Russia-Ukraine war | ಪುಟಿನ್‌ ಯುದ್ಧೋನ್ಮಾದಿ ಹೇಳಿಕೆ ಬೆನ್ನಲ್ಲೇ ರಷ್ಯಾದ ಮೇಲೆ ಡ್ರೋನ್ ದಾಳಿ ನಡೆಸಿದ ಉಕ್ರೇನ್ - Vistara News

ವಿದೇಶ

Russia-Ukraine war | ಪುಟಿನ್‌ ಯುದ್ಧೋನ್ಮಾದಿ ಹೇಳಿಕೆ ಬೆನ್ನಲ್ಲೇ ರಷ್ಯಾದ ಮೇಲೆ ಡ್ರೋನ್ ದಾಳಿ ನಡೆಸಿದ ಉಕ್ರೇನ್

ಉಕ್ರೇನ್ ಪಡೆಯು ರಷ್ಯಾದ ಬ್ರಿಯಾನ್ಸ್ಕ್ ಪ್ರದೇಶದ ಕ್ಲಿಮೋವ್ಸ್ಕಿ ಜಿಲ್ಲೆ ಮೇಲೆ ಡ್ರೋನ್ ದಾಳಿ (Russia-Ukraine war) ನಡೆಸಿದೆ. ಜನವರಿ 5ರಿಂದ ರಷ್ಯಾವು ಉಕ್ರೇನ್‌ ಮೇಲೆ ಸಂಘಟಿತ ಬಲದೊಂದಿಗೆ ಮುಗಿಬೀಳಲಿದೆ ಎಂದು ಅಧ್ಯಕ್ಷ ಪುಟಿನ್‌ ಹೇಳಿಕೆ ಬೆನ್ನಲ್ಲೇ ಉಕ್ರೇನ್‌ ಕಡೆಯಿಂದ ಡ್ರೋನ್‌ ಹಾರಿದೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮಾಸ್ಕೋ: ರಷ್ಯಾದಿಂದ ಸತತ ದಾಳಿ ಎದುರಿಸಿರುವ ಉಕ್ರೇನ್ ಇದೀಗ ರಷ್ಯಾ (Russia-Ukraine war) ವಿರುದ್ಧ ತಿರುಗಿ ಬಿದ್ದಿದೆ. ತನ್ನ ಗಡಿ ಭಾಗದಲ್ಲಿರುವ ಬ್ರಿಯಾನ್ಸ್ಕ್ ಪ್ರದೇಶದ ಮೇಲೆ ಸೋಮವಾರ ಮುಂಜಾನೆ ಡ್ರೋನ್ ಮೂಲಕ ದಾಳಿ ನಡೆಸಿದೆ. ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಬ್ರಿಯಾನ್ಸ್ಕ್ ನ ಗವರ್ನರ್ ಅಲೆಕ್ಸಾಂಡರ್ ಬೊಗೊಮ್ಯಾಜ್ ತಿಳಿಸಿದ್ದಾರೆ.

“ಉಕ್ರೇನ್‌ನ ದಕ್ಷಿಣ ಭಾಗದ ಗಡಿಯ ಬಳಿಯಿರುವ ಕ್ಲಿಮೋವ್ಸ್ಕಿ ಜಿಲ್ಲೆಯಲ್ಲಿ ಡ್ರೋನ್ ದಾಳಿ (Russia-Ukraine war) ನಡೆದಿದೆ. ವಿದ್ಯುತ್ ಸ್ಥಾವರಗಳಿಗೆ ಹಾನಿಯುಂಟಾಗಿರುವ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಉಳಿದಂತೆ ಬೇರೆ ತೊಂದರೆಗಳಾಗಿಲ್ಲ. ಎಲ್ಲ ರೀತಿಯ ತುರ್ತು ಸೇವೆಗಳನ್ನು ಕೈಗೊಳ್ಳುತ್ತಿದ್ದೇವೆ” ಎಂದು ಅಲೆಕ್ಸಾಂಡರ್ ಬೊಗೊಮ್ಯಾಜ್ ಅವರು ಟೆಲಿಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ದಾಳಿಯ ಬಗ್ಗೆ ಉಕ್ರೇನ್ ಇನ್ನೂ ಯಾವುದೇ ಮಾಹಿತಿ ಕೊಟ್ಟಿಲ್ಲ.

ಪುಟಿನ್‌ ಘೋಷಣೆ ಬೆನ್ನಿಗೇ ಉಕ್ರೇನ್‌ ಅಟ್ಯಾಕ್‌?
ಭಾನುವಾರ ಹೊಸ ವರ್ಷಾಚರಣೆ ವೇಳೆ ಮಾತನಾಡಿದ್ದ ರಷ್ಯಾ ಅದ್ಯಕ್ಷ ವ್ಲಾದಿಮಿರ್ ಪುಟಿನ್‌ ಅವರು,‌ ಉಕ್ರೇನ್‌ ವಿರುದ್ಧದ ಸೇನಾ ಸಂಘರ್ಷವನ್ನು ಹೆಚ್ಚಿಸುವ ಸುಳಿವನ್ನು ನೀಡಿದ್ದರು. ಜನವರಿ 5ರಿಂದ ಎಲ್ಲ ಸೇನೆಗಳನ್ನು ಸೇರಿಸಿ ದಾಳಿ ನಡೆಯಲಿದೆ ಎಂದಿದ್ದರು. ಇದರ ಬೆನ್ನಿಗೇ ಉಕ್ರೇನ್‌ ದಾಳಿಗೆ ಇಳಿದಿದೆ.

ತಮ್ಮ 9 ನಿಮಿಷಗಳ ಹೊಸ ವರ್ಷದ ಆಚರಣೆಯ ಭಾಷಣದಲ್ಲಿ ಪುಟಿನ್‌, ಪಾಶ್ಚಿಮಾತ್ಯ ದೇಶಗಳು ರಷ್ಯಾವನ್ನು ನಾಶಪಡಿಸುವುದಕ್ಕೋಸ್ಕರ ಉಕ್ರೇನ್‌ ಅನ್ನು ದಾಳದಂತೆ ಪ್ರಯೋಗಿಸುತ್ತಿವೆ. ಆದರೆ ಇದಕ್ಕೆ ನಾವು ಆಸ್ಪದ ನೀಡುವುದಿಲ್ಲ ಎಂದರು. ಉಕ್ರೇನ್‌ನಲ್ಲಿ ರಷ್ಯಾ ಮಿಲಿಟರಿ ಕಾರ್ಯಾಚರಣೆ ನಡೆಸಲು ಕಾರಣ ಪಶ್ಚಿಮದ ರಾಷ್ಟ್ರಗಳಾಗಿವೆ. ಶಾಂತಿಯ ಹೆಸರಿನಲ್ಲಿ ಅವುಗಳು ಭಯೋತ್ಪಾದನೆಯನ್ನೇ ನಡೆಸಿವೆ ಎಂದು ಗುಡುಗಿದ್ದರು ಪುಟಿನ್‌.

ಎಂಟು ವರ್ಷಗಳಿಂದಲೇ ಸಂಘರ್ಷ
ರಷ್ಯಾ ೨೦೧೪ರಿಂದಲೇ ಉಕ್ರೇನ್‌ನ ಮೇಲೆ ನಿರಂತರ ಹುನ್ನಾರ ನಡೆಸುತ್ತಿದೆ. ಉಕ್ರೇನ್‌ಗೆ ಸೇರಿದ ಕೆಲವು ಪ್ರಾಂತ್ಯಗಳಿಗೆ ತಾನೇ ಸ್ವಾಯತ್ತೆ ಘೋಷಣೆ ಮಾಡಿ ಪ್ರತ್ಯೇಕವಾಗಿ ವ್ಯವಹಾರ ಶುರು ಮಾಡಿತ್ತು. ಇದರಿಂದ ಕೆರಳಿದ ಉಕ್ರೇನ್‌ ರಕ್ಷಣಾಕ್ರಮವಾಗಿ ನ್ಯಾಟೋವನ್ನು ಸೇರಲು ಮುಂದಾದದ್ದು ರಷ್ಯಾಕ್ಕೆ ಬೆಂಕಿ ಹಚ್ಚಿದಂತಾಯಿತು.

ಹೀಗಾಗಿ ಕಳೆದ 2022ರ ಫೆಬ್ರವರಿ ತಿಂಗಳಿನಿಂದ ತನ್ನ ದಾಳಿಯನ್ನು ರಷ್ಯಾ ತೀವ್ರಗೊಳಿಸಿದೆ. ಅದಕ್ಕೆ ಪ್ರತಿಯಾಗಿ ಉಕ್ರೇನ್ ಕೂಡ ರಷ್ಯಾದ ಮೇಲೆ ಹಲವು ದಾಳಿಗಳನ್ನು ನಡೆಸಿದೆ. ಈ ಯುದ್ಧದಲ್ಲಿ (Russia-Ukraine war) ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: Russia-Ukraine war | ಹೊಸ ವರ್ಷ ಉಕ್ರೇನ್‌ ವಿರುದ್ಧ ಸಂಘರ್ಷ ತೀವ್ರಗೊಳಿಸುವ ಸಂಕಲ್ಪ ಮಾಡಿದ ಪುಟಿನ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Spices Row: ಸಿಂಗಾಪುರ, ಹಾಂಕಾಂಗ್‌ ಬಳಿಕ ಭಾರತದಲ್ಲೂ ಎವರೆಸ್ಟ್, ಎಂಡಿಎಚ್‌ ಮಸಾಲೆ ಪರಿಶೀಲನೆ ಶುರು

Everest Spices Row: ಎವರೆಸ್ಟ್ ಜೊತೆಗೆ, ʼMDH’ ಎಂದು ಜನಪ್ರಿಯವಾಗಿರುವ ಮಹಾಶಿಯಾನ್ ಡಿ ಹಟ್ಟಿಯ ಮಸಾಲೆಗಳು ಸಹ ವಿವಾದದಲ್ಲಿ ಸಿಲುಕಿಕೊಂಡಿವೆ. MDH ನವದೆಹಲಿ ಮೂಲದ ಭಾರತೀಯ ಮಸಾಲೆ ಉತ್ಪಾದಕ ಮತ್ತು ಮಾರಾಟಗಾರ. ಎವರೆಸ್ಟ್ ನಂತರ ಇದು ಭಾರತೀಯ ಮಾರುಕಟ್ಟೆಯಲ್ಲಿ ಎರಡನೇ ಅತಿದೊಡ್ಡ ಮಸಾಲೆ ಬ್ರಾಂಡ್.

VISTARANEWS.COM


on

MDH everest spices row
Koo

ಹೊಸದಿಲ್ಲಿ: ಕ್ಯಾನ್ಸರ್ (Cancer) ಉಂಟುಮಾಡುವ ಕೀಟನಾಶಕ (pesticide) ಅಂಶಗಳನ್ನು ಹೊಂದಿರುವ ಕಾರಣಕ್ಕಾಗಿ ಸಿಂಗಾಪುರ (Singapore) ಮತ್ತು ಹಾಂಕಾಂಗ್‌ಗಳಲ್ಲಿ (Hongkong) ಆಹಾರ ನಿಗಾ ಸಂಸ್ಥೆಗಳ ತೀವ್ರ ನಿಗಾಕ್ಕೆ (Spices Row) ಕಾರಣವಾಗಿರುವ ಭಾರತೀಯ ಮೂಲದ ಎವರೆಸ್ಟ್‌ (Everest spices) ಮಸಾಲೆ ಉತ್ಪನ್ನಗಳ ಕಂಪನಿ, ಇದೀಗ ತಮ್ಮ ಉತ್ಪನ್ನಗಳು ಬ್ಯಾನ್‌ (ban) ಆಗಿಲ್ಲ ಎಂದಿವೆ. ಭಾರತೀಯ ಮಸಾಲೆ ಮಂಡಳಿ ಮತ್ತು ಎಫ್‌ಎಸ್‌ಎಸ್‌ಎಐನಂತಹ ಶಾಸನಬದ್ಧ ಸಂಸ್ಥೆಗಳು ನಿಗದಿಪಡಿಸಿದ ಆಹಾರ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿದ್ದೇವೆ ಎಂದು ಕಂಪನಿ ಹೇಳಿದೆ.

ಎರಡೂ ದೇಶಗಳಲ್ಲಿ ತಮ್ಮ ಮಸಾಲೆಗಳನ್ನು ನಿಷೇಧಿಸಲಾಗಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ. ಕಂಪನಿಯು ತನ್ನ ಎಲ್ಲಾ ಉತ್ಪನ್ನಗಳನ್ನು ರವಾನೆ ಮಾಡುವ ಮೊದಲು ಮತ್ತು ರಫ್ತು ಮಾಡುವ ಮೊದಲು ಕಟ್ಟುನಿಟ್ಟಾದ ತಪಾಸಣೆಗೆ ಒಳಪಡಿಸುತ್ತೇವೆ ಎಂದು ಹೇಳಿದೆ. ಪ್ರತಿ ಸಾಗಣೆಯೂ ಭಾರತೀಯ ಮಸಾಲೆ ಮಂಡಳಿಯಿಂದ ಗುಣಮಟ್ಟದ ತಪಾಸಣೆಗೆ ಒಳಗಾಗುತ್ತದೆ. ಪ್ರಸ್ತುತ ಸಮಸ್ಯೆಯ ನಿವಾರಣೆಗೆ ಅಧಿಕೃತ ಸಂವಹನಕ್ಕಾಗಿ ಕಾಯುತ್ತಿದ್ದು, ನಮ್ಮ ಗುಣಮಟ್ಟ ನಿಯಂತ್ರಣ ತಂಡವು ಈ ವಿಷಯವನ್ನು ಪರಿಶೀಲಿಸುತ್ತಿದೆ ಎಂದಿದೆ.

ತಮ್ಮ ಮಸಾಲೆಗಳನ್ನು ಸಿಂಗಾಪುರ ಅಥವಾ ಹಾಂಕಾಂಗ್‌ನಲ್ಲಿ ನಿಷೇಧಿಸಲಾಗಿಲ್ಲ ಎಂದು ಎವರೆಸ್ಟ್‌ನ ವಕ್ತಾರರು ತಿಳಿಸಿದ್ದಾರೆ. “ಸಿಂಗಾಪುರದ ಆಹಾರ ಸುರಕ್ಷತಾ ಪ್ರಾಧಿಕಾರವು ಹಾಂಕಾಂಗ್‌ನ ಉತ್ಪನ್ನ ವಾಪಸಾತಿ ಎಚ್ಚರಿಕೆಯನ್ನು ಉಲ್ಲೇಖಿಸಿದೆ ಮತ್ತು ಹೆಚ್ಚಿನ ತಪಾಸಣೆಗಾಗಿ ಉತ್ಪನ್ನವನ್ನು ಮರುಪಡೆಯಲು ಮತ್ತು ತಾತ್ಕಾಲಿಕವಾಗಿ ಹಿಡಿದಿಡಲು ನಮ್ಮ ಸಿಂಗಾಪುರ್ ಆಮದುದಾರರನ್ನು ಕೇಳಿದೆ” ಎಂದು ವಕ್ತಾರರು ಸ್ಪಷ್ಟಪಡಿಸಿದರು.

ದಿವಂಗತ ವಾದಿಲಾಲ್ ಭಾಯ್ ಶಾ ಸ್ಥಾಪಿಸಿದ 57 ವರ್ಷ ಹಳೆಯ ಮಸಾಲೆ ಬ್ರಾಂಡ್ ಎವರೆಸ್ಟ್‌ ಕಂಪನಿಯು ಶುದ್ಧ ಮತ್ತು ಮಿಶ್ರಿತ ಮಸಾಲೆಗಳ ಭಾರತದ ಅತಿದೊಡ್ಡ ತಯಾರಕ. ಜಾಗತಿಕವಾಗಿ 80ಕ್ಕೂ ಹೆಚ್ಚು ದೇಶಗಳಲ್ಲಿ ಚಲಾವಣೆಯಲ್ಲಿದೆ.

ಎವರೆಸ್ಟ್ ಜೊತೆಗೆ, ʼMDH’ ಎಂದು ಜನಪ್ರಿಯವಾಗಿರುವ ಮಹಾಶಿಯಾನ್ ಡಿ ಹಟ್ಟಿಯ ಮಸಾಲೆಗಳು ಸಹ ವಿವಾದದಲ್ಲಿ ಸಿಲುಕಿಕೊಂಡಿವೆ. MDH ನವದೆಹಲಿ ಮೂಲದ ಭಾರತೀಯ ಮಸಾಲೆ ಉತ್ಪಾದಕ ಮತ್ತು ಮಾರಾಟಗಾರ. ಎವರೆಸ್ಟ್ ನಂತರ ಇದು ಭಾರತೀಯ ಮಾರುಕಟ್ಟೆಯಲ್ಲಿ ಎರಡನೇ ಅತಿದೊಡ್ಡ ಮಸಾಲೆ ಬ್ರಾಂಡ್.

ವಿವಾದ ಏನು?

ಹಾಂಕಾಂಗ್ ಮತ್ತು ಸಿಂಗಾಪುರಗಳು ಭಾರತೀಯ ಬ್ರಾಂಡ್‌ಗಳಾದ ಎಂಡಿಹೆಚ್ ಮತ್ತು ಎವರೆಸ್ಟ್‌ನ ನಾಲ್ಕು ಮಸಾಲೆ ಉತ್ಪನ್ನಗಳ ಮಾರಾಟದ ಮೇಲೆ ನಿರ್ಬಂಧಗಳನ್ನು ವಿಧಿಸಿವೆ. ಇವುಗಳಲ್ಲಿ ನಿಗದಿತ ಮಿತಿಯನ್ನು ಮೀರಿ ಕೀಟನಾಶಕ ʼಎಥಿಲೀನ್ ಆಕ್ಸೈಡ್ʼ ಇದೆ ಎಂದು ಆರೋಪಿಸಲಾಗಿದೆ. ಹಾಂಕಾಂಗ್‌ನ ಆಹಾರ ಸುರಕ್ಷತೆ ಕೇಂದ್ರ (CFS) ಗ್ರಾಹಕರನ್ನು ಈ ಉತ್ಪನ್ನಗಳನ್ನು ಖರೀದಿಸದಂತೆ ಮತ್ತು ವ್ಯಾಪಾರಿಗಳನ್ನು ಮಾರಾಟ ಮಾಡದಂತೆ ಕೇಳಿಕೊಂಡಿದೆ. ಸಿಂಗಾಪುರ್ ಫುಡ್ ಏಜೆನ್ಸಿ, ಈ ಮಸಾಲೆಗಳನ್ನು ಮರುಪಡೆಯಲು ಕಂಪನಿಗೆ ನಿರ್ದೇಶಿಸಿದೆ.

ಸಿಂಗಾಪುರವು ‘ಎವರೆಸ್ಟ್ ಫಿಶ್ ಕರಿ ಮಸಾಲಾ’ವನ್ನು ಹಿಂಪಡೆದಿದೆ. MDHನ ಮದ್ರಾಸ್ ಕರಿ ಪೌಡರ್ (ಮದ್ರಾಸ್ ಮೇಲೋಗರ ಮಸಾಲೆ ಮಿಶ್ರಣ), ಎವರೆಸ್ಟ್ ಫಿಶ್ ಕರಿ ಮಸಾಲಾ, MDH ಸಾಂಬಾರ್ ಮಸಾಲಾ ಮಿಶ್ರಿತ ಮಸಾಲಾ ಪೌಡರ್ ಮತ್ತು MDH ಕರಿ ಪುಡಿ ಮಿಶ್ರಿತ ಮಸಾಲಾ ಪೌಡರ್ ಅನ್ನು ಖರೀದಿಸದಂತೆ ಹಾಂಕಾಂಗ್ ಗ್ರಾಹಕರನ್ನು ಕೇಳಿದೆ.

ಈಗ ಭಾರತದಲ್ಲಿ ಪರೀಕ್ಷೆ

ಇದರ ನಡುವೆ, ಭಾರತದಲ್ಲಿ ಮಾರಾಟವಾಗುವ ಮಸಾಲೆಗಳ ಗುಣಮಟ್ಟವನ್ನು ಪರಿಶೀಲಿಸಲು ಆಹಾರ ಸುರಕ್ಷತಾ ನಿಯಂತ್ರಕ ಎಫ್‌ಎಸ್‌ಎಸ್‌ಎಐ (FSSAI) ಮುಂದಾಗಿದೆ. ಸಿಂಗಾಪುರ ಮತ್ತು ಹಾಂಕಾಂಗ್‌ಗಳು ಎತ್ತಿರುವ ಕಾಳಜಿಯ ಹಿನ್ನೆಲೆಯಲ್ಲಿ, ದೇಶದಾದ್ಯಂತ MDH ಮತ್ತು ಎವರೆಸ್ಟ್ ಸೇರಿದಂತೆ ಎಲ್ಲಾ ಬ್ರಾಂಡ್‌ಗಳ ಪುಡಿ ರೂಪದ ಮಸಾಲೆಗಳ ಮಾದರಿಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ.

“ಪ್ರಸ್ತುತ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು, FSSAI ಎಮ್‌ಡಿಹೆಚ್ ಮತ್ತು ಎವರೆಸ್ಟ್ ಸೇರಿದಂತೆ ಎಲ್ಲಾ ಬ್ರಾಂಡ್‌ಗಳ ಮಸಾಲೆಗಳ ಮಾದರಿಗಳನ್ನು ಮಾರುಕಟ್ಟೆಯಿಂದ ತೆಗೆದುಕೊಳ್ಳುತ್ತಿದೆ. ಅವುಗಳು ಎಫ್‌ಎಸ್‌ಎಸ್‌ಎಐ ಮಾನದಂಡಗಳನ್ನು ಪೂರೈಸುತ್ತವೆಯೇ ಎಂದು ಪರಿಶೀಲಿಸುತ್ತಿದೆ” ಎಂದು ಸರ್ಕಾರಿ ಮೂಲ ತಿಳಿಸಿದೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (FSSAI) ರಫ್ತು ಮಾಡುವ ಮಸಾಲೆಗಳ ಗುಣಮಟ್ಟವನ್ನು ನಿಯಂತ್ರಿಸುವುದಿಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ FSSAI, ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಉತ್ಪನ್ನದ ಗುಣಮಟ್ಟವನ್ನು ಪರಿಶೀಲಿಸಲು ಮಾರುಕಟ್ಟೆಯಿಂದ ನಿಯಮಿತವಾಗಿ ಮಸಾಲೆಗಳ ಮಾದರಿಗಳನ್ನು ತೆಗೆದುಕೊಳ್ಳುತ್ತದೆ.

ಇದನ್ನೂ ಓದಿ: Everest Spices: ಸಿಂಗಾಪುರ ಬಳಿಕ ಹಾಂಕಾಂಗ್‌ನಲ್ಲೂ ಎವರೆಸ್ಟ್‌, ಎಂಡಿಎಚ್‌ ಮಸಾಲೆ ಪೌಡರ್‌ ಬ್ಯಾನ್!

Continue Reading

ಪ್ರಮುಖ ಸುದ್ದಿ

Balakot Airstrike: ನಮ್ಮ ಯೋಧರ ಕೂದಲೂ ಕೊಂಕದಂತೆ ಪಾಕ್‌ ವಾಯುಪಡೆ ಭೇದಿಸಿ ದಾಳಿ ನಡೆಸಲಾಗಿತ್ತು: ಮಾಜಿ ಐಎಎಫ್‌ ಮುಖ್ಯಸ್ಥ

Balakot Airstrike: ಭಾರತೀಯ ವಾಯುಪಡೆಯ (ಐಎಎಫ್) ಮಾಜಿ ಮುಖ್ಯಸ್ಥ ಮತ್ತು ಇದೀಗ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನಾಯಕನಾಗಿರುವ ಏರ್ ಚೀಫ್ ಮಾರ್ಷಲ್ ಆರ್‌ಕೆಎಸ್ ಭದೌರಿಯಾ (ನಿವೃತ್ತ) ಅವರು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಯೋತ್ಪಾದನೆ ವಿರುದ್ಧ ಬಿಜೆಪಿ ಸರ್ಕಾರ ತೆಗೆದುಕೊಂಡಿರುವ ದೃಢವಾದ ನಿಲುವನ್ನು ಶ್ಲಾಘಿಸಿದ್ದಾರೆ.

VISTARANEWS.COM


on

balakot airstrike RKS bhadauria
Koo

ಹೊಸದಿಲ್ಲಿ: ಪಾಕಿಸ್ತಾನದ ವಾಯುಪಡೆ (Pakistan Airforce) ಮತ್ತು ಸೇನೆಯ ರಕ್ಷಣೆಯನ್ನೂ ಭೇದಿಸಿ ಭಾರತದ ವಾಯುಪಡೆ (Indian Airforce) ಬಾಲಾಕೋಟ್ ವೈಮಾನಿಕ ದಾಳಿಯನ್ನು (Balakot Airstrike) ನಡೆಸಿತು. ದಾಳಿಯಲ್ಲಿ ಭಾರತದ ಸೈನ್ಯಕ್ಕೆ ಯಾವುದೇ ನಷ್ಟವೂ ಉಂಟಾಗಿರಲಿಲ್ಲ ಎಂದು ಮಾಜಿ ಐಎಎಫ್ (IAF) ಮುಖ್ಯಸ್ಥ ಆರ್‌ಕೆಎಸ್ ಭದೌರಿಯಾ (RKS Bhadauria) ಹೇಳಿದ್ದಾರೆ.

ಭಾರತೀಯ ವಾಯುಪಡೆಯ (ಐಎಎಫ್) ಮಾಜಿ ಮುಖ್ಯಸ್ಥ ಮತ್ತು ಇದೀಗ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ನಾಯಕನಾಗಿರುವ ಏರ್ ಚೀಫ್ ಮಾರ್ಷಲ್ ಆರ್‌ಕೆಎಸ್ ಭದೌರಿಯಾ (ನಿವೃತ್ತ) ಹೀಗೆ ಹೇಳಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಯೋತ್ಪಾದನೆ ವಿರುದ್ಧ ಬಿಜೆಪಿ ಸರ್ಕಾರ ತೆಗೆದುಕೊಂಡಿರುವ ದೃಢವಾದ ನಿಲುವನ್ನು ಶ್ಲಾಘಿಸಿದ್ದಾರೆ.

ಉತ್ತರ ಪ್ರದೇಶದ ಫತೇಪುರ್ ಸಿಕ್ರಿಯಲ್ಲಿ ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಬದೌರಿಯಾ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆಯ ಸ್ಪಷ್ಟ ನೀತಿಯನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು. ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಸರ್ಜಿಕಲ್ ಸ್ಟ್ರೈಕ್‌ಗಳು ಸೇರಿದಂತೆ ಭಯೋತ್ಪಾದಕ ಘಟನೆಗಳಿಗೆ ತ್ವರಿತ ಪ್ರತಿಕ್ರಿಯೆ ನೀಡಲಾಗುತ್ತಿದೆ ಎಂದರು.

“ಬಿಜೆಪಿ ಅಧಿಕಾರಕ್ಕೆ ಬಂದಾಗ, ಪ್ರಧಾನಿ ಮೋದಿ ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆಯ ಸ್ಪಷ್ಟ ನೀತಿಯನ್ನು ಪ್ರತಿಪಾದಿಸಿದರು. ಭಯೋತ್ಪಾದನೆಯ ಘಟನೆ ಸಂಭವಿಸಿದಾಗ ಮತ್ತು ದುಷ್ಕರ್ಮಿಗಳು ಗಡಿಯುದ್ದಕ್ಕೂ ಅಡಗಿಕೊಂಡಾಗ, ಎಲ್ಒಸಿಯಾದ್ಯಂತ ಸರ್ಜಿಕಲ್ ಸ್ಟ್ರೈಕ್ ಮಾಡಲಾಯಿತು. ಪುಲ್ವಾಮಾ ಭಯೋತ್ಪಾದಕ ದಾಳಿ ಸಂಭವಿಸಿದಾಗ, ಲಾಂಚ್‌ಪ್ಯಾಡ್‌ಗಳು ಗಡಿಯಾಚೆ ಹೋಗಿ ಹುಡುಕಿದವು. ಆ ಸಮಯದಲ್ಲಿ ಅದು ಒಂದು ಪ್ರಮುಖ ಹೆಜ್ಜೆ ಮತ್ತು ಬಲವಾದ ಸಂದೇಶವಾಗಿತ್ತು” ಎಂದವರು ಹೇಳಿದರು.

“ನಾವು ನಡೆಸಿದ ವೈಮಾನಿಕ ದಾಳಿಯಲ್ಲಿ ಪಾಕಿಸ್ತಾನದ ವಾಯುಸೇನೆ ಮತ್ತು ಸೇನೆಯ ರಕ್ಷಣೆಯನ್ನು ಭೇದಿಸಿ ನಾವು ಹೋದೆವು. ಆದರೆ ನಾವು ಯಾವುದೇ ನಷ್ಟವನ್ನು ಅನುಭವಿಸಲಿಲ್ಲ. ಅದು ಯಶಸ್ವಿ ಕಾರ್ಯಾಚರಣೆಯಾಗಿತ್ತು. ನಾವು ಪ್ರತಿ ಸನ್ನಿವೇಶಕ್ಕೂ ಸಿದ್ಧರಿದ್ದೇವೆ. ಯಾರೇ ಆಗಲಿ ನಮ್ಮ ದೇಶದಲ್ಲಿ ಭಯೋತ್ಪಾದನೆಯನ್ನು ಹರಡಿದರೆ, ಅವರು ಎಲ್ಲಿ ಅಡಗಿಕೊಂಡರೂ ಅವರನ್ನು ಗುರಿಯಾಗಿಸಿ ಹೊಡೆಯುತ್ತೇವೆ. ಇದರ ಅರ್ಥ ಸ್ಪಷ್ಟವಾಗಿದೆ- ಉಗ್ರವಾದಕ್ಕೆ ನಮ್ಮದು ಶೂನ್ಯ ಸಹಿಷ್ಣುತೆ, ನಾವು ಭಯೋತ್ಪಾದನೆಯನ್ನು ಸಹಿಸುವುದಿಲ್ಲ” ಎಂದು ಮಾಜಿ ಐಎಎಫ್ ಮುಖ್ಯಸ್ಥ ಆರ್‌ಕೆಎಸ್ ಭದೌರಿಯಾ ಹೇಳಿದ್ದಾರೆ.

ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸಿದ ಭದೌರಿಯಾ, ದಾಳಿಯ ನಂತರ ಗಡಿಯುದ್ದಕ್ಕೂ ಭೂಗತವಾಗಿರುವ ಲಾಂಚ್‌ಪ್ಯಾಡ್‌ಗಳನ್ನು ತಟಸ್ಥಗೊಳಿಸುವಲ್ಲಿ ಯಶಸ್ವಿ ಪ್ರಯತ್ನಗಳು ನಡೆದಿವೆ ಎಂದು ಹೇಳಿದರು. ಭಾರತದ ಕಡೆಯಿಂದ ಯಾವುದೇ ನಷ್ಟವಾಗದಂತೆ ಪಾಕಿಸ್ತಾನದ ವಾಯುಪಡೆ ಮತ್ತು ಸೇನೆಯ ರಕ್ಷಣೆಯನ್ನು ಭೇದಿಸುವ ಮೂಲಕ ಇದನ್ನು ಕಾರ್ಯಗತಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Balakot Airstrike Anniversary: ಬಾಲಾಕೋಟ್ ಏರ್‌ಸ್ಟ್ರೈಕ್‌ಗೆ 4 ವರ್ಷ, ಪಾಕ್‌ನ ಉಗ್ರರ ಶಿಬಿರಗಳು ಧ್ವಂಸ! ಅಂದು ಏನೆಲ್ಲ ನಡೆಯಿತು?

Continue Reading

ವೈರಲ್ ನ್ಯೂಸ್

Viral video: ಸೇನಾ ಹೆಲಿಕಾಪ್ಟರ್‌ಗಳ ಭಯಾನಕ ಡಿಕ್ಕಿ; 10 ಸಾವು

Viral video: ಮಧ್ಯ ಆಕಾಶದಲ್ಲಿ ಉಂಟಾದ ಘರ್ಷಣೆಯ ವೀಡಿಯೊ ಇಂಟರ್ನೆಟ್‌ನಲ್ಲಿ ಕಾಣಿಸಿಕೊಂಡಿತು. ಮಿಲಿಟರಿ ಹೆಲಿಕಾಪ್ಟರ್‌ಗಳ ವಾಯು ಹಾರಾಟದ ಕುಶಲತೆಯನ್ನು ಪ್ರದರ್ಶಿಸುತ್ತಿರುವಾಗ ಅವುಗಳಲ್ಲಿ ಎರಡು ಡಿಕ್ಕಿ ಹೊಡೆದುಕೊಂಡವು. ಎರಡು ಹೆಲಿಕಾಪ್ಟರ್‌ಗಳಲ್ಲಿದ್ದವರಲ್ಲಿ ಯಾರೂ ಅಪಘಾತದಲ್ಲಿ ಬದುಕುಳಿಯಲಿಲ್ಲ.

VISTARANEWS.COM


on

malasia helicopter crash viral video
Koo

ಮಲೇಷ್ಯಾ: ಮಲೇಷ್ಯಾದಿಂದ (Malasia) ವರದಿಯಾದ ದುರಂತ ಘಟನೆಯೊಂದರಲ್ಲಿ (Helicopter Crash) ಮಂಗಳವಾರ ಮಲೇಷ್ಯಾ ಸಶಸ್ತ್ರ ಪಡೆಗಳ ಎರಡು ಹೆಲಿಕಾಪ್ಟರ್‌ಗಳು ಗಾಳಿಯಲ್ಲಿ ಡಿಕ್ಕಿ (Air Accident) ಹೊಡೆದು ಕನಿಷ್ಠ ಹತ್ತು ಮಂದಿ ಸಾವನ್ನಪ್ಪಿದ್ದಾರೆ. ಈ ಭೀಕರ ಅಪಘಾತ ಇಂದು ಬೆಳಿಗ್ಗೆ ಲುಮುಟ್‌ನಲ್ಲಿರುವ ರಾಯಲ್ ಮಲೇಷಿಯನ್ ನೇವಿ (ಆರ್‌ಎಂಎನ್) ನೆಲೆಯಲ್ಲಿ ಸಂಭವಿಸಿದೆ ಎಂದು ವರದಿಯಾಗಿದೆ. ಸೋಶೀಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ಘಟನೆಯ ವೀಡಿಯೊ (Viral video), ದುರಂತದ ಕ್ಷಣಗಳನ್ನು ತೋರಿಸಿದೆ.

ಮಧ್ಯ ಆಕಾಶದಲ್ಲಿ ಉಂಟಾದ ಘರ್ಷಣೆಯ ವೀಡಿಯೊ ಇಂಟರ್ನೆಟ್‌ನಲ್ಲಿ ಕಾಣಿಸಿಕೊಂಡಿತು. ಮಿಲಿಟರಿ ಹೆಲಿಕಾಪ್ಟರ್‌ಗಳ ವಾಯು ಹಾರಾಟದ ಕುಶಲತೆಯನ್ನು ಪ್ರದರ್ಶಿಸುತ್ತಿರುವಾಗ ಅವುಗಳಲ್ಲಿ ಎರಡು ಡಿಕ್ಕಿ ಹೊಡೆದುಕೊಂಡವು. ಸ್ಥಳೀಯ ಸುದ್ದಿವಾಹಿನಿಗಳ ಆರಂಭಿಕ ದೃಢೀಕೃತ ವರದಿಗಳ ಪ್ರಕಾರ, ಎರಡು ಹೆಲಿಕಾಪ್ಟರ್‌ಗಳಲ್ಲಿದ್ದವರಲ್ಲಿ ಯಾರೂ ಅಪಘಾತದಲ್ಲಿ ಬದುಕುಳಿಯಲಿಲ್ಲ.

ಎರಡೂ ಹೆಲಿಕಾಪ್ಟರ್‌ಗಳಲ್ಲಿದ್ದ ಚಾಲಕರು ತರಬೇತಿ ಪಡೆಯುತ್ತಿದ್ದವರಾಗಿದ್ದರು. ಕೆಲವು ತರಬೇತಿ ವಿದ್ಯಾರ್ಥಿಗಳು ಹಾಗೂ ತರಬೇತಿದಾರರು ಇವುಗಳಲ್ಲಿದ್ದರು. ಸ್ಥಳೀಯ ವರದಿಗಳ ಪ್ರಕಾರ, M503-3 ಮಾರಿಟೈಮ್ ಆಪರೇಷನ್ಸ್ ಹೆಲಿಕಾಪ್ಟರ್ (HOM) ಏಳು ಸಿಬ್ಬಂದಿಯನ್ನು ಹೊಂದಿತ್ತು. ಆದರೆ ಇನ್ನೊಂದು, M502-6, ಮೂರು ಸದಸ್ಯರನ್ನು ಹೊಂದಿತ್ತು. ಎರಡೂ ಹೆಲಿಕಾಪ್ಟರ್‌ಗಳು ಮೇ 3-5ರಿಂದ ನಡೆಯಲಿರುವ ನೌಕಾಪಡೆಯ ದಿನ ಆಚರಣೆಗೆ ಸಂಬಂಧಿಸಿದ ತಾಲೀಮನ್ನು ಪಡೆಯುತ್ತಿದ್ದವು.

ಇದನ್ನೂ ಓದಿ: Viral Video: ಲ್ಯಾಂಬೋರ್ಗಿನಿ ಕಾರಿನ ಮೇಲೆ ಕುಣಿದು ಕುಪ್ಪಳಿಸಿದ ಮಹಿಳೆ; ಕಾರಿನ ಸ್ಥಿತಿ ನೋಡಿ ಮರುಗಿದ ನೆಟ್ಟಿಗರು!

Continue Reading

ದೇಶ

Anant-Radhika Wedding: ಅನಂತ್‌ ಅಂಬಾನಿ-ರಾಧಿಕಾ ಮರ್ಚಂಟ್‌ ವಿವಾಹ ಸಮಾರಂಭಕ್ಕೆ ಸ್ಥಳ ನಿಗದಿ

Anant-Radhika Wedding: ಕಳೆದ ತಿಂಗಳು ಅದ್ಧೂರಿಯಾಗಿ ಅನಂತ್‌ ಅಂಬಾನಿ ಮತ್ತು ರಾಧಿಕಾ ಮರ್ಚಂಟ್‌ ಅವರ ವಿವಾಹಪೂರ್ವ ಕಾರ್ಯಕ್ರಮ ನಡೆದಿತ್ತು. ಜುಲೈಯಲ್ಲಿ ಇವರ ವಿವಾಹ ನಡೆಯಲಿದೆ. ಇದೀಗ ವಿವಾಹ ನಡೆಯಲಿರುವ ಸ್ಥಳದ ಮಾಹಿತಿ ತಿಳಿದು ಬಂದಿದೆ. ಲಂಡನ್‌ನ ಸ್ಟೋಕ್‌ ಪಾರ್ಕ್‌ ಎಸ್ಟೇಟ್‌ನಲ್ಲಿ ಈ ಪ್ರತಿಷ್ಠಿತ, ವೈಭವದ ಕಾರ್ಯಕ್ರಮ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

VISTARANEWS.COM


on

Anant-Radhika Wedding
Koo

ನವದೆಹಲಿ: ಇತ್ತೀಚೆಗೆ ಅದ್ಧೂರಿಯಾಗಿ ವಿವಾಹಪೂರ್ವ ಕಾರ್ಯಕ್ರಮ ಆಚರಿಸಿದ್ದ ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ (Mukesh Ambani) ಪುತ್ರ ಅನಂತ್‌ ಅಂಬಾನಿ (Anant Ambani) ಹಾಗೂ ಉದ್ಯಮಿ ವಿರೇನ್‌ ಮರ್ಚಂಟ್‌ ಪುತ್ರಿ ರಾಧಿಕಾ ಮರ್ಚಂಟ್‌ (Radhika Merchant) ಜುಲೈಯಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಇದೀಗ ಈ ಪ್ರತಿಷ್ಠಿತ ವಿವಾಹ ನಡೆಯುವ ಸ್ಥಳದ ಮಾಹಿತಿ ಬಹಿರಂಗಗೊಂಡಿದೆ. ಲಂಡನ್‌ನ ಸ್ಟೋಕ್‌ ಪಾರ್ಕ್‌ ಎಸ್ಟೇಟ್‌ (Stoke Park estate)ನಲ್ಲಿ ನಡೆಯಲಿರುವ ವೈಭವದ ಸಮಾರಂಭದಲ್ಲಿ ಅನಂತ್‌ ಅಂಬಾನಿ ಮತ್ತು ರಾಧಿಕಾ ಮರ್ಚಂಟ್‌ ವಿವಾಹವಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ (Anant-Radhika Wedding).

ಈಗಾಗಲೇ ಬಾಲಿವುಡ್‌ನ ಖ್ಯಾತ ಕಲಾವಿದರಿಗೆಲ್ಲ ಆಮಂತ್ರಣ ಪತ್ರಿಕೆ ನೀಡಲಾಗಿದೆ ಎಂದು ವರದಿಯೊಂದು ಹೇಳಿದೆ. ಮದುವೆಯ ಸಿದ್ಧತೆಗಳೆಲ್ಲ ಈಗಾಗಲೇ ಆರಂಭವಾಗಿದ್ದು, ಅನಂತ್‌ ಅವರ ತಾಯಿ ನೀತಾ ಅಂಬಾನಿ ಎಲ್ಲದರ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಪ್ರಿ ವೆಡ್ಡಿಂಗ್‌ ಕಾರ್ಯಕ್ರಮವನ್ನೂ ನೀತಾ ಅಂಬಾನಿ ಅವರೇ ಯಶಸ್ವಿಯಾಗಿ ನಿರ್ವಹಿಸಿದ್ದರು.

ಸ್ಟೋಕ್ ಪಾರ್ಕ್‌ನಲ್ಲಿ ಆಯೋಜಿಸಲಾಗುವ ಈ ಸಮಾರಂಭದ ಥೀಮ್ ಇನ್ನೂ ಬಹಿರಂಗಗೊಂಡಿಲ್ಲ. ಇಲ್ಲಿ ಕಾಕ್‌ಟೈಲ್‌ ಅಥವಾ ಸಂಗೀತ್ ನೈಟ್ ಆಯೋಜಿಸುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿದೆ. ಈ ತಿಂಗಳ ಆರಂಭದಲ್ಲಿ ಅನಂತ್ ಮತ್ತು ರಾಧಿಕಾ ದುಬೈಯ ಎರಡು ಪ್ರತಿಷ್ಠಿತ ಮಾಲ್‌ಗಳಲ್ಲಿ ಬಿಗಿ ಭದ್ರತೆಯ ನಡುವೆ ಶಾಪಿಂಗ್ ಮಾಡುತ್ತಿರುವ ವಿಡಿಯೊ ವೈರಲ್‌ ಆಗಿತ್ತು.

ಅದ್ಧೂರಿ ಪ್ರೀ ವೆಡ್ಡಿಂಗ್‌

ಗುಜರಾತ್‌ನ ಜಾಮ್‌ನಗರದಲ್ಲಿ ಕಳೆದ ತಿಂಗಳು ಅದ್ಧೂರಿ ಪ್ರೀ ವೆಡ್ಡಿಂಗ್‌ ಸಮಾರಂಭ ಆಯೋಜಿಸಲಾಗಿತ್ತು. ಅಂದಾಜು 12,00 ಕೋಟಿ ರೂ.ಗಳಲ್ಲಿ ಈ ಸಮಾರಂಭ ನಡೆದಿತ್ತು. ದೇಶ-ವಿದೇಶಗಳ ಗಣ್ಯರ ಉಪಸ್ಥಿತಿ, ಬಾಲಿವುಡ್‌ ನಟ-ನಟಿಯರ ಹಾಡು, ನೃತ್ಯ, ಮೋಜು-ಮಸ್ತಿಯನ್ನು ಆಯೋಜಿಸಲಾಗಿತ್ತು. ಖ್ಯಾತ ಪಾಪ್‌ ಗಾಯಕಿ ರಿಹಾನಾ, ಸಚಿನ್‌ ತೆಂಡೂಲ್ಕರ್‌, ಮಹೇಂದ್ರ ಸಿಂಗ್‌ ಧೋನಿ ಕುಟುಂಬಸ್ಥರು, ಸಲ್ಮಾನ್‌ ಖಾನ್‌, ಶಾರುಖ್‌ ಖಾನ್‌, ಆಮೀರ್‌ ಖಾನ್‌, ರಣವೀರ್‌ ಸಿಂಗ್‌, ದೀಪಿಕಾ ಪಡುಕೋಣೆ, ಗೌತಮ್‌ ಅದಾನಿ, ಆಲಿಯಾ ಭಟ್‌, ರಣಬೀರ್‌ ಕಪೂರ್‌, ಬಿಲ್‌ ಗೇಟ್ಸ್‌ ಸೇರಿ ದೇಶ-ವಿದೇಶಗಳ ನೂರಾರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. 

ಅನಂತ್ ಮತ್ತು ರಾಧಿಕಾ ಅವರ ವಿವಾಹ ನಿಶ್ಚಿತಾರ್ಥ ಆಪ್ತರ ಸಮ್ಮುಖದಲ್ಲಿ 2023ರ ಜನವರಿಯಲ್ಲಿ ಮುಂಬೈಯಲ್ಲಿ ಸಾಂಪ್ರದಾಯಿಕವಾಗಿ ನಡೆದಿತ್ತು. ವಿವಾಹ ನಡೆಯಲಿರುವ ಸ್ಟೋಕ್‌ ಪಾರ್ಕ್‌ ಎಸ್ಟೇಟ್‌ ಸುಮಾರು 900 ವರ್ಷಗಳ ಇತಿಹಾಸ ಹೊಂದಿದ್ದು, ಈ ಐತಿಹಾಸಿಕ ಸ್ಥಳದಲ್ಲಿ ಬಹಳ ವಿಶೇಷ ರೀತಿಯಲ್ಲೇ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂಧು ಮೂಲಗಳು ಹೇಳಿವೆ.

ಇದನ್ನೂ ಓದಿ: Anant Ambani wedding: 2500 ಐಟಂ, 20 ಲೇಡಿ ಶೆಫ್‌ಗಳು… ಇನ್ನೂ ಇದೆ ಅನಂತ್‌ ಅಂಬಾನಿ- ರಾಧಿಕಾ ಮದುವೆ ವಿಶೇಷ!

ಜಾಮ್‌ನಗರದ ವಿಶೇಷತೆ

ಅನಂತ್ ಮತ್ತು ರಾಧಿಕಾ ಅವರ ವಿವಾಹಪೂರ್ವ ಸಮಾರಂಭ ನಡೆದ ಜಾಮ್‌ನಗರಕ್ಕೂ ಅಂಬಾನಿ ಕುಟುಂಬಕ್ಕೂ ಬಿಡಿಸಲಾರದ ನಂಟಿದೆ. “ಜಾಮ್‌ನಗರದಲ್ಲೇ ವಿವಾಹ ಪೂರ್ವ ಕಾರ್ಯಕ್ರಮ ಆಯೋಜಿಸಲು ಬೇರೆ ದೇಶಗಳ ಬದಲು ದೇಶದಲ್ಲಿಯೇ ಮದುವೆಯಾಗಿ (Wed In India) ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದು ನನಗೆ ಸ್ಫೂರ್ತಿಯಾಯಿತು. ಇನ್ನು, ಜಾಮ್‌ನಗರವು ನನ್ನ ಅಜ್ಜಿಯ ಜನ್ಮಸ್ಥಳವಾಗಿದೆ. ಅಷ್ಟೇ ಅಲ್ಲ, ನನ್ನ ಅಜ್ಜ ಧೀರೂಭಾಯಿ ಅಂಬಾನಿ ಹಾಗೂ ಅಪ್ಪ ಮುಕೇಶ್‌ ಅಂಬಾನಿ ಅವರು ಜಾಮ್‌ನಗರದಿಂದಲೇ ಉದ್ಯಮ ಆರಂಭಿಸಿದ್ದಾರೆ. ಹಾಗಾಗಿ, ಜಾಮ್‌ನಗರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ” ಎಂದು ಅನಂತ್‌ ಈ ಹಿಂದೆ ತಿಳಿಸಿದ್ದರು.

Continue Reading
Advertisement
MDH everest spices row
ದೇಶ8 mins ago

Spices Row: ಸಿಂಗಾಪುರ, ಹಾಂಕಾಂಗ್‌ ಬಳಿಕ ಭಾರತದಲ್ಲೂ ಎವರೆಸ್ಟ್, ಎಂಡಿಎಚ್‌ ಮಸಾಲೆ ಪರಿಶೀಲನೆ ಶುರು

Narendra Modi and Siddaramaiah
ರಾಜಕೀಯ18 mins ago

Narendra Modi: ಕಾಂಗ್ರೆಸ್‌ ರಾಜ್ಯದಲ್ಲಿ ಹನುಮಾನ್‌ ಚಾಲೀಸಾ ಹೇಳುವುದೂ ಮಹಾಪರಾಧ; ರಾಜಸ್ಥಾನದಲ್ಲಿ ಮೋದಿಯಿಂದ ಸಿದ್ದರಾಮಯ್ಯ ಸರ್ಕಾರಕ್ಕೆ ತರಾಟೆ

Gukesh D
ಕ್ರೀಡೆ18 mins ago

Gukesh D: ಡಿ.ಗುಕೇಶ್‌ ಸಾಧನೆಗಾಗಿ ವೈದ್ಯ ವೃತ್ತಿಯನ್ನೇ ತೊರೆದಿದ್ದ ತಂದೆ

baba ramdev supreme court
ಪ್ರಮುಖ ಸುದ್ದಿ19 mins ago

Patanjali Case: ಜಾಹೀರಾತು ಗಾತ್ರದಲ್ಲೇ ಕ್ಷಮಾಪಣೆ ಕೇಳಿ: ಬಾಬಾ ರಾಮ್‌ದೇವ್‌ ಬೆವರಿಳಿಸಿದ ಸುಪ್ರೀಂ ಕೋರ್ಟ್‌

Murder Case in raichur
ರಾಯಚೂರು23 mins ago

Murder Case : ಪತ್ನಿಗೆ ಮೆಸೇಜ್ ಮಾಡಿದ್ದಕ್ಕೆ ಮುಸ್ಲಿಂ ಯುವಕನ ಕೊಂದ ಅರ್ಚಕ

Lok Sabha Election-2024
Latest28 mins ago

Voter Slip by Mobile: ಮತಪಟ್ಟಿಯಲ್ಲಿ ಹೆಸರು ಪರಿಶೀಲನೆ, ವೋಟರ್ ಸ್ಲಿಪ್ ಡೌನ್‌ಲೋಡ್‌ ಮೊಬೈಲ್‌ನಲ್ಲೇ ಮಾಡಿ!

Lok Sabha Election 2024 KP Nanjundi resigns from Legislative Council
Lok Sabha Election 202448 mins ago

Lok Sabha Election 2024: ವಿಧಾನ ಪರಿಷತ್‌ ಸ್ಥಾನಕ್ಕೆ ಕೆ.ಪಿ. ನಂಜುಂಡಿ ರಾಜೀನಾಮೆ; ಕಾಂಗ್ರೆಸ್‌ ಸೇರ್ಪಡೆ?

gold rate today kajal
ಚಿನ್ನದ ದರ55 mins ago

Gold Rate Today: ಚಿನ್ನ ಕೊಳ್ಳೋಕೆ ಇಂದು ಸುಸಮಯ! 24 ಕ್ಯಾರಟ್‌ ಬಂಗಾರಕ್ಕೆ ₹1530 ಇಳಿಕೆ!

Bengaluru Karaga 2024
ಬೆಂಗಳೂರು1 hour ago

Bengaluru Karaga 2024: ಬೆಂಗಳೂರು ಕರಗ ಶಕ್ತ್ಸೋತ್ಸವಕ್ಕೆ ಕೌಂಟ್‌ ಡೌನ್‌; 8 ಲಕ್ಷ ಜನ ಭಾಗಿ!

balakot airstrike RKS bhadauria
ಪ್ರಮುಖ ಸುದ್ದಿ1 hour ago

Balakot Airstrike: ನಮ್ಮ ಯೋಧರ ಕೂದಲೂ ಕೊಂಕದಂತೆ ಪಾಕ್‌ ವಾಯುಪಡೆ ಭೇದಿಸಿ ದಾಳಿ ನಡೆಸಲಾಗಿತ್ತು: ಮಾಜಿ ಐಎಎಫ್‌ ಮುಖ್ಯಸ್ಥ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ6 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ4 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ5 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ8 hours ago

Dina Bhavishya : ಈ ರಾಶಿಯವರು ತರಾತುರಿಯಲ್ಲಿ ಯಾವುದೇ ಹೂಡಿಕೆ ಮಾಡ್ಬೇಡಿ

Bengaluru karaga 2024
ಬೆಂಗಳೂರು20 hours ago

Bengaluru Karaga 2024 : ಅದ್ಧೂರಿಯಾಗಿ ನೆರವೇರಿದ ಹಸಿ ಕರಗ; ಐತಿಹಾಸಿಕ ಕರಗ ಶಕ್ತ್ಯೋತ್ಸವಕ್ಕೆ ಕ್ಷಣಗಣನೆ

Murder Case in yadagiri rakesh and fayas
ಯಾದಗಿರಿ21 hours ago

Murder Case : ಹಿಂದು ಯುವಕ ರೊಟ್ಟಿ ಕೇಳಿದ್ದಕ್ಕೆ ಗುಪ್ತಾಂಗಕ್ಕೆ ಒದ್ದು ಕೊಂದರು ಅನ್ಯಕೋಮಿನ ಯುವಕರು!

bomb Threat case in Bengaluru
ಬೆಂಗಳೂರು24 hours ago

Bomb Threat: ಬಾಂಬ್‌ ಇಟ್ಟಿರುವುದಾಗಿ ಬೆಂಗಳೂರಿನ ಕದಂಬ ಹೋಟೆಲ್‌ಗೆ ಬೆದರಿಕೆ ಪತ್ರ; ಪೊಲೀಸರು ದೌಡು

CET Exam 2024
ಬೆಂಗಳೂರು1 day ago

CET 2024 Exam : ಔಟ್‌ ಆಫ್‌ ಸಿಲಬಸ್‌ ಪ್ರಶ್ನೆಗೆ ಆಕ್ರೋಶ; ಕೈ ಕೈ ಮಿಲಾಯಿಸಿದ ಪೊಲೀಸರು- ಎವಿಬಿಪಿ ಕಾರ್ಯಕರ್ತರು

Dina Bhavishya
ಭವಿಷ್ಯ1 day ago

Dina Bhavishya : ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡುವ ಸಾಧ್ಯತೆ; ಈ ರಾಶಿಯವರು ಎಚ್ಚರ

Dina Bhavishya
ಭವಿಷ್ಯ2 days ago

Dina Bhavishya : ಅಮೂಲ್ಯ ವಸ್ತುಗಳು ಕೈ ತಪ್ಪಬಹುದು; ಈ ರಾಶಿಯವರು ಇಂದು ಎಚ್ಚರವಹಿಸಿ

Modi in Karnataka Congress snatches Rs 4000 under Kisan Samman says PM Narendra Modi
ಪ್ರಮುಖ ಸುದ್ದಿ3 days ago

Modi in Karnataka: ಕಿಸಾನ್‌ ಸಮ್ಮಾನ್‌ ಅಡಿ 4 ಸಾವಿರ ರೂಪಾಯಿ ಕಿತ್ತುಕೊಂಡ ರೈತ ವಿರೋಧಿ ಸರ್ಕಾರ ಕಾಂಗ್ರೆಸ್‌: ಮೋದಿ ಕಿಡಿ

Modi in Karnataka HD Deve Gowda attack on Congess
Lok Sabha Election 20243 days ago

Modi in Karnataka: ಲೂಟಿ ಮಾಡಿ ಖಾಲಿ ಚೆಂಬು ಕೊಟ್ಟಿದ್ದು ಕಾಂಗ್ರೆಸ್‌; ಆ ಚೆಂಬನ್ನು ಅಕ್ಷಯ ಪಾತ್ರ ಮಾಡಿದ್ದು ಮೋದಿ: ಎಚ್‌.ಡಿ. ದೇವೇಗೌಡ ಗುಡುಗು

Modi in Karnataka Here live video of Modi rally in Chikkaballapur
Lok Sabha Election 20243 days ago

Modi in Karnataka: ಚಿಕ್ಕಬಳ್ಳಾಪುರದಲ್ಲಿ ಮೋದಿ ಮೇನಿಯಾ; ಇಲ್ಲಿದೆ LIVE ವಿಡಿಯೊ

ಟ್ರೆಂಡಿಂಗ್‌