Ayodhya Mosque: ಇತ್ತ ಭವ್ಯ ರಾಮ ಮಂದಿರ; ಅತ್ತ ಮಸೀದಿ ಜಾಗದಲ್ಲಿ ಏನಾಗ್ತಿದೆ? - Vistara News

ದೇಶ

Ayodhya Mosque: ಇತ್ತ ಭವ್ಯ ರಾಮ ಮಂದಿರ; ಅತ್ತ ಮಸೀದಿ ಜಾಗದಲ್ಲಿ ಏನಾಗ್ತಿದೆ?

ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು (ADA) ಮಸೀದಿ (Ayodhya Mosque) ನಿರ್ಮಾಣಕ್ಕಾಗಿ 5 ಎಕರೆ ಜಾಗವನ್ನು ಮಂಜೂರು ಮಾಡಿತ್ತು. ಇದೀಗ ಆ ಜಾಗ ಯಾವುದೇ ಕಟ್ಟಡಗಳಿಲ್ಲದೇ ಖಾಲಿ ಉಳಿದಿದ್ದು, ಅಲ್ಲಿ ಆಡುಗಳು, ದನಗಳು ಮೇಯುತ್ತಿವೆ!

VISTARANEWS.COM


on

ayodhya masjid
ಮಸೀದಿ ನಿರ್ಮಾಣಕ್ಕಾಗಿ ಒದಗಿಸಲಾದ ಜಾಗ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಅಯೋಧ್ಯೆ: ಒಂದು ಕಡೆ ದೇವಾಲಯ ನಗರಿ ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರದ (Ayodhya Ram Mandir) ಪ್ರಾಣ ಪ್ರತಿಷ್ಠಾಪನೆ ಆಗುತ್ತಿದ್ದು, ಇಡೀ ದೇಶದ ಗಮನ ಅತ್ತ ತಿರುಗಿದೆ. ಅದೇ ನಗರದ ಇನ್ನೊಂದು ಕಡೆ, ಇದೇ ಶ್ರೀರಾಮ ಜನ್ಮಭೂಮಿ ಪ್ರಕರಣ ಇತ್ಯರ್ಥದ ಸಂದರ್ಭದಲ್ಲಿ ಮಸೀದಿ (Ayodhya Masjid, Ayodhya Mosque) ನಿರ್ಮಾಣಕ್ಕಾಗಿ ನೀಡಲಾದ ಜಾಗದಲ್ಲಿ ಏನಾಗುತ್ತಿದೆ?

ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು (ADA) ಮಸೀದಿ ನಿರ್ಮಾಣಕ್ಕಾಗಿ 5 ಎಕರೆ ಜಾಗವನ್ನು ಮಂಜೂರು ಮಾಡಿತ್ತು. ಇದೀಗ ಆ ಜಾಗ ಯಾವುದೇ ಕಟ್ಟಡಗಳಿಲ್ಲದೇ ಖಾಲಿ ಉಳಿದಿದ್ದು, ಅಲ್ಲಿ ಆಡುಗಳು, ದನಗಳು ಮೇಯುತ್ತಿವೆ!

ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಪ್ರಕರಣ ಇತ್ಯರ್ಥದ ಸಂದರ್ಭದಲ್ಲಿ ಮಸೀದಿ ನಿರ್ಮಾಣಕ್ಕೆ ಪರ್ಯಾಯ ಸ್ಥಳವನ್ನು ಒದಗಿಸಲು ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಅದರಂತೆ 5 ಎಕರೆ ಪರ್ಯಾಯ ಜಾಗವನ್ನು ಒದಗಿಸಲಾಗಿದ್ದು, ಧನ್ನಿಪುರ ಮಸೀದಿ ನಿರ್ಮಾಣಕ್ಕೆ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ ಅನುಮೋದನೆ ನೀಡಿ ಒಂದು ವರ್ಷ ಕಳೆದಿದೆ. ಆದರೆ ಈ ಜಾಗ ಇನ್ನೂ ಅಭಿವೃದ್ಧಿಯಾಗದೆ ಉಳಿದಿದೆ.

ಈ ಮಸೀದಿ ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳಬೇಕಾಗಿರುವ ಇಂಡೋ-ಇಸ್ಲಾಮಿಕ್ ಕಲ್ಚರಲ್ ಫೌಂಡೇಶನ್ (IICF) ಸದಸ್ಯರ ಪ್ರಕಾರ, ಪ್ರಾರಂಭದಲ್ಲಿ ಜಾಗದ ನಿರಾಕ್ಷೇಪಣಾ ಪ್ರಮಾಣಪತ್ರ ವಿಳಂಬವಾಗಿತ್ತು. ನಂತರ ಇದೀಗ ಮಸೀದಿ ಕಟ್ಟಲು ಹಣಕಾಸಿನ ಕೊರತೆ ತಲೆದೋರಿದೆ. ಈ ಸ್ಥಳ ಅಯೋಧ್ಯೆಯ ಮುಖ್ಯ ನಗರದಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿದೆ. ಪ್ರಸ್ತುತ ಈ ಜಾಗದಲ್ಲಿ ಕೇವಲ ಸೈನ್‌ಬೋರ್ಡ್ ಮಾತ್ರ ಇದೆ.

ಧನ್ನಿಪುರ ಮಸೀದಿ ಸೈಟ್ ನಿರ್ಮಾಣಕ್ಕೆ ಅಗತ್ಯವಾದ ಅನುಮೋದನೆಗಳು ಮತ್ತು ಹಣಕ್ಕಾಗಿ ಐಐಸಿಎಫ್‌ ಕಾಯುತ್ತಿದೆ. 2024ರ ಮೇ ತಿಂಗಳಿನಲ್ಲಿ ಜಾಗ ಅಭಿವೃದ್ಧಿಯ ಮುಂದಿನ ಹಂತವನ್ನು ಆರಂಭಿಸಲು ಟ್ರಸ್ಟ್ ಯೋಜಿಸುತ್ತಿದೆ. ಈ ಮಸೀದಿ ಯೋಜನೆಗೆ ದೇಣಿಗೆ ಸಂಗ್ರಹಿಸಲು ರಾಜ್ಯವಾರು ಪ್ರತಿನಿಧಿಗಳನ್ನು ನೇಮಿಸಿದೆ.

“ಹಣದ ಕೊರತೆ ಹಾಗೂ ಆಡಳಿತಾತ್ಮಕ ವಿಳಂಬದಿಂದಾಗಿ ಧನ್ನಿಪುರದಲ್ಲಿ ಮಸೀದಿ ನಿರ್ಮಾಣ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಈಗ ಮಸೀದಿ ನಿರ್ಮಾಣಕ್ಕಾಗಿ ರಾಮಮಂದಿರದಂತಹ ಅಭಿಯಾನವನ್ನು ಆರಂಭಿಸುವುದಾಗಿ” ಐಐಸಿಎಫ್ ಹೇಳಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ನೇಮಕಗೊಂಡ ಮಸೀದಿ ಅಭಿವೃದ್ಧಿ ಸಮಿತಿಯ ನೂತನ ಮುಖ್ಯಸ್ಥ ಹಾಜಿ ಅರಾಫತ್ ಶೇಖ್ ಅವರು ಹೊಸ ಮಸೀದಿಯ ಅಭಿವೃದ್ಧಿಗೆ ಮುಂದಾಗಿದ್ದಾರೆ. ಶೇಖ್ ಅವರು ಮಹಾರಾಷ್ಟ್ರದ ಬಿಜೆಪಿ ನಾಯಕ. ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಕಾರ್ಯವನ್ನು ಮುಂದಕ್ಕೆ ಕೊಂಡೊಯ್ಯಲು ಟ್ರಸ್ಟ್ ರಚಿಸಲಾಗಿದೆ ಎಂದು ಐಐಸಿಎಫ್ ಅಧ್ಯಕ್ಷ ಜಾಫರ್ ಅಹ್ಮದ್ ಫಾರೂಕ್ ಹೇಳಿದ್ದಾರೆ. ಆದರೆ ಮಸೀದಿಗೆ ಮಸ್ಜಿದ್-ಎ-ಅಯೋಧ್ಯ ಎಂದು ಹೆಸರಿಸುವ ಪ್ರಸ್ತಾಪವನ್ನು ಶೇಖ್ ವಿರೋಧಿಸಿದ್ದಾರೆ. ಅದನ್ನು ಮೊಹಮ್ಮದ್ ಬಿನ್ ಅಬ್ದುಲ್ಲಾ ಮಸೀದಿ ಎಂದು ಬದಲಾಯಿಸಿದ್ದಾರೆ.

4,500 ಚದರ ಮೀಟರ್ ವಿಸ್ತೀರ್ಣದಲ್ಲಿ ರಚಿಸಲು ಉದ್ದೇಶಿಸಲಾಗಿರುವ ಮಸೀದಿಯೊಂದಿಗೆ ಆಸ್ಪತ್ರೆ, ಸಮುದಾಯ ಅಡುಗೆಮನೆ, ಗ್ರಂಥಾಲಯ ಮತ್ತು ಸಂಶೋಧನಾ ಕೇಂದ್ರ ಇರುತ್ತದಂತೆ. ಪ್ರತಿಷ್ಠಾನವು ಭಾರತದ ಅತಿದೊಡ್ಡ ಮಸೀದಿಯನ್ನು ನಿರ್ಮಿಸಲು ಉದ್ದೇಶಿಸಿದೆ. “ಇದು ತಾಜ್ ಮಹಲ್‌ಗಿಂತಲೂ ದೊಡ್ಡಗಿರುತ್ತದೆ” ಎಂದು ಅದು ಹೇಳಿದೆ.

ಇದರ ಜೊತೆಗೆ, “ಸುಮಾರು 21 ಅಡಿಗಳಷ್ಟು ಉದ್ದವಾಗಿರುವ ವಿಶ್ವದ ಅತಿದೊಡ್ಡ ಕುರಾನ್ ಅನ್ನು ಮಸೀದಿಯಲ್ಲಿ ಇರಿಸಲಾಗುವುದು” ಎಂದು ಶೇಖ್‌ ಹೇಳಿದ್ದಾರೆ. ಈ ಮಸೀದಿಯು ಐದು ಮಿನಾರ್‌ಗಳನ್ನು ಹೊಂದಿರುವ ಭಾರತದ ಮೊದಲ ಮಸೀದಿಯಾಗಿದೆ. ಆಜಾನ್ ಸಮಯದಲ್ಲಿ ನೀರು ಮತ್ತು ಬೆಳಕಿನ ಪ್ರದರ್ಶನವನ್ನು ಆಯೋಜಿಸಲು, ಭಾರಿ ದೀಪಾಲಂಕಾರವನ್ನು, ದುಬೈನಲ್ಲಿರುವಂಥ ಅಕ್ವೇರಿಯಂ ಅನ್ನು ರಚಿಸಲು ಕೂಡ ಇಲ್ಲಿ ಯೋಜಿಸಲಾಗುತ್ತಿದೆ.

ಇದನ್ನೂ ಓದಿ: Ayodhya Mosque: ಅಯೋಧ್ಯೆ ಮಸೀದಿಯ ವಿನ್ಯಾಸವೇ ದಿಢೀರ್‌ ಬದಲು; ಏನಿದಕ್ಕೆ ಕಾರಣ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Triple Talaq: ವಾಟ್ಸ್‌ಆ್ಯಪ್‌ ವಾಯ್ಸ್‌ ಮೆಸೇಜ್‌ನಲ್ಲಿ ತ್ರಿವಳಿ ತಲಾಕ್ ನೀಡಿದ ಪತಿ; ದೂರು ದಾಖಲು

Triple Talaq: ತೆಲಂಗಾಣದ ಭೂಪನೊಬ್ಬ ವಾಟ್ಸ್‌ಆ್ಯಪ್‌ನಲ್ಲಿ ತನ್ನ ಪತ್ನಿಗೆ ತ್ರಿವಳಿ ತಲಾಕ್‌ ನೀಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ತೆಲಂಗಾಣದ ಅದಿಲಾಬಾದ್ ಜಿಲ್ಲೆಯ ಕೆ.ಆರ್‌.ಕೆ. ಕಾಲೋನಿಯಲ್ಲಿ ಈ ಘಟನೆ ನಡೆದಿದೆ. 32 ವರ್ಷ ವಯಸ್ಸಿನ ಅಬ್ದುಲ್ ಅತೀಖ್ ಬಂಧಿತ ವ್ಯಕ್ತಿ. ಆತ ತನ್ನ ಪತ್ನಿಗೆ ವಾಟ್ಸ್‌ಆ್ಯಪ್‌ನಲ್ಲಿ ವಾಯ್ಸ್‌ ಮೆಸೇಜ್‌ ಮೂಲಕ ತ್ರಿವಳಿ ತಲಾಕ್‌ ನೀಡಿದ್ದ.

VISTARANEWS.COM


on

Triple Talaq
Koo

ಹೈದರಾಬಾದ್: ಮುಸ್ಲಿಂ ಹೆಣ್ಣು ಮಕ್ಕಳ ಜೀವನಕ್ಕೇ ಕುತ್ತು ತರುತ್ತಿದ್ದ ತ್ರಿವಳಿ ತಲಾಕ್ (Triple Talaq) ಎಂಬ ಅನಿಷ್ಟ ಪದ್ಧತಿಯನ್ನು ಕೇಂದ್ರ ಸರ್ಕಾರ ಈಗಾಗಲೇ ನಿಷೇಧಿಸಿದೆ. ಆದರೆ ಈ ಬಗ್ಗೆ ಇನ್ನೂ ಕೆಲವರಿಗೆ ಅರಿವು ಮೂಡಿದಂತಿಲ್ಲ. ಅಂತಹ ಘಟನೆ ಮತ್ತೆ ಮತ್ತೆ ಘಟಿಸುತ್ತಲೇ ಇದೆ. ಅದಕ್ಕೆ ತಾಜಾ ಉದಾಹರಣೆ ಇಲ್ಲಿದೆ. ತೆಲಂಗಾಣದ ಭೂಪನೊಬ್ಬ ವಾಟ್ಸ್‌ಆ್ಯಪ್‌ನಲ್ಲಿ ತನ್ನ ಪತ್ನಿಗೆ ತ್ರಿವಳಿ ತಲಾಕ್‌ ನೀಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ತೆಲಂಗಾಣದ ಅದಿಲಾಬಾದ್ ಜಿಲ್ಲೆಯ ಕೆ.ಆರ್‌.ಕೆ. ಕಾಲೋನಿಯಲ್ಲಿ ಈ ಘಟನೆ ನಡೆದಿದೆ. 32 ವರ್ಷ ವಯಸ್ಸಿನ ಅಬ್ದುಲ್ ಅತೀಖ್ ಬಂಧಿತ ವ್ಯಕ್ತಿ. ಆತ ತನ್ನ ಪತ್ನಿಗೆ ವಾಟ್ಸ್‌ಆ್ಯಪ್‌ನಲ್ಲಿ ವಾಯ್ಸ್‌ ಮೆಸೇಜ್‌ ಮೂಲಕ ತ್ರಿವಳಿ ತಲಾಕ್‌ ನೀಡಿದ್ದ.

ಘಟನೆಯ ವಿವರ

ಅದಿಲಾಬಾದ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜಿ. ಶ್ರೀನಿವಾಸ್ ಅವರು ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ʼʼಅಬ್ದುಲ್ ಅತೀಖ್ 2017ರಲ್ಲಿ ಜಾಸ್ಮಿನ್‌ (28) ಎಂಬಾಕೆಯೊಂದಿವೆ ವಿವಾಹವಾಗಿದ್ದ. ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಎರಡು ವರ್ಷಗಳ ಹಿಂದೆ ಇವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಲಾರಂಭಿಸಿತು. ಆಗಾಗ ಪತಿ-ಪತ್ನಿ ಕಿತ್ತಾಡಿಕೊಳ್ಳುತ್ತಿದ್ದರು. ಇದು ತಾರಕ್ಕೆ ಹೋಗಿ ಕಳೆದ ವರ್ಷ ಜಾಸ್ಮಿನ್‌ ತಮ್ಮ ಪತಿಯ ವಿರುದ್ಧ ಕಿರುಕುಳ ಪ್ರಕರಣ ದಾಖಲಿಸಿದ್ದರುʼʼ ಎಂದು ಹೇಳಿದ್ದಾರೆ.

ʼʼಬಳಿಕ ಕೇಸ್‌ ಕೋರ್ಟ್‌ ಮೆಟ್ಟಿಲೇರಿತ್ತು. ಕುಟುಂಬ ನಿರ್ವಹಣೆಗೆ ಹಣ ನೀಡಬೇಕೆಂದು ಜಾಸ್ಮಿನ್‌ ಕೋರ್ಟ್‌ನಲ್ಲಿ ವಾದಿಸಿದ್ದರು. ಅದರಂತೆ ಕೋರ್ಟ್‌ ಪ್ರತಿ ತಿಂಗಳು ಜಾಸ್ಮಿನ್‌ಗೆ 7,200 ರೂ. ಪಾವತಿಸುವಂತೆ ಅಬ್ದುಲ್ ಅತೀಖ್‌ಗೆ ಸೂಚಿಸಿತ್ತು. ಆದರೆ ಅತೀಖ್‌ ಕೋರ್ಟ್‌ ಸೂಚನೆಯನ್ನೂ ಧಿಕ್ಕರಿಸಿದ್ದ. ಹಣವನ್ನೇ ನೀಡುತ್ತಿರಲಿಲ್ಲʼʼ ಎಂದು ಶ್ರೀನಿವಾಸ್ ತಿಳಿಸಿದ್ದಾರೆ.

ಮತ್ತೊಮ್ಮೆ ಜಾಸ್ಮಿನ್‌ ನ್ಯಾಯಾಲಯದ ಮೊರೆ ಹೋಗಿದ್ದರು. ಈ ವೇಳೆ ಆತ ಜಾಸ್ಮಿನ್‌ಗೆ ವಾಟ್ಸ್‌ಆ್ಯಪ್‌ನಲ್ಲಿ ವಾಯ್ಸ್‌ ಮೆಸೇಜ್‌ ಕಳುಹಿಸಿ ತ್ರಿವಳಿ ತಲಾಕ್‌ ನೀಡಿದ್ದ. ಈ ಮೆಸೇಜ್ ಅನ್ನು ಜಾಸ್ಮೀನ್ ತಮ್ಮ ಕುಟುಂಬಸ್ಥರಿಗೆ ಶೇರ್ ಮಾಡಿದ್ದರು. ಅವರ ಸಲಹೆ ಮೇರೆಗೆ ಜಾಸ್ಮಿನ್ ಪೊಲೀಸರಿಗೆ ದೂರು ನೀಡಿದ್ದರು. ʼʼಈ ಹಿನ್ನೆಲೆಯಲ್ಲಿ ಅಬ್ದುಲ್ ಅತೀಖ್ ವಿರುದ್ಧ ದೂರು ದಾಖಲಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆʼʼ ಎಂದು ಶ್ರೀನಿವಾಸ್ ವಿವರಿಸಿದ್ದಾರೆ.

ಇದನ್ನೂ ಓದಿ: Triple Talaq: ಮದುವೆಯಾದ 2 ಗಂಟೆಯಲ್ಲೇ ಪತ್ನಿಗೆ ತ್ರಿವಳಿ ತಲಾಕ್ ನೀಡಿದ ದುರುಳ; ವರದಕ್ಷಿಣೆ ಆಸೆಗೆ ನೀಚ ಕೃತ್ಯ

ಚಲಿಸುವ ರೈಲಿನಲ್ಲೇ ಪತ್ನಿಗೆ ತ್ರಿವಳಿ ತಲಾಕ್‌

ಕೆಲವು ದಿನಗಳ ಹಿಂದೆಯಷ್ಟೇ ವ್ಯಕ್ತಿಯೊಬ್ಬ ಚಲಿಸುತ್ತಿರುವ ರೈಲಿನಲ್ಲಿಯೇ ತನ್ನ ಪತ್ನಿಗೆ ತ್ರಿವಳಿ ತಲಾಕ್‌ ನೀಡಿದ್ದ. 28 ವರ್ಷದ ಮೊಹಮ್ಮದ್‌ ಅರ್ಷದ್‌ ಹೀಗೆ ತ್ರಿವಳಿ ತಲಾಕ್‌ ನೀಡಿದ ಭೂಪ. ಮೊಹಮ್ಮದ್ ಅರ್ಷದ್ ತನ್ನ ಪತ್ನಿ ಅಫ್ಸಾನಾ (26) ಅವರೊಂದಿಗೆ ಪ್ರಯಾಣಿಸುತ್ತಿದ್ದಾಗ ಉತ್ತರ ಪ್ರದೇಶದ ಝಾನ್ಸಿ ಜಂಕ್ಷನ್‌ ಸಮೀಪ ಈ ಘಟನೆ ನಡೆದಿತ್ತು. ರೈಲು ಝಾನ್ಸಿ ನಿಲ್ದಾಣಕ್ಕೆ ಬರುತ್ತಿದ್ದಂತೆ ಅರ್ಷದ್ ತನ್ನ ಪತ್ನಿಗೆ ತ್ರಿವಳಿ ತಲಾಕ್‌ ನೀಡಿ ರೈಲಿನಿಂದ ಇಳಿದು ತಲೆ ಮರೆಸಿಕೊಂಡಿದ್ದ. ಬಳಿಕ ಅಫ್ಸಾನಾ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದರು.

2019ರ ಜುಲೈಯಲ್ಲಿ ಸಂಸತ್ತು ಅಂಗೀಕರಿಸಿದ ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆ) ಕಾಯ್ದೆ 2019ರ ಪ್ರಕಾರ, ಮುಸ್ಲಿಮರಲ್ಲಿ ಚಾಲ್ತಿಯಲ್ಲಿದ್ದ ‘ತ್ರಿವಳಿ ತಲಾಖ್’ ಮೂಲಕ ತ್ವರಿತ ವಿಚ್ಛೇದನದ ನೀಡುವ ಕ್ರಮವನ್ನು ಶಿಕ್ಷಾರ್ಹ ಅಪರಾಧವನ್ನಾಗಿ ಘೋಷಿಸಲಾಗಿದೆ.

Continue Reading

ದೇಶ

Lok Sabha Election 2024: 5ನೇ ಹಂತದ ಮತದಾನ; 49 ಕ್ಷೇತ್ರಗಳಲ್ಲಿ ವೋಟಿಂಗ್ ಶುರು

Lok Sabha Election 2024: ಉತ್ತರ ಪ್ರದೇಶದ 14, ಮಹಾರಾಷ್ಟ್ರದ 13, ಪಶ್ಚಿಮ ಬಂಗಾಳ 7, ಬಿಹಾರ ಹಾಗೂ ಒಡಿಶಾದಲ್ಲಿ ತಲಾ 5, ಜಾರ್ಖಂಡ್‌ನಲ್ಲಿ 3, ಜಮ್ಮು ಕಾಶ್ಮೀರ ಮತ್ತು ಲಡಾಕ್‌ನ ತಲಾ 1 ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ. ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌ (ಲಖನೌ), ಸ್ಮೃತಿ ಇರಾನಿ (ಅಮೇಥಿ), ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (ರಾಯ್‌ಬರೇಲಿ), ಜಮ್ಮು-ಕಾಶ್ಮೀರ ಮಾಜಿ ಸಿಎಂ ಒಮರ್‌ ಅಬ್ದುಲ್ಲಾ (ಬಾರಾಮುಲ್ಲಾ) ಸೇರಿ ಹಲವು ಗಣ್ಯರ ಭವಿಷ್ಯವು ಸೋಮವಾರ ಮತಯಂತ್ರಗಳಲ್ಲಿ ಭದ್ರವಾಗಲಿದೆ.

VISTARANEWS.COM


on

Lok Sabha Election 2024
Koo

ಲಖನೌ: ಲೋಕಸಭೆ ಚುನಾವಣೆಯ (Lok Sabha Election 2024) ಐದನೇ ಹಂತದ ಮತದಾನ(Fifth Phase Voting) ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಆರು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ 49 ಕ್ಷೇತ್ರಗಳಲ್ಲಿ ಸೋಮವಾರ ಬೆಳಗ್ಗೆ 7ಗಂಟೆಯಿಂದಲೇ ಮತದಾನ ಆರಂಭವಾಗಿದೆ. ದೇಶದ ಜನರ ಗಮನ ಸೆಳೆದಿರುವ ರಾಯ್‌ಬರೇಲಿ, ಅಮೇಥಿಯಲ್ಲೂ ಇಂದು ಮತದಾನ ಶುರುವಾಗಿದ್ದು, ಸಂಜೆ 6ಗಂಟೆವರೆಗೆ ನಡೆಯಲಿದೆ.

ಉತ್ತರ ಪ್ರದೇಶದ 14, ಮಹಾರಾಷ್ಟ್ರದ 13, ಪಶ್ಚಿಮ ಬಂಗಾಳ 7, ಬಿಹಾರ ಹಾಗೂ ಒಡಿಶಾದಲ್ಲಿ ತಲಾ 5, ಜಾರ್ಖಂಡ್‌ನಲ್ಲಿ 3, ಜಮ್ಮು ಕಾಶ್ಮೀರ ಮತ್ತು ಲಡಾಕ್‌ನ ತಲಾ 1 ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ. ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌ (ಲಖನೌ), ಸ್ಮೃತಿ ಇರಾನಿ (ಅಮೇಥಿ), ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (ರಾಯ್‌ಬರೇಲಿ), ಜಮ್ಮು-ಕಾಶ್ಮೀರ ಮಾಜಿ ಸಿಎಂ ಒಮರ್‌ ಅಬ್ದುಲ್ಲಾ (ಬಾರಾಮುಲ್ಲಾ) ಸೇರಿ ಹಲವು ಗಣ್ಯರ ಭವಿಷ್ಯವು ಸೋಮವಾರ ಮತಯಂತ್ರಗಳಲ್ಲಿ ಭದ್ರವಾಗಲಿದೆ.

ಇನ್ನು ಮುಂಬೈನಲ್ಲಿ ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌, ಉದ್ಯಮಿ ಅನಿಲ್ ಅಂಬಾನಿ ಸೇರಿದಂತೆ ಅನೇಕ ಗಣ್ಯರು ಬೆಳಗ್ಗೆಯೇ ಮತಗಟ್ಟೆಗೆ ಬಂದು ಮತ ಚಲಾಯಿಸಿದರು.

ದೇಶದಲ್ಲಿ ಈಗಾಗಲೇ ನಾಲ್ಕು ಹಂತಗಳಲ್ಲಿ 379 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಬಹುತೇಕ ಕಡೆಗಳಲ್ಲಿ ಶಾಂತಿಯುತವಾಗಿ ಮತದಾನ ನಡೆದಿದ್ದು, ಈಗ ಐದನೇ ಹಂತದ ಮತದಾನಕ್ಕೆ ಚುನಾವಣೆ ಆಯೋಗವು ಸಿದ್ಧಗೊಂಡಿದೆ. ಇನ್ನು ಸೋಮವಾರವೇ ಅಯೋಧ್ಯೆಯ ಜಿಲ್ಲೆಯನ್ನು ಒಳಗೊಂಡಿರುವ ಫೈಜಾಬಾದ್‌ ಲೋಕಸಭೆ ಕ್ಷೇತ್ರದಲ್ಲಿ ಮತದಾನ ನಡೆಯಲಿದ್ದು, ಬಿಜೆಪಿಯ ಹಾಲಿ ಸಂಸದ ಲಲ್ಲು ಸಿಂಗ್‌ ಅವರೇ ಮತ್ತೆ ಕಣಕ್ಕಿಳಿದಿದ್ದಾರೆ. ರಾಮಮಂದಿರ ಉದ್ಘಾಟನೆಯ ಹಿನ್ನೆಲೆಯಲ್ಲಿ ಇಲ್ಲಿಯು ಬಿಜೆಪಿ ಅಭ್ಯರ್ಥಿಯ ಗೆಲುವು ನಿಶ್ಚಿತ ಎಂದು ಹೇಳಲಾಗುತ್ತಿದೆ. 4.69 ಕೋಟಿ ಪುರುಷ, 4.26 ಕೋಟಿ ಮತ್ತು 5,409 ತೃತೀಯ ಲಿಂಗಿ ಮತದಾರರು ಸೇರಿದಂತೆ 8.95 ಕೋಟಿಗೂ ಅಧಿಕ ಮತದಾರರು ಇಂದು 695 ಅಭ್ಯರ್ಥಿಗಳ ಅದೃಷ್ಟ ನಿರ್ಧರಿಸಲಿದ್ದಾರೆ.

4ನೇ ಹಂತದಲ್ಲಿ ಹೆಚ್ಚಿದ ಮತದಾನ

ನಾಲ್ಕನೇ ಹಂತದಲ್ಲಿ ಶೇ.69.16ರಷ್ಟು ಮತದಾನ ದಾಖಲಾಗಿದ್ದು, ಕಳೆದ ಮೂರು ಹಂತಗಳಿಗಿಂತ ಗರಿಷ್ಠ ಮತದಾನ ದಾಖಲಾಗಿದೆ. ಮೊದಲ ಹಂತದಲ್ಲಿ ನಡೆದ ಮತದಾನ ಪ್ರಮಾಣವು ಶೇ.66.14ರಷ್ಟಿದ್ದರೆ, ಎರಡನೇ ಹಂತದಲ್ಲಿ ಶೇ.66.71ರಷ್ಟು ಮತದಾನ ದಾಖಲಾಗಿತ್ತು. ಮೂರನೇ ಹಂತದಲ್ಲಿ ಒಟ್ಟು ಶೇ.65.68ರಷ್ಟು ಮತದಾನ ದಾಖಲಾಗಿತ್ತು. ಮೂರೂ ಹಂತಗಳಲ್ಲಿ 2019ಕ್ಕಿಂತ ಕಡಿಮೆ ಮತದಾನ ದಾಖಲಾಗಿದ್ದು ಚರ್ಚೆಗೆ ಗ್ರಾಸವಾಗಿತ್ತು. ಆದರೀಗ, 4ನೇ ಹಂತದಲ್ಲಿ ಶೇ.69.16ರಷ್ಟು ಮತದಾನ ದಾಖಲಾಗಿದ್ದು, ಕಳೆದ ಬಾರಿಗಿಂತ ಕೇವಲ 0.40ರಷ್ಟು ಕಡಿಮೆಯಾಗಿದೆ. ಹಾಗಾಗಿ, ನಾಲ್ಕನೇ ಹಂತದ ಮತದಾನವು ಸಕಾರಾತ್ಮಕ ಬೆಳವಣಿಗೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ದೇವೇಗೌಡ ಇನ್ನೂ ಆತ್ಮಹತ್ಯೆ ಮಾಡಿಕೊಂಡಿಲ್ವಲ್ಲ; ಹೊಸ ಆಡಿಯೊದಲ್ಲಿ ಶಿವರಾಮೇಗೌಡ ಸ್ಫೋಟಕ ಹೇಳಿಕೆ

Continue Reading

ದೇಶ

Lok Sabha Election: ಇಂದು 5ನೇ ಹಂತದ ಮತದಾನ; ರಾಹುಲ್‌ ಗಾಂಧಿ, ಸ್ಮೃತಿ ಸೇರಿ ಹಲವರ ಭವಿಷ್ಯ ನಿರ್ಧಾರ

Lok Sabha Election: ಉತ್ತರ ಪ್ರದೇಶದ 14, ಮಹಾರಾಷ್ಟ್ರದ 13, ಪಶ್ಚಿಮ ಬಂಗಾಳ 7, ಬಿಹಾರ ಹಾಗೂ ಒಡಿಶಾದಲ್ಲಿ ತಲಾ 5, ಜಾರ್ಖಂಡ್‌ನಲ್ಲಿ 3, ಜಮ್ಮು ಕಾಶ್ಮೀರ ಮತ್ತು ಲಡಾಕ್‌ನ ತಲಾ 1 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಶಾಂತಿಯುತ ಮತ್ತು ಪಾರದರ್ಶಕ ಮತದಾನಕ್ಕಾಗಿ ಚುನಾವಣೆ ಆಯೋಗವು ಸಕಲ ಸಿದ್ಧತೆ ಮಾಡಿಕೊಂಡಿದೆ.

VISTARANEWS.COM


on

Lok Sabha Election
Koo

ಲಖನೌ: ಲೋಕಸಭೆ ಚುನಾವಣೆಯ (Lok Sabha Election 2024) ಐದನೇ ಹಂತದ ಮತದಾನವು ಸೋಮವಾರ (ಮೇ 20) ನಡೆಯಲಿದೆ. ಆರು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ 49 ಕ್ಷೇತ್ರಗಳಲ್ಲಿ ಸೋಮವಾರ ಬೆಳಗ್ಗೆಯಿಂದಲೇ ಮತದಾನ (Fifth Phase Voting) ನಡೆಯಲಿದ್ದು, ಶಾಂತಿಯುತ ಮತ್ತು ಪಾರದರ್ಶಕ ಮತದಾನಕ್ಕಾಗಿ ಚುನಾವಣೆ ಆಯೋಗವು (Election Commission) ಸಕಲ ಸಿದ್ಧತೆ ಮಾಡಿಕೊಂಡಿದೆ. ಹಾಗೆಯೇ, ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಬಿಗಿ ಭದ್ರತೆ ಒದಗಿಸಲಾಗಿದೆ.

ಉತ್ತರ ಪ್ರದೇಶದ 14, ಮಹಾರಾಷ್ಟ್ರದ 13, ಪಶ್ಚಿಮ ಬಂಗಾಳ 7, ಬಿಹಾರ ಹಾಗೂ ಒಡಿಶಾದಲ್ಲಿ ತಲಾ 5, ಜಾರ್ಖಂಡ್‌ನಲ್ಲಿ 3, ಜಮ್ಮು ಕಾಶ್ಮೀರ ಮತ್ತು ಲಡಾಕ್‌ನ ತಲಾ 1 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌ (ಲಖನೌ), ಸ್ಮೃತಿ ಇರಾನಿ (ಅಮೇಥಿ), ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (ರಾಯ್‌ಬರೇಲಿ), ಜಮ್ಮು-ಕಾಶ್ಮೀರ ಮಾಜಿ ಸಿಎಂ ಒಮರ್‌ ಅಬ್ದುಲ್ಲಾ (ಬಾರಾಮುಲ್ಲಾ) ಸೇರಿ ಹಲವು ಗಣ್ಯರ ಭವಿಷ್ಯವು ಸೋಮವಾರ ಮತಯಂತ್ರಗಳಲ್ಲಿ ಭದ್ರವಾಗಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ.

ದೇಶದಲ್ಲಿ ಈಗಾಗಲೇ ನಾಲ್ಕು ಹಂತಗಳಲ್ಲಿ 379 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಬಹುತೇಕ ಕಡೆಗಳಲ್ಲಿ ಶಾಂತಿಯುತವಾಗಿ ಮತದಾನ ನಡೆದಿದ್ದು, ಈಗ ಐದನೇ ಹಂತದ ಮತದಾನಕ್ಕೆ ಚುನಾವಣೆ ಆಯೋಗವು ಸಿದ್ಧಗೊಂಡಿದೆ. ಇನ್ನು ಸೋಮವಾರವೇ ಅಯೋಧ್ಯೆಯ ಜಿಲ್ಲೆಯನ್ನು ಒಳಗೊಂಡಿರುವ ಫೈಜಾಬಾದ್‌ ಲೋಕಸಭೆ ಕ್ಷೇತ್ರದಲ್ಲಿ ಮತದಾನ ನಡೆಯಲಿದ್ದು, ಬಿಜೆಪಿಯ ಹಾಲಿ ಸಂಸದ ಲಲ್ಲು ಸಿಂಗ್‌ ಅವರೇ ಮತ್ತೆ ಕಣಕ್ಕಿಳಿದಿದ್ದಾರೆ. ರಾಮಮಂದಿರ ಉದ್ಘಾಟನೆಯ ಹಿನ್ನೆಲೆಯಲ್ಲಿ ಇಲ್ಲಿಯು ಬಿಜೆಪಿ ಅಭ್ಯರ್ಥಿಯ ಗೆಲುವು ನಿಶ್ಚಿತ ಎಂದು ಹೇಳಲಾಗುತ್ತಿದೆ.

4ನೇ ಹಂತದಲ್ಲಿ ಹೆಚ್ಚಿದ ಮತದಾನ

ನಾಲ್ಕನೇ ಹಂತದಲ್ಲಿ ಶೇ.69.16ರಷ್ಟು ಮತದಾನ ದಾಖಲಾಗಿದ್ದು, ಕಳೆದ ಮೂರು ಹಂತಗಳಿಗಿಂತ ಗರಿಷ್ಠ ಮತದಾನ ದಾಖಲಾಗಿದೆ. ಮೊದಲ ಹಂತದಲ್ಲಿ ನಡೆದ ಮತದಾನ ಪ್ರಮಾಣವು ಶೇ.66.14ರಷ್ಟಿದ್ದರೆ, ಎರಡನೇ ಹಂತದಲ್ಲಿ ಶೇ.66.71ರಷ್ಟು ಮತದಾನ ದಾಖಲಾಗಿತ್ತು. ಮೂರನೇ ಹಂತದಲ್ಲಿ ಒಟ್ಟು ಶೇ.65.68ರಷ್ಟು ಮತದಾನ ದಾಖಲಾಗಿತ್ತು. ಮೂರೂ ಹಂತಗಳಲ್ಲಿ 2019ಕ್ಕಿಂತ ಕಡಿಮೆ ಮತದಾನ ದಾಖಲಾಗಿದ್ದು ಚರ್ಚೆಗೆ ಗ್ರಾಸವಾಗಿತ್ತು. ಆದರೀಗ, 4ನೇ ಹಂತದಲ್ಲಿ ಶೇ.69.16ರಷ್ಟು ಮತದಾನ ದಾಖಲಾಗಿದ್ದು, ಕಳೆದ ಬಾರಿಗಿಂತ ಕೇವಲ 0.40ರಷ್ಟು ಕಡಿಮೆಯಾಗಿದೆ. ಹಾಗಾಗಿ, ನಾಲ್ಕನೇ ಹಂತದ ಮತದಾನವು ಸಕಾರಾತ್ಮಕ ಬೆಳವಣಿಗೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Voter Turnout: 4ನೇ ಹಂತದಲ್ಲಿ ಹೆಚ್ಚಿದ ಮತದಾನ; ಪುರುಷರಿಗಿಂತ ಸ್ತ್ರೀಯರಿಂದಲೇ ಹೆಚ್ಚು ಮತ ಚಲಾವಣೆ; ಹೀಗಿದೆ ಆಯೋಗದ ಮಾಹಿತಿ

Continue Reading

ದೇಶ

Parliament Security: ನಾಳೆಯಿಂದ ಸಂಸತ್‌ಗೆ ಸಿಆರ್‌ಪಿಎಫ್‌ ಬದಲು ಸಿಐಎಸ್‌ಎಫ್‌ ಭದ್ರತೆ; ಏಕಿಂಥ ನಿರ್ಧಾರ?

Parliament Security: ಸಿಐಎಸ್‌ಎಫ್‌ನ ಸುಮಾರು 3,300 ಸಿಬ್ಬಂದಿಯು ಸಂಸತ್‌ಅನ್ನು ಹಗಲು-ರಾತ್ರಿ ಎನ್ನದೆ ರಕ್ಷಣೆ ಮಾಡಲಿದ್ದಾರೆ. ಕಳೆದ ಹಲವು ವರ್ಷಗಳಿಂದ ದೇಶದ ಸಂಸತ್‌ಅನ್ನು ಕಾಯುತ್ತಿದ್ದ ಸಿಆರ್‌ಪಿಎಫ್‌ನ 1,400 ಸಿಬ್ಬಂದಿಯು ಸಂಸತ್‌ ಭದ್ರತೆಯಿಂದ ವಿಮುಖರಾಗಲಿದ್ದಾರೆ. ಕಳೆದ ವರ್ಷ ಲೋಕಸಭೆಯಲ್ಲಿ ಭದ್ರತಾ ವೈಫಲ್ಯ ಉಂಟಾದ ಕಾರಣ ಕೇಂದ್ರ ಸರ್ಕಾರವು ಭದ್ರತಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡಿದೆ.

VISTARANEWS.COM


on

Parliament Security
Koo

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ನೂತನ ಸಂಸತ್‌ ಭವನದ ರಕ್ಷಣೆಯ ಹೊಣೆಯನ್ನು ಸೋಮವಾರದಿಂದ (ಮೇ 20) ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ (CRPF) ಬದಲು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (CISF) ಸಿಬ್ಬಂದಿಯು ವಹಿಸಿಕೊಳ್ಳಲಿದೆ. ಕಳೆದ ವರ್ಷ ಸಂಸತ್‌ನಲ್ಲಿ ಭದ್ರತಾ ಲೋಪ ಉಂಟಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು (Central Government) ಸಿಐಎಸ್‌ಎಫ್‌ ಸಿಬ್ಬಂದಿಯ ಭದ್ರತೆಗೆ ವಹಿಸಿದೆ. ಅದರಂತೆ, ಸೋಮವಾರದಿಂದ ಸಿಐಎಸ್‌ಎಫ್‌ ಸಿಬ್ಬಂದಿಯೇ ಸಂಸತ್‌ನ ಸಂಪೂರ್ಣ ರಕ್ಷಣೆಯ ಜವಾಬ್ದಾರಿಯನ್ನು ನಿರ್ವಹಿಸಲಿದೆ.

ಸಿಐಎಸ್‌ಎಫ್‌ನ ಸುಮಾರು 3,300 ಸಿಬ್ಬಂದಿಯು ಸಂಸತ್‌ಅನ್ನು ಹಗಲು-ರಾತ್ರಿ ಎನ್ನದೆ ರಕ್ಷಣೆ ಮಾಡಲಿದ್ದಾರೆ. ಕಳೆದ ಹಲವು ವರ್ಷಗಳಿಂದ ದೇಶದ ಸಂಸತ್‌ಅನ್ನು ಕಾಯುತ್ತಿದ್ದ ಸಿಆರ್‌ಪಿಎಫ್‌ನ 1,400 ಸಿಬ್ಬಂದಿಯು ಸಂಸತ್‌ ಭದ್ರತೆಯಿಂದ ವಿಮುಖರಾಗಲಿದ್ದಾರೆ. 2013ರಿಂದಲೂ ಸಿಆರ್‌ಪಿಎಫ್‌ ಪಡೆಗಳು ಸಂಸತ್‌ಗೆ ಭದ್ರತೆ ಒದಗಿಸಿದ್ದವು. ಸಿಆರ್‌ಪಿಎಫ್‌ನ ಪಿಡಿಜಿ (ಪಾರ್ಲಿಮೆಂಟ್‌ ಡ್ಯೂಟಿ ಗ್ರೂಪ್‌) ವಾಹನಗಳು, ಶಸ್ತ್ರಾಸ್ತ್ರ, ಸಿಬ್ಬಂದಿಯನ್ನು ಸೋಮವಾರ ತೆರವುಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಸಿಐಎಸ್‌ಎಫ್‌ ಪಡೆಗಳು ಸಂಸತ್‌ ಭದ್ರತೆಗೆ ನಿಯೋಜನೆಗೊಂಡಿವೆ ಎಂದು ಹೇಳಲಾಗುತ್ತಿದೆ.

ಭದ್ರತಾ ವೈಫಲ್ಯ ಹೇಗಾಗಿತ್ತು?

2023ರ ಡಿಸೆಂಬರ್‌ 13ರಂದು ಲೋಕಸಭೆಯಲ್ಲಿ ಭಾರಿ ಭದ್ರತಾ ಲೋಪ ಕಂಡುಬಂದಿತ್ತು. ಪ್ರೇಕ್ಷಕರ ಗ್ಯಾಲರಿಯಿಂದ ಕಾಲಾಪದ ಮಧ್ಯೆ ಜಿಗಿದ ಇಬ್ಬರು ದುಷ್ಕರ್ಮಿಗಳು ಹೊಗೆ ಬಾಂಬ್‌ (ಬಣ್ಣದ ಹೊಗೆ ಬರುವ ವಸ್ತುಗಳ ಸ್ಫೋಟ) ಸ್ಫೋಟಿಸಿದ್ದರು. ಪ್ರಕರಣವು ದೇಶಾದ್ಯಂತ ಸುದ್ದಿಯಾಗಿತ್ತು. ಹೊಗೆ ಬಾಂಬ್‌ ಸ್ಫೋಟಿಸಿದ ಹಿನ್ನೆಲೆಯಲ್ಲಿ ಮೈಸೂರು ನಿವಾಸಿ ಸೇರಿ ಹಲವು ಆರೋಪಿಗಳನ್ನು ಬಂಧಿಸಲಾಗಿತ್ತು. ಸಂಸದ ಪ್ರತಾಪ್‌ ಸಿಂಹ ಅವರು ಮೈಸೂರಿನ ವ್ಯಕ್ತಿಗೆ ಪಾಸ್‌ ನೀಡಿದ್ದು ಕೂಡ ರಾಜಕೀಯ ಮೇಲಾಟಕ್ಕೆ ಕಾರಣವಾಗಿತ್ತು.

ಲೋಕಸಭೆಯಲ್ಲಿ ಸ್ಮೋಕ್‌ ಬಾಂಬ್‌ ಸ್ಫೋಟದ ಅವಾಂತರ.

ಸಂಸತ್‌ನಲ್ಲಿ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಆರ್‌ಪಿಎಫ್‌ ಮಹಾ ನಿರ್ದೇಶಕ ಅನೀಶ್‌ ದಯಾಳ್‌ ಸಿಂಗ್‌ ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು. ಸಿಆರ್‌ಪಿಎಫ್‌ ಹಾಗೂ ಹಲವು ಭದ್ರತಾ ತಜ್ಞರು, ಸಂಸತ್‌ ಭದ್ರತಾ ವ್ಯವಸ್ಥೆಯನ್ನು ಬದಲಿಸಬೇಕು ಎಂಬುದಾಗಿ ಶಿಫಾರಸು ಮಾಡಿದ್ದರು. ಸಿಆರ್‌ಪಿಎಫ್‌ ಬದಲು ಸಿಐಎಸ್‌ಎಫ್‌ ಪಡೆಗಳನ್ನು ಸಂಸತ್‌ ಭದ್ರತೆಗೆ ನಿಯೋಜಿಸುವುದು ಉತ್ತಮ ಎಂಬ ಶಿಫಾರಸು ವ್ಯಕ್ತವಾಗಿತ್ತು. ಹಾಗಾಗಿ, ಕೇಂದ್ರ ಸರ್ಕಾರವು ಸಂಸತ್‌ ಭದ್ರತೆಗೆ ಸಿಐಎಸ್‌ಎಫ್‌ ಸಿಬ್ಬಂದಿಯನ್ನು ನಿಯೋಜಿಸುತ್ತಿದೆ.

ಇದನ್ನೂ ಓದಿ: T20 World Cup 2024: ಪಾಕ್​ ಉಗ್ರರ ಭೀತಿ; ಬಿಗಿ ಭದ್ರತೆ ಕೈಗೊಂಡ ವಿಂಡೀಸ್​ ಕ್ರಿಕೆಟ್​ ಮಂಡಳಿ

Continue Reading
Advertisement
lr Shivarame gowda prajwal revanna case
ಕ್ರೈಂ8 mins ago

Prajwal Revanna Case: ಮಾಜಿ ಸಂಸದ ಶಿವರಾಮೇಗೌಡ ಮನೆ ಮೇಲೆ ಮೊಟ್ಟೆ ದಾಳಿ

Triple Talaq
ದೇಶ10 mins ago

Triple Talaq: ವಾಟ್ಸ್‌ಆ್ಯಪ್‌ ವಾಯ್ಸ್‌ ಮೆಸೇಜ್‌ನಲ್ಲಿ ತ್ರಿವಳಿ ತಲಾಕ್ ನೀಡಿದ ಪತಿ; ದೂರು ದಾಖಲು

rave party electronic city
ಕ್ರೈಂ36 mins ago

Rave Party: ರೇವ್‌ ಪಾರ್ಟಿ ಮೇಲೆ ಪೊಲೀಸ್‌ ದಾಳಿ, ತೆಲುಗು ನಟಿ ಹೇಮಾ ಪತ್ತೆ; ನಟಿಯರನ್ನು ಕರೆಸಿಕೊಂಡು ಏನ್‌ ಮಾಡ್ತಿದ್ರು?

Lok Sabha Election 2024
ದೇಶ37 mins ago

Lok Sabha Election 2024: 5ನೇ ಹಂತದ ಮತದಾನ; 49 ಕ್ಷೇತ್ರಗಳಲ್ಲಿ ವೋಟಿಂಗ್ ಶುರು

Job Alert
ಉದ್ಯೋಗ1 hour ago

Job Alert: ನೈವೇಲಿ ಲಿಗ್ನೈಟ್ ಕಾರ್ಪೋರೇಷನ್‌ನಲ್ಲಿದೆ ಉದ್ಯೋಗಾವಕಾಶ; ಅರ್ಜಿ ಸಲ್ಲಿಕೆಗೆ ಇಂದು ಕೊನೆ ದಿನ

Lok Sabha Election
ದೇಶ2 hours ago

Lok Sabha Election: ಇಂದು 5ನೇ ಹಂತದ ಮತದಾನ; ರಾಹುಲ್‌ ಗಾಂಧಿ, ಸ್ಮೃತಿ ಸೇರಿ ಹಲವರ ಭವಿಷ್ಯ ನಿರ್ಧಾರ

Karnataka Weather Forecast
ಮಳೆ2 hours ago

Karnataka Weather : ವರ್ಷಾಘಾತಕ್ಕೆ ಜನ ಸುಸ್ತು; ಮಳೆಯಾಟಕ್ಕೆ ಬಿರುಗಾಳಿ ಸಾಥ್‌

Dina Bhavishya
ಭವಿಷ್ಯ3 hours ago

Dina Bhavishya : ಮಾನಸಿಕ ಒತ್ತಡದಿಂದ ಮುಕ್ತರಾಗುವಿರಿ; ಹೂಡಿಕೆ ವ್ಯವಹಾರವು ಹೆಚ್ಚು ಲಾಭ ತರುವುದು

Pralhad Joshi
ಕರ್ನಾಟಕ8 hours ago

Pralhad Joshi: ರಾಜ್ಯದಲ್ಲಿ ಹತ್ಯೆ, ಆತ್ಮಹತ್ಯೆಗಳೇ ಅಧಿಕ, ಅಭಿವೃದ್ಧಿ ಸಮಾಧಿ: ಪ್ರಲ್ಹಾದ್‌ ಜೋಶಿ ಟೀಕೆ

Ebrahim Raisi
ವಿದೇಶ8 hours ago

Ebrahim Raisi: ಪತನದ ಬಳಿಕ ಹೆಲಿಕಾಪ್ಟರ್‌ ನಾಪತ್ತೆ; ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವು?

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ16 hours ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ17 hours ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ18 hours ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ2 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ3 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ4 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು4 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ5 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

ಟ್ರೆಂಡಿಂಗ್‌