ಸೆಂಗೋಲ್​ ಬಗ್ಗೆ ಪ್ರಧಾನಿ ಮೋದಿಗೆ ತಿಳಿಸಿದ್ದು ಈ ನಾಟ್ಯ ಕಲಾವಿದೆ; 2021ರಲ್ಲಿ ಅವರು ಬರೆದ ಪತ್ರದಲ್ಲೇನಿತ್ತು? Vistara News
Connect with us

ದೇಶ

ಸೆಂಗೋಲ್​ ಬಗ್ಗೆ ಪ್ರಧಾನಿ ಮೋದಿಗೆ ತಿಳಿಸಿದ್ದು ಈ ನಾಟ್ಯ ಕಲಾವಿದೆ; 2021ರಲ್ಲಿ ಅವರು ಬರೆದ ಪತ್ರದಲ್ಲೇನಿತ್ತು?

ಸೆಂಗೋಲ್​​ನ್ನು ನೂತನ ಸಂಸತ್ ಭವನದಲ್ಲಿ ಅಳವಡಿಸಬೇಕು ಎಂಬುದು ಪ್ರಧಾನಿ ಮೋದಿಯವರ ಇಚ್ಛೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಸೆಂಗೋಲ್ ಮಹತ್ವವನ್ನೂ ವಿವರಿಸಿ ಹೇಳಿದ್ದರು. ಆಗಿನಿಂದಲೂ ಸೆಂಗೋಲ್ ಬಗ್ಗೆ ಜನರಲ್ಲಿ ಕುತೂಹಲ ಮೂಡಿದೆ.

VISTARANEWS.COM


on

Classical dancer Explain About Sengol to PM Modi
Koo

ಪ್ರಧಾನಿ ನರೇಂದ್ರ ಮೋದಿ (PM Modi) ಯವರು ಮೇ 28ರಂದು ಹೊಸ ಸಂಸತ್​ ಭವನವನ್ನು (New Parliament) ಉದ್ಘಾಟನೆ ಮಾಡಲಿದ್ದಾರೆ. ನೂತನ ಸಂಸತ್ ಭವನದ ಉದ್ಘಾಟನೆ ನಿಮಿತ್ತ ಅಂದು ಮುಂಜಾನೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು, ವಿವಿಧ ಸಮಾರಂಭಗಳು ನಡೆಯಲಿದೆ. ಅದರಲ್ಲೂ ಬಹುಮುಖ್ಯವಾಗಿ ಲೋಕಸಭೆ ಸ್ಪೀಕರ್​ ಕುರ್ಚಿಯ ಬಳಿ ಪ್ರಧಾನಿ ಮೋದಿ ಅವರು ‘ಸೆಂಗೋಲ್​’ನ್ನು (Sengol In New Parliament) ಅಳವಡಿಸಲಿದ್ದಾರೆ. ತಮಿಳುನಾಡು ಮೂಲದ ಚೋಳ ರಾಜವಂಶದ ಆಡಳಿತದ ಅವಧಿಯಲ್ಲಿ ಧಾರ್ಮಿಕ, ರಾಜತಾಂತ್ರಿಕವಾಗಿ ಪ್ರಾಮುಖ್ಯತೆ ಪಡೆದಿದ್ದ ಈ ಸೆಂಗೋಲ್ ಅಥವಾ ರಾಜದಂಡವನ್ನು 1947ರ ಆಗಸ್ಟ್​ 14ರಂದು, ಬ್ರಿಟಿಷರು ಭಾರತಕ್ಕೆ ಅಧಿಕಾರ ಹಸ್ತಾಂತರ ಮಾಡುವ ವೇಳೆ ತಮಿಳುನಾಡಿನ ಮಠಧೀಶರು ಜವಾಹರ್​ ಲಾಲ್ ನೆಹರೂ ಅವರಿಗೆ ಕೊಟ್ಟರು ಎಂದು ಹೇಳಲಾಗುತ್ತಿದೆ. ಸೆಂಗೋಲ್ ಎಂಬುದು ಬ್ರಿಟಿಷರಿಂದ ಭಾರತಕ್ಕೆ ಅಧಿಕಾರ ಹಸ್ತಾಂತರಗೊಂಡಿದ್ದರ ಸಂಕೇತ ಎನ್ನಲಾಗಿದೆ.

ಸೆಂಗೋಲ್​​ನ್ನು ನೂತನ ಸಂಸತ್ ಭವನದಲ್ಲಿ ಅಳವಡಿಸಬೇಕು ಎಂಬುದು ಪ್ರಧಾನಿ ಮೋದಿಯವರ ಇಚ್ಛೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಸೆಂಗೋಲ್ ಮಹತ್ವವನ್ನೂ ವಿವರಿಸಿ ಹೇಳಿದ್ದರು. ಇನ್ನು ಅಲಹಾಬಾದ್​ ಮ್ಯೂಸಿಯಂನಲ್ಲಿದ್ದ ಸೆಂಗೋಲ್​ ಬಗ್ಗೆ ಪ್ರಧಾನಿ ಮೋದಿಯವರಿಗೆ ಗೊತ್ತಾಗಿದ್ದು ಹೇಗೆ? ಯಾರಿಂದ ಈ ವಿಷಯ ತಿಳಿಯಿತು? ಎಂಬ ಪ್ರಶ್ನೆ ಎದ್ದಿತ್ತು. ಅದಕ್ಕೆ ಉತ್ತರ ಸಿಕ್ಕಿದೆ. ಜನಮಾನಸದಿಂದ ಮರೆಗೆ ಸೇರಿದ್ದ ಈ ರತ್ನಖಚಿತ ರಾಜದಂಡದ ಬಗ್ಗೆ ಪ್ರಧಾನಿ ಮೋದಿ ಗಮನಕ್ಕೆ ತಂದಿದ್ದು ಖ್ಯಾತ ಕ್ಲಾಸಿಕಲ್ ಡ್ಯಾನ್ಸರ್​ ಪದ್ಮಾ ಸುಬ್ರಹ್ಮಣ್ಯಮ್​. 2021ರಲ್ಲಿ ಇವರು ಪ್ರಧಾನಿ ಮೋದಿಯವರಿಗೆ ಒಂದು ಪತ್ರ ಬರೆದಿದ್ದರು. ಅದರಲ್ಲಿ ಸೆಂಗೋಲ್ (ರಾಜದಂಡ) ಬಗ್ಗೆ ಉಲ್ಲೇಖ ಮಾಡಿದ್ದರು. ಅಷ್ಟೇ ಅಲ್ಲ, ಸೆಂಗೋಲ್ ಬಗ್ಗೆ ಪ್ರಕಟವಾದ ಒಂದು ತಮಿಳು ಆರ್ಟಿಕಲ್​​ನ ಭಾಷಾಂತರವನ್ನು ತಮ್ಮ ಪತ್ರದೊಂದಿಗೆ ಲಗತ್ತಿಸಿದ್ದರು. ಐತಿಹಾಸಿಕವಾಗಿ ಇಷ್ಟು ಮಹತ್ವ ಇರುವ ರಾಜದಂಡಕ್ಕೆ ಸೂಕ್ತ ಪ್ರಚಾರ ಸಿಗಬೇಕು. ದೇಶದ ಜನರಿಗೆ ಈ ಬಗ್ಗೆ ತಿಳಿಯುವಂತಾಗಬೇಕು ಎಂದಿದ್ದರು.

ಸೆಂಗೋಲ್​ ಇತಿಹಾಸವೇನು?-ತಿಳಿಯಲು ಈ ಲೇಖನ ಓದಿ: ವಿಸ್ತಾರ Explainer: ಹೊಸ ಸಂಸತ್​ ಭವನದಲ್ಲಿ ಕಂಗೊಳಿಸಲಿದೆ ತಮಿಳುನಾಡಿನ ಚಿನ್ನದ ಸೆಂಗೋಲ್; ಏನಿದು ರಾಜದಂಡ?

ಇದೀಗ ಸೆಂಗೋಲ್​​ನ್ನು ನೂತನ ಸಂಸತ್ ಭವನದಲ್ಲಿ ಅಳವಡಿಸುತ್ತಾರೆ ಎಂಬ ಸುದ್ದಿ ಕೇಳುತ್ತಿದ್ದಂತೆ ಎಎನ್​ಐ ಜತೆ ಮಾತನಾಡಿದ ಪದ್ಮಾ ಸುಬ್ರಹ್ಮಣ್ಯಮ್​ ‘ನಾನು ನನ್ನ ಸಾಂಸ್ಕೃತಿಕ ವೈಭವದ ಇತಿಹಾಸಗಳ ಬಗ್ಗೆ ಓದುತ್ತೇನೆ, ಬರೆಯುತ್ತೇನೆ. ನನಗೂ ಮೊದಲು ಸೆಂಗೋಲ್ ಬಗ್ಗೆ ಗೊತ್ತಿರಲಿಲ್ಲ. ಯಾವುದೇ ಪಠ್ಯದಲ್ಲೂ ನಾನು ಈ ಕುರಿತು ಓದಿರಲಿಲ್ಲ. ಆದರೆ ಬೇರೆನೋ ಓದುವಾಗ ಸೆಂಗೋಲ್​ ಬಗ್ಗೆ ಒಂದು ಲೇಖನ ಓದಿದೆ. ಅದನ್ನು ಹೆಚ್ಚು ಪ್ರಚುರ ಪಡಿಸಬೇಕು ಎಂಬ ಆಸೆಯಾಯಿತು. ತಮಿಳು ಭಾಷೆಯಲ್ಲಿದ್ದ ಅದನ್ನು ಪೂರ್ತಿಯಾಗಿ ಇಂಗ್ಲಿಷ್​​ಗೆ ಭಾಷಾಂತರ ಮಾಡಿದೆ. ನಂತರ ಪ್ರಧಾನಿ ಮೋದಿಯವರಿಗೆ ಒಂದು ಪತ್ರ ಬರೆದು, ಅದರೊಂದಿಗೆ ಈ ಆರ್ಟಿಕಲ್ ಇಟ್ಟು ಕಳಿಸಿದ್ದೆ’ ಎಂದು ಹೇಳಿದ್ದಾರೆ.

ಅಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದಿದ್ದ ಪತ್ರಕ್ಕೆ ಏನೂ ಉತ್ತರ ಬಂದಿರಲಿಲ್ಲ. ಆದರೆ ಈಗ ನೂತನ ಸಂಸತ್ ಭವನದಲ್ಲೇ ಅಳವಡಿಸಲು ಮುಂದಾಗಿರುವುದು ಖುಷಿಕೊಟ್ಟಿದೆ. ಸೆಂಗೋಲ್​​ಗೆ ತಮಿಳು ಸಂಸ್ಕೃತಿಯಲ್ಲಿ ಅತ್ಯಂತ ಮಹತ್ವ ಇದೆ. ಇದು ಅಧಿಕಾರ, ನ್ಯಾಯದ ಪ್ರತೀಕ ಎಂದು ತಮಿಳಿನ ಕಾವ್ಯಗಳಲ್ಲಿ ಉಲ್ಲೇಖಿಸಲಾಗಿದೆ ಎಂದು ಪದ್ಮಾ ಸುಬ್ರಹ್ಮಣ್ಯಮ್ ಮಾಹಿತಿ ನೀಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ

ದೇಶ

72 Hoorain: ಕಾಶ್ಮೀರ ಫೈಲ್ಸ್, ಕೇರಳ ಸ್ಟೋರಿ ಬಳಿಕ ಮತ್ತೊಂದು ವಿವಾದಾತ್ಮಕ ಸಿನಿಮಾ ’72 ಹೂರೇ’ ತೆರೆಗೆ ಬರಲು ಸಿದ್ಧ

72 Hoorain: ರಾಷ್ಟ್ರ ಪ್ರಶಸ್ತಿ ವಿಜೇತ ಸಂಜಯ್ ಪೂರನ್ ಸಿಂಗ್ ಚೌಹಾಣ್ ನಿರ್ದೇಶನದ 72 ಹೂರೇ ಚಿತ್ರದ ಟೀಸರ್ ಲಾಂಚ್ ಮಾಡಲಾಗಿದ್ದು, ಪರ ವಿರೋಧ ಚರ್ಚೆಗಳು ಶುರುವಾಗಿವೆ.

VISTARANEWS.COM


on

Edited by

72 Hoorain bollywood film is ready to release in India
Koo

ನವದೆಹಲಿ: ದಿ ಕೇರಳ ಸ್ಟೋರಿ (The Kerala Story), ಕಾಶ್ಮೀರ್ ಫೈಲ್ (The Kashmir Files), ದಿ ಡೈರಿ ಆಫ್ ವೆಸ್ಟ್ ಬೆಂಗಾಲ್ ಸಿನಿಮಾ ಬೆನ್ನಲ್ಲೇ ಮತ್ತೊಂದು ವಿವಾದಾತ್ಮಕ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಇಸ್ಲಾಮಿಕ್ ತೀವ್ರವಾದದ ಕತೆಯನ್ನು ಹೊಂದಿರುವ 72 ಹೂರೇ(72 Hoorain) ಚಿತ್ರದ ಟೀಸರ್ ಲಾಂಚ್ ಆಗಿದ್ದು, ತೀವ್ರ ವಿರೋಧ ಕೂಡ ವ್ಯಕ್ತವಾಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಸಂಜಯ್ ಪೂರನ್ ಸಿಂಗ್ ಚೌಹಾಣ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಟೀಸರ್ ಲಾಂಚ್ ಆಗುತ್ತಿದ್ದಂತೆ ನೆಟ್ಟಿಗರು, ಮುಸ್ಲಿಮ್ ಮತ್ತು ಇಸ್ಲಾಮ್‌ಗೆ ಅವಮಾನ ಮಾಡುವ ಪ್ರಾಪಗ್ಯಾಂಡ ಚಿತ್ರ ಎಂದು ಟೀಕಿಸಿದ್ದಾರೆ.

ಇತ್ತೀಚೆಗಷ್ಟೇ 72 ಹೂರೇ ಚಿತ್ರದ ಫಸ್ಟ್ ಲುಕ್ ಅನಾವರಣ ಮಾಡಲಾಗಿತ್ತು. ಆಗಲೂ ಟ್ವಿಟರ್‌ನಲ್ಲಿ ಸಾಕಷ್ಟು ಪರ ಮತ್ತು ವಿರೋಧ ಚರ್ಚೆಗಳು ಶುರುವಾಗಿದ್ದವು. ಭಾರತದ ಕೋಮು ಸೌಹಾರ್ದತೆಯನ್ನು ಹಾಳು ಮಾಡುವ ಪ್ರಯತ್ನಗಳ ನಡೆಯುತ್ತಿವೆ ಎಂದು ಟೀಕೆ ವ್ಯಕ್ತವಾಗಿತ್ತು.

ಚಿತ್ರದ ಟೀಸರ್‌ನಲ್ಲಿ ಒಸಾಮಾ ಬಿನ್ ಲಾಡೆನ್, ಅಜ್ಮಲ್ ಕಸಬ್ ಸೇರಿದಂತೆ ಇತರ ಚಿತ್ರಗಳನ್ನು ಮತ್ತು ಯಾಕೂಬ್ ಮೆಮನ್‌ನ ಮಿಶ್ರಿತ ಫೋಟೋವನ್ನು ತೋರಿಸಲಾಗಿದೆ. ಮೇಲ್ನೋಟಕ್ಕೆ ಟೀಸರ್‌ನಲ್ಲಿ ಕಾಣುವ ಅಂಶಗಳು ಖಂಡಿತವಾಗಿಯೂ, ಈ ಸಿನಿಮಾ ಕೂಡ ಮುಸ್ಲಿಮರು ಸುತ್ತ ಸುತ್ತದೆ ಎಂಬುದು ವೇದ್ಯವಾಗುತ್ತದೆ. ಉಗ್ರರಾದ ಮಸೂದ್ ಅಜರ್ ಮತ್ತು ಹಫೀಜ್ ಸಯೀದ್ ಅವರನ್ನು ಹೋಲುವರವನ್ನು ಹೈಲೆಟ್ ಮಾಡಲಾಗಿರುವುದನ್ನು ಕಾಣಬಹುದಾಗಿದೆ.

ಇದನ್ನೂ ಓದಿ: The Kerala Story : ದಿ ಕೇರಳ ಸ್ಟೋರಿ ಸಿನಿಮಾದ ಬಗ್ಗೆ ಕೆಂಡ ಕಾರಿದ ಹಿರಿಯ ನಟ ನಾಸಿರುದ್ದೀನ್‌ ಶಾ

72 ಹೂರೇ ಚಿತ್ರದ ಟ್ರೈಲರ್ ಅನ್ನು ಸಹ ನಿರ್ದೇಶಕರಾಗಿರುವ ಅಶೋಕ್ ಪಂಡಿತ್ ಅವರು ಟ್ವಿಟರ್‌ನಲ್ಲಿ ಷೇರ್ ಮಾಡಿದ್ದಾರೆ. ಇವರು ಕಾಶ್ಮೀರ ಪಂಡತ್ ಕೂಡ ಹೌದು. ನಮ್ಮ ಚಿತ್ರ 72 Hoorain ಸಿನಿಮಾದ ಮೊದಲ ನೋಟವನ್ನು ನಿಮಗೆ ಪ್ರಸ್ತುತಪಡಿಸುವ ಭರವಸೆಯಂತೆ. ನೀವು ಅದನ್ನು ಇಷ್ಟಪಡುತ್ತೀರಿ ಎಂದು ನನಗೆ ಖಾತ್ರಿಯಿದೆ. ಭಯೋತ್ಪಾದಕರ ಮಾರ್ಗದರ್ಶಕರು ಭರವಸೆ ನೀಡಿದಂತೆ 72 ಕನ್ಯೆಯರನ್ನು ಭೇಟಿಯಾಗುವ ಬದಲು ನೀವು ಕ್ರೂರವಾಗಿ ಸಾಯುತ್ತಿದ್ದರೆ? ನನ್ನ ಮುಂಬರುವ ಚಿತ್ರ 72 ಹೂರೇ ನ ಮೊದಲ ನೋಟವನ್ನು ಪ್ರಸ್ತುತಪಡಿಸುತ್ತಿದ್ದೇನೆ. ಚಿತ್ರವು 7 ಜುಲೈ 2023 ರಂದು ಬಿಡುಗಡೆಯಾಗಲಿದೆ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

72 ಹೂರೇ ಚಿತ್ರದ ಟೀಸರ್

Continue Reading

ದೇಶ

Monsoon Forecast 2023 : ಹವಾಮಾನ ಇಲಾಖೆ VS ಸ್ಕೈಮೆಟ್; ಹೇಗಿರಲಿದೆ ಈ ಬಾರಿಯ ಮುಂಗಾರು ಮಳೆ?

Monsoon Forecast 2023: ಭಾರತದಲ್ಲಿ ಹವಾಮಾನ ಇಲಾಖೆ ಹಾಗೂ ಖಾಸಗಿ ಸಂಸ್ಥೆಯಾದ ಸ್ಕೈಮೆಟ್‌ ಹವಾಮಾನ ವರದಿ ನೀಡುತ್ತವೆ. ಎರಡೂ ವರದಿಗಳಲ್ಲಿ ಯಾವುದು ನಿಖರ ಎಂಬುದರ ಮಾಹಿತಿ ಹೀಗಿದೆ.

VISTARANEWS.COM


on

Edited by

Monsoon Forecast 2023
Koo
Monsoon Forecast 2023

ಬೆಂಗಳೂರು: ನಿರೀಕ್ಷಿಸಿದಂತೆಯೇ ಈ ಬಾರಿ ಮುಂಗಾರು ಆಗಮನ ವಿಳಂಬವಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ವರದಿ ಪ್ರಕಾರ ಭಾನುವಾರವೇ (June 4) ಕೇರಳಕ್ಕೆ ಮುಂಗಾರು ಪ್ರವೇಶವಾಗಬೇಕಿತ್ತು. ಆದರೆ, ಇನ್ನೂ ಮೂರ್ನಾಲ್ಕು ದಿನ ಮುಂಗಾರು ಪ್ರವೇಶವಾಗುವ ಸಾಧ್ಯತೆ ಕಡಿಮೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ. ಹಾಗೆ ನೋಡಿದರೆ, ನೈಋತ್ಯ ಮುಂಗಾರು ಜೂನ್‌ 3ರಂದೇ ಲಕ್ಷದ್ವೀಪವನ್ನು ಪ್ರವೇಶಿಸಿದೆ. ಆದರೂ, ಕೇರಳ ಪ್ರವೇಶಿಸಿ, ನಂತರ ದೇಶಾದ್ಯಂತ ಮುಂಗಾರು ಮಳೆಯಾಗುವುದು ವಿಳಂಬವಾಗಿದೆ. ಇದರಿಂದಾಗಿ, ಹವಾಮಾನ ಇಲಾಖೆಯ ಅಂದಾಜು ಏರುಪೇರಾಗಿದೆ. ಹಾಗೆ ನೋಡಿದರೆ, ಭಾರತದಲ್ಲಿ ಸರ್ಕಾರದ ಹವಾಮಾನ ಇಲಾಖೆ ಹಾಗೂ ಖಾಸಗಿ ಸಂಸ್ಥೆಯಾದ ಸ್ಕೈಮೆಟ್‌ ವೆದರ್‌ ಸಂಸ್ಥೆಗಳು ಮುಂಗಾರು ಮಳೆ ಸೇರಿ ವಿವಿಧ ರೀತಿಯಲ್ಲಿ ಹವಾಮಾನ ವರದಿ ನೀಡುತ್ತವೆ. ಹಾಗಾದರೆ, ದೇಶದಲ್ಲಿ ಯಾವ ಸಂಸ್ಥೆಯ ಹವಾಮಾನ ವರದಿ ನಿಜವಾಗುತ್ತದೆ? ಹವಾಮಾನ ಇಲಾಖೆ ಹಾಗೂ ಸ್ಕೈಮೆಟ್‌ ವೆದರ್‌ ಸಂಸ್ಥೆಗಳಲ್ಲಿ ಯಾವ ಸಂಸ್ಥೆಯ ವರದಿ ನಿಖರವಾಗಿರುತ್ತದೆ ಅಥವಾ ವಾಸ್ತವಕ್ಕೆ ಹತ್ತಿರವಾಗಿರುತ್ತದೆ ಎಂಬುದರ ಮಾಹಿತಿ ಇಲ್ಲಿದೆ.

ಕಳೆದ ವರ್ಷದಂತೆ ಈ ಬಾರಿಯೂ ನಿಜವಾಗದ ಐಎಂಡಿ ವರದಿ

ಭಾರತಕ್ಕೆ ಮಾನ್ಸೂನ್‌ ಪ್ರವೇಶದ ಕುರಿತು ಹವಾಮಾನ ಇಲಾಖೆ ನೀಡಿದ ವರದಿಯು ನಿಜವಾಗಿರಲಿಲ್ಲ. ಕಳೆದ ಬಾರಿ ಮೇ 27ರಂದೇ ಮುಂಗಾರು ಆಗಮನವಾಗುತ್ತದೆ ಎಂದು ಐಎಂಡಿ ವರದಿ ನೀಡಿತ್ತು. ಆದರೆ, ವರದಿಯಲ್ಲಿ ಉಲ್ಲೇಖಿಸಿದ ದಿನಾಂಕಕ್ಕಿಂತ ಎರಡು ದಿನ ನಂತರ ಅಂದರೆ, ಮೇ 29ರಂದು ಮುಂಗಾರು ಪ್ರವೇಶವಾಗಿತ್ತು. ಈ ಬಾರಿಯೂ ಜೂನ್‌ 4ಕ್ಕೆ ಪ್ರವೇಶವಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಜೂನ್‌ 4ರಂದು ಮುಂಗಾರು ಪ್ರವೇಶ ಆಗಿಲ್ಲ.

Monsoon Prediction In India

ಇದನ್ನೂ ಓದಿ: Weather Report: ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಇನ್ನೆರೆಡು ದಿನ ಭಾರಿ ವರುಣ; ಬೆಂಗಳೂರಲ್ಲಿ ಮಳೆ ಹೇಗೆ?

ಸ್ಕೈಮೆಟ್‌ ವರದಿ ಹೇಳಿದ್ದೇನು?

ದೇಶದಲ್ಲಿ ಈ ಬಾರಿ ಜೂನ್‌ 7ರಂದು ಮುಂಗಾರು ಪ್ರವೇಶಿಸಲಿದೆ ಎಂದು ಸ್ಕೈಮೆಟ್‌ ಹೇಳಿತ್ತು. ಜೂನ್‌ 7ರ ನಂತರದ ಮೂರು ದಿನ ಅಥವಾ ಅದಕ್ಕಿಂತ ಮೂರು ದಿನ ಮೊದಲು ಮುಂಗಾರು ಪ್ರವೇಶಿಸುತ್ತದೆ ಎಂದು ಹೇಳಿತ್ತು. ಈಗ ಜೂನ್‌ 7 ಅಥವಾ 8ರಂದು ಮುಂಗಾರು ಪ್ರವೇಶವಾಗಲಿದೆ ಎಂದು ಹವಾಮಾನ ಇಲಾಖೆಯೇ ಹೇಳಿದೆ. ಹಾಗಾಗಿ, ಜೂನ್‌ 7ರಂದು ಮುಂಗಾರು ಪ್ರವೇಶಿಸಿದರೆ ಸ್ಕೈಮೆಟ್‌ ವರದಿಯೇ ನಿಜವಾಗಲಿದೆ.

ಭಾರತದಲ್ಲಿ ಈ ಬಾರಿ ವಾಡಿಕೆಯಷ್ಟು ಎಂದರೆ, ಶೇ.96ರಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ. ಇದರಿಂದ ದೇಶದ ರೈತರ ಮುಖದಲ್ಲಿ ಸಂತಸ ಮನೆ ಮಾಡಿದೆ. ಆದರೆ, ಸ್ಕೈಮೆಟ್‌ ವರದಿಯು ಜೂನ್‌ನಲ್ಲಿ ದೇಶಾದ್ಯಂತ ವಾಡಿಕೆಯಷ್ಟು ಮಳೆಯಾಗುವುದಿಲ್ಲ ಎಂದು ತಿಳಿಸಿದೆ. ಇದರಿಂದಾಗಿ ಯಾವ ಸಂಸ್ಥೆಯ ಹವಾಮಾನ ವರದಿ ನಿಜವಾಗಲಿದೆ ಎಂಬ ಕುತೂಹಲ ಮೂಡಿದೆ.

Continue Reading

ಕರ್ನಾಟಕ

ಇನ್ನು ಬೆಂಗಳೂರಿನಿಂದ ಚೆನ್ನೈಗೆ ಎರಡೇ ಗಂಟೆ ಸಾಕು, ಶೀಘ್ರ ಮೈಸೂರು-ಬೆಂಗಳೂರಿಗೂ ಬರಲಿದೆ ಬುಲೆಟ್ ಟ್ರೈನ್!

ಬೆಂಗಳೂರು-ಚೆನ್ನೈ ನಡುವೆ ಸಂಚರಿಸಲು ಈಗ ಕನಿಷ್ಠ ನಾಲ್ಕುವರೆ ಗಂಟೆಯಿಂದ ಆರೂವರೆ ಗಂಟೆ ಬೇಕು. ಆದರೆ, ಸೆಮಿ ಹೈ ಸ್ಪೀಡ್ ಗೇಜ್ ಮಾರ್ಗ ಸಿದ್ಧವಾದರೆ ಕೇವಲ ಎರಡೇ ಗಂಟೆ ಸಾಕು!

VISTARANEWS.COM


on

Edited by

Semi high Speed Train and an AI Generated Image
ಕೃತಕ ಬುದ್ಧಿಮತ್ತೆ(AI)ಯಿಂದ ಸೃಜಿತವಾದ ಪ್ರಾತಿನಿಧಿಕ ಚಿತ್ರ.
Koo

ನವದೆಹಲಿ: ದಕ್ಷಿಣ ಭಾರತದ ಎರಡು ಪ್ರಮುಖ ನಗರಗಳಾದ ಚೆನ್ನೈ (Chennai) ಮತ್ತು ಬೆಂಗಳೂರು (Bengaluru) ಮಧ್ಯೆ ರೈಲಿನಲ್ಲಿ (Train) ಸಂಚರಿಸಲು ಈಗ ಕನಿಷ್ಠ 4 .30 ಗಂಟೆಯಿಂದ 6.30 ಗಂಟೆ ಬೇಕಾಗುತ್ತದೆ. ಆದರೆ, ಶೀಘ್ರದಲ್ಲೇ ಉಭಯ ನಗರಗಳ ನಡುವಿನ ರೈಲು ಪ್ರಯಾಣದ ಅವಧಿ 2 ಗಂಟೆಗೆ ಇಳಿಕೆಯಾಗಲಿದೆ! ಹೌದು, ಭಾರತೀಯ ರೈಲ್ವೆ ಇಲಾಖೆಯು ಹೊಸ ಸೆಮಿ ಹೈಸ್ಪೀಡ್ ಬ್ರಾಡ್ ಗೇಜ್ ಮಾರ್ಗ (semi-high-speed broad gauge line) ಹಾಕಲಿದೆ. ಹಾಗಾಗಿ, ಪ್ರಯಾಣದ ಅವಧಿ ಗರಿಷ್ಠ ಪ್ರಮಾಣದಲ್ಲಿ ಕಡಿಮೆಯಾಗಲಿದೆ ಎಂದು ಮನೀ ಕಂಟ್ರೋಲ್ ವರದಿ ಮಾಡಿದೆ.

ದಕ್ಷಿಣ ರೈಲ್ವೆಯು ಎರಡು ನಗರಗಳ ನಡುವೆ ಹೊಸ ಸೆಮಿ-ಹೈ-ಸ್ಪೀಡ್ ಬ್ರಾಡ್ ಗೇಜ್ ಮಾರ್ಗಕ್ಕಾಗಿ ಅಂತಿಮ ಸ್ಥಳ ಸಮೀಕ್ಷೆಗೆ (FLS) ಟೆಂಡರ್ ಕರೆದಿದೆ. ಉದ್ದೇಶಿತ ಮಾರ್ಗದ ವಿನ್ಯಾಸದ ವೇಗವು ಪ್ರತಿ ಗಂಟೆಗೆ 220 ಕಿ.ಮೀ ಹಾಗೂ ಕಾರ್ಯಾಚರಣೆಯ ವೇಗವು ಪ್ರತಿ ಗಂಟೆಗೆ 200 ಕಿ.ಮೀ. ಇರಲಿದೆ. ಸಮೀಕ್ಷೆ ಕೈಗೊಳ್ಳಲು ರೈಲ್ವೆ ಇಲಾಖೆಯು ಈಗಾಗಲೇ 8.3 ಕೋಟಿ ರೂ. ಹಣವನ್ನು ಮೀಸಲಿಟ್ಟಿದೆ. ಬೆಂಗಳೂರಿನ ಬೈಯಪ್ಪನಹಳ್ಳಿಯಿಂದ ಚೆನ್ನೈ ಸೆಂಟ್ರಲ್ ನಡುವಿನ ಮಾರ್ಗವನ್ನು ಸಮೀಕ್ಷೆ ಮಾಡಲಾಗುತ್ತದೆ. ಇದು ಅಂದಾಜು 350 ಕಿ.ಮೀ ಇರಲಿದೆ.

ಆಯ್ದ ಸಂಸ್ಥೆಯು ವೈಮಾನಿಕ ಲಿಡಾರ್ (LiDAR) ಸಮೀಕ್ಷೆಯನ್ನು ನಡೆಸುವುದು, ವಿವರವಾದ ಅಂತಿಮ ಜೋಡಣೆಯನ್ನು ಅಭಿವೃದ್ಧಿಪಡಿಸುವುದು, ಸಂಚಾರ ಅಧ್ಯಯನವನ್ನು ಕೈಗೊಳ್ಳುವುದು, ವಿವರವಾದ ಯೋಜನೆಗಳು ಮತ್ತು ಅಂದಾಜುಗಳನ್ನು ಸಿದ್ಧಪಡಿಸುವುದು ಮತ್ತು ವಿವರವಾದ ಯೋಜನಾ ವರದಿಯನ್ನು (ಡಿಪಿಆರ್) ಸಲ್ಲಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ. ಮೂರು ತಿಂಗಳಲ್ಲಿ ಸಮೀಕ್ಷಾ ವರದಿ ಸಲ್ಲಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಪ್ರಸ್ತಾವಿತ ಕಾರ್ಯಾಚರಣೆಯ ವೇಗವು ಪ್ರತಿ ಗಂಟೆಗೆ 200 ಕಿ.ಮೀಟರ್ ಆಗಿದ್ದರೆ, ಸರಾಸರಿ ವೇಗವು ನಿಲುಗಡೆಗಳ ಸಂಖ್ಯೆ ಮತ್ತು ಜೋಡಣೆಯಂತಹ ವಿವಿಧ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಈ ಮಾರ್ಗವನ್ನು 180 ಕಿಮೀ ವೇಗದಲ್ಲಿ ಓಡಲು ಅನುಕೂಹಲವಾಗುವಂತೆ ಮಾಡಲಾಗುತ್ತದೆ. ಸೂಕ್ತವಲ್ಲದ ಟ್ರ್ಯಾಕ್‌ಗಳ ಕಾರಣದಿಂದಾಗಿ ವಂದೇ ಭಾರತ್ ರೈಲುಗಳು ಪ್ರತಿಗಂಟೆಗೆ ಗರಿಷ್ಠ ವೇಗವ 130 ಕಿ.ಮೀ.ಗೆ ಸಿಮೀತವಾಗಿವೆ. ಆದಾಗ್ಯೂ, ಹೊಸ ಸೆಮಿ-ಹೈ-ಸ್ಪೀಡ್ ರೈಲು ಬ್ರಾಡ್ ಗೇಜ್ ಮಾರ್ಗದೊಂದಿಗೆ, ವಂದೇ ಭಾರತ್ ರೈಲುಗಳನ್ನು ಸಹ ಪೂರ್ಣ ಸಾಮರ್ಥ್ಯದಲ್ಲಿ ಓಡಿಸಬಹುದಾಗಿದೆ ಎನ್ನುತ್ತಿದ್ದಾರೆ ತಜ್ಞರು.

ಈ ಮಧ್ಯೆ, ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೊರೇಷನ್ ಲಿ(NHSRCL) ಚೆನ್ನೈ, ಬೆಂಗಳೂರು ಮತ್ತು ಮೈಸೂರು ನಗರಗಳನ್ನು ಸಂಪರ್ಕಿಸುವ ಬುಲೆಟ್ ಟ್ರೈನ್ ಪ್ರಾಜೆಕ್ಟ್ ಕುರಿತು ಚಿಂತನೆ ಮಾಡುತ್ತಿದೆ. ಅಂದರೆ, ಮೈಸೂರು-ಬೆಂಗಳೂರು-ಚೆನ್ನೈ ಮಧ್ಯೆ ಬುಲೆಟ್ ಟ್ರೈನ್ ಓಡಿಸುವ ಸಾಧ್ಯತೆಗಳಿವೆ. ಈ ಬುಲೆಟ್ ಟ್ರೈನ್ ಗರಿಷ್ಠ ವೇಗವು ಗಂಟೆಗೆ 350 ಕಿ.ಮೀ ಇರಲಿದೆ. ಕಾರ್ಯಾಚರಣೆಯ ವೇಗವು 320 ಕಿ.ಮೀ ಇದ್ದರೆ, ಸರಾಸರಿ ವೇಗವು 250 ಕಿ.ಮೀ. ಇರಲಿದೆ.

ಈ ಸುದ್ದಿಯನ್ನೂ ಓದಿ: Vande Bharat Express : ಬೆಂಗಳೂರು-ಧಾರವಾಡ ನಡುವೆ ಜುಲೈನಿಂದ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಸಂಚಾರ, ಇಲ್ಲಿದೆ ಡಿಟೇಲ್ಸ್

ಈ ಯೋಜನೆಯು ಆರು ಹೊಸ ಹೈಸ್ಪೀಡ್ ರೈಲು (ಎಚ್‌ಎಸ್‌ಆರ್) ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸುವ ಕೇಂದ್ರ ಸರ್ಕಾರದ ಯೋಜನೆಯ ಭಾಗವಾಗಿದೆ. ಹೀಗಿದ್ದಾಗ್ಯೂ, ಮೈಸೂರು-ಬೆಂಗಳೂರು-ಚೆನ್ನೈ ಕಾರಿಡಾರ್‌ಗೆ ಪೂರ್ವಸಿದ್ಧತಾ ಕೆಲಸ ಮಾತ್ರ ಪ್ರಾರಂಭವಾಗಿದೆ ಎಂಬುದನ್ನು ಗಮನಿಸಬೇಕು.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading

ಕರ್ನಾಟಕ ಎಲೆಕ್ಷನ್

Modi Magic: ಬರೀ ಮೋದಿ ಹೆಸರಿಗೆ ವೋಟ್ ಬರಲ್ಲ! ಬಿಜೆಪಿಗೆ ಆರೆಸ್ಸೆಸ್ ಮುಖವಾಣಿ ಪತ್ರಿಕೆಯಿಂದ ಫುಲ್ ಕ್ಲಾಸ್

Modi Magic: ಕರ್ನಾಟಕ ಚುನಾವಣೆ ಸೋತ ಬೆನ್ನಲ್ಲೇ ಆರೆಸ್ಸೆಸ್ ಚಿಂತಕರ ಚಾವಡಿ ಹೊಸ ನಿಟ್ಟಿನಲ್ಲಿ ಯೋಚಿಸುತ್ತಿರುವಂತಿದೆ. ಕೇವಲ ಮೋದಿ, ಹಿಂದುತ್ವದಿಂದಲೇ ಮತ ಬರುವುದಿಲ್ಲಎಂದು ಬಿಜೆಪಿಗೆ ಎಚ್ಚರಿಸಿದೆ.

VISTARANEWS.COM


on

Edited by

Narendra Modi
Koo

ಮುಂಬೈ, ಮಹಾರಾಷ್ಟ್ರ: ಕರ್ನಾಟಕದಲ್ಲಿ ಬಿಜೆಪಿ ಹೀನಾಯವಾಗಿ ಸೋತಿರುವುದು ಬಿಜೆಪಿಯ ಥಿಂಕ್‌ ಟ್ಯಾಂಕ್‌ನಲ್ಲಿ ಪರ್ಯಾಯ ಯೋಚನೆಗೆ ಕಾರಣವಾಗಿದೆಯೇ? ಹೌದು, ಇಂಥದೊಂದು ಅನುಮಾನ ಬರಲು ಕಾರಣವಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS)ದ ಮುಖವಾಣಿಯಾಗಿರುವ ಆರ್ಗೈನಸರ್ (Organizer) ವಾರ ಪತ್ರಿಕೆಯಲ್ಲಿ ಪ್ರಕಟವಾದ ವರದಿಯೊಂದು ಇದಕ್ಕೆ ಪುಷ್ಟಿ ನೀಡುತ್ತದೆ. ಚುನಾವಣೆ ಗೆಲ್ಲಲು ಮೋದಿ (Modi Magic) ನಾಮಬಲ, ಹಿಂದುತ್ವವು (hindutva) ಪ್ರತಿಬಾರಿಯೂ ಕೆಲಸ ಮಾಡುವುದಿಲ್ಲ ಎಂದು ಕಟುವಾಗಿ ಟೀಕಿಸಿದೆ.

ಕರ್ನಾಟಕದಲ್ಲಿನ ಹೀನಾಯ ಸೋಲು ಮತ್ತು ಮುಂಬರುವ 2024ರ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಈ ವರದಿಯು ಮಹತ್ವ ಪಡೆದುಕೊಂಡಿದೆ. ಬಿಜೆಪಿಯ ಎಲ್ಲ ಚುನಾವಣೆಗಳನ್ನು ಮೋದಿ ಮ್ಯಾಜಿಕ್‌ನಿಂದಲೇ ನಡೆಯುತ್ತದೆ ಎಂದು ಭಾವಿಸುತ್ತದೆ. ಆದರೆ, ಈಗ ಮೋದಿ ಮ್ಯಾಜಿಕ್ ನಡೆಯುತ್ತಿಲ್ಲ ಎಂಬುದು ಸಾಬೀತಾಗಿದೆ ಎಂಬ ರೀತಿಯಲ್ಲಿ ಆರೆಸ್ಸೆಸ್ ಮುಖವಾಣಿ ವರದಿಯನ್ನು ಪ್ರಕಟಿಸಿದೆ. ಚುನಾವಣೆಗಳನ್ನು ಗೆಲ್ಲಲು ಬಿಜೆಪಿ ಪ್ರಭಾವಿ ನಾಯಕತ್ವ ಅಗತ್ಯವಾಗಿದೆ. ಪ್ರಾದೇಶಿಕವಾಗಿ ಆಶೋತ್ತರಗಳನ್ನು ಈಡೇರಿಸುವ ಪ್ರಯತ್ನ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟಿದೆ.

ಪ್ರಾದೇಶಿಕ ಮಟ್ಟದಲ್ಲಿ ಪ್ರಬಲ ನಾಯಕತ್ವ ಮತ್ತು ಪರಿಣಾಮಕಾರಿ ಪ್ರಯತ್ನವಿಲ್ಲದೇ, ಪ್ರಧಾನಿ ಮೋದಿಯವರ ವರ್ಚಸ್ಸು ಮತ್ತು ಹಿಂದುತ್ವವು ಸೈದ್ಧಾಂತಿಕ ವಿಷಯಗಳು ಚುನಾವಣೆ ಗೆಲ್ಲಲು ಸಾಕಾಗುವುದಿಲ್ಲ ಪತ್ರಿಕೆಯಲ್ಲಿ ತಿಳಿಸಲಾಗಿದೆ. ಕರ್ನಾಟಕ ಚುನಾವಣಾ ಫಲಿತಾಂಶಗಳು ಕಾಂಗ್ರೆಸ್ ಪರವಾಗಿ ಹೊರಬಂದಿವೆ. ಆದರೆ 2024 ರ ಲೋಕಸಭೆ ಚುನಾವಣೆಯಲ್ಲಿ ಸೋಲುವುದು ಒಳ್ಳೆಯ ಹಾದಿಯಂತೂ ಅಲ್ಲ. ಹಾಗಾಗಿ, ಪರಿಸ್ಥಿತಿಯನ್ನು ಅವಲೋಕಿಸಲು ಬಿಜೆಪಿಗೆ ಇದು ಸರಿಯಾದ ಸಮಯ ಎಂದು ಅದು ಹೇಳಿದೆ.

ಕರ್ನಾಟಕದ ಚುನಾವಣೆಯಲ್ಲಿ ಭ್ರಷ್ಟಾಚಾರವು ಪ್ರಮುಖ ವಿಷಯವಾಗಿತ್ತು. ಮೋದಿ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭ್ರಷ್ಟಾಚಾರದ ಆರೋಪಗಳನ್ನು ಸಮರ್ಥಿಸಿಕೊಳ್ಳಬೇಕಾಯಿತು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Jagadish Shettar: ನನ್ನೊಬ್ಬನನ್ನು ಸೋಲಿಸಲು ಹೋಗಿ ಬಿಜೆಪಿಯೇ ಸೋತಿದೆ: ಜಗದೀಶ್‌ ಶೆಟ್ಟರ್

ಕರ್ನಾಟಕ ಚುನಾವಣೆಯಲ್ಲಿ ಆಡಳಿತ ಪಕ್ಷವು (ಬಿಜೆಪಿ) ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳೊಂದಿಗೆ ಮತದಾರರನ್ನು ಹುರಿದುಂಬಿಸಲು ಅತ್ಯುತ್ತಮವಾಗಿ ಪ್ರಯತ್ನಿಸಿತು. ಆದರೆ, ಕಾಂಗ್ರೆಸ್ ಸ್ಥಳೀಯ ಮಟ್ಟದಲ್ಲಿ ತನ್ನ ದಾಳಿ ಉರುಳಿಸಿತು. ಹಾಗಾಗಿ, ಅತಿ ಹೆಚ್ಚು ಮತದಾನವಾದ ಈ ಚುನಾವಣೆಯಲ್ಲಿ ಬಿಜೆಪಿಗೆ ತನ್ನ ಈ ಹಿಂದಿನ ಮತ ಪ್ರಮಾಣವನ್ನು ಉಳಿಸಿಕೊಳ್ಳಲು ವಿಫಲವಾಯಿತು. ಇದರಿಂದ ಹೀನಾಯವಾಗಿ ಸೋತಿತು. ಹಾಲಿ ಸಚಿವರ ವಿರುದ್ಧದ ಆಡಳಿತ ವಿರೋಧಿ ನಿಲುವು ಬಿಜೆಪಿಗೆ ಮುಳುವಾಯಿತು ಎಂದು ಆರ್ಗನೈಸರ್ ಹೇಳಿದೆ.

ದೇಶದ ಇನ್ನಷ್ಟು ಕುತೂಹಲಕರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading
Advertisement
72 Hoorain bollywood film is ready to release in India
ದೇಶ8 mins ago

72 Hoorain: ಕಾಶ್ಮೀರ ಫೈಲ್ಸ್, ಕೇರಳ ಸ್ಟೋರಿ ಬಳಿಕ ಮತ್ತೊಂದು ವಿವಾದಾತ್ಮಕ ಸಿನಿಮಾ ’72 ಹೂರೇ’ ತೆರೆಗೆ ಬರಲು ಸಿದ್ಧ

World Environment Day celebration at yadgiri
ಕರ್ನಾಟಕ14 mins ago

Yadgiri News: ಪರಿಸರ ಸಂರಕ್ಷಣೆಗೆ ಇರಲಿ ಎಲ್ಲರ ಕಾಳಜಿ: ಸಂಗಮೇಶ ಉಪಾಸೆ

New Parliament Buliding and loksabha election 2024
ಕರ್ನಾಟಕ14 mins ago

Lok Sabha Election 2024 : ಲೋಕಸಭೆಯಲ್ಲಿ ಕಾಂಗ್ರೆಸ್‌ ಮಣಿಸಲು ಬಿಜೆಪಿ-ಜೆಡಿಎಸ್‌ ಮೈತ್ರಿ ಪ್ರಸ್ತಾಪ!

World Environment Day in Raichur district
ಕರ್ನಾಟಕ15 mins ago

Raichur News: ವಿಶ್ವ ಪರಿಸರ ದಿನಾಚರಣೆಯಲ್ಲಿ ಪ್ಲಾಸ್ಟಿಕ್ ವಸ್ತುಗಳ ಬಳಕೆಗೆ ಕಡಿವಾಣಕ್ಕೆ ವಿಶೇಷ ಜಾಗೃತಿ

Saalumarada Thimmakka World Environment Day
ಕರ್ನಾಟಕ28 mins ago

World Environment Day : ಕೆರೆ ಉಳಿಸಿ ಮರ ಬೆಳೆಸಿ ಎಂದ ಸಾಲುಮರದ ತಿಮ್ಮಕ್ಕ; ವಿಸ್ತಾರ ಅಭಿಯಾನಕ್ಕೆ ಭಾರಿ ಸ್ಪಂದನೆ

Congratulatory meeting by former minister Araga Jnanedra
ಕರ್ನಾಟಕ33 mins ago

Shivamogga News : ಮತದಾರರ ಸಮಸ್ಯೆಗೆ ಸ್ಪಂದಿಸಿರುವುದೇ ನನ್ನ ಗೆಲುವಿಗೆ ಕಾರಣ: ಆರಗ ಜ್ಞಾನೇಂದ್ರ

Sakshi Malik
ಕ್ರಿಕೆಟ್42 mins ago

Wrestlers Protest : ಕುಸ್ತಿಪಟುಗಳ ಬಾಯಿ ಮುಚ್ಚಿಸಿದರೇ ಅಮಿತ್​ ಶಾ? ಕೆಲಸಕ್ಕೆ ಮರಳಿದ ಸಾಕ್ಷಿ

World Environment Day celebration at Shirsi Forest College
ಉತ್ತರ ಕನ್ನಡ51 mins ago

Uttara Kannada News : ಪರಿಸರ ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ: ಡಾ. ಆರ್. ವಾಸುದೇವ್

Monsoon Forecast 2023
ದೇಶ55 mins ago

Monsoon Forecast 2023 : ಹವಾಮಾನ ಇಲಾಖೆ VS ಸ್ಕೈಮೆಟ್; ಹೇಗಿರಲಿದೆ ಈ ಬಾರಿಯ ಮುಂಗಾರು ಮಳೆ?

Bus accident in aurad
ಕರ್ನಾಟಕ1 hour ago

ಸರ್ಕಾರಿ ಬಸ್ ಓಡಿಸಿದ ಖಾಸಗಿ ವ್ಯಕ್ತಿ; ಕ್ರೂಸರ್‌ಗೆ ಡಿಕ್ಕಿ, ತಪ್ಪಿತು ಭಾರೀ ಅನಾಹುತ

7th Pay Commission
ನೌಕರರ ಕಾರ್ನರ್7 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ4 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ15 hours ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ4 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

Village Accountant Recruitment
ಉದ್ಯೋಗ4 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike Order from Govt
ನೌಕರರ ಕಾರ್ನರ್3 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ6 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ7 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Teacher Transfer
ನೌಕರರ ಕಾರ್ನರ್8 months ago

ಸೇವಾ ನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಡ್ತಿ; ಸದ್ಯವೇ ಸರ್ಕಾರದಿಂದ ಗುಡ್‌ ನ್ಯೂಸ್‌?

smartphone
ವಾಣಿಜ್ಯ2 months ago

Mobile export : ಭಾರತದಿಂದ 2022-23ರಲ್ಲಿ 85,000 ಕೋಟಿ ರೂ. ಮೊಬೈಲ್‌ ಫೋನ್‌ ರಫ್ತು

Chakravarthy Sulibele and MB Patil
ಕರ್ನಾಟಕ8 hours ago

Chakravarthy Sulibele: ಜೈಲಿಗೆ ಕಳುಹಿಸಲೇ ಬೇಕು ಅಂತಿದ್ದರೆ ಬನ್ನಿ, ನಾನೂ ನೋಡ್ತೇನೆ: ಎಂಬಿಪಿಗೆ ಸೂಲಿಬೆಲೆ ಸವಾಲ್‌

Sevanthige Flower Farming
ಕೃಷಿ8 hours ago

Krishi Khajane : ಬಿಳಿ ಸೇವಂತಿಗೆ ಬೆಳೆದರೆ ಒಂದು ಎಕರೆಗೆ 5 ಲಕ್ಷ ರೂ. ಲಾಭ!

Horoscope Today
ಪ್ರಮುಖ ಸುದ್ದಿ15 hours ago

Horoscope Today : ಈ ನಾಲ್ಕು ರಾಶಿಯ ಉದ್ಯೋಗಿಗಳಿಗೆ ಇಂದು ಅದೃಷ್ಟದ ದಿನವಂತೆ!

Mangalore Moral Policing News
ಉಡುಪಿ1 day ago

Video: ನಮ್ಮ ನಿದ್ದೆಗೆಡಿಸಿದ್ದಾರೆ; ಮುಸ್ಲಿಮರೊಂದಿಗೆ ಬೀಚ್​​ಗೆ ಬಂದಿದ್ದ ಹುಡುಗಿಯರ ವಿರುದ್ಧ ನಿಂತ ಮಹಿಳೆಯರು

horoscope today
ಪ್ರಮುಖ ಸುದ್ದಿ2 days ago

Horoscope Today : ಈ ರಾಶಿಯವರು ಇಂದು ವಾಹನ ಚಲಾಯಿಸುವಾಗ ಎಚ್ಚರಿಕೆ ವಹಿಸಲೇಬೇಕು!

South facing house vastu
ಭವಿಷ್ಯ2 days ago

Vastu Tips : ದಕ್ಷಿಣ ದಿಕ್ಕಿಗೆ ಬಾಗಿಲಿರುವ ಮನೆ ಕೂಡ ಶುಭವಂತೆ! ಹೌದೇ? ಏನೆನ್ನುತ್ತದೆ ವಾಸ್ತು ಶಾಸ್ತ್ರ?

jackfruit
ಕೃಷಿ2 days ago

Krishi Khajane : ಹುಲುಸಾಗಿ ಹಲಸು ಬೆಳೆಯಿರಿ, ಎಕರೆಗೆ 2.5 ಲಕ್ಷ ಆದಾಯ ಪಡೆಯಿರಿ!

Bus Driver
ಕರ್ನಾಟಕ2 days ago

Viral Video: ಬೆಂಗಳೂರು ಟ್ರಾಫಿಕ್‌ನಲ್ಲೇ ಊಟ ಮಾಡಿ ಮುಗಿಸಿದ ಡ್ರೈವರ್! ಇಲ್ಲಿದೆ ನೋಡಿ ವಿಡಿಯೊ

horoscope today
ಪ್ರಮುಖ ಸುದ್ದಿ3 days ago

Horoscope Today : ಈ ಮೂರು ರಾಶಿಯವರಿಗೆ ಖರ್ಚು ಹೆಚ್ಚು; ಇಂದು ನಿಮ್ಮ ಭವಿಷ್ಯ ಹೀಗಿದೆ

Siddaramaiah
ಕರ್ನಾಟಕ3 days ago

Congress Guarantee : ಹೂ ಈಸ್‌ ಯುವರ್‌ ಯಜಮಾನಿ? ಸಿದ್ದರಾಮಯ್ಯ ಸುದ್ದಿಗೋಷ್ಠಿಯ ತಮಾಷೆ ಪ್ರಸಂಗಗಳು ಇಲ್ಲಿವೆ!

ಟ್ರೆಂಡಿಂಗ್‌

error: Content is protected !!