Sukhoi Su-57: ರಷ್ಯಾದ ಸು-57 ಯುದ್ಧ ವಿಮಾನ ಪವರ್‌ಫುಲ್‌; ಆದರೆ ಭಾರತ ಖರೀದಿಸುತ್ತಿಲ್ಲ, ಏಕೆಂದರೆ… - Vistara News

ದೇಶ

Sukhoi Su-57: ರಷ್ಯಾದ ಸು-57 ಯುದ್ಧ ವಿಮಾನ ಪವರ್‌ಫುಲ್‌; ಆದರೆ ಭಾರತ ಖರೀದಿಸುತ್ತಿಲ್ಲ, ಏಕೆಂದರೆ…

ಸುಖೋಯಿ ಸು-57 (Sukhoi Su-57) ಒಂದು ಆಸನದ, ಅವಳಿ ಇಂಜಿನ್‌ಗಳನ್ನು ಹೊಂದಿರುವ ಯುದ್ಧ ವಿಮಾನವಾಗಿದೆ. ಇದು ಆಕ್ರಮಣಕ್ಕೆ ಹೇಳಿ ಮಾಡಿಸಿದಂತಿದೆ.

VISTARANEWS.COM


on

Sukhoi Su-57
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Girish Linganna

ರಷ್ಯಾದ ಮೊದಲ ಸ್ಟೆಲ್ತ್ ಯುದ್ಧ (Sukhoi Su-57) ವಿಮಾನ, ಸುಖೋಯಿ ಸು-57 ಆ ದೇಶದ ವೈಮಾನಿಕ ತಂತ್ರಜ್ಞಾನದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಮೂಲತಃ ಪಿಎಕೆ ಎಫ್ಎ (ಪ್ರಾಸ್ಪೆಕ್ಟಿವ್ ಏರ್‌ಬಾರ್ನ್ ಕಾಂಪ್ಲೆಕ್ಸ್ ಆಫ್ ಫ್ರಂಟ್‌ಲೈನ್ ಏವಿಯೇಷನ್‌) ಎಂದು ಕರೆಯಲಾಗಿದ್ದ ಸು-57 ವಿಮಾನದ ಅಭಿವೃದ್ಧಿ 2000ನೇ ದಶಕದ ಆರಂಭದಲ್ಲಿ ಶುರುವಾಯಿತು. ಇದು ಎಫ್-22 ರಾಪ್ಟರ್‌ನಂತಹ ಎದುರಾಳಿ ಅಮೆರಿಕಾದ ಸ್ಟೆಲ್ತ್ ಯುದ್ಧ ವಿಮಾನಗಳಿಗೆ ನೇರ ಪ್ರತ್ಯುತ್ತರವಾಗಿ ಆರಂಭಗೊಂಡಿತು.

ಆಲೋಚನೆಗಳಿಂದ ಕಾರ್ಯರೂಪಕ್ಕೆ; ನೀಲಿ ನಕ್ಷೆಯಿಂದ ವಾಸ್ತವಕ್ಕೆ ಸು-57 ಹಾದಿ:
ಜನವರಿ 29, 2010ರಂದು, ಸು-57 ಯುದ್ಧ ವಿಮಾನ ಅದರ ಪ್ರಥಮ ಹಾರಾಟವನ್ನು ಯಶಸ್ವಿಯಾಗಿ ಪೂರೈಸಿತು. ಆ ಮೂಲಕ ರಷ್ಯನ್ ವಾಯುಪಡೆ ಒಂದು ನೂತನ ಯುಗವನ್ನು ಪ್ರವೇಶಿಸಿತು. ಈ ಅತ್ಯಾಧುನಿಕ, ಐದನೇ ತಲೆಮಾರಿನ ಯುದ್ಧ ವಿಮಾನವನ್ನು ಹೆಚ್ಚಿನ ಕುಶಲತೆಯಿಂದ ಚಲಿಸುವಂತೆ, ಸ್ಟೆಲ್ತ್ ಸಾಮರ್ಥ್ಯ ಹೊಂದಿರುವಂತೆ, ಹಾಗೂ ಅತ್ಯಾಧುನಿಕ ಏವಿಯಾನಿಕ್ಸ್ ವ್ಯವಸ್ಥೆಗಳೊಡನೆ ನಿರ್ಮಿಸಲಾಗಿದ್ದು, ಹಿಂದಿನ ತಲೆಮಾರಿನ ವಿಮಾನಗಳನ್ನು ಮೀರಿಸುತ್ತದೆ. ಅದರೊಡನೆ, ಭೂಮಿಯ ಮತ್ತು ನೌಕಾಪಡೆಗಳಿಂದ ಎದುರಾಗುವ ಅಪಾಯಗಳನ್ನೂ ನಿವಾರಿಸುವಂತೆ ಇದನ್ನು ನಿರ್ಮಿಸಲಾಗಿದೆ. ಆದರೆ, ಇದರ ಆರಂಭಿಕ ಹಾರಾಟ ನಡೆಸಿ ಹತ್ತು ವರ್ಷಕ್ಕೂ ಹೆಚ್ಚು ಸಮಯ ಕಳೆದಿದ್ದರೂ, ಸು-57 ಹಲವು ಅಡೆತಡೆಗಳು ಮತ್ತು ವಿಳಂಬಗಳನ್ನು ಎದುರಿಸಿತು. ಇದರ ಪರಿಣಾಮವಾಗಿ, ಈ ವಿಮಾನಗಳ ಸರಣಿ ಉತ್ಪಾದನೆ ಮತ್ತು ರಷ್ಯನ್ ವಾಯುಪಡೆಗೆ ಪೂರೈಕೆ ಕೇವಲ 2020ರಲ್ಲಷ್ಟೇ ಆರಂಭವಾಯಿತು.

ಸಾಮರ್ಥ್ಯಗಳ ಅನಾವರಣ; ಸು-57 ವೈಶಿಷ್ಟ್ಯಗಳು

ಸುಖೋಯಿ ಸು-57 ಒಂದು ಆಸನದ, ಅವಳಿ ಇಂಜಿನ್‌ಗಳನ್ನು ಹೊಂದಿರುವ ಯುದ್ಧ ವಿಮಾನವಾಗಿದೆ. ಇದು ಅತ್ಯಂತ ಉತ್ಕೃಷ್ಟ ತಂತ್ರಜ್ಞಾನಗಳನ್ನು ಹೊಂದಿದ್ದು, ಬ್ಲೆಂಡೆಡ್ ವಿಂಗ್ ರಚನೆಯನ್ನು ಹೊಂದಿದೆ. ಈ ಕಾರಣದಿಂದ ಅತ್ಯಂತ ಕನಿಷ್ಠ ರೇಡಾರ್ ಕ್ರಾಸ್ ಸೆಕ್ಷನ್ (ರೇಡಾರ್‌ಗಳಿಂದ ಗುರುತಿಸಲ್ಪಡುವ ಪ್ರಮಾಣ) ಹೊಂದಿದೆ. ಸ್ಟೆಲ್ತ್ ಸಾಮರ್ಥ್ಯಕ್ಕಾಗಿ ಆಂತರಿಕವಾಗಿ ಆಯುಧ ಸಂಗ್ರಹಣಾ ವಿಭಾಗಗಳು, ಆಧುನಿಕ ಸೆನ್ಸರ್‌ಗಳು ಮತ್ತು ಸಂವಹನ ವ್ಯವಸ್ಥೆಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಸು-57ರ ಇಂಜಿನ್‌ಗಳನ್ನು ವಿಮಾನಕ್ಕೆ ಸೂಪರ್ ಕ್ರೂಸ್ ಸಾಮರ್ಥ್ಯ ಒದಗಿಸುವ ರೀತಿಯಲ್ಲಿ ನಿರ್ಮಿಸಲಾಗಿದ್ದು, ಆಫ್ಟರ್ ಬರ್ನರ್‌ಗಳ ಅವಶ್ಯಕತೆಯಿಲ್ಲದೆ ಸೂಪರ್‌ಸಾನಿಕ್ ಹಾರಾಟ ನಡೆಸುತ್ತದೆ.
ಸು-57 ಸ್ಟೆಲ್ತ್ ಯುದ್ಧ ವಿಮಾನ ಮ್ಯಾಕ್ 2 ವೇಗದಲ್ಲಿ, ಶಬ್ದದ ವೇಗದ ಎರಡು ಪಟ್ಟು ಹೆಚ್ಚಿನ ವೇಗದಲ್ಲಿ, ಅಂದರೆ ಪ್ರತಿ ಗಂಟೆಗೆ 1,500 ಮೈಲಿ ಅಥವಾ 2,414 ಕಿಲೋಮೀಟರ್ ವೇಗವಾಗಿ ಚಲಿಸುತ್ತದೆ. ಈ ಯುದ್ಧ ವಿಮಾನ ಆಫ್ಟರ್ ಬರ್ನರ್‌ಗಳನ್ನು ಬಳಸಿಕೊಳ್ಳದೆಯೇ ಸೂಪರ್‌ಸಾನಿಕ್ ಹಾರಾಟ (ಗರಿಷ್ಠ ಮ್ಯಾಕ್ 1.6) ನಿರ್ವಹಿಸಬಲ್ಲದು. ಇದು ಆಫ್ಟರ್ ಬರ್ನರ್ ಬಳಸಿ ಮ್ಯಾಕ್ 1.6 ವೇಗ ಸಾಧಿಸುವ ಎಫ್-35 ಸ್ಟೆಲ್ತ್ ಯುದ್ಧ ವಿಮಾನಕ್ಕಿಂತ ವೇಗವಾಗಿದೆ. ಸು-57 ಸೂಪರ್ ಮನೂವರೇಬಿಲಿಟಿ (ಅತ್ಯಂತ ಕುಶಲ ಚಲನೆ) ಸಾಮರ್ಥ್ಯ ಹೊಂದಿದ್ದು, ಸಾಮಾನ್ಯ ವಿಮಾನಗಳಿಗೆ ಸಾಧ್ಯವಿಲ್ಲದ ರೀತಿಯಲ್ಲಿ ಗಾಳಿಯಲ್ಲಿ ಹಾರಾಟ ಕೌಶಲ್ಯ ಪ್ರದರ್ಶಿಸಬಲ್ಲದು.

sukhoi su-57 price in rupees

ರಷ್ಯಾದ ಸ್ಟೆಲ್ತ್ ಸಾಮರ್ಥ್ಯವಾದ ಸು-57ರ ಬೆಲೆ ಎಷ್ಟು?

ಸು-57 ರಷ್ಯಾದ ಅತ್ಯಾಧುನಿಕ ಸ್ಟೆಲ್ತ್ ಯುದ್ಧ ವಿಮಾನವಾಗಿದ್ದು, ಬಹಳಷ್ಟು ಕುತೂಹಲ ಮತ್ತು ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ಇದು ಎಫ್-22 ಮತ್ತು ಎಫ್-35ಗೆ ಪ್ರತಿಸ್ಪರ್ಧಿಯಾಗಿ ವಿನ್ಯಾಸಗೊಂಡಿದ್ದು, ಅತ್ಯಾಧುನಿಕ ವೈಶಿಷ್ಟ್ಯಗಳು ಮತ್ತು ಕುಶಲತೆಯನ್ನು ಹೊಂದಿದೆ. ಆದರೆ ಈ ಆಧುನಿಕ ತಂತ್ರಜ್ಞಾನಗಳ ಕಾರಣದಿಂದಾಗಿ ಈ ಯುದ್ಧ ವಿಮಾನ ಹೆಚ್ಚು ಬೆಲೆಬಾಳುತ್ತದೆ.
ಸು-57 ಯುದ್ಧ ವಿಮಾನದ ವೆಚ್ಚಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಳು ಲಭ್ಯವಿಲ್ಲದಿದ್ದರೂ, ಪ್ರತಿಯೊಂದು ವಿಮಾನವೂ 40ರಿಂದ 50 ಮಿಲಿಯನ್ ಡಾಲರ್ ಮೌಲ್ಯ ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಉತ್ಪಾದನಾ ಪ್ರಮಾಣ, ರಫ್ತು ಒಪ್ಪಂದಗಳು, ಹಾಗೂ ಆಧುನಿಕ ಆಯುಧಗಳು ಮತ್ತು ವ್ಯವಸ್ಥೆಗಳ ಅಳವಡಿಕೆಯ ಕಾರಣಗಳಿಂದ ವಿಮಾನದ ಬೆಲೆ ಬದಲಾಗುವ ಸಾಧ್ಯತೆಗಳಿವೆ.

ಭಾರತದ ಕಾರ್ಯತಂತ್ರದ ನಡೆ; ಸುಖೋಯಿ ಸು-57 ಖರೀದಿಗಿಂತ ದೇಶೀಯ ಅಭಿವೃದ್ಧಿಗೆ ಒತ್ತು

ರಷ್ಯಾದೊಡನೆ ಭಾರತ ನಿರಂತರವಾಗಿ ಮಾತುಕತೆಗಳನ್ನು ನಡೆಸುತ್ತಿದ್ದರೂ, ದೀರ್ಘಕಾಲದ ರಕ್ಷಣಾ ಸಹಯೋಗ ಹೊಂದಿದ್ದರೂ, ಭಾರತ ರಷ್ಯಾದಿಂದ ಐದನೇ ತಲೆಮಾರಿನ ಸುಖೋಯಿ ಸು-57 ಯುದ್ಧ ವಿಮಾನ ಖರೀದಿಗೆ ಮುಂದಾಗಿಲ್ಲ. ಇತ್ತೀಚಿನ ಮಾಹಿತಿಗಳ ಪ್ರಕಾರ, ಭಾರತೀಯ ವಾಯುಪಡೆ (ಐಎಎಫ್) ತನ್ನ ದಾಸ್ತಾನಿನಲ್ಲಿ ಸು-57 ಯುದ್ಧ ವಿಮಾನವನ್ನು ಹೊಂದಿಲ್ಲ ಮತ್ತು ಈ ವಿಮಾನ ಖರೀದಿಗೆ ಯಾವುದೇ ಆದೇಶ ನೀಡಿರುವ ವರದಿಗಳು ಬಂದಿಲ್ಲ. ರಕ್ಷಣಾ ತಜ್ಞರು ಮತ್ತು ಭಾರತೀಯ ವಾಯುಪಡೆ ಸುಖೋಯಿ ಸು-57 ಯುದ್ಧ ವಿಮಾನದ ಕುರಿತು ಆಸಕ್ತಿ ಹೊಂದಿದ್ದರೂ, ಭಾರತ ತನ್ನದೇ ಆದ ಐದನೇ ತಲೆಮಾರಿನ ಯುದ್ಧ ವಿಮಾನವನ್ನು ಅಭಿವೃದ್ಧಿ ಪಡಿಸುವ ಆಸಕ್ತಿ ಹೊಂದಿದೆ. ಈ ಸಾಮರ್ಥ್ಯ ಹೊಂದಿರುವ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್‌ಕ್ರಾಫ್ಟ್ (ಎಎಂಸಿಎ) ಪ್ರಸ್ತುತ ಅಭಿವೃದ್ಧಿಯ ಹಂತದಲ್ಲಿದೆ.

ಸ್ಟೆಲ್ತ್

ಯುದ್ಧ ವಿಮಾನಗಳಲ್ಲಿರುವ ಸ್ಟೆಲ್ತ್ ಸಾಮರ್ಥ್ಯ ಎಂದರೆ ಆ ವಿಮಾನ ರೇಡಾರ್‌ಗಳು ಮತ್ತು ಇತರ ಪತ್ತೆ ವ್ಯವಸ್ಥೆಗಳ ಕಣ್ಣಿಗೆ ಬೀಳದಂತೆ ತಪ್ಪಿಸಿಕೊಂಡು ಚಲಿಸಲು ನೆರವಾಗುವ ತಂತ್ರಜ್ಞಾನವಾಗಿದೆ.

ಏವಿಯಾನಿಕ್ಸ್

ಏವಿಯಾನಿಕ್ಸ್ ಎನ್ನುವುದು ವಿಮಾನಗಳಲ್ಲಿ, ಕೃತಕ ಉಪಗ್ರಹಗಳಲ್ಲಿ, ಹಾಗೂ ಬಾಹ್ಯಾಕಾಶ ನೌಕೆಗಳಲ್ಲಿ ಸಂವಹನ, ಸಂಚರಣೆ (ನ್ಯಾವಿಗೇಶನ್), ಹಾಗೂ ಇತರ ಅವಶ್ಯಕ ಉದ್ದೇಶಗಳಿಗೆ ಬಳಸುವ ಇಲೆಕ್ಟ್ರಾನಿಕ್ ವ್ಯವಸ್ಥೆಗಳಾಗಿವೆ.

ಸೂಪರ್ ಕ್ರೂಸ್

ಸೂಪರ್ ಕ್ರೂಸ್ ಎನ್ನುವುದು ಹೆಚ್ಚಿನ ಪ್ರಮಾಣದಲ್ಲಿ ಇಂಧನ ಬಳಸಿ ಥ್ರಸ್ಟ್ ಹೆಚ್ಚಿಸುವ ಆಫ್ಟರ್ ಬರ್ನರ್‌ಗಳ ಮೇಲೆ ಅವಲಂಬಿತವಾಗಿರದೆ, ಸೂಪರ್‌ಸಾನಿಕ್ ವೇಗವನ್ನು ಕಾಪಾಡಿಕೊಳ್ಳುವ ಯುದ್ಧ ವಿಮಾನದ ಸಾಮರ್ಥ್ಯವಾಗಿದೆ.

ಆಫ್ಟರ್ ಬರ್ನರ್ಸ್

ಆಫ್ಟರ್ ಬರ್ನರ್ಸ್ ಎಂಬುದು ಹೆಚ್ಚಿನ ಪ್ರಮಾಣದ ಇಂಧನವನ್ನು ದಹಿಸಿ, ಹೆಚ್ಚಿನ ಶಕ್ತಿ ಬಿಡುಗಡೆಗೊಳಿಸಿ, ಯುದ್ಧ ವಿಮಾನ ಹೆಚ್ಚಿನ ವೇಗದಲ್ಲಿ ಚಲಿಸುವಂತೆ ಮಾಡುವ ವ್ಯವಸ್ಥೆಯಾಗಿದೆ.

ಸೂಪರ್‌ಸಾನಿಕ್

ಶಬ್ದದ ವೇಗಕ್ಕಿಂತಲೂ ಹೆಚ್ಚಿನ ವೇಗವನ್ನು ಸೂಪರ್‌ಸಾನಿಕ್ ಎಂದು ಕರೆಯಲಾಗುತ್ತದೆ.

ಐದನೇ ತಲೆಮಾರು

ಐದನೇ ತಲೆಮಾರಿನ ಯುದ್ಧ ವಿಮಾನಗಳೆಂದರೆ ಆಧುನಿಕ ಯುದ್ಧ ವಿಮಾನಗಳಾಗಿದ್ದು, ಅವುಗಳನ್ನು ಹಾರಾಟದ ಸಂದರ್ಭದಲ್ಲಿ ಗುರುತಿಸುವುದು ಕಷ್ಟಕರವಾಗಿರುತ್ತದೆ. ಅದರೊಡನೆ, ಐದನೇ ತಲೆಮಾರಿನ ಯುದ್ಧ ವಿಮಾನಗಳು ಆಧುನಿಕ ತಂತ್ರಜ್ಞಾನ ಮತ್ತು ಕಂಪ್ಯೂಟರ್ ಸಿಸ್ಟಮ್‌ಗಳು, ಮಿಲಿಟರಿ ಕಾರ್ಯಾಚರಣೆಯ ಇನ್ನೊಂದು ಭಾಗದೊಡನೆ ಸಂವಹನ ನಡೆಸುವ ಮತ್ತು ಮಾಹಿತಿ ರವಾನಿಸುವ ಸಾಮರ್ಥ್ಯ, ಹೆಚ್ಚಿನ ಇಂಧನ ಬಳಸದೆ ಸೂಪರ್‌ಸಾನಿಕ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುತ್ತವೆ.

(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು)

ಇದನ್ನೂ ಓದಿ: Israel Hamas War : ಯಾಹ್ಯಾ, ಮೊಹಮ್ಮದ್, ಮರ್ವಾನ್, ಇಸ್ಮಾಯಿಲ್, ಖಾಲೆದ್: ಹಮಾಸ್‌ನ ಅತ್ಯುಗ್ರ ಮೆದುಳುಗಳಿವು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರಮುಖ ಸುದ್ದಿ

ಪುಣೆ ಪೊಲೀಸರ 60 ಗಂಟೆಗಳ ಕಾರ್ಯಾಚರಣೆ; 1300 ಕೋಟಿ ರೂ.ಗೂ ಅಧಿಕ ಮೌಲ್ಯದ ಡ್ರಗ್ಸ್ ವಶ

Pune Police: ಸಣ್ಣ ಸುಳಿವಿನ ಜಾಡು ಹಿಡಿದ ಪುಣೆ ಪೊಲೀಸರು ಬೃಹತ್ ಮಾದಕ ವಸ್ತುಗಳ ಜಾಲವನ್ನು ಕೇವಲ 60 ಗಂಟೆಗಳಲ್ಲಿ ಭೇದಿಸಿದ ಘಟನೆ ನಡೆದಿದೆ.

VISTARANEWS.COM


on

Pune Police 60 Hours Operation; Drugs worth more than Rs 1300 crore seized
Koo

ನವದೆಹಲಿ: ಪುಣೆ ಪೊಲೀಸರು (Pune Police) ಕೇವಲ 60 ಗಂಟೆಯಲ್ಲಿ (60 Hours Operation) ಅತಿದೊಡ್ಡ ಮಾದಕ ವಸ್ತು ಕಳ್ಳ ಸಾಗಣೆ ಜಾಲವನ್ನು ಭೇದಿಸಿದ್ದಾರೆ(drug trafficking networks). ತೀವ್ರ ಕಾರ್ಯಾಚರಣೆ ನಡೆಸಿ, 1300 ಕೋಟಿ ರೂ.ಗೂ ಅಧಿಕ ಮೊತ್ತದ ಮಾದಕವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ(Drugs seized). ಪುಣೆ ಭಾಗದಲ್ಲಿ ಮಾದಕವಸ್ತುಗಳ ಉಪಟಳ ಹೆಚ್ಚಾದ ಬೆನ್ನಲ್ಲೇ ಪೊಲೀಸರು ಅಧಿಕಾರಿಗಳು ನಿಖರವಾದ ಯೋಜನೆ ಮತ್ತು ತ್ವರಿತ ಕ್ರಮ ಕೈಗೊಂಡ ಪರಿಣಾಮ ಭಾರಿ ದೊಡ್ಡ ಯಶಸ್ಸು ದೊರೆತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಷಮ ಪರಿಸ್ಥಿತಿಯನ್ನು ನಿವಾರಿಸಲೇಬೇಕಾಗದ ಅನಿವಾರ್ಯತೆ ಇತ್ತು. ಅದಕ್ಕಾಗಿ ಪುಣೆ ಪೊಲೀಸರು ತಮ್ಮ ಸಂಪನ್ಮೂಲಗಳನ್ನು ಸಜ್ಜುಗೊಳಿಸಿ, ಕಾರ್ಯಾಚರಣೆಗಿಳಿದರು. ಪುಣೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾದಕವಸ್ತುಗಳ ಮಾರಾಟಕ್ಕೆ ಕಾರಣವಾದ ಅಪರಾಧ ಜಾಲವನ್ನು ಬೇಧಿಸಲು ಹಾಗೂ ಅಪರಾಧ ಜಾಲವನ್ನು ಬುಡಸಮೇತ ಕಿತ್ತುಹಾಕಲು ಕಾರ್ಯಾಚರಣೆ ನಡೆಸಲಾಯಿತು. ಕೇವಲ 60 ಗಂಟೆಯಲ್ಲಿ ಮಾದಕವಸ್ತು ಜಾಲವನ್ನು ಭೇದಿಸಲಾಯಿತು ಎಂದು ಪುಣೆ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಅವರು ತಿಳಿಸಿದ್ದಾರೆ.

ಕಾನ್ಸ್‌ಟೇಬಲ್ ವಿಠಲ್ ಸಾಳುಂಕೆ ಅವರಿಗೆ ಫೆಬ್ರವರಿ 19ರಂದು ಸೋಮವಾರ್ ಪೇಠೆಯಲ್ಲಿ ಅಕ್ರಮ ಮಾದಕವಸ್ತುಗಳ ಮಾರಾಟದ ಮಾಹಿತಿಯನ್ನು ಪಡೆದುಕೊಂಡರು. ಸಾಳುಂಕೆ ಅವರು ಕಾರನ್ನು ಅಡ್ಡಗಟ್ಟಿ ಶಂಕಿತ ವೈಭವ್ ಮಾನೆಯನ್ನು ಬಂಧಿಸಿದ್ದಾರೆ. ಮಾನೆ ಅವರು ತೃಪ್ತಿಕರ ಉತ್ತರಗಳನ್ನು ನೀಡಿಲ್ಲ. ಹೀಗಾಗಿ ಆತನ ಕಾರನ್ನು ತಪಾಸಣೆ ಮಾಡಿದಾಗ ಸುಮಾರು 1 ಕೋಟಿ ರೂ. ಮೌಲ್ಯದ 500 ಗ್ರಾಮ್ ಎಂಡಿ ಪತ್ತೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಾನೆ ಮತ್ತು ಕಾರ್ ಚಾಲಕ ಅಜಯ್ ಕರೋಸಿಯಾ ಅವರನ್ನು ವಿಚಾರಣೆ ನಡೆಸಿದಾಗ ಅವರ ಅಕ್ರಮ ಡ್ರಗ್ಸ್ ಚಟುವಟಿಕೆಯ ಬಗ್ಗೆ ಪೊಲೀಸರಿಗೆ ತಿಳಿದುಬಂದಿದೆ. ತಾಂತ್ರಿಕ ವಿಶ್ಲೇಷಣೆ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದ ನಂತರ, ಕಾರಿನ ವಿವರಗಳನ್ನು ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಹೆಸರನ್ನು ಗುರುತಿಸಿದ್ದಾರೆ. ಫೆಬ್ರವರಿ 19 ರ ಸಂಜೆಯವರೆಗೆ ಪೊಲೀಸರು ವಿಶ್ರಾಂತವಾಡಿಯ ಗೋದಾಮಿನ ಮೇಲೆ ದಾಳಿ ನಡೆಸಿ 55 ಕೆಜಿ ಎಂಡಿ ವಶಪಡಿಸಿಕೊಂಡರು ಮತ್ತು ಹೈದರ್ ಶೇಖ್‌ನನ್ನು ಬಂಧಿಸಿದರು.

ಶೇಖ್ ಅವರ ಮೊಬೈಲ್ ಫೋನ್‌ನ ತಾಂತ್ರಿಕ ವಿಶ್ಲೇಷಣೆಯ ಸಮಯದಲ್ಲಿ, ಎಂಡಿ ತಯಾರಿಸಿದ ಕಾರ್ಖಾನೆಯ ಘಟಕಗಳ ಕೆಲವು ಛಾಯಾಚಿತ್ರಗಳನ್ನು ಪೊಲೀಸರು ವಶಪಡಿಸಿಕೊಂಡರು. ಮರುದಿನ ಅಂದರೆ, ಫೆಬ್ರವರಿ 20ರಂದು ಪೊಲೀಸರು ಎಂಐಡಿಸಿ ಕುರ್ಕುಂಭ್‌ನಲ್ಲಿರುವ ಕಾರ್ಖಾನೆ ಘಟಕದ ಮೇಲೆ ದಾಳಿ ನಡೆಸಿದರು ಮತ್ತು 1,327 ಕೋಟಿ ರೂ. ಮೌಲ್ಯದ 664 ಕೆಜಿ ಎಂಡಿಯನ್ನು ಜಪ್ತಿ ಮಾಡಿಕೊಂಡರು.

ದಾಳಿಯ ಸಮಯದಲ್ಲಿ ಪೊಲೀಸರು ಕಾರ್ಖಾನೆಯ ಮಾಲೀಕರಾದ ಭೀಮಾಜಿ ಸಾಬಳೆಯನ್ನು ಬಂಧಿಸಿದರು. ಈ ವೇಳೆ, ಕಾರ್ಖಾನೆ ನಡೆಸಲು ಎಲ್ಲಾ ತಾಂತ್ರಿಕ ಬೆಂಬಲ ನೀಡಿದ ಯುವರಾಜ್ ಭುಜಬಲ್ ಬಗ್ಗೆ ಪೊಲೀಸರಿಗೆ ಗೊತ್ತಾಗಿದೆ. ಅದರ ನಂತರ ಪೊಲೀಸರು ಅದೇ ದಿನ ಮುಂಬೈನಿಂದ ಆತನನ್ನು ಪತ್ತೆಹಚ್ಚಿ ಬಂಧಿಸಿದರು.

ಭುಜಬಲ್ ಮತ್ತು ಸಾಬಳೆ ಅವರ ವಿವರವಾದ ವಿಚಾರಣೆಯ ಸಮಯದಲ್ಲಿ, ಈ ಕಂಪನಿಯಲ್ಲಿ ತಯಾರಿಸಿದ ಹೆಚ್ಚಿನ ಪ್ರಮಾಣದ ಮಾದಕ ವಸ್ತುಗಳನ್ನು ಇತರ ದೇಶಗಳಿಗೆ ಮತ್ತಷ್ಟು ಕಳ್ಳಸಾಗಣೆಗಾಗಿ ದೆಹಲಿಗೆ ಕಳುಹಿಸಲಾಗಿದೆ ಎಂಬ ವಿಷಯ ಗೊತ್ತಾಗಿದೆ. ಅದೇ ದಿನ ದೆಹಲಿಗೆ ಬಂದಿಳಿದ ಪೊಲೀಸರ ತಂಡ ದಕ್ಷಿಣ ಪ್ರದೇಶದಲ್ಲಿ ಅಕ್ಕಪಕ್ಕದ ಎರಡು ಅಂಗಡಿಗಳ ಮೇಲೆ ದಾಳಿ ನಡೆಸಿ ಮೂವರು ಶಂಕಿತರನ್ನು ಬಂಧಿಸಿ 970 ಕೆಜಿ ಎಂಡಿ ವಶಪಡಿಸಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Sunil Kamble: ಪೊಲೀಸ್‌ ಅಧಿಕಾರಿಯ ಕೆನ್ನೆಗೆ ಹೊಡೆದ ಬಿಜೆಪಿ ಶಾಸಕ; ದರ್ಪದ ವಿಡಿಯೊ ಇದೆ

Continue Reading

ದೇಶ

India Poverty: ದೇಶದಲ್ಲಿ ಬಡವರ ಸಂಖ್ಯೆ 5%ಕ್ಕಿಂತ ಇಳಿಕೆ; ಆಹಾರಕ್ಕಿಂತ ಓಡಾಟ, ಮನರಂಜನೆಗೇ ಹೆಚ್ಚು ಖರ್ಚು!

India Poverty: ಕಳೆದ ಒಂಬತ್ತು ವರ್ಷಗಳಲ್ಲಿ 24.82 ಕೋಟಿ ಜನರು ಬಹು ಆಯಾಮದ ಬಡತನದಿಂದ ಹೊರಬಂದಿದ್ದಾರೆ ಎಂದು ನೀತಿ ಆಯೋಗ ಹಿಂದೆ ಹೇಳಿತ್ತು.

VISTARANEWS.COM


on

india poverty
Koo

ಹೊಸದಿಲ್ಲಿ: ದೇಶದಲ್ಲಿ ಬಡವರ ಜನಸಂಖ್ಯೆಯು (India Poverty) ಈಗ ಶೇಕಡಾ 5ಕ್ಕಿಂತ ಕಡಿಮೆಯಾಗಿದೆ ಎಂದು ನೀತಿ ಆಯೋಗದ (NITI Aayog) ʼಬಳಕೆ ಮತ್ತು ವೆಚ್ಚದ ಸಮೀಕ್ಷೆಯ ವರದಿ’ ತಿಳಿಸಿದೆ. ಭಾರತೀಯರು ಆಹಾರಕ್ಕಿಂತ ಸಾರಿಗೆ ಹಾಗೂ ಇತರ ಸಂಗತಿಗಳ ಮೇಲೆಯೇ ಹೆಚ್ಚು ಖರ್ಚು ಮಾಡುತ್ತಾರೆ ಎಂಬುದನ್ನೂ ಈ ವರದಿ ತಿಳಿಸಿದೆ.

ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಅವರು ವರದಿಯ ಸಾರಾಂಶವನ್ನು ಬಿಡುಗಡೆ ಮಾಡಿದ್ದಾರೆ. ನೀತಿ ಆಯೋಗದ ʼಗೃಹಬಳಕೆಯ ವೆಚ್ಚ ಸಮೀಕ್ಷೆ 2022-23ʼರ (Household Consumption Expenditure Survey 2022-23) ಪ್ರಕಾರ, ದೇಶದ ತಳಮಟ್ಟದ ಶೇಕಡಾ 5 ಜನತೆಯ ಮಾಸಿಕ ತಲಾ ಗ್ರಾಹಕ ವೆಚ್ಚವು ಗ್ರಾಮೀಣ ಭಾರತದಲ್ಲಿ ರೂ. 1,441 ಮತ್ತು ನಗರ ಭಾರತದಲ್ಲಿ ರೂ 2,087 ಆಗಿದೆ.

“ಬಡತನವನ್ನು ಅಳೆಯು ಮಾಪನಗಳ ಬಗ್ಗೆ ತೆಂಡೂಲ್ಕರ್ ಸಮಿತಿ ನೀಡಿದ ಹಳೆಯ ವರದಿಯ ಮಾನದಂಡಗಳನ್ನು ಅನುಸರಿಸಿದ್ದೇವೆ. ಅದನ್ನು ಈ ಸಮೀಕ್ಷೆಯ ದತ್ತಾಂಶದೊಂದಿಗೆ ವಿವರಿಸಿದರೆ, ಭಾರತದಲ್ಲಿ 5%ಕ್ಕಿಂತ ಕಡಿಮೆ ಬಡವರು ಇದ್ದಾರೆ ಎಂದು ತೋರಿಸುತ್ತದೆ” ಎಂದು ಸುಬ್ರಹ್ಮಣ್ಯಂ ತಿಳಿಸಿದ್ದಾರೆ.

ಡಿಸೆಂಬರ್ 2005ರಲ್ಲಿ ತೆಂಡೂಲ್ಕರ್ ಸಮಿತಿಯನ್ನು ಆಗ ಇದ್ದ ಯೋಜನಾ ಆಯೋಗವು ರಚಿಸಿತ್ತು. ನಂತರ ನೀತಿ ಆಯೋಗ ಬಂದಿತ್ತು. ಇದು ಡಿಸೆಂಬರ್ 2009ರಲ್ಲಿ ತನ್ನ ವರದಿಯನ್ನು ಸಲ್ಲಿಸಿತ್ತು. ಅಸ್ತಿತ್ವದಲ್ಲಿರುವ ನಗರ ಬಡತನ ರೇಖೆಯೊಂದಿಗೆ ಸಂವಾದಿಯಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಗ್ರಾಮೀಣ ಬಡತನ ರೇಖೆಯನ್ನು ಮರುಪರಿಗಣಿಸಬೇಕೆಂದು ಅದು ಶಿಫಾರಸು ಮಾಡಿದೆ. ಆದ್ದರಿಂದ, 2004-05ರಲ್ಲಿ ಅಖಿಲ ಭಾರತ ಗ್ರಾಮೀಣ ಬಡತನದ ಅನುಪಾತವನ್ನು 41.8 ಪ್ರತಿಶತ, ನಗರ ಬಡತನದ ಅನುಪಾತವನ್ನು 25.7 ಪ್ರತಿಶತ ಮತ್ತು ಅಖಿಲ ಭಾರತ ಮಟ್ಟದಲ್ಲಿ 37.2 ಪ್ರತಿಶತದಲ್ಲಿ ಇರಿಸಲಾಗಿದೆ. ಈ ಅಂದಾಜುಗಳನ್ನು ಯೋಜನಾ ಆಯೋಗ ಒಪ್ಪಿಕೊಂಡಿದೆ.

ಆದರೆ, ನೀತಿ ಆಯೋಗದ ಇತ್ತೀಚಿನ ಸಂಶೋಧನೆಯ ಪ್ರಕಾರ ಭಾರತದ ಕೆಳಹಂತದ 5 ಪ್ರತಿಶತ ಜನತೆಯ ಮಾಸಿಕ ಖರ್ಚು (ಇದನ್ನು ಮಾಸಿಕ ತಲಾ ಗ್ರಾಹಕ ವೆಚ್ಚ ಎಂದೂ ಉಲ್ಲೇಖಿಸಲಾಗುತ್ತದೆ) ಗ್ರಾಮೀಣ ಪ್ರದೇಶಗಳಲ್ಲಿ 1,441 ರೂ ಮತ್ತು ನಗರಗಳಲ್ಲಿ 2,087 ರೂ. ಇದೆ ಎಂದು ವರದಿ ಹೇಳುತ್ತದೆ. “ಆದರೂ, ಭಾರತದಲ್ಲಿ ಜನತೆ ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದರ್ಥವಲ್ಲ. ಸಂಪೂರ್ಣ ನಿರ್ಗತಿಕರಾದವರ ಸಂಖ್ಯೆ ಈಗ 5%ಕ್ಕಿಂತ ಕಡಿಮೆ ಇದೆ ಎಂದರ್ಥ” ಎಂದು ಸುಬ್ರಹ್ಮಣ್ಯಂ ಹೇಳಿದ್ದಾರೆ.

ಈ ಸಮೀಕ್ಷಾ ವರದಿ ಏಪ್ರಿಲ್-ಮೇಯಲ್ಲಿ ಬರುವ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಬಂದಿದೆ. ಕಳೆದ ಒಂಬತ್ತು ವರ್ಷಗಳಲ್ಲಿ 24.82 ಕೋಟಿ ಜನರು ಬಹು ಆಯಾಮದ ಬಡತನದಿಂದ ಹೊರಬಂದಿದ್ದಾರೆ ಎಂದು ನೀತಿ ಆಯೋಗ ಹಿಂದೆ ಹೇಳಿತ್ತು. 2013-14 ಮತ್ತು 2022-23ರ ವರ್ಷಗಳ ನಡುವಿನ ಬಡತನದ ಎಲ್ಲಾ ಆಯಾಮಗಳ ಪರಿಹಾರ ಕುರಿತ ಸರ್ಕಾರಿ ಯೋಜನೆಗಳು ಮತ್ತು ಉಪಕ್ರಮಗಳಿಗೆ ಇದರ ಕಾರಣದ ಮನ್ನಣೆ ನೀಡಿದೆ. ʼಪೋಷಣಾ ಅಭಿಯಾನʼ ಮತ್ತು ʼರಕ್ತಹೀನತೆ ಮುಕ್ತ ಭಾರತʼದಂತಹ ಉಪಕ್ರಮಗಳು ಆರೋಗ್ಯ ಸೇವೆಗಳ ಲಭ್ಯತೆ ಹೆಚ್ಚಿಸಿವೆ. ಇದು ಅಭಾವದ ಇಳಿಕೆಗೆ ಕಾರಣವಾಗಿದೆ ಎಂದಿದೆ.

ವರದಿಯ ಮತ್ತೊಂದು ಪ್ರಮುಖ ಅಂಶವೆಂದರೆ, ಗ್ರಾಮೀಣ ಭಾರತದ ಜನತೆಯ ಆದಾಯ ಹೆಚ್ಚಿದೆ. ನಗರದ ಆದಾಯವು 2.5 ಪಟ್ಟು ಹೆಚ್ಚಿದ್ದರೆ, ಗ್ರಾಮೀಣ ಆದಾಯವು 2.6 ಪಟ್ಟು ಹೆಚ್ಚಾಗಿದೆ. ಗ್ರಾಮೀಣ ಬಳಕೆಯು ನಗರಕ್ಕಿಂತ ವೇಗವಾಗಿ ಏರಿದೆ. ಇವೆರಡರ ನಡುವಿನ ಅಂತರವನ್ನು ಕಡಿಮೆ ಮಾಡಿದೆ. 2011-12ರಲ್ಲಿ ಶೇ.84ರಷ್ಟು ಅಂತರವಿದ್ದು, ಅದು ಈಗ ಶೇ.71ಕ್ಕೆ ಇಳಿಕೆಯಾಗಿದೆ. ಇದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಎಂಬ ಧ್ಯೇಯವಾಕ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಸರ್ಕಾರಿ ಮೂಲಗಳು ಹೇಳಿವೆ.

ಗ್ರಾಮೀಣ ಭಾರತದ ಈ ಬದಲಾವಣೆಯ ಮೂಲ ಕಾರಣ ಪ್ರಾಥಮಿಕವಾಗಿ ಗ್ರಾಮೀಣ ಕುಟುಂಬಗಳ ಹಾಗೂ ಆಸ್ತಿಗಳ ವಿಭಜನೆ ಮತ್ತು ಆದಾಯ ಏರಿಕೆ ಎನ್ನಲಾಗಿದೆ.

ಹೆಚ್ಚು ಖರ್ಚು ಎಲ್ಲಿದೆ?

ವಿಶೇಷ ಅಂದರೆ, ಭಾರತದ ಜನ ಆಹಾರಕ್ಕಿಂತಲೂ ಹೆಚ್ಚು ಹಣವನ್ನು ಸಾರಿಗೆ, ಮನರಂಜನೆ ಇತ್ಯಾದಿಗಳಿಗೆ ಖರ್ಚು ಮಾಡುತ್ತಿದ್ದಾರೆ. ಭಾರತವು ಧಾನ್ಯಗಳು ಮತ್ತು ಒಟ್ಟಾರೆ ಆಹಾರದ ಮೇಲೆ ಕಡಿಮೆ ಖರ್ಚು ಮಾಡುತ್ತಿದ್ದಾರೆ. ಆಹಾರೇತರ ವಸ್ತುಗಳ ಮೇಲೆ ಹೆಚ್ಚು ಖರ್ಚು ಮಾಡುತ್ತಿದ್ದಾರೆ.

ಏಕದಳ ಧಾನ್ಯಗಳ ಬಳಕೆಯು ಗ್ರಾಮೀಣ ಭಾರತದಲ್ಲಿ ಶೇಕಡಾ 5ಕ್ಕಿಂತ ಕಡಿಮೆ ಮತ್ತು ನಗರ ಪ್ರದೇಶಗಳಲ್ಲಿ 4 ಶೇಕಡಾಕ್ಕಿಂತ ಕಡಿಮೆ. ಜನರು ಏರಿಯೇಟೆಡ್ ಪಾನೀಯಗಳಿಗೆ ಹೆಚ್ಚು ಖರ್ಚು ಮಾಡುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳು ಶೇಕಡಾ 50ಕ್ಕಿಂತ ಕಡಿಮೆ ಮತ್ತು ನಗರ ಭಾರತೀಯರು ಆಹಾರಕ್ಕಾಗಿ 40 ಶೇಕಡಾಕ್ಕಿಂತ ಕಡಿಮೆ ಖರ್ಚು ಮಾಡುತ್ತಾರೆ.

ಭಾರತೀಯರು ಸಾರಿಗೆ ಮತ್ತು ಬಾಳಿಕೆ ಬರುವ ವಸ್ತುಗಳ ಮೇಲೆ ಸಾಕಷ್ಟು ಖರ್ಚು ಮಾಡುತ್ತಿದ್ದಾರೆ. ಸರಳವಾಗಿ ಹೇಳುವುದಾದರೆ ಮೆಟ್ರೋ, ಬಸ್‌ಗಳು, ಕ್ಯಾಬ್‌ಗಳಂತಹ ಸಾರ್ವಜನಿಕ ಸಾರಿಗೆ ಸೇವೆಗಳ ಜೊತೆಗೆ ಟಿವಿ ಮತ್ತು ರೆಫ್ರಿಜರೇಟರ್‌ಗಳನ್ನು ಖರೀದಿಸಲು ಹೆಚ್ಚು ಖರ್ಚು ಮಾಡುತ್ತಿದ್ದಾರೆ.

ಇದನ್ನೂ ಓದಿ: NITI Aayog: 9 ವರ್ಷದಲ್ಲಿ 24.82 ಕೋಟಿ ಭಾರತೀಯರು ಬಡತನದಿಂದ ಪಾರು! ನೀತಿ ಆಯೋಗದ ವರದಿಯಲ್ಲಿ ಏನಿದೆ?

Continue Reading

ದೇಶ

Adani Group: ಎಲೆಕ್ಟ್ರಿಕ್‌ ಪ್ರಯಾಣಿಕ ಕಾರುಗಳಿಗಾಗಿ ಅದಾನಿ ಗ್ರೂಪ್‌- ಉಬರ್ ನಡುವೆ ಮಾತುಕತೆ

Adani Group: ಉಬರ್‌ಗಾಗಿ ವಿದ್ಯುತ್ ಚಾಲಿತ ವಾಹನಗಳ ಪೂರೈಕೆಗಾಗಿ ಅದಾನಿ ಗ್ರೂಪ್ ಪಾಲುದಾರಿಕೆಯ ಮಾತುಕತೆಯನ್ನು ನಡೆಸುತ್ತಿದೆ.

VISTARANEWS.COM


on

Adani Group- Uber talks for electric passenger cars in India
Koo

ನವದೆಹಲಿ: ದೇಶದ ಬಹುದೊಡ್ಡ ಉದ್ಯಮ ಸಂಸ್ಥೆಯಾದ ಅದಾನಿ ಗ್ರೂಪ್ (Adani Group) ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ಉಬರ್‌ನೊಂದಿಗೆ (Uber) ವಿದ್ಯುತ್‌ ಚಾಲಿತ ವಾಹನಗಳ ಪೂರೈಕೆ (electric passenger cars) ಸಂಬಂಧ ಪಾಲುದಾರಿಕೆಯನ್ನು ಹೊಂದಲು ಸಿದ್ಧವಾಗುತ್ತಿದೆ. ಈ ಸಂಬಂಧ ಫೆ.24ರಂದು ಗೌತಮ್ ಅದಾನಿ (Gautam Adani) ಮತ್ತು ಉಬರ್ ಸಿಇಒ ದಾರಾ ಖೋಸ್ರೋಶಾಹಿ (Uber CEO Dara Khosrowshahi) ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಉಬರ್ ಸಿಇಒ ಸದ್ಯ ಭಾರತದ ಪ್ರವಾಸದಲ್ಲಿದ್ದಾರೆ.

ಉದ್ದೇಶಿತ ಪಾಲುದಾರಿಕೆಯಲ್ಲಿ ಉಬರ್ ಸೇವೆಗಳನ್ನು ಅದಾನಿ ಒನ್ ವೇದಿಕೆಯಡಿ ತರಲಾಗುತ್ತದೆ. ವಿಮಾನ ಟಿಕೆಟ್ ಬುಕ್ಕಿಂಗ್, ಹಾಲಿಡೇ ಪ್ಯಾಕೇಜ್‌ಗಳು, ಕ್ಯಾಬ್ ಬುಕ್ಕಿಂಗ್ಸ್ ಸೇರಿದಂತೆ ಇತರ ಸೇವೆಗಳನ್ನು ಒದಗಿಸುವ ಅದಾನಿ ಒನ್ ಅನ್ನು ಅದಾನಿ ಗ್ರೂಪ್ 2022ರಲ್ಲಿ ಲಾಂಚ್ ಮಾಡಿದೆ. ಇದೀಗ ಈ ಸೇವೆಗಳ್ನು ಉಬರ್ ಜತೆಗೆ ಸಂಯೋಜಿಸಲಾಗುತ್ತಿದೆ.

ಅಹಮದಾಬಾದ್ ಮೂಲದ ಮೂಲಸೌಕರ್ಯ ಕಂಪನಿಯಾಗಿರುವ ಅದಾನಿ ಗ್ರೂಪ್, ಎಲೆಕ್ಟ್ರಿಕ್ ಪ್ಯಾಸೆಂಜರ್ ವಾಹನ ವಿಭಾಗವನ್ನು ಪ್ರವೇಶಿಸುವ ಗುರಿಯನ್ನು ಹೊಂದಿದೆ ಮತ್ತು ಸ್ಯಾನ್ ಫ್ರಾನ್ಸಿಸ್ಕೊ ​​ಆಧಾರಿತ ರೈಡ್-ಹೇಲಿಂಗ್ ಅಗ್ರಿಗೇಟರ್‌ನ ಸಹಯೋಗದೊಂದಿಗೆ ಸ್ಥಾನವನ್ನು ‘ಭದ್ರಪಡಿಸಲು’ ಮುಂದಾಗಿದೆ. ಆದಾಗ್ಯೂ, ಅದಾನಿ ಗ್ರೂಪ್ ಈಗಾಗಲೇ ವಾಣಿಜ್ಯ ಇವಿ ವಿಭಾಗದಲ್ಲಿ ಕಾರ್ಯಾಚರಣೆ ನಡೆಸಿದೆ. ಬಸ್‌ಗಳು, ಕೋಚ್‌ಗಳು ಮತ್ತು ಟ್ರಕ್‌ಗಳನ್ನು ಪೂರೈಸುತ್ತದೆ.

ಹಾಗಂತ, ಅದಾನಿ ಗ್ರೂಪ್‌ ಇವಿ ವಾಹವನಗಳನ್ನು ಉತ್ಪಾದನೆ ಮಾಡುವುದಿಲ್ಲ. ಕಂಪನಿಯ ಬಂದರು ಮತ್ತು ವಿಮಾನಗಳ ನಿಲ್ದಾಣಗಳಲ್ಲಿ ವಿವಿಧ ಸೇವೆಗಳಿಗಾಗಿ ಭಾರೀ ಪ್ರಮಾಣದಲ್ಲಿ ವಿದ್ಯುತ್ ಚಾಲಿತ ವಾಹನಗಳ ಅಗತ್ಯವಿದೆ. ಹಾಗಾಗಿಯೇ, ಕಂಪನಿಯು ಎಲೆಕ್ಟ್ರಿಕ್ ವೆಹಿಕಲ್‌ಗಳನ್ನು ಖರೀದಿಸುತ್ತದೆ ಮತ್ತು ತನ್ನ ಬ್ರ್ಯಾಂಡ್‌ ಮೇಲೆ ಮಾರಾಟ ಮಾಡುತ್ತದೆ. ಅವುಗಳನ್ನು ಉಬರ್ ನೆಟ್ವರ್ಕ್‌ಗೆ ಒದಗಿಸಲಿದೆ. ಇತ್ತೀಚೆಗೆ ಕೇಂದ್ರ ಸರ್ಕಾರವು 3600 ಎಲೆಕ್ಟ್ರಿಕ್ ಬಸ್‌ಗಳ ಖರೀದಿಗಾಗಿ ಕರೆಯಲಾದ ಟೆಂಡರ್‌ಗಾಗಿ ಅದಾನಿ ಗ್ರೂಪ್‌ ಕೂಡ ಭಾಗವಹಿಸಿದೆ.

ಅದಾನಿ ಮತ್ತು ಉಬರ್ ಪಾಲುದಾರಿಕೆಯು ದೇಶದಲ್ಲಿ ಎಲೆಕ್ಟ್ರಿಕ್ ನಾಲ್ಕು-ಚಕ್ರ ವಾಹನಗಳ ಅಳವಡಿಕೆ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಉಬರ್‌ಗೆ ವಿಶ್ವದಲ್ಲೇ ಅದರ ಅತಿದೊಡ್ಡ ಎಲೆಕ್ಟ್ರಿಕ್ ವೆಹಿಕಲ್‌ಗಳ ಸಹಯೋಗವನ್ನು ನೀಡಬಹುದು. ಇದರೊಂದಿಗೆ ಅದಾನಿ ಗ್ರೂಪ್‌ ಎಲೆಕ್ಟ್ರಿಕ್ ವಾಹನಗಳ ಅಗ್ರಿಗೇಟರ್‌ ವಲಯಕ್ಕೂ ಕಾಲಿಡಲಿದೆ. ಹಲವು ಕ್ಷೇತ್ರಗಳಲ್ಲಿ ಈಗಾಗಲೇ ತನ್ನ ಪ್ರಾಬಲ್ಯವನ್ನು ಮೆರೆದಿರುವ ಅದಾನಿ ಈಗ ಮತ್ತೊಂದು ಹಂತಕ್ಕೆ ಹೊರಡಲು ಅಣಿಯಾಗಿದೆ ಎಂದು ಹೇಳಬಹುದು.

ಈ ಸುದ್ದಿಯನ್ನೂ ಓದಿ: Gautam Adani: ವಿವಿಧ ಕೈಗಾರಿಕೆಗಳಲ್ಲಿ 7 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಿದೆ ಅದಾನಿ ಗ್ರೂಪ್‌

Continue Reading

ಪ್ರಮುಖ ಸುದ್ದಿ

Gyanvapi Case : ಜ್ಞಾನವಾಪಿ ಮಸೀದಿಯಲ್ಲಿ ಪೂಜೆಗೆ ಅವಕಾಶ; ಅಲಹಾಬಾದ್‌ ಹೈಕೋರ್ಟ್‌ನಲ್ಲಿ ಹಿಂದೂಗಳಿಗೆ ಮೇಲುಗೈ

Gyanvapi Case : ವಾರಣಾಸಿ ಜಿಲ್ಲಾ ನ್ಯಾಯಾಧೀಶರು ಜನವರಿ 31ರ ಆದೇಶದಲ್ಲಿ ಜ್ಞಾನವಾಪಿ ಮಸೀದಿಯ ದಕ್ಷಿಣ ಭಾಗದಲ್ಲಿರುವ ನೆಲಮಾಳಿಗೆಯಲ್ಲಿ ಪೂಜೆಗೆ ಅನುಮತಿ ನೀಡಿದ್ದರು.

VISTARANEWS.COM


on

Gnanavapi Masjid
Koo

ಲಖನೌ: ವಾರಾಣಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿರುವ (Gyanvapi masjid) ವ್ಯಾಸ ತೆಹ್ಖಾನಾದಲ್ಲಿ (Vyas Tehkhana) ಹಿಂದೂಗಳು ಪ್ರಾರ್ಥನೆ ಮುಂದುವರಿಸಲು (Hindu prayer) ಅಲಹಾಬಾದ್ ಹೈಕೋರ್ಟ್ (Allahabad High court) ಅವಕಾಶ ನೀಡಿದ್ದು, ಹಿಂದೂಗಳಿಗೆ ಪ್ರಕರಣದಲ್ಲಿ ಮೇಲುಗೈ ಆಗಿದೆ. ವ್ಯಾಸ ತೆಹ್ಖಾನಾದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡುವ ವಾರಣಾಸಿ ಜಿಲ್ಲಾ ನ್ಯಾಯಾಲಯದ (Varanasi Court) ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ಕುರಿತು ಸೋಮವಾರ ಅಲಹಾಬಾದ್‌ ಹೈಕೋರ್ಟ್‌ ತನ್ನ ತೀರ್ಪು (Gyanvapi Case) ಪ್ರಕಟಿಸಿದೆ.

31 ವರ್ಷಗಳ ನಂತರ ಇದೇ ತಿಂಗಳ ಆರಂಭದಲ್ಲಿ ಜ್ಞಾನವಾಪಿ ಮಸೀದಿ ಆವರಣದಲ್ಲಿ ಪ್ರಥಮ ಬಾರಿಗೆ ಪೂಜೆ ನೆರವೇರಿಸಲಾಗಿತ್ತು. ಮಸೀದಿಯು ನಾಲ್ಕು ʼತೆಹ್ಖಾನಾಗಳು’ ಅಥವಾ ನೆಲಮಾಳಿಗೆಗಳನ್ನು ಹೊಂದಿದೆ. ವಾರಣಾಸಿ ಜಿಲ್ಲಾ ನ್ಯಾಯಾಧೀಶರು ಜನವರಿ 31ರ ಆದೇಶದಲ್ಲಿ ಜ್ಞಾನವಾಪಿ ಮಸೀದಿಯ ದಕ್ಷಿಣ ಭಾಗದಲ್ಲಿರುವ ನೆಲಮಾಳಿಗೆಯಲ್ಲಿ ಪೂಜೆಗೆ ಅನುಮತಿ ನೀಡಿದ್ದರು. ನಂತರ, ಫಿರ್ಯಾದಿ ಶೈಲೇಂದ್ರ ಕುಮಾರ್ ಪಾಠಕ್ ವ್ಯಾಸ್ ಮತ್ತು ಶ್ರೀಗಳು ಸೂಚಿಸಿದ ಅರ್ಚಕರಿಂದ ಏಳು ದಿನಗಳಲ್ಲಿ ಕಾಶಿ ವಿಶ್ವನಾಥ ದೇವಸ್ಥಾನ ಟ್ರಸ್ಟ್ ಮೂಲಕ ವಿಗ್ರಹಗಳ ಪೂಜೆಗೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.

ಜ್ಞಾನವಾಪಿ ಮಸೀದಿಯನ್ನು ನಿರ್ವಹಿಸುವ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯ ವಿರುದ್ಧ ಶೈಲೇಂದ್ರ ಕುಮಾರ್ ಪಾಠಕ್ ವ್ಯಾಸ್ ಅವರು ಸಲ್ಲಿಸಿದ ಅರ್ಜಿಯನ್ನು ಅನುಸರಿಸಿ ನ್ಯಾಯಾಲಯದ ಆದೇಶ ನೀಡಿತ್ತು. ಮೊಕದ್ದಮೆಯ ಪ್ರಕಾರ, ಅರ್ಚಕ ಸೋಮನಾಥ ವ್ಯಾಸ್ ಅವರು 1993ರವರೆಗೆ ಅಧಿಕಾರಿಗಳು ನೆಲಮಾಳಿಗೆಯನ್ನು ಮುಚ್ಚುವವರೆಗೂ ಅಲ್ಲಿ ಪ್ರಾರ್ಥನೆಗಳನ್ನು ಮಾಡುತ್ತಿದ್ದರು. ಶೈಲೇಂದ್ರ ಕುಮಾರ್ ಪಾಠಕ್ ಅವರು ಸೋಮನಾಥ ವ್ಯಾಸ್ ಅವರ ಮಗಳ ಮಗ.

ವಾರಣಾಸಿ ನ್ಯಾಯಾಲಯದ ಜನವರಿ 31ರ ಆದೇಶವನ್ನು ತಡೆಹಿಡಿಯಲು ಕೋರಿ ಮುಸ್ಲಿಮರು ಸಲ್ಲಿಸಿದ್ದ ಮನವಿಯನ್ನು ಫೆಬ್ರುವರಿ 2ರಂದು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿತ್ತು. ಹಿಂದೂ ಕಡೆಯವರು ಜ್ಞಾನವಾಪಿ ಮಸೀದಿಯ ದಕ್ಷಿಣದ ನೆಲಮಾಳಿಗೆಯಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿತ್ತು. ಜನವರಿ 31ರ ಆದೇಶವನ್ನು ಪ್ರಶ್ನಿಸಲು ಮಸೀದಿ ಸಮಿತಿಯು ತನ್ನ ಮನವಿಯಲ್ಲಿ ತಿದ್ದುಪಡಿ ಮಾಡಲು ಫೆಬ್ರವರಿ 6ರವರೆಗೆ ಕಾಲಾವಕಾಶವನ್ನು ಹೈಕೋರ್ಟ್ ನೀಡಿತ್ತು. ನಂತರ ಫೆಬ್ರುವರಿ 12ರಂದು ನ್ಯಾಯಾಲಯವು ಅಂಜುಮನ್ ಇಂತಜಾಮಿಯಾ ಮಸೀದಿ ಸಮಿತಿಯು ಸಲ್ಲಿಸಿದ ಮೇಲ್ಮನವಿಯನ್ನು ವಿಚಾರಣೆ ನಡೆಸಿತ್ತು.

ಮಸೀದಿ ನಿರ್ಮಾಣಕ್ಕೂ ಮೊದಲುಇಲ್ಲಿ ದೊಡ್ಡ ಹಿಂದೂ ದೇವಾಲಯ ಅಸ್ತಿತ್ವದಲ್ಲಿತ್ತು ಎಂದು ಭಾರತೀಯ ಪುರಾತತ್ವ ಸಮೀಕ್ಷೆ (ಎಎಸ್ಐ) ವರದಿ ಹೇಳಿದ ನಂತರ ಮಸೀದಿಯ ಮುಚ್ಚಿದ ಭಾಗದಲ್ಲಿ ಉತ್ಖನನ ಮತ್ತು ವೈಜ್ಞಾನಿಕ ಸಮೀಕ್ಷೆ ಕೋರಿ ನಾಲ್ವರು ಹಿಂದೂ ಮಹಿಳೆಯರು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಮಸೀದಿ ಬಳಿ ವಿವಾದಿತ ರಚನೆಯಿದೆ. ಅದನ್ನು ಹಿಂದೂಗಳು ಶಿವಲಿಂಗ ಎಂದು ಹೇಳುತ್ತಿದ್ದಾರೆ. ಆದರೆ, ಇದು ಪ್ರಾರ್ಥನಾ ಕೊಳದ ಭಾಗವಾಗಿದೆ ಎಂದು ಮುಸ್ಲಿಂ ಸಮುದಾಯದವರು ಹೇಳುತ್ತಿದ್ದಾರೆ.

ವಾಪಿ ಎಂದರೆ ಸಂಸ್ಕೃತದಲ್ಲಿ ಬಾವಿ. ಜ್ಞಾನವಾಪಿ ಎಂದರೆ ಜ್ಞಾನದ ಬಾವಿ ಎಂಬ ಅಕ್ಷರಾರ್ಥ. ಸಾಮಾನ್ಯವಾಗಿ ಶಿವ ದೇವಾಲಯಗಳಲ್ಲಿ ಒಂದು ಬಾವಿ ಕಡ್ಡಾಯವಾಗಿ ಇರುತ್ತದೆ. ಶಿವಲಿಂಗಕ್ಕೆ ನಿತ್ಯ ಅಭಿಷೇಕ ಮಾಡಲು ಈ ಬಾವಿಯ ನೀರನ್ನು ಬಳಸಲಾಗುತ್ತದೆ. ಸದ್ಯ ಈ ಬಾವಿಯನ್ನು ಮಂದಿರ ಹಾಗೂ ಮಸೀದಿಗಳು ಹಂಚಿಕೊಂಡಿವೆ. ಹಿಂದೆ ಮುಸ್ಲಿಂ ರಾಜರ ದಾಳಿಯಾದಾಗ ಕಾಶಿ ವಿಶ್ವನಾಥ ದೇವಾಲಯದ ಅರ್ಚಕರೊಬ್ಬರು ಶಿವಲಿಂಗ ಅಪವಿತ್ರವಾಗದಂತೆ ಅದನ್ನು ತೆಗೆದುಕೊಂಡು ಬಂದು ಈ ಬಾವಿಗೆ ಎಸೆದು ರಕ್ಷಿಸಿದರು ಎಂದು ಕತೆಯಿದೆ.

ಇದನ್ನೂ ಓದಿ: Gyanvapi Case: ಜ್ಞಾನವಾಪಿ ಮಸೀದಿಯಲ್ಲಿ ಯೋಗಿ ಆದಿತ್ಯನಾಥ್‌ ಪೂಜೆ; ವಿಡಿಯೊ ಇಲ್ಲಿದೆ

Continue Reading
Advertisement
Actor Darshan rally police deny permission
ಸ್ಯಾಂಡಲ್ ವುಡ್3 mins ago

Actor Darshan: ನಟ ದರ್ಶನ್​ ಅಭಿಮಾನಿಗಳ ಬೈಕ್ ರ್‍ಯಾಲಿ ರದ್ದು!

Drinking water supply to be disrupted in Bengaluru tomorrow
ಬೆಂಗಳೂರು9 mins ago

Water supply : ಬೆಂಗಳೂರಲ್ಲಿ ನಾಳೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ

Pune Police 60 Hours Operation; Drugs worth more than Rs 1300 crore seized
ಪ್ರಮುಖ ಸುದ್ದಿ21 mins ago

ಪುಣೆ ಪೊಲೀಸರ 60 ಗಂಟೆಗಳ ಕಾರ್ಯಾಚರಣೆ; 1300 ಕೋಟಿ ರೂ.ಗೂ ಅಧಿಕ ಮೌಲ್ಯದ ಡ್ರಗ್ಸ್ ವಶ

gold wear bride
ಚಿನ್ನದ ದರ23 mins ago

Gold Rate Today: 22 ಕ್ಯಾರಟ್‌, 24 ಕ್ಯಾರಟ್‌ ಬಂಗಾರದ ಧಾರಣೆ ಗಮನಿಸಿ, ಖರೀದಿಸಿ

Elderly woman murdered in Bengaluru accused did not give any reason
ಕ್ರೈಂ31 mins ago

Murder Case : ವೃದ್ಧೆ ದೇಹ ತುಂಡು ತುಂಡಾಗಿ ಕತ್ತರಿಸಿದ್ದು ನಾನೇ! ಹಿಂದಿನ ಕಾರಣ ಬಾಯಿಬಿಡದ ಹಂತಕ

Pralhad Joshi Jaishankar Nirmala Seetaraman
ಹುಬ್ಬಳ್ಳಿ34 mins ago

Pralhad Joshi : ಜೈಶಂಕರ್, ನಿರ್ಮಲಾ ಸ್ಪರ್ಧೆ ಖಚಿತ ಎಂದ ಪ್ರಹ್ಲಾದ್‌ ಜೋಶಿ; ಯಾವ ಕ್ಷೇತ್ರ?

india poverty
ದೇಶ53 mins ago

India Poverty: ದೇಶದಲ್ಲಿ ಬಡವರ ಸಂಖ್ಯೆ 5%ಕ್ಕಿಂತ ಇಳಿಕೆ; ಆಹಾರಕ್ಕಿಂತ ಓಡಾಟ, ಮನರಂಜನೆಗೇ ಹೆಚ್ಚು ಖರ್ಚು!

Janardhana Reddy meets CM Siddaramaiah and DCM DK Shivakumar
ರಾಜಕೀಯ1 hour ago

Rajya Sabha Election: ಸಿಎಂ, ಡಿಸಿಎಂ ಭೇಟಿ ಮಾಡಿದ ಜನಾರ್ದನ ರೆಡ್ಡಿ; ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ?

Namma Metro Farmer
ಬೆಂಗಳೂರು1 hour ago

Namma Metro : ಬಟ್ಟೆ ಕ್ಲೀನ್‌ ಇಲ್ಲ ಎಂದು ರೈತನಿಗೆ ಪ್ರವೇಶ ನಿರಾಕರಿಸಿದ ಮೆಟ್ರೋ; ನೆಟ್ಟಿಗರ ಆಕ್ರೋಶ

Siddharth Bodke and Titeeksha Tawade to get married
ಸಿನಿಮಾ1 hour ago

Siddharth Bodke: ಮರಾಠಿ ನಟಿ ತಿತೀಕ್ಷಾ- ʻದೃಶ್ಯಂʼ ನಟ ಸಿದ್ಧಾರ್ಥ್ ಬೋಡ್ಕೆ ಜೋಡಿಯ ಅದ್ಧೂರಿ ಮದುವೆ ಇಂದು

Sharmitha Gowda in bikini
ಕಿರುತೆರೆ5 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ5 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ4 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ3 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ5 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ4 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ3 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

read your daily horoscope predictions for february 26 2024
ಭವಿಷ್ಯ8 hours ago

Dina Bhavishya : ಈ ಮೂರು ರಾಶಿಯವರು ಇಂದು ಹೂಡಿಕೆ ವ್ಯವಹಾರದಲ್ಲಿ ತೊಡುಗುವುದು ಬೇಡ

Dina Bhavishya
ಭವಿಷ್ಯ1 day ago

Dina Bhavishya : ಈ ರಾಶಿಯವರು ಆಪ್ತರೊಂದಿಗೆ ಗೌಪ್ಯ ವಿಷಯವನ್ನು ಹೇಳುವಾಗ ಎಚ್ಚರ!

Video Viral Student falls under school bus He escaped with minor injuries
ವೈರಲ್ ನ್ಯೂಸ್2 days ago

Video Viral: ಸ್ಕೂಲ್ ಬಸ್‌ನಡಿ ಬಿದ್ದ ವಿದ್ಯಾರ್ಥಿ; ಪಾರಾಗಿದ್ದೇ ಪವಾಡ!

Varthur Santhosh
ಮಂಡ್ಯ2 days ago

Varthur Santhosh: ಮತ್ತೆ ಹಳ್ಳಿಕಾರ್‌ ಒಡೆಯ ವಿವಾದ; ವರ್ತೂರ್‌ ಸಂತೋಷ್ ವಿರುದ್ಧ ಕಾನೂನು ಸಮರ

read your daily horoscope predictions for february 24 2024
ಭವಿಷ್ಯ2 days ago

Dina Bhavishya : ಹೂಡಿಕೆ ವ್ಯವಹಾರದಲ್ಲಿ ಈ ರಾಶಿಯವರಿಗೆ ಸಿಗಲಿದೆ ಸಂಗಾತಿ ಸಾಥ್‌

Staff nurses attempt to convert at health centre in Ratagal village
ಕಲಬುರಗಿ3 days ago

Forced Conversion : ಆಪರೇಶನ್‌ ಮತಾಂತರ; ನರ್ಸ್‌ಗಳಿಂದ ಹಿಂದೂಗಳ ಬ್ರೈನ್‌ ವಾಶ್‌

Fire breaks out in auto shed Burnt autos
ಬೆಂಗಳೂರು3 days ago

Fire Accident : ಬೆಂಗಳೂರಿನಲ್ಲಿ ತಡರಾತ್ರಿ ಭಾರೀ ಅಗ್ನಿ ಅವಘಡ! 40-50 ಆಟೋಗಳು ಬೆಂಕಿಗಾಹುತಿ

He sent a private photo video of his girlfriend
ಬೆಳಗಾವಿ3 days ago

Belgavi News : ನವ ವಿವಾಹಿತೆಯ ಖಾಸಗಿ ವಿಡಿಯೊ ಹರಿಬಿಟ್ಟು ಹಳೇ ಪ್ರೇಮಿ ಕಿತಾಪತಿ!

read your daily horoscope predictions for february 23 2024
ಭವಿಷ್ಯ3 days ago

Dina Bhavishya : ಈ ರಾಶಿಯವರಿಗೆ ಆಫೀಸ್‌ನಲ್ಲಿ ಬಾಸ್‌ನ ಕಿರಿಕಿರಿಯಿಂದ ದಿನಪೂರ್ತಿ ಟೆನ್ಷನ್‌!

Catton Candy contain cancer Will there be a ban in Karnataka
ಬೆಂಗಳೂರು4 days ago

cotton candy Ban : ಕರ್ನಾಟಕದಲ್ಲಿ ಬ್ಯಾನ್‌ ಆಗುತ್ತಾ ಬಾಂಬೆ ಮಿಠಾಯಿ; ಕ್ಯಾನ್ಸರ್​​ ಕಾರಕ ವಿಷ ಪತ್ತೆ!

ಟ್ರೆಂಡಿಂಗ್‌