Dina Bhavishya : ಈ ರಾಶಿಯವರು ಅಪರಿಚಿತರ ಜತೆ ಅತಿಯಾದ ಸಲುಗೆ ಇಟ್ಟುಕೊಳ್ಳಬೇಡಿ! Vistara News

ಪ್ರಮುಖ ಸುದ್ದಿ

Dina Bhavishya : ಈ ರಾಶಿಯವರು ಅಪರಿಚಿತರ ಜತೆ ಅತಿಯಾದ ಸಲುಗೆ ಇಟ್ಟುಕೊಳ್ಳಬೇಡಿ!

ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು, ಅಧಿಕ ಶ್ರಾವಣ ಮಾಸ, ಶುಕ್ಲ ಪಕ್ಷದ ಅಷ್ಟಮಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ (dina bhavishya) ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

dina bhavishya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಂದ್ರನು ಬುಧವಾರವೂ ವೃಶ್ಚಿಕ ರಾಶಿಯಲ್ಲಿ ಇರಲಿದ್ದಾನೆ. ಇದರಿಂದಾಗಿ ಮೇಷ, ವೃಷಭ, ಸಿಂಹ, ತುಲಾ, ಧನಸ್ಸು, ಮಕರ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಚಂದ್ರನ ಬಲ ಇದ್ದರೂ ಮೇಷ ರಾಶಿಯವರ ಮಾತಿನಲ್ಲಿ ಹಿಡಿತವಿರಲಿ. ಸಿಂಹ ರಾಶಿಯವರಿಗೆ ವ್ಯಾಪಾರ ವ್ಯವಹಾರಗಳಲ್ಲಿ ಆರ್ಥಿಕವಾಗಿ ಲಾಭ ಕಡಿಮೆ ಇರಲಿದೆ. ತುಲಾ ರಾಶಿಯವರು ಆತುರದಲ್ಲಿ ಯಾರೊಂದಿಗೂ ಅತಿರೇಕದ ಮಾತುಗಳನ್ನು ಆಡಿ, ಅಪಾಯ ತಂದುಕೊಳ್ಳುವುದು ಬೇಡ. ಧನಸ್ಸು ರಾಶಿಯವರು ಮಕ್ಕಳ ಆರೋಗ್ಯದ ಕಡೆಗೆ ಗಮನ ಹರಿಸಬೇಕು. ಕಟಕ ರಾಶಿಯವರಿಗೆ ಅತಿಯಾದ ಸಲುಗೆಯೇ ವಿಷವಾಗಲಿದೆ ಹೀಗಾಗಿ ಎಚ್ಚರಿಕೆ ವಹಿಸಿ. ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ, ಪಂಚಾಂಗ ಏನು ಹೇಳುತ್ತದೆ (Kannada Dina Bhavishya) ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (26-07-2023)

ಶ್ರೀ ಶಕೇ 1945, ಶೋಭಕೃತ (ಶೋಭನ) ನಾಮ ಸಂವತ್ಸರ, ದಕ್ಷಿಣಾಯಣ,
ವರ್ಷ ಋತು, ಅಧಿಕ ಶ್ರಾವಣ ಮಾಸ, ಶುಕ್ಲ ಪಕ್ಷ.
ತಿಥಿ: ಅಷ್ಟಮಿ 15:51 ವಾರ: ಬುಧವಾರ
ನಕ್ಷತ್ರ: ಸ್ವಾತಿ 25:09 ಯೋಗ: ಸಾಧ್ಯ 14:37
ಕರಣ: ಭವ 15:51 ಅಮೃತ ಕಾಲ: ಮಧ್ಯಾಹ್ನ 03:58 ರಿಂದ 05:38ರ ವರೆಗೆ
ಇಂದಿನ ವಿಶೇಷ: ಕಾರ್ಗಿಲ್ ವಿಜಯ್ ದಿವಸ  

ಸೂರ್ಯೋದಯ : 05:55 ಸೂರ್ಯಾಸ್ತ : 07:10

ರಾಹುಕಾಲ : ಮಧ್ಯಾಹ್ನ 12.00 ರಿಂದ 1.30
ಗುಳಿಕಕಾಲ: ಬೆಳಗ್ಗೆ 10.30 ರಿಂದ 12.00
ಯಮಗಂಡಕಾಲ: ಬೆಳಗ್ಗೆ 7.30 ರಿಂದ 9.00

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಆಪ್ತರ ವರ್ತನೆಯಿಂದ ನಿಮ್ಮ ಮನಸ್ಸಿಗೆ ನೋವು ತರುವ ಸಾಧ್ಯತೆಗಳು ಹೆಚ್ಚು, ತಾಳ್ಮೆಯಿಂದ ಇರಿ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ತಲೆದೋರಬಹುದು ಮಾತಿನಲ್ಲಿ ಹಿಡಿತವಿರಲಿ. ದಿನದ ಮಟ್ಟಿಗೆ ಹಣಕಾಸಿನ ಹೂಡಿಕೆ ವ್ಯವಹಾರ ಮಾಡುವುದು ಬೇಡ. ಆರೋಗ್ಯದ ಬಗೆಗೆ ವಿಶೇಷ ಕಾಳಜಿ ಇರಲಿ. ಉದ್ಯೋಗಿಗಳಿಗೆ ಮಧ್ಯಮ ಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 4

Horoscope Today

ವೃಷಭ: ದೀರ್ಘಕಾಲದ ಹೂಡಿಕೆ ವ್ಯವಹಾರದಲ್ಲಿ ಪ್ರಗತಿಯೊಂದಿಗೆ ಲಾಭ ಪಡೆಯುವಿರಿ. ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ. ನಿಮ್ಮ ಶ್ರಮಕ್ಕೆ ಪ್ರತಿಫಲ ಸಿಗಲಿದೆ. ಆಹಾರ ಕ್ರಮದಲ್ಲಿ ವ್ಯತ್ಯಾಸದಿಂದಾಗಿ ಸ್ವಲ್ಪ ಆರೋಗ್ಯದ ಕಡೆಗೆ ಗಮನ ಹರಿಸಿ. ಹಿರಿಯರಿಂದ ಮಾರ್ಗದರ್ಶನ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 4

Horoscope Today

ಮಿಥುನ: ಯಾರಾದರೂ ನಿಮ್ಮ ಸಹಾಯ ಬೇಡಿ ಬರುವರು, ವಿಮರ್ಶಿಸಿ ಸಹಾಯ ಮಾಡಿ. ಆರ್ಥಿಕ ಪ್ರಗತಿ ದಿನದ ಮಟ್ಟಿಗೆ ಸಾಧಾರಣ. ಯಾರಾದರೂ ನಿಮ್ಮ ಭಾವನೆಗಳನ್ನು ನಿರಾಸೆ ಮಾಡುವ ಸಾಧ್ಯತೆ, ಅವರ ಮಾತನ್ನು ಲಕ್ಷಿಸದೆ ಕಾರ್ಯದಲ್ಲಿ ಮುನ್ನುಗ್ಗಿ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಉದ್ಯೋಗಿಗಳಿಗೆ ಹೊಸ ಭರವಸೆಯ ಆಶಾಭಾವನೆ ಮೂಡಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 2

Horoscope Today

ಕಟಕ: ಅಪರಿಚಿತರೊಂದಿಗೆ ಅತಿಯಾದ ಸಲುಗೆ ಅಪಾಯ ತಂದಿತು ಎಚ್ಚರಿಕೆ.
ಕೆಲವು ಆಘಾತಗಳನ್ನು ಎದುರಿಸುವುದರಿಂದ ಧೈರ್ಯದಿಂದ ಇರಿ. ನಿಮ್ಮ ಆಸೆ-ಆಕಾಂಕ್ಷೆಗಳು ಯಶಸ್ಸನ್ನು ತಂದುಕೊಡಲಿವೆ. ಪ್ರಯಾಣ ಮಾಡುವ ಮತ್ತು ಹಣ ಖರ್ಚು ಮಾಡುವ ಸಾಧ್ಯತೆ. ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 5

Horoscope Today

ಸಿಂಹ: ದೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರ ಹುಡುಕಲು ಸಾಧ್ಯವಾಗಬಹುದು. ವ್ಯಾಪಾರ ವ್ಯವಹಾರಗಳಲ್ಲಿ ಆರ್ಥಿಕವಾಗಿ ಲಾಭ ಕಡಿಮೆ. ಹೊಸ ಆಲೋಚನೆಗಳು ನಿಮ್ಮನ್ನು ಸೃಜನಾತ್ಮಕವಾಗಿ ಏನಾದರೂ ಮಾಡಲು ಪ್ರಯತ್ನಿಸುವಂತೆ ಮಾಡುವಂತೆ ಪ್ರೇರೇಪಿಸುತ್ತದೆ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

Horoscope Today

ಕನ್ಯಾ: ಕುಟುಂಬದ ಆಪ್ತರೊಂದಿಗೆ ಸಂತಸ ಹಂಚಿಕೊಳ್ಳವಿರಿ. ಹಣಕಾಸು ಪರಿಸ್ಥಿತಿ ಸಾಧಾರಣ, ದಿನದ ಮಟ್ಟಿಗೆ ಖರ್ಚು. ದುಬಾರಿ ವಸ್ತುಗಳನ್ನು ಖರೀದಿಸುವ ಮುನ್ನ ನಿಮ್ಮ ಹಣಕಾಸಿನ ಪರಿಸ್ಥಿತಿ ನೋಡಿಕೊಂಡು ಮುಂದುವರಿಯಿರಿ. ಹಾಸಿಗೆ ಇದ್ದಷ್ಟು ಕಾಲು ಚಾಚಿ. ಆರೋಗ್ಯ ಮಧ್ಯಮ, ಉದ್ಯೋಗಿಗಳಿಗೆ ಶುಭ ಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 2

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಪ್ರಭಾವಿ ಜನರ ಬೆಂಬಲ ಸಿಗಲಿದೆ. ಇದರಿಂದ ನೈತಿಕ ಸ್ಥೈರ್ಯ ಹೆಚ್ಚಾಗಲಿದೆ.
ಒಡಹುಟ್ಟಿದವರ ಸಹಕಾರ ಸಿಗಲಿದೆ. ಆತುರದಲ್ಲಿ ಯಾರೊಂದಿಗೂ ಅತಿರೇಕದ ಮಾತುಗಳನ್ನು ಆಡಿ, ಅಪಾಯ ತಂದುಕೊಳ್ಳುವುದು ಬೇಡ. ದಿನದ ಮಟ್ಟಿಗೆ ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 4

Horoscope Today

ವೃಶ್ಚಿಕ: ಸಕಾರಾತ್ಮಕ ಆಲೋಚನೆಗಳು ಪುಷ್ಟಿ ನೀಡಿ, ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಇಂದು ಹಣಕಾಸಿನ ಹೂಡಿಕೆ ವ್ಯವಹಾರ ಮಾಡುವುದು ಬೇಡ. ವ್ಯಾಪಾರದಲ್ಲಿ ಯಶಸ್ಸು ಸಿಗಲಿದೆ. ಪ್ರಯಾಣದಿಂದ ಲಾಭ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 6

Horoscope Today

ಧನಸ್ಸು: ಭಾವನಾ ಜೀವಿಗಳಾದ ನೀವು ನಕಾರಾತ್ಮಕ ಆಲೋಚನೆಗಳಿಂದ ದೂರ ಇರಿ. ಆಧ್ಯಾತ್ಮಿಕ ವ್ಯಕ್ತಿಗಳ ಮಾರ್ಗದರ್ಶನ, ಕ್ಷೇತ್ರ ದರ್ಶನ ಪಡೆದು ಮಾನಸಿಕ ನೆಮ್ಮದಿ ತಂದುಕೊಳ್ಳುವುದು ಅವಶ್ಯಕ. ಮಕ್ಕಳ ಆರೋಗ್ಯದ ಕಡೆಗೆ ಗಮನ ಹರಿಸಿ. ಹಣಕಾಸು, ವ್ಯಾಪಾರ ವ್ಯವಹಾರಗಳಲ್ಲಿ ಸಾಧಾರಣ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

ಸೋಮಾರಿತನ ಹೋಗಲು ಏನು ಮಾಡಬೇಕು? ಈ ಲಿಂಕ್‌ ಕ್ಲಿಕ್‌ ಮಾಡಿ

Horoscope Today

ಮಕರ: ಭರವಸೆಯ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಸ್ನೇಹಿತರೊಂದಿಗೆ ಸಮಯ ಕಳೆಯುವ ಸಾಧ್ಯತೆ. ನಿಮ್ಮ ಶಕ್ತಿ ಸಾಮರ್ಥ್ಯವನ್ನು ಕೆಲಸ ಕಾರ್ಯಗಳಲ್ಲಿ ಬಳಸಿಕೊಂಡರೆ ಇನ್ನೂ ಹೆಚ್ಚು ವ್ಯಕ್ತಿತ್ವ ವಿಕಸನ ಆಗುತ್ತದೆ. ಆರೋಗ್ಯ ಉತ್ತಮ. ದಿನದ ಮಟ್ಟಿಗೆ ಖರ್ಚು. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 3

Horoscope Today

ಕುಂಭ: ಅತಿಥಿಗಳ ಆಗಮನ ಸಂತಸ ತರುವುದು. ಆತ್ಮವಿಶ್ವಾಸದ ಹೊಸ ಭರವಸೆ ಮೂಡಲಿದೆ. ಹೂಡಿಕೆಯ ಲಾಭ ಇಂದು ಉಪಯೋಗಕ್ಕೆ ಬರುವುದು. ದೀರ್ಘಕಾಲದ ಪ್ರಯತ್ನ ಇಂದು ಯಶಸ್ಸು ತಂದು ಕೊಡಲಿದೆ. ಆರೋಗ್ಯ, ಉದ್ಯೋಗದಲ್ಲಿ ಉತ್ತಮ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

ಇದನ್ನೂ ಓದಿ : Prerane : ಕಮಲವು ಏಕೆ ಭಗವಂತನಿಗೆ ವಿಶೇಷ?

Horoscope Today

ಮೀನ: ಅತಿರೇಕದಲ್ಲಿ ಮಾತನಾಡಿ ಅಪಾಯ ತಂದುಕೊಳ್ಳುವುದು ಬೇಡ. ಕೋಪಗೊಳ್ಳುವಂತೆ ಉದ್ರೇಕವಾಗುವ ವಿಷಯಗಳಿಂದ ದೂರ ಇರಿ. ತಾಳ್ಮೆಯಿಂದ ವರ್ತಿಸಿ. ಉದ್ಯೋಗಿಗಳಿಗೆ ಬಡ್ತಿ ಸಿಗುವ ಸಾಧ್ಯತೆ. ಆರೋಗ್ಯದ ಕುರಿತು ಕಾಳಜಿ ವಹಿಸಿ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 7

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | [email protected]

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

Karnataka Drought: ಮುಂದಿನ ವಾರ ಡಿಬಿಟಿ ಮೂಲಕ ರೈತರಿಗೆ ಬರ ಪರಿಹಾರ; 2 ಸಾವಿರ ರೂ. ವರೆಗೆ ಜಮೆ

Karnataka Drought : ಡಿಬಿಟಿ ಮೂಲಕ ಮುಂದಿನ ವಾರ ಭಾಗಶಃ ಪರಿಹಾರದ ಮೊದಲ ಕಂತನ್ನು ಹಾಕಲಿದ್ದೇವೆ. ಕೇಂದ್ರ ಸರ್ಕಾರದಿಂದ ಪರಿಹಾರದ ಹಣ ಬರುತ್ತಿದ್ದಂತೆ ಬಾಕಿ ಪರಿಹಾರದ ಹಣವು ರೈತರ ಖಾತೆಗೆ ಜಮೆ ಆಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

VISTARANEWS.COM


on

Karnataka Drought
Koo

ಬೆಳಗಾವಿ: ಭೀಕರ ಬರಕ್ಕೆ ರಾಜ್ಯದ ಬಹುತೇಕ ಭಾಗ (Karnataka Drought) ತುತ್ತಾಗಿದೆ. ಅಲ್ಲದೆ, 236 ತಾಲೂಕುಗಳಲ್ಲಿ 223 ತಾಲೂಕುಗಳನ್ನು ಈಗಾಗಲೇ ಬರಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದೆ. ಮಳೆ ಇಲ್ಲದೆ ಬೆಳೆದ ಬೆಳೆ ಕೈಗೆ ಸಿಗದೆ ರೈತ ಕಂಗಾಲಾಗಿದ್ದಾನೆ. ಈ ಹಿನ್ನೆಲೆಯಲ್ಲಿ ರೈತರಿಗೆ ಅವರ ಜಮೀನಿಗೆ ಅನುಗುಣವಾಗಿ 2 ಸಾವಿರ ರೂಪಾಯಿವರೆಗೆ ಬೆಳೆ ಪರಿಹಾರ ಹಣವನ್ನು (Crop Compensation Money) ಡಿಬಿಟಿ ಮೂಲಕ ನೇರವಾಗಿ ಜಮೆ ಮಾಡುವುದಾಗಿ ಈಚೆಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಘೋಷಣೆ ಮಾಡಿದ್ದರು. ಈಗ ಈ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ (Revenue Minister Krishna Byre Gowda) ಸ್ಪಷ್ಟನೆ ನೀಡಿದ್ದು, ಮುಂದಿನ ವಾರದಲ್ಲಿ ಭಾಗಶಃ ರೈತರಿಗೆ ನೇರವಾಗಿ 2 ಸಾವಿರ ರೂಪಾಯಿ ವರೆಗೆ ಪರಿಹಾರದ ಹಣವನ್ನು ವರ್ಗಾವಣೆ ಮಾಡಲಾಗುವುದು ಎಂದು ಹೇಳಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಎನ್‌. ರವಿಕಮಾರ್ ಅವರು ಬರದ ಪರಿಹಾರದ ಬಗ್ಗೆ ಪ್ರಶ್ನೆ ಕೇಳಿದ್ದರು. ರೈತರಿಗೆ ಯಾವಾಗ ಬರ ಪರಿಹಾರ ನೀಡಲಾಗುತ್ತದೆ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ, ಈ ವರ್ಷ ಬರದಿಂದ ಜನರು ಸಾಕಷ್ಟು ಸಮಸ್ಯೆಯನ್ನು ಎದುರಿಸಿದ್ದಾರೆ. ಇದು ನಮ್ಮ ಗಮನಕ್ಕೆ ಬಂದಿದೆ. ರೈತರಿಗೆ ಅನುಕೂಲವಾಗುವಂತೆ ಸರ್ಕಾರ ಏನೆಲ್ಲ ಮಾಡಬೇಕೋ? ಯಾವೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕೋ? ಅದನ್ನು ನಾವು ನಿರಂತರವಾಗಿ ಮಾಡುತ್ತಾ ಬಂದಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ವಿಪತ್ತು ಪ್ರಾಧಿಕಾರ ಮೂರು ಸಭೆಯನ್ನು ನಡೆಸಿದೆ. ಸಂಪುಟ ಉಪ ಸಮಿತಿ ಸಹ ಇದಕ್ಕಾಗಿ ಕೆಲಸ ಮಾಡಿದೆ. ಈಗಾಗಲೇ 10 ಸಭೆಗಳನ್ನು ಬರದ ಸಲುವಾಗಿ ಮಾಡಿದ್ದೇವೆ. ದೇಶದ 12 ರಾಜ್ಯಗಳಲ್ಲಿ ಮುಂಗಾರು ಅವಧಿಯ ಬರಗಾಲ ಇದೆ. 18 ರಾಜ್ಯಗಳಲ್ಲಿ ಹಿಂಗಾರು ಅವಧಿಯಲ್ಲಿ ಬರಗಾಲ ಆವರಿಸಿದೆ. ಮುಂಗಾರು ಅವಧಿಯಲ್ಲಿ ಸೆಪ್ಟೆಂಬರ್ 13 ರಂದೇ ರಾಜ್ಯದಲ್ಲಿ ಬರಗಾಲ ಘೋಷಣೆ ಆಗಿತ್ತು. ಬೇರೆ ರಾಜ್ಯಗಳು ನಾವು ಘೋಷಿಸಿದ 2 ತಿಂಗಳ ನಂತರ ಘೋಷಣೆ ಮಾಡಿವೆ. ನಾವು ಎಲ್ಲರಿಗಿಂತ ಮೊದಲೇ ಬರವನ್ನು ಘೋಷಣೆ ಮಾಡಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಗೋಶಾಲೆ ಆರಂಭಕ್ಕೆ ಸೂಚಿಸಲಾಗಿದೆ

ಸೆಪ್ಟೆಂಬರ್ 22 ರಂದು ಮೊದಲ ಮನವಿಯನ್ನು ಕೇಂದ್ರಕ್ಕೆ ಮಾಡಿದ್ದೇವೆ. ಮೇವಿನ ಕೊರತೆ ಬರಬಹುದು ಎಂದು 7 ಲಕ್ಷ ಬಿತ್ತನೆ ಬೀಜದ ಕಿಟ್‌ಗಳನ್ನು ಬರಪೀಡಿತ ತಾಲೂಕುಗಳಲ್ಲಿ ರೈತರಿಗೆ ಕೊಟ್ಟಿದ್ದೇವೆ. 90 ವಸತಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಅದರಲ್ಲಿ 60 ಕಡೆ ಖಾಸಗಿ ಬೋರ್​ವೆಲ್​ ಬಾಡಿಗೆ ಪಡೆದಿದ್ದು, 25 ಕಡೆ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ಚಿತ್ರದುರ್ಗ ಸೇರಿ ಕೆಲವಡೆ ಹೆಚ್ಚಿನ ಸಮಸ್ಯೆ ಇದೆ, ಅಲ್ಲಿ ಗೋಶಾಲೆ ಆರಂಭಕ್ಕೆ ಸೂಚಿಸಲಾಗಿದೆ. ಜಿಲ್ಲಾಡಳಿತಗಳ ಬಳಿ 894 ಕೋಟಿ ಹಣವನ್ನು ಸಿದ್ಧವಿಟ್ಟಿದ್ದೇವೆ. ಕುಡಿಯುವ ನೀರಿನ ಸಮಸ್ಯೆ ಆದ 24 ಗಂಟೆಯ ಒಳಗೆ ಟ್ಯಾಂಕರ್ ಮೂಲಕವಾದರೂ ಪೂರೈಸಿ ಸಮಸ್ಯೆ ಪರಿಹಾರಕ್ಕೆ ಸೂಚಿಸಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಇದನ್ನೂ ಓದಿ: Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

ಕೇಂದ್ರದಿಂದ ನಮಗೆ ಹಣ ಬರಬೇಕು

ರಾಜ್ಯದ ರೈತರ ಸ್ಥಿತಿಗತಿ ಕಷ್ಟವಿದೆ. ಈ ಬಗ್ಗೆ ನಾವು ಬರ ಅಧ್ಯಯನಕ್ಕೆ ಬಂದ ತಂಡಕ್ಕೂ ಮನವರಿಕೆ ಮಾಡಿದ್ದೇವೆ. ರಾಜ್ಯಕ್ಕೆ ಬರಬೇಕಾದ ಹಣವನ್ನು ಬೇಗ ಬಿಡುಗಡೆ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೆವು, ಅವರು ಇನ್ನೂ ಈ ಬಗ್ಗೆ ಯಾವುದೇ ತೀರ್ಮಾನವನ್ನು ಮಾಡಿಲ್ಲ. ಹೀಗಾಗಿ ಭಾಗಶಃ ಪರಿಹಾರವಾಗಿ 2 ಸಾವಿರ ರೂಪಾಯಿವರೆಗೆ ಕೊಡಲು ಸಿಎಂ ಸಿದ್ದರಾಮಯ್ಯ ಅವರು ತೀರ್ಮಾನಿಸಿದ್ದಾರೆ. ಡಿಬಿಟಿ ಮೂಲಕ ಮುಂದಿನ ವಾರ ಭಾಗಶಃ ಪರಿಹಾರದ ಮೊದಲ ಕಂತನ್ನು ಹಾಕಲಿದ್ದೇವೆ. ಕೇಂದ್ರ ಸರ್ಕಾರದಿಂದ ಪರಿಹಾರದ ಹಣ ಬರುತ್ತಿದ್ದಂತೆ ಬಾಕಿ ಪರಿಹಾರದ ಹಣವು ರೈತರ ಖಾತೆಗೆ ಜಮೆ ಆಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

Continue Reading

ದೇಶ

ತೆರಿಗೆಗಳ್ಳರ ಮೇಲೆ ಐಟಿ ದಾಳಿ; ನೋಟು ಎಣಿಸಿ ಎಣಿಸಿ ಕೌಂಟಿಂಗ್ ಮೆಷಿನ್‌ಗೆ ಸುಸ್ತು!

IT Raids: ಒಡಿಶಾ ಮತ್ತು ಜಾರ್ಖಂಡ್‌ನಲ್ಲಿ ಲಿಕ್ಕರ್ ವ್ಯಾಪಾರಿಗಳ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದಲ್ಲಿ ನಗದನ್ನು ವಶಪಡಿಸಿಕೊಂಡಿದ್ದಾರೆ.

VISTARANEWS.COM


on

IT raids on liquor traders across Odisha and Jharkhand
Koo

ನವದೆಹಲಿ: ಒಡಿಶಾ ಮತ್ತು ಜಾರ್ಖಂಡ್‌ನಲ್ಲಿ (Odisha and Jharkhand) ಕಾರ್ಯಾಚರಣೆ ನಡೆಸುವ ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಕಂಪನಿಯ (Boudh Distilleries Private Limited) ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿದೆ(IT Raids). ಕಂಪನಿಯ ಆವರಣದಲ್ಲಿ ಬೃಹತ್ ಪ್ರಮಾಣದಲ್ಲಿ ಕರೆನ್ಸಿ ನೋಟುಗಳನ್ನು (Currency Notes) ಜಪ್ತಿ ಮಾಡಿದೆ. ಅಂದಾಜು 150 ಕೋಟಿ ರೂ.ಗೂ ಅಧಿಕ ಹಣವನ್ನು ಸೀಜ್ ಮಾಡಲಾಗಿದೆ. ಅಂದ ಹಾಗೆ, ಈ ಕಂಪನಿಯು ಕಾಂಗ್ರೆಸ್ ಸಂಸದ (Congress MP) ಧೀರಜ್‌ ಸಾಹು ಅವರೊಂದಿಗೆ ನಂಟು ಹೊಂದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆಶ್ಚರ್ಯಕರ ಸಂಗತಿ ಎಂದರೆ, ಜಪ್ತಿ ಮಾಡಲಾದ ಹಣವನ್ನು ಎಣಿಸಿ ಎಣಿಸಿ ಕೌಂಟಿಂಗ್ ಮೆಷಿನ್‌ಗಳು (Counting Machine) ಕೂಡ ಕೆಟ್ಟು ಹೋಗಿವೆ!

ಒಡಿಶಾ ಟಿವಿ ವರದಿಯ ಪ್ರಕಾರ, ದೇಶದ ಅತಿದೊಡ್ಡ ಪಶ್ಚಿಮ ಒಡಿಶಾದ ಮದ್ಯ ತಯಾರಿಕೆ ಮತ್ತು ಮಾರಾಟ ಸಂಸ್ಥೆಗಳಲ್ಲಿ ಒಂದಾದ ಬಲ್ಡಿಯೊ ಸಾಹು ಮತ್ತು ಗ್ರೂಪ್ ಆಫ್ ಕಂಪನಿಗಳ ಬೋಲಂಗಿರ್ ಕಚೇರಿಯಲ್ಲಿ ದಾಳಿಯ ಸಮಯದಲ್ಲಿ 150 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಬಾಲ್ಡಿಯೊ ಸಾಹು ಮತ್ತು ಗ್ರೂಪ್ ಆಫ್ ಕಂಪನಿಗಳು ಬೌದ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್‌ನ ಪಾಲುದಾರಿಕೆ ಸಂಸ್ಥೆಯಾಗಿದೆ ಎಂದು ವರದಿಯಾಗಿದೆ.

ಆರೋಪಿತ ಕಂಪನಿಗಳು ತೆರಿಗೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ತಮ್ಮ ವ್ಯಾಪಾರ ವಹಿವಾಟದ ಸಂಪೂರ್ಣ ಮಾಹಿತಿಯನ್ನು ನೀಡುತ್ತಿರಲಿಲ್ಲ ಎಂದು ಹೇಳಲಾಗುತ್ತಿದೆ. ಕಂಪನಿಯೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ಪುರುನಾಕಟಕದ ಉದ್ಯಮಿ ಅಶೋಕ್ ಕುಮಾರ್ ಅಗರ್ವಾಲ್ ಅವರ ನಿವಾಸದ ಮೇಲೂ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಬೋಲಂಗಿರ್‌ನಲ್ಲಿ ವಶಪಡಿಸಿಕೊಂಡ ಹಣವನ್ನು ಸಾಗಿಸಲು ಐಟಿ ಸಿಬ್ಬಂದಿ ಬ್ಯಾಗ್‌‌ಗಳಿಗೆ ಸಾಕಾಗಾಲಿಲ್ಲ. ನಗದು ಕಟ್ಟುಗಳನ್ನು ತುಂಬಲು ಖಾಲಿ ಚೀಲಗಳನ್ನು ತರಲಾಯಿತು. ಬುಧವಾರ ಯಂತ್ರಗಳು ಕೆಲಸ ಮಾಡುವುದನ್ನು ನಿಲ್ಲಿಸಿದ್ದರಿಂದ, 150 ಕ್ಕೂ ಹೆಚ್ಚು ಚೀಲಗಳು ಮತ್ತು ಚೀಲಗಳಲ್ಲಿ ಹಣವನ್ನು ಬೋಲಂಗಿರ್‌ನಲ್ಲಿರುವ ಎಸ್‌ಬಿಐ ಶಾಖೆಗೆ ತರಲಾಯಿತು ಮತ್ತು ಹಣದ ಎಣಿಕೆಯನ್ನು ಮುಂದುರಿಸಲಾಗುತ್ತದೆ ಎಂದು ವರದಿಯಾಗಿದೆ.

ಬೌಧ್ ಡಿಸ್ಟಿಲರೀಸ್ ಜೊತೆಗೆ ಜಾರ್ಖಂಡ್‌ನ ಖ್ಯಾತ ಉದ್ಯಮಿ ರಾಮಚಂದ್ರ ರುಂಗ್ಟಾ ಅವರ ಕಚೇರಿಗಳಲ್ಲೂ ಆದಾಯ ತೆರಿಗೆ ಇಲಾಖೆ ಶೋಧ ನಡೆಸಿದೆ. ಇಂದು ಬೆಳಿಗ್ಗೆಯಿಂದ ಆದಾಯ ತೆರಿಗೆ ಇಲಾಖೆಯು ರಾಮಗಢ, ರಾಂಚಿ ಮತ್ತು ಇತರ ಸ್ಥಳಗಳಲ್ಲಿ ಅವರ ಮನೆಗಳು ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯಾಚರಣೆ ಕೈಗೊಂಡಿದೆ. ವರದಿಗಳ ಪ್ರಕಾರ, ರಾಮಗಢ ಮತ್ತು ರಾಂಚಿಯ ರುಂಗ್ಟಾಗೆ ಸಂಬಂಧಿಸಿದ ವಿವಿಧ ಸ್ಥಳಗಳಲ್ಲಿ ದಾಳಿ ನಡೆಯುತ್ತಿದೆ. ಸಿಆರ್‌ಪಿಎಫ್ ಸಿಬ್ಬಂದಿ ಆದಾಯ ತೆರಿಗೆ ಅಧಿಕಾರಿಗಳಿಗೆ ಭದ್ರತೆ ಒದಗಿಸುತ್ತಿದ್ದಾರೆ. ರಾಮ್‌ಗಢ್‌ನಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಸಮೀಪವಿರುವ ರಾಮಚಂದ್ರ ರುಂಗ್ಟಾ ಅವರ ವಸತಿ ಕಚೇರಿಯಲ್ಲಿ ಅಧಿಕಾರಿಗಳು ಶೋಧ ನಡೆಸಿದ್ದಾರೆಂದು ತಿಳಿದು ಬಂದಿದೆ.

ಈ ಸುದ್ದಿಯನ್ನೂ ಓದಿ: IT Raids | ಡೋಲೋ 650 ಮಾತ್ರೆ ತಯಾರಿ ಕಂಪನಿಗೆ ಐಟಿ ದಾಳಿಯ ಡೋಸ್‌!

Continue Reading

ಕರ್ನಾಟಕ

Belagavi Winter Session : ನಾವೂ ಟೈಮಿಗೆ ಸರಿಯಾಗಿ ಬಂದಿದ್ದೀವಿ; ಸ್ಪೀಕರ್‌ ಜತೆ ಶಾಸಕರ ಜಗಳ!

Belagavi Winter Session : ವಿಧಾನಸಭೆ ಕಲಾಪಕ್ಕೆ ಸಮಯಕ್ಕೆ ಸರಿಯಾಗಿ ಹಾಜರಾಗುವ ಶಾಸಕರ ಹೆಸರು ಓದಿ ಹೇಳುವ ಸ್ಪೀಕರ್‌ ಯು.ಟಿ. ಖಾದರ್‌ ಅವರ ನಡೆ ಭಾರಿ ಕುತೂಹಲಹಕಾರಿಯಾಗಿ ಸಾಗಿದೆ.

VISTARANEWS.COM


on

Attendance Araga Jnanendra UT Khader Araga jnanendra
Koo

ಬೆಳಗಾವಿ: ಯು.ಟಿ. ಖಾದರ್‌ ಅವರು ವಿಧಾನಸಭೆಯ ಸ್ಪೀಕರ್‌ (Speaker UT Khader) ಆದ ಬಳಿಕ ಹೊಸ ಪದ್ಧತಿ ಶುರು ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಅಧಿವೇಶನಕ್ಕೆ ಶಾಸಕರು ತಡವಾಗಿ (Attendance Issue) ಬರುವುದನ್ನು ತಡೆಯಲು ಮೊದಲು ಬಂದವರಿಗೆ ಟೀ ಕಪ್‌ ಕೊಡುವುದು, ಹೆಸರು ಹೇಳುವುದು ಮೊದಲಾದ ಕ್ರಮಗಳಿಂದ ಸದನಕ್ಕೆ ಬೇಗ ಬರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ಹೇಗಿದೆ ಎಂದರೆ ಶಾಸಕರು ನಾ ಮುಂದು ತಾ ಮುಂದು ಎಂಬಂತೆ ಬೇಗ ಬೇಗನೆ ಬರುತ್ತಿದ್ದಾರೆ, ಮಾತ್ರವಲ್ಲ, ನಾನು ಬೇಗ ಬಂದಿದ್ದೀನಿ, ನನ್ನ ಹೆಸರು ಹೇಳಿಲ್ಲ ಎಂದು ಮಕ್ಕಳಂತೆ ವರಾತ ತೆಗೆಯಲು ಶುರು ಮಾಡಿದ್ದಾರೆ!

ಗುರುವಾರ ಕಲಾಪ ಆರಂಭದಲ್ಲೂ ಹೀಗೇ ಆಯಿತು. ಸ್ಪೀಕರ್‌ ಯು.ಟಿ. ಖಾದರ್‌ ಅವರು ಸದನದ ಕಲಾಪ ಆರಂಭವಾಗುತ್ತಿದ್ದಂತೆಯೇ ಸದನಕ್ಕೆ ಸಮಯಕ್ಕೆ ಸರಿಯಾಗಿ ಬಂದ ಸದಸ್ಯರ ಹೆಸರನ್ನು ಅವರು ಓದಿ ಹೇಳಿದರು. ಆದರೆ, ಇದನ್ನು ಕೇಳಿದ ಶಾಸಕರು ನಾನೂ ಟೈಮಿಗೆ ಸರಿಯಾಗಿ ಬಂದಿದ್ದೇನೆ, ನನ್ನ ಹೆಸರು ಯಾಕೆ ಹೇಳ್ತಿಲ್ಲ ಎಂದು ಜಗಳ ಶುರು ಮಾಡಿದರು.

ಹೀಗೆ ವರಾತ ತೆಗೆದವರು ಸಣ್ಣ ಸಣ್ಣ ನಾಯಕರೇನೂ ಅಲ್ಲ. ಹಿಂದೆ ಗೃಹ ಸಚಿವರಾಗಿದ್ದ ಆರಗ ಜ್ಞಾನೇಂದ್ರ ಅವರು ಕೂಡಾ ಇದ್ದಾರೆ. ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದ್ದನ್ನು ನೋಡಿದ ಅವರು, ನಾನು ಸಮಯಕ್ಕೆ ಸರಿಯಾಗಿ ಬಂದಿದ್ದೇನೆ, ನನ್ನನ್ನು ಯಾಕೆ ಗುರುತಿಸಿಲ್ಲ ಎಂದು ಸ್ಪೀಕರ್‌ ಅವರನ್ನು ಕೇಳಿದ್ದಾರೆ. ಅವರಲ್ಲದೆ ಇನ್ನೂ ಹಲವರು ಇದೇ ವಾದ ಮಾಡಿದರು.

ಆಗ ಯು.ಟಿ. ಖಾದರ್‌ ಅವರು, ಸದನ ಆರಂಭಕ್ಕೆ ಕೋರಂ ಬೇಕು ಅಲ್ವಾ? ಕೋರಂ ಭರ್ತಿಗೆ ಮೊದಲ 25 ಸದಸ್ಯರನ್ನು ಅಧಿಕಾರಿಗಳು ನೋಟ್‌ ಮಾಡಿ ಪಟ್ಟಿ ಕೊಡ್ತಾರೆ. ಸಿಸಿ ಕ್ಯಾಮೆರಾದಲ್ಲಿ ಎಲ್ಲವೂ ನೋಟ್‌ ಆಗಿರುತ್ತದೆ. ಏನಾದರೂ ಸಂಶಯ ಇದ್ದರೆ ನಿಮ್ಮನ್ನು ಕರೆಸಿ ಚೆಕ್ ಮಾಡ್ತೇವೆ, ಅನ್ಯಾಯ ಆದರೆ ನ್ಯಾಯ ಕೊಡ್ತೇವೆ ಎಂದು ಹೇಳಿದರು.

ಸಮಯಕ್ಕೆ ಮೊದಲು ಬರುವ ಎಲ್ಲರನ್ನೂ ಪರಿಗಣಿಸಿ

ಈ ವೇಳೆ ಮಧ್ಯ ಪ್ರವೇಶ ಮಾಡಿದ ವಿರೋಧ ಪಕ್ಷದ ನಾಯಕ ಆರ್.‌ಅಶೋಕ್ ಮಧ್ಯಪ್ರವೇಶ ಮಾಡಿದರು. ಈಗ ಕೋರಂ ಆಗುವವರೆಗೆ ಬರುವ ಸದಸ್ಯರನ್ನು ಮಾತ್ರ ಲೆಕ್ಕ ಹಾಕಲಾಗುತ್ತದೆ. ನಂತರ ಬರುವವರನ್ನೂ ಪರಿಗಣಿಸುತ್ತಿಲ್ಲ. ಆದರೆ ಕೋರಂ ಬಿಟ್ಟು ತಾವು ಸದನ ಆರಂಭಕ್ಕೆ ಮೊದಲು ಯಾರೇ ಬಂದರು ಪರಿಗಣಿಸಿ ಎಂದು ಮನವಿ ಮಾಡಿದರು.

ಆಗ ತಮಾಷೆಯಾಗಿ ಕಾಳೆದ ಯು.ಟಿ. ಖಾದರ್‌ ಅವರು, ಅಶೋಕ್‌ ಅವರೇ ಇದನ್ನು ನೀವು ಸ್ಪೀಕರ್ ಆದಾಗ ಅದನ್ನೂ ಮಾಡಿ ಎಂದು ಹೇಳಿದರು. ಇಷ್ಟು ಹೊತ್ತಿಗೆ ಮಧ್ಯ ಪ್ರವೇಶ ಮಾಡಿದ ಸುನಿಲ್‌ ಕುಮಾರ್‌ ಅವರು, ನಿಮ್ಮ ಹಾಗೂ ಅಶೋಕ್ ಗೆಳೆತನ ಚೆನ್ನಾಗಿದೆ ಎಂದು ಬಹಿರಂಗವಾಯಿತು. ಅಶೋಕ್ ಸ್ಪೀಕರ್ ಆಗಬೇಕು ಎಂದು ನೀವು ಹೇಳಿದ್ದನ್ನು ಅನುಮೋದಿಸುತ್ತೇನೆ ಎಂದರು.

ಯು.ಟಿ. ಖಾದರ್‌ ಅವರು ಯಾರೆಲ್ಲ ಸಮಯಕ್ಕೆ ಸರಿಯಾಗಿ ಹಾಜರಾಗಿದ್ದಾರೆ ಎಂದು ಪಟ್ಟಿ ಓದಿ ಹೇಳುವುದರಿಂದ ಉಳಿದವರು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಎಂಬ ಸಂದೇಶ ಕ್ಷೇತ್ರಕ್ಕೆ ರವಾನೆಯಾದರೆ ತಮ್ಮ ಕಥೆ ಏನು ಎನ್ನುವುದು ಎಲ್ಲ ಶಾಸಕರಿಗೂ ಆತಂಕ ಮೂಡಿಸಿದೆ. ಹೀಗಾಗಿ ಎಲ್ಲರೂ ತಾಮುಂದು, ನಾ ಮುಂದು ಎಂಬಂತೆ ಬರುತ್ತಿದ್ದಾರೆ!

ಇದನ್ನೂ ಓದಿ: UT Khader: ಉಡುಪಿ ಶ್ರೀಕೃಷ್ಣನಲ್ಲಿಗೆ ಸ್ಪೀಕರ್‌ ಖಾದರ್‌ ಭೇಟಿ; ಪ್ರಾರ್ಥಿಸಿದ್ದೇನು?

ವಿಧಾನಸಭೆಗೆ ಶಾಸಕರ ಹಾಜರಾತಿ ಕೊರತೆ

ಅಂದ ಹಾಗೆ ಕಲಾಪ ಆರಂಭದ ಹೊತ್ತಿನಲ್ಲಿ ಕಾಂಗ್ರೆಸ್ ನಿಂದ 55, ಬಿಜೆಪಿಯಿಂದ 40 ಮತ್ತು ಜೆಡಿಎಸ್‌ನಿಂದ 10 ಶಾಸಕರು ಹಾಜರಾಗಿದ್ದರು. ಉಳಿದವರು ಗೈರು ಹಾಜರಾಗಿದ್ದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವು ಕಾಂಗ್ರೆಸ್‌ ಜನಪ್ರತಿನಿಧಿಗಳು ತೆಲಂಗಾಣ ಸಿಎಂ ರೇವಂತ್‌ ರೆಡ್ಡಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಹೋಗಿದ್ದರು.

Continue Reading

ಕರ್ನಾಟಕ

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Belagavi Winter Session : ಮುಂದಿನ ಬಜೆಟ್‌ನಲ್ಲಿ ಸೈಕಲ್ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಆರ್ಥಿಕ ಇಲಾಖೆ ಜತೆ ಚರ್ಚಿಸಿ ಕ್ರಮ ವಹಿಸುವುದಾಗಿ ಮಧು ಬಂಗಾರಪ್ಪ ಹೇಳಿದ್ದಾರೆ.

VISTARANEWS.COM


on

Madhu Bangarappa in Belagavi Winter Session
Koo

ಬೆಳಗಾವಿ: ಪ್ರೌಢಶಾಲೆಗೆ ಹೋಗುವ ಹೆಣ್ಣು ಮಕ್ಕಳಿಗೆ ಬಿ.ಎಸ್.‌ ಯಡಿಯೂರಪ್ಪ (BS Yediyurappa) ಅವರು ಸಿಎಂ ಆಗಿದ್ದಾಗ ನೀಡಿದ್ದ ಉಚಿತ ಸೈಕಲ್‌ ಯೋಜನೆಗೆ ಮರು ಚಾಲನೆ ಸಿಗಲಿದೆ. ಇಂಥದ್ದೊಂದು ಭರವಸೆಯನ್ನು ಬೆಳಗಾವಿ ಅಧಿವೇಶನದಲ್ಲಿ (Belagavi Winter Session) ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ನೀಡಿದ್ದಾರೆ.

ಸರ್ಕಾರಿ ಶಾಲೆಗಳ ಎಂಟನೇ ತರಗತಿ ಮಕ್ಕಳಿಗೆ ಮತ್ತೆ ಸೈಕಲ್ ವಿತರಣೆ ಮಾಡಬೇಕು ಎಂದು ಶಾಸಕ ಪ್ರದೀಪ್‌ ಈಶ್ವರ್‌ (MLA Pradeep Easwar) ಅವರು ಪ್ರಶ್ನೋತ್ತರ ವೇಳೆ ಒತ್ತಾಯ ಮಾಡಿದಾಗ, ಪ್ರತಿಕ್ರಿಯೆ ನೀಡಿದ ಸಚಿವ ಮಧು ಬಂಗಾರಪ್ಪ, ಮುಂದಿನ ಬಜೆಟ್‌ನಲ್ಲಿ ಸೈಕಲ್ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಆರ್ಥಿಕ ಇಲಾಖೆ (Finance Department) ಜತೆ ಚರ್ಚಿಸಿ ಕ್ರಮ ವಹಿಸುವುದಾಗಿ ಹೇಳಿದ್ದಾರೆ.

ಈ ವೇಳೆ ಪ್ರದೀಪ್ ಈಶ್ವರ್ ಮಾತನಾಡಿ, ಇದರೊಟ್ಟಿಗೆ ಎರಡು ಜತೆ ಶೂ, ಸಾಕ್ಸ್ ಬದಲು ನಾಲ್ಕು ಜತೆ ವಿತರಣೆ ಮಾಡಿದೆ ಮಕ್ಕಳಿಗೆ ಅನುಕೂಲವಾಗುತ್ತದೆ ಎಂದು ಒತ್ತಾಯಿಸಿದರು. ಇದರ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಉತ್ತರ ನೀಡಿದ್ದಾರೆ.

ಧ್ವನಿಗೂಡಿಸಿದ‌ ಆರ್. ಅಶೋಕ್

ಈ ವೇಳೆ ಪತಿ ಪಕ್ಷ ನಾಯಕ ಆರ್.‌ ಅಶೋಕ್ ಮಧ್ಯಪ್ರವೇಶಿಸಿ, ಇಡೀ ರಾಜ್ಯದಲ್ಲಿ ಸೈಕಲ್ ವಿತರಣೆಯನ್ನು ಪುನಾರಂಭಿಸಿ. ಬಿ.ಎಸ್.‌ ಯಡಿಯೂರಪ್ಪ ತಂದಿರುವ ಯೋಜನೆ ಅದಾಗಿದೆ. ದೂರದಿಂದ ಬರುವ ಮಕ್ಕಳಿಗೆ ಸಹಾಯ ಆಗುತ್ತದೆ ಎಂದು ಒತ್ತಾಯ ಮಾಡಿದರು.

ಇದನ್ನೂ ಓದಿ: Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

ಬಿಜೆಪಿ ಅವಧಿಯಲ್ಲೇ ಸ್ಥಗಿತವಾಗಿತ್ತು

ಇದಕ್ಕೆ ಉತ್ತರಿಸಿದ ಸಚಿವ ಮಧು ಬಂಗಾರಪ್ಪ, ಸೈಕಲ್ ವಿತರಣೆ ಬಿಜೆಪಿ ಕಾಲದಲ್ಲೇ ಸ್ಥಗಿತ ಆಗಿದೆ. ನಿಮ್ಮವರೇ ಆರಂಭಿಸಿ ನಿಮ್ಮ ಕಾಲದಲ್ಲೇ ಸ್ಥಗಿತ ಆಯಿತು, ಹೀಗಾಗಬಾರದಿತ್ತು. ಈಗ ನಮ್ಮ ಸರ್ಕಾರ ಸೈಕಲ್ ವಿತರಣೆಗೆ ಪರಿಶೀಲಿಸಿ ಕ್ರಮ ವಹಿಸಲಿದೆ ಎಂದು ಟಾಂಗ್‌ ಕೊಟ್ಟರು.

ಹಳೇ ಪಿಂಚಣಿ ಶೀಘ್ರ ಜಾರಿ? 10 ದಿನದಲ್ಲಿ ಸಮಿತಿ ಪುನಾರಚನೆ: ಕೃಷ್ಣ ಬೈರೇಗೌಡ

ಬೆಳಗಾವಿ: ರಾಜ್ಯದಲ್ಲಿ ಹಳೇ ಪಿಂಚಣಿ ಪದ್ಧತಿಯನ್ನೇ (Old Pension Scheme) ಮರು ಜಾರಿ ಮಾಡಬೇಕು. ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದು ಮಾಡಬೇಕು (NPS Cancellation) ಎಂದು ಆಗ್ರಹಿಸುತ್ತಿರುವ ಸರ್ಕಾರಿ ನೌಕರರಿಗೆ (Government employees) ಈ ಬಾರಿ ರಾಜ್ಯ ಸರ್ಕಾರದಿಂದ ಗುಡ್‌ ನ್ಯೂಸ್‌ ಸಿಗಲಿದೆಯೇ? ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಈ ಸಂಬಂಧ ಇರುವ ಸಮಿತಿಯನ್ನು 10 ದಿನದೊಳಗೆ ಪುನಾರಚನೆ ಮಾಡುತ್ತೇವೆ. ಆದಷ್ಟು ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಬೆಳಗಾವಿ ಅಧಿವೇಶನದಲ್ಲಿ (Belagavi Winter Session) ಸಚಿವ ಕೃಷ್ಣ ಬೈರೇಗೌಡ (Minister Krishna Byre Gowda) ಹೇಳಿದ್ದಾರೆ.

ಹಳೇ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ ಸರ್ಕಾರ ತೆಗೆದುಕೊಂಡ ಕ್ರಮ ಏನು? ಎಂಬ ಜೆಡಿಎಸ್‌ನ ಮರಿತಿಬ್ಬೇಗೌಡ, ಬಿಜೆಪಿಯ ಎಸ್.ವಿ. ಸಂಕನೂರ್ ಅವರು ವಿಧಾನ ಪರಿಷತ್‌ನಲ್ಲಿ ಪ್ರಶ್ನೆ ಕೇಳಿದ್ದರು. ಇದಕ್ಕೆ ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ, ಹಿಂದೆ ಏಕ ವ್ಯಕ್ತಿಯ ಸಮಿತಿಯನ್ನು ಮಾಡಿದ್ದರು. ಈಗ ಆ ಸಮಿತಿಯನ್ನು ಪರಿಷ್ಕರಣೆ ಮಾಡಿ ನಾಲ್ಕೈದು ಸದಸ್ಯರ ನೇಮಕ ಮಾಡಲಾಗುವುದು. ಬಳಿಕ ಆ ಸಮಿತಿ ಕಾರ್ಯವ್ಯಾಪ್ತಿ ಅಳವಡಿಸುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ: CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

ವಾಜಪೇಯಿ ಬಗ್ಗೆ ನಮಗೆ ನಂಬಿಕೆ ಇದೆ

ಕಾಲಮಿತಿಯ ಬಗ್ಗೆಯೂ ಪರಿಶೀಲನೆ ಮಾಡುತ್ತೇವೆ. ರಾಜಸ್ಥಾನ್, ಛತ್ತೀಸಗಢ, ಪಂಜಾಬ್‌ನಿಂದ ಇದರ ಬಗೆಗ ಆದೇಶ ಆಗಿದೆ. ಆದರೆ, ಅಲ್ಲಿ ಇನ್ನು ಜಾರಿಗೊಳಿಸಿಲ್ಲ. ಯಾರನ್ನು ಪಿಂಚಣಿಯಿಂದ ಹೊರಗಿಡುವ ಪ್ರಶ್ನೆ ಇಲ್ಲ. ನಾನು ಅಟಲ್‌ ಬಿಹಾರಿ ವಾಜಪೇಯಿಯವರ ಮೇಲೆ ನಂಬಿಕೆ ಇಟ್ಟಿದ್ದೇನೆ. ಅವರ ಆಡಳಿತದ ಬಗ್ಗೆಯೂ ನಂಬಿಕೆ ಇಟ್ಟಿದ್ದೇನೆ. ವಾಜಪೇಯಿ ಅವರು ಎನ್‌ಪಿಎಸ್ ತರುವಾಗ ಎಲ್ಲ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಜಾರಿಗೆ ತಂದಿರುತ್ತಾರೆ. ಆದರೆ, ನಿಮಗೆ ಅವರ ನಿರ್ಧಾರದ ಬಗ್ಗೆ ಗೌರವ ಇಲ್ಲದಿರಬಹುದು, ನಮಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

10 ದಿನದೊಳಗೆ ಸಮಿತಿ ಪುನರ್ ರಚನೆ

ಅನುದಾನಿತ ಸಂಸ್ಥೆಯಲ್ಲಿ ಸಿಬ್ಬಂದಿಗೆ ತೊಂದರೆ ಆಗಿದೆ ಎಂಬುದನ್ನು ನಾವು ಒಪ್ಪುತ್ತೇವೆ. ಶಿಕ್ಷಣ ಸಂಸ್ಥೆಯವರು ಕೊಡುಗೆ ನೀಡಬೇಕು. ನಮಗೆ ಅದನ್ನು ಪರಿಹರಿಸುವ ಮನಸ್ಸಿದೆ. ಅದನ್ನ ಮಾಡೇ ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಸೂಚನೆ ಕೊಟ್ಟಿದ್ದಾರೆ. 10 ದಿನದೊಳಗೆ ಸಮಿತಿ ಪುನರ್ ರಚನೆ ಮಾಡುತ್ತೇವೆ ಎಂದು ಇದೇ ವೇಳೆ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.

ಶೀಘ್ರದಲ್ಲೇ ಆರ್ಥಿಕ ಇಲಾಖೆ ಜತೆ ಸಿಎಂ ಸಭೆ

ಎನ್‌ಪಿಎಸ್‌ ತೆಗೆದು ಒಪಿಎಸ್‌ ಅನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತಂದರೆ ಮುಂದಾಗುವ ಸಾಧಕ – ಬಾಧಕಗಳು ಏನು? ರಾಜ್ಯದ ಮೇಲೆ ಆಗುವ ಆರ್ಥಿಕ ಹೊರೆ ಏನು? ಈಗಿರುವ ಎಲ್ಲ ಲೆಕ್ಕಾಚಾರಗಳ ನಡುವೆ ಅದನ್ನು ಹೊಂದಾಣಿಕೆ ಮಾಡಿಕೊಂಡು ಹೋಗಬಹುದಾ ಎಂದು ಸಿಎಂ ಸಿದ್ದರಾಮಯ್ಯ ಅವರು ಆರ್ಥಿಕ ಇಲಾಖೆ ಜತೆ ಶೀಘ್ರದಲ್ಲಿಯೇ ಸಭೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Nandini Milk: ಮತ್ತೆ ನಂದಿನಿ ಹಾಲಿನ ದರ ಏರಿಕೆ? ಯಾವಾಗ? ಎಷ್ಟು ಹೆಚ್ಚಳ ಮಾಡಬಹುದು?

ಡಿಸೆಂಬರ್‌ನಲ್ಲಿ ಎನ್‌ಪಿಎಸ್‌ ನೌಕರರ ಸಮಾವೇಶ

ಡಿಸೆಂಬರ್‌ನಲ್ಲಿ ಎನ್‌ಪಿಎಸ್‌ ನೌಕರರ ಸಮಾವೇಶ ನಡೆಯುತ್ತಲಿದ್ದು, ಇದಕ್ಕೆ ಸಿಎಂ ಸಿದ್ದರಾಮಯ್ಯ ಅವರನ್ನು ಆಹ್ವಾನ ಮಾಡಲು ತಯಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸಹಜವಾಗಿ ಎನ್‌ಪಿಎಸ್‌ ನೌಕರರು ಈ ಸಮಾವೇಶದಲ್ಲಿ ಒಪಿಎಸ್‌ ಜಾರಿಗಾಗಿ ಸಿಎಂ ಎದುರು ಹಕ್ಕೊತ್ತಾಯವನ್ನು ಮಂಡನೆ ಮಾಡುತ್ತಾರೆ. ಹಾಗಾಗಿ ಈ ಬಗ್ಗೆ ಮೊದಲೇ ಸಾಧಕ – ಬಾಧಕಗಳ ಬಗ್ಗೆ ಆರ್ಥಿಕ ಇಲಾಖೆ ಜತೆ ಸಭೆ ನಡೆಸಿ ಒಂದು ತೀರ್ಮಾನಕ್ಕೆ ಬಂದರೆ ಸಮಾವೇಶದಲ್ಲಿ ಘೋಷಣೆ ಮಾಡಲು ಅನುಕೂಲ ಆಗುತ್ತದೆ ಎಂಬುದು ಸಿಎಂ ಸಿದ್ದರಾಮಯ್ಯ ಅವರ ಲೆಕ್ಕಾಚಾರ ಆಗಿದೆ ಎಂದು ಹೇಳಲಾಗಿದೆ. ಆದರೆ, ಇನ್ನು 10 ದಿನದಲ್ಲಿ ಸಮಿತಿಯನ್ನು ಪುನಾರಚನೆ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಹೀಗಾಗಿ ಸದ್ಯಕ್ಕೆ ಹಳೇ ಪಿಂಚಣಿ ಬಗ್ಗೆ ಸರ್ಕಾರ ಘೋಷಣೆ ಮಾಡುವ ಸಾಧ್ಯತೆ ಕಡಿಮೆಯೇ ಎಂದು ಹೇಳಲಾಗಿದೆ.

Continue Reading
Advertisement
Karnataka Drought
ಕರ್ನಾಟಕ4 mins ago

Karnataka Drought: ಮುಂದಿನ ವಾರ ಡಿಬಿಟಿ ಮೂಲಕ ರೈತರಿಗೆ ಬರ ಪರಿಹಾರ; 2 ಸಾವಿರ ರೂ. ವರೆಗೆ ಜಮೆ

IT raids on liquor traders across Odisha and Jharkhand
ದೇಶ6 mins ago

ತೆರಿಗೆಗಳ್ಳರ ಮೇಲೆ ಐಟಿ ದಾಳಿ; ನೋಟು ಎಣಿಸಿ ಎಣಿಸಿ ಕೌಂಟಿಂಗ್ ಮೆಷಿನ್‌ಗೆ ಸುಸ್ತು!

Attendance Araga Jnanendra UT Khader Araga jnanendra
ಕರ್ನಾಟಕ28 mins ago

Belagavi Winter Session : ನಾವೂ ಟೈಮಿಗೆ ಸರಿಯಾಗಿ ಬಂದಿದ್ದೀವಿ; ಸ್ಪೀಕರ್‌ ಜತೆ ಶಾಸಕರ ಜಗಳ!

Madhu Bangarappa in Belagavi Winter Session
ಕರ್ನಾಟಕ44 mins ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Pressmeet for Demand for construction of bypass road in Yallapur
ಉತ್ತರ ಕನ್ನಡ49 mins ago

Uttara Kannada News: ಯಲ್ಲಾಪುರ ಪಟ್ಟಣದಲ್ಲಿ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ಒತ್ತಾಯ

Israel
ಪ್ರಮುಖ ಸುದ್ದಿ51 mins ago

Israel Palestine War: ಅರ್ಧದಷ್ಟು ಹಮಾಸ್ ಕಮಾಂಡರ್‌ಗಳು ಫಿನಿಷ್! ಇಸ್ರೇಲ್ ಹೇಳಿಕೆ

bengaluru bulls kiccha sudeep
ಕ್ರೀಡೆ51 mins ago

ಬೆಂಗಳೂರು ಬುಲ್ಸ್​ಗೆ ಫುಲ್ ಚಾರ್ಜ್​ ಮಾಡಲು ಬರಲಿದ್ದಾರೆ ಕಿಚ್ಚ ಸುದೀಪ್

self harming by wadi Acc cement Depute Director
ಕರ್ನಾಟಕ1 hour ago

Self Harming : ಅದಾನಿ ಗ್ರೂಪ್‌ ಕಾರ್ಖಾನೆಯ ಡೆಪ್ಯೂಟಿ ಮ್ಯಾನೇಜರ್ ಸೂಸೈಡ್‌!

A girl shoots her classmate and herself with shotgun
ವಿದೇಶ1 hour ago

viral video: ಸಹಪಾಠಿಗೆ ಗುಂಡು ಹೊಡೆದು ತಾನೂ ಸತ್ತ 14 ವರ್ಷದ ವಿದ್ಯಾರ್ಥಿನಿ!

Flax Seeds Benefits For Hair
ಆರೋಗ್ಯ1 hour ago

Flax Seeds Benefits For Hair: ಚಳಿಗಾಲದಲ್ಲಿ ಕೂದಲ ಆರೋಗ್ಯಕ್ಕೆ ಅಗಸೆಬೀಜ ಸೂಪರ್‌!

Sharmitha Gowda in bikini
ಕಿರುತೆರೆ2 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ2 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

7th Pay Commission
ನೌಕರರ ಕಾರ್ನರ್1 year ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

Bigg Boss- Saregamapa 20 average TRP
ಕಿರುತೆರೆ2 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ2 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

DCC Bank Recruitment 2023
ಉದ್ಯೋಗ10 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Karnataka bandh Majestic
ಕರ್ನಾಟಕ2 months ago

Bangalore Bandh Live: ಚರ್ಚಿಲ್ ಮಾತು ಉಲ್ಲೇಖಿಸಿ ಸಿಎಂಗೆ ಜಲಪಾಠ ಮಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ!

Kannada Serials
ಕಿರುತೆರೆ2 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Rajendra Singh Gudha
ದೇಶ5 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

kpsc recruitment 2023 pdo recruitment 2023
ಉದ್ಯೋಗ5 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Madhu Bangarappa in Belagavi Winter Session
ಕರ್ನಾಟಕ44 mins ago

Belagavi Winter Session: ಮುಂದಿನ ವರ್ಷ 8ನೇ ತರಗತಿಗೆ ಉಚಿತ ಸೈಕಲ್‌: ಸಚಿವ ಮಧು ಬಂಗಾರಪ್ಪ

Veer Savarkar and Priyank Kharge
ಕರ್ನಾಟಕ2 hours ago

Veer Savarkar: ನನಗೆ ಬಿಟ್ಟರೆ ಇವತ್ತೇ ಸಾವರ್ಕರ್‌ ಫೋಟೊ ತೆಗೆದು ಹಾಕ್ತೇನೆ: ಸಚಿವ ಪ್ರಿಯಾಂಕ್‌ ಖರ್ಗೆ

CM-Siddaramaiah
ಕರ್ನಾಟಕ7 hours ago

CM Siddaramaiah: ಮೌಲ್ವಿ ಬಗ್ಗೆ ಕೇಂದ್ರದಿಂದ ತನಿಖೆ ನಡೆಸಿ ಪ್ರೂವ್‌ ಮಾಡಲಿ; ಯತ್ನಾಳ್‌ಗೆ ಸಿಎಂ ಸವಾಲು

Dina Bhavihsya
ಪ್ರಮುಖ ಸುದ್ದಿ14 hours ago

Dina Bhavishya: ಮದುವೆಗಿದ್ದ ಅಡೆತಡೆಗಳು ಮಾಯ; ಈ ರಾಶಿಯವರಿಗೆ ವಿವಾಹ ಯೋಗ!

R ashok and CM siddaramiah in Karnataka Assembly Session
ಕರ್ನಾಟಕ22 hours ago

Belagavi Winter Session: ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡ್ತೀರಿ; ರೈತರಿಗೆ 2000 ರು. ಮಾತ್ರವೇ? ಬಿಜೆಪಿ ಕಿಡಿ

CM Siddaramaiah and Tanveer
ಕರ್ನಾಟಕ1 day ago

CM Siddaramaiah: ಸಿಎಂ ಪಕ್ಕ ಐಸಿಸ್‌ ಸಂಪರ್ಕಿತ ಆರೋಪಕ್ಕೆ ಫೋಟೊ ಸಾಕ್ಷಿ ಕೊಟ್ಟ ಯತ್ನಾಳ್!

MLA Basanagouda Patil Yatnal and CM Siddaramaiah
ಕರ್ನಾಟಕ1 day ago

CM Siddaramaiah: ಮುಸ್ಲಿಂ ಸಮಾವೇಶದಲ್ಲಿ ಸಿಎಂ ಪಕ್ಕ ಕುಳಿತಿದ್ದ ಐಸಿಸ್‌ ಸಂಪರ್ಕಿತ; ಸಾಕ್ಷಿ ಕೊಡುವೆನೆಂದ ಯತ್ನಾಳ್‌

We will catch the wild elephant that killed Arjuna
ಕರ್ನಾಟಕ1 day ago

ಕಾರ್ಯಾಚರಣೆ ಸ್ಥಗಿತ; ಅರ್ಜುನನ ಕೊಂದ ಕಾಡಾನೆಯನ್ನು ಹಿಡಿದೇ ತೀರುವೆ-ಮಾವುತನ ಶಪಥ!

Government Job Vistara Exclusive and CM Siddaramaiah
ಉದ್ಯೋಗ1 day ago

Government Job: 2.47 ಲಕ್ಷ ಹುದ್ದೆ ಖಾಲಿ: ಸದನದಲ್ಲಿ ಸದ್ದು ಮಾಡಿದ ವಿಸ್ತಾರ EXCLUSIVE ಸ್ಟೋರಿ

Government Job Vistara Exclusive
ಉದ್ಯೋಗ1 day ago

Government Job : ‘ಖಾಲಿ’ ಸರ್ಕಾರದಲ್ಲಿ ಉದ್ಯೋಗಕ್ಕಿಲ್ಲ ಗ್ಯಾರಂಟಿ; ಭರ್ತಿಯಾಗದ 2.47 ಲಕ್ಷ ಹುದ್ದೆ!

ಟ್ರೆಂಡಿಂಗ್‌