Communal Harmony : ದರ್ಗಾದಲ್ಲೇ ಗಣಪತಿ ಪ್ರತಿಷ್ಠಾಪನೆ; ಘಂಟೆ ಬಡಿದು ಜೈ ಗಣೇಶ ಎಂದ ಮುಸ್ಲಿಮರು, ಎಂಥಾ ಸೌಹಾರ್ದ! - Vistara News

ಕರ್ನಾಟಕ

Communal Harmony : ದರ್ಗಾದಲ್ಲೇ ಗಣಪತಿ ಪ್ರತಿಷ್ಠಾಪನೆ; ಘಂಟೆ ಬಡಿದು ಜೈ ಗಣೇಶ ಎಂದ ಮುಸ್ಲಿಮರು, ಎಂಥಾ ಸೌಹಾರ್ದ!

Communal Harmony : ಬೆಳಗಾವಿಯ ಬೈಲಹೊಂಗಲದ ಕಂಠಿ ಗಲ್ಲಿಯ ದರ್ಗಾದಲ್ಲಿ ಮುಸ್ಲಿಮರೇ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಾರೆ. ಹಿಂದುಗಳು ಜತೆಯಾಗಿ ನಿಂತು ಪ್ರಾರ್ಥಿಸುತ್ತಾರೆ. ಭಾರತದ ಸೌಹಾರ್ದ ಪರಂಪರೆ ಅತ್ಯುತ್ತಮ ನಿದರ್ಶನವೊಂದು ಈಗಲೂ ಜೀವಂತವಾಗಿದೆ.

VISTARANEWS.COM


on

Bailahongala dargah Ganeshothsava
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಳಗಾವಿ: ಜಾತಿ, ಧರ್ಮಗಳ ಸಂಘರ್ಷ, ಅಪನಂಬಿಕೆ, ದ್ವೇಷಗಳೇ ತುಂಬಿಕೊಳ್ಳುತ್ತಿರುವ ಕಾಲದಲ್ಲಿ ಮನುಷ್ಯ ನಿಜವಾಗಿಯೂ ಬದುಕಬೇಕಾದ ಬಗೆಗಳು ಆಗಾಗ, ಅಲ್ಲಲ್ಲಿ ತೆರೆದುಕೊಳ್ಳುತ್ತವೆ. ಹಿಂದು-ಮುಸ್ಲಿಮರ ಸ್ನೇಹ ಭಾವದ ಕಾಲವಳಿದು ದ್ವೇಷ ಭಾವವೇ ಉಕ್ಕೇರುತ್ತಿರುವ ಹಂತದಲ್ಲಿ ನಡೆಯುತ್ತಿರುವ ಈ ವಿದ್ಯಮಾನಗಳು (Communal Harmony) ನಿಜಾರ್ಥದಲ್ಲಿ ಕತ್ತಲ ಸುರಂಗದ ಕೊನೆಯಲ್ಲಿರುವ ಬೆಳಕಿನ ಹಣತೆಗಳು ಅನಿಸುತ್ತವೆ. ಇಷ್ಟೊಂದು ಖುಷಿಯಿಂದ ವಿಚಾರವನ್ನು ಹೇಳುವುದಕ್ಕೆ ನಿಜಕ್ಕೂ ಒಂದು ಕಾರಣವಿದೆ.

ಬೆಳಗಾವಿ ಜಿಲ್ಲೆಯ (Belagavi News) ಬೈಲಹೊಂಗಲ ಪಟ್ಟಣದ ಕಂಠಿ ಗಲ್ಲಿಯಲ್ಲಿ (Kanti galli in Bailahongala) ಮುಸ್ಲಿಮರೇ ಮುಂದೆ ನಿಂತು ತಮ್ಮದೇ ದರ್ಗಾದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ (Ganeshothsava at Dargah) ತಾವೇ ಪೂಜೆ ಮಾಡಿ, ತಾವೇ ಘಂಟಾಘೋಷ ಮೊಳಗಿಸಿ ಜೈಗಣೇಶ (Muslims Chanted Jai Ganesha) ಎಂದು ಭಕ್ತಿಯಿಂದ, ಹೃದಯಾಂತರಾಳದಿಂದ ಜಯೋಘೋಷ ಮಾಡಿದ್ದಾರೆ. ಇದಕ್ಕೆ ಅಲ್ಲಿನ ಎಲ್ಲ ಹಿಂದುಗಳು ಸಹವರ್ತಿಗಳಾಗಿ, ಸಾಕ್ಷಿಗಳಾಗಿ ಸಂಭ್ರಮಿಸಿದ್ದಾರೆ.

Bailahongala dargah Ganeshothsava communal harmony 2
ಈ ಗಣೇಶನಿಗೆ ಮುಸ್ಲಿಮರಿಂದಲೇ ಆರತಿ ನಡೆಯುತ್ತದೆ, ಹಿಂದೂಗಳು ಮಾರ್ಗದರ್ಶನ ಮಾಡುತ್ತಾರೆ

ಬೈಲಹೊಂಗಲ ಪಟ್ಟಣದ ಕಂಠಿ ಗಲ್ಲಿಯಲ್ಲಿರುವ ಫಕ್ಕೀರಸ್ವಾಮಿ ದರ್ಗಾದಲ್ಲಿ (Fakeeraswamy Dargah at Kantigalli) ನಡೆದಿರುವ ವಿದ್ಯಮಾನ ಇದು. ಹಾಗಂತ ಇದೇನು ಹೊಸ ಸಂಪ್ರದಾಯ ಹುಟ್ಟು ಹಾಕಿದ್ದಲ್ಲ. ಯಾವಾಗ ಬಾಲ ಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವದ ಪರಿಕಲ್ಪನೆ ಸೃಷ್ಟಿಸಿದರೋ ಅಥವಾ ಬೆಳಗಾವಿಯಲ್ಲಿ ಗಣೇಶೋತ್ಸವದ ಸಂಭ್ರಮ ಯಾವಾಗ ಶುರುವಾಯಿತೋ ಅಂಥ ಸ್ವಾತಂತ್ರ್ಯ ಪೂರ್ವ ಕಾಲದಿಂದಲೇ ಹಿಂದು ಮತ್ತು ಮುಸ್ಲಿಮರು ಸೇರಿ ಆಚರಿಸುವ ವಿಶೇಷ ಗಣೇಶೋತ್ಸವವಾಗಿ ಇದು ಗಮನ ಸೆಳೆದಿದೆ.

Bailahongala dargah Ganeshothsava communal harmony

ಜಗತ್ತಿನಲ್ಲಿ, ಸುತ್ತಮುತ್ತ ಏನೇ ನಡೆದರೂ ಅದೆಷ್ಟು ತಲಾಂತರಗಳು ಕಳೆದರೂ, ಪೀಳಿಗೆಗಳು ಬದಲಾದದರೂ ಸೌಹಾರ್ದತೆಯ ಈ ಪರಂಪರೆ ಮಾತ್ರ ಯಾವ ಕಲ್ಮಶಕ್ಕೂ ಒಳಗಾಗದೆ, ಯಾವ ಮಾಲಿನ್ಯಕ್ಕೂ ಕಿವಿಗೊಡದೆ ವರ್ಷ ವರ್ಷವೂ ಇನ್ನಷ್ಟು ಸಮೃದ್ಧವಾಗುತ್ತಿದೆ ಎನ್ನುವುದು ಹಿತವಾದ ಸುದ್ದಿ.

Bailahongala dargah Ganeshothsava communal harmony
ಗಣೇಶೋತ್ಸವ ಆಚರಿಸಿದ ಖುಷಿಯಲ್ಲಿ ಅಲ್ಲಿನ ಜನರು

ಇಲ್ಲಿ ಎಲ್ಲ ಜಾತಿ, ಜನಾಂಗದವರು ದರ್ಗಾದ ಆಚರಣೆ ಮತ್ತು ಪರಂಪರೆಗೆ ಹೊಂದಿಕೊಂಡು ಬದುಕುತ್ತಿದ್ದಾರೆ. ದರ್ಗಾದಲ್ಲಿ ನಡೆಯುವ ಪ್ರತಿ ಧಾರ್ಮಿಕ ಆಚರಣೆ, ವಿಧಿ, ವಿಧಾನಗಳಿಗೆ ತಲೆ ಬಾಗಿ ನಡೆದುಕೊಳ್ಳುವ ಸಂಸ್ಕೃತಿ, ಪರಂಪರೆ ಇಲ್ಲಿಯ ಜನರದ್ದಾಗಿದೆ.

ಕೋಮು ಸೌಹಾರ್ದತೆಗೆ ಸಾಕ್ಷಿ ಗಣಪನ ಪ್ರತಿಷ್ಠಾಪನೆ

ಕಂಠಿ ಗಲ್ಲಿಯಲ್ಲಿರುವ ನಿವಾಸಿಗಳು ಪ್ರತಿ ವರ್ಷ ಒಟ್ಟಿಗೆ ಸೇರಿ ಮೊಹರಂ ಆಚರಣೆ ಮಾಡುತ್ತಾರೆ. ಜೊತೆಗೆ ಗಣೇಶ ಚತುರ್ಥಿಯನ್ನು ಅಷ್ಟೇ ನಯ, ವಿನಯ, ಭಕ್ತಿಭಾವದಿಂದ ಬರ ಮಾಡಿಕೊಂಡು ಗಣೇಶನ ಹಬ್ಬ ಆಚರಣೆ ಮಾಡಿಕೊಂಡು ಬಂದಿದ್ದಾರೆ.

Bailahongala dargah Ganeshothsava communal harmony

ಮುಸ್ಲಿಂ ಬಾಂಧವರಿಂದ ಗಣಪನಿಗೆ ಜೈಘೋಷ

ಹಿಂದೂ, ಮುಸ್ಲಿಂ ಬಾಂಧವರು ಗಣಪನಿಗೆ ಹೂವು ಮಾಲೆ ಹಾಕಿ, ಕಾಯಿ, ಕರ್ಪೂರ ಬೆಳಗಿ, ಗಂಟೆ ಬಾರಿಸಿ, ಆರತಿ ಮಾಡಿ, ನೈವೇದೆ ಸಲ್ಲಿಸಿ ಪ್ರಾರ್ಥಿಸಿದರು. ಅರ್ಚಕರು ಬೋಧಿಸಿದ ಮಂತ್ರ ಘೋಷವನ್ನು ಮುಸ್ಲಿಂ ಬಾಂಧವರು ಭಕ್ತಿಯಿಂದ ನುಡಿದು ಗಜಾನನ ಮಹರಾಜಕೀ ಜೈ ಎಂದು ಘೋಷಣೆ ಹಾಕಿದರು.

ಊರ ಹಿರಿಯರು, ಊರ ಹಿರಿಯರು, ಸಹೃದಯಿಗಳ ಶಕ್ತಿ ಇದು

ಊರಿನ ಹಿರಿಯರಾದ ಮಹಾಂತೇಶ ಹಂಚಿನಮನಿ, ಈರಪ್ಪ ಬೆಂಡಿಗೇರಿ, ಪ್ರಕಾಶ ಪಾಗಾದ, ಅಶೋಕ ಪಾಗಾದ, ವಿಶಾಲ ರೊಡಬಸನವರ, ಸಚಿನ ಹಣಮಶೇಟ, ಕಿರಣ ಪಾಗಾದ, ಉಳವೇಶ ಪಾಗಾದ, ಬಾಬು ಅಡಿಮನಿ, ಶಫೀಕ ಬಡಿಮನಿ, ಜರ್ ನದಾಫ, ಶಿವಲಿಂಗ ಹೂಗಾರ, ಕುಮಾರ ಹೂಗಾರ, ಪ್ರಜ್ವಲ ಹೂಗಾರ, ಅನೇಕರು ಗಣೇಶ ಪ್ರತಿಷ್ಠಾಪನೆ ಜವಾಬ್ದಾರಿ ಹೊತ್ತುಕೊಂಡು ಯಶಸ್ವಿಗೊಳಿಸಿದ್ದಾರೆ.

Bailahongala dargah Ganeshothsava communal harmony
ಪೂಜೆ ಮತ್ತು ಪ್ರಾರ್ಥನೆಯ ಗಳಿಗೆ

ಇದನ್ನೂ ಓದಿ : Communal Harmony : ಗಣೇಶ ಬಪ್ಪ ಮೋರಯಾ ಎಂದ ಮುಸ್ಲಿಮರು; ಗಣಪನ ಶೋಭಾಯಾತ್ರೆಗಾಗಿ ಈದ್‌ ಮೆರವಣಿಗೆಯೇ ಮುಂದಕ್ಕೆ!

ಬೆಳಗಾವಿಯ ಬೈಲಹೊಂಗಲದ ಈ ಪರಂಪರೆಯಂತೆಯೇ ಇನ್ನೂ ಹಲವು ಕಡೆ ಹಿಂದು ಮುಸ್ಲಿಂ ಸೌಹಾರ್ದತೆಯ ನೂರಾರು ಉದಾಹರಣೆಗಳು ದೊರೆಯುತ್ತವೆ. ಇದು ಇನ್ನಷ್ಟು ಬೆಳೆಯಬೇಕು ಮತ್ತು ಹೊಸ ಹೊಸ ಸೌಹಾರ್ದದ ನಿದರ್ಶನಗಳು ಹುಟ್ಟಿಕೊಳ್ಳಬೇಕು ಎನ್ನುವುದೇ ಅಲ್ಲಿನ ಜನ ಆಶಯ.

Bailahongala dargah Ganeshothsava communal harmony in 2022
2022ರಲ್ಲಿ ನಡೆದ ಗಣೇಶೋತ್ಸವದ ಒಂದು ನೋಟ

ಈದ್‌ ಮೆರವಣಿಗೆಯನ್ನೇ ಮುಂದಕ್ಕೆ ಹಾಕಿದ ಬೆಳಗಾವಿಯ ಮುಸ್ಲಿಮರು

ಬೆಳಗಾವಿಯ ಸೌಹಾರ್ದ ಪರಂಪರೆ ಅದೆಷ್ಟು ಶಕ್ತಿಶಾಲಿಯಾಗಿದೆ ಎನ್ನುವುದಕ್ಕೆ ಇನ್ನೊಂದು ಉದಾಹರಣೆ ಇಲ್ಲಿದೆ. ಬೆಳಗಾವಿಯಲ್ಲಿ ಗಣೇಶೋತ್ಸವ ಅದ್ದೂರಿಯಾಗಿ ನಡೆಯುತ್ತದೆ. ಈ ಬಾರಿ ಸೆ. 28ರಂದು ಸಾರ್ವಜನಿಕ ಗಣೇಶೋತ್ಸವವ ಬೃಹತ್‌ ಶೋಭಾಯಾತ್ರೆ ನಡೆಯುತ್ತದೆ. ಈ ಬಾರಿ ಅಂದೇ ಈದ್‌ ಮಿಲಾದ್‌ ಹಬ್ಬವೂ ಬಂದಿದೆ. ಮುಸ್ಲಿಮರು ಕೂಡಾ ನಗರ ಮೆರವಣಿಗೆ ಮೂಲಕ ಇದನ್ನು ಸಂಭ್ರಮಿಸುತ್ತಾರೆ. ಆದರೆ ಎರಡನ್ನೂ ಒಂದೇ ದಿನ ಆಚರಿಸಿದರೆ ವ್ಯವಸ್ಥೆ ಮಾಡುವುದು ಕಷ್ಟವಾಗುತ್ತದೆ, ಕಾನೂನು ಭಂಜಕರಿಗೆ ಅವಕಾಶವಾದೀತು ಎಂದು ಭಾವಿಸಿದ ಮುಸ್ಲಿಂ ಹಿರಿಯರು ತಮ್ಮ ಈದ್‌ ಮೆರವಣಿಗೆಯನ್ನು ಅಕ್ಟೋಬರ್‌ ಒಂದಕ್ಕೆ ಮುಂದೂಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Phone Tapping: ಎಚ್‌ಡಿಕೆ ಫೋನ್‌ ಟ್ಯಾಪ್‌ ಮಾಡೋಕೆ, ಅವರೇನು ಟೆರರಿಸ್ಟಾ? ಎಂದ ಡಿಕೆಶಿ

Phone Tapping: ರಾಜ್ಯ ಸರ್ಕಾರ ರೇವಣ್ಣ-ಕುಮಾರಸ್ವಾಮಿ ಅವರ ಫೋನ್ ಕದ್ದಾಲಿಕೆ ಮಾಡುತ್ತಿದೆ ಎಂಬ ಆರೋಪದ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

VISTARANEWS.COM


on

Phone Tapping
Koo

ಬೆಂಗಳೂರು: ರಾಜ್ಯ ಸರ್ಕಾರ ಫೋನ್‌ ಟ್ಯಾಪಿಂಗ್‌ (Phone Tapping) ಮಾಡುತ್ತಿದೆ ಎಂಬ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರ ಆರೋಪಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಕಿಡಿಕಾರಿದ್ದಾರೆ. ಪೋನ್ ಕದ್ದಾಲಿಕೆ ಸರ್ಕಾರ ಮಾಡಿಲ್ಲ. ಅಂಥ ಮುಟ್ಟಾಳ್ ಕೆಲಸ ನಮ್ಮ ಸರ್ಕಾರ ಮಾಡಲ್ಲ. ಫೋನ್‌ ಕದ್ದಾಲಿಸಲು ಅವರೇನು ಭಯೋತ್ಪಾದಕರಾ? ಅವರು ನಮ್ಮ ನಾಯಕರು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ರೇವಣ್ಣ-ಕುಮಾರಸ್ವಾಮಿ ಫೋನ್ ಕದ್ದಾಲಿಕೆ ಸರ್ಕಾರ ಮಾಡುತ್ತಿದೆ ಎಂಬ ಆರೋಪದ ಬಗ್ಗೆ ನಗರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

ಇನ್ನು ಸಿಡಿ ಶಿವು ಎಂಬ ಎಚ್‌ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೂ ಅದಕ್ಕೂ ಯಾವುದೇ ತರಹದ ಸಂಬಂಧವಿಲ್ಲ. ಅದಕ್ಕೆ ಉತ್ತರ ಕೊಡುವ ಸಂದರ್ಭ ಇಲ್ಲ. ನನ್ನ ಹೆಸರು ಹೇಳಲಿಲ್ಲ ಅಂದ್ರೆ ಎಂದರೆ ಅವರಿಗೆ ನಿದ್ದೆ ಬರುವುದಿಲ್ಲ. ಮಾಧ್ಯಮಗಳು ಎಥಿಕ್ಸ್ ಬಿಟ್ಟು ಅನೇಕ ವಿಚಾರಗಳು ಚರ್ಚೆ ಮಾಡುತ್ತೀದ್ದೀರಿ, ಉಪ್ಪು ತಿಂದವರು ನೀರು ಕುಡಿಯಬೇಕು ಎಂದು ಅವರು ಹೇಳಿದ್ದಾರೆ. ಕಾನೂನು ಇದೆ, ಕಾನೂನು ಪ್ರಕಾರ ನಡೆಯುತ್ತದೆ. ಅವರು ಏನು ಬೇಕಾದರೂ ಹೇಳಲಿ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ | Prajwal Revanna Case: ನಾನು ಸೇರಿ ಸುಮಾರು 30 ಜನರ ಫೋನ್ ಟ್ಯಾಪ್: ಸರ್ಕಾರದ ವಿರುದ್ಧ ಎಚ್‌ಡಿಕೆ ಬಾಂಬ್‌!

ದೇವರಾಜೇಗೌಡ- ಶಿವರಾಮೇಗೌಡ ಆಡಿಯೊ ಲೀಕ್ ವಿಚಾರಕ್ಕೆ ಸ್ಪಂದಿಸಿ, ನಮಗೆ ಸಂಬಂಧವಿಲ್ಲ, ನೀವು ಉಂಟು ಅವರುಂಟು. ನೀವು ಮಾತನಾಡಬಹುದು, ನಾನು ಯಾರ ಬಳಿಯೂ ಮಾತನಾಡಿಲ್ಲ. ನಾನು ಯಾರಿಗೂ ಜಿಪಿಎ ಕೊಟ್ಟಿಲ್ಲ. ನಾನು ರಾಜಕಾರಣಿ, ನೂರಾರು ಜನ ಬಿಜೆಪಿ, ದಳ, ಸಾರ್ವಜನಿಕರು, ಅಧಿಕಾರಿಗಳು ಭೇಟಿ ಮಾಡಲು ಬರುತ್ತಾರೆ. ಏನೇನು ಮಾಹಿತಿ ಕೊಡಬೇಕು ಎಂದು ಬರುತ್ತಾರೆ. ಅವರು ಬಿಜೆಪಿಯವರು (ದೇವರಾಜೇಗೌಡ) ಭೇಟಿ ಮಾಡಲು ಸಮಯ ಕೇಳಿದ್ದರು. ನಾನು ಸಮಯ ಕೊಡಲಿಲ್ಲ, ಬಂದರೂ ಒಂದು ನಿಮಿಷ ಯಾರದೋ ಹತ್ತಿರ ಮಾತನಾಡಿದ್ರು, ನಾನು ಒಂದು ನಿಮಿಷವೂ ಮಾತನಾಡಿಲ್ಲ. ನನಗೂ ರಾಜಕೀಯ, ವ್ಯವಹಾರಿಕ ಪ್ರಜ್ಞೆ ಇದೆ. ಅದನ್ನು ಇನ್ನೊಂದು ಸಾರಿ ಆ ಸುದ್ದಿನ ನನ್ನ ಬಳಿ ಕೇಳಬೇಡಿ ಎಂದು ಹೇಳಿದರು.

ತಿಹಾರ್ ಜೈಲಿಗೆ ಹೋದಾಗ ತಾಯಿಗೆ ಸಾಂತ್ವನ ಹೇಳಿದ್ದೆ ಎಂಬ ಎಚ್‌ಡಿಕೆ ಹೇಳಿಕೆ ವಿಚಾರ ಪ್ರತಿಕ್ರಿಯಿಸಿ, ಸಾರಿ ಅವರ ಪರಿಸ್ಥಿತಿ ನೋಡಿ ಅಯ್ಯೋ ಅನ್ನಿಸುತ್ತಿದೆ. ನಾನು ಅವತ್ತು ಹೇಳಿದ್ದೇನೆ, ಇವತ್ತೂ ಹೇಳ್ತೀನಿ, ಮುಂದಕ್ಕೂ ಹೇಳ್ತೀನಿ ಎಂದರು.

ಒಂದು ವರ್ಷ ಸರ್ಕಾರ ಐಸಿಯುನಲ್ಲಿತ್ತು ಎಂಬ ಕುಮಾರಸ್ವಾಮಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ, ಸರ್ಕಾರ ಏನಾಯ್ತು ಅಂತ ಜನ ಹೇಳಬೇಕು, ನಾಯಕರು ಹೇಳೋದಲ್ಲ. ಹೆಣ್ಣು ಮಕ್ಕಳು ಬದುಕಿನಲ್ಲಿ ಬದಲಾವಣೆ ಯಾವ ಮಟ್ಟಕ್ಕೆ ಆಗಿದೆ ಅಂತ ತಾಯಂದಿರು ಹೇಳಬೇಕು. ಎಲೆಕ್ಷನ್‌ಗೂ ಮುಂಚೆ ಕುಮಾರಸ್ವಾಮಿಯವರೇ ನುಡಿಮುತ್ತು ಹೇಳಿದ್ರಲ್ಲ. ಅವರ ನುಡಿಮುತ್ತುಗಳು ಅವರ ಪಾರ್ಟಿಯ ನುಡಿಮುತ್ತುಗಳು ನಿಮ್ಮ ಹತ್ತಿರ ದಾಖಲೆ ಇದೆಯಲ್ಲ. ನಮ್ಮ ಬಗ್ಗೆ ಅವರು ಹೇಳಲೇಬೇಕು, ನಮ್ಮ ಬಗ್ಗೆ ಶಹಬ್ಬಾಷ್ ಗಿರಿ ಕೊಡಿ ಅಂತ ಕೇಳಕ್ಕಾಗಲ್ಲ, ಕೇಳೋದಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ | HD Revanna: ರೇವಣ್ಣಗೆ ಜಾಮೀನು ಸಿಕ್ಕರೂ ಸಿಗದ ರಿಲೀಫ್‌; ಎಸ್‌ಐಟಿಯಿಂದ ಹೈಕೋರ್ಟ್‌ ಮೊರೆ

ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಆಗಿದೆ. ನಿಮ್ಮೆಲ್ಲರ ಸಹಕಾರ, ಜನರಿಗೆ ಬಹಳ ತೃಪ್ತಿಕರವಾಗಿ ಸರ್ಕಾರ ನಡೆಸಿದ್ದೇವೆ. ಬರೀ ಗ್ಯಾರಂಟಿ ಒಂದೇ ಅಲ್ಲ, ಅನೇಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅಡಿಗಲ್ಲು ಹಾಕಿದ್ದೇವೆ. ಎಲೆಕ್ಷನ್ ಮತ್ತೆ ಬಂತು, ಮುಂದೆ ಅವನ್ನು ಕಾರ್ಯರೂಪಕ್ಕೆ ತರಲು ಸಜ್ಜಾಗಿದ್ದೇವೆ. ಸಿಎಂ ಸಹ ಮೊನ್ನೆ ಸಭೆ ನಡೆಸಿ, ಟೆಂಡರ್ ಕರೆಯಲು ಹೇಳಿದ್ದಾರೆ ಎಂದು ತಿಳಿಸಿದರು.

Continue Reading

ರಾಜಕೀಯ

Legislative Council Election: ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ ದಿನಾಂಕ ಫಿಕ್ಸ್;‌ ಜೂನ್‌ 13ಕ್ಕೆ ಮತದಾನ

Legislative Council Election: ನಾಮಪತ್ರ ಸಲ್ಲಿಸಲು ಜೂನ್‌ 3 ಕೊನೆಯ ದಿನವಾಗಿದೆ. ಜೂನ್ 4ರಂದು ನಾಮಪತ್ರ ಪರಿಶೀಲನಾ ಪ್ರಕ್ರಿಯೆ ನಡೆಯಲಿದೆ. ಅಲ್ಲದೆ, ಮತದಾನದ ದಿನವಾದ ಜೂನ್‌ 13ರಂದೇ ಮತ ಎಣಿಕೆಯನ್ನೂ ನಡೆಸಲಾಗುವುದು ಎಂದು ಆಯೋಗ ಹೇಳಿದೆ. ಈಗಿರುವ ಕರ್ನಾಟಕ ವಿಧಾನ ಪರಿಷತ್ತಿನ 11 ಸದಸ್ಯರ ಅವಧಿಯು ಮುಂದಿನ ತಿಂಗಳು ಮುಕ್ತಾಯವಾಗಲಿದೆ. ಜೂನ್‌ 17ರಂದು ಅವಧಿ ಮುಕ್ತಾಯವಾಗುತ್ತಿರುವುದರಿಂದ ಆ ಸದಸ್ಯತ್ವ ಸ್ಥಾನಗಳನ್ನು ಭರ್ತಿ ಮಾಡಲು ಮುಂದಾಗಲಾಗಿದೆ. ವಿಧಾನಸಭೆಯ ಸದಸ್ಯರು ಇವರನ್ನು ಆಯ್ಕೆ ಮಾಡುತ್ತಾರೆ.

VISTARANEWS.COM


on

Legislative Council Election dates fixedVoting on June 13
Koo

ಬೆಂಗಳೂರು: ರಾಜ್ಯದ ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣಾ ದಿನಾಂಕವನ್ನು (Legislative Council Election) ಘೋಷಣೆ ಮಾಡಲಾಗಿದ್ದು, ಜೂನ್‌ 13ರಂದು ಮತದಾನ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.

ನಾಮಪತ್ರ ಸಲ್ಲಿಸಲು ಜೂನ್‌ 3 ಕೊನೆಯ ದಿನವಾಗಿದೆ. ಜೂನ್ 4ರಂದು ನಾಮಪತ್ರ ಪರಿಶೀಲನಾ ಪ್ರಕ್ರಿಯೆ ನಡೆಯಲಿದೆ. ಅಲ್ಲದೆ, ಮತದಾನದ ದಿನವಾದ ಜೂನ್‌ 13ರಂದೇ ಮತ ಎಣಿಕೆಯನ್ನೂ ನಡೆಸಲಾಗುವುದು ಎಂದು ಆಯೋಗ ಹೇಳಿದೆ. ಈಗಿರುವ ಕರ್ನಾಟಕ ವಿಧಾನ ಪರಿಷತ್ತಿನ 11 ಸದಸ್ಯರ ಅವಧಿಯು ಮುಂದಿನ ತಿಂಗಳು ಮುಕ್ತಾಯವಾಗಲಿದೆ.

Legislative Council Election dates fixedVoting on June 13

ಜೂನ್‌ 17ರಂದು ಅವಧಿ ಮುಕ್ತಾಯವಾಗುತ್ತಿರುವುದರಿಂದ ಆ ಸದಸ್ಯತ್ವ ಸ್ಥಾನಗಳನ್ನು ಭರ್ತಿ ಮಾಡಲು ಮುಂದಾಗಲಾಗಿದೆ. ಶಾಸಕರು (ವಿಧಾನಸಭೆಯ ಸದಸ್ಯರು) ಇವರನ್ನು ಆಯ್ಕೆ ಮಾಡುತ್ತಾರೆ.

ಈ ಪರಿಷತ್ ಸದಸ್ಯರ ಅವಧಿ ಮುಕ್ತಾಯ

  1. ಅರವಿಂದ್ ಕುಮಾರ್ ಅರಳಿ
  2. ಎನ್.ಎಸ್. ಬೋಸರಾಜು
  3. ಕೆ. ಗೋವಿಂದರಾಜ್
  4. ಡಾ. ತೇಜಸ್ವಿನಿ ಗೌಡ
  5. ಮುನಿರಾಜು ಗೌಡ ಪಿ.ಎಂ.
  6. ಕೆ.ಪಿ. ನಂಜುಂಡಿ ವಿಶ್ವಕರ್ಮ
  7. ಬಿ.ಎಂ. ಫಾರೂಕ್
  8. ರಘುನಾಥ ರಾವ್ ಮಲ್ಕಾಪುರೆ
  9. ಎನ್. ರವಿ ಕುಮಾರ್
  10. ಎಸ್. ರುದ್ರೇಗೌಡ
  11. ಕೆ ಹರೀಶ್ ಕುಮಾರ್

ಅಧಿಸೂಚನೆಯಿಂದ ಮತ ಎಣಿಕೆ ವರೆಗೆ

  1. ಅಧಿಸೂಚನೆ ಹೊರಡಿಸುವ ದಿನಾಂಕ: ಮೇ 27 (ಸೋಮವಾರ)
  2. ನಾಮಪತ್ರ ಸಲ್ಲಿಕೆಗೆ ಕೊನೇ ದಿನಾಂಕ: ಜೂನ್ 03 (ಸೋಮವಾರ)
  3. ನಾಮಪತ್ರ ಪರಿಶೀಲನೆ: ಜೂನ್ 04 (ಮಂಗಳವಾರ)
  4. ನಾಮಪತ್ರ ಹಿಂಪಡೆಯಲು ಕೊನೇ ದಿನಾಂಕ: ಜೂನ್ 06 (ಗುರುವಾರ)
  5. ಮತದಾನ ದಿನಾಂಕ: ಜೂನ್ 13 (ಗುರುವಾರ)
  6. ಮತದಾನದ ಸಮಯ: ಬೆಳಗ್ಗೆ 09 ಗಂಟೆಯಿಂದ ಸಂಜೆ 4 ಗಂಟೆವರೆಗೆ
  7. ಮತ ಎಣಿಕೆ ದಿನಾಂಕ: ಜೂನ್ 13 (ಗುರುವಾರ) ಸಂಜೆ 05:00 ಗಂಟೆಗೆ
  8. ಚುನಾವಣೆ ಮುಗಿಯುವ ದಿನಾಂಕ: ಜೂನ್ 15 (ಶನಿವಾರ)

MLC Election: ವಿಧಾನ ಪರಿಷತ್‌ ಚುನಾವಣೆ; ನೈಋತ್ಯ ಶಿಕ್ಷಕರ ಕ್ಷೇತ್ರದ 1 ನಾಮಪತ್ರ ತಿರಸ್ಕೃತ

ಮೈಸೂರು: ಕರ್ನಾಟಕ ವಿಧಾನ ಪರಿಷತ್‌ನ ನೈಋತ್ಯ ಪದವೀಧರ ಕ್ಷೇತ್ರ, ನೈಋತ್ಯ ಶಿಕ್ಷಕರ ಕ್ಷೇತ್ರ ಮತ್ತು ದಕ್ಷಿಣ ಶಿಕ್ಷಕರ ಕ್ಷೇತ್ರಗಳ ಚುನಾವಣೆ-2024ಕ್ಕೆ ಸಂಬಂಧಿಸಿ ನಾಮಪತ್ರ ಪರಿಶೀಲನೆ ನಡೆಸಲಾಗಿದೆ (MLC Election). ಈ ಪೈಕಿ ಒಂದು ನಾಮಪತ್ರ ತಿರಸ್ಕೃತಗೊಂಡಿದೆ. ನೈಋತ್ಯ ಶಿಕ್ಷಕರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದ ಎಂ.ಸತೀಶ್‌ ಕಾರಂತ್‌ ಅವರ ನಾಮಪತ್ರ ತಿರಸ್ಕೃತಗೊಂಡಿದೆ.

ಚುನಾವಣೆ ಅಧಿಕಾರಿ ಡಾ. ಪ್ರಕಾಶ್ ನೇತೃತ್ವದಲ್ಲಿ ಪರಿಶೀಲನೆ ನಡೆಯಿತು. ಈ ವೇಳೆ ಪಕ್ಷೇತರ ಅಭ್ಯರ್ಥಿಯಾಗಿ ಸತೀಶ್‌ ಕಾರಂತ್‌ ಅವರು ಸಲ್ಲಿಸಿದ್ದ ನಾಮಪತ್ರದಲ್ಲಿ ನಮೂನೆ-26 ನೋಟರಿ ಅಫಿಡವಿತ್‌ ಮತ್ತು ವಿಧಾನಸಭಾ ಮತದಾರರ ಪಟ್ಟಿಯ ದೃಢೀಕೃತ ಪ್ರತಿಯನ್ನು ಸಲ್ಲಿಸದಿರುವುದು ಕಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ನಾಮಪತ್ರ ತಿರಸ್ಕೃತಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ 13 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿದ್ದು, ಎಲ್ಲ 13 ನಾಮಪತ್ರವೂ ಅಂಗೀಕಾರಗೊಂಡಿದೆ. ನೈಋತ್ಯ ಪದವೀಧರ ಕ್ಷೇತ್ರಕ್ಕೆ 11 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, 11 ಅಭ್ಯರ್ಥಿಗಳ ನಾಮಪತ್ರವೂ ಸ್ವೀಕೃತಗೊಂಡಿದೆ. ನೈಋತ್ಯ ಪದವೀಧರ ಕ್ಷೇತ್ರಕ್ಕೆ 10 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿದ್ದು, ಈ ಪೈಕಿ ಎಂ.ಸತೀಶ್‌ ಕಾರಂತ್‌ ಅವರ ನಾಮಪತ್ರ ತಿರಸ್ಕೃತಗೊಂಡಿದೆ. ವಿಧಾನ ಪರಿಷತ್‌ ಚುನಾವಣೆಗೆ ಮೇ 9ರಂದು ಅದಧಿಸೂಚನೆ ಹೊರಡಿಸಲಾಗಿತ್ತು. ಮೇ 17ರ ತನಕ ನಾಮಪತ್ರ ಪರಿಶೀಲನೆ ನಡೆಸಲಾಯಿತು. ಮೇ 20ರ ಅಪರಾಹ್ನ 3 ಗಂಟೆಯವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ.

ನಾಮಪತ್ರ ವಾಪಸ್ ಪಡೆಯಲು ನಿರ್ಧರಿಸಿದ ಬಿಜೆಪಿ ಬಂಡಾಯ ಅಭ್ಯರ್ಥಿ

ಬೆಂಗಳೂರು: ʼʼವಿಧಾನಪರಿಷತ್ತಿನ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿ, ಆಕಾಂಕ್ಷಿಯಾಗಿದ್ದು ನಾಮಪತ್ರ ಸಲ್ಲಿಸಿದ್ದೆ. ಪಕ್ಷ ನಿಮ್ಮನ್ನು, ನಿಮ್ಮ ಸೇವೆಯನ್ನು ಮುಂದೆ ಗುರುತಿಸಲಿದೆ ಎಂದು ಹಿರಿಯರಾದ ಯಡಿಯೂರಪ್ಪ ಅವರು ಹೇಳಿದ್ದಾರೆ. ಅಮರನಾಥ ಪಾಟೀಲರನ್ನು ಬೆಂಬಲಿಸಿ ಎಂದು ಪಕ್ಷದ ಇತರ ನಾಯಕರು ಸೂಚಿಸಿದ್ದಾರೆ. ಅವರ ಸೂಚನೆಯಂತೆ ಸೋಮವಾರ ಕಲಬುರಗಿಗೆ ತೆರಳಿ ನಾಮಪತ್ರ ಹಿಂದಕ್ಕೆ ಪಡೆಯಲಿದ್ದೇನೆʼʼ ಎಂದು ಸುರೇಶ್ ಸಜ್ಜನ್ ತಿಳಿಸಿದ್ದಾರೆ.

ಇದನ್ನೂ ಓದಿ: HD Revanna: ರೇವಣ್ಣಗೆ ಜಾಮೀನು ಸಿಕ್ಕರೂ ಸಿಗದ ರಿಲೀಫ್‌; ಎಸ್‌ಐಟಿಯಿಂದ ಹೈಕೋರ್ಟ್‌ ಮೊರೆ

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼʼಪಕ್ಷದ ಹಿರಿಯರು, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು, ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಚಿವ ರಾಜುಗೌಡ, ಎನ್. ರವಿಕುಮಾರ್, ಗೋವಿಂದ ಕಾರಜೋಳ ಅವರ ಆಶೀರ್ವಾದ ಪಡೆಯಲು ನಿಯೋಗದೊಂದಿಗೆ ಇಲ್ಲಿಗೆ ಬಂದಿದ್ದೆ. ನಾಮಪತ್ರ ವಾಪಸ್ ಪಡೆಯುವಂತೆ ಸೂಚಿಸಿದ್ದಾರೆ. ಅವರ ಮಾತಿಗೆ ಒಪ್ಪಿದ್ದೇನೆʼʼ ಎಂದು ತಿಳಿಸಿದ್ದಾರೆ. ಇಲ್ಲಿಗೆ ಬಂದಿದ್ದ ಮುಖಂಡರ ಜತೆ ಸಮಾಲೋಚನೆ ಮಾಡಿ ಈ ನಿರ್ಧಾರ ಮಾಡಿದ್ದಾಗಿ ವಿವರಿಸಿದ್ದಾರೆ. ರಾಜ್ಯಾಧ್ಯಕ್ಷರು ಪಕ್ಷಕ್ಕಾಗಿ ಮಾಡುತ್ತಿರುವ ಹೋರಾಟ, ಸಂಘಟನಾ ಕಾರ್ಯಕ್ಕೆ ಅವರು ಮೆಚ್ಚುಗೆ ಸೂಚಿಸಿದರು. ʼʼನನಗೆ ಟಿಕೆಟ್ ಮುಖ್ಯವಲ್ಲ; ಪಕ್ಷದ ಅಭ್ಯರ್ಥಿಯ ಗೆಲುವೇ ಮುಖ್ಯ ಎಂದು ತಿಳಿಸಿದ ಅವರು, ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಮುಂದೆ ಮುಖ್ಯಮಂತ್ರಿಯಾಗಲು ಅವರ ಕೈ ಬಲಪಡಿಸುವ ಅಗತ್ಯವಿದೆʼʼ ಎಂದು ಇದೇ ವೇಳೆ ತಿಳಿಸಿದ್ದಾರೆ.

Continue Reading

ವಿಜಯನಗರ

Food Department : ಜೀವಂತ ಇದ್ದವಳನ್ನು ಸತ್ತಿದ್ದಾಗಿ ಘೋಷಿಸಿದ ಆಹಾರ ಇಲಾಖೆ; ರೇಷನ್‌ ಕಾರ್ಡ್‌ನಿಂದಲೇ ಹೆಸರು ಡಿಲೀಟ್‌

Food Department : ತಾಯಿ-ಮಗ ಜೀವಂತವಾಗಿದ್ದರೂ, ಬದುಕಿಲ್ಲ ಎಂದು ಪಡಿತರ ಚೀಟಿಯಿಂದ (BPL Card) ಹೆಸರನ್ನೇ ಡಿಲೀಟ್‌ ಮಾಡಿದ್ದಾರೆ. ಸ್ಥಳ ಪರಿಶೀಲನೆ ಮಾಡದೆ ಮಾಹಿತಿಯನ್ನು ಖಚಿತ ಪಡಿಸಿಕೊಳ್ಳದೇ ಆಹಾರ ಇಲಾಖೆಯ (ration card) ಅಧಿಕಾರಿಗಳ ಯಡವಟ್ಟಿಗೆ ಕಡು ಬಡತನದ ಕುಟುಂಬವೊಂದು ಪರದಾಡುತ್ತಿದೆ.

VISTARANEWS.COM


on

By

Food department deletes name from ration card list even though it is alive
Koo

ವಿಜಯನಗರ: ಜೀವಂತವಾಗಿರುವ ತಾಯಿ-ಮಗನನ್ನು ಸತ್ತಿದ್ದಾಗಿ ಘೋಷಿಸಿ, ಇಬ್ಬರನ್ನೂ ಪಡಿತರ ಚೀಟಿ (BPL Card) ಹೆಸರಿನಿಂದ ಆಹಾರ ಇಲಾಖೆಯು (Food Department) ಡಿಲೀಟ್ ಮಾಡಿದೆ. ವಿಜಯನಗರ ಜಿಲ್ಲೆಯ ಆಹಾರ ಇಲಾಖೆಯ ಅಧಿಕಾರಿಗಳ (ration card) ಯಡವಟ್ಟಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಅಂಜೀನಮ್ಮ ಮತ್ತು ಅವರ ಪುತ್ರ ಅಜಯ್ ಬದುಕಿದ್ದರೂ 2019ರಲ್ಲೇ ಸತ್ತಿದ್ದಾರೆ ಎಂದು ಬಿಪಿಎಲ್‌ ಕಾರ್ಡ್‌ನಿಂದ ಹೆಸರು ಡಿಲೀಟ್‌ ಮಾಡಲಾಗಿದೆ. ಕಳೆದ ಐದು ವರ್ಷದಿಂದ ಪಡಿತರದಿಂದ ಬಡ ಕುಟುಂಬವೊಂದು ವಂಚಿತವಾಗಿದೆ. ಆಹಾರ ಇಲಾಖೆ ಯಡವಟ್ಟಿನಿಂದ ಪಡಬಾರದ ಕಷ್ಟ ಪಡುತ್ತಿರುವ ಕುಟಂಬ ತಿಂಗಳ ಪಡಿತರಕ್ಕೂ ಅಲೆಯುತ್ತಿದೆ.

ಇದನ್ನೂ ಓದಿ: Road Accident : ಬಸ್‌ ಗುದ್ದಿದ ರಭಸಕ್ಕೆ ಕಾರು ಛಿದ್ರ ಛಿದ್ರ; ಚಾಲಕ ಸ್ಪಾಟ್‌ ಡೆತ್‌, ನಾಲ್ವರಿಗೆ ಗಾಯ

ಆಹಾರ ಇಲಾಖೆ ಯಾರದ್ದೋ ಮಾತು ಕೇಳಿ ಪಡಿತರ ಚೀಟಿಯಿಂದ ಹೆಸರು ಡಿಲೀಟ್ ಮಾಡಿದೆ. ಕೂಡ್ಲಿಗಿ ತಾಲೂಕಿನ ಅಂಜಿನಮ್ಮ ತೀರಾ ಕಡು ಬಡವರಾಗಿದ್ದು, ಆಹಾರ ಇಲಾಖೆಯ ಕೆಲಸಕ್ಕೆ ಇತರೇ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ರೇಷನ್ ಕಾರ್ಡ್ ಇಲ್ಲದೇ ಇರುವುದರಿಂದ ಗೃಹ ಲಕ್ಷ್ಮೀ ಯೋಜನೆಯ ಲಾಭವೂ ಅಂಜಿನಮ್ಮಗೆ ಸಿಕ್ಕಿಲ್ಲ.

ಇತ್ತ ನ್ಯಾಯಕ್ಕಾಗಿ ಅಂಜಿನಮ್ಮ ಕುಟುಂಬ ನಿತ್ಯ ಆಹಾರ ಇಲಾಖೆ, ನ್ಯಾಯಬೆಲೆ ಅಂಗಡಿಗೆ ಅಲೆದು ಸುಸ್ತಾಗಿದ್ದಾರೆ. ಆಹಾರ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಪಡಿತರ ಚೀಟಿಯಿಂದ ಹೆಸರು ತೆಗೆಯಬೇಕಾದರೆ ಅಧಿಕಾರಿಗಳು ಸ್ಪಾಟ್‌ ವಿಸಿಟ್‌ ಮಾಡಬೇಕು. ಪಡಿತರ ಚೀಟಿಯಲ್ಲಿ ಇರುವವರು ಬದುಕಿದ್ದಾರಾ ಇಲ್ವಾ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ಅಧಿಕಾರಿಗಳು ಪರಿಶೀಲಿಸದೇ ಹೀಗೆ ಅಂಜೀನಮ್ಮ ಹೆಸರು ತೆಗೆದಿರುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

Prajwal Revanna Case: ನಾನು ಸೇರಿ ಸುಮಾರು 30 ಜನರ ಫೋನ್ ಟ್ಯಾಪ್: ಸರ್ಕಾರದ ವಿರುದ್ಧ ಎಚ್‌ಡಿಕೆ ಬಾಂಬ್‌!

Prajwal Revanna Case: ಹಾಸನ ಪೆನ್‌ಡ್ರೈವ್‌ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು, ಪ್ರಜ್ವಲ್‌ ಎಲ್ಲಿದ್ದರೂ ಕರೆಸುವುದಕ್ಕೆ ರೇವಣ್ಣಗೆ ಹೇಳಿದ್ದೇನೆ. ಆದರೆ. ನಾವು ಏನು ಮಾತನಾಡುತ್ತೇವೆ ಎಂದು ತಿಳಿಯಲು ಫೋನ್‌ ಕದ್ದಾಲಿಗೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

VISTARANEWS.COM


on

Prajwal Revanna Case
Koo

ಬೆಂಗಳೂರು: ಪ್ರಜ್ವಲ್‌ ರೇವಣ್ಣ ಪ್ರಕರಣದ (Prajwal Revanna Case) ಬಳಿಕ ನಾನು ಸೇರಿದಂತೆ ನಮ್ಮ ಸುತ್ತಲೂ ಇರುವ ಸುಮಾರು 30 ಜನರ ಫೋನ್ ಟ್ಯಾಪ್‌ (Phone Tapping) ಆಗುತ್ತಿದೆ. ರೇವಣ್ಣ ಫೋನ್ ಕೂಡ ಟ್ಯಾಪ್‌ ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಿಎಂ ಗಂಭೀರ ಆರೋಪ ಮಾಡಿದ್ದಾರೆ.

ಹಾಸನ ಪೆನ್‌ಡ್ರೈವ್‌ ಪ್ರಕರಣದ ಬಗ್ಗೆ ನಗರದಲ್ಲಿ ಪ್ರತಿಕ್ರಿಯಿಸಿರುವ ಅವರು, ಪ್ರಜ್ವಲ್‌ ಎಲ್ಲಿದ್ದರೂ ಕರೆಸುವುದಕ್ಕೆ ರೇವಣ್ಣಗೆ ಹೇಳಿದ್ದೇನೆ. ಆದರೆ. ನಾವು ಏನು ಮಾತನಾಡುತ್ತೇವೆ ಎಂದು ತಿಳಿಯಲು ಫೋನ್‌ ಕದ್ದಾಲಿಗೆ ಮಾಡಲಾಗುತ್ತಿದೆ ಎಂದು ಮಾಜಿ ಸಿಎಂ ಎಚ್‌ಡಿಕೆ ಕಿಡಿಕಾರಿದ್ದಾರೆ.

ದೇವೇಗೌಡರು ರಾಜೀನಾಮೆ ಕೊಡಲು ಮುಂದಾಗಿದ್ದರು

ಹಾಸನ ಪೆನ್ ಡ್ರೈವ್ ಪ್ರಕರಣದಿಂದ ನೊಂದು ದೇವೇಗೌಡರು ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ಕೊಡಲು ನಿರ್ಧಾರ ಮಾಡಿದ್ದರು. ಯಾವ ಮುಖ ಇಟ್ಟುಕೊಂಡು ನಾನು ರಾಜ್ಯಸಭೆಗೆ ಹೋಗಲಿ ಅಂತ ಹೇಳಿ, ರಾಜೀನಾಮೆ ಕೊಡಲು ಮುಂದಾಗಿದ್ದರು. ಎಷ್ಟು ದಿನ ಅಂತ ಹೊರಗೆ ಇರಬೇಕು. ಬಂದು ತನಿಖೆ ಎದುರಿಸಬೇಕು ಎಂದು ಅವರು ಹೇಳಿರುವುದಾಗಿ ಎಚ್‌ಡಿಕೆ ಹೇಳಿದ್ದಾರೆ.

ಇನ್ನು ಪ್ರಜ್ವಲ್‌ ಎಲ್ಲಿದ್ದರೂ ಕರೆಸಲು ಮಾಧ್ಯಮದ ಮೂಲಕ ಮನವಿ ಮಾಡು ಅಂತ ರೇವಣ್ಣಗೆ ಹೇಳಿದ್ದೇನೆ. ದೇವೇಗೌಡರು ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ಕೊಡಲು ಮುಂದಾದಾಗ, ಯಾರೋ ಮಾಡಿದ ತಪ್ಪಿಗೆ ನೀವು ರಾಜೀನಾಮೆ ಕೊಟ್ಟರೆ ರಾಜ್ಯಕ್ಕೆ ನಷ್ಟ ಅಂತ ಹೇಳಿದ್ದೇನೆ. ಈ ಪ್ರಕರಣದಿಂದ ದೇವೇಗೌಡ್ರು ನೊಂದಿದ್ದಾರೆ. ಯಾವ ಮುಖ ಹೊತ್ತು ರಾಜ್ಯಸಭೆಯಲ್ಲಿ ಕೂರಲಿ ಅಂತ ಹೇಳಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ | CM Siddaramaiah: ಲೋಕಸಭಾ ಚುನಾವಣೆಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರಕಾರ ಕಾಂಗ್ರೆಸ್‌ಗೆ ಎಷ್ಟು ಸೀಟ್‌? ಸಂಪುಟ ಪುನಾರಚನೆ ಇಲ್ಲ!

ಅವರೇನು ಭಯೋತ್ಪಾದಕರಾ? ಎಂದ ಡಿಕೆಶಿ

ರೇವಣ್ಣ-ಕುಮಾರಸ್ವಾಮಿ ಫೋನ್ ಕದ್ದಾಲಿಕೆಯನ್ನು ಸರ್ಕಾರ ಮಾಡುತ್ತಿದೆ ಎಂಬ ಹೆಚ್ಡಿಕೆ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು, ಫೋನ್ ಕದ್ದಾಲಿಕೆ ಸರ್ಕಾರ ಮಾಡಿಲ್ಲ. ಅಂತಹ ಮುಟ್ಟಾಳ್ ಕೆಲಸ ನಮ್ಮ ಸರ್ಕಾರ ಮಾಡಲ್ಲ. ಅವರೇನು ಭಯೋತ್ಪಾದಕರಾ? ಅವರು ನಮ್ಮ ನಾಯಕರು ಎಂದು ವ್ಯಂಗ್ಯವಾಡಿದ್ದಾರೆ.

ಪ್ರಜ್ವಲ್‌ ಎಸ್‌ಐಟಿ ಮುಂದೆ ಹಾಜರಾಗಿ ತನಿಖೆ ಎದುರಿಸುವುದೇ ಸೂಕ್ತ: ನಿಖಿಲ್‌ ಕುಮಾರಸ್ವಾಮಿ

Prajwal Revanna Case Shivarame Gowdas Deve Gowda suicide statement says Nikhil Kumaraswamy

ಬೆಂಗಳೂರು: ಅಶ್ಲೀಲ ವಿಡಿಯೊ (Absence video) ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna Case) ಅವರು ಎಸ್ಐಟಿ ಮುಂದೆ ಹಾಜರಾಗಿ ತನಿಖೆ ಎದುರಿಸಬೇಕು ಎಂದು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಅಭಿಪ್ರಾಯಪಟ್ಟಿದ್ದಾರೆ.

ಈ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿದ ನಿಖಿಲ್‌ ಕುಮಾರಸ್ವಾಮಿ, ಸಂತ್ರಸ್ತೆ ಹೆಣ್ಣು ಮಕ್ಕಳ ಮುಖವನ್ನು ಬ್ಲರ್ ಮಾಡಿಯೂ ತೋರಿಸಿಲ್ಲ. ರಾಜಕಾರಣಕ್ಕಾಗಿ ಈ ರೀತಿ ಮಾಡುವುದು ಎಷ್ಟು ಸರಿ? ಇಡೀ ರಾಜ್ಯದ ಜನಕ್ಕೆ ಈ ರೀತಿಯ ತೋರಿಸಿದ್ದು ಯಾರು? ಅವರ ಬಗ್ಗೆ ಯಾಕೆ ತನಿಖೆ ಆಗುತ್ತಿಲ್ಲ? ಇದರಲ್ಲಿ ಯಾರ ಪಾತ್ರ ಇದೆಯೋ , ರಾಜ್ಯ ಸರ್ಕಾರದ ಜವಾಬ್ದಾರಿ ಇದೆ. ಇದು ಇವತ್ತು ರಾಷ್ಟ್ರದ ಮಟ್ಟದಲ್ಲಿ ಸುದ್ದಿ ಆಗಿದೆ. ಇದಕ್ಕೆ ಉತ್ತರ ಸಿಗಬೇಕು. ತನಿಖೆ ಪಾರದರ್ಶಕವಾಗಿ ಆಗಬೇಕು ಅಲ್ವಾ‌? ಎಂದು ನಿಖಿಲ್‌ ಕುಮಾರಸ್ವಾಮಿ ಪ್ರಶ್ನೆ ಮಾಡಿದರು.

ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣ ಹಿನ್ನೆಲೆಯಲ್ಲಿ ತಲೆ ಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಎಸ್ಐಟಿ ತನಿಖೆ ಎದುರಿಸುವುದು ಸೂಕ್ತ. ಘಟ‌ನೆ ಆದ ದಿನವೇ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ. ಉಪ್ಪು ತಿಂದವರು ನೀರು ಕುಡಿಯಬೇಕು ಅಂತ. ಎಸ್‌ಐಟಿ ತನಿಖೆ ಮಾಡುತ್ತಲಿದೆ. ಹೀಗಾಗಿ ಸಂಸದರು ಎಸ್ಐಟಿ ಮುಂದೆ ಹಾಜರಾಗಿ ತನಿಖೆ ಎದುರಿಸಬೇಕು. ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಪ್ರಜ್ವಲ್‌ ನನ್ನ ಜತೆಯಂತೂ ಸಂಪರ್ಕದಲ್ಲಿಲ್ಲ ಎಂದು ನಿಖಿಲ್‌ ಹೇಳಿದರು.

ದೇವೇಗೌಡ ಆತ್ಮಹತ್ಯೆ ಹೇಳಿಕೆ; ಶಿವರಾಮೇಗೌಡ ವಿರುದ್ಧ ನಿಖಿಲ್‌ ಕುಮಾರಸ್ವಾಮಿ ಕೆಂಡ

ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna Case) ಎಸಗಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ದೇವರಾಜೇಗೌಡ (Devaraje Gowda) ಹಾಗೂ ಮಾಜಿ ಸಂಸದ ಎಲ್‌.ಆರ್. ಶಿವರಾಮೇಗೌಡ (LR Shivarame Gowda) ಅವರ ಮಧ್ಯೆ ನಡೆದಿದೆ ಎನ್ನಲಾದ ದೂರವಾಣಿ ಸಂಭಾಷಣೆಯ ಆಡಿಯೊ ಈಗ ಎಲ್ಲಡೆ ವೈರಲ್‌ ಆಗಿದೆ. ಅಲ್ಲಿ ಮಾಜಿ ಪ್ರಧಾನಿ, ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡ (HD Dewegowda) ಅವರ ಬಗ್ಗೆ ಲಘುವಾಗಿ ಮಾತನಾಡಿದ್ದ ಹೇಳಿಕೆಗೆ ವ್ಯಾಪಕ ಟೀಕೆಗಳು ಕೇಳಿ ಬರುತ್ತಿವೆ. ಇದನ್ನು ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಖಂಡಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ನಿಖಿಲ್‌ ಕುಮಾರಸ್ವಾಮಿ, ನಿನ್ನೆ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಅವರ ಆಡಿಯೊವನ್ನು ನಾನು ಕೇಳಿದೆ. ದೇವೇಗೌಡರ ಬಗ್ಗೆ ಈ ರೀತಿ ಲಘುವಾಗಿ ಮಾತನಾಡಬಾರದು. ರಾಜಕಾರಣ ಬೇರೆಯೊಬ್ಬರ ಸಾವು ಬಯಸುವುದು ಅವರ ಸಂಸ್ಕೃತಿಯನ್ನು ತೋರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾವಿನ ಹೆಸರಲ್ಲಿ ರಾಜಕೀಯ ಮಾಡೋದು ಸರಿಯಲ್ಲ

ಇಡೀ ರಾಜ್ಯದ ಜನ ಶಿವರಾಮೇಗೌಡರ ಆಡಿಯೊವನ್ನು ಕೇಳಿದ್ದಾರೆ. ದೇಶದ ಮಾಜಿ ಪ್ರಧಾನಿಗಳು, ಕೆಂಪುಕೋಟೆ ಮೇಲೆ ಬಾವುಟ ಹಾರಿಸಿದ ಕನ್ನಡದ ಹೆಮ್ಮೆಯ ಮಾಜಿ ಪ್ರಧಾನಿಗಳ ವಿರುದ್ಧ ಇಂಥ ಹೇಳಿಕೆಯನ್ನು ಕೊಡಬಾರದಿತ್ತು. ಅವರ ಸಂಸ್ಕೃತಿ, ಮನಸ್ಥಿತಿ ಹೇಗಿದೆ ಅ‌ನ್ನೋದನ್ನು ಅರ್ಥ ಮಾಡಿಕೊಳ್ಳಬೇಕು. ರಾಜಕೀಯವನ್ನು ಮಾಡಿ ಯಾರು ಬೇಡ ಎಂದು ಹೇಳುತ್ತಾರೆ? ಆದರೆ, ಇನ್ನೊಬ್ಬರ ಸಾವಿನ ಹೆಸರಲ್ಲಿ ರಾಜಕೀಯ ಮಾಡೋದು ಸರಿಯಲ್ಲ ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ನಮ್ಮ ಬಳಿ ಅಡ್ಜೆಸ್ಟ್‌ಮೆಂಟ್‌ ಸಂಸ್ಕೃತಿ ಇಲ್ಲ

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಮಗನ ಭವಿಷ್ಯದ ಬಗ್ಗೆ ಯೋಚನೆ ಮಾಡಿ ಹೀಗೆ ಮಾಡಿದ್ದಾರೆ ಎಂದು ಶಿವರಾಮೇಗೌಡ ಅವರು ಹೇಳಿರುವ ಮಾತುಗಳು ಆಡಿಯೊದಲ್ಲಿ ದಾಖಲಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ನಿಖಿಲ್‌ ಕುಮಾರಸ್ವಾಮಿ, ಚುನಾವಣೆಗಳಲ್ಲಿ ಅಡ್ಜಸ್ಟ್‌ಮೆಂಟ್‌ ಕೆಲವು ಸಲ ಆಗುತ್ತದೆ. ಅದು ಹೊರಗೂ ಬರುತ್ತದೆ. ಆದರೆ, ನನ್ನ ಬಗ್ಗೆ ನಮ್ಮ ತಂದೆ ಎಂದೂ ಹೀಗೆ ಯೋಚನೆ ಮಾಡಿಲ್ಲ. ನಮ್ಮ ತಂದೆ ರಾಜ್ಯದ, ಜನರ ಬಗ್ಗೆ ಯೋಚನೆ ಮಾಡ್ತಾರೆ. ಬಹಳ ಜನ ಅಡ್ಜೆಸ್ಟ್‌ಮೆಂಟ್‌ ಮಾಡಿಕೊಂಡು ಇವತ್ತು ಬಹಳ ಒಳ್ಳೇ ಸ್ಥಾನದಲ್ಲಿ ಇದ್ದಾರೆ. ಆದರೆ, ನಮ್ಮ ಬಳಿ ಆ ರೀತಿ ಯಾವ ಅಡ್ಜೆಸ್ಟ್‌ಮೆಂಟ್‌ ಸಂಸ್ಕೃತಿ ಇಲ್ಲ ಎಂದು ಹೇಳಿದರು.

ಶಿವರಾಮೇಗೌಡ ಮಾತನಾಡಿರುವ ಪ್ರತಿ ವಿಚಾರದಲ್ಲಿಯೂ ರಾಜ್ಯ ಸರ್ಕಾರದ ಕೈವಾಡ ಇದೆ ಎಂಬುದು ಗೊತ್ತಾಗುತ್ತದೆ. ಅವರೂ ಕೂಡಾ ಸರ್ಕಾರದ ಪ್ರಮುಖ ವ್ಯಕ್ತಿಯೊಬ್ಬರ ಹೆಸರು ಹೇಳಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ವಿರುದ್ಧ ಪರೋಕ್ಷವಾಗಿ ಆರೋಪ ಮಾಡಿದರು.

ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮಗನ ಭವಿಷ್ಯದ ಚಿಂತೆ ಅಂತಾರೆ. ಎರಡು ಚುನಾವಣೆಯನ್ನು ನಾನು ಎದುರಿಸಿದ್ದೇನೆ. ಕೆಲವೊಮ್ಮೆ ಕೆಲವು ಸಂದರ್ಭದಲ್ಲಿ ಅಡ್ಜೆಸ್ಟ್‌ಮೆಂಟ್‌ ಒಳಗೆ ಹೊರಗೆ ಆಗುತ್ತದೆ. ಆದರೆ, ನಮ್ಮ ವಿಚಾರದಲ್ಲಿ ಹೀಗೆ ಆಗಲಿಲ್ಲ. ನನ್ನ ವಿಷಯದಲ್ಲಿ ದೊಡ್ಡ ಮಟ್ಟದಲ್ಲಿ ಕೂರಿಸಬೇಕು ಅನ್ನೋ ಚಿಂತನೆ ಕುಮಾರಣ್ಣರಿಗೆ ಇಲ್ಲ. ಅವರಿಗೆ ರಾಜ್ಯದ ಜನತೆ ಬಗ್ಗೆ ಇದ್ದ ಕಮಿಟ್ಮೆಂಟ್, ಬದ್ಧತೆ ಹಿನ್ನೆಲೆಯಲ್ಲಿ ಅವರು ಯಾವುದೇ ರೀತಿಯ ಯೋಚನೆಯನ್ನು ಮಾಡಲಿಲ್ಲ. ನಾನು ಸೋತ ಬಳಿಕವೂ ರಾಮನಗರ, ಮಂಡ್ಯದಲ್ಲಿ ಓಡಾಡುತ್ತಿದ್ದೇನೆ. ಅನೇಕ ರಾಜಕಾರಣಿ ಮಕ್ಕಳು ಅಡ್ಜೆಸ್ಟ್‌ಮೆಂಟ್‌ ಮೂಲಕ ಉತ್ತಮ ಸ್ಥಾನಗಳಲ್ಲಿದ್ದಾರೆ. ನನಗೆ ಹಾಗೇ ಆಗಿಲ್ಲ. ನಾನು ಒಬ್ಬನೇ ಓಡಾಡುತ್ತಿದ್ದೇನೆ ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ: CM Siddaramaiah: ಸರ್ಕಾರಕ್ಕೆ ಒಂದು ವರ್ಷ; ಹಲವು ಕನಸು ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ! ಮಾಧ್ಯಮ ಸಂವಾದದ ಲೈವ್‌ ಇಲ್ಲಿದೆ

ನೂರು ಕೋಟಿ ರೂಪಾಯಿ ಆಫರ್ ವಿಚಾರವೂ ತನಿಖೆ ಆಗಬೇಕು

ಶಿವರಾಮೇಗೌಡ ಒಬ್ಬ ಸರ್ಕಾರದ ವ್ಯಕ್ತಿಯ ಹೆಸರನ್ನು ಉಲ್ಲೇಖಿಸುತ್ತಾರೆ. ಹಾಸನದ ಸಂಸದರ ವಿಡಿಯೊ ರಿಲೀಸ್ ಆದ ಬಳಿಕ ಸಂತ್ರಸ್ತೆ ಮುಖವನ್ನು ಬ್ಲರ್ ಮಾಡಲಿಲ್ಲ. ಸಂಸದರ ಮೇಲೆ ಆರೋಪ ಕೇಳಿಬಂದಿದೆ. ಆರೋಪಿ ಅದನ್ನು ಎದುರಿಸಲಿ. ಆದರೆ, ಸಂತ್ರಸ್ತೆಯರ ವಿಡಿಯೊ ಬಿಡುಗಡೆ ಮಾಡಿ ಮಾನ ಹರಾಜು ಮಾಡೋದು ಯಾಕೆ? ವಿಡಿಯೊ ರಿಲೀಸ್ ಮಾಡಿದವರ ಬಗ್ಗೆ ಕ್ರಮ ಯಾಕೆ ಆಗುತ್ತಿಲ್ಲ. ನೂರು ಕೋಟಿ ರೂಪಾಯಿ ಆಫರ್ ವಿಚಾರವೂ ತನಿಖೆ ಆಗಬೇಕು ಎಂದು ನಿಖಿಲ್‌ ಕುಮಾರಸ್ವಾಮಿ ಆಗ್ರಹಿಸಿದರು.

Continue Reading
Advertisement
KKR vs SRH
ಕ್ರೀಡೆ11 mins ago

KKR vs SRH: ನಾಳೆ ಮೊದಲ ಕ್ವಾಲಿಫೈಯರ್‌ ಪಂದ್ಯ; ಗೆದ್ದವರಿಗೆ ನೇರ ಫೈನಲ್‌ ಸೋತವರಿಗೆ ಇನ್ನೊಂದು ಅವಕಾಶ

Air Crashes
ವಿದೇಶ13 mins ago

Air Crashes: ವಿಮಾನ ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟ 10 ಪ್ರಭಾವಿ ರಾಜಕಾರಣಿಗಳಿವರು

Phone Tapping
ಕರ್ನಾಟಕ23 mins ago

Phone Tapping: ಎಚ್‌ಡಿಕೆ ಫೋನ್‌ ಟ್ಯಾಪ್‌ ಮಾಡೋಕೆ, ಅವರೇನು ಟೆರರಿಸ್ಟಾ? ಎಂದ ಡಿಕೆಶಿ

Star Fashion
ಫ್ಯಾಷನ್25 mins ago

Star Fashion: ಮಾಲಾಶ್ರೀ ಮಗಳ ಬಿಗ್‌ ಬ್ಲ್ಯಾಕ್‌ ಜುಮ್ಕಾ ಲವ್‌!

Benjamin Netanyhu
ವಿದೇಶ26 mins ago

ಇಸ್ರೇಲ್‌ ಪಿಎಂ ಬೆಂಜಮಿನ್‌ ನೆತನ್ಯಾಹು, ಹಮಾಸ್‌ ಉಗ್ರರಿಗೆ ಜಾಗತಿಕ ಕೋರ್ಟ್‌ ಅರೆಸ್ಟ್‌ ವಾರೆಂಟ್! ಶೀಘ್ರ ಬಂಧನ?

Legislative Council Election dates fixedVoting on June 13
ರಾಜಕೀಯ30 mins ago

Legislative Council Election: ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ ದಿನಾಂಕ ಫಿಕ್ಸ್;‌ ಜೂನ್‌ 13ಕ್ಕೆ ಮತದಾನ

Covaxin Safety
ದೇಶ1 hour ago

Covaxin Safety: ಕೊವ್ಯಾಕ್ಸಿನ್‌ನಿಂದ ಅಡ್ಡ ಪರಿಣಾಮ ಎಂದು ಬನಾರಸ್‌ ವಿವಿ ವರದಿ; ವೈದ್ಯ ಸಂಶೋಧನಾ ಸಂಸ್ಥೆ ಆಕ್ಷೇಪ

Food department deletes name from ration card list even though it is alive
ವಿಜಯನಗರ1 hour ago

Food Department : ಜೀವಂತ ಇದ್ದವಳನ್ನು ಸತ್ತಿದ್ದಾಗಿ ಘೋಷಿಸಿದ ಆಹಾರ ಇಲಾಖೆ; ರೇಷನ್‌ ಕಾರ್ಡ್‌ನಿಂದಲೇ ಹೆಸರು ಡಿಲೀಟ್‌

History Of Ice Cream
ಆಹಾರ/ಅಡುಗೆ1 hour ago

History Of Ice Cream: ಎಲ್ಲರ ನೆಚ್ಚಿನ ಐಸ್‌ಕ್ರೀಮ್‌ ಹುಟ್ಟಿದ್ದು ಹೇಗೆ?

IPL 2024
ಕ್ರೀಡೆ1 hour ago

IPL 2024: ಮೋದಿ ಸ್ಟೇಡಿಯಂನಲ್ಲಿ ನಡೆಯುವ ಐಪಿಎಲ್​ ಪ್ಲೇ ಆಫ್​ ಪಂದ್ಯಕ್ಕೆ ಐಸಿಸ್‌ ಉಗ್ರರ ಕಾಟ; ಪಂದ್ಯಕ್ಕೂ ಮುನ್ನ ನಾಲ್ವರ ಬಂಧನ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ5 hours ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ1 day ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ1 day ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ1 day ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ3 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ3 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ4 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ4 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು4 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌