ಪ್ರಮುಖ ಸುದ್ದಿ
Dina Bhavishya : ದಕ್ಷಿಣಾಯನ ಪುಣ್ಯಕಾಲದಲ್ಲಿ ಈ ಎಲ್ಲ ರಾಶಿಯವರಿಗೆ ಶುಭ ಫಲ!
ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷದ ಅಮಾವಾಸ್ಯೆಯ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ (dina bhavishya) ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ವಾರದ ಆರಂಭದ ದಿನವಾದ ಇಂದು ಬಹಳ ವಿಶೇಷವಾದ ದಿನ. ಇಂದು ಸೂರ್ಯನು ಸಂಜೆ 5.11ಕ್ಕೆ ಕಾರ್ಕಟಕ ರಾಶಿಯನ್ನು ಪ್ರವೇಶಿಸುತ್ತಾನೆ. ಇದರೊಂದಿಗೆ ದಕ್ಷಿಣಾಯನವು ಆರಂಭವಾಗಲಿದೆ. ಹೀಗಾಗಿ ಬೆಳಗ್ಗೆ 9.11 ರಿಂದ ಸಂಜೆ 5.11ರ ವರೆಗೆ ದಕ್ಷಿಣಾಯನ ಪುಣ್ಯಕಾಲವು ಇರಲಿದೆ. ಇಂದು ಆಷಾಢ ಅಮಾವಾಸ್ಯೆ ಕೂಡ. ಭೀಮನ ಅಮಾವಾಸ್ಯೆ, ನಾಗರ ಅಮಾವಾಸ್ಯೆ, ಆಟಿ ಅಮಾವಾಸ್ಯೆ, ಕೊಡೆ ಅಮಾವಾಸ್ಯೆ, ದಿವಶೀ ಅಮಾವಾಸ್ಯೆ ಎಂದು ಈ ದಿನವನ್ನು ಕರೆಯಲಾಗುತ್ತದೆ. ದೀಪಸ್ತಂಭಗೌರೀ ವ್ರತ. ಸೋಮವತೀವ್ರತಗಳನ್ನು ಇಂದು ಕೈಗೊಳ್ಳಲಾಗುತ್ತದೆ. ಇಷ್ಟೇ ಅಲ್ಲದೆ ಪದ್ಮಕಯೋಗವಿರುವ ದಿನವೂ ಹೌದು. ಈ ವಿಶೇಷವಾದ ದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ, ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.
ಇಂದಿನ ಪಂಚಾಂಗ (kannada panchanga) (17-07-2023)
ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ,
ಗ್ರೀಷ್ಮ ಋತು, ಆಷಾಢ ಮಾಸ, ಕೃಷ್ಣ ಪಕ್ಷ
ತಿಥಿ: ಅಮಾವಾಸ್ಯೆ 24:00 ವಾರ: ಸೋಮವಾರ
ನಕ್ಷತ್ರ: ಪುನರ್ವಸು 29:10 ಯೋಗ: ವ್ಯಾಘಾತ 08:56
ಕರಣ: ಚತುಷ್ಪಾದ 11:02
ಅಮೃತಕಾಲ: ಮಧ್ಯರಾತ್ರಿ 02 ಗಂಟೆ 32 ನಿಮಿಷದಿಂದ ಮುಂಜಾನೆ 04 ಗಂಟೆ 18 ನಿಮಿಷದವರೆಗೆ.
ಇಂದಿನ ವಿಶೇಷ: ಭೀಮನ ಅಮಾವಾಸ್ಯೆ, ನಾಗರ ಅಮಾವಾಸ್ಯೆ, ಕರ್ಕಾಟಕ ಸಂಕ್ರಮಣ, ದಕ್ಷಿಣಾಯನ ಪುಣ್ಯಕಾಲ, ಪದ್ಮಕಯೋಗ, ದೀಪಸ್ತಂಭಗೌರೀ ವ್ರತ. ಸೋಮವತೀವ್ರತ.
ಸೂರ್ಯೋದಯ : 06:02 ಸೂರ್ಯಾಸ್ತ : 06:50
ರಾಹುಕಾಲ : ಬೆಳಗ್ಗೆ 7.30 ರಿಂದ 9.00
ಗುಳಿಕಕಾಲ: ಮಧ್ಯಾಹ್ನ 1.30 ರಿಂದ 3.00
ಯಮಗಂಡಕಾಲ: ಬೆಳಗ್ಗೆ 10.30 ರಿಂದ 12.00
ಇದನ್ನೂ ಓದಿ: Dakshinayana 2023 : ಜು.17 ರಿಂದ ದಕ್ಷಿಣಾಯನ ಶುರು; ಏನಿದರ ಮಹತ್ವ?
ಮೇಷ: ಭಾವನಾತ್ಮಕವಾಗಿ ನೀವಿಂದು ಸ್ಥಿರವಾಗಿರುವುದಿಲ್ಲ.bಆತುರದಲ್ಲಿ ಆಡಿದ ಮಾತು ಅಪಾಯ ತಂದೀತು ಎಚ್ಚರಿಕೆ. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪ್ರತಿಫಲ ಸಿಗುವುದರ ಜೊತೆಗೆ ಪುರಸ್ಕಾರ ಸಿಗುವ ಸಾಧ್ಯತೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 1
ವೃಷಭ: ಕುಟುಂಬದ ಸದಸ್ಯರಿಗೆ ಸಂಬಂಧಿಗಳಿಂದ ಶುಭ ಸುದ್ದಿ ಬರುವುದು. ಆರ್ಥಿಕ ಪ್ರಗತಿ ಸಾಧಾರಣ, ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಮನೆಯಲ್ಲಿ ಶುಭ ಕಾರ್ಯಗಳ ಕುರಿತು ಚರ್ಚೆ. ಕುಟುಂಬದ ಸದಸ್ಯರ ಬೆಂಬಲ ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9
ಮಿಥುನ: ಸಕಾರಾತ್ಮಕ ಆಲೋಚನೆಗಳು ನಿಮ್ಮ ಬೆಳವಣಿಗೆ ಸಹಕಾರ ನೀಡಲಿದೆ. ಆತುರದ ತಿರ್ಮಾನ, ಮಾತುಗಳು ಅಪಾಯ ತಂದೀತು ಎಚ್ಚರಿಕೆ. ಆರೋಗ್ಯ ಕೊಂಚ ಮಟ್ಟಿಗೆ ಹದಗೆಡುವ ಸಾಧ್ಯತೆ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿ. ಮನೆಯವರ ಧೈರ್ಯದ ಮಾತುಗಳು ಮನಸ್ಸಿಗೆ ಸಂತೋಷ, ನೆಮ್ಮದಿ ತರುವುದು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7
ಕಟಕ: ಅತಿಯಾದ ಒತ್ತಡ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ. ಸೂಕ್ತ ವ್ಯಕ್ತಿಗಳ ಬೆಂಬಲದಿಂದ ಹೊಡಿಕೆ ವ್ಯವಹಾರದಲ್ಲಿ ತೊಡುಗುವ ಸಾಧ್ಯತೆ.ಪ್ರೀತಿಪಾತ್ರರೊಂದಿಗೆ ಸಮಯ ಕಳೆಯುವಿರಿ.ಸಂಗಾತಿ ನಿಮ್ಮ ಮನಸ್ಸಿಗೆ ಮುದ ನೀಡುವಳು.ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2
ಸಿಂಹ: ನಿಮ್ಮ ವರ್ತನೆಯಲ್ಲಿ ಬದಲಾವಣೆಗಳಾಗಲಿವೆ. ಹಿರಿಯರ ಆಶೀರ್ವಾದದ ಬಲದಿಂದ ಯಶಸ್ಸು ಸಿಗಲಿದೆ. ಹಣಕಾಸು ವ್ಯವಹಾರದಲ್ಲಿ ಪ್ರಗತಿ. ಅನಾರೋಗ್ಯ ಪೀಡಿತ ವ್ಯಕ್ತಿಯನ್ನು ಭೇಟಿ ಮಾಡಿ ಸ್ವಾಂತನ ಹೇಳಬಹುದು. ದೀಡಿರ್ ಪ್ರಯಾಣ ಸಾಧ್ಯತೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 9
ಕನ್ಯಾ: ಒತ್ತಡದ ಕಾರ್ಯ ಆಯಾಸವನ್ನುಂಟು ಮಾಡುವುದು. ಕುಟುಂಬದ ಸದಸ್ಯರ ಅವಶ್ಯಕತೆಗಾಗಿ ಅನಗತ್ಯವಾಗಿ ಖರ್ಚು. ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಸಾಧ್ಯತೆ. ಕುಟುಂಬದ ಸದಸ್ಯರೊಬ್ಬರು ನಿಮ್ಮ ಮುಂದೆ ಗಂಭೀರ ಸಮಸ್ಯೆ ಹಂಚಿಕೊಳ್ಳುವ ಸಾಧ್ಯತೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 7
ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ
ತುಲಾ: ಕೈಗೊಂಡ ಧಾರ್ಮಿಕ ಕಾರ್ಯಗಳು ಮನಸ್ಸಿಗೆ ಸಮಾಧಾನ ತರುವುದು. ಅಗತ್ಯಕ್ಕೆ ತಕ್ಕಂತೆ ಖರ್ಚು. ಕುಟುಂಬದ ಸದಸ್ಯರ ರಹಸ್ಯ ಸುದ್ದಿ ಅಚ್ಚರಿ ತರುವುದು. ಕೋಪದಲ್ಲಿ ಮಾತಿಗೆ ಇಳಿಯುವುದರಿಂದ ಕಠಿಣ ಪರಿಸ್ಥಿತಿ ನಿರ್ಮಾಣವಾಗುವುದು. ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1
ವೃಶ್ಚಿಕ: ಕಠಿಣ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಸಿದ್ಧರಾಗುವಿರಿ. ಭಾವನಾತ್ಮಕ ನಿರ್ಧಾರ ಕೈಗೊಳ್ಳುವ ಭರದಲ್ಲಿ ಮನಸ್ಸಿನ ಸ್ಥಿಮಿತ ಕಳೆದುಕೊಳ್ಳುವುದು ಬೇಡ. ಅಜಾಗೃತ ಕಾರ್ಯ ನಿಮಗೆ ಆರ್ಥಿಕ ನಷ್ಟ ಉಂಟು ಮಾಡಬಹುದು. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 3
ಧನಸ್ಸು: ಉದ್ಯೋಗದ ಸ್ಥಳದಲ್ಲಿ ಹೊಸ ಭರವಸೆಗಳು ಮೂಡಲಿವೆ. ಕುಟುಂಬದ ಸದಸ್ಯರ ವರ್ತನೆಯಿಂದ ಕೋಪಗೊಳ್ಳುವ ಸಾಧ್ಯತೆ. ಸಂಬಂಧಿಕರಿಂದ ವ್ಯಾಜ್ಯ ಉಂಟಾಗುವ ಸಾಧ್ಯತೆ. ಆತುರದ ಮಾತುಗಳು ಬೇಡ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 9
ಮಕರ: ಜೀವನದಲ್ಲಿ ಹೊಸ ಪಾಠ ಕಲಿಯುವಿರಿ. ಕೌಟುಂಬಿಕ ಒತ್ತಡ ನಿಮ್ಮ ಮನಸ್ಸಿಗೆ ನೋವುಂಟು ಮಾಡುವ ಸಾಧ್ಯತೆ. ಕೋಪದಲ್ಲಿ ಆಡಿದ ಮಾತುಗಳ ಮನವರಿಕೆ ಆಗುವುದು. ಆರೋಗ್ಯದ ಕಡೆಗೆ ಗಮನ ಹರಿಸಿ. ವೈದ್ಯರ ಸಲಹೆ ಪಡೆಯುವ ಸಾಧ್ಯತೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 8
ಕುಂಭ: ಆತ್ಮವಿಶ್ವಾಸದಿಂದ ಕಾರ್ಯದಲ್ಲಿ ಯಶಸ್ಸು, ಕೀರ್ತಿ ಸಿಗುವುದು. ದಿನದ ಮಟ್ಟಿಗೆ ಅನಗತ್ಯವಾಗಿ ಖರ್ಚು ಮಾಡುವ ಸಾಧ್ಯತೆ. ಗೌಪ್ಯ ವಿಷಯಗಳನ್ನು ಹಂಚಿಕೊಂಡು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವುದು ಬೇಡ. ಕುಟುಂಬದ ಕಲಹದಲ್ಲಿ ಧ್ವನಿ ಸೇರಿಸುವುದು ಬೇಡ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6
ಇದನ್ನೂ ಓದಿ : Bheemana Amavasya 2023 : ಭೀಮನ ಅಮಾವಾಸ್ಯೆ ವ್ರತಾಚರಣೆ ಏಕೆ ಮತ್ತು ಹೇಗೆ?
ಮೀನ: ಒತ್ತಡದ ಜೀವನಕ್ಕೆ ಕೊಂಚ ಮಟ್ಟಿಗೆ ಸಮಾಧಾನದ ಮಾತುಗಳು ಸೂಕ್ತ ವ್ಯಕ್ತಿಗಳಿಂದ ಸಿಗಲಿವೆ. ನಿಮ್ಮ ವರ್ತನೆಯಿಂದ ಕುಟುಂಬದ ಸದಸ್ಯರು ಕೋಪಗೊಳ್ಳವ ಸಾಧ್ಯತೆ. ಹಣಕಾಸು ಪ್ರಗತಿ ಸಾಧಾರಣ. ಆರೋಗ್ಯದ ಕಡೆಗೆ ಕಾಳಜಿ ವಹಿಸುವುದು ಅವಶ್ಯಕ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 4
ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | [email protected]
Live News
ind vs Aus : ಮೂರನೇ ಏಕ ದಿನ ಪಂದ್ಯ; ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದಿಂದ ಬ್ಯಾಟಿಂಗ್ ಆಯ್ಕೆ
ಭಾರತ ತಂಡ ಮೊದಲೆರಡು ಪಂದ್ಯಗಳನ್ನು ಗೆದ್ದಿದ್ದು ಸರಣಿಯನ್ನು ಕೈವಶ ಮಾಡಿಕೊಂಡಿದೆ. ಹೀಗಾಗಿ ಈ ಪಂದ್ಯದಲ್ಲಿ ಭಾರತಕ್ಕೆ ಕ್ಲೀನ್ ಸ್ವೀಪ್ ಸಾಧನೆ ಮಾಡುವ ಅವಕಾಶವಿದೆ.
ರಾಜ್ಕೋಟ್: ಇಲ್ಲಿನ ಎಸ್ಸಿ ಕ್ರೀಡಾಂಗಣದಲ್ಲಿ ಆರಂಭಗೊಂಡಿರುವ ಭಾರತ ವಿರುದ್ಧದ 3 ನೇ ಏಕದಿನ ಪಂದ್ಯದಲ್ಲಿ (ind vs Aus) ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಕಮಿನ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಎರಡೂ ತಂಡಗಳು ತಲಾ ಐದು ಬದಲಾವಣೆಗಳನ್ನು ಮಾಡಿವೆ.
A look at our Playing XI for the final ODI 👌👌
— BCCI (@BCCI) September 27, 2023
Follow the Match ▶️ https://t.co/H0AW9UXI5Y#INDvAUS | @IDFCFIRSTBank pic.twitter.com/KpYibJpfSo
ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಪುನರಾಗಮನ ಮಾಡಿದರೆ, ತನ್ವೀರ್ ಸಂಗಾ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದಾರೆ. ರೋಹಿತ್ ಶರ್ಮಾ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಉಲ್ಲೇಖಿಸಿದಂತೆ ಭಾರತದಲ್ಲೂ ಬದಲಾವಣೆಗಳು ಸಾಕಷ್ಟಾಗಿವೆ. ನಾಯಕ ಮತ್ತು ವಿರಾಟ್ ಕೊಹ್ಲಿ ಮರಳಿದ್ದಾರೆ ಆದರೆ ಶುಭ್ಮನ್ ಗಿಲ್, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಅನುಪಸ್ಥಿತಿಯಲ್ಲಿ ಆಡಲಿದೆ. ಭಾರತವು ವಾಷಿಂಗ್ಟನ್ ಸುಂದರ್ ಅವರಿಗಾಗಿ ರವಿಚಂದ್ರನ್ ಅಶ್ವಿನ್ ಅವರನ್ನು ಕೈಬಿಟ್ಟಿದೆ. ರಾಜ್ಯದ ನಾಲ್ವರು ಸ್ಥಳೀಯ ಆಟಗಾರರಾದ ಧರ್ಮೇಂದ್ರ ಜಡೇಜಾ, ಪ್ರೇರಕ್ ಮಂಕಡ್, ವಿಶ್ವರಾಜ್ ಜಡೇಜಾ ಮತ್ತು ಹರ್ವಿಕ್ ದೇಸಾಯಿ ಪಂದ್ಯದುದ್ದಕ್ಕೂ ಡ್ರಿಂಕ್ಸ್ ಮತ್ತು ಫೀಲ್ಡಿಂಗ್ಗಾಗಿ ತಂಡದ ಜತೆಗೆ ಇರಲಿದ್ದಾರೆ.
ಕ್ರೈಂ
ಲೈಂಗಿಕ ದೌರ್ಜನ್ಯ; ರಕ್ತಸಿಕ್ತ ಬಾಲಕಿ ಮನೆಮನೆಗೆ ತೆರಳಿ ಗೋಳಾಡಿದರೂ ಸಹಾಯ ಮಾಡದ ನಿರ್ದಯಿಗಳು!
ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ 12 ವರ್ಷದ ಬಾಲಕಿಯು ಲೈಂಗಿಕ ದೌರ್ಜನ್ಯಕ್ಕೀಡಾಗಿದ್ದಾಳೆ. ಆಕೆ ಮನೆ ಮನೆಗೆ ತೆರಳಿ ಸಹಾಯಕ್ಕೆ ಅಂಗಲಾಚಿದರೂ ಯಾರೂ ಸಹಾಯ ಮಾಡದಿರುವುದು ಕೂಡ ಅಮಾನವೀಯ ಎನಿಸಿದೆ.
ಭೋಪಾಲ್: ದೇಶದಲ್ಲಿ ಬಾಲಕಿಯರು ಸೇರಿ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವುದು, ಅತ್ಯಾಚಾರ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಎಷ್ಟೇ ಕಠಿಣ ಕ್ರಮ ಜಾರಿಗೆ ತಂದರೂ ಕ್ರೂರ ಜನ ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಮಧ್ಯಪ್ರದೇಶದಲ್ಲಿ (Madhya Pradesh) 12 ವರ್ಷದ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಲೈಂಗಿಕ ದೌರ್ಜನ್ಯದ ಬಳಿಕ ಬಾಲಕಿಯು ಸಹಾಯಕ್ಕಾಗಿ ಅಂಗಲಾಚಿಕೊಂಡು ಮನೆ ಮನೆಗೆ ಹೋದರೂ ಯಾರೂ ಸಹಾಯ ಮಾಡದಿರುವುದು ಜನರ ಮನಸ್ಥಿತಿಗೂ ಕನ್ನಡಿ ಹಿಡಿದಂತಿದೆ.
ಉಜ್ಜಯಿನಿಯ ಬದ್ನಗರದ ಬಳಿ 12 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಇದಾದ ಬಳಿಕ ರಕ್ತಸ್ರಾವದಿಂದ ಬಳಲುತ್ತಿದ್ದ ಬಾಲಕಿಯು ಅರೆಬೆತ್ತಲೆಯಾಗಿ ರಸ್ತೆ ಮೇಲೆ ನಡೆದುಕೊಂಡು ಹೋಗಿದ್ದಾಳೆ. ನನಗೆ ಸಹಾಯ ಮಾಡಿ ಎಂದು ಮನೆ ಮನೆಗೆ ತೆರಳಿ ಅಂಗಲಾಚಿದರೂ ಯಾರೋಬ್ಬರು ಕೂಡ ಬಾಲಕಿಗೆ ಸಹಾಯ ಮಾಡಿಲ್ಲ. ಬಾಲಕಿಯ ದುಸ್ಥಿತಿಯನ್ನು ನೋಡಿಕೊಂಡು ಸುಮ್ಮನಿದ್ದರೇ ಹೊರತು, ಏನಾಯ್ತಮ್ಮ ಎಂದು ಕೇಳಿಲ್ಲ, ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡಿಲ್ಲ. ಇಂತಹ ಭೀಕರ ದೃಶ್ಯಗಳಿರುವ ವಿಡಿಯೊ ವೈರಲ್ ಆಗಿದ್ದು, ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.
ಆಸ್ಪತ್ರೆಗೆ ಸಾಗಿಸಿದ ಸಂತ
ಗೋಳಾಡುತ್ತ ಗೋಳಾಡುತ್ತ ಬಾಲಕಿಯು ಆಶ್ರಮವೊಂದನ್ನು ಪ್ರವೇಶಿಸಿದ್ದಾಳೆ. ಅಲ್ಲಿರುವ ಸಂತರೊಬ್ಬರು ಬಾಲಕಿಗೆ ಟವೆಲ್ ಹೊದಿಸಿ, ಆಕೆಯನ್ನು ಉಜ್ಜಯಿನಿ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ನಿಜ ಎಂಬುದು ವೈದ್ಯಕೀಯ ತಪಾಸಣೆ ಬಳಿಕ ಗೊತ್ತಾಗಿದೆ. ರಕ್ತಸ್ರಾವ, ಮೈತುಂಬ ಗಾಯಗಳಾದ ಕಾರಣ ಬಾಲಕಿಯನ್ನು ಇಂದೋರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಆಕೆಯ ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ದೂರು ನೀಡಲು ಹೋದ ದಲಿತ ಮಹಿಳೆ ಮೇಲೆಯೇ ಅತ್ಯಾಚಾರ ಎಸಗಿದ ಪಿಎಸ್‌ಐ; ಇದೆಂಥಾ ಅನಾಚಾರ!
ಬಾಲಕಿ ಮೇಲೆ ಯಾರು ಅತ್ಯಾಚಾರ ಎಸಗಿದ್ದಾರೆ ಎಂಬ ಕುರಿತು ಇದುವರೆಗೆ ಮಾಹಿತಿ ಲಭ್ಯವಾಗಿಲ್ಲ. ಬಾಲಕಿಯಂತೂ ಪೊಲೀಸರ ಒಂದು ಪ್ರಶ್ನೆಗೂ ಉತ್ತರಿಸಲು ಆಗದಷ್ಟು ಕುಗ್ಗಿಹೋಗಿದ್ದಾಳೆ. ಅಪರಿಚಿತರ ವಿರುದ್ಧ ಪೊಲೀಸರು ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಾಗೆಯೇ, ಆರೋಪಿಗಳ ಪತ್ತೆಗಾಗಿ ವಿಶೇಷ ತನಿಖಾ ತಂಡವೊಂದನ್ನು ರಚಿಸಿದ್ದಾರೆ. ಹಾಗೆಯೇ, ಆರೋಪಿಗಳ ಕುರಿತು ಸುಳಿವು ಸಿಕ್ಕರೆ ಮಾಹಿತಿ ಕೊಡಿ ಎಂಬುದಾಗಿಯೂ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಕರ್ನಾಟಕ
CM Siddaramaiah: CWRC ಆದೇಶಕ್ಕೆ ಆಕ್ಷೇಪಣೆ ಸಲ್ಲಿಸಲು ನಿರ್ಧಾರ ಎಂದ ಸಿದ್ದರಾಮಯ್ಯ
CM Siddaramaiah: ಮತ್ತೆ 18 ದಿನ 3000 ಕ್ಯುಸೆಕ್ ನೀರು ಬಿಡಬೇಕು ಎಂಬ ಆದೇಶವನ್ನು ಪ್ರಶ್ನೆ ಮಾಡಲಾಗುವುದು ಎಂದಿದ್ದಾರೆ ಸಿಎಂ ಸಿದ್ದರಾಮಯ್ಯ.
ಚಾಮರಾಜನಗರ (ಹನೂರು): ಕಾವೇರಿ ನೀರು ನಿಯಂತ್ರಣ ಸಮಿತಿಯು (Cauvery water regulation Committee) ತಮಿಳುನಾಡಿಗೆ ಪ್ರತಿದಿನ 3000 ಕ್ಯೂಸೆಕ್ ನೀರನ್ನು (3000 Cusec water) ಹರಿಸಲು ಆದೇಶಿಸಿದೆ. ಈ ಬಗ್ಗೆ ಕಾನೂನು ತಂಡದೊಂದಿಗೆ ಚರ್ಚಿಸಿದ್ದು ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಕಾನೂನು ತಂಡ ಸಲಹೆ ನೀಡಿದೆ. ನೀರು ಬಿಡಲು ನಮ್ಮ ಬಳಿ ನೀರಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು. ಅವರು ಶ್ರೀ ಮಲೈ ಮಹದೇಶ್ವರ ಬೆಟ್ಟದ (Male mahadeshwara betta) ಬಳಿ ಮಾಧ್ಯಮದವರಿಗೆ ಬುಧವಾರ ಪ್ರತಿಕ್ರಿಯೆ ನೀಡಿದರು.
ಕಾವೇರಿ ನೀರು ನಿಯಂತ್ರಣ ಸಮಿತಿಯು ಮಂಗಳವಾರ ನೀಡಿದ ಆದೇಶದಲ್ಲಿ ಸೆ. 28ರಿಂದ ಅಕ್ಟೋಬರ್ 15ರವರೆಗೆ ಪ್ರತಿದಿನವೂ 3000 ಕ್ಯೂಸೆಕ್ ನೀರು ಬಿಡಲು ಆದೇಶ ನೀಡಿತ್ತು. ಇದನ್ನು ಪ್ರಾಧಿಕಾರದ ಮುಂದೆ ಪ್ರಶ್ನಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿವೆ.
ಸಿಎಂ ಮತ್ತು ಡಿಸಿಎಂ ಇಬ್ಬರೂ ನಮ್ಮಲ್ಲಿ ನೀರು ಇಲ್ಲ ಎಂದು ಹೇಳುತ್ತಲೇ ಪ್ರಾಧಿಕಾರ ಹೇಳಿದಷ್ಟು ನೀರು ಬಿಡುಗಡೆ ಮಾಡಿದ್ದೇ ಸಮಿತಿಗೆ ಸರಾಗ ಆದೇಶ ನೀಡಲು ಕಾರಣವಾಗಿದೆ ಎಂದು ಆರೋಪಿಸಲಾಗಿದೆ. ಇದೀಗ ಸೆ. 29ರಂದು ಇದರ ವಿರುದ್ಧ ರಾಜ್ಯವ್ಯಾಪಿ ಬಂದ್‌ಗೆ ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಮಳೆಗಾಗಿ ಮಹದೇಶ್ವರನಲ್ಲಿ ಪ್ರಾರ್ಥನೆ
ಮಳೆ ಕೈಕೊಟ್ಟು 195 ತಾಲ್ಲೂಕು ಗಳನ್ನು ಬರಪೀಡಿತ ಎಂದು ಘೋಷಿಸಿದ್ದು, ಮಹದೇಶ್ವರನಲ್ಲಿ ಮಳೆಗಾಗಿ, ರಾಜ್ಯದ ಜನರಿಗೆ, ರೈತರಿಗೆ ಸೌಖ್ಯವಾಗಲಿ ಎಂದು ಪ್ರಾರ್ಥಿಸಿರುವುದಾಗಿ ಸಿದ್ದರಾಮಯ್ಯ ತಿಳಿಸಿದರು.
ಮೂಢನಂಬಿಕೆ, ಮೌಢ್ಯ, ಕಂದಾಚಾರದಲ್ಲಿ ನಂಬಿಕೆ ಇಲ್ಲ
ಮೂಢನಂಬಿಕೆ, ಮೌಢ್ಯ, ಕಂದಾಚಾರದಲ್ಲಿ ನಂಬಿಕೆ ಇಲ್ಲ. ಅದಕ್ಕಾಗಿಯೇ ಹಿಂದೆ ಮುಖ್ಯಮಂತ್ರಿ ಯಾದ ಕೂಡಲೇ ಚಾಮರಾಜನಗರಕ್ಕೆ ಭೇಟಿ ನೀಡಿದೆ. ಸುಮಾರು 12 ಬಾರಿ ಭೇಟಿ ನೀಡಿದ್ದು, 5 ವರ್ಷ ಗಟ್ಟಿಯಾಗಿ ಇದ್ದೆ. ಚಾಮರಾಜನಗರ ಕ್ಕೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೌಢ್ಯ ಈಗ ಹೋಗಿದೆ ಎಂದರು.
ಬಂದ್‌ನಿಂದ ಯಾರಿಗೂ ತೊಂದರೆಯಾಗಬಾರದು
ಸೆಪ್ಟೆಂಬರ್ 29 ರಂದು ಕರ್ನಾಟಕ ಬಂದ್ ಗೆ ಕರೆನೀಡಿರುವ ಬಗ್ಗೆ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಗೆ ಅವಕಾಶವಿದೆ. ಆದರೆ ಇತರರಿಗೆ ತೊಂದರೆಯಾಗಬಾರದು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ನಾವು ಈ ಆದೇಶ ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತೇವೆ ಎಂದರು.
ಇದನ್ನೂ ಓದಿ: CM Siddaramaiah: ಕೃಷಿಗೆ ಸಾಲ ಮಾಡಿ ಮದುವೆ ಛಮಾಡುವುದನ್ನು ನಿಲ್ಲಿಸಿ: ಸಿಎಂ ಸಿದ್ದರಾಮಯ್ಯ ಮನವಿ
ಕರ್ನಾಟಕ
BJP JDS alliance : ವಿಜಯದಶಮಿ ನಂತರ ಜೆಡಿಎಸ್ ಸೀಟು ಹಂಚಿಕೆ ಅಂತಿಮ ಮಾತುಕತೆ!
BJP JDS alliance : ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆಗೆ ಸೀಟು ಹಂಚಿಕೆ ಯಾವಾಗ ಎಂಬ ಬಗ್ಗೆ ಎಚ್.ಡಿ. ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ. ವಿಜಯದಶಮಿ ನಂತರ ಈ ಬಗ್ಗೆ ಬಿಜೆಪಿ ವರಿಷ್ಠರೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆ (Lok Sabha Election 2024) ಸಂಬಂಧ ಬಿಜೆಪಿ ಜತೆ ಕೈಜೋಡಿಸಿರುವ ಜೆಡಿಎಸ್ ರಾಜ್ಯದಲ್ಲಿ ಹಲವಾರು ರಾಜಕೀಯ ತಂತ್ರಗಳನ್ನು (Political Strategy) ಹೆಣೆಯುತ್ತಿದೆ. ಈ ಸಂಬಂಧ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ (Former Prime Minister and JDS supremo HD DeveGowda) ಅವರು ಬುಧವಾರ (ಸೆಪ್ಟೆಂಬರ್ 27) ಸುದ್ದಿಗೋಷ್ಠಿ ನಡೆಸಿ ತಾವು ಗೃಹ ಸಚಿವ ಅಮಿತ್ ಶಾ (Home Minister Amit Shah) ಅವರ ಜತೆ ಮೈತ್ರಿ (BJP JDS alliance) ಕುರಿತಾಗಿ ಮೊದಲು ಚರ್ಚೆ ನಡೆಸಿದ್ದಾಗಿ ಹೇಳಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಬಳಿ ಈ ಬಗ್ಗೆ ಮಾತನಾಡಿಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಸೀಟು ಹಂಚಿಕೆ ಬಗ್ಗೆ ಪ್ರಶ್ನೆ ಕೇಳಿದಾಗ ವಿಜಯದಶಮಿ ಹಬ್ಬದ (Vijayadashami Festival) ಬಳಿಕ ಬಿಜೆಪಿಯೊಂದಿಗೆ ಈ ಬಗ್ಗೆ ಮಾತುಕತೆ ನಡೆಸಲಾಗುವುದು ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಸ್ಪಷ್ಟಪಡಿಸಿದ್ದಾರೆ. ಇದರ ಜತೆಗೆ ಆ ಸನ್ನಿವೇಶ ಬಂದಾಗ ಚರ್ಚೆ ಮಾಡುತ್ತೇವೆ ಎಂದು ದೇವೇಗೌಡರು ಹೇಳಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ ಅವರು, ಮೈತ್ರಿ ಸೀಟು ಹಂಚಿಕೆ ಸಂಬಂಧ ವಿಜಯದಶಮಿ ಮುಗಿದ ಬಳಿಕ ಬಿಜೆಪಿ ವರಿಷ್ಠರ ಜತೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ. ಅದಕ್ಕೆ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಸಹ ಧನಿಗೂಡಿಸಿದ್ದು, ಆ ಸನ್ನಿವೇಶ ಬರಲಿ, ಆಗ ಚರ್ಚೆ ಮಾಡುತ್ತೇವೆ ಎಂದು ಸೂಚ್ಯವಾಗಿ ಉತ್ತರಿಸಿದ್ದಾರೆ.
ಮೈತ್ರಿಕೂಟ ಸೇರಿದ್ದಷ್ಟೇ
ಈಚೆಗೆ ನವದೆಹಲಿಗೆ ಎಚ್.ಡಿ. ಕುಮಾರಸ್ವಾಮಿ ಅವರು ಭೇಟಿ ನೀಡಿದ್ದಾಗ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಜತೆ ಪ್ರಾಥಮಿಕ ಹಂತದ ಮಾತುಕತೆಯನ್ನು ನಡೆಸಿದ್ದರು. ಇದರ ಭಾಗವಾಗಿ ಅಂದೇ ಬಿಜೆಪಿ – ಜೆಡಿಎಸ್ ಮೈತ್ರಿ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಾಗಿತ್ತು. ಎನ್‌ಡಿಎ ಮೈತ್ರಿಕೂಟವನ್ನು ಜೆಡಿಎಸ್ ಸೇರಿದೆ ಎಂದು ಅಧಿಕೃತವಾಗಿ ಪ್ರಕಟಿಸಲಾಗಿತ್ತು. ಆದರೆ, ಇದರ ನಂತರ ಸೀಟು ಹಂಚಿಕೆ ಸಂಬಂಧ ಯಾವುದೇ ರೀತಿಯ ಅಂತಿಮ ಹಂತದ ಚರ್ಚೆ ಆಗಿಲ್ಲ ಎಂದು ಹೇಳಲಾಗಿದೆ.
ಐದು ಕ್ಷೇತ್ರ ಕೇಳಿರುವ ಜೆಡಿಎಸ್
ಮೂಲಗಳ ಪ್ರಕಾರ ಜೆಡಿಎಸ್ ಒಟ್ಟು ಐದು ಲೋಕಸಭಾ ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದೆ ಎನ್ನಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ರಾಯಚೂರು ಸೇರಿದಂತೆ ಇತ್ತ ಮಂಡ್ಯ, ಹಾಸನ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಕೇಳಿತ್ತು. ಆದರೆ, ಈ ಸಂಬಂಧ ಬಿಜೆಪಿ ನಾಯಕರಲ್ಲಿ ಒಮ್ಮತ ಮೂಡಿಲ್ಲ.
ಇದನ್ನೂ ಓದಿ: BJP JDS alliance : ಜೆಡಿಎಸ್‌ಗೆ ಕಾಂಗ್ರೆಸ್ ಮಾಡಿದ ಮೋಸದ ಬಗ್ಗೆ 100 ಕಾರಣ ಹೇಳುವೆ: ಗುಡುಗಿದ ದೇವೇಗೌಡ
ಬಿಜೆಪಿ ನಾಯಕರ ವಿರೋಧ
ಜೆಡಿಎಸ್‌ಗೆ ಯಾವುದೇ ಕಾರಣಕ್ಕೂ ಐದು ಸೀಟನ್ನು ಬಿಟ್ಟುಕೊಡುವುದು ಬೇಡ. ಮೂರು ಕ್ಷೇತ್ರವನ್ನು ಬಿಟ್ಟುಕೊಟ್ಟರೆ ಸಾಕು. ಉಳಿದ ಕಡೆ ಅವರಿಗೆ ಕೊಟ್ಟರೆ ಸೋಲು ನಿಶ್ಚಿತ. ಇದು ಬಿಜೆಪಿಗೆ ನಷ್ಟವನ್ನುಂಟು ಮಾಡುತ್ತದೆ ಎಂದು ರಾಜ್ಯದ ಕೆಲವು ನಾಯಕರು ಈಗಾಗಲೇ ವರದಿ ಒಪ್ಪಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ವಿಜಯ ದಶಮಿ ನಂತರ ನಡೆಯುವ ಮಾತುಕತೆ ಕುತೂಹಲ ಮೂಡಿಸಿದೆ.
-
ದೇಶ13 hours ago
UNGA Speech: ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಿ, ವಿಶ್ವ ಸಂಸ್ಥೆಯಲ್ಲಿ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಪಾಠ!
-
ವಿದೇಶ21 hours ago
Great auction: ಅಮೆರಿಕದ ಅಪರೂಪದ ನೋಟು 3.9 ಕೋಟಿ ರೂ.ಗೆ ಮಾರಾಟ!
-
ಸುವಚನ9 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ದೇಶ14 hours ago
Manipur Horror: ಅಪಹರಿಸಿ ಕೊಂದ್ರಲ್ಲಾ… ನಮ್ಮ ಮಕ್ಕಳು ಮಾಡಿದ ತಪ್ಪಾದ್ರೂ ಏನು? ಹತ್ಯೆಗೀಡಾದ ವಿದ್ಯಾರ್ಥಿಗಳ ಪೋಷಕರ ಪ್ರಶ್ನೆ
-
ದೇಶ15 hours ago
GST Evasion: ಜಿಎಸ್ಟಿ ವಂಚಿಸಿದ ಬಿಜೆಪಿ ನಾಯಕಿಯ ಸಕ್ಕರೆ ಕಾರ್ಖಾನೆಯ 19 ಕೋಟಿ ರೂ. ಮೌಲ್ಯದ ಸೊತ್ತು ಜಪ್ತಿ!
-
ಆಟೋಮೊಬೈಲ್20 hours ago
Viral News : ಅಮ್ಮನ ಕಾರಿನಲ್ಲಿಯೇ ಮನೆ ಬಿಟ್ಟು ಹೋದ ಪುಟಾಣಿ ಮಕ್ಕಳು, 300 ಕಿ. ಮೀ ದೂರ ಹೋಗಿ ಸಿಕ್ಕಿಬಿದ್ದರು
-
ಕರ್ನಾಟಕ21 hours ago
Assault Case : ರಸ್ತೆ ವಿಚಾರಕ್ಕೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮಸ್ಥರು!
-
ಕ್ರಿಕೆಟ್18 hours ago
Ruturaj Gaikwad : ಚೀನಾಗೆ ಹೊರಡುವ ಮೊದಲು ಪುಣೆಯ ಗಣೇಶ ಮಂದಿರಕ್ಕೆ ಭೇಟಿ ನೀಡಿದ ಋತುರಾಜ್