70 Hours Work Debate: 5 ದಿನಗಳ ವೀಕ್‌ ಸತ್ತಿದೆ: ನಾರಾಯಣ ಮೂರ್ತಿ ಪರ ಹರ್ಷ ಗೋಯೆಂಕಾ ಬ್ಯಾಟಿಂಗ್‌ - Vistara News

ದೇಶ

70 Hours Work Debate: 5 ದಿನಗಳ ವೀಕ್‌ ಸತ್ತಿದೆ: ನಾರಾಯಣ ಮೂರ್ತಿ ಪರ ಹರ್ಷ ಗೋಯೆಂಕಾ ಬ್ಯಾಟಿಂಗ್‌

ʼʼಇನ್ನು ಮುಂದೆ 50 ಅಥವಾ 70 ಗಂಟೆಗಳ ಕೆಲಸವೆಂದಿರುವುದಿಲ್ಲ. ಅದು ನಿಮ್ಮ ಮಹತ್ವಾಕಾಂಕ್ಷೆ, ನಿಮ್ಮ ಉದ್ದೇಶ ಮತ್ತು ಉತ್ಪಾದಕತೆಯನ್ನು ಅವಲಂಬಿಸಿರುತ್ತದೆʼʼ ಎಂದು ಹರ್ಷ ಗೋಯೆಂಕಾ (Harsh Goenka)
ಹೇಳಿದ್ದಾರೆ.

VISTARANEWS.COM


on

narayana murthy harsha goenka
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೊಸದಿಲ್ಲಿ: ಐದು ದಿನಗಳ ಕಚೇರಿ ಕೆಲಸದ (5 days office week) ಕಾಲ ಸತ್ತಿದೆ, ಹೈಬ್ರಿಡ್‌ ಕೆಲಸದ ಸಂಸ್ಕೃತಿ (Hybrid work culture) ಭವಿಷ್ಯದಲ್ಲಿದೆ ಎಂದು ಆರ್‌ಪಿಜಿ ಎಂಟರ್‌ಪ್ರೈಸಸ್‌ನ ಅಧ್ಯಕ್ಷ ಹರ್ಷ್ ಗೋಯೆಂಕಾ (Harsh Goenka) ಹೇಳಿದ್ದಾರೆ. ಇನ್ಫೋಸಿಸ್‌ನ (Infosys) ಸಹ-ಸಂಸ್ಥಾಪಕ ನಾರಾಯಣ ಮೂರ್ತಿ (Narayana Murthy) ಅವರು ನೀಡಿದ “ವಾರಕ್ಕೆ 70 ಗಂಟೆಗಳ ಕೆಲಸʼದ ಹೇಳಿಕೆಯ (70 Hours Work Debate) ಪರವಾಗಿ ಅವರು ನಿಂತಿದ್ದಾರೆ.

ನಾರಾಯಣ ಮೂರ್ತಿ ಅವರು, ದೇಶದ ಅಭಿವೃದ್ಧಿಗೆ ಸಹಾಯ ಮಾಡಲು ಭಾರತದಲ್ಲಿ ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಸಲಹೆ ನೀಡಿದ್ದರು. ಇದು ಔದ್ಯಮಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಹಲವಾರು ಉದ್ಯಮಿಗಳು ಮತ್ತು ನಾಗರಿಕರು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ʼʼಭಾರತದ ಕೆಲಸದ ಉತ್ಪಾದಕತೆ ವಿಶ್ವದಲ್ಲೇ ಅತ್ಯಂತ ಕಡಿಮೆ. ಅದು ಸುಧಾರಿಸದ ಹೊರತು ದೇಶವು ಇತರ ರಾಷ್ಟ್ರಗಳೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲʼʼ ಎಂದು ಮೂರ್ತಿ ಹೇಳಿದ್ದರು.

ಮೂರ್ತಿ ಅವರ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಸರಿಸಾಟಿಯಾಗಲು ಭಾರತವು ಹೆಚ್ಚು ಶ್ರಮಿಸುವುದು ಅಗತ್ಯ ಎಂದು ಕೆಲವರು ಅವರ ಅಭಿಪ್ರಾಯವನ್ನು ಬೆಂಬಲಿಸಿದ್ದಾರೆ. ಇತರರು ಈ ಹೇಳಿಕೆಯನ್ನು ಟೀಕಿಸಿದ್ದಾರೆ. ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ನಿರೀಕ್ಷಿಸುವುದು ಶೋಷಣೆ ಮತ್ತು ಅವಾಸ್ತವಿಕ ಎಂದಿದ್ದಾರೆ.

ಆರ್‌ಪಿಜಿ ಎಂಟರ್‌ಪ್ರೈಸಸ್‌ನ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ಈ ಚರ್ಚೆಯ ಕುರಿತು ತಮ್ಮ ಅಭಿಪ್ರಾಯವನ್ನು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ. “5 ದಿನಗಳ ಕಚೇರಿ ಕೆಲಸದ ವಾರವು ಸತ್ತುಹೋಗಿದೆ! ಜನರು ತಮ್ಮ ಕಚೇರಿ ಸಮಯದ ಸುಮಾರು 33%ರಷ್ಟು ದೂರದಿಂದಲೇ ಕೆಲಸ ಮಾಡುತ್ತಿದ್ದಾರೆ. ಇವರು ವಸ್ತುಸ್ಥಿತಿಯನ್ನು ಬದಲಾಯಿಸುವವರು. ಈ ನಮ್ಯತೆಯು ಕೆಲಸಕ್ಕೆ 8% ಹೆಚ್ಚಳದ ಮೌಲ್ಯವನ್ನು ನೀಡಿದೆ. ದೈನಂದಿನ ಪ್ರಯಾಣದ ಸಮಯ ಉಳಿತಾಯ ಮತ್ತು ಫ್ಲೆಕ್ಸಿಬಿಲಿಟಿಯನ್ನು ನಾವು ಹೆಚ್ಚು ಗೌರವಿಸುತ್ತೇವೆ!ʼʼ ಎಂದಿದ್ದಾರೆ.

“ಹೈಬ್ರಿಡ್ ಕೆಲಸವು ಪ್ರಸ್ತುತ ಮತ್ತು ಭವಿಷ್ಯ. ಇದು ನಿಮ್ಮ ಅಗತ್ಯಗಳಿಗೆ ಸರಿಹೊಂದುವಂತೆ ಕಚೇರಿ ಮತ್ತು ರಿಮೋಟ್ ಕೆಲಸವನ್ನು ಮಿಶ್ರಣ ಮಾಡುವುದು. ಇನ್ನು ಮುಂದೆ 50 ಅಥವಾ 70 ಗಂಟೆಗಳ ಕೆಲಸವೆಂದಿರುವುದಿಲ್ಲ. ಅದು ನಿಮ್ಮ ಸ್ವಂತ ಮಹತ್ವಾಕಾಂಕ್ಷೆ, ನಿಮ್ಮ ಉದ್ದೇಶ ಮತ್ತು ನಿಮ್ಮ ಉತ್ಪಾದಕತೆಯನ್ನು ಅವಲಂಬಿಸಿರುತ್ತದೆ. ಬದಲಾವಣೆಯನ್ನು ಸ್ವೀಕರಿಸಿ. ಹೊಸ ಕೆಲಸದ ಸ್ಥಿತಿಗತಿಗೆ ಹೊಂದಿಕೊಳ್ಳಿ. ಕಚೇರಿ ಮತ್ತು ಮನೆಯ ನಡುವೆ ನಿಮಗೆ ಹಿತವಾದ ತಾಣವನ್ನು ಕಂಡುಕೊಳ್ಳಿ. ನಿಮ್ಮ ವೃತ್ತಿಜೀವನದಲ್ಲಿ ನಿಜವಾಗಿಯೂ ಮುಖ್ಯವಾದುದಕ್ಕೆ ಆದ್ಯತೆ ನೀಡುವ ಸಮಯ ಇದು” ಎಂದಿದ್ದಾರೆ.

ಅನೇಕ ನೆಟಿಜನ್‌ಗಳು ಅವರ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ. ಕೆಲವರು ಗೋಯೆಂಕಾ ಅವರ ಅಭಿಪ್ರಾಯವನ್ನು ಒಪ್ಪಿದ್ದಾರೆ. “ಹಿಂದಿನ ಸಾಂಪ್ರದಾಯಿಕ ಉದ್ಯೋಗ ನಿರ್ವಹಣೆಯಲ್ಲಿ, ಪ್ರತಿಯೊಬ್ಬರೂ ವಾರಕ್ಕೆ 45 ಗಂಟೆ ಕಾಲ ಕಚೇರಿಯಲ್ಲಿ ಇರಬೇಕೆಂದು ನಿರೀಕ್ಷಿಸುವುದರಲ್ಲಿ ಈಗ ಯಾವುದೇ ಅರ್ಥವಿಲ್ಲ. ನಾವು ಇದನ್ನು ಕೋವಿಡ್ ಸಮಯದಲ್ಲಿ ನೋಡಿದ್ದೇವೆʼʼ ಎಂದಿದ್ದಾರೆ ಒಬ್ಬರು. ಮತ್ತೊಬ್ಬ X ಬಳಕೆದಾರ, “ಇಲಾನ್ ಮಸ್ಕ್ 5 ಕಂಪನಿಗಳಲ್ಲಿ ಮೂನ್‌ಲೈಟ್ ಮಾಡಲು ಸಾಧ್ಯವಾದರೆ, ಸಾಮಾನ್ಯ ಉದ್ಯೋಗಿಗಳಿಗೂ ಮೂನ್‌ಲೈಟಿಂಗ್‌ಗೆ ಅವಕಾಶ ನೀಡಬೇಕು” ಎಂದಿದ್ದಾರೆ.

“ರಿಮೋಟ್ ಕೆಲಸ ಪ್ರಾರಂಭವಾದಾಗಿನಿಂದ ಉತ್ಪಾದಕತೆಯು ಮತ್ತೊಂದು ಹಂತಕ್ಕೆ ಹೋಗಿದೆ. ಕಂಪನಿಗಳು ಇದನ್ನು ವಿನ್-‌ ವಿನ್‌ ವಿಧಾನವೆಂದು ಗುರುತಿಸಬೇಕು. ಹೈಬ್ರಿಡ್ ಕೆಲಸ ಮತ್ತು ಉತ್ತಮ ಫಲಿತಾಂಶ ಕಂಡುಬರುವಲ್ಲಿ ಉದ್ಯೋಗಿಗಳಿಗೆ ಅದನ್ನು ಮುಂದುವರಿಸಲು ಬಿಡಬೇಕುʼʼ ಎಂಬುದು ಇನ್ನೊಂದು ಅಭಿಪ್ರಾಯ.

ಏತನ್ಮಧ್ಯೆ, ಟೆಕ್ ಮಹೀಂದ್ರಾ ಎಂಡಿ ಮತ್ತು ಸಿಇಒ ಸಿಪಿ ಗುರ್ನಾನಿ ಅವರು, ಮೂರ್ತಿ ಹೇಳಿದ 70 ಗಂಟೆಗಳ ಕೆಲಸ ಪೂರ್ತಿಯಾಗಿ ಕಂಪನಿಗಲ್ಲ ಎಂದಿದ್ದಾರೆ. “ನಾರಾಯಣ ಮೂರ್ತಿ ಕೆಲಸದ ಸಮಯದ ಬಗ್ಗೆ ಮಾತನಾಡುವಾಗ, ಅದು ಕಂಪನಿಗೆ ಸೀಮಿತವಾಗಿಲ್ಲ. ಅದು ನಿಮಗೆ ಮತ್ತು ನಿಮ್ಮ ದೇಶಕ್ಕೂ ವಿಸ್ತರಿಸುತ್ತದೆ ಎಂದು ನಾನು ನಂಬುತ್ತೇನೆ. ಅವರು ಕಂಪನಿಗೆ 70 ಗಂಟೆಗಳ ಕೆಲಸ ಎಂದು ಹೇಳಿಲ್ಲ. ಕಂಪನಿಗಾಗಿ 40 ಗಂಟೆ ಕೆಲಸ ಮಾಡಿ. ನಿಮಗಾಗಿ 30 ಗಂಟೆ ಕೆಲಸ ಮಾಡಿ. ಒಂದು ವಿಷಯದಲ್ಲಿ ನಿಮ್ಮನ್ನು ಪರಿಣತರನ್ನಾಗಿ ಮಾಡುವ 10,000 ಗಂಟೆಗಳನ್ನು ಹೂಡಿಕೆ ಮಾಡಿ” ಎಂದು ಗುರ್ನಾನಿ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Asaduddin Owaisi: ಜೈ ಪ್ಯಾಲೆಸ್ತೀನ್ ಘೋಷಣೆ ಕೂಗಿದ್ದ ಓವೈಸಿ ಮನೆ ಮೇಲೆ ದುಷ್ಕರ್ಮಿಗಳಿಂದ ದಾಳಿ

Asaduddin Owaisi: ಘಟನೆ ಬಗ್ಗೆ ಸ್ವತಃ ಓವೈಸಿ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದು, ಕೆಲವು ದುಷ್ಕರ್ಮಿಗಳು ನನ್ನ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಅದೂ ಅಲ್ಲದೇ ಮನೆಯ ಗೋಡೆಗಳಿಗೆ ಕಪ್ಪು ಮಸಿ ಬಳಿದಿದ್ದಾರೆ. ಒಬ್ಬ ಸಂಸದನಿಗೇ ರಕ್ಷಣೆ ಇಲ್ಲದಿದ್ದರೆ ಸಾಮಾನ್ಯ ಜನರ ಪರಿಸ್ಥಿತಿ ಹೇಗೆ? ಘಟನೆ ಬಗ್ಗೆ ದಿಲ್ಲಿ ಪೊಲೀಸರನ್ನು ಕೇಳಿದರೆ ಅವರು ಅಸಾಯಕರಂತೆ ನಿಲ್ಲುತ್ತಿದ್ದಾರೆ. ಅಮಿತ್‌ ಶಾ ಅವರೇ ನಿಮ್ಮ ಮೂಗಿನ ಕೆಳಗೇ ಹೀಗೆಲ್ಲಾ ನಡೆಯುತ್ತಿದೆ ಸ್ಪೀಕರ್‌ ಓಂ ಬಿರ್ಲಾ ಅವರೇ ಸಂಸದನಿಗೆ ರಕ್ಷಣೆ ಇದೆಯೋ ಇಲ್ಲವೋ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

VISTARANEWS.COM


on

Asaduddin Owaisi
Koo

ನವದೆಹಲಿ: 18ನೇ ಲೋಕಸಭೆಯ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ “ಜೈ ಪ್ಯಾಲೆಸ್ತೀನ್​’ ಎಂದು ಘೋಷಣೆ ಕೂಗಿದ್ದ ಎಐಎಂಐಎಂ(AIMIM) ಅಧ್ಯಕ್ಷ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ (Asaduddin Owaisi) ಅವರ ದಿಲ್ಲಿಯಲ್ಲಿರುವ ನಿವಾಸದ ಮೇಲೆ ತಡರಾತ್ರಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಈ ಕುರಿತು(AIMIM) ಎಕ್ಸ್‌ನಲ್ಲಿ ಈ ವಿಡಿಯೋವನ್ನು ಶೇರ್‌ ಮಾಡಿದೆ.

ಇನ್ನು ಘಟನೆ ಬಗ್ಗೆ ಸ್ವತಃ ಓವೈಸಿ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದು, ಕೆಲವು ದುಷ್ಕರ್ಮಿಗಳು ನನ್ನ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಅದೂ ಅಲ್ಲದೇ ಮನೆಯ ಗೋಡೆಗಳಿಗೆ ಕಪ್ಪು ಮಸಿ ಬಳಿದಿದ್ದಾರೆ. ಒಬ್ಬ ಸಂಸದನಿಗೇ ರಕ್ಷಣೆ ಇಲ್ಲದಿದ್ದರೆ ಸಾಮಾನ್ಯ ಜನರ ಪರಿಸ್ಥಿತಿ ಹೇಗೆ? ಘಟನೆ ಬಗ್ಗೆ ದಿಲ್ಲಿ ಪೊಲೀಸರನ್ನು ಕೇಳಿದರೆ ಅವರು ಅಸಾಯಕರಂತೆ ನಿಲ್ಲುತ್ತಿದ್ದಾರೆ. ಅಮಿತ್‌ ಶಾ ಅವರೇ ನಿಮ್ಮ ಮೂಗಿನ ಕೆಳಗೇ ಹೀಗೆಲ್ಲಾ ನಡೆಯುತ್ತಿದೆ ಸ್ಪೀಕರ್‌ ಓಂ ಬಿರ್ಲಾ ಅವರೇ ಸಂಸದನಿಗೆ ರಕ್ಷಣೆ ಇದೆಯೋ ಇಲ್ಲವೋ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

ಸಾವರ್ಕರ್‌ ಮಾದರಿಯ ಹೇಡಿತನ ನಿಲ್ಲಿಸಿ

ಈ ‘ಸಾವರ್ಕರ್ ಮಾದರಿಯ ಹೇಡಿತನದ ವರ್ತನೆ’ ನಾನು ಹೆದರುವುದಿಲ್ಲ ಎಂದೂ ಓವೈಸಿ ಹೇಳಿದ್ದಾರೆ. “ನನ್ನ ಮನೆಯನ್ನು ಗುರಿಯಾಗಿಸುವ ಗೂಂಡಾಗಳ ಬಗ್ಗೆ ಹೆದರಿಕೆಯಿಲ್ಲ. ಈ ಸಾವರ್ಕರ್ ಮಾದರಿಯ ಹೇಡಿತನದ ನಡವಳಿಕೆಯನ್ನು ನಿಲ್ಲಿಸಿ. ಸ್ವಲ್ಪ ಮಸಿ ಎಸೆದ ನಂತರ ಅಥವಾ ಕೆಲವು ಕಲ್ಲುಗಳನ್ನು ಹೊಡೆದು ನಂತರ ಓಡಿ ಹೋಗುವಂತಹ ಹೇಡಿತನ ಬೇಡ ಎಂದು ಅವರು ಹೇಳಿದರು. ಸೇರಿಸಲಾಗಿದೆ.

ಇನ್ನು ಘಟನೆಗೆ ಸಂಬಂಧಿಸಿದಂತೆ ದಿಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಿಡಿಗೇಡಿಗಳು ಓವೈಸಿ ನಿವಾಸದ ಎದುರು ಅಳವಡಿಸಿದ್ದ ನೇಮ್‌ಪ್ಲೇಟ್‌ ಮೇಲೆ ಕಪ್ಪು ಮಸಿ ಬಳಿದು ಓದಿ ಹೋಗಿದ್ದಾರೆ. ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅಸಾದುದ್ದೀನ್ ಓವೈಸಿ ಪ್ರಮಾಣ ವಚನ ಸ್ವೀಕರಿಸಲು ತೆರಳುತ್ತಿದ್ದಂತೆ ಬಿಜೆಪಿ ಸಂಸದರು ಜೈ ಶ್ರೀರಾಮ್ ಘೋಷಣೆ ಕೂಗಲು ಆರಂಭಿಸಿದ್ದರು. ಉರ್ದುವಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಓವೈಸಿ, ‘ಜೈ ಭೀಮ್, ಜೈ ಮೀಮ್, ಜೈ ತೆಲಂಗಾಣ, ಜೈ ಪ್ಯಾಲೆಸ್ತೀನ್​’ ಎಂದು ಘೋಷಣೆ ಕೂಗುವ ಮೂಲಕ ಮುಕ್ತಾಯಗೊಳಿಸಿದರು. 2019 ರಲ್ಲಿ, ಓವೈಸಿ ತಮ್ಮ ಪ್ರಮಾಣವಚನವನ್ನು “ಜೈ ಭೀಮ್, ಅಲ್ಲಾ-ಒ-ಅಕ್ಬರ್ ಮತ್ತು ಜೈ ಹಿಂದ್” ಎಂಬ ಪದಗಳೊಂದಿಗೆ ಮುಕ್ತಾಯಗೊಳಿಸಿದ್ದರು. 2024 ರ ಲೋಕಸಭಾ ಚುನಾವಣೆಯಲ್ಲಿ ಓವೈಸಿ ಹೈದರಾಬಾದ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಹಿಂದೂ ಫೈರ್ ಬ್ರಾಂಡ್​ ಮಾಧವಿ ಲತಾ ವಿರುದ್ಧ ಗೆಲುವು ಸಾಧಿಸಿದ್ದರು.

ಇದನ್ನೂ ಓದಿ:Abhyas Trial: ದೇಶದ ಕ್ಷಿಪಣಿ ವ್ಯವಸ್ಥೆಗೆ ಬಲ ತುಂಬುವ ‘ಅಭ್ಯಾಸ್’‌ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿ

Continue Reading

ಪ್ರಮುಖ ಸುದ್ದಿ

CM Siddaramaiah: ವಿನಾಕಾರಣ ಕೇಂದ್ರವನ್ನು ದೂರಬೇಡಿ: ರಾಜ್ಯ ಸಂಸದರ ಸಭೆಯಲ್ಲಿ ಸಿಎಂಗೆ ಎನ್‌ಡಿಎ ಪಾಠ

CM Siddaramaiah: ನಿನ್ನೆ ಹೊಸದಿಲ್ಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌ ನೇತೃತ್ವದಲ್ಲಿ ರಾಜ್ಯದಿಂದ ನೂತನವಾಗಿ ಆಯ್ಕೆಯಾದ ಲೋಕಸಭೆ ಹಾಗೂ ರಾಜ್ಯಸಭೆ ಸಂಸದರ ಸಭೆ ನಡೆಸಲಾಯಿತು.

VISTARANEWS.COM


on

mp meet cm siddaramaiah
Koo

ಹೊಸದಿಲ್ಲಿ: ʼಕೇಂದ್ರ ಸರ್ಕಾರ (Central Govt) ರಾಜ್ಯಕ್ಕೆ ಏನೂ ಮಾಡಿಲ್ಲ, ಬಿಜೆಪಿ (BJP) ನಮಗೆ ಸಹಾಯ ಮಾಡ್ತಿಲ್ಲ, ರಾಜ್ಯದ ಬಗ್ಗೆ ನಮ್ಮ ರಾಜ್ಯದ ಬಿಜೆಪಿ ಸಂಸದರಿಗೇ ಕಾಳಜಿ ಇಲ್ಲ ಅನ್ನುವ ಮಾತುಗಳನ್ನು ಪದೇ ಪದೆ ಆಡುವುದನ್ನು ಬಿಡಿʼ ಎಂದು ಎನ್‌ಡಿಎ (NDA) ಸಂಸದರು ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಪಾಠ ಹೇಳಿದ್ದಾರೆ.

ನಿನ್ನೆ ಹೊಸದಿಲ್ಲಿಯಲ್ಲಿ ಸಿಎಂ ನೇತೃತ್ವದಲ್ಲಿ ನಡೆದ, ರಾಜ್ಯದ ನೂತನ ಸಂಸದರ ಸಭೆಯಲ್ಲಿ ಈ ಕುರಿತು ಮಾತುಗಳು ವಿನಿಮಯಗೊಂಡವು. ರಾಜ್ಯದ ಅಭಿವೃದ್ಧಿಗೆ ನಾವು ಬದ್ದರಿದ್ದೇವೆ. ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ನಾವು ಸಹ ಸಹಕಾರ ನೀಡ್ತೇವೆ. ಹಾಗಂತ ಎಲ್ಲಾ ವಿಚಾರಗಳಿಗೂ ಸಹ ಕೇಂದ್ರ ಸರ್ಕಾರದ ತಪ್ಪು ಎನ್ನುವುದು ಸರಿ ಅಲ್ಲ. ಒಂದು ಯೋಜನೆ ಯಶಸ್ವಿಯಾಗಿ ಜಾರಿ ಆಗ್ಬೇಕು ಅಂದ್ರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಇಬ್ಬರೂ ಸಹಕರಿಸಬೇಕು. ನೀವು ಏನೂ ಮಾಡದೆ, ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಎಷ್ಟರ ಮಟ್ಟಿಗೆ ಸರಿ? ಎಂದು NDA ಸಂಸದರು ಕಾಂಗ್ರೆಸ್‌ಗೆ ಚಾಟಿ ಬೀಸಿದರು.

ರೈಲ್ವೆ ಯೋಜನೆ ಬಾಕಿ ಇದೆ, ರಾಷ್ಟ್ರೀಯ ಹೆದ್ದಾರಿಗಳು ಆಗಿಲ್ಲ ಅಂತ ಹೇಳುವ ಮೊದಲು ಅದಕ್ಕೆ ಬೇಕಾದ ಸಹಕಾರ ರಾಜ್ಯ ಸರ್ಕಾರ ಎಷ್ಟರ ಮಟ್ಟಿಗೆ ನೀಡಿದೆ ಎಂಬುದನ್ನು ಹೇಳಿ. ಸುಖಾ ಸುಮ್ಮನೆ ಕೇಂದ್ರ ಸರ್ಕಾರದ ಮೇಲೆ ಇಲ್ಲಾ ಸಲ್ಲದ ಆರೋಪ ಮಾಡಬೇಡಿ. ಬದಲಾಗಿ, ರಾಜ್ಯಕ್ಕೆ ಬೇಕಾದ ಅನುದಾನದ ಬಗ್ಗೆ ಫಾಲೋ ಅಪ್ ಮಾಡುವ ಕೆಲಸ ಮಾಡಿ. ನಾವು ನಿಮ್ಮೊಂದಿಗೇ ಇದ್ದೇವೆ, ರಾಜ್ಯದ ಹಿತಾಸಕ್ತಿಗೇ ಕೆಲಸ ಮಾಡುತ್ತೇವೆ ಎಂದು ಬಿಜೆಪಿ ಸಂಸದರು ಹಾಗೂ ಸಚಿವರು ಹೇಳಿದ್ದಾರೆ.

ಯಾವುದೇ ಬಾಕಿ ಉಳಿಸಿಲ್ಲ: ನಿರ್ಮಲಾ

ಕೇಂದ್ರ ಸರಕಾರ ಬಾಕಿ ಹಣ ನೀಡಿಲ್ಲ ಎಂಬ ಸಿಎಂ ಆರೋಪಕ್ಕೆ ಸಿಎಂ ನೇತೃತ್ವದ ಸಭೆಯಲ್ಲೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ವಿವರಣೆ ನೀಡಿದರು. ಕೇಂದ್ರ ಸರ್ಕಾರ ನಮಗೆ ಅನ್ಯಾಯ ಮಾಡಿದೆ, ನಮ್ಮ ಹಣ ನಮಗೆ ನೀಡಿಲ್ಲ, GST ದುಡ್ಡು ನಮಗೆ ಸೇರಿಲ್ಲ ಅಂತ ಎಲ್ಲರೂ ಹೇಳಿದ್ದೀರಿ. ಬರ ಪರಿಹಾರದ ಹಣ ನೀಡಿಲ್ಲ ಅಂತ ಮಾಧ್ಯಮದ ಮುಂದೆ ದಿನಂಪ್ರತಿ ಹೇಳಿದ್ದೀರಿ. ಆದರೆ ನಾವು ಯಾವುದೇ ಹಣ ಬಾಕಿ ಉಳಿಸಿಲ್ಲ. ರಾಜ್ಯಕ್ಕೆ ಪೂರಕವಾಗಿ ಹಣ ಬಿಡುಗಡೆ ಮಾಡಿದ್ದೇವೆ ಎಂದು ನಿರ್ಮಲಾ ಹೇಳಿದರು.

ಬರ ಪರಿಹಾರ ಅಂತ 18 ಸಾವಿರ ಕೋಟಿ ಕೇಳಿದಾಗಲೂ ಸಹ ನಾವು ಅಗತ್ಯ ಹಣ ಬಿಡುಗಡೆ ಮಾಡಿದ್ದೇವೆ. GST ಹಣ ಸಹಿತ ನಾವು ನೀಡಿದ್ದೇವೆ. ನಿಮಗೆ ಪಕ್ಕಾ ಅಂಕಿ ಅಂಶ ಬೇಕಾದರೆ, ನಮ್ಮ ಜೊತೆ ಚರ್ಚೆಗೆ ಬನ್ನಿ. ಎಲ್ಲಾ ಅಂಕಿ ಅಂಶ ಸಮೇತ ನಾನು ನೀಡಬಲ್ಲೆ. ಅನವಶ್ಯಕವಾಗಿ ಕೇಂದ್ರದ ಮೇಲೆ ವಾಗ್ದಾಳಿ ಮಾಡಬೇಡಿ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ರಾಜ್ಯದ ಸಹಕಾರವೇ ಪ್ರಮುಖ: ಜೋಶಿ

ಕೇಂದ್ರ ಸರ್ಕಾರದಿಂದ ನಮಗೆ ಬರಬೇಕಾದದ್ದು ಬಹಳಷ್ಟಿದೆ ಅಂತ ಯಾವಾಗಲೂ ಹೇಳೋದು ಸರಿಯಲ್ಲ. ರೈಲ್ವೆ ಯೋಜನೆ ಬಾಕಿ ಇದೆ ಅಂತ ಆರೋಪ ಮಾಡೋದು ಒಳ್ಳೇದಲ್ಲ. ಅದಕ್ಕೆ ಬೇಕಾದ ಸೌಕರ್ಯ ಒದಗಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ. ಈ ವರ್ಷದ ಬಜೆಟ್‌ನಲ್ಲಿ 7524 ಕೋಟಿ ರೂ.ಗಳನ್ನ ರಾಜ್ಯದ ರೈಲ್ವೆ ಅಭಿವೃದ್ಧಿಗೆ ಮೀಸಲು ಇಡಲಾಗಿದೆ. ಹುಬ್ಬಳ್ಳಿ -ಅಂಕೋಲಾ , ತುಮಕೂರು – ಚಿತ್ರದುರ್ಗ, ಧಾರವಾಡ- ಬೆಳಗಾವಿ ಸೇರಿದಂತೆ ಹಲವು ಯೋಜನೆ ಬಾಕಿ ಇದೆ. ಈ ಯೋಜನೆಗಳು ಬಾಕಿ ಉಳಿಯುವುದಕ್ಕೆ ಕೇವಲ ಕೇಂದ್ರ ಸರ್ಕಾರ ಮಾತ್ರ ಕಾರಣ ಅಲ್ಲ ಎಂದು ಸಂಸದ ಪ್ರಹ್ಲಾದ್‌ ಜೋಶಿ (Prahlad Joshi) ಗುಡುಗಿದರು.

ರೈಲ್ವೆ ಯೋಜನೆಯಲ್ಲಿ ರಾಜ್ಯ ಸರ್ಕಾರದ ಪಾತ್ರ ಸಹ ಪ್ರಮುಖವಾಗಿರಲಿದೆ. ರಾಜ್ಯ ಸರ್ಕಾರ ಫಾರೆಸ್ಟ್ ಕ್ಲಿಯರೆನ್ಸ್, ಲ್ಯಾಂಡ್ ಅಕ್ವಿಸಿಶನ್ ನೀಡಿದ್ರೆ ಮಾತ್ರ ಇವೆಲ್ಲಾ ಸಾಧ್ಯ. ಆದ್ರೆ ರಾಜ್ಯ ಸರ್ಕಾರ ಈ ಬಗ್ಗೆ ಪ್ರಸ್ತಾಪ ಮಾಡುವುದೇ ಇಲ್ಲ. ರೈಲ್ವೆ ಯೋಜನೆ ಬಂದಿಲ್ಲ, ಹೈವೇ ಆಗಿಲ್ಲ ಅಂತ ಹೇಳುವ ಕೆಲಸ ಮಾಡ್ತಿದೆ. ಈ ಎಲ್ಲಾ ಯೋಜನೆ ಸಂಪೂರ್ಣವಾಗಿ ರಾಜ್ಯಕ್ಕೆ ದೊರೆಯಬೇಕು ಅಂದ್ರೆ ನಿಮ್ಮ ಸಹಕಾರ ಸಹ ಅಗತ್ಯ. ನೀವು ನಮ್ಮೊಂದಿಗೆ ಕೆಲಸ ಮಾಡಿದರೆ, ಖಂಡಿತವಾಗಿಯೂ ರಾಜ್ಯದ ಹಿತಾಸಕ್ತಿ ನಾವು ಕಾಪಾಡಬಹುದು ಎಂದು ಪ್ರಹ್ಲಾದ್ ಜೋಶಿ ನುಡಿದಿದ್ದಾರೆ.

ಇದನ್ನೂ ಓದಿ: Kempegowda Jayanti: ಕೆಂಪೇಗೌಡರು ಯಾವುದೇ ಜಾತಿಗೆ ಸೀಮಿತರಾದವರಲ್ಲ; ಸಿದ್ದರಾಮಯ್ಯ

Continue Reading

ಶಿಕ್ಷಣ

Top 5 Engineering Courses: ಇವು ಬಹು ಬೇಡಿಕೆಯ ಟಾಪ್ 5 ಎಂಜಿನಿಯರಿಂಗ್ ಕೋರ್ಸ್‌ಗಳು

ಜೆಇಇ ಮತ್ತು ಸಿಇಟಿ ಪರೀಕ್ಷೆ ತೇರ್ಗಡೆಯಾದ ಬಳಿಕ ಮುಂದೇನು ಎನ್ನುವ ಗೊಂದಲ ಕಾಡುವುದು ಸಹಜ. ಕೆಲವೊಂದು ಎಂಜಿನಿಯರಿಂಗ್ ಕೋರ್ಸ್ ಗಳು ನಿರಂತರ ಬೇಡಿಕೆಯಲ್ಲಿದ್ದು, ಹೆಚ್ಚಿನ ಉದ್ಯೋಗಾವಕಾಶಗಳನ್ನೂ ಹೊಂದಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಉತ್ತಮ ವಿಷಯಗಳನ್ನು ಸರಿಯಾದ ಸಮಯದಲ್ಲಿ ಆಯ್ಕೆ ಮಾಡುವುದು ಬಹು ಮುಖ್ಯವಾಗಿದೆ. ಸಾಕಷ್ಟು ಎಂಜಿನಿಯರಿಂಗ್ ಕೋರ್ಸ್ ಗಳು ಲಭ್ಯವಿದ್ದರೂ ಭಾರತದಲ್ಲಿ ಬಹುಕಾಲದಿಂದ ಹೆಚ್ಚು ಬೇಡಿಕೆಯಲ್ಲಿರುವ ಐದು ಎಂಜಿನಿಯರಿಂಗ್ ಕೋರ್ಸ್ ಗಳ (Top 5 Engineering Courses) ಕುರಿತು ಮಾಹಿತಿ ಇಲ್ಲಿದೆ.

VISTARANEWS.COM


on

By

Top 5 Engineering Courses
Koo

ಸಿಇಟಿ ಕೌನ್ಸೆಲಿಂಗ್‌ ಇನ್ನು ಕೆಲವೇ ದಿನಗಳಲ್ಲಿ ಶುರುವಾಗಲಿದೆ. ವಿದ್ಯಾರ್ಥಿಗಳು ಯಾವ ಎಂಜಿನಿಯರಿಂಗ್‌ ಕೋರ್ಸ್‌ಗೆ ಪ್ರವೇಶ ಪಡೆಯಬೇಕು ಎಂಬ ಯೋಚನೆಯಲ್ಲಿ ತೊಡಗಿದ್ದಾರೆ. ಭಾರತದಲ್ಲಿ (india) ಬಹು ಬೇಡಿಕೆಯಲ್ಲಿರುವ ಅಗ್ರ ಐದು ಎಂಜಿನಿಯರಿಂಗ್ ಕೋರ್ಸ್‌ಗಳು (Top 5 Engineering Courses) ಮತ್ತು ಉದ್ಯೋಗಾವಕಾಶಗಳ ಕುರಿತು ಮಾಹಿತಿ ಇಲ್ಲಿದೆ.

ಕಂಪ್ಯೂಟರ್ ವಿಜ್ಞಾನ / ಮಾಹಿತಿ ತಂತ್ರಜ್ಞಾನ

ಕಂಪ್ಯೂಟರ್ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಎಂಜಿನಿಯರಿಂಗ್ ಭಾರತದಲ್ಲಿ ಅತ್ಯಂತ ಜನಪ್ರಿಯ ಎಂಜಿನಿಯರಿಂಗ್ ಕೋರ್ಸ್ ಆಗಿದೆ. ಕಳೆದ ದಶಕದಲ್ಲಿ ಐಟಿ ಕ್ರಾಂತಿಯ ಆಗಮನದೊಂದಿಗೆ ಸಾಫ್ಟ್‌ವೇರ್ ಇಂಜಿನಿಯರ್‌ಗಳು ಮತ್ತು ಕಂಪ್ಯೂಟರ್ ಎಂಜಿನಿಯರ್‌ಗಳ ಬೇಡಿಕೆಯು ಭಾರತದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಏರಿಕೆಯಾಗಿದೆ.


ಕಂಪ್ಯೂಟರ್ ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬಿ.ಟೆಕ್ ನಂತಹ ಪದವಿ ಮಟ್ಟದ ಎಂಜಿನಿಯರಿಂಗ್ ಪ್ರೋಗ್ರಾಂ ಎಂಜಿನಿಯರ್‌ಗಳು ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಸಂಶೋಧನೆ, ಅಭಿವೃದ್ಧಿ ಮತ್ತು ಉತ್ಪಾದನಾ ಪ್ರಕ್ರಿಯೆಯನ್ನು ನಿರ್ವಹಿಸಲು ಅಗತ್ಯವಾದ ತಾಂತ್ರಿಕ ಕೌಶಲಗಳನ್ನು ಪಡೆಯಬಹುದು. ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿ.ಟೆಕ್ ಅಥವಾ ಐಟಿಯಲ್ಲಿ ಬಿ.ಟೆಕ್ ಲೀನಿಯರ್ ಸರ್ಕ್ಯೂಟ್ರಿ, ಡೇಟಾ ಸ್ಟ್ರಕ್ಚರ್‌ಗಳು ಮತ್ತು ಡಿಜಿಟಲ್ ಸಿಸ್ಟಮ್‌ಗಳಂತಹ ವೈವಿಧ್ಯಮಯ ವಿಷಯಗಳ ಜೊತೆಗೆ ಇಂಟರ್ನೆಟ್ ತಂತ್ರಜ್ಞಾನ ಮತ್ತು ಸಂಬಂಧಿತ ಕ್ಷೇತ್ರಗಳು, ಡಿಜಿಟಲ್ ಪ್ರೋಗ್ರಾಂ ವಿನ್ಯಾಸಗಳ ಮೇಲೆ ಕಲಿಯಬಹುದು.

ಕಂಪ್ಯೂಟರ್ ಎಂಜಿನಿಯರಿಂಗ್ ಮತ್ತು ಸಾಫ್ಟ್‌ವೇರ್ ಎಂಜಿನಿಯರ್‌ಗಳಿಗೆ ಉದ್ಯೋಗಗಳ ಕೊರತೆಯಿಲ್ಲ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕ್ಯಾಂಪಸ್ ಪ್ಲೇಸ್ ಡ್ರೈವ್‌ಗಳಿಂದ ಐಬಿಎಂ, ಟಿಸಿಎಸ್, ವಿಪ್ರೋ, ಮೈಕ್ರೋಸಾಫ್ಟ್ ಮತ್ತು ಗೂಗಲ್ ನಂತಹ ಉನ್ನತ ತಂತ್ರಜ್ಞಾನದ ಮೇಜರ್‌ಗಳಿಂದ ವಿದ್ಯಾರ್ಥಿಗಳನ್ನು ನೇರವಾಗಿ ನೇಮಿಸಿಕೊಳ್ಳಲಾಗುತ್ತದೆ. ಇವರಿಗೆ ಆರಂಭದಲ್ಲೇ 4.5 ಲಕ್ಷ ರೂ.ನಿಂದ 6 ಲಕ್ಷ ರೂ.ಗಳವರೆಗೆ ವೇತನವನ್ನು ನಿರೀಕ್ಷಿಸಬಹುದು.


ಎಲೆಕ್ಟ್ರಿಕಲ್ / ಎಲೆಕ್ಟ್ರಾನಿಕ್ / ಕಮ್ಯುನಿಕೇಷನ್ ಎಂಜಿನಿಯರಿಂಗ್

ಎಲೆಕ್ಟ್ರಾನಿಕ್ / ಎಲೆಕ್ಟ್ರಿಕಲ್/ಕಮ್ಯುನಿಕೇಷನ್ ಎಂಜಿನಿಯರಿಂಗ್ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಕ್ಷೇತ್ರವಾಗಿದೆ. ಉತ್ಪಾದನೆ, ಆರೋಗ್ಯ ರಕ್ಷಣೆ, ಯಾಂತ್ರೀಕೃತಗೊಂಡ ನಿರ್ವಹಣಾ ವ್ಯವಸ್ಥೆ, ವಿದ್ಯುತ್ ಉತ್ಪಾದನೆ ಮತ್ತು ವಿತರಣೆಯಂತಹ ವಿವಿಧ ಕೈಗಾರಿಕಾ ಉಪವಿಭಾಗಗಳಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಗಳಿಗೆ ಹೆಚ್ಚಿನ ಬೇಡಿಕೆ ಇದೆ.

ಭೌತಶಾಸ್ತ್ರ ಮತ್ತು ಲೆಕ್ಕದಲ್ಲಿ ತೀವ್ರ ಆಸಕ್ತಿ ಮತ್ತು ಅರ್ಹತೆ ಹೊಂದಿರುವ ವಿದ್ಯಾರ್ಥಿಗಳು ಈ ಕ್ಷೇತ್ರವನ್ನು ಆರಿಸಿಕೊಳ್ಳಬಹುದು. ಈ ಕ್ಷೇತ್ರವು ಎಲೆಕ್ಟ್ರಾನಿಕ್ ಸಂವೇದಕಗಳು, ಸೆಮಿಕಂಡಕ್ಟರ್‌ಗಳು, ರೋಬೋಟಿಕ್ಸ್‌ನ ರೇಖೀಯ ವ್ಯವಸ್ಥೆಗಳು, ವಿದ್ಯುತ್ಕಾಂತೀಯ ಮತ್ತು ಸರ್ಕ್ಯೂಟ್ರಿಯನ್ನು ಒಳಗೊಂಡಿದೆ. ಇದರ ಹೊರತಾಗಿ ಎಲೆಕ್ಟ್ರಾನಿಕ್ ಸಂವಹನದ ಹೊಸ ಕ್ಷೇತ್ರವು ದೂರಸಂಪರ್ಕ ಉದ್ಯಮ ಮತ್ತು ಮೊಬೈಲ್ ಅಭಿವೃದ್ಧಿ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತಿದೆ.
ಎಲೆಕ್ಟ್ರಾನಿಕ್ ಕಮ್ಯುನಿಕೇಷನ್ಸ್‌ನಲ್ಲಿ ಪದವಿಪೂರ್ವ ಬಿಟೆಕ್ ಪ್ರೋಗ್ರಾಂ ಅನ್ನು ಆರಿಸಿದರೆ ಕಮ್ಯುನಿಕೇಷನ್‌ ಎಂಜಿನಿಯರಿಂಗ್, ವಿನ್ಯಾಸ, ಸಂಕೇತ ಮತ್ತು ವ್ಯವಸ್ಥೆಗಳ ಅಭಿವೃದ್ಧಿ, ಡಿಜಿಟಲ್ ಎಲೆಕ್ಟ್ರಾನಿಕ್ಸ್, ಇಂಟಿಗ್ರೇಟೆಡ್ ಸರ್ಕ್ಯೂಟ್‌ಗಳು ಮತ್ತು ವಿಎಲ್‌ಎಸ್‌ಐಗಳ ಮೇಲೆ ಅಧ್ಯಯನವನ್ನು ಕೇಂದ್ರೀಕರಿಸುತ್ತದೆ.

ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಬಹಳ ಕ್ರಿಯಾತ್ಮಕ ಕ್ಷೇತ್ರವಾಗಿದ್ದು ಹಲವಾರು ಕೈಗಾರಿಕೆಗಳು ಮತ್ತು ವ್ಯಾಪಾರ ಪ್ರಕ್ರಿಯೆಗಳಲ್ಲಿ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಲ್ಲಿರುವ ದೂರಸಂಪರ್ಕಗಳಂತಹ ನವೀನ ಸಬ್‌-ಡೊಮೇನ್‌ಗಳ ಆಗಮನವು ವೃತ್ತಿಜೀವನವನ್ನು ನಿರ್ಮಿಸಲು ಅತ್ಯಂತ ಲಾಭದಾಯಕ ಎಂಜಿನಿಯರಿಂಗ್ ಶಾಖೆಗಳಲ್ಲಿ ಇದು ಒಂದಾಗಿದೆ.

ಎಲೆಕ್ಟ್ರಿಕಲ್ ಎಂಜಿನಿಯರ್‌ಗಳಿಗೆ ಉನ್ನತ ನೇಮಕಾತಿಗಳಲ್ಲಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL)ನಂತಹ ಸಾರ್ವಜನಿಕ ವಲಯ ಘಟಕಗಳು ಸೇರಿವೆ. ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ECIL), ಖಾಸಗಿ ಗ್ರಾಹಕ ಎಲೆಕ್ಟ್ರಾನಿಕ್ಸ್ ದೈತ್ಯಗಳಾದ ಇಂಟೆಲ್, ಸೋನಿ, ತೊಷಿಬಾ, ಫಿಲಿಪ್ಸ್, ನೋಕಿಯಾ, ಎಲ್ ಜಿ, ಸ್ಯಾಮ್ ಸಂಗ್ ನಲ್ಲಿ ಸಾಕಷ್ಟು ಉದ್ಯೋಗಾವಕಾಶವನ್ನು ಒದಗಿಸುತ್ತದೆ. ಹೊಸಬರು ವರ್ಷಕ್ಕೆ 4ರಿಂದ 6 ಲಕ್ಷ ರೂ.ವರೆಗೆ ವೇತನವನ್ನು ನಿರೀಕ್ಷಿಸಬಹುದು.


ಮೆಕ್ಯಾನಿಕಲ್ ಎಂಜಿನಿಯರಿಂಗ್

ಮೆಕ್ಯಾನಿಕಲ್ ಎಂಜಿನಿಯರಿಂಗ್ ಅತ್ಯಂತ ಹಳೆಯ ಮತ್ತು ಇಂದಿಗೂ ಬಹು ಬೇಡಿಕೆಯಲ್ಲಿರುವ ಕೋರ್ಸ್. ಮೆಕ್ಯಾನಿಕಲ್ ಎಂಜಿನಿಯರ್ ಗಳು ಎಲ್ಲಾ ಪ್ರಮುಖ ಕೈಗಾರಿಕಾ ಪ್ರಕ್ರಿಯೆಗಳಿಗೂ ಅಗತ್ಯವಾಗಿರುತ್ತಾರೆ.

ಮೆಕ್ಯಾನಿಕಲ್ ಎಂಜಿನಿಯರಿಂಗ್ ವಸ್ತುಗಳ ಯಂತ್ರಶಾಸ್ತ್ರದ ಅಧ್ಯಯನವನ್ನು ಒಳಗೊಂಡಿರುತ್ತದೆ. ಅದು ವಿನ್ಯಾಸ, ನಿರ್ಮಾಣ, ವಾಸ್ತುಶಿಲ್ಪ, ತಂತ್ರಜ್ಞಾನ, ಯಾಂತ್ರೀಕೃತಗೊಂಡ ಮತ್ತು ಇತರ ಹಲವು ಪರಿಕಲ್ಪನೆಗಳ ವಿಷಯದ ಮೇಲೆ ಅಧ್ಯಯನವನ್ನು ಕೇಂದ್ರೀಕರಿಸುತ್ತದೆ. ಮೆಕ್ಯಾನಿಕಲ್ ಎಂಜಿನಿಯರ್‌ಗಳು ಯಂತ್ರಶಾಸ್ತ್ರದ ಮೂಲಕ ಚಲಿಸುವ ಯಾವುದನ್ನಾದರೂ ಮತ್ತು ಎಲ್ಲವನ್ನೂ ವಿನ್ಯಾಸಗೊಳಿಸಲು, ಅಭಿವೃದ್ಧಿಪಡಿಸಲು, ನಿರ್ಮಿಸಲು ಮತ್ತು ನಿರ್ವಹಿಸಲು ಸಾಧ್ಯವಾಗುವಂತೆ ತರಬೇತಿ ಪಡೆಯುತ್ತಾರೆ. ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರದ ಸಂಕೀರ್ಣ ಸಂಯೋಜನೆಯನ್ನು ನಿಭಾಯಿಸಲು ತೀವ್ರ ಆಸಕ್ತಿ ಮತ್ತು ಸಾಮರ್ಥ್ಯವನ್ನು ಹೊಂದಿರುವ ವಿದ್ಯಾರ್ಥಿಗಳು ಈ ವಿಷಯವನ್ನು ಆಯ್ಕೆ ಮಾಡಿಕೊಳ್ಳಬಹುದು.

ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಥರ್ಮೋಡೈನಾಮಿಕ್ಸ್, ಫ್ಲೂಯಿಡ್ ಮೆಕ್ಯಾನಿಕ್ಸ್, ಚಲನೆ ಮತ್ತು ಆವೇಗ, ರೊಬೊಟಿಕ್ಸ್, ಕಂಪ್ಯೂಟರ್ ಅಪ್ಲಿಕೇಶನ್‌ಗಳು, ದಹನ ಎಂಜಿನ್ ವಿನ್ಯಾಸ, ವಸ್ತು ಸೂಕ್ಷ್ಮ-ನಿರ್ಮಾಣ, ಕಂಪ್ಯೂಟರ್ ಸಿಸ್ಟಮ್ ವಿನ್ಯಾಸ, ಬಯೋಮೆಕಾನಿಕ್ಸ್ ಮತ್ತು ಇತರವುಗಳಂತಹ ವಿವಿಧ ಉಪ-ವಿಷಯಗಳನ್ನು ಇದು ಕಲಿಯಲು ಅವಕಾಶ ಕಲ್ಪಿಸುತ್ತದೆ.

ಮೆಕ್ಯಾನಿಕಲ್ ಎಂಜಿನಿಯರ್ ಆಗಿ ಉದ್ಯೋಗವನ್ನು ಹುಡುಕುವುದು ಕಠಿಣ ಕೆಲಸವಲ್ಲ. ಏಕೆಂದರೆ ವಿಷಯವು ಬಹುತೇಕ ಎಲ್ಲಾ ಪ್ರಮುಖ ಉತ್ಪಾದನೆ ಮತ್ತು ಸೇವಾ ಕ್ಷೇತ್ರಗಳಲ್ಲಿ ಅವಕಾಶವನ್ನು ಹೊಂದಿದೆ. ಭಾರತದಲ್ಲಿ ಮಹೀಂದ್ರ, ಜನರಲ್ ಮೋಟಾರ್ಸ್, ಫಿಯೆಟ್, ಅಶೋಕ ಲೇಲ್ಯಾಂಡ್ ಮತ್ತು ಟಾಟಾ ಮೋಟಾರ್ಸ್, ಎಬಿಬಿ, ಇಸ್ರೋ, ಡಿಆರ್ ಡಿಒ , ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ರಿಲಯನ್ಸ್ ಪವರ್ ಲಿಮಿಟೆಡ್ ಸೇರಿದಂತೆ ಇನ್ನೂ ಹಲವಾರು ಸುಪ್ರಸಿದ್ದ ಕಂಪನಿಗಳಲ್ಲಿ ಹೆಚ್ಚಿನ ಅವಕಾಶವನ್ನು ಹೊಂದಿದೆ. ಮೆಕ್ಯಾನಿಕಲ್ ಎಂಜಿನಿಯರ್‌ಗಳು 1.3 ರಿಂದ 3.5 ಲಕ್ಷ ರೂ.ವರೆಗೆ ವೇತನವನ್ನು ನಿರೀಕ್ಷಿಸಬಹುದು.


ಸಿವಿಲ್ ಎಂಜಿನಿಯರಿಂಗ್

ಸಿವಿಲ್ ಎಂಜಿನಿಯರಿಂಗ್ ಕೂಡ ಹಳೆಯ ಎಂಜಿನಿಯರಿಂಗ್ ವಿಭಾಗವಾಗಿದೆ. ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಕಲಿಯುವ ಸಾಕಷ್ಟು ವಿಷಯಗಳಿವೆ. ಸಿವಿಲ್ ಎಂಜಿನಿಯರಿಂಗ್ ಅತ್ಯಂತ ವೈವಿಧ್ಯಮಯ ಎಂಜಿನಿಯರಿಂಗ್ ಶಾಖೆಗಳಲ್ಲಿ ಒಂದಾಗಿದೆ. ಸಿವಿಲ್ ಎಂಜಿನಿಯರಿಂಗ್ ರಚನೆ ವಿನ್ಯಾಸ, ರಚನಾತ್ಮಕ ಯಂತ್ರಶಾಸ್ತ್ರ, ದ್ರವ ಯಂತ್ರಶಾಸ್ತ್ರ, ಮಣ್ಣಿನ ಯಂತ್ರಶಾಸ್ತ್ರ, ವಾಟರ್ ರಿಸೋರ್ಸ್ ಎಂಜಿನಿಯರಿಂಗ್ ಮತ್ತು ಹೈಡ್ರಾಲಿಕ್ಸ್‌ನಂತಹ ವಿವಿಧ ಪರಿಕಲ್ಪನೆಗಳು ಮತ್ತು ವಿಷಯಗಳನ್ನು ಒಳಗೊಂಡಿದೆ.

ಭಾರತದಲ್ಲಿ ಸಿವಿಲ್ ಎಂಜಿನಿಯರ್‌ಗಳಿಗೆ ಉದ್ಯೋಗವಕಾಶ ಸಾಕಷ್ಟಿದೆ. ವಸತಿ ಸೌಕರ್ಯಗಳಿಗೆ ಹೆಚ್ಚುತ್ತಿರುವ ಬೇಡಿಕೆ ಮತ್ತು ಆಧುನಿಕ ಮೂಲಸೌಕರ್ಯ ಯೋಜನೆಗಳಿಗೆ ಸರ್ಕಾರದ ಉತ್ತೇಜನದೊಂದಿಗೆ ಸಿವಿಲ್ ಎಂಜಿನಿಯರ್‌ಗಳಿಗೆ ಲಭ್ಯವಿರುವ ಉದ್ಯೋಗಾವಕಾಶಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ಭಾರತೀಯ ರೈಲ್ವೇ, ಲೋಕೋಪಯೋಗಿ ಇಲಾಖೆ, ಎಂಜಿನಿಯರ್ಸ್ ಇಂಡಿಯಾ ಲಿಮಿಟೆಡ್, ಡಿಆರ್ ಒಡಿ ಮತ್ತು ಇಸ್ರೋ ನಂತಹ ಸಾರ್ವಜನಿಕ ವಲಯದಲ್ಲಿ ಖಾಸಗಿ ವಲಯದ ಘಟಕಗಳಾದ ಲಾರ್ಸೆನ್ ಮತ್ತು ಟೂಬ್ರೊ, ಡಿಎಲ್‌ಎಫ್ ನಲ್ಲಿ ಹೆಚ್ಚಿನ ಬೇಡಿಕೆ ಇದೆ. ಸಿವಿಲ್ ಎಂಜಿನಿಯರಿಂಗ್ ಪದವೀಧರರು ಪ್ರಾರಂಭದಲ್ಲಿ ತಿಂಗಳಿಗೆ 20,000ರಿಂದ 30,000 ರೂ. ವರೆಗೆ ಸಂಬಳವನ್ನು ನಿರೀಕ್ಷಿಸಬಹುದು. ಭಾರತದಲ್ಲಿ ಈಗ ಅಭಿವೃದ್ಧಿ ಕಾಮಗಾರಿಗಳು ವೇಗವಾಗಿ ನಡೆಯುತ್ತಿರುವುದರಿಂದ ಸಿವಿಲ್‌ ಎಂಜಿನಿಯರ್‌ಗಳಿಗೆ ಭಾರಿ ಬೇಡಿಕೆ ಇದೆ. ಅನುಭವ ಗಳಿಸುತ್ತಿದ್ದಂತೆ ಮಾಸಿಕ ಲಕ್ಷಕ್ಕೂ ಹೆಚ್ಚಿನ ಸಂಬಳ ಪಡೆಯಬಹುದು.

ಇದನ್ನೂ ಓದಿ: ECE v/s CSE: ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಅಂಡ್‌ ಕಮ್ಯುನಿಕೇಷನ್; ಯಾವುದು ಉತ್ತಮ ಆಯ್ಕೆ?


ಕೆಮಿಕಲ್ ಎಂಜಿನಿಯರಿಂಗ್

ಕೆಮಿಕಲ್ ಎಂಜಿನಿಯರಿಂಗ್ ಭಾರತದಲ್ಲಿ ಬಹು ಬೇಡಿಕೆಯಲ್ಲಿರುವ ಅಗ್ರ 5 ಎಂಜಿನಿಯರಿಂಗ್ ಶಾಖೆಗಳಲ್ಲಿ ಒಂದಾಗಿದೆ. ಇದಕ್ಕೆ ಮುಖ್ಯ ಕಾರಣ ರಾಸಾಯನಿಕ, ಸಂಸ್ಕರಣೆ, ಆಹಾರ ಸಂಸ್ಕರಣೆ ಮತ್ತು ಔಷಧೀಯ ಕ್ಷೇತ್ರಗಳಂತಹ ಕೈಗಾರಿಕೆಗಳಲ್ಲಿ ರಾಸಾಯನಿಕ ಎಂಜಿನಿಯರ್‌ಗಳಿಗೆ ಬೇಡಿಕೆ ಹೆಚ್ಚಾಗಿರುವುದು.
ಕೆಮಿಕಲ್ ಎಂಜಿನಿಯರಿಂಗ್ ವಿಷಯದ ವ್ಯಾಪ್ತಿ ವಿಸ್ತಾರವಾಗಿದೆ. ಹಲವಾರು ವಲಯಗಳಲ್ಲಿ ಇದಕ್ಕೆ ಬೇಡಿಕೆ ಇದೆ. ರಾಸಾಯನಿಕ ಎಂಜಿನಿಯರಿಂಗ್‌ನಲ್ಲಿ ರಾಸಾಯನಿಕಗಳು, ಸಾವಯವ ಮತ್ತು ಅಜೈವಿಕ ರಸಾಯನಶಾಸ್ತ್ರ, ಪೆಟ್ರೋಲಿಯಂ ಯೋಜನೆಗಳು, ಔಷಧೀಯ ರಸಾಯನಶಾಸ್ತ್ರ, ರಾಸಾಯನಿಕ ಎಂಜಿನಿಯರಿಂಗ್ ಪ್ರಕ್ರಿಯೆ ಕುರಿತು ಅಧ್ಯಯನ ಮಾಡಬಹುದು.

ಅತ್ಯುತ್ತಮ ಉದ್ಯೋಗಾವಕಾಶಗಳನ್ನು ಹೊಂದಿರುವ ಕೆಮಿಕಲ್ ಎಂಜಿನಿಯರ್‌ ಪದವೀಧರರಿಗೆ ಒಎನ್‌ಜಿಸಿ, ಎಸ್ಸಾರ್ ಆಯಿಲ್ ಲಿಮಿಟೆಡ್, ಗುಜರಾತ್ ಗ್ಯಾಸ್ ಕಂಪೆನಿ ಲಿಮಿಟೆಡ್, ಇಂಡೋ ಗಲ್ಫ್ ಫರ್ಟಿಲೈಸರ್ಸ್ ಲಿಮಿಟೆಡ್, ರಿಲಯನ್ಸ್ ಇಂಡಸ್ಟ್ರೀಸ್, ಕೋರಮಂಡಲ್ ಫರ್ಟಿಲೈಸರ್ಸ್ ಲಿಮಿಟೆಡ್ ಮತ್ತು ಇತರ ಹಲವು ಕಂಪೆನಿಗಳಲ್ಲಿ ಉತ್ತಮ ಅವಕಾಶಗಳಿವೆ. ಕೆಮಿಕಲ್ ಎಂಜಿನಿಯರಿಂಗ್ ಪದವೀಧರರು ಪ್ರಾರಂಭದಲ್ಲಿ ತಿಂಗಳಿಗೆ 15,000 ರಿಂದ 25,000 ರೂ. ವೇತನವನ್ನು ನಿರೀಕ್ಷಿಸಬಹುದು. ಈ ಉದ್ಯಮ ವೇಗವಾಗಿ ಬೆಳೆಯುತ್ತಿರುವುದರಿಂದ ಸಾಕಷ್ಟು ಉತ್ತಮ ಸಂಬಳ ಪಡೆಯಬಹುದಾಗಿದೆ.

Continue Reading

ದೇಶ

Abhyas Trial: ದೇಶದ ಕ್ಷಿಪಣಿ ವ್ಯವಸ್ಥೆಗೆ ಬಲ ತುಂಬುವ ‘ಅಭ್ಯಾಸ್’‌ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿ

Abhyas Trial: ಒಡಿಶಾದ ಚಾಂದಿಪುರದಲ್ಲಿರುವ ಸಮಗ್ರ ಪರೀಕ್ಷಾ ವಲಯದಲ್ಲಿ (ITR) ಗುರುವಾರ (ಜೂನ್‌ 27) ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಯು ಸಂಸ್ಥೆಯು (DRDO) ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಅಭ್ಯಾಸ್‌ ಹೆಸರಿನ ಗುರಿಗಳನ್ನು ಡಿಆರ್‌ಡಿಒ ಅಭಿವೃದ್ಧಿಪಡಿಸಿದ್ದು, ಆರು ಗುರಿಗಳನ್ನು ಪರೀಕ್ಷೆ ಮಾಡಲಾಗಿದೆ. ಎಲ್ಲ ಪರೀಕ್ಷೆಗಳು ಕೂಡ ಯಶಸ್ವಿಯಾಗಿವೆ ಎಂಬುದಾಗಿ ಡಿಆರ್‌ಡಿಒ ತಿಳಿಸಿದೆ.

VISTARANEWS.COM


on

Abhyas Trial
Koo

ಭುವನೇಶ್ವರ: ಭಾರತದ ಕ್ಷಿಪಣಿ ವ್ಯವಸ್ಥೆಗೆ ಹೆಚ್ಚಿನ ಬಲವನ್ನು ತುಂಬುವ, ದೇಶದ ಸೇನೆಗೂ ಭಾರಿ ಪ್ರಮಾಣದಲ್ಲಿ ಸಹಕಾರಿಯಾಗುವ, ಯಾವುದೇ ತುರ್ತು ಸಂದರ್ಭದಲ್ಲಿ ಪ್ರತ್ಯುತ್ತರ ನೀಡುವಾಗ ನಿರ್ಣಾಯಕ ಪಾತ್ರ ನಿರ್ವಹಿಸುವ ಹೈ-ಸ್ಪೀಡ್‌ ಎಕ್ಸ್‌ಪೆಂಡೇಬಲ್‌ ಏರಿಯಲ್‌ ಟಾರ್ಗೆಟ್‌ (HEAT) ಆದ ‘ಅಭ್ಯಾಸ್’‌ ಪ್ರಯೋಗಾರ್ಥ ಪರೀಕ್ಷೆಯು (Abhyas Trial) ಯಶಸ್ವಿಯಾಗಿದೆ. ಒಡಿಶಾದ ಚಾಂದಿಪುರದಲ್ಲಿರುವ ಸಮಗ್ರ ಪರೀಕ್ಷಾ ವಲಯದಲ್ಲಿ (ITR) ಗುರುವಾರ (ಜೂನ್‌ 27) ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಯು ಸಂಸ್ಥೆಯು (DRDO) ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ.

ಅಭ್ಯಾಸ್‌ ಹೆಸರಿನ ಗುರಿಗಳನ್ನು ಡಿಆರ್‌ಡಿಒ ಅಭಿವೃದ್ಧಿಪಡಿಸಿದ್ದು, ಆರು ಗುರಿಗಳನ್ನು ಪರೀಕ್ಷೆ ಮಾಡಲಾಗಿದೆ. ಎಲ್ಲ ಪರೀಕ್ಷೆಗಳು ಕೂಡ ಯಶಸ್ವಿಯಾಗಿವೆ ಎಂಬುದಾಗಿ ಡಿಆರ್‌ಡಿಒ ತಿಳಿಸಿದೆ. ಅದರಲ್ಲೂ, ಕೇವಲ 30 ನಿಮಿಷಗಳಲ್ಲಿ ಸತತವಾಗಿ ಎರಡು ಗುರಿಗಳನ್ನು ಪರೀಕ್ಷೆ ಮಾಡಲಾಗಿದೆ. ಪ್ರಯೋಗದ ಸಮಯದಲ್ಲಿ ಬೂಸ್ಟರ್‌ನ ಸುರಕ್ಷಿತ ಬಿಡುಗಡೆ, ಲಾಂಚರ್‌ ಕ್ಲಿಯರೆನ್ಸ್‌ ಹಾಗೂ ಒತ್ತಡವನ್ನು ಸಹಿಸಿಕೊಳ್ಳುವ ಸಾಮರ್ಥ್ಯ ಇದೇ ಎಂಬುದನ್ನು ಡಿಆರ್‌ಡಿಒ ವಿಜ್ಞಾನಿಗಳು ಪರೀಕ್ಷೆ ವೇಳೆ ದೃಢಪಡಿಸಿಕೊಂಡರು.

ಕ್ಷಿಪಣಿಗಳಿಗೆ ಹೇಗೆ ಇವು ಸಹಕಾರಿ?

ಅಭ್ಯಾಸ್‌ ಗುರಿಗಳು ದೇಶದ ಕ್ಷಿಪಣಿ ವ್ಯವಸ್ಥೆಯನ್ನು ಬಲಪಡಿಸಲು, ಕ್ಷಿಪಣಿಗಳ ಸಾಮರ್ಥ್ಯವನ್ನು ಹೆಚ್ಚಿಸಲು ಸಹಕಾರಿಯಾಗಲಿವೆ. ಕ್ಷಿಪಣಿಗಳ ಪರೀಕ್ಷೆ ಹಾಗೂ ಅಭ್ಯಾಸಗಳ ವೇಳೆ ಗುರಿಗಳನ್ನು ಬಳಸಿ, ಅವುಗಳ ಸಮರ್ಥ ಕಾರ್ಯನಿರ್ವಹಣೆಯನ್ನು ಒರೆಗೆ ಹಚ್ಚುತ್ತವೆ. ಆಟೋ ಪೈಲಟ್‌ ಮೂಲಕ ಹಾರಾಡುವ, ಲ್ಯಾಪ್‌ ಆಧಾರಿತವಾಗಿ ಭೂಮಿಯಿಂದಲೇ ನಿಯಂತ್ರಣ ಮಾಡಬಹುದಾದ, ರೇಡಾರ್‌ ಗ್ರಹಿಕೆಗೆ ಸಿಗದಿರುವುದು ಸೇರಿ ಹಲವು ಅತ್ಯಾಧುನಿಕ ಸಾಮರ್ಥ್ಯವನ್ನು ಇವು ಹೊಂದಿವೆ.

ಡಿಆರ್‌ಡಿಒ ಯಶಸ್ವಿಯಾಗಿ ಪರೀಕ್ಷೆ ಮಾಡುತ್ತಲೇ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಅಭಿನಂದನೆ ಸಲ್ಲಿಸಿದರು. ಡಿಆರ್‌ಡಿಒ ವಿಜ್ಞಾನಿಗಳು, ಸಶಸ್ತ್ರ ಪಡೆಗಳ ಪ್ರಯತ್ನಕ್ಕೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಅಭ್ಯಾಸ್‌ ಗುರಿಗಳನ್ನು ದೇಶೀಯವಾಗಿಯೇ ಅಭಿವೃದ್ಧಿಪಡಿಸಲಾಗಿದೆ. ಬೆಂಗಳೂರಿನಲ್ಲಿರುವ ಡಿಆರ್‌ಡಿಒದ ಏರೋನಾಟಿಕಲ್‌ ಡೆವಲಪ್‌ಎಸ್ಟಾಬ್ಲಿಶ್‌ಮೆಂಟ್‌ ಇವುಗಳ ವಿನ್ಯಾಸ ಮಾಡಿದೆ. ಪ್ರೊಡಕ್ಷನ್‌ ಏಜೆನ್ಸೀಸ್‌-ಹಿಂದುಸ್ಥಾನ ಏರೋನಾಟಿಕ್ಸ್‌ ಲಿಮಿಟೆಡ್‌, ಲಾರ್ಸೆನ್‌ & ಟರ್ಬೊ ಇವುಗಳನ್ನು ಅಭಿವೃದ್ಧಿಪಡಿಸಿವೆ.

ಇದನ್ನೂ ಓದಿ: SMART Missile: ನೌಕೆಗಳನ್ನು ಧ್ವಂಸ ಮಾಡುವ ಸ್ಮಾರ್ಟ್‌ ಕ್ಷಿಪಣಿ ಪರೀಕ್ಷೆ ಯಶಸ್ವಿ; ರಕ್ಷಣಾ ಕ್ಷೇತ್ರಕ್ಕೆ ಆನೆ ಬಲ

Continue Reading
Advertisement
Kalki 2898 AD Nag Ashwin Torn Slippers Dedication Behind
South Cinema25 seconds ago

Kalki 2898 AD: ‘ಕಲ್ಕಿ 2898 ಎಡಿ’ಗೆ ವೀಕ್ಷಕರಿಂದ ಬಹುಪರಾಕ್ ; ಹರಿದ ಚಪ್ಪಲಿ ಫೋಟೊ ಹಂಚಿಕೊಂಡ ನಿರ್ದೇಶಕ !

Asaduddin Owaisi
ದೇಶ4 mins ago

Asaduddin Owaisi: ಜೈ ಪ್ಯಾಲೆಸ್ತೀನ್ ಘೋಷಣೆ ಕೂಗಿದ್ದ ಓವೈಸಿ ಮನೆ ಮೇಲೆ ದುಷ್ಕರ್ಮಿಗಳಿಂದ ದಾಳಿ

Kalki 2898 AD Box Office Day Prabhas Film Indian Opener Earns 180 Crore
ಟಾಲಿವುಡ್17 mins ago

Kalki 2898 AD: ಮೊದಲ ದಿನವೇ ಗಳಿಕೆಯಲ್ಲಿ ದಾಖಲೆ ಬರೆದ ‘ಕಲ್ಕಿ 2898 ಎಡಿ’ ಸಿನಿಮಾ; ಕಲೆಕ್ಷನ್‌ ಎಷ್ಟು?

mp meet cm siddaramaiah
ಪ್ರಮುಖ ಸುದ್ದಿ29 mins ago

CM Siddaramaiah: ವಿನಾಕಾರಣ ಕೇಂದ್ರವನ್ನು ದೂರಬೇಡಿ: ರಾಜ್ಯ ಸಂಸದರ ಸಭೆಯಲ್ಲಿ ಸಿಎಂಗೆ ಎನ್‌ಡಿಎ ಪಾಠ

Seeds For Weight Loss
ಆರೋಗ್ಯ34 mins ago

Seeds For Weight Loss: ತೂಕ ಇಳಿಸಿಕೊಳ್ಳಬೇಕೆ? ಈ 7 ಬೀಜಗಳನ್ನು ನಿಯಮಿತವಾಗಿ ಸೇವಿಸಿ

Top 5 Engineering Courses
ಶಿಕ್ಷಣ34 mins ago

Top 5 Engineering Courses: ಇವು ಬಹು ಬೇಡಿಕೆಯ ಟಾಪ್ 5 ಎಂಜಿನಿಯರಿಂಗ್ ಕೋರ್ಸ್‌ಗಳು

Vastu Tips
ಧಾರ್ಮಿಕ1 hour ago

Vastu Tips: ಈ ವಾಸ್ತು ನಿಯಮ ಪಾಲಿಸಿದರೆ ವ್ಯವಹಾರದಲ್ಲಿ ವೃದ್ಧಿ

haveri Accident
ಕರ್ನಾಟಕ1 hour ago

Haveri Accident: ಹಾವೇರಿಯಲ್ಲಿ ಭಯಾನಕ ಅಪಘಾತ: ಲಾರಿಗೆ ಟಿಟಿ ಡಿಕ್ಕಿ, 13 ಜನರ ಸಾವು

Weight Loss Tips
ಆರೋಗ್ಯ2 hours ago

Weight Loss Tips: ದಕ್ಷಿಣ ಭಾರತೀಯ ಶೈಲಿಯ ಬೆಳಗಿನ ತಿಂಡಿಯಲ್ಲೂ ನೀವು ತೂಕ ಇಳಿಸಬಹುದು!

Indian Origin Crow
ವಿದೇಶ2 hours ago

Indian Origin Crow: ಭಾರತೀಯ ಮೂಲದ 10 ಲಕ್ಷ ಕಾಗೆಗಳನ್ನು ಕೊಲ್ಲಲು ಕೀನ್ಯಾ ನಿರ್ಧರಿಸಿದ್ದೇಕೆ?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ13 hours ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ15 hours ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು17 hours ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ20 hours ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ4 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ7 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ7 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ1 week ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು2 weeks ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು2 weeks ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

ಟ್ರೆಂಡಿಂಗ್‌