BRICS Countries: ಭಾರತ ಸದಸ್ಯರಾಗಿರುವ 'ಬ್ರಿಕ್ಸ್' ಕೂಟಕ್ಕೆ ಪಾಕಿಸ್ತಾನ? ಸೆನೆಟರ್ ಹೇಳಿದ್ದೇನು? - Vistara News

ವಿದೇಶ

BRICS Countries: ಭಾರತ ಸದಸ್ಯರಾಗಿರುವ ‘ಬ್ರಿಕ್ಸ್’ ಕೂಟಕ್ಕೆ ಪಾಕಿಸ್ತಾನ? ಸೆನೆಟರ್ ಹೇಳಿದ್ದೇನು?

BRICS Countries: 2024ರ ಬ್ರಿಕ್ಸ್ ಅಧ್ಯಕ್ಷತೆಯನ್ನು ರಷ್ಯಾ ವಹಿಸಿಕೊಂಡಿದ್ದು, ಪಾಕಿಸ್ತಾನವು ಈ ಕೂಟವನ್ನು ಸೇರ್ಪೆಡೆಯಾಗುವ ಇಂಗಿತವನ್ನು ವ್ಯಕ್ತಪಡಿಸಿದೆ.

VISTARANEWS.COM


on

Pakistan may join BRICS Countries with help of Russia
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಾಸ್ಕೋ: ಬ್ರೆಜಿಲ್(Brazil), ರಷ್ಯಾ(Russia), ಭಾರತ(India), ಚೀನಾ(China) ಮತ್ತು ದಕ್ಷಿಣ ಆಫ್ರಿಕಾ (South Africa) ಸದಸ್ಯರಾಗಿರುವ ಬ್ರಿಕ್ಸ್ ಕೂಟಕ್ಕೆ (BRICS Countries) ಪಾಕಿಸ್ತಾನ ಕೂಡ ಸೇರ್ಪಡೆಯಾಗುವ ಸಾಧ್ಯತೆ ಇದೆ. ಹೌದು, 2024ರಲ್ಲಿ ರಷ್ಯಾ ಬ್ರಿಕ್ಸ್‌ನ ಅಧ್ಯಕ್ಷರಾಗಿರುವುದರಿಂದ ರಷ್ಯಾದ ಸಹಕಾರದೊಂದಿಗೆ ಪಾಕಿಸ್ತಾನವು (Pakistan) ಅಂತರ್ ಸರ್ಕಾರಿ ಜಿಯೋಪೊಲಿಟಿಕಲ್ ಕೂಟ ಬ್ರಿಕ್ಸ್‌ಗೆ ಸೇರಬಹುದು ಎಂದು ಪಾಕಿಸ್ತಾನದ ರಕ್ಷಣಾ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸೆನೆಟರ್ ಮುಶಾಹಿದ್ ಹುಸೇನ್ ಹೇಳಿದ್ದಾರೆ.

ವಿಶೇಷವಾಗಿ ಇಂಧನ, ಸಂಪರ್ಕ, ಶಿಕ್ಷಣ, ಅಫ್ಘಾನಿಸ್ತಾನ ಸೇರಿದಂತೆ ಪ್ರಾದೇಶಿಕ ಭದ್ರತೆ ಮತ್ತು ಎಸ್‌ಸಿಒ ಮತ್ತು ವಿಶ್ವ ಸಂಸ್ಥೆಯ ಸೇರಿದಂತೆ ಬಹುಪಕ್ಷೀಯ ವೇದಿಕೆಗಳಲ್ಲಿ ಸಹಕಾರ ಕ್ಷೇತ್ರದಲ್ಲಿ ಪಾಕಿಸ್ತಾನ ಮತ್ತು ರಷ್ಯಾ ನಡುವೆ ಬೆಳೆಯುತ್ತಿರುವ ಸಂಬಂಧಗಳ ಬಗ್ಗೆ ಸೆನೆಟರ್ ಉಲ್ಲೇಖಿಸಿದರು.

ಪಾಕಿಸ್ತಾನ ಬ್ರಿಕ್ಸ್‌ಗೆ ಸೇರ್ಪಡೆಗೊಳ್ಳುವ ಕುರಿತು ಮಾತನಾಡಿದ ರಕ್ಷಣಾ ಸಮಿತಿಯ ಅಧ್ಯಕ್ಷ ಮುಶಾಹಿದ್, ಭವಿಷ್ಯದಲ್ಲಿ ನಾಲ್ಕು ಮುಸ್ಲಿಂ ರಾಷ್ಟ್ರಗಳಾದ ಪಾಕಿಸ್ತಾನ, ತುರ್ಕಿಯೆ, ಇರಾನ್ ಮತ್ತು ಸೌದಿ ಅರೇಬಿಯಾ ಪ್ರಾದೇಶಿಕ ವ್ಯವಹಾರಗಳಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ ಎಂದು ಹೇಳಿದರು. ಅವರು ಇಸ್ಲಾಮೋಫೋಬಿಯಾದ ಬಗ್ಗೆ ಅಧ್ಯಕ್ಷ ಪುಟಿನ್ ಅವರ ನಿಲುವನ್ನು ಶ್ಲಾಘಿಸಿದರು ಮತ್ತು ಪಾಕಿಸ್ತಾನದೆಡೆಗೆ ರಷ್ಯಾ ಹೊಂದಿರುವ ಅಭಿಮಾನವನ್ನು ಕೊಂಡಾಡಿದರು.

ಆಡಳಿತಾರೂಢ ಯುನೈಟೆಡ್ ರಷ್ಯಾ ಪಾರ್ಟಿ ಆಹ್ವಾನದ ಮೇರೆಗೆ ಸೆನೆಟರ್ ಹುಸೇನ್ ರಷ್ಯಾಕ್ಕೆ ಭೇಟಿ ನೀಡಿದ್ದು, ಈ ಸಂದರ್ಭದಲ್ಲಿ ಅವರು ರಷ್ಯಾದ ಭದ್ರತಾ ಮಂಡಳಿಯ ಉಪಾಧ್ಯಕ್ಷ ಮತ್ತು ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಮತ್ತು ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಇಂಟರ್ನ್ಯಾಷನಲ್ ಫೋರಮ್ ಫಾರ್ ಫ್ರೀಡಂ ಆಫ್ ನೇಷನ್ಸ್‌ನ ಅಧಿವೇಶನದಲ್ಲಿ, ಸೆನೆಟರ್ ಹುಸೇನ್ ಮತ್ತು ಮಾಜಿ ಅಧ್ಯಕ್ಷ ಮೆಡ್ವೆಡೆವ್ ಅವರು ಪಾಕಿಸ್ತಾನ-ರಷ್ಯಾ ಸಂಬಂಧಗಳು, ಅಫ್ಘಾನಿಸ್ತಾನದ ಪರಿಸ್ಥಿತಿ, ಗಾಜಾದಲ್ಲಿನ ಯುದ್ಧ ಮತ್ತು ಇಸ್ಲಾಮಾಬಾದ್-ಮಾಸ್ಕೋ ಸಹಯೋಗದ ವಿವಿಧ ಕ್ಷೇತ್ರಗಳಲ್ಲಿ ಚರ್ಚಿಸಿದರು.

ಈ ಸುದ್ದಿಯನ್ನೂ ಓದಿ: BRICS 2024: ರಷ್ಯಾಗೆ ಬ್ರಿಕ್ಸ್‌ ಅಧ್ಯಕ್ಷ ಜವಾಬ್ದಾರಿ; ಪುಟಿನ್‌ಗೆ ಮೋದಿ ಶುಭಾಶಯ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Indian Chutneys: ವಿಶ್ವದ ಟಾಪ್ 50 ಅಚ್ಚುಮೆಚ್ಚಿನ ತಿನಿಸುಗಳಲ್ಲಿ ಭಾರತದ ಈ ಎರಡು ಚಟ್ನಿಗಳು!

Indian Chutneys: ಅಡುಗೆ ಎಂಬ ಶಬ್ದ ಕಿವಿಯ ಮೇಲೆ ಇದ್ದರೆ ಹೊಟ್ಟೆ ಜಾಗೃತವಾಗುತ್ತದೆ. ರುಚಿಯಾದ ಅಡುಗೆಯನ್ನು ಚಪ್ಪರಿಸಿ ತಿನ್ನುವುದೇ ಒಂದು ಭಾಗ್ಯ. ಇನ್ನು ಮಸಾಲೆ ಸಾಮಗ್ರಿಗಳನ್ನು ಬಳಸಿ ಮಾಡುವ ಭಾರತದ ಅಡುಗೆಗಳು ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿವೆ. ಭಾರತದ ಅಡುಗೆಗೆ ಈಗ ಇನ್ನೊಂದು ಗರಿ ಮೂಡಿದೆ. ಅದೇನೆಂದರೆ ಊಟದ ಎಲೆಯ ತುದಿಯ ಮೇಲೆ ಬೀಳುವ ಚಟ್ನಿ  ಈಗ ವಿಶ್ವದ 50 ಡಿಪ್‌ ಗಳಲ್ಲಿ ಸ್ಥಾನ ಪಡೆದಿದೆಯೆಂತೆ.  

VISTARANEWS.COM


on

Indian Chutneys
Koo

ಬೆಂಗಳೂರು: ಚಟ್ನಿ ಎಂದಾಗ ಬಾಯಲ್ಲಿ ನೀರು ಬರುವುದು ಸಹಜ. ದೋಸೆ, ಇಡ್ಲಿ ಮಾಡಿದಾಗ ಸಾಂಬಾರಿನ ಹಂಗಿಲ್ಲದೇ ಚಟ್ನಿ ಜೊತೆ ಇವುಗಳನ್ನು ಸವಿಯಬಹುದು. ಇನ್ನು ಬಿಸಿ ಬಿಸಿ ಅನ್ನದ (Rice) ಜೊತೆಗೆ ಈ ಚಟ್ನಿಯ ಕಾಂಬಿನೇಷನ್‌ ಸೂಪರ್‌ ಆಗಿರುತ್ತದೆ. ಹೆಚ್ಚಾಗಿ  ನಾವು ಕೊತ್ತಂಬರಿಸೊಪ್ಪಿನ ಚಟ್ನಿ, ಮಾವಿನಕಾಯಿ ಚಟ್ನಿ (Mango Chutney), ಟೊಮೆಟೊ ಚಟ್ನಿ, ಶೇಂಗಾ ಚಟ್ನಿ ಮಾಡುತ್ತೇವೆ. ಇನ್ನು ಹಲವು ಬಗೆಯ ತರಕಾರಿಗಳನ್ನು ಬಳಸಿ ರುಚಿ ರುಚಿಯಾದ ಚಟ್ನಿಗಳನ್ನು ಮಾಡಬಹುದು. ಚಟ್ನಿಯ ಕುರಿತು ಯಾಕಿಷ್ಟು ಪೀಠಿಕೆಯೆಂದರೆ, ಇದೀಗ ಭಾರತದ ಚಟ್ನಿಗಳಲ್ಲಿ (Indian Chutneys)ಎರಡು ಚಟ್ನಿಗಳು ವಿಶ್ವದ 50 ಡಿಪ್ ಗಳಲ್ಲಿ ಸ್ಥಾನ ಪಡೆದಿವೆಯಂತೆ!

ಟೇಸ್ಟ್ ಅಟ್ಲಾಸ್ ಇತ್ತೀಚೆಗೆ ಜೂನ್ 2024ರ  ಶ್ರೇಯಾಂಕದ ಪ್ರಕಾರ ವಿಶ್ವದ 50 ಅತ್ಯುತ್ತಮ ಡಿಪ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಭಾರತೀಯ ಮಿಕ್ಸ್ ಚಟ್ನಿ  42ನೇ ಸ್ಥಾನ ಪಡೆದುಕೊಂಡಿದೆ. ಈ ಚಟ್ನಿಯನ್ನು ಬೇಯಿಸಿದ ಹಣ್ಣು ಮತ್ತು ತರಕಾರಿಗಳಿಂದ ತಯಾರಿಸಲಾಗುತ್ತದೆ. ಹಣ್ಣು ಹಾಗೂ ತರಕಾರಿಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಅದಕ್ಕೆ ಜೀರಿಗೆ, ಏಲಕ್ಕಿ, ಹುಣಸೆಹಣ್ಣು, ಶುಂಠಿ ಮತ್ತು ಅರಿಶಿನದಂತಹ ವಿವಿಧ ಮಸಾಲೆಗಳನ್ನು ಬೆರೆಸಿ ತಯಾರಿಸಲಾಗುತ್ತದೆಯಂತೆ. ಇದನ್ನು “ಭಾರತದ ರಾಷ್ಟ್ರೀಯ ಕಾಂಡಿಮೆಂಟ್ಸ್”ಎಂದು ಕರೆಯಲಾಗಿದೆ. ಹಾಗೇ ಟೇಸ್ಟ್ ಅಟ್ಲಾಸ್ ನ ಪಟ್ಟಿಯಲ್ಲಿ 47 ನೇ ಸ್ಥಾನದಲ್ಲಿ ನಮಗೆ ಪ್ರಿಯವಾದಂತಹ ಕೊತ್ತಂಬರಿ ಚಟ್ನಿ (ಧನಿಯಾ ಚಟ್ನಿ) ಹಾಗೂ ಕೊನೆಯ ಅಂದರೆ 50 ನೇ ಸ್ಥಾನದಲ್ಲಿ ಮಾವಿನ ಚಟ್ನಿ ಇದೆ. ಇದನ್ನು ಮಾವಿನ ಹಣ್ಣಿನಿಂದ ತಯಾರಿಸಲಾಗುತ್ತದೆ. ಈ ಮಾವಿನ ಚಟ್ನಿ ಹುಳಿ, ಸಿಹಿ ಮತ್ತು ಮಸಾಲೆಯ ಸುವಾಸನೆಯಿಂದ ಕೂಡಿತ್ತು ಎನ್ನಲಾಗಿದೆ.

ಅಲ್ಲದೇ ಈ ಪಟ್ಟಿಯಲ್ಲಿ ಲೆಬನಾನ್ ನಿಂದ ಟೌಮ್ ಮೊದಲ ಸ್ಥಾನದಲ್ಲಿದ್ದರೆ , ಮೆಕ್ಸಿಕನ್ ನ ಜನಪ್ರಿಯ ಡಿಲೈಟ್ ಗ್ವಾಕಮೋಲ್ 4ನೇ ಸ್ಥಾನದಲ್ಲಿದೆ. ಹಮ್ಮಸ್ 10 ನೇ ಸ್ಥಾನವನ್ನು ಪಡೆದುಕೊಂಡಿದೆ.

ಇದಕ್ಕೂ ಮೊದಲು ಹಲವಾರು ಭಾರತೀಯ ಭಕ್ಷ್ಯಗಳು ಟೇಸ್ಟ್ ಅಟ್ಲಾಸ್ ನ ಟಾಪ್ 50 ಪಟ್ಟಿಗಳಲ್ಲಿ ಸ್ಥಾನ ಪಡೆದಿತ್ತು. ವಡಾ ಪಾವ್, ಮಹಾರಾಷ್ಟ್ರದ ಪ್ರಸಿದ್ಧ ಬೀದಿ ಶೈಲಿಯ ತಿಂಡಿ ವಿಶ್ವದ ಅತ್ಯುತ್ತಮ ಸ್ಯಾಂಡ್ ವಿಚ್ ಗಳಲ್ಲಿ ಹೆಸರು ಪಡೆದಿವೆ.  ಅಷ್ಟೇ ಅಲ್ಲದೇ ಮೂರು ಭಾರತೀಯ ಸಿಹಿತಿಂಡಿಗಳು ವಿಶ್ವದ 10 ಅತ್ಯುತ್ತಮ ರೈಸ್ ಪುಡಿಂಗ್ ಗಳಲ್ಲಿ ಸ್ಥಾನ ಪಡೆದಿವೆ.

ಇದೇ ರೀತಿ ಭಾರತೀಯ ಎಲ್ಲಾ ಭಕ್ಷ್ಯಗಳು ವಿಶ್ವದ ಎಲ್ಲಾ ಕಡೆ ಮೆಚ್ಚುಗೆಯನ್ನು ಗಳಿಸುವಂತಾಗಲಿ. ಎಲ್ಲರ ನಾಲಿಗೆಯ ರುಚಿಯನ್ನು ಹೆಚ್ಚಿಸುವಂತಾಗಲಿ.

Continue Reading

ದೇಶ

Tshering Tobgay: ಮೋದಿ ನನ್ನ ಗುರು, ದೊಡ್ಡಣ್ಣ;‌ ಭೂತಾನ್‌ ಪ್ರಧಾನಿ ತ್ಶೆರಿಂಗ್‌ ತೋಬ್ಗೆ ಬಹುಪರಾಕ್!

Tshering Tobgay: ನರೇಂದ್ರ ಮೋದಿ ಅವರು ಕಳೆದ ಮಾರ್ಚ್‌ನಲ್ಲಿ ಭೂತಾನ್‌ಗೆ ಭೇಟಿ ನೀಡಿ, ಎರಡು ದಿನ ತಂಗಿದ್ದರು. “ನರೇಂದ್ರ ಮೋದಿ ಅವರು ಭೂತಾನ್‌ಗೆ ಆಗಮಿಸುವ ಗ್ಯಾರಂಟಿ ನೀಡಿದ್ದರು. ಈಗ ಆ ಗ್ಯಾರಂಟಿ ಸಾಕಾರಗೊಂಡಿದೆ” ಎಂಬುದಾಗಿ ಇದೇ ವೇಳೆ ತ್ಶೆರಿಂಗ್‌ ತೋಬ್ಗೆ ಹೇಳಿದ್ದರು. ಈಗ ಮೋದಿ ಪ್ರಮಾಣವಚನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭಾರತಕ್ಕೆ ಬಂದಿರುವ ತ್ಶೆರಿಂಗ್‌ ತೋಬ್ಗೆ ಅವರು ನರೇಂದ್ರ ಮೋದಿ ಅವರನ್ನು ಹೊಗಳಿದ್ದಾರೆ.

VISTARANEWS.COM


on

Tshering Tobgay
Koo

ನವದೆಹಲಿ: ನರೇಂದ್ರ ಮೋದಿ (Narendra Modi) ಅವರು ಸತತ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಭಾನುವಾರ (ಜೂನ್‌ 9) ಪ್ರಮಾಣವಚನ ಸ್ವೀಕರಿಸಿದ್ದಾರೆ. ದೇಶ-ವಿದೇಶಗಳ ಸಾವಿರಾರು ಗಣ್ಯರು ಪದಗ್ರಹಣ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದಾರೆ. ಇದರ ಬೆನ್ನಲ್ಲೇ, ಭೂತಾನ್‌ ಪ್ರಧಾನಿ ತ್ಶೆರಿಂಗ್‌ ತೋಬ್ಗೆ (Tshering Tobgay) ಅವರು ನರೇಂದ್ರ ಮೋದಿ ಅವರನ್ನು ಮುಕ್ತಕಂಠದಿಂದ ಹೊಗಳಿದ್ದಾರೆ. “ನರೇಂದ್ರ ಮೋದಿ ಅವರು ನನ್ನ ಗುರು, ಅವರು ನನ್ನ ದೊಡ್ಡಣ್ಣ ಇದ್ದಂತೆ” ಎಂದು ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

“ನರೇಂದ್ರ ಮೋದಿ ಅವರ ಮಾರ್ಗದರ್ಶನವು ನನಗೆ ಪ್ರಮುಖವಾಗಿದೆ. ಅವರು ನನಗೆ ಗುರು, ಸಹೋದರ ಇದ್ದಂತೆ. ಅವರ ಜತೆ ಉತ್ತಮ ಬಾಂಧವ್ಯ ಹೊಂದಿರುವುದು ನನಗೆ ಖುಷಿಯಾದ ವಿಚಾರ. ಅವರು ದೂರದೃಷ್ಟಿ ಹೊಂದಿರುವ ನಾಯಕರಾಗಿದ್ದು, ಆ ಯೋಜನೆಯನ್ನು ಅವರು ಸಾಕಾರಗೊಳಿಸುತ್ತಾರೆ. ಇದೆಲ್ಲದರ ಹೊರತಾಗಿ ಅವರು ನನಗೆ ದೊಡ್ಡಣ್ಣ ಇದ್ದಂತೆ. ನಾನು ಅವರನ್ನು ಬಡೆ ಭಾಯ್‌ ಎಂದೇ ಕರೆಯುತ್ತೇನೆ” ಎಂಬುದಾಗಿ ತ್ಶೆರಿಂಗ್‌ ತೋಬ್ಗೆ ಅವರು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ನರೇಂದ್ರ ಮೋದಿ ಅವರು ಕಳೆದ ಮಾರ್ಚ್‌ನಲ್ಲಿ ಭೂತಾನ್‌ಗೆ ಭೇಟಿ ನೀಡಿ, ಎರಡು ದಿನ ತಂಗಿದ್ದರು. “ನರೇಂದ್ರ ಮೋದಿ ಅವರು ಭೂತಾನ್‌ಗೆ ಆಗಮಿಸುವ ಗ್ಯಾರಂಟಿ ನೀಡಿದ್ದರು. ಈಗ ಆ ಗ್ಯಾರಂಟಿ ಸಾಕಾರಗೊಂಡಿದೆ” ಎಂಬುದಾಗಿ ಇದೇ ವೇಳೆ ತ್ಶೆರಿಂಗ್‌ ತೋಬ್ಗೆ ಹೇಳಿದ್ದರು. ಅಷ್ಟೇ ಅಲ್ಲ, ಮೋದಿ ಅವರು ಭೂತಾನ್‌ಗೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಸರ್ಕಾರವು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ “ಡ್ರಕ್‌ ಗ್ಯಾಲ್ಪೋ” ನೀಡಿ ಗೌರವಿಸಿದ್ದರು. ಇದರೊಂದಿಗೆ ಭೂತಾನ್‌ ಅತ್ಯುನ್ನತ ನಾಗರಿಕ ಪ್ರಶಸ್ತಿ ಸ್ವೀಕರಿಸಿದ ವಿಶ್ವದ ನಾಲ್ಕನೇ ವಿದೇಶಿ ನಾಯಕ ಎಂಬ ಖ್ಯಾತಿಗೆ ಮೋದಿ ಭಾಜನರಾಗಿದ್ದರು.

ಭಾರತದ ಸಾವಿರಾರು ಗಣ್ಯರ ಜತೆಗೆ ನೆರೆ ರಾಷ್ಟ್ರಗಳ ನಾಯಕರು ಕೂಡ ಭಾಗವಹಿಸಿದ್ದರು. ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮದ್ ಮುಯಿಝು, ಸೆಶೆಲ್ಸ್‌ನ ಉಪಾಧ್ಯಕ್ಷ ಅಹ್ಮದ್ ಅಫೀಫ್; ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ; ಮಾರಿಷಸ್‌ನ ಪ್ರಧಾನ ಮಂತ್ರಿ, ಪ್ರವಿಂದ್ ಕುಮಾರ್ ಜುಗ್ನೌತ್; ನೇಪಾಳದ ಪ್ರಧಾನಿ, ಪುಷ್ಪ ಕಮಲ್ ದಹಲ್ ‘ಪ್ರಚಂಡ’ ಮತ್ತು ಭೂತಾನ್ ಪ್ರಧಾನಿ, ತ್ಶೆರಿಂಗ್ ಟೊಬ್ಗೇ ಉಪಸ್ಥಿತರಿದ್ದರು.

ಇದನ್ನೂ ಓದಿ: Narendra Modi 3.0 : ಮೋದಿ ಅಧಿಕಾರಕ್ಕೆ ಬಾರದಿರಲಿ ಎಂದು ಕಾದು ಕೂತು, ಕೊನೆಗೂ ಅಭಿನಂದನೆ ತಿಳಿಸಿದ ಪಾಕಿಸ್ತಾನ!

Continue Reading

ಪ್ರಮುಖ ಸುದ್ದಿ

Narendra Modi 3.0 : ಮೋದಿ ಅಧಿಕಾರಕ್ಕೆ ಬಾರದಿರಲಿ ಎಂದು ಕಾದು ಕೂತು, ಕೊನೆಗೂ ಅಭಿನಂದನೆ ತಿಳಿಸಿದ ಪಾಕಿಸ್ತಾನ!

Narendra Modi 3.0 : ಚುನಾವಣೆಯಲ್ಲಿ ಅವರು ಮತ್ತೊಂದು ಬಾರಿ ಆರಿಸಿ ಬರದಿರಲಿ ಎಂದು ಆಶಿಸಿದ್ದರು. ಅದರೆ, ಪಾಕ್​ನ ಲೆಕ್ಕಾಚಾರ ಉಲ್ಟಾ ಆಗಿದೆ. ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇನ್ನೀಗ ಶುಭಾಶಯ ಹೇಳದೆ ವಿಧಿಯಿಲ್ಲ. ಹೀಗಾಗಿ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅಭಿನಂದನೆ ಸಲ್ಲಿಸಿದ್ದಾರೆ

VISTARANEWS.COM


on

Narendra Modi 3.20
Koo

ಬೆಂಗಳೂರು: ನರೇಂದ್ರ ಮೋದಿ ಮತ್ತೊಂದು ಅವಧಿಗೆ ಭಾರತದ ಪ್ರಧಾನಿಯಾಗುವುದು (Narendra Modi 3.0) ಪಾಕಿಸ್ತಾನದ ಸರ್ಕಾರಕ್ಕೆ ಇಷ್ಟವಿರಲಿಲ್ಲ. ಹಿಂದೂಸ್ತಾನದಲ್ಲೀಗ ಮೋದಿ ಯುಗ, ‘ಮೋದಿಯ ಭಾರತ’ ಎಂದು ಆಗಾಗ ಕರೆಯುತ್ತಿದ್ದರು. ಚುನಾವಣೆಯಲ್ಲಿ ಅವರು ಮತ್ತೊಂದು ಬಾರಿ ಆರಿಸಿ ಬರದಿರಲಿ ಎಂದು ಆಶಿಸಿದ್ದರು. ಅದರೆ, ಪಾಕ್​ನ ಲೆಕ್ಕಾಚಾರ ಉಲ್ಟಾ ಆಗಿದೆ. ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಇನ್ನೀಗ ಶುಭಾಶಯ ಹೇಳದೆ ವಿಧಿಯಿಲ್ಲ. ಹೀಗಾಗಿ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅಭಿನಂದನೆ ಸಲ್ಲಿಸಿದ್ದಾರೆ. “ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ @narendramodi ಅವರಿಗೆ ಅಭಿನಂದನೆಗಳು” ಎಂದು ಷರೀಫ್ ಎಕ್ಸ್​ ಪೋಸ್ಟ್​ ಮಾಡಿದ್ದಾರೆ.

ಪಾಕಿಸ್ತಾನದ ವಿದೇಶಾಂಗ ಕಚೇರಿ ವಕ್ತಾರ ಮುಮ್ತಾಜ್ ಜಹ್ರಾ ಬಲೂಚ್ ಅವರು ಶನಿವಾರ ಪ್ರಧಾನಿ ಮೋದಿಯವರನ್ನು ಅಭಿನಂದಿಸುವ ಬಗ್ಗೆ ಕೇಳಿದಾಗ, “ಅವರ ಚುನಾವಣಾ ಪ್ರಕ್ರಿಯೆಯ ಬಗ್ಗೆ ನಾವು ಯಾವುದೇ ಪ್ರತಿಕ್ರಿಯೆಗಳನ್ನು ಹೊಂದಿಲ್ಲ” ಎಂದು ಹೇಳಿದ್ದರು. ಹೊಸ ಭಾರತ ಸರ್ಕಾರ ಅಧಿಕೃತವಾಗಿ ಪ್ರಮಾಣವಚನದ ಪ್ರಕಟಣೆ ಹೊರಡಿಸದ ಕಾರಣ, ಅಭಿನಂದನಾ ಸಂದೇಶಗಳನ್ನು ಚರ್ಚಿಸಲು ಕಾಲ ಪಕ್ವವಾಗಿಲ್ಲ ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ, ಲೋಕಸಭೆ ಚುನಾವಣೆಯಲ್ಲಿ 543 ಸ್ಥಾನಗಳಲ್ಲಿ 293 ಸ್ಥಾನಗಳನ್ನು ಗೆಲ್ಲುವ ಮೂಲಕ ನಿರ್ಣಾಯಕ ಗೆಲುವು ಸಾಧಿಸಿದೆ.

“ಪಾಕಿಸ್ತಾನವು ಯಾವಾಗಲೂ ಭಾರತ ಸೇರಿದಂತೆ ತನ್ನ ಎಲ್ಲಾ ನೆರೆಹೊರೆಯವರೊಂದಿಗೆ ಸಹಕಾರ ಸಂಬಂಧವನ್ನು ಬಯಸುತ್ತದೆ. ಜಮ್ಮು ಮತ್ತು ಕಾಶ್ಮೀರದ ಪ್ರಮುಖ ವಿವಾದ ಸೇರಿದಂತೆ ಬಾಕಿ ಇರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ರಚನಾತ್ಮಕ ಮಾತುಕತೆ ಮತ್ತು ತೊಡಗಿಸಿಕೊಳ್ಳುವಿಕೆಯನ್ನು ನಾವು ನಿರಂತರವಾಗಿ ಪ್ರತಿಪಾದಿಸಿದ್ದೇವೆ” ಎಂದು ಬಲೂಚ್ ಹೇಳಿದ್ದರು.

ಇದನ್ನೂ ಓದಿ: Narendra Modi 3.0 : ಮೋದಿ ಅಧಿಕಾರಕ್ಕೆ ಬಾರದಿರಲಿ ಎಂದು ಕಾದು ಕೂತು, ಕೊನೆಗೂ ಅಭಿನಂದನೆ ತಿಳಿಸಿದ ಪಾಕಿಸ್ತಾನ!

ಪಾಕಿಸ್ತಾನದೊಂದಿಗೆ ಸೌಹಾರ್ದಯುತ ಸಂಬಂಧವನ್ನು ಬಯಸುವುದಾಗಿ ಭಾರತ ಸಮರ್ಥಿಸಿಕೊಂಡಿದೆ, ಇಸ್ಲಾಮಾಬಾದ್ ಮೊದಲು ಭಯೋತ್ಪಾದನೆ ಮತ್ತು ಹಗೆತನ ಮುಕ್ತ ವಾತಾವರಣವನ್ನು ಸೃಷ್ಟಿಸಬೇಕು ಎಂದು ಒತ್ತಿಹೇಳಿದೆ.

Continue Reading

ಕ್ರೈಂ

Killer Python: ಮಹಿಳೆಯನ್ನು ಜೀವಂತವಾಗಿ ನುಂಗಿದ ಹೆಬ್ಬಾವು! ಹೊಟ್ಟೆ ಸೀಳಿ ಹೊರ ತೆಗೆದರು!

45 ವರ್ಷದ ಮಹಿಳೆಯೊಬ್ಬರನ್ನು ಸುಮಾರು 16 ಅಡಿ ಉದ್ದದ ಹೆಬ್ಬಾವು (Killer Python) ಜೀವಂತವಾಗಿ ನುಂಗಿರುವ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ಮೂರು ದಿನಗಳ ಹಿಂದೆ ಮಹಿಳೆ ಮನೆಗೆ ಹಿಂದಿರುಗದೇ ಇದ್ದಾಗ ಅನುಮಾನಗೊಂಡ ಪತಿ ಗ್ರಾಮಸ್ಥರ ನೆರವಿನಿಂದ ಮಹಿಳೆಯ ಹುಡುಕಾಟದಲ್ಲಿ ತೊಡಗಿದ್ದರು.

VISTARANEWS.COM


on

By

Killer Python
Koo

ಇಂಡೋನೇಷ್ಯಾ: ನಾಪತ್ತೆಯಾದ 45 ವರ್ಷದ ಮಹಿಳೆಯೊಬ್ಬರು (women) ಶವವಾಗಿ ಮೂರು ದಿನಗಳ ಬಳಿಕ ಹೆಬ್ಬಾವಿನ (Killer Python) ಹೊಟ್ಟೆಯೊಳಗೆ ಪತ್ತೆಯಾಗಿರುವ ಘಟನೆ ಇಂಡೋನೇಷ್ಯಾದಲ್ಲಿ (Indonesian) ನಡೆದಿದೆ. ಮಹಿಳೆಯ ಪತಿ ಸೇರಿದಂತೆ ದಕ್ಷಿಣ ಸುಲವೆಸಿ ಪ್ರಾಂತ್ಯದ ಕಲೆಂಪಂಗ್ ಗ್ರಾಮದ ನಿವಾಸಿಗಳು ಸುಮಾರು 16 ಅಡಿ ಉದ್ದದ ಹೆಬ್ಬಾವಿನೊಳಗೆ (python) ಮಹಿಳೆ ಇರುವುದನ್ನು ಪತ್ತೆ ಹಚ್ಚಿದ್ದಾರೆ.

ಮಧ್ಯ ಇಂಡೋನೇಷ್ಯಾದಲ್ಲಿ ಹೆಬ್ಬಾವು 45 ವರ್ಷದ ಫರೀದಾ ಅವರನ್ನು ಸಂಪೂರ್ಣವಾಗಿ ನುಂಗಿತ್ತು. ಅದರ ಹೊಟ್ಟೆಯಲ್ಲಿ ಫರೀದಾ ಅವರ ಶವ ಪತ್ತೆಯಾಗಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ನಾಲ್ಕು ಮಕ್ಕಳ ತಾಯಿಯಾಗಿರುವ ಫರೀದಾ ಗುರುವಾರ ರಾತ್ರಿ ನಾಪತ್ತೆಯಾಗಿದ್ದರು. ಹೀಗಾಗಿ ಅವರ ಪತಿ ಮತ್ತು ಮಕ್ಕಳು ಸಾಕಷ್ಟು ಹುಡುಕಾಡಿದ್ದಾರೆ. ಎಲ್ಲೂ ಪತ್ತೆಯಾಗದ ಹಿನ್ನೆಲೆಯಲ್ಲಿ ಗ್ರಾಮದ ಮುಖ್ಯಸ್ಥ ಸುರ್ದಿ ರೋಸಿ ಎಎಫ್‌ಪಿಗೆ ಮಾಹಿತಿ ನೀಡಿದ್ದಾರೆ. ಮಹಿಳೆ ನಾಪತ್ತೆಯಾದ ಸ್ಥಳದಲ್ಲಿ ಮಹಿಳೆಯ ವಸ್ತುಗಳು ಕಂಡು ಬಂದಿದೆ. ಇದರಿಂದ ಅನುಮಾನಗೊಂಡ ಆಕೆಯ ಪತಿ ಮತ್ತು ಗ್ರಾಮಸ್ಥರು ಆ ಪ್ರದೇಶವನ್ನು ಹುಡುಕಿದರು. ಆಗ ಅವರಿಗೆ ದೊಡ್ಡ ಹೊಟ್ಟೆಯ ಹೆಬ್ಬಾವೊಂದು ಕಂಡು ಬಂದಿದೆ.

ಅವರು ಹೆಬ್ಬಾವಿನ ಹೊಟ್ಟೆಯನ್ನು ಸೀಳಿದಾಗ ತಕ್ಷಣ ಫರೀದಾ ಅವರ ತಲೆ ಗೋಚರಿಸಿದೆ ಮತ್ತು ಹಾವಿನೊಳಗೆ ಫರೀದಾ ಸಂಪೂರ್ಣ ಬಟ್ಟೆ ಧರಿಸಿದ ಸ್ಥಿತಿಯಲ್ಲೇ ಇರುವುದು ಕಂಡುಬಂದಿದೆ. ಇಂತಹ ಘಟನೆಗಳನ್ನು ಅತ್ಯಂತ ಅಪರೂಪವೆಂದು ಪರಿಗಣಿಸಲಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇಂಡೋನೇಷ್ಯಾದಲ್ಲಿ ಹೆಬ್ಬಾವುಗಳು ಹಲವಾರು ಜನರನ್ನು ಸಂಪೂರ್ಣ ನುಂಗಿರುವ ಪ್ರಕರಣಗಳು ನಡೆದಿವೆ.

ಕಳೆದ ವರ್ಷ ಆಗ್ನೇಯ ಸುಲವೆಸಿಯ ಟಿನಾಂಗ್ಜಿಯಾ ಜಿಲ್ಲೆಯ ನಿವಾಸಿಗಳು ಎಂಟು ಮೀಟರ್ ಹೆಬ್ಬಾವನ್ನು ಕೊಂದಾಗ ಅದು ಹಳ್ಳಿಯೊಂದರಲ್ಲಿ ರೈತರೊಬ್ಬರನ್ನು ಕತ್ತು ಹಿಸುಕಿ ತಿಂದಿರುವುದು ಕಂಡುಬಂದಿದೆ.

ಇದನ್ನೂ ಓದಿ: Road Accident : ವಾಕಿಂಗ್‌ ಹೊರಟಿದ್ದ ವೃದ್ಧೆಗೆ ಬೈಕ್‌ ಡಿಕ್ಕಿ; ಕ್ಷಣದಲ್ಲೇ ಹಾರಿಹೋಯ್ತು ಪ್ರಾಣ

2018 ರಲ್ಲಿ ಆಗ್ನೇಯ ಸುಲವೆಸಿಯ ಮುನಾ ಪಟ್ಟಣದಲ್ಲಿ 54 ವರ್ಷದ ಮಹಿಳೆ ಏಳು ಮೀಟರ್ ಹೆಬ್ಬಾವಿನೊಳಗೆ ಶವವಾಗಿ ಪತ್ತೆಯಾಗಿದ್ದರು. ಅದಕ್ಕೂ ಮೊದಲು ಪಶ್ಚಿಮ ಸುಲವೆಸಿಯ ರೈತರೊಬ್ಬರು ತಾಳೆ ಎಣ್ಣೆ ತೋಟದಲ್ಲಿ ಕಾಣೆಯಾಗಿದ್ದು, ನಾಲ್ಕು ಮೀಟರ್ ಉದ್ದದ ಹೆಬ್ಬಾವು ಅವರನ್ನು ಜೀವಂತವಾಗಿ ನುಂಗಿತ್ತು.

ದೇವರ ದರ್ಶನ ಮಾಡಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಯತ್ನ; ಒಬ್ಬನ ಸಾವು

ಕೌಟುಂಬಿಕ ಸಮಸ್ಯೆಯಿಂದಾಗಿ ಒಂದೇ ಕುಟುಂಬದ ನಾಲ್ವರು ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದರಲ್ಲಿ ಒಬ್ಬರು ಮೃತಪಟ್ಟಿದ್ದು, ಮೂವರು ತೀವ್ರ ಅಸ್ವಸ್ಥಗೊಂಡಿದ್ದರು. ಈ ಮಲೆಮಹದೇಶ್ವರ ಬೆಟ್ಟ ವ್ಯಾಪ್ತಿಯ ತಾಳಬೆಟ್ಟದಲ್ಲಿ ಘಟನೆ ನಡೆದಿದೆ.

ಚಂದಗಾಲು ಗ್ರಾಮದ ಮಹದೇವನಾಯಕ (65) ಮೃತರು. ಅಸ್ವಸ್ಥಗೊಂಡ ಮಹದೇವನಾಯಕನ ಪತ್ನಿ ಗೌರಮ್ಮ(60), ರಿಷಿತಾ (21), ಲೀಲಾವತಿ (45) ಎಂಬವರನ್ನು ಮೈಸೂರಿನ ಕೆಆರ್‌ನಗರ ತಾಲೂಕಿನ ಚಂದಗಾಲು ಗ್ರಾಮಸ್ಥರು ಎಂದು ತಿಳಿದು ಬಂದಿದೆ.

ಮಹದೇಶ್ವರ ಬೆಟ್ಟಕ್ಕೆ ಬಂದು ದೇವರ ದರ್ಶನ ಪಡೆದು ವಾಪಸ್ ಬರುವಾಗ ತಾಳ ಬೆಟ್ಟದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಹದೇವನಾಯಕ ವಿಷ ಸೇವಿಸಿದ ಕೂಡಲೇ ಒದ್ದಾಡಿ ಮೃತಪಟ್ಟಿದ್ದಾರೆ. ಇತ್ತ ಗೌರಮ್ಮ, ಲೀಲಾವತಿ, ರಿಷಿತಾ ವಿಷ ಸೇವನೆ ಮಾಡಿದ್ದಾರೆ. ಆದರೆ ದೇಹದಲ್ಲಿ ಉರಿ ಕಾಣಿಸಿಕೊಂಡು ಜೋರಾಗಿ ಕೂಗಿಕೊಂಡು ನರಳಾಡಿದ್ದಾರೆ.

ಈ ವೇಳೆ ತಾಳ ಬೆಟ್ಟದಲ್ಲಿದ್ದ ಸ್ಥಳೀಯರು ಕೂಡಲೇ ಅವರನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದರು. ಮೂವರು ಮಹಿಳೆಯರಿಗೆ ಚಿಕಿತ್ಸೆ ಮುಂದುವರಿದಿದೆ. ಈ ಕುರಿತು ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

Continue Reading
Advertisement
Modi 3.0 Cabinet
ದೇಶ13 mins ago

Modi 3.0 Cabinet: ಅಮಿತ್‌ ಶಾಗೆ ಮತ್ತೆ ಗೃಹ ಖಾತೆ; ಇಲ್ಲಿದೆ ಮೋದಿ ಸಂಪುಟ ಸಚಿವರು ಮತ್ತು ಖಾತೆ ಪಟ್ಟಿ

ಕರ್ನಾಟಕ16 mins ago

Modi 3.0 Cabinet: ಜೋಶಿಗೆ ಆಹಾರ, ಎಚ್‌ಡಿಕೆಗೆ ಬೃಹತ್ ಕೈಗಾರಿಕೆ‌, ನಿರ್ಮಲಾಗೆ ವಿತ್ತ, ಸೋಮಣ್ಣಗೆ ಡಬಲ್‌ ಖುಷಿ, ಶೋಭಾಗೆ MSME

Sowing seed distribution in Shira by MLA TB Jayachandra
ತುಮಕೂರು28 mins ago

Shira News: ಬಿತ್ತನೆ ಬೀಜ, ರಸಗೊಬ್ಬರ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಶಾಸಕ ಟಿ.ಬಿ.ಜಯಚಂದ್ರ

World Environment Day celebration in Banavasi
ಉತ್ತರ ಕನ್ನಡ29 mins ago

Banavasi News: ಬನವಾಸಿಯಲ್ಲಿ ವಿಶ್ವ ಪರಿಸರ ದಿನಾಚರಣೆ

Vinay Kulkarni
ಕರ್ನಾಟಕ1 hour ago

Vinay Kulkarni: ವಿನಯ್ ಕುಲಕರ್ಣಿಗೆ ತೀವ್ರ ಹಿನ್ನಡೆ; ಸಿಬಿಐ ವಿಶೇಷ ಕೋರ್ಟ್‌ನ ತೀರ್ಪು ಎತ್ತಿ ಹಿಡಿದ ಸುಪ್ರೀಂ

Modi 3.0 Cabinet
ಪ್ರಮುಖ ಸುದ್ದಿ1 hour ago

Modi 3.0 Cabinet: ಮೊದಲ ಸಂಪುಟ ಸಭೆಯಲ್ಲೇ ಮೋದಿ ಸಿಕ್ಸರ್;‌ ಬಡವರಿಗೆ 3 ಕೋಟಿ ಮನೆಗಳ ನಿರ್ಮಾಣಕ್ಕೆ ಅಸ್ತು

Students Fashion
ಫ್ಯಾಷನ್2 hours ago

Students Fashion: ಕಾಲೇಜು ಹುಡುಗಿಯರ ಫ್ಯಾಷನ್‌ ಲಿಸ್ಟ್‌ಗೆ ಸೇರಿದ ಮಾರ್ಬಲ್‌ ಪ್ರಿಂಟೆಡ್‌ ಕ್ರಾಪ್‌ ಟಾಪ್ಸ್!

Suresh Gopi
ದೇಶ2 hours ago

Suresh Gopi: ಸಚಿವ ಸ್ಥಾನಕ್ಕೆ ಬಿಜೆಪಿಯ ಸುರೇಶ್‌ ಗೋಪಿ ರಾಜೀನಾಮೆ; ಮಹತ್ವದ ಸ್ಪಷ್ಟನೆ ಕೊಟ್ಟ ಸಂಸದ

Medical student commits suicide in Bengaluru
ಬೆಂಗಳೂರು2 hours ago

Medical Student : ಬೆಂಗಳೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿ ನೇಣಿಗೆ ಶರಣು

Shivaraj Kumar
ಕರ್ನಾಟಕ2 hours ago

Shivaraj Kumar: ನನ್ನ ಹೆಂಡತಿ ಗೆಲ್ಲಲಿ ಎಂದು ಆಸೆ ಪಟ್ಟಿದ್ದು ತಪ್ಪಾ?: ನಟ ಶಿವರಾಜ್‌ ಕುಮಾರ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ4 hours ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ3 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ3 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ7 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ1 week ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ1 week ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 weeks ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

ಟ್ರೆಂಡಿಂಗ್‌