ಭಾರತದ ರಾಜಕಾರಣಿಗಳೂ ನ್ಯೂಜಿಲ್ಯಾಂಡ್​ ಪ್ರಧಾನಿ ಹಾದಿ ತುಳಿಯಬೇಕು; ಜಸಿಂದಾರನ್ನು ಹೊಗಳಿದ ಕಾಂಗ್ರೆಸ್ ನಾಯಕ - Vistara News

ದೇಶ

ಭಾರತದ ರಾಜಕಾರಣಿಗಳೂ ನ್ಯೂಜಿಲ್ಯಾಂಡ್​ ಪ್ರಧಾನಿ ಹಾದಿ ತುಳಿಯಬೇಕು; ಜಸಿಂದಾರನ್ನು ಹೊಗಳಿದ ಕಾಂಗ್ರೆಸ್ ನಾಯಕ

ವೃತ್ತಿ ಜೀವನದ ಉತ್ತುಂಗದ ಸ್ಥಿತಿಯಲ್ಲಿ ಇರುವಾಗಲೇ, ಅವರಾಗಿಯೇ ಅವರು ಅಧಿಕಾರ ಬಿಡುತ್ತಿರುವ ನ್ಯೂಜಿಲ್ಯಾಂಡ್ ಪ್ರಧಾನಿಯನ್ನು ಜೈರಾಮ್​ ರಮೇಶ್ ಹೊಗಳಿ ಟ್ವೀಟ್ ಮಾಡಿದ್ದಾರೆ.

VISTARANEWS.COM


on

Jairam Ramesh praises New Zealand PM Over Her resign
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ಅಧಿಕಾರ ಬೇಕು ಎನ್ನುವ ರಾಜಕಾರಣಿಗಳ ಮಧ್ಯೆ, ಅಧಿಕಾರ ಸಾಕು ಎನ್ನುತ್ತ ರಾಜೀನಾಮೆ ನೀಡಿದ ನ್ಯೂಜಿಲ್ಯಾಂಡ್​ ಪ್ರಧಾನಮಂತ್ರಿ ಜಸಿಂದಾ ಆರ್ಡರ್ನ್​​ ಅವರನ್ನು ಕಾಂಗ್ರೆಸ್​ ಸಂಸದ, ಹಿರಿಯ ನಾಯಕ ಜೈರಾಮ್​ ರಮೇಶ್​ ಹೊಗಳಿದ್ದಾರೆ. ಭಾರತೀಯ ರಾಜಕಾರಣಿಗಳೂ ಅವರನ್ನು ನೋಡಿ ಕಲಿಯಬೇಕು ಎಂಬ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ನ್ಯೂಜಿಲ್ಯಾಂಡ್​​ನಲ್ಲಿ ಅಕ್ಟೋಬರ್​​ನಲ್ಲಿ ಚುನಾವಣೆ ನಡೆಯಲಿದೆ. ಅದಕ್ಕೂ ಮೊದಲೇ ಜಸಿಂದಾ ಆರ್ಡರ್ನ್​ ಪ್ರಧಾನಿ ಹುದ್ದೆ ತೊರೆದಿದ್ದಾರೆ. ಯಾವುದೇ ಮಹತ್ವದ ಕಾರಣವೂ ಇಲ್ಲದೆ ಇದ್ದರೂ, 6 ವರ್ಷದ ಅಧಿಕಾರವೇ ಸಾಕು ಎಂದು ಹೇಳಿ ರಾಜೀನಾಮೆ ಕೊಟ್ಟಿದ್ದಾರೆ. ಫೆಬ್ರವರಿ 7ರಂದು ಅವರ ಅಧಿಕಾರ ಅವಧಿ ಅಂತ್ಯಗೊಳ್ಳಲಿದೆ.

ಹೀಗೆ ವೃತ್ತಿ ಜೀವನದ ಉತ್ತುಂಗದ ಸ್ಥಿತಿಯಲ್ಲಿ ಇರುವಾಗಲೇ, ಅವರಾಗಿಯೇ ಅವರು ಅಧಿಕಾರ ಬಿಡುತ್ತಿರುವ ನ್ಯೂಜಿಲ್ಯಾಂಡ್ ಪ್ರಧಾನಿಯನ್ನು ಹೊಗಳಿ, ಟ್ವೀಟ್ ಮಾಡಿದ ಜೈರಾಮ್​ ರಮೇಶ್, ‘ಖ್ಯಾತ ಕ್ರಿಕೆಟ್​ ಆಟಗಾರ, ವೀಕ್ಷಕ ವಿವರಣೆಗಾರನಾಗಿದ್ದ ವಿಜಯ್​ ಮರ್ಚಂಟ್​ ಅವರೂ ಕೂಡ ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿ ಇದ್ದಾಗಲೇ ನಿವೃತ್ತಿ ಪಡೆದರು. ಇದೀ ಜಸಿಂದಾ ಅವರೂ ಮರ್ಚಂಟ್​ ದಾರಿಯನ್ನೇ ತುಳಿದಿದ್ದಾರೆ. ತಾವೇ ಅಧಿಕಾರ ತ್ಯಜಿಸುತ್ತಿದ್ದಾರೆ. ‘ಇವರು ಯಾಕೆ ಹೋಗುತ್ತಿಲ್ಲ ಎಂದು ಜನ ಅಸಮಾಧಾನ ಪಟ್ಟುಕೊಳ್ಳುವುದಕ್ಕೂ ಮೊದಲು, ಇವರು ಯಾಕೆ ಅಧಿಕಾರ ಬಿಟ್ಟು ಹೋಗುತ್ತಿದ್ದಾರೆ ಎಂದು ಜನರು ಪ್ರಶ್ನಿಸುವಂತೆ ಮಾಡಿ ಹೋಗಬೇಕು. ಭಾರತದ ಹೆಚ್ಚೆಚ್ಚು ರಾಜಕೀಯ ನಾಯಕರು ಜಸಿಂದಾ ಆರ್ಡರ್ನ್​​ ದಾರಿಯಲ್ಲಿ ನಡೆಯಬೇಕು’ ಎಂದು ಹೇಳಿದ್ದಾರೆ. ಅಂದರೆ ಸುದೀರ್ಘ ಸಮಯದಿಂದ ಅಧಿಕಾರದಲ್ಲಿ ಇರುವವರು ಅವರಾಗಿಯೇ ತಮ್ಮ ಸಮಯ ಅರಿತುಕೊಂಡು ಹೊರಡಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: Jacinda Ardern: ‘ನನಗಿನ್ನು ಅಧಿಕಾರ ಸಾಕು’ ಎನ್ನುತ್ತ ಪ್ರಧಾನಮಂತ್ರಿ ಹುದ್ದೆಗೆ ರಾಜೀನಾಮೆ ಕೊಟ್ಟ ನ್ಯೂಜಿಲ್ಯಾಂಡ್​​​ನ ಜಸಿಂದಾ ಆರ್ಡರ್ನ್​​​​​

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವಿದೇಶ

Flight Turbulence: ನೀವಿದ್ದ ವಿಮಾನ ಪ್ರಕ್ಷುಬ್ಧತೆಗೊಳಗಾದರೆ ಏನು ಮಾಡುತ್ತೀರಿ? ಇಲ್ಲಿದೆ ಪೈಲಟ್‌ಗಳ ಸಲಹೆ

ವಿಮಾನಗಳಲ್ಲಿ ಪ್ರಕ್ಷುಬ್ಧತೆಯ (Flight Turbulence) ಸಮಯದಲ್ಲಿ ಸುರಕ್ಷಿತವಾಗಿರಲು ಪ್ರಯಾಣಿಕರಿಗೆ ಅಮೆರಿಕದ ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್‌, ವಿಮಾನ ಸಿಬ್ಬಂದಿ ಪಾಲಿಸಬಹುದಾದ ಮತ್ತು ಪ್ರಯಾಣಿಕರು ನಿರ್ವಹಿಸಬೇಕಾದ ಮಾರ್ಗಸೂಚಿಯನ್ನು ನೀಡಿದೆ. ಈ ಕುರಿತ ವಿವರಣೆ ಇಲ್ಲಿದೆ. ವಿಮಾನದೊಳಗಿನ ಪ್ರಕ್ಷುಬ್ಧತೆ (Flight Turbulence) ಎಂದರೇನು, ಇದರಿಂದ ಪಾರಾಗುವುದು ಹೇಗೆ ಎಂಬ ಮಾಹಿತಿಯೂ ಇಲ್ಲಿದೆ.

VISTARANEWS.COM


on

By

Flight Turbulence
Koo

ವಿಮಾನ (flight) ಹಾರುವಾಗ ವಾಯು ಒತ್ತಡದಿಂದ ಕೆಲವೊಮ್ಮೆ ಪ್ರಕ್ಷುಬ್ಧತೆ (Flight Turbulence) ಉಂಟಾಗುತ್ತದೆ. ವಿಮಾನ ನಡುಗುತ್ತದೆ. ಈ ಸಂದರ್ಭದಲ್ಲಿ ಹಠಾತ್ ಆಘಾತಗಳು ಸಂಭವಿಸಿ ಸಾವು ನೋವು ಉಂಟಾಗುವುದೂ ಇದೆ. ಇಂಥ ಸಂದರ್ಭದಲ್ಲಿ ಪ್ರಯಾಣಿಕರು ಮತ್ತು ವಿಮಾನ ಸಿಬ್ಬಂದಿ ಪರಿಸ್ಥಿತಿಯನ್ನು ಶಾಂತವಾಗಿ ನಿಭಾಯಿಸಬೇಕಾಗುತ್ತದೆ. ಇತ್ತೀಚೆಗೆ ಸಿಂಗಾಪುರ ಏರ್‌ಲೈನ್ಸ್ (singapore airlines) ವಿಮಾನ ಇಂಥದ್ದೇ ಪರಿಸ್ಥಿತಿಗೆ ಒಳಗಾಗಿ ಪ್ರಯಾಣಿಕರೊಬ್ಬರು ಸಾವಿಗೀಡಾಗಿ, ಹಲವರು ಪ್ರಯಾಣಿಕರು ಗಾಯಗೊಂಡಿದ್ದರು. ಲಂಡನ್‌ನಿಂದ ಸಿಂಗಾಪುರಕ್ಕೆ ಹಾರುತ್ತಿದ್ದ ಬೋಯಿಂಗ್ 777-312ER ವಿಮಾನ 321ರಲ್ಲಿದ್ದ ಪ್ರಯಾಣಿಕರು ವಾಯು ಪ್ರಕ್ಷುಬ್ಧತೆಯ ಭಯಾನಕತೆಯನ್ನು ಅನುಭವಿಸಬೇಕಾಯಿತು.

ವಾಯು ಪ್ರಕ್ಷುಬ್ಧತೆ ಎಂದರೇನು?

ವಾಯು ಪ್ರಕ್ಷುಬ್ಧತೆಯು ಭೂಮಿಯ ವಾತಾವರಣದಲ್ಲಿ ಗಾಳಿಯ ಅನಿಯಮಿತ ಮತ್ತು ಅನಿರೀಕ್ಷಿತ ಚಲನೆಯಿಂದ ಉಂಟಾಗುತ್ತದೆ. ಇದು ವಿಮಾನ ಹಾರಾಟದ ಸಮಯದಲ್ಲಿ ಅಪಘಾತಕ್ಕೆ ಕಾರಣವಾಗುತ್ತದೆ. ವೇಗವಾಗಿ ವಾಹನ ಓಡಿಸುತ್ತಿದ್ದಾಗ ಯಾವ ಸೂಚನಾ ಫಲಕ ಇಲ್ಲದೆ ಹಠಾತ್‌ ಹಂಪ್‌ ಎದುರಾದಾಗ ಏನಾಗುತ್ತದೋ ವಿಮಾನದೊಳಗೆ ಹಾಗೆಯೇ ಆಗುತ್ತದೆ. ವಿಮಾನವು ಚಾಲಕನ ನಿಯಂತ್ರಣ ಕಳೆದುಕೊಂಡು ಪತನಗೊಳ್ಳುವಂತಾಗುತ್ತದೆ.

ಆಗ ಏನು ಮಾಡಬೇಕು?

ಯಾವಾಗಲೂ ಸೀಟ್ ಬೆಲ್ಟ್ ಧರಿಸಿ ಸುರಕ್ಷಿತವಾಗಿ ಕುಳಿತಿರಬೇಕು. ಸೈನ್ ಆಫ್ ಆಗಿದ್ದರೂ, ಅದನ್ನು ಬಿಗಿಯಾಗಿ ಇರಿಸಬೇಕು.
ಸಿಬ್ಬಂದಿಯ ಸೂಚನೆಗಳನ್ನು ಅನುಸರಿಸಿ. ಅವರ ಮಾತನ್ನು ಕೇಳಿ. ಪ್ರಕ್ಷುಬ್ಧತೆಯನ್ನು ನಿಭಾಯಿಸಲು ಅವರಿಗೆ ತರಬೇತಿ ನೀಡಲಾಗಿರುತ್ತದೆ. ಪ್ರಕ್ಷುಬ್ಧತೆಯ ಸಮಯದಲ್ಲಿ ಕ್ಯಾಬಿನ್ ಸುತ್ತಲೂ ಚಲಿಸುವುದನ್ನು ತಪ್ಪಿಸಿ ಮತ್ತು ಆತಂಕದಿಂದ ಕಿರುಚದೇ ಮೌನವಾಗಿ ಕುಳಿತುಕೊಳ್ಳಿ.

ಕ್ಯಾಬಿನ್‌ನಲ್ಲಿ ಇಟ್ಟಿರುವ ವಸ್ತುಗಳು ಮೈಮೇಲೆ ಬೀಳದಂತೆ ಸುರಕ್ಷಿತವಾಗಿರಿಸಿ. ಸೋರಿಕೆ ಅಥವಾ ಬೀಳುವಿಕೆಯನ್ನು ತಪ್ಪಿಸಲು ವಸ್ತುಗಳನ್ನು ಓವರ್ ಹೆಡ್ ವಿಭಾಗಗಳಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿ.
ಪ್ರಕ್ಷುಬ್ಧತೆ ಸಾಮಾನ್ಯವಾಗಿರುತ್ತದೆ. ಈ ಸಂದರ್ಭದಲ್ಲಿ ಶಾಂತವಾಗಿರಿ ಮತ್ತು ಭಯಭೀತರಾಗಬೇಡಿ. ರೆಸ್ಟ್ ರೂಮ್‌ ಅನ್ನು ಬಳಸಬೇಕಾದರೆ ಎದ್ದೇಳುವ ಮೊದಲು ಶಾಂತ ಕ್ಷಣಕ್ಕಾಗಿ ಕಾಯಿರಿ. ಸ್ಥಿರತೆಗಾಗಿ ಹ್ಯಾಂಡ್ರೈಲ್‌ಗಳನ್ನು ಬಳಸಿ.

ವಾಯು ಪ್ರಕ್ಷುಬ್ಧತೆಗೆ ಕಾರಣಗಳೇನು?

ಚಂಡಮಾರುತ, ಜೆಟ್ ಸ್ಟ್ರೀಮ್‌ ಅಥವಾ ಗಾಳಿಯ ಒತ್ತಡದಲ್ಲಿನ ಬದಲಾವಣೆಗಳಿಂದ ವಾಯು ಪ್ರಕ್ಷುಬ್ಧತೆ ಉಂಟಾಗಬಹುದು. ಹವಾಮಾನ ಬದಲಾವಣೆಗಳಿಂದಾಗಿ ಗಾಳಿಯ ಪ್ರಕ್ಷುಬ್ಧತೆಯು ಆಗಾಗ ಸಂಭವಿಸುತ್ತದೆ ಎನ್ನುತ್ತಾರೆ ತಜ್ಞರು. ತೀವ್ರವಾದ ಪ್ರಕ್ಷುಬ್ಧ ಘಟನೆಗಳು ಅಪರೂಪ. ಪೈಲಟ್‌ಗಳು ಅವುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ತರಬೇತಿ ಪಡೆದಿರುತ್ತಾರೆ.

ಇದನ್ನೂ ಓದಿ: Viral Video: ರಣ ಭೀಕರ ಬಿರುಗಾಳಿ..! ಆಘಾತಕಾರಿ ವಿಡಿಯೋ ಎಲ್ಲೆಡೆ ವೈರಲ್‌

ಮಾಜಿ ಪೈಲೆಟ್ ಹೇಳಿದ್ದೇನು?

43 ವರ್ಷಗಳ ಅನುಭವ ಹೊಂದಿರುವ ನಿವೃತ್ತ ಪೈಲಟ್ ಕ್ಯಾಪ್ಟನ್ ಕ್ರಿಸ್ ಹ್ಯಾಮಂಡ್ ಅವರು ಈ ಪರಿಸ್ಥಿತಿಯನ್ನು ಹೀಗೆ ವಿವರಿಸುತ್ತಾರೆ: ಇಂಥ ಸಂದರ್ಭದಲ್ಲಿ ಪ್ರಯಾಣಿಕರನ್ನು ಹೆಚ್ಚು ಸಮಾಧಾನದಿಂದ ಇರಿಸುವಂತೆ ಮಾಡುವ ಜವಾಬ್ದಾರಿ ಪೈಲಟ್‌ನದ್ದಾಗಿದೆ. ಎಲ್ಲಕ್ಕಿಂತ ಪೈಲಟ್‌ ತಾನು ಸಮಾಧಾನದಿಂದ ಇದ್ದು, ವಿವೇಚನೆ ಮತ್ತು ಅನುಭವ ಬಳಸಿ ವಿಮಾನವನ್ನು ನಿಯಂತ್ರಿಸಬೇಕಾಗುತ್ತದೆ. ಅನುಭವಿ ಚಾಲಕರು ಇಂಥ ಸನ್ನಿವೇಶವನ್ನು ಯಶಸ್ವಿಯಾಗಿ ನಿಭಾಯಿಸಿ ಪ್ರಯಾಣಿಕರನ್ನು ಅಪಾಯದಿಂದ ಪಾರು ಮಾಡುತ್ತಾರೆ.

Continue Reading

ಕ್ರೈಂ

ಹನಿ ಟ್ರ್ಯಾಪ್‌ ಮಾಡಿ ಕೋಲ್ಕತಾಗೆ ಕರೆಸಿಕೊಂಡು ಬಾಂಗ್ಲಾದೇಶ ಸಂಸದನ ಕೊಲೆ; ಚರ್ಮ ಸುಲಿದು, ದೇಹ ಪೀಸ್‌ ಪೀಸ್‌

ಅಪಾರ್ಟ್‌ಮೆಂಟ್‌ಗೆ ಸಂಸದನನ್ನು ಹನಿ ಟ್ರ್ಯಾಪ್‌ ಬಳಸಿ ಸೆಳೆಯಲಾಗಿತ್ತು ಎಂದು ಊಹಿಸಲಾಗಿದೆ. ಸಂಸದರ ಆಪ್ತೆಯೂ ಆಗಿರುವ ಮಹಿಳೆಯನ್ನು ಮುಂದಿಟ್ಟುಕೊಂಡು ಸಂಸದರನ್ನು ಕರೆಸಲಾಗಿದ್ದು, ಅಲ್ಲಿ ಕೊಲೆಗಾರರು ಇವರಿಗಾಗಿ ಕಾಯುತ್ತಿದ್ದರು ಎಂದು ಹೇಳಲಾಗಿದೆ. ಸಂಸದರು ಅಪಾರ್ಟ್‌ಮೆಂಟ್‌ ಒಳಗೆ ಹೋದುದರ ಸಿಸಿಟಿವಿ ಫೂಟೇಜ್‌ಗಳು ಲಭ್ಯವಾಗಿವೆ. ಆದರೆ ಅಲ್ಲಿಂದ ಅವರು ಹೊರಗೆ ಬಂದಿಲ್ಲ.

VISTARANEWS.COM


on

bangladesh mp murder ಹನಿ ಟ್ರ್ಯಾಪ್
Koo

ಹೊಸದಿಲ್ಲಿ: ಬೆಚ್ಚಿ ಬೀಳಿಸುವಂಥ ಪ್ರಕರಣವೊಂದರಲ್ಲಿ, ಬಾಂಗ್ಲಾದೇಶದ ಸಂಸತ್‌ ಸದಸ್ಯರೊಬ್ಬರನ್ನು (Bangladesh MP) ಕೋಲ್ಕತ್ತಾದಲ್ಲಿ (Kolkata) ಹತ್ಯೆ (Murder Case) ಮಾಡಲಾಗಿದೆ. ಸಂಸದ ಅನ್ವರುಲ್ ಅಜೀಮ್ ಅನಾರ್ ಅವರನ್ನು ಕೊಂದು, ಚರ್ಮು ಸುಲಿದು, ದೇಹವನ್ನು ಕತ್ತರಿಸಿ ಪ್ಲಾಸ್ಟಿಕ್‌ ಪ್ಯಾಕ್‌ಗಳಲ್ಲಿ ಪ್ಯಾಕ್‌ ಮಾಡಿ ನಗರದಾದ್ಯಂತ ಹಲವಾರು ಕಡೆ ಎಸೆಯಲಾಗಿದೆ. ಹನಿ ಟ್ರ್ಯಾಪ್‌ (Honey trap) ಮಾಡಿ ಸಂಸದರನ್ನು ಕರೆಸಿಕೊಳ್ಳಲಾಗಿತ್ತು ಎಂದು ಕೂಡ ತಿಳಿದುಬಂದಿದೆ.

ಬಾಂಗ್ಲಾ ಸಂಸದ ಅನ್ವರುಲ್ ಅಜೀಮ್ ಅನಾರ್ ಕೋಲ್ಕತ್ತಾಗೆ ಬಂದ ಎರಡು ದಿನಗಳ ನಂತರ, ಮೇ 14ರಿಂದ ನಾಪತ್ತೆಯಾಗಿದ್ದರು. ಇದರ ಬೆನ್ನು ಬಿದ್ದ ಪೊಲೀಸರು ಮುಂಬೈನಲ್ಲಿ ನೆಲೆಸಿರುವ ಬಾಂಗ್ಲಾದೇಶದ ಅಕ್ರಮ ವಲಸಿಗ ಜಿಹಾದ್ ಹವ್ಲಾದಾರ್ ಎಂಬಾತನನ್ನು ಪಶ್ಚಿಮ ಬಂಗಾಳದ ಸಿಐಡಿ (ಅಪರಾಧ ತನಿಖಾ ಇಲಾಖೆ) ಪೊಲೀಸರು ಬಂಧಿಸಿದ್ದರು. ತನಿಖೆಯ ವೇಳೆ ತಾನು ಕೊಲೆ ಮಾಡಿರುವುದನ್ನು ಒಪ್ಪಿಕೊಂಡ ಜಿಹಾದ್ ಹವ್ಲಾದಾರ್, ಕೊಲೆಗೈದುದರ ವಿವರಗಳನ್ನು ನೀಡಿದ್ದಾನೆ.

ಸಿಐಡಿ ಮೂಲಗಳ ಪ್ರಕಾರ, ಕೋಲ್ಕತ್ತಾದ ನ್ಯೂ ಟೌನ್‌ನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಬಾಂಗ್ಲಾದೇಶದ ಸಂಸದರನ್ನು ಈತ ಹತ್ಯೆಗೈದಿದ್ದಾನೆ. ಬಾಂಗ್ಲಾದೇಶ ಮೂಲದ, ಯುಎಸ್ ಪ್ರಜೆ ಅಖ್ತರುಜ್ಜಾಮಾನ್ ಎಂಬಾತನೇ ಇದರ ಮಾಸ್ಟರ್ ಮೈಂಡ್ ಎಂದು ಹವ್ಲಾದರ್ ಬಹಿರಂಗಪಡಿಸಿದ್ದಾನೆ. ಅಖ್ತರುಜ್ಜಾಮಾನ್ ಅಮೆರಿಕದ ನಿವಾಸಿಯಾಗಿದ್ದು, ಕೊಲೆ ನಡೆದುದು ಆತನದೇ ಫ್ಲ್ಯಾಟ್‌ನಲ್ಲಿ. ಅಖ್ತರುಜ್ಜಾಮಾನ್ ಆದೇಶದ ಮೇರೆಗೆ, ಹವ್ಲಾದರ್ ಇತರ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳೊಂದಿಗೆ ನ್ಯೂ ಟೌನ್ ಅಪಾರ್ಟ್‌ಮೆಂಟ್‌ನಲ್ಲಿ ಸಂಸದರನ್ನು ಕೊಚ್ಚಿ ಕೊಂದಿದ್ದಾನೆ.

ಅಪಾರ್ಟ್‌ಮೆಂಟ್‌ಗೆ ಸಂಸದನನ್ನು ಹನಿ ಟ್ರ್ಯಾಪ್‌ ಬಳಸಿ ಸೆಳೆಯಲಾಗಿತ್ತು ಎಂದು ಊಹಿಸಲಾಗಿದೆ. ಸಂಸದರ ಆಪ್ತೆಯೂ ಆಗಿರುವ ಮಹಿಳೆಯನ್ನು ಮುಂದಿಟ್ಟುಕೊಂಡು ಸಂಸದರನ್ನು ಕರೆಸಲಾಗಿದ್ದು, ಅಲ್ಲಿ ಕೊಲೆಗಾರರು ಇವರಿಗಾಗಿ ಕಾಯುತ್ತಿದ್ದರು ಎಂದು ಹೇಳಲಾಗಿದೆ. ಸಂಸದರು ಅಪಾರ್ಟ್‌ಮೆಂಟ್‌ ಒಳಗೆ ಹೋದುದರ ಸಿಸಿಟಿವಿ ಫೂಟೇಜ್‌ಗಳು ಲಭ್ಯವಾಗಿವೆ. ಆದರೆ ಅಲ್ಲಿಂದ ಅವರು ಹೊರಗೆ ಬಂದಿಲ್ಲ.

ನ್ಯೂ ಟೌನ್ ಅಪಾರ್ಟ್‌ಮೆಂಟ್‌ನಲ್ಲಿ ರಕ್ತದ ಕಲೆಗಳನ್ನು ಕಂಡುಹಿಡಿಯಲಾಗಿದೆ ಮತ್ತು ದೇಹದ ಭಾಗಗಳನ್ನು ಎಸೆಯಲು ಬಳಸಲಾಗಿರುವ ಹಲವಾರು ಪ್ಲಾಸ್ಟಿಕ್ ಚೀಲಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಸಂಸದರನ್ನು ಮೊದಲು ಕತ್ತು ಹಿಸುಕಿ ಸಾಯಿಸಲಾಗಿದೆ. ನಂತರ ಅವರ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಲಾಗಿದೆ ಎಂದು ಸಾಂದರ್ಭಿಕ ಪುರಾವೆಗಳು ಸೂಚಿಸಿವೆ. ಪಾತಕಿಗಳ ಕ್ರೌರ್ಯ ಹಾಗೂ ನಿರ್ಭಾವುಕತೆ ಪೊಲೀಸರನ್ನು ಬೆಚ್ಚಿಸಿದೆ.

ಅನಾರ್ ಅವರನ್ನು ಕೊಂದ ನಂತರ ಈ ಪಾತಕಿಗಳ ಗುಂಪು ದೇಹದ ಚರ್ಮವನ್ನು ಸುಲಿದು, ಎಲ್ಲಾ ಮಾಂಸವನ್ನು ತೆಗೆದುಹಾಕಿದೆ. ದೇಹವನ್ನು ಗುರುತಿಸುವ ಯಾವುದೇ ಸಾಧ್ಯತೆಯನ್ನು ಅಳಿಸಿಹಾಕಲು ಅದನ್ನು ಕೊಚ್ಚಿ ಹಾಕಿದೆ. ನಂತರ ಅವಶೇಷಗಳನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ಪ್ಯಾಕ್ ಮಾಡಲಾಯಿತು. ಮೂಳೆಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಲಾಯಿತು. ಈ ಪ್ಯಾಕೆಟ್‌ಗಳನ್ನು ಕೋಲ್ಕತ್ತಾ ನಗರದಾದ್ಯಂತ ಬೇರೆ ಬೇರೆ ಕಡೆ ಕೊಂಡೊಯ್ದು ವಿಲೇವಾರಿ ಮಾಡಲಾಗಿದೆ.

ಇದನ್ನೂ ಓದಿ: Physical Abuse & Murder: ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಬರ್ಬರವಾಗಿ ಕೊಲೆ; ದೃಶ್ಯಂ ಸಿನಿಮಾ ರೀತಿಯಲ್ಲಿ ಎಸ್ಕೇಪ್‌ಗೆ ಯತ್ನ

Continue Reading

ಪ್ರಮುಖ ಸುದ್ದಿ

Monsoon : ಮಳೆ ವರದಿ; ಕರ್ನಾಟಕದಲ್ಲಿ ಜೂನ್ 1ರಂದೇ ಮಾನ್ಸೂನ್ ಮಳೆ ಆರಂಭ

Monsoon: ಜೂನ್ ಮೊದಲ ವಾರದವರೆಗೂ ಬೆಂಗಳೂರಿನಲ್ಲಿ ಮುಂಗಾರು ಪೂರ್ವ ಮಳೆಯಾಗಲಿದೆ. ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಮಳೆ ನಿಂತಿದ್ದರೂ, ಈ ತಿಂಗಳ ಅಂತ್ಯದ ವೇಳೆಗೆ ನಗರಕ್ಕೆ ಮತ್ತೆ ಮಳೆ ಮರಳಲಿದೆ. ಜೂನ್ ಎರಡನೇ ವಾರದಲ್ಲಿ ಮುಂಗಾರು ನಗರಕ್ಕೆ ಆಗಮಿಸಲಿದೆ.

VISTARANEWS.COM


on

Mansoon
Koo

ಬೆಂಗಳೂರು: ಜೂನ್ ಮೊದಲ ವಾರದಲ್ಲಿ ಕರ್ನಾಟಕಕ್ಕೆ ಮುಂಗಾರು ಪ್ರವೇಶಿಸಲಿದ್ದು, ಜೂನ್ 13 ಅಥವಾ 14ರಂದು ಬೆಂಗಳೂರಿನಲ್ಲಿ ಮಾನ್ಸೂನ್​ ಮಳೆಗಾಲ (Monsoon) ಆರಂಭವಾಲಿದೆ ಎಂದು ಹವಾಮಾನ ಇಲಾಖೆ (Weather Forcast) ತಿಳಿಸಿದೆ. ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಕಾಣಿಸಿಕೊಂಡರೆ ಮಾನ್ಸೂನ್ ಆಗಮನವನ್ನು ತಡವಾಗಬಹುದು ಎಂಬುದಾಗಿ ಎಂದು ಅಧಿಕಾರಿಗಳು ಒತ್ತಿ ಹೇಳಿದರು. ವರದಿಯ ಪ್ರಕಾರ, ನೈಋತ್ಯ ಮಾನ್ಸೂನ್ ಈಗಾಗಲೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಕ್ರೊಡೀಕರಣಗೊಂಡಿದೆ. ನೈಋತ್ಯ ಮುಂಗಾರು ಜೂನ್ 1 ಅಥವಾ 2ರಂದು ಕೇರಳ ಕರಾವಳಿಗೆ ತಲುಪುವ ಸಾಧ್ಯತೆ ಇದೆ. ಇದು ಜೂನ್ 6 ಅಥವಾ 7 ರಂದು ದಕ್ಷಿಣ ಕನ್ನಡದ ಮೂಲಕ ಕರ್ನಾಟಕ ಕರಾವಳಿಯನ್ನು ಪ್ರವೇಶಿಸಲಿದ್ದು, ಜೂನ್ 14 ರ ವೇಳೆಗೆ ಕ್ರಮೇಣ ದಕ್ಷಿಣ ಒಳನಾಡಿನ ಪ್ರದೇಶಗಳಿಗೆ ಹರಡಲಿದೆ ಎಂದು ಹಿರಿಯ ಹವಾಮಾನ ತಜ್ಞ ಸಿ.ಎಸ್.ಪಾಟೀಲ್ ಹೇಳಿದ್ದಾರೆ.

ಜೂನ್ ಮೊದಲ ವಾರದವರೆಗೂ ಬೆಂಗಳೂರಿನಲ್ಲಿ ಮುಂಗಾರು ಪೂರ್ವ ಮಳೆಯಾಗಲಿದೆ. ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಮಳೆ ನಿಂತಿದ್ದರೂ, ಈ ತಿಂಗಳ ಅಂತ್ಯದ ವೇಳೆಗೆ ನಗರಕ್ಕೆ ಮತ್ತೆ ಮಳೆ ಮರಳಲಿದೆ. ಜೂನ್ ಎರಡನೇ ವಾರದಲ್ಲಿ ಮುಂಗಾರು ನಗರಕ್ಕೆ ಆಗಮಿಸಲಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈಗಾಗಲೇ ಮಳೆಗಾಲವನ್ನು ಎದುರಿಸಲು ಸಜ್ಜಾಗುತ್ತಿದೆ, ಏಕೆಂದರೆ ನಗರವು ಪ್ರವಾಹ ಮತ್ತು ಜಲಾವೃತತೆಗೆ ಸಾಕ್ಷಿಯಾಗುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಬುಧವಾರ ನಗರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಮತ್ತು ಮಳೆಗಾಲದಲ್ಲಿ ಯಾವುದೇ ರೀತಿಯ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕರಾವಳಿಯಲ್ಲಿ ಬಿರುಗಾಳಿ ಮಳೆ; ಕಡಲಿಗಿಳಿಯದಂತೆ ಮೀನುಗಾರರಿಗೆ ಅಲರ್ಟ್!

ಬೆಂಗಳೂರು: ರಾಜ್ಯಾದ್ಯಂತ ವರುಣಾರ್ಭಟ ಮುಂದುವರಿದಿದ್ದು, ಗುಡುಗು, ಮಿಂಚು ಸಹಿತ (Rain News) ಬಿರುಗಾಳಿಯೊಂದಿಗೆ ಮಳೆಯಾಗಲಿದೆ. ಕರಾವಳಿಯ ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಹೆಚ್ಚಿನ ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗಾಳಿ ವೇಗವು ಗಂಟೆಗೆ 40-50 ಕಿ.ಮೀ ವ್ಯಾಪ್ತಿಯಲ್ಲಿ (Karnataka Weather Forecast) ಬೀಸಲಿದೆ.

ಇದನ್ನೂ ಓದಿ: Superstar Rajinikanth : ನಟ ರಜನಿಕಾಂತ್​​ಗೆ ವಿಶೇಷ ಗಿಫ್ಟ್​ ಕೊಟ್ಟ ಲುಲು ಮಾಲ್​ನ ಮಾಲೀಕ ಯೂಸುಫ್​​ ಅಲಿ

ಇನ್ನೂ ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ರಾಮನಗರ ಮತ್ತು ಶಿವಮೊಗ್ಗದಲ್ಲೂ ವ್ಯಾಪಕ ಮಳೆಯಾಗಲಿದೆ.

ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಗಾಳಿಯೊಂದಿಗೆ (40-50 ಕಿಮೀ) ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಬಳ್ಳಾರಿ, ಚಿತ್ರದುರ್ಗ, ಚಿಕ್ಕಬಳ್ಳಾಪುರದ ಹಲವು ಕಡೆಗಳಲ್ಲಿ ಗಾಳಿಯು ರಭಸವಾಗಿ ಬೀಸಲಿದ್ದು, ಗುಡುಗು ಸಹಿತ ಮಳೆ ಲಘು ಮಳೆಯಾಗಲಿದೆ. ತುಮಕೂರು ಮತ್ತು ವಿಜಯನಗರ ಸೇರಿದಂತೆ ಬೀದರ್, ಕೊಪ್ಪಳ, ರಾಯಚೂರು ಮತ್ತು ಯಾದಗಿರಿಯಲ್ಲೂ ಗಾಳಿ ಸಹಿತ ಭಾರಿ ಮಳೆಯಾಗಲಿದೆ.

Continue Reading

ಪ್ರಮುಖ ಸುದ್ದಿ

Viral Video: ಚಲಿಸುವ ಬೈಕ್​ನಲ್ಲಿ ಆಲಿಂಗನ, ಬಿಸಿ ಚುಂಬನ; ಲಜ್ಜೆಯಿಲ್ಲದ ಜೋಡಿಯ ಸ್ಟಂಟ್​ ವಿಡಿಯೊ ವೈರಲ್​

Viral Video: ಹೆದ್ದಾರಿಯಲ್ಲಿ ಅಪಾಯಕಾರಿಯಾಗಿ ಬೈಕ್ ಚಾಲನೆ ಮಾಡುತ್ತಿರುವ ಹುಡುಗನನ್ನು ಹುಡುಗಿ ಬೈಕಿನ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತು ಚುಂಬಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಅಪಾಯಕಾರಿ ಸ್ಟಂಟ್ ಮಾಡುವ ವೇಲೆ ಅವರು ಸಂಚಾರ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುದು ಚರ್ಚೆಗೆ ಕಾರಣವಾಗಿದೆ.

VISTARANEWS.COM


on

Viral Video
Koo

ಕೋಟಾ: ಚಲಿಸುತ್ತಿದ್ದ ಬೈಕಿನಲ್ಲಿ ಯುವ ಜೋಡಿಯೊಂದು ಚುಂಬಿಸುತ್ತಾ ಸಾಗುತ್ತಿರುವ ವಿಡಿಯೊವೊಂದು ವೈರಲ್ ಆಗಿದೆ (Viral Video). ಅಪಾಯಕಾರಿ ಸ್ಟಂಟ್ (Bike Stunt) ಮಾಡುತ್ತಿರುವ ಅಶ್ಲೀಲ ವೀಡಿಯೊ ಅಂತರ್ಜಾಲದಲ್ಲಿ ಕಾಣಿಸಿಕೊಂಡಿದ್ದು, ಅವರಿಗೆ ನೆಟ್ಟಿಗರು ಶಿಸ್ತಿನ ಪಾಠ ಹೇಳಿದ್ದಾರೆ. ಚಲಿಸುತ್ತಿದ್ದ ಬೈಕ್​ ಅನ್ನೇ ಶೃಂಗಾರ ಮಂಚ ಮಾಡಿಕೊಂಡಿದ್ದ ಜೋಡಿಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ವೈರಲ್ ಮಾಡಿದ್ದಾರೆ. ಹೆದ್ದಾರಿಯಲ್ಲಿ ಅಪಾಯಕಾರಿಯಾಗಿ ಬೈಕ್ ಚಾಲನೆ ಮಾಡುತ್ತಿರುವ ಹುಡುಗನನ್ನು ಹುಡುಗಿ ಬೈಕಿನ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತು ಚುಂಬಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಅಪಾಯಕಾರಿ ಸ್ಟಂಟ್ ಮಾಡುವ ವೇಲೆ ಅವರು ಸಂಚಾರ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವುದು ಚರ್ಚೆಗೆ ಕಾರಣವಾಗಿದೆ.

ರಾಜಸ್ಥಾನದ ಕೋಟಾದ ರಾಷ್ಟ್ರೀಯ ಹೆದ್ದಾರಿ 52 (ಎನ್ಎಚ್ -52) ನಲ್ಲಿ ಈ ನಾಚಿಕೆಗೇಡಿನ ಮತ್ತು ಅಪಾಯಕಾರಿ ಘಟನೆ ನಡೆದಿದೆ ಎಂದು ವರದಿಯಾಗಿದೆ. ಈ ಪ್ರದೇಶದಕ್ಕೆ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು, ಮುಖ್ಯವಾಗಿ ನೀಟ್ ನಂಥ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ದೇಶದಾದ್ಯಂತದಿಂದ ದೊಡ್ಡ ಪ್ರಮಾಣದಲ್ಲಿ ಬರುತ್ತಾರೆ. ನಾಚಿಕೆಗೇಡಿನ ಕೃತ್ಯವನ್ನು ಮಾಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾದ ಜೋಡಿಯೂ ವಿದ್ಯಾರ್ಥಿಗಳಾಗಿದ್ದು, ಹಾಸ್ಟೆಲ್​​ನಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ವೈರಲ್ ವಿಡಿಯೋ ಬಗ್ಗೆ ಇಲ್ಲಿದೆ ಮಾಹಿತಿ

ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಬೈಕ್​​ನ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತಿರುವ ಹುಡುಗಿಯೊಂದಿಗೆ, ಬುದ್ಧಿಗೇಡಿ ಹುಡುಗ ಅಪಾಯಕಾರಿಯಾಗಿ ಬೈಕ್ ಸವಾರಿ ಮಾಡುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಹೆದ್ದಾರಿಯಲ್ಲಿ ಭಾರಿ ವಾಹನಗಳು ಹೆಚ್ಚಿನ ವೇಗದಲ್ಲಿ ಹಾದುಹೋಗುತ್ತಿರುವುದನ್ನು ಸಹ ಕಾಣಬಹುದು. ವೀಡಿಯೊದಲ್ಲಿ, ಹುಡುಗಿ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತು ತನ್ನ ಗೆಳೆಯನಿಗೆ ಅಂಟಿಕೊಂಡು ಭಾವೋದ್ರಿಕ್ತವಾಗಿ ಚುಂಬಿಸುತ್ತಿರುವುದೇ ವಿಶೇಷ.

ಇದನ್ನೂ ಓದಿ: Bulldozer justice : ಅಸ್ಸಾಂ ಸರ್ಕಾರಕ್ಕೆ ತಿರುಗುಬಾಣವಾದ ಬುಲ್ದೋಜರ್ ನ್ಯಾಯ! ನೆಲಸಮಗೊಳಿಸಿದ ಮನೆ ಮಾಲೀಕರಿಗೆ 30 ಲಕ್ಷ ಪರಿಹಾರ!

ಬಾಲಕ ಹೆಲ್ಮೆಟ್ ಧರಿಸದೆ ಬೈಕ್ ಸವಾರಿ ಮಾಡುತ್ತಿರುವುದು ಕೂಡ ವೀಡಿಯೊದಲ್ಲಿ ರೆಕಾರ್ಡ್ ಅಗಿದೆ. ಹೆಚ್ಚಿನ ವೇಗದಲ್ಲಿ ಬೈಕ್ ಸವಾರಿ ಮಾಡುವಾಗ ಹುಡುಗಿ ಅವನನ್ನು ಚುಂಬಿಸುತ್ತಿರುವುದರಿಂದ ಅವನಿಗೆ ರಸ್ತೆಯೂ ಸರಿಯಾಗಿ ಕಾಣಿಸುತ್ತಿರಲಿಲ್ಲ. , ಅವರೊಂದಿಗೆ ಬೈಕ್ ಸವಾರರ ಗುಂಪು ಕೂಡ ಇತ್ತು. ವೇಗವಾಗಿ ಚಲಿಸುತ್ತಿದ್ದ ಬೈಕಿನಲ್ಲಿ ಹುಚ್ಚು ಸ್ಟಂಟ್ ಮಾಡುವಾಗ ಇತರ ಬೈಕ್ ಸವಾರರು ವಿಡಿಯೊ ರೆಕಾರ್ಡ್ ಮಾಡುತ್ತಿದ್ದರು.

ಕಾನೂನುಗಳ ಉಲ್ಲಂಘನೆ

ಜೋಡಿಯೊಂದಿಗೆ ಸವಾರಿ ಮಾಡುತ್ತಿದ್ದ ಇತರ ಸವಾರರು ಸಹ ಹೆಲ್ಮೆಟ್ ಇಲ್ಲದೆ ಮೂರು ಬೈಕುಗಳಲ್ಲಿ ಟ್ರಿಪಲ್ ಸೀಟ್ ಸವಾರಿ ಮಾಡುತ್ತಿದ್ದರು. ಅದು ಕೂಡ ಸಂಚಾರ ನಿಯಮಗಳನ್ನು ಉಲ್ಲಂಘನೆಯಾಗಿದೆ. ಅವರು ಕಾನೂನನ್ನು ಸ್ಪಷ್ಟವಾಗಿ ಉಲ್ಲಂಘಿಸುವಲ್ಲಿ ತೊಡಗಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

Continue Reading
Advertisement
Rotary June Run
ಪ್ರಮುಖ ಸುದ್ದಿ40 mins ago

Rotary June Run: ರೋಟರಿಯಿಂದ ಬೆಂಗಳೂರಿನಲ್ಲಿ ಜೂನ್​ 9ರಂದು ಮ್ಯಾರಥಾನ್​; ವಿಸ್ತಾರ ನ್ಯೂಸ್‌ ಸಹಯೋಗ

Flight Turbulence
ವಿದೇಶ50 mins ago

Flight Turbulence: ನೀವಿದ್ದ ವಿಮಾನ ಪ್ರಕ್ಷುಬ್ಧತೆಗೊಳಗಾದರೆ ಏನು ಮಾಡುತ್ತೀರಿ? ಇಲ್ಲಿದೆ ಪೈಲಟ್‌ಗಳ ಸಲಹೆ

Murder Case in Bengaluru
ಬೆಂಗಳೂರು50 mins ago

Murder Case : ಪ್ರಬುದ್ಧಳ ಕೊಲೆ ಮಾಡಿದ್ದು ತಮ್ಮನ ಸ್ನೇಹಿತನೇ; ಕನ್ನಡಕದ ಹಿಂದಿನ ರಹಸ್ಯ ರಿವೀಲ್‌

t20 cricket
ಪ್ರಮುಖ ಸುದ್ದಿ51 mins ago

T20 Cricket : ಬಾಂಗ್ಲಾದೇಶ ತಂಡವನ್ನು ಸೋಲಿಸಿ ಇತಿಹಾಸ ನಿರ್ಮಿಸಿದ ಕ್ರಿಕೆಟ್​ ಶಿಶು ಅಮೆರಿಕ

Couples Fight Man breaks glass of police station in anger against wife
ಕ್ರೈಂ56 mins ago

Couples Fight: ಗಂಡ-ಹೆಂಡಿರ ಜಗಳ ಪೊಲೀಸ್ ಸ್ಟೇಷನ್ ಗ್ಲಾಸ್ ಪೀಸ್ ಪೀಸ್ ಆಗುವ ತನಕ!

bangladesh mp murder ಹನಿ ಟ್ರ್ಯಾಪ್
ಕ್ರೈಂ1 hour ago

ಹನಿ ಟ್ರ್ಯಾಪ್‌ ಮಾಡಿ ಕೋಲ್ಕತಾಗೆ ಕರೆಸಿಕೊಂಡು ಬಾಂಗ್ಲಾದೇಶ ಸಂಸದನ ಕೊಲೆ; ಚರ್ಮ ಸುಲಿದು, ದೇಹ ಪೀಸ್‌ ಪೀಸ್‌

Bangalore rave party case Hema got locked up to give build up infront of Police
ಕ್ರೈಂ1 hour ago

Rave party: ಬೆಂಗಳೂರು ರೇವ್‌ ಪಾರ್ಟಿ ಕೇಸ್‌; ಬಿಲ್ಡಪ್‌ ಕೊಡಲು ಹೋಗಿ ಲಾಕ್‌ ಆದ ತೆಲುಗು ನಟಿ ಹೇಮಾ!

Karnataka Rain
ಮಳೆ1 hour ago

Karnataka Rain : ಸಿಡಿಲಾಘಾತಕ್ಕೆ ವಿದ್ಯಾರ್ಥಿ ಬಲಿ; ಗಾಳಿ-ಮಳೆಗೆ ಮರ ಮುರಿದು ಬಿದ್ದು ಜಾನುವಾರು ಸಾವು

Viral Video
ವೈರಲ್ ನ್ಯೂಸ್2 hours ago

Viral Video: ಮದುವೆಗೂ ಮೊದಲು ವಧುವನ್ನು ಕಿಡ್ನ್ಯಾಪ್‌ ಮಾಡಲೇಬೇಕು! ಇದು ಈ ಜನಾಂಗದ ಕಡ್ಡಾಯ ನಿಯಮ!

DC m s Diwakar instructed for adequate supply of sowing seed, fertilizers in monsoon season
ಮಳೆ2 hours ago

Vijayanagara News: ಬಿತ್ತನೆ ಬೀಜ, ರಸ ಗೊಬ್ಬರ ಸಮರ್ಪಕ ಪೂರೈಕೆಗೆ ಡಿಸಿ ದಿವಾಕರ್ ಸೂಚನೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ1 day ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು3 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು3 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ4 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ5 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ5 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ5 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ7 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌