Food Guide: ಬೆಂಗಳೂರಿನ ತಿಂಡಿಪೋತರಿಗೆ 10 ತಿಂಡಿ ಅಡ್ಡಾಗಳು! - Vistara News

ಆಹಾರ/ಅಡುಗೆ

Food Guide: ಬೆಂಗಳೂರಿನ ತಿಂಡಿಪೋತರಿಗೆ 10 ತಿಂಡಿ ಅಡ್ಡಾಗಳು!

ಬೆಂಗಳೂರಿನಲ್ಲಿ ಟ್ರೈ ಮಾಡಲೇಬೇಕಾದ ತಿಂಡಿ ಅಡ್ಡಾಗಳು ಯಾವುದು ಎಂದರೆ ಪಟ್ಟಿ ಹನುಮಂತನ ಬಾಲದ ಹಾಗೆ ಉದ್ದ ಬೆಳೆದೀತು. ಹನುಮಂತನ ಬಾಲ ಉದ್ದವಿದ್ದರೂ ಕಷ್ಟಪಟ್ಟು ಕೆಲವನ್ನು ಇಲ್ಲಿ ಕೊಡುವ ಪ್ರಯತ್ನ ಮಾಡಲಾಗಿದೆ.

VISTARANEWS.COM


on

food bangalore
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಬೆಂಗಳೂರಿನಲ್ಲಿ ಸಂಜೆಯಾದರೆ ಸಾಕು, ಅದೂ ಸಂಜೆಮಳೆ ಸುರಿದು ನಿಂತು ತಂಪಾದ ಗಾಳಿ ಬೀಸುತ್ತಿರಲು, ಮನೆಯೊಳಗೆ ಬಂಧಿಯಾಗಿ ಕೂರಲು ಯಾರಿಗೆ ತಾನೇ ಮನಸ್ಸಾದೀತು. ತಣ್ಣಗಿನ ಗಾಳಿಗೆ ಮೈಯೊಡ್ಡಿ ಸಂಜೆ ಗಲ್ಲಿಯೊಂದರಲ್ಲಿ ಇಷ್ಟದ್ದನ್ನು ಇಷ್ಟಪಟ್ಟವರೊಡನೆ ಕೂತು ತಿಂದರೆ ಮನಸ್ಸು ಹಗುರ, ಹೊಟ್ಟೆ ಭಾರ.

ಹಾಗಾದರೆ ಬೆಂಗಳೂರಿನಲ್ಲಿ ಟ್ರೈ ಮಾಡಲೇಬೇಕಾದ ತಿಂಡಿ ಅಡ್ಡಾಗಳು ಯಾವುದು ಎಂದರೆ ಹೆಸರಿಸುವ ಕಷ್ಟ ಯಾರಿಗೂ ಬೇಡ. ಪಟ್ಟಿ ಹನುಮಂತನ ಬಾಲದ ಹಾಗೆ ಉದ್ದ ಬೆಳೆದೀತು. ಒಂದೊಂದು ಏರಿಯಾದಲ್ಲೇ ಕನಿಷ್ಟ ಐದಾರು ಪ್ರಸಿದ್ಧ ತಿಂಡಿ ಅಡ್ಡಾಗಳು ಖಂಡಿತ ಇದ್ದೇ ಇರುತ್ತದೆ. ಹನುಮಂತನ ಬಾಲ ಉದ್ದವಿದ್ದರೂ ಕಷ್ಟಪಟ್ಟು ಕೆಲವನ್ನು ಇಲ್ಲಿ ಕೊಡುವ ಪ್ರಯತ್ನ ಮಾಡಲಾಗಿದೆ.

1. ವಿವಿ ಪುರಂ ತಿಂಡಿಬೀದಿ: ಈ ಹೆಸರು ಕೇಳದವರು ಬೆಂಗಳೂರಿನಲ್ಲಿ ಇದ್ದರೆ ಅವರದ್ದೂ ಒಂದು ಜನ್ಮವಾ ಎಂದು ತಿಂಡಿಪ್ರಿಯರು ಬಾಯಿ ಬಡಕೊಂಡಾರು. ದಶಕಗಳಿಂದ ವಿವಿ ಪುರಂಗೆ ಅಂಥ ಹೆಸರು. ಜೇಬಿನಲ್ಲಿ ದುಡ್ಡಿಲ್ಲದಿದ್ರೂ, ಚಿಲ್ಲರೆ ಕಾಸು ಎಣಿಸಿಕೊಂಡು ಇಲ್ಲಿ ಬಂದರೂ ಹೊಟ್ಟೆ ಬಿರಿಯುವಷ್ಟು ತಿಂದುಕೊಂಡು ಹೋಗಬಹುದು. ಇಲ್ಲಿನ ಪೊಟೇಟೋ ಟ್ವಿಸ್ಟರ್‌, ಸಿಹಿ ಬೇಳೆ ಹೋಳಿಗೆ, ಮಸಾಲೆ ದೋಸೆ, ಶಿವಣ್ಣ ಗುಲ್ಕಂದ್‌ ಸೆಂಟರಿನ ರೋಸ್‌ ಗುಲ್ಕಂದ್‌ ಮಾತ್ರ ಮರೆಯದೆ ತಿನ್ನಲೇಬೇಕು.

2. ಶ್ರೀಸಾಗರ್-ಸಿಟಿಆರ್‌, ಮಲ್ಲೇಶ್ವರಂ: ಬಾಯಲ್ಲಿ ನೀರೂರಿಸುವ ಕ್ರಿಸ್ಪಿ ಬೆಣ್ಣೆ ಮಸಾಲೆ ದೋಸೆ ತಿನ್ನಬೇಕೆಂದರೆ ಸಿಟಿಆರ್‌ಗೆ ಭೇಟಿ ಕೊಡಲೇಬೇಕು. ಆರು ದಶಕಗಳಿಂದ ದೋಸೆಗೆ ಹೆಸರುವಾಸಿಯಾಗಿರುವ ಇಲ್ಲಿ ಇಡ್ಲಿ ವಡೆ, ಕೇಸರಿಭಾತ್‌, ಪೂರಿ ಸಾಗು ಕೂಡಾ ಚೆನ್ನಾಗಿರುತ್ತದೆ.

food bangalore

3. ಹರಿ ಸೂಪರ್‌ ಸ್ಯಾಂಡ್‌ವಿಚ್, ಜಯನಗರ: ಜಯನಗರದಲ್ಲಿ ಆ ತುದಿಯಿಂದ ಈ ತುದಿಗೆ ಅಡ್ಡಾಡಿದರೆ ತಿನ್ನಲು ಎಷ್ಟೆಲ್ಲ ಅವಕಾಶಗಳಿವೆ! ಜಯನಗರ ಮೂರನೇ ಬ್ಲಾಕಿನ ಹರಿ ಸೂಪರ್‌ ಸ್ಯಾಂಡ್‌ವಿಚ್‌ ಕೂಡಾ ಅಂಥದ್ದೇ ಒಂದು. ಇಲ್ಲಿ ಬಗೆಬಗೆಯ ಸ್ಯಾಂಡ್‌ವಿಚ್‌ಗಳೂ, ಚಾಟ್‌ಗಳೂ ದೊರೆಯುತ್ತವೆ.

4. ಖಾನ್‌ ಸಾಹೇಬ್‌ ಗ್ರಿಲ್ಸ್‌ ಅಂಡ್‌ ರೋಲ್ಸ್‌, ಇಂದಿರಾನಗರ: ಕ್ರಂಚೀ ರೋಲ್‌ಗಳು ಹಾಗೂ ಗ್ರಿಲ್‌ಗಳಲ್ಲಿ ವೈರೈಟಿ ತಿನ್ನಬೇಕಾದಲ್ಲಿ ಇಂದಿರಾನಗರ ಎರಡನೇ ಹಂತದಲ್ಲಿರುವ ಖಾನ್‌ ಸಾಹೇಬರಲ್ಲಿಗೆ ಭೇಟಿ ಕೊಡಬೇಕು. ಇಲ್ಲಿನ ಕಟಿ ರೋಲ್ಸ್‌, ಚಿಕನ್‌ ಸೀಖ್‌ ರೋಲ್‌ ಅದ್ಭುತ.

5.ಪುಚ್ಕಾಸ್‌, ಮಾರತ್‌ಹಳ್ಳಿ: ಮಾರತ್‌ ಹಳ್ಳಿಯ ಸಿಲ್ವರ್‌ ಸ್ಪ್ರಿಂಗ್‌ ಲೇಔಟ್‌ನ ಪುಚ್ಕಾಸ್‌ ಪಾನಿಪುರಿಗೆ ಹೇಳಿ ಮಾಡಿಸಿದ್ದು. ಇಲ್ಲಿನ ಪಾನಿಪುರಿಯ ಜೊತೆಗೆ ಬಿಸಿಬಿಸಿ ಜಿಲೇಬಿ ಕೂಡಾ ಎಲ್ಲರ ಹಾಟ್‌ ಫೇವರಿಟ್.‌

6. ಚಟರ್‌ ಪಟರ್‌, ಬನಶಂಕರಿ: ಚಾಟ್‌ನಲ್ಲೂ ವೆರೈಟಿ ಬೇಕೆಂದರೆ ಇಲ್ಲಿಗೆ ಬರಬೇಕು. ಬೇಲ್‌ಪುರಿ, ದಬೇಲಿ, ಬಗೆಬಗೆಯ ಫ್ಲೇವರ್ಡ್‌ ಪಾನಿಪುರಿಗಳು, ಬ್ಲ್ಯಾಕ್‌ಕರೆಂಟ್‌ ಗಪಾಗಪ್‌ ಸೇರಿದಂತೆ ತರಹೇವಾರಿ ಹೆಸರಿನ ಚಾಟ್‌ಗಳು ಇಲ್ಲಿ ಲಭ್ಯ. ಹೆಸರಿಗೆ ತಕ್ಕಂತೆ ಚಟರ್‌ ಪಟರ್!‌

food bangalore

7. ದಾದರ್‌ ವಡಾಪಾವ್, ಇಂದಿರಾನಗರ:‌ ಹೆಸರೇ ಹೇಳುವಂತೆ ಮುಂಬೈ ಶೈಲಿಯ ವಡಾಪಾವ್‌ ತಿನ್ನಬೇಕೆನಿಸಿದರೆ ಇದು ಹೇಳಿ ಮಾಡಿಸಿದ ಜಾಗ. ಇಲ್ಲಿ ಸೆಝ್ವಾನ್‌, ಆಲೂ, ಪನೀರ್‌ ಮತ್ತಿತರ ಹಲವು ಬಗೆಯ ವಡಾಪಾವ್‌ ಇವೆ. ಇಲ್ಲಿನ ಚಟ್‌ ಪಟಾ ವಡಾಪಾವ್‌, ಚಟ್ನಿ ಗ್ರಿಲ್ಡ್‌ ಸ್ಯಾಂಡ್‌ವಿಚ್‌ ಎಲ್ಲರ ಹಾಟ್‌ ಫೇವರಿಟ್.

ಇದನ್ನೂ ಓದಿ: ಒಲಿಂಪಿಕ್ಸ್‌ಗೆ ಸೇರಿಸಿ: ವಿದ್ಯಾರ್ಥಿ ಭವನದ ವೇಯ್ಟರ್‌ ಬಗ್ಗೆ ಆನಂದ್‌ ಮಹೀಂದ್ರ ಟ್ವೀಟ್

8. ಶಾಹಿ ದರ್ಬಾರ್‌, ಯಶವಂತಪುರ: ಮತ್ತೀಕೆರೆಯ ಎಂ ಎಸ್‌ ರಾಮಯ್ಯ ಮೈದಾನದ ಪಕ್ಕದಲ್ಲೇ ಇರುವ ಶಾಹಿ ದರ್ಬಾರ್‌ ಬಗೆಬಗೆಯ ರೋಲ್‌ಗಳಿಗೆ ಫೇಮಸ್ಸು. ಎಗ್‌ ರೋಲ್‌, ವೆಜ್‌ ರೋಲ್‌, ಪನೀರ್‌ ರೋಲ್‌, ಚಿಕನ್‌ ರೋಲ್‌ ಇಲ್ಲಿನ ಕೆಲವು ತಿನ್ನಲೇಬೇಕಾದ ವೆರೈಟಿಗಳು.

9. ಆರ್‌ ಆರ್ಸ್‌ ಬ್ಲೂ ಮೌಂಟ್‌ ಅಂಡ್‌ ಬಾಂಬೆ ಸ್ಯಾಂಡ್‌ವಿಚ್, ವಸಂತನಗರ: ವಸಂತನಗರದ ಎಂಟನೇ ಮುಖ್ಯರಸ್ತೆಯಲ್ಲಿರುವ ಈ ಅಂಗಡಿಯ ಸುತ್ತಮುತ್ತ ಹಲವಾರು ಇಂಥದ್ದೇ ಬಗೆಯ ಅಂಗಡಿಗಳಿರುವುದರಿಂದ ಈ ಏರಿಯಾವನ್ನೇ ಲೋಫರ್ಸ್‌ ಲೇನ್‌ ಎಂದೂ ಕರೆಯುತ್ತಾರಂತೆ. ಇಲ್ಲಿನ ಚಿಕನ್‌ ಬೋಟ್‌, ಮೆಕ್ಸಿಕನ್‌ ಚಾಟ್‌ ಬಹಳ ರುಚಿ.

10. ಚೆಟ್ಟೀಸ್‌ ಕಾರ್ನರ್‌, ಕುಮಾರಪಾರ್ಕ್‌ ವೆಸ್ಟ್:‌ ನೀವು ಹೊಸ ತಲೆಮಾರಿನ ಸ್ಟ್ರೀಟ್‌ ಫುಡ್‌ ಪ್ರಿಯರಾದಲ್ಲಿ ಈ ಶಾಪ್‌ ನಿಮಗಾಗಿಯೇ ಇದೆ. ನಾನಾ ಪ್ರಯೋಗಗಳಿಗೆ ಸದಾ ತೆರೆದ ಮನಸ್ಸಿರುವ ಸಹೋದರರಿಬ್ಬರು ೧೯೯೭ರಲ್ಲಿ ಶುರುಮಾಡಿದ ಇದರಲ್ಲಿ ಪಾಶ್ಚಿಮಾತ್ಯ ಹಾಗೂ ಭಾರತೀಯ ರುಚಿಗಳ ಸಂಗಮವಿದೆ. ಬೆಂಗಳೂರಿಗೆ ಮೊದಲ ಬಾರಿಗೆ ಪೊಟೇಟೋ ಟ್ವಿಸ್ಟರ್‌ ಪರಿಚಯಿಸಿದ ಕೀರ್ತಿಯೂ ಇವರಿಗೇ ಸಲ್ಲುತ್ತದೆ. ಬನ್‌ ನಿಪ್ಪಟ್‌ ಮಸಾಲಾ, ಮಸಾಲಾ ಸೋಡಾ ಇಲ್ಲಿ ಬಲು ರುಚಿ.

ಇದನ್ನೂ ಓದಿ: Healthy breakfast | ಬೆಳಗಿನ ತಿಂಡಿಗಳು: ನಮ್ಮಲ್ಲೇ ಇದೆ, ನಮ್ಮ ಆರೋಗ್ಯದ ಸೀಕ್ರೆಟ್‌!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ದೇಶ

ದೇಶದ ಪ್ರಧಾನಿಗೆ ಕೈಯಾರ ಚುರುಮುರಿ ಕೊಟ್ಟರೂ ಇಲ್ಲ ಖುಷಿ! ಆ ತಪ್ಪು ಮಾಡಬಾರದಿತ್ತು ಅಂದ ವ್ಯಾಪಾರಿ

VISTARANEWS.COM


on

ಪಶ್ಚಿಮ ಬಂಗಾಳದ ಜಾರ್ಗ್ರಾಮ್‌ನಲ್ಲಿ ಚುರುಮುರಿ (ಝಲ್ಮುರಿ) ವ್ಯಾಪಾರ ಮಾಡುವ ವಿಕ್ರಮ್ ಶಾ ಅವರ ಬದುಕಿನಲ್ಲಿ ಮರೆಯಲಾಗದ ಘಟನೆಯೊಂದು ನಡೆದಿದೆ. ಚುನಾವಣಾ ಪ್ರಚಾರದ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಅಚಾನಕ್ಕಾಗಿ ವಿಕ್ರಮ್ ಅವರ ಪುಟ್ಟ ಅಂಗಡಿಯ ಮುಂದೆ ಬಂದು ನಿಂತಿದ್ದರು. ದೇಶದ ಪ್ರಧಾನಿಯೇ ತಮ್ಮ ಅಂಗಡಿಗೆ ಬಂದಿದ್ದನ್ನು ಕಂಡು ವಿಕ್ರಮ್ ಮೊದಲು ಗಾಬರಿಯಾದರೂ, ಮೋದಿ ಅವರು ಅತ್ಯಂತ ಸರಳವಾಗಿ ಮಾತುಕತೆ ನಡೆಸಿ ವಿಕ್ರಮ್ ಕೈಯಾರೆ ಸಿದ್ಧಪಡಿಸಿದ ಚುರುಮುರಿಯನ್ನು ಇಷ್ಟಪಟ್ಟು ಸವಿದರು.

ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಕೇವಲ ವಿಕ್ರಮ್ ಕೊಟ್ಟ ತಿಂಡಿ ತಿಂದಿದ್ದಲ್ಲದೇ ಅವರ ಕುಟುಂಬ ಮತ್ತು ಜೀವನದ ಬಗ್ಗೆಯೂ ವಿಚಾರಿಸಿದರು. ಬಡತನದ ಕಾರಣ 9ನೇ ತರಗತಿಗೆ ಓದು ಬಿಟ್ಟಿದ್ದ ವಿಕ್ರಮ್, ಪ್ರಧಾನಿಯವರ ಆತ್ಮೀಯತೆಗೆ ಮನಸೋತರು. ತಿಂಡಿ ತಿಂದ ನಂತರ ಮೋದಿ ಅವರು ಹಠ ಹಿಡಿದು ಹಣ ಪಾವತಿಸಿ ವಿಕ್ರಮ್ ಅವರ ಪ್ರಾಮಾಣಿಕತೆಯನ್ನು ಮೆಚ್ಚಿಕೊಂಡರು. ಪ್ರಧಾನಿಯವರ ಈ ಸರಳತೆಯನ್ನು ಕಂಡು ಅಲ್ಲಿದ್ದ ಜನಸಮೂಹ ಚಪ್ಪಾಳೆ ತಟ್ಟಿ ಸಂಭ್ರಮಿಸಿತು.

ಆದರೆ, ಈ ಇಡೀ ಘಟನೆಯಲ್ಲಿ ವಿಕ್ರಮ್ ಶಾ ಅವರಿಗೆ ಒಂದು ಸಣ್ಣ ವಿಷಾದ ಉಳಿದುಬಿಟ್ಟಿದೆ. ಪ್ರಧಾನಿ ತಮ್ಮ ಮುಂದೆಯೇ ಅಷ್ಟು ಹೊತ್ತು ನಿಂತಿದ್ದರೂ, ಆತಂಕದ ನಡುವೆ ಅವರಿಂದ ಒಂದು ಹಸ್ತಾಕ್ಷರ (Autograph) ಪಡೆಯಲು ಅವರಿಗೆ ಸಾಧ್ಯವಾಗಲಿಲ್ಲ. “ಒಂದು ವೇಳೆ ನಾನು ಅವರ ಸಹಿ ಕೇಳಿದ್ದರೆ ಅದು ನನ್ನ ಜೀವನದ ದೊಡ್ಡ ಆಸ್ತಿಯಾಗಿರುತ್ತಿತ್ತು” ಎಂದು ವಿಕ್ರಮ್ ಈಗ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಆದರೂ, ದೇಶದ ಪ್ರಧಾನಿ ತಮ್ಮ ಅಂಗಡಿಗೆ ಬಂದು ಚುರುಮುರಿ ತಿಂದ ಆ ಕ್ಷಣಗಳು ಮಾತ್ರ ವಿಕ್ರಮ್ ಅವರ ಬದುಕಿನ ಸುವರ್ಣ ನೆನಪಾಗಿ ಉಳಿದಿವೆ.

Continue Reading

ಆಹಾರ/ಅಡುಗೆ

Krishna janmastami 2024: ಕೃಷ್ಣ ಜನ್ಮಾಷ್ಟಮಿಗೆ ಏನೆಲ್ಲ ಸಿಹಿ ತಿನಿಸು ತಯಾರಿಸಬಹುದು? ಇಲ್ಲಿದೆ ಟಿಪ್ಸ್‌

ನಾಲಿಗೆಯ ರುಚಿಯನ್ನು ತೃಪ್ತಿಪಡಿಸುವ, ಜೊತೆಗೆ ಆರೋಗ್ಯವನ್ನೂ ಕಾಪಾಡುವ ಕೆಲವು ಪೌಷ್ಟಿಕ ಖಾದ್ಯಗಳ ಕುರಿತು ಮಾಹಿತಿ ಇಲ್ಲಿದೆ. ಈ ಬಾರಿ ಜನ್ಮಾಷ್ಟಮಿಯಲ್ಲಿ (Krishna janmastami 2024) ಇದನ್ನು ಮಾಡಿ ದೇವರಿಗೂ ನೈವೇದ್ಯ ಮಾಡಬಹುದು. ಆರೋಗ್ಯದ ಬಗ್ಗೆ ಹೆಚ್ಚು ಚಿಂತೆ ಮಾಡದೇ ನೀವು ಧಾರಾಳವಾಗಿ ಮೆಲ್ಲಬಹುದು, ಅತಿಥಿಗಳಿಗೂ ನೀಡಬಹುದು.

VISTARANEWS.COM


on

By

Krishna janmastami 2024

ಕೃಷ್ಣ ಜನ್ಮಾಷ್ಟಮಿ (Krishna janmastami 2024) ಎಂದರೆ ದೇವರಿಗೆ ನೈವೇದ್ಯ ಮಾಡಲು, ಬಂದಂಥ ಅತಿಥಿಗಳನ್ನು ಸತ್ಕರಿಸಲು ಮನೆಯಲ್ಲಿ ಬಗೆಬಗೆಯ ಖಾದ್ಯ, ಸಿಹಿ ತಿಂಡಿಗಳನ್ನು (sweets) ಮಾಡಲೇಬೇಕು. ಹಾಗಂತ ಹಬ್ಬದ ಸಂದರ್ಭದಲ್ಲಿ ಆರೋಗ್ಯವನ್ನೂ ಕಡೆಗಣಿಸುವಂತಿಲ್ಲ. ಹೀಗಾಗಿ ಈ ಬಾರಿ ಜನ್ಮಾಷ್ಟಮಿಯಲ್ಲಿ (janmastami) ಸಿಹಿ ಜೊತೆಗೆ ಆರೋಗ್ಯಕರವಾದ (Healthy Sweets) ಖಾದ್ಯಗಳನ್ನು ಮನೆಯಲ್ಲೇ ಮಾಡಲು ಟ್ರೈ ಮಾಡಿನೋಡಬಹುದು.

ನಾಲಿಗೆಯ ರುಚಿಯನ್ನು ತೃಪ್ತಿ ಪಡಿಸುವ, ಜೊತೆಗೆ ಆರೋಗ್ಯವನ್ನೂ ಕಾಪಾಡುವ ಕೆಲವು ಪೌಷ್ಟಿಕ ಖಾದ್ಯಗಳ ಕುರಿತು ಮಾಹಿತಿ ಇಲ್ಲಿದೆ. ಈ ಬಾರಿ ಜನ್ಮಾಷ್ಟಮಿಯಲ್ಲಿ ಇದನ್ನು ಮಾಡಿ ದೇವರಿಗೂ ನೈವೇದ್ಯ ಮಾಡಬಹುದು. ಆರೋಗ್ಯದ ಬಗ್ಗೆ ಹೆಚ್ಚು ಚಿಂತೆ ಮಾಡದೇ ನೀವು ಮೆಲ್ಲಬಹುದು, ಅತಿಥಿಗಳಿಗೂ ನೀಡಬಹುದು.


ಖರ್ಜೂರ ಮತ್ತು ಒಣ ಹಣ್ಣಿನ ಲಡ್ಡು

ಖರ್ಜೂರದ ನೈಸರ್ಗಿಕ ಮಾಧುರ್ಯವನ್ನು ವಿವಿಧ ಒಣ ಹಣ್ಣುಗಳೊಂದಿಗೆ ಸವಿಯಬಹುದು. ಖರ್ಜೂರದ ಬೀಜಗಳನ್ನು ತೆಗೆದು ಹಾಲಿನಲ್ಲಿ ಎರಡು ಗಂಟೆಗಳ ಕಾಲ ನೆನೆಸಿ ಇಡಿ. ಬಾದಾಮಿ, ಗೋಡಂಬಿ ಮತ್ತು ಪಿಸ್ತಾಗಳಂತಹ ಬೀಜಗಳನ್ನು ಖರ್ಜೂರದೊಂದಿಗೆ ಸೇರಿಸಿ ಮಿಶ್ರಣವನ್ನು ಸಣ್ಣ ಉಂಡೆಗಳಾಗಿ ಮಾಡಿ ಫ್ರಿಜ್‌ನಲ್ಲಿ ಇಡಿ. ಜನ್ಮಾಷ್ಟಮಿಗೆ ಪರಿಪೂರ್ಣವಾದ ಆರೋಗ್ಯಕರ, ಶಕ್ತಿ-ಉತ್ತೇಜಿಸುವ ಲಡ್ಡು ಇದಾಗಿದೆ.

Krishna janmashtami


ಸೀಡ್ಸ್ ಲಡ್ಡು

ಚಿಯಾ, ಫ್ಲಾಕ್ಸ್ ಮತ್ತು ಸೂರ್ಯಕಾಂತಿಗಳಂತಹ ಬೀಜಗಳ ಮಿಶ್ರಣವನ್ನು ಲಘುವಾಗಿ ಹುರಿದು ಪುಡಿ ಮಾಡಿ. ಬೀಜದ ಪುಡಿಯನ್ನು ಜೇನುತುಪ್ಪದೊಂದಿಗೆ ಸೇರಿಸಿ ಲಡ್ಡು ಮಾಡಿ. ಪೋಷಕಾಂಶಗಳಿರುವ ಈ ಲಡ್ಡಿನಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ಫೈಬರ್‌ ಸಮೃದ್ಧವಾಗಿವೆ.

Krishna janmashtami


ಫ್ರೂಟ್ ಸಲಾಡ್

ಬಾಳೆಹಣ್ಣು, ಸೇಬು, ದ್ರಾಕ್ಷಿ ಮತ್ತು ದಾಳಿಂಬೆಗಳಂತಹ ತಾಜಾ ಹಣ್ಣುಗಳನ್ನು ಕತ್ತರಿಸಿ ಹಾಲಿನ ಕೆನೆಯೊಂದಿಗೆ ಸೇರಿಸಿ. ಜೇನುತುಪ್ಪ ಬೆರೆಸಿ ಸಿಹಿಗೊಳಿಸಿ. ಈ ತಿಳಿ ಮತ್ತು ಕೆನೆ ಖಾದ್ಯವು ರುಚಿಕರವಾದದ್ದು ಮಾತ್ರವಲ್ಲದೆ ಅಗತ್ಯವಾದ ಜೀವಸತ್ವ, ಖನಿಜಾಂಶಗಳನ್ನು ಹೊಂದಿದೆ.


ಡ್ರೈ ಫ್ರೂಟ್ ಚಿಕ್ಕಿ

ಒಣ ಹಣ್ಣುಗಳಾದ ಶೇಂಗಾ, ಬಾದಾಮಿ ಮತ್ತು ಎಳ್ಳನ್ನು ಬೆಲ್ಲದೊಂದಿಗೆ ಹುರಿದು ಬೆರೆಸಿ ಡ್ರೈಫ್ರೂಟ್ ಚಿಕ್ಕಿ ತಯಾರಿಸಿ. ಮಿಶ್ರಣವನ್ನು ತುಪ್ಪ ಹಚ್ಚಿದ ಟ್ರೇಗೆ ಸುರಿಯಿರಿ. ಅದನ್ನು ತಣ್ಣಗಾಗಲು ಬಿಡಿ, ತದನಂತರ ತುಂಡುಗಳಾಗಿ ಕತ್ತರಿಸಿ. ಇದು ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬಿನ ಉತ್ತಮ ಮೂಲವಾಗಿದೆ.

ಇದನ್ನೂ ಓದಿ: Health Tips Kannada: ಮಾರಕ ರೋಗಗಳನ್ನು ದೂರ ಇರಿಸುತ್ತದೆ ಬೂದುಗುಂಬಳದ ರಸ!


ಡ್ರೈಫ್ರೂಟ್ ಲಡ್ಡು

ವಾಲ್‌ನಟ್ಸ್, ಬಾದಾಮಿ, ಗೋಡಂಬಿ ಮತ್ತು ಖರ್ಜೂರದಂತಹ ಒಣ ಹಣ್ಣುಗಳನ್ನು ಬ್ಲೆಂಡರ್‌ನಲ್ಲಿ ಮಿಶ್ರಣ ಮಾಡಿ. ಮಿಶ್ರಣಕ್ಕೆ ಜೇನುತುಪ್ಪವನ್ನು ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಸಣ್ಣ ಉಂಡೆಗಳಾಗಿ ಆಕಾರ ಮಾಡಿ ಮತ್ತು ತಣ್ಣಗಾಗಿಸಿ. ಸಣ್ಣ ಸಣ್ಣ ಉಂಡೆಗಳಾಗಿ ಮಾಡಿ. ಅತ್ಯಧಿಕ ಪೋಷಕಾಂಶಗಳನ್ನು ಹೊಂದಿರುವ ಇದು ನೈಸರ್ಗಿಕ ಸಿಹಿಯನ್ನು ನೀಡುತ್ತದೆ.

Continue Reading

ಆಹಾರ/ಅಡುಗೆ

Non Vegetarian Population: ಜಗತ್ತಿನಲ್ಲಿ ಕುಸಿಯುತ್ತಿದೆ ಮಾಂಸಾಹಾರಿಗಳ ಸಂಖ್ಯೆ! ಕಡಿಮೆ ಮಾಂಸಾಹಾರದ ದೇಶಗಳಲ್ಲಿ ಭಾರತವೇ ನಂ.1

ಆರೋಗ್ಯದ ಕಾಳಜಿಯಿಂದ, ಧರ್ಮ ಮತ್ತು ಸಂಸ್ಕೃತಿಯ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಸಸ್ಯಾಹಾರಿ ಆಹಾರವನ್ನು ಅನುಸರಿಸುತ್ತಾರೆ. ವಿಶ್ವದಲ್ಲಿ ಹಲವು ದೇಶಗಳಲ್ಲಿ ಮಾಂಸಾಹಾರಿಗಳು ಕಡಿಮೆಯಾಗುತ್ತಿದ್ದಾರೆ. ಅದರಲ್ಲೂ ಈ ಪ್ರಮುಖ ಏಳು ದೇಶಗಳು ಕಡಿಮೆ ಮಾಂಸಾಹಾರಿ ಜನರನ್ನು (Non Vegetarian Population) ಹೊಂದಿದೆ.

VISTARANEWS.COM


on

By

Non Vegetarian Population

ಆರೋಗ್ಯಕರ ಜೀವನಶೈಲಿಗಾಗಿ ಅನೇಕರು ಮಾಂಸಾಹಾರವನ್ನು (Non Vegetarian Population) ತ್ಯಜಿಸಿ ಸಸ್ಯಾಹಾರವನ್ನು (vegetarian) ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಜನರು ಪ್ರಾಣಿಗಳ ಬಗ್ಗೆ ವಿಶೇಷ ಪ್ರೀತಿ ಮತ್ತು ಕಾಳಜಿಯಿಂದಾಗಿ ಸಸ್ಯಾಹಾರವನ್ನೇ ಆಹಾರದಲ್ಲಿ (food) ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಕೆಲವು ಸಂದರ್ಭಗಳಲ್ಲಿ ಜನರು ಧರ್ಮ ಮತ್ತು ಸಂಸ್ಕೃತಿಯ ಕಾರಣದಿಂದ ಸಸ್ಯಾಹಾರಿ ಆಹಾರವನ್ನು ಅನುಸರಿಸುತ್ತಾರೆ. ವಿಶ್ವದಲ್ಲಿ ಹಲವು ದೇಶಗಳಲ್ಲಿ ಮಾಂಸಾಹಾರಿಗಳು ಕಡಿಮೆಯಾಗುತ್ತಿದ್ದಾರೆ. ಅದರಲ್ಲೂ ಈ ಪ್ರಮುಖ ಏಳು ದೇಶಗಳು ಕಡಿಮೆ ಮಾಂಸಾಹಾರಿ ಜನರನ್ನು ಹೊಂದಿದೆ.


ಭಾರತ

ಭಾರತವು ವಿಶ್ವದಲ್ಲೇ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಮಾಂಸಾಹಾರ ಸೇವಿಸುವ ಜನರನ್ನು ಹೊಂದಿರುವ ದೇಶವಾಗಿದೆ. ʼವರ್ಲ್ಡ್‌ ಅಟ್ಲಾಸ್ʼ ಪ್ರಕಾರ ಪ್ರತಿ ವರ್ಷಕ್ಕೆ ತಲಾ ಒಬ್ಬರು ಕೇವಲ 3 ಕೆಜಿ ಮಾಂಸವನ್ನು ಮಾತ್ರ ಸೇವಿಸುತ್ತಾರೆ. ಇದಕ್ಕೆ ಹಲವಾರು ಅಂಶಗಳು ಕೊಡುಗೆ ನೀಡುತ್ತದೆ. ಇದರಲ್ಲಿ ಧರ್ಮವು ಅತ್ಯಂತ ಪ್ರಮುಖವಾದದ್ದು.


ಮೆಕ್ಸಿಕೋ

ಮೆಕ್ಸಿಕೋದಲ್ಲಿ ಸುಮಾರು ಶೇ. 19ರಷ್ಟು ಜನರು ಸಸ್ಯಾಹಾರಿಗಳು. ಅಲ್ಲಿನ ಜನರು ಆರೋಗ್ಯ ಕಾಳಜಿ, ಪ್ರಾಣಿ ಹಕ್ಕುಗಳು ಮತ್ತು ಪರಿಸರ ಸಮಸ್ಯೆಗಳಿಂದಾಗಿ ಸಸ್ಯ ಆಧಾರಿತ ಆಹಾರಕ್ಕೆ ಬದಲಾಗುತ್ತಿದ್ದಾರೆ. ಪ್ರಮುಖ ನಗರಗಳಲ್ಲಿ ಹೆಚ್ಚು ಸಸ್ಯಾಹಾರಿ ರೆಸ್ಟೋರೆಂಟ್‌ಗಳೇ ಇವೆ.

ಇಸ್ರೇಲ್

ಮಾಂಸಾಹಾರ ಸೇವನೆಯನ್ನು ನಿರ್ಬಂಧಿಸುವ ಜುದಾಯಿಸಂನಿಂದಾಗಿ ಇಸ್ರೇಲ್ ಕಡಿಮೆ ಮಾಂಸಾಹಾರಿ ಜನಸಂಖ್ಯೆಯನ್ನು ಹೊಂದಿದೆ. ದೇಶವು ವೇಗವಾಗಿ ಸಸ್ಯಾಹಾರಿಗಳಿಗೆ ಸ್ವರ್ಗವಾಗಿ ಮಾರ್ಪಡುತ್ತಿದೆ. ನೂರಾರು ರೆಸ್ಟೋರೆಂಟ್‌ಗಳು ಇಲ್ಲಿ ಸಸ್ಯಾಹಾರಿ ಊಟವನ್ನೇ ನೀಡುತ್ತಿವೆ. 2014 ರಲ್ಲಿ ವಿಶ್ವದ ಅತಿದೊಡ್ಡ ಸಸ್ಯಾಹಾರಿ ಉತ್ಸವವನ್ನು ಟೆಲ್ ಅವಿವ್‌ನಲ್ಲಿ ಆಯೋಜಿಸಲಾಯಿತು.

ಇಥಿಯೋಪಿಯಾ

ಆಫ್ರಿಕನ್ ದೇಶವು ಮಾಂಸ ಸೇವನೆಯ ಪ್ರಮಾಣವನ್ನು ಬಹಳ ಕಡಿಮೆ ಹೊಂದಿದೆ. ಬಡತನದ ಪ್ರಮಾಣ ಹೆಚ್ಚಿರುವುದರಿಂದ ಹೆಚ್ಚಿನ ಜನರಿಗೆ ಮಾಂಸಾಹಾರ ಇಲ್ಲಿ ದೊರೆಯುತ್ತಿಲ್ಲ. ಸರಾಸರಿಯಾಗಿ ದೇಶದ ಜನರು ತಲಾ 2.58 ಕೆ.ಜಿ. ಗೋಮಾಂಸ ಮತ್ತು ಕರುವಿನ ಮಾಂಸವನ್ನು ಸೇವಿಸುತ್ತಾರೆ. ಕೇವಲ 0.45 ಕೆ.ಜಿ. ಕೋಳಿ ಮಾಂಸಗಳನ್ನು ಸೇವಿಸುತ್ತಾರೆ.

ತೈವಾನ್

ಬೌದ್ಧಧರ್ಮದ ಕಾರಣದಿಂದಾಗಿ ತೈವಾನ್ ಗಣನೀಯ ಪ್ರಮಾಣದ ಸಸ್ಯಾಹಾರಿ ಜನಸಂಖ್ಯೆಯನ್ನು ಹೊಂದಿದೆ. ಯಾಕೆಂದರೆ ಧರ್ಮವು ಮಾಂಸ ಮುಕ್ತ ಆಹಾರಕ್ಕಾಗಿ ಪ್ರತಿಪಾದಿಸುತ್ತದೆ. ಅಲ್ಲದೇ ದೇಶದಲ್ಲಿ ಹಲವಾರು ಬಾಯಲ್ಲಿ ನೀರೂರಿಸುವಂತ ಸಸ್ಯಾಹಾರಿ ಪಾಕಪದ್ಧತಿಗಳಿವೆ. ಸರ್ಕಾರವು ಶಾಲೆಗಳು ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಸಸ್ಯಾಹಾರಿ ಆಯ್ಕೆಗಳನ್ನೇ ಒದಗಿಸುತ್ತದೆ.


ಜರ್ಮನಿ

ಜರ್ಮನಿಯಲ್ಲಿ ಹೆಚ್ಚು ಜನರು ಮಾಂಸಾಹಾರಿ ಜೀವನಶೈಲಿಯನ್ನು ಬಿಟ್ಟು ಸಸ್ಯಾಹಾರಿ ಆಹಾರವನ್ನು ಆರಿಸಿಕೊಳ್ಳುತ್ತಿದ್ದಾರೆ. ಇಲ್ಲಿ ಬಲವಾದ ಪ್ರಾಣಿ ಹಕ್ಕುಗಳ ಆಂದೋಲನವನ್ನು ಹೊಂದಿದೆ. ಇದು ಮಾಂಸಾಹಾರಿ ಜನಸಂಖ್ಯೆಯ ಕುಸಿತಕ್ಕೆ ಕಾರಣವಾಗಿದೆ. ಬರ್ಲಿನ್‌ನಂತಹ ಪ್ರಮುಖ ನಗರಗಳು ಹೆಚ್ಚು ಸಸ್ಯಾಹಾರಿ ರೆಸ್ಟೊರೆಂಟ್‌ಗಳನ್ನು ಹೊಂದಿದ್ದು ಅವು ಸೌರ್‌ಕ್ರಾಟ್ ಮತ್ತು ಪ್ರಿಟ್ಜೆಲ್‌ಗಳಂತಹ ಸಾಂಪ್ರದಾಯಿಕ ಭಕ್ಷ್ಯಗಳನ್ನು ನೀಡುತ್ತವೆ.

ಇದನ್ನೂ ಓದಿ: Indian Dessert 2024: ವಿಶ್ವದ ಪ್ರಸಿದ್ಧ ʼಸಿಹಿತಿಂಡಿ ತಾಣʼಗಳ ಪಟ್ಟಿಯಲ್ಲಿ ಸ್ಥಾನ ಪಡೆದ 10 ಭಾರತೀಯ ಸ್ವೀಟ್‌ ಸ್ಟಾಲ್‌ಗಳಿವು

ಮೊಜಾಂಬಿಕ್

ಪೂರ್ವ ಆಫ್ರಿಕಾದ ದೇಶವು ವಿಶ್ವದ ಅತ್ಯಂತ ಬಡ ದೇಶಗಳಲ್ಲಿ ಒಂದಾಗಿದೆ. ಪರಿಣಾಮವಾಗಿ, ಸರಾಸರಿ ಮಾಂಸ ಸೇವನೆಯು ಅಲ್ಲಿ ಕಡಿಮೆಯಾಗಿದೆ. ಮೊಜಾಂಬಿಕ್‌ನಲ್ಲಿರುವ ಜನರು ಹೆಚ್ಚಾಗಿ ಆಮದು ಮಾಡಿಕೊಂಡ ಮಾಂಸವನ್ನು ಸೇವಿಸುತ್ತಾರೆ.

Continue Reading

ಆಹಾರ/ಅಡುಗೆ

Desserts For Tea Lovers: ಚಹಾ ಪ್ರಿಯರಿಗಾಗಿ ಇಲ್ಲಿವೆ ಬಗೆಬಗೆಯ ಡೆಸರ್ಟುಗಳು! ನೀವೂ ಟ್ರೈ ಮಾಡಿ ನೋಡಿ

Desserts For Tea Lovers: ಚಹಾಪ್ರಿಯರು ದಿನಕ್ಕೆರಡು ಬಾರಿಯಾದರೂ ಚಹಾ ಕುಡಿಯದೆ ಬಿಡಲಾರರು. ನೀವು ಏನೇ ಹೇಳಿ, ಯಾವುದೇ ವಾದ ಮಂಡಿಸಿ, ಚಹಾಪ್ರಿಯರಿಗೆ ತಮ್ಮ ಚಹಾ ಪ್ರೇಮವನ್ನು ಸಮರ್ಥಿಸಲು ಕಾರಣ ನೂರಾರು. ಯಾವುದೇ ಕ್ರೇಜಿ ಐಡಿಯಾ ಮಾಡಿಯಾದರೂ ಅವರು ಚಹಾ ಸೇವಿಸುತ್ತಾರೆ. ಇಂಥ ಚಹಾಪ್ರಿಯರಿಗೊಂದು ಕ್ರೇಜಿ ಡೆಸರ್ಟ್‌ಗಳು ಇಲ್ಲಿವೆ.

VISTARANEWS.COM


on

ಚಹಾ ಕುಡಿಯುವ ಗಮ್ಮತ್ತೇ ಬೇರೆ. ಬಿಸಿ ಬಿಸಿ ಹೊಗೆಯಾಡುವ ಬಗೆಬಗೆಯ ಚಹಾವನ್ನು ನಾವು ಲೋಟಗಟ್ಟಲೇ ದಿನವಿಡೀ ಕುಡಿದೇವು ಎಂದು ಚಹಾಪ್ರಿಯರು ತಮ್ಮ ಚಹಾಪ್ರೇಮದ ಬಗ್ಗೆ ವ್ಯಾಖ್ಯಾನ ನೀಡಬಹುದು. ಚಹಾಪ್ರಿಯರು ದಿನಕ್ಕೆರಡು ಬಾರಿಯಾದರೂ ಚಹಾ ಕುಡಿಯದೆ ಬಿಡಲಾರರು. ನೀವು ಏನೇ ಹೇಳಿ, ಯಾವುದೇ ವಾದ ಮಂಡಿಸಿ, ಚಹಾಪ್ರಿಯರಿಗೆ ತಮ್ಮ ಚಹಾ ಪ್ರೇಮವನ್ನು ಸಮರ್ಥಿಸಲು ಕಾರಣ ನೂರಾರು. ಯಾವುದೇ ಕ್ರೇಜಿ ಐಡಿಯಾ ಮಾಡಿಯಾದರೂ ಅವರು ಚಹಾ ಸೇವಿಸುತ್ತಾರೆ. ಇಂಥ ಚಹಾಪ್ರಿಯರಿಗೊಂದು ಕ್ರೇಜಿ ಡೆಸರ್ಟ್‌ಗಳು ಇಲ್ಲಿವೆ. ನಿಮ್ಮ ಚಹಾಪ್ರೇಮಕ್ಕೆ ಕಳಶವಿಟ್ಟಂತೆ ಈ ಚಿತ್ರವಿಚಿತ್ರ ಚಹಾದ ಡೆಸರ್ಟ್‌ಗಳು ಇಂದು ಕೆಲವೆಡೆ ವಿಶೇಷವಾಗಿ ಲಭ್ಯ ಇವೆ. ಬನ್ನಿ ಚಹಾದ ಈ ಚಿತ್ರವಿಚಿತ್ರ ಡೆಸರ್ಟ್‌ಗಳ ಹೆಸರು ಕೇಳಿ ನೀವೂ (Desserts For Tea Lovers) ಮನೆಯಲ್ಲಿ ಪ್ರಯತ್ನಿಸಿ.

Masala tea ice cream

ಮಸಾಲಾ ಚಹಾ ಐಸ್‌ಕ್ರೀಂ

ಐಸ್‌ಕ್ರೀಂ ಅನ್ನು ಯಾರಾದರೂ ಬೇಡ ಎನ್ನುತ್ತಾರೆಯೋ. ಖಂಡಿತ ಇಲ್ಲ. ಆದರೆ ಇದು ಮಸಾಲೆ ಚಹಾ ಐಸ್‌ ಕ್ರೀಂ. ಎಲ್ಲಿಯ ಚಹಾ ಎಲ್ಲಿಯ ಐಸ್‌ಕ್ರೀಂ ಎನ್ನಬೇಡಿ. ಬಿಸಿಬಿಸಿಯಾದ ಚಹಾದ ಬದಲಿಗೆ ಬಾಯಲ್ಲಿಟ್ಟರೆ ಕರಗುವ ಮಸಾಲೆ ಚಹಾದ ರುಚಿಯ ಐಸ್‌ಕ್ರೀಂ ರೂಪದ ಡೆಸರ್ಟ್‌ ನಿಮಗೆ ಸಿಕ್ಕರೆ?! ವಾಹ್‌ ಎನಿಸೀತೇ? ಹಾಗಿದ್ದರೆ ಒಮ್ಮೆ ನೀವೂ ಮನೆಯಲ್ಲಿ ಟ್ರೈ ಮಾಡಿ ನೋಡಬಹುದು. ಈಗ ಸಾಕಷ್ಟು ಟ್ರೆಂಡ್‌ನಲ್ಲಿರುವ ಈ ಹೊಸ ಐಸ್‌ಕ್ರೀಂ ಹುಡುಕಿ ತಿನ್ನಿ, ಇಲ್ಲವೇ ಮನೆಯಲ್ಲೇ ಟ್ರೈ ಮಾಡಿ ತಿನ್ನಿ!

ಮಸಾಲಾ ಚಹಾ ಕೇಕ್

ಮಸಾಲೆ ಚಹಾದ ರುಚಿಯಿರುವ ಘಮವಿರುವ ಕೇಕ್‌ ಕೂಡಾ ತಯಾರಿಸಬಹುದು. ಚಹಾ ಪ್ರಿಯರಿಗೆ ಇದು ಖಂಡಿತ ಇಷ್ಟವಾಗಲೂಬಹುದು. ಕಾಫಿ ಫ್ಲೇವರ್‌ನ ಕೇಕ್‌ನಂತೆ ಈಗ ಚಹಾ ಪ್ರಿಯರಿಗೆ ಚಹಾ ಫ್ಲೇವರಿನ ಕೇಕುಗಳೂ ಕೆಲವೆಡೆ ಲಭ್ಯವಾಗುತ್ತಿವೆಯಂತೆ. ಹಾಗಾಗಿ ನೀವೂ ಕೇಕ್‌ ತಜ್ಞರಾಗಿದ್ದರೆ, ಮಾಡುವ ಅಭ್ಯಾಸ ನಿಮಗಿದ್ದರೆ ಒಮ್ಮೆ ಈ ರುಚಿಯನ್ನು ಪ್ರಯತ್ನಿಸಿ. ಈ ಕೇಕ್‌ ಅನ್ನು ರಬ್ಡೀ ಜೊತೆಗೆ ಸವಿದರೆ ಇನ್ನೂ ರುಚಿಯಂತೆ!

Cutting Chai Kulfi

ಕಟ್ಟಿಂಗ್‌ ಚಾಯ್‌ ಕುಲ್ಫಿ

ನೀವು ಮುಂಬೈಯ ಕಟ್ಟಿಂಗ್‌ ಚಾಯ್‌ ಪ್ರಿಯರಾಗಿದ್ದಲ್ಲಿ ಈ ಬಗೆಯ ಕುಲ್ಫಿ ಟ್ರೈ ಮಾಡಬಹುದು. ಕಟ್ಟಿಂಗ್‌ ಚಾಯ್‌ ತಯಾರಿಸಿ ಕುಲ್ಫಿ ಮೌಲ್ಡ್‌ಗಳಲ್ಲಿ ಹಾಕಿಟ್ಟು, ಅದಕ್ಕೆ ಇನ್ನೂ ಆಕರ್ಷಕವಾಗಿಸಲು ಗುಲಾಬಿದಳಗಳು, ಪಿಸ್ತಾ ಹಾಗೂ ಬಾದಾಮಿ ಚೂರುಗಳು ಮತ್ತಿತರ ಬೀಜಗಳನ್ನೂ ಸೇರಿಸಬಹುದು. ನಿಮ್ಮ ಚಹಾ ಕುಲ್ಫಿ ರೆಡಿ. ಬಗೆಬಗೆಯ ಫ್ಲೇವರ್‌ಗಳ ಕುಲ್ಫಿಗಳ ಜೊತೆಗೆ ಈಗ ಈ ಕಟ್ಟಿಂಗ್‌ ಚಾಯ್‌ ಕುಲ್ಫಿ ಕೂಡಾ ಟ್ರೆಂಡ್‌ನಲ್ಲಿದೆ. ಯುವಜನರನ್ನು ಆಕರ್ಷಿಸುತ್ತಿದೆ.

ಇದನ್ನೂ ಓದಿ: Homemade Tofu Recipe: ಸೋಯಾ ಹಾಲಿನ ತೋಫು ಮನೆಯಲ್ಲೇ ಮಾಡಿಕೊಳ್ಳುವುದು ಹೇಗೆ?

ಮಸಾಲಾ ಚಾಯ್‌ ಕುಕ್ಕೀಸ್‌

ನಿಮ್ಮ ಚಹಾ ಟೈಮ್‌ಗೆ ನೀವು ತಿನ್ನುವ ಕುಕ್ಕೀಸ್‌ ಕೂಡಾ ಚಹಾ ಫ್ಲೇವರ್‌ನದ್ದೇ ಆಗಿದ್ದರೆ!? ವಾಹ್‌, ಎಂಥಾ ಐಡಿಯಾ ಎನ್ನುತ್ತೀರಾ? ಚಹಾ ಘಮವಿರುವ ಕುಕ್ಕೀಸ್‌ ಕೂಡಾ ತಯಾರು ಮಾಡಬಹುದು. ಸಂಜೆಯ ಹೊತ್ತು ಕೂತು ಚಹಾವನ್ನೂ ಜೊತೆಗೆ ಚಹಾದ ಘಮವಿರುವ ಕುಕ್ಕೀಸನ್ನೂ ಸವಿಯಬಹುದು!

Continue Reading
Advertisement
Latest11 hours ago

ಮಹಿಳಾ ಮೀಸಲಾತಿಗೆ ಬೆಂಬಲ; ಡಿಲಿಮಿಟೇಷನ್‌ ಗೆ ವಿರೋಧ:ಸಿಎಂ ಸಿದ್ದರಾಮಯ್ಯ ಸಷ್ಟನೆ

Latest11 hours ago

ಕುಮಾರಸ್ವಾಮಿಗೆ ಬೆಂಗಳೂರಿನ ಬಗ್ಗೆ ಅರಿವಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್‌

Latest11 hours ago

ಪ್ರಧಾನಿ ಮೋದಿ ಅವರನ್ನು ಭಯೋತ್ಪಾದಕ ಎಂದು ಟೀಕಿಸಿದ ಖರ್ಗೆ; ಕ್ಷಮೆ ಯಾಚನೆಗೆ ಯಡಿಯೂರಪ್ಪ ಆಗ್ರಹ

Latest11 hours ago

ಇಡಿ ದಾಳಿ: ನಳಪಾಡ್‌ ಫಸ್ಟ್‌ ರಿಯಾಕ್ಷನ್‌ ಏನಿತ್ತು? ಅವರು ಕೊಟ್ಟ ಸ್ಪಷ್ಟನೆ ಏನು?

Latest11 hours ago

ದಲಿತರಿಗೆ ಒಳ ಮೀಸಲಾತಿ: ಏ.24ರಂದು ವಿಶೇಷ ಸಂಪುಟ ಸಭೆ

Latest11 hours ago

“ಗ್ರೇಟರ್ ಇಸ್ರೇಲ್” ಸಾಕಾರಕ್ಕೆ ನೆತನ್ಯಾಹು ಬಿಗ್‌ ಪ್ಲಾನ್:‌ ಮಧ್ಯ ಪ್ರಾಚ್ಯದಲ್ಲಿ ಶಾಂತಿಗಿಲ್ಲ ನೆಲೆ

Latest12 hours ago

ಜೆಡಿಎಸ್‌ ಗೆ ಮರಳುತ್ತೀರಾ?; ಸಚಿವ ಜಮೀರ್‌ ಅಹಮದ್‌ ಕೊಟ್ಟ ಉತ್ತರ ಏನು?

Latest12 hours ago

ಬೇಸಿಗೆಯಲ್ಲೂ ಸಣ್ಣ ನೀರಾವರಿ ಕೆರೆಗಳಲ್ಲಿ ಸಮೃದ್ದ ನೀರು ಸಂಗ್ರಹ: ಸಚಿವ ಎನ್‌ ಎಸ್‌ ಭೋಸರಾಜು

Latest12 hours ago

ಗುಜರಾತ್‌ ನಲ್ಲಿ ಬೃಹತ್‌ ಸೈಬರ್‌ ವಂಚನೆ ಜಾಲ ಪತ್ತೆ: 2,500 ಕೋಟಿ ಹಣ ವಂಚನೆ

Latest13 hours ago

ಮಹಿಳಾ ಮೀಸಲಾತಿ ವಿರೋಧಿಸಿದ ಕಾಂಗ್ರೆಸ್‌ ವಿರುದ್ಧ ಸಿಎಂ ಯೋಗಿ ಆದಿತ್ಯನಾಥ ಆಕ್ರೋಶ

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ2 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌