India- Canada relations: ಮುಯ್ಯಿಗೆ ಮುಯ್ಯಿ: ಕೆನಡಾ ರಾಯಭಾರಿಗೂ ಭಾರತದಿಂದ ಗೇಟ್‌ಪಾಸ್ Vistara News
Connect with us

ದೇಶ

India- Canada relations: ಮುಯ್ಯಿಗೆ ಮುಯ್ಯಿ: ಕೆನಡಾ ರಾಯಭಾರಿಗೂ ಭಾರತದಿಂದ ಗೇಟ್‌ಪಾಸ್

ಇಂದು ಭಾರತೀಯ ವಿದೇಶಾಂಗ ಇಲಾಖೆಯು ಕೆನಡಾದ ರಾಯಭಾರಿಯನ್ನು ಕರೆಸಿಕೊಂಡು, ಇನ್ನು ಐದು ದಿನದಲ್ಲಿ ದೇಶ ಬಿಟ್ಟು ಆಚೆಗೆ ಹೋಗುವಂತೆ ಆದೇಶ ನೀಡಿದೆ. ಭಾರತದ ಆಂತರಿಕ ವ್ಯವಹಾರಗಳಲ್ಲಿ ಕೆನಡಾದ ಹಸ್ತಕ್ಷೇಪವನ್ನು ಖಂಡಿಸಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

VISTARANEWS.COM


on

narendra modi justi Trudeau
Koo

ಹೊಸದಿಲ್ಲಿ: ಕೆನಡಾದಿಂದ ಭಾರತೀಯ ರಾಯಭಾರಿಯನ್ನು (Indian diplomat) ಉಚ್ಛಾಟಿಸಿದ ಅಲ್ಲಿನ ಪ್ರಧಾನಿ ಜಸ್ಟಿನ್‌ ಟ್ರುಡೊ (justin trudeau) ಕ್ರಮಕ್ಕೆ ಪ್ರತೀಕಾರವಾಗಿ ಕೆನಡಾದ ರಾಯಭಾರಿಯನ್ನು (Canada diplomat) ಭಾರತ ಆಚೆಗಟ್ಟಿದೆ. ಇದರೊಂದಿಗೆ ಭಾರತ- ಕೆನಡಾ ಸಂಬಂಧ (India- Canada relations) ಇನ್ನಷ್ಟು ಬಿಗಡಾಯಿಸಿದೆ.

ಇಂದು ಭಾರತೀಯ ವಿದೇಶಾಂಗ ಇಲಾಖೆಯು ಕೆನಡಾದ ರಾಯಭಾರಿಯನ್ನು ಕರೆಸಿಕೊಂಡು, ಇನ್ನು ಐದು ದಿನದಲ್ಲಿ ದೇಶ ಬಿಟ್ಟು ಆಚೆಗೆ ಹೋಗುವಂತೆ ಆದೇಶ ನೀಡಿದೆ. ಭಾರತದ ಆಂತರಿಕ ವ್ಯವಹಾರಗಳಲ್ಲಿ ಕೆನಡಾದ ಹಸ್ತಕ್ಷೇಪವನ್ನು ಖಂಡಿಸಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ (Khalistan terrorist) ಹರ್ದೀಪ್ ಸಿಂಗ್‌ ನಿಜ್ಜರ್‌ ಹತ್ಯೆಯ ಹಿನ್ನೆಲೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೊ ಆರೋಪಿಸಿದ್ದರು. ಇದಾಗಿ ಒಂದು ದಿನದಲ್ಲಿ ಭಾರತದ ರಾಜತಾಂತ್ರಿಕರನ್ನು ಅಲ್ಲಿಂದ ಹೊರಗೆಹಾಕಿ ವಿದೇಶಾಂಗ ಇಲಾಖೆ ಆದೇಶ ನೀಡಿತ್ತು. ಅದಕ್ಕೆ ಪ್ರತಿಯಾಗಿ ಕಟುವಾದ ಪ್ರಕಟಣೆಯ ತಿರುಗೇಟು ನೀಡಿರುವ ಭಾರತ, ಕೆನಡಾದ ರಾಯಭಾರಿಗೆ ಗೇಟ್‌ಪಾಸ್‌ ನೀಡಿದೆ.

ತನ್ನ ರಾಯಭಾರಿಯನ್ನು ಹೊರಹಾಕಿರುವ ಕ್ರಮವನ್ನು ಭಾರತ ವಿದೇಶಾಂಗ ಇಲಾಖೆ ಕಟುವಾದ ಶಬ್ದಗಳಲ್ಲಿ ಖಂಡಿಸಿದ್ದು, ಕೆನಡಾ ಪ್ರಧಾನಿ ಹಾಗೂ ಅಲ್ಲಿನ ವಿದೇಶಾಂಗ ಸಚಿವರು ನೀಡಿರುವ ಹೇಳಿಕೆಗಳು ಅಸಂಬದ್ಧವಾಗಿವೆ ಹಾಗೂ ದುರುದ್ದೇಶಪೂರಿತವಾಗಿವೆ ಎಂದಿದೆ.

ಭಾರತ ಸರ್ಕಾರ ಕೆನಡಾದ ಪ್ರಧಾನಿಯ ಮಾತುಗಳನ್ನು ತಿರಸ್ಕರಿಸಿದೆ. ಕೆನಡಾವೇ ಭಾರತ ವಿರೋಧಿ ಶಕ್ತಿಗಳಿಗೆ ಆಶ್ರಯ ನೀಡಿದೆ. ಅವರ ವಿರುದ್ಧ ಪರಿಣಾಮಕಾರಿ ಮತ್ತು ತ್ವರಿತ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದೆ. ಜಿ20 ಶೃಂಗಸಭೆಗೆ (G20 summit delhi) ಜಸ್ಟಿನ್‌ ಬಂದಿದ್ದಾಗಲೂ, ಪ್ರಧಾನಿ ನರೇಂದ್ರ ಮೋದಿ (pm narendra modi) ತಮ್ಮ ಈ ಕಳವಳವನ್ನು ವ್ಯಕ್ತಪಡಿಸಿದ್ದರು. ಪ್ರತಿಯಾಗಿ ಟ್ರುಡೊ, ಕೆನಡಾದಲ್ಲಿ ಖಲಿಸ್ತಾನಿಗಳ ಪ್ರತಿಭಟನೆಯ ಹಕ್ಕನ್ನು ತಾನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ನುಣುಚಿಕೊಂಡಿದ್ದರು.

ಕೆನಡಾಗೆ ತೆರಳಿದ ಬಳಿಕ ಜಸ್ಟಿನ್‌, ಈ ಬಗ್ಗೆ ತಮ್ಮ ʼಆಳವಾದ ಕಳವಳ’ವನ್ನು ವ್ಯಕ್ತಪಡಿಸಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೊಂದಿಗೆ ʼವೈಯಕ್ತಿಕವಾಗಿ ಮತ್ತು ನೇರವಾಗಿ’ ಆ ಕಳವಳ ವ್ಯಕ್ತಪಡಿಸಿದ್ದೇನೆ ಎಂದಿದ್ದರು. ʼನಮ್ಮ ನೆಲದಲ್ಲಿ ಕೆನಡಾದ ಪ್ರಜೆಯನ್ನು ಕೊಂದಿರುವುದು ನಮ್ಮ ಸಾರ್ವಭೌಮತ್ವದ ಉಲ್ಲಂಘನೆ’ ಎಂದಿದ್ದರು.

ಭಾರತ- ಕೆನಡಾ ವ್ಯಾಪಾರ ವ್ಯವಹಾರ ಒಪ್ಪಂದ ಮಾತುಕತೆಗಳೂ ಇದರಿಂದಾಗಿ ನನೆಗುದಿಗೆ ಬಿದ್ದಿವೆ.

ಇದನ್ನೂ ಓದಿ: Justin Trudeau: ಟ್ರುಡೊ ಆರೋಪ ಅಸಂಬದ್ಧ; ಕೆನಡಾವೇ ಭಾರತ ವಿರೋಧಿಗಳಿಗೆ ಆಶ್ರಯ ನೀಡಿದೆ: ಭಾರತ ಕಟು ಪ್ರತಿಕ್ರಿಯೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News Special Face Book ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
ವೈವಿಧ್ಯಮಯ ಸುದ್ದಿಗಳಿಗಾಗಿ Vistara News Twitter ಪೇಜ್ ಫಾಲೋ ಮಾಡಿ

ದೇಶ

Manipur Horror: ಮೈತಿ ವಿದ್ಯಾರ್ಥಿಗಳಿಬ್ಬರ ಶವಗಳ ಫೋಟೊ ವೈರಲ್;‌ ಮಣಿಪುರ ಮತ್ತೆ ಉದ್ವಿಗ್ನ?

Manipur Horror: ಮಣಿಪುರದಲ್ಲಿ(Manipur )ಜುಲೈಯಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಶವದ ಫೋಟೋ ಹೊರ ಬಿದ್ದು ಸಂಚಲನ ಮೂಡಿಸಿದೆ. ದುಷ್ಕರ್ಮಿಗಳ ಪತ್ತೆಗೆ ಸಿಬಿಐ(CBI) ಬಲೆ ಬೀಸಿದೆ.

VISTARANEWS.COM


on

Edited by

manipur
Koo

ಇಂಫಾಲ: ಜುಲೈನಲ್ಲಿ ನಾಪತ್ತೆಯಾಗಿದ್ದ ಮೈತಿ ಸಮುದಾಯದ ಇಬ್ಬರು ವಿದ್ಯಾರ್ಥಿಗಳ ಶವಗಳ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದು, ಮಣಿಪುರದಲ್ಲಿ ಮತ್ತೆ ಜನಾಕ್ರೋಶ ಭುಗಿಲೇಳುವ ಸಂಭವ ಕಂಡುಬರುತ್ತಿದೆ. ಬಂದೂಕು ಹಿಡಿದಿರುವ ಇಬ್ಬರು ದುಷ್ಕರ್ಮಿಗಳು ಕೂಡ ಈ ಫೋಟೋದಲ್ಲಿದ್ದಾರೆ. ಇವರು ಕುಕಿ ಸಮುದಾಯದವರು ಎಂದು ಹೇಳಲಾಗಿದೆ.

ಈ ಬಗ್ಗೆ ಜನಾಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಮಣಿಪುರ ಸರ್ಕಾರ(Manipur government) “ತ್ವರಿತ ಮತ್ತು ನಿರ್ಣಾಯಕ” ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. ಕೇಂದ್ರ ತನಿಖಾ ದಳ (CBI) ಈ ಪ್ರಕರಣದ ತನಿಖೆ ನಡೆಸುತ್ತಿದ್ದು, ಇಬ್ಬರು ವಿದ್ಯಾರ್ಥಿಗಳ ಶವಗಳು ಇನ್ನೂ ಪತ್ತೆಯಾಗದಿರುವುದು ಸವಾಲಾಗಿ ಪರಿಣಮಿಸಿದೆ.

ಮೈತಿ ಸಮುದಾಯದ ಇಬ್ಬರು ವಿದ್ಯಾರ್ಥಿಗಳಾದ ಹಿಜಾಮ್ ಲಿಂಥೋಯಿಂಗಾಂಬಿ (17) ಮತ್ತು ಫಿಜಾಮ್ ಹೇಮ್ಜಿತ್ (20) ಸಶಸ್ತ್ರ ಗುಂಪೊಂದರ ಮುಂದೆ ಹುಲ್ಲುಗಾವಲಿನ ಕಾಂಪೌಂಡ್‌ನಲ್ಲಿ ಕುಳಿತಿರುವುದು ಫೋಟೋದಲ್ಲಿ ಕಂಡುಬರುತ್ತಿದೆ. ಲಿಂಥೋಯಿಂಗಾಂಬಿ ಬಿಳಿ ಟೀ ಶರ್ಟ್ ಧರಿಸಿದ್ದರೆ, ಹೇಮ್ಜಿತ್ ಚೆಕ್ಸ್‌ ಶರ್ಟ್ ಧರಿಸಿರುವುದು ಕಂಡುಬಂದಿದೆ. ಅವರ ಹಿಂದೆ ಬಂದೂಕುಗಳನ್ನು ಹೊಂದಿರುವ ಇಬ್ಬರು ಪುರುಷರು ಸ್ಪಷ್ಟವಾಗಿ ಗೋಚರಿಸುತ್ತಾರೆ. ಇನ್ನೊಂದು ಫೋಟೋದಲ್ಲಿ ವಿದ್ಯಾರ್ಥಿಗಳ ದೇಹಗಳು ನೆಲದ ಮೇಲೆ ಬಿದ್ದಿರುವುದು ಕಂಡುಬರುತ್ತಿದೆ.

ಭಾರಿ ಆಕ್ರೋಶ

ಈ ಪ್ರಕರಣವು ರಾಜ್ಯದಲ್ಲಿ ಮತ್ತೊಂದು ಸುತ್ತಿನ ಭಾರಿ ಆಕ್ರೋಶವನ್ನು ಹುಟ್ಟು ಹಾಕಿದೆ. ಪ್ರಕರಣವನ್ನು ಭೇದಿಸಲು ಪೊಲೀಸರು ಯಾಕೆ ತಡ ಮಾಡುತ್ತಿದ್ದಾರೆ? ಎನ್ನುವ ಪ್ರಶ್ನೆಯೂ ಎದ್ದಿದೆ. ಜುಲೈನಲ್ಲಿ ಈ ಇಬ್ಬರು ವಿದ್ಯಾರ್ಥಿಗಳು ನಾಪತ್ತೆಯಾಗಿದ್ದರು. ಅಂದು ಅಂಗಡಿಗಳಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮರಾಗಳಲ್ಲಿ ಕಾಣಿಸಿಕೊಂಡ ಬಳಿಕ ಇವರ ಪತ್ತೆಯಾಗಿರಲಿಲ್ಲ.

ಆಧುನಿಕ ತಂತ್ರಜ್ಞಾನ ಬಳಕೆ

ಈ ಪ್ರಕರಣವನ್ನು ಕೂಡಲೇ ಭೇದಿಸಲು ತನಿಖಾಧಿಕಾರಿಗಳು ಆಧುನಿಕ ತಂತ್ರಜ್ಞಾನಗಳ ಮೊರೆ ಹೋಗಿದ್ದಾರೆ. ಫೋಟೊದ ಹಿನ್ನೆಲೆಯಲ್ಲಿ ಗೋಚರಿಸುವ ಇಬ್ಬರು ಪುರುಷರ ಗುರುತನ್ನು ಪತ್ತೆಹಚ್ಚಲು ತನಿಖಾಧಿಕಾರಿಗಳು ಸುಧಾರಿತ ಸೈಬರ್ ವಿಧಿವಿಜ್ಞಾನದ ಸಹಾಯ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ʼʼಎರಡು ವಿದ್ಯಾರ್ಥಿಗಳ ಫೋಟೊ ರಾಜ್ಯ ಸರ್ಕಾರದ ಗಮನಕ್ಕೆ ಬಂದಿದೆ. ಅವರು ಜುಲೈಯಲ್ಲಿ ನಾಪತ್ತೆಯಾಗಿದ್ದರು. ಈ ಪ್ರಕರಣದ ತನಿಖೆಯನ್ನು ಈಗಾಗಲೇ ಸಿಬಿಐಗೆ ಹಸ್ತಾಂತರಿಸಲಾಗಿದೆʼʼ ಎಂದು ಮಣಿಪುರ ಸರ್ಕಾರ ತಿಳಿಸಿದೆ.

“ಇಬ್ಬರು ವಿದ್ಯಾರ್ಥಿಗಳನ್ನು ಕೊಲೆ ಮಾಡಿದ ದುಷ್ಕರ್ಮಿಗಳನ್ನು ಗುರುತಿಸಲು ರಾಜ್ಯ ಪೊಲೀಸರು, ಕೇಂದ್ರ ಭದ್ರತಾ ಸಂಸ್ಥೆಗಳ ಸಹಯೋಗದೊಂದಿಗೆ ಸಕ್ರಿಯವಾಗಿ ತನಿಖೆ ನಡೆಸುತ್ತಿದ್ದಾರೆ. ದುಷ್ಕರ್ಮಿಗಳನ್ನು ಬಂಧಿಸಲು ಭದ್ರತಾ ಪಡೆಗಳೂ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ” ಎಂದು ಸರ್ಕಾರ ಮಾಹಿತಿ ನೀಡಿದೆ. ಅಲ್ಲದೆ ಈ ಪ್ರಕರಣದಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದು, ತನಿಖೆ ನಡೆಸಲು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದೆ.

ಪರಸ್ಪರ ಆರೋಪ

ಮಣಿಪುರದ ಬೆಟ್ಟಗಳಲ್ಲಿ ಸುಮಾರು 25 ಕುಕಿ ದಂಗೆಕೋರ ಗುಂಪುಗಳ ಹಲವಾರು ಶಿಬಿರಗಳಿವೆ. ಅವು ಕೇಂದ್ರ, ರಾಜ್ಯ ಮತ್ತು ಮಿಲಿಟರಿಯೊಂದಿಗೆ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುವ(SOO) ಒಪ್ಪಂದಕ್ಕೆ ಸಹಿ ಹಾಕಿವೆ. ಕಣಿವೆ ಮೂಲದ ಸೇನಾಪಡೆಗಳು ತಮ್ಮ ಮೇಲೆ ದಾಳಿ ನಡೆಸುತ್ತಿವೆ ಎಂದು ಕುಕಿಗಳು ಆರೋಪಿಸಿದ್ದರೆ, ಕುಕಿ ದಂಗೆಕೋರರು ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಬಹಿರಂಗವಾಗಿ ಹೋರಾಡುವ ಮೂಲಕ ಎಸ್ಒಒ ಒಪ್ಪಂದವನ್ನು ಉಲ್ಲಂಘಿಸಿದ್ದಾರೆ ಎಂದು ಸೈನ್ಯ ದೂರಿದೆ.

ಇದನ್ನೂ ಓದಿ: India Canada Row: ಮಣಿಪುರ, ಕಾಶ್ಮೀರಕ್ಕೆ ಹೋಗದಿರಿ; ಕೆನಡಾ ಮತ್ತೊಂದು ಉದ್ಧಟತನ

ಕುಕಿ ಮತ್ತು ಮೈತಿ ಸಮುದಾಯಗಳ ನಡುವೆ ಮೇ 3ರಂದು ಸಂಘರ್ಷ ಆರಂಭವಾಯಿತು. ಈ ಹಿಂಸಾಚಾರದಲ್ಲಿ ಇದುವರೆಗೆ 180ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಮಂದಿ ಸ್ಥಳಾಂತರಗೊಂಡಿದ್ದಾರೆ.

Continue Reading

ದೇಶ

Lawyer Sara Sunny: ಸುಪ್ರೀಂ ಕೋರ್ಟ್‌ನಲ್ಲಿ ಮೊದಲ ಬಾರಿಗೆ ಸಂಜ್ಞೆ ಭಾಷೆಯಲ್ಲಿ ವಾದ ಮಂಡನೆ! ಇತಿಹಾಸ ಸೃಷ್ಟಿಸಿದ ಸಾರಾ

Lawyer Sara Sunny: ಕಿವುಡ ನ್ಯಾಯವಾದಿ ಸಾರಾ ಸನ್ನಿ ಅವರು ಸಂಜ್ಞೆ ಭಾಷೆಯ ಮೂಲಕ ವಾದ ಮಂಡಿಸಿ, ಸುಪ್ರೀಂ ಕೋರ್ಟ್‌ನಲ್ಲಿ ಇತಿಹಾಸ ಸೃಷ್ಟಿಸಿದರು.

VISTARANEWS.COM


on

Edited by

Sara Sunny
Koo

ನವದೆಹಲಿ: ಭಾರತದ ಸುಪ್ರೀಂ ಕೋರ್ಟ್ (Supreme Court of India) ಸೋಮವಾರ ವಿಶಿಷ್ಟ ವಕೀಲರ ಕಲಾಪಕ್ಕೆ ಸಾಕ್ಷಿಯಾಯಿತು. ಕಿವುಡ ವಕೀಲೆ ಸಾರಾ ಸನ್ನಿ (Lawyer Sara Sunny) ಇಂಟರ್‌ರ್ಪ್ರಿಟರ್ ಮೂಲಕ ಸಂಜ್ಞೆ ಭಾಷೆ ಬಳಸಿ ವಾದಿಸಿದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮೊದಲ ಬಾರಿಗೆ ಆಲಿಸಿತು.

ವರ್ಚುವಲ್ ಪ್ರೊಸೀಡಿಂಗ್ಸ್ ನಿರ್ವಹಿಸುತ್ತಿದ್ದ ಕಂಟ್ರೋಲ್ ರೂಂ, ಮೊದಲಿಗೆ ಕಿವುಡ ನ್ಯಾಯವಾದಿ ಸಾರಾ ಸನ್ನಿಗೆ ಸ್ಕ್ರೀನ್ ಸ್ಪೇಸ್ ನೀಡಲು ನಿರಾಕರಿಸಿತ್ತು. ಆದರೆ, ಶೀಘ್ರದಲ್ಲೇ ಅವರ ವಿಚಾರಣೆಯ ಸರದಿ ಬಂದಾಗ ಆಕೆಯ ಇಂಟರ್‌ರ್ಪ್ರಿಟರ್ ಸೌರಭ್ ರಾಯ್ ಚೌಧರಿ ಪರದೆಯ ಮೇಲೆ ಕಾಣಿಸಿಕೊಂಡರು. ಚೌಧರಿ ಅವರು, ಸಾರಾ ಸನ್ನಿ ಅವರ ಸಂಕೇತ ಭಾಷೆಯನ್ನು ಅನುವಾದಿಸಿ, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಮುಂದೆ ತಮ್ಮ ವಾದವನ್ನು ಮಂಡಿಸಿದರು.

ನಂತರ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಸನ್ನಿಗೆ ಸ್ಕ್ರೀನ್ ಸ್ಪೇಸ್ ನೀಡುವಂತೆ ನಿಯಂತ್ರಣ ಕೊಠಡಿ ಮತ್ತು ಇಂಟರ್ಪ್ರಿಟರ್‌ಗೆ ಸೂಚನೆ ನೀಡಿದರು. ಇದಾದ ಬಳಿಕ ಇಬ್ಬರೂ ತೆರೆ ಮೇಲೆ ಕಾಣಿಸಿಕೊಂಡು ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ವಾದ ಮಂಡಿಸಿದರು. ಸನ್ನಿ ಅವರು ಕಲಾಪದಲ್ಲಿ ಪಾಲ್ಗೊಳ್ಳಲು ನ್ಯಾಯವಾದಿ ಸಂಚಿತ್ ಐನ್ ಅವರು ಅರೆಂಜ್ ಮಾಡಿದ್ದರು.

ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಎಲ್ಲರಿಗೂ ಸಮಾನ ನ್ಯಾಯ ದೊರೆಯಬೇಕು ಎಂದು ಪ್ರತಿಪಾದಿಸುತ್ತಾರೆ. ಕಳೆದ ವರ್ಷ, ದೈಹಿಕವಾಗಿ ಅಸಮರ್ಥರಾದವರು ಸುಪ್ರೀಂ ಕೋರ್ಟ್ ಸಂಕೀರ್ಣಕ್ಕೆ ಬಂದಾಗ ಎದುರಿಸುವ ಸಮಸ್ಯೆಗಳು ಹಾಗೂ ಎಲ್ಲರಿಗೂ ನ್ಯಾಯ ವ್ಯವಸ್ಥೆ ದೊರೆಯುವಂತೆ ಮಾಡಲು ಏನೇನು ಕ್ರಮ ಕೈಗೊಳ್ಳಬೇಕು ಎಂಬ ಕುರಿತು ಸೂಚಿಸುವಂತೆ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ವಿಶೇಷ ಎಂದರೆ, ಸಿಜೆಐ ಚಂದ್ರಚೂಡ್ ಅವರೂ ಇಬ್ಬರು ವಿಶೇಷ ಚೇತನ ಮಕ್ಕಳನ್ನು ದತ್ತು ತೆಗೆದುಕೊಂಡು ಸಾಕುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ: Supreme Court : ಪಿಎಂ ಕೇರ್ಸ್​ ಎಲ್ಲ ಅನಾಥ ಮಕ್ಕಳಿಗೂ ಮೀಸಲಾಗಲಿ; ಕೇಂದ್ರಕ್ಕೆ ಸುಪ್ರೀಂ ಕೋರ್ಟ್​ ಹೇಳಿದ್ಯಾಕೆ?

ಸಂಜ್ಞೆ ಭಾಷೆಯ ಮೂಲಕ ವಾದ ಮಾಡಿದ ಸಂಚಿತಾ ಐನ್ ಅವರು, ಈ ಕ್ಷಣದ ಮಹತ್ವವು ಭಾರತೀಯ ಕಾನೂನು ವ್ಯವಸ್ಥೆಯಲ್ಲಿ ನಿಜವಾದ ಒಳಗೊಳ್ಳುವಿಕೆ ಮತ್ತು ನ್ಯಾಯ ಪ್ರವೇಶದ ಹಾದಿಯಲ್ಲಿ ಉಳಿದಿರುವ ಸವಾಲುಗಳೊಂದಿಗೆ ಸಂಬಂಧ ಹೊಂದಿದೆ ಎಂದು ಮಾಧ್ಯಮಗಳಿಗೆ ತಿಳಿಸಿದರು. ಸಂಜ್ಞೆ ಭಾಷೆಯ ವ್ಯಾಪ್ತಿಯನ್ನು ಹೆಚ್ಚಿಸುವಲ್ಲಿ ಆಡಳಿತ ವ್ಯವಸ್ಥೆಯು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.

ಭಾನುವಾರ, ಸುಪ್ರೀಂ ಕೋರ್ಟ್ ಸಹ ಮೊದಲ ಬಾರಿಗೆ ಮಕ್ಕಳ ರಕ್ಷಣೆಗೆ ಸಂಬಂಧಿಸಿದ ತನ್ನ ಎರಡು ದಿನಗಳ ರಾಷ್ಟ್ರೀಯ ಮಧ್ಯಸ್ಥಗಾರರ ಸಮಾಲೋಚನೆಯಲ್ಲಿ ಸಂಜ್ಞೆ ಭಾಷಾ ವ್ಯಾಖ್ಯಾನಕಾರರನ್ನು ಬಳಸಿತು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading

ದೇಶ

MP Assembly Election: ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್, ಮೂವರು ಕೇಂದ್ರ ಸಚಿವರು, ಹಲವು ಸಂಸದರು ಕಣಕ್ಕೆ!

MP Assembly Election: ವರ್ಷಾಂತ್ಯಕ್ಕೆ ನಡೆಯಲಿರುವ ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆಗೆ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್ ಆಗಿದೆ. ಕಳೆದ ಆಗಸ್ಟ್‌ನಲ್ಲಿ ಮೊದಲನೇ ಪಟ್ಟಿ ಬಿಡುಗಡೆಯಾಗಿತ್ತು.

VISTARANEWS.COM


on

Edited by

BJP Flag
Koo

ನವದೆಹಲಿ: ಈ ವರ್ಷಾಂತ್ಯಕ್ಕೆ ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆ(MP Assembly Election) ನಡೆಯಲಿದ್ದು, ಭಾರತೀಯ ಜನತಾ ಪಾರ್ಟಿಯು (BJP) ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು (Candidates List) ಸೋಮವಾರ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಮೂವರು ಕೇಂದ್ರ ಸಚಿವರು (Union Ministers) ಹಾಗೂ ಹಲವು ಸಂಸದರಿಗೆ (Members of Parliament) ವಿಧಾನಸಭೆಗೆ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ಚುನಾವಣಾ ವೇಳಾಪಟ್ಟಿ ಇನ್ನೂ ಪ್ರಕಟವಾಗಿಲ್ಲ. ಹಾಗಿದ್ದರೂ ಬಿಜೆಪಿಯು, ಕಳೆದ ಆಗಸ್ಟ್‌ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿ, ಎಲ್ಲ ರಾಜಕೀಯ ಪಕ್ಷಗಳಿಗೆ ಶಾಕ್ ನೀಡಿತ್ತು. ಇದೀಗ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಮಧ್ಯ ಪ್ರದೇಶ ವಿಧಾನಸಭೆ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿರುವ ಎರಡನೇ ಪಟ್ಟಿಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಆಹಾರ ಸಂಸ್ಕರಣೆ ರಾಜ್ಯ ಸಚಿವ ಪ್ರಹ್ಲಾದ್ ಪಟೇಲ್ ಸೇರಿ ಮೂವರು ಸಚಿವರಿಗೆ ಟಿಕೆಟ್ ನೀಡಿದೆ. ಜತೆಗೆ ಹಲವು ಸಂಸದರಿಗೂ ಸ್ಪರ್ಧಿಸಲು ಸೂಚಿಸಲಾಗಿದೆ. ಸಚಿವ ತೋಮರ್ ಅವರು ದಿಮಾನಿ ಹಾಗೂ ಪಟೇಲ್ ಅವರು ನರಸಿಂಗಪುರ ವಿಧಾನಸಭೆ ಕ್ಷೇತ್ರಗಳಿಂದ ಕಣಕ್ಕಿಳಿಯಲಿದ್ದಾರೆ.

ಕೇಂದ್ರದ ಸಚಿವ ಸಂಪುಟದಲ್ಲಿ ಸಚಿವರಾಗಿರುವ ಹಿರಿಯ ನಾಯಕರನ್ನು ಕಣಕ್ಕಿಳಿಸುವ ನಿರ್ಧಾರವನ್ನು ಪಕ್ಷದ ಹೈಕಮಾಂಡ್ ತೆಗೆದುಕೊಂಡಿದ್ದು, ಇದರಿಂದ ಗೆಲ್ಲುವ ಅವಕಾಶ ಪಕ್ಷಕ್ಕೆ ಹೆಚ್ಚಾಗುತ್ತದೆ ಎಂದು ಪಕ್ಷದ ಪದಾಧಿಕಾರಿಗಳು ಭಾವಿಸಿದ್ದಾರೆ. ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ರಾಜ್ಯ ಸಚಿವ ಫಗ್ಗನ್ ಸಿಂಕ್ ಕುಲಸ್ತೆ ಅವರು ನಿವಾಸ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಇದು ಎಸ್‌ಟಿ ಮೀಸಲು ಕ್ಷೇತ್ರವಾಗಿದೆ.

ಸಂಸದರಾದ ಗಣೇಸ್ ಸಿಂಗ್, ರಾಕೇಶ್ ಸಿಂಗ್, ರಿತಿ ಪಾಠಕ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಅವರಿಗೂ ಟಿಕೆಟ್ ನೀಡಲಾಗಿದೆ. ಹಾಗೆಯೇ, ಹೋಶಂಗಾಬಾದ್ ಸಂಸದ ಉದಯ ಪ್ರತಾಪ್ ಸಿಂಗ್ ಅವರು ಗದರವಾರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಈ ಸುದ್ದಿಯನ್ನೂ ಓದಿ: MP Election 2023: ಮಧ್ಯಪ್ರದೇಶದಲ್ಲಿ ಸಿಲಿಂಡರ್ ಬೆಲೆ 450 ರೂ.! ಎಲೆಕ್ಷನ್ ಗೆಲ್ಲಲು ಉಚಿತ ಕೊಡುಗೆ

ಎರಡನೇ ಪಟ್ಟಿಯಲ್ಲಿ ಒಟ್ಟು 39 ಅಭ್ಯರ್ಥಿಗಳಿದ್ದು, ಈ ಪೈಕಿ 6 ಮಹಿಳೆಯರಿದ್ದಾರೆ. ಜತೆಗೆ 5 ಕ್ಷೇತ್ರಗಳು ಎಸ್ ಸಿ ಮತ್ತು 10 ಕ್ಷೇತ್ರಗಳು ಎಸ್‌ಟಿ ಮೀಸಲಾಗಿವೆ. ಬಿಜೆಪಿಯು 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಳೆದ ಆಗಸ್ಟ್ ತಿಂಗಳಲ್ಲಿ ಘೋಷಣೆ ಮಾಡಿತ್ತು. ಮಧ್ಯ ಪ್ರದೇಶ ಮಾತ್ರವಲ್ಲದೇ, ರಾಜಸ್ಥಾನ, ತೇಲಂಗಾಣ, ಛತ್ತೀಸ್‌ಗಢ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆಗೆ ವರ್ಷಾಂತ್ಯಕ್ಕೆ ಚುನಾವಣೆ ನಡೆಯಲಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Continue Reading

ಕರ್ನಾಟಕ

VISTARA TOP 10 NEWS: ನಾಳೆ ಬೆಂಗಳೂರು ಬಂದ್‌, ಶುಕ್ರವಾರ ಕರ್ನಾಟಕ ಬಂದ್‌, ಎಐಎಡಿಎಂಕೆ-ಬಿಜೆಪಿ ಮೈತ್ರಿಯೂ ಬಂದ್‌

VISTARA TOP 10 NEWS : ನಾಳೆ ಬೆಂಗಳೂರು ಬಂದ್‌, ಶುಕ್ರವಾರ ಕರ್ನಾಟಕ ಬಂದ್‌, ತಮಿಳುನಾಡಿನಲ್ಲಿ ಬಿಜೆಪಿ-ಎಐಎಡಿಎಂಕೆ ಬಂದ್‌! ಇನ್ನು ಪ್ರಧಾನಿ ಮೋದಿ ಅವರು ಅ. 1ರಂದು ಎಲ್ಲರೂ ಸೇರಿ ಕಸ ಗುಡಿಸೋಣ ಅಂದಿದ್ದಾರೆ. ಹೀಗೆ ಪ್ರಮುಖ ಸುದ್ದಿಗಳ ಗುಚ್ಛವೇ ವಿಸ್ತಾರ ಟಾಪ್‌ 10 ನ್ಯೂಸ್‌.

VISTARANEWS.COM


on

Edited by

Vistara Top 10 News 2509
Koo

1. ಕಾವೇರಿ ಕಿಚ್ಚು: ರಾಜ್ಯಕ್ಕೆ ಡಬಲ್‌ ಬಂದ್‌ ಶಾಕ್‌; ನಾಳೆ ಬೆಂಗಳೂರು, ಸೆ. 29 ಕರ್ನಾಟಕ ಬಂದ್‌
ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಕರೆ ನೀಡಲಾಗಿರುವ ಸೆ. 26ರ ಬೆಂಗಳೂರು ಬಂದ್‌ ಬೆನ್ನಿಗೇ ಕನ್ನಡ ಚಳವಳಿ ವಾಟಾಳ್‌ ಪಕ್ಷದ ನಾಯಕ ವಾಟಾಳ್‌ ನಾಗರಾಜ್‌ ಸೆ. 29ರಂದು ಅಖಿಲ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ. ಹೀಗಾಗಿ ವಾರದಲ್ಲಿ ಎರಡು ಬಂದ್‌ ನಡೆಯಲಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ವರದಿ : ನಾಯಕರ ಪ್ರತಿಷ್ಠೆಯಿಂದ ಬೆಂಗಳೂರಿಗೆ ಡಬಲ್‌ ಬಂದ್‌ ಬಿಸಿ, ಬೇಕಿತ್ತಾ ಎರಡೆರಡು ಬಂದ್‌?

2. ನಾಳೆ ಬೆಂಗಳೂರು ಬಂದ್‌: ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ; ಏನಿರುತ್ತೆ? ಏನಿರಲ್ಲ?
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ (Cauvery water Dispute) ಮಾಡಬಾರದು ಎಂದು ಆಗ್ರಹಿಸಿ ಜಲ ಸಂರಕ್ಷಣಾ ಸಮಿತಿ ಕರೆ ನೀಡಿರುವ ಸೆ. 26ರ ಬೆಂಗಳೂರು ಬಂದ್‌ (Bangalore bandh) ಮೊದಲು ಪ್ರಕಟಿಸಿದಂತೆ ಯಥಾವತ್ತಾಗಿ ನಡೆಯಲಿದೆ. ಹಾಗಿದ್ದರೆ ಏನಿರುತ್ತೆ? ಏನಿರಲ್ಲ? ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ಸುದ್ದಿ1: ಬಲವಂತದಿಂದ ಬಂದ್‌ ಮಾಡಿಸುವಂತಿಲ್ಲ; ಮೆರವಣಿಗೆಗೆ ಅವಕಾಶವಿಲ್ಲ ಎಂದ ಕಮಿಷನರ್‌
ಪೂರಕ ಸುದ್ದಿ2: ಬಂದ್‌ ಯಶಸ್ವಿ ಆಗಬೇಕು; ಹೋಟೆಲ್‌ ಓಪನ್‌ ಮಾಡ್ಬೇಡಿ, ಸಮಸ್ಯೆಗೆ ನೀವೇ ಹೊಣೆ: ಬಿಎಸ್‌ವೈ
ಪೂರಕ ಸುದ್ದಿ3: ಯಾವ ಬಂದ್‌ಗೂ ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲ ಇಲ್ಲ; ನಾರಾಯಣ ಗೌಡ ಘೋಷಣೆ

3 .ಜಲಶಕ್ತಿ ಇಲಾಖೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಹಾಕಲಿ, ಮೋದಿ ಮಧ್ಯಪ್ರವೇಶಿಸಲಿ: ದೇವೇಗೌಡ
ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯಕ್ಕೆ ಹಿನ್ನಡೆಯಾಗಿರುವುದಕ್ಕೆ ರಾಜ್ಯ ಸರ್ಕಾರದ ವೈಫಲ್ಯ ಎಂದು ಹೇಳಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಈ ಸಂಬಂಧ ಜಲ ಶಕ್ತಿ ಇಲಾಖೆಯಿಂದ ಅರ್ಜಿ ಸಲ್ಲಿಕೆ ಮಾಡಬೇಕು. ಇದಕ್ಕೆ ಪ್ರಧಾನಿ ಮೋದಿ ಮಧ್ಯ ಪ್ರವೇಶ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಈ ಸುದ್ದಿಯನ್ನೂ ಓದಿ: ಕಾವೇರಿ ನೆಪದಲ್ಲಿ ಬಿಜೆಪಿ-ಜೆಡಿಎಸ್‌ನಿಂದ ರಾಜಕೀಯ: ಸಿದ್ದರಾಮಯ್ಯ ಆರೋಪ

4. ಏಕಕಾಲಕ್ಕೆ ರಾಜ್ಯಾದ್ಯಂತ ದಾಖಲೆ ಬರೆದ ಜನತಾ ದರ್ಶನ: ಸಿದ್ದರಾಮಯ್ಯ ಚಿಂತನೆ ಕ್ಲಿಕ್‌
ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaih) ಅವರ ಸೂಚನೆಯಂತೆ ಇದೇ ಮೊಟ್ಟ ಮೊದಲ ಬಾರಿಗೆ ರಾಜ್ಯಾದ್ಯಂತ ಏಕ‌ಕಾಲಕ್ಕೆ ಎಲ್ಲಾ ಜಿಲ್ಲೆಗಳಲ್ಲಿ ಜನತಾ ದರ್ಶನ (Janata Darshana) ಕಾರ್ಯಕ್ರಮ ನಡೆದಿದ್ದು, ಸಾರ್ವಜನಿಕರಿಂದ ಅತ್ಯುತ್ತಮ ಸ್ಪಂದನೆ ಮತ್ತು ಪ್ರಶಂಸೆ ವ್ಯಕ್ತವಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. ಏಷ್ಯನ್‌ ಗೇಮ್ಸ್‌: ಐತಿಹಾಸಿಕ ಚಿನ್ನ ಗೆದ್ದ ಭಾರತ ಮಹಿಳಾ ಕ್ರಿಕೆಟ್‌ ತಂಡ; ಲಂಕಾ ವಿರುದ್ಧ ರೋಚಕ ಜಯ
ಇದೇ ಮೊದಲ ಬಾರಿಗೆ ಏಷ್ಯನ್​ ಗೇಮ್ಸ್​(Asian Games 2023) ಕ್ರೀಡಾಕೂಟದಲ್ಲಿ ಸ್ಪರ್ಧಿಸಿದ್ದ ಭಾರತ ಮಹಿಳಾ ಕ್ರಿಕೆಟ್​ ತಂಡ ಮೊದಲ ಪ್ರಯತ್ನದಲ್ಲೇ ಐತಿಹಾಸಿಕ ಚಿನ್ನದ ಪದಕ ಜಯಿಸಿ ಮರೆದಾಡಿದೆ. ಅಲ್ಪ ಮೊತ್ತದ ಪಂದ್ಯದಲ್ಲಿ ಲಂಕಾ ವಿರುದ್ಧ ರೋಚಕ 19 ರನ್​ಗಳ ಗೆಲುವು ಸಾಧಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ದೇಶಾದ್ಯಂತ ಅ.1ರಂದು 1 ಗಂಟೆ ಸ್ವಚ್ಛತಾ ಅಭಿಯಾನ: ಎಲ್ಲರೂ ಬನ್ನಿ ಎಂದು ಆಹ್ವಾನಿಸಿದ ಪ್ರಧಾನಿ ಮೋದಿ
ಗಾಂಧಿ ಜಯಂತಿಗೂ ಒಂದು ದಿನ ಮೊದಲು ಅಂದರೆ ಅಕ್ಟೋಬರ್‌ 1ರಂದು ದೇಶಾದ್ಯಂತ ಸ್ವಚ್ಛತಾ ಅಭಿಯಾನ ಕೈಗೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಂದು ಒಂದು ಗಂಟೆ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಳ್ಳಿ ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಈ ಸುದ್ದಿಯನ್ನೂ ಓದಿ: ಎಲ್ಲ ಗ್ಯಾರಂಟಿಗಳಿಗಳ ಜಾರಿಗೂ ಮೋದಿಯೇ ಗ್ಯಾರಂಟಿ; ಪ್ರಧಾನಿ ಅಬ್ಬರದ ಭಾಷಣ

7. ಭಾರತ ವಿಭಜಿಸಿ ಹಲವು ದೇಶ ಸೃಷ್ಟಿಸುವುದು ಖಲಿಸ್ತಾನಿ ಉಗ್ರ ಪನ್ನುನ್‌ ಗುರಿ; ಷಡ್ಯಂತ್ರ ಬಯಲು
ಕೆನಡಾದಲ್ಲಿ ಕುಳಿತು ಭಾರತ ವಿರೋಧಿ ಕೃತ್ಯಗಳಲ್ಲಿ ತೊಡಗಿರುವ ನಿಷೇಧಿತ ಸಿಖ್ಸ್‌ ಫಾರ್‌ ಜಸ್ಟಿಸ್‌ ಸಂಘಟನೆಯ ಗುರುಪತ್ವಂತ್‌ ಸಿಂಗ್‌ ಪನ್ನುನ್‌ (Gurpatwant Singh Pannun) ಆಸ್ತಿಗಳನ್ನು ಎನ್‌ಐಎ ಜಪ್ತಿ ಮಾಡಿದ ಬೆನ್ನಲ್ಲೇ ಉಗ್ರನ ಕುರಿತು ಸ್ಫೋಟಕ ಮಾಹಿತಿ ಲಭ್ಯವಾಗಿದೆ. “ಭಾರತವನ್ನು ವಿಭಜಿಸಿ, ಹಲವು ದೇಶಗಳನ್ನಾಗಿ ಸೃಷ್ಟಿಸುವುದು ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಗುರಿಯಾಗಿದೆ” ಎನ್ನುವುದೇ ಆ ಮಾಹಿತಿ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8. ಬಿಜೆಪಿ ಜತೆ ಮೈತ್ರಿ ಇಲ್ಲ; ಎಐಎಡಿಎಂಕೆ ಅಧಿಕೃತ ಘೋಷಣೆ! ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆ
ತಮ್ಮ ಪಕ್ಷದ ನಾಯಕರನ್ನು ಅವಮಾನಿಸುತ್ತಿರುವ ಬಿಜೆಪಿ ಜತೆಗೆ ಸಖ್ಯವನ್ನು ಕಡಿದುಕೊಂಡಿರುವುದಾಗಿ ಇತ್ತೀಚೆಗಷ್ಟೇ ಎಐಎಡಿಎಂಕೆ ನಾಯಕರೊಬ್ಬರು ಹೇಳಿದ್ದರು. ಇದೀಗ, ಬಿಜೆಪಿ ಜತೆಗಿನ ಮೈತ್ರಿಯನ್ನು ಮುರಿದುಕೊಂಡಿರುವುದಾಗಿ ಎಐಎಡಿಎಂಕೆ ಅಧಿಕೃತವಾಗಿ ಘೋಷಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. 9 ತಿಂಗಳೊಳಗೆ 2000 ಕೋಟಿ ರೂ. ಕೊಳ್ಳೆ ಹೊಡೆದ ಶಾರುಖ್;‌ ಜವಾನ್‌ ಹೊಸ ದಾಖಲೆ
ಶಾರುಖ್ ಖಾನ್‌ ಪ್ರಧಾನ ಪಾತ್ರದಲ್ಲಿರುವ ಜವಾನ್, ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 1000 ಕೋಟಿ ರೂ. ಗಳಿಸಿದೆ (Jawan box office collection).ಪಠಾಣ್‌ ಸಿನಿಮಾವೂ 1000 ಕೋಟಿ ದಾಟಿತ್ತು. ಹೀಗಾಗಿ ಒಂಬತ್ತು ತಿಂಗಳ ಅವಧಿಯಲ್ಲಿ ಶಾರುಖ್‌ 2000 ಕೋಟಿ ಕೊಳ್ಳೆ ಹೊಡೆದಂತಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. 100 ಫ್ಯಾನ್‌ಗಳಲ್ಲಿ ಅರಳಿದ ಗಣಪ; ಹ್ಯಾವಲ್ಸ್‌ ಕಂಪನಿಯ ಕ್ರಿಯೆಟಿವಿಟಿಗೆ ನೆಟ್ಟಿಗರ ಮೆಚ್ಚುಗೆ
ದೇಶಾದ್ಯಂತ ಅದ್ಧೂರಿಯಾಗಿ ಆಚರಿಸುವ ಗಣೇಶ ಚತುರ್ಥಿ(Ganesh Chaturthi) ಹಬ್ಬವನ್ನು ಹ್ಯಾವಲ್ಸ್‌ ಕಂಪೆನಿ(Havells) ಕ್ರಿಯಾತ್ಮಕವಾಗಿ ಬರಮಾಡಿಕೊಂಡಿದೆ. 100 ಫ್ಯಾನ್‌ಗಳನ್ನು ಬಳಸಿಕೊಂಡು ಗಣೇಶನನ್ನು ರಚಿಸಿ ಗಮನ ಸೆಳೆದಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

Continue Reading
Advertisement
gold rate today
ಕರ್ನಾಟಕ9 mins ago

Gold Rate Today: ಬಂದ್‌ ನಡುವೆ ಬಂಗಾರದ ಬೆಲೆ ಇಳಿಕೆ, ಇಷ್ಟಿದೆ ಇಂದಿನ ದರ

CM Siddaramaiah and BJP Karnataka infront of KRS Dam
ಕರ್ನಾಟಕ17 mins ago

Cauvery water dispute : ನಿರುತ್ತರ ಮುಖ್ಯಮಂತ್ರಿ ಎಂದು ಟೀಕಿಸಿದ ಬಿಜೆಪಿ; ಸಿದ್ದರಾಮಯ್ಯಗೆ 7 ಪ್ರಶ್ನೆ!

Veerendra patil wife death
ಕರ್ನಾಟಕ25 mins ago

Veerendra Patil : ಮಾಜಿ ಸಿಎಂ ವೀರೇಂದ್ರ ಪಾಟೀಲ್‌ ಪತ್ನಿ ಶಾರದಾ ಪಾಟೀಲ್‌ ವಿಧಿವಶ

Indian domestic cricket players
ಕ್ರಿಕೆಟ್29 mins ago

BCCI AGM: ಅತಿಥಿ ಕ್ರಿಕೆಟ್ ಆಟಗಾರರಿಗೆ ಶಾಕ್​ ನೀಡಿದ ಬಿಸಿಸಿಐ

solo travel
ಅಂಕಣ34 mins ago

ದಶಮುಖ ಅಂಕಣ: ಕೋಶ ಓದಲಾಗದಿದ್ದರೆ ದೇಶವನ್ನಾದರೂ ಸುತ್ತಿ!

Girl standing in rain
ಉಡುಪಿ38 mins ago

Weather Report : ಉತ್ತರ ಕರ್ನಾಟಕದಲ್ಲಿ ಮಳೆ ಚುರುಕು; ಬೆಂಗಳೂರಲ್ಲಿ ಹೇಗೆ?

manipur
ದೇಶ54 mins ago

Manipur Horror: ಮೈತಿ ವಿದ್ಯಾರ್ಥಿಗಳಿಬ್ಬರ ಶವಗಳ ಫೋಟೊ ವೈರಲ್;‌ ಮಣಿಪುರ ಮತ್ತೆ ಉದ್ವಿಗ್ನ?

Bus Overturns after axel cut near Belagavi
ಕರ್ನಾಟಕ1 hour ago

Road Accident : ಆಕ್ಸೆಲ್ ಕಟ್‌ ಆಗಿ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಬಸ್‌; 20ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗಾಯ

Saurashtra Cricket Association Stadium Rajkot
ಕ್ರಿಕೆಟ್1 hour ago

IND vs AUS 3rd ODI: ರಾಜ್​ಕೋಟ್​ನ​ ಪಿಚ್​ ರಿಪೋರ್ಟ್​ ದಾಖಲೆಯೇ ವಿಚಿತ್ರ

HD Kumaraswamy Bandh
ಕರ್ನಾಟಕ1 hour ago

Bangalore Bandh : ಪ್ರತಿಭಟನಾಕಾರರ ಬಂಧನಕ್ಕೆ ಎಚ್‌ಡಿಕೆ ಕೆಂಡಾಮಂಡಲ; ಇದು ಸ್ಟಾಲಿನ್‌ನ ಬಾಡಿಗೆ ಸರ್ಕಾರವೇ?

7th Pay Commission
ನೌಕರರ ಕಾರ್ನರ್11 months ago

7th Pay Commission | ಸದ್ಯವೇ 7ನೇ ವೇತನ ಆಯೋಗ ರಚಿಸಿ ಆದೇಶ; ಮುಖ್ಯಮಂತ್ರಿ ಭರವಸೆ

DCC Bank Recruitment 2023
ಉದ್ಯೋಗ8 months ago

DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ

Sphoorti Salu
ಸುವಚನ4 months ago

ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ

Govt employees ssociation
ಕರ್ನಾಟಕ8 months ago

7th pay commission | ಸರ್ಕಾರಿ ನೌಕರರಿಗೆ ವಾರಕ್ಕೆ 5 ದಿನ ಕೆಲಸ, ಹಳೆ ಪಿಂಚಣಿ ಯೋಜನೆ; ವೇತನ ಆಯೋಗದ ಮುಂದೆ ಬೇಡಿಕೆ ಪಟ್ಟಿ

kpsc recruitment 2023 pdo recruitment 2023
ಉದ್ಯೋಗ2 months ago

PDO Recruitment 2023 : 350+ ಪಿಡಿಒ ಹುದ್ದೆಗಳಿಗೆ ಈ ಬಾರಿ ಕೆಪಿಎಸ್‌ಸಿ ಮೂಲಕ ನೇಮಕ

Rajendra Singh Gudha
ದೇಶ3 months ago

Rajasthan Minister: ಸೀತಾ ಮಾತೆ ಸುಂದರಿ! ಅದ್ಕೆ ರಾಮ, ರಾವಣ ಆಕೆ ಹಿಂದೆ ಬಿದ್ದಿದ್ದರು; ಕಾಂಗ್ರೆಸ್ ಸಚಿವ

Village Accountant Recruitment
ಉದ್ಯೋಗ7 months ago

Village Accountant Recruitment : ರಾಜ್ಯದಲ್ಲಿ 2007 ಗ್ರಾಮ ಲೆಕ್ಕಿಗರ ಹುದ್ದೆ ಖಾಲಿ; ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳಿವೆ ನೋಡಿ

Entitled leave for employees involved in strike; Order from Govt
ನೌಕರರ ಕಾರ್ನರ್7 months ago

Govt Employees Strike : ಮುಷ್ಕರದಲ್ಲಿ ಭಾಗಿಯಾದ ನೌಕರರಿಗೆ ವೇತನ ಸಹಿತ ರಜೆ; ಸದ್ಯವೇ ಸರ್ಕಾರದಿಂದ ಆದೇಶ

betel nut smuggling Areca News
ಕರ್ನಾಟಕ9 months ago

Areca News | ಅಕ್ರಮ ಅಡಿಕೆ ಆಮದಿನ ಕಿಂಗ್‌ಪಿನ್‌ ಅರೆಸ್ಟ್‌; ಇನ್ನಾದರೂ ಏರೀತೆ ಅಡಿಕೆಯ ಬೆಲೆ?

7th Pay Commission
ಕರ್ನಾಟಕ11 months ago

7th Pay Commission | 7 ವೇತನ ಆಯೋಗ ರಚನೆಯ ಘೋಷಣೆ; ಹರ್ಷ ವ್ಯಕ್ತಪಡಿಸುತ್ತಿರುವ ಸರ್ಕಾರಿ ನೌಕರರು

Dina Bhavishya
ಪ್ರಮುಖ ಸುದ್ದಿ7 hours ago

Dina Bhavishya : ಈ ರಾಶಿಯ ಉದ್ಯೋಗ ಆಕಾಂಕ್ಷಿಗಳಿಗೆ ಶುಭ ಸುದ್ದಿ

At the Janata Darshan event MP S Muniswamy MLA SN Narayanaswamy is fighting
ಕರ್ನಾಟಕ18 hours ago

Janata Darshan : ವೇದಿಕೆಯಲ್ಲಿ ಭೂ ಗಲಾಟೆ; ಹೊಡೆದಾಟಕ್ಕೆ ಮುಂದಾದ ಶಾಸಕ-ಸಂಸದ

Davanagere bandh
ಕರ್ನಾಟಕ20 hours ago

Davanagere bandh : ಭದ್ರಾ ನೀರಿಗಾಗಿ ಬೀದಿಗಿಳಿಯಲಿಲ್ಲ ಭತ್ತ ಬೆಳೆಗಾರರು!

HD Devegowda Press meet
ಕರ್ನಾಟಕ22 hours ago

Cauvery water dispute : ಜಲ ಶಕ್ತಿ ಇಲಾಖೆಯಿಂದ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಲಿ, ಮೋದಿ ಮಧ್ಯ ಪ್ರವೇಶಿಸಲಿ: ಎಚ್.ಡಿ. ದೇವೇಗೌಡ

Farmers protest Mundargi bandh
ಕರ್ನಾಟಕ23 hours ago

Mundargi Bandh : ಬರ ಪೀಡಿತ ತಾಲೂಕು ಘೋಷಣೆಗೆ ಒತ್ತಾಯಿಸಿ ಮುಂಡರಗಿ ಬಂದ್!

Dina bhavishya
ಪ್ರಮುಖ ಸುದ್ದಿ1 day ago

Dina Bhavishya : ಈ ರಾಶಿಯವರಿಗೆ ಇಂದು ಹೂಡಿಕೆ ಬೇಡ! ಕೆಲ ವಿಷಯದಲ್ಲಿ ಇರಲಿ ಗೌಪ್ಯತೆ

Actor padhmini Kirk
ಕರ್ನಾಟಕ2 days ago

Viral News : ಕಿರುತೆರೆ ನಟಿ ಕಿರಿಕ್‌; ಕೆಲಸ ಕಳೆದುಕೊಂಡ ಓಲಾ ಆಟೋ ಡ್ರೈವರ್‌!

dina bhavishya
ಪ್ರಮುಖ ಸುದ್ದಿ2 days ago

Dina Bhavishya : ಈ ರಾಶಿಯವರಿಗೆ ಕೋಪವೇ ಮುಳುವು!

Dina bhavishya
ಪ್ರಮುಖ ಸುದ್ದಿ3 days ago

Dina Bhavishya : ಈ ರಾಶಿಯ ಉದ್ಯೋಗಿಗಳಿಗೆ ಇಂದು ಬಾಸ್‌ನಿಂದ ಕಿರಿಕ್‌!

Dina Bhavishya
ಪ್ರಮುಖ ಸುದ್ದಿ4 days ago

Dina Bhavishya : ದಿನದ ಮಟ್ಟಿಗೆ ಈ ರಾಶಿಯವರು ಹೂಡಿಕೆ ಮಾಡ್ಬೇಡಿ!

ಟ್ರೆಂಡಿಂಗ್‌