Drown In Water: ಭೀಕರ ದುರಂತ; ನಾಲ್ವರು ಮಕ್ಕಳು ಸೇರಿ ಐವರು ನೀರುಪಾಲು - Vistara News

ದೇಶ

Drown In Water: ಭೀಕರ ದುರಂತ; ನಾಲ್ವರು ಮಕ್ಕಳು ಸೇರಿ ಐವರು ನೀರುಪಾಲು

Drown In Water:ಪುಣೆ ಎಸ್ಪಿ ಪಂಕಜ್ ದೇಶ್‌ಮುಖ್‌ ಈ ಬಗ್ಗೆ ಮಾಹಿತಿ ನೀಡಿದ್ದು, 2 ಶವಗಳನ್ನು ಹೊರತೆಗೆಯಲಾಗಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಎಲ್ಲಾ ಐದು ಜನರು ಪುಣೆ ಸಯ್ಯದ್ ನಗರಕ್ಕೆ ಸೇರಿದ ಒಂದೇ ಕುಟುಂಬದವರು ಎಂದು ಹೇಳಿದ್ದಾರೆ. ನಾವು 40 ವರ್ಷದ ಮಹಿಳೆ ಮತ್ತು 13 ವರ್ಷದ ಬಾಲಕಿಯ ಶವಗಳನ್ನು ವಶಪಡಿಸಿಕೊಂಡಿದ್ದೇವೆ. ಘಟನೆಯಲ್ಲಿ 6 ವರ್ಷದ ಇಬ್ಬರು ಬಾಲಕಿಯರು ಹಾಗೂ 4 ವರ್ಷದ ಬಾಲಕ ನಾಪತ್ತೆಯಾಗಿದ್ದಾರೆ.

VISTARANEWS.COM


on

Drown In Water
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬೈ:ಮಹಾರಾಷ್ಟ್ರದ ಲೋನಾವಾಲಾದಲ್ಲಿ ಭಾನುವಾರ ಎಡೆಬಿಡದೆ ಸುರಿಯುತ್ತಿರುವ ಮಳೆ(Heavy Rain)ಯಿಂದಾಗಿ ಭೂಶಿ ಅಣೆಕಟ್ಟು(Bhushi Dam) ತುಂಬಿ ಹರಿದ ಪರಿಣಾಮ ನಾಲ್ವರು ಮಕ್ಕಳು ಸೇರಿದಂತೆ ಕನಿಷ್ಠ ಐವರು ನೀರಿನಲ್ಲಿ ಮುಳುಗಿ(Drown In Water) ಸಾವನ್ನಪ್ಪಿದ್ದಾರೆ. ಮಧ್ಯಾಹ್ನ 1:30ಕ್ಕೆ ಘಟನೆ ನಡೆದಿದ್ದು, ಶೋಧ ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿವೆ.

ಪುಣೆ ಎಸ್ಪಿ ಪಂಕಜ್ ದೇಶ್‌ಮುಖ್‌ ಈ ಬಗ್ಗೆ ಮಾಹಿತಿ ನೀಡಿದ್ದು, 2 ಶವಗಳನ್ನು ಹೊರತೆಗೆಯಲಾಗಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಎಲ್ಲಾ ಐದು ಜನರು ಪುಣೆ ಸಯ್ಯದ್ ನಗರಕ್ಕೆ ಸೇರಿದ ಒಂದೇ ಕುಟುಂಬದವರು ಎಂದು ಹೇಳಿದ್ದಾರೆ. ನಾವು 40 ವರ್ಷದ ಮಹಿಳೆ ಮತ್ತು 13 ವರ್ಷದ ಬಾಲಕಿಯ ಶವಗಳನ್ನು ವಶಪಡಿಸಿಕೊಂಡಿದ್ದೇವೆ. ಘಟನೆಯಲ್ಲಿ 6 ವರ್ಷದ ಇಬ್ಬರು ಬಾಲಕಿಯರು ಹಾಗೂ 4 ವರ್ಷದ ಬಾಲಕ ನಾಪತ್ತೆಯಾಗಿದ್ದಾರೆ. ಅವರು ಭೂಶಿ ಅಣೆಕಟ್ಟಿನಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಜಲಪಾತದಿಂದ ಕೆಳಕ್ಕೆ ಬಿದ್ದು ನೀರುಪಾಲಾಗಿದ್ದಾರೆ ಎಂದು ದೇಶಮುಖ್ ಹೇಳಿದ್ದಾರೆ.

ಎರಡು ವಾರಗಳ ಹಿಂದೆ ಜಮೀನಿನಲ್ಲಿ ನೀರು ತುಂಬಿದ್ದ ಆಳವಾದ ಗುಂಡಿಗೆ ಬಿದ್ದು ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ಗ್ರಾಮದಲ್ಲಿ ನಡೆದಿತ್ತು.. ಗುಂಡಿಗೆ ಬಿದ್ದ ಬಾಲಕಿಯನ್ನು ರಕ್ಷಿಸಲು ಹೋಗಿ ಇನ್ನಿಬ್ಬರು ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ನೀಲಮ್ಮ ಖಿಲಾರಹಟ್ಟಿ (16), ಮುತ್ತಪ್ಪ ಖಿಲಾರಹಟ್ಟಿ (24) ಹಾಗೂ ಶಿವು ಯಾಳವಾರ (25) ಮೃತರು.

ಹಡಲಗೇರಿ ಗ್ರಾಮದ ಚಿನ್ನಪ್ಪ ತಳವಾರ ಎಂಬುವವರ ಜಮೀನಿನಲ್ಲಿ ಎಮ್ಮೆ ಮೇಯಿಸಲು ಬಾಲಕಿ ನೀಲಮ್ಮ ಹೋಗಿದ್ದಳು. ಈ ವೇಳೆ ಎಮ್ಮೆಗೆ ನೀರು ಕುಡಿಸಲು ಗುಂಡಿ ಬಳಿ ಬಂದಾಗ ಕಾಲು ಜಾರಿ ನೀರಿಗೆ ಬಿದ್ದಿದ್ದಾಳೆ. ಇದನ್ನು ಕಂಡು ಆಕೆಯನ್ನು ರಕ್ಷಣೆ ಮಾಡಲು ಬಂದ ಸಂಬಂಧಿಕ ಮುತ್ತಪ್ಪ ಖಿಲಾರಹಟ್ಟಿ ನೀರಿನಲ್ಲಿ ಸಿಲುಕಿದ್ದಾನೆ. ಅವರಿಬ್ಬರೂ ಹೊರ ಬರಲಾರದೇ ಪರದಾಡುತ್ತಿದ್ದಾಗ ಅವರನ್ನು ಕಾಪಾಡಲು ಹೋದ ಶಿವು ಯಾಳವಾರ ಕೂಡ ನೀರು ಪಾಲಾಗಿದ್ದ.

ಇದನ್ನೂ ಓದಿ: Indian Armed Forces: ಸಹಪಾಠಿಗಳು ಈ ಭಾರತೀಯ ಸೇನೆ ಮತ್ತು ನೌಕಾಪಡೆ ಮುಖ್ಯಸ್ಥರು; ಇದು ದೇಶದ ಇತಿಹಾಸದಲ್ಲೇ ಮೊದಲು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Narendra Modi: ಅಂಬೇಡ್ಕರ್‌ರನ್ನು ಷಡ್ಯಂತ್ರದಿಂದ ಸೋಲಿಸಿದ ನೆಹರೂ; ಕಾಂಗ್ರೆಸ್‌ನಿಂದ ದಲಿತರ ಶೋಷಣೆ ಎಂದ ಮೋದಿ

Narendra Modi: ಕಾಂಗ್ರೆಸ್‌ ಎಂದಿಗೂ ರಾಜಕೀಯ ಸ್ವಾರ್ಥಕ್ಕಾಗಿ ಷಡ್ಯಂತ್ರ, ಕೀಳು ರಾಜಕೀಯ ಮಾಡಿದೆ. ಇದೇ ಕಾರಣದಿಂದಾಗಿ ಸೀತಾರಾಮ್‌ ಕೇಸರಿ ಅವರಿಗೆ ಕಾಂಗ್ರೆಸ್‌ ಮೋಸ ಮಾಡಿತು. ಇತಿಹಾಸದುದ್ದಕ್ಕೂ ಕಾಂಗ್ರೆಸ್‌ ತನ್ನ ಲಾಭಕ್ಕೋಸ್ಕರ ಕೆಲಸ ಮಾಡಿತೇ ಹೊರತು, ದೇಶದ ಏಳಿಗೆಗೆ ದುಡಿಯಲಿಲ್ಲ ಎಂದು ಸಂಸತ್‌ನಲ್ಲಿ ಕಾಂಗ್ರೆಸ್‌ ವಿರುದ್ಧ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.

VISTARANEWS.COM


on

Narendra Modi
Koo

ನವದೆಹಲಿ: ಸಂಸತ್ತಿನ ಕೆಳಮನೆಯಾದ ಲೋಕಸಭೆಯಲ್ಲಿ (Lok Sabha) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಷ್ಟ್ರಪತಿ ಅವರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡಿದರು. ದೇಶದ ಅಭಿವೃದ್ಧಿ, ವಿಕಸಿತ ಭಾರತದ ಕಲ್ಪನೆಯ ಜತೆಗೆ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು. “ದೇಶದ ಮಹಾನ್‌ ವ್ಯಕ್ತಿಗಳಿಗೆ ಕಾಂಗ್ರೆಸ್‌ ಅವಮಾನ ಮಾಡಿದೆ. ಅದರಲ್ಲೂ, ಸ್ವಾತಂತ್ರ್ಯದ ಬಳಿಕ ಡಾ.ಬಿ.ಆರ್.ಅಂಬೇಡ್ಕರ್‌ ಅವರನ್ನು ಜವಾಹರ ಲಾಲ್‌ ನೆಹರು (Jawaharlal Nehru) ಅವರು ಷಡ್ಯಂತ್ರದಿಂದ ಸೋಲಿಸಿದರು” ಎಂದು ದೂರಿದರು.

“ದೇಶದ ಮಹಾನ್‌ ವ್ಯಕ್ತಿಗಳಿಗೆ, ಗಣ್ಯರಿಗೆ, ಧೀಮಂತ ನಾಯಕರಿಗೆ ಕಾಂಗ್ರೆಸ್‌ ಅವಮಾನ, ಮೋಸ ಮಾಡಿದೆ. ಅಂಬೇಡ್ಕರ್‌ ಅವರನ್ನು ಕಾಂಗ್ರೆಸ್‌ ಷಡ್ಯಂತ್ರದಿಂದ ಸೋಲಿಸಿತು. ಅಷ್ಟೇ ಅಲ್ಲ, ಜಗಜೀವನ್‌ ರಾಮ್‌ ಅವರು ಪ್ರಧಾನಿಯಾಗುವುದನ್ನು ಇಂದಿರಾ ಗಾಂಧಿ ಅವರು ತಪ್ಪಿಸಿದರು. ಜಗಜೀವನ್‌ ರಾಮ್‌ ಅವರು ಪ್ರಧಾನಿಯಾಗಬಾರದು ಎಂಬುದಾಗಿ ಇಂದಿರಾ ಗಾಂಧಿ ಅವರು ಬರೆದ ಪತ್ರದ ಬಗ್ಗೆ ಪುಸ್ತಕವೊಂದರಲ್ಲಿ ಉಲ್ಲೇಖಿಸಲಾಗಿದೆ” ಎಂದು ಮೋದಿ ತಿಳಿಸಿದರು.

“ಕಾಂಗ್ರೆಸ್‌ ಎಂದಿಗೂ ರಾಜಕೀಯ ಸ್ವಾರ್ಥಕ್ಕಾಗಿ ಷಡ್ಯಂತ್ರ, ಕೀಳು ರಾಜಕೀಯ ಮಾಡಿದೆ. ಇದೇ ಕಾರಣದಿಂದಾಗಿ ಸೀತಾರಾಮ್‌ ಕೇಸರಿ ಅವರಿಗೆ ಕಾಂಗ್ರೆಸ್‌ ಮೋಸ ಮಾಡಿತು. ಇತಿಹಾಸದುದ್ದಕ್ಕೂ ಕಾಂಗ್ರೆಸ್‌ ತನ್ನ ಲಾಭಕ್ಕೋಸ್ಕರ ಕೆಲಸ ಮಾಡಿತೇ ಹೊರತು, ದೇಶದ ಏಳಿಗೆಗೆ ದುಡಿಯಲಿಲ್ಲ. ಇದೇ ಕಾರಣಕ್ಕಾಗಿ ಕಾಂಗ್ರೆಸ್‌ ಸೈನಿಕರ ಬಗ್ಗೆಯೂ ಅನುಮಾನದಿಂದ ಮಾತನಾಡುವ ಮೂಲಕ ಯೋಧರಿಗೆ ಅವಮಾನ ಮಾಡಿದೆ” ಎಂದು ಟೀಕಿಸಿದರು.

“ದೇಶದ ಜನರು ಕಾಂಗ್ರೆಸ್‌ಗೆ ಒಂದು ಜನಾದೇಶ ನೀಡಿದ್ದಾರೆ. ನೀವು ಪ್ರತಿಪಕ್ಷದಲ್ಲಿಯೇ ಕುಳಿತುಕೊಳ್ಳಿ, ಹೀಗೆಯೇ ಗಲಾಟೆ ಮಾಡಿ, ಕಿರುಚುತ್ತಲೇ ಇರಿ ಎಂಬುದು ಜನರ ಆದೇಶವಾಗಿದೆ. ಕಾಂಗ್ರೆಸ್‌ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸತತ ಮೂರನೇ ಅವಧಿಗೆ ಕಾಂಗ್ರೆಸ್‌ 100 ಸೀಟುಗಳನ್ನು ಕೂಡ ಗೆಲ್ಲುವಲ್ಲಿ ವಿಫಲವಾಗಿದೆ. ಕಾಂಗ್ರೆಸ್‌ನ ಇತಿಹಾಸದಲ್ಲಿಯೇ ಇದು ಮೂರನೇ ಅತಿ ದೊಡ್ಡ ಸೋಲಾಗಿದೆ. ಮೂರನೇ ಕಳಪೆ ಪ್ರದರ್ಶನವಾಗಿದೆ” ಎಂದು ಮೋದಿ ಗುಡುಗಿದರು.

ನೂತನ ಸಂಸದರಿಗೆ ಅಭಿನಂದನೆ

ನೂತನ ಸಂಸದರಿಗೆ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದರು. ಸಂಸತ್‌ಗೆ ಮೊದಲ ಬಾರಿ ಆಯ್ಕೆಯಾಗಿರುವ ನೂತನ ಸಂಸದರಿಗೆ ಅಭಿನಂದನೆಗಳು. ನೂತನ ಸಂಸದರು ಸದನದ ನಿಯಮಗಳನ್ನು, ಶಿಷ್ಟಾಚಾರಗಳನ್ನು ಅಚ್ಚುಕಟ್ಟಾಗಿ ಪಾಲಿಸುವ ಮೂಲಕ ಅನುಭವಿ ಸಂಸದರಂತೆ ವರ್ತಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ನೂತನ ಸಂಸದರು ಅಧಿವೇಶನದ ಚರ್ಚೆಯಲ್ಲಿ ಪಾಲ್ಗೊಂಡಿರುವುದು ಕೂಡ ಸಕಾರಾತ್ಮಕ ಸಂಗತಿಯಾಗಿದೆ.

ಇದನ್ನೂ ಓದಿ: Narendra Modi: ರಾಹುಲ್‌ ಗಾಂಧಿಯನ್ನು ‘ಬಾಲ ಬುದ್ಧಿಯವನು’‌ ಎಂದ ಮೋದಿ; ಅವರು ಹೇಳಿದ ‘ಸೈಕಲ್‌ ಕತೆ’ಯೂ ಇಲ್ಲಿದೆ!

Continue Reading

ಪ್ರಮುಖ ಸುದ್ದಿ

Super Computers : ಜಾಗತಿಕ ನಾಯಕತ್ವಕ್ಕಾಗಿ ಭಾರತದಲ್ಲೇ ತಯಾರಾಗುತ್ತಿದೆ ಸೂಪರ್ ಕಂಪ್ಯೂಟರ್​

Super Computers : ಇದು ಚಿಪ್ ವಿನ್ಯಾಸದಲ್ಲಿ ಭಾರತದದ ಮಹತ್ವದ ಸಾಧನೆಯಾಗಿದೆ. ಇದು ಉನ್ನತ ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ದೇಶೀಯ ಮಟ್ಟದ ಅಭಿವೃದ್ಧಿಯಲ್ಲಿ ಭಾರತದ ಸಾಮರ್ಥ್ಯ ಪ್ರದರ್ಶಿಸುತ್ತದೆ. ಉದ್ಯಮದ ಸಹಭಾಗಿತ್ವದಲ್ಲಿ ಕನ್ಸೋರ್ಟಿಯಾ ಮೋಡ್​​ನಲ್ಲಿ ಈ ಉದ್ಯಮಗಳು ಪ್ರಸ್ತುತ ಅಗತ್ಯ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವೈಜ್ಞಾನಿಕ ವಿಭಾಗಗಳ (ಎಚ್ಒಡಿ) ಮುಖ್ಯಸ್ಥ ಮುಖ್ಯಸ್ಥ ಡಾ.ಪ್ರವೀಣ್ ಕುಮಾರ್ ಎಸ್ ಅಭಿಪ್ರಾಯಪಟ್ಟಿದ್ದಾರೆ.

VISTARANEWS.COM


on

Super Computers
Koo

ಹೊಸದಿಲ್ಲಿ: ಮೇಕ್ ಇನ್ ಇಂಡಿಯಾದ ಭಾಗವಾಗಿ ಎಯುಎಂ ಎಂದು ಕರೆಯಲ್ಪಡುವ ದೇಶೀಯ ಹೈ-ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ (ಎಚ್​​ಪಿಸಿ) ಪ್ರೊಸೆಸರ್ ಅನ್ನು ಅಭಿವೃದ್ಧಿಪಡಿಸಲ ಕೇಂದ್ರ ಸರ್ಕಾರ ಮುಂದಾಗಿದೆ. ಈ ಮೂಲಕ ಸೂಪರ್ ಕಂಪ್ಯೂಟಿಂಗ್​ನಲ್ಲಿ (Super Computers) ಜಾಗತಿಕ ನಾಯಕನಾಗುವ ಗುರಿ ಹೊಂದಲಾಗಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಸ್.ಕೃಷ್ಣನ್ ಹೇಳಿದ್ದಾರೆ. ದೇಶೀಯವಾಗಿ ನಿರ್ಮಿಸಲಾಗುವ ಎಚ್​ಪಿಸಿ ಚಿಪ್​​ನ ವಿನ್ಯಾಸ ಮತ್ತು ಅಭಿವೃದ್ಧಿಗಾಗಿ ಸೆಂಟರ್ ಫಾರ್ ಡೆವಲಪ್​ಮೆಂಟ್​ ಆಫ್ ಅಡ್ವಾನ್ಸ್​ಡ್​ ಕಂಪ್ಯೂಟಿಂಗ್ (ಸಿ-ಡ್ಯಾಕ್) ಮಾಸ್ಚಿಪ್ ಟೆಕ್ನಾಲಜೀಸ್ ಮತ್ತು ಸೋಷಿಯೋನೆಕ್ಸ್ಟ್ ಇಂಕ್​ ಜತೆ ಪಾಲುದಾರಿಕೆಗಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಈ ಮಾಹಿತಿಯನ್ನು ನೀಡಿದ್ದಾರೆ.

ಎಚ್​​ಪಿಸಿ ಪ್ರೊಸೆಸರ್ ಆರ್ಮ್ ಆರ್ಕಿಟೆಕ್ಚರ್ ಅನ್ನು ಆಧರಿಸಿದೆ ಮತ್ತು ಟಿಎಸ್ ಎಂಸಿಯ (ತೈವಾನ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ) 5 ಎನ್ಎಂ ತಂತ್ರಜ್ಞಾನದಂತೆ ರಚಿಸಲಾಗಿದೆ.

ಇದು ಚಿಪ್ ವಿನ್ಯಾಸದಲ್ಲಿ ಭಾರತದದ ಮಹತ್ವದ ಸಾಧನೆಯಾಗಿದೆ. ಇದು ಉನ್ನತ ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ಕ್ಷೇತ್ರದಲ್ಲಿ ದೇಶೀಯ ಮಟ್ಟದ ಅಭಿವೃದ್ಧಿಯಲ್ಲಿ ಭಾರತದ ಸಾಮರ್ಥ್ಯ ಪ್ರದರ್ಶಿಸುತ್ತದೆ. ಉದ್ಯಮದ ಸಹಭಾಗಿತ್ವದಲ್ಲಿ ಕನ್ಸೋರ್ಟಿಯಾ ಮೋಡ್​​ನಲ್ಲಿ ಈ ಉದ್ಯಮಗಳು ಪ್ರಸ್ತುತ ಅಗತ್ಯ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವೈಜ್ಞಾನಿಕ ವಿಭಾಗಗಳ (ಎಚ್ಒಡಿ) ಮುಖ್ಯಸ್ಥ ಮುಖ್ಯಸ್ಥ ಡಾ.ಪ್ರವೀಣ್ ಕುಮಾರ್ ಎಸ್ ಅಭಿಪ್ರಾಯಪಟ್ಟಿದ್ದಾರೆ.

ಸಿ-ಡ್ಯಾಕ್ ಎಯುಎಂ ಎಂಬ ಸ್ಥಳೀಯ ಎಚ್​ಪಿಡಿ ಪ್ರೊಸೆಸರ್ ಅನ್ನು ವಿನ್ಯಾಸಗೊಳಿಸುತ್ತಿದೆ. ಭಾರತೀಯ ಸ್ಟಾರ್ಟ್ಅಪ್ ಕೀನ್ಹೆಡ್ಸ್ ಟೆಕ್ನಾಲಜೀಸ್ ಈ ಯೋಜನೆಯ ನಿರ್ವಹಣಾ ಸಲಹೆಗಾರರಾಗಿ (ಪಿಎಂಸಿ) ತೊಡಗಿಸಿಕೊಂಡಿದೆ.

ಇದನ್ನೂ ಓದಿ: Narendra Modi: ದೇಶದ ಜನ ನಮ್ಮನ್ನು ಮೂರನೇ ಬಾರಿ ಗೆಲ್ಲಿಸಿದ್ದಾರೆ, ಕಾಂಗ್ರೆಸ್‌ಗೆ ನೂರು ಸ್ಥಾನ ಗೆಲ್ಲುವ ಯೋಗ್ಯತೆಯೂ ಇಲ್ಲ; ರಾಹುಲ್‌ಗೆ ಮೋದಿ ಗೇಲಿ

.”ಸರ್ವರ್ ನೋಡ್​ಗಳು , ಇಂಟರ್​ಕನೆಕ್ಟ್​ಗಳು ಮತ್ತು ಸಿಸ್ಟಮ್ ಸಾಫ್ಟ್​ವೇರ್​ ಸ್ಟ್ಯಾಕ್​​ನೊಂದಿಗೆ ನಮ್ಮ ಸ್ವದೇಶಿಕರಣ ಪ್ರಯತ್ನಗಳು ಶೇಕಡಾ 50 ಕ್ಕಿಂತ ಸಾಗಿದೆ. ಈಗ ಸಂಪೂರ್ಣ ಸ್ವದೇಶೀಕರಣಕ್ಕಾಗಿ, ನಾವು ದೇಶೀಯ ಎಚ್​​ಪಿಸಿ ಪ್ರೊಸೆಸರ್ ಎಯುಎಂ ಅನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಿದ್ದೇವೆ” ಎಂದು ಕೃಷ್ಣನ್ ಹೇಳಿದ್ದಾರೆ.

Continue Reading

ದೇಶ

Narendra Modi: ರಾಹುಲ್‌ ಗಾಂಧಿಯನ್ನು ‘ಬಾಲ ಬುದ್ಧಿಯವನು’‌ ಎಂದ ಮೋದಿ; ಅವರು ಹೇಳಿದ ‘ಸೈಕಲ್‌ ಕತೆ’ಯೂ ಇಲ್ಲಿದೆ!

Narendra Modi: ಲೋಕಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹಲವು ವಿಷಯಗಳನ್ನು ಪ್ರಸ್ತಾಪಿಸಿದರು. ಸಂಸತ್ತಿನ ಕೆಳಮನೆಯಲ್ಲಿ ನರೇಂದ್ರ ಮೋದಿ ಅವರ ಭಾಷಣ ಹೇಗಿತ್ತು? ಉಲ್ಲೇಖಿಸಿದ ಪ್ರಮುಖ ಅಂಶಗಳು ಯಾವವು ಎಂಬುದರ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Narendra Modi
Koo

ನವದೆಹಲಿ: ಲೋಕಸಭೆಯಲ್ಲಿ (Lok Sabha) ನರೇಂದ್ರ ಮೋದಿ (Narendra Modi) ಅವರು ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡಿದರು. ಇದೇ ವೇಳೆ ಅವರು ಕಾಂಗ್ರೆಸ್‌, ರಾಹುಲ್‌ ಗಾಂಧಿ ವಿರುದ್ಧ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದರು. ಅಷ್ಟೇ ಅಲ್ಲ ಸೈಕಲ್‌ ಕಲಿಯಲು ಹೋದ ಬಾಲಕನು ಬಿದ್ದಾಗ ಆತನಿಗೆ ಬೇರೊಬ್ಬರು ಸಮಾಧಾನ ಮಾಡಿದ ರೀತಿಯನ್ನು ರಾಹುಲ್‌ ಗಾಂಧಿ ಅವರ ಪಕ್ಷದ ಸೋಲಿಗೆ ಹೋಲಿಸಿದರು. ಇನ್ನೂ ಹಲವು ನಿದರ್ಶನಗಳ ಮೂಲಕ ಮೋದಿ ಅವರು ರಾಹುಲ್‌ ಗಾಂಧಿ, ಕಾಂಗ್ರೆಸ್‌ಗೆ ಕುಟುಕಿದರು.

ಸೈಕಲ್‌ ಕಲಿಯುವ ಬಾಲಕನ ಕತೆ ಹೀಗಿದೆ…

“ಬಾಲಕನೊಬ್ಬನು ಸೈಕಲ್‌ ಕಲಿಯಲು ರಸ್ತೆ ಇಳಿಯುತ್ತಾನೆ. ಆತ ಸೈಕಲ್‌ ತುಳಿಯುತ್ತಲೇ ಸ್ವಲ್ಪ ದೂರ ಮುಂದೆ ಹೋಗಿ ಬೀಳುತ್ತಾನೆ. ಸೈಕಲ್‌ನಿಂದ ಬಿದ್ದ ಆತನು ಜೋರಾಗಿ ಅಳಲು ಮುಂದಾಗುತ್ತಾನೆ. ಆಗ ವ್ಯಕ್ತಿಯೊಬ್ಬರು ಅಲ್ಲಿಗೆ ಬಂದು ಬಾಲಕನಿಗೆ ಹಲವು ಸುಳ್ಳುಗಳನ್ನು ಹೇಳುವ ಮೂಲಕ ಆತನನ್ನು ಸಮಾಧಾನಪಡಿಸುತ್ತಾರೆ. ಆಗ ಬಾಲಕನು ಸುಳ್ಳುಗಳನ್ನು ನಂಬಿ ಸುಮ್ಮನಾಗುತ್ತಾನೆ” ಎಂಬುದಾಗಿ ರಾಹುಲ್‌ ಗಾಂಧಿ ಅವರನ್ನು ಪರೋಕ್ಷವಾಗಿ ಛೇಡಿಸಿದರು.

ಮತ್ತೊಬ್ಬ ಬಾಲಕನ 99 ಅಂಕದ ಕತೆ

ಮತ್ತೊಬ್ಬ ಬಾಲಕನ ಕತೆಯ ಮೂಲಕ ರಾಹುಲ್‌ ಗಾಂಧಿ ಅವರಿಗೆ ಮೋದಿ ಕುಟುಕಿದರು. “ಬಾಲಕನೊಬ್ಬ ಪರೀಕ್ಷೆಯಲ್ಲಿ 99 ಅಂಕ ಪಡೆದಿರುತ್ತಾನೆ. ನಾನು 99 ಅಂಕ ಪಡೆದಿದ್ದೇನೆ ಎಂದು ಎಲ್ಲರಿಗೂ ಹೇಳುತ್ತಾನೆ. ಇದನ್ನು ಕೇಳಿದ ಜನ ಖುಷಿಪಡುತ್ತಾರೆ. ಆದರೆ, ಟೀಚರ್‌ ಬಂದು ನೀನೇಕೆ ಸ್ವೀಟ್‌ ಹಂಚುತ್ತಿದ್ದೀಯಾ? ಎಂದು ಕೇಳುತ್ತಾರೆ. ಏಕೆಂದರೆ, ಆ ಬಾಲಕನು 100ಕ್ಕೆ 99 ಅಂಕ ಪಡೆದಿರುವುದಿಲ್ಲ. ಆತನು 543 ಅಂಕಗಳ ಪೈಕಿ 99 ಅಂಕ ಪಡೆದಿರುತ್ತಾನೆ. ಈಗ ಹೇಳಿ ಯಾರ ವೈಫಲ್ಯವು ಇದಕ್ಕೆ ಮ್ಯಾಚ್‌ ಆಗುತ್ತದೆ” ಎಂದು ಕಾಂಗ್ರೆಸ್‌ ಹಾಗೂ ರಾಹುಲ್‌ ಗಾಂಧಿ ಅವರ ಸ್ಥಿತಿಯನ್ನು ಪರೋಕ್ಷವಾಗಿ ಹೇಳಿದರು.

ಇನ್ನೊಬ್ಬ ಬಾಲಕನಿಗೆ ಹೊಡೆದ ಕತೆ

ಒಬ್ಬ ಬಾಲಕ ಶಾಲೆಯಿಂದ ಮನೆಗೆ ಬಂದು ಜೋರಾಗಿ ಅಳತೊಡಗಿದೆ. ಈತನ ಸ್ಥಿತಿ ನೋಡಿ ಅಮ್ಮನೂ ಹೆದರಿದಳು. ಏಕೆ ಎಂದು ಅಮ್ಮ ಕೇಳಿದಾಗ ಬಾಲಕನು, “ಅಮ್ಮ ನನಗೆ ಶಾಲೆಯಲ್ಲಿ ಹೊಡೆದರು. ನನಗೆ ತುಂಬ ಥಳಿಸಿದರು. ನನಗೆ ಹೊಡೆದರು, ನನಗೆ ಹೊಡೆದರು” ಎಂದು ಇನ್ನಷ್ಟು ಅಳತೊಡಗಿದ. ಆಗ ಅಪ್ಪ, “ಏನಾಯಿತು” ಎಂದು ಕೇಳಿದ. ಬೇರೊಬ್ಬ ಬಾಲಕನ ತಾಯಿಗೆ ಬೈದಿರುವ ಕುರಿತು, ಬೇರೊಬ್ಬ ಬಾಲಕನನ್ನು ಕಳ್ಳ ಎಂದು ಕರೆದಿರುವುದು, ಬೇರೊಬ್ಬನ ಟಿಫಿನ್‌ ಬಾಕ್ಸ್‌ ಕದ್ದು, ಊಟ ಮಾಡಿರುವುದು ಸೇರಿ ಹಲವು ವಿಷಯಗಳನ್ನು ಆ ಬಾಲಕನು ತಂದೆ-ತಾಯಿಗೆ ಹೇಳಲೇ ಇಲ್ಲ ಎಂದು ರಾಹುಲ್‌ ಗಾಂಧಿ ಅವರಿಗೆ ಮೋದಿ ತಿರುಗೇಟು ನೀಡಿದರು.

“ನಿನ್ನೆ ಸಂಸತ್ತಿನಲ್ಲಿ ಒಬ್ಬರು ನನಗೆ ಅವರು ಹೊಡೆದರು, ಇವರು ಹೊಡೆದರು ಎಂಬುದಾಗಿ ಬಾಲಕ ಬುದ್ಧಿಯ ವ್ಯಕ್ತಿಯೊಬ್ಬರು ಕಿರುಚಾಡಿದರು. ಇದು ಜನರ ಸಿಂಪತಿ ಗಳಿಸಲು ಮಾಡಿರುವ ತಂತ್ರವಾಗಿದೆಯೇ ಹೊರತು, ಇದರಲ್ಲಿ ಯಾವುದೇ ಕಾಳಜಿ ಇಲ್ಲ” ಎಂದು ಹೇಳಿದರು.

ಕಾಂಗ್ರೆಸ್‌ ಪಕ್ಷವು ಈಗ ಬೇರೆ ಪಕ್ಷಗಳ ಬೆಂಬಲದ ಆಧಾರದ ಮೇಲೆ ನಿಂತಿದೆ. ಏಕಾಂಗಿಯಾಗಿ ನಿಂತ ಕಡೆಗಳೆಲ್ಲ ಇವರು ಹೀನಾಯವಾಗಿ ಸೋತಿದ್ದಾರೆ. 13 ರಾಜ್ಯಗಳಲ್ಲಿ ಕಾಂಗ್ರೆಸ್‌ ಜೀರೊ ಆಗಿದೆ. ಆದರೂ ಇವರು ಹೀರೊ ಆಗಿದ್ದಾರೆ. ದೇಶದ ಲೋಕಸಭೆ ಚುನಾವಣೆ ಇತಿಹಾಸದಲ್ಲಿ ಕಾಂಗ್ರೆಸ್ ಮೂರನೇ ಬಾರಿ ಹೀನಾಯವಾಗಿ ಸೋತಿದೆ. ಸಹಯೋಗಿ ಪಕ್ಷಗಳ ಹೆಗಲ ಕೂರಿಸಿಕೊಂಡು ಕಾಂಗ್ರೆಸ್ ಮೀಸೆ ತಿರುವುತ್ತಿದೆ. ಬೇರೆ ಪಕ್ಷಗಳ ಚುಂಗು ಹಿಡಿದುಕೊಂಡು ಕಾಂಗ್ರೆಸ್ ಕುಪ್ಪಳಿಸುತ್ತಿದೆ. ಪರಜೀವಿ ಪಕ್ಷವಾಗಿರುವ ಇದು ಈಗ ಅದು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಮೋದಿ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್‌ನಿಂದ ಸುಳ್ಳುಗಳ ಸರಣಿ…

ಕಾಂಗ್ರೆಸ್‌ ದೇಶದ ಜನರಿಗೆ ಸುಳ್ಳು ಹೇಳುವ ಮೂಲಕ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದೆ. “ದೇಶದ ಬಡವರಿಗೆ ಮಾಸಿಕ 8,500 ರೂ. ಜಮೆ ಮಾಡುತ್ತೇವೆ ಎಂದು ಸುಳ್ಳು ಹೇಳಿದರು. ಅಷ್ಟೇ ಅಲ್ಲ, ರಫೇಲ್‌ ಯುದ್ಧವಿಮಾನ, ಎಲ್‌ಐಸಿ, ಎಚ್‌ಎಎಲ್‌, ಚುನಾವಣೆ ಮತಯಂತ್ರ ಸೇರಿ ನೂರಾರು ಸುಳ್ಳುಗಳನ್ನು ಹೇಳಿದರು. ಸುಳ್ಳುಗಳನ್ನು ಹೇಳಿದ್ದಕಕಾಗಿಯೇ ಕಾಂಗ್ರೆಸ್‌ ಪ್ರತಿಪಕ್ಷದಲ್ಲಿ ಕುಳಿತಿದೆ” ಎಂದು ಹೇಳಿದರು.

“ದೇಶದ ಜನರು ಕಾಂಗ್ರೆಸ್‌ಗೆ ಒಂದು ಜನಾದೇಶ ನೀಡಿದ್ದಾರೆ. ನೀವು ಪ್ರತಿಪಕ್ಷದಲ್ಲಿಯೇ ಕುಳಿತುಕೊಳ್ಳಿ, ಹೀಗೆಯೇ ಗಲಾಟೆ ಮಾಡಿ, ಕಿರುಚುತ್ತಲೇ ಇರಿ ಎಂಬುದು ಜನರ ಆದೇಶವಾಗಿದೆ. ಕಾಂಗ್ರೆಸ್‌ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸತತ ಮೂರನೇ ಅವಧಿಗೆ ಕಾಂಗ್ರೆಸ್‌ 100 ಸೀಟುಗಳನ್ನು ಕೂಡ ಗೆಲ್ಲುವಲ್ಲಿ ವಿಫಲವಾಗಿದೆ. ಕಾಂಗ್ರೆಸ್‌ನ ಇತಿಹಾಸದಲ್ಲಿಯೇ ಇದು ಮೂರನೇ ಅತಿ ದೊಡ್ಡ ಸೋಲಾಗಿದೆ. ಮೂರನೇ ಕಳಪೆ ಪ್ರದರ್ಶನವಾಗಿದೆ” ಎಂದು ವಾಗ್ಬಾಣ ಬಿಟ್ಟರು.

ಇದನ್ನೂ ಓದಿ: Narendra Modi: ರಾಹುಲ್‌ ಗಾಂಧಿ ಥರ ಆಡ್ಬೇಡಿ; ಗಂಭೀರವಾಗಿರಿ: ಎನ್‌ಡಿಎ ಸಂಸದರಿಗೆ ಮೋದಿ ಕಿವಿಮಾತು

Continue Reading

ದೇಶ

Narendra Modi: ದೇಶದ ಜನ ನಮ್ಮನ್ನು ಮೂರನೇ ಬಾರಿ ಗೆಲ್ಲಿಸಿದ್ದಾರೆ, ಕಾಂಗ್ರೆಸ್‌ಗೆ ನೂರು ಸ್ಥಾನ ಗೆಲ್ಲುವ ಯೋಗ್ಯತೆಯೂ ಇಲ್ಲ; ರಾಹುಲ್‌ಗೆ ಮೋದಿ ಗೇಲಿ

Narendra Modi: ದೇಶದ ಜನರು ಕಾಂಗ್ರೆಸ್‌ಗೆ ಒಂದು ಜನಾದೇಶ ನೀಡಿದ್ದಾರೆ. ನೀವು ಪ್ರತಿಪಕ್ಷದಲ್ಲಿಯೇ ಕುಳಿತುಕೊಳ್ಳಿ, ಹೀಗೆಯೇ ಗಲಾಟೆ ಮಾಡಿ, ಕಿರುಚುತ್ತಲೇ ಇರಿ ಎಂಬುದು ಜನರ ಆದೇಶವಾಗಿದೆ. ಕಾಂಗ್ರೆಸ್‌ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸತತ ಮೂರನೇ ಅವಧಿಗೆ ಕಾಂಗ್ರೆಸ್‌ 100 ಸೀಟುಗಳನ್ನು ಕೂಡ ಗೆಲ್ಲುವಲ್ಲಿ ವಿಫಲವಾಗಿದೆ. ಕಾಂಗ್ರೆಸ್‌ನ ಇತಿಹಾಸದಲ್ಲಿಯೇ ಇದು ಮೂರನೇ ಅತಿ ದೊಡ್ಡ ಸೋಲಾಗಿದೆ. ಮೂರನೇ ಕಳಪೆ ಪ್ರದರ್ಶನವಾಗಿದೆ ಎಂದು ಕಾಂಗ್ರೆಸ್‌ಗೆ ಮೋದಿ ಚಾಟಿ ಬೀಸಿದರು.

VISTARANEWS.COM


on

Narendra Modi
Koo

ನವದೆಹಲಿ: ಲೋಕಸಭೆಯಲ್ಲಿ (Lok Sabha) ನರೇಂದ್ರ ಮೋದಿ (Narendra Modi) ಅವರು ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಮಾತನಾಡಿದರು. ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರದ (Central Government) ಆಡಳಿತ, ಕೈಗೊಂಡ ಅಭಿವೃದ್ಧಿ ಕೆಲಸಗಳು, ವಿಕಸಿತ ಭಾರತದತ್ತ ಹೆಜ್ಜೆ ಹಾಕುವ ರೀತಿ, ಮುಂಬರುವ ಐದು ವರ್ಷಗಳಲ್ಲಿ ಕೈಗೊಳ್ಳುವ ಅಭಿವೃದ್ಧಿಯ ಕುರಿತು ಪ್ರಸ್ತಾಪಿಸುವ ಜತೆಗೆ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು. “ಕಾಂಗ್ರೆಸ್‌ ಈ ಬಾರಿ 100 ಕ್ಷೇತ್ರಗಳನ್ನೂ ಗೆದ್ದಿಲ್ಲ. ನಾವು ಮೂರನೇ ಬಾರಿಗೆ ಸರ್ಕಾರ ರಚಿಸಿದ್ದೇವೆ” ಎಂದು ಕುಟುಕಿದರು.

“ದೇಶದಲ್ಲಿ ಮೂರನೇ ಬಾರಿಗೆ ಆಡಳಿತಕ್ಕೆ ಬರುವುದು ಸುಲಭವಲ್ಲ. ಜನರ ಪರವಾದ ಆಡಳಿತವನ್ನೇ ತಪಸ್ಸಿನ ರೀತಿ ಮಾಡಿದ ಕಾರಣದಿಂದಾಗಿ ನಮಗೆ ದೇಶದ ಜನ ಮೂರನೇ ಬಾರಿಗೆ ಅವಕಾಶ ನೀಡಿದ್ದಾರೆ. ಕಳೆದ 60 ವರ್ಷಗಳಲ್ಲಿಯೇ ದೇಶದ ಜನರು ಯಾರನ್ನೂ ಮೂರನೇ ಬಾರಿಗೆ ಆಯ್ಕೆ ಮಾಡಿಲ್ಲ. ನಮ್ಮ ಮೇಲಿನ ಭರವಸೆ, ನಂಬಿಕೆಯಿಂದಲೇ ಮೂರನೇ ಬಾರಿಗೆ ಗೆಲ್ಲಿಸಿದ್ದಾರೆ” ಎಂದು ಹೇಳಿದರು.

ದೇಶದ ಜನರು ಕಾಂಗ್ರೆಸ್‌ಗೆ ಒಂದು ಜನಾದೇಶ ನೀಡಿದ್ದಾರೆ. ನೀವು ಪ್ರತಿಪಕ್ಷದಲ್ಲಿಯೇ ಕುಳಿತುಕೊಳ್ಳಿ, ಹೀಗೆಯೇ ಗಲಾಟೆ ಮಾಡಿ, ಕಿರುಚುತ್ತಲೇ ಇರಿ ಎಂಬುದು ಜನರ ಆದೇಶವಾಗಿದೆ. ಕಾಂಗ್ರೆಸ್‌ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸತತ ಮೂರನೇ ಅವಧಿಗೆ ಕಾಂಗ್ರೆಸ್‌ 100 ಸೀಟುಗಳನ್ನು ಕೂಡ ಗೆಲ್ಲುವಲ್ಲಿ ವಿಫಲವಾಗಿದೆ. ಕಾಂಗ್ರೆಸ್‌ನ ಇತಿಹಾಸದಲ್ಲಿಯೇ ಇದು ಮೂರನೇ ಅತಿ ದೊಡ್ಡ ಸೋಲಾಗಿದೆ. ಮೂರನೇ ಕಳಪೆ ಪ್ರದರ್ಶನವಾಗಿದೆ.

“ಮುಂದಿನ 5 ವರ್ಷಗಳಲ್ಲಿ ನಾವು ನಮ್ಮ ಹಿಂದಿನ ಎಲ್ಲ ರೆಕಾರ್ಡ್‌ಗಳನ್ನು ಮುರಿಯುತ್ತೇವೆ. ಇನ್ನೂ ಮೂರು ಕೋಟಿ ಬಡವರಿಗೆ ಸುಸಜ್ಜಿತವಾದ ಮನೆಗಳನ್ನು ನಿರ್ಮಿಸಿಕೊಡುತ್ತೇವೆ. ದೇಶದ ಬಡವರು, ರೈತರು, ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ದುಡಿಯುತ್ತೇವೆ. ವಿಕಸಿತ ಭಾರತಕ್ಕೆ ಭದ್ರ ಬುನಾದಿಯನ್ನು ಹಾಕಿಕೊಡುತ್ತೇವೆ. ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್ ತತ್ವದಲ್ಲಿ ಆಡಳಿತ ನಡೆಸುತ್ತೇವೆ” ಎಂದು ತಿಳಿಸಿದರು.

ನೂತನ ಸಂಸದರಿಗೆ ಅಭಿನಂದನೆ

ನೂತನ ಸಂಸದರಿಗೆ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದರು. ಸಂಸತ್‌ಗೆ ಮೊದಲ ಬಾರಿ ಆಯ್ಕೆಯಾಗಿರುವ ನೂತನ ಸಂಸದರಿಗೆ ಅಭಿನಂದನೆಗಳು. ನೂತನ ಸಂಸದರು ಸದನದ ನಿಯಮಗಳನ್ನು, ಶಿಷ್ಟಾಚಾರಗಳನ್ನು ಅಚ್ಚುಕಟ್ಟಾಗಿ ಪಾಲಿಸುವ ಮೂಲಕ ಅನುಭವಿ ಸಂಸದರಂತೆ ವರ್ತಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ನೂತನ ಸಂಸದರು ಅಧಿವೇಶನದ ಚರ್ಚೆಯಲ್ಲಿ ಪಾಲ್ಗೊಂಡಿರುವುದು ಕೂಡ ಸಕಾರಾತ್ಮಕ ಸಂಗತಿಯಾಗಿದೆ.

ಇದನ್ನೂ ಓದಿ: Narendra Modi: ಪ್ರಜಾಪ್ರಭುತ್ವ, ಜಾತ್ಯತೀತತೆ, ಏಳಿಗೆಯೇ ನಮ್ಮ ಆದ್ಯತೆ; ಸಂಸತ್ತಿನಲ್ಲಿ ಮೋದಿ ಹೇಳಿಕೆ

Continue Reading
Advertisement
Rainy Season Tourism
ಪ್ರವಾಸ3 mins ago

Rainy Season Tourism: ಮಳೆಗಾಲದ ಪ್ರವಾಸ ಮಾಡುವ ಮುನ್ನ ಈ 10 ಎಚ್ಚರಿಕೆಗಳನ್ನು ಪಾಲಿಸಿ

Viral News
Latest4 mins ago

Viral News: ಇಬ್ಬರು ಪತ್ನಿಯರು ಸೇರಿ ಗಂಡನಿಗೆ ಮೂರನೇ ಮದುವೆ ಮಾಡಿಸಿದರು! ವೆಡ್ಡಿಂಗ್‌ ಕಾರ್ಡ್‌ ನೋಡಿ!

Narendra Modi
ದೇಶ10 mins ago

Narendra Modi: ಅಂಬೇಡ್ಕರ್‌ರನ್ನು ಷಡ್ಯಂತ್ರದಿಂದ ಸೋಲಿಸಿದ ನೆಹರೂ; ಕಾಂಗ್ರೆಸ್‌ನಿಂದ ದಲಿತರ ಶೋಷಣೆ ಎಂದ ಮೋದಿ

Pourakarmikas
ಕರ್ನಾಟಕ12 mins ago

Pourakarmikas: ಪೌರ ಕಾರ್ಮಿಕರಿಗೆ ಗುಡ್‌ ನ್ಯೂಸ್; ವಾರಕ್ಕೆ ಒಂದು ದಿನ ರಜೆ ನೀಡಿದ ಸರ್ಕಾರ

Super Computers
ಪ್ರಮುಖ ಸುದ್ದಿ15 mins ago

Super Computers : ಜಾಗತಿಕ ನಾಯಕತ್ವಕ್ಕಾಗಿ ಭಾರತದಲ್ಲೇ ತಯಾರಾಗುತ್ತಿದೆ ಸೂಪರ್ ಕಂಪ್ಯೂಟರ್​

sandalwood theft
ಕ್ರೈಂ17 mins ago

Sandalwood theft : ಶ್ರೀಗಂಧ ಕದಿಯಲು ಬಂದನಿಗೆ ಗುಂಡೇಟು;‌ ಮತ್ತೊಬ್ಬ ಗಾಯಾಳು ಸೇರಿ ಹಲವರು ಪರಾರಿ

Narendra Modi
ದೇಶ25 mins ago

Narendra Modi: ರಾಹುಲ್‌ ಗಾಂಧಿಯನ್ನು ‘ಬಾಲ ಬುದ್ಧಿಯವನು’‌ ಎಂದ ಮೋದಿ; ಅವರು ಹೇಳಿದ ‘ಸೈಕಲ್‌ ಕತೆ’ಯೂ ಇಲ್ಲಿದೆ!

Gold Smuggling
Latest38 mins ago

Gold Smuggling: ಏರ್‌ಪೋರ್ಟ್‌ನಲ್ಲಿ 267 ಕೆಜಿ ಚಿನ್ನ ಸಾಗಣೆ; ಯೂಟ್ಯೂಬರ್‌ ಸೇರಿ ಹಲವರ ಸೆರೆ

Narendra Modi
ದೇಶ53 mins ago

Narendra Modi: ದೇಶದ ಜನ ನಮ್ಮನ್ನು ಮೂರನೇ ಬಾರಿ ಗೆಲ್ಲಿಸಿದ್ದಾರೆ, ಕಾಂಗ್ರೆಸ್‌ಗೆ ನೂರು ಸ್ಥಾನ ಗೆಲ್ಲುವ ಯೋಗ್ಯತೆಯೂ ಇಲ್ಲ; ರಾಹುಲ್‌ಗೆ ಮೋದಿ ಗೇಲಿ

Uttar Pradesh stampede
ದೇಶ1 hour ago

Uttar Pradesh stampede : ಉತ್ತರ ಪ್ರದೇಶದ ಹತ್ರಾಸ್​​ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ; 27 ಕ್ಕೂ ಹೆಚ್ಚು ಸಾವು

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ1 day ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ2 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು2 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ3 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ3 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ4 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು5 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

ಟ್ರೆಂಡಿಂಗ್‌