ ಎದುರಿಸಲು ನಿರ್ಧರಿಸಿದರು. ಶತೃಗಳನ್ನೆದುರಿಸಲು ತಮ್ಮ ಜೀವವನ್ನಾದರೂ ಒತ್ತೆಯಿಟ್ಟು ಮುಂದುವರೆಯಲು ಪಣ ತೊಟ್ಟರು. ತಮ್ಮ ರೆಜಿಮೆಂಟ್ ಯೋಧರನ್ನು ಹುರಿದುಂಬಿಸುತ್ತಾ “ದುರ್ಗಾ ಮಾತಾ ಕೀ ಜೈ” ಎಂದು ಘೀಳಿಡುತ್ತಾ ಮುಂದುವರೆದರು. ಶತೃಗಳು ಎದುರು ನೋಡದ ರೀತಿಯಲ್ಲಿ ದಾಳಿ ನಡೆಸಿ ಐದು ಪಾಕಿಸ್ತಾನೀ ಸೈನಿಕರನ್ನು ತಮ್ಮ ಏಕೆ-47ನಿಂದ ಸಂಗಾರ್ ಫೈರಿಂಗ್ ನಡೆಸಿ ಕೊಂದರು.

ನಡೆದ ಆಕ್ರಮಣದಿಂದ ಅವರಿಗೆ ತೀವ್ರ ಗಾಯಗಳಾದರೂ ಲೆಕ್ಖಿಸದೆ ಮುನ್ನುಗ್ಗಿದರು. ಎದುರಲ್ಲಿ ಬಂದ ಪಾಕ್ ಸೈನಿಕನ ಮೇಲೆ ಆಕ್ರಮಣ ಮಾಡಿ ಹಿಡಿದು ಮೂಗಿನ ಮೇಲೆ ಪ್ರಹಾರ ಮಾಡಿದರು. ಹಿಂದಿನಿಂದ ಬಂದ ಮತ್ತೊಬ್ಬ ಪಾಕ್ ಸೈನಿಕ ಅವರನ್ನು ಬಲವಾಗಿ ಹಿಡಿದ. ಅವನನ್ನೂ ಎದುರಿಸಿ ತಮ್ಮೊಂದಿಗಿದ್ದ ತಮ್ಮ ಪಡೆಯ ಯೋಧನೊಬ್ಬನೊಡನೆ ಇನ್ನೂ ಏಳು ಶತೃಗಳನ್ನು ಸದೆಬಡಿದರು. ಇನ್ನಷ್ಟು ಶತೃಗಳು ಬರತೊಡಗಿದರು. ತಮ್ಮ ಯೋಧ ಸುಬೇದಾರ್ ರಘುನಾಥ್ ಸಿಂಗ್ ಅವರ ಗುಂಡಿಗೆ ಬಲಿಯಾದನು. ತಮ್ಮ ಮೇಲೆ ಸತತವಾಗಿ ನಡೆಯುತ್ತಿದ್ದ ಫೈರಿಂಗ್ ನಡುವೆ ಅವರನ್ನು ಸುರಕ್ಷಿತ ಸ್ಥಳದಲ್ಲಿರಿಸಿ ಅವರ ಜೀವ ಉಳಿಸಿ ಮತ್ತೆ ದಾಳಿ ಮಾಡಲು ಅನುವಾದರು.

ಇದ್ದಕ್ಕಿದ್ದಂತೆಯೇ ಶತೃಗಳ ಸ್ನಿಪರ್‍ನಿಂದ ಕ್ಲೋಸ್ ರೇಂಜ್‍ನಿಂದ ಗುಂಡು ನೇರವಾಗಿ ಹಾರಿ ಬಂದು ಅವರ ಎದೆಯನ್ನು ಹೊಕ್ಕಿತು. ಮತ್ತೊಂದು ಅವರ ಶಿರಕ್ಕೆ ತಗುಲಿತು. ಕೂಡಲೇ ತಾವು ಸುರಕ್ಷಿತಗೊಳಿಸಿದ ಸೈನಿಕನ ಸ್ವಲ್ಪ ಅಂತರದಲ್ಲಿ ವಿಕ್ರಂ ಬಾತ್ರಾ ಕುಸಿದರು. ತಾಯಿ ಭಾರತಾಂಬೆಯ ಮಡಿಲಲ್ಲಿ ವೀರ ಯೋಧನೊಬ್ಬ ಅಸ್ತಂಗತನಾದ. ನವೀನ್ ನಾಗಪ್ಪ ಅವರನ್ನು ಶ್ರೀನಗರದಿಂದ ದೆಹಲಿಗೆ ಏರ್ ಲಿಫ್ಟ್ ಮಾಡಿ ಸಾಗಿಸುತ್ತಿದ್ದಾಗ ಪಾಯಿಂಟ್ 4875ನ ಮೇಲೆ ಹಾರುತ್ತಿದ್ದ ಭಾರತದ ಧ್ವಜವನ್ನು ನೋಡಿ ಅಗಲಿದ ತಮ್ಮ ಹಿರಿಯ ಯೋಧ ಕ್ಯಾಪ್ಟನ್ ವಿಕ್ರಂ ಬಾತ್ರಾರವರನ್ನು ನೆನೆದು ತಮ್ಮ ನೋವಿನ ನಡುವೆ ದು:ಖಿಸಿದರು.

ಅವರು ವಿಕ್ರಂ ಬಾತ್ರಾರ ಸಾಹಸ ಗಾಥೆಯನ್ನು ಇಂದಿಗೂ ನೆನೆದು ಕಣ್ಣೀರಿಡುತ್ತಾರೆ. ಬೀಸುವ ಗಾಳಿಗೆ ಪ್ರತಿಸ್ಪಂದಿಸುತ್ತಾ ಹಾರುವ ನಮ್ಮ ದೇಶದ ಧ್ವಜ ಕೊನೆಯ ಉಸಿರಿರುವ ತನಕ ತನ್ನನ್ನು ಕಾಪಾಡಿದ ಸೈನಿಕನ ಸಾರ್ಥಕತೆಯನ್ನು ಹೆಮ್ಮೆಯಿಂದ ಸಾರುವುದು. ತಮ್ಮ ಬದುಕಲ್ಲಿ ಅಪರಿಮಿತ ಸಾಹಸ, ಛಲ ಮತ್ತು ದೇಶಭಕ್ತಿಯಿಂದ ಹೋರಾಡಿ ದೇಶಕ್ಕಾಗಿ ಬಲಿದಾನಿಯಾದವರು ಕ್ಯಾಪ್ಟನ್ ವಿಕ್ರಂ ಬಾತ್ರಾ. ವಿಕ್ರಂ ಬಾತ್ರಾರವರ ತಂಡ ವಶಪಡಿಸಿಕೊಂಡ ಪಾಯಿಂಟ್ 4875 ಕಾರ್ಗಿಲ್‍ನಲ್ಲಿ “ಬಾತ್ರಾ ಟಾಪ್” ಎಂದೇ ಪ್ರಸಿದ್ಧವಾಗಿದೆ. ಷೇರ್‍ಶಾಹ ಕ್ಯಾಪ್ಟನ್ ವಿಕ್ರಂ ಬಾತ್ರಾರವರಿಗೆ ಮರಣೋತ್ತರವಾಗಿ ಭಾರತದ ಅತ್ಯುಚ್ಚ ಸೇನಾ ಪುರಸ್ಕಾರ ಪರಮ ವೀರ ಚಕ್ರವನ್ನು ನೀಡಿ ಭಾರತೀಯ ಸೇನೆ ಅವರನ್ನು ಗೌರವಿಸಿತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಳ್ಳಾರಿ

A Devendra Gowda: ಎಂ. ಗೋನಾಳ್ ಗ್ರಾಮದ ಮುಖಂಡ ಎ. ದೇವೇಂದ್ರ ಗೌಡ ನಿಧನ

A Devendra Gowda: ಬಳ್ಳಾರಿ ತಾಲೂಕಿನ ಎಂ‌.ಗೋನಾಳ್ ಗ್ರಾಮದ ಮುಖಂಡ ಎ. ದೇವೇಂದ್ರಗೌಡ (90) ಶುಕ್ರವಾರ ಸಂಜೆ ನಗರದ ದೊಡ್ಡಬಸವೇಶ್ವರ ನಗರದ ಅವರ ಪುತ್ರನ ನಿವಾಸದಲ್ಲಿ ವಯೋ ಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.

VISTARANEWS.COM


on

A Devendra Gowda passed away in Ballari
Koo

ಬಳ್ಳಾರಿ: ಬಳ್ಳಾರಿ ತಾಲೂಕಿನ ಎಂ‌. ಗೋನಾಳ್ ಗ್ರಾಮದ ಮುಖಂಡ ಎ. ದೇವೇಂದ್ರ ಗೌಡ (90) (A Devendra Gowda) ಶುಕ್ರವಾರ ಸಂಜೆ ನಗರದ ದೊಡ್ಡಬಸವೇಶ್ವರ ನಗರದ ಅವರ ಪುತ್ರನ ನಿವಾಸದಲ್ಲಿ ವಯೋ ಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.

ಮೃತರು ಪುತ್ರ ನಟರಾಜ್‌ ಗೌಡ ಸೇರಿದಂತೆ ನಾಲ್ಕು ಜನ ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆ ಶನಿವಾರ ಮಧ್ಯಾಹ್ನ ಬಳ್ಳಾರಿಯ ವೀರಶೈವ ರುದ್ರಭೂಮಿಯಲ್ಲಿ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Continue Reading

ಬಳ್ಳಾರಿ

Dr Vinayaka Prasanna: ಡಾ.ವಿನಾಯಕ ಪ್ರಸನ್ನ ವಿಧಿವಶ

Dr Vinayaka Prasanna: ಬಳ್ಳಾರಿಯ ವಿಮ್ಸ್‌ನ ವಿಧಿ ವಿಜ್ಞಾನ ವೈದ್ಯಶಾಸ್ತ್ರ ವಿಭಾಗದ ಪ್ರೊ. ಡಾ.ವಿನಾಯಕ ಪ್ರಸನ್ನ(50) ಅವರು ಅನಾರೋಗ್ಯದಿಂದ ಬೆಂಗಳೂರಿ‌ನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಬೆಳಿಗ್ಗೆ ನಿಧನರಾಗಿದ್ದಾರೆ.

VISTARANEWS.COM


on

Dr Vinayaka Prasanna passed away
Koo

ಬಳ್ಳಾರಿ: ಬಳ್ಳಾರಿಯ ವಿಮ್ಸ್‌ನ ವಿಧಿ ವಿಜ್ಞಾನ ವೈದ್ಯಶಾಸ್ತ್ರ ವಿಭಾಗದ ಪ್ರೊ. ಡಾ.ವಿನಾಯಕ ಪ್ರಸನ್ನ (50) (Dr Vinayaka Prasanna) ಅವರು ಅನಾರೋಗ್ಯದಿಂದ ಬೆಂಗಳೂರಿ‌ನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಮೃತರು ತಾಯಿ ಶಕುಂತಲ, ಪತ್ನಿ ಡಾ‌. ವನಜ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸೇರಿ ಅಪಾರ ಬಂಧು-ಬಳಗ ಮತ್ತು ಸ್ನೇಹಿತರನ್ನು ಅಗಲಿದ್ದಾರೆ.

ಮೃತರ ಪಾರ್ಥಿವ ಶರೀರವನ್ನು ಗುರುವಾರ ಸಂಜೆ 7 ಗಂಟೆಗೆ ಬೆಂಗಳೂರಿನಿಂದ ಬಳ್ಳಾರಿಗೆ ತರಲಾಯಿತು. ಬಳಿಕ ನಗರದ ಸಿರುಗುಪ್ಪ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದೆ. ಅಂತ್ಯಕ್ರಿಯೆಯು ಶುಕ್ರವಾರ ಬೆಳಿಗ್ಗೆ ಬಳ್ಳಾರಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಪ್ರೊ. ಡಾ.ವಿನಾಯಕ ಪ್ರಸನ್ನ ಅವರ ನಿಧನಕ್ಕೆ ವಿಮ್ಸ್ ವೈದ್ಯರು, ಭಾರತೀಯ ವೈದ್ಯಕೀಯ ಸಂಘ ಹಾಗೂ ವಿವಿಧ ಸಂಘ-ಸಂಸ್ಥೆಗಳು ಸಂತಾಪ ಸೂಚಿಸಿವೆ.

Continue Reading

ಪ್ರಮುಖ ಸುದ್ದಿ

V Srinivas Prasad: ಮಣ್ಣಲ್ಲಿ ಮಣ್ಣಾದ ಸಂಸದ ಶ್ರೀನಿವಾಸ ಪ್ರಸಾದ್; ಬೌದ್ಧ ಸಂಪ್ರದಾಯದಂತೆ ಅಂತ್ಯಕ್ರಿಯೆ

V Srinivas Prasad: ಮೈಸೂರಿನ ಅಶೋಕಪುರಂ ಬಳಿಯ ಡಾ.ಬಿ.ಆರ್‌.ಅಂಬೇಡ್ಕರ್ ಟ್ರಸ್ಟ್ ಆವರಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ, ಬೌದ್ಧ ಧರ್ಮ ಸಂಪ್ರದಾಯದಂತೆ ಸಂಸದ ಶ್ರೀನಿವಾಸ ಪ್ರಸಾದ್‌ ಅವರ ಅಂತ್ಯ ಸಂಸ್ಕಾರ ನೆರವೇರಿತು.

VISTARANEWS.COM


on

V Srinivas Prasad
Koo

ಮೈಸೂರು: ಬಿಜೆಪಿಯ ಹಿರಿಯ ನಾಯಕ, ಚಾಮರಾಜನಗರ ಸಂಸದ ಶ್ರೀನಿವಾಸ ಪ್ರಸಾದ್‌ (V Srinivas Prasad) ಅವರು ಮಣ್ಣಲ್ಲಿ ಮಣ್ಣಾಗಿದ್ದಾರೆ. ನಗರದ ಅಶೋಕಪುರಂ ಬಳಿಯಿರುವ ಡಾ.ಬಿ.ಆರ್‌.ಅಂಬೇಡ್ಕರ್ ಟ್ರಸ್ಟ್ ಆವರಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ, ಬೌದ್ಧ ಧರ್ಮ ಸಂಪ್ರದಾಯದಂತೆ ಮಂಗಳವಾರ ಅಂತ್ಯಕ್ರಿಯೆ ನೆರವೇರಿತು. ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ ಸ್ವಾಭಿಮಾನಿ ಚಕ್ರವರ್ತಿಯ ನೆನೆದು ಕುಟುಂಬಸ್ಥರು ಸೇರಿ ಸಾವಿರಾರು ಅಭಿಮಾನಿಗಳು ಕಣ್ಣೀರಿಟ್ಟರು.

ಅಂತ್ಯ ಸಂಸ್ಕಾರಕ್ಕೂ ಮುನ್ನ ಶ್ರೀನಿವಾಸ ಪ್ರಸಾದ್‌ ಅವರಿಗೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಅವರಿಂದ ಸರ್ಕಾರಿ ಗೌರವ ಸಲ್ಲಿಕೆ ಮಾಡಲಾಯಿತು. ಇದೇ ವೇಳೆ ರಾಷ್ಟ್ರಗೀತೆ ನುಡಿಸಿ, ಗಾಳಿಯಲ್ಲಿ ಗುಂಡು ಹಾರಿಸಿ ಪೊಲೀಸರುಗೌರವ ಸಲ್ಲಿಸಿದರು. ಶ್ರೀನಿವಾಸ್ ಪ್ರಸಾದ್ ಪತ್ನಿಗೆ ಜಿಲ್ಲಾಧಿಕಾರಿಗಳು ರಾಷ್ಟ್ರ ಧ್ವಜ ಹಸ್ತಾಂತರ ಮಾಡಿದರು. ನಂತರ ಬೆಂಗಳೂರಿನ ಮಹಾಬೋದಿಯ ಶ್ರೀ ಆನಂದ ಬಂತೇಜಿ, ಮೈಸೂರಿನ ವಿಶ್ವಮೈತ್ರಿ ಬುದ್ಧ ವಿಹಾರದ ಶ್ರೀ ಕಲ್ಯಾಣಸಿರಿ ಬಂತೇಜಿ ನೇತೃತ್ವದಲ್ಲಿ ಅಂತಿಮ ವಿಧಿವಿಧಾನ ನಡೆಯಿತು. ಸುಮಾರು 15ಕ್ಕೂ ಹೆಚ್ಚು ಬೌದ್ಧ ಬಿಕ್ಕುಗಳಿಂದ ಪ್ರಾರ್ಥನೆ ಸಲ್ಲಿಸಲಾಯಿತು.

ಬಂತೇಜಿಗಳಿಂದ ಬುದ್ಧವಂದನ, ದಮ್ಮವಂದನ, ಸಂಘ ವಂದನ, ಎಲ್ಲಾ ಜನರಿಗೆ ತ್ರಿಸರಣ, ಪಂಚಶೀಲ ಬೋಧನೆ, ಬಂತೇಜಿಗಳಿಂದ ರತನ ಸೂತ್ರ ಪಠಣ, ಎಲ್ಲ ಜನರಿಂದ ಧ್ಯಾನ ಪಠಣ, ತಿರೋಕುಡ್ಡ ಸೂತ್ರ ಪಠಣ, ಬೌದ್ಧ ಬಂತೇಜಿಗಳಿಗೆ ವಸ್ತ್ರದಾನ, ಹಣ್ಣುಗಳ ಅರ್ಪಣೆ, ನೀರು ಸುರಿಸಿ ಪುಣ್ಯಾನುಮೋದನೆ, ಕುಟುಂಬಸ್ಥರು ಗೌರವ ಸಲ್ಲಿಸಿದ ಬಳಿಕ ದೇಹ ಗುಂಡಿಗಿಳಿಸಿ ಮಂತ್ರ ಪಠಣ ಸೇರಿ ಹಲವು ವಿಧಿ ವಿಧಾನ ನಡೆಯಿತು.

ಇದಕ್ಕೂ ಮೊದಲು ಸೋಮವಾರ ಇಡೀ ರಾತ್ರಿ ಅಶೋಕಪುರಂ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಂಗಳ ಮಧ್ಯಾಹ್ನ ಅಶೋಕಪುರಂನ ಪ್ರಮುಖ ರಸ್ತೆಗಳಲ್ಲಿ ಸಾವಿರಾರು ಬೆಂಬಲಿಗರು, ಕಾರ್ಯಕರ್ತರ ಸಮ್ಮುಖದಲ್ಲಿ ಮೆರವಣಿಗೆ ನಡೆಸಲಾಯಿತು. ಬಳಿಕ ಅಶೋಕಪುರಂ ಬಳಿಯಿರುವ ಡಾ.ಬಿ.ಆರ್‌.ಅಂಬೇಡ್ಕರ್ ಟ್ರಸ್ಟ್ ಆವರಣದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.

ಇದನ್ನೂ ಓದಿ | M P Rudramba: ಮಾಜಿ ಡಿಸಿಎಂ ದಿವಂಗತ ಎಂ.ಪಿ. ಪ್ರಕಾಶ್ ಧರ್ಮ ಪತ್ನಿ ರುದ್ರಾಂಬಾ ನಿಧನ

ಅಂತ್ಯಕ್ರಿಯೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಟಿ.ಎಸ್.ಶ್ರೀವತ್ಸ, ಎ.ಆರ್.ಕೃಷ್ಣಮೂರ್ತಿ, ಮಾಜಿ ಸಚಿವ ಎನ್.ಮಹೇಶ್, ಮಾಜಿ ಶಾಸಕ ಎಲ್.ನಾಗೇಂದ್ರ, ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್, ಎಚ್.ವಿ.ರಾಜೀವ್ ಸೇರಿದಂತೆ ಸಾವಿರಾರು
ಜನರು ಭಾಗಿಯಾಗಿದ್ದರು.

Continue Reading

ಕರ್ನಾಟಕ

M P Rudramba: ಮಾಜಿ ಡಿಸಿಎಂ ದಿವಂಗತ ಎಂ.ಪಿ. ಪ್ರಕಾಶ್ ಧರ್ಮ ಪತ್ನಿ ರುದ್ರಾಂಬಾ ನಿಧನ

M P Rudramba: ಮಾಜಿ ಡಿಸಿಎಂ ದಿವಂಗತ ಎಂ.ಪಿ. ಪ್ರಕಾಶ್ ಅವರ ಪತ್ನಿ ಎಂ.ಪಿ.ರುದ್ರಾಂಬಾ ಅವರು
ವಯೋಸಹಜ ಕಾಯಿಲೆಯಿಂದ ಸ್ವಗ್ರಾಮ ಹೂವಿನ ಹಡಗಲಿಯಲ್ಲಿ ನಿಧನರಾಗಿದ್ದಾರೆ.

VISTARANEWS.COM


on

M P Rudramba
Koo

ವಿಜಯನಗರ: ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ. ಪ್ರಕಾಶ್ ಅವರ ಧರ್ಮ ಪತ್ನಿ ಎಂ.ಪಿ.ರುದ್ರಾಂಬಾ (M P Rudramba) (83) ಅವರು ವಯೋಸಹಜ ಕಾಯಿಲೆಯಿಂದ ಸ್ವಗ್ರಾಮ ಹೂವಿನ ಹಡಗಲಿಯಲ್ಲಿ ಸೋಮವಾರ ನಿಧನರಾದರು. ವೀರಶೈವ ಲಿಂಗಾಯತ ಸಂಪ್ರದಾಯದ ಪ್ರಕಾರ ಮಂಗಳವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ರುದ್ರಾಂಬಾ ಅವರು ಮೂವರು ಪುತ್ರಿಯರನ್ನು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. ಇವರ ಪುತ್ರಿಯರಲ್ಲಿ ಲತಾ ಮಲ್ಲಿಕಾರ್ಜುನ ಅವರು ಹರಪನಹಳ್ಳಿ ಕ್ಷೇತ್ರದ ಪಕ್ಷೇತರ ಶಾಸಕಿಯಾಗಿದ್ದಾರೆ. ಸುಮಾ ಹಾಗೂ ವೀಣಾ ಇನ್ನಿಬ್ಬರು ಪುತ್ರಿಯರು. ಅವರ ಪುತ್ರ, ಹರಪನಹಳ್ಳ ಕ್ಷೇತ್ರದ ಶಾಸಕರಾಗಿದ್ದ ಎಂ.ಪಿ.ರವೀಂದ್ರ ಕೆಲ ವರ್ಷದ ಹಿಂದೆಯೇ ತೀರಿಕೊಂಡಿದ್ದರು. ಎಂ.ಪಿ. ಪ್ರಕಾಶ್‌ ಅವರೂ ದಶಕಗಳ ಹಿಂದೆಯೇ ವಿಧಿವಶರಾಗಿದ್ದರು.

ಸಾಂಸ್ಕೃತಿಕ ಹಾಗೂ ಚಿಂತನ ಶೀಲ ರಾಜಕಾರಣಿ ಎಂದು ಗುರುತಿಸಿಕೊಂಡಿದ್ದ ಎಂ.ಪಿ. ಪ್ರಕಾಶ್‌ ಅವರನ್ನು ಮದುವೆಯಾಗಿದ್ದ ರುದ್ರಾಂಬಾ ಅವರು ಕೂಡ ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಇತ್ತೀಚಿಗೆ ಆರೋಗ್ಯದ ಕಾರಣದಿಂದ ಸಾರ್ವಜನಿಕ ಜೀವನದ ಒಡನಾಟ ಕಡಿಮೆಯಾಗಿತ್ತು.

ಇದನ್ನೂ ಓದಿ | Srinivasa Prasada Passes Away: ಕೊನೇ ಬಾರಿಗೆ ʼCoffee’ ಎಂದು ಬರೆದಿದ್ದ ಶ್ರೀನಿವಾಸ ಪ್ರಸಾದ್;‌ ನಾಳೆ ಅಂತ್ಯಕ್ರಿಯೆ; ಗಣ್ಯರ ಸಂತಾಪ

ಹೂವಿನ ಹಡಗಲಿಯಲ್ಲಿ ಮಂಗಳವಾರ ಸಂಜೆ 4.30 ಕ್ಕೆ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ನಡೆಯುತ್ತಿದೆ. ದಿ.‌ ಎಂ.ಪಿ. ಪ್ರಕಾಶ್‌ ಅವರ ಸಮಾಧಿ ಪಕ್ಕದಲ್ಲಿ ಅಂತ್ಯಕ್ರಿಯೆ ಮಾಡಲಾಗುತ್ತದೆ.

ಸಿಎಂ ಸಿದ್ದರಾಮಯ್ಯ ಸಂತಾಪ

ಎಂ.ಪಿ.ಪ್ರಕಾಶ್ ಅವರ ಪತ್ನಿ ಎಂ.ಪಿ.ರುದ್ರಾಂಬಾ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ.ಪ್ರಕಾಶ್ ಅವರ ಪತ್ನಿ ಎಂ.ಪಿ.ರುದ್ರಾಂಬಾ ಅವರ ನಿಧನದ ಸುದ್ದಿ ತಿಳಿದು ನೋವಾಯಿತು. ರುದ್ರಾಂಬಾ ಅವರು ತಮ್ಮ ಪತಿಯ ಆದರ್ಶಗಳನ್ನು ಪಾಲಿಸುತ್ತಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ನೊಂದ ಜನರ ಬದುಕಿಗೆ ಬೆಳಕಾಗಿದ್ದವರು. ಮೃತರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬ ವರ್ಗಕ್ಕೆ ನೋವು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ತಿಳಿಸಿದ್ದಾರೆ.

Continue Reading
Advertisement
Covishield Vaccine
ಬೆಂಗಳೂರು19 mins ago

Covishield vaccine: ಕೋವಿಶೀಲ್ಡ್‌ ಲಸಿಕೆಯಿಂದ ಸೈಡ್‌ ಎಫೆಕ್ಟ್‌ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

A Devendra Gowda passed away in Ballari
ಬಳ್ಳಾರಿ31 mins ago

A Devendra Gowda: ಎಂ. ಗೋನಾಳ್ ಗ್ರಾಮದ ಮುಖಂಡ ಎ. ದೇವೇಂದ್ರ ಗೌಡ ನಿಧನ

MI vs KKR
ಕ್ರೀಡೆ32 mins ago

MI vs KKR: ಮತ್ತೆ ಮುಂಬೈ ವಿರುದ್ಧ ಕೇಳಿಬಂದ ಟಾಸ್​ ಫಿಕ್ಸಿಂಗ್​ ಆರೋಪ

Amrutha Ramamoorthi has been rejected fifteen times
ಕಿರುತೆರೆ34 mins ago

Amrutha Ramamoorthi: ಆಡಿಷನ್‌ನಲ್ಲಿ ಬರೋಬ್ಬರಿ 15 ಬಾರಿ ರಿಜೆಕ್ಟ್ ಆಗಿದ್ದರಂತೆ ಈ ಖ್ಯಾತ ನಟಿ!

Viral Video
ವೈರಲ್ ನ್ಯೂಸ್40 mins ago

Viral Video:ʼವಡಾಪಾವ್‌ ಗರ್ಲ್‌ʼನ ಬೀದಿ ರಂಪಾಟ; ಸೋಶಿಯಲ್ ಮೀಡಿಯಾ ಸ್ಟಾರ್‌ನ ವಿಡಿಯೋ ಫುಲ್‌ ವೈರಲ್‌

IPL 2024
ಬೆಂಗಳೂರು57 mins ago

Traffic Restrictions: ಐಪಿಎಲ್‌ ಕ್ರಿಕೆಟ್‌; ಈ ರೋಡ್‌ನಲ್ಲಿ ಅಪ್ಪಿತಪ್ಪಿಯೂ ಪಾರ್ಕಿಂಗ್ ಮಾಡಬೇಡಿ

Rahul Gandhi
Lok Sabha Election 202458 mins ago

Rahul Gandhi: ರಾಹುಲ್‌ ಗಾಂಧಿಗೆ ಸ್ವಂತ ಕಾರು, ಮನೆ ಇಲ್ಲ; ಇಲ್ಲಿದೆ ಕಾಂಗ್ರೆಸ್‌ ಮುಖಂಡ ಘೋಷಿಸಿದ ಆಸ್ತಿ ವಿವರ

IPL 2024
ಕ್ರೀಡೆ1 hour ago

IPL 2024: ಕೆಎಸ್‌ಸಿಎಗೆ ಮತ್ತೆ ಸಂಕಷ್ಟ; ಚಿನ್ನಸ್ವಾಮಿ ಸ್ಟೇಡಿಯಂನ ಎಲ್ಲ ನೀರಿನ ಮೂಲದ ವಿವರ ಕೇಳಿದ ಎನ್‌ಜಿಟಿ!

Amith Shah
ದೇಶ2 hours ago

Amit Shah: ಕಾಂಗ್ರೆಸ್ ಹಿಂದುಳಿದ, ಪರಿಶಿಷ್ಟರ ಮೀಸಲಾತಿ ಕಿತ್ತು ಮುಸ್ಲಿಮರಿಗೆ ನೀಡಿದೆ; ನಾವು ತೆಗೆದುಹಾಕುತ್ತೇವೆ: ಅಮಿತ್ ಶಾ

Bribery Case in Bengaluru news
ಬೆಂಗಳೂರು2 hours ago

Bribery Case : ಕಾಸಿನ ಜತೆಗೆ ಎಣ್ಣೆ ಕೊಟ್ರಷ್ಟೇ ಫೈಲ್‌ ಮೂಮ್ಮೆಂಟ್‌ ; ಇದು ಕುಡುಕ ಪಂಚಾಯಿತಿ ಪಿಡಿಓ ಲಂಚಾವತಾರ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ9 hours ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ21 hours ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ1 day ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ2 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ2 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ4 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20245 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20245 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ5 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20246 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

ಟ್ರೆಂಡಿಂಗ್‌